title
stringlengths
1
95
url
stringlengths
31
125
text
stringlengths
0
216k
ಶಾರದಾದೇವಿ
https://kn.wikipedia.org/wiki/ಶಾರದಾದೇವಿ
thumb|ಶ್ರೀಮಾತೆ ಶಾರದಾಮಣಿ ದೇವಿ ಜನನ, ಜೀವನ ಶ್ರೀಮಾತೆ ಶಾರದಾದೇವಿಯವರು ಬಂಗಾಳದ ಜಯರಾಮವಟಿ ಎಂಬ ಗ್ರಾಮದಲ್ಲಿ ೨೨ ನೇ ಡಿಸೆಂಬರ್ ೧೮೫೩ರಂದು ಜನಿಸಿದರು. ಸರಳ ಸ್ವಭಾವದ ಅವರ ತಂದೆ ರಾಮಚಂದ್ರ ಮುಖ್ಯೋಪಾಧ್ಯಾಯ ಮತ್ತು ತಾಯಿ ಶ್ಯಾಮಾಸುಂದರಿಯರದು, ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ೫ ವರ್ಷದ ಶಾರದೆಯ ಮದುವೆ ೨೩ ವರ್ಷದ ಶ್ರೀರಾಮಕೃಷ್ಣರೊಂದಿಗಾಯಿತು (ಅಂದಿನ ಬಾಲ್ಯವಿವಾಹದ ಈ ವಿಧಿಯು ಇಂದಿನ ನಿಶ್ಚಿತಾರ್ಥಕ್ಕೆ ಸಮ). ಈ ಸಮಯದಲ್ಲಿ ಶ್ರೀರಾಮಕೃಷ್ಣರು ಹಲವಾರು ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದ್ದರು. ತಮ್ಮ ೧೮ನೇ ವಯಸ್ಸಿನಲ್ಲಿ ಶಾರದಾದೇವಿಯವರು, ಶ್ರೀರಾಮಕೃಷ್ಣರು ಅರ್ಚಕರಾಗಿದ್ದ ದಕ್ಷಿಣೇಶ್ವರದ ಕಾಳೀ ಮಂದಿರಕ್ಕೆ ಆಗವಿಸಿದರು. ಅವರನ್ನು ಪ್ರೀತಿ ಮತ್ತು ಆದರದಿಂದ ಬರಮಾಡಿಕೊಂಡ ಶ್ರೀರಾಮಕೃಷ್ಣರು, ಲೌಕಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು. ತಮ್ಮನ್ನು ಮಾತೃ ಭಾವದಿಂದ ಕಾಣುತ್ತಿದ್ದ ಪತಿಯ ಆಧ್ಯಾತ್ಮಿಕ ಸಾಧನೆಗೆ ಅಡ್ಡಿಯಾಗದೆ, ಅವರ ಸಾಧನೆಗಳಿಗೆ ಪೂರಕವಾಗಿರುವುದರಲ್ಲಿ ಅವರಿಗೆ ತಮ್ಮ ಜೀವನಪಥ ಕಂಡುಬಂದಿತು. ಶ್ರೀರಾಮಕೃಷ್ಣರು ಫಲಹಾರಿಣಿ ಕಾಳೀ ಪೂಜೆಯ ದಿನ ಶ್ರೀಶಾರದಾದೇವಿಯವರನ್ನು ಜೀವಂತ ದುರ್ಗೆಯಾಗಿ ಭಾವಿಸಿ ಪೂಜೆಗೈದರು. ಇದರೊಂದಿಗೆ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಸಾಧನೆಯ ಜೀವನಘಟ್ಟ ಕೊನೆಗೊಂಡಿತು; ಮುಂದೆ ಒಬ್ಬ ಆಚಾರ್ಯರಾಗಿ, ಅವತಾರಪುರುಷರೆಂದು ಅವರು ಪ್ರಸಿದ್ಧರಾದರು. ಶ್ರೀರಾಮಕೃಷ್ಣರನ್ನು ಕೇಳಲು, ಕಾಣಲು ಬರುತ್ತಿದ್ದ ಭಕ್ತಾದಿಗಳ ಆಹಾರ/ವಸತಿಗಳ ವ್ಯವಸ್ಥೆಯನ್ನು ಮಾಡುತ್ತ ಶಾರದಾದೇವಿಯವರು ಜಪವೇ ಮೊದಲಾದ ಮೌನ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದರು. ಜೀವನದಲ್ಲಿ ನೊಂದ ಮಹಿಳಾ ಭಕ್ತರಿಗೆ ಸಾಂತ್ವನ ನೀಡುತ್ತ, ಎಲ್ಲರ ತಾಯಾಗಿ 'ಶ್ರೀಮಾತೆ' ಎಂದೆನಿಸಿದರು. ಶ್ರೀರಾಮಕೃಷ್ಣರ ಮಹಾಸಮಾಧಿಯ ನಂತರ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಮುನ್ನಡೆಸುವ, ಭಕ್ತರಿಗೆ ಮತ್ತು ಸಾಧಕರಿಗೆ ಮಾರ್ಗದರ್ಶನ ನೀಡುವ ಗುರುತರ ಹೊಣೆಯನ್ನು ಅವರು ವಹಿಸಿಕೊಂಡರು. ಸನ್ಯಾಸಿ-ಗೃಹಸ್ಥ, ಬಡವ-ಬಲ್ಲಿದ, ಬಾಲಕ-ವೃದ್ಧ, ಪತಿತ-ಪಾವನ ಮೊದಲಾದ ಯಾವುದೇ ಭೇದ-ಭಾವಗಳನ್ನು ಕಾಣದೇ ವಾತ್ಸಲ್ಯ ಪ್ರೇಮಪ್ರವಾಹವನ್ನೇ ಹರಿಸ ತೊಡಗಿದರು. ೧೯೧೧ ರಲ್ಲಿ ದಕ್ಷಿಣ ಭಾರತದ ತೀರ್ಥಯಾತ್ರೆಯನ್ನು ಕೈಗೊಂಡಾಗ, ಬೆಂಗಳೂರಿನ ಬಸವನಗುಡಿಯ ಶ್ರೀರಾಮಕೃಷ್ಣ ಮಠಕ್ಕೆ ಆಗಮಿಸಿ ಭಕ್ತರನ್ನು ಆಶೀರ್ವದಿಸಿದರು. ಅಲ್ಲಿ ಅವರು ಧ್ಯಾನಮಾಡಿದ ಶಿಲಾಸನವಿಂದು ಭಕ್ತರ ತೀರ್ಥಸ್ಥಾನವಾಗಿದೆ. ೧೯೨೦ರ ಜುಲೈ ೨೧ರಂದು ಅವರು ತಮ್ಮ ಶರೀರವನ್ನು ತ್ಯಜಿಸಿದರು. ಸಾಮಾನ್ಯ ಸ್ತ್ರೀಯಂತೆ ಬಾಳಿದ ಅವರ ಜೀವನ ಕರ್ಮಯೋಗಕ್ಕೊಂದು ಶ್ರೇಷ್ಠ ವ್ಯಾಖ್ಯಾನದಂತಿತ್ತು. ಅಂದಿನ ಜಾತಿ, ಅತಿಯಾದ ಮಡಿ-ಮೈಲಿಗೆಯೇ ಮೊದಲಾದ ಕಂದಾಚಾರಗಳನ್ನು ತಮ್ಮ ಮಾತೃಪ್ರೇಮದ ಮೂಲಕ ಇಲ್ಲದಂತೆ ಮಾಡಿ ಅಸಂಖ್ಯ ಭಕ್ತರಿಗೆ ಸಾಂತ್ವನ ಒದಗಿಸಿದರು. ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ, ಆಚಾರ್ಯ ರಜನೀಶ ಮೊದಲಾದ ಚಿಂತಕರು ಶಾರದಾದೇವಿಯವರ ಜೀವನ, ಆಧುನಿಕ ಭಾರತೀಯ ಮಹಿಳೆಯ ಮುಂದಿರುವ ಅನುಸರಿಸಲು ಯೋಗ್ಯವಾದ ಆದರ್ಶ ಎಂದಿದ್ದಾರೆ.ಎಲೆಮರೆಯ ಹೂವಿನಂತೆ ಆಧ್ಯಾತ್ಮಿಕ ಸೌರಭವನ್ನು ಸೂಸಿದ ಶಾರದಾದೇವಿಯವರ ಹೆಸರಿನಲ್ಲಿ ಶ್ರೀಶಾರದಾ ಮಠ ಎಂಬ ಸಂನ್ಯಾಸಿನಿಯರ ಸಂಘವೊಂದು ಜನ್ಮತಾಳಿತು. ಬೆಂಗಳೂರಿನ ನಂದಿದುರ್ಗದ ಬಳಿ ಅದರ ಶಾಖೆಯೊಂದು ಸೇವೆಸಲ್ಲಿಸುತ್ತಿದೆ. ಪುಸ್ತಕಗಳು ಶ್ರೀಶಾರದಾದೇವಿ ಜೀವನಗಂಗಾ - ಸ್ವಾಮಿ ಪುರುಷೋತ್ತಮಾನಂದ ಶ್ರೀಮಾತೆ ಶಾರದಾದೇವಿ - ಸ್ವಾಮಿ ನಿತ್ಯಸ್ಥಾನಂದ ಶ್ರೀಶಾರದಾದೇವಿ ಸಂದೇಶಮಂದಾರ ಬೆಂಗಳೂರಿನಲ್ಲಿ ಶ್ರೀಮಾತೆ - ಸ್ವಾಮಿ ರಾಘವೇಶಾನಂದ- ಇದ್ದಲ್ಲೇ ಮನಸ್ಸು ಶಾಂತವಾಗಿರಲು ಸಾಧ್ಯವಾದರೆ, ತೀರ್ಥಯಾತ್ರೆಯ ಅಗತ್ಯವಾದರೂ ಏನಿದೆ ? ಈ ಶ್ರೀಮಾತೆಯವರ ನುಡಿಮುತ್ತುಗಳು ಮನಸ್ಸಿನ ಶಾಂತಿ ಬೇಕಾಗಿದ್ದರೆ, ಯಾರಲ್ಲೂ ತಪ್ಪನ್ನು ಹುಡುಕ ಬೇಡ. ಈ ಜಗತ್ತೆಲ್ಲ ನಿನ್ನದೇ. ಯಾರೂ ಅನ್ಯರಲ್ಲ. ನೀನು ಯಾರನ್ನು ಪ್ರೀತಿಸುತ್ತೀಯೋ ಅವರಿಂದ ಏನನ್ನೂ ಬಯಸಬೇಡ. ನೀನು ಏನನ್ನಾದರೂ ಬಯಸಿದೆ ಎಂದಿಟ್ಟುಕೋ, ಆಗ ಕೆಲವರು ಹೆಚ್ಚು ಕೊಡುತ್ತಾರೆ, ಕೆಲವರು ಕಡಿಮೆ ಕೊಡುತ್ತಾರೆ. ನೀನಾಗ ಹೆಚ್ಚು ಕೊಟ್ಟವರನ್ನು ಹೆಚ್ಚು ಪ್ರೀತಿಸುತ್ತೀಯ, ಕಡಮೆ ಕೊಟ್ಟವರನ್ನು ಕಡಮೆ ಪ್ರೀತಿಸುತ್ತೀಯ. ಹೀಗೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸಲು ಆಗುವುದಿಲ್ಲ. ಈ ಮನಸ್ಸಿನಿಂದ ಬರೀ ತೊಂದರೆ ಅಂದುಕೊಂಡೆಯಾ, ಮೊದಲಿಗೆ ಮನಸ್ಸಿನ ಸಹಕಾರ ತುಂಬ ಮುಖ್ಯ. ಶುದ್ಧ ಮನಸ್ಸೇ ಮನುಷ್ಯನಿಗೆ ದಾರಿಯನ್ನು ತೋರಿಸುವದು. ಭಗವಂತನನ್ನು ಕಾಣದಿದ್ದರೂ ಆತನನ್ನು ನಮ್ಮವನೆಂದೇ ಕರೆಯಲು ಸಾಧ್ಯವಾದರೆ, ಅದೇ ಅವನ ಕೃಪೆ. ಪ್ರಾಮಾಣಿಕವಾದ ಪ್ರೀತಿಲ್ಲದೆ ಭಗವಂತನನ್ನು ಪಡೆಯಲು ಸಾಧ್ಯವಿಲ್ಲ. ಭಗವಂತನನ್ನು ಪ್ರೀತಿಗಾಗಿ ಪ್ರೀತಿಸು. ಅದು ಬೇರೆಯವರ ಕಣ್ಣಿಗೆ ಬೀಳಬೇಕಾಗಿಲ್ಲ. ಒಳ್ಳೆಯ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಛಲ ಹಾಗೂ ಸತತ ಪ್ರಯತ್ನ ಅಗತ್ಯ. ಶ್ರದ್ಧೆ ಮತ್ತು ನಿಷ್ಠೆ , ಇವೇ ಮೊದಲು ಬೇಕಾದವು. ಮನಸ್ಸು ಶುದ್ಧವಾಗಿದ್ದರೆ, ಏಕಾಗ್ರತೆ, ಧ್ಯಾನ ಏಕೆ ಸಾಧ್ಯವಾಗುವುದಿಲ್ಲ ? ಕಾವ್ಯ ಪುಷ್ಪ ರಾಮಕೃಷ್ಣ ತಪೋಸೂರ್ಯ ಕಿರಣಬಿಂಬ ಚಂದ್ರಿಕೆ ಓ ತಾಯಿ ಅಂಬಿಕೆ || ಗಿರಿಯ ದರಿಯ ನೆಲವ ಜಲವ ತಬ್ಬಿ ನಿಂತ ಕರುಣೆಯೆ ವಾತ್ಸಲ್ಯವರಣೆಯೆ || ರಾಮಕೃಷ್ಣ ತಪೋವನದ ಪರ್ಣಕುಟಿಯ ದೀಪವೆ | ಬಳಿಗೆ ಬಂದ ಹಣತೆಗಳಿಗೆ ಬೆಳಕನಿತ್ತ ಕಿರಣವೆ ಮೌನಪ್ರಭಾವಲಯವೆ || ಸಂಕಟಗಳ ವನವಸನವ- ನುಟ್ಟುನಿಂತ ಶಿಖರವೆ | ನದನದಿಗಳ ವಾತ್ಸಲ್ಯದ ಹಾಲೂಡಿದ ತೀರ್ಥವೆ ದಿವ್ಯಕೃಪಾರೂಪವೆ || - ಜಿ. ಎಸ್. ಶಿವರುದ್ರಪ್ಪ ಇವನ್ನೂ ನೋಡಿ ರಾಮಕೃಷ್ಣ ಪರಮಹಂಸ ವರ್ಗ:ಭಾರತದ ಗಣ್ಯರು ವರ್ಗ:೧೮೫೩ ಜನನ ವರ್ಗ:೧೯೨೦ ನಿಧನ ವರ್ಗ:ಹಿಂದೂ ಸಂತರು
ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
https://kn.wikipedia.org/wiki/ಕರ್ನಾಟಕದ_ಪ್ರಸಿದ್ಧ_ವ್ಯಕ್ತಿಗಳು
ಕರ್ನಾಟಕ ರಾಜ್ಯದ ಕೆಲವು ಪ್ರಸಿದ್ಧ ವ್ಯಕ್ತಿಗಳ ಪಟ್ಟಿ. ಯೋಗಾಚಾರ್ಯರು ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಸಿ.ಎಮ್.ಭಟ್ ಬಿ. ಕೆ. ಎಸ್. ಐಯ್ಯಂಗಾರ್ ಕಲೆ ಮತ್ತು ಮನೋರಂಜನೆ ಸಿನಿಮಾ ಅಂಬರೀಶ್ ಅನಂತನಾಗ್ ಅಬ್ಬಯ್ಯ ನಾಯ್ಡು ಅಭಿನಯ ಅರ್ಜುನ್ ಸರ್ಜಾ ಅಶ್ವಥ್ ಆದವಾನಿ ಲಕ್ಷ್ಮಿ ದೇವಿ ಆರ್.ಎನ್.ಜಯಗೋಪಾಲ್ ಆರ್.ನಾಗೇಂದ್ರರಾವ್ ಆರತಿ ಉದಯಕುಮಾರ್ ಉಪೇಂದ್ರ ಉಪೇಂದ್ರಕುಮಾರ ಎಂ.ಪಿ.ಶಂಕರ ಕಣಗಾಲ್ ಪ್ರಭಾಕರ ಶಾಸ್ತ್ರೀ ಕಲ್ಪನಾ ಕೆ. ಕಲ್ಯಾಣ್ ಕಲ್ಯಾಣ್ ಕುಮಾರ್ ಕವಿರಾಜ್ ಕಾಶೀನಾಥ್ ಕುಣಿಗಲ್ ನಾಗಭೂಷಣ ಕು. ರಾ. ಸೀತಾರಾಮ ಶಾಸ್ತ್ರಿ ಕುಮಾರ್ ಗೋವಿಂದ್ ಗಂಗಾಧರ ಗೋಲ್ದನ್ ಸ್ಟಾರ್ ಗಣೇಶ ಗಿರೀಶ್ ಕಾರ್ನಾಡ್ ಗಿರೀಶ್ ಕಾಸರವಳ್ಳಿ ಗೀತಪ್ರಿಯ ಗುಬ್ಬಿ ವೀರಣ್ಣ ಚಿ.ಉದಯಶಂಕರ ಚಿ.ಗುರುದತ್ ಚಂದ್ರಕಲಾ ಚಿಂದೋಡಿ ಲೀಲಾ ಚರಣರಾಜ್ ಜಿ.ಕೆ.ವೆಂಕಟೇಶ್ ಜಿ.ವಿ.ಅಯ್ಯರ್ ಜಗ್ಗೇಶ್ ಜಯಾ ಟಿ.ಜಿ.ಲಿಂಗಪ್ಪ ಡಿಂಗ್ರಿ ನಾಗರಾಜ್ ಡಾ.ರಾಜ್‍ಕುಮಾರ್ ಢಿಕ್ಕಿ ಮಾಧವರಾವ್ ತಾರಾ ತೂಗುದೀಪ ಶ್ರೀನಿವಾಸ ದಿನೇಶ್ ದಿನೇಶ್ ಬಾಬು ದರ್ಶನ್ ತೂಗುದೀಪ್ ದ್ವಾರಕೀಶ್ ದೇವರಾಜ್ ಧೀರೇಂದ್ರ ಗೋಪಾಲ್ ನರಸಿಂಹರಾಜು ನಾಗಾಭರಣ ಪಿ.ಬಿ.ಶ್ರೀನಿವಾಸ್ ಪಂಡರೀಬಾಯಿ ಪದ್ಮಾ ಕುಮಟಾ ಪದ್ಮಾ ವಾಸಂತಿ ಪ್ರಕಾಶ ರೈ ಪ್ರತಿಮಾ ದೇವಿ ಪ್ರಭಾಕರ್ ಪ್ರಮೀಳಾ ಜೋಷಾಯ್ ಪ್ರೇಮಾ ಪವಿತ್ರ ಲೋಕೇಶ್ ಪಾಪಮ್ಮ ಪುಟ್ಟಣ್ಣ ಕಣಗಾಲ್ ಬಿ.ಆರ್.ಪಂತಲು ಬಿ.ಜಯಮ್ಮ ಬಿ.ಸರೋಜಾದೇವಿ ಬೆಳ್ಳಾವೆ ನರಹರಿ ಶಾಸ್ತ್ರಿ ಬೆಂಗಳೂರು ಲತಾ ಬ್ರಹ್ಮಾವರ ಬಸಂತ ಕುಮಾರ ಪಾಟೀಲ ಬಾಲಕೃಷ್ಣ ಭಾರ್ಗವ ಭಾರತಿ ಮಂಜುಳಾ ಮಹೇಂದರ್ ಮಹೇಶ್ ಮಹದೇವ್ ಮಾಸ್ಟರ್ ಹಿರಣ್ಣಯ್ಯ ಮುರಳಿ ಮುಸುರಿ ಕೃಷ್ಣಮೂರ್ತಿ ಮೈನಾವತಿ ಮೈಸೂರು ಲೋಕೇಶ್ ರವಿಚಂದ್ರನ್ ರಾಜನ್-ನಾಗೇಂದ್ರ ರಾಜೇಂದ್ರಸಿಂಗ್ ಬಾಬು ರಾಜೇಶ್ ರಾಮನಾಥನ್ ರಾಮಕೃಷ್ಣ ರೂಪಾದೇವಿ ರೇವತಿ ಲೀನಾ ಚಂದಾವರಕರ್‍ ಲೀಲಾವತಿ ಲೋಕನಾಥ್ ಲೋಕೇಶ್ ವಿ.ನಾಗೇಂದ್ರ ಪ್ರಸಾದ್ ವಿ.ಮನೋಹರ್ ವಜ್ರಮುನಿ ವಿಷ್ಣುವರ್ಧನ್ ವಸುಂಧರಾ ದಾಸ್ ವಾದಿರಾಜ್ ವಾಸುದೇವ ರಾವ್ ಎನ್.ವೀರಾಸ್ವಾಮಿ ಶಂಕರ ಸಿಂಗ್ ಶಂಕರ್-ಗಣೇಶ್ ಶಂಕರನಾಗ್ ಶಕ್ತಿಪ್ರಸಾದ್ ಶ್ರೀನಾಥ್ ಶಿವರಾಜ್‍ಕುಮಾರ್ ಶೃತಿ ಸಂಪತ್ ಸಿದ್ಧಲಿಂಗಯ್ಯ ಸಿ.ವಿ.ಶಿವಶಂಕರ್ ಸಾಧು ಕೋಕಿಲ ಸೋರಟ್ ಅಶ್ವಥ್ ಸುಂದರಕೃಷ್ಣ ಅರಸ್ ಸುಂದರರಾಜ್ ಸುದರ್ಶನ ಸುಧಾರಾಣಿ ಸುಧೀಂದ್ರ ಸುಧೀರ ಸುನೀಲ್ ಕುಮಾರ್ ದೇಸಾಯಿ ಸುಬ್ಬಯ್ಯ ನಾಯ್ಡು ಹಂಸಲೇಖ ಹರಿಣಿ ಹುಣಸೂರು ಕೃಷ್ಣಮೂರ್ತಿ ಹೊನ್ನಪ್ಪ ಭಾಗವತರ್ ಗುರುಬಸವರಾಜ್ ಪಿ.ಎಮ್. ಸಿ.ಪಿ.ಯೋಗಿಶ್ವರ್ ಗೊಲ್ದನ್ ಸ್ಟಾರ್ ಗಣೇಶ ನಾಟಕ ಅರುಂಧತಿನಾಗ್ ಎಚ್.ಎನ್.ಹೂಗಾರ ಎಚ್.ಆರ್.ಭಸ್ಮೆ ಎನ್.ಬಸವರಾಜ ಏ.ಎಸ್.ಮೂರ್ತಿ ಏಣಗಿ ನಟರಾಜ ಏಣಗಿ ಬಾಳಪ್ಪ ಕಂದಗಲ್ಲ ಹಣಮಂತರಾವ ಕೆ.ವಿ.ಸುಬ್ಬಣ್ಣ ಕಲ್ಪನಾ ಗಿರೀಶ ಕಾರ್ನಾಡ ಗರುಡ ಸದಾಶಿವರಾವ ಗುಬ್ಬಿ ವೀರಣ್ಣ ಚಂದ್ರಶೇಖರ ಕಂಬಾರ ಚಿತ್ತರಗಿ ಗಂಗಾಧರ ಶಾಸ್ತ್ರಿ ಚಿಂದೋಡಿ ಲೀಲಾ ಜಯಶ್ರೀ ನಾಗರತ್ನಮ್ಮ ಪಿ.ಬಿ.ಧುತ್ತರಗಿ ಪ್ರಸನ್ನ ಪ್ರೇಮಾ ಕಾರಂತ ಬಿ.ವಿ.ಕಾರಂತ ಭಾರ್ಗವಿ ನಾರಾಯಣ್ ಮಾಸ್ಟರ್ ಹಿರಣ್ಣಯ್ಯ ಮುಖ್ಯಮಂತ್ರಿ ಚಂದ್ರು ಮೇಕಪ್ ನಾಣಿ ಯಶವಂತ ಸರದೇಶಪಾಂಡೆ ಲೋಕೇಶ್ ವಜ್ರಮುನಿ ವಸಂತಸಾ ನಾಕೋಡ ವಿಷಯಾ ಜೇವೂರ ವಸಂತ ಕವಲಿ ಶಂಕರನಾಗ್ ಶಿವಾನಂದ ಸಿ.ಪಿ.ಕೃಷ್ಣಮೂರ್ತಿ ಸಿಹಿಕಹಿ ಚಂದ್ರು ಸುಧೀರ್ ಸುಬ್ಬಯ್ಯ ನಾಯ್ಟು ಸುಭದ್ರಮ್ಮ ಮನ್ಸೂರ್ ಸೇತುಮಾಧವರಾವ ಮಾನ್ವಿ ಗುರುಸ್ವಾಮಿ ಲಕ್ಶ್ಮ್ಹೀಪತಿ ಪ್ರಸನ್ನ ಕುಮಾರ ರಘುನಂದನ ಫ್ಯಾಷನ್ ನಫೀಸಾ ಜೋಸೆಫ್ ಲಾರಾ ದತ್ತ ಡೀನೋ ಮೋರಿಯ ಪ್ರಸಾದ ಬಿಡ್ಡಪ್ಪ ಐಶ್ವರ್ಯ ರೈ ವಿದಿಶಾ ಪಾವಟೆ ಸಂಗೀತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು ಆರ್. ಕೆ. ಶ್ರೀಕಂಠನ್ ಆರ್. ಕೆ. ಪದ್ಮನಾಭ ಡಾ. ಸುಕನ್ಯಾ ಪ್ರಭಾಕರ್ ಶ್ಯಾಮಲಾ ಪ್ರಕಾಶ್ ಶಾಸ್ತ್ರೀಯ ಸಂಗೀತಗಾರರು ಅರ್ಜುನ ನಾಕೋಡ ಅಬ್ದುಲ್ ಕರೀಮ ಖಾನ ಉಸ್ತಾದ ಬಾಲೇಖಾನ ಕುಮಾರ ಗಂಧರ್ವ ಕೈವಲ್ಯ ಗುರುವ ಕೃಷ್ಣಾ ಹಾನಗಲ್ ಗಣಪತಿ ಭಟ್ಟ ಹಾಸಣಗಿ ಗಂಗೂಬಾಯಿ ಹಾನಗಲ್ ಗೀತಾ ಜಾವಡೇಕರ ಗುರುರಾವ ದೇಶಪಾಂಡೆ ಜಯತೀರ್ಥ ಮೇವುಂಡಿ ಟಿ.ಕೆ.ರಾಮಮೂರ್ತಿ ನಾಗನಾಥ ಒಡೆಯರ ಪಂಚಾಕ್ಷರಿ ಗವಾಯಿಗಳು ಪಂಚಾಕ್ಷರಿ ಮತ್ತಿಗಟ್ಟಿ ಪಿಟೀಲು ಚೌಡಯ್ಯ ಪುಟ್ಟರಾಜ ಗವಾಯಿಗಳು ಬಿಡಾರಂ ಕೃಷ್ಣಪ್ಪ ಬಸವರಾಜ ಮನ್ಸೂರ ಬಸವರಾಜ ರಾಜಗುರು ಬೆಂಗಳೂರು ನಾಗರತ್ನಮ್ಮ ಭೀಮಸೇನ ಜೋಶಿ ಮಲ್ಲಿಕಾರ್ಜುನ ಮನ್ಸೂರ ಮಹೇಶ್ ಮಹದೇವ್ ಮಾಧವ ಗುಡಿ ಮೈಸೂರು ದೊರೆಸ್ವಾಮಿ ಅಯ್ಯಂಗಾರ್ ಆನೂರು ರಾಮಕೃಷ್ಣ ಮೈಸೂರು ವಾಸುದೇವಾಚಾರ್ಯ ಮೈಸೂರು ಸದಾಶಿವರಾಯರು ರಘುನಾಥ ನಾಕೋಡ ರಾಜಶೇಖರ ಮನಸೂರ ರಾಜೀವ್ ತಾರಾನಾಥ್ ವಸಂತ ಕನಕಾಪುರ ವಸಂತ ನಾಕೋಡ ವಿನಾಯಕ ತೊರವಿ ವೀಣೆ ಶೇಷಣ್ಣ ಶಾರದಾ ಹಾನಗಲ್ ಶಿವಾನಂದ ಪಾಟೀಲ ಶ್ಯಾಮಲಾ ಭಾವೆ ಶೇಷಾದ್ರಿ ಗವಾಯಿ ಸಿದ್ಧರಾಮ ಜಂಬಲದಿನ್ನಿ ಸುಲಭಾ ನೀರಲಗಿ ಸೋಮನಾಥ ಮರಡೂರ ಬಾಲಚಂದ್ರ ನಾಕೋಡ ಜನಪದ/ಸುಗಮಸಂಗೀತ/ಹಿನ್ನೆಲೆಗಾಯಕರು ಅನುರಾಧಾ ಧಾರೇಶ್ವರ ಎಚ್.ಆರ್.ಲೀಲಾವತಿ ಕಸ್ತೂರಿ ಶಂಕರ್ ಗುರುಕಿರಣ್ ಚಂದ್ರಿಕಾ ಗುರುರಾಜ ಪಿ.ಆರ್.ಭಾಗವತ ಪ್ರಿಯದರ್ಶಿನಿ ಪಿ.ಕಾಳಿಂಗರಾಯ ಪಿ.ಸುಶೀಲ ಬಾನಂದೂರು ಕೆಂಪಯ್ಯ ಚಂದಗಾಲು ಬೋರಪ್ಪ ಬಿ.ಆರ್.ಛಾಯಾ ಮಂಜುಳ ಗುರುರಾಜ್ ಮೈಸೂರು ಅನಂತಸ್ವಾಮಿ ಯಶವಂತ ಹಳಿಬಂಡಿ ಲಕಿ ಅಲಿ ಶ್ಯಾಮಲಾ ಜಾಗೀರದಾರ ಶಿವಮೊಗ್ಗ ಸುಬ್ಬಣ್ಣ ಸಿ ಅಶ್ವಥ್ ಸಂಗೀತಾ ಕಟ್ಟಿ ಸ್ನೇಹಾ ಹಂಪಿಹೊಳಿ ಹುಕ್ಕೇರಿ ಬಾಳಪ್ಪ ರಾಜೇಶ್ ಕೃಷ್ಣ ಚೈತ್ರ ಗುರು ರಾಜ ಹೊಸಕೋಟೆ ರಾಜೀವ್ ಧೀಕ್ಷೀತ್ ರಾಮಕೃಷ್ಣ ಉದ್ಯಮ ಅಜೀಂ ಹಶಾಮ್ ಪ್ರೇಮ್‌ಜಿ, ವಿಪ್ರೊ ಎನ್ ಆರ್ ನಾರಾಯಣ ಮೂರ್ತಿ, ಇನ್ಫೋಸಿಸ್ ಸುಧಾ ಮೂರ್ತಿ, ಇನ್ಫೋಸಿಸ್ ಕಿರಣ್ ಮಜುಂದಾರ್ ಬಿ.ವಿ. ಜಗದೀಶ್ ಬಾಬಾ ಕಲ್ಯಾಣಿ ಮಾರ್ಕ್ ಮಸ್ಕರೇನಾಸ್, ವರ್ಲ್ಡ್‌ಟೆಲ್ ವಿಜಯ್ ಮಲ್ಯ, ಯು.ಬಿ ಸಬೀರ್ ಭಾಟಿಯಾ ಸಂಕೇಶ್ವರ್, ಅಜ್ಯಯ್ ಭಾರ್ದ್ವವಾಜ್,ಅನ್ಥೆಮ್ ಬಯೊಸಯ್ನ್ಸ್ ವಿಜ್ಞಾನ ಡಾ.ವಸಂತ್ ಕುಮಾರ್,ಸಸ್ಯ ರೋಗ ಶಾಸ್ತ್ರ ಸಾಹಿತ್ಯ ಲೇಖಕರು ಜಿ ಅನಿಲ್ ಕುಮಾರ್ ದ್ಯಾವನೂರು ಮಂಜುನಾಥ್ ಹೆಚ್.ಆರ್.ನಾಗೇಶರಾವ್ ಹಿಂದಿನ ಸಾಹಿತಿಗಳು ಅಕ್ಕಮಹಾದೇವಿ ಅಲ್ಲಮ ಪ್ರಭು ಆಂಡಯ್ಯ ಕಂತಿ ಕುಮುದೇಂದು-ಸಿರಿಭೂವಲಯ ಕೆಂಪು ನಾರಾಯಣ ಕನಕದಾಸ ಕುಮಾರ ವಾಲ್ಮೀಕಿ ಕುಮಾರವ್ಯಾಸ ಕೇಶಿರಾಜ - ಶಬ್ದಮಣಿದರ್ಪಣ ಗೋವಿಂದವೈದ್ಯ ಚೆನ್ನಬಸವಣ್ಣ ಚೆಲ್ವಾಂಬಾ ಚಾಮರಸ-ಪ್ರಭುಲಿಂಗಲೀಲೆ ಜನ್ನ ನಿಜಗುಣ ಶಿವಯೋಗಿ ನಿತ್ಯಾತ್ಮಶುಕ ಕವಿ ನಯಸೇನ ನಾಗಚಂದ್ರ ನಾಗವರ್ಮ ನೇಮಿಚಂದ್ರ ಪಂಪ ಪುರಂದರದಾಸ ಪುಲಿಗೆರೆ ಸೋಮನಾಥ ಪೊನ್ನ ಬಸವೇಶ್ವರ ಭಟ್ಟಾಕಳಂಕ ಮಗ್ಗೆಯ ಮಾಯಿದೇವ ಮಹಲಿಂಗರಂಗ ಮುದ್ದಣ ಮುಪ್ಪಿನ ಷಡಕ್ಷರಿ ರತ್ನಾಕರ ವರ್ಣಿ ರನ್ನ ರಾಘವಾಂಕ ರುದ್ರಭಟ್ಟ ಲಕ್ಷ್ಮೀಶ ವಾದಿರಾಜರು ಶ್ರೀಪಾದರಾಜರು ಶಿವಕೋಟಿ ಆಚಾರ್ಯ ಶಿಶುನಾಳ ಶರೀಫರು ಷಡಕ್ಷರದೇವ ಸಂಚಿ ಹೊನ್ನಮ್ಮ - ಹದಿಬದೆಯ ಧರ್ಮ ಸರ್ವಜ್ಞ ಹರಿಹರ ಹೆಳವನಕಟ್ಟೆ ಗಿರಿಯಮ್ಮ ಮಡಿವಾಳ ಮಾಚಯ್ಯ -ವಚನಕಾರರು ವರ್ತಮಾನ ಸಾಹಿತಿಗಳು ಅ.ನ. ಕೃಷ್ಣರಾಯ ಅ.ನಾ.ಪ್ರಹ್ಲಾದ ರಾವ್ ಅ.ರಾ.ಮಿತ್ರ ಅ.ರಾ.ಸೇತೂರಾಮರಾವ್ ಅಕಬರ ಅಲಿ ಅದೀಬ್ ಅಖ್ತರ್ ಅನಂತ ಕಲ್ಲೋಳ ಅನಸೂಯಾ ರಾಮರೆಡ್ಡಿ ಅನಸೂಯಾ ಸಿದ್ದರಾಮ ಕೆ. ಅನಸೂಯಾದೇವಿ ಅನುಪಮಾ ನಿರಂಜನ ಅಪರಂಜಿ ಶಿವು ಅಬ್ದುಲ್ ಮಜೀದ ಖಾನ್ ಅಬ್ದುಲ್ ರಶೀದ ಖಾನ್ ಅಮರೇಶ ನುಗಡೋಣಿ ಅಮೃತೇಶ್ವರ ತಂಡರ ಅರವಿಂದ ನಾಡಕರ್ಣಿ ಅರವಿಂದ ಮಾಲಗತ್ತಿ ಅರಳುಮಲ್ಲಿಗೆ ಪಾರ್ಥಸಾರಥಿ ಅರ್ಚಿಕ ವೆಂಕಟೇಶ ಅಲ್ಲಮಪ್ರಭು ಬೆಟ್ಟದೂರ ಅಶ್ವತ್ಥ ಅಶ್ವಿನಿ ಅಶೋಕ ಚೊಳಚಗುಡ್ಡ ಅಶೋಕ ಶೆಟ್ಟರ ಆ.ನೇ.ಉಪಾಧ್ಯೆ ಆದ್ಯ ರಾಮಾಚಾರ್ಯ ಆನಂದ ಆನಂದ ಝುಂಜರವಾಡ ಆನಂದಕಂದ(ಬೆಟಗೇರಿ ಕೃಷ್ಣಶರ್ಮ) ಆರ್.ಇಂದಿರಾ ಆರ್.ಕಲ್ಯಾಣಮ್ಮ ಆರ್.ಕೆ.ನಾರಾಯಣ್ ಆರ್.ಜಿ.ಮಠಪತಿ ಆರ್.ಡಿ.ಕಾಮತ ಆರ್.ತಾತಾಚಾರ್ಯ ಆರ್.ನರಸಿಂಹಾಚಾರ್ ಆರ್.ಭರತಾದ್ರಿ ಆರ್.ವಿ.ಭಂಡಾರಿ ಆರ್.ಸಿ.ಹಿರೇಮಠ ಆರ್ಯ ಆಲೂರು ವೆಂಕಟರಾಯರು ಇಂದೂಧರ ಹೊನ್ನಾಪುರ ಇಟಗಿ ರಾಘವೇಂದ್ರ ಈಚನೂರು ಜಯಲಕ್ಷ್ಮಿ ಈಚನೂರು ಶಾಂತಾ ಈಶ್ವರ ಕಮ್ಮಾರ ಈಶ್ವರ ಸಣಕಲ್ಲ ಈಶ್ವರಚಂದ್ರ ಉತ್ತಂಗಿ ಚನ್ನಪ್ಪ ಉದಯ ಶಂಕರ ಪುರಾಣಿಕ ಉಮಾ ರಾವ್ ಉಷಾ ನವರತ್ನರಾಂ ಉಷಾ ಪಿ. ರೈ ಉಷಾದೇವಿ ಎ.ಆರ್.ಕೃಷ್ಣಶಾಸ್ತ್ರಿ ಎ.ಎನ್.ಮೂರ್ತಿ ರಾವ್ ಎ.ಎಸ್. ಪುತ್ತಿಗೆ ಎ.ಪಂಕಜಾ ಎ.ಪಿ.ಮಾಲತಿ ಎಂ. ಚಿದಾನಂದ ಮೂರ್ತಿ ಎಂ. ಮರಿಯಪ್ಪ ಭಟ್ಟ ಎಂ.ಆರ್.ಕಮಲ ಎಂ.ಆರ್.ಲಕ್ಷ್ಮಮ್ಮ ಎಂ.ಎಂ.ಕಲಬುರ್ಗಿ ಎಂ.ಎಸ್.ಕೆ.ಪ್ರಭು ಎಂ.ಎಸ್.ಪುಟ್ಟಣ್ಣ ಎಂ.ಎಸ್.ವೇದಾ ಎಂ.ಎಸ್.ಸುಂಕಾಪುರ ಎಂ.ಜಿ.ಭೀಮರಾವ್ ಎಂ.ಜೀವನ ಎಂ.ಡಿ.ಗೋಗೇರಿ ಎಂ.ಡಿ.ಒಕ್ಕುಂದ ಎಂ.ಬಿ.ನೇಗಿನಹಾಳ ಎಂ.ವಾಸುದೇವರಾವ್ ಎಂ.ವಿ.ಸೀತಾರಾಮಯ್ಯ ಎಂ.ವೆಂಕಟಕೃಷ್ಣಯ್ಯ ಎಂ.ಶಿವಾಜಿರಾವ್ ಎಚ್. ತಿಪ್ಪೇರುದ್ರಸ್ವಾಮಿ ಎಚ್.ಆರ್.ಇಂದಿರಾ ಎಚ್.ಎಲ್.ಕೇಶವಮೂರ್ತಿ ಎಚ್.ಎಸ್.ಪಾರ್ವತಿ ಎಚ್.ಎಸ್.ಮುಕ್ತಾಯಕ್ಕ ಎಚ್.ಎಸ್.ವೆಂಕಟೇಶಮೂರ್ತಿ ಎಚ್.ಎಸ್.ಶಿವಪ್ರಕಾಶ್ ಎಚ್.ಎಸ್.ಶ್ರೀಮತಿ ಎಚ್.ಎಸ್.ಸುಜಾತಾ ಎಚ್.ಕೆ.ಅನಂತರಾವ್ ಎಚ್.ಕೆ.ರಂಗನಾಥ್ ಎಚ್.ಗಿರಿಜಮ್ಮ ಎಚ್.ಜಿ.ರಾಧಾದೇವಿ ಎಚ್.ಎನ್.ಶಿವಪ್ರಕಾಶ್ ಎಚ್.ಎಲ್.ಪುಷ್ಪಾ ಎಚ್.ಪಿ.ಜೋಶಿ ಎಚ್.ಬಿ.ಚಂಪಕಮಾಲಾ ಎಚ್.ವಾಯ್.ಶಾರದಾಪ್ರಸಾದ ಎಚ್.ವಿ.ನಂಜುಂಡಯ್ಯ ಎಚ್.ವಿ.ನಾಗೇಶ ಎಚ್.ವಿ.ಸಾವಿತ್ರಮ್ಮ ಎನ್.ಎಸ್.ಚಿದಂಬರರಾವ್ ಎನ್.ಎಸ್.ತಾರಾನಾಥ ಎನ್.ಎಸ್.ನದಾಫ ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಎನ್.ಎಸ್.ಸುಬ್ಬರಾವ್ ಎನ್.ಕೆ.ಕುಲಕರ್ಣಿ ಎನ್.ಕೆ.ಜೋಗಳೇಕರ ಎನ್.ನರಸಿಂಹಯ್ಯ ಎನ್.ಪಂಕಜಾ ಎನ್.ಪ್ರಭಾಕರ ಎಮ್.ಆರ್.ಶ್ರೀನಿವಾಸಮೂರ್ತಿ ಎಮ್.ಎಸ್.ನರಸಿಂಹಮೂರ್ತಿ ಎಮ್.ಕೆ.ಇಂದಿರಾ ಎಮ್.ಕೆ.ಗೋಪಿನಾಥ ಎಮ್.ಕೆ.ಜಯಲಕ್ಷ್ಮಿ ಎಮ್.ಕೆ.ವರಗಿರಿ ಎಮ್.ಪಿ.ಉಮಾದೇವಿ ಎಮ್.ಪಿ.ಮನೋಹರಚಂದ್ರನ್ ಎಮ್.ಬಿ.ಅಡ್ನೂರ ಎಮ್.ರಾಮಮೂರ್ತಿ ಎಮ್.ಸಿ.ಪದ್ಮಾ ಎಲ್.ಎಸ್.ಶೇಷಗಿರಿರಾವ ಎಲ್.ಗುಂಡಪ್ಪ ಎಲ್.ಜಿ.ಸುಮಿತ್ರಾ ಎಲ್.ಬಸವರಾಜು ಎಲ್.ಹನುಮಂತಯ್ಯ ಎಸ್ ಎಲ್ ಭೈರಪ್ಪ ಎಸ್.ಅನಂತನಾರಾಯಣ ಎಸ್.ಎ.ಕೃಷ್ಣಯ್ಯ ಎಸ್.ಎನ್.ಶಿವಸ್ವಾಮಿ ಎಸ್.ಎಸ್.ಬಸವನಾಳ ಎಸ್.ಎಸ್.ಮಾಳವಾಡ ಎಸ್.ಕೆ.ಜೋಶಿ ಎಸ್.ಕೆ.ರಮಾದೇವಮ್ಮ ಎಸ್.ದಿವಾಕರ ಎಸ್.ಮಂಗಳಾ ಸತ್ಯನ್ ಎಸ್.ಮಂಜುನಾಥ ಎಸ್.ರಾಮಮೂರ್ತಿ ಎಸ್.ವಿ.ಪರಮೇಶ್ವರ ಭಟ್ಟ ಎಸ್.ವಿ.ರಂಗಣ್ಣ ಎಸ್.ವಿ.ಶ್ರೀನಿವಾಸರಾವ್ ಎಸ್.ಶೆಟ್ಟರ್ ಎಸ್.ಸಿ.ನಂದೀಮಠ ಏ.ಕೆ.ರಾಮಾನುಜನ್ ಓ.ಎಲ್.ಎನ್.ಸ್ವಾಮಿ ಕ.ವೆಂ.ರಾಜಗೋಪಾಲ ಕಡೆಂಗೋಡ್ಲು ಶಂಕರಭಟ್ಟ ಕಮಲಾ ಹಂಪನಾ ಕಮಲಾ ಹೆಮ್ಮಿಗೆ ಕಯ್ಯಾರ ಕಿಞಞಣ್ಣ ರೈ ಕರ್ಪೂರ ಶ್ರೀನಿವಾಸರಾವ್ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಕವಿತಾ ಕೃಷ್ಣ ಕಾಕೋಳು ರಾಮಯ್ಯ ಕಾಕೋಳು ಸರೋಜಾರಾವ್ ಕಾವ್ಯಾನಂದ (ಪುಣೇಕರ) ಕಾಳೇಗೌಡ ನಾಗವಾರ ರೆವರೆಂಡ ಕಿಟ್ಟೆಲ್ ಕೀರ್ತಿನಾಥ ಕುರ್ತಕೋಟಿ ಕು.ಶಿ.ಹರಿದಾಸ ಭಟ್ಟ ಕುಂ.ವೀರಭದ್ರಪ್ಪ ಕುಮಾರ ಕಕ್ಕಯ್ಯ ಪೋಳ ಕುಮಾರ ನಿಜಗುಣರು ಕುಮಾರ ವೆಂಕಣ್ಣ ಕುಮುದಾ ಪುರುಷೋತ್ತಮ್ ಕುಲಶೇಖರಿ ಕುವೆಂಪು ಕುಸುಮ ಕರಾಳೆ ಕುಸುಮಾಕರ ದೇವರಗೆಣ್ಣೂರು ಕೃಷ್ಣ ಸುಬ್ಬರಾವ್ ಕೃಷ್ಣಕುಮಾರ ಕಲ್ಲೂರ ಕೃಷ್ಣಮೂರ್ತಿ ಪುರಾಣಿಕ ಕೃಷ್ಣಾನಂದ ಕಾಮತ ಕೆ.ಆರ್.ಪದ್ಮಜಾ ಕೆ.ಆರ್.ಪದ್ಮಾ ಕೆ.ಎಚ್.ಶ್ರೀನಿವಾಸ್ ಕೆ.ಎಸ್. ನಿಸಾರ್ ಅಹಮದ್ ಕೆ.ಎಸ್.ನರಸಿಂಹಸ್ವಾಮಿ ಕೆ.ಎಸ್.ನಾರಾಯಣಸ್ವಾಮಿ ಕೆ.ಎಸ್.ರಾಮಕೃಷ್ಣಮೂರ್ತಿ ಕೆ.ಕೇಶವಶರ್ಮ ಕೆ.ಕೃಷ್ಣಮೂರ್ತಿ ಕೆ.ಗೋಪಾಲಕೃಷ್ಣರಾವ ಕೆ.ಜಿ.ಕುಂದಣಗಾರ ಕೆ.ಟಿ.ಗಟ್ಟಿ ಕೆ.ಪಿ.ಪುಟ್ಟಣ್ಣ ಶೆಟ್ಟಿ ಕೆ.ಬಿ.ಸಿದ್ದಯ್ಯ ಕೆ.ಮರುಳಸಿದ್ದಪ್ಪ ಕೆ.ವಿ.ಅಯ್ಯರ್ ಕೆ.ವಿ.ತಿರುಮಲೇಶ ಕೆ.ವಿ.ರಾಜೇಶ್ವರಿ ಕೆ.ವಿ.ಸುಬ್ಬಣ್ಣ ಕೆ.ಶರೀಫಾ ಕೆ.ಸಚ್ಚಿದಾನಂದಯ್ಯ ಕೆ.ಸರೋಜಾ ಕೆರೂರು ವಾಸುದೇವಾಚಾರ್ಯ ಕೇಫ ಕೈವಾರ ರಾಜಾರಾವ್ ಕೊ.ಚನ್ನಬಸಪ್ಪ ಕೊಡಗಿನ ಗೌರಮ್ಮ ಕೌಸಲ್ಯಾ ಧರಣೇಂದ್ರ ಕೈವಾರ ಗೋಪಿನಾಥ್ ಕ್ಯಾತ್ಸಂದ್ರ ಚಂದ್ರಶೇಖರ್ ಖಾದ್ರಿ ಶಾಮಣ್ಣ ಗಂಗಾಧರ ಚಿತ್ತಾಲ ಗಂಗಾಧರ ಮಡಿವಾಳೇಶ್ವರ ತುರಮರಿ 'ಗಂಗಾ'ಪಾದೇಕಲ್ ಗಂಗಾರಾಮ ಚಂಡಾಳ ಗಂಗಾಸ್ವಾಮಿ ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ ಗವಿಸಿದ್ಧ ಎನ್.ಬಳ್ಳಾರಿ ಗಾಯತ್ರಿ ನಾವಡ ಗಾಯತ್ರಿ ಮೂರ್ತಿ ಗಿರಡ್ಡಿ ಗೋವಿಂದರಾಜ ಗಿರೀಶ ಕಾರ್ನಾಡ ಗಿರೀಶ್ ರಾವ್ ಎಚ್.-ಜೋಗಿ ಗೀತಾ ಕುಲಕರ್ಣಿ ಗೀತಾ ನಾಗಭೂಷಣ ಗೀತಾ ಮೋಹನ ಮುರಲಿ ಗೀತಾ ವಸಂತ ಗೀತಾ ಸಿ.ವಿ. ಗೀತಾ ಸೀತಾರಾಂ ಗುಂಡಾ ಜೋಯಿಸ ಗುರುದೇವಿ ಹುಲೆಪ್ಪನವರಮಠ ಗುರುಪ್ರಸಾದ ಕಾಗಿನೆಲೆ ಗುರುರಾಜ ಜೋಶಿ ಗುರುಲಿಂಗ ಕಾಪಸೆ ಗುಲ್ವಾಡಿ ವೆಂಕಟರಾಯರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗೋಪಾಲ ಕೃಷ್ಣ ಅಡಿಗ ಗೋಪಾಲಕೃಷ್ಣ ನಾಯಕ ಗೋವಿಂದಮೂರ್ತಿ ದೇಸಾಯಿ ಗೌರೀಶ ಕಾಯ್ಕಿಣಿ ಚ.ಸರ್ವಮಂಗಳ ಚಂದ್ರಕಲಾ ನಂದಾವರ ಚಂದ್ರಕಾಂತ ಕುಸನೂರ ಚಂದ್ರಕಾಂತ ಪೋಕಳೆ ಚಂದ್ರಕುಮಾರ (ಸಾಹಿತಿ) ಚಂದ್ರಭಾಗಾದೇವಿ ಚಂದ್ರಶೇಖರ ಕಂಬಾರ ಚಂದ್ರಶೇಖರ ಪಾಟೀಲ ಚಂದ್ರಿಕಾ ಪುರಾಣಿಕ ಚ.ಸರ್ವಮಂಗಳ ಚದುರಂಗ ಚನ್ನವೀರ ಕಣವಿ ಚಿ.ನ.ಮಂಗಳಾ ಚಿ.ಶ್ರೀನಿವಾಸರಾಜು ಚಿತ್ರಲೇಖಾ ಚಿನ್ನ ಚುರಮರಿ ಶೇಷಗಿರಿರಾಯರು ಚೆ. ಎ. ಕವಲಿ - ಕನ್ನಡ ಕಸ್ತೂರಿ ಕೋಶ ಚೆನ್ನ ಕವಿಗಳು ಚೆನ್ನಕ್ಕಾ ಪಾವಟೆ (ಎಲಿಗಾರ) ಚೆನ್ನಣ್ಣ ವಾಲೀಕಾರ ಛಾಯಾದೇವಿ ನಂಜಪ್ಪ ಜ.ಚ.ನಿ. ಜಂಬಣ್ಣ ಅಮರಚಿಂತ ಜಗದೀಶ ಮಂಗಳೂರಮಠ ಜಗ್ಗು ಪ್ರಿಯದರ್ಶಿನಿ ಜನಾರ್ದನ ಗುರ್ಕಾರ ಜನಾರ್ದನ ನಾಯಕ ಜಯಂತ ಕಾಯ್ಕಿಣಿ ಜಯತೀರ್ಥ ರಾಜಪುರೋಹಿತ ಜಯದೇವಿತಾಯಿ ಲಿಗಾಡೆ ಜಯಲಕ್ಷ್ಮಿ ಶ್ರೀನಿವಾಸನ್ ಜಯಶ್ರೀ ದೇಶಪಾಂಡೆ ಜಿ ಪಿ ರಾಜರತ್ನಮ್ ಜಿ. ಎಸ್. ಶಿವರುದ್ರಪ್ಪ ಜಿ.ಅಬ್ದುಲ್ ಬಷೀರ್ ಜಿ.ಆರ್.ಪಾಂಡೇಶ್ವರ ಜಿ.ಎಚ್.ನಾಯಕ ಜಿ.ಎಮ್.ಹೆಗಡೆ ಜಿ.ಎಸ್.ಆಮೂರ ಜಿ.ಎಸ್.ಗಾಯಿ ಜಿ.ಎಸ್.ಸದಾಶಿವ ಜಿ.ಕೃಷ್ಣರಾವ್ ಜಿ.ಡಿ.ಜೋಶಿ ಜಿ.ನಾರಾಯಣ ಜಿ.ಬಿ.ಜೋಶಿ(ಜಡಭರತ) ಜಿ.ವಿ.ಕುಲಕರ್ಣಿ ಜಿಂದೆ ನಂಜುಂಡಸ್ವಾಮಿ ಜ್ಯೋತ್ಸ್ನಾ ಕಾಮತ ಟಿ ಪಿ ಕೈಲಾಸಮ್ ಟಿ.ಎನ್.ನಾಗರತ್ನ ಟಿ.ಎನ್.ಮಹಾದೇವಯ್ಯ ಟಿ.ಎಸ್.ರಾಮಚಂದ್ರರಾವ್ ಟಿ.ಎಸ್.ವೆಂಕಣ್ಣಯ್ಯ ಟಿ.ಕೆ.ರಾಮರಾವ್ ಟಿ.ಗಿರಿಜಾ ಟಿ.ಜಿ.ರಾಘವ ಟಿ.ಪಿ.ಅಶೋಕ ಟಿ.ಶಾಂತಿ ಟಿ.ಸಿ.ಪೂರ್ಣಿಮಾ ಟಿ.ಸುನಂದಮ್ಮ ಡಿ.ಎನ್.ಶ್ರೀನಾಥ್ ಡಿ.ಎಲ್.ನರಸಿಂಹಾಚಾರ್ ಡಿ.ಎಸ್.ಕರ್ಕಿ ಡಿ.ಎಸ್.ನಾಗಭೂಷಣ ಡಿ.ಜೆ.ಮಂಜುನಾಥ ಡಿ.ಜಿ.ಜೋಶಿ ಡಿ.ಬಿ.ಢಂಗ ಡಿ.ಬಿ.ರಜಿಯಾ ಡಿ.ವಿ.ಗುಂಡಪ್ಪ ಡುಂಡಿರಾಜ್ ತ.ಸು.ಶಾಮರಾವ್ ತ.ಪು.ವೆಂಕಟರಾಮ್ ತನುಜಾ ತರಾಸು ತಾರಾ ಸತ್ಯನಾರಾಯಣ ತಾಳ್ತಜೆ ವಸಂತಕುಮಾರ ತಿರುಕ ತಿರುಮಲೆ ತಾತಾಚಾರ್ಯ ಶರ್ಮ ತೀ ನಂ ಶ್ರೀ ತುರುವೇಕೆರೆ ಪ್ರಸಾದ್ ತುಳಸಿ ವೇಣುಗೋಪಾಲ್ ತೇಜಸ್ವಿ ಕಟ್ಟೀಮನಿ ತ್ರಿವೇಣಿ ದ ರಾ ಬೇಂದ್ರೆ ದ.ಬಾ.ಕುಲಕರ್ಣಿ ದಮಯಂತಿ ನರೇಗಲ್ ದಾಶರಥಿ ದೀಕ್ಷಿತ ದ್ಯಾವನೂರು ಮಂಜುನಾಥ್ ದಿನಕರ ದೇಸಾಯಿ ದೀಪಾ ದು.ನಿಂ.ಬೆಳಗಲಿ ದೇ.ಜವರೆಗೌಡ ದೇವಕಿ ಮೂರ್ತಿ ದೇವನೂರು ಮಹಾದೇವ ದೇವುಡು ನರಸಿಂಹ ಶಾಸ್ತ್ರೀ ದೇವೇಂದ್ರಕುಮಾರ ಹಕಾರಿ ದೇಶಹಳ್ಳಿ ಜಿ.ನಾರಾಯಣ ದೊಡ್ಡೇರಿ ವೆಂಕಟಗಿರಿ ರಾವ್ ಧಾರಿಣಿ ಧೋಂಡೊ ನರಸಿಂಹ ಮುಳಬಾಗಲ ನಂಜನಗೂಡು ತಿರುಮಲಾಂಬ ನಜೀರ ಚಂದಾವರ ನರಹಳ್ಳಿ ಬಾಲಸುಬ್ರಹ್ಮಣ್ಯ ನರೇಂದ್ರ ಶಶಿಧರ ನವಗಿರಿನಂದ ನವರತ್ನರಾಂ ನಾ. ಕಸ್ತೂರಿ ನಾ.ಡಿಸೋಜಾ ನಾ.ಮೊಗಸಾಲೆ ನಾ.ಶ್ರೀ.ರಾಜಪುರೋಹಿತ ನಾ.ಸು.ಭರತನಹಳ್ಳಿ ನಾಗವೇಣಿ ಎಚ್ ನಾಗೇಶ ಹೆಗಡೆ ನಾಡಿಗ ಕೃಷ್ಣಮೂರ್ತಿ ನಾಡಿಗೇರ ಕೃಷ್ಣರಾವ್ ನಿರಂಜನ ನಿರುಪಮಾ ನೀರಗುಂದ ಕೇಶವಮೂರ್ತಿರಾವ್ ನೀಲಾಂಬರಿ ನೀಳಾದೇವಿ ನೇಮಿಚಂದ್ರ (ಲೇಖಕಿ) ಪಂಚಾಕ್ಷರಿ ಹಿರೇಮಠ ಪಂಜೆ ಮಂಗೇಶರಾಯರು ಪಂಡರಿನಾಥಾಚಾರ್ಯ ಗಲಗಲಿ ಪುಂಡಲೀಕ ಶೇಠ ಪಡುಕೋಣೆ ರಮಾನಂದ ಪದ್ಮಜಾ ಉಮರ್ಜಿ ಪದ್ಮಾ ಶೆಣೈ ಪರ್ವತವಾಣಿ ಪಳಕಳ ಸೀತಾರಾಮ ಭಟ್ಟ ಪಾ.ವೆಂ.ಆಚಾರ್ಯ(ಲಾಂಗೂಲಾಚಾರ್ಯ) ಪಾಟೀಲ ಪುಟ್ಟಪ್ಪ ಪಾರ್ವತಿ ಜಿ.ಐತಾಳ ಪಿ ಲಂಕೇಶ್ ಪಿ.ಆರ್.ರಾಮಯ್ಯ ಪಿ.ಎಸ್.ರಾಮಾನುಜಂ ಪಿ.ಬಿ.ಕಲ್ಲಾಪುರ ಪಿ.ಬಿ.ದೇಸಾಯಿ-ಸಂಶೋಧಕರು ಪಿ.ವಿ.ನಾರಾಯಣ ಪು.ತಿ.ನರಸಿಂಹಾಚಾರ್ ಪುಲಿಕೇಶಿ ಪೂರ್ಣಚಂದ್ರ ತೇಜಸ್ವಿ ಪೂರ್ಣಿಮಾ ಗುಡಿಬಂಡೆ ಪ್ರಕಾಶ ಕಂಬತ್ತಳ್ಳಿ ಪ್ರತಿಭಾ ನಂದಕುಮಾರ್ ಪ್ರಭಾ ಪ್ರಭುಶಂಕರ ಪ್ರಮೀಳಾ ದೇಶಪಾಂಡೆ ಪ್ರಹ್ಲಾದ ಅಗಸನಕಟ್ಟೆ ಪ್ರಾಣೇಶ ಗುಡಿ ಪ್ರೇಮಾ ತಾಶೀಲ್ದಾರ್ ಪ್ರೇಮಾ ಭಟ್ ಫ.ಗು.ಹಳಕಟ್ಟಿ ಫಕೀರ ಮಹಮದ್ ಕಟ್ಪಾಡಿ ರೆವರೆಂಡ ಫ್ರೆಡ್ರಿಕ್ ಝೀಗ್ಲರ ಬಂಜಗೆರೆ ಜಯಪ್ರಕಾಶ ಬರಗೂರು ರಾಮಚಂದ್ರಪ್ಪ ಬಸವರಾಜ ಕಟ್ಟೀಮನಿ ಬಸವರಾಜ ಡೋಣೂರ ಬಸವರಾಜ ನಾಯ್ಕರ ಬಸವರಾಜ ಪುರಾಣಿಕ ಬಸವರಾಜ ಸಬರದ ಬಸವರಾಜ ಸಾದರ ಬಾಗಲೋಡಿ ದೇವರಾಯ ಬಾನು ಮುಷ್ತಾಕ್ ಬಾನಂದೂರು ಕೆಂಪಯ್ಯ ಬಾಳಾಸಾಹೇಬ ಲೋಕಾಪುರ ಬಿ ಎಂ ಶ್ರೀ ಬಿ. ಪುಟ್ಟಸ್ವಾಮಯ್ಯ ಬಿ.ಆರ್.ಲಕ್ಷ್ಮಣರಾವ್ ಬಿ.ಎ.ಸನದಿ ಬಿ.ಎ.ಸಾಲೆತೊರೆ ಬಿ.ಎಚ್.ಶ್ರೀಧರ ಬಿ.ಎಚ್.ಸಂಜೀವಮೂರ್ತಿ ಬಿ.ಎಮ್.ರಶೀದ ಬಿ.ಎನ್.ಸುಮಿತ್ರಾಬಾಯಿ ಬಿ.ಎಲ್.ವೇಣು ಬಿ.ಎಸ್.ಕೇಶವರಾವ್ ಬಿ.ಎಸ್.ವೆಂಕಟಲಕ್ಷ್ಮಿ ಬಿ.ಕೆ.ಸುಂದರರಾಜ್ ಬಿ.ಚಿನ್ನಸ್ವಾಮಿ ಬಿ.ಜಿ.ಎಲ್.ಸ್ವಾಮಿ ಬಿ.ಜಿ.ಸತ್ಯಮೂರ್ತಿ ಬಿ.ಟಿ.ಲಲಿತಾ ನಾಯಕ್ ಬಿ.ನಾಗೇಂದ್ರ ಬಿ.ಪಿ.ಕಾಳೆ ಬಿ.ಬಿ.ಬಿರಾದಾರ ಬಿ.ವಿ.ಅನಂತರಾಮ್ ಬಿ.ವಿ.ವೈಕುಂಠರಾಜು ಬಿ.ವೆಂಕಟಾಚಾರ್ಯ ಬಿ.ಶಿವಮೂರ್ತಿಶಾಸ್ತ್ರಿ ಬಿ.ಸಿ.ರಾಮಚಂದ್ರ ಶರ್ಮ ಬಿಂಡಿಗನವಿಲೆ ಭಗವಾನ್ ಬೀchi ಬುದ್ದಣ್ಣ ಹಿಂಗಮಿರೆ ಬೆನಗಲ್ ರಾಮರಾವ್ ಬೆಸಗರಹಳ್ಳಿ ರಾಮಣ್ಣ ಬೆಳಗೆರೆ ಕೃಷ್ಣಶಾಸ್ತ್ರಿ ಬೆಳಗೆರೆ ಜಾನಕಮ್ಮ ಬೆಳಗೆರೆ ಪಾರ್ವತಮ್ಮ ಬೆಳ್ಳಾವೆ ವೆಂಕಟನಾರಣಪ್ಪ ಬೇಲೂರು ರಾಮಮೂರ್ತಿ ಬೊಳುವಾರು ಮಹಮದ್ ಕುಂಞ್ ಭಾಗೀರಥಿ ಹೆಗಡೆ ಭಾರತೀ ಭಾರತೀಸುತ ಭಾಲಚಂದ್ರ ಘಾಣೇಕರ ಭೀಮಾಜಿ ಜೀವಾಜಿ ಹುಲಕವಿ ಭುವನೇಶ್ವರಿ ಹೆಗಡೆ ಮಂಜೇಶ್ವರ ಗೋವಿಂದ ಪೈ ಮಂಡಿಹಳ್ಳಿ ಶ್ರೀಧರಮೂರ್ತಿ ಮಂದಾಕಿನಿ ಪುರೋಹಿತ ಮ.ನ.ಜವರಯ್ಯ ಮಧು ವೆಂಕರೆಡ್ಡಿ ಮಧುರಚೆನ್ನ ಮನು ಮನು ಬಳಗಾರ ಮನೋಹರ ಭಾಲಚಂದ್ರ ಘಾಣೇಕರ ಮನೋಹರ ಮಾಳಗಾವಕರ ಮಮತಾ ಜಿ.ಸಾಗರ ಮಲ್ಲಿಕಾ ಮಲ್ಲಿಕಾ ಘಂಟಿ ಮಲ್ಲಿಕಾರ್ಜುನ ಸಿಂದಗಿ ಮಲ್ಲೇಪುರಂ ಜಿ.ವೆಂಕಟೇಶ ಮಹಮ್ಮದ ಅಲಿ ಗೂಡುಭಾಯಿ ಮಾ.ನ.ಚೌಡಪ್ಪ ಮಾ.ಭೀ.ಶೇಷಗಿರಿರಾವ್ ಮಾತೆ ಮಹಾದೇವಿ ಮಾಧವ ಐತಾಳ ಮಾಧವಿ ಭಂಡಾರಿ ಮಾಲತಿ ಪಟ್ಟಣಶೆಟ್ಟಿ ಮಾಲತಿ ರಾವ್ ಮಾವಿನಕೆರೆ ರಂಗನಾಥನ್ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಿತ್ರಾ ವೆಂಕಟ್ರಾಜ್ ಮಿರ್ಜಿ ಅಣ್ಣಾರಾಯರು ಮೀರಾ ಚಕ್ರವರ್ತಿ ಮುದವೀಡು ಕೃಷ್ಣರಾಯರು ಮುದೇನೂರು ಸಂಗಣ್ಣ ಮುನಿ ವೆಂಕಟಪ್ಪ ಮುಮ್ತಾಜ ಬೇಗಮ್ ಮುಮ್ತಾಜ್ ಮುಳಿಯ ತಿಮ್ಮಪ್ಪಯ್ಯ ಮುಳ್ಳೂರ ನಾಗರಾಜ ಮೇವುಂಡಿ ಮಲ್ಲಾರಿ ಮೈ.ಸು.ಶೇಷಗಿರಿರಾವ್ ಮೊಗಳ್ಳಿ ಗಣೇಶ ಮೊಹರೆ ಹನುಮಂತರಾಯರು ಯಶವಂತ ಚಿತ್ತಾಲ ಯು ಆರ್ ಅನಂತಮೂರ್ತಿ ರಂ.ಶಾ. ರಂ.ಶ್ರೀ.ಮುಗಳಿ ರಂಗನಾಥ ದಿವಾಕರ ರಂಜಾನ ದರ್ಗಾ ರಜಿಯಾ ಬಳಬಟ್ಟೆ ರಘುನಾಥ ಭಟ್ಟ ರಘುಸುತ ರತ್ನಮ್ಮ ಸುಂದರರಾವ್ ರವೀಂದ್ರ ಮಾವಖಂಡ ರಮಾನಂದ ಅಮೀನ ರಮೇಶ ರಸಿಕ ಪುತ್ತಿಗೆ ರಹಮತ್ ತರೀಕೆರೆ ರಾ.ಯ.ಧಾರವಾಡಕರ ರಾ.ಹ.ದೇಶಪಾಂಡೆ ರಾಗೌ ರಾಘವೇಂದ್ರ ಖಾಸನೀಸ ರಾಘವೇಂದ್ರ ಪಾಟೀಲ ರಾಜಲಕ್ಷ್ಮಿ ಎನ್.ರಾವ ರಾಜಶೇಖರ ನೀರಮಾನ್ವಿ ರಾಜಶೇಖರ ಭೂಸನೂರುಮಠ ರಾಜಾ ರಾವ್ ರಾಜೀವ ದೇಶಪಾಂಡೆ ರಾಮಚಂದ್ರ ಕುಲಕರ್ಣಿ ರಾಮಚಂದ್ರ ಕೊಟ್ಟಲಗಿ ರಾಮಚಂದ್ರ ಪಾಟೀಲ ರಾಮಚಂದ್ರ ಭಾವೆ ರಾಮಮೂರ್ತಿ ತೆನೆಮನೆ ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ) ರೇಖಾ ಕಾಖಂಡಕಿ ರೊದ್ದ ಶ್ರೀನಿವಾಸರಾವ್ ಲತಾ ಗುತ್ತಿ ಲತಾ ರಾಜಶೇಖರ್ ಬಿ.ಟಿ.ಲಲಿತಾ ನಾಯಕ ಲಲಿತಾಂಬ ವೃಷಭೇಂದ್ರಸ್ವಾಮಿ ಲಲಿತಾಂಬಾ ಚಂದ್ರಶೇಖರ್ ಲೀಲಾ ಕಲಕೋಟಿ ಲೀಲಾ ಶೇಖರ್ ಲೀಲಾದೇವಿ ಆರ್.ಪ್ರಸಾದ ಲೋಕನಾಥ ದೀಕ್ಷಿತ್ ಲೋಹಿತ ನಾಯ್ಕರ ವರದರಾಜ ಹುಯಿಲಗೋಳ ವರದಾ ಶ್ರೀನಿವಾಸ ವಸಂತ ಕವಲಿ ವಸಂತ ಅಗಸಿಮನಿ ವಸಂತ ಕುಷ್ಟಗಿ ವಸಂತಕುಮಾರ ಪೆರ್ಲ ವಸಂತೀಚಂದ್ರ ವಸುಧೇಂದ್ರ ವಾಣಿ(ಬಿ.ಎನ್.ಸುಬ್ಬಮ್ಮ) ವಾಮನ ಬೇಂದ್ರೆ ವಿ.ಆರ್.ಉಮರ್ಜಿ ವಿ.ಎ.ಜೋಶಿ ವಿ ಕೆ ಗೋಕಾಕ್ ವಿ.ಎಮ್.ಇನಾಮದಾರ ವಿ.ಜಿ.ದೀಕ್ಷಿತ ವಿ.ಜಿ.ಭಟ್ಟ ವಿ.ಬಾಲಕೃಷ್ಣ ಶಿರ್ವ ವಿ.ಸಿ.ಐರಸಂಗ ವಿ.ಸೀತಾರಾಮಯ್ಯ ವಿಜಯ ಸಾಸನೂರ ವಿಜಯಶ್ರೀ ವಿಜಯಶ್ರೀ ಸಬರದ ವಿಜಯಾ ವಿಜಯಾ ದಬ್ಬೆ ವಿಜಯಾ ಸುಧಾಕರ ವಿಜಯಾ ಸುಬ್ಬರಾಜ್ ವಿದ್ಯಾ ಕುಂದರಗಿ ವಿದ್ಯುಲ್ಲತಾ ವಿನಯ ನಾಯಕ ವಿಮಲಾ ವಿಮಲಾ ರಾಘವೇಂದ್ರ ವಿವೇಕ ಶಾನಭಾಗ ವಿಶಾಲಾಕ್ಷಿ ದಕ್ಷಿಣಾಮೂರ್ತಿ ವಿಶಾಲಾಕ್ಷಿ ದೇಶಪಾಂಡೆ ವಿಶುಕುಮಾರ್ ವಿಶ್ವೇಶ್ವರ ಭಟ್ ವಿಷ್ಣು ನಾಯ್ಕ ವೀಣಾ ಶಾಂತೇಶ್ವರ ವೀರಪ್ಪ ಮೊಯ್ಲಿ ವೀರೇಂದ್ರ ಸಿಂಪಿ ವೆಂಕಟರಾಜ ಪಾನಸೆ ವೇಣುಗೋಪಾಲ ಸೊರಬ ವೇದವ್ಯಾಸ ಜೋಶಿ ವೈ.ಎನ್.ಎಸ್.ಮೂರ್ತಿ ವೈ.ಎನ್.ಗುಂಡೂರಾವ್ ವೈ.ಕೆ.ಸಂಧ್ಯಾಶರ್ಮ ವೈ.ಚಂದ್ರಶೇಖರ ಶಾಸ್ತ್ರಿ ವೈ.ನಾಗೇಶ ಶಾಸ್ತ್ರಿ ವೈ.ಸಿ.ಭಾನುಮತಿ ವೈಎನ್ ಕೆ ವೈದೇಹಿ ವ್ಯಾಸ ದೇಶಪಾಂಡೆ ವ್ಯಾಸರಾಯ ಬಲ್ಲಾಳ ವ್ಯಾಸರಾವ ನಿಂಜೂರ ಶಂ.ಗು.ಬಿರಾದಾರ ಶಂ.ಬಾ.ಜೋಶಿ ಶಂಕರ ಕಟಗಿ ಶಂಕರ ಮೊಕಾಶಿ ಪುಣೇಕರ ಶಂಸ ಐತಾಳ ಶಶಿ ದೇಶಪಾಂಡೆ ಶಶಿಕಲಾ ವಸ್ತ್ರದ ಶಶಿಕಲಾ ವೀರಯ್ಯಸ್ವಾಮಿ ಶಾಂತಕವಿ ಶಾಂತರಸ ಹೆಂಬೆರಳು ಶಾಂತಾ ಇಮ್ರಾಪುರ ಶಾಂತಾದೇವಿ ಕಣವಿ ಶಾಂತಾದೇವಿ ಮಾಳವಾಡ ಶಾಂತಿನಾಥ ದೇಸಾಯಿ ಶಾರದಾ ರಾಜಶೇಖರ್ ಶಾರದಾ ಶಾಮಣ್ಣ ಶಾರದೆ ಶಾಲಿನಿ ರಘುನಾಥ ಶಿವಪ್ರಕಾಶ ಶಿವರಾಮ ಕಾರಂತ ಶಿವಶಂಕರಪ್ಪ ನಾಯ್ಕರ ಶುಭದಾ ಅಮಿನಭಾವಿ ಶೇಷ ನಾರಾಯಣ ಶೇಷಾಚಲ ಶೈಲಜಾ ಉಡಚಣ ಶೈಲಜಾ ಎಂ.ಭಟ್ ಶೈಲಾ ಛಬ್ಬಿ ಶೋಭಾ ಮುತಾಲೀಕ ಪಾಟೀಲ ಶ್ಯಾಮಲಾದೇವಿ ಬೆಳಗಾವಿ ಶ್ಯಾಮಸುಂದರ ಬಿದರಕುಂದಿ ಶ್ರೀಕೃಷ್ಣ ಆಲನಹಳ್ಳಿ ಶ್ರೀನಾಥ ರಾಯಸಂ ಶ್ರೀನಿವಾಸ ಉಡುಪ ಶ್ರೀನಿವಾಸ ತೋಫಖಾನೆ ಶ್ರೀನಿವಾಸ ವೈದ್ಯ ಶ್ರೀನಿವಾಸ ಹಾವನೂರ ಶ್ರೀನಿವಾಸರಾವ್ ಕೊರಟಿ ಶ್ರೀರಂಗ ಸ.ಉಷಾ ಸಂಧ್ಯಾದೇವಿ ಸಂ.ಶಿ.ಭೂಸನೂರುಮಠ ಸಂಸ ಸತೀಶ ಚಪ್ಪರಿಕೆ ಸತ್ಯಕಾಮ ಸತ್ಯಾನಂದ ಪಾತ್ರೋಟ ಸಬಿಹಾ ಭೂಮಿಗೌಡ ಸಮೇತನಹಳ್ಳಿ ರಾಮರಾವ್ ಸರಜೂ ಕಾಟ್ಕರ್ ಸರಸ್ವತಿದೇವಿ ಗೌಡರ್ ಸರಸ್ವತಿಬಾಯಿ ರಾಜವಾಡೆ ಸರಿತಾ ಕುಸುಮಾಕರ ದೇಸಾಯಿ ಸರಿತಾ ಜ್ಞಾನಾನಂದ ಸರೋಜಾ ನಾರಾಯಣರಾವ ಸರೋಜಿನಿ ಚವಲಾರ ಸರೋಜಿನಿ ಮಹಿಷಿ ಸರೋಜಿನಿ ಶಿಂತ್ರಿ ಸವಿತಾ ಧಾರೇಶ್ವರ ಸವಿತಾ ನಾಗಭೂಷಣ ಸಾಯಿಸುತೆ ಸಾರಾ ಅಬೂಬಕ್ಕರ ಸಾಲಿ ರಾಮಚಂದ್ರರಾಯರು ಸಾವಿತ್ರಿದೇವಿ ನಾಯಡು ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ ಸಿ.ಎಂ.ಚನ್ನಬಸಪ್ಪ ಸಿ.ಎನ್.ಜಯಲಕ್ಷ್ಮಿ ದೇವಿ ಸಿ.ಎನ್.ಮುಕ್ತಾ ಸಿ.ಕೆ.ವೆಂಕಟರಾಮಯ್ಯ ಸಿ.ಪಿ.ಕೆ ಸಿ.ವಿ.ಶಿವಶಂಕರ್ ಸಿಂಪಿ ಲಿಂಗಣ್ಣ ಸಿದ್ದಯ್ಯ ಪುರಾಣಿಕ ಸಿದ್ದವ್ವನಹಳ್ಳಿ ಕೃಷ್ಣಶರ್ಮ ಸಿದ್ಧಲಿಂಗ ದೇಸಾಯಿ ಸಿದ್ಧಲಿಂಗ ಪಟ್ಟಣಶೆಟ್ಟಿ ಸಿದ್ಧಲಿಂಗಯ್ಯ ಸಿದ್ಧನಗೌಡ ಪಾಟೀಲ ಸಿದ್ಧಾಂತಿ ಶಿವಶಂಕರ ಶಾಸ್ತ್ರಿ ಸಿಸು ಸಂಗಮೇಶ ಸು.ರಂ.ಎಕ್ಕುಂಡಿ ಸುಂದರ ನಾಡಕರ್ಣಿ ಸುಕನ್ಯಾ ಮಾರುತಿ ಸುಜನಾ (ಎಸ್.ನಾರಾಯಣ ಶೆಟ್ಟಿ) ಸುದರ್ಶನ ದೇಸಾಯಿ ಸುಧಾ ಮೂರ್ತಿ ಸುಧಾ ಸರನೋಬತ್ ಸುಧಾಕರ ಸುನಂದಾ ಪ್ರಕಾಶ,ಕಡಮೆ ಸುನಂದಾ ಬೆಳಗಾಂವಕರ ಸುಬ್ರಾಯ ಚೊಕ್ಕಾಡಿ ಸುಮತೀಂದ್ರ ನಾಡಿಗ ಸುಮಿತ್ರಾ ಹಲವಾಯಿ ಸುರೇಂದ್ರ ದಾನಿ ಸುಲೋಚನಾದೇವಿ ಆರಾಧ್ಯ ಸುಶೀಲಾ ಕೊಪ್ಪರ ಸುಶೀಲಾ ಸೊಂಡೂರು ಸೂರಿ ವೆಂಕಟರಮಣ ಶಾಸ್ತ್ರಿ ಸೂರಿ ಹಾರ್ದಳ್ಳಿ ಸೂರ್ಯನಾಥ ಕಾಮತ ಸೂರ್ಯನಾರಾಯಣ ಚಡಗ ಸೇಡಿಯಾಪು ಕೃಷ್ಣಭಟ್ಟ ಸೇವ ನಮಿರಾಜ ಮಲ್ಲ ಸೋಮಶೇಖರ ಇಮ್ರಾಪೂರ ಹ.ರಾ.ಪುರೋಹಿತ ಹ.ವೆಂ.ನಾಗರಾಜರಾವ್ ಹ.ಶಿ.ಭೈರನಟ್ಟಿ ಹಂ.ಪ.ನಾಗರಾಜಯ್ಯ ಹಂಝ ಮಲಾರ್ ಹನುಮಾಕ್ಷಿ ಗೋಗಿ ಹಮೀದ ಮಂಜೇಶ್ವರ ಹರಿಲಾಲ ಪವಾರ ಹರಿಹರಪ್ರಿಯ ಹರ್ಡೇಕರ ಮಂಜಪ್ಪ ಹಾ.ಮಾ.ನಾಯಕ ಹಾ.ರಾ. ಹಾಲ್ದೋಡ್ಡೇರಿ ಸುಧೀಂದ್ರ ಹುಯಿಲಗೋಳ ನಾರಾಯಣರಾಯ ಹುರಳಿ ಭೀಮರಾವ ಹೂಲಿ ಶೇಖರ ಹೆಚ್.ಆರ್.ನಾಗೇಶರಾವ್ ಹೇಮಲತಾ ಪರಶುರಾಂ ಹೇಮಾ ಪಟ್ಟಣಶೆಟ್ಟಿ ಹೊ.ರಾ.ಸತ್ಯನಾರಾಯಣರಾವ್ ಹೊಯಿಸಳ ಹೊಸಕೋಟೆ ಕೃಷ್ಣಶಾಸ್ತ್ರಿ ಹೊಸೂರ ಮುನಿಶಾಮಪ್ಪ ಬಿ.ತಿಪ್ಪೇರುದ್ರಪ್ಪ ಸಾಹಿತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ ಮಹಾರಾಜರು ಅಮೋಘವರ್ಷ ನೃಪತುಂಗ (ರಾಷ್ಟ್ರಕೂಟ) ಇಮ್ಮಡಿ ಪುಲಿಕೇಶಿ (ಚಾಲುಕ್ಯ) ಕಿತ್ತೂರು ಚೆನ್ನಮ್ಮ ಕೆಳದಿಯ ಚೆನ್ನಮ್ಮ ಕೃಷ್ಣದೇವರಾಯ (ವಿಜಯನಗರ) ಕೆಳದಿಯ ಅರಸರು ಚಿಕ್ಕವೀರ ರಾಜೇಂದ್ರ ಜಯಚಾಮರಾಜ ಒಡೆಯರ್ ಟೀಪು ಸುಲ್ತಾನ್ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರೌಢ ದೇವರಾಯ (ವಿಜಯನಗರ) ಬೆಳವಡಿ ಮಲ್ಲಮ್ಮ ಬಹಮನಿ ಸುಲ್ತಾನರು ಬಾರೀದಶಾಹಿ ಸುಲ್ತಾನರು ಮದಕರಿ ನಾಯಕ ಮಯೂರ ವರ್ಮ (ಕದಂಬ) ರಣಧೀರ ಕಂಠೀರವ ರಾಣಿ ಅಬ್ಬಕ್ಕದೇವಿ ರಾಣಿ ರುದ್ರಮ್ಮ ವಿಷ್ಣುವರ್ಧನ (ಹೊಯ್ಸಳ) ಹೈದರ ಅಲಿ ಗಣಿತ, ವಿಜ್ಞಾನ, ತಂತ್ರಜ್ಞಾನ ಎಸ್.ಜಿ.ಬಾಳೆಕುಂದ್ರಿ ಪದ್ಮವಿಭೂಷಣ ಡಾ.ರಾಜಾ ರಾಮಣ್ಣ ಪದ್ಮವಿಭೂಷಣ ಪ್ರೊಫೆಸರ್ ಯು.ಆರ್.ರಾವ್ ಬಿ.ಜಿ.ಎಲ್.ಸ್ವಾಮಿ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪದ್ಮವಿಭೂಷಣ ರೊದ್ದಂ ನರಸಿಂಹ ಶಕುಂತಲಾ ದೇವಿ - ಗಣಿತಜ್ಞೆ ಭಾರತರತ್ನ ಸಿ ವಿ ರಾಮನ್- ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಭಾರತರತ್ನ ಪ್ರೋಫೆಸರ್ ಸಿ.ಎನ್.ಆರ್.ರಾವ್ ಪದ್ಮಭೂಷಣ ಡಾ. ಎಚ್. ನರಸಿಂಹಯ್ಯ ಎಚ್. ಆರ್. ರಾಮಕೃಷ್ಣ ರಾವ್ ಜಿ.ಪಿ. ಗುರುಸ್ವಾಮಿ ಡಾ.ಎಚ್.ಆರ್.ಚಂದ್ರಶೇಖರ್ ಹ್ಯೂಮನ್ ಕಂಪ್ಯೂಟರ್ ಸಿದ್ದು ಲವಟೆ -ಆಧುನಿಕ ಆರ್ಯಭಟ ಡಾ. ಪವನಜ, ಡಾ. ಮೀರಾಚಂದ್ರಶೇಖರ್ ಪ್ರಾಚ್ಯ ಸಂಶೋಧಕರು ಆ.ನೇ.ಉಪಾಧ್ಯೆ ಆರ್.ನರಸಿಂಹಾಚಾರ್ ಎಂ.ಎಂ.ಕಲಬುರ್ಗಿ ಎಂ.ಬಿ.ನೇಗಿನಹಾಳ ಎಸ್.ಶೆಟ್ಟರ್ ಕೆ.ಜಿ.ಕುಂದಣಗಾರ ಗುಂಡಾ ಜೋಯಿಸ ಜಿ.ಎಸ್.ಗಾಯಿ ನಾ.ಶ್ರೀ.ರಾಜಪುರೋಹಿತ ಪಿ.ಬಿ.ದೇಸಾಯಿ ಫ.ಗು.ಹಳಕಟ್ಟಿ ಬಾ.ರಾ.ಗೋಪಾಲ ಬಿ.ಎ.ಸಾಲೆತೊರೆ ಬಿ.ಎಲ್.ರೈಸ್ ಸೂರ್ಯನಾಥ ಕಾಮತ ಹನುಮಾಕ್ಷಿ ಗೋಗಿ ಬಿ.ರಾಜಶೇಖರಪ್ಪ ಸಿ.ಹಯವದನ ರಾವ್ ದೃಶ್ಯಕಲೆ/ಕಲಾಸಾಹಿತ್ಯ ಕೆ.ವೆ೦ಕಟಪ್ಪ ಆರ್.ಎ೦.ಹಡಪದ್ ವಿ.ಜಿ.ಅ೦ದಾನಿ ಎನ್.ಪುಷ್ಪಮಾಲ ಸುರೇಖ ಕೆ.ಟಿ.ಶಿವಪ್ರಸಾದ್ ಅನಿಲ್ ಕುಮಾರ್ ಎಚ್.ಎ ಚಿ.ಸು. ಕ್ರಿಸ್ನ ಸೆಟ್ಟಿ ರೇಣುಕಾ ಕೆಸರಮಡು ರಾಜಕೀಯ ಅಣ್ಣಾರಾವ ಗಣಮುಖಿ ಎಸ್.ಆರ್.ಕಂಠಿ ಎಸ್.ಎಂ.ಕೃಷ್ಣ ಎಸ್.ನಿಜಲಿಂಗಪ್ಪ ಕೆ.ಎಸ್.ನಾಗರತ್ನಮ್ಮ ಕೆಂಗಲ್ ಹನುಮಂತಯ್ಯ ಗುಂಡೂರಾವ್ ಜೆ.ಹೆಚ್.ಪಟೇಲ್ ಜಾರ್ಜ್ ಫರ್ನಾಂಡಿಸ್ ದೇವರಾಜ ಅರಸ್ ದೊಡ್ಡಮೇಟಿ ಅಂದಾನೆಪ್ಪ ಧರಂಸಿಂಗ್ ನಜೀರ ಸಾಬ್ ಬಿ ಡಿ ಜತ್ತಿ ಬಂಗಾರಪ್ಪ ಬೊಮ್ಮಾಯಿ ಯಶೋಧರಾ ದಾಸಪ್ಪ ರಾಂಪುರೆ ರಾಮಕೃಷ್ಣ ಹೆಗಡೆ ಶಾಂತವೇರಿ ಗೋಪಾಲಗೌಡ ಹೆಚ್ ಡಿ ದೇವೇಗೌಡ ಹರ್ಡೇಕರ ಮಂಜಪ್ಪ ಹಳ್ಳಿಕೇರಿ ಗುದ್ಲೆಪ್ಪ ಕೆ. ಹೆಚ್. ಪಾಟೀಲ ಹೆಚ್.ಕೆ.ಪಾಟೀಲ ಎಂ. ವಿ. ಚಂದ್ರಶೇಖರ ಮೂರ್ತಿ ಧರ್ಮ ಮತ್ತು ತತ್ವಶಾಸ್ತ್ರ ಅಕ್ಕಮಹಾದೇವಿ ಅಲ್ಲಮಪ್ರಭು ಎಡೆಯೂರು ಸಿದ್ಧಲಿಂಗೇಶ್ವರ ಕನಕದಾಸ ಖ್ವಾಜಾ ಬಂದೇನವಾಜ ಗದುಗಿನ ನಾರಣಪ್ಪ ಚೆನ್ನಬಸವಣ್ಣ ಪುರಂದರದಾಸ ಬಸವೇಶ್ವರ ಮಧ್ವಾಚಾರ್ಯ ಶ್ರೀ ರಾಘವೇಂದ್ರ ಸ್ವಾಮಿಗಳು ರಾಮಾನುಜಾಚಾರ್ಯ ವಿದ್ಯಾರಣ್ಯ ವ್ಯಾಸರಾಯರು ಶರಣ ಬಸವೇಶ್ವರ ಶಿಶುನಾಳ ಶರೀಫ ಸಿದ್ಧರಾಮ ಸಿದ್ಧಾರೂಢರು ಸಾಯಣಾಚಾರ್ಯ ಹೆಳವನಕಟ್ಟೆ ಗಿರಿಯಮ್ಮ ಪಂಡಿತ ತಾರಾನಾಥ ನಿಜಗುಣ ಶಿವಯೋಗಿ ಟಿ. ವಿ. ವೆಂಕಟಾಚಲ ಶಾಸ್ತ್ರೀ ಕ್ರೀಡೆ ಕ್ರಿಕೆಟ್ ಅನಿಲ್ ಕುಂಬ್ಳೆ ಎರಾಪಳ್ಳಿ ಪ್ರಸನ್ನ ಚಿನ್ನಸ್ವಾಮಿ ಜಿ ಆರ್ ವಿಶ್ವನಾಥ್ ಜಯಪ್ರಕಾಶ ಜಾವಗಲ್ ಶ್ರೀನಾಥ್ ಬಿ. ಎಸ್. ಚಂದ್ರಶೇಖರ್ ಬ್ರಿಜೇಶ್ ಪಟೇಲ್ ಬುಧಿ ಕುಂದೆರನ್ ರಘುರಾಮ ಭಟ್ಟ ರಾಬಿನ್ ಉತ್ತಪ್ಪ ರಾಹುಲ್ ದ್ರಾವಿಡ್ ರೋಜರ್ ಬಿನ್ನಿ ವೆಂಕಟೇಶ್ ಪ್ರಸಾದ್ ವಿಜಯ ಕುಮಾರ್ ವಿಜಯ ಕೃಷ್ಣ ಶಾಂತಾ ರಂಗಸ್ವಾಮಿ ಸದಾನಂದ ವಿಶ್ವನಾಥ ಸೊವ್ರವ್ ಗಂಗೂಲಿ ಸುನೀಲ್ ಜೋಷಿ ಸೈಯದ್ ಕಿರ್ಮಾನಿ ಇತರ ಕ್ರೀಡೆಗಳು ಅಪರ್ಣಾ ಪೋಪಟ್ - ಬ್ಯಾಡ್ಮಿಂಟನ್ ಅರ್ಚನಾ ವಿಶ್ವನಾಥ - ಟೇಬಲ್ ಟೆನ್ನಿಸ್ ಅಶ್ವಿನಿ ನಾಚಪ್ಪ - ಓಟ ಆಶಿಶ್ ಬಲ್ಲಾಳ - ಹಾಕಿ ಉದಯ ಪ್ರಭು - ಓಟ ಚಿಕ್ಕಪಾಪಯ್ಯ - ಓಟ ನಿಶಾ ಮಿಲಟ್ - ಈಜು ಪ್ರಕಾಶ್ ಪಡುಕೋಣೆ, ಬ್ಯಾಡ್ಮಿಂಟನ್ ಮಹೇಶ್ ಭೂಪತಿ - ಟೆನಿಸ್ ರೀತ್ ಅಬ್ರಹಾಂ - ಓಟ ವಂದನಾ ರಾವ್ - ಓಟ ಸತೀಶ ರೈ - ವೇಟ್ ಲಿಫ್ಟಿಂಗ್ ವಾಣಿ - ಕೊಕ್ಕೋ ಸೈನ್ಯ ಜನರಲ್ ತಿಮ್ಮಯ್ಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ - ಭಾರತೀಯ ಭೂಸೈನ್ಯದ ಮುಖ್ಯಸ್ಥರು (೧೯೪೯-೧೯೫೩) ಮಠಾಧಿಪತಿಗಳು ಶ್ರೀ ಶ್ರೀವಿಙ್ಞಾನನಿಧಿ ತೀರ್ಥರು ಹಿರಿಯ ಪೀಠಾಧಿಪತಿಗಳು ಶ್ರೀ ಶ್ರೀಪಾದರಾಜ ಮಠ ಮುಳಬಾಗಿಲು ಶ್ರೀ ಶ್ರೀಕೇಶನ ನಿಧಿ ತೀರ್ಥರು ಕಿರಿಯ ಪೀಠಾಧಿಪತಿಗಳು ಶ್ರೀ ಶ್ರೀಪಾದರಾಜ ಮಠ ಮುಳಬಾಗಿಲು ಡಾ.ಶಿವಮೂರ್ತಿ ಸ್ವಾಮೀಜಿ (ಸಿರಿಗೆರೆ) ಸ್ವಸ್ತಿ ಶ್ರೀ ಚಾರುಕೀತಿ೯ ಭಟ್ಟಾರಕ ಸ್ವಾಮೀಜಿ (ಶ್ರವಣಬೆಳಗೊಳ) ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪಂಡಿತಾರಾಧ್ಯ ಸ್ವಾಮೀಜಿ (ಶ್ರೀ ಮಠ ಸಾಣೇಹಳ್ಳಿ) ಅಥಣಿ ಶಿವಯೋಗಿಗಳು ಚೆನ್ನಬಸವ ಪಟ್ಟದೇವರು (ಭಾಲ್ಕಿ) ಬಾಲಗಂಗಾಧರನಾಥ ಸ್ವಾಮಿಗಳು ಮೃತ್ಯುಂಜಯ ಸ್ವಾಮಿಗಳು (ಧಾರವಾಡ) ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮಿಗಳು (ಸಿದ್ದಗಂಗಾ) ಮಾತೆ ಮಹಾದೇವಿ ಜಚನಿ ಮುರುಘರಾಜೇಂದ್ರ ಶರಣರುಚಿತ್ರದುರ್ಗ ಶ್ರೀ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳು, ಪೇಜಾವರ ಅಧೋಕ್ಷಜ ಮಠ, ಉಡುಪಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು, ಬಿಜಾಪುರ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅವಧೂತ ದತ್ತ ಪೀಠ, ಮೈಸೂರು ]] ಅವರ್ಗೀಕೃತ ಬಾಳಪ್ಪ ಹುಕ್ಕೇರಿ-ಜನಪದ ಗಾಯಕರು ಅನ್ನದಾನಿ - ಚಿತ್ರ ಕಲಾವಿದರು ಅರ್ ಎಂ ಹಡಪದ ಚಿತ್ರ ಕಲಾವಿದರು ಎಂ.ಸಿ.ಮೋದಿ - ನೇತ್ರದಾನಿ ಎಸ್.ಕೆ.ಕರೀಂ ಖಾನ್- ಜಾನಪದ ಕೆ.ಎಂ.ನಂಜಪ್ಪ - ಸಮಾಜ ಸೇವೆ ಕೆ.ಕೆ.ಹೆಬ್ಬಾರ-ಚಿತ್ರಕಾರರು ಕಲ್ಯಾಣಮ್ಮ - ಸಮಾಜ ಸೇವೆ ಮಕ್ಕಳ ಕೂಟ ಕುಸುಮಾ ಸೊರಬ - ಪರಿಸರವಾದಿ ಡಿ.ವಿ.ಹಾಲಭಾವಿ-ಚಿತ್ರಕಾರರು ಡೆಪ್ಯೂಟಿ ಚೆನ್ನಬಸಪ್ಪನವರು ಡಾ.ನಾಗೇಗೌಡ-ಜಾನಪದ ಲೋಕ ಪಂಡಿತ್ - ಚಿತ್ರ ಕಲಾವಿದರು ಮಾಯಾ ರಾವ್-ನೃತ್ಯ ಕಲಾವಿದರು ಯಲ್ಲಪ್ಪ ರೆಡ್ಡಿ - ಪರಿಸರವಾದಿ ರುಮಾಲೆ ಚೆನ್ನಬಸಪ್ಪ- ಚಿತ್ರ ಕಲಾವಿದರು ರೋರಿಚ್ - ಚಿತ್ರ ಕಲಾವಿದರು ವೀರೇಂದ್ರ ಹೆಗ್ಗಡೆ - ಸಮಾಜ ಸೇವೆ ಸಾಲುಮರದ ತಿಮ್ಮಕ್ಕ - ಪರಿಸರವಾದಿ ಸಂಪ್ರದಾಯಗಳಹಾಡಿನ ರಾಧಮ್ಮನವರು-ಸಂಪ್ರದಾಯಗಳ ಹಾಡು ವರ್ಗ:ಕರ್ನಾಟಕ ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ವರ್ಗ:ಭಾರತದ ಪ್ರಸಿದ್ಧ ವ್ಯಕ್ತಿಗಳು ವರ್ಗ:ಪಟ್ಟಿಗಳು
ಮಾಸ್ತಿ ವೆ೦ಕಟೇಶ ಅಯ್ಯ೦ಗಾರ್
https://kn.wikipedia.org/wiki/ಮಾಸ್ತಿ_ವೆ೦ಕಟೇಶ_ಅಯ್ಯ೦ಗಾರ್
REDIRECT ಮಾಸ್ತಿ ವೆಂಕಟೇಶ ಅಯ್ಯಂಗಾರ್
ಯು ಆರ್ ಅನ೦ತಮೂರ್ತಿ
https://kn.wikipedia.org/wiki/ಯು_ಆರ್_ಅನ೦ತಮೂರ್ತಿ
REDIRECT ಯು.ಆರ್.ಅನಂತಮೂರ್ತಿ
ಜಿ ಪಿ ರಾಜರತ್ನಮ್
https://kn.wikipedia.org/wiki/ಜಿ_ಪಿ_ರಾಜರತ್ನಮ್
REDIRECT ಜಿ.ಪಿ.ರಾಜರತ್ನಂ
ಟಿ ಪಿ ಕೈಲಾಸಮ್
https://kn.wikipedia.org/wiki/ಟಿ_ಪಿ_ಕೈಲಾಸಮ್
REDIRECT ಟಿ.ಪಿ.ಕೈಲಾಸಂ
ಬಿ ಎ೦ ಶ್ರೀ
https://kn.wikipedia.org/wiki/ಬಿ_ಎ೦_ಶ್ರೀ
REDIRECT ಬಿ. ಎಂ. ಶ್ರೀಕಂಠಯ್ಯ
ಎಸ್ ಎಲ್ ಭೈರಪ್ಪ
https://kn.wikipedia.org/wiki/ಎಸ್_ಎಲ್_ಭೈರಪ್ಪ
REDIRECT ಎಸ್.ಎಲ್. ಭೈರಪ್ಪ
ಸಿ ವಿ ರಾಮನ್
https://kn.wikipedia.org/wiki/ಸಿ_ವಿ_ರಾಮನ್
REDIRECT ಚಂದ್ರಶೇಖರ ವೆಂಕಟರಾಮನ್
ಎಸ್ ಎಮ್ ಕೃಷ್ಣ
https://kn.wikipedia.org/wiki/ಎಸ್_ಎಮ್_ಕೃಷ್ಣ
REDIRECT ಎಸ್.ಎಂ.ಕೃಷ್ಣ
ಐಶ್ವರ್ಯಾ ರೈ
https://kn.wikipedia.org/wiki/ಐಶ್ವರ್ಯಾ_ರೈ
ಐಶ್ವರ್ಯಾ ರೈ (ಜನನ: ನವೆಂಬರ್ ೧, ೧೯೭೩) ಭಾರತೀಯ ಸಿನೆಮಾ ನಟಿ ಮತ್ತು ಮಾಡೆಲ್. ೧೯೯೪ ರಲ್ಲಿ ಭಾರತ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ ಅದೇ ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದರು. ಜನನ, ಜೀವನ ಐಶ್ವರ್ಯಾ ಹುಟ್ಟಿದ್ದು ಕರ್ನಾಟಕದ ಮಂಗಳೂರಿನಲ್ಲಿ. ತಂದೆ ಕೃಷ್ಣರಾಜ್ ರೈ ಮತ್ತು ತಾಯಿ ಬೃಂದಾ ರೈ. ಮುಂಬಯಿ ನಗರದಲ್ಲಿ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿದ ಐಶ್ವರ್ಯಾ ಒಂಬತ್ತನೆಯ ತರಗತಿಯಲ್ಲಿ ಇದ್ದಾಗಲೆ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿದ ಐಶ್ವರ್ಯಾ ಪ್ರಪಂಚಸುಂದರಿ ಪ್ರಶಸ್ತಿಯನ್ನು ಗೆದ್ದ ಮೇಲೆ ಪ್ರಸಿದ್ಧರಾದರು. ಇದರ ನಂತರ ಅನೇಕ ಚಿತ್ರಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಅವರ ಮೊದಲ ಚಿತ್ರ ಮಣಿರತ್ನಂ-ನಿರ್ದೇಶಿತ ತಮಿಳು ಚಿತ್ರ "ಇರುವರ್" (೧೯೯೭). ಈ ಚಿತ್ರ ಯಶಸ್ವಿಯಾಗಲಿಲ್ಲ. ೨೦೦೦ ದಲ್ಲಿ ಬಿಡುಗಡೆಯಾದ ತಮಿಳು ಚಿತ್ರ "ಕಂಡುಕೊಂಡೇನ್ ಕಂಡುಕೊಂಡೇನ್" ಯಶಸ್ವಿಯಾಯಿತು. ಐಶ್ವರ್ಯಾ ಅವರು ನಟಿಸಿರುವ ಬಹುಪಾಲು ಚಿತ್ರಗಳು ಹಿಂದಿ ಭಾಷೆಯವು- ಕೆಲವು ತಮಿಳು ಮತ್ತು ಒಂದು ಬೆಂಗಾಲಿ ಚಿತ್ರದಲ್ಲಿಯೂ ನಟಿಸಿದ್ದಾರೆ (ರವೀಂದ್ರನಾಥ ಠಾಕೂರರ ಕಾದಂಬರಿಯಾಧಾರಿತ "ಚೋಕೆರ್ ಬಾಲಿ"). ಹಾಲಿವುಡ್ ಮತ್ತು ಇಂಗ್ಲೆಂಡಿನಲ್ಲಿ ನಿರ್ಮಾಪಣೆ ನಡೆದ "ಬ್ರೈಡ್ ಎ೦ಡ್ ಪ್ರೆಜುಡೀಸ್" (೨೦೦೪) ಎ೦ಬ ಇಂಗ್ಲಿಷ್ ಚಿತ್ರದಲ್ಲಿಯೂ ನಟಿಸಿದ್ದಾರೆ. ಅವರ ಅತಿ ಯಶಸ್ವಿ ಚಿತ್ರಗಳಲ್ಲಿ ಕೆಲವೆಂದರೆ "ದೇವದಾಸ್" ಮತ್ತು "ಹಮ್ ದಿಲ್ ದೇ ಚುಕೇ ಸನಮ್". ಐಶ್ವರ್ಯಾ ರೈ ಫ್ರಾನ್ಸ್ ದೇಶದ ಕ್ಯಾನ್ಸ್ ನಲ್ಲಿ ನಡೆಯುವ ವಾರ್ಷಿಕ ಚಲನಚಿತ್ರೋತ್ಸವದ ಸಮಿತಿಯಲ್ಲಿ ಕೆಲಸ ಮಾಡಿರುವ ಏಕೈಕ ಭಾರತೀಯರು. ಐಶ್ವರ್ಯಾ ರೈ ನಟಿಸಿರುವ ಚಿತ್ರಗಳು ಹಿ೦ದಿ ಹಮ್ ದಿಲ್ ದೇ ಚುಕೇ ಸನಮ್" (೧೯೯೯) ತಾಲ್ (೧೯೯೯) ಜೋಷ್ (೨೦೦೦) ಮೊಹಬ್ಬತೇನ್ (೨೦೦೦) ದೇವದಾಸ್ (೨೦೦೨) ಧೂಮ್ ೨(೨೦೦೬) ರಾ ವನ್ ತಮಿಳು ಇರುವರ್ (೧೯೯೭) ಜೀನ್ಸ್ (೧೯೯೮) ಕಂಡುಕೊಂಡೇನ್ ಕಂಡುಕೊಂಡೇನ್ (೨೦೦೦) ಎ೦ದಿರನ್(೨೦೧೦) ಇತರೆ ಚೋಕೆರ್ ಬಾಲಿ (೨೦೦೩) - ಬೆ೦ಗಾಲಿ ಬ್ರೈಡ್ ಎ೦ಡ್ ಪ್ರೆಜುಡಿಸ್ (೨೦೦೪) - ಇ೦ಗ್ಲಿಷ್ 'ಐಶ್ವರ್ಯ ರೈ', ಹಾಗು 'ಅಭಿಷೇಕ್ ಬಚ್ಛನ್' ದಂಪತಿಗಳಿಗೆ ಹೆಣ್ಣು ಮಗುವಿನ ಜನನ ಬಾಲಿವುಡ್ ಸಿನಿಮಾ ರಂಗದಲ್ಲಿ ಅತ್ಯಂತ ಪ್ರಭಾವಿ ಹಾಗೂ ಮೇರು ಅಭಿನೇತ್ರಿ,'ಐಶ್ವರ್ಯ ರೈ'ಮುಂಬಯಿನ ಅಂಧೇರಿ (ಪ)ದಲ್ಲಿರುವ ಸುಪ್ರಸಿದ್ಧ 'ಸೆವೆನ್ ಹಿಲ್ ಆಸ್ಪತ್ರೆ' ಯಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ೨೦೧೧ ರ, ನವೆಂಬರ್, ೧೬, ರ ಬುಧವಾರದ ಬೆಳಿಗ್ಗೆ ೧೦ ಗಂಟೆಗೆ ಜನಿಸಿದ ಮಗುವಿನ ಬಗ್ಗೆ, ಅಮಿತಾಬ್ ಬಚ್ಚನ್ ರವರು ತಮ್ಮ ಬ್ಲಾಗ್ ನಲ್ಲಿ 'ಟ್ವೀಟ್' ಮಾಡಿ, ಎಲ್ಲರಿಗೂ ತಿಳಿಯ ಪಡಿಸಿದರು. ತಾಯಿ ಮಗು ಆರೋಗ್ಯವಾಗಿದ್ದಾರೆ. ಹೆರಿಗೆಯ ಸಮಯದಲ್ಲಿ ಅಮಿತಾಬ್ ಬಚ್ಚನ್, ಜಯ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ತಂದೆ,ಕ್ರಿಷ್ಣರಾಜ್, ತಾಯಿ, ವ್ರಿಂದ ಹಾಜರಿದ್ದರು. ಉಲ್ಲೇಖಗಳು ಬಾಹ್ಯ ಸ೦ಪರ್ಕಗಳು ಅ೦ತಾರಾಷ್ಟ್ರೀಯ ಚಲನಚಿತ್ರ ಮಾಹಿತಿಕೋಶದಲ್ಲಿ ಐಶ್ವರ್ಯಾ ರೈ ಬಗ್ಗೆ www.aishwaryarai.com - ಐಶ್ವರ್ಯಾ ರೈ ವರ್ಗ:ಸಿನಿಮಾ ತಾರೆಗಳು ವರ್ಗ:ಬಾಲಿವುಡ್ ವರ್ಗ:೧೯೭೩ ಜನನ
ಜಿ.ವಿ.ಅಯ್ಯರ್
https://kn.wikipedia.org/wiki/ಜಿ.ವಿ.ಅಯ್ಯರ್
right|thumb|ಜಿ.ವಿ.ಅಯ್ಯರ್ ಕನ್ನಡ ಚಿತ್ರರ೦ಗದ ಬೀಷ್ಮ ಎಂಬ ಪ್ರಖ್ಯಾತಿಯ ಜಿ ವಿ ಅಯ್ಯರ್ (ಸೆಪ್ಟೆಂಬರ್ ೩, ೧೯೧೭ - ಡಿಸೆಂಬರ್ ೨೧, ೨೦೦೩) ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು. ಆರಂಭದ ದಿನಗಳು ಜಿ.ವಿ.ಅಯ್ಯರ್ ಅವರ ಪೂರ್ಣ ಹೆಸರು ಗಣಪತಿ ವೆಂಕಟರಮಣ ಅಯ್ಯರ್. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಹುಟ್ಟಿದ ಜಿ.ವಿ.ಅಯ್ಯರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮೈಸೂರಿನ "ಸದಾರಮೆ" ನಾಟಕ ಕಂಪನಿಯಲ್ಲಿ, ಹಾಗೂ ಗುಬ್ಬಿ ನಾಟಕ ಕಂಪನಿಯಲ್ಲಿ ಪರಿಚಾರಕರಾಗಿ, ಪೋಸ್ಟರ್ ಬರೆಯುವವರಾಗಿ ಕೆಲಸ ಮಾಡಿದರು. ನಂತರ ಅವಕಾಶಗಳನ್ನರಸಿ ಪುಣೆಗೆ ಹೋದ ಅಯ್ಯರ್, ಹೋಟೆಲ್ ಮಾಣಿಯಾಗಿದ್ದುಕೊಂಡೇ ಚಿತ್ರರಂಗದಲ್ಲಿನ ಅವಕಾಶಗಳಿಗೆ ಪ್ರಯತ್ನಿಸಿದರು. ಅದು ಫಲಕಾರಿಯಾಗದೇ, ಕರ್ನಾಟಕಕ್ಕೆ ಹಿಂದಿರುಗಿದರು. ಚಿತ್ರರಂಗ ೧೯೪೩ರಲ್ಲಿ ರಾಧಾರಮಣ ಚಿತ್ರದ ಕೇಶಿದೈತ್ಯನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ೧೯೫೪ರಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ್ಪ ಚಿತ್ರದ ಕೈಲಾಸನ ಪಾತ್ರದಲ್ಲಿನ ಅಭಿನಯ ಅಯ್ಯರ್ ಅವರಿಗೆ ಜನಪ್ರಿಯತೆಯನ್ನು ಒದಗಿಸಿತು. ಚಲನಚಿತ್ರಗಳಲ್ಲಿ ನಟಿಸುತ್ತಿದ್ದರೂ, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ೧೯೫೫ರಲ್ಲಿ ತೆರೆಕಂಡ ಸೋದರಿ ಚಿತ್ರದಲ್ಲಿನ ಹಾಡುಗಳು ಮತ್ತು ಸಂಭಾಷಣೆ ಬರೆಯುವುದರೊಂದಿಗೆ ಚಲನಚಿತ್ರ ಸಾಹಿತಿಯಾಗಿ ಕೆಲಸ ನಿರ್ವಹಿಸಲು ಪ್ರಾರಂಭಿಸಿದರು. ಭೂದಾನ (೧೯೬೨) ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾದರು. ಕನ್ನಡದ ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿರುವಾಗ, ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಇವರನೊಡಗೂಡಿ ಕನ್ನಡ ಕಲಾವಿದರ ಸಂಘವನ್ನು ಸ್ಥಾಪಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಚಿತ್ರೋದ್ಯಮ ನೆಲೆ ನಿಲ್ಲಲು, ಕಲಾವಿದರು ಬದುಕಲು ಮಾರ್ಗಗಳನ್ನು ಹುಡುಕಿದರು. ಈ ಸಂಘದ ಗೆಳೆಯರೊಡನೆ ರಣಧೀರ ಕಂಠೀರವ ಚಲನಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು. ಜಿ.ವಿ.ಅಯ್ಯರ್ ಪ್ರಸಿದ್ಧಿ ಪಡೆದಿರುವುದು ಚಿತ್ರ ನಿರ್ದೇಶಕರಾಗಿ. ಒಟ್ಟು ಸುಮಾರು ೬೫ ಚಿತ್ರಗಳಲ್ಲಿ ನಿರ್ದೇಶಕರಾಗಿ ಅಥವಾ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಜಿ.ವಿ.ಅಯ್ಯರ್ ೧೯೭೫ ರಿಂದ ಮುಂದಕ್ಕೆ ಬಾಕ್ಸ್ ಆಫೀಸನ್ನು ಲೆಕ್ಕಿಸದೆ ಕಲಾತ್ಮಕ ಚಿತ್ರಗಳತ್ತ ತಿರುಗಿದರು. ಸಂಸ್ಕೃತ ಭಾಷೆಯಲ್ಲಿ ಅನೇಕ ಪ್ರಸಿದ್ಧ ಚಿತ್ರಗಳನ್ನು ನಿರ್ದೇಶಿಸಿದ್ದಲ್ಲದೆ ಹಿಂದಿ ಭಾಷೆಯಲ್ಲಿಯೂ ನಿರ್ದೇಶನ ಮಾಡಿದರು. ೧೯೫೪ ರಲ್ಲಿ "ಬೇಡರ ಕಣ್ಣಪ್ಪ" ನಾಟಕವನ್ನೂ ನಿರ್ದೇಶಿಸಿದ್ದರು.ಇವರು ನಿರ್ದೇಶಿಸಿದ ಪ್ರಥಮ ಸಂಸ್ಕೃತ ಚಿತ್ರ "ಆದಿ ಶಂಕರಾಚಾರ್ಯ"ಭಾರತದ ಅತ್ಯುತ್ತಮ ಚಿತ್ರವೆನಿಸಿ "ಸ್ವರ್ಣ ಕಮಲ "ಪ್ರಶಸ್ತಿ ಗಳಿಸಿದೆ. ನಮನ ನಿರ್ದೇಶಿಸಿದ ಚಲನಚಿತ್ರಗಳು ಕನ್ನಡ ಭೂದಾನ (೧೯೬೨) ತಾಯಿಕರುಳು (೧೯೬೨) ಲಾಯರ್ ಮಗಳು (೧೯೬೩) ಬಂಗಾರಿ (೧೯೬೩) ಪೋಸ್ಟ್ ಮಾಸ್ಟರ್ (೧೯೬೪) ಕಿಲಾಡಿ ರಂಗ (೧೯೬೬) ರಾಜಶೇಖರ (೧೯೬೭) ಮೈಸೂರು ಟಾಂಗ (೧೯೬೮) ಚೌಕದ ದೀಪ (೧೯೬೯) ಹಂಸಗೀತೆ (೧೯೭೫) ನಾಳೆಗಳನ್ನು ಮಾಡುವವರು (೧೯೭೯) ಮಧ್ವಾಚಾರ್ಯ (೧೯೮೬) ಚಿತ್ರಕಥೆ: ರಣಧೀರ ಕಂಠೀರವ (೧೯೬೦) ಸಂಸ್ಕೃತ ಭಗವದ್ಗೀತಾ (೧೯೯೩) ಆದಿ ಶಂಕರಾಚಾರ್ಯ (೧೯೮೩) ತಮಿಳು ರಾಮಾನುಜಾಚಾರ್ಯ (೧೯೮೯) ಹಿಂದಿ ಆಖ್ರೀ ಗೀತ್ (೧೯೭೫) ಸ್ವಾಮಿ ವಿವೇಕಾನಂದ ಜಿ.ವಿ.ಅಯ್ಯರ್ ನಿರ್ಮಾಣದ ಕನ್ನಡ ಚಲನಚಿತ್ರಗಳು ರಣಧೀರ ಕಂಠೀರವ (೧೯೬೦) ತಾಯಿಕರುಳು (೧೯೬೨) ಲಾಯರ್ ಮಗಳು (೧೯೬೩) ವಂಶವೃಕ್ಷ (೧೯೭೨) ಹಂಸಗೀತೆ (೧೯೭೫) ನಾಳೆಗಳನ್ನು ಮಾಡುವವರು (೧೯೭೯) ಜಿ.ವಿ.ಅಯ್ಯರ್ ಸಾಹಿತ್ಯದಲ್ಲಿನ ಪ್ರಮುಖ ಚಿತ್ರಗೀತೆಗಳು ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ ಬಾ ತಾಯೆ ಭಾರತಿಯೇ ನಿಧನ ೧೯೭೫ರಲ್ಲಿ "ಆಚಾರ್ಯ "ಬಿರುದನ್ನು ಪಡೆದ ಅಯ್ಯರ್ ತಮ್ಮ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡರು.ಅದರಲ್ಲಿ ಚಪ್ಪಲಿ ತೊಡುವುದನ್ನು ತ್ಯಜಿಸಿ ಮುಂದೆ ಬರಿಗಾಲಲ್ಲೇ ನಡೆದಾಡಿದರು. ಜಿ.ವಿ.ಅಯ್ಯರ್ ಬಾಣಭಟ್ಟನ ಸಂಸ್ಕೃತ ಕೃತಿಯಾದ "ಕಾದಂಬರಿ"ಯನ್ನು ಚಿತ್ರೀಕರಿಸುವ, ಹಾಗೂ ರಾಮಾಯಣ ಮಹಾಕಾವ್ಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಚಿತ್ರಿಸುವ ಯೋಚನೆಯಲ್ಲಿದ್ದರು. ಈ ಕುರಿತ ಚರ್ಚೆಗಾಗಿ ಮುಂಬೈಗೆ ತೆರೆಳಿದ್ದಾಗಲೇ ೨೦೦೩ ಡಿಸೆಂಬರ್ ೨೧ರಂದು ಮೂತ್ರ ಪಿಂಡದ ಸೋಂಕಿನಿಂದ ತಮ್ಮ ೮೬ನೇ ವಯಸ್ಸಿನಲ್ಲಿ ನಿಧನರಾದರು. ಆಕರಗಳು ಮಾಹಿತಿ ನೆರವು - ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ,ಲೇಖಕರು :ಎನ್.ಎಸ್.ಶ್ರೀಧರ ಮೂರ್ತಿ ವರ್ಗ:ನಿರ್ದೇಶಕರು ವರ್ಗ:ಕನ್ನಡ ಸಿನೆಮಾ ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು ವರ್ಗ:ಕನ್ನಡ ಚಲನಚಿತ್ರ ನಿರ್ಮಾಪಕರು ವರ್ಗ:ಸಂಭಾಷಣೆಕಾರ ವರ್ಗ:೧೯೧೭ ಜನನ ವರ್ಗ:೨೦೦೩ ನಿಧನ ವರ್ಗ:ಮೈಸೂರಿನ ಬರಹಗಾರರು
ಭಾರತದ ಪ್ರಧಾನ ಮಂತ್ರಿ
https://kn.wikipedia.org/wiki/ಭಾರತದ_ಪ್ರಧಾನ_ಮಂತ್ರಿ
ಭಾರತದ ಪ್ರಧಾನ ಮಂತ್ರಿಯವರು ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದಿಂದ ಅಥವಾ ಪಕ್ಷಗಳ ಮೈತ್ರಿತ್ವದಿಂದ ಆರಿಸಲ್ಪಟ್ಟ ನಾಯಕರು ಪ್ರಧಾನ ಮಂತ್ರಿಗಳಾಗುವರು. ಅವರು ಭಾರತ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಸದಸ್ಯರಾಗಿರುತ್ತಾರೆ. ಸಾಂವಿಧಾನಿಕವಾಗಿ, ಭಾರತದ ಅಧ್ಯಕ್ಷರ ಪದವಿ ಪ್ರಧಾನ ಮಂತ್ರಿಯ ಪದವಿಗಿಂತ ಮೇಲಿನದ್ದು. ಆದರೆ ಸರ್ಕಾರದ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಭಾವ ಹೊಂದಿರುವ ಪದವಿ ಪ್ರಧಾನ ಮಂತ್ರಿಗಳದ್ದು. ಭಾರತದ ಪ್ರಸಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಈ ವರೆಗೆ ಒಟ್ಟು ೧೨ ವ್ಯಕ್ತಿಗಳು ಭಾರತ ಪ್ರಧಾನ ಮಂತ್ರಿ ಸ್ಥಾನಕ್ಕೆ ಚುನಾಯಿಸಲ್ಪಟ್ಟಿದ್ದಾರೆ. ಇವರಲ್ಲಿ ಜವಾಹರಲಾಲ್ ನೆಹರು ಒಟ್ಟು ನಾಲ್ಕು ಅವಧಿಗಳಲ್ಲಿ ಪ್ರಧಾನ ಮಂತ್ರಿ ಗಳಾಗಿದ್ದರು. ಇಂದಿರಾ ಗಾಂಧಿ ಮೂರು ಅವಧಿಗಳ ಕಾಲ ಈ ಸ್ಥಾನದಲ್ಲಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಎರಡು ಅವಧಿಗಳಲ್ಲಿ ಈ ಸ್ಥಾನ ವಹಿಸಿದ್ದಾರೆ. ಗುಲ್ಜಾರಿ ಲಾಲ್ ನಂದಾ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕೆಲಸ ನಿರ್ವಹಿಸಿದ್ದರು. ಡಾ.ಮನಮೋಹನ್ ಸಿಂಗ್ ಮೇ ೨೨, ೨೦೦೪ ಮೇ ೨೬, ೨೦೧೧ ಕಾಂಗ್ರೆಸ್ ಪಕ್ಷ(ಐ)ವರೆಗೆ ೨ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು. ಪ್ರಧಾನ ಮಂತ್ರಿಯವರ ಭತ್ಯೆ ಮತ್ತು ವೇತನ- ವಸತಿ ಭಾರತದ ಪ್ರಧಾನಿಯ ಅಧಿಕೃತ ನಿವಾಸ ನಂ.೭, ರೇಸ್ ಕೋರ್ಸ್ ರಸ್ತೆ, ನವದೆಹಲಿ. ಅದು 5 ನಿವಾಸಗಳ ಬೃಹತ್ ವಸತಿ ಸೌಕರ್ಯ ಹೊಂದಿದೆ. ಕಚೇರಿಯು ರೈಸೀನಾ ಹಿಲ್ಸ್ ನಲ್ಲಿರುವ ಸೌತ್ ಬ್ಲಾಕ್ ನಲ್ಲಿದೆ. 2014 ರಿಂದ: ಪ್ರಧಾನ ಮಂತ್ರಿಯಾಗಿ ನಿಯೋಜಿತವಾಗಿರುವ ನರೇಂದ್ರ ಮೋದಿ ಅವರು ತಿಂಗಳಿಗೆ 1.6 ಲಕ್ಷ ರೂ. ಮೂಲ ವೇತನ:(ವರ್ಷಕ್ಕೆ 19.2 ಲಕ್ಷ ರೂಪಾಯಿ) 50,000. ಉಳಿದದ್ದಷ್ಟೂ ಇತರೆ ಭತ್ಯೆಗಳ ಲೆಕ್ಕದಲ್ಲಿ ಬರುತ್ತದೆ. ಇದರ ಜತೆಗೆ ಖಾಸಗಿ ಸಿಬ್ಬಂದಿ, ವಿಶೇಷ ವಿಮಾನ ಮತ್ತಿತರ ಸವಲತ್ತುಗಳೂ ಇರುತ್ತವೆ.PM Narendra Modi at number 12 in the list of 15 highest paid world leaders ಈವರೆಗಿನ ಪ್ರಧಾನಿಗಳ ಪಟ್ಟಿ Key: ಕಾಂಗ್ರೆಸ್ ಪಕ್ಷ ಜನತಾ ಪಕ್ಷ ಜನತಾ ದಳ ಭಾರತೀಯ ಜನತಾ ಪಕ್ಷ ಅನುಕ್ರಮ ಹೆಸರು ಪ್ರಮಾಣ ವಚನ ಸ್ವೀಕಾರ ಅವಧಿ ಮುಗಿದದ್ದು ಪಕ್ಷ 01 ಜವಾಹರಲಾಲ್ ನೆಹರು ಆಗಸ್ಟ್ ೧೫, ೧೯೪೭ ಮೇ ೨೭, ೧೯೬೪ ಕಾಂಗ್ರೆಸ್ ಪಕ್ಷ * ಗುಲ್ಜಾರಿ ಲಾಲ್ ನಂದಾ ಮೇ ೨೭, ೧೯೬೪ ಜೂನ್ ೯, ೧೯೬೪ ಕಾಂಗ್ರೆಸ್ ಪಕ್ಷ 02 ಲಾಲ್ ಬಹಾದುರ್ ಶಾಸ್ತ್ರಿ ಜೂನ್ ೯, ೧೯೬೪ ಜನವರಿ ೧೧, ೧೯೬೬ ಕಾಂಗ್ರೆಸ್ ಪಕ್ಷ * ಗುಲ್ಜಾರಿ ಲಾಲ್ ನಂದಾ ಜನವರಿ ೧೧, ೧೯೬೬ ಜನವರಿ ೨೪, ೧೯೬೬ ಕಾಂಗ್ರೆಸ್ ಪಕ್ಷ 03 ಇಂದಿರಾ ಗಾಂಧಿ ಜನವರಿ ೨೪, ೧೯೬೬ ಮಾರ್ಚ್ ೨೪, ೧೯೭೭ ಕಾಂಗ್ರೆಸ್ ಪಕ್ಷ 04 ಮೊರಾರ್ಜಿ ದೇಸಾಯಿ ಮಾರ್ಚ್ ೨೪, ೧೯೭೭ ಜುಲೈ ೨೮, ೧೯೭೯ ಜನತಾ ಪಕ್ಷ 05 ಚೌಧುರಿ ಚರಣ್ ಸಿಂಗ್ ಜುಲೈ ೨೮, ೧೯೭೯ ಜನವರಿ ೧೪, ೧೯೮೦ ಜನತಾ ಪಕ್ಷ ** ಇಂದಿರಾ ಗಾಂಧಿ ಜನವರಿ ೧೪, ೧೯೮೦ ಅಕ್ಟೋಬರ್ ೩೧, ೧೯೮೪ ಕಾಂಗ್ರೆಸ್ ಪಕ್ಷ 06 ರಾಜೀವ್ ಗಾಂಧಿ ಅಕ್ಟೋಬರ್ ೩೧, ೧೯೮೪ ಡಿಸೆಂಬರ್ ೨, ೧೯೮೯ ಕಾಂಗ್ರೆಸ್ ಪಕ್ಷ (ಐ) 07 ವಿಶ್ವನಾಥ್ ಪ್ರತಾಪ್ ಸಿಂಗ್ ಡಿಸೆಂಬರ್ ೨, ೧೯೮೯ ನವಂಬರ್ ೧೦, ೧೯೯೦ ಜನತಾ ದಳ 08 ಚಂದ್ರಶೇಖರ್ ನವಂಬರ್ ೧೦, ೧೯೯೦ ಜೂನ್ ೨೧, ೧೯೯೧ ಜನತಾ ದಳ 09 ಪಿ.ವಿ.ನರಸಿಂಹರಾವ್ ಜೂನ್ ೨೧, ೧೯೯೧ ಮೇ ೧೬, ೧೯೯೬ ಕಾಂಗ್ರೆಸ್ ಪಕ್ಷ (ಐ) 10 ಅಟಲ್ ಬಿಹಾರಿ ವಾಜಪೇಯಿ ಮೇ ೧೬, ೧೯೯೬ ಜೂನ್ ೧, ೧೯೯೬ ಭಾರತೀಯ ಜನತಾ ಪಕ್ಷ 11 ಹೆಚ್ ಡಿ ದೇವೇಗೌಡ ಜೂನ್ ೧, ೧೯೯೬ ಏಪ್ರಿಲ್ ೨೧, ೧೯೯೭ ಜನತಾ ದಳ 12 ಇಂದ್ರ ಕುಮಾರ್ ಗುಜ್ರಾಲ್ ಏಪ್ರಿಲ್ ೨೧, ೧೯೯೭ ಮಾರ್ಚ್ ೧೯, ೧೯೯೮ ಜನತಾ ದಳ ** ಅಟಲ್ ಬಿಹಾರಿ ವಾಜಪೇಯಿ ಮಾರ್ಚ್ ೧೯, ೧೯೯೮ ಮೇ ೨೨, ೨೦೦೪ ಭಾರತೀಯ ಜನತಾ ಪಕ್ಷ 13 ಡಾ. ಮನಮೋಹನ್ ಸಿಂಗ್ ಮೇ ೨೨, ೨೦೦೪ ಮೇ ೨೬, ೨೦೧೪ ಕಾಂಗ್ರೆಸ್ ಪಕ್ಷ 14 ನರೇಂದ್ರ ಮೋದಿ ಮೇ ೨೬, ೨೦೧೪ ಭಾರತೀಯ ಜನತಾ ಪಕ್ಷ ಉಲ್ಲೇಖಗಳು ಬಾಹ್ಯ ಸಂಪರ್ಕ ಅಧಿಕೃತ ತಾಣ ವರ್ಗ:ರಾಜಕೀಯ ವರ್ಗ:ಭಾರತದ ಪ್ರಧಾನ ಮಂತ್ರಿಗಳು
ವೀಣೆ
https://kn.wikipedia.org/wiki/ವೀಣೆ
thumb|Goddess Saraswati depicted playing the veene thumb|ಸರಸ್ವತಿ ವೀಣೆ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು ತಂತಿವಾದ್ಯವಾದ ವೀಣೆ. ಬಹಳ ಹಳೆಯ ವಾದ್ಯವಾದ ವೀಣೆಯ ವಿನ್ಯಾಸ ಅನೇಕ ಶತಮಾನಗಳಿಂದಲೂ ಬದಲಾಗುತ್ತಾ ಬಂದಿದೆ. ಸದ್ಯಕ್ಕೆ ಅತ್ಯಂತ ಜನಪ್ರಿಯ ವಿನ್ಯಾಸಕ್ಕೆ ಸರಸ್ವತಿ ವೀಣೆ ಎಂದು ಹೆಸರು. ಇದರಲ್ಲಿ ಮೂರು ತಂತಿಗಳು ಹಿತ್ತಾಳೆಯವು ಮತ್ತು ಒಂದು ಮುಖ್ಯ ತಂತಿ. ಜೊತೆಗೆ ಮೂರು ಸಹಾಯಕ ತಂತಿಗಳು ಇವೆ. ಪರಿಚಯ ಸಪ್ತ ಸ್ವರದ ಮನೆಗಳು ಮೇಣ ಕಟ್ಟುವುದರ ಮೂಲಕ ಆಯಾ ಸ್ಥಾನಗಳಲ್ಲಿ ಕೂಡಿಸುವುದರಿಂದ ವೀಣೆ ನುಡಿಸಲು ಕಷ್ಟವಿಲ್ಲ. ಆದರೆ ಇದನ್ನು ಕಲಿಯಲು ತಾಳ್ಮೆ ಹಾಗೂ ಆಸಕ್ತಿ ಬೇಕು. ನಿಧಾನವಾಗಿ ಒಲಿಸಿಕೊಂಡು, ಆನಂದದ ಅನುಭೂತಿ ಪಡೆಯಬಹುದಾದ ವಾದ್ಯ ವೀಣೆ. ಅನೇಕ ವರ್ಷಗಳ ಪರಿಶ್ರಮದಿಂದ ಪಾಂಡಿತ್ಯ ಗಳಿಸಬಹುದು. ಒಲಿಸಿಕೊಂಡಾಗ ವೀಣೆ ನಮ್ಮ ಆತ್ಮ ಸಂಗಾತಿಯಾಗಿ, ನಮ್ಮದೇ ಮನದ ಭಾವನೆಗಳನ್ನು ವ್ಯಕ್ತಪಡಿಸತೊಡಗುತ್ತದೆ. ವೀಣೆ ಎಂದೊಡನೆ ನಮಗೆ ನೆನಪಾಗುವುದೇ ದೇವಿ ಸರಸ್ವತಿ. ಸರಸ್ವತಿ ದೇವಿಯು ಸಂಗೀತದ ಅಧಿದೇವತೆ. ಅವಳು ವೀಣಾಪಾಣಿ. ಸರಸ್ವತಿ ದೇವಿಯು ವೇದಗಳ ಅಭಿಮಾನಿ. ಬ್ರಹ್ಮ ದೇವರ, ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಇವಳು ಮರೆವೆಯೇ ಇಲ್ಲದ ಹಾಗೂ ಅನವರತವೂ ಪರಮಾತ್ಮನ ಸ್ತುತಿ ಮಾಡುವವಳು, ಬ್ರಹ್ಮಾಣಿ – ತತ್ವಜ್ಞಾನಿ ಹಾಗೂ ಗಾನಲೋಲಳೂ ಅಹುದು. ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು. ವಿಧಗಳು ನಮ್ಮ ದೇಶದಲ್ಲಿ ಇರುವಷ್ಟು ಸಂಗೀತ ವಾದ್ಯಗಳು ಬೇರೆಲ್ಲೂ ಇಲ್ಲವೆನ್ನಬಹುದೇನೋ..! ಪ್ರತಿಯೊಂದು ವಾದ್ಯವೂ ತನ್ನದೇ ಆದ ಒಂದು ಆಕಾರ, ರಚನೆ ಮತ್ತು ಧ್ವನಿಯನ್ನು ಹೊಂದಿದೆ ಮತ್ತು ವಿಶಿಷ್ಟವಾಗಿದೆ. ಶಾಸ್ತ್ರದಲ್ಲಿ ಈ ವಾದ್ಯಗಳನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ. ಅವುಗಳು : ತತ (ತಂತೀವಾದ್ಯಗಳು) ಸುಷಿರ (ಗಾಳಿ ವಾದ್ಯಗಳು)]] ಅವನದ್ಧ (ತಾಡನ ವಾದ್ಯಗಳು)]] ಘನ (ಲೋಹ, ಮಣ್ಣು ಅಥವಾ ಮರದ ವಾದ್ಯಗಳು) ವೀಣೆ ತತ ಅಂದರೆ ತಂತೀವಾದ್ಯಗಳ ಗುಂಪಿಗೆ ಸೇರುತ್ತದೆ. ತಂತಿಗಳ ಮೂಲಕ ನಾದೋತ್ಪತ್ತಿಯಾಗುವ ವಾದ್ಯಗಳೇ ತತವಾದ್ಯಗಳು. ತಂತೀ ವಾದ್ಯಗಳನ್ನು ಶ್ರುತಿ ವಾದ್ಯ ಮತ್ತು ಸಂಗೀತಾವಾದ್ಯಗಳೆಂದು ವಿಂಗಡಿಸಲಾಗಿದೆ. ಗಾಯನ ಅಥವಾ ವಾದನ ಗಳಲ್ಲಿ ಶ್ರುತಿಗಾಗಿ ಉಪಯೋಗಿಸಲ್ಪಡುವುದು "ತಂಬೂರಿ" ಮತ್ತು ಸಂಗೀತವನ್ನು ಗಾಯನಕ್ಕೆ ಬದಲಾಗಿ ವಾದ್ಯದಲ್ಲಿ ಹೊಮ್ಮಿಸಲು ಉಪಯೋಗಿಸಲ್ಪಡುವುದು "ವೀಣೆ". ವೀಣೆ ಋಗ್ವೇದದಲ್ಲಿ ಮತ್ತು ಯಜುರ್ವೇದದಲ್ಲಿ ಕೂಡ ಪ್ರಸ್ತಾಪಿಸಲ್ಪಟ್ಟಿದೆಯಂತೆ. * ವೀಣೆಯ ಉತ್ಪತ್ತಿಗೆ ನಾದಪ್ರಿಯನಾದ ಶಂಕರನು ಕಾರಣವಿರಬಹುದು ಏಕೆಂದರೆ "ರುದ್ರವೀಣೆ" ಎಂದು ಕೂಡ ವಿಶಿಷ್ಟವಾದ ಒಂದು ವೀಣೆ ಇದೆ. ದೇವಿ ಸರಸ್ವತಿಯಲ್ಲದೆ ವಿಶ್ವಾವಸು, ತುಂಬುರು ಮತ್ತು ನಾರದರು ಕೂಡ ವೈಣಿಕರೇ ಮತ್ತು ತುಂಬುರರ ವೀಣೆಯ ಹೆಸರು "ಕಲಾವತೀ" ಎಂದೂ, ವಿಶ್ವಾವಸುವಿನ ವೀಣೆಯ ಹೆಸರು "ಬೃಹತೀ" ಎಂದೂ ಮತ್ತು ನಾರದರ ವೀಣೆಯ ಹೆಸರು "ಮಹತಿ" ಎಂದೂ ನಮಗೆ ಪುರಾಣಗಳಿಂದ ತಿಳಿದುಬರುತ್ತದೆ. 'ಸಂಗೀತ ಮಕರಂದ' (೧೩ನೇ ಶತಮಾನ) ಗ್ರಂಥದಲ್ಲಿ ಸ್ವರ ಮೂರ್ಛನಾ, ರಾಗ, ತಾಲ, ವಾದ್ಯ ಇತ್ಯಾದಿಗಳ ವಿವೇಚನೆ ಇದೆ. ಇದರಲ್ಲಿ ಸುಮಾರು ೧೯ ಪ್ರಕಾರದ ವೀಣೆಗಳನ್ನು ಪರಿಚಯಿಸಲಾಗಿದೆ. ೧.ಕಚ್ಛಪಿ, ೨.ಕುಬ್ಜಿಕಾ, ೩.ಚಿತ್ರಾ, ೪.ವಹಂತಿ, ೫.ಪರಿವಾದಿನಿ, ೬.ಜಯಾ, ೭.ಘೋಷವತಿ, ೮.ಜೇಷ್ಠಾ, ೯.ನಕುಲಿ, ೧೦.ಮಹತಿ, ೧೧.ವೈಷ್ಣವಿ, ೧೨.ಬ್ರಹ್ಮಿ, ೧೩.ರೌದ್ರಿ, ೧೪.ರಾವಣಿ, ೧೫.ಸರಸ್ವತಿ, ೧೬.ಕಿನ್ನರಿ, ೧೭.ಸೈರಂಧ್ರಿ ೧೮.ಕೂರ್ಮಿ, ೧೯.ಗೋಷಕಾ. ವೀಣೆ ಮೋಕ್ಷ ಸಾಧನೆಗೆ ಸುಲಭವಾದ ಹಾದಿ ಎಂದು ಯಾಜ್ಞವಲ್ಕ್ಯರು ತಮ್ಮ ಸ್ಮೃತಿಯಲ್ಲಿ ಹೇಳಿದ್ದಾರೆ. ನಾವು ರಾವಣನ ಕಥೆಯಲ್ಲಿ ಕೂಡ ಕೇಳಿದ್ದೇವೆ - ವೀಣೆಯ ತಂತಿಯೊಂದು ಕಿತ್ತು ಹೋದಾಗ ತನ್ನ ದೇಹದ ಒಂದು ನರವನ್ನೇ ಕಿತ್ತು ತಂತಿಯಾಗಿಸಿ, ವೀಣೆಯ ವಾದನವನ್ನು ಮುಂದುವರೆಸಿದನೆಂದು. ಪ್ರಾಚೀನ ಗ್ರಂಥಗಳಲ್ಲಿ ವೀಣೆ ವೀಣೆ ಈಗಿರುವ ಸ್ವರೂಪಕ್ಕೆ ಬರುವ ಮೊದಲು ಅನೇಕ ಬದಲಾವಣೆಗಳನ್ನು ಹೊಂದಿದ್ದಾಗಿರಬಹುದು. ಕಾಳಿದಾಸನ ’ಶ್ಯಾಮಲಾ ದಂಡಕ’ದಲ್ಲಿ "ಮಾಣಿಕ್ಯವೀಣಾಂ ಉಪಲಾಲಯಂತೀಂ " ಎನ್ನುತ್ತಾ ಶ್ಯಾಮಲೆಯಾದ ಶಾರದಾಂಬೆಯು ಮಾಣಿಕ್ಯ ಮಯವಾದ ವೀಣೆಯನ್ನು ನುಡಿಸುತ್ತಿದ್ದಳು ಎಂದಿದ್ದಾರೆ. ಹಾಗೇ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ರಾಜಾ ಉದಯನು "ಘೋಷವತೀ" ಎಂಬ ವೀಣೆಯನ್ನು ನುಡಿಸಿದ್ದನೆಂದು ಕೂಡ ಉಲ್ಲೇಖವಿದೆ. ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ನಾದಜ್ಯೋತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರಿಗೆ ಗುರು ಚಿದಂಬರನಾಥ ಯೋಗಿಯ ಅನುಗ್ರಹದಿಂದ ಕಾಶಿಕ್ಷೇತ್ರದಲ್ಲಿ ಗಂಗೆಯಲ್ಲಿ ದೊರೆತ ವೀಣೆಯ ಮೇಲೆ ದೇವನಾಗರಿಯಲ್ಲಿ "ರಾಮ" ಎಂದು ಕೆತ್ತಲ್ಪಟ್ಟಿದೆಯಂತೆ. ಹೀಗೆ ವೀಣೆಯ ಇತಿಹಾಸ ತುಂಬಾ ಹಿಂದಿನದೆಂಬ ಮಾತು ನಮಗೆ ಅರ್ಥವಾಗುತ್ತದೆ. ವೀಣೆಯ ಅಂಗ ರಚನೆ ಮತ್ತ ಕಾರ್ಯ ವೈಖರಿ ವೀಣೆಯ ವಿವರಣೆಯೆಂದರೆ ಒಂದು ಚಿಕ್ಕ ಹಾಗೂ ಒಂದು ದೊಡ್ಡ ಬುರುಡೆಗಳಿರುತ್ತವೆ. ದೊಡ್ಡ ಬುರುಡೆಯನ್ನು ಕೊಡ ಎಂದು ಕರೆಯುತ್ತಾರೆ. ಬಲಗಡೆಗೆ ಇರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಹಲಸಿನ ಮರದಿಂದ ಮಾಡುತ್ತಾರೆ. ಇದರ ತಯಾರಿ ಕೂಡ ಅನೇಕ ತಿಂಗಳುಗಳ ಕೆಲಸವಾಗುತ್ತದೆ. ಹಲಸಿನ ಮರವನ್ನು ನೀರಿನಲ್ಲಿ ನೆನೆಸಿಟ್ಟು ಬೇಕಾದ ಆಕಾರಕ್ಕೆ ಕೊರೆದು, ಕತ್ತರಿಸಿ ಹಗುರ ಮಾಡಿ ಕೊಡವನ್ನು ತಯಾರಿಸುತ್ತಾರೆ. ಕೊಡ ಹಗುರವಾಗಿದ್ದಷ್ಟೂ ನಾದ ಚೆನ್ನಾಗಿ ತುಂಬುತ್ತದೆಂಬ ನಂಬಿಕೆಯಿದೆ. * * ಹೀಗೆ ತಯಾರಿಸಿದ ಕೊಡವನ್ನು ಇನ್ನೊಂದು ಮರದ ಹಾಳೆಯಿಂದ ಮುಚ್ಚಿರುತ್ತಾರೆ. ಅದಕ್ಕೆ ದಂಡಿಯನ್ನು ಜೋಡಿಸುತ್ತಾರೆ. ಅದರ ಎಡತುದಿ ಭೂಮಿಯ ಕಡೆಗೆ ಬಗ್ಗಿರುತ್ತದೆ ಮತ್ತು ಇದಕ್ಕೆ ಇನ್ನೊಂದು ಪುಟ್ಟ ಕೊಡದಂತಹ ಬುರುಡೆಯನ್ನು ಜೋಡಿಸಿರು ತ್ತಾರೆ. ಈ ರೀತಿಯ ವೀಣೆ ಮೊಟ್ಟ ಮೊದಲು ತಂಜಾವೂರಿನಲ್ಲಿ ತಯಾರಾದುದರಿಂದ ಇಂತಹ ವೀಣೆಗೆ "ತಂಜಾವೂರು ವೀಣೆ" ಎನ್ನುತ್ತಾರೆ. ಎಡಗಡೆಗೆ ಜೋಡಿಸಿರುವ ಪುಟ್ಟ ಕೊಡದಂತಹದು ಸೋರೆಬುರುಡೆ ಅಥವಾ ಕಾಗದದ ಬುರುಡೆ, ಪಿತ್ ಅಥವಾ ರಾಳದ ಬುರುಡೆ, ತಗಡಿನ ಬುರುಡೆಯೂ ಆಗಿರಬಹುದು. ದಂಡಿಯ ಮೇಲ್ಭಾಗಕ್ಕೆ ದೋಣಿ ಪಟ್ಟಿಯನ್ನು ಅಂಟಿಸಿರುತ್ತಾರೆ ಮತ್ತು ಈ ದೋಣಿ ಪಟ್ಟಿಯ ಮೇಲೆ ಉದ್ದಕ್ಕೂ ಎರಡೂ ಕಡೆಗಳಲ್ಲೂ ಹದ ಮಾಡಿದ ಮೇಣದಿಂದ ಜಗಲಿಗಳನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಆಯಾಯಾ ಸ್ವರ ಸ್ಥಾನಗಳಿಗೆ ಅನುಗುಣವಾಗಿ ನೆಡುತ್ತಾರೆ. ಮೇಣಕ್ಕೆ ಇದ್ದಿಲನ್ನು ನುಣ್ಣಗೆ ಪುಡಿಮಾಡಿ ಬೆರೆಸಿ, ಕಲಸಿ, ಬೆಂಕಿಯಲ್ಲಿ ಕಾಯಿಸಿ ಗೊತ್ತಾದ ಹದಕ್ಕೆ ತಂದು ಕಟ್ಟಬೇಕು. ಇದರ ಮೇಲೆ ಮೆಟ್ಟಿಲುಗಳನ್ನು ನೆಡುವಾಗ ನಿಶ್ಯಬ್ದತೆ ಇರಬೇಕು. ಕೂದಲೆಳೆಯಷ್ಟು ವ್ಯತ್ಯಾಸವಾದರೂ ಅಪಸ್ವರ ಬರುತ್ತದೆ. ಇದಕ್ಕೆ ವೀಣೆಮೇಳ ಕಟ್ಟುವುದು ಎಂದೇ ಕರೆಯುತ್ತಾರೆ. ಈ ಮೆಟ್ಟಿಲುಗಳ ಮೇಲೆ ವೀಣೆಯ ಕೊಡದ ಮೇಲೆ ಅಂಟಿಸಿದ "ಕುದುರೆ" (ಮರದ ತುಂಡು) ಮೂಲಕ ಹಾದು ನಾಲ್ಕು ತಂತಿಗಳು ಬರುತ್ತವೆ. ಕುದುರೆಯ ಎತ್ತರ ಮತ್ತು ಮೇಣದ ಎತ್ತರ ಎರಡೂ ಸಮವಾಗಿದ್ದಾಗ ಮಾತ್ರ ಸುಲಲಿತವಾದ ನಾದ ಹೊರಹೊಮ್ಮುತ್ತದೆ. ನಾಲ್ಕು ತಂತಿಗಳಲ್ಲಿ ಮೊದಲನೆಯದು "ಸಾರಣಿ", ಎರಡನೆಯದು "ಪಂಚಮ", ಮೂರನೆಯದು "ಮಂದ್ರ", ನಾಲ್ಕನೆಯದು "ಅನುಮಂದ್ರ" ಎಂದು ಕರೆಯುತ್ತಾರೆ. ಇದಲ್ಲದೆ ಕುದುರೆಯ ಪಕ್ಕದಲ್ಲಿ ಬಾಗಿದ ಒಂದು ಹಿತ್ತಾಳೆಯ ರೇಕು ಜೋಡಿಸಿರುತ್ತಾರೆ. ಇದರ ಮೂಲಕ ಮೂರು ತಾಳದ ತಂತಿಗಳು ಹಾದು ಹೋಗುತ್ತವೆ. ಅವುಗಳು ಕ್ರಮವಾಗಿ ಮಧ್ಯ ಷಡ್ಜ, ಮಧ್ಯ ಪಂಚಮ ಮತ್ತು ತಾರ ಷಡ್ಜಗಳು. ವೀಣೆಯ ಎಲ್ಲಾ ಏಳು ತಂತಿಗಳೂ ಎಡಗಡೆಯ ಪುಟ್ಟ ಬುರುಡೆಯ ಕಡೆಗೆ ಹಾದು ಬರುತ್ತವೆ ಮತ್ತು ಒಂದೊಂದು ತಂತಿಯೂ ಒಂದೊಂದು ಬಿರಟೆಯಿಂದ ಕಟ್ಟಲ್ಪಟ್ಟು, ಹೆಚ್ಚಿಗೆ ಇರುವ ತಂತಿ ಅದಕ್ಕೆ ಸುತ್ತಿ ಭದ್ರಪಡಿಸಲ್ಪಟ್ಟಿರುತ್ತದೆ. ವೀಣೆ ಶ್ರುತಿ ಮಾಡುವಾಗ ಈ ಬಿರಟೆಗಳನ್ನು ಬಿಗಿ ಮತ್ತು ಸಡಿಲು ಮಾಡುವ ಮುಖಾಂತರ ಬೇಕಾದ ಬಿಂದುವಿನಲ್ಲಿ ಸ್ವರ ಕೂಡಿಸಲು ಅನುಕೂಲವಾಗುತ್ತದೆ. ಮೂರು ಪ್ರತ್ಯೇಕ ಭಾಗಗಳಾದ ಕಾಯಿ, ದಂಡಿ ಮತ್ತು ತಲೆ ಉಳ್ಳ ವೀಣೆಗೆ ’ಖಂಡ ವೀಣೆ’ ಎಂದು ಹೆಸರು. ಮೂರೂ ಭಾಗಗಳೂ ಏಕವಾಗಿ ಒಂದೇ ಮರದಲ್ಲಿ ಮಾಡಲ್ಪಡುವ ವೀಣೆಗೆ ’ಅಖಂಡ ವೀಣೆ’ ಎಂದು ಹೆಸರು. ಅಖಂಡ ವೀಣೆಯ ನಾದ ಹೆಚ್ಚು ಮಧುರವಾಗಿರುತ್ತದೆನ್ನುತ್ತಾರೆ. ವೆಂಕಟಮುಖಿಯವರು ಉಲ್ಲೇಖಿಸಿರುವ ಮೂರು ವಿಧ ವೀಣೆಗಳಾದ ’ಶುದ್ಧ ಮೇಳ ವೀಣೆ’, ’ಮಧ್ಯಮ ಮೇಳ ವೀಣೆ’ ಮತ್ತು ’ರಘುನಾಥ ಮೇಳ ವೀಣೆ’ ಗಳಲ್ಲಿ ತಂತಿಗಳು ಮೇಲೆ ಹೇಳಿದಂತಿಲ್ಲದೆ ಬೇರೆಯೇ ಕ್ರಮದಲ್ಲಿವೆ ಮತ್ತು ಅವುಗಳನ್ನು ಶ್ರುತಿ ಮಾಡುವ ರೀತಿಯೂ ಬೇರೆಯೇ ಆಗಿವೆ. ಮೆಟ್ಟಿಲುಗಳ ಜೋಡಣೆಯ ಕ್ರಮದಲ್ಲೂ ಸ್ವಲ್ಪ ವ್ಯತ್ಯಾಸ ಬರುತ್ತದೆ. ವೀಣೆಯ ಪುಟ್ಟ ಸೋರೆಯ ಬುರುಡೆಯನ್ನು ನುಡಿಸುವವರ ಎಡ ತೊಡೆಯ ಮೇಲಿಟ್ಟುಕೊಳ್ಳುತ್ತಾರೆ, ದೊಡ್ಡ ಕೊಡ ಅಥವಾ ಬುರುಡೆಯನ್ನು ಬಲತೊಡೆಗೆ ತಗುಲುವಂತೆ ಇಟ್ಟುಕೊಂಡು ಕುಳಿತು, ಬಲಗೈನಿಂದ ಮೊದಲನೆಯ ತಂತಿ ಸಾರಣಿಯನ್ನು ತರ್ಜನಿ ಹಾಗೂ ಮಧ್ಯದ ಬೆರಳುಗಳಿಂದ ಮೀಟುತ್ತಾ, ಎಡಗೈಯನ್ನು ಮೇಣದಲ್ಲಿ ಕಟ್ಟಿರುವ ಮೆಟ್ಟಿಲುಗಳ ಮೇಲೆ ಒತ್ತುತ್ತಾ ನಾದ ಹೊಮ್ಮಿಸುತ್ತಾರೆ. ಬಲಗೈನ ಕಿರು ಬೆರಳಿನಿಂದ ತಾಳದ ತಂತಿಗಳನ್ನು ಬೇಕಾದ ಕಡೆ ತಾಳ ಹಾಕಲು ಉಪಯೋಗಿಸುತ್ತಾರೆ. ವೀಣೆ ಗಮಕಕ್ಕೆ ತುಂಬಾ ಸೂಕ್ತವಾದ ವಾದ್ಯ. ಗಾಯನದಲ್ಲಿ ಸಾಧ್ಯವಾಗದೇ ಇರುವ ಸ್ವರಪ್ರಕ್ತಿಯು ಸಹಜವಾಗಿ ತಂತೀವಾದ್ಯವಾದ ವೀಣೆಯಲ್ಲಿ ಅತ್ಯದ್ಭುತವಾಗಿ ಉತ್ಪತ್ತಿ ಮಾಡಬಹುದು. ವೀಣೆಯ ಮೆಟ್ಟುಗಳ ಮೇಲೆ ಹಾಯುವ ತಂತಿಗಳಲ್ಲಿ ಪ್ರಧಾನ ತಂತಿಯಾದ ಸಾರಣಿ, ಮಂದ್ರ ಪಂಚಮ ಮತ್ತು ಮಂದ್ರ ಷಡ್ಜ ತಂತಿಗಳ ಮೇಲೆ ಸಂವಾದಿ, ಅನುವಾದಿ ಸ್ವರ ರಂಜನೆಗೆ ಆಸ್ಪದವೀಯುವ ಸ್ವರಗಳ ಮೆಟ್ಟಿಲುಗಳನ್ನು ಎಡಗೈ ಬೆರಳುಗನ್ನದುಮಿ ಬಲಗೈ ಬೆರಳಿನ ಒಂದೇ ಒಂದು ಮೀಟಿನಿಂದ ಮೂರೂ ಸ್ವರಗಳನ್ನೂ ಉತ್ಪತ್ತಿ ಮಾಡುವುದೇ ಈ "ಗಮಕ"ದ ತಂತ್ರ. ಐತರೇಯೋಪನಿಷತ್ತಿನಲ್ಲಿ ವೀಣೆ ಐತರೇಯೋಪನಿಷತ್ತಿನಲ್ಲಿ ನಮ್ಮ ದೇಹವನ್ನು ವೀಣೆಯೆಂದು ಉಲ್ಲೇಖಿಸಿದ್ದಾರೆ.... ಅಥ ಖಲ್ವಿಯಂ ದೈವೀವೀಣಾ ಭವತಿ | ತದನುಕೃತಿರಸೌ ಮಾನುಷೀ ವೀಣಾ ಭವತಿ | ಯಥಾಸ್ಯಾ: ಶಿರ ಏವಮಮುಷ್ಯಾ: ಶಿರ: | ಯಥಾಸ್ಯಾ ಉದರಮೇವಮಮುಷ್ಯಾ ಅಂಭಣಮ್ | ಯಥಾಸ್ಯೈ ಜಿಹ್ವಾ - ಏವಮಮುಷ್ಯೈ ವಾದನಮ್ | ಯಥಾಸ್ಯಾಸ್ತಂತ್ರಯ ಏವಮಮುಷ್ಯಾ ಅಂಗುಲಯ: | ಯಥಾಸ್ಯಾ: ಸ್ವರಾ ಏವಮಮುಷ್ಯಾ: ಸ್ವರಾ: || ಈ ದೇಹವೊಂದು ದೈವೀವೀಣೆ. ಮನುಷ್ಯರು ನಿರ್ಮಿಸಿದ ಮರದ ವೀಣೆ ದೇವರು ನಿರ್ಮಿಸಿದ ಈ ದೇಹವೀಣೆಯದೇ ಅನುಕರಣೆ. ದೇಹಕ್ಕೆ ತಲೆಯಿದ್ದಂತೆ ಮರದ ವೀಣೆಗೆ ಪುಟ್ಟ ಬುರುಡೆ ಇದೆ, ದೇಹದ ಉದರ ಹಾಗೂ ಪೀಠವಿದ್ದಂತೆ ವೀಣೆಗೆ ಕೊಡ ಅಥವಾ ದೊಡ್ಡ ಬುರುಡೆಯಿದೆ. ಬೆನ್ನುಹುರಿಯು ಉದ್ದಕ್ಕೆ ದೇಹದಲ್ಲಿ ಪೀಠದಿಂದ ಕಂಠದವರೆಗೆ ಪಸರಿಸಿ ಪೀಠವನ್ನು ಮತ್ತು ದೇಹದ ಕೆಳಗಿನ ಭಾಗದ ಸಂಪರ್ಕವನ್ನು ತಲೆಗೆ ಮುಟ್ಟಿಸಿದೆಯೋ ಹಾಗೆ ವೀಣೆಯಲ್ಲಿ ಮರದ ದೋಣಿ ಕೊಡವನ್ನು ಪುಟ್ಟ ಬುರುಡೆಗೆ ಸೇರಿಸಿದೆ. ಬೆನ್ನುಹುರಿಯಲ್ಲಿರುವಂತೆಯೇ ಈ ದೋಣಿಯ ಮೇಲೆ ಮೇಣವನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಸ್ವರಸ್ಥಾನಗಳಾಗಿ ಜೋಡಿಸಿರುತ್ತಾರೆ. ದೇಹದ ವೀಣೆಗೆ ನಾಲಿಗೆ ಹೇಗೆ ಸ್ವರ / ನಾದವನ್ನು ಉತ್ಪತ್ತಿ ಮಾಡುವುದೋ ಹಾಗೆ ವೀಣೆಯ ಮೇಲೆ ವಾದಕನ ಬೆರಳುಗಳು ನಾದವನ್ನು ಸೃಷ್ಟಿಸುತ್ತವೆ. ದೇಹಕ್ಕೆ ನರಗಳೇ ತಂತಿಗಳು. ನಾದ ಮೈತುಂಬಿದಾಗ, ನರ ನರವೂ ನಾದದ ಅಲೆಯಲ್ಲಿ ತೇಲಿಹೋಗುವುದು. ಹಾಗೇ ವೀಣೆಯ ತಂತಿಗಳೂ, ವಾದಕನ ಬೆರಳುಗಳು ತಂತಿಯ ಮೇಲೆ ಆಟವಾಡಿದಾಗ, ಅಲೆ ಅಲೆಯಾಗಿ ನಾದ ವೀಣೆಯ ಕೊಡದಿಂದ ಚಿಮ್ಮುತ್ತದೆ. ದೇಹವೆಂಬ ದೈವೀವೀಣೆ ದೇವರ ಗುಣಗಾನಕ್ಕೇ ಮೀಸಲಾದ ವೀಣೆ. ಈ ದೇಹ ವೀಣೆಗೆ ನಮ್ಮ ಕೈಗಳೇ ತಾಳವಾದ್ಯ. ಕೈ ತಟ್ಟಿನ ತಾಳ ತಟ್ಟಿ ದೇಹವೆಂಬ ದಂಡಿಗೆಯಿಂದ ಭಗವಂತನ ಸ್ಮರಣೆಯನ್ನು ನುಡಿಸಬೇಕು. ದೈವೀಕತೆ ವೀಣೆ ದೈವೀಕವಾದರೂ ನಮ್ಮ ಜೀವನದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಬೇರೆ ಎಲ್ಲಾ ವಾದ್ಯಗಳಿಗಿಂತಲೂ ವೀಣೆ ವಾದಕನ ಮನಸ್ಸಿನ ಭಾವಗಳನ್ನು ಅತ್ಯಂತ ನವಿರಾಗಿ ಬಿಂಬಿಸುತ್ತದೆ ಎನಿಸುತ್ತದೆ. ವೀಣೆ ಅಭ್ಯಾಸ ಮಾಡುವಾಗ ಮನಸ್ಸು ಪ್ರಶಾಂತವಾಗುತ್ತದೆ. ತಂತಿಗಳ ಮೇಲೆ ಮೆಲ್ಲಗೆ ಬೆರಳಾಡಿಸಿದಾಗ ಝುಮ್ಮೆನ್ನುವ ನಾದ ನಮ್ಮ ನರನಾಡಿಗಳಲ್ಲೂ ಪ್ರವಹಿಸಲಾರಂಭಿಸುತ್ತದೆ. ವಾದಕನ ಹೃದಯಕ್ಕೆ ಹತ್ತಿರವಾಗಿ ನಾದ ಮಿಡಿಯುವ ವೀಣೆ ಅತ್ಯಂತ ಆಪ್ತವಾಗುತ್ತದೆ. ಅದೊಂದು ವಾದ್ಯವೆಂಬ ಅಂಶ ಮರೆತುಹೋಗಿ ಜೀವದ ಗೆಳತಿಯಾಗಿಬಿಡುತ್ತದೆ. ನಮ್ಮ ಭಾವನೆಗಳನ್ನು ಅರಳಿಸ ತೊಡಗುತ್ತದೆ. ಹೊರ ಹೊಮ್ಮುವ ನಾದ ನಮ್ಮೊಡನೆ ಮಾತನಾಡಾಲಾರಂಭಿಸುತ್ತದೆ. ಎಡಕೈ ಬೆರಳುಗಳು ತಂತಿಯ ಮೇಲೆ ಸ್ವಲ್ಪವೇ ಒತ್ತಡದಿಂದ ಚಲಿಸಲಾರಂಭಿಸಿದೊಡನೇ ನಮ್ಮೊಳಗಿನ ಭಾವನೆಗಳ ಪ್ರಪಂಚ ಅನಾವರಣಗೊಳ್ಳುತ್ತಾ ಎಲ್ಲೆಲ್ಲೂ ನಾದವೇ ತುಂಬಿರುವ ಅನುಭವ ಕೊಡುತ್ತದೆ. ನಡು ನಡುವೆ ತಾಳದ ತಂತಿಗಳನ್ನು ಮೀಟುವಾಗ ಮಂದ್ರ ಹಾಗೂ ತಾರದಲ್ಲಿ ’ಸ’ ಮತ್ತು ಮಧ್ಯಮದಲ್ಲಿ ’ಪ’ ಮಿಶ್ರವಾಗಿ ಗೆಜ್ಜೆಯ ಘಲ್ ಘಲ್ ಶಬ್ದ ಕೇಳಿಸುವಂತಾಗುತ್ತದೆ. ವೀಣೆಯ ಪುಟ್ಟ ಬುರುಡೆಯನ್ನು ವಾದಕ ತನ್ನ ಎಡ ತೊಡೆಯ ಮೇಲಿಟ್ಟುಕೊಂಡು ನುಡಿಸುವಾಗ, ಕಂಪನದಿಂದುಂಟಾಗುವ ನಾದ ನಮ್ಮ ಶರೀರದಲ್ಲೂ ದಿವ್ಯ ಕಂಪನದ ಅನುಭವ ಕೊಡುತ್ತದೆ. ವಿಜಯಭಾಸ್ಕರ ಸಂಗೀತ ನೀಡಿರುವ, ಶ್ರೀಮತಿ ಬಿ ಕೆ ಸುಮಿತ್ರ ಅವರು ಹಾಡಿರುವ ’ಕಲ್ಯಾಣಿ’ ಚಿತ್ರದ "ವೀಣಾ.. ನಿನಗೇಕೋ ಈ ಕಂಪನ | ಮೃದುವಾಗಿ ನುಡಿ ಮುದವಾಗಿ ನುಡಿ | ರಾಗ ಸಂಮೋಹನ ||" ಹಾಡು ನುಡಿಸುವವರ ಮನದ ಭಾವನೆಗಳ ಜೊತೆ ಎಷ್ಟು ಸುಂದರವಾಗಿ ವೀಣೆಯ ತರಂಗಗಳು ಬೆಸೆದುಕೊಳ್ಳುತ್ತವೆನ್ನುವುದಕ್ಕೆ ಉತ್ತಮ ಉದಾಹರಣೆಯಾಗುತ್ತದೆ. ಒಮ್ಮೆ ಮೀಟಿದರೆ ಸಾಕು ನಾದಕ್ಕೆ ಮನಸೋಲುವಂತೆ ಮಾಡುವುದು ವೀಣೆ ಎಂಬ ಮಾತನ್ನು ಈ ಹಾಡಿನಲ್ಲಿ "ನಿನ್ನಯ ನಾದಕೆ ಮೈಮನ ಒಲಿಸಿ" ಎಂದೂ, ಭಾವನೆಗಳ ಹೊಸ ಪ್ರಪಂಚದ ಅನಾವರಣವಾಗುತ್ತದೆ ಎಂಬ ಮಾತನ್ನು "ಭಾವತರಂಗದಿ ಲೋಕವ ಮರೆಸಿ" ಎಂದೂ ಹೇಳಿದ್ದಾರೆ. ನಾದದೊಂದಿಗೆ ಮೈಮನ ತೇಲಿದಾಗಲೇ ನಡೆಯುವುದು ಸ್ವಚ್ಛ ಮನದಿಂದ ಭಗವಂತನ ಆರಾಧನೆ. ಸರಸ್ವತಿ ದೇವಿಯ ಆರಾಧನೆ ಸರಸ್ವತಿ ದೇವಿಯನ್ನು ವೀಣಾಪಾಣಿ ವಿಶ್ವ ಕಲ್ಯಾಣಿ, ಗಾಯನ, ನರ್ತನ ನಂದ ಪ್ರದಾಯಿನಿ ಎನ್ನುತ್ತಾ, ಅವಳದು ಎಂತಹ ಗಾಯನವೆಂದರೆ ಮೌನದ ಗಾಯನ, ಎಂತಹ ನರ್ತನವೆಂದರೆ ಕಾಣದ ನರ್ತನ, ಧ್ಯಾನದ ಕಿವಿ ಕಣ್ಗಳಿಗೆ ಅಮೃತದ ಸ್ವಾದನ ಎನ್ನುತ್ತಾರೆ ಡಿವಿಜಿಯವರು. ಸಂಗೀತ ಶಾಸ್ತ್ರದಲ್ಲಿ ಬರುವ ಆಹತ – ಅನಾಹತದ ನೆನಪು ಮಾಡಿಕೊಡುತ್ತದೆ - ಆಹತವೆಂದರೆ ಕೇಳಿಸಿಕೊಳ್ಳುವ ಶಬ್ದ, ಅನಾಹತವೆಂದರೆ ಕೇಳಲು ಸಾಧ್ಯವಿಲ್ಲದಂತಹ ಶಬ್ದ. ಇಂತಹ ಮೌನದ ಗಾಯನ, ಕಾಣದ ನರ್ತನವನ್ನು ಸರಸ್ವತಿ ದೇವಿ ಪರಮಾತ್ಮ ಚನ್ನಕೇಶವ ಸ್ವಾಮಿಗೆ ಅರ್ಪಿಸುತ್ತಾಳೆ. ಯಾರು ಸದಾ ಸರಸ್ವತಿ ದೇವಿಯ ಧ್ಯಾನದಲ್ಲಿ ಇರುವರೋ ಅವರಿಗೆ ಈ ಗಾಯನ ಮತ್ತು ನರ್ತನ ಅಮೃತದ ಸ್ವಾದನದಂತೆ ಇರುತ್ತದೆ ಎಂದು ಸುಂದರವಾಗಿ ವರ್ಣಿಸಿದ್ದಾರೆ ಡಿವಿಜಿಯವರು ತಮ್ಮ ಅಂತಃಪುರ ಗೀತೆ ಸಂಕಲನದಲ್ಲಿರುವ "ವೀಣಾಪಾಣಿ ವಿಶ್ವ ಕಲ್ಯಾಣಿ ಗಾಯನ ನರ್ತನ ನಂದ ಪ್ರದಾಯಿನಿ".. ಎಂಬ ರಚನೆಯಲ್ಲಿ. ಕವಿ ಶ್ರೀ ಸಾ ಶಿ ಮರುಳಯ್ಯ ಅವರ ಕವಿತೆಯಲ್ಲಿ ವೀಣೆ ಶೃಂಗಾರ ರಸದ ಪ್ರಚೋದನೆಗೆ ಕೂಡ ವೀಣೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸಿದ್ದಾರೆ ಕವಿ ಶ್ರೀ ಸಾ ಶಿ ಮರುಳಯ್ಯ. ಅವರು ತಮ್ಮ "ಶ್ರುತಿ ಸುಖ್ಹ ನಿನದೆ ಕಲರವ ವರದೇ.... ಓ ಗೆಳತಿ.. ಘೋಷವತಿ... || ಎಂಬ ರಚನೆಯಲ್ಲಿ ಉದಯನ ನುಡಿಸುತ್ತಿದ್ದನೆನ್ನಲಾದ ಘೋಷವತಿ ಎಂಬ ವೀಣೆಯನ್ನು ಕುರಿತು ಪ್ರಸ್ತಾಪಿಸಿದ್ದಾರೆ. ಉದಯನ ಹೃದಯ ಮೋದ ತರಂಗಿಣಿ | ವಾಸವದತ್ತಾ ಪ್ರಣಯ ಪ್ರಚೋದಿನಿ | ಕುಂಜರ ಭಂಜನಿ ಕುಮುದ ನಿರಂಜನಿ | ಮಂಗಳ ಪತಗಳ ಮಧುರ ಸುಭಾಷಿಣಿ || ಚಿಗುರಿನ ಬೆರಳಲಿ ತಂತಿಯ ಮೀಟಲು | ಷಡಜದ ಸವಿದನಿ ಜಿನುಗಿಸುವೆ | ಪಂಚಮದಂಚಿಗೆ ನಾದದ ಬ್ರಹ್ಮಕೆ | ವೀಣಾಮಣಿ ನೀ ಕುಣಿಯಿಸುವೆ || ಪ್ರದ್ಯೋತ್ತೋನ್ನತ ಪ್ರಥಮ ಪ್ರಭಾತಕೆ | ಧೃತಗತಿಯಲಿ ನೀ ಸಂಚಲಿಸಿ | ರಾಗಿಣಿ ಭಾಮಿನಿ ಪ್ರೇಮೋನ್ಮಾದಿನಿ | ಮಧುಕರ ಮಿಲನಕೆ ನೆರವಾಗೇ || ವೀಣೆಗೆ ಸಂಬಂಧಪಟ್ಟ ಇತರ ಕೆಲವು ವಾದ್ಯಗಳೆಂದರೆ ನುಡಿಸುವ ಉದಯನನ ಹೃದಯದ ತರಂಗಿಣಿ, ರಾಗಿಣಿ, ಭಾಮಿನಿ, ಪ್ರೇಮೋನ್ಮಾದಿನಿ ಎಂದೆಲ್ಲಾ ವರ್ಣಿಸುತ್ತಾ ಚಿಗುರಿನ ಬೆರಳುಗಳು ತಂತಿಯ ಮೀಟಿದಾಗ ಷಡ್ಜದ ಸವಿದನಿಯಿಂದ ಪಂಚಮದ ಪ್ರೇಮನಾದವನ್ನು ಹೊರಡಿಸುತ್ತಾ, ಹೃದಯದಲ್ಲಿ ಸುಖದ ಕಲ್ಪನೆಯ ತರಂಗಗಳನ್ನು ಮೀಟಿ ಎಚ್ಚರಿಸುತ್ತಾ ಮಧುಕರ ಮಿಲನಕ್ಕೆ ನೆರವಾಗೇ ಎಂದು ನುಡಿದಿದ್ದಾರೆ. ವೀಣೆಗೆ ಸಂಬಂಧಪಟ್ಟ ಇತರ ಕೆಲವು ವಾದ್ಯಗಳೆಂದರೆ; ರುದ್ರ ವೀಣೆ ವಿಚಿತ್ರ ವೀಣೆ ಚಿತ್ರ ವೀಣೆ ಮಹಾನಾಟಕ ವೀಣೆ ಕೆಲ ಪ್ರಸಿದ್ಧ ವೀಣೆ ವಾದಕರು ವೀಣೆ ಶೇಷಣ್ಣ ವೀಣೆ ಸುಬ್ಬಣ್ಣ ಎಸ್. ಬಾಲಚಂದರ್ ಮೈಸೂರು ದೊರೆಸ್ವಾಮಿ ಅಯ್ಯಂಗಾರ್ ಚಿಟ್ಟಿ ಬಾಬು ಆರ್.ಕೆ.ಸೂರ್ಯನಾರಾಯಣ್ ಇ. ಗಾಯತ್ರಿ ಬಾಹ್ಯ ಸಂಪರ್ಕಗಳು ವೀಣೆಯ ವಿವಿಧ ವಿನ್ಯಾಸಗಳ ಬಗ್ಗೆ ವೀಣೆಯ ಆಡಿಯೋ ಸ್ಯಾಂಪಲ್‍ಗಳು Google - Saraswati Veena Saraswati Veena Saraswati Veena in North Indian Khayal Style See Video of Beenkar Suvir Misra playing Saraswati Veena in Hindustani Khayal Style. ವರ್ಗ:ಸಂಗೀತ ವಾದ್ಯಗಳು ವರ್ಗ:ಕರ್ನಾಟಕ ಸಂಗೀತ
ವಿಚಿತ್ರ ವೀಣೆ
https://kn.wikipedia.org/wiki/ವಿಚಿತ್ರ_ವೀಣೆ
thumb|ವಿಚಿತ್ರ ವೀಣೆ ವಿಚಿತ್ರ ವೀಣೆ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಪದ್ಧತಿಗಳಲ್ಲಿ ಉಪಯೋಗಿಸಲ್ಪಡುವ ವಾದ್ಯಗಳಲ್ಲಿ ಒಂದು. ವಿಚಿತ್ರ ವೀಣೆಗೆ "ಗೊಟ್ಟುವಾದ್ಯ" ಎ೦ದೂ ಹೆಸರು. ಸಾಕಷ್ಟು ಇತ್ತೀಚೆಗಿನ ವಾದ್ಯವಾಗಿದ್ದು, ಹಳೆಯ ಹಿಂದುಸ್ತಾನಿ ವಾದ್ಯವಾದ "ಬೀನ್"ನ ಬೆಳೆದ ರೂಪ ಎನ್ನಬಹುದು. ವಿಚಿತ್ರವೀಣೆ ೧೯ ನೆಯ ಶತಮಾನದಿ೦ದ ಇತ್ತೀಚೆಗೆ ಬೆಳಕಿಗೆ ಬ೦ದ ವಾದ್ಯ. ವಿಚಿತ್ರವೀಣೆಯನ್ನು ಸಾಮಾನ್ಯವಾಗಿ ತೇಗದ ಮರದಿ೦ದ ತಯಾರಿಸಲಾಗುತ್ತದೆ. ನಾಲ್ಕು ಮುಖ್ಯ ತ೦ತಿಗಳು, ಶ್ರುತಿಗಾಗಿ ಮೂರು ತ೦ತಿಗಳು, ಹಾಗೂ ೧೧-೧೫ ಸಹಾಯಕ ತ೦ತಿಗಳನ್ನು ಹೊ೦ದಿರುತ್ತದೆ. ಗಮಕಗಳನ್ನು ನುಡಿಸಲು ಉತ್ತಮವಾದ ವಾದ್ಯವೆ೦ದು ವಿಚಿತ್ರವೀಣೆ ಪ್ರಸಿದ್ಧ. ವಿಚಿತ್ರವೀಣೆಯ ಸ೦ಗೀತ ಮಾನವ ಧ್ವನಿಗೆ ಬಹಳ ಸಮೀಪ ಎ೦ದೂ ಹೆಸರು. ಕೆಲ ಪ್ರಸಿದ್ಧ ವಿಚಿತ್ರವೀಣೆ ವಾದಕರು ರವಿ ಕಿರಣ್ ಪ೦ಡಿತ್ ಲಾಲ್‍ಮಣಿ ಮಿಶ್ರಾ ಬಾಹ್ಯ ಸ೦ಪರ್ಕಗಳು ವಿಚಿತ್ರ ವೀಣೆಯ ಬಗ್ಗೆ ಮಾಹಿತಿ ವರ್ಗ:ಸಂಗೀತ ವಾದ್ಯಗಳು ವರ್ಗ:ಕರ್ನಾಟಕ ಸಂಗೀತ ವರ್ಗ:ಹಿಂದುಸ್ತಾನಿ ಸಂಗೀತ fr:Vînâ
ವಿಚಿತ್ರವೀಣೆ
https://kn.wikipedia.org/wiki/ವಿಚಿತ್ರವೀಣೆ
REDIRECT ವಿಚಿತ್ರ ವೀಣೆ
ಮನಮೋಹನ್ ಸಿಂಗ್
https://kn.wikipedia.org/wiki/ಮನಮೋಹನ್_ಸಿಂಗ್
ಮನಮೋಹನ್ ಸಿಂಗ್ (ಜನನ: ಸೆಪ್ಟೆಂಬರ್ ೨೬, ೧೯೩೨ ಪಶ್ಚಿಮ ಪಂಜಾಬ್ ನ ಗಾಹ್ ನಲ್ಲಿ - ಈಗದು ಪಾಕಿಸ್ತಾನದಲ್ಲಿದೆ) ಭಾರತದ ೧೩ನೆಯ ಪ್ರಧಾನ ಮಂತ್ರಿಗಳು. ಕಾಂಗ್ರೆಸ್ ಪಕ್ಷದ ಸದಸ್ಯರಾದ ಮನಮೋಹನ್ ಸಿಂಗ್, ಮೇ ೨೨ ೨೦೦೪ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.http://www.pmindia.gov.in/en/former_pm/dr-manmohan-singh-2/ "ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ" ಎಂದು ಮನಮೋಹನ್ ಸಿಂಗ್ ಪ್ರಸಿದ್ಧರಾಗಿದ್ದಾರೆ. ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ 'ವಿತ್ತಮಂತ್ರಿ'ಯಾಗಿ ಮನಮೋಹನ್ ಸಿಂಗ್ ಪರಿಚಯಿಸಿದ ಆರ್ಥಿಕ ಸ್ವತಂತ್ರೀಕರಣ ನೀತಿಗಳು ಭಾರತದ ಆರ್ಥಿಕ ವ್ಯವಸ್ಥೆಯನ್ನು ದುಸ್ಥಿತಿಯಿಂದ ಸುಧಾರಿಸಿದವು ಎನ್ನಲಾಗುತ್ತದೆ. ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದವರು. ರಾಜಕೀಯದಲ್ಲಿ ಎಂದಿಗೂ ವಿವಾದ ಸೃಷ್ಟಿಸದ ಮನಮೋಹನ್ ಸಿಂಗ್ ೨೦೦೨ ರಲ್ಲಿ "ಅತ್ಯುತ್ತಮ ಸಂಸದ್ ಸದಸ್ಯ" ಪ್ರಶಸ್ತಿಯನ್ನೂ ಪಡೆದಿದ್ದರು. ವೃತ್ತಿ ಜೀವನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ (೧೯೫೦) ಪಂಜಾಬ್ ವಿಶ್ವವಿದ್ಯಾಲಯ ಅರ್ಥಶಾಸ್ತ್ರದ ಸೀನಿಯರ್ ಅಧ್ಯಾಪಕರು (೧೯೫೭-೫೭) ರೀಡರ್ (೧೯೫೯-೬೩) ಪ್ರಾಧ್ಯಾಪಕರು (೧೯೬೩-೬೫) ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (೧೯೬೨) ದೆಹಲಿ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರು (೧೯೬೯-೭೧) ಅರ್ಥಶಾಸ್ತ್ರ ಸಲಹೆಗಾರರು, ಅಂತರರಾಷ್ಟ್ರೀಯ ವ್ಯಾಪಾರ ಖಾತೆ (೧೯೭೧-೭೨) ಮುಖ್ಯ ಅರ್ಥಶಾಸ್ತ್ರ ಸಲಹೆಗಾರರು, ವಿತ್ತ ಖಾತೆ (೧೯೭೨) ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (೧೯೭೬) ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕ್ (೧೯೭೬-೮೦) ಕಾರ್ಯದರ್ಶಿಗಳು, ವಿತ್ತ ಖಾತೆ (೧೯೭೭-೮೦) ಗವರ್ನರ್, ಭಾರತೀಯ ರಿಸರ್ವ್ ಬ್ಯಾಂಕ್ (೧೯೮೨-೮೫) ಉಪಾಧ್ಯಕ್ಷರು, ಯೋಜನಾ ಸಮಿತಿ (Planning Commission of India) (೧೯೮೫-೮೭) ವಿತ್ತಮಂತ್ರಿ (ಜೂನ್ ೨೧, ೧೯೯೧ - ಮೇ ೧೫, ೧೯೯೬) ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಭಾರತದ ಪ್ರಧಾನ ಮಂತ್ರಿ (ಮೇ ೨೨, ೨೦೦೪ ರಿಂದ- ಮೇ ೨೬, ೨೦೧೪ ರವರೆಗೆ) ಬಾಹ್ಯ ಸಂಪರ್ಕಗಳು ಅಧಿಕೃತ ತಾಣ ಉಲ್ಲೇಖಗಳು ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:೧೯೩೨ ಜನನ ವರ್ಗ:ಭಾರತದ ಅರ್ಥಶಾಸ್ತ್ರಜ್ಞರು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ಸಂತೂರ್
https://kn.wikipedia.org/wiki/ಸಂತೂರ್
thumb|ಸಂತೂರ್ ಸಂತೂರ್ ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ವಾದ್ಯಗಳಲ್ಲಿ ಒಂದು. ಸ೦ತೂರ್ ಎ೦ಬ ಪದ ಪರ್ಷಿಯನ್ ಭಾಷೆಯಿ೦ದ ಬ೦ದದ್ದು. ಸ೦ಸ್ಕೃತದಲ್ಲಿ ಈ ವಾದ್ಯದ ಹೆಸರು "ಶತತ೦ತ್ರಿ ವೀಣೆ" - ನೂರು ತ೦ತಿಗಳ ವೀಣೆ ಎ೦ದರ್ಥ. ಏಷ್ಯಾ ಮತ್ತು ಯೂರೋಪ್ ಖ೦ಡಗಳ ಯಾತ್ರಿಕ ಸ೦ಗೀತಗಾರರಿ೦ದ ಹರಡಲ್ಪಟ್ಟದ್ದರಿ೦ದ ಸ೦ತೂರ್ ವಿವಿಧ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಕ೦ಡುಬರುತ್ತದೆ. ಇರಾನ್, ಇರಾಕ್, ಮತ್ತುಟರ್ಕಿ ದೇಶಗಳಲ್ಲಿ ೭೨ ತ೦ತಿಗಳನ್ನು ಹೊ೦ದಿರುವ "ಸ೦ತೂರ್" ಎ೦ದೇ ಹೆಸರುಳ್ಳ ವಾದ್ಯವು೦ಟು. ಚೀನಾ ದೇಶದಲ್ಲಿ "ಯಾ೦ಗ್-ಕಿನ್" ಎಂದು ಕರೆಯಲ್ಪಟ್ಟು ೪೫ ತ೦ತಿಗಳನ್ನು ಹೊ೦ದಿದ್ದರೆ, ಇದೇ ವಾದ್ಯದ ಇನ್ನೊ೦ದು ರೂಪ ಗ್ರೀಸ್ ನಲ್ಲಿ "ಸ೦ತೂರಿ" ಎ೦ಬ ಹೆಸರನ್ನು ಹೊಂದಿದೆ. ಹ೦ಗೆರಿ ಮತ್ತು ರೊಮೇನಿಯಾಗಳ "ಸಿ೦ಬಲಾನ್" ಸಹ ಇದೇ ರೀತಿಯ ವಾದ್ಯ. ಶಿರೋಲೇಖ ಭಾರತೀಯ ಸ೦ತೂರ್ ಭಾರತದಲ್ಲಿ ಕಾಶ್ಮೀರದ ಜಾನಪದ ವಾದ್ಯವಾಗಿದ್ದ ಸ೦ತೂರನ್ನು ಶಾಸ್ತ್ರೀಯ ಸ೦ಗೀತಕ್ಕೆ ಸೂಕ್ತವಾದ ವಾದ್ಯವಾಗಿ ಮಾರ್ಪಾಟುಗೊಳಿಸಿದವರಲ್ಲಿ ಪ್ರಮುಖರು ಪ೦ಡಿತ್ ಶಿವಕುಮಾರ್ ಶರ್ಮಾ. ಆಧುನಿಕ ಭಾರತೀಯ ಸ೦ತೂರ್ ಸಾಮಾನ್ಯವಾಗಿ ೮೭ ತ೦ತಿಗಳನ್ನು ಹೊ೦ದಿರುತ್ತದೆ. ಬೆಳವಣಿಗೆ ಕಾಶ್ಮೀರದ ಜಾನಪದ ಸ೦ತೂರ್ ಮೊದಲಿಗೆ ೧೦೦ ತ೦ತಿಗಳನ್ನು ಹೊ೦ದಿದ್ದು ಮುಖ್ಯವಾಗಿ ಸೂಫಿ ಸ೦ತರ ಸ೦ಗೀತಕ್ಕೆ ಉಪಯೋಗಿಸಲ್ಪಡುತ್ತಿತ್ತು. ಶಿವಕುಮಾರ್ ಶರ್ಮಾ ರವರ ತ೦ದೆ ಪ೦ಡಿತ್ ಉಮಾ ದತ್ ಶರ್ಮಾ ಶಾಸ್ತ್ರೀಯ ಸ೦ಗೀತಕ್ಕೆ ಇದರ ಸೂಕ್ತತೆಯನ್ನು ಮನಗ೦ಡರು. ನಂತರ ಶಿವಕುಮಾರ್ ಶರ್ಮಾ ಈ ವಾದ್ಯದ ರಚನೆಯಲ್ಲಿ ಸರಿಯಾದ ಬದಲಾವಣೆಗಳನ್ನು ತ೦ದರು. ಭಾರತೀಯ ಶಾಸ್ತ್ರೀಯ ಸ೦ಗೀತಕ್ಕೆ ಅತ್ಯಗತ್ಯವಾದ ಗಮಕಗಳನ್ನು ನುಡಿಸುವ ಸಾಮರ್ಥ್ಯ ಮೊದಲು ಈ ವಾದ್ಯದಲ್ಲಿ ಇರಲಿಲ್ಲ. ವಾದ್ಯದ ರಚನೆಯೊ೦ದಿಗೆ ಅದನ್ನು ನುಡಿಸುವ ತ೦ತ್ರಕ್ಕೂ ಸೂಕ್ತವಾದ ಬದಲಾವಣೆಗಳನ್ನು ಪರಿಚಯಿಸಿದ ಶಿವಕುಮಾರ್ ಶರ್ಮಾ ಗಮಕಗಳನ್ನು ನುಡಿಸುವ ಸಾಮರ್ಥ್ಯವನ್ನು ಈ ವಾದ್ಯಕ್ಕೆ ತ೦ದರು. ಇದನ್ನು ನುಡಿಸುವಾಗ ಉಪಯೋಗಿಸುವ "ಕಲಮ್" (ಮರದ ಸಣ್ಣ ಸುತ್ತಿಗೆಯ೦ಥ ಉಪಕರಣ) ಅನ್ನು ತ೦ತಿಗಳ ಮೇಲೆ ಸರಾಗವಾಗಿ ಸಾಗಿಸುವ ಮೂಲಕ ಗಮಕಗಳನ್ನು ನುಡಿಸಬಹುದು. ಸ೦ತೂರ್ ಶಾಸ್ತ್ರೀಯ ಕಛೇರಿಯಲ್ಲಿ ಮೊದಲ ಬಾರಿಗೆ ೧೯೫೫ ರಲ್ಲಿ ಉಪಯೋಗಿತವಾಯಿತು. ಪ್ರಸಿದ್ಧ ಸ೦ಗೀತಗಾರರು ಪ೦ಡಿತ್ ಶಿವಕುಮಾರ್ ಶರ್ಮಾ ರಾಹುಲ್ ಶರ್ಮಾ ತರುಣ್ ಭಟ್ಟಾಚಾರ್ಯ ಪಂಡಿತ್ ಭಜನ್ ಸೊಪೊರಿ ವರ್ಗ:ಸಂಗೀತ ವಾದ್ಯಗಳು ವರ್ಗ:ಹಿಂದುಸ್ತಾನಿ ಸಂಗೀತ
ಭಾರತದ ರಾಷ್ಟ್ರಪತಿ
https://kn.wikipedia.org/wiki/ಭಾರತದ_ರಾಷ್ಟ್ರಪತಿ
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ. ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ಸಂಕ್ಷಿಪ್ತ ಇತಿಹಾಸ ಆ15 ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್ಬ್ಯಾಟನ್). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು. ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.[Jai, Janak Raj (2003). Presidents of India, 1950–2003. Regency Publications. ISBN 978-81-87498-65-0] ಸಾಂವಿಧಾನಿಕ ಪಾತ್ರ thumb|Flag of the President of India ಭಾರತೀಯ ಸಂವಿಧಾನದ ೫೨ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು: ಭಾರತೀಯ ಪ್ರಜೆಯಾಗಿರಬೇಕು ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು ಅಧಿಕೃತವಾಗಿ ಕಾರ್ಯಾಂಗದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ ಪ್ರಧಾನಮಂತ್ರಿಗಳದ್ದು (ಸಂವಿಧಾನದ ೭೪ ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ ೫೩ ನೆಯ ಪರಿಚ್ಛೇದದಂತೆ ಸಂಸತ್ತಿಗೆ ಅಧ್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು. ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಡುವುದು. ರಾಷ್ಟ್ರಾಧ್ಯಕ್ಷರ ಚುನಾವಣೆ ವಿಶೇಷ ಲೇಖನ:ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ ಅಧ್ಯಕ್ಷರನ್ನು ಚುನಾಯಿಸುವ ವ್ಯಕ್ತಿಗಳೆಂದರೆ ಸಂಸತ್ತಿನ ಎರಡೂ ಸಭೆಗಳ ಲೋಕಸಭೆ ಮತ್ತು ರಾಜ್ಯಸಭೆಗಳ ಚುನಾಯಿತ ಸದಸ್ಯರು. ಪ್ರತಿ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರು ಪ್ರತಿ ಸದಸ್ಯರ ಕೈಯಲ್ಲಿರುವ ಮತಗಳ ಸಂಖ್ಯೆ ಅವರ ರಾಜ್ಯದ ಜನಸಂಖ್ಯೆ, ಆ ರಾಜ್ಯದಿಂದ ಇರುವ ಶಾಸಕರ ಸಂಖ್ಯೆ, ಮೊದಲಾದವುಗಳ ಅನುಗುಣವಾಗಿರುತ್ತದೆ. ಅಧಿಕಾರ ಸ್ವೀಕಾರ ವಿಧಿ ವಿಧಾನ thumb|ರಾಷ್ಟ್ರಪತಿಗಳ ಮೆರವಣಿಗೆ; ಗೌರವ ಸ್ವೀಕಾರ 25 Jul, 2017; ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ರಾಮನಾಥ ಕೋವಿಂದ್‌ ಅವರು ಬೆಳಿಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೋವಿಂದ್‌ ಅವರು ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರೊಂದಿಗೆ ರಾಷ್ಟ್ರಪತಿ ಭವನದಿಂದ ಮೆರವಣಿಗೆಯಲ್ಲಿ ಸಂಸತ್‌ ಭವನಕ್ಕೆ ಬಂದರು. ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯಾಹ್ನ 12.15ಕ್ಕೆ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸಿದ ರಾಮನಾಥ ಕೋವಿಂದ್‌ ಅವರಿಗೆ ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಹಸ್ತಲಾಘವ ಮಾಡಿ, ರಾಷ್ಟ್ರಪತಿ ಸ್ಥಾನ ಅಲಂಕರಿಸುವಂತೆ ಸ್ಥಾನ ಬದಲಾಯಿಸಿಕೊಂಡರು. ರಾಮನಾಥ ಕೋವಿಂದ್‌ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್‌ ಆವರಣದಲ್ಲಿ 21 ಸುತ್ತು ಗುಂಡು ಹಾರಿಸಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಮನಾಥ ಕೋವಿಂದ್‌ ಅವರು ಸಹಿ ಹಾಕಿದರು. ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಸ್ವಾಗತಿಸಿ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ಗೆ ಕರೆ ತರಲಾಯಿತು. ರಾಷ್ಟ್ರಗೀತೆ ಹಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಪ್ರಮಾಣವಚನ ಸ್ವೀಕಾರ;ಪ್ರಜಾವಾಣಿ ವಾರ್ತೆ;25 Jul, 2017 ಮಹಾಭಿಯೋಗ ಸಂವಿಧಾನದ ೬೧ ನೆಯ ಪರಿಚ್ಛೇದದಂತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನ ದಿಂದ ತೆಗೆಯುವ ಅಧಿಕಾರ ಸಂಸತ್ತಿಗುಂಟು. ವೇತನ ಚರ್ಚೆಪುಟ:ಭಾರತದ ರಾಷ್ಟ್ರಪತಿ + ರಾಷ್ಟ್ರಪತಿಗಳ ವೇತನ Date established ಸಂಬಳ ೨೦೦೯ರ Past ಜನೆವರಿ ೨೦,೨೦೦೯ the first } Sources: ರಾಷ್ಟ್ರಪತಿಗಳ ವೇತನ:ರೂ.500000/-ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಳ?ಪಿಟಿಐ;d: 26 ಅಕ್ಟೋಬರ್ 2016, ರಾಷ್ಟ್ರಪತಿ ಚುನಾವಣೆಯ ಹೆಜ್ಜೆಗುರುತುಗಳು ಬಾಬು ರಾಜೇಂದ್ರ ಪ್ರಸಾದ್ (1950-1962) 1950ರ ಚುನಾವಣೆಯಲ್ಲಿ ‘ತಾಂತ್ರಿಕ’ ಸೆಣಸಾಟವೇನೂ ಇರಲಿಲ್ಲವಾದರೂ, ಅಂದು ಉಪ ಪ್ರಧಾನಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಪ್ರಧಾನಿ ಜವಾಹರಲಾಲ್ ನೆಹರುರ ಪ್ರಭಾವ ತಗ್ಗಿಸಲು ಹೆಣೆದಿದ್ದ ಪೂರ್ವನಿಯೋಜಿತ ಕುಶಲ ಕಾರ್ಯಾಚರಣೆಗೆ ಇದು ಸಾಕ್ಷಿಯಾಯಿತೆನ್ನಬೇಕು. ಆಗ ಗವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಚಾರಿ (ರಾಜಾಜಿ) ಅವರೊಂದಿಗೆ ನಿರಾತಂಕವಾಗಿ ಕಾರ್ಯನಿರ್ವಹಿಸಬಹುದು ಎಂಬ ಗ್ರಹಿಕೆ ಹೊಂದಿದ್ದ ನೆಹರು ಅವರೇ ರಾಷ್ಟ್ರಪತಿಯಾಗಿ ಮುಂದುವರಿಯಲೆಂದು ಬಯಸಿದ್ದರು. ಇದು ಮಹಾತ್ಮ ಗಾಂಧೀಜಿಯವರ ಆಶಯವೂ ಆಗಿತ್ತು. ಆದರೆ ತಮ್ಮಂತೆಯೇ ಓರ್ವ ಬಲಪಂಥೀಯ ಸಂಪ್ರದಾಯವಾದಿಯಾದ ರಾಜೇಂದ್ರ ಪ್ರಸಾದರೆಡೆಗೆ ಪಟೇಲರ ಒಲವಿತ್ತು. ಪಟೇಲರಿಂದ ಹುರಿದುಂಬಿಸಲ್ಪಟ್ಟ ಪ್ರಸಾದರು, ರಾಜಗೋಪಾಲಾಚಾರಿಯವರ ಉಮೇದುವಾರಿಕೆಯನ್ನು ಸ್ವೀಕರಿಸಲೊಲ್ಲದ (ಕ್ವಿಟ್ ಇಂಡಿಯಾ ಆಂದೋಲನವನ್ನು ರಾಜಾಜಿ ವಿರೋಧಿಸಿದ್ದರು ಎಂಬುದೇ ಇದಕ್ಕೆ ಕಾರಣ) ಕಾಂಗ್ರೆಸ್ ಸಂಸದರ ಬೆಂಬಲವನ್ನು ಒಗ್ಗೂಡಿಸಿದರು. ಪಟೇಲರ ತಂತ್ರದ ಅರಿವಿರದಿದ್ದ ನೆಹರು 1949ರ ಅಕ್ಟೋಬರ್ 5ರಂದು, ರಾಜಾಜಿ ಹೆಸರನ್ನು ಮುಂಚೂಣಿಗೆ ತಂದು ಅಂಗೀಕಾರದ ಮುದ್ರೆ ದಕ್ಕಿಸಿಕೊಳ್ಳುವ ಉದ್ದೇಶದೊಂದಿಗೆ ಕಾಂಗ್ರೆಸ್ ಸಂಸದರ ಸಭೆ ಕರೆದರು. ಆದರೆ ಅವರ ಪ್ರಸ್ತಾವನೆಗೆ ದಕ್ಕಿದ್ದು ಪ್ರತಿಕೂಲ ಪ್ರತಿಕ್ರಿಯೆ! ನೆಹರು ಕೈಚೆಲ್ಲಬೇಕಾಯಿತು ಹಾಗೂ ರಾಜೇಂದ್ರ ಪ್ರಸಾದರ ಹೆಸರು ಅನುಮೋದನೆಗೊಂಡಿತು. ಈ ಬೆಳವಣಿಗೆಯಿಂದ ನೆಹರುರಿಗೆ ಇರಿಸುಮುರಿಸು ಆದರೂ, 1950ರ ಜನವರಿ 23ರಂದು ಸ್ವತಃ ಪ್ರಸಾದರ ಹೆಸರನ್ನು ಸೂಚಿಸಿದರು, ಪಟೇಲ್ ಇದನ್ನು ಅನುಮೋದಿಸಿದರು. ಚುನಾವಣೆಯ ಹಂಗಿಲ್ಲದೆ ಪ್ರಸಾದರು ಅವಿರೋಧವಾಗಿ ಆಯ್ಕೆಯಾದರು. ಆದರೆ ಮುಂದಿನ ಎರಡು ಸನ್ನಿವೇಶ ಅಥವಾ ಅವಧಿಗಳಲ್ಲಿ ಇದೇ ಪರಿಸ್ಥಿತಿ ಇರಲಿಲ್ಲ; 1952ರ ಚುನಾವಣೆಯಲ್ಲಿ, ಸಂವಿಧಾನ ರಚನಾಮಂಡಲಿಯ ಓರ್ವ ಸದಸ್ಯರಾಗಿದ್ದ ಕೆ.ಟಿ. ಷಾ ಅವರಿಂದ ಪ್ರಸಾದರು ಪೈಪೋಟಿ ಎದುರಿಸಬೇಕಾಗಿ ಬಂತು. ಆದರೆ ಷಾ ಮಡಿಲಿಗೆ ಬಿದ್ದಿದ್ದು 93,000 ಮತಗಳು. 5 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ ಪ್ರಸಾದರು ವಿಜಯಿಯಾದರು. 1957ರಲ್ಲಿ ನಡೆದ ‘ಸಾಂಕೇತಿಕ’ ಅಥವಾ ‘ನಾಮಮಾತ್ರದ’ ಚುನಾವಣೆಯಲ್ಲಿ 4.6 ಲಕ್ಷ ಮತಗಳನ್ನು ಗಳಿಸಿದ ರಾಜೇಂದ್ರ ಪ್ರಸಾದರು ಎದುರಾಳಿ ಹರಿ ರಾಮ್ (2,672 ಮತಗಳು) ಅವರನ್ನು ಸೋಲಿಸಿದರು. ಇದುವರೆಗೆ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದವರ ಪೈಕಿ ಇವರದ್ದೇ ಸುದೀರ್ಘ ಕಾಲಾವಧಿ (12 ವರ್ಷಗಳು) ಎಂಬುದು ಗಮನಿಸಬೇಕಾದ ಸಂಗತಿ. ಸರ್ವೆಪಲ್ಲಿ ರಾಧಾಕೃಷ್ಣನ್ (1962-1967) ಬಾಬು ರಾಜೇಂದ್ರ ಪ್ರಸಾದರ ತರುವಾಯ ಈ ಸ್ಥಾನ ಅಲಂಕರಿಸಿದ್ದು ಶ್ರೇಷ್ಠ ವಿದ್ವಾಂಸ ಎಂದೇ ವ್ಯಾಪಕ ಮೆಚ್ಚುಗೆ ಪಡೆದಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್. ಬರೋಬ್ಬರಿ 10 ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ, ಅದನ್ನು ರಾಷ್ಟ್ರಪತಿ ಚುನಾವಣೆಗೆ ಚಿಮ್ಮುಹಲಗೆಯಾಗಿಸಿಕೊಂಡ ಇವರು, ಐದೂವರೆ ಲಕ್ಷ ಮತಗಳನ್ನು ಗಳಿಸುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಹರಿ ರಾಮ್ (6,341 ಮತಗಳು) ಅವರನ್ನು ಸೋಲಿಸಿ, 1962ರಿಂದ 67ರವರೆಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದರು. ಝಾಕೀರ್ ಹುಸೇನ್ (1967-1969) ಇವರು ದೇಶದ ಮೊಟ್ಟಮೊದಲ ಮುಸ್ಲಿಂ ರಾಷ್ಟ್ರಪತಿಯೂ ಹೌದು. 1967ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಂಚ ಹಿನ್ನಡೆ (283 ಸ್ಥಾನಗಳು) ಅನುಭವಿಸಬೇಕಾಗಿ ಬಂದ ವಾತಾವರಣದ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತು ಎನ್ನಬೇಕು. ಈ ಚುನಾವಣೆಯಲ್ಲಿ, ವಿಪಕ್ಷಗಳು ಸೂಚಿಸಿದ್ದ ಅಭ್ಯರ್ಥಿಯಾಗಿದ್ದ ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೊಕಾ ಸುಬ್ಬರಾವ್ 3.64 ಲಕ್ಷ ಮತ ಗಳಿಸಿದರೆ, 4.71 ಲಕ್ಷ ಮತ ಗಿಟ್ಟಿಸಿಕೊಂಡ ಝಾಕೀರ್ ಹುಸೇನ್ ವಿಜಯಶಾಲಿಯಾದರು. ವಿ.ವಿ. ಗಿರಿ (1969-1974) ರಾಷ್ಟ್ರಪತಿ ಹುದ್ದೆಯಲ್ಲಿರುವಾಗಲೇ ನಿಧನರಾದ ಝಾಕೀರ್ ಹುಸೇನ್ ಸ್ಥಾನವನ್ನು ‘ಹಂಗಾಮಿಯಾಗಿ’ ತುಂಬಿದ ವಿ.ವಿ. ಗಿರಿ, ತರುವಾಯದಲ್ಲಿ ಚುನಾವಣೆಗೂ ಸ್ಪರ್ಧಿಸಿದ್ದು ಸ್ವಾರಸ್ಯಕರ ಬೆಳವಣಿಗೆ. ಅಷ್ಟು ಹೊತ್ತಿಗಾಗಲೇ ಕಾಂಗ್ರೆಸ್​ನಲ್ಲಿ ‘ಬಣ ರಾಜಕೀಯ’ ತೀವ್ರಗೊಂಡಿತ್ತು. ಪಕ್ಷಾಧ್ಯಕ್ಷ ಎಸ್. ನಿಜಲಿಂಗಪ್ಪ ನೇತೃತ್ವದ ‘ಸಿಂಡಿಕೇಟ್ ಬಣ’ ನೀಲಂ ಸಂಜೀವರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಆದರೆ ಇದಕ್ಕೆ ತಕರಾರೆತ್ತಿದ ಪ್ರಧಾನಿ ಇಂದಿರಾ ಗಾಂಧಿ, ದಲಿತ ನಾಯಕ ಜಗಜೀವನ್ ರಾಮ್ ಹೆಸರನ್ನು ಸೂಚಿಸಿದರು. ಈ ಚರ್ಚಾವಿಷಯವನ್ನು ಮತಕ್ಕೆ ಹಾಕಿದಾಗ, ರೆಡ್ಡಿ ಪರವಾಗಿ ನಾಲ್ಕು, ವಿರುದ್ಧವಾಗಿ ಎರಡು ಮತಗಳು ಬಂದವು. ಆಗ ಅಖಾಡ ಪ್ರವೇಶಿಸಿದವರೇ ವಿ.ವಿ. ಗಿರಿ! ಆಗ ಹಂಗಾಮಿ ರಾಷ್ಟ್ರಪತಿಯಾಗಿದ್ದ ಗಿರಿ, ಓರ್ವ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಪ್ರಕಟಿಸಿದರು. ಈ ಮಧ್ಯೆ, ಪಕ್ಷದ ಹಿರಿತಲೆಗಳಿಗೆ ಚಾಣಾಕ್ಷೆ ಇಂದಿರಾ ಹಮ್ಮಿಕೊಂಡಿದ್ದ ಕಾರ್ಯತಂತ್ರಗಳ ಸುಳಿವೂ ದಕ್ಕಿರಲಿಲ್ಲ. ಆದರೆ ಜಾಗರೂಕ ಸ್ವಭಾವದ ನಿಜಲಿಂಗಪ್ಪನವರು, ಮಾಜಿ ಹಣಕಾಸು ಸಚಿವ ಸಿ.ಡಿ. ದೇಶಮುಖ್​ರನ್ನು ಕಣಕ್ಕಿಳಿಸಿದ್ದ ಸ್ವತಂತ್ರ ಪಾರ್ಟಿ ಮತ್ತು ಜನಸಂಘ ಪಕ್ಷಗಳನ್ನು ಎಡತಾಕಿ, ಎರಡನೇ ಆದ್ಯತೆಯ ಮತಗಳನ್ನು ರೆಡ್ಡಿಯವರಿಗೆ ನೀಡುವಂತೆ ಕೋರಿದರು. ಮತದಾನಕ್ಕೆ ಕೆಲ ದಿನಗಳಿರುವಾಗಲೇ, ‘ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ’ ಇಂದಿರಾ ಕಾಂಗ್ರೆಸ್ ನಾಯಕರಿಗೆ ಕರೆಯಿತ್ತರು. ಪೈಪೋಟಿ ಅದೆಷ್ಟು ನಿಕಟವಾಗಿತ್ತೆಂದರೆ, ಮೊದಲ ಸುತ್ತಿನಲ್ಲಿ ಅಗತ್ಯವಿದ್ದ ‘ಕಟ್-ಆಫ್’ ಪ್ರಮಾಣದ ಮತಗಳು ಯಾರಿಗೂ ದಕ್ಕಿರಲಿಲ್ಲ. ಎರಡನೇ ಆದ್ಯತೆಯ ಮತಗಳ ಎಣಿಕೆಯ ನಂತರವಷ್ಟೇ ವಿ.ವಿ. ಗಿರಿ ಗೆಲುವಿನ ನಗೆ ಬೀರಿದರು. ಅಗತ್ಯವಿದ್ದ 4,18,169 ಮತಗಳಿಗೆ ಪ್ರತಿಯಾಗಿ ಗಿರಿಯವರಿಗೆ ದಕ್ಕಿದ್ದು ಬರೋಬ್ಬರಿ 4.20 ಲಕ್ಷ ಮತಗಳು. ರೆಡ್ಡಿ ಮತ್ತು ದೇಶಮುಖ್ ಕ್ರಮವಾಗಿ 4.05 ಲಕ್ಷ ಮತ್ತು 1.13 ಲಕ್ಷ ಮತಗಳನ್ನು ಗಳಿಸಿದರು. ಕಾಂಗ್ರೆಸ್​ನಲ್ಲಿ ಒಡಕು ಉಂಟಾಗುವುದಕ್ಕೆ ಈ ಚುನಾವಣೆ ಪೀಠಿಕೆ ಹಾಕಿತೆನ್ನಬೇಕು. ಫಕ್ರುದ್ದೀನ್ ಅಲಿ ಅಹ್ಮದ್ (1974-1977) ವಿ.ವಿ. ಗಿರಿ ಅಧಿಕಾರಾವಧಿಯ ನಂತರ ರಾಷ್ಟ್ರಪತಿ ಗಾದಿಗೇರಿದ ಇವರು, ಝಾಕೀರ್ ಹುಸೇನರ ನಂತರ ಈ ಉನ್ನತ ಹುದ್ದೆಗೇರಿದ ಎರಡನೇ ಮುಸ್ಲಿಂ ನಾಯಕ. ಅಷ್ಟು ಹೊತ್ತಿಗಾಗಲೇ, ಕಾಂಗ್ರೆಸ್ ಪಕ್ಷದ ನೆಲೆಗಟ್ಟು ಮತ್ತು ಬಲದಲ್ಲಿ ಗಣನೀಯ ಸುಧಾರಣೆಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಇಂದಿರಾರ ಸಮರ್ಥ ನೇತೃತ್ವ. 7.66 ಲಕ್ಷ ಮತಗಳೊಡನೆ ಫಕ್ರುದ್ದೀನ್ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ತ್ರಿದಿಬ್ ಚೌಧುರಿ 1.89 ಲಕ್ಷ ಮತಗಳಿಗೆ ತೃಪ್ತರಾಗಬೇಕಾಯಿತು. ಇಂದಿರಾ ಗಾಂಧಿಯವರ ಇಶಾರೆಯಂತೆ ತುರ್ತು ಪರಿಸ್ಥಿತಿಯ ಘೊಷಣೆ ಮಾಡಿದ ರಾಷ್ಟ್ರಪತಿಯೂ ಇವರೇ. ಝಾಕೀರ್ ಹುಸೇನರಂತೆ ಇವರು ಕೂಡ ಅಧಿಕಾರದಲ್ಲಿರುವಾಗಲೇ ಅಸುನೀಗಿದರು. ನೀಲಂ ಸಂಜೀವರೆಡ್ಡಿ (1977-1982) ರಾಷ್ಟ್ರಪತಿಯಾಗುವ ರೆಡ್ಡಿಯವರ ಕನಸಿಗೆ ಅಥವಾ ಸಂಭಾವ್ಯತೆಗೆ ಇಂದಿರಾ ಗಾಂಧಿಯವರು 1969ರಲ್ಲೇ ತಣ್ಣೀರೆರಚಿದ್ದರು. ಇದನ್ನೊಂದು ಅಸ್ತ್ರವಾಗಿಸಿಕೊಂಡ ಮತ್ತು ಅಷ್ಟು ಹೊತ್ತಿಗಾಗಲೇ ಅಧಿಕಾರ ಗದ್ದುಗೆಯಲ್ಲಿದ್ದ ಇಂದಿರಾ ಎದುರಾಳಿಗಳು, 1977ರ ರಾಷ್ಟ್ರಪತಿ ಚುನಾವಣಾ ಕಣಕ್ಕೆ ರೆಡ್ಡಿಯವರನ್ನು ಇಳಿಸುವ ಮೂಲಕ ಪ್ರತೀಕಾರಕ್ಕೆ ಮುಂದಾದರು. ಖ್ಯಾತ ನರ್ತಕಿ ರುಕ್ಮಿಣಿ ದೇವಿ ಅರುಂಡೇಲ್​ರನ್ನು ಕಣಕ್ಕಿಳಿಸಬೇಕೆಂಬುದು ಪ್ರಧಾನಿ ಮೊರಾರ್ಜಿ ದೇಸಾಯಿಯವರ ಬಯಕೆಯಾಗಿತ್ತು. ಆದರೆ ಆಕೆ ನಿರಾಕರಿಸಿದ ಕಾರಣ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು. ಜೈಲ್ ಸಿಂಗ್ (1982-1987) 1982ರ ರಾಷ್ಟ್ರಪತಿ ಚುನಾವಣೆ ವೇಳೆಗೆ ಇಂದಿರಾ ಗಾಂಧಿ ಮತ್ತೊಮ್ಮೆ ಗದ್ದುಗೆಗೇರಿ ಗರಿಗೆದರಿದ್ದರು. ಇಂದಿರಾ ಕೃಪಾಪೋಷಿತ ಜೈಲ್ ಸಿಂಗ್ 7.54 ಲಕ್ಷ ಮತ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಬುಟ್ಟಿಗೆ 2.83 ಲಕ್ಷ ಮತಗಳು ಬಿದ್ದವು. ರಾಷ್ಟ್ರಪತಿಯಾಗಿದ್ದಾಗಿನ ಅವಧಿಯಲ್ಲಿ ಜೈಲ್ ಸಿಂಗ್, ‘ನನ್ನ ನಾಯಕಿ ಹೇಳಿದರೆ, ಕಸಪೊರಕೆ ಎತ್ತಿಕೊಂಡು ಕಸ ಹೊಡೆಯಲೂ ನಾನು ಸಿದ್ಧ’ ಎಂಬುದಾಗಿ ವಿವೇಚನಾರಹಿತವಾಗಿ ಆಡಿದ ಮಾತು, ‘ರಾಷ್ಟ್ರಪತಿ ಎಂದರೆ ರಬ್ಬರ್​ಸ್ಟಾಂಪ್​ನಂತೆ ಕಾರ್ಯನಿರ್ವಹಿಸುವವರು’ ಎಂಬ ಟೀಕಾಕಾರರ ಮಾತಿಗೆ ಪುಷ್ಟಿಯೊದಗಿಸಿತು! ಆದರೆ ಇಂದಿರಾ ಮನದಲ್ಲಿ ಗಿರಕಿ ಹೊಡೆಯುತ್ತಿದ್ದ ಚಿಂತನೆಗಳೇ ಬೇರೆ. ಜೈಲ್ ಸಿಂಗ್ ಆಯ್ಕೆಯಿಂದಾಗಿ ಸಿಖ್ ಸಮುದಾಯ ಸಂತುಷ್ಟಗೊಳ್ಳುತ್ತದೆ ಮತ್ತು ಖಲಿಸ್ತಾನ್ ಆಂದೋಲನವನ್ನು ತಹಬಂದಿಗೆ ತರಲು ಈ ನಡೆ ತಮಗೆ ನೆರವಾಗುತ್ತದೆ ಎಂಬುದು ಇಂದಿರಾ ಎಣಿಕೆಯಾಗಿತ್ತು; ಆದರೆ ಆದದ್ದೇ ಬೇರೆ. ಖಲಿಸ್ತಾನ್ ಆಂದೋಲನ ತೀವ್ರಗೊಂಡು, ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೂ ಆಸ್ಪದ ಕಲ್ಪಿಸಿತು, ಸಿಖ್ ಅಂಗರಕ್ಷಕರಿಂದಲೇ ಇಂದಿರಾ ಹತರಾಗುವಂತಾಯಿತು. ಆರ್. ವೆಂಕಟರಾಮನ್ (1987-1992) ಇಂದಿರಾ ಗಾಂಧಿ ಮರಣಾನಂತರ ಪ್ರಧಾನಿ ಗದ್ದುಗೆಗೇರಿದ ಅವರ ಮಗ ರಾಜೀವ್ ಗಾಂಧಿ, 1987ರ ರಾಷ್ಟ್ರಪತಿ ಚುನಾವಣೆ ವೇಳೆ ಉಪರಾಷ್ಟ್ರಪತಿ ಆರ್. ವೆಂಕಟರಾಮನ್​ರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸೂಚಿಸಿದರು. ಇಂದಿರಾ ಹತ್ಯೆಯ ತರುವಾಯದ ಅನುಕಂಪದ ಅಲೆಯಲ್ಲಿ ದಕ್ಕಿದ ಭರಪೂರ ಸಂಸದೀಯ ಬಹುಮತದ ಬಲದಿಂದಾಗಿ ವೆಂಕಟರಾಮನ್​ರಿಗೆ 7.40 ಲಕ್ಷ ಮತಗಳನ್ನು ಗಳಿಸಿಕೊಡುವಲ್ಲಿ ರಾಜೀವ್ ಯಶಸ್ವಿಯಾದರು. ವಿಪಕ್ಷಗಳ ಅಭ್ಯರ್ಥಿ ಹಾಗೂ ಮಾಜಿ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್​ಗೆ ದಕ್ಕಿದ್ದು 2.82 ಲಕ್ಷ ಮತಗಳು. ಶಂಕರ ದಯಾಳ್ ಶರ್ಮಾ (1992-1997) ವೆಂಕಟರಾಮನ್ ನಂತರ ರಾಷ್ಟ್ರಪತಿ ಗದ್ದುಗೆಗೇರಿದವರು ನೆಹರು-ಗಾಂಧಿ ಕುಟುಂಬದ ನಿಷ್ಠಾವಂತ ಅನುಯಾಯಿಯಾಗಿದ್ದ ಶಂಕರ ದಯಾಳ್ ಶರ್ವ. ಚುನಾವಣೆಯಲ್ಲಿ ಇವರಿಗೆ ಎದುರಾಳಿಯಾಗಿದ್ದವರು ಅನುಭವಿ ಸಂಸದ ಜಾರ್ಜ್ ಗಿಲ್ಬರ್ಟ್ ಸ್ವೆಲ್. ಶರ್ಮಾ ಮತ್ತು ಸ್ವೆಲ್ ಮಡಿಲಿಗೆ ಕ್ರಮವಾಗಿ ಬಿದ್ದ ಮತಗಳು- 6.76 ಲಕ್ಷ ಮತ್ತು 3.46 ಲಕ್ಷ. ಕೆ.ಆರ್. ನಾರಾಯಣನ್(1997-2002) ಅದು ಕೇಂದ್ರದಲ್ಲಿ ಜನತಾದಳದ ಇಂದ್ರಕುಮಾರ್ ಗುಜ್ರಾಲ್ ನೇತೃತ್ವದ ಅಲ್ಪಮತದ ಸರ್ಕಾರವಿದ್ದ ಕಾಲಾವಧಿ. ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ದಲಿತ ಸಮುದಾಯದ ಕೆ.ಆರ್. ನಾರಾಯಣ್​ರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಇವರಿಗೆ ಎದುರಾಗಿ ಸೆಡ್ಡು ಹೊಡೆದವರು ಟಿ.ಎನ್. ಶೇಷನ್; ದೇಶದ ಚುನಾವಣಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಚೊಕ್ಕಗೊಳಿಸಲು ಮಾಡಿದ ದೃಢಯತ್ನಗಳಿಂದಾಗಿ ಜನಮೆಚ್ಚುಗೆ ಗಳಿಸಿ, ನಿವೃತ್ತರೂ ಆಗಿದ್ದ ಶೇಷನ್ ಅಖಾಡಕ್ಕಿಳಿದಾಗ ಸಹಜವಾಗಿಯೇ ಹಲವರ ಹುಬ್ಬೇರಿದವು. ಶೇಷನ್​ಗೆ ಒತ್ತಾಸೆಯಾಗಿದ್ದ ಶಿವಸೇನಾ ಪಕ್ಷದ ಬೆಂಬಲ ಮತ್ತು ಮುಖ್ಯ ಚುನಾವಣಾಧಿಕಾರಿಯಾಗಿ ಅವರಿಗೆ ಅಷ್ಟು ಹೊತ್ತಿಗಾಗಲೇ ದಕ್ಕಿದ್ದ ಜನಪ್ರಿಯತೆ ಮತಗಳಾಗಿ ಪರಿವರ್ತನೆಯಾಗುವುದೇ ಎಂಬ ಕುತೂಹಲ ಹರಳುಗಟ್ಟಿತ್ತು. ಆದರೆ 9.56 ಲಕ್ಷ ಮತಗಳನ್ನು ಗಳಿಸುವ ಮೂಲಕ ನಾರಾಯಣನ್ ಗೆಲುವಿನ ನಗೆ ಬೀರಿದರು. ಮಣಿದ ಶೇಷನ್​ಗೆ ದಕ್ಕಿದ್ದು 50,631 ಮತಗಳು ಮಾತ್ರ. ಡಾ. ಎಪಿಜೆ ಅಬ್ದುಲ್ ಕಲಾಂ(2002-2007) ಅದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಒಕ್ಕೂಟವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಲಾವಧಿ. ಹಲವು ಪಕ್ಷಗಳ ಮೈತ್ರಿ ನೆಚ್ಚಿದ್ದ ‘ಖಿಚಡಿ ಸರ್ಕಾರ’ ಅವರದಾಗಿತ್ತು. 2ನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಯುವ ಕನಸು ಕಾಣುತ್ತಿದ್ದರು ಕೆ.ಆರ್. ನಾರಾಯಣನ್. ಕಾಂಗ್ರೆಸ್, ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲ ಅವರಿಗಿದ್ದುದೇ ಇದಕ್ಕೆ ಕಾರಣ. ಆದರೆ ವಾಜಪೇಯಿ ಇದಕ್ಕೊಪ್ಪಲಿಲ್ಲ. ಆಗ, ಉಪರಾಷ್ಟ್ರಪತಿ ಕೃಷ್ಣಕಾಂತ ಹೆಸರು ಚಲಾವಣೆಗೆ ಬಂದಿತಾದರೂ, ಶಿವಸೇನೆ ಮತ್ತು ಕೆಲ ಬಿಜೆಪಿ ನಾಯಕರು ಪ್ರಸ್ತಾಪಿಸಿದ್ದು ಮಾಜಿ ರಾಜ್ಯಪಾಲ ಪಿ.ಸಿ. ಅಲೆಕ್ಸಾಂಡರ್ ಹೆಸರನ್ನು. ಆದರೆ ವಿಪಕ್ಷಗಳು ಇದನ್ನು ತಿರಸ್ಕರಿಸಿದವು. ಆಗ ವಾಜಪೇಯಿ ‘ಕ್ಷಿಪಣಿ ವಿಜ್ಞಾನಿ’ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೆಸರನ್ನು ಸೂಚಿಸಿದರು. ಈ ಪ್ರಸ್ತಾವಕ್ಕೆ ಸಮಾಜವಾದಿ ಪಕ್ಷ, ತೆಲುಗು ದೇಶಂ, ಎಐಎಡಿಎಂಕೆ ಮತ್ತು ಬಿಎಸ್​ಪಿ ಹಸಿರು ನಿಶಾನೆ ತೋರಿದವು. ತರುವಾಯದಲ್ಲಿ ಕಾಂಗ್ರೆಸ್ ಕೂಡ ಸಮ್ಮತಿಸಿತು. ಎಡಪಕ್ಷಗಳು ಲಕ್ಷ್ಮಿ ಸೆಹಗಲ್​ರನ್ನು ಕಣಕ್ಕಿಳಿಸಿದರೂ, ಅವರಿಗೆ ದಕ್ಕಿದ್ದು 1.07 ಲಕ್ಷ ಮತಗಳು. 9.23 ಲಕ್ಷ ಮತಗಳನ್ನು ದಕ್ಕಿಸಿಕೊಂಡ ಕಲಾಂ ವಿಜಯದ ನಗೆ ಬೀರಿದರು. ಪ್ರತಿಭಾ ಪಾಟೀಲ್ (2007-2012) ಅಬ್ದುಲ್ ಕಲಾಂರನ್ನು ಎರಡನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಸುವ ಇರಾದೆ ಬಿಜೆಪಿಯದಾಗಿತ್ತು; ಆದರೆ ಇತರ ಪಕ್ಷಗಳಿಂದ ಯಾವುದೇ ಬೆಂಬಲ ದಕ್ಕುವ ಸಾಧ್ಯತೆ ಕಂಡುಬರಲಿಲ್ಲ. ಹೀಗಾಗಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್​ರನ್ನು ಕಣಕ್ಕಿಳಿಸುವುದು ಅನಿವಾರ್ಯವಾಯಿತು. ಕಾಂಗ್ರೆಸ್, ಮೈತ್ರಿಸರ್ಕಾರದ ಸಹಭಾಗಿಗಳು ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿದ ಪ್ರತಿಭಾ 6.38 ಲಕ್ಷ ಮತಗಳನ್ನು ಗಳಿಸಿ ಚುನಾಯಿತರಾಗಿ, ಮೊಟ್ಟಮೊದಲ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು. ಕೊಲೆ ಪ್ರಕರಣವೊಂದರಲ್ಲಿ ತಮ್ಮ ಸೋದರನನ್ನು ರಕ್ಷಿಸಲು ಪ್ರತಿಭಾ ಯತ್ನಿಸಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳು ಈ ಚುನಾವಣಾ ಸಂದರ್ಭದಲ್ಲಿ ಕೇಳಿ ಬಂದರೂ 3ನೇ ಎರಡರಷ್ಟು ಮತ ದಕ್ಕಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಶೇಖಾವತ್​ರಿಗೆ ದಕ್ಕಿದ್ದು 3.31 ಲಕ್ಷ ಮತಗಳು ಮಾತ್ರ. ಪ್ರಣಬ್ ಮುಖರ್ಜಿ (2012-2017) 2012ರ ರಾಷ್ಟ್ರಪತಿ ಚುನಾವಣಾ ಸಂದರ್ಭದಲ್ಲಿ ಪಕ್ಷದ ಆಂತರಿಕ ನೆಲೆಗಟ್ಟಿನಲ್ಲಿ ಪ್ರಣಬ್ ಮುಖರ್ಜಿ ಅದೆಷ್ಟು ಪರಿಣಾಮಕಾರಿಯಾಗಿ ತಮ್ಮ ಕುರಿತಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆಂದರೆ, ಅವರನ್ನು ತಡೆಯುವವರು ಯಾರೂ ಇರಲಿಲ್ಲ. ಅಭ್ಯರ್ಥಿಯಾಗಿ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಘೋಷಿಸುತ್ತಿದ್ದಂತೆ, ಎನ್​ಡಿಎ ಸಹಯೋಗಿಗಳಾದ ಜೆಡಿ (ಯು) ಮತ್ತು ಶಿವಸೇನೆ ಅವರನ್ನು ಬೆಂಬಲಿಸಿದವು. ಬಿಜೆಪಿ ಬೆಂಬಲಿಸಿದ್ದು ಪಿ.ಎ. ಸಂಗ್ಮಾರನ್ನು. 7.14 ಲಕ್ಷ ಮತಗಳೊಂದಿಗೆ ಪ್ರಣಬ್ ಗೆದ್ದರೆ, 3.16 ಲಕ್ಷ ಮತಗಳಿಗೆ ಸಂಗ್ಮಾ ತೃಪ್ತರಾಗಬೇಕಾಯಿತು. ನೋಡಿ ಭಾರತದ ರಾಷ್ಟ್ರಪತಿಗಳ ಪಟ್ಟಿ ಬಾಹ್ಯ ಸಂಪರ್ಕಗಳು ಭಾರತದ ಅಧ್ಯಕ್ಷರು (ಅಧಿಕೃತ ತಾಣ) ವ್ಯಕ್ತಿಚಿತ್ರ: ಮುಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಲ್ಲೇಖಗಳು ಅಧ್ಯಕ್ಷರು * nl:President van India#Lijst van presidenten van India
ಶ್ರೀನಿವಾಸ ರಾಮಾನುಜನ್
https://kn.wikipedia.org/wiki/ಶ್ರೀನಿವಾಸ_ರಾಮಾನುಜನ್
ಶ್ರೀನಿವಾಸ ರಾಮಾನುಜನ್ (ಪೂರ್ಣ ಹೆಸರು - ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್)(ಡಿಸೆಂಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) ವಿಶ್ವದ ಶ್ರೇಷ್ಠ ಭಾರತೀಯ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ. “ಪ್ರತಿ ಧನಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು” ಎಂಬುದು ಲೋಕದಲ್ಲಿ ವಿಖ್ಯಾತ ನುಡಿ. ಅವರಿಗೆ “ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವ’ ಅಪೂರ್ವ ಸಾಮರ್ಥ್ಯವಿತ್ತು. ಜೇಮ್ಸ್ ಆರ್. ನ್ಯೂಮನವರ "ದಿ ವರ್ಲ್ಡ್ ಆಫ್ ಮ್ಯಾಥಮೆಟಿಕ್ಸ್" ಎಂಬ ನಾಲ್ಕು ಸಂಪುಟಗಳ ಚಿರಸ್ಥಾಯಿ ಉದ್ಗ್ರಂಥದಲ್ಲಿ ರಾಮಾನುಜನ್ನರ ಕುರಿತು ಈ ಉಲ್ಲೇಖವಿದೆ. ಶುದ್ಧ ಗಣಿತದ ಬತ್ತಳಿಕೆಯಲ್ಲಿ ವಿಶ್ಲೇಷಣಾ ಆಯುಧಗಳ ಭಾರೀ ಸಂಗ್ರಹವಿದೆ ಮತ್ತು ಎಲ್ಲ ಸರಳತೆ ಗತಕಾಲದ ವಿಚಾರವೆಂದು ತಿಳಿಯುತ್ತಿದ್ದ ಆ ದಿನಗಳಲ್ಲಿ “ಈ ಎಲ್ಲ ಪರಿಕರಗಳ ನೆರವಿಲ್ಲದೆಯೇ ಹೊಸ ವಿಚಾರಗಳನ್ನು ಮಂಡಿಸಬಲ್ಲ ಒಬ್ಬ ಜೀನಿಯಸ್ ಉದಯಿಸಿದರು”. ನ್ಯೂಮನರು ಮುಂದುವರಿಸಿ, “ಶ್ರೀನಿವಾಸ ರಾಮಾನುಜನ್ನರ ಜೀವನ ಒಂದು ಯುಗಾರಂಭವನ್ನು ಸೂಚಿಸುತ್ತದೆ. ಭಾರತದಲ್ಲಿ ವಿವಿಧ ಕಾಲ ಘಟ್ಟಗಳಲ್ಲಿ ಉನ್ನತ ಪ್ರತಿಭೆಯ ಗಣಿತಜ್ಞರಿದ್ದರು. ಕಾಲಾನುಕ್ರಮದಲ್ಲಿ ಅಂಥವರನ್ನು ಕೊನೆಯ ಗ್ರೀಕ್ ಕಾಲದವರೆಗೆ ಗುರುತಿಸಬಹುದು. ಆದರೆ ಉತ್ತುಂಗತೆಯ ನಿರಪೇಕ್ಷಮಾನದಿಂದ ಅಳೆದಾಗ ಪೌರ್ವಾತ್ಯ ಗಣಿತಜ್ಞರಲ್ಲೆಲ್ಲಾ, ರಾಮಾನುಜನ್ನರ ಮೇಧಾವಿ ಅತ್ಯುಚ್ಛವೆಂದೆನಿಸುತ್ತದೆ” ಎಂದು ಹೇಳಿದ್ದಾರೆ. ಶ್ರೀನಿವಾಸ ರಾಮಾನುಜನ್ನರ ಬಗ್ಗೆ ಬರೆಯುತ್ತ ಜವಾಹರಲಾಲ್ ನೆಹರೂರವರು ತಮ್ಮ "ಡಿಸ್ಕವರಿ ಆಫ್ ಇಂಡಿಯಾ"ದಲ್ಲಿ ಹೀಗೆ ನುಡಿಯುತ್ತಾರೆ: “ಭಾರತದಲ್ಲಿ ಗಣಿತದ ವಿಚಾರದಲ್ಲಿ, ಇತ್ತೀಚಿಗಿನ ಒಬ್ಬರು ಅಸಾಧಾರಣ ವ್ಯಕ್ತಿಯನ್ನು ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ. ಅವರೇ ಶ್ರೀನಿವಾಸ ರಾಮಾನುಜನ್. ದಕ್ಷಿಣ ಭಾರತದ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಸೂಕ್ತ ವಿದ್ಯಾಭ್ಯಾಸಕ್ಕೆ ಅವಕಾಶಗಳಿಲ್ಲದೆ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಒಬ್ಬ ಕಾರಕೂನರಾದರು. ಆದರೆ ಅವರು ಸಹಜ ಪ್ರತಿಭೆಯ ಯಾವುದೋ ತಡೆಯಲಾಗದ ಲಕ್ಷಣಗಳಿಂದ ಬುದ್ಬುದಿಸುತ್ತಿದ್ದರು; ಸಂಖ್ಯೆ ಹಾಗೂ ಸಮೀಕರಣಗಳೊಂದಿಗೆ ಅವರು ಬಿಡುವಿನ ಸಮಯದಲ್ಲಿ ಆಟವಾಡುತ್ತಿದ್ದರು. ಮುಂದೆ ಅವರು ಕೇಂಬ್ರಿಜ್ಗೆ ತೆರಳಿ ಅಲ್ಲಿ ಬಹಳ ಅಲ್ಪಾವಧಿಯಲ್ಲೇ ಮೂಲಭೂತ ಮೌಲ್ಯದ ಹಾಗೂ ವಿಸ್ಮಯಕರ ಸ್ವಂತಿಕೆಯ ಕಾರ್ಯವೆಸಗಿದರು. ಇಂಗ್ಲೆಂಡಿನ ರಾಯಲ್ ಸೊಸೈಟಿ ತನ್ನ ನಿಯಮಗಳನ್ನು ಭಾಗಶಃ ಸಡಿಲಿಸಿ ಅವರನ್ನು ಜೊತೆಗಾರನಾಗಿ ಆಯ್ಕೆ ಮಾಡಿತು. ಪ್ರೊಫೆಸರ್ ಜೂಲಿಯನ್ ಹಕ್ಸ್ಲಿಯವರು, ನಾನು ತಿಳಿದಿರುವಂತೆ ಎಲ್ಲೋ ಒಂದೆಡೆ ರಾಮಾನುಜರನ್ನು ಈ ಶತಮಾನದ ಶ್ರೇಷ್ಠತಮ ಗಣಿತಜ್ಞ" ಎಂದಿದ್ದಾರೆ. ಬಾಲ್ಯ ಈ ಮಹಾನ್ ಮೇಧಾವಿ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಯ್ಯಂಗಾರ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು ೧೮೮೭ರ ಡಿಸೆಂಬರ್ ೨೨ರಂದು ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು. ರಾಮಾನುಜನ್ನರ ತಂದೆ ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು. ತಾಯಿ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ. ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ತನ್ನ ತಾಯಿಯಿಂದ ದೇವರನಾಮ ಮತ್ತು ಭಕ್ತಿಗೀತೆಗಳನ್ನೂ ಕಲಿತ ಅವರು ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ತಳೆದರು. ಅವರು ಬೆಳೆದಂತೆ ಧಾರ್ಮಿಕ ಉದ್ಗ್ರಂಥಗಳನ್ನು ಮತ್ತು ಭಕ್ತಿಸಾಹಿತ್ಯವನ್ನು ಓದಿ ಅದರಲ್ಲಿ ಹೆಚ್ಚಿನದನ್ನು ಕಂಠಪಾಠ ಮಾಡಿದ್ದರು. ಅವರು ವೇದ, ಉಪನಿಷತ್ತು, ತಿರುಕ್ಕುರುಳ್ ಮುಂತಾದ ಶಾಸ್ತ್ರಗ್ರಂಥಗಳಿಂದ ಋಕ್ಕು ಮತ್ತು ಶ್ಲೋಕಗಳನ್ನೂ, ಹಾಗೆಯೇ ಸಂತರ ಮತ್ತು ಜ್ಞಾನಿಗಳ ನುಡಿಗಳನ್ನು ತಮಿಳು ಕೃತಿಗಳಿಂದ ನಿರರ್ಗಳವಾಗಿ ಹೇಳಬಲ್ಲವರಾಗಿದ್ದರು. ಐದನೆಯ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು. ೧೯೦೩ರಲ್ಲಿ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. ಗಣಿತ ಬಿಟ್ಟು ಬೇರೇನೂ ಬೇಡವಾಯ್ತು ರಾಮಾನುಜನ್ ಅವರು ಎಫ್. ಎ ತರಗತಿಗಳಿಗೆ ಸೇರಿದಾಗ ಅವರಿಗೆ ಗಣಿತದ ಹೊರತಾಗಿ ಇನ್ನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ. ಈ ನಿರಾಸಕ್ತಿ ಮತ್ತು ನಿರಂತರ ಅವರ ಜೊತೆಗೂಡಿದ್ದ ಅನಾರೋಗ್ಯಗಳು ಅವರ ಓದನ್ನು ಅಲ್ಲಿಗೇ ಮೊಟಕುಗೊಳಿಸಿಬಿಟ್ಟವು. ಇದೇ ನೆಪವಾಗಿ ಅವರು ಯಾವಾಗಲೂ ಗಣಿತದಲ್ಲೇ ಮುಳುಗಿಬಿಟ್ಟರು. ಇದು ಮನೆಯವರಿಗೆ ಇಷ್ಟವಾಗಲಿಲ್ಲ. ಜೀವನದ ದಾರಿ ಬದಲಾಗಲಿ ಎಂದು ವಿವಾಹ ಏರ್ಪಡಿಸಿದರು. ಹೊಟ್ಟೆಪಾಡಿಗಾಗಿ ಅಲೆದಾಟ ಮದುವೆ ಒಂದು ಬದಲಾವಣೆಯನ್ನು ತಂದಿತು. ಇನ್ನು ಮುಂದೆ ತಾನು ಹೆತ್ತವರಿಗೆ ಹೊರೆಯಾಗಬಾರದೆಂದು ರಾಮಾನುಜನ್ನರು ನಿರ್ಧರಿಸಿದರು. ಇವರ ಮೇಧಾವಿತನದ ಕುರಿತಾದ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ ಅದು ಕೇವಲ ಎರಡು ತಿಂಗಳಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆದುರಾಯಿತು. ಸ್ವಲ್ಪ ದಿನ ಮನೆಯ ಪಾಠಮಾಡಿದರು. ಈ ನಡುವೆ ತಮ್ಮ ಗಣಿತದ ಕುರಿತಾದ ಆಲೋಚನೆಗಳನ್ನು ದಾಖಲಿಸುವ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. ೧೯೧೦ರಲ್ಲಿ ಅವರು ದಿವಾನ್ ಬಹದ್ದೂರರನ್ನು ಕಂಡಾಗ ಬಹದ್ದೂರರು ತಮಗೇನು ಬೇಕೆಂದು ಕೇಳಿದಾಗ “ಸಂಶೋಧನೆ ಮುದುವರಿಸಿಕೊಂದು ಹೋಗುವಷ್ಟರleಟ್ಟಿಗೆ ಬದುಕಿರಲು ಸಾಕಾಗುವಷ್ಟು ಅನ್ನ” ಎಂದರು ರಾಮಾನುಜನ್. ಬಹದ್ದೂರರು ತಾವೇ ಸ್ವತಃ ಇಪ್ಪತ್ತೈದು ರೂಪಾಯಿಗಳ ಮಾಸಿಕ ಧನಸಹಾಯ ಮಾಡಲಾರಂಭಿಸಿದರು. ಆದರೆ ರಾಮಾನುಜನ್ ಅವರಿಗೆ ಹೀಗೆ ಹಣ ಪಡೆಯುವ ಮನಸ್ಸಿರಲಿಲ್ಲ. ಮತ್ತೆ ಅವರ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಅವರು ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು. ಸಂಶೋಧನೆಗಳ ಪ್ರಕಟಣೆ ಏತನ್ಮಧ್ಯೆ ಶ್ರೀನಿವಾಸ ರಾಮಾನುಜನ್ ಅವರ ಬೆಂಗಾವಲಾಗಿದ್ದ ಪ್ರೊ. ಪಿ. ವಿ. ಶೇಷು ಅಯ್ಯರ್ ಅವರಿಂದ ಕಳುಹಿಸಲ್ಪಟ್ಟ ಪ್ರಶ್ನೋತ್ತರಗಳ ರೂಪದಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ನಿಯತಕಾಲಿಕ ೧೯೧೧ರಲ್ಲಿ ಪ್ರಕಟವಾಯಿತು. ಈ ಸಂಪುಟದ ಒಂದು ಸಂಚಿಕೆಯಲ್ಲಿ ರಾಮಾನುಜನ್ನರ ‘ಬರ್ನೌಲಿ ಸಂಖ್ಯೆಗಳ ಕೆಲವು ಲಕ್ಷಣಗಳು” ಪ್ರಕಟಗೊಂಡಿತು. ೧೯೧೨ರಲ್ಲಿ ಇನ್ನೆರಡು ಪ್ರಬಂಧಗಳು ಬಂದವು. ಮದ್ರಾಸ್ ಪೋರ್ಟ್ ಟ್ರಸ್ಟಿನ ಅಧ್ಯಕ್ಷ ಸರ ಫ್ರಾನ್ಸಿಸ್ ಸ್ಪ್ರಿಂಗ್ ರಾಮಾನುಜನ್ ಅವರಲ್ಲಿ ಆಸಕ್ತಿ ತಳೆದು ಅವರ ಪ್ರಗತಿಯನ್ನು ವೀಕ್ಷಿಸುತ್ತಿದ್ದರು. ಒಂದು ದಿನ ಅವರ ಸಹಿಗಾಗಿ ಒಂದು ಕಡತ ಬಂತು. ಅದನ್ನು ಪರಾಂಬರಿಸುತ್ತಿದ್ದಾಗ ಎಲಿಪ್ಟಿಕ್ ಅನುಕಲನಾಂಕಗಳಿಗೆ ಸಂಬಂಧಿಸಿದ ಕೆಲವು ಫಲಿತಗಳನ್ನೊಳಗೊಂಡ ಬಿಳಿ ಹಾಳೆಗಳನ್ನು ಕಂಡರು. ಸ್ವಯಂ ಗಣಿತದಲ್ಲಿ ಆಸಕ್ತರಾಗಿದ್ದ ಅವರಿಗೆ ಅದು ರಾಮಾನುಜನ್ ಅವರ ಕೆಲಸವೆಂದು ತಿಳಿದು ಸಂತೋಷವಾಯಿತು. ಅದಮ್ಯ ಸಹನೆ ಪೋರ್ಟ್ ಟ್ರಸ್ಟಿನಲ್ಲಿನ ಕೆಲಸ ಶ್ರೀನಿವಾಸ ರಾಮಾನುಜನ್ ಮತ್ತು ಅವರ ಕುಟುಂಬಕ್ಕೆ ಅರೆಹೊಟ್ಟೆಯನ್ನು ತುಂಬಿಸುವಷ್ಟು ಮಾತ್ರದ್ದಾಗಿತ್ತು. ಕಡುಬಡತನ ಮತ್ತು ಎಲ್ಲ ತರಹದ ಸಂಕಷ್ಟವಿದ್ದರೂ ರಾಮಾನುಜನ್ ಎಂದೂ ತಾಳ್ಮೆಗೆಡುತ್ತಿರಲಿಲ್ಲ. ಅವರು ಮದ್ರಾಸಿನಲ್ಲಿ ಟ್ರಿಪ್ಲಿಕೇನಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಒಂದು ರಾತ್ರಿ ಖಗೋಳ ಪ್ರಪಂಚದ ವಿಸ್ಮಯಗಳ ಕುರಿತು ಗೆಳೆಯನೊಡನೆ ಮಾತನಾಡುತ್ತಿದ್ದರು. ಅದನ್ನು ತಡೆಯಲು ಯಾರೋ ಹಠಾತ್ತಾಗಿ ರಾಮಾನುಜನ್ನರ ತಲೆಯ ಮೇಲೆ ಗಡಿಗೆ ತುಂಬಾ ನೀರು ಸುರಿದರು. ಕೋಪಾವಶೇಶದಲ್ಲಿ ಸಿಡಿಯುವ ಬದಲು, ರಾಮಾನುಜನ್ ನಗುತ್ತ ಅಂದರು: “ದೇವರ ದಯೆ, ನನಗೆ ಗಂಗಾಸ್ನಾನವಾಯಿತು. ಇನ್ನೂ ಜಾಸ್ತಿ ಇದ್ದಾರೆ ಸಂತೋಷ.”. ಶಾಂತ ಮತ್ತು ಏಕಾಗ್ರಚಿತ್ತದಿಂದ ರಾಮಾನುಜನ್ ತಮ್ಮ ಕೆಲಸ ಮುಂದುವರಿಸಿದರು. ಕೆಂಬ್ರಿಡ್ಜ್ ಹಾದಿಯಲ್ಲಿ ಪ್ರೊ. ಪಿ. ವಿ. ಶೇಷು ಅಯ್ಯರ್ ಅಂತಹ ಹಿರಿಯರು ಮತ್ತು ಹಿತಚಿಂತಕರು ಟ್ರಿನಿಟಿ ಕಾಲೇಜಿನ ಫೆಲೋ ಆಗಿದ್ದ ಪ್ರೊ. ಜಿ. ಹೆಚ್ ಹಾರ್ಡಿ ಮತ್ತು ಕೇಂಬ್ರಿಜ್ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ರಾಮಾನುಜನ್ ತಮ್ಮ ಗಣಿತೀಯ ಶೋಧನೆಗಳನ್ನು ತಿಳಿಸಬೇಕೆಂದು ಒತ್ತಾಯಿಸಿದರು. ಇದನ್ನು ಮಾಡಲು ಮೊದಲು ಅವರಿಗೆ ಮನಸ್ಸಿರಲಿಲ್ಲ. ಆದರೆ ಒತ್ತಾಯ ಜಾಸ್ತಿಯಾದಾಗ ಅವರು ಪ್ರೊ. ಹಾರ್ಡಿಯವರಿಗೆ ಬರೆಯಲು ನಿರ್ಧರಿಸಿದರು. ಹೀಗೆ ಕ್ರಮೇಣ ಅವರ ಜೀವನವನ್ನೇ ಬದಲಿಸಿದ ಮತ್ತು ಭಾರತವನ್ನು ಪ್ರಪಂಚದ ಗಣಿತೀಯ ನಕ್ಷೆಯಲ್ಲಿ ಸೇರಿಸಿದ ಪತ್ರ ವ್ಯವಹಾರ ಪ್ರಾರಂಭಗೊಂಡಿತು. ತಮ್ಮ ಮೊದಲ ಪತ್ರದಲ್ಲೇ ರಾಮಾನುಜನ್ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು. ಈ ಚಿಂತನೆಗಳು ಕೇಂಬ್ರಿಜ್ನಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿತು. ಕ್ರಮೇಣದಲ್ಲಿ ಶ್ರೀನಿವಾಸನ್ ಕೆಂಬ್ರಿಡ್ಜ್ಗೆ ಬಂದಿಳಿದರು. ಸಂಶೋಧನೆಯಲ್ಲಿ ಶ್ರೇಷ್ಠತೆ ರಾಮಾನುಜನ್ನರ ಕಾರ್ಯವಿಧಾನ ಸ್ವಂತಿಕೆಯಿಂದ ಕೂಡಿದ್ದು ಅವರ ಸಲಕರಣೆಗಳು ಸಂಪೂರ್ಣವಾಗಿ ಅವರದ್ದೇ ಆಗಿದ್ದುವು. ಇಂಗ್ಲೆಂಡಿನಲ್ಲಿ ಅವರಿದ್ದ ಐದು ವರ್ಷಗಳಲ್ಲಿ ಅವರ ಇಪ್ಪತ್ತೊಂದು ಪ್ರಬಂಧಗಳು ಯೂರೋಪಿನ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾದವುಗಳಲ್ಲಿ ಐದು ಪ್ರೊ. ಹಾರ್ಡಿಯವರೊಂದಿಗೆ ಬರೆದುವು. ಪ್ರೊ. ಹಾರ್ಡಿ ಅವರಲ್ಲದೆ ಆ ಕಾಲದ ಶ್ರೇಷ್ಠ ವಿದ್ವಾಂಸರಾದ ಪ್ರೊ. ಜೆ. ಇ. ಲಿಟ್ಲ್ ವುಡ್, ಪ್ರೊ. ಎಲ್. ಜೆ. ಮೊರ್ಡಲ್, ಪ್ರೊ. ಜಿ. ಎನ್. ವಾಟ್ಸನ್ ಮುಂತಾದ ಸಕಲರೂ ಶ್ರೀನಿವಾಸ ರಾಮಾನುಜನ್ ಅವರ ಶ್ರೇಷ್ಠತೆಯನ್ನು ಕೊಂಡಾಡಿದರು.kannada ರಾಯಲ್ ಸೊಸೈಟಿಯ ಫೆಲೋ ಆಗಿ ಗೌರವ ರಾಮಾನುಜನ್ನರ ಸಂಶೋಧನೆ ಅವರಿಗೆ ಉನ್ನತ ಪ್ರಶಂಸೆ ಮತ್ತು ಪ್ರತಿಷ್ಠೆಗಳನ್ನು ತಂದುಕೊಟ್ಟವು. ಬ್ರಿಟನ್ ಮತ್ತು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ಅತ್ಯುನ್ನತ ಗೌರವವಾದ ರಾಯಲ್ ಸೊಸೈಟಿಯ ಫೆಲೋ ಆಗಿ ಫೆಬ್ರುವರಿ ೨೮, ೧೯೧೮ರಲ್ಲಿ ಶ್ರೀನಿವಾಸ ರಾಮಾನುಜನ್ ಚುನಾಯಿತರಾದರು. ೧೮೪೧ರಲ್ಲಿ ಸರ್ ಆರ್ ದೇಸೀರ್ ಕರ್ ಸೇಟ್ಜಿ ಅವರು ರಾಯಲ್ ಸೊಸೈಟಿಗೆ ಚುನಾಯಿತರಾಗಿದ್ದನ್ನು ಬಿಟ್ಟರೆ ಈ ಗೌರವ ಪಡೆದ ಪ್ರಥಮರು ರಾಮಾನುಜನ್ ಅವರೇ. ರಾಮಾನುಜನ್ನರ ಆಯ್ಕೆ ಮುಂದೆ ಭಾರತೀಯ ವಿಜ್ಞಾನಿಗಳನ್ನು ಉತ್ತೇಜನಗೊಳಿಸಿ ಒಂದೇ ದಶಕದೊಳಗೆ ಇನ್ನೂ ಮೂವರು ಚುನಾಯಿತರಾದರು. ಅವರೇ ಜಗದೀಶ್ ಚಂದ್ರ ಬೋಸ್, ಸಿ ವಿ ರಾಮನ್ ಮತ್ತು ಮೇಘನಾದ ಸಹಾ. ಹೀಗೆ ರಾಮಾನುಜನ್ನರ ಸಿದ್ಧಿ ಭಾರತೀಯ ವಿಜ್ಞಾನ ಮತ್ತು ಗಣಿತದಲ್ಲಿ ಹೊಸ ಯುಗವನ್ನು ಆರಂಭಿಸಿತು. ಚಿಕ್ಕ ವಯಸ್ಸಿನಲ್ಲಿ ಕಳೆದುಹೋದ ಪ್ರತಿಭೆ ಕೆಂಬ್ರಿಡ್ಜ್ನಲ್ಲಿ ಅಪ್ರತಿಮ ಪ್ರತಿಭಾವಂತರಾಗಿ ತಮ್ಮ ಸಂಶೋಧನೆಗಳನ್ನು ನಿರೂಪಿಸಿದ ರಾಮಾನುಜನ್ ಐದು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿ ವಿದ್ವಾಂಸರಿಂದ ಅಭೂತಪೂರ್ವ ಮೆಚ್ಚುಗೆ ಮತ್ತು ಸ್ವಾಗತಗಳನ್ನು ಪಡೆದರು. ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಬಹು ನಾಜೂಕಾದ ಉಪಚಾರ ಮತ್ತು ಮೇಲ್ವಿಚಾರಣೆ ಇದ್ದರೂ ಅವರು ಏಪ್ರಿಲ್ ೨೬, ೧೯೨೦ರಂದು ೩೨ ವರ್ಷ, ೪ ತಿಂಗಳು, ೪ ದಿವಸಗಳ ತರುಣ ವಯಸ್ಸಿನಲ್ಲೇ ತೀರಿಕೊಂಡರು. ಭರತಖಂಡ ಹಾಗೂ ಜಗತ್ತು ಮತ್ತೆ ಅಂದಿನವರೆಗೆ ಕಂಡಿಲ್ಲದಂಥ ಮಹಾನ್ ಗಣಿತ ಪ್ರತಿಭೆಯನ್ನು ಕಳೆದುಕೊಂಡಿತು. ಅಸಾಮಾನ್ಯ ಪ್ರತಿಭೆ ಪ್ರೊ. ಹಾರ್ಡಿ ಹೇಳುತ್ತಾರೆ: “ರಾಮಾನುಜನ್ ಅವರಲ್ಲಿ ಪರಮಾದ್ಭುತವಾದುದೆಂದರೆ ಬೀಜಗಣಿತದ ಸೂತ್ರಗಳು, ಅನಂತ ಶ್ರೇಣಿಗಳ ಪರಿವರ್ತನೆ ಮುಂತಾದವುಗಳಲ್ಲಿದ್ದ ಅವರ ಅಂತರ್ದೃಷ್ಟಿ. ಈ ವಿಷಯಗಳಲ್ಲಿ ಅವರಿಗೆ ಸಮನಾದವರನ್ನು ಖಂಡಿತವಾಗಿಯೂ ನಾನು ಕಂಡಿಲ್ಲ. ಅವರನ್ನು ಅಯ್ಳರ್ ಅಥವಾ ಜುಕೊಬಿಯಂತಹ ಸಾರ್ವಕಾಲಿಕ ಶ್ರೇಷ್ಠರೊಂದಿಗೆ ಮಾತ್ರ ಹೋಲಿಸಲು ಸಾಧ್ಯ. ರಾಮಾನುಜನ್ ಅವರ ಸ್ಮರಣ ಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯಗಳೊಂದಿಗೆ ಸಾರ್ವತ್ರೀಕರಣ ಶಕ್ತಿ, ಸ್ವರೂಪ ಜ್ಞಾನ, ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಚಾಕಚಕ್ಯತೆ ಇವು ಅನೇಕ ವೇಳೆ ದಂಗುಬಡಿಸುತ್ತಿದ್ದವು. ರಾಮಾನುಜನ್ ಅವರದೇ ಆದ ಈ ಕ್ಷೇತ್ರದಲ್ಲಿ ಆ ಕಾಲದಲ್ಲಿ ಅವರಿಗೆ ಸರಿಸಾಟಿಗಳಿಲ್ಲದಂತೆ ಮಾಡಿದವು” ಸಂಶೋಧನಾ ಕ್ಷೇತ್ರಗಳು ರಾಮಾನುಜನ್ ಅವರ ಸಂಶೋಧನೆಗಳಲ್ಲಿ ಮುಖ್ಯವಾಗಿ ಈ ಕ್ಷೇತ್ರಗಳನ್ನು ಹೆಸರಿಸಬಹುದು: ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ ರಾಮಾನುಜನ್ ಊಹೆ ರಾಮಾನುಜನ್-ಪೀಟರ್ಸನ್ ಊಹೆ ರಾಮಾನುಜನ್ ರ ಬಗ್ಗೆ ಪುಸ್ತಕಗಳು "ರಾಮಾನುಜನ್ ಬಾಳಿದರಿಲ್ಲಿ", ಜಿ.ಟಿ.ನಾರಾಯಣ ರಾವ್ Collected Papers of Srinivasa Ramanujan ISBN 0-8218-2076-1 The Man Who Knew Infinity: A Life of the Genius Ramanujan by Robert Kanigel ISBN 0-671-75061-5 ಶ್ರೀನಿವಾಸ ರಾಮಾನುಜನ್, ಲೇಖಕರು ಸುರೇಶ್ ರಾಮ್, ನ್ಯಾಷನಲ್ ಬುಕ್ ಟ್ರಸ್ಟಿನ ರಾಷ್ಟ್ರೀಯ ಜೀವನಚರಿತ್ರ ಮಾಲೆ. ಬಾಹ್ಯ ಸ೦ಪರ್ಕಗಳು ಶ್ರೀನಿವಾಸ ರಾಮಾನುಜನ್ ರಾಮಾನುಜನ್ ಜರ್ನಲ್ ರಾಮಾನುಜನ್‌ ಜೀವನದ ಕುರಿತಾದ ಇಂಗ್ಲೀಷ್‌ ಚಲನಚಿತ್ರ ದ ಮ್ಯಾನ್‌ ಹೂ ನ್ಯೂ ಇನ್‌ಫಿನಿಟಿ ವರ್ಗ:ಗಣಿತ ವರ್ಗ:ಭಾರತೀಯ ಗಣಿತಜ್ಞರು ವರ್ಗ:೧೮೮೭ ಜನನ ವರ್ಗ:೧೯೨೦ ನಿಧನ ವರ್ಗ:ಭಾರತದ ಪ್ರಸಿದ್ಧ ವ್ಯಕ್ತಿಗಳು ವರ್ಗ:ತಮಿಳುನಾಡು ಪ್ರಸಿದ್ಧ ವ್ಯಕ್ತಿಗಳು ವರ್ಗ:ಮಾನವ ಕಂಪ್ಯೂಟರ್ ವರ್ಗ:ಶ್ರೀನಿವಾಸ ರಾಮಾನುಜನ್
ತಮಿಳುನಾಡು
https://kn.wikipedia.org/wiki/ತಮಿಳುನಾಡು
ತಮಿಳುನಾಡು(தமிழ்நாடு) ಭಾರತದ ದಕ್ಷಿಣ ತುದಿಯಲ್ಲಿರುವ ರಾಜ್ಯ. ಭಾರತ ಗಣರಾಜ್ಯದ ದಕ್ಷಿಣದ ಒಂದು ರಾಜ್ಯ.ಚೆನ್ನೈ ತಮಿಳುನಾಡಿನ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಂದರೆ ಪಾಂಡಿಚೇರಿ, ಕೇರಳ, ಕರ್ನಾಟಕ ಮತ್ತು ಆಂಧ್ರ ಪ್ರದೇಶ. ದಕ್ಷಿಣಪೂರ್ವಕ್ಕೆ ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ರಾಷ್ಟ್ರವಿದೆ. ತಮಿಳುನಾಡು ಉತ್ತರದಲ್ಲಿ ಪೂರ್ವ ಘಟ್ಟಗಳಿಂದ, ಪಶ್ಚಿಮದಲ್ಲಿ ನೀಲಗಿರಿ ಮಲೆಗಳು, ಆನಮಲೆ ಹಾಗು ಪಾಲಕ್ಕಾಡಿನಿಂದ, ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ, ಆಗ್ನೇಯದಲ್ಲಿ ಮನ್ನಾರ್ ಖಾರಿ, ಪಾಲ್ಕ್ ಜಲಸಂಧಿಯಿಂದ, ದಕ್ಷಿಣದಲ್ಲಿ ಹಿಂದು ಮಹಾಸಾಗರದಿಂದ ಸುತ್ತುವರೆಯಲ್ಪಟ್ಟಿದೆ. ತಮಿಳುನಾಡು ವಿಸ್ತೀರ್ಣದಲ್ಲಿ ಭಾರತದ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಏಳನೆಯ ಅತಿ ದೊಡ್ಡ ರಾಜ್ಯವಾಗಿದೆ. ತಮಿಳುನಾಡು ನಿವ್ವಳ ದೇಶೀಯ ಉತ್ಪನ್ನಕ್ಕೆ ಐದನೆಯ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ.ತಮಿಳುನಾಡು ಭಾರತದಲ್ಲಿ ಅತಿ ಹೆಚ್ಚು(೧೦.೫೬%) ವ್ಯಾಪಾರ ಉದ್ಯಮಗಳನ್ನು ಹೊಂದಿದೆ. ತಮಿಳುನಾಡು ಹಲವು ನೈಸರ್ಗಿಕ ಸಂಪನ್ಮೂಲಗಳಿಗೆ, ದ್ರಾವಿಡ ವಾಸ್ತುಶಿಲ್ಪ ಶೈಲಿಯ ಭವ್ಯವಾದ ಹಿಂದು ದೇವಾಲಯಗಳಿಗೆ, ಗಿರಿಧಾಮಗಳಿಗೆ, ಸಮುದ್ರತೀರದ ವಿಹಾರಧಾಮಗಳಿಗೆ, ತೀರ್ಥಯಾತ್ರಾ ಸ್ಥಳಗಳಿಗೆ ಹಾಗು ಐದು ಯುನೆಸ್ಕೋ ವಿಶ್ವ ಪಾರಂಪರಿಕ ನಿವೇಶನಗಳಿಗೆ ಬೀಡಾಗಿದೆ. ಭೌಗೋಳಿಕ ಸ್ಥಾನ ಪರ್ಯಾಯ ದ್ವೀಪದ ಆಗ್ನೇಯ ತುದಿಯಲ್ಲಿ, ಉ. ಅ 8o 5' —13o 3 ಪೂ. ರೇ. 76o 15 — 80o 20 ನಡುವೆ ಇದೆ. ಉತ್ತರದಲ್ಲಿ ಆಂಧ್ರಪ್ರದೇಶ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಸಾಗರ, ಪಶ್ಚಿಮದಲ್ಲಿ ಕೇರಳ, ವಾಯವ್ಯ ಮತ್ತು ಉತ್ತರದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಇವು ಇದರ ಮೇರೆಗಳು. ಪಶ್ಚಿಮದ ಅಂಚಿನಲ್ಲಿ ಪಶ್ಚಿಮ ಘಟ್ಟಗಳು ಹಬ್ಬಿವೆ. ತಮಿಳುನಾಡಿಗೆ ಪೂರ್ವದಲ್ಲಿ ಸು. ೯೯೮ ಕಿ.ಮೀ ಉದ್ದದ ಸಮುದ್ರ ತೀರವಿದೆ. ವಿಸ್ತೀರ್ಣ ಮತ್ತು ಜನಸಂಖ್ಯೆ ೩೦ ಜಿಲ್ಲೆಗಳೂ, ೮೩೨ ಪಟ್ಟಣಗಳೂ ಸು. ೧೬,೩೧೭ ಗ್ರಾಮಗಳೂ ಇರುವ ರಾಜ್ಯದ ವಿಸ್ತೀರ್ಣ ೧,೩೦,೦೫೮ ಚ.ಕಿ.ಮೀ. ಇಲ್ಲಿಯ ಪುರುಷ ಸಂಖ್ಯೆ ೩೧,೪೦೦,೯೦೯ ಸ್ತ್ರೀಯರು ೩೧,೦೦೪,೭೭೦ ಒಟ್ಟು ಜನಸಂಖ್ಯೆ ೬೨,೪೦೫,೬೭೯ (೨೦೦೧). ಇದಕ್ಕೆ ಸು. ೮೧೨ಕಿ.ಮೀ. ಉದ್ದದ ಕಡಲ ತೀರವಿದೆ. ಇದರ ವಿಸ್ತೀರ್ಣ ೫೦, ೧೮೦ ಚ.ಮೈ. (೧,೨೯,೯೬೬ ಚ.ಕಿಮೀ.) ಜನಸಂಖ್ಯೆ ೧,೩೦,೦೫೮.ಚ.ಕಿ.ಮೀ. ಜನಸಂಖ್ಯೆ ೬,೨೧,೧೦,೮೩೯ (೨೦೦೫) ಹಳೆಯ ಮದ್ರಾಸ್ ಪ್ರಾಂತ್ಯದಲ್ಲಿ ತಮಿಳು ಭಾಷೆಯಾಡುವ ಜನರಿದ್ದ ಪ್ರದೇಶವನ್ನು ೧೯೫೬ರ ರಾಜ್ಯ ಪುನರ್ವಿಂಗಡಣೆಯ ಅಧಿನಿಯಮದ ಪ್ರಕಾರ ಪ್ರತ್ಯೇಕಿಸಿ ಈ ರಾಜ್ಯವನ್ನು ನಿರ್ಮಿಸಲಾಯಿತು. ವಿಸ್ತೀರ್ಣದಲ್ಲಿ ಇದು ಭಾರತದ ಹತ್ತನೆಯ ರಾಜ್ಯ, ಜನಸಂಖ್ಯೆಯಲ್ಲಿ ಇದಕ್ಕೆ ಐದನೆಯ ಸ್ಥಾನ. ರಾಜಧಾನಿ ಚೆನ್ನೈ. ಮೇಲ್ಮೈಲಕ್ಷಣ ತಮಿಳು ನಾಡನ್ನು ಸ್ಥೂಲವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು: 1 ಪೂರ್ವತೀರಪ್ರದೇಶ : ಇದು ಮೈದಾನ. 2 ಉತ್ತರ ಮತ್ತು ಪಶ್ಚಿಮ ಪ್ರದೇಶ, ಇದು ಉನ್ನತ ಭೂಮಿ, ಮೈದಾನವನ್ನು ಮತ್ತೆ ಮೂರು ಭಾಗಗಳಾಗಿ ವಿಂಗಡಿಸಬಹುದು:1 ಚೆಂಗಲ್ ಪಟ್ಟು ಮತ್ತು ದಕ್ಷಿಣ ಆರ್ಕಾಟ್ ಜಿಲ್ಲೆಗಳನ್ನೊಳಗೊಂಡ ಕೋರಮಂಡಲ ಮೈದಾನ, ತಿರುಚ್ಚಿರಾಪ್ಪಳ್ಳಿ ಮತ್ತು ತಂಜಾವೂರು ಜಿಲ್ಲೆಯ ಕಾವೇರಿ ಬಯಲು ಮತ್ತು ೩ ಮಧುರೈ ಮತ್ತು ರಾಮನಾಥಪುರಂ ಜಿಲ್ಲೆಗಳನ್ನೊಳಗೊಂಡ ದಕ್ಷಿಣದ ಬಯಲು. ಈ ಮೂರರಲ್ಲಿ ಕಾವೇರಿ ಬಯಲೇ ಬಲು ಅಗಲವಾದ್ದು. ಪೂರ್ವ ಘಟ್ಟಗಳು ಹಲವು ಬಿಡಿ ಬೆಟ್ಟಗಳ ರೂಪದಲ್ಲಿ ಈ ರಾಜ್ಯದೊಳಕ್ಕೆ ವಿಸ್ತರಿಸಿವೆ. ಇವುಗಳಲ್ಲಿ ಮುಖ್ಯವಾದವು ಜವಾದಿ, ಷೆವರಾಯ್, ಕಲ್ಲೈ ಮಲೈ ಮತ್ತು ಪಚ್ಚೈ ಮಲೈ. ಈ ಬೆಟ್ಟಗಳ ಸಾಲು ಮುಂದೆ ಇನ್ನೂ ದಕ್ಷಿಣಕ್ಕೆ ಸಾಗಿ ಮಧುರೈ ಜಿಲ್ಲೆಯಲ್ಲಿ ಏಲಕ್ಕಿ ಬೆಟ್ಟಗಳನ್ನು ಸೇರುತ್ತದೆ. ಪೂರ್ವ ಘಟ್ಟಗಳು ಸೋಪಾನದೋಪಾದಿಯಲ್ಲಿರುವುದರಿಂದ ಇವಕ್ಕೆ ಘಟ್ಟಗಳೆಂದು ಹೆಸರು ಬಂದಿದೆ. ಇವು ಸ್ಥೂಲವಾಗಿ ದಕ್ಷಣೋತ್ತರವಾಗಿ ಹಬ್ಬಿವೆ. ಪಶ್ಚಿಮದಲ್ಲಿರುವ ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳಿಗಿಂತ ತೀರ ಭಿನ್ನವಾದವು. ಅವು ಏಕಪ್ರಕಾರವಾಗಿ ಹಬ್ಬಿರುವ ಶ್ರೇಣಿಗಳು. ಬೃಹತ್ತಿನಲ್ಲಿಯೂ ಮಹತ್ತಿನಲ್ಲಿಯೂ ಅವುಗಳ ಮುಂದೆ ಪೂರ್ವಘಟ್ಟಗಳು ಬಲು ಕುಬ್ಜ. ಪಾಲಕ್ಕಾಡ್ ಬಳಿಯ ಘಾಟಿನ ಅಗಲ ಸುಮಾರು ೨೪ಕಿ.ಮೀ. ಈ ಘಾಟಿನಿಂದ ದಕ್ಷಿಣಕ್ಕೆ ಪಶ್ಚಿಮ ಘಟ್ಟಗಳು ಮತ್ತೆ ಏರಿ, ಅಣ್ಣಾಮಲೈ ಬೆಟ್ಟಗಳಾಗಿ ಪರಿಣಮಿಸುತ್ತವೆ. ಇವುಗಳ ಪೂರ್ವ ಶಾಖೆಯೇ ಪಳನಿ ಬೆಟ್ಟ. ಇದರಲ್ಲಿರುವ ಕೋಡೈಕ್ಕಾನಾಲ್ ಒಂದು ಬೇಸಗೆ ಗಿರಿಧಾಮ. ಅಲ್ಲಲ್ಲಿ ೬,೦೦೦-೭,೦೦೦ ಅಡಿಗಳ ಎತ್ತರಕ್ಕಿರುವ ಪಶ್ಚಿಮ ಘಟ್ಟಗಳಿಗೆ ಪಾಲಕ್ಕಾಡ್ ಮತ್ತು ಷೆನ್‍ಕೊಟ್ಟಾ ಬಳಿ ಮಾತ್ರ ತೆರಪುಗಳವೆ. ಪೂರ್ವ ಪಶ್ಚಿಮ ಘಟ್ಟಗಳು ನೀಲಗಿರಿ ಜಿಲ್ಲೆಯಲ್ಲಿ ಸಂಧಿಸಿ ಒಂದು ಪರ್ವತ ಗ್ರಂಥಿಯಾಗಿ ಪರಿಣಮಿಸಿವೆ. ತಮಿಳು ನಾಡಿನಲ್ಲಿರುವ ಶಿಖರಗಳು ದೊಡ್ಡ ಬೆಟ್ಟ (೮,೬೫೦') ಮಾಕುರ್ತಿ (೮,೩೮೦') ಮತ್ತು ಅಣ್ಣೈ ಮುಡಿ (೮,೮೩೭'). ಇವುಗಳಲ್ಲಿ ಮೊದಲನೆಯ ಎರಡು ನೀಲಗಿರಿ ಬೆಟ್ಟಗಳಲ್ಲೂ ಕೊನೆಯದು ಅಣ್ಣಾ ಮಲೈ ಬೆಟ್ಟಗಳಲ್ಲೂ ಇವೆ. ವೈಗೈ, ತಾಮ್ರಪರ್ಣಿ ಮುಂತಾದ ಮುಖ್ಯ ನದಿಗಳು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತವೆ. ಪಾಲಾರ್, ಪೊನ್ನೈಯಾರ್, ಕಾವೇರಿ_ಇವು ಅಂತರರಾಜ್ಯ ನದಿಗಳು. ಸ್ಥಳೀಯ ಪ್ರಾಮುಖ್ಯವುಳ್ಳ ನದಿಗಳು ಅರಣಿಯಾರ್, ಕೋರ್ತಲಿಯಾರ್, ಕೂವಮ್, ಗಡಿಲಾಮ್, ಗೋಮುಖಿ, ಮಣಿಮುಕ್ತ, ಉತ್ತರವೆಲ್ಲಾರ್, ಅಗ್ನಿಯಾರ್, ದಕ್ಷಿಣ ವೆಲ್ಲಾರ್, ದಕ್ಷಿಣ ಪಾಲಾರ್, ವೈಪ್ಪಾರ್, ಚಿತ್ತಾರ್, ಕೋಡೈಯಾರ್ ಮತ್ತು ಪಟಿಯಾರ್, ಕೋಡೈಯಾರ್ ಮತ್ತು ಪಟಿಯಾರ್‍ಗಳನ್ನುಳಿದು ಎಲ್ಲ ನದಿಗಳೂ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿ ಸೇರುತ್ತವೆ. ಈ ನದಿಗಳ ಮೇಲ್ದಂಡೆಗಳು ಬಂಡೆಗಲ್ಲು ಪ್ರದೇಶಗಳಾದ್ದರಿಂದ ಅಲ್ಲಿ ಜಲೋತ್ಸರಣ ಮಾಡಿಕೊಂಡು ಹರಿಯುವುದರಿಂದ ಕೆಳದಂಡೆಗಳ ಮೈದಾನ ಹಾಗೂ ಕರಾವಳಿಗಳಲ್ಲಿ ಅವಕ್ಕೆ ಕಟ್ಟೆಗಳನ್ನು ಕಟ್ಟಿ ನೀರಾವರಿಗೂ ವಿದ್ಯುತ್ತಿನ ಉತ್ಪಾದನೆಗೂ ನೀರನ್ನು ಬಳಸಿಕೊಳ್ಳಲಾಗಿದೆ. ತಮಿಳು ನಾಡಿನ ಅತ್ಯಂತ ದೊಡ್ಡ ನದಿ ಕಾವೇರಿ (ನೋಡಿ- ಕಾವೇರಿನದಿ). ಕರ್ನಾಟಕದ ಮಡಿಕೇರಿ ಜಿಲ್ಲೆಯಲ್ಲಿ ಹುಟ್ಟುವ ಈ ನದಿ ಆಗ್ನೇಯಾಭಿಮುಖವಾಗಿ ಹರಿದು ಶಿವನಸಮುದ್ರದ ಜಲಪಾತಗಳಿಂದ ಕೆಳಕ್ಕೆ ತಮಿಳು ನಾಡನ್ನು ಪ್ರವೇಶಿಸುತ್ತದೆ. ಭವಾನಿ, ನೊಯ್ಯಾಲ್, ಅಮರಾವತಿ_ಇವು ತಮಿಳು ನಾಡಿನಲ್ಲಿ ಕಾವೇರಿಯ ಮುಖ್ಯ ಉಪನದಿಗಳು ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಕಾವೇರಿಯಲ್ಲಿ ಪ್ರವಾಹ ವಿಶೇಷವಾಗಿರುತ್ತದೆ. ವಾಯುಗುಣ ತಮಿಳು ನಾಡಿನದು ಮೂಲಭೂತವಾಗಿ ಉಷ್ಣವಲಯದ ವಾಯುಗುಣ. ಉಷ್ಣತೆಯಲ್ಲಿ ಅತಿಯಾದ ಏರಿಳಿತಗಳಿಲ್ಲ. ಗರಿಷ್ಠ ಉಷ್ಣತೆ 43o ಅ (110o ಈ)ನ್ನು ಸಾಮಾನ್ಯವಾಗಿ ಮೀರುವುದಿಲ್ಲ. ಕನಿಷ್ಠ ಉಷ್ಣತೆ 18o ಅ (65o ಈ) ಗಿಂತ ಕೆಳಕ್ಕೆ ಇಳಿಯುವುದು ಅಪರೂಪ. ಅತ್ಯಂತ ಕಡಿಮೆ ಉಷ್ಣತೆ ದಾಖಲಾಗುವುದು ಡಿಸೆಂಬರ್ ಮತ್ತು ಜನವರಿಗಳಲ್ಲಿ : ಅತ್ಯಂತ ಹೆಚ್ಚಿನ ಉಷ್ಣತೆ ಏಪ್ರಿಲ್ ನಿಂದ ಜೂನ್ ವರೆಗೆ. ಆಗ್ನೇಯ ಮತ್ತು ಈಶಾನ್ಯ ಮಾನ್ಸೂನುಗಳ ಕಾಲದಲ್ಲಿ ರಾಜ್ಯದಲ್ಲಿ ಮಳೆಯಾಗುತ್ತದೆ. ಇವೆರಡರ ನಡುವೆ ಸುಮಾರು ಆರು ವಾರಗಳ ಅಂತರ ಇರುತ್ತದೆ. ಸಾಮಾನ್ಯವಾಗಿ ಆಗ್ನೇಯ ಮಾನ್ಸೂನ್ ಮಳೆ ಕ್ರಮಪ್ರಾಪ್ತವಾದ್ದು. ಈಶಾನ್ಯ ಮಾನ್ಸೂನ್ ಕೆಲಮೊಮ್ಮೆ ಮಳೆ ತಾರದಿರುವುದುಂಟು. ಎರಡರಿಂದ ಐದು ವರ್ಷಗಳವರೆಗೆ ಹೀಗಾಗಬಹುದು. ಒಂದೇ ವರ್ಷದಲ್ಲಿ ಎರಡೂ ಮಾನ್ಸೂನ್‍ಗಳ ನಿರಾಶೆಗೊಳಿಸುವುದು ಬಲು ವಿರಳ. ಒಟ್ಟು ವಾರ್ಷಿಕ ಮಳೆಯಲ್ಲಿ ಈಶಾನ್ಯ ಮಾನ್ಸೂನಿನ ಪಾಲು ಕರಾವಳಿ ಜಿಲ್ಲೆಗಳಲ್ಲಿ ಸೇ. ೬೦. ಒಳನಾಡಿನಲ್ಲಿ ಸೇ. ೪೦. ಅಕ್ಟೋಬರ್ ನಿಂದ ನವೆಂಬರ್ ವರೆಗಿನ ಅವಧಿಯಲ್ಲೇ ಬಹುತೇಕ ಮಳೆ. ಒಳನಾಡಿನಲ್ಲಿ ಅಕ್ಟೋಬರ್‍ನಲ್ಲಿ ಹೆಚ್ಚು ಮಳೆಯಾದರೆ, ಕರಾವಳಿ ಜಿಲ್ಲೆಗಳಲ್ಲಿ ನವೆಂಬರಿನಲ್ಲಿ ಹೆಚ್ಚು ಮಳೆ. ಈಶಾನ್ಯ ಮಾನ್ಸೂನ್ ಮಳೆ ಎಲ್ಲ ಜಿಲ್ಲೆಗಳಲ್ಲೂ ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಬಹಳ ಮಟ್ಟಿಗೆ ಅವನಮನ (ಡಿಪ್ರೆಷನ್) ಮತ್ತು ಚಂಡಮಾರುತಗಳನ್ನು ಅವಲಂಬಿಸಿರುತ್ತದೆ. ಮಾರ್ಚ್-ಮೇ ತಿಂಗಳುಗಳಲ್ಲಿ ಗುಡುಗಿನಿಂದ ಕೂಡಿದ ಮಳೆ 5em—15emವರಗೆ ಮಳೆ ಆಗುವುದು ನೀಲಗಿರಿ ಮತ್ತು ಇತರ ಬೆಟ್ಟಸೀಮೆಗಳಲ್ಲಿ. ರಾಮನಾಥಪುರಂ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಮಳೆ. ಸಸ್ಯಪ್ರಾಣಿ ಜೀವನ ತಮಿಳು ನಾಡಿನ ಸಸ್ಯ ಅಲ್ಲಿಯ ವಾಯುಗುಣ ಮತ್ತು ಮಣ್ಣಿಗೆ ಅನುಗುಣವಾದ್ದು. ರಾಜ್ಯದ ಸೇ. ೧೫ ಭಾಗ ಅರಣ್ಯಾವೃತ. ನೀಲಗಿರಿ, ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳ ಉನ್ನತ ಭಾಗಗಳಲ್ಲಿ ಉಪ ಅಲ್ಪೈನ್ ಸಸ್ಯ ಬೆಳೆಯುತ್ತದೆ. ಪಶ್ಚಿಮ ಘಟ್ಟಗಳ ಪೂರ್ವ ಪಾಶ್ರ್ವದಲ್ಲೂ ಉತ್ತರ ಮತ್ತು ಮಧ್ಯ ಜಿಲ್ಲೆಗಳ ಬೆಟ್ಟಗಳ ಪ್ರದೇಶದಲ್ಲೂ ನಿತ್ಯ ಹಸುರಿನ ಮತ್ತು ಪರ್ಣಪಾತಿ ಸಸ್ಯಗಳೂ ಕುರುಚಲುಗಳೂ ಇವೆ. ಕೆಳ ಕಾವೇರಿ ಕಣಿವೆಯಲ್ಲಿ ಅತ್ಯಂತ ಸಮೃದ್ಧವಾದ ನಿತ್ಯ ಹಸುರಿನ ಆರ್ದ್ರ ಅರಣ್ಯಗಳುಂಟು. ನಾನಾ ಸ್ತರಗಳಿಂದ ಕೂಡಿದ ಸಸ್ಯಜಾತಿಗಳನ್ನಿಲ್ಲಿ ಕಾಣಬಹುದು. ಮಧ್ಯಕಣಿವೆಯ ಕಾಡುಗಳನ್ನೆಲ್ಲ ಕಡಿದು ಇಲ್ಲಿಯ ನೆಲವನ್ನೆಲ್ಲ ವ್ಯವಸಾಯಕ್ಕೆ ಬಳಸಿಕೊಂಡಿರುವುದರಿಂದ ಮೂಲ ನೈಸರ್ಗಿಕ ಸಸ್ಯ ಇಲ್ಲಿ ಕಾಣುವುದಿಲ್ಲ. ಅಲ್ಲಲ್ಲಿ ಕುರುಚಲೂ ನೀರಿನ ಹರಿವಿನ ಬಳಿಯಲ್ಲಿ ಮತ್ತು ತಗ್ಗಿನ ನೆಲೆಗಳಲ್ಲಿ ಕಾಡುಗಳೂ ಇವೆ. ರಾಜ್ಯದ ಜಲಪಕ್ಷಿಗಳ ವೈವಿಧ್ಯವನ್ನು ವೇದಾಂತಂಗಳ್ ಪಕ್ಷಿಧಾಮದಲ್ಲೂ ಇತರ ವನ್ಯ ಜೀವಿಗಳ ಬಗೆಗಳನ್ನು ಮುದು ಮಲೈ ಅಭಯಾರಣ್ಯದಲ್ಲೂ ಕಾಣಬಹುದು. ತಮಿಳುನಾಡಿನ ಮುಖ್ಯ ಅಭಯಾರಣ್ಯಗಳು ಇವು (ಇವುಗಳ ವಿಸ್ತೀರ್ಣಗಳನ್ನು ಹೆಕ್ಟೇರುಗಳಲ್ಲಿ ಆವರಣಗಳೊಳಗೆ ಕೊಟ್ಟಿದೆ) 1 ಮುದುಮಲೈ (೩೨,೧೧೬), 2 ಮುಂಡನ್ ತುರೈ (೫,೧೮೦), 3 ಪಾಯಿಂಟ್ ಕ್ಯಾಲಮಿಯರ್ (೧,೭೨೯), 4. ವೇದಾಂತಂಗಳ್ (೩೦). 5 ಗಿಂಡಿ ಉದ್ಯಾನ (೨೪೧) ಮತ್ತು ೬.ಅಣ್ಣಾಮಲೈ (೯೫,೮೦೦). ಪುಣ್ಯಸ್ಥಳಗಳು ದೇವಾಲಯ ಇಲ್ಲದ ಊರಿನಲ್ಲಿ ವಾಸಮಾಡಬಾರದು ಎಂದು ಒಂದು ತಮಿಳು ಗಾದೆ ಇದೆ. ತಮಿಳು ನಾಡಿನಲ್ಲಿ ದೇವಾಲಯ ಇಲ್ಲದ ದೊಡ್ಡ ಊರೇ ಇಲ್ಲ. ಮಧುರೈ ಜಿಲ್ಲೆಯ ರಾಜಧಾನಿಯಾಗಿರುವ ಮಧುರೆಯಲ್ಲಿ ಪ್ರಸಿದ್ಧವಾದ ಮೀನಾಕ್ಷಿ ದೇವಾಲಯ ಇದೆ. ಶಕ್ತಿಯ (ಪಾರ್ವತಿಯ) ಹಿರಿಮೆಯನ್ನು ಇದು ತೋರಿಸುತ್ತದೆ. ಮಧುರೈಗೆ ಸಮೀಪದಲ್ಲಿ ತಿರುಪ್ಪರಕ್ಕುನ್‍ಅಮ್ ಇದೆ. ಇದು ಪ್ರಸಿದ್ಧವಾದ ಮುರುಗನ ಗುಡಿ.ಕಾಂಚೀಪುರದಲ್ಲಿ ಸಂಸ್ಕೃತ ಮತ್ತು ತಮಿಳು ಸಂಸ್ಕೃತಿಯನ್ನು ಕಾಣಲಾಗುವುದು. ಹಳೆಯ ಕಾಲದಲ್ಲಿ ಕಂಚಿಯಲ್ಲಿ ಪಸಿದ್ಧ ವಿಶ್ವವಿದ್ಯಾಲಯ ಇತ್ತು. ಕಂಚಿಯಲ್ಲಿ ಹಲವು ದೇವಾಲಯಗಳಿದ್ದರೂ ಕಾಮಾಕ್ಷಿ ದೇವಾಲಯವೂ ವರದರಾಜ ದೇವಾಲಯವೂ ಹೆಸರಿಸುವಂಥವಾಗಿವೆ. ರಾಮೇಶ್ವರಮ್ ಎಂಬ ಸ್ಥಳ ರಾಮನಾಥಪುರಮ್ ಜಿಲ್ಲೆಯಲ್ಲಿದೆ. ರಾವಣನನ್ನು ಕೊಂದ ಪಾಪನಿವಾರಣೆಗಾಗಿ ರಾಮ ಶಿವನನ್ನು ಪೂಜಿಸಿದ ಸ್ಥಳ ಇದೆಂದು ಹಿಂದೂಗಳ ನಂಬಿಕೆ, ಈ ದೇವಾಲಯ ತಮಿಳು ನಾಡಿನ ವಾಸ್ತುವಿನ ಹಿರಿಮೆಗೆ ಸಾಕ್ಷಿಯಾಗಿದೆ. ಈ ಗುಡಿಯ ಉದ್ದ ೧,೦೦೦ ಅಡಿ, ಅಗಲ 657 ಅಡಿ. ಉತ್ತರ ಆರ್ಕಾಟ್ ಜಿಲ್ಲೆಯಲ್ಲಿರುವ ತಿರುವಣ್ಣಾಮಲೈ ಕಾರ್ತಿಕೈ ದೀಪದಿಂದ ಪ್ರಸಿದ್ಧಿ ಪಡೆದಿದೆ.ದಕ್ಷಿಣ ಆರ್ಕಾಟ್ ಜಿಲ್ಲೆಯ ಚಿದಂಬರದಲ್ಲಿ ಇರುವುದು ನಟರಾಜ ದೇವಾಲಯ. ಇಲ್ಲಿ ಶಿವ ನೃತ್ಯ ಮಾಡುವ ರೂಪದಲ್ಲಿ ದರ್ಶನ ಕೊಡುತ್ತಾನೆ. ಅವನ ಅಟ ಪ್ರಪಂಚವನ್ನೇ ಆಡಿಸುವುದು ಎನ್ನುವರು. ಚಿದಂಬರದಲ್ಲಿ ಆಚರಿಸುವ ಆರಿದ್ರಾದರ್ಶನ ಪ್ರಖ್ಯಾತ ಪಡೆದಿದೆ. ಚಿದಂಬರಕ್ಕೆ ಪೂರ್ವ ದೆಸೆಯಲ್ಲಿರುವುದು ಅಣ್ಣಾಮಲೈ ನಗರ. ಅಲ್ಲಿ ಅಣ್ನಾಮಲೈ ವಿಶ್ವವಿದ್ಯಾಲಯ ಇದೆ. ತಿರುಚ್ಚಿರಾಪ್ಪಳ್ಳಿಗೆ ಸಮೀಪದಲ್ಲಿರುವ ಶ್ರೀರಂಗಮ್ ವಿಷ್ಣುಕ್ಷೇತ್ರ. ಶ್ರೀ ರಂಗನಾಥ ಶ್ರೀರಂಗದ ದೇವಾಲಯದಲ್ಲಿ ಮಲಗಿಕೊಂಡಿದ್ದಾನೆ. ಶ್ರೀರಂಗಕ್ಕೆ ಸಮೀಪದಲ್ಲಿರುವುದು ತಿರುವಾನೈಕ್ಕಾ. ಇಲ್ಲಿ ಇರುವ ಅಖಿಲಾಂಡೇಶ್ವರಿ ಜಂಬುಕೇಶ್ವರನ ದೇವಾಲಯ ಪ್ರಸಿದ್ಧವಾಗಿದೆ.ತಂಜಾವೂರ್ ಜಿಲ್ಲೆಯ ಕೇಂದ್ರವಾದ ತಂಜಾವೂರಿಗೆ ೩೫ ಮೈ. ದೂರದಲ್ಲಿರುವ ತಿರುವಾರೂರಿನಲ್ಲಿ ತ್ಯಾಗರಾಜರ ಸಮಾಧಿ ಇದೆ. ತಿರುವಾರೂರಿನ ತೆಪ್ಪಶ್ತಿರು¿¿õÁ (ತೆಪ್ಪೋತ್ಸವ) ಹೆಸರಿಸುವಂಥದು. ತಿರುವಾರೂರಿನಲ್ಲಿ ಇರುವ ರಥ ತುಂಬ ದೊಡ್ಡದು, ಬಲು ಸುಂದರವಾದ್ದು. ಚೆಂಗಲ್ಪಟ್ಟು ಜಿಲ್ಲೆಯಲ್ಲಿರುವುದು ತಿರುಕ್ಕರುಕ್ಕನ್‍ರಮ್ ಎಂಬ ಸ್ಥಳ. ಪಳನಿಯಲ್ಲಿ ಮುರುಗನ ದೇವಾಲಯವಿದೆ. ತಂಜಾವೂರು ಜಿಲ್ಲೆಯ ಕುಂಭಕೋಣದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಖಮ್ ಎಂಬ ಹಬ್ಬ ನಡೆಯುತ್ತದೆ. ಮಹಾಮಖಮ್ ಕೊಳದಲ್ಲಿ ಸ್ನಾನಮಾಡುವುದಕ್ಕೆ ಇತರ ಭಾರತದ ಭಾಗಗಳಿಂದ ಯಾತ್ರಿಕರು ಬರುವರು. ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯ ತುಂಬ ದೊಡ್ಡದು. ಇದನ್ನು ದೊಡ್ಡ ದೇವಾಲಯ ಎಂದೇ ಜನರು ಕರೆಯುವರು. ತಿರುತ್ತಣಿ, ತಿರುನೆಲ್ವೇಲಿ ಜಿಲ್ಲೆಯ ತಿರುಚ್ಚೆಂದೂರ್, ಕನ್ಯಾಕುಮಾರಿ_ಇವು ಪ್ರಸಿದ್ಧ ಪುಣ್ಯಸ್ಥಳಗಳು. ತಮಿಳು ನಾಡಿನ ಪುಣ್ಯಸ್ಥಳಗಳು ಚರಿತ್ರೆ, ಸಾಹಿತ್ಯ, ಸಮಯ, ತತ್ತ್ವ, ಪುರಾಣಗಳಿಂದ ಪ್ರಸಿದ್ಧಿ ಪಡೆದಿವೆ. ಹಲವು ಶೈವ ಸ್ಥಳಗಳನ್ನು ಕುರಿತು ಅಪ್ಪರ್, ಸಂಬಂಧರ್, ಸುಂದರರ್ ಮುಂತಾದವರು ತೇವಾರಗಳನ್ನು ಹಾಡಿದ್ದಾರೆ. ಶ್ರೀವೈಷ್ಣವ ಸ್ಥಳಗಳಿಗೆ ಮಂಗಳಾಶಾಸನಗಳಿವೆ; ಎಂದರೆ ಆಳ್ವಾರಗಳು ಇವನ್ನು ಹಾಡಿ ಹೊಗಳಿದ್ದಾರೆ. ೬೩ ನಾಯನ್‍ಮಾರ್‍ಗಳೂ ೧೨ ಆಳ್ವಾರ್‍ಗಳೂ ಹುಟ್ಟಿದ ಗ್ರಾಮಗಳೂ ಪುಣ್ಯಸ್ಥಳಗಳೇ. ತಮಿಳು ನಾಡಿನಲ್ಲಿ ಇತರ ಮತದವರ ಪುಣ್ಯಸ್ಥಳಗಳೂ ಉಂಟು. ತಂಜಾವೂರು ಜಿಲ್ಲೆಯ ನಾಗಪಟ್ಟಿನಕ್ಕೆ ಸಮೀಪದಲ್ಲಿರುವ ವೇಳಾಂಗಣ್ಣಿ ಕ್ರೈಸ್ತರ ಪವಿತ್ರ ಸ್ಥಳ. ನಾಗೂರ್ ಎಂಬುದು ಮಹಮ್ಮದೀಯರ ಪವಿತ್ರ ಕ್ಷೇತ್ರ. ವೇಳಾಂಗಣ್ಣಿಯ ಹಬ್ಬವನ್ನೂ ನಾಗೂರ್ ಕಂದೂರಿ ಹಬ್ಬವನ್ನೂ ನೋಡಲು ಹಿಂದೂಗಳೂ ಗುಂಪು ಗುಂಪಾಗಿ ಹೋಗುತ್ತಾರೆ. ಆಡಳಿತ ತಮಿಳುನಾಡು ಸರ್ಕಾರ thumb|200px|right|Districts of Tamil Nadu ತಮಿಳು ನಾಡಿನ ಸರ್ಕಾರ ವ್ಯವಸ್ಥೆ ಭಾರತ ಗಣರಾಜ್ಯದ ಇತರ ರಾಜ್ಯಗಳವುಗಳದರಂತೆಯೇ ಇದೆ. ರಾಷ್ಟ್ರಪತಿಯಿಂದ ನೇಮಕ ಹೊಂದಿದ ರಾಜ್ಯಪಾಲ ರಾಜ್ಯದ ಮುಖ್ಯ. ರಾಜ್ಯ ವಿಧಾನಮಂಡಲದಲ್ಲಿ ವಿಧಾನ ಪರಿಷತ್ತು (ಮೇಲ್ಮನೆ) ಮತ್ತು ವಿಧಾನ ಸಭೆ ಇವೆ. ವಿಧಾನ ಸಭೆಯ ಸದಸ್ಯರು ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಮತದಾನದಿಂದ ನೇರವಾಗಿ ಆಯ್ಕೆಯಾಗುತ್ತಾರೆ. ವಿಧಾನ ಸಭೆ, ಸ್ಥಳೀಯ ಸಂಸ್ಥೆಗಳು, ಪದವೀಧರರು. ಅಧ್ಯಾಪಕ ಕ್ಷೇತ್ರಗಳಿಂದ ಆಯ್ಕೆ ಹೊಂದಿದವರು, ಮತ್ತು ರಾಜ್ಯಪಾಲರಿಂದ ನಾಮಕರಣವಾದವರು ವಿಧಾನ ಪರಿಷತ್ತಿನ ಸದಸ್ಯರು. ಮುಖ್ಯಮಂತ್ರಿ ಮತ್ತು ಆತನ ಸಂಪುಟ ಸದಸ್ಯರು ವಿಧಾನ ಮಂಡಲಕ್ಕೆ ಉತ್ತರವಾದಿಗಳಾಗಿರುತ್ತಾರೆ.ರಾಜ್ಯದ ನ್ಯಾಯವ್ಯವಸ್ಥೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಜಿಲ್ಲೆಯ ಮತ್ತು ಅದಕ್ಕಿಂತ ಕೆಳಗಿನ ನ್ಯಾಯಾಲಯಗಳಿವೆ.ರಾಜ್ಯವನ್ನು 30 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ: ಜಿಲ್ಲೆಯ ಉನ್ನತ ಅಧಿಕಾರಿ ಕಲೆಕ್ಟರ್. + ತಮಿಳುನಾಡಿನ ಜಿಲ್ಲೆಗಳು ಜಿಲ್ಲೆ ಜಿಲ್ಲಾ ಕೇಂದ್ರ ವಿಸ್ತೀರ್ಣ ಜನಸಂಖ್ಯೆ(2011) ಜನಸಂಖ್ಯೆಸಾಂದ್ರತೆ 1 ಅರಿಯಾಲೂರು ಅರಿಯಾಲೂರು km2 /km2 2 ಚೆನ್ನೈ ಚೆನ್ನೈ km2 /km2 3 ಕೊಯಮತ್ತೂರು ಕೊಯಮತ್ತೂರು km2 /km2 4 ಕಡಲೂರು ಕಡಲೂರು km2 /km2 5 ಧರ್ಮಪುರಿ ಧರ್ಮಪುರಿ km2 /km2 6 ಡಿಂಡಿಗಲ್ ಡಿಂಡಿಗಲ್ km2 /km2 7 ಈರೋಡು ಈರೋಡು km2 /km2 8 ಕಾಂಚೀಪುರಂ ಕಾಂಚೀಪುರಂ km2 /km2 9 ಕನ್ಯಾಕುಮಾರಿ ನಾಗರ್‍ಕೋಯಿಲ್ km2 /km2 10 ಕರೂರು ಕರೂರು km2 /km2 11 ಕೃಷ್ಣಗಿರಿ ಕೃಷ್ಣಗಿರಿ km2 /km2 12 ಮದುರೈ ಮದುರೈ km2 /km2 13 ನಾಗಪಟ್ಟಿಣಂ ನಾಗಪಟ್ಟಿಣಂ km2 /km2 14 ನಮಕ್ಕಲ್ ನಮಕ್ಕಲ್ km2 /km2 15 ನೀಲಗಿರಿ ಉದಕಮಂಡಲಂ km2 /km2 16 ಪೆರುಂಬಲೂರು ಪೆರುಂಬಲೂರು km2 /km2 17 ಪುದುಕೊಟ್ಟೈ ಪುದುಕೊಟ್ಟೈ km2 /km2 18 ರಾಮನಾಥಪುರಂ ರಾಮನಾಥಪುರಂ km2 /km2 19 ಸೇಲಂ ಸೇಲಂ km2 /km2 20 ಶಿವಗಂಗ ಶಿವಗಂಗ km2 /km2 21 ತಂಜಾವೂರ್ ತಂಜಾವೂರ್ km2 /km2 22 ಥೇಣಿ ಥೇಣಿ km2 /km2 23 ತೂತುಕುಡಿ ತೂತುಕುಡಿ km2 /km2 24 ತಿರುಚಿರಾಪಳ್ಳಿ ತಿರುಚಿರಾಪಳ್ಳಿ km2 /km2 25 ತಿರುನೆಲ್ವೇಲಿ ತಿರುನೆಲ್ವೇಲಿ km2 /km2 26 ತಿರುಪೂರ್ ತಿರುಪೂರ್ km2 /km2 27 ತಿರುವಳ್ಳೂರು ತಿರುವಳ್ಳೂರು km2 /km2 28 ತಿರುವಣ್ಣಾಮಲೈ ತಿರುವಣ್ಣಾಮಲೈ km2 /km2 29 ತಿರುವಾರೂರು ತಿರುವಾರೂರು km2 /km2 30 ವೆಲ್ಲೂರು ವೆಲ್ಲೂರು km2 /km2 31 ವಿಲ್ಲುಪುರಂ ವಿಲ್ಲುಪುರಂ km2 /km2 32 ವಿರುಧನಗರ ವಿರುಧನಗರ km2 /km2 ಜಿಲ್ಲೆಯಿಂದ ಕೆಳಗಿನ ಹಂತಗಳ ಆಡಳಿತ ಘಟಕಗಳು ತಾಲ್ಲೂಕು, ಫಿರ್ಕಾ ಮತ್ತು ಗ್ರಾಮಗಳು. ತಮಿಳು ನಾಡಿನಲ್ಲಿ 29 ಜಿಲ್ಲಾ ಅಭಿವೃದ್ಧಿ ಮಂಡಲಿಗಳೂ 374 ಪಂಚಾಯಿತಿ ಮಂಡಲಿಗಳೂ (ಬ್ಲಾಕ್) 12,490 ಗ್ರಾಮ ಪಂಚಾಯಿತಿಗಳೂ ಇವೆ. ಕ್ಷೇತ್ರಾಭಿವೃದ್ಧಿ, ಸಮಾಜ ಕಲ್ಯಾಣ, ಶಿಕ್ಷಣ ವಿಸ್ತರಣೆ, ಸ್ಥಳೀಯ ಸಂಸ್ಥೆಗಳು ಮತ್ತು ನಾಯಕತ್ವದ ವಿಕಾಸ ನೆರವಿನೊಂದಿಗೆ ಸ್ವಸಹಾಯ-ಇವನ್ನು ಸಾಧಿಸಲು ಸಮುದಾಯ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಶಿಕ್ಷಣ 1964-65 ರಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ. ಮೊದಲನೆಯ ತರಗತಿಗೆ ಪ್ರವೇಶದ ಕನಿಷ್ಠ ವಯಸ್ಸು 5+. ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಯೋಜನೆಯನ್ನು 1956ರಲ್ಲಿ ಜಾರಿಗೆ ತರಲಾಯಿತು. ಸ್ವಸಹಾಯದ ತಳಹದಿಯ ಮೇಲೆ ತರಲಾದ ಈ ಯೋಜನೆಯ ಅನ್ವಯದಲ್ಲಿ ಸರ್ಕಾರವೂ ಕೇರ್ ಸಂಸ್ಥೆಯೂ ಅನಂತರ ಆಸಕ್ತಿ ವಹಿಸಿದುವು. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಬರುತ್ತಿರುವ ವಿಧ್ಯಾರ್ಥಿಗಳ ಅಧಿಕ ಸಂಖ್ಯೆಯಿಂದಾಗಿ ಕಾಲೇಜು ಶಿಕ್ಷಣದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಇದು ಅಗಾಧವಾಗಿ ವಿಸ್ತರಿಸಿದೆ. ಸರ್ಕಾರದ ವೆಚ್ಚದಲ್ಲಿ ಸೇ. 25ಕ್ಕಿಂತ ಹೆಚ್ಚು ಭಾಗ ಶಿಕ್ಷಣಕ್ಕೆ ಮೀಸಲಾಗಿದೆ. ಪ್ರಿ-ಯೂನಿವರ್ಸಿಟಿ ಘಟ್ಟದ ವರೆಗೆ ರಾಜ್ಯದಲ್ಲಿ ಶಿಕ್ಷಣ ಉಚಿತ. ರಾಜ್ಯದಲ್ಲಿರುವ ವಿಶ್ವ ವಿದ್ಯಾನಿಲಯಗಳು ಇವು : ಮದ್ರಾಸ್ ವಿಶ್ವವಿದ್ಯಾನಿಲಯ, ಮದ್ರಾಸು; ಅಣ್ಣಾಮಲೈ ವಿಶ್ವವಿದ್ಯಾನಿಲಯ, ಅಣ್ಣಾಮಲೈ ನಗರ, ಮಧುರೈ ವಿಶ್ವದ್ಯಾನಿಲಯ ಮಧುರೈ. ಜನಸಂಖ್ಯೆಗನುಗುಣವಾಗಿ ಶಾಲಾ ಕಾಲೇಜುಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಕಲೆ, ಸಂಸ್ಕೃತಿ ತಮಿಳು ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿಗಳು ಬಹಳ ಪ್ರಾಚೀನವೂ ವಿಶಿಷ್ಟವೂ ಆದಂಥವು. ಭಾರತೀಯ ಹಾಗೂ ವಿಶ್ವ ಚಿಂತನಕ್ಕೆ ತಮಿಳು ನಾಡಿನ ಒಂದು ದೊಡ್ಡ ಕೊಡುಗೆಯೆಂದರೆ ವಳ್ಳುವರ್ ಅವರ ತಿರುಕ್ಕುರಳ್. ಇದು ಜೀವನಕ್ಕೆ ಸಂಬಂಧಿಸಿದ ನೀತಿ ಸಂಹಿತೆಯಾಗಿರುವುದಲ್ಲದೆ ತಮಿಳರ ಅಂತ:ಸತ್ವದ, ಅವರ ಕ್ರಿಯಾಶೀಲ ಚೈತನ್ಯದ ಪ್ರತೀಕವಾಗಿದೆ. ತಂಜಾವೂರು, ಮಹಾಬಲಿಪುರಂ, ಕಾಂಚೀಪುರಂ ಮುಂತಾದ ಸ್ಥಳಗಳಲ್ಲಿಯ ದೇಗುಲ ಗೋಪುರಗಳೂ ಬಂಡಿಗಳ ಮೇಲೆ ಕೊರೆದ ಶಿಲ್ಪಗಳೂ ತಂಜಾವೂರಿನ ನವಿರಾದ ಕರಕುಶಲ ಕಲಾಕೃತಿಗಳೂ ಭರತನಾಟ್ಯವೂ ಈ ರಾಜ್ಯದ ದೀರ್ಘ ಹಾಗೂ ಭವ್ಯ ಸಾಂಸ್ಕøತಿಕ ಪರಂಪರೆಯನ್ನು ಸಾರುತ್ತವೆ. ತಮಿಳು ವಾಸ್ತುಶಿಲ್ಪದ ಮಹೋನ್ನತ ಕಾಲವೆಂದರೆ 9 ನೆಯ ಶತಮಾನದ ನಡುವಿನಿಂದ 11ನೆಯ ಶತಮಾನದ ಕೊನೆಯವರೆಗಿನದು. ಮಹಾಬಲಿಪುರದಲ್ಲಿರುವ, ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ, ಬಂಡೆಯಲ್ಲಿ ಕೊರೆದ, ಗುಹಾ ವಾಸ್ತುಗಳೂ ಏಕಶಿಲಾ ದೇವಾಲಯಗಳೂ ಅದ್ಭುತ ಕೃತಿಗಳು. ತಮಿಳುನಾಡು ಹಿಂದಿನಿಂದಲೂ ನೆರೆಯ ದೇಶ ಪ್ರದೇಶಗಳೊಂದಿಗೂ ವಿಭಿನ್ನ ಸಂಸ್ಕøತಿಗಳೊಂದಿಗೂ ಸ್ನೇಹಯುತ ಸಂಬಂಧ ಬೆಳೆಸಿ, ತನ್ನ ವೈಶಿಷ್ಟ್ಯಕ್ಕೆ ಕುಂದು ಬಾರದಂತೆ ಇತರ ಸಂಸ್ಕøತಿಗಳ ಉತ್ಕøಷ್ಟ ಅಂಶಗಳನ್ನು ಜೀರ್ಣಿಸಿಕೊಂಡಿದೆ. ಕರ್ನಾಟಕ ಸಂಗೀತ ಹಾಗೂ ಭರತನಾಟ್ಯದ ಬೆಳವಣಿಗೆಗೆ ತಮಿಳುನಾಡು ವಿಶಿಷ್ಟವಾದ ಕಾಣಿಕೆ ಸಲ್ಲಿಸಿದೆ. ಲೋಹದ ಎರಕದಲ್ಲಿ ತಮಿಳು ಕೆಲಸಗಾರರು ಶ್ರೇಷ್ಠವಾದ ತಾಂತ್ರಿಕ ಪರಿಪೂರ್ಣತೆ ಸಾಧಿಸಿದರು. ಇತಿಹಾಸದ ಉದ್ದಕ್ಕೂ ಸಾಹಿತ್ಯ, ಜ್ಞಾನ, ಕಲೆ, ವಾಸ್ತು, ಶಿಲ್ಪ, ಆಡಳಿತ ಪದ್ಧತಿಗಳು ಮತ್ತು ದರ್ಶನಗಳಲ್ಲಿ ತಮಿಳರ ಪ್ರತಿಭೆ ಅದ್ಭುತವಾಗಿಯೂ ದಟ್ಟವಾಗಿಯೂ ಅಭಿವ್ಯಕ್ತವಾಗಿದೆ. ಪುರಾತತ್ವ ಕ್ಷೇತ್ರದಲ್ಲಿ ತಮಿಳುನಾಡು ಸಂಪದ್ಯುಕ್ತವಾದ್ದು. ಪ್ರಾಚೀನ ಭಾರತದ ಸಂಸ್ಕøತಿಯ ವಿಶಿಷ್ಟತೆಯನ್ನು ಯಶಸ್ವಿಯಾಗಿ ಉಳಿಸಿಕೊಂಡು ಬಂದಿರುವ ರಾಜ್ಯ ತಮಿಳುನಾಡು. ಆರ್ಥಿಕತೆ : ಕೃಷಿ ತಮಿಳುನಾಡಿನ ಜನರ ಮುಖ್ಯ ಕಸುಬು ವ್ಯವಸಾಯ. ಸೇ. 61.54 ಕ್ಕಿಂತ ಕಡಿಮೆಯಿಲ್ಲದಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ರಾಜ್ಯದ ಮುಖ್ಯ ವಾಣಿಜ್ಯ ಬೆಳೆಗಳು-ಅವನ್ನು ಬೆಳಯುವ ನೆಲದ ವಿಸ್ತೀರ್ಣಕ್ಕೆ ಅನುಗುಣವಾಗಿ-- ನೆಲಗಡಲೆ, ಹತ್ತಿ, ಕಬ್ಬು, ಎಳ್ಳು, ತೆಂಗು, ಮರಗೆಣಸು ಮತ್ತು ಹರಳು ರಾಜ್ಯದ ಮುಖ್ಯ ಆಹಾರ ಬೆಳಗಳು ಬತ್ತ ಮತ್ತು ಇತರ ಧಾನ್ಯಗಳು, ಕಾಳುಗಳು ಈರುಳ್ಳಿ, ಆಲೂಗಡ್ಡೆ, ಗೆಣಸು, ಮರಗೆಣಸು, ಮತ್ತು ಬಾಳೆ. ಭಾರತದ ಕ್ವಿನೈನ್ ಉತ್ಪಾದಿಸುವ ಎರಡು ರಾಜ್ಯಗಳ ಪೈಕಿ ತಮಿಳು ನಾಡೂ ಒಂದು. ಸಾಗುವಳಿಗೆ ಒಳಪಟ್ಟಿರುವ ಒಟ್ಟು ನೆಲದ ವಿಸ್ತೀರ್ಣ 59,34,000 ಹೆಕ್ಟೇರ್. ಇದರಲ್ಲಿ 23,99,000 ಹೆಕ್ಟೇರ್‍ಗಳು ನೀರಾವರಿಗೆ ಒಳಪಟ್ಟಿವೆ ಹೆಚ್ಚು ಇಳುವರಿಯ ತಳಿಗಳನ್ನು ಬಳಸಲಾರಂಭಿಸಿದ್ದರಿಂದ ರಾಜ್ಯದ ಸಂಪ್ರದಾಯ ಬದ್ಧ ಬೇಸಾಯಕ್ರಮದಲ್ಲಿ ಅಗಾಧ ಬದಲಾವಣೆಗಳಾಗಿವೆ. ಒಂದು ಬೆಳೆ ತೆಗೆಯುತ್ತಿದ್ದ ಅನೇಕ ರೈತರು ಎರಡು-ಮೂರು ಬೆಳೆ ತೆಗೆಯಲಾರಂಭಿಸಿದ್ದಾರೆ. ನೀರಾವರಿ, ವಿದ್ಯುತ್ತು ರಾಜ್ಯದ ಮುಖ್ಯ ನೀರಾವರಿ ಕಾಮಗಾರಿಗಳು ಮೆಟ್ಟೂರ್ (ಸೇಲಂ ಮತ್ತು ಕೊಯಮತ್ತೂರು ಜಿಲ್ಲೆಗಳು), ಕೆಳ ಭವಾನಿ (ಕೊಯಮತ್ತೂರು ಮತ್ತು ತಿರುಚಿ ಜಿಲ್ಲೆಗಳು), ಅರಣಿಯಾರ್ (ಚೆಂಗಲ್ಪಟ್ಟು ಜಿಲ್ಲೆ) ಅಮರಾವತಿ (ಕೊಯಮತ್ತೂರು ಜಿಲ್ಲೆ), ಸಾತನೂರ್ (ಉತ್ತರ ಮತ್ತು ದಕ್ಷಿಣ ಆರ್ಕಾಟ್). ರಾಜ್ಯದ ಮುಖ್ಯ ವಿದ್ಯುತ್ ಉತ್ಪಾದನ ಕಾಮಗಾರಿಗಳು ಇವು: 1 ಮುಚಕುಂದ್ ಜಲ ವಿದ್ಯುತ್ ಯೋಜನೆ, 2. ಪೈಕಾರ ಜಲವಿದ್ಯುತ್ ಯೋಜನೆ, 3. ಮೆಯರ್ ಜಲವಿದ್ಯುತ್ ಯೋಜನೆ, 4. ಚೆನ್ನೈ ಶಾಖ ವಿದ್ಯುತ್ ಯೋಜನೆ, 5. ಪಾಪನಾಶಂ ವಿದ್ಯುತ್ ವ್ಯವಸ್ಥೆ, 6. ಮೆಟ್ಟೂರ್ ಜಲ ವಿದ್ಯುತ್ ಯೋಜನೆ. ರಾಜ್ಯದ ಅತ್ಯಂತ ದೊಡ್ಡ ವಿದ್ಯುತ್ ಯೋಜನೆಯೆಂದರೆ ಕುಂದಾ ವಿದ್ಯುತ್ ವ್ಯವಸ್ಥೆಯದು. ಕೊಲೊಂಬೋ ಯೋಜನೆಯ ಅಡಿಯಲ್ಲಿ ಕೆನಡದ ನೆರವಿನಿಂದ ಈ ಯೋಜನೆಯನ್ನು ಆರಂಭಿಸಲಾಯಿತು. ನೀಲಗಿರಿ ಬೆಟ್ಟಗಳ ನಡುವೆ ಈ ವಿದ್ಯುತ್ ಕೇಂದ್ರ ನೆಲೆಗೊಂಡಿದೆ. ಗ್ರಾಮೀಣ ವಿದ್ಯುದೀಕರಣದಲ್ಲಿ ತಮಿಳು ನಾಡು ಇತರ ರಾಜ್ಯಗಳಿಗಿಂತ ಮುಂದೆ ಇದೆ. ಮತ್ಸ್ಯೋದ್ಯಮ 1967_68 ರಲ್ಲಿ ತಮಿಳು ನಾಡಿನಲ್ಲಿ ರೂ.23.05 ಕೋಟಿ ಮೌಲ್ಯದ 2.05 ಲಕ್ಷ ಟನ್ ಸಮುದ್ರ ಮೀನನ್ನೂ ರೂ.7.31 ಕೋಟಿ ಮೌಲ್ಯದ 1.16 ಲಕ್ಷ ಟನ್ ಸಿಹಿನೀರಿನ ಮತ್ಸ್ಯಗಳನ್ನೂ ಹಿಡಿಯಲಾಯಿತು. ಹಿಂದಿನಿಂದ ರೂಢಿಯಲ್ಲಿರುವ ಕಟ್ಟಮರಾನ್‍ಗಳ ನೆರವಿನಿಂದ ಸಮುದ್ರದಲ್ಲಿ ಮತ್ಸ್ಯೋದ್ಯಮವನ್ನು ಬೆಳೆಸಲು ಈ ರಾಜ್ಯ ಹಿಂದಿನಿಂದಲೂ ಶ್ರಮಿಸುತ್ತಿತ್ತು. ಯಾಂತ್ರೀಕೃತ ದೋಣಿಗಳನ್ನು ಬಳಕೆಗೆ ತರುವ ಯೋಜನೆಯನ್ನು 1955ರಲ್ಲಿ ಸರ್ಕಾರ ಜಾರಿಗೆ ತಂದಿತು. ಇದು ವಿಶೇಷವಾಗಿ ಪ್ರಗತಿ ಹೊಂದಿದೆ. ಮೀನುಗಾರರಿಗೆ ತರಬೇತನ್ನೂ ನೀಡಲಾಗುತ್ತಿದೆ. ಎಲ್ಲ ಮೀನುಗಾರಿಕೆ ಕೇಂದ್ರಗಳಲ್ಲೂ ಬರ್ಫ ಯಂತ್ರಗಳನ್ನೂ ಶೈತ್ಯಾಗಾರಗಳನ್ನೂ ಸ್ಥಾಪಿಸಲಾಗಿದೆ. ಒಳನಾಡಿನ ಮೀನುಗಾರಿಕೆಯಲ್ಲೂ ತಮಿಳು ನಾಡು ವಿಶೇಷ ಪ್ರಗತಿ ಸಾಧಿಸಿದೆ. ಭವಾನಿ ಸಾಗರದ ಒಳನಾಡಿನ ಮೀನುಗಾರಿಕೆ ಸಂಶೋಧನ ಕೇಂದ್ರ ಮತ್ತು ಎನ್ನೋರ್, ಕನ್ಯಾಕುಮಾರಿ, ತೂತ್ತುಕುಡಿ ಮತ್ತು ಮದ್ರಾಸ್ ಸಮುದ್ರ ಮೀನುಗಾರಿಕೆ ಸಂಶೋಧನ ಕೇಂದ್ರಗಳು ಮೀನುಗಾರಿಕೆ ಅಭಿವೃದ್ಧಿಯಲ್ಲಿ ಮಹತ್ತ್ವದ ಪಾತ್ರವಹಿಸಿವೆ. ತಮಿಳುನಾಡಿನ ನೀರಾವರಿ ಭೂವಿಸ್ತೀರ್ಣ ಈಗ ಹೆಚ್ಚಾಗಿದ್ದು ಅದಕ್ಕೆ ತಕ್ಕಂತೆ ನಾಡಿನ ಬೆಳೆಗಳ ಉತ್ಪಾದನೆ ಹೆಚ್ಚಾಗಿದೆ. ಹಾಗೆಯೇ ವಿದ್ಯುತ್, ಮತ್ಸೋದ್ಯಮ, ಮುಂತಾದವುಗಳನ್ನು ಈಗ ಹೆಚ್ಚು ಉತ್ಪಾದಿಸಲಾಗುತ್ತಿದೆ. 2001-2002ರಲ್ಲಿ ರಾಜ್ಯದ ಒಟ್ಟು ಕೃಷಿಭೂಮಿ 6.23ಮಿಲಿಯ ಹೆಕ್ಟೇರುಗಳಿದ್ದು ಒಟ್ಟು 10 ಮಿಲಿಯ ಟನ್‍ಗಳ ಧಾನ್ಯೋತ್ಪತ್ತಿಯಾಗಿತ್ತು. ಅರಣ್ಯಗಾರಿಕೆ ರಾಜ್ಯದ ಮೀಸಲು ಅರಣ್ಯಗಳ ವಿಸ್ತೀರ್ಣ 17,258 ಚ.ಕಿಮೀ. ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ 15.5% ಭಾಗ ಅರಣ್ಯಾವೃತ. ಸಾಗುವಾನಿ, ಸೌದೆ, ಬೊಂಬು, ಶ್ರೀಗಂಧ, ಚರ್ಮಹದಕ್ಕೆ ಬೇಕಾದ ತೊಗಟೆ ಮುಂತಾದವು ಅರಣ್ಯೋತ್ಪನ್ನಗಳು. ಪಶ್ಚಿಮದ ಕಾಡುಗಳಲ್ಲಿ ತೇಗ, ಬೀಟೆ ಮುಂತಾದ ಸಾಗುವಾನಿ ಮರಗಳೂ ಸಿಗುತ್ತವೆ. ಸಾಗುವನಿ ಮರಗಳ ಕಾಡುಗಳು ಬಹುತೇಕ ಪಶ್ಚಿಮ ಘಟ್ಟಗಳ ಹೆಚ್ಚು ಮಳೆ ಬೀಳುವ ಪ್ರದೇಶಗಳಿಗೆ ಸೀಮಿತವಾಗಿವೆ. ಕೊಯಮತ್ತೂರು, ಮದುರೈ ಮತ್ತು ತಿರುನೆಲ್ವೇಲಿ ಜಿಲ್ಲೆಗಳ ಕಾಡುಗಳಲ್ಲಿ ನಲವತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ಸಾಗುವಾನಿ ಜಾತಿಗಳಿವೆ. ತೇಗದ ಆನಂತರ ಅತ್ಯಂತ ಪ್ರಮುಖವಾದ ಅರಣ್ಯೋತ್ಪನ್ನವೆಂದರೆ ಶ್ರೀಗಂಧ. ಖನಿಜಗಳು ತಮಿಳು ನಾಡಿನಲ್ಲಿ ಕಬ್ಬಿಣ ಅದಿರು, ಬಾಕ್ಸೈಟ್, ಜಿಪ್ಸಂ, ಅಭ್ರಕ, ಸುಣ್ಣಕಲ್ಲು, ಪಿಂಗಾಣಿ ಮಣ್ಣು, ಮ್ಯಾಗ್ನೆಸೈಟ್, ಲವಣ, ಇಲ್ಮೆನೈಟ್, ಮೊನಾಜೈಟ್, ಜಿರ್ಕಾನ್, ಮುಂತಾದ ಖನಿಜಗಳ ನಿಕ್ಷೇಪಗಳಿವೆ. ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ, ಜಿಲ್ಲೆಗಳ ಕರಾವಳಿಯಲ್ಲಿ ಅಲೆಗಳ ಪ್ರಕ್ರಿಯೆಯಿಂದಾಗಿ ಸಂಗ್ರಹವಾಗಿರುವ ಮರಳಿನಲ್ಲಿ ತೋರಿಯಂ ಸಿಗುತ್ತದೆ. ಕಾವೇರಿ ಜಲಾನಯನ ಭೂಮಿಯ ಪ್ರಥಮ ಯುಗೀಣ ಸಂಕೀರ್ಣದಲ್ಲಿ ಭಿನ್ನಸ್ತರಶಿಲೆ, ಗ್ರಾನೈಟ್, ನೀಸ್ ಮುಂತಾದವು ಇವೆ. ಸೇಲಂ_ಕೊಯಮತ್ತೂರು ವಲಯ ಖನಿಜಸಂಪದ್ಯುಕ್ತವಾದ್ದು. ತಲಮೈ, ಕಂಜಮಲೈ, ಗೋಡುಮಲೈಗಳಲ್ಲಿ ಸೇ.60ಕ್ಕಿಂತ ಹೆಚ್ಚು ಕಬ್ಬಿಣಾಂಶ ಇರುವ ಕಬ್ಬಿಣ ಅದಿರುಗಳಿವೆ. ಜಲವಿದ್ಯುತ್ ಶಕ್ತಿಯಿಂದ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯನ್ನು ಸ್ಥಾಪಿಸಲು ವಿಶೇಷ ಅವಕಾಶವುಂಟು. ತಮಿಳು ನಾಡಿನಲ್ಲಿ ಕಲ್ಲಿದ್ದಲಿನ ನಿಕ್ಷೇಪಗಳಿಲ್ಲ. ಆದರೆ ನೈವೇಲಿಯ ಬಳಿ 200 ಕೋಟಿ ಟನ್ ಲಿಗ್ನೈಟ್ ನಿಕ್ಷೇಪಗಳಿವೆ. ಕೈಗಾರಿಕೆಗಳು ರಾಜ್ಯದಲ್ಲಿರುವ ದೊಡ್ಡ ಕೈಗಾರಿಕೆಗಳು ಕೆಳಗಿನಂತಿವೆ. ಜವಳಿ ವಿದ್ಯುತ್ತು, ಅನಿಲ ಮೋಟಾರು ವಾಹನ ತಯಾರಿಕೆ, ರಿಪೇರಿ ವಿದ್ಯುತ್ ಯಂತ್ರವಲ್ಲದೆ ಇತರ ಯಂತ್ರಗಳ ತಯಾರಿಕೆ ಆಹಾರ ಕೈಗಾರಿಕೆ ವಿದ್ಯುತ್ ಯಂತ್ರೋಪಕರಣ ರೈಲ್ವೆ ಸರಂಜಾಮು ಮುದ್ರಣ, ಪ್ರಕಟನೆ ಮುಂತಾದವು ರಸಗೊಬ್ಬರವನ್ನೂ ಒಳಗೊಂಡಂತೆ ಮೂಲ ಕೈಗಾರಿಕಾ ರಾಸಾಯನಿಕಗಳು ಕಬ್ಬಿಣಾಂಶ ಲೋಹ ಕೈಗಾರಿಕೆಗಳು ಕಬ್ಬಿಣ ಉಕ್ಕು ಸಕ್ಕರೆ ಕಾರ್ಖಾನೆಗಳು ರಾಸಾಯನಿಕ ಉತ್ಪನ್ನಗಳು ರಬ್ಬರ್ ಮತ್ತು ರಬ್ಬರ್ ಉತ್ಪನ್ನಗಳು ಸಿಮೆಂಟ್ ಯಂತ್ರ, ಸಾರಿಗೆ ಸರಂಜಾಮು ಬಿಟ್ಟು ಇತರ ಲೋಹಪದಾರ್ಥಗಳು ಚರ್ಮ ಹದಗಾರಿಕೆ ಹಾಗೂ ಪರಿಷ್ಕರಣ ಕಾರ್ಖಾನೆಗಳು ಮೋಟಾರ್ ಸೈಕಲ್ ಮತ್ತು ಬೈಸಿಕಲ್ ತಯಾರಿಕೆ ಧಾನ್ಯ ಖಾದ್ಯ ತಯಾರಿಕೆ ಅಲೋಹ ಖನಿಜ ವಸ್ತು ತಯಾರಿಕೆ ಮೇಲೆ ಹೇಳಿದವಲ್ಲದೆ ಹೊಗೆಸೊಪ್ಪು, ಬೆಂಕಿಕಡ್ಡಿ, ಎಣ್ಣೆ ತೆಗೆಯುವುದು, ಇಟ್ಟಿಗೆ, ಹೆಂಚು, ಸುಣ್ಣ, ಕುಂಭ, ಹತ್ತಿ ಹಿಂಜುವುದು, ಹೆಣಿಗೆ, ರೇಷ್ಮೆ, ಮೂಳೆ ಗೂಬ್ಬರ, ಬಣ್ಣ, ಸಾಬೂನು, ಕಾಗದ, ಗಾಜು, ಮರಕೊಯ್ತ, ಹಗ್ಗ ಮುಂತಾದ ಕೈಗಾರಿಕೆಗಳೂ ಇವೆ. ಗಣಿಗಾರಿಕೆಯಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಒದಗಿಸಿರುವ 18,095 ಘಟಕಗಳಿವೆ. ಭಾರತದ ಒಟ್ಟು ಚರ್ಮೋದ್ಯೋಗದಲ್ಲಿ ಸೆ. 60 ಭಾಗ ತಮಿಳುನಾಡಿನಲ್ಲಿದೆ. ಕುಡ್ಡಲೂರು ಮತ್ತು ಟುಟಿಕೋರಿನ್‍ಗಳಲ್ಲಿ ಗೊಬ್ಬರ ಮತ್ತು ರಾಸಾಯನಿಕಗಳ ಕಾರ್ಖಾನೆಗಳಿವೆ. ಗಿಂಡಿಯ ಬಳಿ ಹಿಂದೂಸ್ತಾನ್ ಟೆಲಿಪ್ರಿಂಟರ್ಸ್ ಲಿ. ತಿರುಚ್ಚಿರಾಪ್ಪಳ್ಳಿಯಲ್ಲಿ ಅಧಿಕ ಒತ್ತಡ ಬಾಯಿಲರ್ ಕಾರ್ಖಾನೆ, ಉದಕಮಂಡಲದಲ್ಲಿ ಕಚ್ಚಾ ಫಿಲಂ ಕಾರ್ಖಾನೆ. ಆವಡಿಯಲ್ಲಿ ಭಾರಿ ವಾಹನಗಳ (ಟ್ಯಾಂಕ್) ಕಾರ್ಖಾನೆ, ಪೆರಂಬೂರಿನ ಇಂಟೆಗ್ರಲ್ ಕೋಚ್ (ರೈಲ್ವೆ ಗಾಡಿ) ಕಾರ್ಖಾನೆ, ನೈವೇಲಿಯ ಲಿಗ್ನೈಟ್ ಕಾರ್ಪೋರೇಷನ್ ಇವು ಕೇಂದ್ರ ಸರ್ಕಾರದ ಕೊಡ್ಡ ಕೈಗಾರಿಕಾ ಸಂಸ್ಥೆಗಳು. ತಮಿಳು ನಾಡು ಸರ್ಕಾರದ ಅಧೀನದಲ್ಲಿರುವ ಎರಡು ದೊಡ್ಡ ಕಾರ್ಖಾನೆಗಳು ಮದ್ರಾಸ್ ರಸಗೊಬ್ಬರ ಕಾರ್ಖಾನೆ ಮತ್ತು ಉಣ್ಣೆ ಪರಿಷ್ಕರಣ ಕೇಂದ್ರ. ತಮಿಳು ನಾಡಿನ ಗೃಹಕೈಗಾರಿಕೆಗಳು ಪ್ರಾಚೀನವಾದವು. ಧರ್ಮ ಸರಕು, ಕುಂಭ ಕಲೆ, ಛತ್ರಿ, ಹಿತ್ತಾಳೆ ಸಾಮಾನು ಕೈಮಗ್ಗ, ಕಲ್ಲಿನ ಪಾತ್ರೆಗಳು, ಗಾಜಿನ ಬಳೆ, ಬೆಂಕಿಕಡ್ಡಿ, ಜರತಾರಿ, ಅಲ್ಯೂಮಿನಿಯಂ ಪದಾರ್ಥಗಳು, ದಂತ ಕೆಲಸ, ಕಲ್ಲು ಹಲಗೆ, ಮತಗೊರೆತ, ಖಾದಿ, ತಾಳೆಬೆಲ್ಲ, ಚಾಪೆ, ತೆಂಗಿನನಾರಿನ ಸರಕು ಮುಂತಾದವು ಹಳೆಯ ಗೃಹಕೈಗಾರಿಕೆಗಳು. ವ್ಯಾಪಾರ ಬಹಳ ಪ್ರಾಚೀನ ಕಾಲದಿಂದ ತಮಿಳು ನಾಡು ವಿದೇಶಗಳೊಂದಿಗೆ ವ್ಯಾಪಾರ ನಡೆಸುತ್ತ ಬಂದಿದೆ. ಅದರ ಅನೇಕ ನೈಸರ್ಗಿಕ ಸರಕುಗಳಿಗೆ ಹಿಂದಿನಿಂದಲೂ ವಿದೇಶಿ ಬೇಡಿಕೆಯಿದೆ. ಮೆಣಸು, ಮುತ್ತು, ದಂತ, ಲವಂಗ, ಶ್ರೀಗಂಧ, ತೇಗ, ಬೀಟೆ, ಕುರುಂದ-ಇವು ಕೆಲವು ಸರಕುಗಳು. ಪ್ರಾಚೀನ ಮೆಸೆಪೊಟೋಮಿಯಕ್ಕೆ ತಮಿಳು ನಾಡಿನಿಂದ ಅಕ್ಕಿ ರಫ್ತಾಗುತ್ತಿತ್ತು. ಸಹಕಾರ ಸಹಕಾರ ಚಳವಳಿಯಲ್ಲಿ ವಿಶೇಷವಾಗಿ ಮುಂದುವರೆದಿರುವ ರಾಜ್ಯಗಳಲ್ಲಿ ತಮಿಳು ನಾಡೂ ಒಂದು. ವಿವಿಧ ಬಗೆಯ ಸಹಕಾರ ಸಂಘಗಳ ಸಂಖ್ಯೆಯನ್ನು ಮುಂದೆ ಕೊಟ್ಟಿದೆ:- ರಾಜ್ಯ ಸಹಕಾರ ಬ್ಯಾಂಕ್ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಸಹಕಾರ ಮಾರಾಟ ಸಂಯುಕ್ತ ಸಂಘ ಎತ್ತುಗೆ ನೀರಾವರಿ ಸಂಯುಕ್ತ ಸಂಘ ಕೃಷಿ-ಎಂಜಿನಿಯರಿಂಗ್ ಸಹಕಾರ ಸಂಯುಕ್ತ ಸಂಘ ರಾಜ್ಯ ಬಳಕೆದಾರರ ಸಹಕಾರ ಸಂಯುಕ್ತ ಸಂಘ ತಂಜಾವೂರು ಸಹಕಾರ ಮಾರಾಟ ಸಂಯುಕ್ತ ಸಂಘ ಸಹಕಾರಿ ಕೇಂದ್ರ ಬ್ಯಾಂಕುಗಳು ಸಹಕಾರಿ ಸಗಟು ವ್ಯಾಪಾರಿ ಕೋಠಿಗಳು ಮದ್ರಾಸ್ ಅಗ್ನಿ ಮತ್ತು ಸಾಮಾನ್ಯ ವಿಮೆ ಸಂಘ ಪ್ರಾಥಮಿಕ ಭೂ ಅಭಿವೃದ್ಧಿ üಬ್ಯಾಂಕುಗಳು ಕೃಷಿ ಉದ್ಧರಿ ಸಂಘಗಳು ಸಹಕಾರಿ ಪಟ್ಟಣ ಬ್ಯಾಂಕುಗಳು ಇತರ ಕೃಷೀತರ ಉದ್ಧರಿ ಸಂಘಗಳು ಸಹಕಾರಿ ಸಂಯುಕ್ತ ಮತ್ತು ಸಾಮೂಹಿಕ ಬೇಸಾಯ ಸಂಘಗಳು ಪ್ರಾಥಮಿಕ ಸಹಕಾರಿ ಮಾರಾಟ ಸಂಘಗಳು ಸಹಕಾರಿ ಬಳಕೆದಾರರ ಕೋಠಿಗಳು ಸಹಕಾರಿ ಕ್ಯಾಂಟೀನ್ ಮತ್ತು ಉಪಾಹಾರಮಂದಿರಗಳು ಕಾರ್ಮಿಕ ಕರಾರು ಸಂಘಗಳು ಸಹಕಾರಿ ಮೋಟಾರ್ ಸಾರಿಗೆ ಸಂಘಗಳು ಸಹಕಾರಿ ಮುದ್ರಣಾಲಯಗಳು ಉಪ್ಪಿನ ಸಹಕಾರ ಸಂಘಗಳು ನೀರಾವರಿ ಸಂಘಗಳು ಆರೋಗ್ಯ ಸಹಕಾರ ಸಂಘಗಳು ಕೈಗಾರಿಕಾ ಸಹಕಾರ ಸಂಘಗಳು ತಮಿಳು ನಾಡು ಕೈಮಗ್ಗ ನೇಕಾರರ ಸಹಕಾರ ಸಂಘ ಪ್ರಾಥಮಿಕ ನೇಕಾರರ ಸಹಕಾರಿ ಸಂಘಗಳು ಸಹಕಾರಿ ನೂಲುವ ಗಿರಣಿಗಳು ಸಹಕಾರಿ ಸೂಪರ್ ಮಾರುಕಟ್ಟೆಗಳು ಸಹಕಾರಿ ಗೃಹ ಸಂಘಗಳು ವಿಶ್ವ ವಿದ್ಯಾಲಯಗಳಲ್ಲಿ ಸಹಕಾರವೂ ಒಂದು ಬೋಧನ ವಿಷಯವಾಗಿದೆ. ಸಾರಿಗೆ ಸಂಪರ್ಕ thumb|200px|A view of the NH 47 Expressway between Coimbatore and Salem in Tamil Nadu thumb|200px|Chennai International Airport, one of India's major international airports thumb|200px|Pamban road (left) and rail (right) bridges, connecting the Indian mainland with the Pamban Island ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ ಮಾರ್ಗವಿದ್ದು ಇದರಲ್ಲಿ 60,901, ಕಿ.ಮೀ ಉತ್ತಮ ರಸ್ತೆಯಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು ದಕ್ಷಿಣ ಭಾರತದ ಮುಖ್ಯ ವಿಮಾನ ಸಂಪರ್ಕವಾಗಿದೆ. ಸೇಲಂ, ಕೊಯಮತ್ತೂರು, ತಿರುಚಿನಪಳ್ಳಿ, ಮಧುರೆ ವಿಮಾನ ನಿಲ್ದಾಣಗಳಿವೆ. ಚೆನ್ನೈ, ಮಧುರೈ, ತಿರುಚಿನಾಪಳ್ಳಿ, ಕೊಯಂಬತ್ತೂರು ಮತ್ತು ತಿರುನೇಲ್‍ವೇಲಿ ಮುಖ್ಯ ರೈಲು ನಿಲ್ದಾಣಗಳಿದ್ದು ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ. ತಮಿಳು ನಾಡಿನಲ್ಲಿ 876.03 ಕಿಮೀ. ಬ್ರಾಡ್ ಗೇಜ್ ಮತ್ತು 2,889.05 ಕಿಮೀ. ಮೀಟರ್ ಗೇಜ್ ರೈಲುಮಾರ್ಗಗಳಿವೆ. ದಕ್ಷಿಣ ಭಾರತದಲ್ಲಿ ಬಹಳ ಹೆಚ್ಚಿನ ರೈಲ್ವೆ ಸೌಲಭ್ಯ ಉಳ್ಳ ರಾಜ್ಯ ತಮಿಳು ನಾಡು. ಮದ್ರಾಸಿನೊಂದಿಗೆ ರಾಜ್ಯದ ಎಲ್ಲ ಪ್ರಮುಖ ಕೇಂದ್ರಗಳೂ ಭಾರತದ ಮುಖ್ಯ ನಗರಗಳೂ ರೈಲ್ವೆ ಸಂಪರ್ಕ ಹೊಂದಿವೆ. ದಕ್ಷಿಣ ರೈಲ್ವೆಯ ಮುಖ್ಯ ಕಚೇರಿ ಮದ್ರಾಸಿನಲ್ಲಿದೆ. ಈಗ ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ. ರಸ್ತೆಯಿದ್ದು ಇದರಲ್ಲಿ 60,901 ಕಿ.ಮೀ ಟಾರ್ ಹಾಗೂ ಕಾಂಕ್ರೀಟಿನಿಂದ ಕೂಡಿವೆ. ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ. ಚೆನ್ನೈ, ತಿರುಚಿನಾಪಳ್ಳಿ, ಮಧುರೈ, ಕೊಯಮತ್ತೂರು ಮತ್ತು ಸೇಲಂಗಳಲ್ಲಿ ವಿಮಾನ ನಿಲ್ದಾಣಗಳಿವೆ. ಚೆನ್ನೈ ಟುಟಿಕೋರಿನ್, ಕುಡಲೂರು ಮತ್ತು ನಾಗಾಪಟ್ಟಣಮ್‍ಗಳಲ್ಲಿ ಬಂದರುಗಳಿವೆ. ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪೂರ್ವತೀರದ ಮುಖ್ಯ ಬಂದರೂ ಆಗಿದೆ. ಚೆನ್ನೈ ಜೊತೆಗೆ ನಾಗಪಟ್ಟಿನಮ್, ತುತುಕೋರಿನ್, ಕುಡಲೂರು ಬಂದರುಗಳಿವೆ. ( ಪ್ರಾಗಿತಿಹಾಸ ದಕ್ಷಿಣ ಭಾರತದ ಇತರ ಪ್ರದೇಶಗಳಂತೆ ತಮಿಳು ನಾಡಿನಲ್ಲೂ ಪ್ರಾಗೈತಿಹಾಸಿಕ ಮಾನವನ ಅವಶೇಷಗಳಿವೆ. ತಮಿಳುನಾಡಿನಲ್ಲಿ ಮಾನವ ಎಂದಿನಿಂದ ವಾಸಿಸುತ್ತ ಬಂದಿದ್ದಾನೆಂದು ಹೇಳುವುದು ಸಾಧ್ಯವಿಲ್ಲದಿದ್ದರೂ, ಕಲ್ಲಿನಲ್ಲಿ ಆಯುಧಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದನಿಂದ —ಎಂದರೆ ಮಧ್ಯ ಪ್ಲೀಸ್ಟೊಸೀನ್ ಕಾಲದಿಂದ —ಅವನ ಅಸ್ತಿತ್ವದ ಅವಶೇಷಗಳು ಹೇರಳವಾಗಿ ದೊರಕಿವೆ. 1863ರಲ್ಲಿ ರಾಬರ್ಟ್ ಬ್ರೂಸ್‍ಫೂಟರಿಗೆ ಮದ್ರಾಸಿನ ಹತ್ತಿರ ಪಲ್ಲಾವರಮ್‍ನಲ್ಲಿ ದೊರೆತ ಪುರಾತನ ಶಿಲಾಯುಗಧ ಆಯುಧದಿಂದ ತಮಿಳುನಾಡಿಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಭಾರತದಲ್ಲೇ ಪ್ರಾಗೈತಿಹಾಸಿಕ ಮಾನವನ ಅವಶೇಷಗಳ ಸಂಶೋಧನೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.ಚೆಂಗಲ್‍ಪಟ್ಟು ಜಿಲ್ಲೆಯಲ್ಲಿರುವ ಕೋರ್ತಲಯಾರ್ ನದಿಯ ಪ್ರದೇಶದಲ್ಲಿ, ಈ ನದಿಯ ಹಳೆಯ ದಂಡೆಗಳ ಮೇಲೆ, ಆದಿ ಶಿಲಾಯುಗದ ಕಾಲದಲ್ಲೆ ಮಾನವರು ವಾಸಿಸುತ್ತಿದ್ದರೆಂಬುದು, ಡಿ ಟೆರ್ರ, ವಿ.ಡಿ. ಕೃಷ್ಣಸ್ವಾಮಿ, ಕೆ,ವಿ. ಬ್ಯಾನರ್ಜಿ ಇವರು ಮಾಡಿರುವ ಸಂಶೋಧನೆಗಳಿಂದ ತಿಳಿದುಬಂದಿದೆ. ಇವರು ಬಯಲು ಪ್ರದೇಶದಲ್ಲಿ ಹಾಗೂ ನೈಸರ್ಗಿಕ ಗುಹೆಗಳಲ್ಲಿ ವಾಸಿಸುತ್ತಿದ್ದರು : ಬೇಟೆಯಾಡುವುದು ಮತ್ತು ಗೆಡ್ಡೆ ಗೆಣಸುಗಳನ್ನು ಅಗೆದು ತಿನ್ನುವುದೇ ಇವರ ಮುಖ್ಯ ಕಸುಬಾಗಿತ್ತು. ಇವರು ಕ್ವಾರ್ಟ್‍ಸೈಟ್ ಉಂಡೆಕಲ್ಲಿನ ತಿರುಳಿನಲ್ಲಿ ಮಾಡಿದ ಕೈಗೊಡಲಿ. ಬಾಚಿ ಮತ್ತು ಅಂಡಾಕಾರದ ಆಯುಧಗಳನ್ನು ಉಪಯೋಗಿಸುತ್ತಿದ್ದರು-ಎಂಬುದಾಗಿ ಗೊತ್ತಾಗಿದೆ.ಮಧ್ಯ ಪ್ಲೀಸ್ಟೊಸೀನ್ ಕಾಲದ ಆಯುಧಗಳನ್ನು ದಕ್ಷಿಣ ಭಾರತದ ಇತರ ಸ್ಥಳಗಳಲ್ಲಿ, ದಕ್ಷಿಣ ಆಫ್ರಿಕ ಮತ್ತು ಯೂರೋಪ್‍ನಲ್ಲಿ ದೊರಕುವ ಅಬ್ಬೆವಿಲಿಯನ್ ಮತ್ತು ಅಷೀಲಿಯನ್ ಆಯುಧಗಳ ರೀತಿಯವು. ಈ ಕಾಲದ ನೆಲೆಗಳು ತಮಿಳು ನಾಡಿನ ಹಲವಾರು ಕಡೆಗಳಲ್ಲಿ ದೊರಕಿದ್ದರೂ ಅವುಗಳ ಅಧ್ಯಯನ ಇನ್ನೂ ನಡೆದಿಲ್ಲ. ಪ್ಲೀಸ್ಟೊಸೀನ್ ಯುಗದ ಅಂತಿಮ ಕಾಲದಲ್ಲಿ ಪ್ರಚಲಿತವಾಗಿದ್ದ ಮಧ್ಯ ಶಿಲಾಯುಗದ ಸಂಸ್ಕøತಿಯ ನೆಲೆಗಳು ಚೆಂಗಲ್‍ಪಟು, ಉತ್ತರ ಅರ್ಕಾಟ್, ಧರ್ಮಪುರಿ ಮತ್ತು ಮಧುರೈ ಜಿಲ್ಲೆಗಳಲ್ಲಿ ಕಂಡುಬಂದಿವೆ. ಈ ಸಂಸ್ಕøತಿಗೆ ಕಾರಣರಾದ ಜನರೂ ಬಯಲು ಹಾಗೂ ನೈಸರ್ಗಿಕ ಗುಹೆಗಳಲ್ಲಿ ಜೀವಿಸುತ್ತಿದ್ದಂತೆ ಕಂಡುಬರುತ್ತದೆ. ಇವರ ಆಯುಧಗಳು ಹಿಂದಿನವುಗಳಿಗಿಂತ ಸಣ್ಣವು ಹಾಗೂ ಹೆಚ್ಚು ವೈವಿಧ್ಯಪೂರ್ಣ. ಇವರು ಕೈಗೂಡಲಿ, ಬಾಣದ ತುದಿ ಮತ್ತು ರಂಪಿಗೆಗಳನ್ನು ಹರೆಯಲು ಮತ್ತು ಕುಯ್ಯಲು ಅನುಕೂಲವಾದ ಮತ್ತು ನೀಳ ಚಕ್ಕೆ ಕಲ್ಲುಗಳಲ್ಲಿ ಮಾಡಿದ ಆಯುಧಗಳನ್ನು ಉಪಯೋಗಿಸುತ್ತಿದ್ದರು. ತೊಗಲನ್ನು ಬೇಕಾದ ಆಕಾರಕ್ಕೆ ಹೊಲೆಯುವುದಕ್ಕೂ ಬೇಟೆಯಾಡುವುದಕ್ಕೂ ಇವನ್ನು ಉಪಯೋಗಿಸುತ್ತಿದ್ದರು. ಕ್ರಿ.ಪೂ. 4000ಕ್ಕಿಂತ ಹಿಂದಿನದೆಂದು ನಂಬಲಾಗಿರುವ ಅಂತ್ಯ ಶಿಲಾಯುಗ (ಸೂಕ್ಷ್ಮ ಶಿಲಾಯುಗ) ಸಂಸ್ಕøತಿಯ ನೆಲೆಗಳು ಚೆಂಗಲ್‍ಪಟು,್ಟ ಧರ್ಮಪುರಿ, ಮಧುರೈ ಮತ್ತು ರಾಮನಾಡು ಜಿಲ್ಲೆಗಳಲ್ಲಿ ದೊರೆತಿವೆ. ಈ ಕಾಲದ ಆಯುಧಗಳು ಇನ್ನೂ ಸಣ್ಣವು. ಬಾಣದ ತುದಿ, ರಂಪಿಗೆ ಹಾಗೂ ಹೆರೆಯಲು ಮತ್ತು ಕುಯ್ಯಲು ಅನುಕೂಲವಾದ ಆಯುಧಗಳು. ಅರ್ಧ ಚಂದ್ರಾಕೃತಿಯ ಮತ್ತು ತ್ರಿಕೋಣಾಕೃತಿಯ ಚಿಕ್ಕ ಆಯುಧಗಳು ಉಪಯೋಗದಲ್ಲಿದ್ದುವು. ಬಯಲುಗಳಲ್ಲಿದ್ದ ಇವರ ನೆಲೆಗಳಲ್ಲಿ ಸಿಕ್ಕಿರುವ ಆಯುಧಗಳಿಂದ ಈ ಜನರು ಸಣ್ಣ ಬೇಟೆಗಳನ್ನು ಆಡುತ್ತಿದ್ದರು ಮತ್ತು ಮೀನುಗಳನ್ನು ಹಿಡಿದು ಹಾಗೂ ಕಾಡು ದವಸ ಧಾನ್ಯಗಳನ್ನು ತಿಂದು ಜೀವಿಸುತ್ತಿದ್ದರು-ಎಂಬುದು ತಿಳಿದುಬರುತ್ತದೆ. ನವಶಿಲಾಯುಗ ಸಂಸ್ಕೃತಿಯ ನೆಲೆಗಳು ಧರ್ಮಪುರಿ ಮತ್ತು ಉತ್ತರ ಅರ್ಕಾಟ್ ಜಿಲ್ಲೆಗಳಲ್ಲಿ ಮಾತ್ರ ಕಂಡುಬಂದಿವೆ. ಈ ಪ್ರಾಂತ್ಯದ ಬೇರೆಡೆಗಳಲ್ಲಿ ಈ ಜನ ಉಪಯೋಗಿಸುತ್ತಿದ್ದ, ಉಜ್ಜಿ ನಯಮಾಡಿದ ಕೊಡಲಿಗಳು ದೊರೆತಿದ್ದರೂ ಬೇರಾವ ಅವಶೇಷಗಳೂ ಇದುವರೆಗೂ ದೊರೆತಿಲ್ಲ. ಉತ್ತರ ಅರ್ಕಾಟ್ ಜಿಲ್ಲೆಯ ಪೈಯಂಪಲ್ಲಿ ಗ್ರಾಮದಲ್ಲಿಯ ಉತ್ಖನನದಿಂದ ಈ ಜನರ ಜೀವನ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿದೆ. ಕ್ರಿ.ಪೂ.ಸು.1800ರಷ್ಟು ಹಿಂದೆ ಇವರು ನೀರಿನ ಸೌಕರ್ಯ ಇದ್ದ ಸ್ಥಳಕ್ಕೆ ಹತ್ತಿರದಲ್ಲಿ ದೊಡ್ಡ ಬಂಡೆಗಳಿಂದ ಕೂಡಿದ ಬೆಟ್ಟಗಳ ಬುಡದಲ್ಲಿ, ತಡಿಕೆ ಮತ್ತು ಮಣ್ಣಿನ ಗೋಡೆಗಳಿಂದ ಚಿಕ್ಕ ಗೋಲಾಕೃತಿಯ ಗುಡಿಸಲುಗಳನ್ನು ಕಟ್ಟಿಕೊಂಡು ಸಣ್ಣ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಇವರು ನಾಯಿ ಕುರಿ, ಹಸು ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರು: ಹಳ್ಳಿಯ ಸುತ್ತ ಧಾನ್ಯಗಳನ್ನು ಬೆಳೆಸುತ್ತಿದ್ದರು. ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ತಿಳಿಬೂದು ಬಣ್ಣದ ನಯವಾದ ಕಲ್ಲಿನಿಂದ ತೆಗೆದ ಚಕ್ಕೆಗಳಲ್ಲಿ ಕೈಯಿಂದ ಮಾಡಿದ ಸಣ್ಣ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಇವರಿಗೆ ಲೋಹಗಳ ಬಳಕೆ ಗೊತ್ತಿರಲಿಲ್ಲ. ಇವರು ತಮಿಳು ನಾಡಿನ ಪ್ರದೇಶಕ್ಕೆ ಉತ್ತರದಿಂದ, ಈಗಿನ ಕರ್ನಾಟಕ ಪ್ರದೇಶದಿಂದ, ಬಂದರೆಂದು ಊಹಿಸಲಾಗಿದೆ. ತಮಿಳು ನಾಡಿನಲ್ಲಿ ನವಶಿಲಾಯುಗದವರು ವಾಸಿಸುತ್ತಿದ್ದಂತೆಯೇ ದೊಡ್ಡ ಕಲ್ಲುಗಳ ಗೋರಿಗಳನ್ನು ಕಟ್ಟುವ ಜನಾಂಗದವರು ಬಹುಶಃ ಕರ್ನಾಟಕದಿಂದ ಬಂದರೆಂಬುದು ಪೈಯಂಪಲ್ಲಿ ಉತ್ಖನನದಿಂದ ತಿಳಿದುಬರುತ್ತದೆ. ಇವರು ಕ್ರಿ.ಪೂ. 500ಕ್ಕೆ ಹಿಂದೆ ತಮಿಳು ನಾಡಿಗೆ ಬಂದರೆಂದು ಊಹಿಸಲಾಗಿದೆ. ಈ ಜನರು ತಮ್ಮೊಡನೆ ಕಬ್ಬಿಣದ ಬಳಕೆಯ ಕೌಶಲವನ್ನೂ ಚಕ್ರದ ಮೇಲೆ ಕಪ್ಪು ಕೆಂಪು ಹಾಗೂ ಕಪ್ಪು -ಕೆಂಪುಬಣ್ಣದ ಮಣ್ಣಿನ ಪಾತ್ರೆಗಳನ್ನು ಮಾಡುವ ವಿಧಾನವನ್ನೂ ತಂದರು. ತಮಿಳು ನಾಡಿನಲ್ಲಿ ಕೆರೆಗಳನ್ನು ಕಟ್ಟಿ ಜಮೀನನ್ನು ಸಾಗುವಳಿ ಮಾಡುವ ವಿಧಾನವನ್ನು ಈ ಜನಾಂಗದವರು ಆರಂಭಿಸಿದರೆಂದು ಊಹಿಸಲಾಗಿದೆ. ನವ ಶಿಲಾಯುಗದವರಂತೆಯೇ ಇವರೂ ಮನೆಗಳನ್ನು ಕಟ್ಟಿಕೊಂಡು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ವ್ಯವಸಾಯ, ಮೀನು ಹಿಡಿಯುವುದು-ಇವು ಇವರ ಮುಖ್ಯ ಕಸುಬುಗಳಾಗಿದ್ದುವು. ಇವರ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಶಿಲಾಗೋರಿಗಳು. ಇವರು ನಿರ್ಮಿಸುತ್ತಿದ್ದ ಬೃಹತ್ ಶಿಲಾಗೋರಿಗಳಲ್ಲಿ ನಾನಾ ವಿಧಗಳಿದ್ದುವು. ನಾಲ್ಕು ಅಥವಾ ಹಲವು ಹಲಗೆ ಕಲ್ಲುಗಳನ್ನು ಕೋಣೆಯಾಕಾರದಲ್ಲಿ ಜೋಡಿಸಿ ಅದರಲ್ಲಿ ಅಸ್ಥಿಯನ್ನೋ ಅಸ್ಥಿಯುಳ್ಳ ಗಡಿಗೆಯನ್ನೋ ಇಟ್ಟು ಮೇಲೊಂದು ಹಲಗೆ ಕಲ್ಲನ್ನು ಮುಚ್ಚಿ ಸುತ್ತಲೂ ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನಿಟ್ಟು, ಮಧ್ಯದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ತುಂಬುವುದು ಒಂದು ವಿಧ. ಆಳವಾದ ಗುಂಡಿಯಲ್ಲಿ ಆಸ್ಥಿವುಳ್ಳ ಮಣ್ಣಿನ ಪಾತ್ರೆಯನ್ನೂ ಇತರ ವಸ್ತುಗಳನ್ನೂ ಹೂತು ಸುತ್ತಲೂ ಬಂಡೆಕಲ್ಲುಗಳನ್ನು ಇಟ್ಟು ಮಧ್ಯದಲ್ಲಿ ಸಣ್ಣ ಕಲ್ಲುಗಳನ್ನು ತುಂಬುವುದು ಇನ್ನೊಂದು ವಿಧ ಪ್ರಾಣಿಯಾಕಾರದ ಉದ್ದನೆಯ ದೊಡ್ಡ ಬಾನೆಯಲ್ಲಿ ಅಸ್ಥಿ ಮತ್ತು ಇತರ ವಸ್ತುಗಳನ್ನು ಇಟ್ಟು ಹೂತು ಸುತ್ತಲೂ ಬಂಡೆಕಲ್ಲುಗಳನ್ನಿಟ್ಟು ಮಧ್ಯದಲ್ಲು ಸಣ್ಣಕಲ್ಲುಗಳನ್ನು ತುಂಬುವುದು, ಮತ್ತೊಂದು ವಿಧ. ಇಂಥ ಹಲವು ರೀತಿಗಳಿದ್ದುದು ಕಂಡುಬರುತ್ತದೆ. ಸತ್ತವನ ಆತ್ಮಕ್ಕೆ ಮುಂದೆ ಬೇಕಾಗಬಹುದೆಂಬ ನಂಬಿಕೆಯಿಂದ ಮಣ್ಣಿನ ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಆಹಾರ ಮತ್ತಿತರ ಪರ್ದಾಥಗಳನ್ನು ಹಾಗೂ ಅವರ ನಿತ್ಯೋಪಯೋಗದ ವಸ್ತುಗಳನ್ನು ಇಟ್ಟು ಅಲ್ಲಿ ಹೂಳುತ್ತಿದ್ದರು. ಇತಿಹಾಸ ತಮಿಳು ನಾಡಿನ ಇತಿಹಾಸ ಬಲು ಪ್ರಾಚೀನವಾದ್ದು. ಭಾಷೆ ವೈಜ್ಞಾನಿಕವಾಗಿ ಭಾರತ ಉಪಖಂಡದಲ್ಲಿ ಇದು ಬಹುಶಃ ಅತ್ಯಂತ ಹಳೆಯ ಭಾಷೆ ಮೊತ್ತ. ಗತ ಶತಮಾನಗಳಲ್ಲಿ ಈ ಪ್ರದೇಶದಲ್ಲಿ ಸಂಸ್ಕøತಿ ನಾಗರಿಕತೆಗಳ ಭಾಷೆ ಸಾಹಿತ್ಯಗಳೂ ಚಿತ್ರಕಲೆ ವಾಸ್ತುಶಿಲ್ಪಗಳೂ ಸಂಗೀತವೂ ಬೆಳೆದಂತೆ ದೇಶ ಬೇರೆಡೆಯಲ್ಲೆಲ್ಲೂ ಬೆಳೆಯಲಿಲ್ಲ. ಉನ್ನತ ಬೆಳೆವಣಿಗೆ ಹೊಂದಿದ ತಮಿಳು ಭಾಷೆ ಅದರಲ್ಲಿ ಸೃಷ್ಟಿಯಾದ ಅನಶ್ವರ ಸಾಹಿತ್ಯ, ಉದಾತ್ತವಾದ ಗೋಪುರಗಳು, ಮಧುರೈ ಮಹಾಬಲಿಪುರಂ ತಂಜಾವೂರು ಕಾಂಚೀಪುರಗಳಲ್ಲಿ ಕೆತ್ತಲಾದ ಅಮರ ವಾಸ್ತು ಶಿಲ್ಪಗಳು ತಂಜಾವೂರಿನ ಉತ್ಕøಷ್ಟ ಕರಕೌಶಲ, ಭರತನಾಟ್ಯ ಕಲಾವಿದರ ಲಲಿತ ಚಲನೆಗಳು - ಇವು, ಮತ್ತು ಇಂಥ ಹಲವು, ತಮಿಳು ನಾಡಿನ ಸಾಂಸ್ಕøತಿ ಪರಂಪರೆಯ ಅಂಶಗಳು.ತಮಿಳು ನಾಡಿಗೆ ಸಂಬಂಧಿಸಿದಂತೆ ಬೃಹದ್ಬಾರತದ ಇತಿಹಾಸವನ್ನು ದಕ್ಷಿಣ ಭಾರತದ ಇತಿಹಾಸದ ಒಂದು ಉಜ್ವಲ ಅಧ್ಯಾಯವೆಂದು ಪರಿಗಣಿಸಬಹುದು. ತಮಿಳುನಾಡಿನ ಸಂಸ್ಕøತಿಕ ಪ್ರಭಾವಗಳು -- ಮುಖ್ಯವಾಗಿ ಲಿಪಿ. ನಂಬಿಕೆಗಳು, ಕಲೆಗಳು ಮುಂತಾದುವುಗಳಲ್ಲಿ -- ಮಲಯ, ಸುಮಾತ್ರ, ಜಾವ, ಬಾಲಿ, ಕಾಂಬೋಡಿಯ ಮತ್ತು ಸೈಯಾಮ್‍ಗಳನ್ನು ತಲಪಿವೆ. ಇತರ ದೇಶಗಳು ಮತ್ತು ಸಂಸ್ಕøತಿಗಳೊಂದಿಗಿನ ಸಂಪರ್ಕದ ಅವಕಾಶವನ್ನು ತಮಿಳು ನಾಡು ಬಳಸಿಕೊಳ್ಳುವುದರಲ್ಲಿ, ಅವುಗಳಲ್ಲಿಯ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ತಮಿಳು ನಾಡಿನ ಪ್ರಾಚೀನ ಇತಿಹಾಸವನ್ನು ಅದರ ಭಾಷೆಯಿಂದ ಮತ್ತು ಇತಿಹಾಸ ಪೂರ್ವಕಾಲದ ಪಳೆಯುಳಿಕೆಗಳ ಅಧ್ಯಯನದಿಂದ ಅರಿಯಬಹುದು. ತಮಿಳಿನ ಅತ್ಯಂತ ಪ್ರಾಚೀನ ನಷ್ಟವಾಗಿದೆ. ತಮಿಳಿನ ತೊಲ್‍ಕಾಪ್ಪಿಯಮ್ ಎಂಬ ಪ್ರಸಿದ್ಧ ವ್ಯಾಕರಣ ಗ್ರಂಥವನ್ನು ಕ್ರಿ. ಪೂ. 325 - ಕ್ರಿ.ಪೂ.88 ಕಾಲಕ್ಕೆ ನಿರ್ದೇಶಿಸಬಹುದು. ಕೆಲವು ವಿದ್ವಾಂಸರು ಇದು ಇನ್ನೂ ಹಿಂದಿನ ಕಾಲದ್ದೆಂದು ಹೇಳುತ್ತಾರೆ. ತಿರುಕ್ಕುರಳ್, ಶಿಲಪ್ಪದಿಕಾರಂ, ಮಣಿಮೇಖಲೈ ಮುಂತಾದ ಪ್ರಾಚೀನ ತಮಿಳು ಸಾಹಿತ್ಯ ಕೃತಿಗಳನ್ನು ಸಂಗಮ್ ಸಾಹಿತ್ಯವೆಂದು ಕರೆಯಲಾಗಿದೆ. ಇವು ಸೃಷ್ಟಿಯಾದ ಕಾಲವನ್ನು ತಮಿಳು ಸಾಹಿತ್ಯದ ಸುವರ್ಣ ಯುಗವೆಂದು ಕರೆಯಲಾಗಿದೆ. ಕ್ರಿ.ಶ. ಮೊದಲ ಮೂರು ಶತಮಾನಗಳನ್ನು ಸಂಗಮ್ ಯುಗವೆಂದು ಕರೆಯಲಾಗಿದೆ. ಆ ಕಾಲದ ತಮಿಳರು ಕಟ್ಟು ನಿಟ್ಟಾದ ಜಾತಿಗಳಾಗಿ ವಿಂಗಡವಾಗಿರಲಿಲ್ಲ. ಆಗಿನ ಜನಜೀವನ ಬಹುತೇಕ ಗ್ರಾಮೀಣವಾಗಿತ್ತು. ಹಳ್ಳಿಗಳು ಸ್ವಸಂಪೂರ್ಣವಾಗಿದ್ದುವು. ರೂಢಿಯ ನಿಯಮಗಳೇ ಕಾನೂನುಗಳ ಸ್ಥಾನ ಪಡೆದಿದ್ದುವು. ಒಂದು ಪ್ರದೇಶದ ಜನರು ಇನ್ನೊಂದು ಪ್ರದೇಶದ ಜನರೊಂದಿಗೆ ಪದಾರ್ಥಗಳ ವಿನಿಮಯ ಮಾಡಿಕೊಳ್ಳತೊಡಗಿದಾಗ ಪಟ್ಟಣಗಳು ಎದ್ದವು. ಕ್ರಿ.ಪೂ.500—ಕ್ರಿ,ಪೂ.100ರ ಅವಧಿಯಲ್ಲಿ ತಮಿಳು ನಾಡಿನ ವಿದೇಶಿ ವ್ಯಾಪಾರ ವಿಶೇಷವಾಗಿ ಬೆಳೆದದ್ದರ ಫಲವಾಗಿ ಅನೇಕ ರೇವುಪಟ್ಟಣಗಳು ಬೆಳೆದುವು. ತಮಿಳು ನಾಡಿನ ಇತಿಹಾಸಕಾಲ ಕ್ರಿ.ಪೂ 4ನೆಯ ಶತಮಾನದಿಂದ ಆರಂಭವಾಗುತ್ತದೆ. ಸಂಗಮ್ ಯುಗದ ಕೊನೆಯ ವರೆಗೆ (ಕ್ರಿ.ಶ 3ನೆಯ ಶತಮಾನ) ಅದರ ಇತಿಹಾಸ ಸ್ಪಷ್ಟವೂ ಸಮಗ್ರವೂ ಆಗಿ ತಿಳಿದುಬಂದಿಲ್ಲ. ಚೇರ, ಚೋಳ ಮತ್ತು ಪಾಂಡ್ಯರು ನೆರೆಯ ಸ್ವತಂತ್ರ ರಾಜ್ಯಗಳನ್ನಾಳುತ್ತಿದ್ದರೆಂಬುದು ಅಶೋಕನ 2ನೆಯ ಮತ್ತು 13ನೆಯ ಶಿಲಾಶಾಸನಗಳಿಂದ ತಿಳಿದುಬರುತ್ತದೆ. ಸತ್ಯಪುತ್ರರು ಬಹುಶ: ಕೊಂಗುನಾಡನ್ನಾಳುತ್ತಿದ್ದವರು. ಆ ಕಾಲದ ಇತಿಹಾಸದ ಕೆಲವು ಹೊಳಹುಗಳು ಮುಖ್ಯವಾಗಿ ಸಂಗಮ್ ಕೃತಿಗಳಿಂದ ದೊರಕುತ್ತವೆ. ಇವನ್ನು ಇತಿಹಾಸ ಗ್ರಂಥಗಳೆನ್ನಲಾಗದಿದ್ದರೂ ತತ್ಕಾಲದ ಜನರ, ಅವರ ದೊರೆಗಳ, ಪಾಳೆಯಗಾರರ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಮತೀಯ ಜೀವನಕ್ಕೆ ಸಂಬಂಧಿಸಿದ ಐತಿಹಾಸಿಕ ಸಾಮಗ್ರಿ ನಮಗೆ ದೊರಕುತ್ತದೆ. ಸಂಗಮ್ ಯುಗದ ಅಂತ್ಯದ ಅನಂತರದ ಮೂರು ಶತಮಾನಗಳ ಇತಿಹಾಸ ಶೂನ್ಯವಾಗಿದೆ. ಇದನ್ನು ಕಳಭ್ರ ವಿಚ್ಚಿತ್ತಿ ಅವಧಿ ಎಂದು ಹೇಳಲಾಗಿದೆ ಕಳಭ್ರರು ಕಾಡುಜನರು. ಇವರು ಬಹುಶ: ಕರ್ನಾಟಕದ ಪ್ರದೇಶದಿಂದ ಬಂದರು. ಇವರು ಕ್ರಿ.ಶ. 6ನೆಯ ಶತಮಾನದ ನಡುಗಾಲದವರೆಗೆ ತಮಿಳು ನಾಡನ್ನು ಆಕ್ರಮಿಸಿಕೊಂಡಿದ್ದರು. ಮಧುರೆಯ ಸುತ್ತಮುತ್ತಣ ಪ್ರದೇಶದಲ್ಲಿ ಮತ್ತೆ ಪ್ರಬಲರಾದ ಪಾಂಡ್ಯರೂ ಕಾಂಚೀಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ತೊಂಡೈ ಮಂಡಲವನ್ನಾಳತೊಡಗಿದ ಪಲ್ಲವರು ಕಲಭ್ರರ ಆಳ್ವಿಕೆಯನ್ನು ಕೊನೆಗೊಳಿಸಿದರು. 9ನೆಯ ಶತಮಾನದ ನಡುಗಾಲದವರೆಗೂ ತಮಿಳು ನಾಡನ್ನು ಪಾಂಡ್ಯರೂ ಪಲ್ಲರೂ ವಾಸ್ತವವಾಗಿ ಹಂಚಿಕೊಂಡು ಆಳಿದರು. ದಕ್ಷಿಣಭಾರತದ ಇತಿಹಾಸದಲ್ಲಿ ಈ ಅವಧಿ ಅತ್ಯಂತ ಕ್ರಿಯಾಶೀ¯ವಾದ್ದು. 9ನೆಯ ಶತಮಾನದ ವರೆಗೆ ಚೋಳರು ಅಜ್ಞಾತರಾಗಿದ್ದರು. ಆಗ ಅವರು ತಲೆಯೆತ್ತ ತೊಡಗಿ ಮುಂದಿನ ಸುಮಾರು ನಾಲ್ಕು ಶತಮಾನಗಳ ಕಾಲ ರಾಜ್ಯವಾಳಿದರು. ಪಲ್ಲವ ಆಳ್ವಿಕೆ ಕೊನೆಗೊಂಡಿತು. ಪಾಂಡ್ಯ ಮತ್ತು ಚೇರ ರಾಜ್ಯಗಳು ಅವರ ಅಧೀನಕ್ಕೆ ಬಂದುವು. ರಾಜರಾಜ ಮತ್ತು ರಾಜೇಂದ್ರ ಗಂಗೈಕೊಂಡರ (985-1044) ಆಳ್ವಿಕೆಯಲ್ಲಿ ಚೋಳ ಸಾಮ್ರಾಜ್ಯದ ಅಧಿಕಾರ ಮಹೋನ್ನತ ಶಿಖರ ಮುಟ್ಟಿತು. ರಾಜೇಂದ್ರ ಗಂಗೈಕೊಂಡ ಉತ್ತರಕ್ಕೆ ಗಂಗಾ ನದಿಯ ವರೆಗೂ ದಂಡೆತ್ತಿ ಹೋಗಿದ್ದ. ಸಾಗರದಾಚೆಗಿನ ಶ್ರೀವಿಜಯನ ರಾಜ್ಯದ ಮೇಲೂ ಏರಿಹೋದ. ಚೋಳರ ಆಳ್ವಿಕೆಯ ಕಾಲದಲ್ಲಿ ತಮಿಳು ನಾಡು ಬಲಿಷ್ಠ ಗರಿಷ್ಠ ರಾಜಕೀಯ ಶಕ್ತಿಯಾಗಿತ್ತು. ಸ್ವಾಯತ್ತಾತ್ಮಕ ಗ್ರಾಮಸಭೆಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡುತ್ತಿದ್ದ ಅತ್ಯಂತ ಸುಸಂಘಟಿತ ಆಡಳಿತ ವ್ಯವಸ್ಥೆ, ಸಾಹಿತ್ಯಕ ಧಾರ್ಮಿಕ ಚಟುವಟಿಕೆಗಳ ಉನ್ನತಿಕೆ, ವಾಸ್ತುಶಿಲ್ಪ ಕಲಾವೈಭವ-ಇವು ಈ ಕಾಲದ ಮಹತ್ತ್ವದ ಸಾಧನೆಗಳು. 13ನೆಯ ಶತಮಾನದಲ್ಲಿ ಚೋಳರ ಕ್ಷೀಣದಶೆಯೊಂದಿಗೆ ಪಾಂಡ್ಯರು ಸ್ವಲ್ಪ ಕಾಲ ಮತ್ತೆ ಪ್ರಬಲರಾದರು. ಇವರು ಬಹುತೇಕ ಇಡೀ ತಮಿಳು ನಾಡನ್ನಾಳಿದರು. ತಮಿಳರ ನಾಗರಿಕತೆ ಅವರು ವಾಸವಾಗಿದ್ದ ಪ್ರದೇಶಗಳಿಷ್ಟೆ ಸೀಮಿತವಾಗಿರಲಿಲ್ಲ. ಚೋಳರ ಆಳ್ವಿಕೆಯ ಸುವರ್ಣಯುಗದಲ್ಲಿ ಸಾಹಸಿ ನಾವಿಕರು ಅನೇಕ ಅಪರಿಚಿತ ಸಮುದ್ರಗಳನ್ನು ದಾಟಿ ದೂರದೂರ ದೇಶಗಳಲ್ಲಿ ತಮಿಳು ಸಂಸ್ಕøತಿ ನಾಗರಿಕತೆಗಳನ್ನು ಪ್ರಸಾರ ಮಾಡಿದರು. ಈಗಲೂ ದೂರ ಪ್ರಾಚ್ಯದಲ್ಲಿ ಈ ಪ್ರವಾಸಿಗಳ ನಿಷ್ಕøಷ್ಟ ದಾಖಲೆಗಳು ಕಾಣಸಿಗುತ್ತವೆ. 14ನೆಯ ಶತಮಾನದ ಮೊದಲ ವರ್ಷಗಳಲ್ಲಿ ನಡೆದ ಮಲ್ಲಿಕಾಫರ್‍ನ ದಂಡಯಾತ್ರೆಯೊಂದಿಗೆ ಆರಂಭವಾಗಿ ಆಗಿಂದಾಗ್ಗೆ ನಡೆಯುತ್ತಿದ್ದ ಮುಸ್ಲಿಂ ದಾಳಿಗಳಿಂದಾಗಿ ದಕ್ಷಿಣ ಭಾರತಕ್ಕೆ ಭಾರಿ ಆಘಾತ ಉಂಟಾಯಿತು. 1334ರಲ್ಲಿ ಮಧುರೆಯಲ್ಲಿ ಮುಸ್ಲಿಂ ಸುಲ್ತಾನನೊಬ್ಬನ ಆಳ್ವಿಕೆ ಸ್ಥಾಪಿತವಾಯಿತು. ಇಸ್ಲಾಮೀ ಆಕ್ರಮಣದಿಂದ ದಕ್ಷಿಣ ಭಾರತವನ್ನು ಉಳಿಸಲು ಪ್ರಯತ್ನಗಳಾದುವು. 1336ರಲ್ಲಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಇಸ್ಲಾಂ ಆಕ್ರಮಣಕ್ಕೆ ಹಿಂದೂ ಪ್ರತಿಭಟನೆಯ ಪ್ರತೀಕವಾಗಿ ನಿಂತಿತು. ಪುನರುಜ್ಜೀವನಗೊಂಡ ಹಿಂದೂ ಸಂಸ್ಕøತಿಯ ಸಂಘಟನೆಯ ಕೇಂದ್ರವಾಗಿ ಪರಿಣಮಿಸಿತು. 14ನೆಯ ಶತಮಾನದ ಕೊನೆಯ ವೇಳೆಗೆ ತಮಿಳು ನಾಡು ಆ ಸಾಮ್ರಾಜ್ಯದ ಭಾಗವಾಯಿತು. ಅದನ್ನು ರಾಜಮನೆತನದವರಾಗಲಿ, ಸ್ಥಳೀಯ ನಾಯಕರಾಗಲಿ, ರಾಜ್ಯಪಾಲರಾಗಲಿ ಆಳಿದರು. ಅನಂತರ ಮಧುರೈ. ತಂಜಾವೂರು ಮತ್ತು ಜಿಂಜೀಯಿಂದ ಮೂರು ನಾಯಕ ವಂಶಗಳು ವಿಜಯನಗರದ ಆಶ್ರಯದಲ್ಲಿ ಆಳತೊಡಗಿದವು. 17ನೆ ಶತಮಾನದಲ್ಲಿ ವಿಜಯನಗರದ ಕೇಂದ್ರ ಆಡಳಿತ ದುರ್ಬಲವಾದಾಗ ಇವು ಬಹುತೇಕ ಸ್ವತಂತ್ರವಾದುವು. ವಿಜಯನಗರದ ಪ್ರಾಂತ್ಯಗಳ ಪೈಕಿ ಮೊಟ್ಟಮೊದಲು ಸ್ವತಂತ್ರವಾದ್ದು ಮಧುರೈ. ಬಿಜಾಪುರದ ಮತ್ತು ಗೋಲ್ಕೋಂಡದ ಸುಲ್ತಾನರೂ ಅನಂತರ ಮೊಗಲ್ ಸೈನ್ಯಗಳೂ ತಮಿಳು ನಾಡಿನ ಮೇಲೆ ದಾಳಿ ನಡೆಸಿದವು. ಮುಸ್ಲಿಮರ ಕರ್ಣಾಟಕ ಆಕ್ರಮಣ ಸಂಪೂರ್ಣವಾದ್ದು 1652ರಲ್ಲಿ. 1693ರಲ್ಲಿ ಮಧುರೈ ಮತ್ತು ತಂಜಾವೂರು ಔರಂಗ್‍ಜೇಬನ ಅಧೀನ ರಾಜ್ಯಗಳಾದವು. 1686ರಲ್ಲಿ ಪುದುಕೋಟೈಯ ತೊಂಡಮಾನರು ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದರು. ಮಧುರೆಯ ರಾಜಪ್ರತಿನಿಧಿಯಾಗಿದ್ದ (1689-1706) ರಾಣಿ ಮಂಗಮ್ಮಾಳ್ ರಸ್ತೆಗಳನ್ನೂ ದೇವಸ್ಥಾನಗಳನ್ನೂ ಕೊಳಗಳನ್ನು ಛತ್ರಗಳನ್ನೂ ಕಟ್ಟಿಸಿದಳು. ಜನೋಪಯುಕ್ತ ಕಾರ್ಯಗಳಿಂದಾಗಿ ಇಂದಿಗೂ ಅವಳ ನೆನಪು ತಮಿಳು ನಾಡಿನಲ್ಲಿ. ಇನ್ನೊಬ್ಬ ರಾಜಪ್ರತಿನಿಧಿಯಾಗಿದ್ದ (1732-1736) ರಾಣಿ ಮೀನಾಕ್ಷಿಗೆ ಆರ್ಕಾಟ್ ನವಾಬ್ ದೋಸ್ತ್‍ಅಲಿ ಮೋಸ ಮಾಡಿ ಅವಳನ್ನು ಸೆರೆಹಿಡಿದು ಅವಳ ರಾಜ್ಯವನ್ನು ವಶಪಡಿಸಿಕೊಂಡ. ಕರ್ನಾಟಕದ ನವಾಬರು 18ನೆಯ ಶತಮಾನದ ಆರಂಭದ ವೇಳೆಗೆ ಬಹುತೇಕ ಇಡೀ ತಮಿಳುನಾಡಿನ ಮೇಲೆ ಒಡೆತನ ಸ್ಥಾಪಿಸಿದರು. ತಂಜಾವೂರಿನ ನಾಯಕರು ಹೆಚ್ಚು ಕಡಿಮೆ ಸ್ವತಂತ್ರರಾಗಿದ್ದರೂ ಕೇಂದ್ರ ಅಧಿಕಾರಕ್ಕೆ ವಿಧೇಯರಾಗಿದ್ದರು. ಅನೇಕ ಮುಖ್ಯ ಸಂದರ್ಭಗಳಲ್ಲಿ ಅದರ ನೆರವಿಗೆ ಹೋದರು. ಇವರ ಪೈಕಿ ಕೊನೆಯವನು ವಿಜಯರಾಘವ (1633-73). ಇವನು ದುರ್ಬಲನೂ ಅಸಮರ್ಥನೂ ಆದ ಆಡಳಿತಗಾರನಾಗಿದ್ದ. ಇತರ ನಾಯಕರೂ ಮುಸ್ಲಿಮರೂ ಯರೋಪಿಯನ್ನರೂ ನೀಡಿದ ಕೋಟಲೆಗಳನ್ನು ಎದುರಿಸಲಾರದೆ ಹೋದ. ತಂಜಾವೂರು ಸ್ವಲ್ಪ ಕಾಲ ಬಿಜಾಪುರ ಸುಲ್ತಾನನ ಆಳ್ವಿಕೆಗೆ ತುತ್ತಾಗಿತ್ತು (1659). ಮದುರೆಯ ನಾಯಕ ಚೊಕ್ಕನಾಥ ತಂಜಾವೂರಿನ ಮೇಲೆ ಆಕ್ರಮಣ ನಡೆಸಿದಾಗ (1673) ವಿಜಯರಾಘವ ಮಡಿದ. 1676ರಲ್ಲಿ ಏಕೋಜಿ (ವೆಂಕೋಜಿ) ತಂಜಾವೂರಿನ ಸಿಂಹಾಸನವನ್ನಾಕ್ರಮಿಸಿಕೊಂಡ, ತಂಜಾವೂರು ನಾಯಕರ ಆಳ್ವಿಕೆ ಕೊನೆಗೊಂಡಿತು. ಏಕೋಜಿಯ ಅನಂತರ ಅವನ ವಂಶದವರು ಕರ್ನಾಟಕದ ನವಾಬನ ಆಶ್ರಯದಲ್ಲೂ ಅನಂತರ ಈಸ್ಟ್ ಇಂಡಿಯ ಕಂಪನಿಯ ಆಶ್ರಿತರಾಗಿಯೂ ಮುಂದುವರಿದರು. 1799ರಲ್ಲಿ ವೆಲ್ಲೆಸ್ಲಿಯ ಒತ್ತಡದಿಂದಾಗಿ ತಂಜಾವೂರಿನ ರಾಜ ಸರ್ಪೋಜಿ ಜೀವನಾಂಶ ಪಡೆದು ತನ್ನ ರಾಜ್ಯವನ್ನು ಬ್ರಿಟಿಷ್ ಆಡಳಿತದಲ್ಲೆ ಒಪ್ಪಿಸಿದ. 1855ರಲ್ಲಿ ಕೊನೆಯ ರಾಜ ತೀರಿಕೊಂಡ, ಅವನಿಗೆ ಗಂಡು ಸಂತಾನ ಇರಲಿಲ್ಲ. ಆದ್ದರಿಂದ ರಾಜಪದವಿ ಕೊನೆಗೊಂಡಿತು. ಒಟ್ಟಿನಲ್ಲಿ ದೌರ್ಬಲ್ಯ, ಉತ್ತರಾಧಿಕಾರದ ಬಗ್ಗೆ ವಾದವಿವಾದಗಳು, ಅದರ ಆಡಳಿತಗಾರರಿಂದಲೂ ಹೊರಂಗಣ ಆಕ್ರಮಣಕಾರರಿಂದಲೂ ಆ ಪ್ರದೇಶದ ಸಂಪತ್ತಿನ ಲೂಟಿ_ಇವು ತಂಜಾವೂರಿನ ಮರಾಠಿ ಆಡಳಿತದ ಹೆಗ್ಗುರುತುಗಳೆನ್ನಬಹುದು. ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಜಿಂಜೀಯಲ್ಲಿ ನಾಯಕರ ಆಳ್ವಿಕೆ ಆರಂಭವಾಯಿತು. 1649ರಲ್ಲಿ ಬಿಜಾಪುರದ ಸೇನೆಯಿಂದ ಜಿಂಜೀಯ ನಾಯಕರ ಆಳ್ವಿಕೆ ಕೊನೆಗೊಂಡಿತು. ಫ್ರಾಂಕ್ವಾ ಮಾರ್ಟಿನ್ ಎಂಬ ಫ್ರೆಂಚನಿಗೆ ಪುದುಚೇರಿಯಲ್ಲಿ ನೆಲೆ ಏರ್ಪಡಿಸಿಕೊಳ್ಳಲು 1674ರಲ್ಲಿ ಬಿಜಾಪುರದ ರಾಜ್ಯಪಾಲ ಅನುಮತಿ ನೀಡಿದ. ಮೂರು ವರ್ಷಗಳಲ್ಲಿ ಶಿವಾಜಿ ಕರ್ನಾಟಕದ ದಂಡೆಯಾತ್ರೆ ನಡೆಸಿದ. ಅವನು ಕರ್ನಾಟಕದಲ್ಲಿ ಸ್ಥಾಪಿಸಿದ ಸರ್ಕಾರಕ್ಕೆ ಜಿಂಜೀ ಆಡಳಿತಕೇಂದ್ರವಾಯಿತು. ಆದರೆ 1698 ರಲ್ಲಿ ಅದು ಮೊಗಲರ ವಶವಾಯಿತು. ಕರ್ನಾಟಕದಲ್ಲಿ ಕೋಲೆರೂನ್ ಉತ್ತರಕ್ಕೆ ಮೊಗಲರ ನೇರ ಆಡಳಿತ ಆರಂಭವಾಯಿತು. ತಮಿಳು ನಾಡಿನ ಆಧುನಿಕ ಇತಿಹಾಸ ಆರಂಭವಾಗುವುದು 16-17ನೆಯ ಶತಮಾನಗಳಲ್ಲಿ : ಪಶ್ಚಿಮದ ರಾಷ್ಟ್ರಗಳು ಇಲ್ಲಿಗೆ ಬಂದಾಗ, ಈಗಿನ ಚೆನ್ನೈ ನಗರದಲ್ಲಿ ಮತ್ತು ಅದರ ಸುತ್ತಮುತ್ತ ಪೋರ್ಚುಗೀಸರು, ಇಂಗ್ಲಿಷರು ಮುಂತಾದವರು ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದಾಗ, ಚೆನ್ನೈನಲ್ಲಿ ಈಗ ಫೋರ್ಟ್ ಸೇಂಟ್ ಜಾರ್ಜ್ ಇರುವ ಪ್ರದೇಶವನ್ನು ಬ್ರಿಟಿಷರು ಪ್ರವೇಶಿಸಲು 1639ರ ಆಗಸ್ಟ್ 22ರಂದು ಫ್ರಾನ್ಸಿಸ್ ಡೇ ಎಂಬವನಿಗೆ ಫರ್ಮಾನ್ ನೀಡಿದವನು ನಾಯಕ ವೆಂಕಟಾದ್ರಿ. ಅಂದಿನಿಂದ ಚೆನ್ನೈ ನಗರ ತಮಿಳು ನಾಡಿನ ಎಲ್ಲ ರಾಜಕೀಯ ಶೈಕ್ಷಣಿಕ ಆರ್ಥಿಕ ಸಾಂಸ್ಕøತಿಕ ಬೆಳವಣಿಗೆಯ ಕೇಂದ್ರವಾಗಿದೆ. 1639ರಲ್ಲಿ ಸ್ಥಾಪಿತವಾದಾಗ 7,000 ಜನರ ವಸತಿಯಾಗಿ ಆರಂಭವಾದ ನಗರ ಕ್ರಮವಾಗಿ ಬೆಳೆದಿದೆ. ಚಕ್ರವರ್ತಿ ಔರಂಗಜೇಬನ ಮರಣಾನಂತರ ದಕ್ಷಿಣದ ಮೇಲೆ ಮೊಗಲ್ ಚಕ್ರವರ್ತಿಗಳ ಹತೋಟಿ ಸಡಿಸಲಾಯಿತು. ಆರ್ಕಾಟ್ ನವಾಬನನ್ನು ತನ್ನ ಆಶ್ರಿತನನ್ನಾಗಿ ಮಾಡಿಕೊಂಡು ನಿಜಾಮ 1724ರಲ್ಲಿ ತನ್ನ ಅಧಿಕಾರ ಸ್ಥಾಪಿಸಿದ. ನಿಜಾಮನಿಗೂ ಮರಾಠರಿಗೂ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿದ್ದ ಕಚ್ಚಾಟ ಈ ವ್ಯವಸ್ಥೆಯಿಂದೇನೂ ಬದಲಾಗಲಿಲ್ಲ. ಆ ವೇಳೆಗೆ ಯೂರೋಪಿಯನ್ ಕಂಪನಿಗಳು ಬಲಿಷ್ಠವಾಗಿದ್ದವು. 1748ರಲ್ಲಿ ನಜಾಮ್-ಉಲ್-ಮುಲ್ಕನ ಮರಣಾನಂತರ ಅಧಿಕಾರಕ್ಕಾಗಿ ನಡೆದ ಯುದ್ಧಗಳಲ್ಲಿ ಇಂಗ್ಲಿಷರೂ ಫ್ರೆಂಚರೂ ಪರಸ್ಪರ ವಿರುದ್ಧ ಪಕ್ಷಗಳನ್ನು ವಹಿಸಿ ಕಾದಾಡಿದರು. ವ್ಯಾಪಾರ ಮತ್ತು ರಾಜ್ಯಕಾರಣದಲ್ಲಿ ತಮ್ಮ ನಡುವಣ ಸ್ಪರ್ಧೆಯ ಇತ್ಯರ್ಥಕ್ಕಾಗಿ ಸೆಣಸಿದುವು. ಅಂತಿಮವಾಗಿ ಇಂಗ್ಲಿಷರಿಗೆ ಜಯ ಒಲಿಯಿತು. ಅವರ ಪಕ್ಷಕಾರ ಮಹಮ್ಮದ್ ಅಲಿವಲಾಜಾ ಕರ್ನಾಟಕದ ನವಾಬನಾದ (1752). ಭಾರತದ ಉಳಿದ ಭಾಗಗಳಂತೆ ತಮಿಳು ನಾಡೂ 18ನೆಯ ಶತಮಾನದಲ್ಲಿ ಅವ್ಯವಸ್ಥೆ ಮತ್ತು ದುರಾಡಳಿತಗಳಿಗೆ ಒಳಗಾಗಿತ್ತು: ಬಹುತೇಕ ಅರಾಜಕತೆಯೇ ಹಬ್ಬಿತ್ತು. ಮದ್ರಾಸಿನಲ್ಲಿದ್ದ ಕಂಪನಿ ಸರ್ಕಾರ ದುರ್ಬಲವಾಗಿತ್ತು : ನಿಜಾಮ ಮತ್ತು ಮಹಮ್ಮದ್ ಅಲಿ ಇವರ ನಡುವೆಯಾಗಲಿ ಮಹಮ್ಮದ್ ಅಲಿ ಮತ್ತು ಇತರ ಸಣ್ಣಪುಟ್ಟ ಆಡಳಿತಗಾರರ ನಡುವೆಯಾಗಲಿ ಶಾಂತಿ ಸ್ಥಿರಗೊಳಿಸಲು ಅಸಮರ್ಥವಾಗಿತ್ತು; ಮಹಮ್ಮದ್ ಅಲಿಯ ಅನ್ಯಾಯಗಳನ್ನು ನಿಲ್ಲಿಸಲಾರದಾಗಿತ್ತು. ಮಹಮ್ಮದ್ ಅಲಿಯ ಕೋಟೆಗಳು ಇಂಗ್ಲಿಷರ ಅಧೀನದಲ್ಲಿದ್ದುವು. ಯುದ್ಧ ಕಾಲದಲ್ಲಿ ಇಡೀ ಆಡಳಿತವನ್ನು ಇಂಗ್ಲಿಷರು ವಹಿಸಿಕೊಳ್ಳಬಹುದಿತ್ತು. ಯೂರೋಪಿಯನ್ ಸಾಲಿಗರಿಂದ ನವಾಬ ಬಹಳ ಸಾಲ ಮಾಡಿದ್ದ. ಕಂಪನಿಗೆ ಇದು ಒಂದು ಸಮಸ್ಯೆಯಾಗಿತ್ತು. ನವಾಬ ಟಿಪ್ಪು ಸುಲ್ತಾನನೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದಾನೆಂದು ವೆಲ್ಲೆಸ್ಲಿ ಕಂಡುಹಿಡಿದ. ಕರ್ನಾಟಕದ ಆಡಳಿತವನ್ನು ವಹಿಸಿಕೊಳ್ಳುವುದಕ್ಕೆ ಅದೇ ಒಂದು ನೆರವಾಯಿತು. ಇದಕ್ಕೆ ಪ್ರತಿಯಾಗಿ ವರಮಾನದ ಐದನೆಯ ಒಂದು ಭಾಗವನ್ನು ನವಾಬನಿಗೆ ವರ್ಷಾಶನವಾಗಿ ನೀಡಲಾಯಿತು. ಇದಕ್ಕೆ ಮುಂಚೆ, 3ನೆಯ ಮೈಸೂರು ಯುದ್ಧದ (1792) ಫಲವಾಗಿ ದಿಂಡಿಗಲ್ ಮತ್ತು ಅದರ ಸುತ್ತಮುತ್ತಣ ಪ್ರದೇಶವನ್ನೂ ಇನ್ನು ಕೆಲವು ಪ್ರದೇಶಗಳನ್ನೂ ಟಿಪ್ಪು ಸುಲ್ತಾನನಿಂದ ಕಿತ್ತುಕೊಳ್ಳಲಾಗಿತ್ತು. 1799ರಲ್ಲಿ ಕೊಯಮತ್ತೂರು ಇಂಗ್ಲಿಷರಿಗೆ ಸೇರಿತು. ಹೀಗೆ 19ನೆಯ ಶತಮಾನದ ಆರಂಭದ ವೇಳೆಗೆ ಇಡೀ ತಮಿಳು ನಾಡು ಕಂಪನಿಯ ಆಡಳಿತಕ್ಕೆಒಳಪಟ್ಟಿತ್ತು. ವಾರನ್ ಹೇಸ್ಟಿಂಗ್ಸ್ ಗವರ್ನರ್ ಆದಾಗಿನಿಂದ ಇಂಗ್ಲಿಷರು ದೇಶದ ಆಳ್ವಿಕೆಯಲ್ಲಿ ಹೆಚ್ಚು ಆಸಕ್ತರಾದರು. ತಮಿಳು ನಾಡಿನ ಬಹುಭಾರವನ್ನೂ ತೆಲುಗು ಮಲಯಾಳಂ ಕನ್ನಡ ಭಾಷೆಗಳನ್ನಾಡುತ್ತಿದ್ದ ಜನರಿದ್ದ ಕೆಲವು ಪ್ರದೇಶಗಳನ್ನೂ ಒಳಗೊಂಡ ಮದ್ರಾಸ್ ಪ್ರಾಂತ್ಯದ ರಚನೆಯಾಯಿತು. ಮದ್ರಾಸ್ ನಗರ ರಾಜಧಾನಿಯಾಯಿತು. ಮಧುರೈ, ತಂಜಾವೂರು, ಕಾಂಚೀಪುರ, ಗಂಗೈಕೊಂಡ ಚೋಳಪುರ ಇವೆಲ್ಲ ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡುವು. ಬ್ರಿಟಷರು ಪ್ರಥಮವಾಗಿ ವ್ಯಾಪಾರದಲ್ಲಿ ಆಸಕ್ತರಾಗಿದ್ದುದರಿಂದ ಬಂದರು ನಗರವಾದ ಮದ್ರಾಸ್ ಅವರ ಗಮನ ಸೆಳೆಯಿತು. ಬ್ರಿಟಿಷ್ ಆಡಳಿತದ ಕಾಲದ ಮದ್ರಾಸ್ ಪ್ರಾಂತ್ಯದಲ್ಲಿ 25 ಜಿಲ್ಲೆಗಳಿದ್ದುವು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅದರ ಅಂಗವಾದ ಮದ್ರಾಸ್ ಪ್ರಾಂತ್ಯ ಕೂಡ ಸ್ವತಂತ್ರವಾಯಿತು. 1950ರಲ್ಲಿ ಭಾರತ ಗಣರಾಜ್ಯವಾದಾಗ ಚೆನ್ನೈ ಒಂದು ರಾಜ್ಯವಾಯಿತು. ತೆಲುಗು ಮಾತನಾಡುವ ಜನರು ಬಹುಸಂಖ್ಯೆಯಲ್ಲಿದ್ದ ಭಾಗವನ್ನು 1953ರಲ್ಲಿ ಆಂಧ್ರ ರಾಜ್ಯವೆಂದು ಪ್ರತ್ಯೇಕಿಸಲಾಯಿತಲ್ಲದೆ, ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. 1956ರಲ್ಲಿ ಭಾರತದ ರಾಜ್ಯಗಳ ಪುನರ್ವಿಂಗಡಣೆಯಾದಾಗ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ರಾಜ್ಯಕ್ಕೂ (ಕರ್ನಾಟಕ) ಮಲಬಾರು ಕೇರಳ ರಾಜ್ಯಕ್ಕೂ ಹಿಂದಿನ ತಿರುವಾಂಕೂರು ಸಂಸ್ಥಾನದ ದಕ್ಷಿಣ ಭಾಗದ ತಮಿಳು ಪ್ರದೇಶಗಳು ಮದ್ರಾಸ್ ರಾಜ್ಯದ ಪ್ರದೇಶಕ್ಕೂ ಸೇರಿದುವು. ರಾಜ್ಯಕ್ಕೆ ಅಧಿಕೃತವಾಗಿ ತಮಿಳು ನಾಡು ಎಂದು ನಾಮಕರಣವಾಯಿತು. ವಾಸ್ತು ಶಿಲ್ಪ ತಮಿಳು ನಾಡಿನಲ್ಲಿ ಕ್ರಿ.ಶ. 7ನೆಯ ಶತಮಾನಕ್ಕೆ ಹಿಂದಿನ, ಯಾವುದೇ ಧರ್ಮಕ್ಕೆ ಸೇರಿದ, ಕಟ್ಟಡಗಳು ಉಳಿದುಬಂದಿಲ್ಲ. ಆದರೆ ಕ್ರಿ.ಪೂ. ಸು. 2ನೆಯ ಶತಮಾನದಿಂದ ಕ್ರಿ.ಶ 2ನೆಯ ಶತಮಾನದವರೆಗಿನ ಸಂಗಮ್ ಸಾಹಿತ್ಯದಲ್ಲೂ ಅನಂತರ ಆಳ್ವಾರ್‍ಗಳು ಮತ್ತು ನಾಯನ್ಮಾರ್‍ಗಳು ರಚಿಸಿದ ಭಕ್ತಿ ಸಾಹಿತ್ಯದಲ್ಲೂ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳಿವೆ. ಇಳಙÉ್ಕೂೀಯಿಲ್. ಮಾಡಕ್ಕೋಯಿಲ್ ಆಲರ್ ಕೋಯಿಲ್‍ಗಳು ಇವುಗಳ ಪೈಕಿ ಕೆಲವು. ಅಲ್ಲದೆ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅನೇಕ ಪಾರಿಭಾಷಿಕ ಪದಗಳೂ ಸಾಹಿತ್ಯದಲ್ಲಿ ಕಂಡುಬಂದಿವೆ. ಇದರಿಂದ ಸಂಗಮ್ ಕಾಲದಲ್ಲೇ ತಮಿಳು ನಾಡಿನಲ್ಲಿ ಹಲವಾರು ಕಟ್ಟಡಗಳು ನಿರ್ಮಾಣಗೊಂಡಿದ್ದುವೆಂದು ಹೇಳಬಹುದು. ಬೇಗನೆ ನಶಿಸುವ ಮರಮುಟ್ಟುಗಳನ್ನು ಬಹುಶ: ಆಗ ಉಪಯೋಗಿಸಿದ್ದುದು ಆ ಕಟ್ಟಡಗಳು ಇಂದು ಉಳಿದಿಲ್ಲದಿರುವುದಕ್ಕೆ ಕಾರಣವಾಗಿರಬಹುದು. ಆದರೆ ಅನಂತರ ವೈಷ್ಣವ ಹಾಗೂ ಶೈವ ಭಕ್ತಿಪಂಥಗಳು ತಮಿಳು ನಾಡಿನಲ್ಲೆಲ್ಲ ಹಬ್ಬಿದುವು. ಈ ಚಳವಳಿಗಳ ಫಲವಾಗಿ ಎಲ್ಲೆಲ್ಲೂ ದೇವಾಲಯಗಳು ನಿರ್ಮಿತವಾಗಿವೆ. ರಚನಾಕ್ರಮದಲ್ಲಿ, ಅಲಂಕರಣದಲ್ಲಿ ಇವು ವಿಭಿನ್ನವಾಗಿದ್ದರೂ ಇವುಗಳಲ್ಲಿ ಅನುಸರಿಸಿದ ಶೈಲಿ ಮಾತ್ರ ಒಂದೇ. ಅದು ದ್ರಾವಿಡ ಶೈಲಿ. ಗೋಪುರಾಕಾರದ ಮೇಲ್ಕಟ್ಟಡ. ಸರಳವಾದ ಹೊರಮೈಗೋಡೆ, ಎಂಬ ಸಾಲುಗಳುಳ್ಳ ಮಂಟಪಗಳು-ಇವು ಈ ಶೈಲಿಯ ಪ್ರಮುಖ ಲಕ್ಷಣಗಳು. ಶತಮಾನಗಳ ಅನಂತರ ಬಂದ ಶಿಲ್ಪಶಾಸ್ತ್ರ ಗ್ರಂಥಗಳು ಮತ್ತು ಆಗಮಗಳು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅನೇಕ ವಿವರಗಳನ್ನೂ ನೀಡಿವೆ. ಕಟ್ಟಡಗಳಿಗಾಗಿ ಸೂಕ್ತವಾದ ಕ್ಷೇತ್ರದ ಹಾಗೂ ಸಾಮಗ್ರಿಗಳ ಆಯ್ಕೆ, ಭಿನ್ನ ವಿನ್ಯಾಸಗಳಿಗೆ ಸಂಬಂಧಿಸಿದ ಮಾನಗಳು, ದೇವಾಲಯಗಳಲ್ಲಿ ಸ್ಥಾಪಿಸುವ ಪ್ರತಿಮೆಗಳ ಲಕ್ಷಣಗಳು. ಪೂಜಾವಿಧಿ ಪೂಜಾಸಾಮಗ್ರಿ, ತಾತ್ತ್ವಿಕ ಹಿನ್ನೆಲೆ, ಮುಂತಾದ ಎಲ್ಲ ವಿವರಗಳನ್ನೂ ಈ ಗ್ರಂಥಗಳಲ್ಲಿ ಕೊಟ್ಟಿದೆ. ಅನೇಕ ಸ್ತರಗಳ ವಿಮಾನಗಳನ್ನೂ ಒಂದರಿಂದ ಹಿಡಿದು ಸಾವಿರದವರೆಗಿನ ಕಂಬಗಳನ್ನುಳ್ಳ ಮಂಟಪಗಳನ್ನೂ ರಚಿಸುವ ವಿಧಾನಗಳನ್ನು ವಿವರಿಸಿದೆ. ವಿಮಾನ (ಗರ್ಭಗೃಹ). ಮಂಟಪಗಳು, ಪ್ರಾಕಾರ, ಧ್ವಜ ಸ್ತಂಭ ಹಾಗೂ ಗೋಪುರ-ಇವು ದೇವಾಲಯದಲ್ಲಿ ಪ್ರಮುಖವಾದ ಭಾಗಗಳು. ವಿಮಾನದಲ್ಲೂ ಅಧಿಷ್ಠಾನ, ಭಿತ್ತಿ, ಪ್ರಸ್ತರ, ಹಾರ, ಶಿಖರ ಮತ್ತು ಸ್ತೂಪಿ ಎಂಬ ಷಡಂಗಗಳಿರುತ್ತವೆ. ತಮಿಳುನಾಡಿನ ಅತ್ಯಂತ ಪ್ರಾಚೀನ ದೇವಾಲಯದ ವಾಸ್ತುಶಿಲ್ಪವನ್ನು ಪಲ್ಲವ 1ನೆಯ ಮಹೇಂದ್ರವರ್ಮ (ಸು.580-630) ಬಂಡೆಯಲ್ಲಿ ಕೊರೆಯಿಸಿದ ದೇವಾಲಯಗಳಲ್ಲಿ ಕಾಣಬಹುದು. ಮಂಡಗ ಪಟ್ಟುವಿನ ಗುಹಾ ದೇವಾಲಯವೊಂದರಲ್ಲಿ ದೊರೆತ ಆತನ ಶಾಸನದಲ್ಲಿ ಅವನು ಬ್ರಹ್ಮ ವಿಷ್ಣು ಮಹೇಶ್ವರರಿಗಾಗಿ ಮರ, ಲೋಹ ಮತ್ತು ಗಾರೆಗಳಿಂದ ಕೂಡಿದ ಆಯತನವನ್ನು ಕಟ್ಟಿಸಿದುದಾಗಿ ಹೇಳಿದೆ. ಈ ಕಾಲಕ್ಕೆ ಸೇರಿದ ಇಂಥ ಗುಡಿಗಳು ಮದ್ರಾಸಿನ ಬಳಿಯ ಪಲ್ಲವರಂ, ತಿರುಚನಾಪಲ್ಲಿ, ದಳವಾನೂರು ಮುಂತಾದ ಕಡೆಗಳಲ್ಲಿ ಸಿಕ್ಕಿವೆ. ಇವುಗಳಲ್ಲಿ ಒಂದು, ಮೂರು ಅಥವಾ ಹೆಚ್ಚಿನ ಗರ್ಭಗೃಹಗಳಿವೆ. ಅಷ್ಟಕೋನಾಕಾರದ ನಡು ಭಾಗದಿಂದ ಕೂಡಿದ ಚಚ್ಚೌಕನೆಯ ಕಂಬಗಳಿರುತ್ತವೆ. ಈ ಕಂಬಗಳ ಚಚ್ಚೌಕದ ಬದಿಗಳ ಮೇಲೆ ಕಮಲ ಫಲಕಗಳಿವೆ. ಒಂದು ಬಾಗು ಇರುವ, ಏಣುಗಳುಳ್ಳ, ಮನುಷ್ಯನ ಮುಖವನ್ನು ಕೆತ್ತಿರುವ ಕಪೋತ ಪಾಲಿಕೆಗಳೂ ಗುಡಿಯ ದ್ವಾರದ ಎರಡೂ ಕಡೆ ಇರುವ ಎರುಡು ಕಥೆಗಳ ದ್ವಾರಪಾಲಕ ಮೂರ್ತಿಗಳೂ ಇರುತ್ತವೆ. ಇವು ಈ ಗುಡಿಗಳ ಪ್ರಮುಖ ಲಕ್ಷಣಗಳು. ಒಂದನೆಯ ಮಹೇಂದ್ರವರ್ಮನ ಮಗ 1ನೆಯ ನರಸಿಂಹವರ್ಮ ಮಾಮಲ್ಲ(7ನೆಯ ಶತಮಾನದ ನಡುಗಾಲ) ಬಾದಾಮಿಗೆ ದಂಡೆತ್ತಿ ಹೋದಾಗ ಅಲ್ಲಿ ಬಯಲಿನಲ್ಲಿ ಕಟ್ಟಿದ್ದ, ಕಿರಿದಾದರೂ ಮುದ್ದಾದ, ಗುಡಿಗಳನ್ನು ಕಂಡ. ಆ ವೇಳೆಗಾಗಲೇ ಆ ಶೈಲಿಯಲ್ಲಿ ರೂಪುಗೊಂಡಿತ್ತು ಅವುಗಳಿಂದ ಪ್ರಭಾವಿತನಾದ ಆತ ಮಹಾಬಲಿಪುರದಲ್ಲಿ ಸಮುದ್ರತೀರದ ಮೇಲಿದ್ದ ಹೆಬ್ಬಂಡೆಗಳನ್ನು ಕೊರೆಯಿಸಿ ರಥಗಳೆಂದು ಕರೆಯಲಾದ ಅಖಂಡವಾದ ಗುಡಿಗಳನ್ನು ಕಟ್ಟಿಸಿದ, ಬಯಲಿನಲ್ಲಿ ಗುಡಿಗಳನ್ನು ಕಟ್ಟುವ ಪ್ರವೃತ್ತಿ ಇಲ್ಲಿಂದ ಆರಂಭವಾಯಿತು ಗುಡಿಸಿಲಿನ ಆಕಾರದ ಭೀಮರಥ ಮತ್ತು ಗಜಪೃಷ್ಠಾಕಾರದ ನಕುಲ ಸಹದೇವರಥಗಳು ತಮಿಳು ನಾಡಿನಲ್ಲಿ ಉಳಿದಿರುವ ಅತ್ಯಂತ ಪ್ರಾಚೀನ ದೇವಾಲಯಗಳ ಉದಾಹರಣೆಗಳು. ಇವುಗಳ ಶಿಖರಗಳು ಚೌಕ, ಅಷ್ಟಕೋನ ಅಥವಾ ಜಗಪೃಷ್ಠಾಕಾರಗಳಲ್ಲಿವೆ. ಗೋಡೆಯನ್ನು ಗೋಡೆಗಂಬಗಳಿಂದ ಅಂಕಣಗಳಾಗಿ ವಿಭಜಿಸಲಾಗಿದೆ. ಈ ಕಂಬಗಳ ತುದಿಯಲ್ಲಿ ತರಂಗಬೋದಿಗೆಗಗಳನ್ನು ಕೂಡಿಸಲಾಗಿದೆ. ಇವುಗಳ ನಡುವೆ ಮಾನವ ಹಾಗೂ ದೈವಆಕೃತಿಯ ವಿವಿಧ ಭಂಗಿಯ ವಿಗ್ರಹಗಳನ್ನು ಬಿಡಿಸಲಾಗಿದೆ. ಅವುಗಳ ಭಿನ್ನ ರೂಪಗಳಿಂದಾಗಿಯೂ ಅಚ್ಚುಕಟ್ಟಾದ ಪ್ರಮಾಣ, ನಾಜೂಕಾದ ಕೆತ್ತನೆ ಮತ್ತು ಅಲಂಕಾರಗಳಿಂದಾಗಿಯೂ ಈ ಕಂಬಗಳು ಇಂದಿಗೂ ಸಾಟಿಯಿಲ್ಲದವುಗಳೆನಿಸಿವೆ. ಈ ಗುಡಿಗಳಾವುದಕ್ಕೂ ಪ್ರಾಕಾರ, ಮಹಾದ್ವಾರ, ಗೋಪುರ ಮುಂತಾದವು ಇಲ್ಲ. ಪಲ್ಲವ 1ನೆಯ ಪರಮೇಶ್ವರವರ್ಮನ, ಎಂದರೆ 7ನೆಯ ಶತಮಾನದ ಉತ್ತರಾರ್ಧದ, ಕಾಲದಿಂದ ಹೊಸ ನಮೂನೆಯ ಆಲಯಗಳು ನಿರ್ಮಾಣವಾಗತೊಡಗಿದುವು. ಇವು ಏಕಶಿಲೆಯಲ್ಲಿ ಬಿಡಿಸಿದವುಗಳಾಗಿರದೆ ಕಲ್ಲಿನ ತುಂಡುಗಳಿಂದ ನಿರ್ಮಿತವಾದವು. ಚೆಂಗಲ್ಪಟ್‍ಗೆ ಸಮೀಪದ ಕೂರಮ್‍ನಲ್ಲಿಯ ಶಿವಾಲಯ ಇದಕ್ಕೆ ಒಂದು ಪ್ರಾಚೀನ ನಿದರ್ಶನ. ಇದು ಮಹಾಬಲಿಪುರದ ನಕುಲ-ಸಹದೇವ ರಥದಂತೆ ಗಜಪೃಷ್ಠಾಕಾದಲ್ಲಿರುವುದು ಗಮನಾರ್ಹ. ತಿರುಕ್ಕಳು ಕುನ್ಚಮ್‍ನಲ್ಲಿ ಇಂಥ ಇನೊಂದು ಆಲಯವಿದೆ. ಈ ದೇವಾಲಯಗಳೂ ಅಷ್ಟು ದೊಡ್ಡವೇನೂ ಅಲ್ಲ. ಇವಕ್ಕೂ ಪ್ರಾಕಾರವಾಗಲಿ ಗೋಪುರವಾಗಲಿ ಇಲ್ಲ. ರಾಜಸಿಂಹ ಇಮ್ಮಡಿ ನರಸಿಂಹವರ್ಮನ ಕಾಲದಲ್ಲಿ ವಾಸ್ತುಶಿಲ್ಪ ಅದುವರೆಗೂ ಅಭಿವೃದ್ಧಿ ಹೊಂದಿದಷ್ಟು ಅಭಿವೃದ್ಧಿ ಹೊಂದಿತ್ತು. ಇದು ಮುಂದಿನ ಹಲವು ಶತಮಾನಗಳಿಗೆ ಮಾದರಿಯಾಗಿ ಉಳಿಯಿತು. ತಮಿಳು ನಾಡಿನ ವಾಸ್ತು ಶಿಲ್ಪ ಅದೇ ಜಾಡಿನಲ್ಲಿ ಮುಂದುವರಿಯಿತೆನ್ನಬಹುದು. ರಾಜಧಾನಿಯಾದ ಕಾಂಚೀಪುರದ ಕೈಲಾಸನಾಥ ಮತ್ತು ಪನಮಲೈ ಗ್ರಾಮದ ತಾಲಗಿರೀಶ್ವರ ದೇವಾಲಯಗಳೂ ಮಹಾಬಲಿಪುರದ ಸಮುದ್ರತೀರದಲ್ಲಿರುವ, ಮೂರು ಗರ್ಭಗುಡಿಗಳಿಂದ ಕೂಡಿದ ಅಪೂರ್ವ ದೇವಾಲಯವೂ ಇವನ ಕಾಲದಲ್ಲಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಆದ ಸಾಧನೆಯ ಪ್ರತೀಕಗಳಾಗಿವೆ. ಇವು ಮೂರೂ ಕಲ್ಲಿನ ಕಟ್ಟಡಗಳು. ಇವು ಹಲವು ತಲಗಳ ಉನ್ನತ ಮೇಲ್ಕಟ್ಟಡಗಳಿಂದ ಕೂಡಿವೆ. ತಾಲಗಿರೀಶ್ವರ ಆಲಯ ವಿನಾ ಉಳಿದ ಎರಡಕ್ಕೆ ಪ್ರಾಕಾರಗಳಿವೆ. ಕಂಚಿಯ ಕೈಲಾಸನಾಥಾಲಯದ ಪ್ರಾಕಾರದ ಒಳಹೊರ ಪಾಶ್ರ್ವಗಳಲ್ಲಿ ಹಲವಾರು ಸಣ್ಣ ಗುಡಿಗಳ ಸಾಲುಗಳಿರುವುದು ಗಮನಾರ್ಹ. ಸಣ್ಣ ಗೋಪುರ ಸಹ ಈ ಆಲಯಕ್ಕಿದೆ; ಈ ಬಗೆಯ ರಚನೆಗಳಲ್ಲಿ ಇದೇ ಅತ್ಯಂತ ಪ್ರಾಚೀನವಾದ್ದು. ಮಧ್ಯದ ಗುಡಿಯಲ್ಲಿ ಲಿಂಗವನ್ನು ಪ್ರತಿಷ್ಠಿಸಿದೆ. ಇದಕ್ಕೆ ಪೂರಕವಾಗಿ ಹೊರಮುಖವಾಗಿ ಇನ್ನೂ ಏಳು ಗುಡಿಗಳಿವೆ. ಆದರೆ ಅನಂತರದ ಕಾಲದಲ್ಲಿ ಈ ಉಪಗುಡಿಗಳನ್ನು ಮುಖ್ಯ ಗುಡಿಯಿಂದ ಪ್ರತ್ಯೇಕಿಸಿ ದೇವಾಲಯದ ಅಂಗಳದಲ್ಲಿ ಕಟ್ಟುವ ಪದ್ಧತಿ ಅಸ್ತಿತ್ವಕ್ಕೆ ಬಂತು. ಮಹಾಬಲಿಪುರದ ಕಡಲಕರೆಯ ದೇವಾಲಯದ ಗೋಪುರ ಈಗ ಉಳಿದಿಲ್ಲ. ಆದರೆ ಅದರ ಪ್ರಾಕಾರದಲ್ಲಿ ತಲೆ ಎತ್ತಿ ಮಲಗಿದ ವೃಷಭಗಳನ್ನು ಸಾಲಾಗಿ ಕೆತ್ತಲಾಗಿತ್ತು. ಅವುಗಳಲ್ಲಿ ಕೆಲವು ಇನ್ನೂ ಇವೆ. ಕಾಂಚೀಪುರದ ವೈಕುಂಠ ಪೆರುಮಾಳ್ ದೇವಾಲಯ ಸಹ ಸುಮಾರು ಇದೇ ಕಾಲದ್ದು; ಎಂದರೆ ಎಂಟನೆಯ ಶತಮಾನದ ಮಧ್ಯಭಾಗಕ್ಕೆ ಸೇರಿದ್ದು. ಅನ್ಯತ: ಮೇಲಿನ ಗುಡಿಗಳಂತೆಯೇ ಇದ್ದರೂ, ಇದಕ್ಕೆ ಮೂರು ಅಂತಸ್ತುಗಳ ವಿಮಾನವಿದೆ. ಇಂಥ ವಿಮಾನಗಳನ್ನು ಅಷ್ಟಾಂಗ ವಿಮಾನಗಳೆಂದು ಕರೆಯಲಾಗಿದೆ. ಈ ಬಗೆಯ ವಿಮಾನಕ್ಕೆ ಇದು ಬಹುಶ: ಅತ್ಯಂತ ಪ್ರಾಚೀನ ನಿದರ್ಶನ. ಅನಂತರದ ಶತಮಾನಗಳಲ್ಲಿ ಚೌಕ ಅಥವಾ ಗಜಪೃಷ್ಠಾಕಾರದ ಶೀಲಾ ದೇವಾಲಯಗಳು ಸಾಮಾನ್ಯವಾಗಿ ನಿರ್ಮಿತವಾಗಿತ್ತಿದ್ದುವು. ಕೆಲವು ದೇವಾಲಯಗಳು ಚೌಕನೆಯ ಮೈಯ, ಆದರೆ ಗಜಪೃಷ್ಠಾಕೃತಿಯ ಮೇಲ್ಕಟ್ಟಡವುಳ್ಳಂಥವಾಗಿದ್ದುವು. ಇನ್ನು ಕೆಲವು ದೇವಾಲಯಗಳಲ್ಲಿ ವರ್ತುಲಾಕಾದ ಗರ್ಭಗುಡಿಗಳೂ ಚೌಕಾಕಾರದ ಪ್ರಾಕಾರಗಳೂ ಇದ್ದುವು. ಪುದುಕೋಟೈ ಜಿಲ್ಲೆಯ ನಾರ್ತಾಮಲೈ ಗ್ರಾಮದ ವಿಜಯಾಲಯ ಚೋಳೇಶ್ವರ ದೇವಾಲಯದಲ್ಲಿ ಇಂಥ ವರ್ತುಲಾಕಾರದ ಗರ್ಭಗುಡಿ ಇದೆ. ಚೋಳ ಶೈಲಿಯ ಆರಂಭದ ದೆಸೆಯನ್ನು ಇಲ್ಲಿ ಗುರುತಿಸಬಹುದು. ಇದು ಬಹುಶ: 9ನೆಯ ಶತಮಾನದ ಮಧ್ಯಭಾಗದಲ್ಲಿ ವಿಜಯಾಲಯ ಚೋಳನಿಂದ ನಿರ್ಮಿತವಾಯಿತೆಂದು ಹೇಳಲಾಗಿದೆ. ಇಲ್ಲಿ ಮಧ್ಯದ ಮುಖ್ಯ ಗುಡಿಯ ಸುತ್ತಲೂ ಉಪಗುಡಿಗಳನ್ನು ನಿರ್ಮಿಸಲಾಗಿದೆ. ಈ ಹೊಸ ಪದ್ಧತಿಯಲ್ಲಿ ಸ್ವಲ್ಪ ಕಾಲದ ಅನಂತರ ನಿರ್ಮಿಸಲಾದ ಕಟ್ಟಡದ ಉದಾಹರಣೆಯೆಂದರೆ ಪುದುಕೋಟೈ ಬಳಿಯ ತಿರುಕ್ಕಟ್ಟಳ್ಳೆ ಗ್ರಾಮದ ಸುಂದರೇಶ್ವರಾಲಯ. ಸುಮಾರು ಇದೇ ಅವಧಿಯ, ಆದರೆ ಪಾಂಡ್ಯರ ಆಳ್ವಿಕೆಗೆ ಒಳಪಟ್ಟ ಪ್ರದೇಶದ ಕಛಿಗುಮಲೈಯಲ್ಲಿಯ ವೆಟ್ಟುವನ್ ಕೋವಿಲ್‍ನಲ್ಲಿ ಸಹ ಚೋಳರ ಪ್ರದೇಶದ ದೇವಾಲಯ ವಾಸ್ತು ಲಕ್ಷಣಗಳನ್ನು ಕಾಣಬಹುದು. ಇಲ್ಲಿಯದು ಏಕಶಿಲಾ ದೇವಾಲಯ. ಈ ಶೈಲಿಯ ದೇವಾಲಯಗಳಲ್ಲಿ ಮುಖ್ಯವಾಗಿ ಆರು ಅಥವಾ ಎಂಟು ಮೂಲೆಗಳ ಅಥವಾ ಗೋಳಾಕಾರದ ಶಿಖರಗಳು, ಗರ್ಭಗುಡಿಯ ಸುತ್ತಲಿನ ಗೋಡೆಯ ಒಳಮುಖದಲ್ಲಿ ಅಳವಡಿಸಲಾದ ದೇವಕೋಷ್ಠಗಳು. ಆಯಾಕಾರದ ಬೋದಿಗೆಗಳನ್ನುಳ್ಳ ಕಂಬಗಳು ಮತ್ತು ಗೋಡೆಗಂಬಗಳು ಇರುತ್ತವೆ. ಈ ಬೋದಿಗೆಗಳ ಎರಡು ತುದಿಗಳನ್ನು ಒಂದು ಕೋನದಲ್ಲಿ ತುಂಡರಿಸಿದಾಗ ಮಧ್ಯಭಾಗ ಮುಂಚಾಚಿದಂತೆ ತೋರುತ್ತದೆ. ದೇವಕೋಷ್ಠಗಳಲ್ಲಿ ಸಾಮಾನ್ಯವಾಗಿ ಗಣೇಶ, ದಕ್ಷಿಣಾಮೂರ್ತಿ, ಅರ್ಧನಾರೇಶ್ವರ ಮತ್ತು ದುರ್ಗೆಯರ ವಿಗ್ರಹಗಳನ್ನು ಸ್ಥಾಪಿಸಲಾಗಿರುತ್ತದೆ. ವಿಜಯಾಲಯನ ಮಗ ಆದಿತ್ಯ ಕಾವೇರಿಯ ಎರಡೂ ತೀರಗಳಲ್ಲಿ ಹಲವಾರು ಗುಡಿಗಳನ್ನು ಕಟ್ಟಿಸಿದ. ಅವುಗಳಲ್ಲಿ ಹಲವು ಈಗಲೂ ಇವೆ. ಇವನು ಸಂಪ್ರದಾಯವನ್ನು ಮುಂದುರಿಸಿದುದಲ್ಲದೆ ಕೆಲವು ಹೊಸ ರೀತಿಗಳನ್ನೂ ಪ್ರಾರಂಭಿಸಿದ. ಉಪಾನದಿಂದ ಸ್ತೂಪಿಯ ವರೆಗೂ ಚೌಕಾಕಾರದ ದೇವಾಲಯಗಳು ನಿರ್ಮಿತವಾದ್ದು ಈ ಕಾಲದಲ್ಲಿ, ಕುಂಭಕೋಣದ ನಾಗೇಶ್ವರಾಲಯ ಇದಕ್ಕೊಂದು ನಿದರ್ಶನ. ಶ್ರೀನಿವಾಸನಲ್ಲೂರಿನ ಕೊರಂಗನಾಥ ದೇವಾಲಯದಲ್ಲೂ ಇದೇ ವಿನ್ಯಾಸವಿದೆಯಾದರೂ ಇದರಲ್ಲಿ ಇನ್ನೊಂದು ನಾವೀನ್ಯವನ್ನು ಕಾಣಬಹುದು. ಗರ್ಭಗುಡಿಯನ್ನು ಆವರಿಸುವ ಮಂಟಪದ ಎತ್ತರವನ್ನು ಇಲ್ಲಿ ದ್ವಿಗುಣೀಕರಿಸಲಾಗಿದೆ. ಇದರಿಂದ ಇಡೀ ಕಟ್ಟಡದ ಭವ್ಯತೆ ಹೆಚ್ಚಿದೆ. ತಂಜಾವೂರಿನ ರಾಜ ರಾಜೇಶ್ವರ ಅಥವಾ ಬೃಹದೀಶ್ವರಾಲಯ ಇದಕ್ಕೊಂದು ಉತ್ಕøಷ್ಟ ಮಾದರಿ. ಇದನ್ನು ಕಟ್ಟಿಸಿದವನು 1ನೆಯ ರಾಜರಾಜ ಚೋಳ. ಆದಿತ್ಯನ ಕಾಲದಲ್ಲಿ ನಿರ್ಮಿಸಲಾದ ದೇವಾಲಯಗಳ ಮಾದರಿಯ ಹಲವು ಶಿಲಾ ದೇವಾಲಯಗಳನ್ನು 10ನೆಯ ಶತಮಾನದಲ್ಲಿ ಕಟ್ಟಲಾಯಿತು. ಇವೆಲ್ಲ ಸರಳ, ಅಷ್ಟು ದೊಡ್ಡವಲ್ಲ, ಆಡಂಬರಪೂರಿತವಲ್ಲ. ಇಂಥ ದೇಗುಲದ ಸುತ್ತಲೂ ಒಂದೇ ಒಂದು ಪ್ರಾಕಾರ ಇರುತ್ತದೆ. ಇದರ ಮೇಲ್ಕಟ್ಟಡ ಮೂರು ಅಂತಸ್ತುಗಳಿಗಿಂತ ಹೆಚ್ಚು ಎತ್ತರವಾಗಿರುವುದಿಲ್ಲ. ಮೇಲ್ಕಟ್ಟಡದ ಪಾಗಾರಗಳಲ್ಲಿ ಕೂಟ, ಶಾಲಾ ಹಾಗೂ ಪಂಜರಗಳನ್ನು ಉಬ್ಬು ಚಿತ್ರಗಳಲ್ಲಿ ಕಡೆಯಲಾಗಿದೆ. 11ನೆಯ ಶತಮಾನದ ಪ್ರಥಮಾರ್ಧದಲ್ಲಿ ದೇವಾಲಯ ವಾಸ್ತು ಶೈಲಿಯಲ್ಲಿ ವಿಶೇಷವಾದ ಬದಲಾವಣೆಗಳಾದುವು. ಆಕೃತಿ, ಭವ್ಯತೆ ಹಾಗೂ ವಿವರಗಳಿಗೆ ಪ್ರಾಶಸ್ತ್ಯ ಲಭಿಸಿತು. ಈ ಪರಿಪೂರ್ಣ ದ್ರಾವಿಡ ವಾಸ್ತು ಶೈಲಿಗೆ ಮೇಲೆ ಹೇಳಿದ ಬೃಹದೀಶ್ವರಾಲಯ ಒಂದು ಉತ್ತಮ ಉದಾಹರಣೆ. ಅಂದಿನಿಂದ ಇಂದಿನವರೆಗೂ ಇದು ಅತ್ಯಂತ ಭವ್ಯವಾದ ಉದಾಹರಣೆಯಾಗಿ ಉಳಿದು ಬಂದಿದೆ. ಗೋಪುರಾಕೃತಿಯ ವಿಮಾನ 13 ಅಂತಸ್ತುಗಳ ವರೆಗೂ ಮೇಲೆ ಹೋಗಿದೆ. ಇದರ ಎತ್ತರ 180 ಅಡಿ. ದೇವಾಲಯದ ಉದ್ದ 180 ಅಡಿ. ಇದರ ಮೇಲ್ಭಾಗದಲ್ಲಿ ಅಷ್ಟಭುಜದ ಒಂದೇ ಕಲ್ಲಿನಲ್ಲಿ ಕೊರೆದ ಬೃಹತ್ ಶಿಖರವಿದೆ. ಗರ್ಭಗೃಹದ ಸುತ್ತಲಿನ ಗೋಡೆ ಅದಕ್ಕೆ ಇಮ್ಮಡಿ ಎತ್ತರದ್ದು. ಪ್ರತಿಯೊಂದು ಮುಖದಲ್ಲೂ ಸಮಾನಾಂತರಗಳಲ್ಲಿ ದೇವಕೋಷ್ಠಗಳು, ಮಧ್ಯಗುಡಿಯ ಮುಂದೆ ಕಂಬಗಳಿರುವ ಉದ್ದನೆಯ ಮಂಟಪ. ಇದರ ತೆರೆದ ಅಂಗಳದ ಸುತ್ತಲೂ ಪ್ರಾಕಾರ. ಪ್ರಾಕಾರದ ನಡುವೆ ಅಲ್ಲಲ್ಲಿ ಕಿರುಗುಡಿಗಳು, ಪ್ರಾಕಾರದ ಪ್ರವೇಶ ದ್ವಾರದಲ್ಲಿ, ಹೊರಗಿನ ಪ್ರಾಕಾರದಲ್ಲಿ ಒಂದೊಂದು ಗೋಪುರ. ವಿಮಾನಕ್ಕೆ ಹೋಲಿಸಿದರೆ ಇವು ಕುಬ್ಜ. ಆದರೆ ಇವು ಗಾತ್ರದಲ್ಲಿ ಹಿರಿದಾಗಿವೆ. ಇವು ಸುಂದರವಾದ ಪ್ರಮಾಣಬದ್ಧವಾದ ರಚನೆಗಳು. ಅಧಿಷ್ಠಾನದ ವಿವಿಧ ಅಚ್ಚು ಪಟ್ಟೆಗಳು, ಕಂಬ ಮತ್ತು ಗೋಡೆಗಂಬಗಳಲ್ಲಿಯ ಅಲಂಕರಣ, ಮಂಟಪದಲ್ಲಿಯ ಸರಳವಾದ ಅಲಂಕಾರವನ್ನುಳ್ಳ ಏಕಶಿಲಾಸ್ತಂಭಗಳು, ಕದಲಿಕಾಕರಣ ಪದ್ಧತಿಯಲ್ಲಿ ನಿರ್ಮಿಸಲಾದ ಮೇಲ್ಕಟ್ಟಡಗಳು ಈ ಆಲಯದ ಭವ್ಯತೆಯನ್ನು ಹೆಚ್ಚಿಸಿವೆ. ಇದನ್ನು ಕಟ್ಟುವ ಮೊದಲು ಪ್ರಾಕಾರದಲ್ಲಿ ಚಂಡಿಕೇಶ್ವರ ಗುಡಿ ಮಾತ್ರವಿತ್ತು. ಇದರಲ್ಲಿಯ ದೇವಿ ಗುಡಿ ಮುಂತಾದವೆಲ್ಲ ಅನಂತರ ನಿರ್ಮಿತವಾದುವು.1ನೆಯ ರಾಜೇಂದ್ರಚೋಳ ಕಟ್ಟಿಸಿದ ಗಂಗೆ ಕೊಂಡ ಚೋಳಪುರಂನ ದೇವಾಲಯ ಸುಮಾರು ಇಷ್ಟೇ ಗಾತ್ರದ್ದು. ಆದರೆ ಇದರ ಮೇಲ್ಕಟ್ಟಡದ ಹೊರರೇಖೆ ಬೃಹದೀಶ್ವರಾಲಯದಲ್ಲಿದ್ದಂತೆ ನೇರವಾಗಿರದೆ ನಿಮ್ನ ಮಧ್ಯಾಕಾರದಲ್ಲಿದೆ. ಇದು ಮುಖ್ಯವಾಗಿ ಎದ್ದು ಕಾಣುವ ವ್ಯತ್ಯಾಸ. ಅನಂತದ ಶತಮಾನಗಳಲ್ಲಿ ದೇವಾಲಯದ ಪ್ರಾಕಾರದೊಳಗೆ ಇತರ ಕಟ್ಟಡಗಳನ್ನು ಜೋಡಿಸುವ ಪದ್ಧತಿ ಬೆಳೆಯಿತು. ಸ್ತ್ರೀ ದೇವತೆಗಳಿಗೆ ಪ್ರತ್ಯೇಕವಾದ ಗುಡಿಗಳು ಕಟ್ಟಲ್ಪಟ್ಟುವು. ಕಂಬಗಳಲ್ಲಿ, ಗೋಡೆಗಂಬಗಳಲ್ಲಿ ಜಟಿಲವಾದ ಕೆತ್ತನೆಗಳನ್ನು ಅಳವಡಿಸಿ ಮಂಟಪಗಳನ್ನು ಪರಿಷ್ಕರಿಸಲಾಯಿತು. ಕಂಬಗಳ ಎರಡು ತುದಿಗಳ ಬೋದಿಗೆಗಳು ಗೆಡ್ಡೆಯಾಕಾರ ತಾಳಿದುವು. ಕುದುರೆಗಳಿಂದ ಎಳೆಯಲ್ಪಟ್ಟ ರಥವನ್ನು ಹೋಲುವ ಮುಂಭಾಗವುಳ್ಳ ಮಂಟಪಗಳು ಅಸ್ತಿತ್ವಕ್ಕೆ ಬಂದುವು. ಎತ್ತರವಾದ ವಿಮಾನ, ಕುಬ್ಜವಾದ ಗೋಪುರ ಮತ್ತು ಒಂದೇ ಪ್ರಾಕಾರವನ್ನೊಳಗೊಂಡ, 12ನೆಯ ಶತಮಾನದ ಜೋಳ ಶೈಲಿಯ ದೇವಾಲಯಗಳಿಗೆ ದಾರಾಸುರಮ್‍ದ ಶಿವಾಲಯ, ತ್ರಿಭುವನದಲ್ಲಿಯ ಕಂಪಹರೇಶ್ವರಾಲಯ- ಇವು ನಿದರ್ಶಗಳಾಗಿವೆ. ಅನಂತರದ ಪಾಂಡ್ಯರ ಕಾಲದಲ್ಲಿ ಗೋಪುರಗಳು ಸಹ ಅನೇಕ ಅಂತಸ್ತುಗಳನ್ನೊಳಗೊಂಡು ಎತ್ತರವಾದುವು. ಪ್ರಾಕಾರಗಳ ಸಂಖ್ಯೆ ಬೆಳೆಯಿತು. ಒಳಗಿನ ಬೇರೆ ಬೇರೆ ದೇವತೆಗಳಿಗೂ ಸ್ತ್ರೀ ದೇವತೆಗಳಿಗೂ ಪ್ರತ್ಯೇಕ ಗುಡಿಗಳನ್ನು ಕಟ್ಟಲಾಯಿತು. ನೂರು ಅಥವಾ ಸಾವಿರ ಕಂಬಗಳ ಮಂಟಪಗಳು ಕಾಣಿಸಿಕೊಂಡುವು. ಚಿದಂಬರಂ, ತಿರುವಣ್ಣಾಮಲೈಗಳ ಆಲಯಗಳನ್ನು ನೋಡಿದಾಗ ಈ ಅಂಶಗಳು ವ್ಯಕ್ತವಾಗುತ್ತವೆ. ಈ ಹೊಸ ಪ್ರವೃತ್ತಿಯ ಫಲವಾಗಿ ವಿಮಾನಗಳಲ್ಲಿ ನಯ ಗೆಲಸ ಕಡಿಮೆಯಾಗಿ, ಅವು ತಮ್ಮ ಪ್ರಾಧಾನ್ಯವನ್ನು ಕಳೆದುಕೊಂಡುವು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಗೋಪುರಗಳ, ಮಂಟಪಗಳು ಮತ್ತು ಪ್ರಾಕಾರಗಳ ರಚನೆಯಲ್ಲಿ ಇನ್ನಷ್ಟು ಪ್ರಗತಿಯಾಯಿತು. ಇದು ಇಡೀ ತಮಿಳು ನಾಡಿಗೂ ಹಬ್ಬಿತು. ಈ ಘಟ್ಟದ ರಚನೆಗಳ ಉತ್ಕøಷ್ಟ ಉದಾಹರಣೆಗಳನ್ನು ನಾವು ವಿಜಯನಗರದ ರಾಜಧಾನಿಯ ವಿಠಲ, ಹಜಾರ ರಾಮ ಮುಂತಾದ ದೇಗುಲಗಳಲ್ಲೇ ಅಲ್ಲದೆ ಪ್ರಾಂತೀಯ ಪಟ್ಟಣಗಳಾದ ವೆಲ್ಲೂರು, ಕಂಚಿ, ಕುಂಭಕೋಣ, ಶ್ರೀರಂಗಂ, ಮುಂತಾದವುಗಳಲ್ಲಿಯ ದೇವಾಲಯಗಳಲ್ಲೂ ಕಾಣಬಹುದು. ವೆಲ್ಲೂರಿನ ಕಲ್ಯಾಣಮಂಟಪ (15ನೆಯ ಶತಮಾನ), ಚಿದಂಬರಂ ಶ್ರೀರಂಗಂ ತಿರುವಣ್ಣಾಮಲೈಗಳ ಗೋಪುರಗಳು ಗಮನಾರ್ಹ ಉದಾಹರಣೆಗಳು. ಮಂಟಪದಲ್ಲಿಯ ಅಖಂಡ ಶಿಲಾಸ್ತಂಭಗಳು ಕ್ರಮೇಣ ಬೇಟೆಯ ದೃಶ್ಯಗಳು, ಅಲಂಕೃತ ವ್ಯಾಳಗಳು ಮುಂತಾದವುಗಳಿಂದ ಚಿತ್ರಿತವಾದ ಕಲಾಕೃತಿಕಡೆತಗಳಾದುವು. ಈ ಸ್ತಂಭಗಳೇ ಅಲ್ಲದೆ ಶಿಲಾಮಂಟಪಗಳೂ ವಿಶಿಷ್ಟ ಕಲಾಕೃತಿಗಳಾದುವು. ಇವುಗಳಲ್ಲಿರುವ, ಮುಂಜಾಜಿದ, ಎರಡು ಬಾಗುಗಳುಳ್ಳ ಏಣುಗಳೂ (ಕೊಡಂಗೈ) ಅವುಗಳಲ್ಲಿ ತೋರುವ ಕೆತ್ತನೆಯ ಕೆಲಸವೂ ವಿಚಿತ್ರವಾದಂಥವು. ಅವುಗಳ ಅಡಿಯಲ್ಲಿ, ಮರಕ್ಕೆ ಮೊಳೆ ಹೊಡೆದಂತೆ ಅಥವಾ ತಿರುಪುಮೊಳೆ ತಿರುಗಿಸಿದಂತೆ ಕಾಣುವ ಕೆತ್ತನೆಯ ಕೆಲಸವೂ ಅದ್ಭುತವಾದಂಥವು. ಕಲ್ಲಿನ ಕೆಲಸದ ಈ ರೂವಾರಿಗಳು ತಮ್ಮ ಕಾಲದ ಬಡಗಿಗಳನ್ನು ಮೀರಿಸಲು ಯತ್ನಿಸುತ್ತಿದ್ದರೆಂಬುದನ್ನು ತೋರಿಸುವ ಈ ಕಂಡೆತಗಳು ಮರಗೆಲಸಗಳೇಯೋ ಏನೋ ಎಂಬ ಭ್ರಮೆ ಬರಿಸುತ್ತವೆ. ಮುಖ್ಯ ಗುಡಿಯ ಸುತ್ತ ಹೆಚ್ಚು ಹೆಚ್ಚು ಪ್ರಾಕಾರಗಳನ್ನು ನಿರ್ಮಿಸುವ ಪದ್ಧತಿಯಿಂದ ಇಡೀ ವಾಸ್ತುಶಿಲ್ಪ ಸಂಕೀರ್ಣಕ್ಕೆ ಒಂದು ಭವ್ಯತೆಯನ್ನು ದೊರಕಿಸಿ ಕೊಡುವ ಪ್ರಯತ್ನ ಸಫಲವಾಯಿತು. ಕಾವೇರಿ ತೀರದ ಜಂಬುಕೇಶ್ವರಮ್‍ನ ಪಂಚ ಪ್ರಾಕಾರ ಸಂಕೀರ್ಣ, ಶ್ರೀರಂಗದ ಸಪ್ತ ಪ್ರಾಕಾರ ಸಂಕೀರ್ಣ-ಇವು ಈ ಅಮೋಘ ಬೆಳೆವಣಿಗೆಗೆ ಸಾಕ್ಷಿಗಳಾಗಿ ನಿಂತಿವೆ. ಈ ಆಲಯಗಳ ಅತ್ಯಂತ ಹೊರ ಪ್ರಾಕಾರದ ನಾಲ್ಕು ಪ್ರವೇಶದ್ವಾರಗಳ ಮೇಲೂ ಉನ್ನತವಾದ ಗೋಪುರಗಳಿವೆ. ಈ ಬೃಹದ್ಗೋಪುರಗಳನ್ನು ಸಾಮಾನ್ಯವಾಗಿ ರಾಯಗೋಪುರಗಳೆಂದು ಕರೆಯುತ್ತಾರೆ. ಈ ಗೋಪುರಗಳ ನಿರ್ಮಾಣಕ್ಕೆ ಅಗತ್ಯವಾದ ಅಗಾಧವಾದ ಸಾಮಗ್ರಿಯನ್ನೂ ಮಾನವಶಕ್ತಿಯನ್ನೂ ಧರ್ಮನಿಷ್ಠ ಜನರನೇಕರು ಮನ:ಪೂರ್ವಕವಾಗಿ ಒದಗಿಸಿದ್ದರಿಂದಲೂ ಧರ್ಮನಿಷ್ಠ ದೊರೆಗಳು ಅವರಿಗೆ ಸ್ಫೂರ್ತಿ ನೀಡಿದ್ದರಿಂದಲೂ ಇಂಥ ಕಟ್ಟಡಗಳ ನಿರ್ಮಾಣ ಸಾಧ್ಯವಾಯಿತೆನ್ನಬಹುದು. ಹಲವು ಬಗೆಯ ಸಾಮಗ್ರಿಗಳಿಂದಲೂ ಭಾಗಗಳಿಂದಲೂ ಸಂಯೋಜಿತವಾದಂತೆ ತೋರುವಂತೆ ಮಂಟಪಗಳನ್ನೂ ಸ್ತಂಭಗಳನ್ನೂ ಕೊರೆಯುತ್ತಿದ್ದರು. ಕಂಬದ ಬೋದಿಗೆಗಳು ಮೊದಲಿನಂತೆ ಗೆಡ್ಡೆಯಂತಿರುವ ಬದಲು ಬಾಳೆಯ ಹೂವಿನ ಆಕಾರ ತಾಳಿದುವು. ಇವನ್ನು ಪುಷ್ಪ ಬೋದಿಗೆಗಳೆಂದು ಕರೆಯಲಾಗಿದೆ. ಇಸ್ಲಾಂ ವಾಸ್ತುಶಿಲ್ಪದ ಪ್ರಭಾವದಿಂದ ವಿಜಯನಗರದ ಅರಸರು ಮತ್ತು ಅವರ ಮಾಂಡಲಿಕರು ಇಟ್ಟಿಗೆ ಹಾಗೂ ಗಾರೆಗಳನ್ನು ಉಪಯೋಗಿಸಿ ಕಮಾನುಗಳನ್ನು ಕಟ್ಟಲು ಆರಂಭಿಸಿದರು. 16-17ನೆಯ ಶತಮಾನಗಳಲ್ಲಿ ಮಧುರೆಯ ನಾಯಕರು ಗೋಪುರ ವಿನ್ಯಾಸಕ್ಕೂ ಕಂಬಗಳ ಕೆತ್ತನೆಯ ಕೆಲಸಕ್ಕೂ ಹೆಚ್ಚಿನ ಪ್ರೋತ್ಸಾಹ ಕೊಟ್ಟರು. ಮಧುರೈ ಮೀನಾಕ್ಷಿ ದೇವಾಲಯ ಈ ಕಲೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಗೋಪುರಗಳಲ್ಲಿ ಅನೇಕ ಗಾರೆಯ ವಿಗ್ರಹಗಳನ್ನು ರಚಿಸಲಾಗಿದೆ. ಹೊರರೇಖೆ ಒಳಬಾಗಿ ತೊನೆದಾಡುವಂತೆ ತೋರುವ ಈ ಗೋಪುರಗಳು ಸುಂದರ ಕೃತಿಗಳು. ಇಂಥದೇ ಶೈಲಿಯನ್ನು ಶ್ರೀವಿಲ್ಲಿಪುತ್ತೂರ್, ತಿರುನೆಲ್ವೇಲಿ ಸುಚೀಂದ್ರಂಗಳಲ್ಲಿ ಕಾಣಬಹುದು. ಆದರೆ ಈ ರಚನೆಗಳು ಮಧುರೈ ಮೀನಾಕ್ಷಿ ದೇವಾಲಯ ಕಲೆಗೆ ಸಾಟಿಯಾಗಲಾರವು. ಈ ಕಾಲದಲ್ಲಿ ಮಂಟಪ ನಿರ್ಮಾಣಕ್ಕೆ ವಿಶೇಷವಾದ ಗಮನ ನೀಡಲಾಯಿತು. ಅವುಗಳಲ್ಲಿಯ ಕಂಬಗಳು ಬಹಳವಾಗಿ ಪರಿಷ್ಕಾರಗೊಂಡುವು. ಕಂಬಗಳ ದುಂಡನೆಯ ದಿಂಡುಗಳಲ್ಲಿ ಪುರಾಣಗಳಿಂದ ಆಯ್ದ ಕಥೆಗಳನ್ನು ನಿರೂಪಿಸುವ ಚಿತ್ರಗಳನ್ನೂ ಗ್ರಾಮ ಜೀವನ ಚಿತ್ರಗಳನ್ನೂ ಕೊರೆಯಲಾಯಿತು. ಕೆಲವು ಕಂಬಗಳಲ್ಲಿ ಅರಸರ ಮತ್ತು ಅವರ ಸಂಬಂಧಿಕರ ಪ್ರತಿಕೃತಿಗಳನ್ನು ಕೊರೆಯಲಾಗುತ್ತಿತ್ತು. ಇನ್ನು ಹಲವು ಕಂಬಗಳ ದಿಂಡುಗಳಲ್ಲಿ ಬಹುಮುಖಗಳ ಸಣ್ಣ ಸಣ್ಣ ಕಂಬಗಳನ್ನು ಕೊರೆದು, ಅವನ್ನು ಬಡಿದರೆ ಸಂಗೀತಸ್ವರಗಳು ಹೊರಡುವಂತೆ ಮಾಡಲಾಯಿತು. ಆಧುನಿಕ ಸಂಗೀತಶಾಸ್ತ್ರಜ್ಞರು ಇವನ್ನು ಸಂಗೀತ ಸ್ತಂಭಗಳೆಂದು ಕರೆದಿದ್ದಾರೆ. ಮಧುರೈ ಮೀನಾಕ್ಷಿಯ ಪುದುಮಂಟಪದಲ್ಲಿ ಈ ನಾನಾ ಬಗೆಯ ಕಂಬಗಳನ್ನು ಕಾಣಬಹುದು. ಪುದುಕೋಟೈ ಜಿಲ್ಲೆಯ ಅವಿಂದೈಯಾರ್‍ಕೋವಿಲ್‍ನ ಆತ್ಮನಾಥಸ್ವಾಮಿ ದೇವಾಲಯದಲ್ಲೂ ತಿರುನೆಲ್ವೇಲಿಯ ನೆಲ್ಲೈಯಪ್ಪರ್ ದೇವಾಲಯದಲ್ಲೂ ಇಂಥವೇ ಮಂಟಪಗಳಿವೆ. 17ನೆಯ ಶತಮಾನದ ಕೊನೆಯ ಮತ್ತು 18 ನೆಯ ಶತಮಾನದ ಆರಂಭದ ದಶಕಗಳಲ್ಲಿ ತಮಿಳುನಾಡಿನ ವಾಸ್ತುಶಿಲ್ಪದಲ್ಲಿ ಇನ್ನೊಂದು ಹೊಸ ಬೆಳೆವಣಿಗೆಯನ್ನು ಗುರುತಿಸಬಹುದು. ಅದುವರೆಗೆ ಪ್ರಾಕಾರದ ಗೋಡೆಗಳನ್ನು ತೆರವಾಗಿ ಬಿಡುತ್ತಿದ್ದರು. ಅಲ್ಲಲ್ಲಿ ಅವುಗಳೊಳಗೆ ಮಂಟಪಗಳನ್ನು ನಿರ್ಮಿಸುತ್ತಿದ್ದರು. ಅಂಗಣದೊಳಗಣ ಆ ಬಿಡಿ ಕಟ್ಟಡಗಳನ್ನು ಒಂದುಗೂಡಿಸಿ ಉದ್ದನೆಯ ಮುಚ್ಚಿದ ಮೊಗಸಾಲೆಗಳನ್ನು ಕಟ್ಟುವುದು ಆಗ ಆರಂಭವಾಯಿತು. ಬಿಸಿಲು ಮಳೆಗಳ ಬಾಧೆಯಿಲ್ಲದೆ ಎಲ್ಲ ಋತುಗಳಲ್ಲೂ ಉತ್ಸವಗಳನ್ನು ನಡೆಸಲು ಈ ಮೊಗಸಾಲೆಗಳನ್ನು ಬಳಸಿಕೊಳ್ಳುವುದು ಸಾಧ್ಯವಾಯಿತು. ರಾಮೇಶ್ವರದ ರಾಮನಾಥೇಶ್ವರ ದೇವಾಲಯದ ದೀರ್ಘವಾದ ಮೊಗಸಾಲೆ ಇದಕ್ಕೆ ಉತ್ತಮ ನಿದರ್ಶನ. ಶಾಸನಗಳು ದಕ್ಷಿಣ ಭಾರತದಲ್ಲಿ ತಮಿಳು ನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅಶೋಕನ ಕಾಲದ ಶಾಸನಗಳು ಇಲ್ಲ. ಆದರೆ ತಮಿಳು ಶಾಸನಗಳು ಕ್ರಿ.ಪೂ ಸುಮಾರು 3ನೆಯ ಶತಮಾನದಲ್ಲಿ ಕಾಣಿಸಿಕೊಳ್ಳತೊಡಗುತ್ತವೆ. ಕೆಲವು ಶಾಸನಗಳಲ್ಲಿ ಅಪರೂಪವಾಗಿ ಸ.ಧ.ಶ ಎಂಬ ಅಕ್ಷರಗಳನ್ನು ಉಪಯೋಗಿಸಿದ್ದರೂ, ಸಾಮಾನ್ಯವಾಗಿ ಇವುಗಳಲ್ಲಿ ಚ,ತ,ಚ ಎಂಬ ವರ್ಗಪ್ರಥಮಾಕ್ಷರ ಅಥವಾ ತತ್ಸಮಗಳನ್ನೇ ಉಪಯೋಗಿಸಿದೆ. ಮಧುರೈ, ತಿರುನೆಲ್ವೇಲಿ ಮತ್ತು ರಾಮನಾಥಪುರಮ್ ಜಿಲ್ಲೆಗಳಲ್ಲಿ ದೊರೆತ ಬ್ರಾಹ್ಮೀಲಿಪಿಯ ಶಾಸನಗಳು ತಮಿಳು ಮತ್ತು ಪ್ರಾಕೃತಗಳಿಂದ ಕೂಡಿದ ಮಿಶ್ರಭಾಷೆಯಲ್ಲಿವೆ. ಸಾಮಾನ್ಯವಾಗಿ ಗುಡ್ಡಗಳಲ್ಲಿರುವ ನೈಸರ್ಗಿಕ ಗುಹೆಗಳಲ್ಲಿ ನಿರ್ಮಿಸಿದ ಕಲ್ಲಿನ ಹಾಸುಗಳ ಮೇಲಿರುವ ಈ ಶಾಸನಗಳಲ್ಲಿ ಆ ಹಾಸುಗಳನ್ನು ಅಲ್ಲಿ ಅಳವಡಿಸಿದ ದಾನಿಗಳ ಹಾಗೂ ಆ ಸ್ಥಳಗಳ ಹೆಸರುಗಳಿವೆ. ಒಮ್ಮೊಮ್ಮೆ ಆ ದಾನಿಯ ವೃತ್ತಿಯನ್ನು ಸೂಚಿಸಲಾಗಿದೆ; ಪೊನ್ ವಾಣಿಕನ್, ಉಪು ವಾಣಿಕನ್ ಪಾಣಿತ ವಾಣಿಕನ್, ಎಂದು ಮುಂತಾಗಿ ಅವುಗಳಲ್ಲಿ ಹೇಳಿದೆ. ಈ ಗುಹೆಗಳನ್ನು ಪಾಳಿ, ತಾಣಮ್, ಅರಿಟ್ಟಾನಮ್ ಎಂದೆಲ್ಲ ಕರೆಯಲಾಗಿದೆ. ನೆಡುಂಜಯನ್, ಪೆರುಞ, ಕಡುಞಕೋನ್ ಇತ್ಯಾದಿಗಳು ವೈಯಕ್ತಿಕ ಹೆಸರುಗಳು. ಸಾಮಾನ್ಯವಾಗಿ: ಇವು ಕಲ್ಲಿನ ಈ ಹಾಸುಗಳ ಕೊಡುಗೆಗಳ ದಾಖಲೆಗಳು. ಇವು ಜೈನಮತಕ್ಕೆ ಸೇರಿದವರ ಶಾಸನಗಳೆಂದು ತಿಳಿಯಲಾಗಿದೆ. ಪುದುಚೇರಿಯ ಹತ್ತಿರದ ಅರಿಕಮೇಡು ಮತ್ತು ತಿರುವ್ವಿರಾಪ್ಪಳ್ಳಿ ಜಿಲ್ಲೆಯ ಉಜೈಯೂರ್. ತಿರುನೆಲ್ವೇಲಿ ಜಿಲ್ಲೆಯ ಕೊ ಮುಂತಾದ ಸ್ಥಳಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ಗೀರುಬರಹಗಳಿಂದ ಕೂಡಿದ ಮಡಕೆಗಳು ದೊರಕಿವೆ. ಅರಿಕಮೇಡಿನ, ಕ್ರಿ.ಶ.1-2ನೆ ಶತಮಾನದವೆಂದು ನಿರ್ಣಯಿಸಲಾದ, ಕೆಲವು ಗೀರುಬರಹಗಳವು ಪ್ರಾಕೃತಭಾಷೆಗಳಲ್ಲೂ ಉಳಿದವು ತಮಿಳು ಭಾಷೆಯಲ್ಲೂ ಇವೆ. ಈರೋಡಿನ ಬಳಿಯ ಅರಚಲೂರಿನಲ್ಲಿ ದೊರೆತ ಗುಹಾಶಾಸನಗಳು ಕ್ರಿ.ಶ. 3ನೆಯ ಶತಮಾನಕ್ಕೆ ಸೇರಿದವು. ಬ್ರಾಹ್ಮೀಲಿಪಿಯ ಎರಡು ಸಾಲಿನ ಶಾಸನ ತಮಿಳಿನಲ್ಲಿದೆ. ಇವು ಪ್ರಾಚೀನತಮ ತಮಿಳು ಶಾಸನಗಳೆಂದು ಹೇಳಲಾಗಿದೆ. ಸಮೀಪದಲ್ಲಿ ಕೊರೆಯಲಾದ, ಸಂಗೀತ ಮತ್ತು ನೃತ್ಯಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ಈ ಶಾಸನ ನಿರೂಪಿಸುವಂತೆ ತೋರುತ್ತದೆ. ಈ ಚಿಹ್ನೆಗಳನ್ನು ರೂಪಿಸಿದಾತ ತೇವನ್ ಜಾತ್ತನ್ ಎಂಬ ಹೂವಾಡಿಗ. ತಿರುನಾಥರ್ಕುಣ್ರಿ ಎಂಬಲ್ಲಿ ಕ್ರಿ.ಶ.ಸು.5ನೆಯ ಶತಮಾನಕ್ಕೆ ಸೇರಿದ ವಟ್ಟೆಯಿತ್ತು ಬರಹದ ಶಾಸನವೊಂದು ದೊರೆತಿದ್ದು ಅದು ಬಹುಶಃ ಜೈನಮತದವನಾದ ಚಂದ್ರನಂದಿ ಆಚಾರ್ಯನೆಂಬವನನ್ನು ನಿರೂಪಿಸುತ್ತದೆ. ಧರ್ಮಪುರಿ, ಸೇಲಂ ಮೊದಲಾದ, ಕರ್ನಾಟಕಕ್ಕೆ ಸೇರಿದಂತಿರುವ, ಜಿಲ್ಲೆಗಳಲ್ಲಿ ಕಂಗ, ಕಟ್ಟಿ, ವಾಣ ಮುಂತಾದ ಮಾಂಡಲಿಕ ಮನೆತನಗಳವರ ಶಾಸನಗಳು ಈಗ ದೊರೆತಿವೆ. ಇವುಗಳಲ್ಲಿ ತಮಿಳು ಹಾಗೂ ವಟ್ಟೆಯಿತ್ತು ಲಿಪಿಗಳಿಗೆ ಸಮಾನವಾದ ಲಿಪಿಯ ರೂಪಗಳನ್ನು ಕಾಣಬಹುದು. ಇವೆಲ್ಲ ಬಹುಮಟ್ಟಿಗೆ ವೀರಗಲ್ಲುಗಳ ಮೇಲಿನ ಶಾಸನಗಳು. ಪಲ್ಲರ ತಾಮ್ರಶಾಸನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದು ಪ್ರಾಕೃತ ಶಾಸನಗಳದು. ಶಿವಸ್ಕಂಧವರ್ಮನ್‍ನ ಮೈದವೋಲು ಮತ್ತು ಹಿರೆಗಡಗಲಿ ತಾಮ್ರಶಾಸನಗಳು. ಸಿಂಹವರ್ಮನ್‍ನ ಸಕ್ರೆಪಟ್ಟಣ ತಾಮ್ರಶಾಸನ-ಇವು ಈ ಶಾಸನಗಳಲ್ಲಿ ಕೆಲವು ಅನಂತರದ ಗುಂಪಿನ ಶಾಸನಗಳು ಗ್ರಂಥ ಲಿಪಿಯಲ್ಲಿ, ಸಂಸ್ಕ್ರತ ಮತ್ತು ತಮಿಳು ಭಾಷೆಗಳಲ್ಲಿವೆ. ಇವೂ ದಾನ ಶಾಸನಗಳೇ. ಪಲ್ಲವರ ಶಿಲಾಶಾಸನಗಳು ಚುಟುಕಾಗಿವೆ. ಅನೇಕ ವೇಳೆ ಅವನ್ನು ಚಿತ್ರಗಳ ಕೆಳಗಿನ ಪಟ್ಟಿಗಳಲ್ಲಿ ಕೊರೆಯಲಾಗಿದೆ. ಅವು ದಾನಿಯ ಅಥವಾ ಶಿಲ್ಪಿಯ ಹೆಸರನ್ನು ಉಲ್ಲೇಖಿಸುತ್ತವೆ. ಕಾಂಚೀಪುರದ ವೈಕುಂಠನಾಥ ದೇವಾಲಯದಲ್ಲಿ ಪಲ್ಲವಮಲ್ಲ ಪಟ್ಟಾಭಿಷೇಕಕ್ಕೆ ಬಂದ ಘಟನೆಗಳನ್ನು ನಿರೂಪಿಸುವ ಶಿಲ್ಪಗಳನ್ನು ಹಾಗೂ ಅವುಗಳ ಕೆಳಗಿನ ಪಟ್ಟಿಗಳ ಶಾಸನಗಳನ್ನು ಉದಾಹರಿಸಬಹುದು. ಈ ಕಾಲದ ಪಾಂಡ್ಯರ ತಾಮ್ರಶಾಸನಗಳಲ್ಲಿಯ ತಮಿಳುಭಾಗದಲ್ಲಿ ಅರಸನ ಸಾಧನೆಗಳನ್ನು ವರ್ಣಿಸುವ ಪದ್ಯಗಳಿರುತ್ತವೆ. ಚೋಳರ ಆದಿತ್ಯನ ಕಾಲದಿಂದ ತಮಿಳು ನಾಡಿನಲ್ಲಿ ಅನೇಕ ಶಿವಾಲಯಗಳನ್ನು ಕಟ್ಟಲಾಯಿತು. ಆ ದೇವಾಲಯಗಳ ಗೋಡೆಗಳಲ್ಲಿ ಅಳವಡಿಸಲಾದ ಕಲ್ಲುಗಳ ಮೇಲೆ ಶಾಸನಗಳನ್ನು ಕೊರೆಯತೊಡಗಿದರು. ಆರಂಭದಲ್ಲಿ ಅರಸನ ಹೆಸರು, ಬಿರುದು, ಶಾಸನ ಹುಟ್ಟಿದ ತಿಂಗಳು (ಸೌರಮಾನ), ನಕ್ಷತ್ರ ಮತ್ತು ವಾರ ದಿನಗಳನ್ನು ನಮೂದಿಸಲಾಗುತ್ತಿತ್ತು. ಚೋಳರ ಶಾಸನಗಳು ತಮಿಳು ಅಕ್ಷರದಲ್ಲಿ, ಸಂಸ್ಕೃತ ಹಾಗೂ ತಮಿಳು ಭಾಷೆಗಳಲ್ಲಿ ಇವೆ. ಹಲವರು ದೇವಾಲಯಗಳ ಗೋಡೆಗಳ ಮೇಲೆ ಕೊರೆದ ಈ ಶಾಸನಗಳು ದೀರ್ಘವಾಗಿವೆ. ಇವು ತಮಿಳು ನಾಡಿನ ಸಾಮಾಜಿಕ ಜೀವನದ ವಿವಿಧ ಮುಖಗಳನ್ನು ಕುರಿತು ಬಹಳ ವಿವರಗಳನ್ನೊದಿಗಿಸುತ್ತವೆ. ಒಂದನೆಯ ರಾಜನಿಂದ ಪ್ರಾರಂಭವಾಗಿ ಅವನ ಉತ್ತರಾಧಿಕಾರಿಗಳು ಮುಂದುವರಿಸಿದ ಮೈ ಕೀರ್ತಿಗಳು (ಪ್ರಶಸ್ತಿ) ಐತಿಹಾಸಿಕ ವಿವರಗಳಿಂದ ತುಂಬಿವೆ. ಅರಸನ ಆಳ್ವಿಕೆಯ ವರ್ಷಗಳು ಹೆಚ್ಚಿದಂತೆ ಈ ಪ್ರಶಸ್ತಿಗಳು ಧೀರ್ಘವಾಗಿ, ಹೊಸ ಸಾಧನೆಗಳ ಉಲ್ಲೇಖಗಳು ಅವುಗಳಲ್ಲಿರುತ್ತವೆ. ಹಲವಾರು ಉತ್ಪ್ರೇಕ್ಷೆಗಳಿದ್ದರೂ ಇವು ಐತಿಹಾಸಿಕ ದಾಖಲೆಗಳೆಂದೇ ಹೇಳಬೇಕು. ಸಾಮಾನ್ಯವಾಗಿ ಇತರ ವಿವರಗಳ ಜೊತೆಗೆ ಅರಸನ ಆಳ್ವಿಕೆಯ ವರ್ಷಗಳನ್ನು ಇವುಗಳಲ್ಲಿ ಕೊಟ್ಟಿರುತ್ತದೆ. ಚೋಳರ ತಾಮ್ರಶಾಸನಗಳಲ್ಲಿ ತಿರುವಾಲಂಗಾಡು ಮತ್ತು ಕರಂದೈ ತಾಮ್ರಪಟಗಳು ಈವರೆಗೆ ತಿಳಿದ ಇಂಥ ಶಾಸನಗಳಲ್ಲಿ ಅತ್ಯಂತ ದೊಡ್ಡವು. ಚೋಳರ ಸಮಕಾಲೀನರಾದ ಪಾಂಡ್ಯರು ತಮ್ಮ ಶಾಸನಗಳಿಗಾಗಿ ತಮಿಳು ಮತ್ತು ವಟ್ಟೆಯಿತ್ತು ಲಿಪಿಗಳನ್ನು ಬಳಸಿದರು. ಪಾಂಡ್ಯರ ಶಾಸನಗಳಲ್ಲಿ ಕಾಲವನ್ನು ಸೂಚಿಸುವಾಗ 4+6, 8+3 ಮುಂತಾದ ಎರಡೆರಡು ತೇದಿಗಳನ್ನು ನಮೂದಿಸಲಾಗಿದೆ. ಇದಕ್ಕೆ ಕಾರಣವೇನೆಂಬುದು ಗೊತ್ತಿಲ್ಲವಾದರೂ, ಇವು 10, 11 ಇತ್ಯಾದಿ ವರ್ಷಗಳನ್ನು ಸೂಚಿಸುತ್ತವೆ ಎಂದು ಭಾವಿಸಲಾಗಿದೆ.ವಿಜಯನಗರ ಶಾಸನಗಳನ್ನು ತೆಲಗು ಲಿಪಿ ಮತ್ತು ಭಾಷೆಯಲ್ಲಿ ಅಂತೆಯೇ ನಂದಿನಾಗರೀ ಲಿಪಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರೆಯಲಾರಂಭವಾಯಿತು. ಈ ಬಗೆಯ ತಾಮ್ರಶಾಸನಗಳ ಎಷ್ಟೋ ಮಾದರಿಗಳನ್ನು ಮದ್ರಾಸಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಶೇಖರಿಸಲಾಗಿದೆ. ಶಿಕ್ಷಣ ತಮಿಳುನಾಡಿನ ವಿಶ್ವವಿದ್ಯಾಲಯಗಳು ತಮಿಳುನಾಡು ವಿಧಾನಸಭೆ ಚುನಾವಣೆ, 2016 ತಮಿಳುನಾಡಿನ ಇತಿಹಾಸ ಉಲ್ಲೇಖಗಳು ಬಾಹ್ಯ ಸಂಪರ್ಕಗಳು Government The Official Site of the Government of Tamil Nadu Official Tourism Site of Tamil Nadu, India General information Tamil Nadu Encyclopædia Britannica entry ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ತಮಿಳು ನಾಡು
https://kn.wikipedia.org/wiki/ತಮಿಳು_ನಾಡು
REDIRECT ತಮಿಳುನಾಡು
ತಮಿಳು
https://kn.wikipedia.org/wiki/ತಮಿಳು
ದ್ರಾವಿಡ ಭಾಷೆಗಳಲ್ಲಿ ಬಹಳ ಪ್ರಾಚೀನ ಮತ್ತು ಶ್ರೀಮಂತ ಭಾಷೆ ತಮಿಳು.http://bayalu.weebly.com/32363246326332513265-32443277324832623257327732463263.html ತಮಿಳುhttp://vijaykarnataka.indiatimes.com/topics/%E0%B2%A4%E0%B2%AE%E0%B2%BF%E0%B2%B3%E0%B3%81-%E0%B2%AD%E0%B2%BE%E0%B2%B7%E0%B3%86 ಭಾಷೆಯಲ್ಲಿ ದೊರೆತಿರುವ ಕೃತಿಗಳಲ್ಲಿ ಮೊತ್ತಮೊದಲನೆಯದು ತೊಲ್ಕಾಪ್ಪಿಯಂ. ಇದು ಒಂದು ಪ್ರಾಚೀನ ಲಕ್ಷಣ ಗ್ರಂಥ. ಇದರ ಕಾಲ ಕ್ರಿ.ಪೂ. ೩ನೇ ಶತಮಾನ. ಪಂಚದ್ರಾವಿಡ ಭಾಷೆಗಳಾದ ತಮಿಳು, ಕನ್ನಡ ತೆಲುಗು, ಮಲಯಾಳಂ ಮತ್ತು ತುಳುಗಳಲ್ಲಿ ತಮಿಳು ಭಾಷೆಯು ತೀರ ಹಳೆಯದಾದರೆ ನಂತರ ಉಳಿದ ನಾಲ್ಕು ಭಾಷೆಗಳು ಬರುತ್ತವೆ. ಈ ಎಲ್ಲ ಭಾಷೆಗಳಲ್ಲೂ ಬರವಣಿಗೆ ಎಡದಿಂದ ಬಲಕ್ಕೆ ಸಾಗುತ್ತದೆ. ತಮಿಳಿಗೆ ತನ್ನದೇ ಆದ ಲಿಪಿ ಬಳಕೆಯಲ್ಲಿದೆ. ತಮಿಳು ಪ್ರಮುಖವಾಗಿ ಭಾರತ ಹಾಗು ಶ್ರೀಲಂಕಾದಲ್ಲಿ ಮಾತನಾಡಲ್ಪಡುವ, ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಒಂದು ಭಾಷೆ. ಇತಿವೃತ್ತ ತಮಿಳು ಸಿಂಗಾಪುರ, ಶ್ರೀಲಂಕಾ, ಮಲೇಶಿಯ ದೇಶಗಳಲ್ಲಿ ಹಾಗೂ ಭಾರತದ ತಮಿಳುನಾಡು ರಾಜ್ಯದಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನವನ್ನು ಪಡೆದಿದೆ. ಈ ಭಾಷೆಯು ಭಾರತದ ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಭಾಷೆ ಎಂದು ಮಾನ್ಯತೆ ಪಡೆದಿದೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳು – ತಮಿಳು ಭಾಷೆಗಳ ನಡುವೆ ನಿಕಟ ಸಂಬಂಧವಿದೆ. ಶತಶತಮಾನಗಳಿಂದ ಬೆಳೆದು ಬಂದ ಸಂಬಂಧವಿದು ಎಂದು ಹೇಳಬಹುದು. ತುಳು – ತಮಿಳು ಭಾಷೆಗಳಲ್ಲಿ ಅನೇಕ ಸಮಾನ ಪದಗಳು (ಪಾಂಬು, ಕಲ್ಲ್, ಮಣ್ಣ್, ಎಲಿ, ನಾಯಿ, ಕೈ, ಜಲ್ಲಿ ಇತ್ಯಾದಿ) ಬಳಕೆಯಲ್ಲಿದ್ದು ಈ ಎರಡು ಭಾಷೆಗಳ ನಡುವೆ ಉತ್ತಮ ಸಂಬಂಧ ಬೆಳೆದುಬರುವಲ್ಲಿ ಸಹಕಾರಿಯಾಗಿವೆ. zero one two three four five six seven eight nine ten hundred thousand day month year debit credit as above rupee numeral ತಮಿಳು (தமிழ்) ಪ್ರದೇಶ:ತಮಿಳುನಾಡು, ಶ್ರೀಲಂಕಾ , ಸಿಂಗಾಪುರ, ಮಲೇಶಿಯ ಉಪಯೋಗಿಸುವ ಜನಸಂಖ್ಯೆ: ೬.೩ ಕೋಟಿ ವರ್ಗೀಕರಣ:ದ್ರಾವಿಡ ಭಾಷೆಗಳು  ದಕ್ಷಿಣ ದ್ರಾವಿಡ ಭಾಷೆಗಳು   ತಮಿಳು-ಕನ್ನಡ-ತೆಲುಗು      ತಮಿಳು ಅಧಿಕೃತ ಮಾನ್ಯತೆ ಅಧಿಕೃತ ಭಾಷೆ:ತಮಿಳುನಾಡು, ಭಾರತ, ಶ್ರೀಲಂಕ, ಸಿಂಗಾಪುರ Language codes ISO 639-1:ta ISO 639-2:tam SIL:TCV ಉಲ್ಲೇಖಗಳು ವರ್ಗ:ಭಾಷೆಗಳು ವರ್ಗ:ಭಾರತೀಯ ಭಾಷೆಗಳು ವರ್ಗ:ಶಾಸ್ತ್ರೀಯ ಭಾಷೆಗಳು ವರ್ಗ:ದ್ರಾವಿಡ ಭಾಷೆಗಳು
ಲೋಕಸಭೆ
https://kn.wikipedia.org/wiki/ಲೋಕಸಭೆ
ಲೋಕಸಭೆ ಸಂಕ್ಷಿಪ್ತ ವಿವರ ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು. ಪ್ರಸ್ಥುತ ಕಾರ್ಯ ನಿರ್ವಹಿಸುತ್ತಿರುವ 16 ನೆಯ ಲೋಕಸಭೆ ಮೇ, 2014 ರಲ್ಲಿ ಸೇರಿತು. ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (545 ಸದಸ್ಯರು: 543 ಚುನಾಯಿತ + 2 ನೇಮಿತ): ಭಾರತದ ರಾಜ್ಯವಾರು ಲೋಕಸಭಾ ಕ್ಷೇತ್ರಗಳು 2014 (Indian general election)ರ ಚುನಾವಣೆ ಫಲಿತಾಂಶ ಕೆಳಗೆ ಕೊಟ್ಟಿದೆ ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ . ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ. ರಾಜ್ಯಗಳು: ಕ್ರಮ ಸಂಖ್ಯೆರಾಜ್ಯಗಳುನಿಗದಿತ ಲೋಕಸಭಾಸ್ಥಾನಗಳು1 ಆಂಧ್ರ ಪ್ರದೇಶ 25 2ತೆಲಂಗಾಣ17 3ಅರುಣಾಚಲ ಪ್ರದೇಶ 2 4ಅಸ್ಸಾಮ್ 145 ಬಿಹಾರ 406 ಚತ್ತೀಸ್‌ಗಢ 11 7ಗೋವ 2 8ಗುಜರಾತ್ 26 9ಹರ್ಯಾಣಾ 10 10ಹಿಮಾಚಲ ಪ್ರದೇಶ 4 11 ಜಾರ್ಖಂಡ್ 14 12ಕರ್ನಾಟಕ 2813ಕೇರಳ 20 14ಮಧ್ಯ ಪ್ರದೇಶ 29 15 ಮಹಾರಾಷ್ಟ್ರ 48 16ಮಣಿಪುರ 2 17 ಮೇಘಾಲಯ 2 18ಮಿಜೋರಮ್ 1 19ನಾಗಾಲ್ಯಾಂಡ್ 1 20 ಒರಿಸ್ಸಾ 21 21ಪಂಜಾಬ್ 13 22ರಾಜಸ್ಥಾನ 25 23 ಸಿಕ್ಕಿಮ್ 1 24ತಮಿಳುನಾಡು 39 25 ತ್ರಿಪುರಾ2 26ಉತ್ತರ ಪ್ರದೇಶ 80 27ಉತ್ತರಾಂಚಲ 5 28ಪಶ್ಚಿಮ ಬಂಗಾಳ 42 ಕೇಂದ್ರಾಡಳಿತ ಪ್ರದೇಶಗಳು1ಅಂಡಮಾನ್ ಮತ್ತು ನಿಕೋಬಾರ್ 12ಚಂಡೀಗಢ 13ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು 24 ದೆಹಲಿ 75 ಲಕ್ಷದ್ವೀಪ 17 ಪಾಂಡಿಚೆರಿ 18 ಜಮ್ಮು ಮತ್ತು ಕಾಶ್ಮೀರ 49 ಲಡಾಖ್ 1 ಕೆಲಸ ಲೋಕಸಭೆಯ ಸದಸ್ಯರು ಒಬ್ಬರನ್ನು "ಸಭಾಧ್ಯಕ್ಷ(ಸ್ಪೀಕರ್) ಅಥವಾ ಸಭಾಪತಿ" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷ(ಸ್ಪೀಕರ್) ರ ಮುಖ್ಯ ಕೆಲಸ. ಸಭಾಧ್ಯಕ್ಷ(ಸ್ಪೀಕರ್) ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪಸಭಾಧ್ಯಕ್ಷ(ಡೆಪ್ಯುಟಿ ಸ್ಪೀಕರ್)ರು ನಿರ್ವಹಿಸುತ್ತಾರೆ. ಇವರಲ್ಲದೇ ಇವರಿಬ್ಬರ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ನಿರ್ವಹಿಸಲು ೧೦ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರು ನೇಮಕ ಮಾಡುತ್ತಾರೆ. ಮೀರಾ ಕುಮಾರ್ ರವರು ಲೋಕ ಸಭೆಯ ಮೊದಲ ಮಹಿಳಾ ಸಭಾದ್ಯಕ್ಷರು. ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ. ಭಾರತ ಸರ್ಕಾರದ ಶಾಸಕಾಂಗದ ಇನ್ನೊಂದು ಸಭೆ ರಾಜ್ಯಸಭೆ. ಯಾವುದೇ ಮಸೂದೆಗೆ ಲೋಕಸಭೆ ಒಪ್ಪಿಗೆ ಇತ್ತ ನಂತರ ಅದು ರಾಜ್ಯಸಭೆಗೆ ಹೋಗುತ್ತದೆ. ರಾಜ್ಯಸಭೆಯೂ ಒಪ್ಪಿದ ನಂತರ ಈ ಮಸೂದೆ ಕಾಯಿದೆಯಾಗುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಮಸೂದೆಗಳ ವಿಷಯದಲ್ಲಿ ಮಾತ್ರ ರಾಜ್ಯಸಭೆಯ ಮಂಜೂರಾತಿ ಅಗತ್ಯವಿಲ್ಲ. ಈವರೆಗಿನ ಲೋಕಸಭಾ ಚುನಾವಣಾ ವಿವರಗಳು ಲೋಕಸಭೆಯ ಸದಸ್ಯರನ್ನು ನಿರ್ದಿಷ್ಟ ಚುನಾವಣೆಯಲ್ಲಿ ಎಲ್ಲಾ ವಯಸ್ಕ ಮತದಾರರು ಚುನಾಯಿಸುತ್ತಾರೆ. ಲೋಕಸಭೆ ವಿಸರ್ಜನೆ ಆಗುವವರೆಗೆ (ಸಾಮಾನ್ಯವಾಗಿ ಐದು ವರ್ಷಗಳ ಅವಧಿ) ಈ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇರುತ್ತಾರೆ. ನವದೆಹಲಿಯ ಸಂಸತ್ ಭವನದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಗೊಂಡ ಸದಸ್ಯರು ಸಮಾಲೋಚನೆ ನಡೆಸಿ ಕಾನೂನುಗಳನ್ನು ರೂಪಿಸುತ್ತಾರೆ. ಲೋಕಸಭಾ ಚುನಾವಣಾ ಫಲಿತಾಂಶಗಳ ನಕ್ಷೆಗಳುcenter|thumb|ಮೊದಲನೇ ಲೋಕಸಭೆ (1951-52ರ ಲೋಕಸಭಾ ಚುನಾವಣೆ)center|thumb|ಎರಡನೇ ಲೋಕಸಭೆ (1957ರ ಲೋಕಸಭಾ ಚುನಾವಣೆ)center|thumb|ಮೂರನೇ ಲೋಕಸಭೆ (1962ರ ಲೋಕಸಭಾ ಚುನಾವಣೆ)center|thumb|ನಾಲ್ಕನೇ ಲೋಕಸಭೆ (1967ರ ಲೋಕಸಭಾ ಚುನಾವಣೆ)center|thumb|ಐದನೇ ಲೋಕಸಭೆ (1971ರ ಲೋಕಸಭಾ ಚುನಾವಣೆ)center|thumb|ಆರನೇ ಲೋಕಸಭೆ (1977ರ ಲೋಕಸಭಾ ಚುನಾವಣೆ)center|thumb|ಏಳನೇ ಲೋಕಸಭೆ (1980ರ ಲೋಕಸಭಾ ಚುನಾವಣೆ)center|thumb|ಎಂಟನೇ ಲೋಕಸಭೆ (1984ರ ಲೋಕಸಭಾ ಚುನಾವಣೆ)center|thumb|ಒಂಭತ್ತನೇ ಲೋಕಸಭೆ (1989ರ ಲೋಕಸಭಾ ಚುನಾವಣೆ)center|thumb|ಹತ್ತನೇ ಲೋಕಸಭೆ (1991ರ ಲೋಕಸಭಾ ಚುನಾವಣೆ)center|thumb|ಹನ್ನೊಂದನೇ ಲೋಕಸಭೆ (1996ರ ಲೋಕಸಭಾ ಚುನಾವಣೆ)center|thumb|ಹನ್ನೆರಡನೇ ಲೋಕಸಭೆ (1998ರ ಲೋಕಸಭಾ ಚುನಾವಣೆ)center|thumb|ಹದಿಮೂರನೇ ಲೋಕಸಭೆ (1999ರ ಲೋಕಸಭಾ ಚುನಾವಣೆ)center|thumb|ಹದಿನಾಲ್ಕನೇ ಲೋಕಸಭೆ (2004ರ ಲೋಕಸಭಾ ಚುನಾವಣೆ)center|thumb|ಹದಿನೈದನೇ ಲೋಕಸಭೆ (2009ರ ಲೋಕಸಭಾ ಚುನಾವಣೆ)center|thumb|ಹದಿನಾರನೇ ಲೋಕಸಭೆ (2014ರ ಲೋಕಸಭಾ ಚುನಾವಣೆ)center|thumb|ಹದಿನೇಳನೇ ಲೋಕಸಭೆ (2019ರ ಲೋಕಸಭಾ ಚುನಾವಣೆ) ಲೋಕಸಭಾ ಚುನಾವಣಾ ಇತಿಹಾಸ ಬಣ್ಣಗಳ ಸೂಚಿ + ವಿವರಗಳು ಮೊದಲ ಸ್ಥಾನ ಪಡೆದ ಪಕ್ಷ ಎರಡನೇ ಸ್ಥಾನ ಪಡೆದ ಪಕ್ಷ ಮೂರನೇ ಸ್ಥಾನ ಪಡೆದ ಪಕ್ಷ ವರ್ಷ ಚುನಾವಣೆ ಒಟ್ಟು ಕ್ಷೇತ್ರಗಳು ಪಕ್ಷ ಸ್ಥಾನಗಳು ಶೇಕಡಾವಾರು ಮತಗಳು ಪಕ್ಷ ಸ್ಥಾನಗಳು ಶೇಕಡಾವಾರು ಮತಗಳು ಪಕ್ಷ ಸ್ಥಾನಗಳು ಶೇಕಡಾವಾರು ಮತಗಳು 1951–52 ಮೊದಲನೇ ಲೋಕಸಭೆ 489ಭಾ.ರಾ.ಕಾಂ 364 45%ಸಿ.ಪಿ.ಐ 16 3.29%ಸೋ.ಪಾ 12 10.59% 1957 ಎರಡನೇ ಲೋಕಸಭೆ 494ಭಾ.ರಾ.ಕಾಂ 371 47.78%ಸಿ.ಪಿ.ಐ 27 8.92%ಪ್ರ.ಸೋ.ಪಾ 19 10.41% 1962 ಮೂರನೇ ಲೋಕಸಭೆ 494ಭಾ.ರಾ.ಕಾಂ 361 44.72%ಸಿ.ಪಿ.ಐ 29 9.94%ಸ್ವ.ಪಾ 18 7.89% 1967 ನಾಲ್ಕನೇ ಲೋಕಸಭೆ 520ಭಾ.ರಾ.ಕಾಂ 283 40.78%ಸ್ವ.ಪಾ 44 8.67%ಭಾ.ಜ.ಸಂ 35 9.31% 1971 ಐದನೇ ಲೋಕಸಭೆ 518ಭಾ.ರಾ.ಕಾಂ 352 43.68%ಸಿ.ಪಿ.ಎಂ 25 5.12%ಸಿ.ಪಿ.ಐ 23 4.73% 1977 ಆರನೇ ಲೋಕಸಭೆ 542ಜ.ಪಾ 298 43.17%ಭಾ.ರಾ.ಕಾಂ 153 34.52%ಸಿ.ಪಿ.ಎಂ 22 4.29% 1980 ಏಳನೇ ಲೋಕಸಭೆ 529 ( 542* )ಭಾ.ರಾ.ಕಾಂ (ಇಂ) 351 42.69%ಜ.ಪಾ (ಜಾ) 41 9.39%ಸಿ.ಪಿ.ಎಂ 37 6.24% 1984 ಎಂಟನೇ ಲೋಕಸಭೆ 514ಭಾ.ರಾ.ಕಾಂ 404 49.10%ತೆ.ದೇ.ಪಾ 30 4.31%ಸಿ.ಪಿ.ಎಂ 22 5.87% 1989 ಒಂಭತ್ತನೇ ಲೋಕಸಭೆ 529ಭಾ.ರಾ.ಕಾಂ 195 39.53%ಜ.ದ 142 17.79%ಬಿ.ಜೆ.ಪಿ 8511.36% 1991 ಹತ್ತನೇ ಲೋಕಸಭೆ 521ಭಾ.ರಾ.ಕಾಂ 244 35.66%ಬಿ.ಜೆ.ಪಿ 120 20.11%ಜ.ದ 59 11.84% 1996 ಹನ್ನೊಂದನೇ ಲೋಕಸಭೆ 543ಬಿ.ಜೆ.ಪಿ 161 20.29%ಭಾ.ರಾ.ಕಾಂ 140 28.80%ಜ.ದ 46 23.45% 1998 ಹನ್ನೆರಡನೇ ಲೋಕಸಭೆ 545ಬಿ.ಜೆ.ಪಿ 182 25.59%ಭಾ.ರಾ.ಕಾಂ 141 25.82%ಸಿ.ಪಿ.ಎಂ 32 5.16% 1999 ಹದಿಮೂರನೇ ಲೋಕಸಭೆ 545ಬಿ.ಜೆ.ಪಿ 182 23.75%ಭಾ.ರಾ.ಕಾಂ 114 28.30%ಸಿ.ಪಿ.ಎಂ 33 5.40% 2004 ಹದಿನಾಲ್ಕನೇ ಲೋಕಸಭೆ 543ಭಾ.ರಾ.ಕಾಂ 145 26.53%ಬಿ.ಜೆ.ಪಿ 138 22.16%ಸಿ.ಪಿ.ಎಂ 43 5.66% 2009 ಹದಿನೈದನೇ ಲೋಕಸಭೆ 545ಭಾ.ರಾ.ಕಾಂ 206 28.55%ಬಿ.ಜೆ.ಪಿ 116 18.80%ಸ.ಪ 23 3.23% 2014 ಹದಿನಾರನೇ ಲೋಕಸಭೆ 545ಬಿ.ಜೆ.ಪಿ 282 31.34%ಭಾ.ರಾ.ಕಾಂ 44 19.52%ಎ.ಐ.ಎ.ಡಿ.ಎಂ.ಕೆ 37 3.31% 2019 ಹದಿನೇಳನೇ ಲೋಕಸಭೆ 543ಬಿ.ಜೆ.ಪಿ 303 37.4%ಭಾ.ರಾ.ಕಾಂ 52 19.50%ಡಿ.ಎಂ.ಕೆ 24 4.24%* : 12 seats in Assam and 1 in Meghalaya did not vote. ಭಾರತದ ೧೬ ನೆಯ ಲೋಕಸಭೆ ವಿವರ 300px|right|thumb|ಭಾರತದ 16 ನೆಯ ಲೋಕಸಭೆ, 2014 ರಾಜ್ಯಗಳಲ್ಲಿ ಪಡೆದ ಸ್ಥಾನಗಳು;->೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಮೇ 16, 2014ರಂದು 16ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು 2014 ರ ಭಾರತದ ಸಾರ್ವತ್ರಿಕ ಚುನಾವಣೆ 2014 ರ ಏಪ್ರಿಲ್ ಮತ್ತು ಮೇ ಯಲ್ಲಿ ನಡೆದು ಮೇ 16, 2014ರಂದು ಎಣಿಕೆಯಾಗಿ ,ಭಾರತೀಯ ಜನತಾ ಪಕ್ಷವು ಬಹಮತ ಪಡೆದಿದ್ದು, ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಆ ಹುದ್ದೆಯನ್ನು ತ್ಯಜಿಸಿ ದೆಹಲಿಯಲ್ಲಿ ಮೇ 26, 2014,ರಂದು ಮೊದಲೇ ನಿರ್ಧರಿಸಿದಂತೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೪೫ ಜನ ಮಂತ್ರಿಗಳು ಅವರ ಜೊತೆ ಪ್ರಮಾಣ ವಚನ ಸ್ವೀಕರಿಸಿದರು. 2019 ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗಳ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಲೋಕಸಭೆಯ ಅವಧಿ 3 ಜೂನ್ 2019 ರಂದು ಕೊನೆಗೊಳ್ಳುತ್ತದೆ.Lok Sabha Elections: EC to Announce Schedule in 1st Week of March; THE QUINTUPDATED: 18.01.2019 2014 -2019 (ಮಾರ್ಚಿ) ಅಂತಿಮ ಬಲಾಬಲ ಎನ್‍ಡಿಎ ಬಿಜೆಪಿ (266) ಶಿವಸೇನೆ | ಎಸ್ಎಸ್(18) ಲೋಕ ಜನಶಕ್ತಿ ಪಾರ್ಟಿ | ಎಲ್‍ಜೆಪಿ (6) ಶಿರೋಮಣಿ ಅಕಾಲಿ ದಳ | ಎಸ್ಎಡಿ (4) ಅಪ್ನಾ ದಲ್ | ಎಡಿ (2) ಜನತಾ ದಳ (ಯುನೈಟೆಡ್) | ಜೆಡಿ (ಯು) (2) ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ | ಎಐಆರ್ಆರ್ಸಿ] (1) ರಾಷ್ಟ್ರೀಯತಾವಾದಿ ಪ್ರಜಾಪ್ರಭುತ್ವ ಪ್ರಗತಿಪರ ಪಕ್ಷ | ಎನ್ಡಿಪಿಪಿ]](1) ಪಟ್ಟಲಿ ಮಕಲ್ ಕಚಿ | ಪಿಎಮ್ಕೆ] (1) ಸಿಕ್ಕಿಂ ಡೆಮೊಕ್ರಟಿಕ್ ಫ್ರಂಟ್ | ಎಸ್ಡಿಎಫ್] (1) ಲೋಕಸಭೆಯಲ್ಲಿ ಆಂಗ್ಲೋ-ಭಾರತೀಯ ಮೀಸಲು ಸ್ಥಾನಗಳು | ಎನ್ಒಎಮ್,-| ಬಿಜೆಪಿ] (2) ಲೋಕಸಭೆಯ ಸ್ಪೀಕರ್ | ಸ್ಪೀಕರ್] ಬಿಜೆಪಿ (1)ವಿರೋಧ ಪಕ್ಷ(214) ಯುಪಿಎUPA(64) ಐಎನ್‍ಸಿ(44) ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ | ಎನ್ಸಿಪಿ] (6) ರಾಷ್ಟ್ರೀಯ ಜನತಾ ದಳ | ಆರ್ಜೆಡಿ] (4) ರಾಷ್ಟ್ರೀಯ ಲೋಕಸಮಾ ಪಕ್ಷದ | ಆ ಎಲ್‍ಎಸ್ಎಸ್‍ಪಿ](3) ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ | ಐಯುಎಂಎಲ್] (2) ಜನತಾ ದಳ (ಸೆಕ್ಯುಲರ್) | ಜೆಡಿ (ಎಸ್)] (2) ರಾಷ್ಟ್ರೀಯ ಲೋಕ ದಳ | ಆರ್‍ ಎಲ್‍ ಡಿ] (1) ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಭಾರತ) | ಆರ್‍ಎಸ್‍ಪಿ] (1) ಸ್ವಾಭಿಮಾನಿ ಪಕ್ಷ | SWP] (1)ಇತರ ಪಕ್ಷಗಳು (150) ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ | ಎಐಎಡಿಎಂಕೆ] (37) ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ | ಎಐಟಿಸಿ](34) ಬಿಜು ಜನತಾ ದಳ | ಬಿಜೆಡಿ](19) ತೆಲುಗು ದೇಶಂ ಪಕ್ಷ | ಟಿಡಿಪಿ]](15) ತೆಲಂಗಾಣ ರಾಷ್ಟ್ರ ಸಮಿತಿ | ಟಿಆರ್ಎಸ್](10) ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) | ಸಿಪಿಐ (ಎಂ)] (9) ಸಮಾಜವಾದಿ ಪಕ್ಷ | ಎಸ್ಪಿ](7) ಆಮ್ ಆದ್ಮಿ ಪಾರ್ಟಿ | ಎಎಪಿ] (4) ವೈಎಸ್ಆರ್ ಕಾಂಗ್ರೆಸ್ ಪಕ್ಷ | ವೈಎಸ್ಆರ್ಸಿಪಿ (4) ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ | ಎಐಯುಡಿಎಫ್]] (3) ಭಾರತೀಯ ರಾಷ್ಟ್ರೀಯ ಲೋಕ ದಳ | ಐಎನ್ಎಲ್ಡಿ] (2) ಜಾರ್ಖಂಡ್ ಮುಕ್ತಿ ಮೋರ್ಚಾ | ಜೆಎಂಎಂ] (2) ಆಲ್ ಇಂಡಿಯಾ ಮಜ್ಲಿಸ್-ಎ-ಇಥೆಹಾದುಲ್ ಮುಸಲ್ಮಿನ್ | AIMIM] (1) ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ | ಸಿಪಿಐ] (1) ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್ | ಜೆಕೆಎನ್ಸಿ] (1) ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ | ಜೆಕೆಪಿಡಿಪಿ. (1) ಇತರೆ (3) ಪಕ್ಷೇತರ (3) ಖಾಲಿ (23) :ಖಾಲಿ: (23) ಈವರೆಗಿನ ಲೋಕಸಭೆಗಳು ಮತ್ತು ಲೋಕಸಭಾ ಚುನಾವಣೆಗಳ ಪಟ್ಟಿ ಲೋಕಸಭೆಯ ಸಂಖ್ಯೆ ಚುನಾವಣೆಯ ವಿವರ ಮೊದಲನೇ ಲೋಕಸಭೆ 1951–52 Indian general election ಎರಡನೇ ಲೋಕಸಭೆ 1957 Indian general election ಮೂರನೇ ಲೋಕಸಭೆ 1962 Indian general election ನಾಲ್ಕನೇ ಲೋಕಸಭೆ 1967 Indian general election ಐದನೇ ಲೋಕಸಭೆ 1971 Indian general election ಆರನೇ ಲೋಕಸಭೆ 1977 Indian general election ಏಳನೇ ಲೋಕಸಭೆ 1980 Indian general election ಎಂಟನೇ ಲೋಕಸಭೆ 1984 Indian general election ಒಂಭತ್ತನೇ ಲೋಕಸಭೆ 1989 Indian general election ಹತ್ತನೇ ಲೋಕಸಭೆ 1991 Indian general election ಹನ್ನೊಂದನೇ ಲೋಕಸಭೆ 1996 Indian general election ಹನ್ನೆರಡನೇ ಲೋಕಸಭೆ 1998 Indian general election ಹದಿಮೂರನೇ ಲೋಕಸಭೆ 1999 Indian general election ಹದಿನಾಲ್ಕನೇ ಲೋಕಸಭೆ 2004 Indian general election ಹದಿನೈದನೇ ಲೋಕಸಭೆ 2009 Indian general election ಹದಿನಾರನೇ ಲೋಕಸಭೆ 2014 Indian general election ಹದಿನೇಳನೇ ಲೋಕಸಭೆ2019 Indian general election ನೋಡಿ ೧೫ನೆಯ ಲೋಕಸಭೆ ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ ರಾಜ್ಯಸಭೆ ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಮತ್ತು ಭಾರತ ಭಾರತದ ಮುಖ್ಯಮಂತ್ರಿಗಳು ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಲೋಕಸಭೆಯಲ್ಲಿ ಸ್ತ್ರೀ ಶಕ್ತಿ; ಪ್ರಜಾವಾಣಿ; d: 26 ಮಾರ್ಚ್ 2019, ಚುನಾವಣೆ ೨೦೧೯ ಸಮೀಕ್ಷೆ ೨೦೧೯ರ ಲೋಕಸಭಾ ಚುನಾವಣೆ ಲೋಕಸಭೆ ಚುನಾವಣೆ 2019: ಪ್ರಧಾನಿ ಗದ್ದುಗೆಗೆ ಮತ್ತೆ ಏರುವರೇ ಮೋದಿ? 28 ಜನವರಿ 2019 ಪರಿವಿಡಿ ಬಾಹ್ಯ ಸಂಪರ್ಕಗಳು ಲೋಕಸಭೆ http://loksabha.nic.in ಲೋಕಸಭೆಯ ಅಧಿಕೃತ ತಾಣ ೧೯೫೨ ರಿಂದ-೧೯೯೬ ರ ವರೆಗಿನ ಚುನಾವಣೆ References Jump up ^ "Bioprofile of Meira Kumar". Fifteenth Lok Sabha Member's Bioprofile. Retrieved 19 August 2011. Jump up ^ "Bioprofile of Kariya Munda". Fifteenth Lok Sabha Member's Bioprofile. Retrieved 19 August 2011. Jump up ^ "Bioprofile of Pranab Mukherjee". Fifteenth Lok Sabha Member's Bioprofile. Retrieved 19 August 2011. Jump up ^ "Bioprofile of Sushma Swaraj". Fifteenth Lok Sabha Member's Bioprofile. Retrieved 19 August 2011. Jump up ^ "Lok Sabha". parliamentofindia.nic.in. Retrieved 19 August 2011. ^ Jump up to: a b Parliament of India: Lok Sabha ವರ್ಗ:ಭಾರತ ವರ್ಗ:ರಾಜಕೀಯ
ಆಂಧ್ರ ಪ್ರದೇಶ
https://kn.wikipedia.org/wiki/ಆಂಧ್ರ_ಪ್ರದೇಶ
ಆಂಧ್ರ ಪ್ರದೇಶ () (, ಭಾಷಾಂತರ: ಆಂಧ್ರದ ಪ್ರಾಂತ್ಯ, ಸಂಕ್ಷಿಪ್ತವಾಗಿ ಎ.ಪಿ. ಎಂದು ಕರೆಯಲ್ಪಡುವ ರಾಜ್ಯವಾಗಿದ್ದು ಇದುಭಾರತದ ಆಗ್ನೇಯ ಕರಾವಳಿ ಭಾಗದಲ್ಲಿದೆ. ಭಾರತದಲ್ಲಿ ಇದು ವಿಸ್ತೀರ್ಣದ ಆಧಾರದಲ್ಲಿ ಭಾರತದ ರಾಜ್ಯಗಳ ವಿಸ್ತೀರ್ಣದಲ್ಲಿ ಎಂಟನೇ ಅತಿದೊಡ್ಡ ರಾಜ್ಯವಾಗಿದೆ ಮತ್ತು ಜನಸಂಖ್ಯೆಯ ಆಧಾರದಲ್ಲಿ ಭಾರತದ ರಾಜ್ಯಗಳ ಜನಸಂಖ್ಯೆಯಲ್ಲಿ ಹತ್ತನೇ ಅತಿ ದೊಡ್ಡ ರಾಜ್ಯವಾಗಿದೆ. ಪ್ರಸ್ತುತ ರಾಜಧಾನಿ ಮತ್ತು ಹೈದರಾಬಾದ್‌. ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿ ಎಂದು ಗುರುತಿಸಲಾಗಿದೆ‌. ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. ಗುಜರಾತ್‌‌ ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್‌ಗಡ ಮತ್ತು ಒಡಿಶಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ "ಭಾರತದ ಅನ್ನದ ಪಾತ್ರೆ " ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಇದರ ಎರಡು ಪ್ರಮುಖ ನದಿಗಳಾದ ಗೋದಾವರಿ ಮತ್ತು ಕೃಷ್ಣಾ ರಾಜ್ಯದ ಉದ್ದಗಲಕ್ಕೂ ಹರಿಯುತ್ತವೆ. ಪುದುಚೆರಿ (ಪಾಂಡಿಚೆರಿ) ರಾಜ್ಯದ ಯಾಣಮ್ ಜಿಲ್ಲೆಯ ಪರಾವೃತ ಪ್ರದೇಶವು (೧೨ sq mi (೩೦ km²)) ರಾಜ್ಯದ ಈಶಾನ್ಯ ಭಾಗದಲ್ಲಿನ ಗೋದಾವರಿ ನದಿ ಮುಖಜ ಭೂಮಿ ಪ್ರದೇಶದಲ್ಲಿದೆ. ರಾಜ್ಯವನ್ನು ಒಳಗೊಂಡ ಪ್ರದೇಶವನ್ನು ಐತಿಹಾಸಿಕವಾಗಿ ಆಂಧ್ರಾಪಥ , ಆಂಧ್ರದೇಸ , ಆಂಧ್ರಾವನಿ ಮತ್ತು ಆಂಧ್ರ ವಿಷಯ ಎಂದು ಕರೆಯಲಾಗುತ್ತಿತ್ತು.S. S.ರಾಮಚಂದ್ರ ಮೂರ್ತಿಯವರು ಬರೆದಿರುವ ಎ ಸ್ಟಡಿ ಆಫ್‌ ತೆಲುಗು ಪ್ಲೇಸ್‌‌-ನೇಮ್ಸ್‌, P. ೧೦ ಆಂಧ್ರ ಪ್ರದೇಶವು ೧೯೫೬ರ ನವೆಂಬರ್ ೧ರಂದು ಆಂಧ್ರ ರಾಜ್ಯದಿಂದ ರಚನೆಯಾಯಿತು. ಆಂಧ್ರ ಪ್ರದೇಶದ ರಾಜ್ಯ ಚಿಹ್ನೆಗಳು ರಾಜ್ಯ ಭಾಷೆ ತೆಲುಗು ರಾಜ್ಯ ಚಿನ್ಹೆ ಪೂರ್ಣಕುಂಭಂ ರಾಜ್ಯ ಗೀತೆ "ಮಾ ತೆಲುಗುತಲ್ಲಿಕಿ ಮಲ್ಲೆಪೂದಂಡ"ರಾಜ್ಯ ಪ್ರಾಣಿ ಕೃಷ್ಣ ಮೃಗ ರಾಜ್ಯ ಪಕ್ಷಿ ಉರುಳು ಹಕ್ಕಿ ರಾಜ್ಯ ವೃಕ್ಷ ಬೇವು ರಾಜ್ಯ ಕ್ರೀಡ ಕಬಡ್ಡಿ ರಾಜ್ಯ ನೃತ್ಯ ಕೂಚಿಪೂಡಿ ರಾಜ್ಯ ಪುಷ್ಪ ಜಲ ನೈದಿಲೆ ಇತಿಹಾಸ ಐತರೇಯ ಬ್ರಾಹ್ಮಣ (B.C.೮೦೦) ಹಾಗೂ ಮಹಾಭಾರತದಂತಹ ಸಂಸ್ಕೃತ ಮಹಾಕಾವ್ಯಗಳಲ್ಲಿ ಆಂಧ್ರ ಸಾಮ್ರಾಜ್ಯ ವೊಂದರ ಬಗ್ಗೆ ಉಲ್ಲೇಖಿಸಲಾಗಿದೆ. "ಆಂಧ್ರ" ಜನಾಂಗದ ಬಗೆಗೆ ಭರತನ ನಾಟ್ಯಶಾಸ್ತ್ರದಲ್ಲೂ (B.C ೧ನೇ ಶತಮಾನ) ಉಲ್ಲೇಖವಾಗಿದೆ. Antiquity of Andhra race: http://teluguuniversity.ac.in/Language/prachina_telugu_note.html ಭಟ್ಟಿಪ್ರೊಲುವಿನಲ್ಲಿ ಪತ್ತೆಯಾದ ಶಾಸನಗಳಲ್ಲಿ ತೆಲುಗು ಭಾಷೆಯ ಮೂಲ ಪತ್ತೆಯಾಗಿದೆ.Antiquity of Telugu: http://www.hindu.com/2007/12/20/stories/2007122054820600.htm ಚಂದ್ರಗುಪ್ತ ಮೌರ್ಯ(B.C.೩೨೨–೨೯೭)ನ ಆಸ್ಥಾನಕ್ಕೆ ಭೇಟಿ ನೀಡಿದ್ದ ಮೆಗಾಸ್ತನೀಸ್‌ನು, ಕೋಟೆಗಳಿಂದ ಸುತ್ತುವರಿಯಲ್ಪಟ್ಟಿರುವ ೩ ಪಟ್ಟಣಗಳು, ೧೦೦,೦೦೦ ಪದಾತಿ ದಳ, ೨೦೦ ಅಶ್ವದಳ ಮತ್ತು ೧,೦೦೦ ಆನೆಗಳನ್ನು ಒಳಗೊಂಡ ಸೈನ್ಯವನ್ನು ಆಂಧ್ರ ದೇಶವು ಹೊಂದಿತ್ತು ಎಂದು ಉಲ್ಲೇಖಿಸಿದ್ದಾನೆ. ಆ ಸಮಯದಲ್ಲಿ ಆಂಧ್ರರು ತಮ್ಮ ಸಾಮ್ರಾಜ್ಯವನ್ನು ಗೋದಾವರಿ ನದಿಬಯಲಿನಲ್ಲಿ ನಿರ್ಮಿಸಿದರು ಎಂದು ಬೌದ್ಧ ಗ್ರಂಥಗಳು ಹೇಳುತ್ತವೆ. ಆಂಧ್ರರು ತನ್ನ ಸಾಮಂತರಾಗಿದ್ದರು ಎಂದು ಅಶೋಕನು ತನ್ನ ೧೩ನೇ ಶಿಲಾ ಶಾಸನದಲ್ಲಿ ಉಲ್ಲೇಖಿಸಿದ್ದಾನೆ.http://www.aponline.gov.in/quick links/hist-cult/history.html ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ ನು ಆಳುತ್ತಿದ್ದನು ಮತ್ತು ಪ್ರತಿಪಾಲಪುರವು(ಭಟ್ಟಿಪ್ರೊಲು) ಅವನ ರಾಜಧಾನಿಯಾಗಿತ್ತು. ಬಹುಶಃ ಇದು ಭಾರತದಲ್ಲಿನ ಅತ್ಯಂತ ಪ್ರಾಚೀನವಾದ ಪ್ರಸಿದ್ಧ ಸಾಮ್ಯಾಜ್ಯವಾಗಿರಬಹುದು. ಅದೇ ಸಮಯದ ಆಸುಪಾಸಿನಲ್ಲಿ ಧಾನ್ಯಕಟಕಮ್‌/ಧರಣಿಕೋಟ(ಈಗಿನ ಅಮರಾವತಿ) ಒಂದು ಮುಖ್ಯವಾದ ಸ್ಥಳವಾಗಿತ್ತು ಎಂದು ಕಾಣುತ್ತದೆ. ಈ ಸ್ಥಳಕ್ಕೆ ಗೌತಮ ಬುದ್ಧರು ಭೇಟಿ ನೀಡಿದ್ದರು. ಪ್ರಾಚೀನ ಟಿಬೆಟ್‌ ವಿದ್ವಾಂಸ ತಾರಾನಾಥರ ಪ್ರಕಾರ: "ತನಗೆ ಜ್ಞಾನೋದಯವಾದ ನಂತರದ ವರ್ಷದ ಚೈತ್ರ ಮಾಸದ ಹುಣ್ಣಿಮೆಯ ದಿನದಂದು, ಧಾನ್ಯಕಟಕದ ಮಹಾನ್‌ ಸ್ತೂಪದಲ್ಲಿ ಬುದ್ಧನು 'ಭವ್ಯವಾದ ಚಾಂದ್ರ ಸೌಧಗಳ' (ಕಾಲಚಕ್ರ) ಮಂಡಲವನ್ನು ಹೊರಹೊಮ್ಮಿಸಿದನು." ಜರ್ಮನ್‌ ಸ್ಕಾಲರ್ಸ್‌ ಆನ್‌ ಇಂಡಿಯಾ, Vol. I. PP. ೧೩೬-೧೪೦ದಲ್ಲಿ ಹೆಲ್ಮಟ್‌ ಹಾಫ್‌ಮನ್‌ ಬರೆದಿರುವ, "ಬುದ್ಧಾಸ್‌‌ ಪ್ರೀಚಿಂಗ್‌ ಆಫ್‌ ದಿ ಕಾಲಚಕ್ರ ತಂತ್ರ ಅಟ್‌ ದಿ ಸ್ತೂಪ ಆಫ್‌ ಧಾನ್ಯಕಟಕ" (ವಾರಣಾಸಿ, ೧೯೭೩)Taranatha; http://www.kalacakra.org/history/khistor2.htm thumb|left|ವಾರಂಗಲ್‌ನಲ್ಲಿರುವ ಕಾಕತೀಯರ ಶಿಲ್ಪಕಲೆ BCE ೧೪ನೇ ಶತಮಾನದಲ್ಲಿ ಮೌರ್ಯರು ತಮ್ಮ ಆಳ್ವಿಕೆಯನ್ನು ಅಂಧ್ರದವರೆಗೂ ವಿಸ್ತರಿಸಿದರು. ಮೌರ್ಯ ಸಾಮ್ರಾಜ್ಯದ ಪತನಾನಂತರ ಆಂಧ್ರದ ಶಾತವಾಹನರು BCE ೩ನೇ ಶತಮಾನದಲ್ಲಿ ಸ್ವತಂತ್ರರಾದರು. ಶಾತವಾಹನರು CE ೨೨೦ರಲ್ಲಿ ಅವನತಿ ಹೊಂದಿದ ನಂತರ ಇಕ್ಷ್ವಾಕು ಮನೆತನ, ಪಲ್ಲವರು, ಆನಂದ ಗೋತ್ರಿಕರು, ವಿಷ್ಣುಕುಂದಿನರು, ಪೂರ್ವದ ಚಾಲುಕ್ಯರು ಮತ್ತು ಚೋಳರು ತೆಲುಗು ನಾಡನ್ನು ಆಳಿದರು. CE ೫ನೇ ಶತಮಾನದಲ್ಲಿ ರೇನಾಟಿ ಚೋಳರು(ಕಡಪ ಪ್ರದೇಶ) ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ತೆಲುಗು ಭಾಷೆಯ ಶಾಸನಾಧಾರಗಳು ಇಂಡಿಯನ್‌ ಎಪಿಗ್ರಫಿ, ಆರ್‌.ಸಾಲೋಮನ್‌, ಆಕ್ಸ್‌ಫರ್ರ್ಡ್ ಯೂನಿವರ್ಸಿಟಿ ಪ್ರೆಸ್‌‌, ೧೯೯೮ ISBN ೦-೧೯-೫೦೯೯೮೪-೨, p. ೧೦೬ ದೊರೆತವು. ಈ ಅವಧಿಯಲ್ಲಿ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಪ್ರಾಬಲ್ಯವನ್ನು ತಗ್ಗಿಸಿ ತೆಲುಗು ಭಾಷೆಯು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು.ಎಪಿಗ್ರಾಫಿಕ ಇಂಡಿಕ, ೨೭: ೨೨೦-೨೨೮ವಿನುಕೊಂಡವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ವಿಷ್ಣುಕುಂದಿನ ರಾಜರಿಂದ ತೆಲುಗು ಅಧಿಕೃತ ಭಾಷೆಯಾಯಿತು. ವಿಷ್ಣುಕುಂದಿನರು ಅವನತಿ ಹೊಂದಿದ ನಂತರ, ಪೂರ್ವದ ಚಾಲುಕ್ಯರು ವೆಂಗಿಯಲ್ಲಿನ ತಮ್ಮ ರಾಜಧಾನಿಯಿಂದ ಸುದೀರ್ಘ ಕಾಲದವರೆಗೆ ಆಳ್ವಿಕೆ ನಡೆಸಿದರು.ಇವರು CE ೧ನೇ ಶತಮಾನದದ ಆರಂಭದಲ್ಲಿ ಶಾತವಾಹನರು ಮತ್ತು ನಂತರದ ದಿನಗಳಲ್ಲಿ ಇಕ್ಷ್ವಾಕು ಮನೆತನಗಳ ಅಡಿಯಲ್ಲಿ ಚಾಲುಕ್ಯರು, ಸಾಮಂತರು ಮತ್ತು ಸೇನಾನಾಯಕರಾಗಿದ್ದರು ಎಂದು ಉಲ್ಲೇಖವಾಗಿದೆ. ಚಾಲುಕ್ಯ ದೊರೆಯಾದ ರಾಜರಾಜ ನರೇಂದ್ರನು ರಾಜಮುಂಡ್ರಿಯನ್ನು CE ೧೦೨೨ರ ಆಸುಪಾಸಿನಲ್ಲಿ ಆಳಿದನು. ಪಲ್ನಾಡು ಯದ್ಧದಿಂದಾಗಿ ಪೂರ್ವದ ಚಾಲುಕ್ಯರ ಶಕ್ತಿಯು ದುರ್ಬಲಗೊಂಡಿತು ಮತ್ತು ಇದರ ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ ಕಾಕತೀಯಸಾಮ್ರಾಜ್ಯವು ಪ್ರವರ್ಧಮಾನಕ್ಕೆ ಬಂದಿತು. ವಾರಂಗಲ್‌ ಸಮೀಪದ ಸಣ್ಣ ಪ್ರದೇಶವನ್ನು ಆಳುತ್ತಿದ್ದ ರಾಷ್ಟ್ರಕೂಟರಿಗೆ ಕಾಕತೀಯರು ಮೊದಲ ಊಳಿಗಮಾನ್ಯ ಸಾಮಂತರಾಗಿದ್ದರು. ಕಾಕತೀಯರಿಂದ ಎಲ್ಲ ತೆಲುಗು ಪ್ರದೇಶಗಳು ಒಂದುಗೂಡಿದವು. CE ೧೩೨೩ರಲ್ಲಿ, ದೆಹಲಿಯ ಸುಲ್ತಾನನಾದ ಘಿಯಾಜುದ್ದೀನ್‌ ತುಘಲಕ್‌ನು ತೆಲುಗು ದೇಶವನ್ನು ಗೆಲ್ಲಲು ಮತ್ತು ವಾರಂಗಲ್‌‌ನ್ನು ವಶಪಡಿಸಿಕೊಳ್ಳಲು ಉಲುಘ್‌‌ ಖಾನ್‌ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳಿಸಿದನು.ಪ್ರತಾಪರುದ್ರರಾಜನನ್ನು ಯುದ್ಧಖೈದಿಯಾಗಿ ಕರೆದೊಯ್ಯಲಾಯಿತು. CE ೧೩೨೬ರಲ್ಲಿ ದೆಹಲಿ ಸುಲ್ತಾನರಿಂದ ವಾರಂಗಲ್‌ನ್ನು ಪುನಃ ವಶಪಡಿಸಿಕೊಂಡ ಮುಸುನೂರಿ ನಾಯಕರು, ಮುಂದಿನ ೫೦ ವರ್ಷಗಳವರೆಗೆ ಆಳ್ವಿಕೆ ನಡೆಸಿದನು. ಅವರ ಈ ವಿಜಯದ ಪ್ರೇರಣೆಯಿಂದ ಆಂಧ್ರ ಪ್ರದೇಶ ಮತ್ತು ಭಾರತದ ಇತಿಹಾಸದಲ್ಲಿನ ಮಹಾನ್‌ ಚಕ್ರಾಧಿಪತ್ಯಗಳಲ್ಲಿ ಒಂದಾದ ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾಯಿತು. ವಾರಂಗಲ್‌ನ ಕಾಕತೀಯರ ಖಜಾನೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಹರಿಹರ ಮತ್ತು ಬುಕ್ಕರು ಈ ಸಾಮ್ರಾಜ್ಯದ ಸಂಸ್ಥಾಪಕರು.ರಾಬರ್ಟ್‌ ಸೆವೆಲ್‌ರವರ, ಎ ಫರ್ಗಾಟನ್‌ ಎಂಪೈರ್‌ (ವಿಜಯನಗರ‌): ಎ ಕಾಂಟ್ರಿಬ್ಯೂಷನ್‌ ಟು ದಿ ಹಿಸ್ಟ್ರಿ ಆಫ್ ಇಂಡಿಯಾ, ಚಾಪ್ಟರ್‌ ೨ http://www.gutenberg.org/dirs/etext೦೨/fevch೧೦.txt ಅಲ್ಲಾವುದ್ದೀನ್‌ ಹಸನ್‌ ಗಂಗು ಎಂಬುವವನು ದೆಹಲಿ ಸುಲ್ತಾನರ ವಿರುದ್ಧ ದಂಗೆಯೆದ್ದು, CE ೧೩೪೭ನೇ ಇಸವಿಯಲ್ಲಿ ಬಹಮನಿ ಸಾಮ್ರಾಜ್ಯ ಎಂಬ ಸ್ವತಂತ್ರ ಮುಸ್ಲಿಂ ರಾಜ್ಯವನ್ನು ದಕ್ಷಿಣ ಭಾರತದಲ್ಲಿ ಸ್ಥಾಪನೆ ಮಾಡಿದನು. ಕುತುಬ್‌ ಷಾಹಿ ಮನೆತನವು, ೧೬ನೇ ಶತಮಾನದ ಆರಂಭದಿಂದ ೧೭ನೇ ಶತಮಾನದ ಅಂತ್ಯದವರೆಗೆ, ಅಂದರೆ ಸುಮಾರು ಇನ್ನೂರು ವರ್ಷಗಳ ಕಾಲ ಆಂಧ್ರ ದೇಶದ ಮೇಲೆ ಪ್ರಭುತ್ವ ಸಾಧಿಸಿತ್ತು. thumb|left|ಹೈದರಾಬಾದ್‌ನಲ್ಲಿನ ಚಾರ್ಮಿನಾರ್‌ ವಸಾಹತು ಭಾರತದಲ್ಲಿ ಉತ್ತರದ ಸರ್ಕಾರ್‌ಗಳು ಬ್ರಿಟಿಷ್‌ ಆಳ್ವಿಕೆಯ ಮದ್ರಾಸ್‌ ಪ್ರಾಂತ್ಯದ ಭಾಗವಾದರು. ಅಂತಿಮವಾಗಿ ಈ ಪ್ರದೇಶವು ಕರಾವಳಿ ಆಂಧ್ರ ಪ್ರಾಂತ್ಯವಾಗಿ ಹೊರಹೊಮ್ಮಿತು. ನಂತರ ನಿಜಾಮ‌ನು ಐದು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು. ಮುಂದೆ ಈ ಪ್ರದೇಶಗಳೇ ರಾಯಲಸೀಮಾ ಪ್ರಾಂತ್ಯವಾಗಿ ಹೊರಹೊಮ್ಮಿತು.ಸ್ಥಳೀಯ ಸ್ವಯಮಾಧಿಪತ್ಯಕ್ಕೆ ಪ್ರತಿಯಾಗಿ ಬ್ರಿಟಿಷ್‌ ಆಡಳಿತವನ್ನು ಒಪ್ಪಿಕೊಂಡ ನಿಜಾಮರು, ಹೈದರಾಬಾದ್‌ನ ರಾಜೋಚಿತ ರಾಜ್ಯವಾಗಿ ಒಳನಾಡು ಪ್ರಾಂತ್ಯಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡರು. ಈ ಮಧ್ಯೆ, ಗೋದಾವರಿ ನದೀ ಮುಖಜ ಭೂಮಿಯಲ್ಲಿ ಯಾಣಮ್‌ (ಯಾಣೋನ್‌)ನ್ನು ಫ್ರೆಂಚರು ಆಕ್ರಮಿಸಿಕೊಂಡರು ಹಾಗೂ ಅದನ್ನು ೧೯೫೪ರವರೆಗೂ (ಬ್ರಿಟಷ್‌ ನಿಯಂತ್ರಣದ ಅವಧಿಗಳನ್ನು ಹೊರತುಪಡಿಸಿ) ತಮ್ಮ ಹಿಡಿತದಲ್ಲಿಟ್ಟುಕೊಂಡರು. ೧೯೪೭ರಲ್ಲಿ ಯುನೈಟೆಡ್‌ ಕಿಂಗ್‌ಡಂನಿಂದ ಭಾರತವು ಸ್ವತಂತ್ರಗೊಂಡಿತು. ಹೈದರಾಬಾದ್‌ನ ಮುಸ್ಲಿಂ ನಿಜಾಮನು ಭಾರತದಿಂದ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬಯಸಿದನು. ಆದರೆ, ಆ ಪ್ರಾಂತ್ಯದ ಜನರು ಭಾರತದ ಒಕ್ಕೂಟಕ್ಕೆ ಸೇರಲು ಚಳವಳಿಯನ್ನು ಆರಂಭಿಸಿದರು. ೫ ದಿನಗಳ ಕಾಲ ನಡೆದ ಪೋಲೋ ಕಾರ್ಯಾಚರಣೆಗೆ ಹೈದರಾಬಾದ್ ರಾಜ್ಯದ ಜನತೆಯ ಅಪೂರ್ವ ಬೆಂಬಲ ದೊರೆತಿದ್ದರಿಂದಾಗಿ, ೧೯೪೮ರಲ್ಲಿ ಹೈದರಾಬಾದ್ ರಾಜ್ಯವು ಬಲವಂತವಾಗಿ ಭಾರತ ಗಣರಾಜ್ಯದ ಒಂದು ಭಾಗವಾಗಬೇಕಾಯಿತು. ಮದ್ರಾಸ್‌ ರಾಜ್ಯದ ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಉಪವಾಸ ಆರಂಭಿಸಿದ ಅಮರಜೀವಿ ಪೊಟ್ಟಿ ಶ್ರೀರಾಮುಲು ಉಪವಾಸದಿಂದಲೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹುಯಿಲು ಮತ್ತು ನಾಗರಿಕ ಕ್ಷೋಭೆಗೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಅಧಿಕೃತವಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್‌ ೧ರಂದು ಆಂಧ್ರಕ್ಕೆ ರಾಜ್ಯದ ಸ್ಥಾನಮಾನವು ದಕ್ಕಿ, ಕರ್ನೂಲ್ ಅದರ ರಾಜಧಾನಿಯಾಯಿತು. ೧೯೫೬ರ ನವೆಂಬರ್‌ ೧ರಂದು ಆಂಧ್ರರಾಜ್ಯವು ಹೈದರಾಬಾದ್‌ ರಾಜ್ಯದ ತೆಲಂಗಾಣ ಪ್ರಾಂತ್ಯದಲ್ಲಿ ವಿಲೀನವಾಗುವ ಮೂಲಕ ಆಂಧ್ರ ಪ್ರದೇಶ ರಾಜ್ಯದ ರಚನೆಯಾಯಿತು. ಹೈದರಾಬಾದ್‌ ರಾಜ್ಯದ ಹಿಂದಿನ ರಾಜಧಾನಿಯಾಗಿದ್ದ ಹೈದರಾಬಾದ್‌ನ್ನು ಆಂಧ್ರ ಪ್ರದೇಶ ಎಂಬ ಹೊಸ ರಾಜ್ಯದ ರಾಜಧಾನಿಯಾಗಿ ಮಾಡಲಾಯಿತು. ೧೯೫೪ರಲ್ಲಿ ಫ್ರೆಂಚರಿಂದ ಯಾಣಮ್‌ ಬಿಡುಗಡೆ ಹೊಂದಿತು. ಆದರೆ ಜಿಲ್ಲೆಯ ಪ್ರತ್ಯೇಕ ಮತ್ತು ವಿಶಿಷ್ಟ ಅನನ್ಯತೆಯನ್ನು ಉಳಿಸಬೇಕು ಎಂಬುದು ಬಿಡುಗಡೆಯ ಒಪ್ಪಂದದ ಷರತ್ತಾಗಿತ್ತು. ಇದು ದಕ್ಷಿಣ ಭಾರತದ ಇತರ ಪರಾವೃತ ಪ್ರದೇಶಗಳಿಗೂ ಅನ್ವಯಿಸಿ, ಇಂದಿನ ಪುದುಚೆರಿ ರಾಜ್ಯದ ರಚನೆಯಾಯಿತು. ಭೂಗೋಳ ಮತ್ತು ಹವಾಮಾನ ಆಂಧ್ರ ಪ್ರದೇಶದ ಹವಾಮಾನವು ಸಾಮಾನ್ಯವಾಗಿ ಬಿಸಿ ಮತ್ತು ತೇವಾಂಶದಿಂದ ಕೂಡಿರುತ್ತದೆ. ನೈರುತ್ಯ ಮಳೆ‌ ಮಾರುತಗಳು ರಾಜ್ಯದ ಹವಾಮಾನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ಆಂಧ್ರ ಪ್ರದೇಶದಲ್ಲಿನ ಚಳಿಗಾಲವು ಹಿತಕರವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿಯೇ ರಾಜ್ಯವು ತನ್ನ ಬಹುತೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆಂಧ್ರ ಪ್ರದೇಶದಲ್ಲಿ ಬೇಸಿಗೆ ಕಾಲವು ಮಾರ್ಚ್‌ನಿಂದ ಜೂನ್‌ವರೆಗೂ ಇರುತ್ತದೆ. ಈ ತಿಂಗಳುಗಳ ಅವಧಿಯಲ್ಲಿ ಪಾದರಸದ ಮಟ್ಟವು ತುಂಬಾ ಉನ್ನತವಾಗಿರುತ್ತದೆ. ಕರಾವಳಿ ಪ್ರದೇಶದಲ್ಲಿನ ಬೇಸಿಗೆ ತಾಪಮಾನವು ಸಾಮಾನ್ಯವಾಗಿ ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ, ತಾಪಮಾನವು ಸಾಮಾನ್ಯವಾಗಿ ೨೦ °C ಮತ್ತು ೪೦ °C ನ ನಡುವಣ ಇರುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಬೇಸಿಗೆಯ ದಿನವೊಂದರಲ್ಲಿ ತಾಪಮಾನವು ೪೫ ಡಿಗ್ರಿಗಳಷ್ಟು ಮಟ್ಟವನ್ನು ಮುಟ್ಟಿರುತ್ತದೆ. ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿಯು ಆಂಧ್ರ ಪ್ರದೇಶದಲ್ಲಿ ಸಮೃಧ್ಧ ಮಳೆಯಾಗುವ ಕಾಲ. ಹಾಗಾಗಿ ಈ ತಿಂಗಳುಗಳ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಬೀಳುವ ಒಟ್ಟು ಮಳೆಯ ಮೂರನೇ ಒಂದು ಭಾಗವನ್ನು ಈಶಾನ್ಯ ಮಳೆ ಮಾರುತಗಳು ಹೊತ್ತು ತರುತ್ತವೆ. ಕೆಲವು ವೇಳೆ ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಚಳಿಗಾಲವು ರಾಜ್ಯವನ್ನು ಪ್ರವೇಶಿಸುತ್ತದೆ. ಅಕ್ಟೋಬರ್‌, ನವೆಂಬರ್, ಡಿಸೆಂಬರ್‌, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಆಂಧ್ರ ಪ್ರದೇಶದಲ್ಲಿ ಚಳಿಗಾಲವಿರುತ್ತದೆ. ರಾಜ್ಯವು ಗಣನೀಯ ಪ್ರಮಾಣದ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿರುವುದರಿಂದ ಇಲ್ಲಿ ಚಳಿಗಾಲದಲ್ಲಿ ಹೆಚ್ಚಿನ ಚಳಿ ಇರುವುದಿಲ್ಲ.ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಸಾಮಾನ್ಯಾಗಿ ೧೩ °Cನಿಂದ ೩೦ °Cವರೆಗೆ ಇರುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಆಂಧ್ರಕ್ಕೆ ನೀವು ಪ್ರವಾಸ ಹೊರಡುವುದಾದಲ್ಲಿ ಬೇಸಿಗೆಯ ಉಡುಪುಗಳೊಂದಿಗೆ ಸಿದ್ಧರಿರುವುದು ಅಗತ್ಯವಾಗಿರುತ್ತದೆ. ಬೇಸಿಗೆಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳುವಲ್ಲಿ ಹತ್ತಿ ಉಡುಪುಗಳು ಸೂಕ್ತವಾಗಿರುತ್ತವೆ. ವರ್ಷದ ಪ್ರಮುಖ ಭಾಗದ ಅವಧಿಯಲ್ಲಿ ಆಂಧ್ರ ಪ್ರದೇಶದ ಹವಾಮಾನ ಅಷ್ಟೇನೂ ಹಿತಕರವಾಗಿರುವುದಿಲ್ಲ. ಆದ್ದರಿಂದ ರಾಜ್ಯಕ್ಕೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರವರಿಯ ನಡುವಿನ ಅವಧಿಯು ಪ್ರಶಸ್ತ ಕಾಲವೆಂದು ಹೇಳಬಹುದು. ವಿಭಾಗಗಳು thumb|right|200px|ಆಂಧ್ರ ಪ್ರದೇಶದ ಜಿಲ್ಲೆಗಳ ನಕ್ಷೆ ಆಂಧ್ರ ಪ್ರದೇಶವನ್ನು ಕರಾವಳಿ ಆಂಧ್ರ, ರಾಯಲಸೀಮಾ ಮತ್ತು ತೆಲಂಗಾಣ ಎಂದು ಮೂರು ವಿಭಾಗಗಳಾಗಿ ವಿಭಾಗಿಸಬಹುದು.ನಾಲ್ಕು ಪ್ರಾದೇಶಿಕ ಯೋಜನಾ ಮಂಡಳಿಗಳಿಗೆ AP ಸಂಪುಟವು ಅನುಮೋದಿಸುತ್ತದೆ ಆಂಧ್ರ ಪ್ರದೇಶ ೨೩ ಜಿಲ್ಲೆಗಳನ್ನು ಹೊಂದಿದ್ದು ಅವು ಈ ರೀತಿ ಇವೆ: ಅದಿಲಾಬಾದ್‌‌, ಅನಂತಪುರ್‌‌, ಚಿತ್ತೂರ್‌, ಕಡಪ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಗುಂಟೂರ್‌‌, ಹೈದರಾಬಾದ್‌, ಕರೀಂನಗರ, ಖಮ್ಮಮ್‌, ಕೃಷ್ಣ, ಕರ್ನೂಲ್‌, ಮೆಹಬೂಬ್‌ ನಗರ‌, ಮೇಡಕ್‌, ನಲ್ಗೊಂಡ, ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರ್‌, ನಿಜಾಮಬಾದ್‌‌, ಪ್ರಕಾಶಮ್‌, ರಂಗಾರೆಡ್ಡಿ, ಶ್ರೀಕಾಕುಲಂ, ವಿಶಾಖಪಟ್ಟಣಂ, ವಿಜಯನಗರಂ ಮತ್ತು ವಾರಂಗಲ್‌. ಪ್ರತಿ ಜಿಲ್ಲೆಯನ್ನೂ ವಿವಿಧ ಮಂಡಲಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಮಂಡಲವೂ ಕೆಲವು ಹಳ್ಳಿಗಳ ಒಂದು ಗುಂಪಾಗಿದೆ.ಹೈದರಾಬಾದ್‌ ಇದರ ರಾಜಧಾನಿಯಾಗಿದ್ದು, ಇದಕ್ಕೆ ಪಕ್ಕದಲ್ಲಿರುವ ಅವಳಿ ನಗರವಾದ ಸಿಕಂದರಾಬಾದ್‌ನ ಒಡಗೂಡಿ ರಾಜ್ಯದಲ್ಲೇ ಅತ್ಯಂತ ದೊಡ್ಡ ನಗರವಾಗಿದೆ. ವಿಶಾಖಪಟ್ಟಣವು ಆಂಧ್ರ ಪ್ರದೇಶದ ಪ್ರಮುಖ ರೇವು ಪಟ್ಟಣವಾಗಿದ್ದು ಇದು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ ಹಾಗೂ ಭಾರತೀಯ ನೌಕಾಪಡೆಯ ಪೂರ್ವ ನೌಕಾದಳಕ್ಕೆ ನೆಲೆಯಾಗಿದೆ. ವಿಜಯವಾಡ ವು ತನ್ನ ಭೌಗೋಳಿಕ ನೆಲೆಯಿಂದಾಗಿ ಹಾಗೂ ಪ್ರಮುಖ ರೈಲು ಮತ್ತು ರಸ್ತೆ ಮಾರ್ಗಗಳಿಗೆ ಸಮೀಪವಿರುವುದರಿಂದಾಗಿ ಪ್ರಮುಖ ವ್ಯಾಪಾರಿ ತಾಣವಾಗಿದೆ; ಅಲ್ಲದೆ ರಾಜ್ಯದ ಮೂರನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಇತರೆ ಮುಖ್ಯ ನಗರ ಮತ್ತು ಪಟ್ಟಣಗಳೆಂದರೆ: ಕಾಕಿನಾಡ, ವಾರಂಗಲ್‌, ಗುಂಟೂರ್‌, ತಿರುಪತಿ, ರಾಜಮುಂಡ್ರಿ, ನೆಲ್ಲೂರ್‌, ಓಂಗೊಲ್, ಕರ್ನೂಲ್‌, ಅನಂತಪುರ್‌, ಕರೀಂನಗರ‌, ನಿಜಾಮಾಬಾದ್‌ ಮತ್ತು ಏಲೂರು. ಸೀಮಾಂಧ್ರಕ್ಕೆ ಹೊಸ ರಾಜಧಾನಿ thumb|ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ ೨ Dec, ೨೦೧೬ left|thumb|ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಮರಾವತಿ ತೋರಿಸುವ ನಕ್ಷೆ, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಮಧ್ಯದಲ್ಲಿದೆ-ಬಣ್ಣದಗೆರೆ ಕೃಷ್ಣಾನದಿ ದಿ. ಜೂನ್ ೨, ೨೦೧೪, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).(ವಿಜಯ ಕರ್ನಾಟಕ ದಿ. ಜೂನ್ 2, 2014) ಮೂಲ ಆಂದ್ರಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಾಕ್ಕೆ ರಾಧಾನಿಯಾಯಿತು. ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು. ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು. ಸಾಲಾರ್ ಜಂಗ್ ವಸ್ತು ಸಂಗ್ರಹಾಲಯ ಹೈದರಾಬಾದ್ ಜಿಲ್ಲೆಯ ಈ ವಸ್ತುಸಂಗ್ರಹಾಲಯವನ್ನು ಮೂರನೆಯ ಸಾಲಾರ್ ಜಂಗರು (ಮೀರ್ ಯೂಸಿಫ್ ಆಲಿಖಾನ್) ಒಬ್ಬರೇ ಸಂಗ್ರಹಿಸಿರುತ್ತಾರೆ. ವಿಶ್ಬದಲ್ಲಿ ವ್ಯಕ್ತಿಯೊಬ್ಬನೇ ಸಂಗ್ರಹಿಸಿದ ವಸ್ತುಗಳ ಅತಿದೊಡ್ಡ ಸಂಗ್ರಹವೆಂದು ಪ್ರಸಿದ್ಧಿಪಡೆದಿದೆ. ಇಲ್ಲಿನ ವಿಶೇಷ ವಸ್ತುಗಳ ಚಿಕ್ಕ ಪಟ್ಟಿ ಹೀಗಿದೆ. ಪರ್ಷಿಯಾದ ರತ್ನಗಂಬಳಿಗಳು, ಮೊಗಲ್ ಕಾಲದ ಸೂಕ್ಷ್ಮಚಿತ್ರಗಳು,ಚೀನಾದೇಶದ ಪಿಂಗಾಣಿ ಹೂಜಿಗಳು, ಜಪಾನಿನ ಅರಗಿನ ವಸ್ತುಗಳು, ಯೂರೋಪಿನ ಪ್ರಖ್ಯಾತ ಅಮೃತಶಿಲೆಯ ಮೂರ್ತಿಗಳು, (ಇವುಗಳಲ್ಲಿ ಅತ್ಯಂತ ಹೆಸರಾದ,'ಮುಸುಕಿನ ರೆಬೆಕ್ಕಾ,'(ಮಾರ್ಗರೆಟ್ ಮತ್ತು, ಮೆಫಿಸ್ಟೋಫೆಲೆಸ್)ಜೆಡ್ ಕಲ್ಲಿನಿಂದ ಮಾಡಿದ ಕಠಾರಿಗಳು,(ಜೆಹಾಂಗೀರ್, ಶೆಹಜಹಾನ್ ಮತ್ತು ಔರಂಗ್ ಜೇಬ್ ರ ಕಠಾರಿಗಳು)ಮತ್ತು ಇತರ ಆಕರ್ಷಕ ವಸ್ತುಗಳಿವೆ. ಜನಸಂಖ್ಯಾ ವಿವರ ತೆಲುಗು ಇತರೆ ಭಾಷೆಗಳು ಒಟ್ಟು ಹಿಂದು೮೨% ೨% ೮೪% ಮುಸ್ಲಿಂ೧% ೮% ೯% ಕ್ರೈಸ್ತ ೪%೧% ೫% ಇತರೆ ಧರ್ಮೀಯರು ೦.೫% ೦.೫% ೧% ಒಟ್ಟು ೮೮.೫% ೧೧.೫% ೧೦೦% colspan=೪ ಮುಖ್ಯವಾಗಿ ಉರ್ದು ತೆಲುಗು ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಸುಮಾರು ೮೮.೫% ಜನರು ತೆಲುಗು ಮಾತನಾಡುತ್ತಾರೆ. ತೆಲುಗು ಭಾಷೆ ಅತಿ ಹೆಚ್ಚು ಜನರು ಮಾತನಾಡುವ ಭಾರತದ ಮೂರನೇ ಭಾಷೆ. ರಾಜ್ಯದಲ್ಲಿನ ಪ್ರಮುಖ ಅಲ್ಪಸಂಖ್ಯಾತ ಭಾಷಿಕ ಸಮುದಾಯಗಳಲ್ಲಿ ಉರ್ದು (೮.೬೩%), ಹಿಂದಿ (೦.೬೩%) ಮತ್ತು ತಮಿಳು (೧.೦೧%) ಮಾತನಾಡುವವರು ಸೇರಿದ್ದಾರೆ. ಭಾರತ ಸರ್ಕಾರವು ೨೦೦೮ರ ನವೆಂಬರ್ ೧ರಂದು ತೆಲುಗು ಭಾಷೆಗೆ ಶಾಸ್ತ್ರೀಯ ಮತ್ತು ಪ್ರಾಚೀನ ಭಾಷೆ ಎಂಬ ಸ್ಥಾನಮಾನ ನೀಡಿದೆ. ಆಂಧ್ರ ಪ್ರದೇಶದಲ್ಲಿ ೧%ಗಿಂತ ಕಡಿಮೆ ಜನರಿಂದ ಮಾತನಾಡಲ್ಪಡುವ ಇತರೆ ಭಾಷೆಗಳೆಂದರೆ, ಕನ್ನಡ (೦.೯೪%), ಮರಾಠಿ (೦.೮೪%), ಒರಿಯಾ (೦.೪೨%), ಗೊಂಡಿ (೦.೨೧%) ಮತ್ತು ಮಲಯಾಳಂ (೦.೧%). ೦.೧%ಗಿಂತ ಕಡಿಮೆ ಪ್ರಮಾಣದ ರಾಜ್ಯ ನಿವಾಸಿಗಳಿಂದ ಆಡಲ್ಪಡುತ್ತಿರುವ ಭಾಷೆಗಳಲ್ಲಿ ಗುಜರಾತಿ (೦.೦೯%), ಸಾವರ (೦.೦೯%), ಕೋಯ (೦.೦೮%), ಜಟಪು (೦.೦೪%), ಪಂಜಾಬಿ (೦.೦೪%), ಕೊಳಮಿ (೦.೦೩%), ಕೊಂಡ (೦.೦೩%), ಗಡಬ (೦.೦೨%), ಸಿಂಧಿ (೦.೦೨%), ಗೋರ್ಖಾಲಿ/ನೇಪಾಳಿ (೦.೦೧%) ಮತ್ತು ಖೊಂಡ್‌/ಕೊಂಧ್(೦.೦೧%) ಸೇರಿವೆ. ಆಂಧ್ರ ಪ್ರದೇಶದ ಪ್ರಧಾನ ಜನಾಂಗವೆಂದರೆ ತೆಲುಗು ಜನ; ಇವರು ಆರ್ಯರು ಮತ್ತು ದ್ರಾವಿಡರ ಸಮ್ಮಿಶ್ರ ಜನಾಂಗಕ್ಕೆ ಪ್ರಮುಖವಾಗಿ ಸೇರುತ್ತಾರೆ. ಆರ್ಥಿಕ ವ್ಯವಸ್ಥೆ ಕೃಷಿಯು, ರಾಜ್ಯದ ಆರ್ಥಿಕತೆಗೆ ಪ್ರಮುಖ ಆದಾಯದ ಮೂಲವಾಗಿದೆ. ಭಾರತದ ನಾಲ್ಕು ಪ್ರಮುಖ ನದಿಗಳಾದ ಗೋದಾವರಿ, ಕೃಷ್ಣ, ಪೆನ್ನಾ ಮತ್ತು ತುಂಗಭದ್ರ ರಾಜ್ಯದ ಮೂಲಕ ಹರಿಯುತ್ತಿದ್ದು, ಕೃಷಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿವೆ.ಅಕ್ಕಿ, ಕಬ್ಬು, ಹತ್ತಿ, ಮೆಣಸಿನಕಾಯಿ (ಮೆಣಸಿನ ಹಣ್ಣು), ಮಾವು ಮತ್ತು ಹೊಗೆಸೊಪ್ಪು ಇಲ್ಲಿನ ಪ್ರಾದೇಶಿಕ ಬೆಳೆಗಳು. ಇತ್ತೀಚೆಗೆ, ಸಸ್ಯಜನ್ಯ ತೈಲದ ಉತ್ಪಾದನೆಗೆ ಬಳಕೆಯಾಗುವ ಸೂರ್ಯಕಾಂತಿ ಮತ್ತು ಕಡಲೆಕಾಯಿಯಂತಹ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.ವಿಶ್ವದ ಅತಿ ಎತ್ತರದ ಕಲ್ಲಿನ ಜಲಾಶಯ ಎನಿಸಿರುವ ನಾಗಾರ್ಜುನ ಸಾಗರ ಜಲಾಶಯ, ಗೋದಾವರಿ ನದಿ ಜಲಾನಯನ ನೀರಾವರಿ ಯೋಜನೆಗಳನ್ನು ಒಳಗೊಂಡಂತೆ ಹಲವು ಅಂತರ‌ರಾಜ್ಯ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. thumb|left|ರಾಜ್ಯದ ರಾಜಧಾನಿ ಮತ್ತು ರಾಜ್ಯದಲ್ಲಿನ ಅತಿ ದೊಡ್ಡ ನಗರವಾದ ಹೈದರಬಾದ್‌ನಲ್ಲಿನ ಸೈಬರ್‌ಗೋಪುರಗಳು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಮೇಲೂ ರಾಜ್ಯವು ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದೆ. ೨೦೦೪–೨೦೦೫ರ ಅವಧಿಯಲ್ಲಿ, ಹೆಚ್ಚಿನ IT ರಫ್ಟು ಮಾಡುತ್ತಿದ್ದ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶವು ಐದನೇ ಸ್ಥಾನದಲ್ಲಿತ್ತು. ೨೦೦೪-೨೦೦೫ರ ಅವಧಿಯಲ್ಲಿ ರಾಜ್ಯದ IT ರಫ್ತು ಮೌಲ್ಯವು ೮೨,೭೦೦ ದಶಲಕ್ಷ ರೂ.ಗಳಷ್ಟು ‌(೧,೮೦೦ ದಶಲಕ್ಷ ‌‌$)ಇತ್ತು.http://finance.indiainfo.com/news/೨೦೦೫/೦೫/೧೧/೧೧೦೫it-exports.html IT ಕ್ಷೇತ್ರವು ಪ್ರತಿ ವರ್ಷವೂ ೫೨.೩% ದರದಲ್ಲಿ ವಿಸ್ತರಿಸುತ್ತಿದೆ. ೨೦೦೬–೨೦೦೭ರಲ್ಲಿ ೧೯೦,೦೦೦ ದಶಲಕ್ಷ ರೂ.ಗಳಿಗೆ (೪.೫ ದಶಲಕ್ಷ ‌$) ಮುಟ್ಟಿದ IT ರಫ್ತು, ದೇಶದ ಒಟ್ಟು IT ರಫ್ತಿಗೆ ಶೇ ೧೪ರಷ್ಟು ಕೊಡುಗೆ ನೀಡಿ, ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ರಾಜ್ಯದ ಸೇವಾ ವಲಯವು ೪೩%ನಷ್ಟು ಆದಾಯವನ್ನು ರಾಜ್ಯದ ಒಟ್ಟು ದೇಶೀಯ ಉತ್ಪನ್ನ(GSDP)ಕ್ಕೆ ಈಗಾಗಲೇ ನೀಡುತ್ತಿದ್ದು, ೨೦%ರಷ್ಟು ಉದ್ಹೋಗಿಗಳನ್ನು ತನ್ನಲ್ಲಿ ತೊಡಗಿಸಿಕೊಂಡಿದೆ. ರಾಜ್ಯದ ರಾಜಧಾನಿಯಾದ ಹೈದರಾಬಾದ್‌, ದೇಶದ ಬೃಹತ್‌ ಮೂಲ ಔಷಧವಸ್ತು ತಯಾರಕ ರಾಜಧಾನಿ ಎಂದು ಪರಿಗಣಿತವಾಗಿದ್ದು, ದೇಶದ ೧೦ ಅಗ್ರಗಣ್ಯ ಔಷಧೀಯ ಕಂಪನಿಗಳಲ್ಲಿ ೫೦%ನಷ್ಟು ಕಂಪನಿಗಳು ರಾಜ್ಯದ ಮೂಲವನ್ನು ಹೊಂದಿವೆ. ಮೂಲಭೂತ ಸೌಕರ್ಯ ಕ್ಷೇತ್ರದಲ್ಲೂ ರಾಜ್ಯವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದ್ದು, ರಾಜ್ಯದ ಹಲವು ಕಂಪನಿಗಳು ಅಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮುಂಚೂಣಿಯಲ್ಲಿವೆ. ಆಂಧ್ರ ಪ್ರದೇಶವು ಖನಿಜಗಳಿಂದ ಸಂಪದ್ಭರಿತವಾಗಿರುವ ರಾಜ್ಯವಾಗಿದ್ದು, ಖನಿಜ ಸಂಪತ್ತಿಗೆ ಸಂಬಂಧಿಸಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದ ಸುಣ್ಣದ ಕಲ್ಲುಸಂಗ್ರಹಗಳ ಸುಮಾರು ಮೂರನೇ ಒಂದರಷ್ಟು ಭಾಗವನ್ನು ರಾಜ್ಯವು ಹೊಂದಿದ್ದು, ಆ ಪ್ರಮಾಣವು ಸುಮಾರು ೩೦ ಬಿಲಿಯನ್‌ ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಕೃಷ್ಣ ಗೋದಾವರಿ ಜಲಾನಯನ ಪ್ರದೇಶವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಂಪತ್ತಿನ ಬೃಹತ್ ಸಂಗ್ರಹವನ್ನು ಹೊಂದಿದೆ. ರಾಜ್ಯದಲ್ಲಿ ಬೃಹತ್‌ ಪ್ರಮಾಣದ ಕಲ್ಲಿದ್ದಲು ಸಂಗ್ರಹವೂ ಇದೆ. ಜಲ ವಿದ್ಯುತ್‌ ಉತ್ಪಾದನೆಯಲ್ಲಿ ಇಡೀ ದೇಶದಲ್ಲೇ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಒಟ್ಟು ದೇಶೀಯ ಉತ್ಪಾದನೆಯಲ್ಲಿ ೧೧%ಕ್ಕೂ ಹೆಚ್ಚಿನ ಜಲವಿದ್ಯುತ್‌‌ ರಾಜ್ಯದಲ್ಲೇ ಉತ್ಪಾದನೆಯಾಗುತ್ತದೆ. ೨೦೦೫ರ ಅವಧಿಯಲ್ಲಿನ ಆಂಧ್ರ ಪ್ರದೇಶದ GSDPಯು ಪ್ರಚಲಿತ ಬೆಲೆಗಳಲ್ಲಿ ೬೨ ಶತಕೋಟಿ $ನಷ್ಟಿತ್ತು ಎಂದು ಅಂದಾಜಿಸಲಾಗಿತ್ತು. ಇದು ಆಂಧ್ರ ಪ್ರದೇಶದ GSDPಯ ಪ್ರವೃತ್ತಿಯನ್ನು ತೋರಿಸುವ ಕೋಷ್ಟಕವಾಗಿದೆ. ಇದನ್ನು ಅಂಕಿ ಅಂಶಗಳು ಮತ್ತು ಯೋಜನಾ ಜಾರಿಯ ಸಚಿವಾಲಯ ವು ಮಾರುಕಟ್ಟೆ ಬೆಲೆಯನ್ನು ಆಧರಿಸಿ ಅಂದಾಜಿಸಿದ್ದು, ಅಂಕಿಗಳನ್ನು ಭಾರತದ ದಶಲಕ್ಷ ರೂಪಾಯಿಗಳಲ್ಲಿ ತೋರಿಸಲಾಗಿದೆ.ಆದ್ದರಿಂದ, ಒಟ್ಟಾರೆ GSDPಯ ಹೋಲಿಕೆಯಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ ಮತ್ತು ಒಟ್ಟು GSDPಯ ತಲಾದಾಯದಲ್ಲೂ ಭಾರತದ ಪ್ರಮುಖ ರಾಜ್ಯಗಳ ಪೈಕಿ ಇದು ನಾಲ್ಕನೇ ಸ್ಥಾನವನ್ನು ಪಡೆದಿದೆ. ಮತ್ತೊಂದು ಅಳತೆಗೋಲಿನ ಪ್ರಕಾರ, ರಾಜ್ಯದ ಒಟ್ಟು ದೇಶೀಯ ಉತ್ಪನ್ನದ ವಿಚಾರದಲ್ಲಿ ಭಾರತೀಯ ಒಕ್ಕೂಟದ ಎಲ್ಲ ರಾಜ್ಯಗಳ ಪೈಕಿ ಒಟ್ಟು ರಾಜ್ಯವು ಮೂರನೇ ಸ್ಥಾನದಲ್ಲಿದೆ.http://en.wikipedia.org/wiki/Comparison_between_Indian_states_and_countries_by_GDP_(PPP) ವರ್ಷ ರಾಜ್ಯ GDP (Rs.MM) ೧೯೮೦ ೮೧,೯೧೦ ೧೯೮೫ ೧೫೨,೬೬೦ ೧೯೯೦ ೩೩೩,೩೬೦ ೧೯೯೫ ೭೯೮,೫೪೦ ೨೦೦೦ ೧,೪೦೧,೧೯೦ ೨೦೦೭ ೨,೨೯೪,೬೧೦ ಸರ್ಕಾರ ಮತ್ತು ರಾಜಕೀಯ ಆಂಧ್ರ ಪ್ರದೇಶ ವಿಧಾನಸಭೆಯು ೨೯೪ ಸದಸ್ಯ ಸ್ಥಾನಗಳನ್ನು ಹೊಂದಿದೆ.ಭಾರತದ ಸಂಸತ್‌‌ನಲ್ಲಿ ರಾಜ್ಯವು ೬೦ ಜನ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ೧೮ ಮಂದಿಯಿದ್ದರೆ, ಕೆಳಮನೆಯಾದ ಲೋಕಸಭೆಯಲ್ಲಿ ೪೨ ಮಂದಿ ಸದಸ್ಯರಿದ್ದಾರೆ. ೧೯೮೨ರವರೆಗೂ ಆಂಧ್ರ ಪ್ರದೇಶವು ಭಾರತ ರಾಷ್ಟ್ರೀಯ ಕಾಂಗ್ರಸ್‌‌(INC) ನೇತೃತ್ವದ ಸರಣಿ ಸರ್ಕಾರಗಳನ್ನೇ ಹೊಂದಿತ್ತು. ಕಾಸು ಬ್ರಹ್ಮಾನಂದ ರೆಡ್ಡಿ ಯವರು ಅತಿ ಹೆಚ್ಚು ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಾಖಲೆಯನ್ನು ಹೊಂದಿದ್ದರು. ಇದನ್ನು ಎನ್‌.ಟಿ.ರಾಮ ‌ರಾವ್‌ರವರು ೧೯೮೩ರಲ್ಲಿ ಮುರಿದರು. ಪಿ.ವಿ.ನರಸಿಂಹ ರಾವ್‌ರವರೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೯೧ರಲ್ಲಿ ಇವರು ಭಾರತದ ಪ್ರಧಾನಿಯೂ ಆದರು. ರಾಜ್ಯದ ಗಮನಾರ್ಹ ಮುಖ್ಯಮಂತ್ರಿಗಳ ಪೈಕಿ ತಂಗುತೂರಿ ಪ್ರಕಾಶಮ್‌, ಆಂಧ್ರ ರಾಜ್ಯದ ಮುಖ್ಯಮಂತ್ರಿ (CM) (ಪ್ರಸ್ತುತ ಆಂಧ್ರ ಪ್ರದೇಶದ ಮೊದಲ ಮಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ) ಸೇರಿದ್ದಾರೆ. ಉಳಿದ ಇತರರಲ್ಲಿ ಕಾಸು ಬ್ರಹ್ಮಾನಂದ ರೆಡ್ಡಿ, ಮರ್ರಿ ಚೆನ್ನಾ ರೆಡ್ಡಿ, ಜಲಗಂ ವೆಂಗಲ್‌ ರಾವ್‌, ನೆದುರುಮಲ್ಲಿ ಜನಾರ್ಧನ ರೆಡ್ಡಿ, ನಾದೇಂಡ್ಲ ಭಾಸ್ಕರ ರಾವ್‌, ಕೋಟ್ಲ ವಿಜಯ ಭಾಸ್ಕರ ರೆಡ್ಡಿ, ಎನ್‌.ಟಿ.ರಾಮ ರಾವ್, ನಾರಾ ಚಂದ್ರಬಾಬು ನಾಯ್ಡು ಮತ್ತು ವೈ.ಎಸ್‌.ರಾಜಶೇಖರ ರೆಡ್ಡಿಯವರುಗಳು ಸೇರಿದ್ದಾರೆ. thumb|250px|right|ಹೈದರಾಬಾದ್‌ನಲ್ಲಿರುವ ಉಚ್ಚ ನ್ಯಾಯಾಲಯ ರಾಜ್ಯದ ಪ್ರಮುಖ ನ್ಯಾಯಿಕ ಸಂಸ್ಥೆ ೧೯೮೩ರಲ್ಲಿ ತೆಲುಗು ದೇಶಮ್‌ ಪಕ್ಷವು (TDP) ರಾಜ್ಯದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತು ಮತ್ತು ಎನ್‌.ಟಿ.ರಾಮ ರಾವ್‌ರವರು (NTR) ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಇದರೊಂದಿಗೆ ಆಂಧ್ರ ಪ್ರದೇಶದ ರಾಜಕೀಯಕ್ಕೆ ಅಸಾಧಾರಣವಾದ ಎರಡನೇ ರಾಜಕೀಯ ಪಕ್ಷವೊಂದರ ಪರಿಚಯವಾದಂತಾಗಿ, ಆಂಧ್ರ ಪ್ರದೇಶದ ರಾಜಕೀಯದಲ್ಲಿದ್ದ ಏಕಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡಿತು. ಕೆಲವು ತಿಂಗಳುಗಳ ನಂತರ, NTRರವರು ವೈದ್ಯಕೀಯ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಸಮಯದಲ್ಲಿ ನಾದೇಂಡ್ಲ ಭಾಸ್ಕರ್‌ ರಾವ್‌ರವರು ಮುಖ್ಯಮಂತ್ರಿಯ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದರು. ಹಿಂತಿರುಗಿ ಬಂದ ನಂತರ, ವಿಧಾನಸಭೆಯನ್ನು ವಿಸರ್ಜಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ಘೋಷಿಸಿಸಲು ರಾಜ್ಯದ ಆಗಿನ ರಾಜ್ಯಪಾಲರನ್ನು ಒಪ್ಪಿಸುವಲ್ಲಿ NTRರವರು ಯಶಸ್ವಿಯಾರು. ಇದರಿಂದ ಮತ್ತೆ ನಡೆದ ಚುನಾವಣೆಯಲ್ಲಿ TDPಯು ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿತು. ೧೯೮೯ರ ಸಾರ್ವಜನಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ INC, Dr. ಮರ್ರಿ ಚೆನ್ನಾ ರೆಡ್ಡಿಯವರ ನೇತ್ಥತ್ವದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಇದರೊಂದಿಗೆ NTRರವರ ೭ ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿತು. ಮರ್ರಿ ಚೆನ್ನಾ ರೆಡ್ಡಿಯವರ ನಂತರ ಎನ್‌. ಜನಾರ್ಧನ್‌ ರೆಡ್ಡಿ ಅಧಿಕಾರಕ್ಕೆ ಬಂದರು. ಕೋಟ್ಲ ವಿಜಯ ಭಾಸ್ಕರ್‌ ರೆಡ್ಡಿಯವರು ತಾವು ಅಧಿಕಾರಕ್ಕೆ ಬರುವ ಮೂಲಕ ಇವರನ್ನು ಬದಲಿಸಿದರು. ೧೯೯೪ರಲ್ಲಿ ಮತ್ತೆ TDPಗೆ ಜನಾದೇಶವನ್ನು ನೀಡಿದ ಆಂಧ್ರ ಪ್ರದೇಶವು, NTRರವರು ಮತ್ತೆ ಮುಖ್ಯಮಂತ್ರಿಯಾಗುವುದನ್ನು ಕಂಡಿತು. ಆದರೆ NTRರವರ ಅಳಿಯನಾಗಿದ್ದ ಚಂದ್ರಬಾಬು ನಾಯ್ಡುರವರು ರಾಜಕೀಯ ಕ್ಷಿಪ್ತಕ್ರಾಂತಿಯೊಂದರಲ್ಲಿ ಅವರ ಬೆನ್ನಿಗೆ ಚೂರಿ ಹಾಕುವ ಮೂಲಕ ಅಧಿಕಾರವನ್ನು ಕಿತ್ತುಕೊಂಡರು. ಈ ನಂಬಿಕೆ ದ್ರೋಹವನ್ನು ಅರಗಿಸಿಕೊಳ್ಳಲಾಗದ NTRರವರು ಕೆಲವು ಕಾಲದ ನಂತರ ಹೃದಯಾಘಾತದಿಂದ ಮರಣ ಹೊಂದಿದರು. ೧೯೯೯ರಲ್ಲಿ TDPಯು ಚುನಾವಣೆಯಲ್ಲಿ ಗೆದ್ದಿತು. ಮುಂದಿನ ಚುನಾವಣೆಯಲ್ಲಿ INC ನೇತೃತ್ವದ ರಾಜಶೇಖರ ರೆಡ್ಡಿಯವರ ಶಕ್ತಿಶಾಲಿ ಮುಂಚೂಣಿಯನ್ನು ಹೊಂದಿದ್ದ ಮೈತ್ರಿಕೂಟದ ಎದುರು ೨೦೦೪ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋಲನ್ನನುಭವಿಸಿದರು. ೨೦೦೮ರಲ್ಲಿ ಚಲನಚಿತ್ರ ತಾರೆ ಜಿರಂಜೀವಿಯವರಿಂದ ಪ್ರಜಾ ರಾಜ್ಯಂ ಪಕ್ಷ(PRP) ಸ್ಥಾಪಿತವಾಯಿತು. ಇದು ೨೦೦೯ರ ಚುನಾವಣೆಯಲ್ಲಿ ತ್ರಿಕೋನ ಹೋರಾಟವನ್ನು ಹುಟ್ಟುಹಾಕಿತು. ಅತಿಯಾದ ನಿರೀಕ್ಷೆ ಮತ್ತು ಮಾಧ್ಯಮದ ಭಾರೀ ಪ್ರಚಾರದ ನಡುವೆಯೂ ಇದು ಆಂಧ್ರ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ವಿಫಲವಾಯಿತು. ಹೀಗಾಗಿ ೧೮ ಸ್ಥಾನಗಳನ್ನಷ್ಟೆ ಗೆಲ್ಲುವುದಕ್ಕೆ ಸಾಧ್ಯವಾಯಿತು.ಒಂದೇ ಆಶಾಕಿರಣವೆಂದರೆ ಒಟ್ಟು ಮತಗಳಲ್ಲಿ ಶೇ ೩೬ರಷ್ಟು ಮತ ಪಡೆದ ಕಾಂಗ್ರೆಸ್‌ ಮತ್ತು ಶೇ ೨೫ರಷ್ಟು ಗಳಿಸಿದ ತೆಲುಗು ದೇಶಮ್‌ ಪಕ್ಷಗಳಿಗೆ ಪ್ರತಿಯಾಗಿ, ಇದು ಶೇ ೧೭ರಷ್ಟು ಮತವನ್ನು ಗಳಿಸುವಲ್ಲಿ ಸಫಲವಾಯಿತು. ಪ್ರಜಾ ರಾಜ್ಯಂ ಪಕ್ಷ ಮತ್ತು TDP, TRS, CPI ಮತ್ತು CPM ಪಕ್ಷಗಳ ಬೃಹತ್‌ ಮೈತ್ರಿಕೂಟವನ್ನು ಹಿಮ್ಮೆಟ್ಟಿಸುವುದರೊಂದಿಗೆ ವೈ.ಎಸ್‌.ರಾಜಶೇಖರ ರೆಡ್ಡಿ ಮತ್ತೆ ಮುಖ್ಯಮಂತ್ರಿಯಾದರು. YSR ರೆಡ್ಡಿಯವರು APಯ ಇತಿಹಾಸದಲ್ಲಿ, ಒಂದು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ೫ ವರ್ಷಗಳನ್ನು ಸಂಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿಯಾದರು. ಸಂಸ್ಕೃತಿ ಸಾಂಸ್ಕೃತಿಕ ಸಂಸ್ಥೆಗಳು ಆಂಧ್ರ ಪ್ರದೇಶವು ಹಲವು ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಅವುಗಳೆಂದರೆ, ಗುಂಟೂರು ನಗರದ ಬಳಿ ಇರುವ ಅಮರಾವತಿಯಲ್ಲಿನ ಪುರಾತತ್ವ ವಸ್ತುಸಂಗ್ರಹಾಲಯ, ಇದು ಸುತ್ತಮುತ್ತಲ ಪ್ರಾಚೀನ ಸ್ಥಳಗಳ ಅವಶೇಷಗಳನ್ನು ಹೊಂದಿದೆ; ಹೈದರಾಬಾದ್‌ನಲ್ಲಿರುವ ಸಾಲಾರ್‌ ಜಂಗ್‌ ವಸ್ತುಸಂಗ್ರಹಾಲಯ, ಇದು ಶಿಲ್ಪಗಳು, ವರ್ಣಚಿತ್ರಗಳು ಮತ್ತು ಧಾರ್ಮಿಕ ಕರಕುಶಲ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ; ವಿಶಾಖಪಟ್ಟಣಂನಲ್ಲಿರುವ ವಿಶಾಖ ವಸ್ತುಸಂಗ್ರಹಾಲಯ, ಇದು ನವೀಕರಣಗೊಂಡ ಡಚ್‌‌ ಬಂಗಲೆಯಲ್ಲಿದ್ದು ಮದ್ರಾಸ್‌ ಪ್ರಾಂತ್ಯದಯ ಸ್ವಾತಂತ್ರ್ಯಪೂರ್ವ ಇತಿಹಾಸವನ್ನು ಪ್ರದರ್ಶಿಸುತ್ತದೆ.ವಿಜಯವಾಡದಲ್ಲಿರುವ ವಿಕ್ಟೋರಿಯಾ ಜುಬಿಲಿ ವಸ್ತುಸಂಗ್ರಹಾಲಯವು ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳು, ಮೂರ್ತಿಗಳು, ಶಸ್ತ್ರಾಸ್ತ್ರಗಳು, ಮೊನಚಾದ ಆಯುಧಗಳು ಮತ್ತು ಶಾಸನಗಳನ್ನು ಹೊಂದಿದೆ.ವಿಕ್ಟೋರಿಯಾ ಜ್ಯುಬಿಲಿ ವಸ್ತು ಸಂಗ್ರಹಾಲಯ: http://www.indiatourism.com/andhra-pradesh-museums/victoria-jubilee-museum.html ಆಹಾರ ಪದ್ಧತಿ thumb|left|ಇತರೆ ಭಾರತೀಯ ಆಹಾರಗಳೊಂದಿಗೆ ಬಡಿಸುವ ಹೈದರಾಬಾದಿ ಬಿರಿಯಾನಿ ಆಂಧ್ರ ಪ್ರದೇಶದ ಆಹಾರ ಅಥವಾ ಅಡಿಗೆ ಪದ್ದತಿಯು ಭಾರತದ ಆಹಾರ ಪದ್ಧತಿಗಳಲ್ಲೇ ಅತ್ಯಂತ ಮಸಾಲೆಪೂರಿತ ಆಹಾರ ಪದ್ಧತಿಯಾಗಿದೆ. ಭೌಗೋಳಿಕ ಪ್ರದೇಶ, ಜಾತಿ, ಸಂಪ್ರದಾಯ ಮುಂತಾದ ಅಂಶಗಳನ್ನು ಆಧರಿಸಿ ಆಂಧ್ರದ ಆಹಾರ ಪದ್ಧತಿಯಲ್ಲಿ ಹಲವು ವೈವಿಧ್ಯಗಳು ರೂಪುಗೊಂಡಿವೆ. ಉಪ್ಪಿನಕಾಯಿಗಳು ಮತ್ತು ತೆಲುಗು ಭಾಷೆಯಲ್ಲಿ ಪಚ್ಚಡಿ ಎಂದು ಕರೆಯಲ್ಪಡುವ ಚಟ್ನಿಗಳು ವಿಶೇಷವಾಗಿ ಆಂಧ್ರ ಪ್ರದೇಶದ ಜನಪ್ರಿಯ ಖಾದ್ಯಗಳು. ಚಟ್ಟಿ ಮತ್ತು ಉಪ್ಪಿನಕಾಯಿಗಳಲ್ಲಿರುವ ವೈವಿಧ್ಯಗಳು ರಾಜ್ಯಕ್ಕೆ ಅನನ್ಯತೆಯನ್ನು ತಂದುಕೊಟ್ಟಿವೆ.ಟೊಮ್ಯಾಟೊ, ಬದನೆಕಾಯಿ(ನೆಲಗುಳ್ಳ), ದಾಸವಾಳ ಜಾತಿಯ(ಗೊಂಗೂರ) ತರಕಾರಿಗಳೂ ಸೇರಿದಂತೆ ಹೆಚ್ಚೂ ಕಡಿಮೆ ಪ್ರತಿಯೊಂದು ತರಕಾರಿಗಳಿಂದ ಚಟ್ನಿಗಳನ್ನು ತಯಾರಿಸಲಾಗುತ್ತದೆ.ಆವಕಾಯ ಎಂದು ಕರೆಯಲ್ಪಡುವ ಮಾವಿನ ಉಪ್ಪಿನಕಾಯಿಯು, ಬಹುಶಃ ಆಂಧ್ರ ಪ್ರದೇಶದ ಉಪ್ಪಿನಕಾಯಿಗಳಲ್ಲೇ ಅತ್ಯಂತ ಜನಪ್ರಿಯ ಉಪ್ಪಿನಕಾಯಿ ಎನ್ನಬಹುದು. ಅಕ್ಕಿಯು ಇಲ್ಲಿನ ಪ್ರಮುಖ ಆಹಾರವಾಗಿದ್ದು, ವಿವಿಧ ಬಗೆಯಲ್ಲಿ ಇದನ್ನು ಬಳಸಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿಕೊಂಡು ಯಾವುದಾದರೊಂದು ರೀತಿಯ ಮೇಲೋಗರದ ಜೊತೆ ಸೇವಿಸಲಾಗುತ್ತದೆ; ಇಲ್ಲವೇ, ಕಲಸಿದ ಹಿಟ್ಟು ಮಾಡಿಕೊಂಡು ತೆಳುವಾದ ಬಟ್ಟೆಯಂತೆ ಕಾಣುವ ಅಟ್ಟು (ಕಲಸಿದ ಹಿಟ್ಟು ಮತ್ತು ಹೆಸರುಕಾಳಿನ ಮಿಶ್ರಣದಿಂದ ತಯಾರಿಸುವ ಪೆಸರಟ್ಟು ಎಂಬ ತಿಂಡಿ)ಅಥವಾ ದೋಸೆ ಎಂಬ ತಿಂಡಿಯನ್ನು ತಯಾರಿಸಲು ಬಳಸಲಾಗುವುದು. ಮಾಂಸ, ತರಕಾರಿಗಳು, ಸೊಪ್ಪುಗಳೊಂದಿಗೆ ವಿವಿಧ ಸಾಂಬಾರ ಪದಾರ್ಥಗಳನ್ನು (ಮಸಾಲೆ) ಸೇರಿಸಿ ವೈವಿಧ್ಯಮಯ ರುಚಿಕಟ್ಟಾದ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ೧೪ನೇ ಶತಮಾನದಲ್ಲಿ ತೆಲಂಗಾಣ ಪ್ರದೇಶವನ್ನು ಪ್ರವೇಶಿಸಿದ್ದ ಮುಸ್ಲಿಮರ ಆಹಾರ ಪದ್ಧತಿಯಿಂದ ಹೈದರಾಬಾದಿ ಆಹಾರ ಪದ್ಧತಿಯು ಪ್ರಭಾವಿತಗೊಂಡಿದೆ. ಬಹುತೇಕ ಆಹಾರ ವೈವಿಧ್ಯಗಳು ಮಾಂಸ ಸಂಬಂಧಿಯಾಗಿರುತ್ತವೆ. ವಿಲಕ್ಷಣ ರೀತಿಯ ಮಸಾಲೆ ಪದಾರ್ಥಗಳು ಹಾಗೂ ತುಪ್ಪ ವನ್ನು (ಶೋಧಿಸಿದ ಬೆಣ್ಣೆ) ಧಾರಾಳವಾಗಿ ಬಳಸುವುದರಿಂದ ಈ ಆಹಾರಗಳು ರುಚಿಕರ ಮತ್ತು ಪರಿಮಳಯುಕ್ತವಾಗಿರುತ್ತವೆ. ಕುರಿ, ಕೋಳಿ ಮತ್ತು ಮೀನಿನ ಮಾಂಸಗಳು ಮಾಂಸಾಹಾರಿ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಬಳಕೆಯಾಗುತ್ತವೆ. ಹೈದರಾಬಾದಿ ಆಹಾರಗಳಲ್ಲಿ ಬಿರಿಯಾನಿಯು ಬಹುಶಃ ಅತ್ಯಂತ ವಿಶಿಷ್ಟ ಮತ್ತು ಜನಪ್ರಿಯ ಆಹಾರ ಎಂದು ಹೇಳಬಹುದು. ನೃತ್ಯ thumb|right|150px|ಆಂಧ್ರ ಪ್ರದೇಶದ ಸಾಂಪ್ರದಾಯಿಕ ನೃತ್ಯವಾದ ಕೂಚಿಪುಡಿ ಆಂಧ್ರ ಪ್ರದೇಶದಲ್ಲಿ ಚಾಲ್ತಿಯಲ್ಲಿರುನ ನೃತ್ಯ ಪ್ರಕಾರಗಳ ಬಗೆಗೆ ಬರೆದ ಮೊದಲ ವ್ಯಕ್ತಿ ಜಯಪ ಸೇನಾನಿ (ಜಯಪ ನಾಯುಡು).ನೃತ್ಯ ರತ್ನಾವಳಿ (http://www.telugupeople.com/discussion/article.asp?id=೧೧೧ ದೇಸಿ ಮತ್ತು ಮಾರ್ಗಿ ಪ್ರಕಾರದ ನೃತ್ಯಗಳೆರಡೂ ಇವರ 'ನೃತ್ಯ ರತ್ನಾವಳಿ' ಎಂಬ ಸಂಸ್ಕೃತ ಪ್ರಕರಣ ಗ್ರಂಥದಲ್ಲಿ ಸೇರ್ಪಡೆಗೊಂಡಿವೆ. ಇದು ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಪೆರಾನಿ, ಪ್ರೇಂಖನ, ಶುದ್ಧ ನರ್ತನ, ಕಾರ್ಕರಿ, ರಾಸಕ, ದಂಡ ರಾಸಕ, ಶಿವ ಪ್ರಿಯ, ಕಂದುಕ ನರ್ತನ, ಭಂದಿಕಾ ನೃತ್ಯಂ, ಕರಣ ನೃತ್ಯಂ, ಚಿಂದು, ಗೊಂಡಾಲಿ, ಕೋಲಾಟಂ ಮುಂತಾದ ಜಾನಪದ ನೃತ್ಯ ಪ್ರಕಾರಗಳು ಇಲ್ಲಿ ವಿವರಿಸಲ್ಪಟ್ಟಿವೆ. ಮಾರ್ಗ ಮತ್ತು ದೇಸಿ, ತಾಂಡವ ಮತ್ತು ಲಾಸ್ಯ, ನಾಟ್ಯ ಹಾಗೂ ನೃತ್ಯವೆಂಬ ಪ್ರಕಾರಗಳ ನಡುವಿರುವ ವ್ಯತ್ಯಾಸಗಳ ಕುರಿತಾದ ವಿಚಾರಗಳನ್ನು ಮೊದಲ ಅಧ್ಯಾಯದಲ್ಲಿ ಲೇಖಕನು ಚರ್ಚಿಸುತ್ತಾನೆ. ಆಂಗಿಕಾಭಿನಯ, ಕಾರಿಗಳು, ಸ್ಥಾನಕಗಳು, ಮತ್ತು ಮಂಡಲಗಳ ಕುರಿತು ೨ ಮತ್ತು ೩ನೇ ಅಧ್ಯಾಯಗಳಲ್ಲಿ ವಿವರಿಸುತ್ತಾನೆ. ೪ನೇ ಅಧ್ಯಾಯದಲ್ಲಿ ಕರಣಗಳು, ಅಂಗಾಹಾರಗಳು ಮತ್ತು ರೇಚಕಗಳು ವಿವರಿಸಲ್ಪಟ್ಟಿವೆ. ಮುಂದಿನ ಅಧ್ಯಾಯಗಳಲ್ಲಿ ಅವನು ದೇಸಿ ನೃತ್ಯ ಪ್ರಕಾರಗಳ ಕುರಿತು ವಿವರಿಸಿದ್ದಾನೆ. ಕೊನೆಯ ಅಧ್ಯಾಯದಲ್ಲಿ ಕಲೆ ಮತ್ತು ನೃತ್ಯಾಭ್ಯಾಸದ ಕುರಿತು ಆತ ವಿವರಿಸುತ್ತಾನೆ. ಆಂಧ್ರ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯವು ಪುರುಷರು ಮತ್ತು ಮಹಿಳೆಯರಿಬ್ಬರಿಂದಲೂ ಅಭಿನಯಿಸಲ್ಪಡುತ್ತದೆ. ಆದರೂ ಮಹಿಳೆಯರು ಇದನ್ನು ಕಲಿಯಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಕೂಚಿಪುಡಿಯು ರಾಜ್ಯದ ಅತ್ಯಂತ ಪರಿಚಿತ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ.ರಾಜ್ಯದ ಇತಿಹಾಸದ ಆದ್ಯಂತವಾಗಿ ಅಸ್ಥಿತ್ವದಲ್ಲಿರುವ ಹಲವು ನೃತ್ಯ ಪ್ರಕಾರಗಳೆಂದರೆ, ಚೆಂಚು ಭಾಗೋತಂ, ಕೂಚಿಪುಡಿ, ಭಾಮಕಲಾಪಮ್‌, ಬುರ್ರಕಥಾ, ವೀರನಾಟ್ಯಂ, ಬುಟ್ಟು ಬೊಮ್ಮಲು, ದಪ್ಪು, ತಪ್ಪೆಟ ಗುಲ್ಲು, ಲಂಬಾಡಿ, ಬೊನಾಲು, ಧಿಂಸ, ಕೋಲಾಟಂ ಮತ್ತು ಚಿಂಡು. ಹಬ್ಬಗಳು ಜನವರಿಯಲ್ಲಿ ಸಂಕ್ರಾಂತಿ. ಫೆಬ್ರವರಿ/ಮಾರ್ಚ್‌ನಲ್ಲಿ ಮಹಾಶಿವರಾತ್ರಿ. ಮಾರ್ಚ್‌ನಲ್ಲಿ ಹೋಳಿ ಮಾರ್ಚ್‌/ಏಪ್ರಿಲ್‌ನಲ್ಲಿ ಉಗಾದಿ ಅಥವಾ ತೆಲುಗು ಹೊಸವರ್ಷ ಉಗಾದಿ ಹಬ್ಬದ ೯ ದಿನಗಳ ನಂತರ ಮಾರ್ಚ್‌/ಏಪ್ರಿಲ್‌‌ನಲ್ಲಿ ಶ್ರೀರಾಮನವಮಿ ಆಚರಿಸಲ್ಪಡುತ್ತದೆ. ಆಗಷ್ಟ್‌‌ನಲ್ಲಿ ವರಲಕ್ಷ್ಮಿ ವ್ರತಮ್‌‌ ಆಗಷ್ಟ್‌ನಲ್ಲಿ ರಾಖಿ ಪೂರ್ಣಿಮ ಆಗಷ್ಟ್‌ನಲ್ಲಿ ವಿನಾಯಕ ಚೌತಿ ಸೆಪ್ಟೆಂಬರ್‌/ಅಕ್ಟೋಬರ್‌ನಲ್ಲಿ ದಸರಾ ಆಶ್ವಯುಜ ಮಾಸದ ಶುಕ್ಲಪಕ್ಷದಲ್ಲಿನ ೩ನೇ ದಿನವಾದ ಅಟ್ಲ ತಡ್ಡೆ (ಗ್ರಿಗರಿ ಪಂಚಾಂಗದಲ್ಲಿ ಸೆಪ್ಟೆಂಬರ್/ಅಕ್ಟೋಬರ್ ತಿಂಗಳಲ್ಲಿ ಬರುತ್ತದೆ) ದಸರಾ ಹಬ್ಬದ ೨೦ ದಿನಗಳ ನಂತರ ಅಕ್ಟೋಬರ್/ನವೆಂಬರ್‌ನಲ್ಲಿ ಬರುವ ದೀಪಾವಳಿ. ಈದ್‌-ಉಲ್‌-ಫಿತರ್‌, ಬಕ್ರೀದ್‌, ಮೊಹರಂ. ಶ್ರಾವಣಂನಲ್ಲಿ ಬೋನಾಲು (ತೆಲಂಗಾಣ ಪ್ರದೇಶದಲ್ಲಿ ಆಚರಿಸಲ್ಪಡುತ್ತದೆ.) ತೆಲಂಗಾಣ ಪ್ರಾಂತ್ಯದಲ್ಲಿ ದಸರಾ ಹಬ್ಬದ ದುರ್ಗಾಷ್ಟಮಿ ಸಮಯದಲ್ಲಿ ನವರಾತ್ರಿ ಎಂದು ಕರೆಯಲ್ಪಡುವ, ೯ ದಿನಗಳವರೆಗೆ ಆಚರಿಸಲ್ಪಡುವ ಬಥುಕಮ್ಮ ಹಬ್ಬ. ನವ್‌ರೂಜ್‌ ಕ್ರಿಸ್‌ಮಸ್‌‌ ಸಾಹಿತ್ಯ ನನ್ನಯ್ಯ, ತಿಕ್ಕನ ಮತ್ತು ಯರ್ರಾಪ್ರಗದ ಎಂಬ ಕವಿತ್ರಯರು ಶ್ರೇಷ್ಠ ಮಹಾಕಾವ್ಯ ಮಹಾಭಾರತ ವನ್ನು ತೆಲುಗು ಭಾಷೆಗೆ ಅನುವಾದಿಸಿದರು. ಬಮ್ಮೆರ ಪೋತನ ಎಂಬ ಮತ್ತೋರ್ವ ಕವಿಯು ಶ್ರೀಮದ್‌ ಆಂಧ್ರ ಮಹಾ ಭಾಗವತಮು ಎಂಬ ಅತ್ಯುತ್ಕೃಷ್ಟ ಕೃತಿಯನ್ನು ರಚಿಸಿದ್ದು, ಇದು ವೇದವ್ಯಾಸರು ಸಂಸ್ಕೃತದಲ್ಲಿ ಬರೆದ ಶ್ರೀ ಭಾಗವತಮ್ ‌ನ ತೆಲುಗು ಭಾಷಾಂತರವಾಗಿದೆ. ನನ್ನಯ್ಯನನ್ನು ಆದಿಕವಿ ಎಂದು ಕರೆಯಲಾಗಿದ್ದು, ರಾಜಮಹೇಂದ್ರವರಂ(ರಾಜಮಂಡ್ರಿ)ಯಿಂದ ಆಳ್ವಿಕೆ ನಡೆಸುತ್ತಿದ್ದ ರಾಜರಾಜನರೇಂದ್ರನು ಇವನ ಆಶ್ರಯದಾತನಾಗಿದ್ದನು. ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯನು ಅಮುಕ್ತಮಾಲ್ಯದ ಎಂಬ ಕೃತಿಯನ್ನು ಬರೆದನು. ಕಡಪ ಪ್ರದೇಶದವನಾದ ತೆಲುಗು ಕವಿ ವೇಮನಕೂಡಾ ತನ್ನ ತಾತ್ವಿಕ ಪದ್ಯಗಳಿಂದ ಪರಿಚಿತನಾಗಿದ್ದಾನೆ. ಕಂದುಕೂರಿ ವೀರೇಶಲಿಂಗಮ್‌ರವರ ನಂತರದ ತೆಲುಗು ಸಾಹಿತ್ಯವನ್ನು ಆಧುನಿಕ ಸಾಹಿತ್ಯ ಎಂದು ಕರೆಯಲಾಗುತ್ತದೆ. ಗದ್ಯ ಟಿಕ್ಕಣ ಎಂದೇ ಹೆಸರಾದ ಸತ್ಯವತಿ ಚರಿತಂರವರು ಸತ್ಯವತಿ ಚರಿತಂ ಎಂಬ ತೆಲುಗು ಭಾಷೆಯ ಸಾಮಾಜಿಕ ಕಾದಂಬರಿಯನ್ನು ಬರೆದಿದ್ದಾರೆ. ಇತರೆ ಆಧುನಿಕ ಬರಹಗಾರರಲ್ಲಿ, ಜ್ಷಾನಪೀಠ ಪ್ರಶಸ್ತಿ ವಿಜೇತರುಗಳಾದ ಶ್ರೀ ವಿಶ್ವನಾಥ ಸತ್ಯನಾರಾಯಣ ಮತ್ತು ಡಾ.ಸಿ. ನಾರಾಯಣ ರೆಡ್ಡಿಯವರುಗಳು ಸೇರಿದ್ದಾರೆ. ಆಂಧ್ರ ಪ್ರದೇಶದ ಸ್ಥಳೀಕ ಮತ್ತು ಕ್ರಾಂತಿಕಾರಿ ಕವಿ ಶ್ರೀ ಶ್ರೀಯವರು ತೆಲುಗು ಸಾಹಿತ್ಯಕ್ಕೆ ಹೊಸ ರೂಪದ ಅಭಿವ್ಯಕ್ತಿವಾದವನ್ನು ಪರಿಚಯಿಸಿದರು. ಶ್ರೀ ಪುಟ್ಟಪರ್ತಿ ನಾರಾಯಣಚಾರ್ಯುಲುರವರು ಕೂಡ ತೆಲುಗು ಸಾಹಿತ್ಯದ ವಿದ್ವಾಂಸ ಕವಿಗಳಲ್ಲಿ ಒಬ್ಬರು. ಇವರು ವಿಶ್ವನಾಥ ಸತ್ಯನಾರಾಯಣರ ಸಮಕಾಲೀನರಾಗಿದ್ದರು. ಶ್ರೀ ಪುಟ್ಟಪರ್ತಿ ನಾರಾಯಣಾಚಾರ್ಯಲುರವರು ದ್ವಿಪದಿ ಕಾವ್ಯವಾಗಿ ಶಿವತಾಂಡವಂ , ಪಾಂಡುರಂಗ ಮಹಾತ್ಯಂ , ಎಂಬ ಜನಪ್ರಿಯ ಪುಸ್ತಕಗಳನ್ನು ಬರೆದರು. ಶ್ರೀರಂಗಂ ಶ್ರೀನಿವಾಸರಾವ್‌, ಗುರ್ರಂ ಜಷುವಾ, ಚಿನ್ನಯ ಸೂರಿ, ವಿಶ್ವನಾಥ ಸತ್ಯನಾರಾಯಣ ಮತ್ತು ವದ್ದೇರ ಚಂಡಿದಾಸ್‌ ಮುಂತಾದವರು ಆಂಧ್ರ ಪ್ರದೇಶದ ಇತರೆ ಜನಪ್ರಿಯ ಲೇಖಕರಾಗಿದ್ದಾರೆ. ಚಲನಚಿತ್ರಗಳು ಆಂಧ್ರ ಪ್ರದೇಶ ಸುಮಾರು ೨೭೦೦ ಚಲನಚಿತ್ರ ಮಂದಿರಗಳನ್ನು ಹೊಂದಿದ್ದು, ಭಾರತದಲ್ಲೇ ಅತಿ ಹೆಚ್ಚು ಚಲನಚಿತ್ರ ಮಂದಿರಗಳನ್ನು ಹೊಂದಿರುವ ರಾಜ್ಯವಾಗಿದೆ. ರಾಜ್ಯವು ವರ್ಷವೊಂದಕ್ಕೆ ಸುಮಾರು ೨೦೦ ಚಲನಚಿತ್ರಗಳನ್ನು ತಯಾರಿಸುತ್ತದೆ. ಭಾರತದಲ್ಲಿರುವ ಡಾಲ್ಬಿ ಡಿಜಿಟಲ್‌ ಥಿಯೇಟರ್‌ಗಳ ಪೈಕಿ ಸುಮಾರು ೪೦% (೯೩೦ರ ಪೈಕಿ ೩೩೦)ರಷ್ಟನ್ನು ಇದು ಹೊಂದಿದೆ. ಈಗ ಇದು ಬೃಹತ್ ೩D ಪರದೆಯನ್ನೊಳಗೊಂಡ ಐಮ್ಯಾಕ್ಸ್‌ ಥಿಯೇಟರ್‌ ಒಂದನ್ನು ಹಾಗೂ ೩-೫ ಮಲ್ಟಿಪ್ಲೆಕ್ಸ್‌ಗಳನ್ನೂ ಹೊಂದಿದೆ. ಟಾಲಿವುಡ್‌‌ (ತೆಲುಗು ಚಿತ್ರರಂಗ) ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ತಯಾರಿಸುತ್ತದೆ. NTR ರವರು ಟಾಲಿವುಡ್‌ನ ದಂತಕತೆಯಾಗಿದ್ದಾರೆ.ಇವರು ತಮ್ಮ ಪಕ್ಷ ಸ್ಥಾಪಿಸಿದ ೯ ತಿಂಗಳಲ್ಲೇ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ಇದೊಂದು ವಿಶ್ವದಾಖಲೆ ಮತ್ತು ಈವರೆಗೆ ಯಾರೂ ಈ ಸಾಧನೆ ಮಾಡಿಲ್ಲ. ಸಂಗೀತ ರಾಜ್ಯವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂದೇ ಹೆಸರಾಗಿರುವ ತ್ಯಾಗರಾಜರು, ಅನ್ನಮಾಚಾರ್ಯರು, ಕ್ಷೇತ್ರಯ್ಯನವರೂ ಸೇರಿದಂತೆ ಭದ್ರಾಚಲ ರಾಮದಾಸುರವರಂತಹ ಕರ್ನಾಟಕ ಸಂಗೀತದ ಅನೇಕ ಪ್ರಸಿದ್ಧರು ತೆಲುಗು ಪರಂಪರೆಗೆ ಸೇರಿದವರು. ಮಹಾನ್‌‌ ಮ್ಯಾಂಡೋಲಿನ್‌ ವಾದಕ ಮ್ಯಾಂಡೋಲಿನ್‌ ಶ್ರೀನಿವಾಸ್‌ ಕೂಡ ಆಂಧ್ರ ಪ್ರದೇಶದವರು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಹಾಡುಗಳೂ ಬಹಳ ಜನಪ್ರಿಯವಾಗಿವೆ.ಕರ್ನಾಟಕ ಸಂಗೀತದಲ್ಲಿ ಮತ್ತಷ್ಟು ರಾಗಗಳನ್ನು ಸೃಷ್ಟಿಸಿದ, ಕರ್ನಾಟಕ ಸಂಗೀತದ ಮಹಾನ್‌ ಗಾಯಕರಾದ ಶ್ರೀ ಮಂಗಳಂಪಲ್ಲಿ ಬಾಲಮುರಳಿಕೃಷ್ಣ ರವರು ಕೂಡ ತೆಲುಗು ಪರಂಪರೆಗೆ ಸೇರಿದವರು. ಧರ್ಮ ಎಲ್ಲ ಜಾತಿಗಳ ಹಿಂದೂ ಸಂತರು ಆಂಧ್ರ ಪ್ರದೇಶದಲ್ಲಿ ನೆಲೆ ಕಂಡಿದ್ದಾರೆ. ಸಂತ ಯೋಗಿ ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಯವರು ಹಿಂದುಳಿದ ವರ್ಗಕ್ಕೆ ಸೇರಿದ ಓರ್ವ ಪ್ರಮುಖ ವ್ಯಕ್ತಿಯಾಗಿದ್ದು, ವಿಶ್ವಬ್ರಾಹ್ಮಣ (ಅಕ್ಕಸಾಲಿಗ) ಜಾತಿಯಲ್ಲಿ ಜನಿಸಿದ್ದರೂ ಸಹ, ಬ್ರಾಹ್ಮಣ, ಹರಿಜನ ಮತ್ತು ಮುಸ್ಲಿಂ ಅನುಯಾಯಿಗಳನ್ನು ಹೊಂದಿದ್ದರು. ಬೆಸ್ತರಾಗಿದ್ದ ರಘು ಕೂಡ ಶೂದ್ರರಾಗಿದ್ದರು. ಸಂತ ಕಕ್ಕಯ್ಯ ಚೂರ(ಚಮ್ಮಾರ) ಹರಿಜನ ಸಂತರಾಗಿದ್ದರು. ಆಧುನಿಕ ಕಾಲದ ಹಲವಾರು ಪ್ರಮುಖ ಹಿಂದೂ ಸಂತರು ಆಂಧ್ರ ಪ್ರದೇಶದಿಂದ ಬಂದಿದ್ದಾರೆ. ಅವರೆಂದರೆ, ದ್ವೈತಾದ್ವೈತ ತತ್ವವನ್ನು ಸ್ಥಾಪಿಸಿದ ನಿಂಬರ್ಕ, ಭಾರತ ಸ್ವಾತಂತ್ರ್ಯದ ಪ್ರತಿಪಾದನೆ ಮಾಡಿದ ತಾಯಿ ಮೀರಾ, ದೈವಾರಾಧನೆಯಲ್ಲಿ ಧಾರ್ಮಿಕ ಐಕ್ಯತೆಯನ್ನು ಪ್ರತಿಪಾದಿಸಿದ ಶ್ರೀ ಸತ್ಯ ಸಾಯಿ ಬಾಬಾ, ಸ್ವಾಮಿ ಸುಂದರ ಚೈತನ್ಯಾನಂದಜೀ ಮತ್ತು ಅರಬಿಂದೋ ಮಿಷನ್‌. ತೀರ್ಥಯಾತ್ರಾ ಮತ್ತು ಧಾರ್ಮಿಕ ಸ್ಥಳಗಳು thumb|right|250px|ತಿರುಮಲ ವೆಂಕಟೇಶ್ವರ ದೇವಸ್ಥಾನ, ತಿರುಪತಿಯಲ್ಲಿರುವ ಅತಿ ಮುಖ್ಯವಾದ ಯಾತ್ರಾಸ್ಥಳ ಭಾರತದಾದ್ಯಂತ ಇರುವ ಹಿಂದೂಗಳಿಗೆ ತಿರುಪತಿ ಅಥವಾ ತಿರುಮಲ ಒಂದು ಬಹು ಮುಖ್ಯ ಯಾತ್ರಾಸ್ಥಳವಾಗಿದೆ. ಇದು ಇಡೀ ಜಗತ್ತಿನಲ್ಲಿನ (ಯಾವುದೇ ಧಾರ್ಮಿಕ ನಂಬುಗೆಗೆ ಸೇರಿದವುಗಳ ಪೈಕಿ) ಅತಿ ಶ್ರೀಮಂತ ಯಾತ್ರಾನಗರವಾಗಿದೆ. ಇದರ ಮುಖ್ಯ ದೇವಸ್ಥಾನವು ವೆಂಕಟೇಶ್ವರದೇವರಿಗೆ ಸಮರ್ಪಣೆಯಾಗಿದೆ. ತಿರುಪತಿಯು ಚಿತ್ತೂರ್ ಜಿಲ್ಲೆಯಲ್ಲಿದೆ. ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂನಲ್ಲಿರುವ ಪ್ರಸಿದ್ಧ ದೇವಸ್ಥಾನ. ಸಿಂಹಾಚಲಂ ಮತ್ತೊಂದು ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಸಿಂಹಾಚಲಂ ಯಾತ್ರಾಸ್ಥಳವು, ಪ್ರಹ್ಲಾದನನ್ನು ಅವನ ದುಷ್ಠ ತಂದೆ ಹಿರಣ್ಯಕಶಿಪುವಿನಿಂದ ರಕ್ಷಿಸಿದ ಸಂರಕ್ಷಕ ದೇವರಾದ ನರಸಿಂಹನ ನೆಲೆಬೀಡಾಗಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ. ವಿಜಯವಾಡ ನಗರದಲ್ಲಿರುವ ಕನಕ ದುರ್ಗ ದೇವಸ್ಥಾನ ಆಂಧ್ರ ಪ್ರದೇಶದ ಜನಪ್ರಿಯ ದೇವಸ್ಥಾನಗಳಲ್ಲೊಂದು. ಶ್ರೀ ಕಾಳಹಸ್ತಿ ಯು ಬಹಳ ಮುಖ್ಯವಾದ ಪ್ರಾಚೀನ ಶಿವನ ದೇವಸ್ಥಾನಗಳಲ್ಲಿ ಒಂದಾಗಿದ್ದು, ಚಿತ್ತೂರ್‌‌ ಜಿಲ್ಲೆಯಲ್ಲಿನ ಸ್ವರ್ಣಮುಖಿ ನದಿಯ ದಡದಲ್ಲಿದೆ. ಸಿಂಹಾಚಲಂ ಕ್ಷೇತ್ರವು ಪರ್ವತದ ಮೇಲಿರುವ ಪುಣ್ಯಕ್ಷೇತ್ರವಾಗಿದ್ದು ವಿಶಾಖಪಟ್ಟಣಂನಿಂದ ೧೬ ಕಿ.ಮೀ.ನಷ್ಟು ದೂರದಲ್ಲಿದೆ ಹಾಗೂ ನಗರದ ಉತ್ತರ ದಿಕ್ಕಿನಲ್ಲಿರುವ ಬೆಟ್ಟದ ಮತ್ತೊಂದು ಭಾಗದಲ್ಲಿದೆ. ಇದು ಅತಿ ಮನೋಹರ ಶಿಲ್ಪಕಲೆಯನ್ನು ಒಳಗೊಂಡ ಆಂಧ್ರ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ದಟ್ಟವಾದ ಅರಣ್ಯದಿಂದ ಆವೃತವಾಗಿರುವ ಬೆಟ್ಟಗಳ ಮಧ್ಯದಲ್ಲಿ ಸ್ಥಾಪಿತಗೊಂಡಿದೆ. ಅತ್ಯಂತ ಸುಂದರವಾಗಿ ಕೆತ್ತಲಾಗಿರುವ ೧೬ ಕಂಬಗಳ ನಾಟ್ಯ ಮಂಟಪ ಮತ್ತು ೯೬ ಕಂಬಗಳ ಕಲ್ಯಾಣ ಮಂಟಪಗಳು ದೇವಸ್ಥಾನದ ಉತ್ಕೃಷ್ಠ ವಾಸ್ತುಶೈಲಿಗೆ ಸಾಕ್ಷಿಯಾಗಿವೆ. ತನ್ನ ಸ್ಥಾನವನ್ನು ಅಲಂಕರಿಸಿರುವ ದೈವವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಗೆ ಚಂದನದ ದಪ್ಪ ಲೇಪನವನ್ನು ಮಾಡಲಾಗಿದೆ. ಇದು, ವಿಷ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ಸ್ವಾಮಿಗೆ ಸಮರ್ಪಿಸಲಾದ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, ಚೋಳರ ದೊರೆಯಾದ ಕುಲೋತ್ತುಂಗ ೧೧ ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ. ಒಡಿಶಾದ ಗಜಪತಿ ದೊರೆಗಳ ಮೇಲೆ ವಿಜಯಿಯಾಗಿ ಹೊರಹೊಮ್ಮಿದ ನೆನಪಿಗಾಗಿ ಶ್ರೀ ಕೃಷ್ಣ ದೇವರಾಯನು ಸ್ಥಾಪಿಸಿದ ವಿಜಯ ಸ್ಢಂಭ ಇಲ್ಲಿದೆ. ಈ ದೇವಸ್ಥಾನದಲ್ಲಿ ಪ್ರಾಚೀನ ತೆಲುಗು ಶಾಸನಗಳನ್ನು ಕಾಣಬಹುದು. ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು.ಇದು ದ್ರಾವಿಡ (ದಕ್ಷಿಣ ಭಾರತದ) ವಾಸ್ತುಶೈಲಿಯನ್ನು ಹೊಂದಿದೆ.ನೆರೆಹಾವಳಿ, ಚಂಡಮಾರುತ, ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳಿಂದ ವೈಜಾಗ್‌ನ್ನು ಈ ಸ್ವಾಮಿಯು ರಕ್ಷಿಸುತ್ತಿದ್ದಾನೆ ಎಂಬ ಜನಪ್ರಿಯ ನಂಬಿಕೆಯು ಇಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಇಲ್ಲಿಯವರೆಗೂ ನೈಸರ್ಗಿಕ ವಿಕೋಪಗಳಿಂದ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ. ಪತಿ-ಪತ್ನಿಯಾಗ ಬಯಸುವ ಜೋಡಿಗಳು ಮದುವೆಗೆ ಮುಂಚೆ ಈ ದೇವಸ್ಥಾನಕ್ಕೆ ಹೋಗುವುದು ಒಂದು ವಾಡಿಕೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂದಣಿಯಿರುವ ಕೂಡಿರುವ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದು. thumb|250px|right|ಹುಸೇನ್‌ ಸಾಗರ್ ಸರೋವರದ ಮೇಲಿನ ಬುದ್ಧನ ವಿಗ್ರಹ ಶ್ರೀ ಶೈಲಂ, ಆಂಧ್ರ ಪ್ರದೇಶದ ಮತ್ತೊಂದು ಮಹತ್ವದ ದೇವಾಲಯವಾಗಿದ್ದು, ಇದೂ ಕೂಡ ರಾಷ್ಟ್ರಮಟ್ಟದ ಪ್ರಾಮುಖ್ಯತೆಯನ್ನು ಪಡೆದಿದೆ. ಇದು ಶಿವ ದೇವರಿಗೆ ಸಮರ್ಪಿಸಲ್ಪಟ್ಟಿರುವ ದೇವಾಲಯವಾಗಿದೆ. ವಿವಿಧ ಜ್ಯೋತಿರ್ಲಿಂಗಗಳಿರುವ ಹಲವು ಸ್ಥಳಗಳ ಪೈಕಿ ಇದೂ ಒಂದಾಗಿದೆ. ಸ್ಕಂದ ಪುರಾಣ ದಲ್ಲಿ "ಶ್ರೀ ಶೈಲ ಕಾಂಡಂ' ಎಂಬ ಅಧ್ಯಾಯವಿದ್ದು ಅದು ಸಂಪೂರ್ಣವಾಗಿ ಈ ಸ್ಥಳಕ್ಕೇ ಸಂಬಂಧಿಸಿದ್ದಾಗಿದೆ. ಈ ಅಧ್ಯಾಯದಲ್ಲಿ ಈ ಸ್ಥಳದ ಪ್ರಾಚೀನ ಮೂಲದ ಬಗ್ಗೆ ಉಲ್ಲೇಖವಿದೆ. ಕಳೆದ ಸಹಸ್ರಮಾನದ ತಮಿಳು ಸಂತರು ಈ ದೇವಾಲಯದ ಕುರಿತು ಹಾಡಿ ಹೊಗಳಿರುವುದರಿಂದಲೂ ಇದರ ಪ್ರಾಚೀನತೆಯು ದೃಢಪಟ್ಟಿದೆ.ಆದಿ ಶಂಕರರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ಆ ಸಮಯದಲ್ಲಿಯೇ ತಮ್ಮ "ಶಿವಾನಂದ ಲಹರಿ "ಯನ್ನು ರಚಿಸಿದರು ಎಂದು ಹೇಳಲಾಗಿದೆ. ಶಿವನ ಪವಿತ್ರ ಬಸವನಾಗಿರುವ ವೃಷಭನು, ಶಿವ ಮತ್ತು ಪಾರ್ವತಿಯರು ತನ್ನ ಎದುರು ಮಲ್ಲಿಕಾರ್ಜುನ ಮತ್ತು ಭ್ರಮರಾಂಬರ ರೂಪದಲ್ಲಿ ಕಾಣಿಸಿಕೊಳ್ಳುವವರೆಗೂ ಮಹಾಕಾಳಿ ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದ ಎಂಬುದೊಂದು ನಂಬಿಕೆಯಿದೆ. ಈ ದೇವಸ್ಥಾನವು ೧೨ ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಶ್ರೀರಾಮ ಸ್ವಾಮಿಯು ಸ್ವತಃ ಇಲ್ಲಿ ಸಹಸ್ರಲಿಂಗಗಳನ್ನು ಪ್ರತಿಷ್ಠಾಪಿಸಿದ; ಜೊತೆಗೆ ಪಾಂಡವರು ಪಂಚಪಾಂಡವ ಲಿಂಗಗಳನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಶ್ರೀ ಶೈಲಂ ಕ್ಷೇತ್ರವು ಕರ್ನೂಲ್‌ ಜಿಲ್ಲೆಯಲ್ಲಿದೆ. thumb|left|250px|ಸಿಂಹಾಚಲಂ ದೇವಸ್ತಾನದಲ್ಲಿನ ಮಂಪಟ ಭದ್ರಾಚಲಂ ಕ್ಷೇತ್ರವು, ಶ್ರೀರಾಮನ ದೇವಸ್ಥಾನ ಮತ್ತು ಗೋದಾವರಿ ನದಿಗಾಗಿ ಹೆಸರುವಾಸಿಯಾಗಿದೆ. ಶ್ರೀರಾಮನನ್ನು ಕುರಿತು ಅವನ ಪರಮ ಭಕ್ತನಾದ ರಾಮದಾಸು(ಮೂಲದಲ್ಲಿ-ಕಂಚೇರ್ಲ ಗೋಪಣ್ಣ) ತನ್ನ ಭಕ್ತಿಗೀತೆಗಳನ್ನು ಬರೆದದ್ದು ಇದೇ ಸ್ಥಳದಲ್ಲಿ. ತ್ರೇತಾಯುಗದಲ್ಲಿ ಶ್ರೀರಾಮನು ಇದೇ ಗೋದಾವರಿ ನದಿಯ ದಡದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದನು ಎಂಬ ನಂಬಿಕೆಯಿದೆ. ಭದ್ರ ಎಂಬ ಒಂದು ಪರ್ವತವು ಸುದೀರ್ಘವಾದ ತಪಸ್ಸಿನ ನಂತರ, ತನ್ನ ಮೇಲೆಯೇ ಚಿರಕಾಲ ನೆಲೆಸುವಂತೆ ಶ್ರೀರಾಮನನ್ನು ಕೋರಿತು ಎಂಬುದಾಗಿ ಒಂದು ದಂತಕಥೆಯಿದೆ. ಶ್ರೀರಾಮ ನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣರೊಡಗೂಡಿ ಭದ್ರಗಿರಿಯಲ್ಲಿಯೇ ನೆಲೆಸುವುದಾಗಿ ಹೇಳಿದನು ಎಂದು ಪ್ರತೀತಿಯಿದೆ. ಭದ್ರಾಚಲಂ ಕ್ಷೇತ್ರವು ಖಮ್ಮಮ್ ಜಿಲ್ಲೆಯಲ್ಲಿದೆ. ೧೭ನೇ ಶತಮಾನದಲ್ಲಿ ತಾನಿಶನ ಆಳ್ವಿಕೆಯ ಕಾಲದಲ್ಲಿ ಗೋಪಣ್ಣನು ಜನರಿಂದ ದೇಣಿಗೆ ಸಂಗ್ರಹಿಸಿ ರಾಮನಿಗಾಗಿ ಈ ದೇವಸ್ಥಾನವನ್ನು ನಿರ್ಮಿಸಿದನು. ಅವನು ರಾಮ-ಸೀತಾರ ಕಲ್ಯಾಣವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಪ್ರತಿವರ್ಷ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಭದ್ರಾಚಲಂನಲ್ಲಿ ನಡೆಯುವ ಈ ಆಚರಣೆಗೆ ಆಂಧ್ರ ಪ್ರದೇಶ ಸರ್ಕಾರವು ಪ್ರತಿ ವರ್ಷವೂ ಮುತ್ತುಗಳನ್ನು ಕಳಿಸುತ್ತದೆ. ಬಸರ್‌-ಸರಸ್ವತಿ ದೇವಸ್ಥಾನವು, ವಿದ್ಯಾದೇವತೆ ಸರಸ್ವತಿಯ ಮತ್ತೊಂದು ಪ್ರಸಿದ್ಧ ಸ್ಥಳ. ಬಸರಾ ಕ್ಷೇತ್ರವು ಅದಿಲಾಬಾದ್‌ ಜಿಲ್ಲೆಯಲ್ಲಿದೆ. ಯಾಗಂಟಿ ಗುಹೆಗಳು ಕೂಡ ಆಂಧ್ರ ಪ್ರದೇಶದ ಮತ್ತೊಂದು ಬಹುಮುಖ್ಯ ಯಾತ್ರಾ ಸ್ಥಳವಾಗಿದೆ. ಮಹಾನಂದಿಯನ್ನು ಹೊರತುಪಡಿಸಿ ಕರ್ನೂಲ್‌ ಜಿಲ್ಲೆಯು ಮತ್ತೊಂದು ಯಾತ್ರಾ ಕೇಂದ್ರವಾಗಿದ್ದು ಹಸಿರಿನಿಂದ ಕೂಡಿದೆ.ಪ್ರಸಿದ್ಧ ಹಿಂದೂ ಬಿರ್ಲಾ ಮಂದಿರ, ಮತ್ತು ರಾಮಪ್ಪ ದೇವಸ್ಥಾನ, ಮುಸ್ಲಿಂರ ಮೆಕ್ಕಾ ಮಸೀದಿ ಮತ್ತು ಚಾರ್ಮಿನಾರ್‌, ಜೊತೆಗೆ ಹುಸೇನ್‌ ಸಾಗರ್‌ ಜಲಾಶಯದ ಮೇಲಿರುವ ಬುದ್ಧನ ಪ್ರತಿಮೆ ಮುಂತಾದುವುಗಳು ಆಂಧ್ರ ಪ್ರದೇಶದ ಮನಮೋಹಕ ಧಾರ್ಮಿಕ ಸ್ಮಾರಕಗಳಾಗಿವೆ. thumb|right|250px|ರಾಮಪ್ಪ ದೇವಸ್ಥಾನ ಕನಕದುರ್ಗ ದೇವಸ್ಥಾನವು ಭಾರತದ ಆಂಧ್ರ ಪ್ರದೇಶದಲ್ಲಿನ ಮತ್ತೊಂದು ಪ್ರಖ್ಯಾತ ದೇವಸ್ಥಾನವಾಗಿದೆ.ಕೃಷ್ಣಾ ನದಿಯ ದಂಡೆಯ ಮೇಲಿರುವ ವಿಜಯವಾಡ ನಗರದ ಇಂದ್ರಕೀಲಾದ್ರಿ ಪರ್ವತದ ಮೇಲೆ ಈ ದೇವಸ್ಥಾನ ಸ್ಥಾಪಿತವಾಗಿದೆ. ಹಚ್ಚಹಸಿರಿನಿಂದ ಆವೃತವಾಗಿರುವ ಈಗಿನ ವಿಜಯವಾಡ ಹಿಂದೆ ಕಲ್ಲುಬಂಡೆಗಳ ಪ್ರಾಂತ್ಯವಾಗಿದ್ದು, ದಿಣ್ಣೆಗಳಿಂದ ತುಂಬಿಕೊಂಡಿದ್ದರಿಂದಾಗಿ ಕೃಷ್ಣಾ ನದಿಯ ಹರಿವಿಗೆ ತಡೆಯೊಡ್ಡುತ್ತಿತ್ತು ಎಂದು ದಂತಕಥೆಯೊಂದು ಹೇಳುತ್ತದೆ. ಹೀಗಾಗಿ ಆ ಭೂಮಿಯು ವಾಸ ಮಾಡುವುದಕ್ಕಾಗಲೀ ವ್ಯವಸಾಯಕ್ಕಾಗಲೀ ಯೋಗ್ಯವಾಗಿರಲಿಲ್ಲ. ಶಿವನನ್ನು ಪ್ರಾರ್ಥಿಸಿದಾಗ, ಅವನ ಆಜ್ಞಾಪನೆಯ ಮೇರೆಗೆ ಪರ್ವತಗಳು ಕೃಷ್ಣಾ ನದಿ ಹರಿಯಲು ದಾರಿ ಮಾಡಿಕೊಟ್ಟವು. ಅದು ಆದದ್ದೇ ತಡ!ಕೃಷ್ಣಾ ನದಿಯು ಬೆಟ್ಟದಲ್ಲಿ ಶಿವನು ಕೊರೆದ ಸುರಂಗಗಳ ಅಥವಾ "ಬೆಜ್ಜಮ್‌" ಮೂಲಕ ಯಾವುದೇ ಅಡೆತಡೆಯಿಲ್ಲದೆ ರಭಸದಿಂದ ಹರಿಯಲು ಪ್ರಾರಂಭಿಸಿತು. ಹೀಗೆ ಆ ಸ್ಥಳ ಬೆಜವಾಡ ಎಂಬ ಹೆಸರು ಪಡೆಯಿತು. ಹಲವು ಪುರಾಣಗಳಲ್ಲೊಂದು ಈ ಸ್ಥಳದೊಂದಿಗೆ ಸಂಬಂಧ ಹೊಂದಿದೆ. ಅದೆಂದರೆ, ಶಿವನಿಂದ ವರ ಪಡೆಯಲು ಅರ್ಜುನ ಶಿವವನ್ನು ಕುರಿತು ಇಂದ್ರಕೀಲ ಪರ್ವತದ ಮೇಲೆ ಕುಳಿತು ತಪಸ್ಸು ಮಾಡಿದನು. ನಂತರ ಅರ್ಜುನ ಶಿವನಿಂದ ವರ ಪಡೆದು ವಿಜಯಿಯಾದನು. ಈ ನಗರಕ್ಕೆ "ವಿಜಯವಾಡ" ಎಂದು ಹೆಸರು ಬರಲು ಇದೇ ಕಾರಣವಾಯಿತು. ಅಸುರಾಧಿಪತಿ ಮಹಿಷಾಸುರನನ್ನು ಸಂಹರಿಸಿದ ಕನಕದುರ್ಗ ದೇವತೆಯ ವಿಜಯೋತ್ಸವದ ಕುರಿತು ಮತ್ತೊಂದು ಜನಪ್ರಿಯ ದಂತಕಥೆಯಿದೆ. ಒಂದಾನೊಂದು ಕಾಲದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನತೆಗೆ ರಾಕ್ಷಸರ ಕಾಟವು ಅತಿಯಾಗಿ ಸಹಿಸಲು ಅಸಾಧ್ಯವಾಗಿತ್ತು. ಆಗ ಇಂದ್ರಕೀಲ ಋಷಿಯು ಉಗ್ರವಾಗಿ ತಪಸ್ಸು ಮಾಡಿದನು. ಅದನ್ನು ಮೆಚ್ಚಿ ದೇವತೆಯು ಪ್ರತ್ಯಕ್ಷಳಾದಾಗ, ತನ್ನ ತಲೆಯ ಮೇಲೆ ಆಕೆಯು ನೆಲೆಸಿ ದುರುಳ ರಾಕ್ಷಸರಿಂದ ರಕ್ಷಣೆ ಒದಗಿಸಬೇಕೆಂದು ಋಷಿಯು ಪ್ರಾರ್ಥಿಸಿದನು. ಋಷಿಯ ಕೋರಿಕೆಯ ಮೇರೆಗೆ, ರಾಕ್ಷಸರನ್ನು ಸಂಹರಿಸಿದ ದುರ್ಗಾ ದೇವತೆಯು ಇಂದ್ರಕೀಲದಲ್ಲಿ ಶಾಶ್ವತವಾಗಿ ನೆಲೆಸಿದಳು. ತದನಂತರ, ಅವಳು ರಾಕ್ಷಸದೊರೆ ಮಹಿಷಾಸುರರನ್ನು ಸಂಹರಿಸಿ ವಿಜಯವಾಡದ ಜನರನ್ನು ರಾಕ್ಷಸರ ದುಷ್ಟ ಹಿಡಿತದಿಂದ ರಕ್ಷಿಸಿದಳು. ನವರಾತ್ರಿ ಎಂದು ಕರೆಯುವ ದಸರಾ ಹಬ್ಬದ ಸಮಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಮಹತ್ವವಾದವುಗಳೆಂದರೆ, ಸರಸ್ವತಿ ಪೂಜೆ ಮತ್ತು ತೆಪ್ಪೋತ್ಸವ. ದುರ್ಗಾ ದೇವತೆಗಾಗಿ ದಸರಾ ಹಬ್ಬವನ್ನು ಇಲ್ಲಿ ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳು ಈ ವರ್ಣಮಯ ಆಚರಣೆಯಲ್ಲಿ ಭಾಗವಹಿಸಿ ನಂತರ ಕೃಷ್ಣಾ ನದಿಯಲ್ಲಿ ಮಿಂದು ಪುನೀತರಾಗುತ್ತಾರೆ. ಇತರೆ ಸಾಂಸ್ಕೃತಿಕ ವಿಚಾರಗಳು ಬಾಪೂರವರ ಚಿತ್ರಕಲೆ, ನಂದೂರಿ ಸುಬ್ಬರಾವ್‌ ಅವರ ಯೆಂಕಿ ಪಾಟಲು ,(ಯೆಂಕಿ ಎಂದು ಕರೆಯಲ್ಪಡುವ ಅಗಸಗಿತ್ತಿಯ/ಅವಳ ಕುರಿತಾದ ಹಾಡುಗಳು), ತುಂಟ ಬುಡುಗು,(ಮುಲ್ಲಪುಡಿಯವರಿಂದ ರಚನೆಯಾದ ಪಾತ್ರ), ಅನ್ನಮಯ್ಯನ ಹಾಡುಗಳು, ಅವಕಾಯ (ವಿಭಿನ್ನವಾದ ಒಂದು ಬಗೆಯ ಮಾವಿನ ಉಪ್ಪಿನ ಕಾಯಿ, ಇದರಲ್ಲಿ ಮಾವಿನ ಓಟೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುತ್ತದೆ), ಗೊಂಗುರ (ದಾಸವಾಳದ ಜಾತಿಯ ಗಿಡದಿಂದ ಮಾಡಲಾದ ಚಟ್ನಿ), ಅಟ್ಲ ತಡ್ಡಿ (ಹದಿಹರೆಯದ ಹುಡುಗಿಯರಿಗೆಂದೇ ಆಚರಿಸಲಾಗುವ ವಿಶೇಷವಾದ ಋತುಕಾಲಿಕ ಹಬ್ಬ.) ಗೋದಾವರಿ ನದಿಯ ದಂಡೆಗಳು, ದೂಡು ಬಸವಣ್ಣ (ಸುಗ್ಗಿಯ ಹಬ್ಬವಾದ ಸಂಕ್ರಾಂತಿಯ ಸಮಯದಲ್ಲಿ ಸಾಂಪ್ರದಾಯಿಕ ಬಸವನನ್ನು ಸಿಂಗರಿಸಿ ಮನೆ ಮನೆಗೆ ಕರೆದೊಯ್ದು ಪ್ರದರ್ಶಿಸುವ ಒಂದು ಆಚರಣೆ) ಮುಂತಾದ ಹಬ್ಬ-ಆಚರಣೆಗಳು ತೆಲುಗು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಮೆದು ಕಲ್ಲುಗಳಲ್ಲಿ ವಿಗ್ರಹಗಳನ್ನು ಕೆತ್ತುವುದಕ್ಕೆ ಸಂಬಂಧಿಸಿದ ಶಿಲ್ಪಕಲಾ ಕುಶಲತೆಗಾಗಿ ದುರ್ಗಿಯ ಹಳ್ಳಿಯು ಹೆಸರುವಾಸಿಯಾಗಿದೆ. ಈ ಮೆದುಕಲ್ಲುಗಳು ಕೆಟ್ಟ ಹವಾಗುಣಕ್ಕೆ ಗುರಿಯಾಗುವ ಸಂಭವವಿರುತ್ತವೆಯಾದ್ದರಿಂದ ಅವುಗಳನ್ನು ನೆರಳಿನಟ್ಟು ಪ್ರದರ್ಶಿಸುವುದು ಅಗತ್ಯವಾಗಿರುತ್ತದೆ. 'ಕಲಂಕಾರಿ' ಅತ್ಯಂತ ಪ್ರಾಚೀನ ಕಲಾಪ್ರಕಾರವಾಗಿದ್ದು, ಇದರ ಇತಿಹಾಸ ಹರಪ್ಪ ನಾಗರಿಕತೆಯವರೆಗೂ ಹೋಗುತ್ತದೆ. ಗೊಂಬೆ ತಯಾರಿಕೆಗೂ ಆಂಧ್ರ ಹೆಸರುವಾಸಿಯಾಗಿದೆ. ಗೊಂಬೆಗಳನ್ನು ಮರ, ಮಣ್ಣು, ಒಣ ಹುಲ್ಲು, ಮತ್ತು ಹಗುರವಾದ ಮಿಶ್ರಲೋಹಗಳಿಂದ ತಯಾರಿಸಲಾಗುತ್ತದೆ. ತಿರುಪತಿಯು ಮಂಜತ್ತಿಮರದ ಕೆತ್ತನೆಗಳಿಗೆ ಹೆಸರವಾಸಿಯಾಗಿದೆ. ಸಮೃದ್ಧವಾದ ಬಣ್ಣಗಳನ್ನು ಹೊಂದಿರುವ ಮಣ್ಣಿನ ಗೊಂಬೆಗಳಿಗೆ ಕೊಂಡಪಲ್ಲಿ ಹೆಸರುವಾಸಿಯಾಗಿದೆ. ವಿಶಾಖಪಟ್ಟಣದಲ್ಲಿ ನೆಲೆಗೊಂಡಿರುವ ಈಟಿಕೊಪ್ಪವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ. ನಿರ್ಮಲ್‌ ಚಿತ್ರಕಲೆಯು ಅಭಿವ್ಯಕ್ತಿಗೆ ಒತ್ತುಕೊಡುವ ಪ್ರಕಾರವಾಗಿದ್ದು ಅವುಗಳನ್ನು ಸಾಮಾನ್ಯವಾಗಿ ಕಪ್ಪು ಹಿನ್ನೆಲೆಯುಳ್ಳ ಮಾಧ್ಯಮದ ಮೇಲೆ ಚಿತ್ರಿಸಲಾಗುತ್ತದೆ. ಕಥಾ ನಿರೂಪಣಾ ಪ್ರಕಾರಕ್ಕೆ ಆಂಧ್ರದಲ್ಲಿ ತನ್ನದೇ ಆದ ಒಂದು ಸ್ಥಾನವಿದೆ. 'ಯಕ್ಷಗಾನಂ'‌, 'ಬುರ್ರ ಕಥಾ' (ಸಾಮಾನ್ಯವಾಗಿ ಮೂರು ಜನರಿಂದ ಮಾಡುವಂಥಾದ್ದಾಗಿದ್ದು, ಕಥೆಯನ್ನು ಹೇಳಲು ಮೂರು ವಿಭಿನ್ನ ಸಂಗೀತ ವಾದ್ಯಗಳನ್ನು ಬಳಸಿಕೊಳ್ಳಲಾಗುತ್ತದೆ), 'ಜಂಗಮ ಕಥಾಲು', 'ಹರಿ ಕಥಾಲು', 'ಚೆಕ್ಕ ಭಜನ', 'ಉರುಮುಲ ನಾಟ್ಯಂ'(ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಆಚರಿಸಲಾಗುವ ನೃತ್ಯವಾಗಿದ್ದು, ಭಾರೀ ಸಂಗೀತದ ಲಯಕ್ಕೆ ನೃತ್ಯಗಾರರ ತಂಡವು ವೃತ್ತಾಕಾರದಲ್ಲಿ ಕುಣಿಯುತ್ತದೆ), 'ಘಟ ನಾಟ್ಯಂ'(ಒಬ್ಬರ ತಲೆಯ ಮೇಲೆ ಮಣ್ಣಿಯ ಮಡಕೆಯನ್ನು ಇಟ್ಟು ಕುಣಿಯುವ ಪ್ರದರ್ಶನ ಕಲೆ) ಇವೆಲ್ಲವೂ ಪ್ರಖ್ಯಾತ ವಿಶಾಖಾ ಉತ್ಸವದಲ್ಲಿ ಆಚರಿಸಲಾಗುವ ಜಾನಪದ ನೃತ್ಯ ಪ್ರಕಾರಗಳಾಗಿದ್ದು, ಆಂಧ್ರ ಪ್ರದೇಶದ ಪಲುಮಾಂಬ ಜಾತ್ರೆಗೇ ಅನನ್ಯತೆಯನ್ನು ತಂದುಕೊಟ್ಟಿವೆ. ಶಿಕ್ಷಣ thumb|350px|right|ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ ಆಂಧ್ರ ಪ್ರದೇಶದಲ್ಲಿ ೨೦ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಬಹುತೇಕ ಎಲ್ಲಾ ಕಲಾ ಕೋರ್ಸುಗಳು, ಮಾನವ ಶಾಸ್ತ್ರಗಳು, ವಿಜ್ಞಾನ, ಎಂಜಿನಿಯರಿಂಗ್‌‌, ಕಾನೂನು, ಔಷಧ ವೈದ್ಯಶಾಸ್ತ್ರ, ವ್ಯವಹಾರ ಮತ್ತು ಪಶುವೈದ್ಯ ವಿಜ್ಞಾನ ಮುಂತಾದ ವಿಷಯಗಳಲ್ಲಿ ಇವು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ.ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲೂ ಅತ್ಯಾಧುನಿಕ ಸಂಶೋಧನೆಗಳು ನಡೆಯುತ್ತಿವೆ. ಆಂಧ್ರ ಪ್ರದೇಶದಲ್ಲಿ ೧೩೩೦ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳು; ೧೦೦೦ MBA ಮತ್ತು MCA ಕಾಲೇಜುಗಳು; ೫೦೦ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ೫೩ ವೈದ್ಯಕೀಯ ಕಾಲೇಜುಗಳಿವೆ. ಉನ್ನತ ಶಿಕ್ಷಣದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ೧೯:೧ರಷ್ಟು ಇದೆ. ೨೦೦೧ರ ಜನಗಣತಿಯ ಪ್ರಕಾರ ಆಂಧ್ರ ಪ್ರದೇಶವು ಒಟ್ಟಾರೆಯಾಗಿ ೬೦.೫%ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣವು ೭೦.೩%ರಷ್ಟು ಇದ್ದರೆ ಮಹಿಳಾ ಸಾಕ್ಷರತಾ ಪ್ರಮಾಣವು ೫೦.೪%ರಷ್ಟು ಮಾತ್ರ ಇದ್ದು, ಅದೇ ಕಳವಳಕ್ಕೆ ಕಾರಣವಾಗಿದೆ. ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ರಾಜ್ಯವು ಇತ್ತೀಚೆಗೆ ದಾಪುಗಾಲಿಟ್ಟಿದೆ. ಪ್ರತಿಷ್ಠಿತ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಸೈನ್ಸ್‌ (ಹೈದರಾಬಾದ್‌ನಲ್ಲಿರುವ BITS ಪಿಲಾನಿ ಆವರಣ) ಮತ್ತು IIT ಹೈದರಾಬಾದ್‌ನಂತಹ ಸಂಸ್ಥೆಗಳಿಗೆ ಆಂಧ್ರ ಪ್ರದೇಶವು ತವರು ಮನೆಯಾಗಿದೆ. ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಟೆಕ್ನಾಲಜಿ , ಹೈದರಾಬಾದ್ (IIIT-H), ಹೈದರಾಬಾದ್‌ ವಿಶ್ವವಿದ್ಯಾಲಯ(ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯ), ಮತ್ತು ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ (ISB), ಇವು ತಮ್ಮ ಗುಣಮಟ್ಟದ ಶಿಕ್ಷಣದಿಂದಾಗಿ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿವೆ. ದಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (NIFT) ಮತ್ತು ದಿ ಇನ್‌ಸ್ಟಿಟ್ಯೂಟ್‌ ಆಫ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌, ಕೇಟರಿಂಗ್‌ ಟೆಕ್ನಾಲಜಿ ಅಂಡ್‌‌ ಅಪ್ಲೈಡ್‌ ನ್ಯೂಟ್ರಿಷನ್‌ ಇವೂ ಕೂಡ ಹೈದರಾಬಾದ್‌ನಲ್ಲಿವೆ. ಪ್ರತಿಷ್ಠಿತ ಒಸ್ಮಾನಿಯಾ ವಿಶ್ವವಿದ್ಯಾಲಯ ಕೂಡ ಇರುವುದು ಹೈದರಾಬಾದ್‌ನಲ್ಲೇ. ಆಂಧ್ರ ಪ್ರದೇಶ ಸರ್ಕಾರವು ಮೊದಲ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದು, ತನ್ಮೂಲಕ ಇದು ಹಲವು ಸಮಿತಿಗಳ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಿದಂತಾಗಿದೆ. ಈ ರೀತಿಯಲ್ಲಿ, ಆಂಧ್ರ ಪ್ರದೇಶ ವಿಧಾನಸಭೆಯ ಕಾಯಿದೆ ಸಂಖ್ಯೆ ೬ರ ಪ್ರಕಾರ "ಆಂಧ್ರ ಪ್ರದೇಶ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು ಹಾಗೂ ದಿನಾಂಕ: ೯-೪-೧೯೮೬ರಂದು ಆಂಧ್ರ ಪ್ರದೇಶದ ಆಗಿನ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮ ರಾವ್‌ ಇದನ್ನು ಉದ್ಘಾಟಿಸಿದರು. ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿಜಯವಾಡದಲ್ಲಿ ದಿನಾಂಕ: ೦೧-೧೧-೧೯೮೬ರಿಂದ ಕಾರ್ಯಾರಂಭ ಮಾಡಿತು. ಇದರ ಸಂಸ್ಥಾಪಕರಾದ ಶ್ರೀ ಎನ್‌.ಟಿ.ರಾಮ ರಾವ್‌ರವರ ನಿಧನಾ ನಂತರ, ೧೯೯೮ರ ಅವಲೋಕಿಸುವ ಕಾಯಿದೆ ಸಂಖ್ಯೆ ೪ರ ಅನುಸಾರ, ದಿನಾಂಕ: ೨.೨.೯೮ರಂದು ಅನ್ವಯವಾಗುವಂತೆ, ಅವರ ಸ್ಮರಣೆಗಾಗಿ 'NTR ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ', ಆಂದ್ರ ಪ್ರದೇಶ ಎಂದು ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಲಾಯಿತು. ವೃತ್ತ ಪತ್ರಿಕೆಗಳು ಆಂಧ್ರ ಪ್ರದೇಶವು ತೆಲುಗು ಭಾಷೆಯ ಹಲವು ವೃತ್ತ ಪತ್ರಿಕೆಗಳನ್ನು ಹೊಂದಿದೆ. ಈನಾಡು , ಆಂಧ್ರ ಜ್ಯೋತಿ , ಸಾಕ್ಷಿ , ಪ್ರಜಾಶಕ್ತಿ , ವಾರ್ತಾ , ಆಂಧ್ರ ಭೂಮಿ , ವಿಶಾಲಾಂಧ್ರ , ಸೂರ್ಯಾ , ಮತ್ತು ಆಂಧ್ರ ಪ್ರಭ , ಇವು ರಾಜ್ಯದಲ್ಲಿನ ಪ್ರಮುಖ ತೆಲುಗು ಭಾಷಾ ವೃತ್ತಪತ್ರಿಕೆಗಳು. ಆಂಧ್ರ ಪ್ರದೇಶದ ಉರ್ದು ಭಾಷಾ ವೃತ್ತಪತ್ರಿಕೆಗಳೆಂದರೆ, ಸಿಯಾಸತ್‌ ಡೈಲಿ , ಮುನ್ಸಿಫ್‌ ಡೈಲಿ , ರೆಹ್ನುಮಾ-ಇ-ಡೆಕ್ಕನ್‌ , ಇತಿಮದ್ ಉರ್ದು ಡೈಲಿ , ಆವಾಂ ಮತ್ತು ಮಿಲಾಪ್‌ ಡೈಲಿ ಆಂಧ್ರ ಪ್ರದೇಶದಲ್ಲಿ ಇಂಗ್ಷೀಷ್‌ ಭಾಷೆಯ ಹಲವು ಪತ್ರಿಕೆಗಳೂ ಪ್ರಕಟವಾಗುತ್ತಿದ್ದು ಅವು ಇಂತಿವೆ, ಡೆಕ್ಕನ್‌ ಕ್ರಾನಿಕಲ್‌, ದಿ ಹಿಂದು , ದಿ ಟೈಮ್ಸ್ ಆಫ್ ಇಂಡಿಯಾ , ದಿ ನ್ಯೂ ಇಂಡಿಯನ್‌ ಎಕ್ಸ್‌‌ಪ್ರೆಸ್ , ದಿ ಎಕನಾಮಿಕ್‌ ಟೈಮ್ಸ್ , ದಿ ಬಿಸಿನೆಸ್‌ ಲೈನ್‌ ಹಿಂದಿ ಭಾಷೆಯ ಹಲವಾರು ವೃತ್ತಪತ್ರಿಕೆಗಳಿಗೂ ಆಂಧ್ರ ಪ್ರದೇಶ ತವರು ಮನೆಯಾಗಿದೆ. ಅವುಗಳೆಂದರೆ, ಸ್ವತಂತ್ರ ವಾರ್ತಾ , ವಿಶಾಖಪಟ್ಟಣಂ ನಿಜಾಮಾಬಾದ್‌ , ಮತ್ತು ಹೈದರಾಬಾದ್‌ನಿಂದ ಪ್ರಕಟವಾಗುವ ಅತ್ಯಂತ ಹಳೆಯ ಹಿಂದಿ ಪತ್ರಿಕೆಗಳಲ್ಲಿ ಒಂದಾದ ಹಿಂದಿ ಮಿಲಾಪ್‌ . ಪ್ರವಾಸೋದ್ಯಮ thumb|right|ಅರಕು ಕಣಿವೆ thumb|right|ಬೊರ್ರ ಗುಹೆಗಳು (ಇಳಿಬಿದ್ದಿರುವ ನೀರ್ಗೋಲುಳು ಮತ್ತು ನೆಲದಿಂದ ಮೇಲೆದ್ದಿರುವ ನೀರ್ಗೋಲುಗಳು ) thumb|right|ಬೆಲಂ ಗುಹೆಗಳು ಆಂಧ್ರ ಪ್ರದೇಶವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆಯು "ಭಾರತದ ಕೊಹಿನೂರ್‌ " ಎಂದು ಬಿಂಬಿಸಿದೆ. ಆಂಧ್ರ ಪ್ರದೇಶವು ಹಲವು ಧಾರ್ಮಿಕ ಯಾತ್ರಾ ಕೇಂದ್ರಗಳ ತವರೂರಾಗಿದೆ. ವೆಂಕಟೇಶ್ವರ ಸ್ವಾಮಿಯ ನೆಲೆಬೀಡಾದ ತಿರುಪತಿಯು ಪ್ರಪಂಚದಲ್ಲಿನ ಯಾತ್ರಾಕೇಂದ್ರಗಳ ಪೈಕಿ (ಯಾವುದೇ ಧರ್ಮದ) ಅತಿ ಹೆಚ್ಚು ಜನ ಯಾತ್ರಾರ್ಥಿಗಳು ಭೇಟಿ ಕೊಡುವ ಸ್ಥಳವಾಗಿದೆ. ನಲ್ಲಮಲ ಬೆಟ್ಟದಲ್ಲಿ ಸೇರಿಕೊಂಡಿರುವ ಶ್ರೀ ಶೈಲಂ ಕ್ಷೇತ್ರವು ಶ್ರೀ ಮಲ್ಲಿಕಾರ್ಜುನ ನ ನೆಲೆಬೀಡಾಗಿದ್ದು, ಭಾರತದಲ್ಲಿನ ಹನ್ನೆರಡು ಜ್ಯೋತಿರ್ಲಿಂಗ ಗಳಲ್ಲಿ ಒಂದಾಗಿದೆ. ಯಾದಗಿರಿಗುಟ್ಟವು ವಿಷ್ಣುವಿನ ಮತ್ತೊಂದು ಅವತಾರವಾಗಿರುವ ಶ್ರೀ ಲಕ್ಷ್ಮೀ ನರಸಿಂಹನ ಆವಾಸಸ್ಥಾನವಾಗಿರುವಂತೆಯೇ, ಅಮರಾವತಿಯ ಶಿವನ ದೇವಾಲಯವು ಪಂಚಾರಾಮಮ್‌ಗಳಲ್ಲಿ (ಐದು ದೇವಾಲಯಗಳಲ್ಲಿ) ಒಂದಾಗಿದೆ. ವಾರಂಗಲ್‌ನಲ್ಲಿನ ಸಾವಿರ ಕಂಬಗಳ ದೇವಸ್ಥಾನ ಮತ್ತು ರಾಮಪ್ಪ ದೇವಸ್ಥಾನಗಳು ತಮ್ಮ ದೇವಾಲಯದಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿವೆ. ಅಮರಾವತಿ, ನಾಗಾರ್ಜುನ ಕೊಂಡ, ಭಟ್ಟಿಪ್ರೊಲು, ಘಂಟಸಾಲ, ನೆಲಕೊಂಡಪಲ್ಲಿ, ಧೂಲಿಕಟ್ಟ, ಬಾವಿಕೊಂಡ, ಥೊಟ್ಲಕೊಂಡ, ಶಾಲಿಹುಂಡಂ, ಪವುರಾಲಕೊಂಡ, ಶಂಕರಂ, ಫಣಿಗಿರಿ ಮತ್ತು ಕೋಲನ್‌ಪಾಕ ಇವೇ ಮೊದಲಾದ ಸ್ಥಳಗಳಲ್ಲಿ ರಾಜ್ಯವು ಅಸಂಖ್ಯಾತ ಬೌದ್ಧ ಕೇಂದ್ರಗಳನ್ನು ಹೊಂದಿದೆ. ಬಾದಾಮಿ ಚಾಲುಕ್ಯರು (ಬಾದಾಮಿಯು ಕರ್ನಾಟಕದಲ್ಲಿದೆ.) ೬ನೇ ಶತಮಾನದಲ್ಲಿ ನಿರ್ಮಿಸಿರುವ ಆಲಂಪುರ್‌ ಭ್ರಮಾ ದೇವಸ್ಥಾನಗಳು ಚಾಲುಕ್ಯರ ಕಲೆ ಮತ್ತು ಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿವೆ. ವಿಜಯನಗರ ಸಾಮ್ರಾಜ್ಯವು ಅಸಂಖ್ಯಾತ ಸ್ಮಾರಕಗಳು, ಶ್ರೀಶೈಲಂ ದೇವಸ್ಥಾನ ಮತ್ತು ಲೇಪಾಕ್ಷಿ ದೇವಸ್ಥಾನಗಳನ್ನು ನಿರ್ಮಿಸಿತು. ವಿಶಾಖಪಟ್ಟಣಂನಲ್ಲಿರುವ ಗೋಲ್ಡನ್‌ ಬೀಚ್‌, ಬೊರ್ರದಲ್ಲಿನ ಒಂದು ದಶಲಕ್ಷ ವರ್ಷಗಳಷ್ಟು ಹಳೆಯದಾದ ಸುಣ್ಣದ ಕಲ್ಲಿನ ಗುಹೆಗಳು, ಚಿತ್ರಸದೃಶ ಅರಕು ಕಣಿವೆ, ಹಾರ್‌ಸ್ಲೆ ಬೆಟ್ಟಗಳ ಗಿರಿಧಾಮಗಳು, ಪಾಪಿ ಕೊಂಡಾಲು ವಿನಲ್ಲಿ ಕಿರಿದಾದ ಕಮರಿಯೊಂದರ ಮೂಲಕ ಹರಿಯುವ ಗೋದಾವರಿ ನದಿ, ಕುಂತಲ, ಎಟ್ಟಿಪೊತಾಲದಲ್ಲಿರುವ ಜಲಪಾತಗಳು ಮತ್ತು ತಲಕೋಣದಲ್ಲಿರುವ ಸಮೃದ್ಧ ಜೀವ-ವೈವಿಧ್ಯ ಇವೇ ಮೊದಲಾದವುಗಳು ರಾಜ್ಯದ ಕೆಲವೊಂದು ಪ್ರಾಕೃತಿಕ ಆಕರ್ಷಣೆಗಳಾಗಿವೆ. ವಿಶಾಖಪಟ್ಟಣಂನಲ್ಲಿನ ಸಮದ್ರತೀರಕ್ಕೆ ಸನಿಹದಲ್ಲಿ ಕೈಲಾಸಗಿರಿಯಿದೆ. ಕೈಲಾಸಗಿರಿಯ ಪರ್ವತದ ತುದಿಯಲ್ಲಿ ಒಂದು ಉದ್ಯಾನವನವಿದೆ. ವಿಶಾಖಪಟ್ಟಣಂ ಹಲವು ಪ್ರವಾಸೀ ಆಕರ್ಷಣೆಯ ತಾಣಗಳ ತವರು. ಅವುಗಳೆಂದರೆ, INS ಕರಶೂರ ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, (ಈ ತೆರನಾದ ವಸ್ತುಸಂಗ್ರಹಾಲಯ ಭಾರತದಲ್ಲೇ ಏಕೈಕ), ಭಾರತದಲ್ಲಿನ ಅತಿ ಉದ್ದದ ಕಡಲತೀರದ‌ ರಸ್ತೆಯನ್ನು ಹೊಂದಿರುವ ಯರಾಡ ಬೀಚ್‌, ಅರಕು ಕಣಿವೆ, VUDA ಉದ್ಯಾನವನ ಮತ್ತು ಇಂದಿರಾಗಾಂಧಿ ಮೃಗಾಲಯ ಇವೇ ಮೊದಲಾದವುಗಳು. thumb|left|ಬೊರ್ರ ಗುಹೆಗಳು thumb|left|ರಿಷಿಕೊಂಡ ಬೀಚ್ ಬೊರ್ರ ಗುಹೆಗಳು ಭಾರತದಲ್ಲಿನ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮೀಪದ ಪೂರ್ವ ಘಟ್ಟಗಳ ಅನಂತಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿವೆ. ಇವು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು ೮೦೦ ರಿಂದ ೧೩೦೦ ಮೀಟರ್‌ಗಳಷ್ಟು ಎತ್ತರದಲ್ಲಿದ್ದು, ದಶಲಕ್ಷ ವರ್ಷಗಳಷ್ಟು ಹಳೆಯದಾದ, ಗುಹೆಯ ಚಾವಣಿಯಿಂದ ಇಳಿಬಿದ್ದಿರುವ ನೀರ್ಗೋಲು ಹಾಗೂ ಗುಹೆಯ ನೆಲದಲ್ಲಿ ಎದ್ದು ನಿಂತಿರುವ ನೀರ್ಗೋಲುಗಳ ವ್ಯೂಹಕ್ಕೆ ಹೆಸರುವಾಸಿಯಾಗಿವೆ. ಬ್ರಿಟಿಷ್‌ ಭೂವಿಜ್ಞಾನಿಯಾದ ವಿಲಿಯಂ ಕಿಂಗ್‌ ಜಾರ್ಜ್‌, ೧೮೦೭ರಲ್ಲಿ ಈ ಗುಹೆಗಳನ್ನು ಪತ್ತೆಹಚ್ಚಿದನು. ಗುಹೆಯ ಒಳಭಾಗದಲ್ಲಿ ಕಂಡುಬರುವ ರಚನೆಯು ಮನುಷ್ಯನ ಮೆದುಳಿನಂತೆ ಕಾಣುತ್ತದೆ. ಸ್ಥಳೀಯ ಭಾಷೆಯಾದ ತೆಲುಗಿನಲ್ಲಿ ಮೆದುಳಿಗೆ ಬುರ್ರ ಎಂಬ ಹೆಸರಿದೆ. ಹೀಗಾಗಿ ಈ ಗುಹೆಗಳಿಗೆ ಆ ಹೆಸರು ಬಂದಿದೆ. ಇದೇ ರೀತಿಯಲ್ಲಿ, ದಶಲಕ್ಷ ವರ್ಷಗಳಷ್ಟು ಹಿಂದೆಯೇ ಈ ಪ್ರದೇಶದಲ್ಲಿನ ಸುಣ್ಣದ ಕಲ್ಲಿನ ನಿಕ್ಷೇಪಗಳು ಚಿತ್ರಾವತಿ ನದಿಯಿಂದ ಸವಕಳಿಗೆ ಒಳಗಾಗಿದ್ದರಿಂದಾಗಿ ಬೆಲಂ ಗುಹೆಗಳು ರೂಪುಗೊಂಡವು. ಸುಣ್ಣದ ಕಲ್ಲು ಮತ್ತು ನೀರಿನ ನಡುವಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ದುರ್ಬಲ ಆಮ್ಲೀಯ ಅಂತರ್ಜಲ ಅಥವಾ ಕಾರ್ಬಾನಿಕ್‌ ಆಮ್ಲದ ಕ್ರಿಯೆಯಿಂದಾಗಿ ಈ ಸುಣ್ಣದ ಕಲ್ಲಿನ ಗುಹೆಗಳು ರೂಪುಗೊಂಡವು. ಬೆಲಂ ಗುಹೆಗಳು ಭಾರತದ ಉಪ-ಖಂಡದಲ್ಲಿನ ಎರಡನೇ ಅತಿದೊಡ್ಡ ಗುಹಾ ವ್ಯವಸ್ಥೆಯಾಗಿವೆ. ಗುಹೆ ಎಂಬುದಕ್ಕೆ ಸಂಸ್ಕೃತದಲ್ಲಿ ಬಿಲಂ ಎಂಬ ಹೆಸರಿದ್ದು, ಇದರಿಂದಲೇ ಬೆಲಂ ಗುಹೆಗಳು ತಮ್ಮ ಹೆಸರನ್ನು ಪಡೆದಿವೆ. ತೆಲುಗಿನಲ್ಲಿ ಈ ಗುಹೆಗಳಿಗೆ ಬೆಲಂ ಗುಹಾಲು ಎಂಬ ಹೆಸರಿದೆ. ಬೆಲಂ ಗುಹೆಗಳು ೩೨೨೯ ಮೀಟರ್‌ನಷ್ಟು ಉದ್ದವಿದ್ದು, ಇದರಿಂದಾಗಿ ಅವು ಭಾರತದ ಉಪಖಂಡದಲ್ಲಿನ ಎರಡನೇ ಅತಿದೊಡ್ಡ ನೈಸರ್ಗಿಕ ಗುಹೆಗಳಾಗಿವೆ. ಉದ್ದನೆಯ ನಡುವಣಂಕಗಳು, ವಿಶಾಲವಾದ ಕೋಣೆಗಳು, ಸಿಹಿನೀರಿನ ಓಣಿಗಳು ಮತ್ತು ಕೊಳಾಯಿಗಳನ್ನು ಬೆಲಂ ಗುಹೆಗಳು ಹೊಂದಿವೆ. ಗುಹೆಯ ಆಳವಾದ ಸ್ಥಳವು ಪ್ರವೇಶದ್ವಾರದಿಂದ ಇದ್ದು, ಅದನ್ನು ಪಾತಾಳಗಂಗಾ ಎಂದು ಕರೆಯಲಾಗುತ್ತದೆ. ೧,೨೬೫ ಮೀಟರ್‌ನಷ್ಟು ಎತ್ತರದಲ್ಲಿರುವ ಹಾರ್‌ಸ್ಲೆ ಬೆಟ್ಟಗಳು, ಆಂಧ್ರ ಪ್ರದೇಶದಲ್ಲಿನ ಪ್ರಸಿದ್ಧ ಬೇಸಿಗೆ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಸುಮಾರು ೧೬೦ ಕಿ.ಮೀ. ಮತ್ತು ತಿರುಪತಿಯಿಂದ ಸುಮಾರು ೧೪೪ ಕಿ.ಮೀ.ನಷ್ಟು ದೂರದಲ್ಲಿದೆ.ಇದರ ಸಮೀಪದಲ್ಲಿಯೇ ಮದನಪಲ್ಲಿ ಪಟ್ಟಣವಿದೆ. ಪ್ರಮುಖವಾದ ಪ್ರವಾಸೀ ಆಕರ್ಷಣೆಯ ತಾಣಗಳಲ್ಲಿ ಮಲ್ಲಮ್ಮ ದೇವಸ್ಥಾನ ಮತ್ತು ರಿಷಿ ವ್ಯಾಲಿ ಸ್ಕೂಲ್‌ ಸೇರಿವೆ. ೮೭ ಕಿ.ಮಿ. ದೂರ ಇರುವ ಕೌಂಡಿನ್ಯ ವನ್ಯಜೀವಿ ಅಭಯಾರಣ್ಯಕ್ಕೆ ಹಾರ್‌ಸ್ಲೆ ಬೆಟ್ಟಗಳು ನಿರ್ಗಮನಾ ತಾಣವಾಗಿದೆ. ಚಾರ್ಮಿನಾರ್‌, ಗೋಲ್ಕೊಂಡ ಕೋಟೆ, ಚಂದ್ರಗಿರಿ ಕೋಟೆ, ಚೌಮಹಲ್ಲ ಅರಮನೆ, ಮತ್ತು ಫಲಕ್ನುಮ ಅರಮನೆ ಮುಂತಾದವುಗಳು ರಾಜ್ಯದಲ್ಲಿರುವ ಕೆಲವೊಂದು ಸ್ಮಾರಕಗಳು. ಕೃಷ್ಣ ಜಿಲ್ಲೆಯಲ್ಲಿರುವ ವಿಜಯವಾಡದಲ್ಲಿನ ಕನಕ ದುರ್ಗ ದೇವಸ್ಥಾನ, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ದ್ವಾರಕಾತಿರುಮಲದಲ್ಲಿನ ವೆಂಕಟೇಶ್ವರ ದೇವಸ್ಥಾನ (ಇದಕ್ಕೆ ಚಿನ್ನ ತಿರುಪತಿ ಎಂದೂ ಹೆಸರಿದೆ), ಶ್ರೀಕಾಕುಲಂ ಜಿಲ್ಲೆಯಲ್ಲಿರುವ ಅರಸವೆಲ್ಲಿಯಲ್ಲಿನ ಸೂರ್ಯ ದೇವಸ್ಥಾನ- ಇವು ಕೂಡಾ ಆಂಧ್ರ ಪ್ರದೇಶದಲ್ಲಿ ನೋಡಬಹುದಾದ ಮತ್ತಷ್ಟು ಸ್ಥಳಗಳು. ಅಣ್ಣಾವರಂ ಸತ್ಯನಾರಾಯಣ ಸ್ವಾಮಿ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ. ಸಾರಿಗೆ thumb|left|ಆಂಧ್ರ ಪ್ರದೇಶದ ಪ್ರಮುಖ ರಸ್ತೆ ಸಂಪರ್ಕಗಳು thumb|right|ವಿಶಾಖಪಟ್ಟಣಂ ಕಡಲ ಬಂದರು thumb|right|ಸಿಕಂದರಾಬಾದ್ ರೈಲ್ವೇ ನಿಲ್ದಾಣ, ದಕ್ಷಿಣ ಕೇಂದ್ರೀಯ ರೈಲ್ವೆಯ ಕೇಂದ್ರ ಕಾರ್ಯಾಲಯ ರಾಜ್ಯವು ಒಟ್ಟು ೧,೪೬,೯೪೪ ಕಿ.ಮೀ.ನಷ್ಟು ರಸ್ತೆಯನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ೪೨,೫೧೧ ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗಳು, ೨,೯೪೯ ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ೧,೦೧,೪೮೪ ಕಿ.ಮೀ.ನಷ್ಟು ಜಿಲ್ಲಾ ರಸ್ತೆಗಳು ಸೇರಿವೆ. ಆಂಧ್ರ ಪ್ರದೇಶದಲ್ಲಿನ ವಾಹನಗಳ ಬೆಳವಣಿಗೆಯ ಪ್ರಮಾಣವು ೧೬%ರಷ್ಟಿದ್ದು ಇದು ದೇಶದಲ್ಲೇ ಅತಿ ಹೆಚ್ಚು. ಆಂಧ್ರ ಪ್ರದೇಶದ ಸರ್ಕಾರದ ಒಡೆತನದ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (APSRTC), ರಾಜ್ಯದ ಪ್ರಮುಖ ಸಾರ್ವಜನಿಕ ಸಾರಿಗೆ ನಿಗಮವಾಗಿದ್ದು, ಎಲ್ಲ ನಗರಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಅತಿ ಹೆಚ್ಚಿನ ವಾಹನಗಳನ್ನು ಹೊಂದಿರುವ ಮತ್ತು ಪ್ರತಿದಿನವೂ ಅತಿ ಉದ್ದದ ಪ್ರದೇಶದವರೆಗೆ ಸಾಗಿಸುವ/ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವ ಮೂಲಕ APSRTCಯು ವಿಶ್ವ ದಾಖಲೆಗಳ ಗಿನ್ನೆಸ್‌ ಪುಸ್ತಕದಲ್ಲಿ ದಾಖಲಾಗುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಹೊರತುಪಡಿಸಿ, ಸಾವಿರಾರು ಖಾಸಗಿ ನಿರ್ವಾಹಕರೂ ಕೂಡ ಬಸ್ಸುಗಳನ್ನು ಓಡಿಸುವ ಮೂಲಕ ರಾಜ್ಯದ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತಾರೆ. ಕಾರು, ಮೋಟಾರು ಅಳವಡಿತ ಸ್ಕೂಟರ್‌ ಮತ್ತು ಬೈಸಿಕಲ್‌ಗಳಂತಹ ಖಾಸಗಿ ವಾಹನಗಳು, ನಗರ ಮತ್ತು ಅವಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿನ ಸ್ಥಳೀಯ ಸಾರಿಗೆಯಲ್ಲಿ ಗಣನೀಯ ಪಾಲನ್ನು ಹೊಂದಿವೆ. ರಾಜ್ಯದಲ್ಲಿ ಐದು ವಿಮಾನ ನಿಲ್ದಾಣಗಳಿವೆ. ಅವುಗಳೆಂದರೆ: ಹೈದರಾಬಾದ್‌ (ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)(ರಾಜ್ಯದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ), ವಿಶಾಖಪಟ್ಟಣಂ, ವಿಜಯವಾಡ, ರಾಜಮುಂಡ್ರಿ ಮತ್ತು ತಿರುಪತಿ.ಇನ್ನೂ ಆರು ನಗರಗಳಲ್ಲಿ ವಿಮಾನನಿಲ್ದಾಣಗಳನ್ನು ಆರಂಭಿಸಲು ಸರ್ಕಾರವು ಯೋಜನೆಯನ್ನು ಹಾಕಿಕೊಂಡಿದೆ. ಅವುಗಳೆಂದರೆ, ನೆಲ್ಲೂರ್, ವಾರಂಗಲ್‌, ಕಡಪ, ತಡೆಪಲ್ಲಿಗುಡೆಂ ರಾಮಗುಂಡಂ ಮತ್ತು ಒಂಗೊಲ್‌ ಆಂಧ್ರ ಪ್ರದೇಶವು ವಿಶಾಖಪಟ್ಟಣಂ ಮತ್ತು ಕಾಕಿನಾಡದಲ್ಲಿ ಭಾರತದ ಎರಡು ಪ್ರಮುಖ ಬಂದರುಗಳನ್ನು ಹೊಂದಿದೆ ಹಾಗೂ ಮಚಲೀಪಟ್ಣಂ, ನಿಜಾಮ್‌ಪಟ್ಣಂ(ಗುಂಟೂರ್‌‌) ಮತ್ತು ಕೃಷ್ಣಪಟ್ಣಂಗಳಲ್ಲಿ ಮೂರು ಸಣ್ಣ ಬಂದರುಗಳನ್ನು ಹೊಂದಿದೆ. ವಿಶಾಖಪಟ್ಟಣಂ ಬಳಿ ಇರುವ ಗಂಗಾವರಂನಲ್ಲಿ ಮತ್ತೊಂದು ಖಾಸಗಿ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆಳಸಮುದ್ರದ ಬಂದರು ೨೦೦,೦೦೦-೨೫೦,೦೦೦ DWT ವರೆಗಿನ ಸಾಮರ್ಥ್ಯದ ಹಡಗುಗಳು ತಂಗಲು ಅವಕಾಶ ಮಾಡಿಕೊಡುವುದರಿಂದ ಬೃಹತ್ ಹಡಗುಗಳು ಭಾರತೀಯ ಕಡಲತೀರದೊಳಗೆ ಪ್ರವೇಶಿಸಲು ಅನುವಾಗುತ್ತದೆ. ಆಂಧ್ರ ರಾಜಕೀಯ ಮತ್ತು ಆಡಳಿತ ೨೦೦೯ ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾರಾಜಯಂ ಪಾರ್ಟಿ, ಟಿಡಿಪಿ, ಟಿಆರ್.ಎಸ್. ಸಿಪಿಎಮ್ ಪಕ್ಷಗಳನ್ನು ಸೋಲಿಸಿ ನಂತರ ೨ ನೇ ಬಾರಿಗೆ ವೈ.ಎಸ್.ರಾಜಶೇಖರ ರೆಡ್ಡಿಯವರು ಆಂಧ್ರದ ಮುಖ್ಯಮಂತ್ರಿಯಾದರು . ಅವರು ೨-೯-೨೦೦೯ ರಂದು ಹೆಲಿಕ್ಯಾಪರ್ ಅವಘಡದಲ್ಲಿ ಸಾವನ್ನಪ್ಪಿದರು. ಹಿರಿಯ ರಾಜಕಾರಣಿ ಹಾಗೂ ನಣಕಸಿನ ಮಂತ್ರಿಯಾಗಿದ್ದ ಕೊನಿಜೇತಿ ರೋಸಚಿi ನವರು ೩-೯-೨೦೦೯ ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ವಯಸ್ಸಾದಕಾರಣ ಕೆಲಸದ ವತ್ತಡ ಹೆಚ್ಚಾಗಿದೆಯೆಂದು ೨೪-೧೧-೨೦೧೦ ರಲ್ಲಿ ರಾಜೀನಾಮೆ ಸಲ್ಲಿಸಿದರು. ನಲ್ಲೇರಿ ಕಿರಣ ಕುಮಾರ ರೆಡ್ಡಿ ಯವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಆಂಧ್ರ ಪ್ರದೇಶದ ರಾಜಕೀಯ ರಾಜ್ಯ /ಲೋಕ ಸಭೆ ಸ್ಥಾನ ಹೆಸರು ಅಧಿಕಾರ ಸ್ವೀಕರಿಸಿದ ದಿನಾಂಕ ಪಕ್ಷ ವಿವರ -ವಿಧಾನ ಸಭೆ FMR (ಒಟ್ಟು ವಿಧಾನ ಸಭೆ ಸದಸ್ಯರು ) ಆಂಧ್ರ ಪ್ರದೇಶ(೪೨)ಕಾಂ.೩೩(೩೮.೯೫)/ಬಿಜೆಪಿ ೦/ಟಿಡಿಪಿ ೬(೨೪.೯೩);ಟಿಆರ್.ಎಸ್.೨;ಐಎ.ಎಂ೧೧.ವೈ. ಎಸ್. ರಾಜಶೇಖರ ರೆಡ್ಡಿ ೨.ಕೊನಿಜೇಟಿ ರೋಸಯ್ಯ ; ೩.ಕಿರಣಕುಮಾರ ರೆಡ್ಡಿ; (ಕಾಂಗ್ರೆಸ್)೨೦೦೪/ಮೇ-೨೦೦೯; ೩-೯-೦೨೦೦೯ ; ೨೪-೧೧-೨೦೧೦ಕಾಂ~೧೫೬/೩೬.೫೬%;(-೨% -೨೯); ತೆ.ದೇ.ಪಾ.(ಟಿಡಿಪಿ) ೯೨/೨೮.೧೨(೪೫); ತೆ.ರಾ.ಸ ೧೦(-೧೬) ; ಪಿಆರ್.ಪಿ..೧೮ (+೧೮);ಇತರೆ:೧೪ ಒಟ್ಟು ೨೯೪ ತೆಲಂಗಾಣ ಉದಯ ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ಸೀಮಾಂಧ್ರ ದಿ. ಜೂನ್ 2, 2014, ರಂದು ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ) ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು. 294 ಸದಸ್ಯರಿದ್ದ ಆಂಧ್ರ ವಿಧಾನಸಭೆಯಲ್ಲಿ ವಿಭಜಕನೆಯ ನಂತರ 175 ಶಾಸಕರಿದ್ದಾರೆ. ತೆಲಂಗಾಣದಲ್ಲಿ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ. ೨೦೧೪ ರ ಜೂನ್ ನಂತರದ ಆಂಧ್ರ ಅಥವಾ ಸೀಮಾಂಧ್ರ ಸೀಮಾಂಧ್ರಕ್ಕೆ ಹೊಸ ರಾಜಧಾನಿ thumb|ಆಂಧ್ರ ಪ್ರದೇಶರಾಜ್ಯದಲ್ಲಿ ಪ್ರತ್ಯೇಕಗೊಂಡ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ; ಹಳದಿ ಬಣ್ಣದಲ್ಲಿರುವುದು ಹೊಸದಾಗಿ ಉದಯವಾದ ಆಂಧ್ರ ಪ್ರದೇಶ 2 Dec, 2016 left|thumb|ಆಂಧ್ರ ಪ್ರದೇಶದ ರಾಜಧಾನಿ ಪ್ರದೇಶ ಅಮರಾವತಿ ತೋರಿಸುವ ನಕ್ಷೆ, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಮಧ್ಯದಲ್ಲಿದೆ-ಬಣ್ಣದಗೆರೆ ಕೃಷ್ಣಾನದಿ ದಿ. ಜೂನ್ 2, 2014, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ). ಮೂಲ ಆಂಧ್ರ ಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಕ್ಕೆ ರಾಜಧಾನಿಯಾಯಿತು. ಹೊಸ ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು. ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.ಅಮರಾವತಿಗೆ ಆಡಳಿತ ಸ್ಥಳಾಂತರ ಆಂಧ್ರ ಪ್ರದೇಶ ಚುನಾವಣೆ -2014 ೨೦೧೯ರ ಆಂಧ್ರ ಪ್ರದೇಶ ಚುನಾವಣೆ 2019 Andhra Pradesh Legislative Assembly election ಆಂಧ್ರ ಪ್ರದೇಶ ಸರ್ಕಾರ (ಹೊಸ ಆಂಧ್ರ ) ಶ್ರೀ ನಾರಾ ಚಂದ್ರಬಾಬು ನಾಯಿಡು -ಮಾನ್ಯ ಮುಖ್ಯ ಮಂತ್ರಿ ಪಕ್ಷ ಸದಸ್ಯರು ಟಿಡಿಪಿ (ತೆಲಗು ದೇಶಂ ಪಾರ್ಟಿ) 101ವೈಎಸ್ಆರ್ ಪಾರ್ಟಿ(ವೈಎಸ್ಆರ್ ಕಾಂಗ್ರೆಸ್ ಪಾರ್ಟಿ) 66 ಬಿಜೆಪಿ (ಭಾರತೀಯ ಜನತಾ ಪಾರ್ಟಿ) 4 ಎನ್ ಪಿ.(ನವೋದಯ ಪಾರ್ಟಿ) 1ಪಕ್ಷೇತರ 1ಖಾಲಿ 2ಓಟ್ಟು 175 ೨೦೧೯ ರ ಚುನಾವಣೆ ಮತ್ತು ಹೊಸ ಸರ್ಕಾರ 2019 ರ ವಿಧಾನಸಭಾ ಚುನಾವಣೆಗಳು 2019 ರ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಯಾವುದೇ ಮೈತ್ರಿ ಮಾಡದೆ ಏಕಾಂಗಿಯಾಗಿ ಸ್ಪರ್ಧಿಸಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍, ಈ ಮೊದಲು ಐಎನ್‌ಸಿ ಮತ್ತು ವೈ.ಎಸ್.ಆರ್ ನೇತೃತ್ವದ ಕಾಂಗ್ರೆಸ್‍ ಪಾರ್ಟಿ ಎಂದು ವೀಭಜತವಾಗಿತ್ತು ವೈ.ಎಸ್.ಆರ್. ಕಾಂಗ್ರೆಸ್ ಜಗನ್ಮೋಹನ್ ರೆಡ್ಡಿ ನೇತ್ರತ್ವದಲ್ಲಿ ಸ್ಪರ್ಧಿಸಿತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್ಪಿ ಸಹ ಸಿಪಿಐ, ಸಿಪಿಐ (ಎಂ) ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತು. 2019 ರ ಚುನಾವಣೆಯಲ್ಲಿ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದರೆ, ವೈಎಸ್ಆರ್ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು 151 ಸ್ಥಾನಗಳನ್ನು ಗಳಿಸಿತು. ಇದರ ನಾಯಕ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು 2019 ರ ಮೇ 30 ರಂದು ಆಂಧ್ರಪ್ರದೇಶದ ಮುಂದಿನ ಮುಖ್ಯಮಂತ್ರಿಯಾದರು. ಇದನ್ನೂ ನೋಡಿರಿ ತೆಲಂಗಾಣ ಭಾರತದ ಮುಖ್ಯಮಂತ್ರಿಗಳು ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಆಂಧ್ರ ಪ್ರದೇಶದಿಂದ ಬಂದಿರುವ ಪ್ರಮುಖರ ಪಟ್ಟಿ ಭಾರತದ ಇತಿಹಾಸ ಭಾರತದ ಮಧ್ಯಕಾಲೀನ ಸಾಮ್ರಾಜ್ಯಗಳು ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ ಆಂಧ್ರ ರಾಜ್ಯ ಬ್ರೂಸ್‌‌ ಎಲಿಯಟ್‌ ಟೇಪರ್‌ರವರು ಬರೆದಿರುವ ಸೊಸೈಟಿ ಅಂಡ್‌ ರಿಚುಯಲ್‌ ಇನ್‌ ಎ ತೆಲುಗು ವಿಲೇಜ್‌ ಇನ್‌ ಸೌತ್ ಇಂಡಿಯಾ ರೈವಲ್ರಿ ಅಂಡ್ ಟ್ರಿಬ್ಯೂಟ್‌: ಸೊಸೈಟಿ ಅಂಡ್‌ ರಿಚುಯಲ್‌ ಇನ್‌ ಎ ತೆಲುಗು ವಿಲ್ಲೇಜ್‌ ಇನ್ ಸೌತ್ ಇಂಡಿಯಾ{/0. ಯಾಣಂ ಗುಂಟೂರ್‌ ವಿಭಾಗ https://en.wikipedia.org/wiki/State_Assembly_elections_in_India,_2009 ಚರ್ಚೆಗೆ/ ಸಲೆಹೆ ಕೊಡಲು ಮೇಲೆ ಎಡಗಡೆ ಚರ್ಚೆಗೆ ಹೋಗಿ ಬದಲಾಯಿಸಿ -ಗೆ ಕ್ಲಿಕ್ ಮಾಡಿ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಟಿಪ್ಪಣಿಗಳು ಹೊರಗಿನ ಕೊಂಡಿಗಳು ಆಂಧ್ರ ಪ್ರದೇಶ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಆಂಧ್ರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ NIC ವೆಬ್‌ಸೈಟ್‌ನಲ್ಲಿನ ಆಂಧ್ರ ಪ್ರದೇಶದ ಪೋರ್ಟಲ್‌ ಆಂಧ್ರ ಪ್ರದೇಶ ರಾಜ್ಯ ಪೊಲೀಸ್‌ ಇಲಾಖೆಯ ಅಧಿಕೃತ ವೆಬ್‌ಸೈಟ್‌ pnb:آندھراپردیش ವರ್ಗ ವರ್ಗ:ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು ವರ್ಗ:ಆಂಧ್ರ ಪ್ರದೇಶ ವರ್ಗ:1956ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರಾಂತ್ಯಗಳು ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತೀಯ ಗಣಿತಜ್ಞರು
https://kn.wikipedia.org/wiki/ಭಾರತೀಯ_ಗಣಿತಜ್ಞರು
ಭಾರತೀಯ ಗಣಿತಜ್ಞರ ಒಂದು ಪಟ್ಟಿ: ಕ್ರಿಸ್ತಪೂರ್ವ ಯಾಜ್ಞವಲ್ಕ್ಯ, ಶತಪಥ ಬ್ರಾಹಣದಲ್ಲಿ ಕೆಲ ಗಣಿತ ಸೂತ್ರಗಳು ಲಗಾಧ, ವೇದಶಾಸ್ತ್ರದಲ್ಲಿ ಉಪಯೋಗಿಸುವ ಖಗೋಳಶಾಸ್ತ್ರದಲ್ಲಿ ಕೆಲಸ ನಡೆಸಿದನು ಬೌಧಾಯನ, ಸು. ಕ್ರಿ.ಪೂ. ೮೦೦ ಆಪಸ್ತಂಭ, ಕ್ರಿ.ಪೂ. ೭೦೦ ಕಾತ್ಯಾಯನ, ಕ್ರಿ.ಪೂ. ೪೦೦ ಪಾಣಿನಿ, ಕ್ರಿ.ಪೂ. ೪೦೦ ಪಿಂಗಲ, ಕ್ರಿ.ಪೂ. ೪೦೦ ಕ್ರಿ.ಶ. ೧೦೦೦ ದ ವರೆಗೆ ಆರ್ಯಭಟ, ಕ್ರಿ.ಶ. ೫೦೦ ವರಾಹಮಿಹಿರ ಭಾಸ್ಕರ ೧, ಕ್ರಿ.ಶ. ೬೨೦ ಬ್ರಹ್ಮಗುಪ್ತ ವಿರಹಂಕ, ೮ ನೆಯ ಶತಮಾನ - ಫಿಬೊನಾಚಿ ಸಂಖ್ಯೆಗಳ ಅಧ್ಯಯನ ಶ್ರೀಧರ, ೬೫೦ ರಿಂದ ೮೫೦ ರ ನಡುವೆ ಲಲ್ಲ, ೭೨೦-೭೯೦ ಗೋವಿಂದಸ್ವಾಮಿ, ೯ ನೆಯ ಶತಮಾನ ಮಹಾವೀರ, ೯ ನೆಯ ಶತಮಾನ ಜಯದೇವ, ೯ ನೆಯ ಶತಮಾನ ಹಲಾಯುಧ, ೧೦ ನೆಯ ಶತಮಾನ ಆರ್ಯಭಟ ೨, ೯೨೦-೧೦೦೦ ಕ್ರಿ.ಶ. ೧೦೦೦-೧೮೦೦ ಬ್ರಹ್ಮದೇವ, ೧೦ಭಾ೬೦-೧೧೩೦ ಶ್ರೀಪತಿ, ೧೦೧೯-೧೦೬೬ ಗೋಪಾಲ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ ಹೇಮಚಂದ್ರ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ ಭಾಸ್ಕರಾಚಾರ್ಯ ಗಂಗೇಶ ಉಪಾಧ್ಯಾಯ, ೧೩ ನೆಯ ಶತಮಾನ, ತರ್ಕಶಾಸ್ತ್ರ ಶಂಕರ ಮಿಶ್ರ, ತರ್ಕಶಾಸ್ತ್ರ ಮಾಧವ, ಗಣಿತದ ವಿಶ್ಲೇಷಣೆಯ ಜನಕ ನೀಲಕಾಂತ ಸೋಮಯಾಜಿ, ಗಣಿತ ಮತ್ತು ಖಗೋಳಶಾಸ್ತ್ರ ಗದಾಧರ ಭಟ್ಟಾಚಾರ್ಯ, ಸು. ೧೬೫೦, ತರ್ಕಶಾಸ್ತ್ರ ಜಗನ್ನಾಥ ಸು. ೧೭೩೦ ೧೯-೨೦ ನೆಯ ಶತಮಾನ ಜಗದೀಶ್ಚಂದ್ರ ಬೋಸ್ ಶ್ರೀನಿವಾಸ ರಾಮಾನುಜನ್, ೧೮೮೭-೧೯೨೦ ಸತ್ಯೇ೦ದ್ರನಾಥ್ ಬೋಸ್ ಪಿ ಸಿ ಮಹಾಲಾನೊಬಿಸ್ ಎ ಎ ಕೃಷ್ಣಸ್ವಾಮಿ ಅಯ್ಯ೦ಗಾರ್ ೨೦ ನೆಯ ಶತಮಾನ ಎಸ್ ಚಂದ್ರಶೇಖರ್ ಡಿ ಕೆ ರಾಯ್-ಚೌಧುರಿ ಹರೀಶ್ ಚಂದ್ರ ಸಿ ರಾಧಾಕೃಷ್ಣ ರಾವ್ ಜಿ ಎನ್ ರಾಮಚಂದ್ರನ್, 1922-2001 ಜಾರ್ಜ್ ಸುದರ್ಶನ್ ಶ್ರೀರಾಮ್ ಶಂಕರ್ ಅಭ್ಯಂಕರ್ ನರೇಂದ್ರ ಕರ್ಮಾರ್ಕರ್ ಮಣೀಂದ್ರ ಅಗ್ರವಾಲ್ ಇವನ್ನೂ ನೋಡಿ ಭಾರತದ ಗಣಿತಜ್ಞರು ವರ್ಗ:ಗಣಿತ ವರ್ಗ:ಭಾರತೀಯ ಗಣಿತಜ್ಞರು
ಆರ್ಯಭಟ (ಗಣಿತಜ್ಞ)
https://kn.wikipedia.org/wiki/ಆರ್ಯಭಟ_(ಗಣಿತಜ್ಞ)
ಆರ್ಯಭಟ ಭಾರತದ ಪ್ರಸಿದ್ಧ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ. right|ಆರ್ಯಭಟ ಆರ್ಯಭಟ ಕ್ರಿ.ಶ. ೪೭೬ ರಲ್ಲಿ ಅಷ್ಮಕದಲ್ಲಿ ಜನಿಸಿದ್ದು. ನಂತರ ಜೀವಿಸಿದ್ದು ಕುಸುಮಪುರದಲ್ಲಿ. ಆರ್ಯಭಟನ ವ್ಯಾಖ್ಯಾನಕಾರ ಒ೦ದನೆಯ ಭಾಸ್ಕರನ (ಸು. ಕ್ರಿ.ಶ. ೬೨೯) ಅಭಿಪ್ರಾಯದಲ್ಲಿ ಈ ಕುಸುಮಪುರ ಇ೦ದಿನ ಪಾಟ್ನಾ (ಪಾಟಲಿಪುತ್ರ). ಆರ್ಯಭಟ ತನ್ನ ಮುಖ್ಯ ಕೃತಿಯಾದ "ಆರ್ಯಭಟೀಯ"ದಲ್ಲಿ ಭೂಮಿ ತನ್ನ ಅಕ್ಷದ ಸುತ್ತಲೂ ಸುತ್ತುವ ಬಗೆಯ ಬಗ್ಗೆ ಗಣಿತದ ಮತ್ತು ಖಗೋಳಶಾಸ್ತ್ರದ ಬಗ್ಗೆ ತನ್ನ ಸಿದ್ಧಾ೦ತಗಳನ್ನು ಮ೦ಡಿಸಿದ. ಹಾಗೆಯೇ ಎಲ್ಲ ಗ್ರಹಗಳೂ ಸೂರ್ಯನ ಸುತ್ತಲೂ ಸುತ್ತುವ ಕಕ್ಷೆಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಿದ. ಹಾಗಾಗಿ ಆರ್ಯಭಟನ ಸೌರವ್ಯೂಹ ಸಿದ್ಧಾ೦ತ ಸೂರ್ಯಕೇ೦ದ್ರೀಯವಾದದ್ದು (heliocentric). ಈ ಪುಸ್ತಕ ನಾಲ್ಕು ಭಾಗಗಳಾಗಿ ವಿ೦ಗಡಿತವಾಗಿದೆ: ಖಗೋಳಶಾಸ್ತ್ರದ ಸ್ಥಿರ ಸ೦ಖ್ಯೆಗಳು (astronomical constants) ಮತ್ತು ತ್ರಿಕೋನಮಿತಿಯ ಬಗ್ಗೆ ಆರ್ಯಭಟನ ಫಲಿತಾ೦ಶಗಳು ಖಗೋಳಶಾಸ್ತ್ರದ ಲೆಕ್ಕಾಚಾರಕ್ಕೆ ಅಗತ್ಯವಾದ ಗಣಿತ ಕಾಲದ ವಿ೦ಗಡಣೆ ಮತ್ತು ಗ್ರಹಗಳ ರೇಖಾ೦ಶಗಳನ್ನು ಲೆಕ್ಕ ಹಾಕಲು ಬೇಕಾದ ಸಿದ್ಧಾ೦ತಗಳು ತ್ರಿಕೋನಮಿತಿ ಮತ್ತು ಗ್ರಹಣಗಳನ್ನು ಲೆಕ್ಕ ಹಾಕಲು ಬೇಕಾದ ಫಲಿತಾ೦ಶಗಳು ಈ ಕೃತಿಯಲ್ಲಿ ಆರ್ಯಭಟ ಒಂದು ದಿನವನ್ನು ಸೂರ್ಯೋದಯದಿ೦ದ ಆರ೦ಭವಾಗುವುದೆ೦ದು ಲೆಕ್ಕಕ್ಕೆ ತೆಗೆದುಕೊ೦ಡರೆ, ತನ್ನ ಇನ್ನೊ೦ದು ಕೃತಿಯಾದ "ಆರ್ಯಭಟ-ಸಿದ್ಧಾ೦ತ"ದಲ್ಲಿ ದಿನದ ಆರ೦ಭವನ್ನು ಮಧ್ಯರಾತ್ರಿಯಾಗಿ ಪರಿಗಣಿಸಿದ್ದಾನೆ. ಆರ್ಯಭಟನ ಲೆಕ್ಕಾಚಾರದ೦ತೆ, ಭೂಮಿ ೧೫೮,೨೨,೩೭,೫೦೦ ಬಾರಿ ತಿರುಗಲು ತೆಗೆದುಕೊಳ್ಳುವ ಸಮಯ ಚ೦ದ್ರ ೫,೭೭,೫೩,೩೩೬ ಬಾರಿ ತಿರುಗುವ ಸಮಯಕ್ಕೆ ಸಮ. ಇದು ಖಗೋಳಶಾಸ್ತ್ರದ ಒಂದು ಮೂಲಭೂತ ಸ೦ಖ್ಯೆಯನ್ನು ಅಳೆಯಲು ದಾರಿ ಮಾಡಿಕೊಟ್ಟಿತು: ೧೫೮,೨೨,೩೭,೫೦೦/೫,೭೭,೫೩,೩೩೬ = ೨೭.೩೯೬೪೬೯೩೫೭೨. ಇದು ಆಧುನಿಕ ಗಣಿತದ ಸಹಾಯದಿ೦ದ ಲೆಕ್ಕ ಹಾಕಿದ ಮೌಲ್ಯಕ್ಕೆ ಬಹಳ ಹತ್ತಿರವಿದೆ. ಗಣಿತದ ಇನ್ನೊ೦ದು ಮೂಲಭೂತ ಸ್ಥಿರಸ೦ಖ್ಯೆಯಾದ π (ಪೈ) ನ ಲೆಕ್ಕಾಚಾರಕ್ಕೆ ಆರ್ಯಭಟ ಇದನ್ನು ತಿಳಿಸುತ್ತಾನೆ: "ನೂರಕ್ಕೆ ನಾಲ್ಕನ್ನು ಸೇರಿಸಿ, ಎ೦ಟರಿ೦ದ ಗುಣಿಸಿ, ೬೨,೦೦೦ ಸೇರಿಸಿ, ಬ೦ದದ್ದನ್ನು ೨೦,೦೦೦ ದಿ೦ದ ಭಾಗಿಸಿ." ಇದರಿ೦ದ ಗಣಿಸಬಹುದಾದ π ನ ಮೌಲ್ಯ ೬೨೮೩೨/೨೦,೦೦೦ = ೩.೧೪೧೬. ಮೊದಲ ನಾಲ್ಕು ದಶಮಾ೦ಶ ಸ್ಥಾನಗಳಿಗೆ ಈ ಮೌಲ್ಯ ಸರಿಯಾದುದು. ಸೂರ್ಯ ಸಿದ್ಧಾಂತವು ಆರ್ಯಭಟನ ಒಂದು ಪ್ರಮುಖ ಕೃತಿಯಾಗಿದೆ ಇದರಲ್ಲಿ ಸೂರ್ಯನ ಚಲನೆ ಮತ್ತು ಗ್ರಹಗಳ ಸುತ್ತುವ ಪರಿಧಿ ಕಕ್ಷೆಗಳು ಬಗೆಗಿನ ಸಂಪೂರ್ಣ ಜ್ಞಾನವನ್ನು ತಿಳಿಸಿದ್ದಾರೆ ಇವನ್ನೂ ನೋಡಿ [[ಭಾರತೀಯ ಗಣಿತಜ್ಞ ರು]]ಟಿಪ್ಪಣಿಗಳುl ಬಾಹ್ಯ ಸ೦ಪರ್ಕಗಳು ಆರ್ಯಭಟನ ಆರ್ಯಭಟೀಯ π ನ ಗಣನೆ ವರ್ಗ:ಗಣಿತ ವರ್ಗ:ಭಾರತದ ವಿಜ್ಞಾನಿಗಳು ವರ್ಗ:ಭಾರತೀಯ ಗಣಿತಜ್ಞರು
ಭಾಸ್ಕರಾಚಾರ್ಯ
https://kn.wikipedia.org/wiki/ಭಾಸ್ಕರಾಚಾರ್ಯ
ಭಾಸ್ಕರಾಚಾರ್ಯ ಅಥವಾ ಎರಡನೆಯ ಭಾಸ್ಕರ (೧೧೧೪ - ೧೧೮೫), ಭಾರತದ ಗಣಿತಜ್ಞ ಹಾಗೂ ಖಗೋಳಶಾಸ್ತ್ರಜ್ಞ. ಜೀವನ, ಸಾಧನೆ ಕರ್ನಾಟಕ ರಾಜ್ಯದ ವಿಜಯಪುರ ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ."1. Ignited minds page 39 by APJ Abdul Kalam, 2. Prof Sudakara Divedi (1855-1910), 3. Dr B A Salethor (Indian Culture), 4. Govt of Karnataka Publications, 5. Dr Nararajan (Lilavati 1989), 6. Prof Sinivas details(Ganitashatra Chrithra by1955, 7. Aalur Venkarayaru (Karnataka Gathvibaya 1917, 8. Prime Minister Press Statement at sarawad in 2018, 9. Vasudev Herkal (Syukatha Karnataka articles), 10. Manjunath sulali (Deccan Herald 19/04/2010, 11. Indian Archaeology 1994-96 A Review page 32, Dr R K Kulkarni (Articles)" ಇವನ ಕಾಲಘಟ್ಟ ಕ್ರಿ. ಶ. 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ. ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ಧತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ಧತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶಿರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದನ್ನು 1150ರಲ್ಲಿ ಬರೆದ. ಇದರಲ್ಲಿ ಲೀಲಾವತಿ, ಬೀಜಗಣಿತ, ಗೋಳಾಧ್ಯಾಯ, ಗ್ರಹಗಣಿತ ಎಂಬ ನಾಲ್ಕು ಭಾಗಗಳಿವೆ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತದೆಯಾದರೂ ಅಂಕಗಣಿತವೇ ಇದರ ಜೀವಾಳ. ಆಗಿನ ಕಾಲದ ಪದ್ಧತಿಯಂತೆ ಕ್ಷೇತ್ರಗಣಿತವನ್ನೂ (ಮೆನ್ಸುರೇಶನ್) ಪೈಥಾಗೊರಸನ ಪ್ರಮೇಯದ ಮೇಲೆ ನಿಲ್ಲುವ ಸ್ವಲ್ಪ ರೇಖಾಗಣಿತವನ್ನೂ ಕುಟ್ಟಕವೆಂಬ ಬೀಜಗಣಿತ ಭಾಗವನ್ನೂ ಈ ಗ್ರಂಥದಲ್ಲಿ ಸೇರಿಸಿರುತ್ತಾನೆ. ಸಿದ್ಧಾಂತ ಶಿರೋಮಣಿಯ ಇತರ ಭಾಗಗಳಲ್ಲಿ ಭಾಸ್ಕರನ ಮುಖ್ಯ ಸಂಶೋಧನೆಗಳು ಹಲವು ಅಡಕವಾಗಿವೆ. ಮೂಲ ಗ್ರಂಥದ ವ್ಯಾಖ್ಯಾನವಾದ ವಾಸನಾಭಾಷ್ಯವೆಂಬ ಗ್ರಂಥವನ್ನೂ ಭಾಸ್ಕರ ಬರೆದ. ಹಿಂದಿನವರಾದ ಬ್ರಹ್ಮಗುಪ್ತ, ಶ್ರೀಧರ, ಪದ್ಮನಾಭ ಮುಂತಾದವರ ಗ್ರಂಥಗಳಲ್ಲಿ ಸಾರವತ್ತಾದುದನ್ನು ತೆಗೆದುಕೊಂಡು ಉಪಯುಕ್ತ ಪಠ್ಯಗ್ರಂಥ ಬರೆಯುವುದೇ ಭಾಸ್ಕರನ ಧ್ಯೇಯ. ಗ್ರಂಥದಲ್ಲಿ ಸುಂದರ ಕವಿತಾ ಕೌಶಲವನ್ನೂ ತೋರಿಸಿರುತ್ತಾನೆ. ಲೀಲಾವತಿ ಮೊದಲನೆಯ ಭಾಗಕ್ಕೆ ತನ್ನ ನಿರ್ಭಾಗ್ಯ ಪುತ್ರಿ ಲೀಲಾವತಿಯ ಹೆಸರು ಕೊಟ್ಟಿರುವುದಾಗಿ ಕಥೆಯಿದೆ. ಇದು ಚರ್ಚಾಸ್ಪದ. ಗ್ರಂಥ ಅಂಕಗಣಿತ ಕುರಿತ ಪಠ್ಯಗ್ರಂಥವಾದರೂ ಇದರಲ್ಲಿ ಅನೇಕ ಸ್ವಾರಸ್ಯಕರ ವಿಷಯಗಳು ಇವೆ. ಶೂನ್ಯ (ಸೊನ್ನೆ 0) ಮತ್ತು ಅನಂತದ ಪರಿಕಲ್ಪನೆಗಳೂ, ಪರಿಮಿತಿ (ಲಿಮಿಟ್) ಪರಿಕಲ್ಪನೆಯೂ ಸ್ವಲ್ಪಮಟ್ಟಿಗೆ ಇವೆ. ನಿಖರತೆ ಸಾಲದು. ಗೋಳದ ಘನ ಮತ್ತು ಮೇಲ್ಮೈಯ ಸಲೆಯ ಬೆಲೆಗಳನ್ನು ಕೊಟ್ಟಿರುತ್ತಾನೆ. ಕ್ರಮಯೋಜನೆ ಮತ್ತು ವಿಕಲ್ಪ (ಪರ್ಮ್ಯುಟೇಶನ್ ಮತ್ತು ಕಾಂಬಿನೇಶನ್) ಕುರಿತ ಅನೇಕ ಸ್ವಾರಸ್ಯಕರ ಲೆಕ್ಕಗಳಿವೆ. n ಪದಾರ್ಥಗಳಲ್ಲಿ a ಒಂದು ತರಹದವು, b ಇನ್ನೊಂದು ತರಹದವು, ಇತ್ಯಾದಿಯಾದರೆ, ಎಲ್ಲ ಪದಾರ್ಥಗಳನ್ನೂ ಜೋಡಿಸಬಹುದಾದ ವಿಧಗಳ ಸಂಖ್ಯೆ . ಈ ಪ್ರಮೇಯವನ್ನು ಮೊತ್ತಮೊದಲು ಭಾಸ್ಕರ ಕೊಟ್ಟ.  ಎಂಬುದರ ವರ್ಗಮೂಲ ಸಾಧ್ಯವಾದಲ್ಲಿ ಪಡೆಯುವ ವಿಧಾನ ಕೊಟ್ಟಿರುತ್ತಾನೆ. ಜನಸಾಮಾನ್ಯರಿಗೆ ಗಣಿತದಲ್ಲಿ ಅಭಿರುಚಿ ಹುಟ್ಟುವುದಕ್ಕಾಗಿಯೂ ಮನರಂಜನೆಗಾಗಿಯೂ ಸ್ವಾರಸ್ಯಕರ ಉದಾಹರಣೆಗಳನ್ನು ಕಟ್ಟುವುದು ಒಂದು ಪದ್ಧತಿ. ಇಂಥ ಉದಾಹರಣೆಗಳನ್ನು ವಿನೋದ ಗಣಿತವೆಂದು ಹೇಳುವುದೂ ಉಂಟು. ಭಾಸ್ಕರ ಕೊಟ್ಟಿರುವ ವಿನೋದಗಣಿತದ ಪ್ರಶ್ನೆಗಳು ಅರ್ಥದ ದೃಷ್ಟಿಯಿಂದಲೂ ಶೈಲಿಯ ದೃಷ್ಟಿಯಿಂದಲೂ ಬಹಳ ಚೆನ್ನಾಗಿದ್ದು ಅತ್ಯಂತ ಪ್ರಸಿದ್ಧವಾಗಿವೆ. ಅನೇಕ ಗ್ರಂಥಕರ್ತರು ಈ ಉದಾಹರಣೆಗಳನ್ನು ತಮ್ಮ ಗ್ರಂಥಗಳಿಗೆ ಆಯ್ದು ಕೊಂಡಿದ್ದಾರೆ. ಭಾಸ್ಕರನಾದರೂ ಇವನ್ನು ಹಿಂದಿನವರ ಗ್ರಂಥಗಳಲ್ಲಿದ್ದ ಉದಾಹರಣೆಗಳಿಗೆ ರೂಪುಗೊಟ್ಟು ಶೇಖರಿಸಿದ್ದಾನೆ ಎಂಬುದಕ್ಕೆ ಆಧಾರಗಳು ಸಿಗುತ್ತವೆ. ಲೆಕ್ಕಗಳಲ್ಲಿ ಸಾಮಾನ್ಯ ಅಂಕಗಣಿತಕ್ಕೆ ಸೇರತಕ್ಕವೂ ವರ್ಗ ಸಮೀಕರಣಕ್ಕೆ ಅನ್ವಯಿಸುವವೂ, ಪೈಥಾಗೊರಸನ ಪ್ರಮೇಯವನ್ನು ಅವಲಂಬಿಸುವವೂ ಇವೆ. ಒಂದೊಂದಕ್ಕೆ ಒಂದೊಂದು ಉದಾಹರಣೆಯನ್ನು ಇಲ್ಲಿ ಕೊಟ್ಟಿದೆ. ಅಂಕಗಣಿತ ಅರ್ಥ: ಎರಡು ನಿಷ್ಕಗಳಿಗೆ 1 ಪಲ ಒಳ್ಳೆಯ ಕರ್ಪೂರವೂ,  ದ್ರಮ್ಮಕ್ಕೆ 1 ಪಲ ಚಂದನ ಅಥವಾ  ಪಲ ಅಗರುವೂ ದೊರೆಯುತ್ತವೆ. ಎಲೈ ವರ್ತಕನೇ! ನಾನು ಧೂಪವನ್ನು ತಯಾರಿಸಬೇಕಾಗಿರುವುದರಿಂದ ಈ ಮೂರು ಪದಾರ್ಥಗಳು 1:16:8 ನಿಷ್ಟತ್ತಿಯಲ್ಲಿರುವಂತೆ 1 ನಿಷ್ಕಕ್ಕೆ ಕೊಡು (ನಿಷ್ಕ, ದ್ರಮ್ಮ ಇವು ಹಳೆಯ ನಾಣ್ಯಗಳು; 1 ನಿಷ್ಕ = 16 ದ್ರಮ್ಮ). ಉತ್ತರ: 14ದ್ರಮ್ಮಕ್ಕೆ  ಪಲ ಕರ್ಪೂರ,  ದ್ರಮ್ಮಕ್ಕೆ  ಪಲ ಚಂದನ ಮತ್ತು  ದ್ರಮ್ಮಕ್ಕೆ  ಪಲ ಅಗರು. ವರ್ಗ ಸಮೀಕರಣ ಅರ್ಥ: ದುಂಬಿಗಳ ಗುಂಪಿನಲ್ಲಿರುವ ಸಂಖ್ಯೆಯ ಅರ್ಧದ ವರ್ಗಮೂಲದಷ್ಟು ಮಾಲತೀ ಪುಷ್ಪಗಳಿಗೆ ಹೋದುವು: ಒಟ್ಟು ಸಂಖ್ಯೆಯ 8/9 ಭಾಗ ಕೂಡ ಅಲ್ಲಿಗೇ ಹೋದುವು. ಒಂದು ಗಂಡು ದುಂಬಿ ಕಮಲ ಪುಷ್ಪದ ಪರಿಮಳಕ್ಕೆ ಆಸೆಪಟ್ಟು ಅದರ ಮಧ್ಯದಲ್ಲಿ ಸೇರಿದ್ದ ವೇಳೆಯಲ್ಲಿ ರಾತ್ರಿಯಾಗಿ ಪುಷ್ಪ ಮುಚ್ಚಿಕೊಂಡಿತು. ಈ ದುಂಬಿ ಒಳಗೆ ಸಿಕ್ಕಿಹೋಯಿತು. ಇದರ ಹೆಣ್ಣು ದುಂಬಿ ಒಳಗಿನಿಂದ ಬರುವ ಕೂಗಿಗೆ ಪ್ರತ್ಯುತ್ತರ ಕೊಡುತ್ತ ಹೊರಗೆ ಇತ್ತು. ದುಂಬಿಗಳ ಸಂಖ್ಯೆ ಎಷ್ಟು? ಉತ್ತರ: ದುಂಬಿಗಳ ಸಂಖ್ಯೆ x ಅದರೆ, ಇದರಿಂದ ಬರುವ ಸಮೀಕರಣ:   (ವರ್ಗಸಮೀಕರಣದ ಮತ್ತೊಂದು ಮೂಲ ಋಣಸಂಖ್ಯೆಯಾದ್ದರಿಂದ ಉಪಯೋಗವಾಗುವುದಿಲ್ಲ.) ಪೈಥಾಗೊರಸನ ಪ್ರಮೇಯ ಅರ್ಥ: 9 ಮೊಳ ಎತ್ತರದ ಕಂಬದ ಮೇಲೆ ಒಂದು ನವಿಲು ಕುಳಿತಿದೆ. ಕಂಬದ ಬುಡದಲ್ಲಿ ಒಂದು ಹುತ್ತ. ಹುತ್ತದ ಕಡೆಗೆ 27 ಮೊಳ ದೂರದಿಂದ ಒಂದು ಹಾವು ಬರುತ್ತಿದೆ. ಇದನ್ನು ಕಂಡು, ನವಿಲು ನೇರವಾಗಿ ಬಂದು ಹಾವನ್ನು ಹಿಡಿದುಬಿಡುತ್ತದೆ. ನವಿಲಿನ ವೇಗವೂ ಹಾವಿನ ವೇಗವೂ ಒಂದೇ ಆದರೆ, ಹುತ್ತದಿಂದ ಎಷ್ಟು ದೂರದಲ್ಲಿ ಹಾವು ಸಿಕ್ಕಿಬೀಳುತ್ತದೆ? ಉತ್ತರ: AB = ಕಂಬ = 9 AC = 27 AD = x ಆದರೆ BD = DC = 27 - x x = 12 ಲೀಲಾವತಿ ಗ್ರಂಥಕ್ಕೆ ಅನೇಕರು ವ್ಯಾಖ್ಯಾನಗಳನ್ನು ಬರೆದಿರುತ್ತಾರೆ. ಅಕ್ಬರನ ಕಾಲದಲ್ಲಿ ಲೀಲಾವತಿಯೂ ಬೀಜಗಣಿತವೂ ಪಾರ್ಸಿ ಭಾಷೆಗೆ ಭಾಷಾಂತರ ಮಾಡಲ್ಪಟ್ಟವು. ಕಲನಶಾಸ್ತ್ರ ಅವಕಲನಶಾಸ್ತ್ರವನ್ನು (ಕ್ಯಾಲ್ಕ್ಯುಲಸ್) ಭಾಸ್ಕರ ಸ್ವಲ್ಪಮಟ್ಟಿಗೆ ಆರಂಭಿಸಿದ. ಗ್ರಹಗಳ ಚಲನೆಯನ್ನು ದಿನಂಪ್ರತಿ ಕಂಡುಹಿಡಿಯುವ ಸಂದರ್ಭದಲ್ಲಿ ತಾತ್ಕಾಲಿಕ ಗತಿ ಎಂಬ ಕಲನಶಾಸ್ತ್ರದ ಪರಿಕಲ್ಪನೆಯನ್ನು ಮೂಡಿಸಿ  ಎಂಬ ಪ್ರಮೇಯವನ್ನು ಕೊಟ್ಟ,50 Timeless Scientists von K.Krishna Murty ಎಂದರೆ ಅವಕಲನಾಂಕದ (ಡಿಫರೆನ್ಷಿಯಲ್ ಕೋಎಫಿಶಂಟ್) ಮೊತ್ತಮೊದಲನೆಯ ಉದಾಹರಣೆಯನ್ನು ಭಾಸ್ಕರ ನ್ಯೂಟನ್ ಲೈಬ್‍ನಿಟ್ಸರಿಗಿಂತ 500 ವರ್ಷಗಳ ಹಿಂದೆಯೇ ಕೊಟ್ಟಿದ್ದ. ಅಲ್ಲದೆ, f(x) ಫಲನ (ಫಂಕ್ಷನ್) ಗರಿಷ್ಠ ಅಥವಾ ಕನಿಷ್ಠ ಪಡೆದಾಗ ಅದರ ಅವಕಲನಾಂಕ ಶೂನ್ಯ, ಎಂದರೆ ಚಿಹ್ನೆಗಳಲ್ಲಿ, f(x) ಗರಿಷ್ಠ ಅಥವಾ ಕನಿಷ್ಠವಾದಾಗ, f'(x) = 0 ಎಂಬ ಪ್ರಮೇಯವನ್ನು ಕೊಟ್ಟಿದ್ದ. ಬೀಜಗಣಿತ ಭಾಸ್ಕರನ ಅತಿಮುಖ್ಯ ಸಂಶೋಧನೆ ಎಂದರೆ Nx2 + 1 = y2 ಎಂಬ ಸಮೀಕರಣಕ್ಕೆ ಬ್ರಹ್ಮಗುಪ್ತ ಕೊಟ್ಟಿರುವ ಸಾಧನೆಯನ್ನು ಮುಂದುವರಿಸುತ್ತ ಚಕ್ರವಾಳವೆಂಬ ವಿಧಾನವನ್ನು ಕೊಟ್ಟದ್ದು.Hoiberg & Ramchandani – Students' Britannica India: Bhaskaracharya II, page 200Kumar, page 2350 Timeless Scientists von K.Krishna Murty ಬ್ರಹ್ಮಗುಪ್ತ ಈ ಸಮೀಕರಣದ ಸಾಧನೆಯನ್ನು  ಎಂಬ ಸಮೀಕರಣದ ಸಾಧನೆ ಅವಲಂಬಿಸುವಂತೆ ಮಾಡಿದ. ಆದರೆ ಈ ಎರಡನೆಯ ಸಮೀಕರಣವನ್ನು ಹೇಗೆ ಸಾಧಿಸಬಹುದು ಎಂದು ತಿಳಿಸಲಿಲ್ಲ. ಇದಕ್ಕಾಗಿ ಭಾಸ್ಕರ ಚಕ್ರವಾಳ ವಿಧಾನವನ್ನು ಶೋಧಿಸಿದ. ಯಾವುದಾದರೂ k ತೆಗೆದುಕೊಂಡು ಮೊದಲು na2 + k = b2 ಎಂಬ ಸಮೀಕರಣವನ್ನು ಪಡೆಯುವುದು. ಇದರೊಂದಿಗೆ N.12 + (m2 - N) = m2 ಎಂಬುದನ್ನು ಸಮೀಕರಿಸಿ ಎಂಬುದನ್ನು ಪಡೆಯುವುದು. ಕುಟ್ಟಕ ವಿಧಾನದಿಂದ  ಪೂರ್ಣಾಂಕವಾಗುವಂತೆಯೂ m2 - N ಕನಿಷ್ಠವಾಗುವಂತೆಯೂ m ಪಡೆಯುವುದು. m - n ಎನ್ನೋಣ. ಈಗ  ಆದರೆ a1, b1, k1 ಮೂರೂ ಪೂರ್ಣಾಂಕಗಳೆಂದು ಸಾಧಿಸಬಹುದು. ಈಗ a, b, k ಗಳಿಂದ a1, b1, k1 ಪಡೆದಂತೆಯೇ a1, b1, k1 ಗಳಿಂದ a2, b2, k2 ಗಳನ್ನು ಪಡೆಯಬೇಕು. ಈ ವಿಧಾನವನ್ನು ಪುನಃ ಪುನಃ ಆಚರಿಸುತ್ತ ಬಂದಲ್ಲಿ  ಅಥವಾ  ಎಂಬ ಘಟ್ಟ ಬಂದೇಬರುತ್ತದೆ. ಅದರಿಂದಾಚೆಗೆ ಬ್ರಹ್ಮಗುಪ್ತನ ವಿಧಾನದಿಂದ Nx2 + 1 = y2 ಸಮೀಕರಣಕ್ಕೆ ಉತ್ತರ ದೊರಕುತ್ತದೆ. ಒಂದು ಉತ್ತರ ದೊರಕಿದ ಮೇಲೆ, ಅದರಿಂದ ಸಮಾಸ ಕ್ರಿಯೆ ಆಚರಿಸಿ ಅನಂತ ಸಂಖ್ಯೆಯಲ್ಲಿ ಉತ್ತರಗಳನ್ನು ಪಡೆಯಬಹುದು. ಉದಾಹರಣೆ: 61x2 + 1 = y2. ಇದು ಒಂದು ಚಾರಿತ್ರಿಕ ಉದಾಹರಣೆ. ಫರ್ಮಾ ಎಂಬ ಪ್ರಸಿದ್ಧ ಫ್ರೆಂಚ್ ವಿದ್ವಾಂಸ 1657ರಲ್ಲಿ ಇದರ ಸಾಧನೆಯನ್ನು ಪಂದ್ಯವಾಗಿ ತನ್ನ ಮಿತ್ರರಿಗೆ ಕೊಟ್ಟ. ಭಾಸ್ಕರಾಚಾರ್ಯ 1150ರಲ್ಲಿ ಇದೇ ಲೆಕ್ಕವನ್ನು ತನ್ನ ಚಕ್ರವಾಳ ವಿಧಾನದಿಂದ ಮೂರೇ ಹೆಜ್ಜೆಗಳಲ್ಲಿ ಉತ್ತರ ಪಡೆಯುತ್ತಾನೆ.Mathematical Achievements of Pre-modern Indian Mathematicians von T.K Puttaswamy ಇದನ್ನು ಸರಿದೂಗಿಸುವ ಕನಿಷ್ಠ ಸಂಖ್ಯೆಗಳಿವು: x = 226,153,980; y = 1,766,319,049. Nx2 + 1 = y2 ಎಂಬ ಸಮೀಕರಣಕ್ಕೆ ಬ್ರಹ್ಮಗುಪ್ತ-ಭಾಸ್ಕರ ಸಮೀಕರಣ ಎಂಬ ಹೆಸರು ಒಪ್ಪುತ್ತದೆ. ಇದರ ಸಮಗ್ರ ಸಿದ್ಧಾಂತವನ್ನು ಲಗ್ರಾಂಜ್ 1766ರಲ್ಲಿ ಸಂತತ ಭಿನ್ನರಾಶಿಗಳ (ಕಂಟಿನ್ಯೂಡ್ ಫ್ರ್ಯಾಕ್ಷನ್ಸ್) ಸಿದ್ಧಾಂತದ ಸಹಾಯದಿಂದ ವಿವರಿಸಿದ. ಭಾರತೀಯ ವಿಧಾನವೂ ಪಾಶ್ಚಾತ್ಯ ವಿಧಾನವೂ ಸಂಪೂರ್ಣ ಬೇರೆ ಬೇರೆ. ಮೇಲಿನ ಉದಾಹರಣೆಯನ್ನು ಎರಡು ವಿಧಾನಗಳಿಂದಲೂ ಸಾಧಿಸಿದರೆ ಈ ವ್ಯತ್ಯಾಸದ ಅಂತರ ವ್ಯಕ್ತವಾಗುವುದು. ಬ್ರಹ್ಮಗುಪ್ತ-ಭಾಸ್ಕರ ಸಮೀಕರಣಕ್ಕೆ ಪರಿವರ್ತಿಸಿ ಉತ್ತರ ಪಡೆಯಬೇಕಾದ ಕೆಲವು ಲೆಕ್ಕಗಳನ್ನು ಭಾಸ್ಕರ ಕೊಡುತ್ತಾನೆ. ಉದಾಹರಣೆಗೆ ಎರಡು ಸಂಖ್ಯೆಗಳ ಮೊತ್ತದ ವರ್ಗಕ್ಕೆ ಅವುಗಳ ಮೊತ್ತದ ಘನವನ್ನು ಸೇರಿಸಿದರೆ, ಸಂಖ್ಯೆಗಳ ಘನಗಳ ಮೊತ್ತದ ಎರಡರಷ್ಟಾಗುತ್ತದೆ. ಸಂಖ್ಯೆಗಳಾವುವು? ಈ ಪ್ರಶ್ನೆಯನ್ನು ಪ್ರಾಚೀನ ಗ್ರಂಥಕರ್ತರಿಂದ ತೆಗೆದುಕೊಂಡುದೆಂದು ಭಾಸ್ಕರ ತಿಳಿಸುತ್ತಾನೆ. ಸಂಖ್ಯೆಗಳನ್ನು x+y, x-y ಎಂದು ತೆಗೆದುಕೊಂಡು ಭಾಸ್ಕರ ಮೇಲಿನ ಉಕ್ತಿಯನ್ನು  ಎಂಬ ಬೀಜವಾಕ್ಯವಾಗಿ ಬರೆಯುತ್ತಾನೆ. ಇದನ್ನು ಸುಲಭ ರೂಪಕ್ಕೆ ತಂದರೆ  ದೊರೆಯುತ್ತದೆ. ಇದರ ಪರಿಹಾರಗಳು y = 2, z = 7; y = 28, z =97 ಇತ್ಯಾದಿ. ಆದ್ದರಿಂದ ನಮಗೆ ಬೇಕಾದ ಸಂಖ್ಯೆ (5, 76), (1, 20), ಇತ್ಯಾದಿ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ನಿಧನ ಭಾಸ್ಕರಾಚಾರ್ಯನು ಕ್ರಿ. ಶ. 1185ರಲ್ಲಿ ಮರಣಹೊಂದಿದ. ಮುಖ್ಯ ಕೃತಿಗಳು ಲೀಲಾವತಿ ಗಣಿತ (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ). ಬೀಜಗಣಿತ ಸಿದ್ಧಾಂತಶಿರೋಮಣಿ: ಇದರಲ್ಲಿ ಎರಡು ಭಾಗಗಳಿವೆ: ಗೋಳಾಧ್ಯಾಯ ಗ್ರಹಗಣಿತ ಹೆಚ್ಚಿನ ಮಾಹಿತಿಗಾಗಿ ಭಾಸ್ಕರಾಚಾರ್ಯ ವಿರಚಿತ ಲೀಲಾವತಿ 108 ಆಯ್ದ ಲೆಕ್ಕಗಳು ಇವನ್ನೂ ನೋಡಿ ಭಾರತೀಯ ಗಣಿತಜ್ಞರು ಉಲ್ಲೇಖಗಳು ಹೆಚ್ಚಿನ ಓದಿಗೆ W. W. Rouse Ball. A Short Account of the History of Mathematics, 4th Edition. Dover Publications, 1960. George Gheverghese Joseph. The Crest of the Peacock: Non-European Roots of Mathematics, 2nd Edition. Penguin Books, 2000. University of St Andrews, 2000. Ian Pearce. Bhaskaracharya II at the MacTutor archive. St Andrews University, 2002. ಹೊರಗಿನ ಸಂಪರ್ಕಗಳು Bhaskara II - ಭಾಸ್ಕರಾಚಾರ್ಯ 4to40 Biography ವರ್ಗ:ಗಣಿತ ವರ್ಗ:ಭಾರತದ ವಿಜ್ಞಾನಿಗಳು ವರ್ಗ:ಭಾರತೀಯ ಗಣಿತಜ್ಞರು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಪಿ.ವಿ.ನರಸಿಂಹರಾವ್
https://kn.wikipedia.org/wiki/ಪಿ.ವಿ.ನರಸಿಂಹರಾವ್
+ ಪಿ ವಿ ನರಸಿಂಹರಾವ್ ಪಿ ವಿ ನರಸಿಂಹರಾವ್ ಜನನ: ಜೂನ್ ೨೮, ೧೯೨೧ www.pmindia.gov.in/kn ಶ್ರೀ ಪಿ.ವಿ.ನರಸಿಂಹರಾವ್ ನಿಧನ: ಡಿಸೆಂಬರ್ ೨೩, ೨೦೦೪ ಜನ್ಮಸ್ಥಳ ಕರೀಮನಗರ, ಆಂಧ್ರ ಪ್ರದೇಶ ಭಾರತದ ಪ್ರಧಾನ ಮಂತ್ರಿ Tenure Order: ೯ ನೆಯ ಪ್ರಧಾನ ಮಂತ್ರಿ ರಾಜಕೀಯ ಪಕ್ಷ ಕಾಂಗ್ರೆಸ್ ಪಕ್ಷ ಪ್ರಮಾಣ ವಚನ ಸ್ವೀಕಾರ: ಜೂನ್ ೨೮, ೧೯೯೧ ಅವಧಿ ಅಂತ್ಯ: ಮೇ ೧೬, ೧೯೯೬ ಹಿಂದಿನ ಪ್ರಧಾನ ಮಂತ್ರಿ ಚಂದ್ರಶೇಖರ್ ಮುಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಪಾಮುಲಪರ್ತಿ ವೆಂಕಟ ನರಸಿಂಹರಾವ್ (ತೆಲುಗು:పి.వి.నరసింహారావు) (ಜೂನ್ ೨೮, ೧೯೨೧ - ಡಿಸೆಂಬರ್ ೨೩, ೨೦೦೪) ಭಾರತದ ೯ ನೆಯ ಪ್ರಧಾನ ಮಂತ್ರಿಗಳು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ನರಸಿಂಹರಾವ್, ಸ್ವಾತಂತ್ರ್ಯಾನಂತರ ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಕೆಲವು ಖಾತೆಗಳನ್ನು ನಿರ್ವಹಿಸಿ ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಇದರ ನಂತರ ರಾಷ್ಟ್ರೀಯ ಮಟ್ಟಕ್ಕೇರಿದ ನರಸಿಂಹರಾವ್ ಕೇಂದ್ರ ಸರ್ಕಾರದ ಕೆಲ ಖಾತೆಗಳನ್ನು ನಿರ್ವಹಿಸಿದರು (ಮುಖ್ಯವಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸರ್ಕಾರಗಳಲ್ಲಿ ವಿದೇಶ ವ್ಯವಹಾರಗಳ ಖಾತೆ). ೧೯೯೧ ರಲ್ಲಿ ರಾಜೀವ್ ಗಾಂಧಿಯವರ ಮರಣಾನಂತರ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನೆಹರು-ಗಾಂಧಿ ಮನೆತನಕ್ಕೆ ಸೇರಿದವರಲ್ಲದಿದ್ದರೂ ಪೂರ್ಣ ಐದು ವರ್ಷಗಳ ಕಾಲ ಪ್ರಧಾನಿ ಸ್ಥಾನದಲ್ಲಿದ್ದ ಮೊದಲ ವ್ಯಕ್ತಿ ನರಸಿಂಹರಾಯರೇ. ಅವರು ಪ್ರಧಾನಿಯಾದ ಹೊಸತರಲ್ಲಿ ಭಾರತ ಸರ್ಕಾರ ತೀವ್ರವಾದ ಆರ್ಥಿಕ ತೊಂದರೆಯಲ್ಲಿತ್ತು. ತುರ್ತಾಗಿ ಡಾ. ಮನಮೋಹನ್ ಸಿಂಗ್ ಅವರನ್ನು ವಿತ್ತ ಮಂತ್ರಿ ಸ್ಥಾನಕ್ಕೆ ಮತ್ತು ಮಾಂಟೇಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ವಿತ್ತ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿದ ರಾವ್, ಆರ್ಥಿಕ ಸ್ವತಂತ್ರೀಕರಣ ನೀತಿಗಳನ್ನು ಪರಿಚಯಿಸಿದರು. ತಕ್ಷಣವೇ ಸುಧಾರಿಸಲಾರಂಭಿಸಿದ ಭಾರತೀಯ ಆರ್ಥಿಕ ವ್ಯವಸ್ಥೆ, ಶೇ. ೫.೫ ರ ಪ್ರಮಾಣದಲ್ಲಿ ಮೇಲೇರಲಾರಂಭಿಸಿತು. ಇಡೀ ದಶಕದ ವರೆಗೆ ಇಷ್ಟು ಅಥವಾ ಇನ್ನೂ ಹೆಚ್ಚು ಸುಧಾರಣೆಯನ್ನು ಭಾರತ ದಾಖಲಿಸುತ್ತಾ ಬಂದಿದೆ. ತಮ್ಮ ಅವಧಿ ಮುಗಿದ ನಂತರ ಅನೇಕ ಲಂಚ ಪ್ರಕರಣಗಳಲ್ಲಿ ನರಸಿಂಹರಾವ್ ಆಪಾದಿತರಾಗಿದ್ದರು. ನ್ಯಾಯಾಲಯದಲ್ಲಿ ಇವರ ವಿರುದ್ಧ ತೀರ್ಪು ಬಂದರೂ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯ ಅವರನ್ನು ಎಲ್ಲ ಆಪಾದನೆಗಳಿಂದ ಮುಕ್ತಗೊಳಿಸಿತು. ೧೭ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದ ರಾವ್, ಜ್ಞಾನಪೀಠ ಪುರಸ್ಕೃತ ತೆಲುಗು ಲೇಖಕ ವಿಶ್ವನಾಥ ಸತ್ಯನಾರಾಯಣರ ಕಾದಂಬರಿ "ವೇಯಿ ಪದಗಾಲು" ಅನ್ನು ಹಿಂದಿ ಭಾಷೆಗೆ "ಸಹಸ್ರ ಫಣ್" ಹೆಸರಿನಲ್ಲಿ ಭಾಷಾಂತರಿಸಿದ್ದಾರೆ. ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಿದ್ದ ನರಸಿಂಹರಾವ್ ಅವರಿಗೆ ಸುದ್ದಿ ಮಾಧ್ಯಮದವರು ಇಟ್ಟ ಅಡ್ಡಹೆಸರು "ಚಾಣಕ್ಯ"! ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಭಾರತೀಯ ರಾಜಕೀಯದ ಬಗೆಗೆ "ದ ಇನ್‌ಸೈಡರ್" ಎಂಬ ಇಂಗ್ಲಿಷ್ ಕಾದಂಬರಿಯನ್ನು ಬರೆದರು. ಡಿಸಂಬರ್ ೨೦೦೪ ರಲ್ಲಿ ಹೃದಯಾಘಾತಕ್ಕೆ ಒಳಗಾದ ರಾವ್ ಡಿಸಂಬರ್ ೨೩ ರಂದು ನಿಧನರಾದರು. ಉಕ್ತಿ "ನಾನು ನಿರ್ಧಾರ ಮಾಡದಿರುವಾಗಲೂ ವಿಷಯದ ಬಗ್ಗೆ ಯೋಚಿಸಿರುತ್ತೇನೆ. ಯೋಚಿಸಿದ ಮೇಲೆ, ಅದರ ಬಗ್ಗೆ ನಿರ್ಧಾರ ಮಾಡುವುದು ಬೇಡ ಎಂಬ ನಿರ್ಧಾರ ತೆಗೆದುಕೊಂಡಿರುತ್ತೇನೆ." ಉಲ್ಲೇಖಗಳು ಹಿಂದಿನ ಪ್ರಧಾನಿಗಳು:ಚಂದ್ರಶೇಖರ್ ಭಾರತದ ಪ್ರಧಾನ ಮಂತ್ರಿ ಮುಂದಿನ ಪ್ರಧಾನಿಗಳು:ಅಟಲ್ ಬಿಹಾರಿ ವಾಜಪೇಯಿ ವರ್ಗ:ರಾಜಕೀಯ ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:ತೆಲುಗು ಪ್ರಮುಖರು
ನರಸಿಂಹ ರಾವ್
https://kn.wikipedia.org/wiki/ನರಸಿಂಹ_ರಾವ್
REDIRECT ಪಿ.ವಿ.ನರಸಿಂಹರಾವ್
ಸಾಂಟಾ ಕ್ಲಾಸ್
https://kn.wikipedia.org/wiki/ಸಾಂಟಾ_ಕ್ಲಾಸ್
thumb ಜಾನಪದ ಕತೆ ಮಕ್ಕಳಿಗೆ ಸಾಮಾನ್ಯವಾಗಿ ಹೇಳಲಾಗುವ ಕತೆಯಂತೆ, ಸಾಂಟಾ ಕ್ಲಾಸ್ ಒಳ್ಳೆಯ, ನಗುಮುಖದ, ಬಿಳಿ ದಾಡಿಯುಳ್ಳ ಡುಮ್ಮ ಹೊಟ್ಟೆಯ ವ್ಯಕ್ತಿ; ಕ್ರಿಸ್ಮಸ್ ನ ಹಿಂದಿನ ದಿನ ("ಕ್ರಿಸ್ಮಸ್ ಈವ್") ಹಿಮಜಿಂಕೆಗಳಿಂದ (ರೀಯಿಂಡೀರ್) ತನ್ನ ಗಾಡಿಯಲ್ಲಿ ಹಾರುತ್ತ ಎಲ್ಲರ ಮನೆಗೂ ಹೋಗಿ ಅಲ್ಲಿರುವ ಮಕ್ಕಳಿಗಾಗಿ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ. ಕ್ರಿಸ್ಮಸ್ ಬಿಟ್ಟರೆ ವರ್ಷದ ಉಳಿದ ಭಾಗ ಸಾಂಟಾ ತನ್ನ ಮನೆಯಲ್ಲಿ ತನ್ನ ಪತ್ನಿಯ ("ಮಿಸೆಸ್ ಸಾಂಟಾ ಕ್ಲಾಸ್") ಜೊತೆ ಇರುತ್ತಾನೆ. ಸಾಂಟಾ ನ ಮನೆ ಎಲ್ಲಿದೆ ಎಂಬುದರ ಬಗ್ಗೆ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಕಥೆಗಳಿವೆ - ಉತ್ತರ ಅಮೆರಿಕದ ಜಾನಪದ ಕಥೆಯಂತೆ ಸಾಂಟಾ ಕ್ಲಾಸ್ ವಾಸಿಸುವುದು ಉತ್ತರ ಧ್ರುವದಲ್ಲಿ ಮತ್ತು ಸೇಂಟ್ ಜಾರ್ಜ್ ಸಾಂತಾ ಕ್ಲಾಸ್ ಮತ್ತು ತಾಯಿಯ ಕ್ರಿಸ್ಮಸ್ ಮತ್ತು ಕುಟುಂಬವನ್ನು ಗೌರವಿಸಿ ಮತ್ತು ನಿಮಗೆ ಮಕ್ಕಳನ್ನು ಜಾರ್ಜ್ ಮತ್ತು ಮಿಟರ್ ನೈಟ್ ಮೂನ್ ಮತ್ತು ಸೋಲ್ ಇನ್ವಿಕ್ಟಸ್ ಸನ್ ಡೇ ಜಾರ್ಜ್ ಯುನಿವರ್ಸಲಿ ಸತ್ಯದ ರಿಯಾಲಿಟಿ ಪ್ರಶಾಂತತೆ ನ್ಯಾಯ ಮತ್ತು ಶಾಶ್ವತ ಜೀವನದಲ್ಲಿ ಶಾಶ್ವತವಾದ ಹೃದಯದೊಂದಿಗೆ ಶಾಂತಿ ಅನಂತತೆಯನ್ನು ಹೊಂದಿರುವ ಉಡುಗೊರೆಗಳನ್ನು ನೀಡುವುದಿಲ್ಲ. ದೊಡ್ಡವರು ಯಾರೂ ಸಾಂಟಾ ಕ್ಲಾಸ್ ಅನ್ನು ನಂಬದಿದ್ದರೂ, ಮಕ್ಕಳಲ್ಲಿ ವಿನೋದಕ್ಕಾಗಿ ಈ ಕಥೆಯನ್ನು ಪ್ರಚಲಿತವಾಗಿರಿಸಲಾಗಿದೆ. ಸ್ವಲ್ಪ ದೊಡ್ಡವರಾದ ಮೇಲೆ ಮಕ್ಕಳಿಗೆ ಸಾಂಟಾ ಕ್ಲಾಸ್ ಕೇವಲ ಜಾನಪದ ನಂಬಿಕೆ ಎಂದು ತಿಳಿಯುತ್ತದೆ. ವರ್ಗ:ನಂಬಿಕೆಗಳು
ಜನ ಗಣ ಮನ
https://kn.wikipedia.org/wiki/ಜನ_ಗಣ_ಮನ
REDIRECT ಭಾರತದ ರಾಷ್ಟ್ರಗೀತೆ
ಮು೦ಬೈ
https://kn.wikipedia.org/wiki/ಮು೦ಬೈ
REDIRECT ಮುಂಬಯಿ.
ಭಾರತೀಯ ಕ್ರಿಕೆಟ್ ತಂಡ
https://kn.wikipedia.org/wiki/ಭಾರತೀಯ_ಕ್ರಿಕೆಟ್_ತಂಡ
ಭಾರತೀಯ ಕ್ರಿಕೆಟ್ ತ೦ಡ ಭಾರತ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಭಾರತ ತ೦ಡ ಮೊದಲ ಟೆಸ್ಟ್ ಪ೦ದ್ಯವನ್ನು ಜೂನ್ ೨೫, ೧೯೩೨ ರಲ್ಲಿ ಇ೦ಗ್ಲೆ೦ಡಿನ ಲಾರ್ಡ್ಸ್ ಮೈದಾನದಲ್ಲಿ ಆಡಿತು. ಭಾರತದ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವು 25 ಜೂನ್ 1932 ರಂದು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್‌ನಲ್ಲಿ ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿತು, ಟೆಸ್ಟ್ ಕ್ರಿಕೆಟ್ ಸ್ಥಾನಮಾನವನ್ನು ಪಡೆದ ಆರನೇ ತಂಡವಾಯಿತು. ಭಾರತ ತನ್ನ ಮೊದಲ ಟೆಸ್ಟ್ ಗೆಲುವಿಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ 1952 ರವರೆಗೆ ಕಾಯಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಐವತ್ತು ವರ್ಷಗಳಲ್ಲಿ, 196 ಟೆಸ್ಟ್‌ಗಳಲ್ಲಿ ಕೇವಲ 35 ಗೆಲುವುಗಳೊಂದಿಗೆ ಯಶಸ್ಸು ಸೀಮಿತವಾಗಿತ್ತು. ಭಾರತೀಯ ಕ್ರಿಕೆಟ್ ತಂಡವು ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಐ.ಸಿ.ಸಿ. ಸ್ಥಾನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಇತಿಹಾಸ ಬೆಳವಣಿಗೆ ಭಾರತೀಯ ತ೦ಡದ ಆರ೦ಭಿಕ ವರ್ಷಗಳ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸಿ ಕೆ ನಾಯುಡು, ಲಾಲಾ ಅಮರ್ನಾಥ್, ಮೊಹಮ್ಮದ್ ನಿಸಾರ್ ಮೊದಲಾದವರು. ಸ್ವಾತ೦ತ್ರ್ಯಾನ೦ತರ ಭಾರತ ಆಡಿದ ಮೊದಲ ಪ೦ದ್ಯ ೧೯೪೮ ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಬ್ರಿಸ್ಬೇನ್ ನಲ್ಲಿ. ಭಾರತದ ನಾಯಕತ್ವವನ್ನು ಲಾಲಾ ಅಮರ್ನಾಥ್ ವಹಿಸಿದ್ದರೆ ಆಸ್ಟ್ರೇಲಿಯಾದ ನಾಯಕತ್ವವನ್ನು ಡಾನ್ ಬ್ರಾಡ್ಮನ್ ವಹಿಸಿದ್ದರು. ಭಾರತದ ಮೊದಲ ಟೆಸ್ಟ್ ವಿಜಯ ಬ೦ದದ್ದು ಇ೦ಗ್ಲೆ೦ಡಿನ ವಿರುದ್ಧ ಮದರಾಸಿನಲ್ಲಿ ೧೯೫೨ ರಲ್ಲಿ. ಮೊದಲ ಸರಣಿ ಗೆಲುವು ಬ೦ದಿದ್ದು ಅದೇ ವರ್ಷ ಪಾಕಿಸ್ತಾನದ ವಿರುದ್ಧ. ೫೦ ಮತ್ತು ೬೦ ರ ದಶಕದ ಕೆಲವು ಪ್ರಸಿದ್ಧ ಆಟಗಾರರಲ್ಲಿ ವಿನೂ ಮ೦ಕಡ್, ಹೇಮು ಅಧಿಕಾರಿ, ಮನ್ಸೂರ್ ಅಲಿ ಖಾನ್ ಪಟೌಡಿ, ಚ೦ದೂ ಬೋರ್ಡೆ ಮೊದಲಾದವರನ್ನು ಹೆಸರಿಸಬಹುದು. ಭಾರತದ ಹೊರಗೆ ಮೊದಲ ಟೆಸ್ಟ್ ವಿಜಯ ಬ೦ದದ್ದು ನ್ಯೂಜೀಲೆ೦ಡ್ ನ ವಿರುದ್ಧ ೧೯೬೮ ರಲ್ಲಿ. ೭೦ ರ ದಶಕದಲ್ಲಿ ಭಾರತೀಯ ಕ್ರಿಕೆಟ್ ನ ನಾಲ್ಕು ಮುಖ್ಯ ಬೌಲರ್ ಗಳು ಬಿಷನ್ ಸಿ೦ಗ್ ಬೇಡಿ, ಎರಾಪಳ್ಳಿ ಪ್ರಸನ್ನ, ಬಿ ಎಸ್ ಚ೦ದ್ರಶೇಖರ್ ಮತ್ತು ಶ್ರೀನಿವಾಸ್ ವೆ೦ಕಟರಾಘವನ್. ಇದೇ ಕಾಲದಲ್ಲಿಯೇ ಪ್ರಸಿದ್ಧ ಬ್ಯಾಟುಗರರಾದ ಸುನಿಲ್ ಗವಾಸ್ಕರ್ ಮತ್ತು ಗು೦ಡಪ್ಪ ವಿಶ್ವನಾಥ್ ಬೆಳಕಿಗೆ ಬ೦ದರು. ಈ ದಶಕದ ಕೊನೆಗೆ ಕಪಿಲ್ ದೇವ್ ಉತ್ತಮ ಆಲ್‍ರೌ೦ಡರ್ ಆಗಿ ಬೆಳೆದರು. ೮೦ ರ ದಶಕದಲ್ಲಿ ಮಹಮದ್ ಅಜರುದ್ದೀನ್, ರವಿ ಶಾಸ್ತ್ರಿ, ಸಂಜಯ್ ಮಾಂಜ್ರೇಕರ್, ಕ್ರಷ್ಣಮಾಚಾರಿ ಶ್ರೀಕಾಂತ್, ಮದನ್ ಲಾಲ್, ಮಣಿ೦ದರ್ ಸಿ೦ಗ್ ಮೊದಲಾದವರು ಪ್ರಸಿದ್ಧರಾದರು. ೧೯೮೩ ರಲ್ಲಿ ಭಾರತ ವಿಶ್ವ ಕಪ್ ಅನ್ನು ಗೆದ್ದಿತು. ಮತ್ತೆ ೧೯೮೫ ರಲ್ಲಿ ಆ೦ತಾರಾಷ್ಟ್ರೀಯ ಚಾ೦ಪಿಯನ್‍ ಶಿಪ್ ಅನ್ನು ಆಸ್ಟ್ರೇಲಿಯಾದಲ್ಲಿ ಗೆದ್ದಿತು. ೧೯೮೬ ರಲ್ಲಿ ಇ೦ಗ್ಲೆ೦ಡಿನಲ್ಲಿ ಗೆದ್ದ ಟೆಸ್ಟ್ ಸರಣಿ ಇದುವರೆಗೆ ಭಾರತದ ಹೊರಗೆ ಭಾರತದ ಕೊನೆಯ ಟೆಸ್ಟ್ ಸರಣಿ ವಿಜಯವಾಗಿದೆ. ಇದೇ ದಶಕದಲ್ಲಿ ಗವಾಸ್ಕರ್ ೧೦,೦೦೦ ರನ್ನುಗಳನ್ನು ದಾಟಿದ ಮೊದಲ ಬ್ಯಾಟುಗಾರರಾದರು. ೩೪ ಶತಕಗಳನ್ನು ಸಹ ದಾಖಲಿಸಿದರು. ೯೦ ರ ದಶಕದ ಆರ೦ಭದಲ್ಲಿ ತೆ೦ಡೂಲ್ಕರ್ ಮತ್ತು ಅನಿಲ್ ಕು೦ಬ್ಳೆ ಪ್ರಸಿದ್ಧರಾದರು. ೧೯೯೯ ರಲ್ಲಿ ಅನಿಲ್ ಕು೦ಬ್ಳೆ ಒ೦ದೇ ಇನಿ೦ಗ್ಸಿನಲ್ಲಿ ಹತ್ತೂ ವಿಕೆಟ್ ಗಳನ್ನು (ಪಾಕಿಸ್ತಾನ) ಪಡೆದ ಎರಡನೆಯ ಬೌಲರ್ ಆದರು. ಸಚಿನ ತೆ೦ಡೂಲ್ಕರ್ ಅನೇಕ ದಾಖಲೆಗಳನ್ನು ನಿರ್ಮಿಸುತ್ತಿದ್ದ೦ತೆ (ಏಕದಿನ ಪ೦ದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು ಮತ್ತು ಅತಿ ಹೆಚ್ಚು ಶತಕಗಳು, ಇತ್ಯಾದಿ), ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮೊದಲಾದವರು ಅ೦ತಾರಾಷ್ಟ್ರೀಯ ಕ್ರಿಕೆಟ್‍ ನಲ್ಲಿ ಹೆಜ್ಜೆಯೂರತೊಡಗಿದರು. ಅಂತರರಾಷ್ಟ್ರೀಯ ಪಂದ್ಯಾವಳಿಗಳು ತಂಡವು ಐದು ಪ್ರಮುಖ ICC ಪಂದ್ಯಾವಳಿಗಳನ್ನು ಗೆದ್ದಿದೆ, ಎರಡು ಬಾರಿ ಕ್ರಿಕೆಟ್ ವಿಶ್ವಕಪ್ (1983 ಮತ್ತು 2011), ICC T20 ವಿಶ್ವಕಪ್ ಒಮ್ಮೆ (2007) ಮತ್ತು ICC ಚಾಂಪಿಯನ್ಸ್ ಟ್ರೋಫಿಯನ್ನು ಎರಡು ಬಾರಿ (2002 ಮತ್ತು 2013) ಗೆದ್ದಿದೆ. ಅವರು ವಿಶ್ವಕಪ್‌ನಲ್ಲಿ ಎರಡು ಬಾರಿ (2003 ಮತ್ತು 2023), T20 ವಿಶ್ವಕಪ್‌ನಲ್ಲಿ ಒಮ್ಮೆ (2014), ಚಾಂಪಿಯನ್ಸ್ ಟ್ರೋಫಿ ಎರಡು ಬಾರಿ (2000 ಮತ್ತು 2017) ಮತ್ತು ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳಲ್ಲಿ ಮೊದಲ ಎರಡು ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿ ಮುಗಿಸಿದ್ದಾರೆ ( 2021, 2023). ವೆಸ್ಟ್ ಇಂಡೀಸ್ ನಂತರ ವಿಶ್ವಕಪ್ ಗೆದ್ದ ಎರಡನೇ ತಂಡ ಮತ್ತು 2011 ರ ಕ್ರಿಕೆಟ್ ವಿಶ್ವಕಪ್ ಗೆದ್ದ ನಂತರ ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡವಾಗಿದೆ. ಅವರು 1984, 1988, 1990-91, 1995, 2010, 2016, 2018, 2023 ರಲ್ಲಿ ಎಂಟು ಬಾರಿ ಏಷ್ಯಾ ಕಪ್ ಗೆದ್ದಿದ್ದಾರೆ ಮತ್ತು ಮೂರು ಬಾರಿ ರನ್ನರ್ ಅಪ್ (1997, 2004, 2008) ಗಳಿಸಿದ್ದಾರೆ. 2022ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವೂ ಚಿನ್ನದ ಪದಕ ಗೆದ್ದಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಮೇಸ್ ಅನ್ನು ಐದು ಬಾರಿ ಗೆದ್ದಿರುವುದು ಇತರ ಸಾಧನೆಗಳು. ಅಂತಾರಾಷ್ಟ್ರೀಯ ಮೈದಾನಗಳು ಪಂದ್ಯಾವಳಿಯ ಇತಿಹಾಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವರ್ಷ ಲೀಗ್ ಹಂತ ಫೈನಲ್ ಹೋಸ್ಟ್ ಫೈನಲ್ ಅಂತಿಮ ಸ್ಥಾನ ಸ್ಥಾನ ಪಂದ್ಯ ಡ್ರಾ ಟೈ ೨೦೧೯-೨೦೨೧ ೧/೯ ೧೭ ೧೨ ೪ ೧ ೦ ೦ ೭೨೦ ೫೨೦ ೭೨.೨ ರೋಸ್ ಬೌಲ್, ಇಂಗ್ಲೆಂಡ್ ಗೆ ೮ ವಿಕೆಟ್‌ಗಳಿಂದ ಸೋತಿತು ರನ್ನರ್ ಅಪ್ ೨೦೨೧-೨೦೨೩ ೨/೯ ೧೮ ೧೦ ೫ ೩ ೦ ೫ ೨೧೬ ೧೨೭ ೫೮.೮ ದಿ ಓವಲ್, ಇಂಗ್ಲೆಂಡ್ ಗೆ 209 ರನ್‌ಗಳಿಂದ ಸೋತಿತು ರನ್ನರ್ ಅಪ್ ಕ್ರಿಕೆಟ್ ವಿಶ್ವ ಕಪ್ ವರ್ಷಸುತ್ತುಪಂದ್ಯಜಯಸೋಲುಟೈ ೧೯೭೫ಮೊದಲ ಸುತ್ತು೩೧೨೦ ೧೯೭೯೩೦೩೦ ೧೯೮೩ಚಾಂಪಿಯನ್‌೮೬೨೦ ೧೯೮೭ಸೆಮಿ ಫೈನಲ್ಸ್೭೫೨೦ ೧೯೯೨ಮೊದಲ ಸುತ್ತು೮೨೫೦ ೧೯೯೬ಸೆಮಿ ಫೈನಲ್ಸ್೭೪೩೦ ೧೯೯೯ಸೂಪರ್ ೬೮೪೪೦ ೨೦೦೩ರನ್ನರ್ ಅಪ್೧೧೯೨೦ ೨೦೦೭ ಗುಂಪು ಹಂತ೩೧೨೦ ೨೦೧೧ಚಾಂಪಿಯನ್‌೯೭೧೧ ೨೦೧೫ಸೆಮಿ ಫೈನಲ್ಸ್೮೭೧೦ ೨೦೧೯ಸೆಮಿ ಫೈನಲ್ಸ್೧೦೭೨೦ ೨೦೨೩ರನ್ನರ್ ಅಪ್೧೧೧೦೧೦ ಒಟ್ಟು ೨ ಕಪ್ಗಳು೯೬ ೬೩ ೩೦ ೧ ಟಿ20 ವಿಶ್ವಕಪ್ ಟಿ20 ವಿಶ್ವಕಪ್ ದಾಖಲೆವರ್ಷಸುತ್ತುಸ್ಥಾನಪಂದ್ಯಜಯಸೋಲುಟೈNR ೨೦೦೭ ಚಾಂಪಿಯನ್‌ ೧/೧೨೭೫೧೧೦ ೨೦೦೯ ಸೂಪರ್ 8 ೭/೧೨೫೨೩೦೦ ೨೦೧೦ ೮/೧೨೫೨೩೦೦ ೨೦೧೨ ೫/೧೨೫೪೧೦೦ ೨೦೧೪ ರನ್ನರ್ ಅಪ್ ೨/೧೬೬೫೧೦೦ ೨೦೧೬ ಸೆಮಿ ಫೈನಲ್ಸ್೪/೧೬೫೩೨೦೦ ೨೦೨೧ ಸೂಪರ್ ೧೨೬/೧೬ ೫೩೨೦೦ ೨೦೨೨ ಸೆಮಿ ಫೈನಲ್ಸ್೩/೧೬೬೪೨೦೦ ೨೦೨೪ಅರ್ಹತೆ ಪಡೆದಿದ್ದಾರೆಒಟ್ಟು೧ ಕಪ್ಗಳು೮/೮೪೫೨೮೧೫೧೧ ಪ್ರಸ್ತುತ ತಂಡ ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ. ಹೆಸರು ವಯಸ್ಸು ಬ್ಯಾಟಿಂಗ್ ಶೈಲಿ ಬೌಲಿಂಗ್ ಶೈಲಿ ಟಿಪ್ಪಣಿ ಬ್ಯಾಟರ್ಸ್ ರುತುರಾಜ್ ಗಾಯಕ್ವಾಡ್ Right-handed ಶುಭಮನ್ ಗಿಲ್ Right-handed Right-arm off spin ಶ್ರೇಯಸ್ ಅಯ್ಯರ್ Right-handed Right-arm leg spin ಯಶಸ್ವಿ ಜೈಸ್ವಾಲ್ Left-handed Right-arm leg spin ಸರ್ಫರಾಜ್ ಖಾನ್ Right-handed Right-arm leg break ವಿರಾಟ್ ಕೊಹ್ಲಿ Right-handed Right-arm medium ರಜತ್ ಪಾಟಿದಾರ್ Right-handed ದೇವದತ್ ಪಡಿಕ್ಕಲ್ Left-handed ರೋಹಿತ್ ಶರ್ಮಾ Right-handed Right-arm off break ನಾಯಕ ರಿಂಕು ಸಿಂಗ್ Left-handed Right-arm off break ಸೂರ್ಯಕುಮಾರ್ ಯಾದವ್ Right-handed Right-arm off spin ವಿಕೆಟ್ ಕೀಪರ್‌ ಶ್ರೀಕರ್ ಭಾರತ್ Right-handed ಇಶಾನ್ ಕಿಶನ್ Left-handed ಕೆ.ಎಲ್.ರಾಹುಲ್ Right-handed ಸಂಜು ಸ್ಯಾಮ್ಸನ್ Right-handed ರಿಷಭ್ ಪಂತ್ Left-handed ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ Right-handed Right-arm off spin ಶಿವಂ ದುಬೆ Left-handed Right-arm medium ರವೀಂದ್ರ ಜಡೇಜಾ Left-handed Slow left-arm orthodox ಹಾರ್ದಿಕ್ ಪಾಂಡ್ಯ Right-handed Right-arm medium-fast ODI, T20I ಉಪನಾಯಕ ಅಕ್ಷರ್ ಪಟೇಲ್ Left-handed Slow left-arm orthodox ವಾಷಿಂಗ್ಟನ್ ಸುಂದರ್ Left-handed Right-arm off spin ಪೇಸ್ ಬೌಲರ್‌ ಜಸ್ಪ್ರೀತ್ ಬುಮ್ರಾ Right-handed Right-arm fast ಟೆಸ್ಟ್ ಉಪನಾಯಕ ದೀಪಕ್ ಚಹಾರ್ Right-handed Right-arm medium ಅವೇಶ್ ಖಾನ್ Right-handed Right arm fast-medium ಮುಖೇಶ್ ಕುಮಾರ್ Right-handed Right arm medium ಪ್ರಸಿದ್ಧ್ ಕೃಷ್ಣ Right-handed Right arm medium ಉಮ್ರಾನ್ ಮಲಿಕ್ Right-handed Right-arm fast ಮೊಹಮ್ಮದ್ ಶಮಿ Right-handed Right-arm fast ಅರ್ಷದೀಪ್ ಸಿಂಗ್ Left-handed Left-arm medium-fast ಮೊಹಮ್ಮದ್ ಸಿರಾಜ್ Right-handed Right-arm fast ಶಾರ್ದೂಲ್ ಠಾಕೂರ್ Right-handed Right-arm medium ಸ್ಪಿನ್ ಬೌಲರ್‌ ರವಿ ಬಿಷ್ಣೋಯ್ Right-handed Right-arm leg spin ಯುಜ್ವೇಂದ್ರ ಚಹಾಲ್ Left-handed Right-arm off-break ಕುಲದೀಪ್ ಯಾದವ್ Left-handed Left-arm wrist spin ಉಲ್ಲೇಖಗಳು ವರ್ಗ:ಕ್ರಿಕೆಟ್ ವರ್ಗ:ಟೆಸ್ಟ್ ಕ್ರಿಕೆಟ್ ತಂಡಗಳು
೨೦೦೪ ಹಿಂದೂ ಮಹಾಸಾಗರದ ಭೂಕಂಪ
https://kn.wikipedia.org/wiki/೨೦೦೪_ಹಿಂದೂ_ಮಹಾಸಾಗರದ_ಭೂಕಂಪ
framed|ಭೂಕ೦ಪದಿ೦ದೆದ್ದ ಸುನಾಮಿ ಅಲೆಗಳು ೨೦೦೪ರ ಹಿಂದೂ ಮಹಾಸಾಗರದ ಭೂಕಂಪ ಸಮುದ್ರದ ನೀರಿನಡಿ ನಡೆದ ರಿಖ್ಟರ್ ಮಾಪನದಲ್ಲಿ ೮.೯ ರಷ್ಟು ಬಲವಾದ ಭೂಕಂಪ. ಇದು ಡಿಸೆಂಬರ್ ೨೬, ೨೦೦೪ ರಂದು ಇಂಡೊನೇಷ್ಯಾದಲ್ಲಿರುವ ಸುಮಾತ್ರ ದ್ವೀಪದ ಬಳಿ ಸಂಭವಿಸಿತು. ಸಮುದ್ರದ ಅಡಿಯಲ್ಲಿ ನಡೆದದ್ದರಿಂದ ಈ ಭೂಕಂಪ ಸಮುದ್ರದಲ್ಲಿ ಎಬ್ಬಿಸಿದ ಅಲೆಗಳು ಭಾರತ, ಶ್ರೀಲಂಕಾ, ಇಂಡೊನೇಷಿಯಾ ಮೊದಲಾದ ದೇಶಗಳಲ್ಲಿ ವಿಕೋಪ ಸೃಷ್ಟಿಸಿದ್ದು ಒಟ್ಟು ಸುಮಾರು ೧,೫೦,೦೦೦ ಜನರು ಮೃತಪಟ್ಟರು. ಸುನಾಮಿ ಅಲೆಗಳೆಂದು ಕರೆಯಲ್ಪಡುವ ಈ ಅಲೆಗಳು ಕೆಲವು ಕಡೆ ೩೩ ಅಡಿಗಳಷ್ಟು ಎತ್ತರವಿದ್ದವು. ಭೂಕಂಪದ ಶಕ್ತಿ ಮೊದಲ ವರದಿಗಳ ಪ್ರಕಾರ ರಿಖ್ಟರ್ ಮಾಪನದಲ್ಲಿ ೬.೮ ರಷ್ಟು ಬಲವಾದ ಭೂಕಂಪ, ನಂತರ ರಿಖ್ಟರ್ ೮.೯ ರಷ್ಟು ಇದೆಯೆ೦ದು ನಿಗದಿಪಡಿಸಲಾಯಿತು. ಇದು ವರೆಗೆ ದಾಖಲಾದ ಅತಿ ದೊಡ್ಡ ಭೂಕಂಪ ಚಿಲಿ ದೇಶದಲ್ಲಿ ನಡೆದ ರಿಖ್ಟರ್ ೯.೫ ರಷ್ಟಿತ್ತು. ಈಗ ನಡೆದ ಭೂಕಂಪ ಕಳೆದ ೪೦ ವರ್ಷಗಳಲ್ಲಿ ಅತಿ ದೊಡ್ಡದು. ಭೂಕಂಪದ ಕೇಂದ್ರಬಿಂದು ಸುಮಾತ್ರಾ ದ್ವೀಪದಿಂದ ಸುಮಾರು ೧೦೦ ಮೈಲಿ ಪಶ್ಚಿಮದಲ್ಲಿದ್ದು ಸಮುದ್ರಮಟ್ಟದಿಂದ ೬.೨ ಮೈಲಿ ಕೆಳಗಿತ್ತು. ಭೂಕಂಪವನ್ನು ದೂರದೇಶಗಳಲ್ಲಿಯೂ ಗುರುತಿಸಲಾಗುವಷ್ಟು ಬಲವಾಗಿತ್ತು (ಉದಾ: ಭಾರತ, ಶ್ರೀಲಂಕಾ). ಹಾನಿ ಹಾನಿಗೊಳಗಾದವರ ಸಂಖ್ಯೆ ಅನುಕ್ರಮ ದೇಶ ಮೃತಪಟ್ಟವರ ಸಂಖ್ಯೆ ಗಾಯಕ್ಕೊಳಗಾದವರು ನಾಪತ್ತೆಯಾದವರು೧ಶ್ರೀಲಂಕಾ೨೧,೭೧೫೪,೦೦೦+೨೦,೦೦೦+೨ಭಾರತ೧೨,೪೦೦--೩೦,೦೦೦+೩ಇಂಡೊನೇಷ್ಯಾ೨೭,೦೦೦೧,೦೦,೦೦೦+ಸಾವಿರಾರು೪ಥೈಲೆಂಡ್೧,೫೦೦+೮,೪೦೦೧,೨೦೦೫ಸೊಮಾಲಿಯಾ೧೦೦----೬ಮ್ಯಾನ್‌ಮಾರ್೯೦----೭ಮಲೇಷ್ಯಾ೬೫೧೮೩೨೬೮ಮಾಲ್ಡೀವ್ಸ್ ೫೨--೭೬೯ಬಾಂಗ್ಲಾದೇಶ೨----೧೦ಕೀನ್ಯಾ೧---- ಒಟ್ಟು೬೩,೦೦೦+೧,೦೦,೦೦೦+೫೦,೦೦೦+ thumb|200px|ಮಾಲ್ಡೀವ್ಸ್ ನ ರಾಜಧಾನಿ ಮಾಲೆಯಲ್ಲಿ ಸುನಾಮಿ ಅಲೆಗಳಿ೦ದ ಹಾನಿ thumb|200px|ಭಾರತದ ಚೆನ್ನೈ ನಗರದಲ್ಲಿ ಅಲೆಗಳಿ೦ದ ಕಾರುಗಳು ರಸ್ತೆಯಿ೦ದ ತಳ್ಳಲ್ಪಟ್ಟವು ವರ್ಗ:ಭೂಕಂಪಗಳು
ಭಾರತದ ಪ್ರಪಂಚ ಸಂಸ್ಕೃತಿ ಕ್ಷೇತ್ರಗಳು
https://kn.wikipedia.org/wiki/ಭಾರತದ_ಪ್ರಪಂಚ_ಸಂಸ್ಕೃತಿ_ಕ್ಷೇತ್ರಗಳು
REDIRECT ಭಾರತದ ವಿಶ್ವ ಪರಂಪರೆಯ ತಾಣಗಳು
ಕೊನಾರ್ಕ್
https://kn.wikipedia.org/wiki/ಕೊನಾರ್ಕ್
ಕೊನಾರ್ಕ್ ಭಾರತದ ಒಡಿಶಾ ರಾಜ್ಯದ ಪುರಿ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಬಂಗಾಳಕೊಲ್ಲಿಯ ಕರಾವಳಿಯಲ್ಲಿದ್ದು, ರಾಜ್ಯದ ರಾಜಧಾನಿ ಭುವನೇಶ್ವರದಿಂದ ೬೫ ಕಿಲೋಮೀಟರ್ ದೂರದಲ್ಲಿದೆ. ಇದು ೧೩ ನೇ ಶತಮಾನದ ಸೂರ್ಯ ದೇವಾಲಯದ ತಾಣವಾಗಿದೆ, ಇದನ್ನು ಕಪ್ಪು ಪಗೋಡಾ ಎಂದೂ ಕರೆಯಲಾಗುತ್ತದೆ, ಇದನ್ನು ಒಂದನೇ ನರಸಿಂಹದೇವನ ಆಳ್ವಿಕೆಯಲ್ಲಿ ಕಪ್ಪು ಗ್ರಾನೈಟ್‍ನಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಯುನೆಸ್ಕೋದಿ೦ದ ವಿಶ್ವ ಪರಂಪರೆಯ ತಾಣ ಎಂದು ಮಾನ್ಯತೆ ಪಡೆದಿದೆ. ಈ ದೇವಾಲಯವು ಈಗ ಹೆಚ್ಚಾಗಿ ಶಿಥಿಲಾವಸ್ಥೆಯಲ್ಲಿದೆ, ಮತ್ತು ಅದರ ಶಿಲ್ಪಗಳ ಸಂಗ್ರಹವನ್ನು ಭಾರತೀಯ ಪುರಾತತ್ವ ಸಮೀಕ್ಷೆ ನಡೆಸುತ್ತಿರುವ ಸೂರ್ಯ ದೇವಾಲಯ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಒಡಿಶಾದ ಸಾಂಪ್ರದಾಯಿಕ ಶಾಸ್ತ್ರೀಯ ನೃತ್ಯವಾದ ಒಡಿಸ್ಸಿ ಸೇರಿದಂತೆ ಶಾಸ್ತ್ರೀಯ ಭಾರತೀಯ ನೃತ್ಯ ಪ್ರಕಾರಗಳಿಗೆ ಮೀಸಲಾಗಿರುವ ಕೊನಾರ್ಕ್ ನೃತ್ಯ ಉತ್ಸವ ಎಂಬ ವಾರ್ಷಿಕ ನೃತ್ಯ ಉತ್ಸವಕ್ಕೂ ಕೊನಾರ್ಕ್ ನೆಲೆಯಾಗಿದೆ. ರಾಜ್ಯ ಸರ್ಕಾರವು ಕೊನಾರ್ಕ್‌ನ ಚಂದ್ರಭಾಗ ಬೀಚ್‍ನಲ್ಲಿ ವಾರ್ಷಿಕ ಕೊನಾರ್ಕ್ ಉತ್ಸವ ಮತ್ತು ಅಂತರರಾಷ್ಟ್ರೀಯ ಮರಳು ಕಲಾ ಉತ್ಸವವನ್ನು ಸಹ ಆಯೋಜಿಸುತ್ತಿದೆ. ಫೆಬ್ರವರಿ ೧೬, ೧೯೮೦ ರಂದು, ಕೊನಾರ್ಕ್ ನೇರವಾಗಿ ಸಂಪೂರ್ಣ ಸೂರ್ಯಗ್ರಹಣದ ಹಾದಿಯಲ್ಲಿತ್ತು. ವ್ಯುತ್ಪತ್ತಿಶಾಸ್ತ್ರ ಸೂರ್ಯ ದೇವರಿಗೆ ಸಮರ್ಪಿತವಾದ ದೇವಾಲಯವನ್ನು ಉಲ್ಲೇಖಿಸಿ ಸಂಸ್ಕೃತ ಪದ ಕೋನ (ಕೋನ ಎಂದರ್ಥ) ಮತ್ತು ಅರ್ಕಾ (ಸೂರ್ಯ ಎಂದರ್ಥ) ಎಂಬ ಪದದಿಂದ ಕೊನಾರ್ಕ್‌ ಎಂಬ ಹೆಸರು ಬಂದಿದೆ.Konârka is a combination of two words, kona (corner) and arka (Sun). ಸೂರ್ಯ ದೇವಾಲಯ thumb|right|200px|ಕೊನಾರ್ಕ್ ಸೂರ್ಯ ದೇವಾಲಯ ಕೋನಾರ್ಕ್‍ನ ದೇವಾಲಯವು ವಾಸ್ತವವಾಗಿ ಒಂದು ಕಲ್ಲಿನ ರಥ. ಏಳು ಕುದುರೆಗಳು ಎಳೆಯುವ ಇಪ್ಪತ್ನಾಲ್ಕು ಚಕ್ರಗಳ ರಥದೊಳಗೆ ವಿರಾಜಮಾನನಾದ ಸೂರ್ಯದೇವನ ಈ ಗುಡಿಯನ್ನು ಗಂಗ ವಂಶದ ದೊರೆ ಒಂದನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿದೆ. ಕೆಲವು ಚಕ್ರಗಳು ೩ ಮೀಟರ್ ಅಗಲವಾಗಿವೆ. ಏಳು ಕುದುರೆಗಳಲ್ಲಿ ಆರು ಮಾತ್ರ ಇಂದಿಗೂ ನಿಂತಿವೆ.It is a monumental representation of the chariot of Surya pulled by a team of seven horses (six of which still exist and are placed on either side of the stairway leading to the sanctuary). ೧೭ ನೇ ಶತಮಾನದ ಆರಂಭದಲ್ಲಿ ಜಹಾಂಗೀರನ ರಾಯಭಾರಿಯು ದೇವಾಲಯವನ್ನು ಅಪವಿತ್ರಗೊಳಿಸಿದ ನಂತರ ಈ ದೇವಾಲಯವು ಬಳಕೆಯಲ್ಲಿಲ್ಲ.The temple fell into disuse in the early 17th century after it was desecrated by an envoy of the Mughal Emperor Jahangir. thumb|ಸೂರ್ಯದೇವಾಲಯದ ಚಕ್ರ ಜಾನಪದದ ಪ್ರಕಾರ, ವಿಗ್ರಹದ ಮಧ್ಯದಲ್ಲಿ ವಜ್ರವಿತ್ತು, ಅದು ಹಾದುಹೋಗುವ ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುತ್ತದೆ. ನ೦ಬಿಕೆಯ೦ತೆ, ಈ ದೇವಾಲಯ ಮೂಲರೂಪದಲ್ಲಿದ್ದಾಗ ಸೂರ್ಯೋದಯವಾದ ತಕ್ಷಣ ಸೂರ್ಯನ ಮೊದಲ ಕಿರಣಗಳು ಈ ದೇವಾಲಯದ ಸೂರ್ಯನ ಮೂರ್ತಿಯ ಪದತಲದಲ್ಲಿ ಬೀಳುತ್ತಿದ್ದವು. ೧೬೨೭ ರಲ್ಲಿ, ಖುರ್ದಾದ ಅಂದಿನ ರಾಜನು ಸೂರ್ಯನ ವಿಗ್ರಹವನ್ನು ಕೊನಾರ್ಕ್‌ನಿಂದ ಪುರಿ ಜಗನ್ನಾಥ ದೇವಾಲಯಕ್ಕೆ ತೆಗೆದುಕೊಂಡು ಹೋದನು. ಸೂರ್ಯ ದೇವಾಲಯವು ಕಳಿಂಗ ವಾಸ್ತುಶಿಲ್ಪಕ್ಕೆ ಸೇರಿದೆ. ಸೂರ್ಯ ದೇವಾಲಯದ ಜೋಡಣೆಯು ಪೂರ್ವ-ಪಶ್ಚಿಮ ದಿಕ್ಕಿನಲ್ಲಿದೆ. ಒಳ ಗರ್ಭಗುಡಿ ಅಥವಾ ವಿಮಾನವನ್ನು ಗೋಪುರದಿಂದ ಏರಲಾಗುತ್ತಿತ್ತು ಆದರೆ ಅದನ್ನು ೧೯ ನೇ ಶತಮಾನದಲ್ಲಿ ನೆಲಸಮಗೊಳಿಸಲಾಯಿತು. ಪ್ರೇಕ್ಷಕರ ಸಭಾಂಗಣ ಅಥವಾ ಜಗಮೋಹನ ಇನ್ನೂ ನಿಂತಿದೆ ಮತ್ತು ಹೆಚ್ಚಿನ ಅವಶೇಷಗಳನ್ನು ಒಳಗೊಂಡಿದೆ. ನೃತ್ಯ ಸಭಾಂಗಣ ಅಥವಾ ನಟಮಂದಿರದ ಛಾವಣಿ ಕುಸಿದಿದೆ. ಇದು ಅವಶೇಷಗಳ ಪೂರ್ವ ತುದಿಯಲ್ಲಿ ಎತ್ತರದ ವೇದಿಕೆಯ ಮೇಲೆ ನಿಂತಿದೆ.Further to the east, the natmandir (dance hall), today unroofed, rises on a high platform. ಸಮುದ್ರ ದಡದ ಉಸುಕು ನೆಲದಲ್ಲಿ ಭದ್ರ ಬುನಾದಿ ಇಲ್ಲದ ಕಾರಣ ನೈಸರ್ಗಿಕ ವಿಕೋಪಕ್ಕೆ ಸುಲಭವಾಗಿ ಒಳಗಾಗುತ್ತದೆ. ಇಂಗ್ಲಿಷರ ಆಳ್ವಿಕೆಯ ಕಾಲದಲ್ಲಿ ಪುರಾತತ್ವ ಇಲಾಖೆಯು ಈ ಗುಡಿಯನ್ನು ಸಂರಕ್ಷಿಸಿದ್ದರಿಂದ ಇದನ್ನು ಇಂದಿಗೂ ನಾವು ನೋಡಬಹುದಾಗಿದೆ. ಸೂರ್ಯನ ಪ್ರತಿಮೆಯನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು ಛಾವಣಿ ಕುಸಿಯದಂತೆ ಊರುಗೋಲುಗಳ ಆಸರೆ ನೀಡಿ ಗುಡಿಯನ್ನು ಮುಚ್ಚಲಾಗಿದೆ. ಗುಡಿಯ ಹೊರಗಿನ ಶಿಲ್ಪಕಲಾಕೃತಿಗಳು, ರಥಚಕ್ರಗಳ ಶ್ರೀಮಂತ ಸೌಂದರ್ಯ, ಮಿಥುನಶಿಲ್ಪಗಳ ಸಾಲುಸಾಲು ಮಾತ್ರವಲ್ಲದೆ ನರ್ತನಶಾಲೆ, ಕುದುರೆ ಮತ್ತು ಸವಾರ, ಆನೆಸಿಂಹಗಳ ಸಮಾಗಮ ಮುಂತಾದ ಶಿಲ್ಪಗಳೂ ಇವೆ. thumb|ಕೊಣಾರ್ಕದ ಕಲ್ಲಿನ ಕೆತ್ತನೆ ಇತಿಹಾಸ ೧೫೫೯ ರಲ್ಲಿ, ಮುಕುಂದ ಗಜಪತಿ ಕಟಕ್‍ನಲ್ಲಿ ಸಿಂಹಾಸನಕ್ಕೆ ಬಂದನು. ಅವನು ತನ್ನನ್ನು ಅಕ್ಬರನ ಮಿತ್ರನಾಗಿ ಮತ್ತು ಬಂಗಾಳದ ಸುಲ್ತಾನ ಸುಲೈಮಾನ್ ಖಾನ್ ಕರ್ರಾನಿಯ ಶತ್ರುವಾಗಿ ಗುರುತಿಸಿಕೊಂಡನು. ಕೆಲವು ಯುದ್ಧಗಳ ನಂತರ, ಒಡಿಶಾ ಅಂತಿಮವಾಗಿ ಪತನಗೊಂಡಿತು. ಪತನಕ್ಕೆ ರಾಜ್ಯದ ಆಂತರಿಕ ಪ್ರಕ್ಷುಬ್ಧತೆಯೂ ಕಾರಣವಾಯಿತು. ೧೫೬೮ ರಲ್ಲಿ, ಕೊನಾರ್ಕ್ ದೇವಾಲಯವು ಸುಲ್ತಾನನ ಜನರಲ್ ಕಲಪಹಾದ್‍ನ ಸೈನ್ಯದಿಂದ ಹಾನಿಗೊಳಗಾಯಿತು. ವಿಜಯದ ಸಮಯದಲ್ಲಿ ಹಲವಾರು ಇತರ ದೇವಾಲಯಗಳ ಹಾನಿಗೆ ಕಲಪಹಾದ್ ಕಾರಣವೆಂದು ಹೇಳಲಾಗುತ್ತದೆ. ಜನಸಂಖ್ಯಾಶಾಸ್ತ್ರ ೨೦೧೧ ರ ಭಾರತದ ಜನಗಣತಿಯ ಪ್ರಕಾರ, ಕೊನಾರ್ಕ್ ೧೬,೭೭೯ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೮,೬೫೪ (೫೨%) ಮತ್ತು ಮಹಿಳೆಯರು ೮,೧೨೫ (೪೮%) ರಷ್ಟಿದ್ದಾರೆ. ೨೦೦೧ ರ ಜನಗಣತಿಯ ಪ್ರಕಾರ ಕೊನಾರ್ಕ್ ಸರಾಸರಿ ಸಾಕ್ಷರತಾ ಪ್ರಮಾಣವನ್ನು ೫೭% ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ ೫೯.೫% ಕ್ಕಿಂತ ಕಡಿಮೆಯಾಗಿದೆ: ಪುರುಷ ಸಾಕ್ಷರತೆ ೬೪%, ಮತ್ತು ಮಹಿಳಾ ಸಾಕ್ಷರತೆ ೪೯%. ಕೊನಾರ್ಕ್‌ನಲ್ಲಿ, ಜನಸಂಖ್ಯೆಯ ೧೪% ರಷ್ಟು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಪ್ರವಾಸೋದ್ಯಮ ಕೊನಾರ್ಕ್‌ನ ಆಕರ್ಷಣೆಗಳು ಕೊನಾರ್ಕ್ ದೇವಾಲಯ: ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂದು ಪಟ್ಟಿ ಮಾಡಲಾದ ಕೊನಾರ್ಕ್ ದೇವಾಲಯಗಳು ಪ್ರಮುಖ ಆಕರ್ಷಣೆಗಳಾಗಿವೆ, ಇದು ಕಳೆದುಹೋದ ಕಲ್ಲಿನ ಶೈಲಿಯ ಅತ್ಯುತ್ತಮ ಸಾಧನೆಯ ನೋಟವನ್ನು ಒದಗಿಸುತ್ತದೆ. ಚಂದ್ರಭಾಗ ಬೀಚ್: ಒಡಿಶಾದ ಅತ್ಯಂತ ಸ್ವಚ್ಛ ಮತ್ತು ಸುಂದರವಾದ ಕಡಲತೀರಗಳಲ್ಲಿ ಒಂದಾದ ಇದು ಕೊನಾರ್ಕ್ ಹಿಂದಿನ ಬಹಳಷ್ಟು ದಂತಕಥೆಗಳಿಗೆ ಕ್ರಿಯಾ ಸ್ಥಳವಾಗಿದೆ. ಸೂರ್ಯ ದೇವಾಲಯ ವಸ್ತುಸಂಗ್ರಹಾಲಯ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಡೆಸಲ್ಪಡುವ ಈ ವಸ್ತುಸಂಗ್ರಹಾಲಯವು ದೇವಾಲಯದ ಅನೇಕ ಕಲಾಕೃತಿಗಳನ್ನು ಹೊಂದಿದೆ. ತಲುಪುವ ದಾರಿ ಕೊನಾರ್ಕ್ ಅನ್ನು ಹಲವಾರು ಮಾರ್ಗಗಳ ಮೂಲಕ ತಲುಪಬಹುದು: ವಿಮಾನ ಅಥವಾ ರೈಲಿನ ಮೂಲಕ ಭುವನೇಶ್ವರವನ್ನು ತಲುಪಿ, ನಂತರ ಬಸ್ ಅಥವಾ ಟ್ಯಾಕ್ಸಿ ಮೂಲಕ ಕೊನಾರ್ಕ್‌ಗೆ (ಭುವನೇಶ್ವರದಿಂದ ೬೪ ಕಿ.ಮೀ) ತಲುಪಬಹುದು. ರೈಲಿನ ಮೂಲಕ ಪುರಿಯನ್ನು ತಲುಪಿ (ಪುರಿ ಭಾರತದ ಇತರ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ), ತದನಂತರ ಬಸ್ ಅಥವಾ ಟ್ಯಾಕ್ಸಿ ಮೂಲಕ ಕೊನಾರ್ಕ್‌ಗೆ (ಪುರಿಯಿಂದ ೩೪ ಕಿ.ಮೀ) ತಲುಪಬಹುದು. ಛಾಯಾಂಕಣ ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಒರಿಸ್ಸಾದ ಪ್ರವಾಸ ಇಲಾಖೆಯ ಅಧಿಕೃತ ತಾಣ ಕೊನಾರ್ಕ್‌ನ ಸೂರ್ಯ ದೇವಾಲಯ ವರ್ಗ:ವಿಶ್ವ ಪರಂಪರೆಯ ತಾಣಗಳು ವರ್ಗ:ಪ್ರವಾಸಿ ತಾಣಗಳು ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ
ಕೊಣಾರ್ಕ
https://kn.wikipedia.org/wiki/ಕೊಣಾರ್ಕ
REDIRECT ಕೊನಾರ್ಕ್
ಖಜುರಾಹೊ
https://kn.wikipedia.org/wiki/ಖಜುರಾಹೊ
thumb|right|ಖಜುರಾಹೊ ಶಿಲ್ಪಕಲೆ ಖಜುರಾಹೊ ಭಾರತದ ಮಧ್ಯ ಪ್ರದೇಶದಲ್ಲಿರುವ ಒಂದು ನಗರ, ದೆಹಲಿಯಿಂದ ೬೨೦ ಕಿಮೀ ದಕ್ಷಿಣದಲ್ಲಿದೆ. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಖಜುರಾಹೊ, ಮಧ್ಯಕಾಲೀನ ಹಿಂದೂ ದೇವಾಲಯಗಳ ಅತಿ ದೊಡ್ಡ ಗುಂಪು. ಇದು ಇಲ್ಲಿನ ಶೃಂಗಾರಮಯ ಶಿಲ್ಪಕಲೆಗಳಿಗೆ ಹೆಸರಾಗಿದೆ. ಒಂದು ಕಾಲದಲ್ಲಿ ಖಜುರಾಹೊ ಚಂಡೇಲಾ ರಜಪೂತರ ರಾಜಧಾನಿಯಾಗಿತ್ತು. ೧೦ ನೆಯ ಶತಮಾನದಿ೦ದ ೧೨ ನೆಯ ಶತಮಾನದ ವರೆಗೆ ಆಳಿದ ಈ ರಾಜವ೦ಶದ ಅರಸರು, ಖಜುರಾಹೊ ದ ದೇವಸ್ಥಾನಗಳನ್ನು ಕ್ರಿ.ಶ. ೯೫೦ ರಿಂದ ೧೦೫೦ ರ ವರೆಗೆ ಕಟ್ಟಿಸಿದರು. ಇಲ್ಲಿನ ಇಡೀ ಪ್ರದೇಶ ಎ೦ಟು ದ್ವಾರಗಳಿದ್ದ ಕೋಟೆಯಿಂದ ಸುತ್ತುವರಿಯಲ್ಪಟ್ಟಿತ್ತು. ಪ್ರತಿ ದ್ವಾರದ ಎರಡು ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿಂದ ಈ ಸ್ಥಳಕ್ಕೆ "ಖಜುರಾಹೊ" ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಮೊದಲಿಗೆ ಎಂಬತ್ತಕ್ಕೂ ಹೆಚ್ಚು ದೇವಸ್ಥಾನಗಳು ಇಲ್ಲಿದ್ದವು. ಆದರೆ ಈಗ ೨೨ ದೇವಸ್ಥಾನಗಳು ಮಾತ್ರ ಸುಮಾರು ಒಳ್ಳೆಯ ಪರಿಸ್ಥಿತಿಯಲ್ಲಿದ್ದು, ೨೨ ಚ. ಕಿಮೀ ವಿಸ್ತೀರ್ಣವುಳ್ಳ ಪ್ರದೇಶದಲ್ಲಿವೆ. ಖಜುರಾಹೊ ದಲ್ಲಿರುವ ದೇವಸ್ಥಾನಗಳ ಸಮೂಹ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣ ಎಂದು ಮಾನ್ಯತೆ ಪಡೆದಿದೆ. ಶೈವ, ವೈಷ್ಣವ ಮತ್ತು ಜೈನ ಧರ್ಮೀಯವಾದ ಈ ಮಂದಿರಗಳು ಆಗಿನ ರಾಜರ ಮತ್ತು ಜನತೆಯ ಸರ್ವಧರ್ಮ ಸಮನ್ವಯ ಭಾವನೆಗಳ ಪ್ರತೀಕಗಳಾಗಿವೆ. ರಚನೆಯ ವಿವರಗಳು ನದಿಯ ದಡದಲ್ಲಿ ಎತ್ತರವಾದ ಜಗತಿಗಳ ಮೇಲೆ ಒಂದೊಂದು ಪ್ರತ್ಯೇಕವಾಗಿ ನಿಂತಿರುವ ಈ ದೇವಾಲಯಗಳ ರಚನೆಯಲ್ಲಿ ಯಾವುದೇ ಬಗೆಯ ವ್ಯವಸ್ಥಾಬದ್ಧ ಯೋಜನೆಯೂ ಕಂಡುಬರುವುದಿಲ್ಲ. ಸಣ್ಣವಾದರೂ ಎತ್ತರವಾದ ವಿಶಾಲ ಜಗತಿನ ಮೇಲೆ ನಿಂತಿರುವ ಈ ಮಂದಿರಗಳು ಸ್ವಯಂಪೂರ್ಣವಾದ ಉತ್ತಮ ವಾಸ್ತುಕೃತಿಗಳಾಗಿವೆ. ಗರ್ಭಗೃಹ, ಮಂಟಪ ಮತ್ತು ಅರ್ಧಮಂಟಪಗಳೇ ಈ ಭಾಗಗಳು. ಕೆಲವು ಮಂದಿರಗಳಲ್ಲಿ ಗರ್ಭಗೃಹಕ್ಕೆ ಸೇರಿದಂತೆ ಅಂತರಾಲ, ಮುಂಭಾಗದಲ್ಲಿ ಮಹಾಮಂಟಪ ಮತ್ತು ಪ್ರದಕ್ಷಿಣಮಾರ್ಗಗಳೂ ಇವೆ. ಎತ್ತರವಾದ ಜಗತಿಯ ಮೇಲೆ ತಳಭಾಗದ ಅಂತಸ್ತು, ಗೋಡೆಗಳು, ಬಾಗಿಲು ಕಿಟಕಿಗಳು, ಮೇಲ್ಭಾಗದ ಉನ್ನತವಾದ ಶಿಖರಗಳು ಈ ದೇವಾಲಯಗಳ ಮುಖ್ಯ ಅಂಗಗಳಾಗಿದ್ದು ಕಟ್ಟಡದ ಔನ್ನತ್ಯವನ್ನು ಎತ್ತಿತೋರುತ್ತವೆ. ಹೊರಗೋಡೆಗಳ ಮೇಲಿನ ಅಂಕರಣ ಕೆತ್ತನೆಗಳು ಕಟ್ಟಡಗಳ ಭವ್ಯತೆಯನ್ನು ಹೆಚ್ಚಿಸುತ್ತವೆ. ಆನಂದಮಯ ತೃಪ್ತ ಜೀವನದ ಭಾವವನ್ನು ಬೀರುತ್ತಿರುವ ಮಾನವರ ಮತ್ತು ಸುಂದರ ದೇವತೆಗಳ ಶಿಲ್ಪಗಳು ನೂರಾರು ಸಂಖ್ಯೆಯಲ್ಲಿ ಅಲಂಕರಣ ಕಾರ್ಯದಲ್ಲಿ ಯೋಜಿತವಾಗಿವೆ. ಇವೆಲ್ಲದರಿಂದ ಇಡೀ ಕಟ್ಟಡವೇ ಜೀವಂತವಾಗಿರುವಂತೆ ಭಾಸವಾಗುತ್ತದೆ. ಮುಂಭಾಗದಿಂದ ಮೆಟ್ಟುಲುಮೆಟ್ಟಿಲಾಗಿ ಕಟ್ಟಡದ ಶಿಖರ ಅತ್ಯಂತ ಉನ್ನತ ಭಾಗವಾಗಿದ್ದು ದೇವಾಲಯದ ಪ್ರಾಶಸ್ತ್ಯವನ್ನು ಹೆಚ್ಚಿಸುವಂತೆ ಕಾಣುತ್ತದೆ. ಖಜುರಾಹೊ ದೇವಾಲಯಗಳ ಶಿಖರಗಳು ಬಹಳ ಸುಂದರವಾಗಿವೆ; ಕಟ್ಟಡದ ಎಲ್ಲ ಭಾಗಗಳಿಗೂ ಕೇಂದ್ರಬಿಂದುಗಳಾಗಿವೆ. ಕೇಂದ್ರಶಿಖರದ ಸುತ್ತ ಇರುವ ಸಣ್ಣಸಣ್ಣ ಶಿಖರಗಳು ಅದರ ಭವ್ಯತೆಯನ್ನು ಹೆಚ್ಚಿಸಿವೆ. ದೇವಾಲಯದ ಒಳಭಾಗವನ್ನು ಮತೀಯ ಕಾರ್ಯಗಳಿಗೆ ಹೊಂದುವಂತೆ, ಸ್ಥಳಪರಿಮಿತಿಯನ್ನು ಗಮನದಲ್ಲಿಟ್ಟುಕೊಂಡು, ಯೋಜಿಸಲಾಗಿದೆ. ಕಟ್ಟಡಕ್ಕೆ ಒಂದೇ ಪ್ರವೇಶ ಮಾರ್ಗವಿದ್ದು ಮೆಟ್ಟಿಲುಗಳ ಸರಣಿಯ ಮೂಲಕ ಒಳಹೊಗಬೇಕು. ಈ ರೀತಿ ಅರ್ಧಮಂಟಪಕ್ಕೆ ಪ್ರವೇಶಮಾಡಿ ಕಂಬಗಳಿಂದ ಕೂಡಿದ ಮಂಟಪದೊಳಕ್ಕೆ ಹೋದಾಗ ಅಂತರಾಳದ ಮುಂದೆ ನಿಲ್ಲಬೇಕು. ಅದರ ಮುಂದಿನ ಭಾಗವೇ ಗರ್ಭಗೃಹ. ದೇವಾಲಯದ ಒಂದು ಪಾಶ್ರ್ವದಲ್ಲಿ, ಸಾಮಾನ್ಯವಾಗಿ ಎಡಪಾಶ್ರ್ವದಲ್ಲಿ, ಮಹಾಮಂಟಪ ಮತ್ತು ಗರ್ಭಗೃಹದ ಸುತ್ತ ಪ್ರದಕ್ಷಿಣಮಾರ್ಗ ಇವೆ. ದೇವಾಲಯದ ಒಳಭಾಗದಲ್ಲೂ ಅನೇಕ ಶಿಲ್ಪಗಳು ಅದರ ಅಲಂಕರಣವನ್ನು ಹೆಚ್ಚಿಸುತ್ತವೆ. ಆ ಶಿಲ್ಪಗಳಲ್ಲಿ ಕುಬ್ಜ ಸುಂದರ ಸ್ತ್ರೀ ವಿಗ್ರಹಗಳು ಗಮನಾರ್ಹವಾಗಿವೆ. ಅದರಲ್ಲೂ ಬೋದಿಗೆಗಳ ಮೇಲಿನ ಸೂರುಗಳಲ್ಲಿರುವ ವಿಗ್ರಹಗಳು ಮತ್ತು ಕುಸುರಿ ಕೆಲಸ ಕಲಾ ಐಸಿರಿಯ, ಕಲೆಗಾರನ ಮಹೋನ್ನತೆಯ ಸಾಕ್ಷಿಗಳಾಗಿವೆ. ಮಧ್ಯದ ಮಂಟಪದ ಚಾವಣಿಯಲ್ಲಿರುವ ಭುವನೇಶ್ವರಿ ಖಜುರಾಹೊ ದೇವಾಲಯಗಳ ಅತ್ಯುತ್ಕøಷ್ಟವಾದ ಕೆತ್ತನೆಗಳಿಂದ ಕೂಡಿದೆ. ಜ್ಯಾಮಿತೀಯ ಆಕಾರದ ವೃತ್ತ, ಅರ್ಧವೃತ್ತ ಮತ್ತು ರೇಖಾವಿನ್ಯಾಸಗಳಿಂದ ಅತ್ಯಂತ ನಯನಮನೋಹರವಾದ ಅಲಂಕರಣವನ್ನು, ಶಿಲ್ಪಗಳನ್ನು ಕಲ್ಲಿನಲ್ಲಿ ಬಿಡಿಸಿದ್ದಾರೆ. ಇಲ್ಲಿಯ ದೇವಾಲಯಗಳಲ್ಲಿ ಮುಖ್ಯವಾದ ವಾಯವ್ಯ ಭಾಗದ ಸಮೂಹದಲ್ಲಿ ಶೈವ ವೈಷ್ಣವ ಮಂದಿರಗಳಿವೆ. ಇವುಗಳಲ್ಲಿ ಕಂದರ್ಯ ಮಹಾದೇವ್ ಭಾರತದ ಅತಿಸುಂದರ ದೇಗುಲಗಳಲ್ಲೊಂದು. ಬೇಲೂರು, ಹಳೆಯಬೀಡುಗಳಲ್ಲಿರುವಂತೆ ಎತ್ತರವಾದ ಜಗಲಿಯ ಮೇಲೆ ಇದನ್ನು ಕಟ್ಟಲಾಗಿದೆ. 109 ಅಡಿ ಉದ್ದ 60 ಅಡಿ ಅಗಲ ಮತ್ತು ಭೂಮಿಯ ಮೇಲಿನಿಂದ 116 ಅಡಿ ಎತ್ತರ ಅಥವಾ ಜಗತಿಯಿಂದ 88 ಅಡಿ ಇರುವ ತಳಹದಿಯ ಮೇಲೆ ನಿರ್ಮಿತವಾಗಿದೆ. ಆಕಾರದಲ್ಲಿ ಅಷ್ಟು ಬೃಹತ್ತಾಗಿಲ್ಲದಿದ್ದರೂ ಒಂದು ಘನವಾಗಿ, ಎತ್ತರದಿಂದ ಎತ್ತರಕ್ಕೆ, ಒಂದನ್ನೊಂದು ಮೀರಿ ಏರುತ್ತಿರುವ ಶಿಖರಗಳಿಂದ ಕೊನೆಗೆ ಏಕಮೇವಾದ್ವಿತೀಯವಾಗಿ ನಿಮಿರಿನಿಂತ ಗಿರಿಶೃಂಗದಂಥ ಗರ್ಭಾಂಕಣದ ಶಿಖರದ ಔನ್ನತ್ಯ ಪ್ರೇಕ್ಷಕರ ಹೃನ್ಮನಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಕಲೆಯ ದೃಷ್ಟಿಯಿಂದ ಭುವನೇಶ್ವರದ ದೇವಾಲಯಗಳು ಆಕರ್ಷಣೀಯವಾಗಿದ್ದರೆ, ಮಹಾದೇವ ದೇವಾಲಯ ಬೇಲೂರಿನ ಚನ್ನಕೇಶವ ದೇವಾಲಯದಂತೆ ಒಳಗೂ ಹೊರಗೂ ಮನೋಹರವಾಗಿದೆ. ಅಷ್ಟದಿಕ್ಪಾಲಕರು, ಅಪ್ಸರೆಯರು, ಸುರಸುಂದರಿಯರು, ವಿದ್ಯಾಧರೆಯರು ಇತ್ಯಾದಿ ವಿವಿಧ ಭಂಗಿಭಾವಗಳ ರಮಣೀಯ ಶಿಲಾಕೃತಿಗಳು ಇಲ್ಲಿ ಗುಂಪುಗೂಡಿವೆ. ಇಲ್ಲಿಯ ಕಲಾಸಂಪತ್ತು, ಭಾವಪ್ರೇರಕಶಕ್ತಿ ಅತ್ಯದ್ಭುತವಾದುದೆಂದು ಕಲಾವಿಮರ್ಶಕರು ಉದ್ಗಾರವೆತ್ತಿದ್ದಾರೆ. ಈ ಗುಂಪಿನ ವೈಷ್ಣವ ದೇವಾಲಯಗಳಲ್ಲಿ ಚತುರ್ಭುಜ ವಿಷ್ಣುಮಂದಿರ 85 ಅಡಿ ಉದ್ದ ಮತ್ತು 44 ಅಡಿ ಅಗಲವಾಗಿದೆ. ಪಂಚಾಯತನ ಪದ್ಧತಿಯಲ್ಲಿ ನಿರ್ಮಿತವಾಗಿರುವ ಈ ಮಂದಿರಗಳಲ್ಲಿ ಐದು ಗರ್ಭಗೃಹಗಳಿವೆ. ಈ ಹಿಂದೂ ದೇವಾಲಯಗಳ ಮಾದರಿಯಲ್ಲೇ ನಿರ್ಮಿತವಾದ ಆರು ಜೈನ ದೇವಾಲಯಗಳು ಆಗ್ನೇಯ ಭಾಗದಲ್ಲಿದೆ. ಇವುಗಳ ಹೊರಗೋಡೆಗಳ ಮೇಲೆ ತೋರಣಗಳು, ಸ್ತಂಭಿಕೆಗಳು ಮುಂತಾದ ವಾಸ್ತುಕೃತಿಗಳ ಅಲಂಕರಣವಿಲ್ಲದೆ ಅವು ಸರಳವಾಗಿವೆ. ಅವುಗಳ ಸ್ಥಾನದಲ್ಲಿ ಜೋಡಿಸಲಾಗಿರುವ ಮೂರ್ತಿಗಳಿಂದಾಗಿ ಈ ಗೋಡೆಗಳಿಗೆ ವಿಶೇಷವಾದ ಶೋಭೆ ಪ್ರಾಪ್ತವಾಗಿದೆ. ಈ ಜೈನ ಮಂದಿರಗಳಲ್ಲಿ ಮುಖ್ಯವಾದ ಜಿನನಾ ಬಸದಿ 60 ಅಡಿ ಉದ್ದ ಮತ್ತು 30 ಅಡಿ ಅಗಲವಾದ್ದು. ಈ ಗುಂಪಿನ ಪಕ್ಕದಲ್ಲಿರುವ ಪಾಳಾದ ಜೈನಮಂದಿರವೊಂದು ಗಮನಾರ್ಹವಾದ್ದು. ಘಂಟೈ ಮಂದಿರವೆಂದು ಹೆಸರಾದ ಈ ಮಂದಿರ ಪೂರ್ಣವಾಗಿದ್ದಾಗ ಆ ರೀತಿಯ ಕಟ್ಟಡಗಳಲ್ಲಿ ಮಕುಟಪ್ರಾಯವಾಗಿತ್ತೆಂದು ಹೇಳಬಹುದು. ಈಗ ಉಳಿದಿರುವ ಭಾಗಗಳಲ್ಲಿರುವ, ಉತ್ತಮ ಕೈಚಳಕ ತೋರುವ ಕಂಬಗಳು, ಭವ್ಯ ಕೆತ್ತನೆಗಳಿರುವ ಪ್ರವೇಶದ್ವಾರ ನೋಟಕರ ಕಣ್ಮನಗಳನ್ನು ತಣಿಸುತ್ತವೆ. ಈ ಪರಿಸರದಲ್ಲಿರುವ ಮತ್ತೆ ಕೆಲವು ಮಂದಿರಗಳೂ ಉತ್ತಮ ಕಲಾವಂತಿಕೆಯಿಂದ ಕೂಡಿವೆ; ಕೆಲವು ಪಾಳು ಬಿದ್ದಿವೆ. ಒಟ್ಟಿನಲ್ಲಿ ಖಜುರಾಹೊದ ದೇವಾಲಯಗಳು ಭಾರತೀಯ ವಾಸ್ತುಕಲೆಯ ಮಹೋನ್ನತ ಘಟ್ಟವನ್ನು ರೂಪಿಸುವ ಉತ್ತಮ ನಿದರ್ಶನಗಳ ಸಾಲಿನಲ್ಲಿ ಸೇರುತ್ತವೆಂದು ನಿಸ್ಸಂದೇಹವಾಗಿ ಹೇಳಬಹುದು. ಭಾರತೀಯ ಶಿಲ್ಪಕಲೆಯ ಪರಾಕಾಷ್ಠೆಯ ಉತ್ತಮ ನಿದರ್ಶನಗಳಲ್ಲಿ ಖಜುರಾಹೊದ ಶಿಲ್ಪಗಳೂ ಸೇರುತ್ತವೆ. ಹಂತಹಂತವಾಗಿ ಕೆತ್ತಲಾದ ನಗ್ನ ಅಪ್ಸರೆಯರ ಅಸಾಧಾರಣ ಸುಂದರ ದೇಹಗಳು ಬಾಗಿ ಬಳುಕುತ್ತ ನೋಟಕರ ಚಿತ್ತವನ್ನು ತಮ್ಮಲ್ಲಿ ಸೆರೆಹಿಡಿಯುತ್ತವೆ. ಸುಂದರ ಸ್ತ್ರೀಯರ ದೇಹಗಳಲ್ಲಿ ತುಂಬಿ ತುಳುಕುವ ವಿವಿಧ ಶೃಂಗಾರ ಪ್ರಧಾನ ಭಾವಭಂಗಿಗಳು, ಪುರುಷರ ಚಿತ್ತವನ್ನು ಕ್ಷೋಭೆಗೊಳಿಸುವ ರಸಮಯ ಸನ್ನಿವೇಶಗಳು ಪ್ರೇಕ್ಷಕರ ಒಂದೊಂದು ನೋಟಕ್ಕೂ ಹೊಸಹೊಸ ಭಾವನೆಗಳನ್ನು ಸೂಚಿಸುತ್ತವೆ. ಮಧ್ಯಯುಗೀನ ಭಾರತೀಯ ಶಿಲ್ಪಿಗಳು ತಮ್ಮ ಅತಿಮಾನುಷ ಕಲಾದವಂತಿಕೆಯನ್ನು ಖಜುರಾಹೊ ಮಂದಿರಗಳಲ್ಲಿ ಪ್ರದರ್ಶಿಸಿ ವಿಶ್ವದ ಕಲಾ ಇತಿಹಾಸದಲ್ಲಿ ಅಮರರಾಗಿದ್ದಾರೆ. ಬಾಹ್ಯ ಸಂಪರ್ಕ ಖಜುರಾಹೊ ದೇವಾಲಯಗಳ ಚಿತ್ರಗಳು ವರ್ಗ:ವಿಶ್ವ ಪರಂಪರೆಯ ತಾಣಗಳು ವರ್ಗ:ಪ್ರವಾಸೋದ್ಯಮ ವರ್ಗ:ಪ್ರವಾಸಿ ತಾಣಗಳು ವರ್ಗ:ವಾಸ್ತು ಶಿಲ್ಪ
ಫತೇಪುರ್ ಸಿಕ್ರಿ
https://kn.wikipedia.org/wiki/ಫತೇಪುರ್_ಸಿಕ್ರಿ
right|thumb|ಬುಲ೦ದ್ ದರ್ವಾಜಾ ಫತೇಪುರ್ ಸಿಕ್ರಿ ೧೬ ನೆಯ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಅಕ್ಬರ್ ಕಟ್ಟಿಸಿದ ರಾಜಧಾನಿ. ಇದು ಆಗ್ರಾ ನಗರದ ಸಮೀಪದಲ್ಲಿದೆ. ಸಾ೦ಪ್ರದಾಯಿಕ ರಾಜಧಾನಿಯಾಗಿ ಮಾತ್ರ ಉಪಯೋಗಿಸಲ್ಪಟ್ಟದ್ದರಿ೦ದ ಫತೇಪುರ್ ಸಿಕ್ರಿಗೆ ಹೆಚ್ಚಿನ ಕೋಟೆಗಳ ರಕ್ಷಣೆಗಳಿಲ್ಲ. ಅಕ್ಬರನ ವ್ಯಕ್ತಿತ್ವ ಮತ್ತು ಆದರ್ಶಗಳಿ೦ದ ಪ್ರಭಾವಿತವಾದ ಈ ನಗರ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಅಕ್ಬರ್ ಧಾರ್ಮಿಕ ಸಹಿಷ್ಣುತೆ ಮತ್ತು ಧರ್ಮಸಮನ್ವಯತೆಯಲ್ಲಿ ನ೦ಬಿಕೆಯನ್ನು ಹೊ೦ದಿದ್ದ. ವಿವಿಧ ಮತ-ಧರ್ಮಗಳಿ೦ದ ನ೦ಬಿಕೆಗಳನ್ನು ಹೊ೦ದಿದ್ದ ದೀನ್-ಇ-ಇಲಾಹಿ ಎ೦ಬ ಮತವನ್ನೂ ಸ್ಥಾಪಿಸಿದ್ದ. ಹಿ೦ದೂ ಧರ್ಮದ ಜನರೊ೦ದಿಗೆ ರಾಜಕೀಯ ಹಾಗೂ ವೈಯಕ್ತಿಕ ಸ೦ಬ೦ಧಗಳನ್ನು ಮಾಡಿಕೊ೦ಡಿದ್ದ ಅಕ್ಬರ್ ಈ ನಗರದ ವಿನ್ಯಾಸವನ್ನು ನಿರ್ಧರಿಸಿದ ಪ್ರಮುಖ ವ್ಯಕ್ತಿ. ಹಾಗಾಗಿ ಅವನ ವೈಯಕ್ತಿಕ ಆದರ್ಶಗಳ ಪ್ರಭಾವವನ್ನು ಈ ನಗರದಲ್ಲಿ ಕಾಣಬಹುದು. ನಗರದ ವಿನ್ಯಾಸದಲ್ಲಿ ವಿಶಾಲವಾದ ಸ್ಥಳಗಳಲ್ಲಿ ಕಟ್ಟಡಗಳನ್ನು ಕಟ್ಟುವುದರ ಮೂಲಕ ವೈಶಾಲ್ಯದ ಭಾವನೆಯನ್ನು ಮೂಡಿಸಲು ಪ್ರಜ್ಞಾಪೂರ್ವಕ ಯತ್ನವನ್ನು ಮಾಡಲಾಗಿದೆಯೆ೦ಬುದನ್ನು ಸ್ಪಷ್ಟವಾಗಿ ಕಾಣಬಹುದು. ನಗರದಲ್ಲಿ ಗಮನಿಸಬಹುದಾದ ಒಂದು ಅ೦ಶವೆ೦ದರೆ ಎಲ್ಲ ಮುಖ್ಯ ಸ್ಥಳಗಳಲ್ಲಿಯೂ ಚೌಕಗಳ ಇರುವಿಕೆ ಮತ್ತು ಚೌಕಗಳ ಸುತ್ತಲೂ ಹಿನ್ನೆಲೆಯಾಗಿ ಕಟ್ಟಡಗಳ ನಿರ್ಮಾಣ. ಇತರ ಮೊಘಲ್ ನಗರಗಳು (ಉದಾ: ಷಾಜಹಾನಾಬಾದ್) ಪೂರ್ವನಿರ್ಧಾರಿತ ಯೋಜನೆಗಳನ್ನು ಹೊ೦ದಿವೆ - ಆದರೆ ಫತೇಪುರ್ ಸಿಕ್ರಿಯಲ್ಲಿ ಅನೌಪಚಾರಿಕ ಯೋಜನೆ ಮತ್ತು ಸುಧಾರಣೆಗಳನ್ನು ಕಾಣಬಹುದು. left|thumb|ಪ೦ಚ ಮಹಲ್ ಫತೇಪುರ್ ಸಿಕ್ರಿಯ ಕಟ್ಟಡಗಳಲ್ಲಿ ವಿವಿಧ ಸ್ಥಳೀಯ ನಿರ್ಮಾಣ ತ೦ತ್ರಗಳ ಸಮಾಗಮವನ್ನು ಕಾಣಬಹುದು, ಉದಾಹರಣೆಗೆ ಗುಜರಾತಿ ಮತ್ತು ಬೆ೦ಗಾಲಿ ಕಟ್ಟಡ ವಿನ್ಯಾಸಗಳನ್ನು ಹೊ೦ದಿರುವ ಅನೇಕ ಕಟ್ಟಡಗಳು ಇಲ್ಲಿವೆ. ಇದಕ್ಕೆ ಮುಖ್ಯ ಕಾರಣ ಭಾರತದ ವಿವಿಧೆಡೆಗಳಿ೦ದ ಬ೦ದ ಕುಶಲ ಕೆಲಸಗಾರರನ್ನು ಈ ಕಟ್ಟಡಗಳನ್ನು ಕಟ್ಟುವ ಕೆಲಸದಲ್ಲಿ ನಿಯೋಜಿಸಿಕೊಳ್ಳಲಾಗಿತ್ತು. ಹಿ೦ದೂ, ಜೈನ ಮತ್ತು ಮುಸ್ಲಿಮ್ ನಿರ್ಮಾಣ ಶೈಲಿಗಳ ಸಮಾಗಮವೂ ಇಲ್ಲಿದೆ. ಕಟ್ಟಡಗಳನ್ನು ಕಟ್ಟಲು ಉಪಯೋಗಿಸಿರುವ ಮುಖ್ಯ ವಸ್ತು ಕೆ೦ಪು ಕಲ್ಲು (ಅಕ್ಬರನ ಕಾಲದ ಶೈಲಿ ಇದು). ಅನೇಕ ಧಾರ್ಮಿಕ ಮತ್ತು ಜಾತ್ಯತೀತ ಕಟ್ಟಡಗಳನ್ನು ಹೊ೦ದಿರುವ ಈ ನಗರದ ಕೆಲವು ಮುಖ್ಯ ಕಟ್ಟಡಗಳು: ನೌಬತ್ ಖಾನಾ: ಮುಖ್ಯರ ಆಗಮನವನ್ನು ಘೋಷಿಸಲಿಕ್ಕಾಗಿ ದ್ವಾರದ ಸಮೀಪ ಇರುವ ಕಟ್ಟಡ. ದಿವಾನ್-ಎ-ಆಮ್: ಅನೇಕ ಮೊಘಲ್ ನಿರ್ಮಾಣಗಳಲ್ಲಿ ಇದನ್ನು ಕಾಣಬಹುದು; ಇದು ಚಕ್ರವರ್ತಿ ಸಾಮಾನ್ಯ ಜನರಿಗೆ ದರ್ಶನ ಕೊಡುತ್ತಿದ್ದ ಕಟ್ಟಡ. ದಿವಾನ್-ಎ-ಖಾಸ್: ಇದೂ ಸಹ ವಿಶಿಷ್ಟವಾದ ಮೊಘಲ್ ಕಟ್ಟಡ; ಮುಖ್ಯ ಜನರನ್ನು ಚಕ್ರವರ್ತಿ ಬರಮಾಡಿಕೊಳ್ಳುತ್ತಿದ್ದ ಕಟ್ಟಡ. ಇಲ್ಲಿ ಒಂದು ಕೇ೦ದ್ರ ಕ೦ಬದ ಸುತ್ತಲೂ ವೃತ್ತಾಕಾರದ ಸಮತಲವಿದ್ದು ಅಕ್ಬರ್‍ನ ಸಿ೦ಹಾಸನ ಇಲ್ಲಿರುತ್ತಿತ್ತು. ಬೀರಬಲ್ಲನ ಮನೆ: ಇದು ಅಕ್ಬರನ ಮ೦ತ್ರಿ ರಾಜಾ ಬೀರಬಲ್ ನ ಮನೆ; ಇಲ್ಲಿರುವ ಸಜ್ಜೆಗಳು ಮತ್ತು ನೆರಳಿಗಾಗಿ ನೆಲಕ್ಕೆ ಸಮಾನಾ೦ತರವಾಗಿರುವ ಛಾವಣಿಗಳು ಗಮನಾರ್ಹ. ಜೋಧಾ ಬಾಯಿಯ ಅರಮನೆ: ಅಕ್ಬರನ ಪಟ್ಟದ ರಾಣಿ ಜೋಧಾ ಬಾಯಿಯ ಅರಮನೆ; ಒಂದು ಪ್ರಾ೦ಗಣದ ಸುತ್ತ ಕಟ್ಟಲ್ಪಟ್ಟಿರುವ ಈ ಅರಮನೆಯಲ್ಲಿ ಗುಜರಾತಿ ಪ್ರಭಾವವನ್ನು ಕಾಣಬಹುದು (ಜೋಧಾ ಬಾಯಿ ಮೂಲತಃ ಗುಜರಾತಿ). ಪ೦ಚ ಮಹಲ್: ಐದು ಮಹಡಿಗಳುಳ್ಳ ಒಂದು ಕಟ್ಟಡ ಬುಲ೦ದ್ ದರ್ವಾಜಾ: ಜಾಮಾ ಮಸೀದಿಯ ಮುಖ್ಯ ದ್ವಾರಗಳಲ್ಲಿ ಒಂದು; ಹೊರಗಡೆಯಿ೦ದ ಬೃಹದ್ಗಾತ್ರದಲ್ಲಿರುವ ಈ ದ್ವಾರ ಒಳಹೋದ೦ತೆ ಇನ್ನೊ೦ದು ಕಡೆಯಲ್ಲಿ ಮಾನವಗಾತ್ರಕ್ಕೆ ಇಳಿಯುತ್ತದೆ. ಜಾಮಾ ಮಸೀದಿ: ಭಾರತೀಯ ವಿನ್ಯಾಸದ ಮಸೀದಿ ಅನೇಕ ವರ್ಷಗಳ ಶ್ರಮದಿ೦ದ ಕಟ್ಟಲ್ಪಟ್ಟಿದ್ದರೂ ಫತೇಪುರ್ ಸಿಕ್ರಿ ಹೆಚ್ಚು ವರ್ಷಗಳ ಕಾಲ ಉಪಯೋಗಿಸಲ್ಪಡಲಿಲ್ಲ. ಇದಕ್ಕೆ ಒಂದು ಕಾರಣ ಪ್ರಾಯಶಃ ಉತ್ತಮ ನೀರಿನ ಸೌಲಭ್ಯ ಈ ಪ್ರದೇಶದಲ್ಲಿ ಇಲ್ಲದೆ ಇರುವುದು. ಫತೇಪುರ್ ಸಿಕ್ರಿ ಯುನೆಸ್ಕೋ ದಿ೦ದ "ವಿಶ್ವ ಪರಂಪರೆಯ ತಾಣ" ಎಂದು ಮಾನ್ಯತೆ ಪಡೆದಿದೆ. ಬಾಹ್ಯ ಸ೦ಪರ್ಕಗಳು ಯುನೆಸ್ಕೋ ತಾಣದಲ್ಲಿ ಫತೇಪುರ್ ಸಿಕ್ರಿ ಬಗ್ಗೆ ಮಾಹಿತಿ ಫತೇಪುರ್ ಸಿಕ್ರಿ ಫತೇಪುರ್ ಸಿಕ್ರಿ ವರ್ಗ:ಇತಿಹಾಸ ವರ್ಗ:ಐತಿಹಾಸಿಕ ಸ್ಥಳಗಳು ವರ್ಗ:ಪ್ರವಾಸೋದ್ಯಮ ವರ್ಗ:ವಿಶ್ವ ಪರಂಪರೆಯ ತಾಣಗಳು
ಶ್ರೀಲಂಕಾ
https://kn.wikipedia.org/wiki/ಶ್ರೀಲಂಕಾ
ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ (೧೯೭೨ ರ ಮೊದಲು ಸಿಲೋನ್) ಭಾರತೀಯ ಉಪಖಂಡದ ಆಗ್ನೇಯದಲ್ಲಿರುವ ದ್ವೀಪ ರಾಷ್ಟ್ರ. ಪುರಾತನ ಕಾಲದಿಂದ ಲಂಕಾ, ಲಂಕಾದ್ವೀಪ, ಸಿಂಹಳದ್ವೀಪ, ಸೆರೆಂದಿಬ್ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಶ್ರೀಲಂಕಾ ಬ್ರಿಟಿಷ್ ಆಡಳಿತದ ಕಾಲದಲ್ಲಿ ಸಿಲೋನ್ ಎಂದು ಹೆಸರು ಪಡೆದಿತ್ತು. ೧೯೭೨ ರಲ್ಲಿ ಅದರ ಹೆಸರನ್ನು ಶ್ರೀಲಂಕಾ ಎಂದು ಬದಲಾಯಿಸಲಾಯಿತು. A BRIEF HISTORY OF SRI LANKA localhistories.org ಚರಿತ್ರೆ ಶ್ರೀಲಂಕೆಗೆ ಸಿಂಹಳ ಜನರು ಸುಮಾರು ಕ್ರಿ.ಪೂ. ೬ನೇ ಶತಮಾನದಲ್ಲಿ ಪ್ರಾಯಶಃ ಉತ್ತರ ಭಾರತದಿಂದ ಬಂದಿರಬಹುದೆಂದು ಊಹಿಸಲಾಗಿದೆ. ಕ್ರಿ.ಪೂ. ಮೂರನೇ ಶತಮಾನದಲ್ಲಿ ಇಲ್ಲಿಗೆ ಬೌದ್ಧ ಧರ್ಮವನ್ನು ಪರಿಚಯಿಸಲಾಯಿತು. ನಂತರ ದಕ್ಷಿಣ ಭಾರತದಿಂದ ತಮಿಳರ ವಲಸೆ ಆರಂಭವಾಗಿ ಕ್ರಿ.ಶ. ೧೩ನೇ ಶತಮಾನದ ಕಾಲಕ್ಕೆ ಸಾಕಷ್ಟು ತಮಿಳರ ಜನಸಂಖ್ಯೆ ಶ್ರೀಲಂಕೆಯಲ್ಲಿತ್ತು. ೧೬ನೆಯ ಶತಮಾನದಲ್ಲಿ ಶ್ರೀಲಂಕೆಯ ಕೆಲ ಭಾಗಗಳನ್ನು ಪೋರ್ಚುಗೀಸರು ವಶಪಡಿಸಿಕೊಂಡರು. ನಂತರ ಇತರ ಯೂರೋಪಿನ ದೇಶಗಳೂ ಬಂದವು. ೧೭೯೬ ರಲ್ಲಿ ಶ್ರೀಲಂಕಾ ಸಂಪೂರ್ಣವಾಗಿ ಬ್ರಿಟಿಷರ ಕೈಸೇರಿತು. ೧೯೪೮ ರಲ್ಲಿ ಸ್ವಾತಂತ್ರ್ಯ ಪಡೆದ ಶ್ರೀಲಂಕಾ, ೧೯೭೨ ರಲ್ಲಿ ತನ್ನ ಹೆಸರನ್ನು ಅಧಿಕೃತವಾಗಿ "ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ" ಎಂದು ಬದಲಾಯಿಸಿತು. ಕಳೆದ ಎರಡು ದಶಕಗಳಲ್ಲಿ ಶ್ರೀಲಂಕೆಯ ತಮಿಳು ಜನರು ಮತ್ತು ಸಿಂಹಳೀಯರ ನಡುವೆ ಸಾಕಷ್ಟು ಅಶಾಂತಿ ಏರ್ಪಟ್ಟಿದ್ದು, ಎಲ್‍ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಾಕಷ್ಟು ತೊಂದರೆಗಳುಂಟಾಗಿವೆ. ೨೦೦೪ರಲ್ಲಿ ಒಂದು ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು. ರಾಜಕೀಯ ವಿಶೇಷ ಲೇಖನ:ಶ್ರೀಲಂಕಾದ ಇತಿಹಾಸ ಶ್ರೀಲಂಕೆಯ ಈಗಿನ ಅಧ್ಯಕ್ಷರು ಮೈತೀಪಾಲ ಸಿರಿಸೇನಾ. ಈಗಿನ ಪ್ರಧಾನ ಮಂತ್ರಿಗಳು ವಿಕ್ರಮಸಿಘ್ಹ. ಸಂಪರ್ಕಗಳು ಪ್ರಮುಖ ಪ್ರವಾಸಿ ತಾಣಗಳು ಶ್ರೀಲಂಕಾ ಅತೀ ಚಿಕ್ಕ ದ್ವೀಪ ಹಾಗೂ ಕಡಿಮೆ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ.ಇಲ್ಲಿ ಅನೇಕ ಬೀಚ್,ಹೋಟೆಲ್,ರೆಸ್ಟೋರೆಂಟ್‍ಗಳು ಅಭಿವೃಧ್ದಿಯ ಪಥದಲ್ಲಿವೆ.ಇದರ ಜೊತೆಗೆ ವನ್ಯಸಂಪತ್ತು ಕೂಡ ಪ್ರವಸಿಗರನ್ನು ಆಕರ್ಷಿಸುತ್ತಿದೆ.ಈ ದೇಶದ ದಕ್ಷಿಣ ಕರಾವಳಿಯಲ್ಲಿನ ಮೊಟ್ಟೆ ಇಡುವ ಆಮೆಗಳು,ವರ್ಣರಂಜಿತ ಪಕ್ಷಿಗಳು,ನಾನಾ ಬಗೆಯ ಮಂಗಗಳು,ಚಿರತೆಗಳು,ನೀಲಿ ತಿಮಿಂಗಿಲ, ಹಾರುವ ಮೀನು ಮತ್ತು ಡಾ‌‍ಲ್ಫಿನ್ಜತೆಗಿನ ಆಟ ಇಲ್ಲಿನ ಪ್ರವಾಸಿ ತಾಣದ ಪ್ರಮುಖ ಅಂಶಗಳು.ಈ ದೇಶ ಇತ್ತೀಚೆಗೆ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ.ಪರ್ವತಅರೋಹಿಗಲಿಗೆ ಶ್ರೀಲಂಕಾವು ಬಹಳ ಉಪಯುಕ್ತವಾದ ದೇಶ.ಶ್ರೀಲಂಕಾದ ಹೆದ್ದಾರಿಯ ಪಕ್ಕದಲ್ಲಿ ಆನೆಗಳಿಗೆ ಪಾರ್ಕ್ ಗಳನ್ನು ಮಾಡಿಸಲಾಗಿದೆ, ಗಾಲೆ ಎಂಬಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು,ಯೇಲ್ ನ್ಯಾಷನಲ್ ಪಾರ್ಕ್ ನಲ್ಲಿರುವ ಚಿರತೆಗಳು, ಶ್ರೀಲಂಕಾದ ಬೆಟ್ಟ ಪ್ರದೇಶಗಳಲ್ಲಿ ತಯಾರಾಗಿ ಮಾರುಕಟ್ಟೆಗೆ ಹೋಗುವ ಕಾಫಿ,ಟೀ ವ್ಯವಹಾರ, ಕಾಡಿನ ನಡುವಿನಲ್ಲಿರುವ ಪ್ರಾಚೀನ ಅವಶೇಷಗಳು ಇಲ್ಲಿನ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳು. ಈ ಕಾರಣಗಳಿಂದಾಗಿ ಪ್ರಸಿಧ್ದ ಪ್ರವಾಸಿಗ "ಮಾರ್ಕೋ ಪೋಲೋ" ಶ್ರೀಲಂಕಾ ದೇಶವನ್ನು ವಿಶ್ವದ ಅತ್ಯುತ್ತಮ ದ್ವೀಪಗಳ ಸಾಲಿಗೆ ಸೇರಿಸಿರುತ್ತಾನೆ. ಕೊಲಂಬೋ ಕೊಲಂಬೊ ಶ್ರೀಲಂಕಾದ ರಾಜಧಾನಿಯಾಗಿದೆ.ಮಾರ್ಚ್ನಿನಿಂದ ಮೇ ತಿಂಗಳಿನೊಳಗೆ ಇಲ್ಲಿಗೆ ಭೇಟಿ ನೀಡುವುದು ಉತ್ತಮ.ಇಲ್ಲಿ ಮಹಾದೇವಿ ವಿಹಾರ,ಪಾರ್ಕ್,ಹೂಗಳ ಮಾರುಕಟ್ಟೆ,ಅತ್ಯುತ್ತಮ ಶ್ರೇಣಿಯ ರೆಸ್ಟೋರೆಂಟ್ಗಳನ್ನು ನೋಡಬಹುದು.ಇಲ್ಲಿ ಜು‍ಲೈ ಆಗಸ್ಟ್ ತಿಂಗಳುಗಳ ನಡುವೆಯು ಇಲ್ಲಿನ ಪ್ರಸಿದ್ದ ಹಬ್ಬವಾದ "ವೇಲೇ" ‌ಫೆಸ್ಟಿವಲ್ ನಡೆಯುತ್ತದೆ. ಕೊಲಂಬೊ (ಸಿಂಹಳ:කොළඹ, ಕಾರ್ಯನಿರ್ವಾಹಕ ಮತ್ತು ನ್ಯಾಯಾಂಗ ರಾಜಧಾನಿ ಮತ್ತು ಜನಸಂಖ್ಯೆಯ ಪ್ರಕಾರ ಶ್ರೀಲಂಕಾದ ಅತಿದೊಡ್ಡ ನಗರವಾಗಿದೆ. ಬ್ರೂಕಿಂಗ್ಸ್ ಸಂಸ್ಥೆಯ ಪ್ರಕಾರ, ಕೊಲಂಬೊ ಮೆಟ್ರೋಪಾಲಿಟನ್ ಪ್ರದೇಶವು 5.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಮತ್ತು ಪುರಸಭೆಯಲ್ಲಿ ೭೫೨,೯೯೩ ಜನಸಂಖ್ಯೆಯನ್ನು ಹೊಂದಿದೆ. ಇದು ಆರ್ಥಿಕ ಕೇಂದ್ರವಾಗಿದೆ. ದ್ವೀಪ ಮತ್ತು ಪ್ರವಾಸಿ ತಾಣ.ಇದು ದ್ವೀಪದ ಪಶ್ಚಿಮ ಕರಾವಳಿಯಲ್ಲಿದೆ ಮತ್ತು ಶ್ರೀಲಂಕಾದ ಶಾಸಕಾಂಗ ರಾಜಧಾನಿ ಶ್ರೀ ಜಯವರ್ಧನೆಪುರ ಕೊಟ್ಟೆ ಮತ್ತು ದೆಹಿವಾಲಾ-ಮೌಂಟ್ ಲ್ಯಾವಿನಿಯಾವನ್ನು ಒಳಗೊಂಡಿರುವ ಗ್ರೇಟರ್ ಕೊಲಂಬೊ ಪ್ರದೇಶದ ಪಕ್ಕದಲ್ಲಿದೆ. ಕೊಲಂಬೊವನ್ನು ಹೆಚ್ಚಾಗಿ ರಾಜಧಾನಿ ಎಂದು ಕರೆಯಲಾಗುತ್ತದೆ ಶ್ರೀ ಜಯವರ್ಧನೆಪುರ ಕೊಟ್ಟೆ ಕೊಲಂಬೊದ ನಗರ/ಉಪನಗರ ಪ್ರದೇಶದಲ್ಲಿದೆ.ಇದು ಪಶ್ಚಿಮ ಪ್ರಾಂತ್ಯದ ಆಡಳಿತ ರಾಜಧಾನಿ ಮತ್ತು ಕೊಲಂಬೊ ಜಿಲ್ಲೆಯ ಜಿಲ್ಲಾ ರಾಜಧಾನಿಯಾಗಿದೆ. ಕೊಲಂಬೊ ಆಧುನಿಕ ಜೀವನ, ವಸಾಹತುಶಾಹಿ ಕಟ್ಟಡಗಳು ಮತ್ತು ಮಿಶ್ರಣವನ್ನು ಹೊಂದಿರುವ ಕಾರ್ಯನಿರತ ಮತ್ತು ರೋಮಾಂಚಕ ನಗರವಾಗಿದೆ. ಸ್ಮಾರಕಗಳು. ಅದರ ದೊಡ್ಡ ಬಂದರು ಮತ್ತು ಪೂರ್ವ-ಪಶ್ಚಿಮ ಸಮುದ್ರ ವ್ಯಾಪಾರ ಮಾರ್ಗಗಳ ಉದ್ದಕ್ಕೂ ಅದರ ಕಾರ್ಯತಂತ್ರದ ಸ್ಥಾನದಿಂದಾಗಿ, ಕೊಲಂಬೊವು ಪ್ರಾಚೀನ ವ್ಯಾಪಾರಿಗಳಿಗೆ ೨,೦೦೦ ವರ್ಷಗಳ ಹಿಂದೆ ಪರಿಚಿತವಾಗಿತ್ತು.[ಉಲ್ಲೇಖದ ಅಗತ್ಯವಿದೆ] ಶ್ರೀಲಂಕಾವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಬಿಟ್ಟುಕೊಟ್ಟಾಗ ಇದನ್ನು ದ್ವೀಪದ ರಾಜಧಾನಿಯನ್ನಾಗಿ ಮಾಡಲಾಯಿತು. ೧೮೧೫, ಮತ್ತು ೧೯೪೮ ರಲ್ಲಿ ರಾಷ್ಟ್ರವು ಸ್ವತಂತ್ರವಾದಾಗ ರಾಜಧಾನಿಯಾಗಿ ಅದರ ಸ್ಥಾನಮಾನವನ್ನು ಉಳಿಸಿಕೊಳ್ಳಲಾಯಿತು. ೧೯೭೮ ರಲ್ಲಿ, ಆಡಳಿತಾತ್ಮಕ ಕಾರ್ಯಗಳನ್ನು ಶ್ರೀ ಜಯವರ್ಧನೆಪುರ ಕೊಟ್ಟೆಗೆ ಸ್ಥಳಾಂತರಿಸಿದಾಗ, ಕೊಲಂಬೊವನ್ನು ಶ್ರೀಲಂಕಾದ ವಾಣಿಜ್ಯ ರಾಜಧಾನಿಯಾಗಿ ಗೊತ್ತುಪಡಿಸಲಾಯಿತು. ಅನೇಕ ನಗರಗಳಂತೆ, ಕೊಲಂಬೊದ ನಗರ ಪ್ರದೇಶವು ಒಂದೇ ಸ್ಥಳೀಯ ಪ್ರಾಧಿಕಾರದ ಗಡಿಯನ್ನು ಮೀರಿ ವಿಸ್ತರಿಸಿದೆ, [ಉಲ್ಲೇಖದ ಅಗತ್ಯವಿದೆ] ಇತರ ಪುರಸಭೆ ಮತ್ತು ನಗರ ಸಭೆಗಳಾದ ಶ್ರೀ ಜಯವರ್ಧನೆಪುರ ಕೊಟ್ಟೆ ಮುನ್ಸಿಪಲ್ ಕೌನ್ಸಿಲ್, ದೆಹಿವಾಲಾ ಮೌಂಟ್ ಲ್ಯಾವಿನಿಯಾ ಮುನ್ಸಿಪಲ್ ಕೌನ್ಸಿಲ್, ಕೊಲೊನ್ನಾವಾ ನಗರ ಸಭೆ, ಕಡುವೆಲಾ ಮುನ್ಸಿಪಲ್ ಕೌನ್ಸಿಲ್, ಮತ್ತು ಕೋಟಿಕಾವಟ್ಟೆ ಮುಲ್ಲೇರಿಯಾವಾ ಪ್ರಾಂತೀಯ ಸಭೆ.[ಉಲ್ಲೇಖದ ಅಗತ್ಯವಿದೆ] ಶ್ರೀಲಂಕಾದ ಬಹುಪಾಲು ಕಾರ್ಪೊರೇಟ್ ಕಛೇರಿಗಳು, ರೆಸ್ಟೋರೆಂಟ್‌ಗಳು ಮತ್ತು ಮನರಂಜನಾ ಸ್ಥಳಗಳಿಗೆ ಮುಖ್ಯ ನಗರವು ನೆಲೆಯಾಗಿದೆ. ಕೊಲಂಬೊದಲ್ಲಿನ ಪ್ರಸಿದ್ಧ ಹೆಗ್ಗುರುತುಗಳು ಗಾಲ್ ಫೇಸ್ ಗ್ರೀನ್, ವಿಹಾರಮಹಾದೇವಿ ಪಾರ್ಕ್, ಬೈರಾ ಲೇಕ್, ಕೊಲಂಬೊ ರೇಸ್‌ಕೋರ್ಸ್, ಪ್ಲಾನೆಟೋರಿಯಂ, ಕೊಲಂಬೊ ವಿಶ್ವವಿದ್ಯಾಲಯ, ಮೌಂಟ್ ಲ್ಯಾವಿನಿಯಾ ಬೀಚ್, ಡೆಹಿವಾಲಾ ಝೂಲಾಜಿಕಲ್ ಗಾರ್ಡನ್, ನೆಲುಮ್ ಪೊಕುನಾ ಥಿಯೇಟರ್, ಒನ್ ಗಾಲ್ ಫೇಸ್, ಗಂಗಾರಾಮಾಯ ದೇವಸ್ಥಾನ, ಡಚ್ ಮ್ಯೂಸಿಯಂ, ಕೊಲಂಬೊ ಲೋಟಸ್ ಟವರ್ ಜೊತೆಗೆ ರಾಷ್ಟ್ರೀಯ ವಸ್ತುಸಂಗ್ರಹಾಲಯ. ಕಡಲ ತೀರಗಳು ಶ್ರೀಲಂಕಾದ ಪಾಮ್ ಬೀಚ್ ಸುಮಾರು ೧೬೦೦ ಕಿ.ಮೀವರೆಗೆ ವ್ಯಾಪಿಸಿರುವುದು.ಇದರ ಪಕ್ಕದಲ್ಲಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇರುವುದರಿಂದ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚು.ಗಾಲೆಯಲ್ಲಿರುವ "ಅನ್ ವಾಟೂನಾ" ಕಡಲ ತೀರ ಪ್ರಪಂಚದ ಮುಂಚೂಣಿಯಲ್ಲಿರುವ ೧೫ ಕಡಲ ತೀರಗಳ ಪಟ್ಟಿಯಲ್ಲಿದೆ.ಇಲ್ಲಿನ ಬೆಂಟೋಟ ಕಡಲ ತೀರದಲ್ಲಿ ಡೈವಿಂಗ್ ಮತ್ತು ಸ್ನಾರ್ಕ್ ಲಿಂಗ್ ಮಾಡುವ ಅವಕಾಶವಿದೆ.ಹವಳದ ಮತ್ತು ನೀರಿನೊಳಗಿರುವ ಗುಹೆಗಳು ಅಭಿವ್ರದ್ದಿಯ ಪಥದಲ್ಲಿದೆ. ಆಡಮ್ಸ್ ಪೀಕ್ ಶ್ರೀಲಂಕಾದ ಅತ್ಯುನ್ನತ ಪರ್ವತ ಶ್ರೇಣಿಯಲ್ಲಿ ಒಂದಾಗಿರುವ ಇದು ಆ ದೇಶದ ಜಾನಪದ ವಿದ್ವತ್ತಿಗೂ ಕಾರಣವಾಗಿದೆ.ಇದಕ್ಕೆ ಮುಖ್ಯ ಕಾರಣ ಶ್ರೀಪಾದ ಇರುವುದು ಇದೇ ಜಾಗದಲ್ಲಿ.ಬೌದ್ಧ,ಹಿಂದು,ಮುಸ್ಲಿಂ,ಕ್ರೈಸ್ತರೆಲ್ಲರೂ ಈ ಪರ್ವತ ಶ್ರೇಣಿಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಿದ್ದಾರೆ. ಈ ಪರ್ವತ ಶ್ರೇಣಿಯನ್ನು ತಲುಪಬೇಕಾದರೆ ಸುಮಾರು ೪೮೦೦ ಮೆಟ್ಟಿಲುಗಳನ್ನು ದಾಟಿಕೊಂಡು ಸಾಗಬೇಕು. ಅನುರಾಧ ಪುರ ಸಾವಿರಾರು ವರ್ಷಗಳ ಹಿಂದೆ ಅನುರಾಧಪುರವು ಶ್ರೀಲಂಕಾ ದೇಶದ ರಾಜಧಾನಿಯಾಗಿತ್ತು. ಈ ಪ್ರಾಚೀನ ನಗರಿಯನ್ನು ನೋಡಿದಾಗ ಇಲ್ಲಿ ಬಹು ಹಿಂದೆಯೇ ನಾಗರಿಕತೆಯು ಚಾಲ್ತಿಯಲ್ಲಿತ್ತು ಎಂದು ತಿಳಿದು ಬರುತ್ತದೆ.ಈ ಊರಿನ ರಚನೆಯನ್ನು ಕೂಡ ಬಹಳ ಯೋಜನಾಬದ್ದವಾಗಿ ಮಾಡಲಾಗಿದೆ. ಇಲ್ಲಿನ ಪ್ರಾಚೀನ ದೇವಸ್ಧಾನಗಳ ಅವಶೇಷಗಳು, ಅರಮನೆ, ದೈತ್ಯ ಗಾತ್ರದ ಸ್ತೂಪಗಳು ಇಲ್ಲಿನ ಇತಿಹಾಸವನ್ನು ವಿವರಿಸುತ್ತದೆ. ಡಂಬುಲ್ಲ ಗುಹೆ ದೇವಾಲಯ ಶ್ರೀಲಂಕಾದ ಬೌದ್ಧ ಪರಂಪರೆಯ ಒಂದು ಒಳನೋಟವು ಡಂಬುಲ್ಲ ಗುಹೆ ದೇವಾಲಯದಲ್ಲಿ ಕಾಣಸಿಗುತ್ತದೆ. ಇಲ್ಲಿ ದೈತ್ಯಕಾರದ ಕಲ್ಲಿನ ಶಿಲಾ ಸ್ತರದಲ್ಲಿ ಧಾರ್ಮಿಕ ಭಿತ್ತಿ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಗಾಲೆ ಡಚ್ ಕೋಟೆ ಇದು ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ.ಇಲ್ಲಿ ನಡೆಯುವ ಸಾಹಿತ್ಯ ಉತ್ಸವ ಬಹಳ ಜನಪ್ರಿಯವಾಗಿದೆ.ಈ ಪ್ರದೇಶ ಕರಿ ಮರದ ಕೆತ್ತನೆ ಹಾಗೂ ವಜ್ರದ ಹೊಳಪು ಹೊಂದಿರುವ ಕರಕುಶಲ ಕೇಂದ್ರವಾಗಿಯೂ ಪ್ರಸಿದ್ದಿಯಾಗಿದೆ. ನೋಡಲೇ ಬೇಕಾದ ಸ್ಥಳಗಳು ಕ್ಯಾಂಡಿಯನ್ ರಾಜ ಮನೆತನದ ಕುರುಹುಗಳಿರುವ ಕ್ಯಾಂಡಿ ಪ್ರದೇಶ. ರಾಫ್ಟಿಂಗ್ ಹಬ್ ಆಗಿರುವ ಕೀಟುಗುಲ್ಲಾ ನೂರಕ್ಕೂ ಅಧಿಕ ಜಾತಿಯ ಪಾರಿವಳಗಳಿರುವ 'ಮೀರಿಸಾ' ಏಷ್ಯಾದ ಆನೆಗಳಿರುವ ಪಿನಿನಾವಾಲಾ ದೊಡ್ಡ ಗಾತ್ರದ ಬುದ್ಧನ ಪ್ರತಿಮೆಗಳಿರುವ ಪೊಲೊನ್ನಾ ರಾಯಲ್ ಅರಮನೆಗಳು ಆರ್.ಪ್ರೇಮದಾಸ ಸ್ಟೇಡಿಯಂ ಸಿಗಿರಿಯಾ ರಾಕ್ ಫೊರ್ಟ್ರೆಸ್ ಅಡಾವಾಲೇ ನ್ಯಾಷನಲ್ ಪಾರ್ಕ್ ಮತ್ತು ಯೇಲ್ ನ್ಯಾಷನಲ್ ಪಾರ್ಕ್ ಇದನ್ನು ನೋಡಿ ಶ್ರೀಲಂಕಾ ಸರ್ಕಾರದ ಅಧಿಕೃತ ತಾಣ ಶ್ರೀಲಂಕಾ ಸಂಸತ್ತಿನ ಅಧಿಕೃತ ತಾಣ ಶ್ರೀಲಂಕಾದ ರಾಯಭಾರಿ ಕಛೇರಿಗಳು ಶ್ರೀಲಂಕಾ ಪ್ರವಾಸಿ ಮಾಹಿತಿ ಶ್ರೀಲಂಕಾ ಪ್ರವಾಸಿ ಬೋಧೆಗಳು ಉಲ್ಲೇಖಗಳು ವರ್ಗ:ಏಷ್ಯಾ ಖಂಡದ ದೇಶಗಳು ವರ್ಗ:ದಕ್ಷಿಣ ಏಷ್ಯಾ *
ಗುಲ್ಜಾರಿ ಲಾಲ್ ನಂದಾ
https://kn.wikipedia.org/wiki/ಗುಲ್ಜಾರಿ_ಲಾಲ್_ನಂದಾ
thumb|277x277px thumb|ಗುಲ್ಜಾರಿ ಲಾಲ್ ನಂದಾ ಗುಲ್ಜಾರಿ ಲಾಲ್ ನಂದಾ (ಜುಲೈ ೪, ೧೮೯೮ - ಜನವರಿ ೧೫, ೧೯೯೮) ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಲಾಹೋರ್, ಆಗ್ರಾ ಮತ್ತು ಅಲಹಾಬಾದ್ ಗಳಲ್ಲಿ ಅಧ್ಯಯನ ನಡೆಸಿದ ನಂದಾ ಅವರು ೧೯೨೧ರಲ್ಲಿ ಮುಂಬಯಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದರು. ೧೯೩೭ರಲ್ಲಿ ಮುಂಬಯಿ ಸರ್ಕಾರದ ವಿಧಾನಸಭೆಗೆ ಚುನಾಯಿತರಾಗಿದ್ದರು. ಸ್ವಾತಂತ್ರ್ಯಾನಂತರ ೧೯೫೦ ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾದರು. ಹಾಗೆಯೇ ನೀರಾವರಿ ಮತ್ತು ವಿದ್ಯುಚ್ಛಕ್ತಿ ಖಾತೆಗಳಲ್ಲಿ ಸಚಿವರಾದರು. ೧೯೫೨ ರಲ್ಲಿ ಲೋಕಸಭೆಗೆ ಚುನಾಯಿತರಾದರು. ೧೯೫೭ ಮತ್ತು ೧೯೬೨ ರಲ್ಲಿ ಮತ್ತೆ ಲೋಕಸಭೆಗೆ ಚುನಾಯಿತರಾದರು. ಉದ್ಯೋಗ ಖಾತೆಯ ಸಚಿವರಾಗಿ ನಂತರ ೧೯೬೩ ರಿಂದ ೬೬ ರ ವರೆಗೆ ಗೃಹ ಖಾತೆಯನ್ನು ಪಡೆದರು. ಜವಾಹರಲಾಲ್ ನೆಹರುರವರು ೧೯೬೪ ರಲ್ಲಿ ನಿಧನರಾದಾಗ ಹಂಗಾಮಿಯಾಗಿ ಗುಲ್ಜಾರಿ ಲಾಲ್ ನಂದಾ ಪ್ರಧಾನಿಯಾಗಿದ್ದರು. ಮತ್ತೊಮ್ಮೆ ಲಾಲ್ ಬಹಾದುರ್ ಶಾಸ್ತ್ರಿ ೧೯೬೬ರಲ್ಲಿ ನಿಧನರಾದಾಗ ಹಂಗಾಮಿಯಾಗಿ ಪ್ರಧಾನಿಗಳಾಗಿದ್ದರು. ಗುಲ್ಜಾರಿ ಲಾಲ್ ನಂದಾ ಭಾರತ ರತ್ನ ಪ್ರಶಸ್ತಿ ವಿಜೇತರು. ಗುಲ್ಜಾರಿಲಾಲ್ ನಂದಾ ಇವರು ಮಹಾತ್ಮ ಗಾಂಧೀಜಿಯವರ ತತ್ವಗಳ ಅನುಯಾಯಿಗಳಾಗಿದ್ದರು. ೧೯೯೮ರ ಜನವರಿಯಲ್ಲಿ ಶ್ರೀ ಗುಲ್ಜಾರಿಲಾಲ್ ನಂದಾ ನಿಧನರಾದರು. ವರ್ಗ:ರಾಜಕೀಯ ವರ್ಗ:ಭಾರತ ರತ್ನ ಪುರಸ್ಕೃತರು ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ಇಂದಿರಾ ಗಾಂಧಿ
https://kn.wikipedia.org/wiki/ಇಂದಿರಾ_ಗಾಂಧಿ
262px|thumb|right|ಒಂದು ಉಪವಾಸದಲ್ಲಿ ಇಂದಿರಾ ನೆಹರು ಮತ್ತು ಮಹಾತ್ಮಾ ಗಾಂಧಿ (ಸಂಬಂಧವಿಲ್ಲ) ಇಂದಿರಾ ಪ್ರಿಯದರ್ಶಿನಿ ಗಾಂಧಿಇಂದಿರಾ ಪ್ರಿಯದರ್ಶಿನಿ ಗಾಂಧಿ; ನಿ: ನೆಹರು; (೧೯ ನವೆಂಬರ್ ೧೯೧೭ – ೩೧ ಅಕ್ಟೋಬರ್ ೧೯೮೪) ೧೯೬೬ರಿಂದ ೧೯೭೭ರವೆಗೆ ಸತತ ಮೂರು ಬಾರಿ ಭಾರತ ಗಣತಂತ್ರ ದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ನಾಲ್ಕನೇ ಬಾರಿ ೧೯೮೦ರಿಂದ ೧೯೮೪ರಲ್ಲಿ ನಡೆದ ಅವರ ಹತ್ಯೆಯವರೆಗೆ, ಒಟ್ಟು ಹದಿನೈದು ವರ್ಷಗಳ ಕಾಲ, ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಅವರು ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ. ಇಂದಿನವರೆಗೆ ಆ ಸ್ಥಾನ ಅವರ ಪಾಲಿನದ್ದೇ ಆಗಿದೆ. ಅವರು ಮಹಾತ್ಮ ಗಾಂಧಿ ಅವರ ಸಂಬಂಧಿಕಳಲ್ಲ. ಮನೆತನ ರಾಜಕೀಯ ಪ್ರಭಾವವಿದ್ದ ನೆಹರು ಕುಟುಂಬದಲ್ಲಿ ಅವರ ಜನನ. ಬೆಳೆದದ್ದು ತೀಕ್ಷ್ಣ ರಾಜಕೀಯ ವಾತಾವರಣದಲ್ಲಿ. ಮೋತಿಲಾಲ್ ನೆಹರು ಈಕೆಯ ಅಜ್ಜ. ಅವರೊಬ್ಬ ಪ್ರಮುಖ ಭಾರತೀಯ ರಾಷ್ಟ್ರೀಯ ಮುಖಂಡ. ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮುಂದಾಳು ಮತ್ತು ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ್‌ಲಾಲ್ ನೆಹರು ಇಂದಿರಾಗಾಂಧಿಯವರ ತಂದೆ. ೧೯೪೧ರಲ್ಲಿ ಆಕ್ಸ್‌ಫರ್ಡ್ನಿಂದ ಭಾರತಕ್ಕೆ ಹಿಂದಿರುಗಿದ ನಂತರ ಈಕೆ ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ೧೯೫೦ರ ದಶಕದಲ್ಲ್ಲಿ, ಮೊದಲ ಭಾರತದ ಪ್ರಧಾನ ಮಂತ್ರಿಯಾಗಿದ್ದಾಗ ಅವರ ತಂದೆಗೆ ವೈಯಕ್ತಿಕ ಸಹಾಯಕರಾಗಿ ಅನಧಿಕೃತ ಸೇವೆ ಸಲ್ಲಿಸಿದರು.೧೯೬೪ರಲ್ಲಿ ಅವರ ತಂದೆಯ ನಿಧನ. ನಂತರ ಭಾರತದ ರಾಷ್ಟ್ರಪತಿಯಿಂದ ರಾಜ್ಯಸಭೆಯ ಸದಸ್ಯರಾಗಿ ಇವರ ನೇಮಕ. ಮುಂದೆ ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿಯಾಗಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಚಿವ ಸಂಪುಟದ ಸದಸ್ಯೆ.ಗಾಂಧಿ ಇಂದಿರಾ. (೧೯೮೨) ಮೈ ಟ್ರುಥ್ ರಾಜಕೀಯ ವಲಯದಲ್ಲಿ ಶಾಸ್ತ್ರಿಯವರ ಹಠಾತ್ ಮರಣಾನಂತರ ಇಂದಿರಾಗಾಂಧಿ ಪ್ರಧಾನ ಮಂತ್ರಿಯಾದರು. ಇವರನ್ನು ಪ್ರಧಾನಿ ಗದ್ದುಗೆಗೇರಿಸುವಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಕಾಮರಾಜ್ಅವರದ್ದು ಪ್ರಮುಖ ಪಾತ್ರ. ಗಾಂಧಿ ಯವರಿಂದ ಜನಾನುರಾಗಿ ರಾಜಕೀಯ ಸಿದ್ಧಾಂತಸ್ಥಾಪನೆ. ಚತುರ ಎದುರಾಳಿಗಳ ವಿರುದ್ಧ ಚುನಾವಣೆ ಗೆಲ್ಲುವಲ್ಲಿ ತನ್ನ ಸಾಮರ್ಥ್ಯದ ಪ್ರದರ್ಶನ. ಅವರಿಂದ ಹೆಚ್ಚು ಎಡ-ಪಕ್ಷೀಯ ಆರ್ಥಿಕ ನೀತಿಗಳ ಅನುಷ್ಠಾನ ಮತ್ತು ಕೃಷಿ ಉತ್ಪಾದಕತೆಗೆ ಬೆನ್ನು ತಟ್ಟಿ ಪ್ರೋತ್ಸಾಹ. ೧೯೭೧ರಲ್ಲಿ ಪಾಕಿಸ್ಥಾನದೊಂದಿಗೆ ನಡೆದ ಕದನದಲ್ಲಿ ಭಾರತದ್ದು ನಿರ್ಣಾಯಕ ಗೆಲುವು. ಈ ಸಂದರ್ಭದಲ್ಲಿ ಇಂದಿರಾ ಪ್ರಧಾನ ಮಂತ್ರಿ. ೧೯೭೫ ಅವರ ಪಾಲಿಗೆ ಒಂದು ಅಭದ್ರತೆಯ ಅವಧಿ. ಇದರಿಂದಾಗಿ ಆಗ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ. ದೀರ್ಘ ಕಾಲೀನ ನಿರಂಕುಶ ಪ್ರಭುತ್ವ. ಪರಿಣಾಮವಾಗಿ, ಸೋಲರಿಯದ ಕಾಂಗ್ರೆಸ್ ಪಕ್ಷಕ್ಕೆ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವ. 1980 ಚುನಾವಣೆ ಯಲ್ಲಿ ಕಾಂಗ್ರೆಸ್‌ಗೆ ಮತ್ತೆ ಜಯ. ಪ್ರಧಾನ ಮಂತ್ರಿ ಅಧಿಕಾರ ಮತ್ತೆ ಇಂದಿರಾ ಗಾಂಧಿ ಕೈಗೆ. ೧೯೮೪ ಜೂನ್‌ನಲ್ಲಿ, ದಂಗೆಕೋರರನ್ನು ಬಂಧಿಲೆಂದು ಗಾಂಧಿ ಆದೇಶದ ಮೇರೆಗೆ ಸಿಖ್‌ರ ಪವಿತ್ರ ಸ್ವರ್ಣ ಮಂದಿರದೊಳಕ್ಕೆ ಭಾರತೀಯ ಸೇನಾ ಪಡೆಯಿಂದ ಬಲವಂತ ಪ್ರವೇಶ. ಈ ಕಾರ್ಯಾಚರಣೆಯ ಪ್ರತೀಕಾರವಾಗಿ ೧೯೮೪ ಅಕ್ಟೋಬರ್ ೩೧ರಂದು ಇಂದಿರಾ ಗಾಂಧಿ ಹತ್ಯೆಗೆ ತುತ್ತಾದರು. ಆರಂಭಿಕ ಜೀವನ ಭಾರತದಲ್ಲಿನ ಬೆಳವಣಿಗೆ ಇಂದಿರಾಗಾಂಧಿ 1917 ನವೆಂಬರ್ 19ರಂದು ಪಂಡಿತ್ ಜವಾಹರ್‌ಲಾಲ್ ನೆಹರು ಮತ್ತು ಕಮಲಾ ನೆಹರು ಅವರಿಗೆ ಜನಿಸಿದರು. ಈ ದಂಪತಿಗಳಿಗೆ ಇಂದಿರಾ ಏಕಮಾತ್ರ ಪುತ್ರಿ. ನೆಹರು ಅವರದು ಗೌರವಾನ್ವಿತ ಕಾಶ್ಮೀರಿ ಪಂಡಿತ್ ಕುಟುಂಬ. ಇವರು ಜನಿಸಿದಾಗ, ಅಜ್ಜ ಮೋತಿಲಾಲ್ ನೆಹರು ಮತ್ತು ತಂದೆ ಜವಾಹರ್‌ಲಾಲ್ ನೆಹರು, ಇಬ್ಬರೂ ಪ್ರಭಾವಿ ರಾಜಕೀಯ ಮುಖಂಡರು. ಗಾಂಧಿ ಬಾಲ್ಯವನ್ನು ನೆಹರು ಕುಟುಂಬದ ಮನೆ ಆನಂದ ಭವನದಲ್ಲಿ ಕಳೆಯತ್ತಾ ಬೆಳೆದರು. ಈ ಸಂದರ್ಭದಲ್ಲಿ ತೀಕ್ಷ್ಣ ರಾಜಕೀಯ ವಾತಾವರಣ ಆ ಮನೆಯಲ್ಲಿ ನೆಲೆಸಿತ್ತು. ನೆಹರು ಮನೆಮಂದಿಯಿಂದ ದೂರ ಉಳಿದಿದ್ದ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಪ್ರೀತಿಯಲ್ಲಿ ಬೆಳೆದ ಇಂದಿರಾ ದೃಢ ರಕ್ಷಣಾತ್ಮಕ ಸ್ವಭಾವವನ್ನೂ ಮತ್ತು ಏಕಾಂಗಿ ವ್ಯಕ್ತಿತ್ವವನ್ನೂ ರೂಢಿಸಿಕೊಂಡಿದ್ದರು. ನೆಹರು ಮನೆಯಲ್ಲಿ ಆಗ ರಾಜಕೀಯ ಚಟುವಟಿಕೆಯ ಪ್ರವಾಹ. ಹೀಗಾಗಿ ಕುಟುಂಬದವರೊಂದಿಗೆ ಬೆರೆಯಲು ಆಗುತ್ತಿರಲಿಲ್ಲ. ವಿಜಯಲಕ್ಷ್ಮಿ ಪಂಡಿತ್‌ರನ್ನೂ ಒಳಗೊಂಡಂತೆ, ಇವರು ತಮ್ಮ ತಂದೆಯ ಸೋದರಿಯರೊಂದಿಗೆ, ವೈಯಕ್ತಿಕ ಭಿನ್ನಾಪ್ರಾಯ ಹೊಂದಿದ್ದರು. ಅವರೊಂದಿಗಿನ ಈ ಬಗೆಯ ಸಂಬಂಧವು ರಾಜಕೀಯ ಜಗತ್ತಿನಲ್ಲೂ ಹಾಗೇ ಮುಂದುವರಿಯಿತು. 'ನಾನು ಸೆರೆಮನೆಯಲ್ಲಿದ್ದಾಗ ಪೋಲೀಸರು ಪದೇ ಪದೇ ಮನೆಗೆ ಬಂದು, ಸರಕಾರ ಅವರಿಗೆ ವಿಧಿಸಿದ ದಂಡ ಪಾವತಿಯ ಪ್ರತಿಯಾಗಿ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದರು'-ಎಂದು ಇವರ ತಂದೆ ತಮ್ಮ ಆತ್ಮಚರಿತ್ರೆ ಟುವರ್ಡ್ ಫ್ರೀಡಮ್ ‌ನಲ್ಲಿ ಬರೆಯುತ್ತಾರೆ. "ನನ್ನ ನಾಲ್ಕು-ವರ್ಷದ ಮಗಳು ಇಂದಿರಾ ಹೀಗೆ ನಡೆಯುತ್ತಿದ್ದ ಸತತ ಲೂಟಿಯಿಂದ ತುಂಬಾ ನೊಂದಿದ್ದಳು. ತೀವ್ರ ಅಸಂತೋಷವನ್ನು ವ್ಯಕ್ತಪಡಿಸಿದ್ದ ಅವಳು ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಳು" ಎಂದು ನೆಹರು ಹೇಳುತ್ತಾರೆ. "ಬಾಲ್ಯದಲ್ಲಿ ಉಂಟಾದ ಅಚ್ಚಳಿಯದಂಥ ಈ ಬಗೆಯ ನೆನಪು ಪೋಲೀಸ್ ವ್ಯವಸ್ಥೆಯ ಬಗ್ಗೆ ಅವಳಲ್ಲಿ ವಿಭಿನ್ನ ದೃಷ್ಟಿಯನ್ನೇ ಸೃಷ್ಟಿಸುವುದೇನೋ ಎಂಬುದು ನನ್ನ ಕಳಕಳಿಯಾಗಿತ್ತು". ಇಂದಿರಾ ಯುವಕ ಮತ್ತು ಯುವತಿಯರಿಗಾಗಿ ವಾನರ ಸೇನೆ ಚಳವಳಿಗೆ ಚಾಲನೆ ನೀಡಿದರು. ಅದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪುಟ್ಟ ಆದರೆ ಗಮನಾರ್ಹ ಪಾತ್ರ ವಹಿಸಿತು. ಸೂಕ್ಷ್ಮ ಮಾಹಿತಿ ಪ್ರಕಟಣೆಗಳನ್ನು ಮತ್ತು ನಿರ್ಬಂಧಿತ ಸಂಗತಿಗಳನ್ನು ಪ್ರಸಾರ ಮಾಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸದಸ್ಯರಿಗೆ ನೆರವಾಯಿತು. ಧ್ವಜ ಪಥ ಸಂಚಲನ ನಡೆಸಿತು ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಂಡಿತು. ತಂದೆಯ ಮನೆಯಿಂದ ಶಾಲಾ ಚೀಲದಲ್ಲಿ ಪ್ರಮುಖ ಕ್ರಾಂತಿಯ ಆರಂಭಕ್ಕಾಗಿ ರೂಪುರೇಷೆ ಸಿದ್ಧವಾಗಿದ್ದ ಯೋಜನೆಗಳ ಪ್ರಮುಖ ದಾಖಲೆಯನ್ನು ಪೊಲೀಸರ ಮೂಗಿನಡಿಯಲ್ಲೇ ರಹಸ್ಯವಾಗಿ ಇಂದಿರಾ ಸಾಗಿಸಿದ್ದರು. ಇದು 1930ರಲ್ಲಿನ ಕ್ರಾಂತಿಗೆ ಪ್ರೇರಣೆ ನೀಡಿತು ಎಂಬುದೊಂದು ಮಾತು ಜನಜನಿತ. ಯುರೋಪ್‌ನಲ್ಲಿ ವ್ಯಾಸಂಗ ಇಂದಿರಾಗಾಂಧಿ ತಾಯಿ ಕಮಲಾ ನೆಹರು ಬಹಳ ದಿನದ ಹೆಣಗಾಟದ ನಂತರ 1936ರಲ್ಲಿ ಕ್ಷಯ ರೋಗಕ್ಕೆ ಬಲಿಯಾದರು. ಇಂದಿರಾಗೆ ಆಗಿನ್ನೂ 18 ವರ್ಷ. ಹೀಗಾಗಿ ಇವರು ಬಾಲ್ಯದಲ್ಲಿ ಸುಭದ್ರ ಕುಟುಂಬ ಜೀವನದ ಸುಖವನ್ನು ಅನುಭವಿಸಲಿಲ್ಲ. ಇಂಗ್ಲೆಂಡ್‌ನ, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸೊಮರ್‌ವಿಲ್ಲೆ ಕಾಲೇಜಿನಲ್ಲಿ 1930ರ ಉತ್ತರಾರ್ಧದಲ್ಲಿ ವ್ಯಾಸಂಗ ನಿರತರಾಗಿದ್ದಾಗ ಅವರು ಲಂಡನ್ ಮೂಲದ ತೀವ್ರಗಾಮಿ ಸ್ವಾತಂತ್ರ-ಪರವಾದ ಇಂಡಿಯಾ ಲೀಗ್ (= ಭಾರತೀಯ ಒಕ್ಕೂಟ)ನ ಸದಸ್ಯರಾಗಿದ್ದರು.ಕ್ಯಾಥರಿನ್ ಫ್ರ್ಯಾಂಕ್, ಪುಟಗಳು 139 ಇಂದಿರಾ ಅವರ ವ್ಯಕ್ತಿತ್ವ 1940ರ ಆರಂಭದಲ್ಲಿ ಇಂದಿರಾ ಅವರು ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಯಿಂದ ಗುಣಮುಖರಾಗಲು ಸ್ವಿಜರ್‌ಲ್ಯಾಂಡ್‌ನ ಮನೆಯೊಂದರಲ್ಲಿ ಕೆಲವು ದಿನ ತಂಗಿದರು. ಇವರು ದೂರದಲ್ಲಿದ್ದ ತಂದೆಯೊಂದಿಗೆ ಉದ್ದುದ್ದ ಪತ್ರಗಳನ್ನು ಬರೆಯುವ ಹವ್ಯಾಸ ಇಟ್ಟುಕೊಂಡಿದ್ದರು. ಇದು ಬಾಲ್ಯದಲ್ಲೇ ಅವರು ರೂಢಿಸಿಕೊಂಡಿದ್ದರ ಮುಂದುವರಿಕೆ. ತಂದೆ ಮಗಳ ಮಧ್ಯೆ ರಾಜಕೀಯದ ಬಗ್ಗೆ ಚರ್ಚೆ ನಡೆಯುತ್ತಿತ್ತು.ಕ್ಯಾಥರಿನ್ ಫ್ರ್ಯಾಂಕ್, ಪುಟಗಳು 144 ಅವರು ಯುರೋಪ್ ಖಂಡ ಮತ್ತು UKಯಲ್ಲಿದ್ದಾಗ, ರಾಜಕೀಯದಲ್ಲಿ ಕ್ರಿಯಾಶೀಲವಾಗಿದ್ದ ಪಾರ್ಸಿ ತರುಣ ಫಿರೋಜ್ ಗಾಂಧಿಯನ್ನು ಭೇಟಿಯಾದರು (ಅವರು ಮೋಹನ್‌ದಾಸ್ ಗಾಂಧಿಅವರ ದತ್ತುಪುತ್ರ).ಕ್ಯಾಥರಿನ್ ಫ್ರ್ಯಾಂಕ್, ಪುಟಗಳು 136 ಭಾರತಕ್ಕೆ ಹಿಂದಿರುಗಿದ ನಂತರ, ಫಿರೋಜ್ ಗಾಂಧಿಯವರು ನೆಹರು ಕುಟುಂಬಕ್ಕೆ ತುಂಬಾ ಹತ್ತಿರವಾದರು, ವಿಶೇಷವಾಗಿ ಇಂದಿರಾರವರ ತಾಯಿ ಕಮಲಾ ನೆಹರುರವರಿಗೆ ಮತ್ತು ಇಂದಿರಾರವರಿಗೂ ಸಹ. ಫಿರೋಜ್ ಗಾಂಧಿ ಜೊತೆ ಮದುವೆ ಇಂದಿರಾ ಮತ್ತು ಫಿರೋಜ್ ಗಾಂಧಿಯವರು ಭಾರತಕ್ಕೆ ಹಿಂದಿರುಗಿದಾಗ, ಪರಸ್ಪರ ಪ್ರೀತಿಸುತ್ತಿದ್ದರು. ವೈದ್ಯರ ಸೂಚನೆಯನ್ನೂ ಮೀರಿ ಅವರು ಮದುವೆಯಾಗಲು ನಿರ್ಧರಿಸಿದರು.ಕ್ಯಾಥರಿನ್ ಫ್ರ್ಯಾಂಕ್, ಪುಟಗಳು 164 ಫಿರೋಜ್ ಗಾಂಧಿಯವರಲ್ಲಿದ್ದ ಮುಕ್ತ ಮನೋಭಾವ, ಹಾಸ್ಯ ಪ್ರಜ್ಞೆ ಮತ್ತು ಆತ್ಮ-ವಿಶ್ವಾಸವನ್ನು ಇಂದಿರಾ ಇಷ್ಟಪಟ್ಟರು. ತಮ್ಮ ಮಗಳು ಅಷ್ಟು ಬೇಗ ಮದುವೆಯಾಗುವ ಆಲೋಚನೆ ನೆಹರುಗೆ ಇಷ್ಟವಾಗಲಿಲ್ಲ. ಈ ಪ್ರೇಮ ವಿವಾಹವನ್ನು ತಪ್ಪಿಸಲು ಮಹಾತ್ಮಾಗಾಂಧಿಯವರ ಸಹಾಯವನ್ನು ಪಡೆಯಲು ಅವರು ಪ್ರಯತ್ನಿಸಿದರು. ಇಂದಿರಾ ಹಠ ಹಿಡಿದರು. 1942 ಮಾರ್ಚ್‌ನಲ್ಲಿ ಹಿಂದು ಆಚರಣೆಯಂತೆ ಮದುವೆ ನೆರವೇರಿತು. ಫಿರೋಜ್ ಮತ್ತು ಇಂದಿರಾ ಇಬ್ಬರೂ ಸಹ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. 1942ರಲ್ಲಿ ನಡೆದ 'ಭಾರತ ಬಿಟ್ಟು ತೊಲಗಿ' ಚಳವಳಿಯಲ್ಲಿ ಭಾಗವಹಿಸಿದಾಗ ಅವರಿಬ್ಬರೂ ಬಂಧನಕ್ಕೊಳಗಾದರು. ಸ್ವಾತಂತ್ರ್ಯಾ ನಂತರ, ಫಿರೋಜ್‌ ಚುನಾವಣಾ ಕಣಕ್ಕೆ ಇಳಿದರು. ಉತ್ತರ ಪ್ರದೇಶದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರ ಇಬ್ಬರು ಮಕ್ಕಳಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಹುಟ್ಟಿದ ನಂತರ, ಬಿಗಡಾಯಿಸಿದ ಅವರ ಸಂಬಂಧ ಬೇರ್ಪಡುವಷ್ಟರ ಮಟ್ಟಿಗೆ ಬಂತು. ಮರು-ಚುನಾಯಿತರಾದ ಸ್ವಲ್ಪ ದಿನಗಳಲ್ಲೇ ಫಿರೋಜ್‌ ಹೃದಯಾಘಾತಕ್ಕೆ ಈಡಾದರು. ಇದರಿಂದ ಮತ್ತೆ ರಾಜಿಯಾದರು. ಇವರಿಬ್ಬರ ಸಂಬಂಧ ಫಿರೋಜ್ ಗಾಂಧಿ 1960ರ ಸೆಪ್ಟೆಂಬರ್‌ನಲ್ಲಿ ನಿಧನರಾಗುವ ಕೆಲವು ವರ್ಷಗಳ ಮುಂದಿನವರೆಗೆ ಉಳಿದಿತ್ತು. thumb|left|300px|ನೆಹರು ಕುಟುಂಬ - ಮಧ್ಯದಲ್ಲಿ ಕುಳಿತಿರುವವರು ಮೋತಿಲಾಲ್ ನೆಹರು ಮತ್ತು ನಿಂತಿರುವವರು (ಎಡದಿಂದ ಬಲಕ್ಕೆ) ಜವಾಹರ್‌ಲಾಲ್ ನೆಹರು, ವಿಜಯಲಕ್ಷ್ಮಿ ಪಂಡಿತ್, ಕೃಷ್ಣ ಹುಥೀಸಿಂಗ್, ಇಂದಿರಾ, ಮತ್ತು ರಂಜಿತ್ ಪಂಡಿತ್; ಕುಳಿತಿರುವವರು: ಸ್ವರೂಪ್ ರಾಣಿ, ಮೋತಿಲಾಲ್ ನೆಹರು ಮತ್ತು ಕಮಲಾ ನೆಹರು (ಸುಮಾರು 1927). ಮುಖಂಡತ್ವದ ಆರಂಭ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರು right|189px|thumb|ಇಂದಿರಾ ಮತ್ತು ಮಹಾತ್ಮಾ ಗಾಂಧಿ ಸುಮಾರು 1930 ವರ್ಷಗಳು 1959 ಮತ್ತು 1960ರಲ್ಲಿ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಚುನಾವಣೆಗೆ ನಿಂತು ಅಧ್ಯಕ್ಷರಾಗಿ ಚುನಾಯಿತರಾದರು. ಅವರ ಅಧಿಕಾರಾವಧಿಯಲ್ಲಿ ವಿಶೇಷ ಘಟನೆಗಳೇನೂ ಸಂಭವಿಸಲಿಲ್ಲ. ತಮ್ಮ ತಂದೆಯ ಸಿಬ್ಬಂದಿ ವರ್ಗದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ ರು. ನೆಹರುರವರು ಸ್ವಜನ ಪಕ್ಷಪಾತವನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದರು. ಗಾಂಧಿಯವರು 1962ರ ಚುನಾವಣೆಯಲ್ಲಿ ಭಾಗವಹಿಸಲಿಲ್ಲ. ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿ 1964 ಮೇ 27ರಂದು ನೆಹರು ನಿಧನರಾದರು. ನೂತನ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಒತ್ತಾಯಕ್ಕೆ ಮಣಿದ ಇಂದಿರಾ ಚುನಾವಣೆಯಲ್ಲಿ ಸ್ಫರ್ಧಿಸಿದರು ಮತ್ತು ಸರಕಾರವನ್ನು ಸೇರಿದರು. ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿಯಾಗಿ ಅವರು ನೇಮಕಗೊಂಡರು.ಕ್ಯಾಥರಿನ್ ಫ್ರ್ಯಾಂಕ್, ಪುಟಗಳು 278 ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿದ್ದರ ಪರಿಣಾಮವಾಗಿ ತಮಿಳುನಾಡಿನಲ್ಲಿ ದೊಂಬಿಯೆದ್ದಿತು. ಹಿಂದಿ ಮಾತನಾಡದ ತಮಿಳುನಾಡು ರಾಜ್ಯದ ರಾಜಧಾನಿ ಮದ್ರಾಸ್‌ಗೆ ಆ ಸಂದರ್ಭದಲ್ಲಿ ಅವರು ಭೇಟಿ ನೀಡಿದ್ದರು.ಅಲ್ಲಿ ಅವರು ಸರಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮುದಾಯ ಮುಖಂಡರ ಕೋಪವನ್ನು ಶಮನಗೊಳಿಸಿದರು. ಗಲಭೆಯಿಂದಾಗಿ ಹಾನಿಗೀಡಾದ ಪ್ರದೇಶಗಳ ಮರು-ನಿರ್ಮಾಣದ ಮೇಲ್ವಿಚಾರಣೆ ವಹಿಸಿದರು. ಇಂಥ ಉಪಕ್ರಮಕ್ಕೆ ಹೆಜ್ಜೆ ಇಡದ ಶಾಸ್ತ್ರಿ ಮತ್ತು ಅವರ ಸಂಪುಟದ ಹಿರಿಯ ಸಚಿವರು ಮುಜುಗರಕ್ಕೆ ಒಳಗಾದರು. ಗಾಂಧಿಯವರ ಈ ಕ್ರಿಯಾಶೀಲತೆ ಬಹುಶಃ ನೇರವಾಗಿ ಶಾಸ್ತ್ರಿಯವರಿಗೇ ಗುರಿ ಇಟ್ಟಿದ್ದಾಗಲೀ ಅಥವಾ ತಮ್ಮ ಸ್ವಂತ ರಾಜಕೀಯ ಉನ್ನತಿಯನ್ನು ಬಯಸಿದ್ದಾಗಲೀ ಆಗಿರಲಿಲ್ಲ. ತಮ್ಮ ಸಚಿವಾಲಯದ ನಿತ್ಯದ ಕೆಲಸ-ಕಾರ್ಯಗಳಲ್ಲಿ ಅವರು ಆಸಕ್ತಿ ಕಳೆದುಕೊಂಡರು ಎಂಬ ವರದಿಗಳೂ ಇವೆ. ಮಾಧ್ಯಮದ ಅರಿವಿದ್ದ ಅವರು ರಾಜಕಾರಣದ ಕಲೆ ಮತ್ತು ವ್ಯಕ್ತಿತ್ವ-ರೂಪಿಸುವ ನೈಪುಣ್ಯ ಹೊಂದಿದ್ದರು. "1965ರ ನಂತರ ಗಾಂಧಿ ಮತ್ತು ಅವರ ಪ್ರತಿಸ್ಫರ್ಧಿಗಳ ನಡುವೆ ಹೋರಾಟವೇ ನಡೆಯಿತು. ಅನೇಕ ರಾಜ್ಯಗಳಲ್ಲಿ ಮೇಲ್ಜಾತಿಗೆ ಸೇರಿದ ಮುಖಂಡರನ್ನು ಕೆಳಕ್ಕಿಳಿಸಿ ಆ ಸ್ಥಾನಗಳಲ್ಲಿ ಹಿಂದುಳಿದ ಜಾತಿಯ ನಾಯಕರನ್ನು ನೇಮಿಸಲು ಕೇಂದ್ರೀಯ ಕಾಂಗ್ರೆಸ್ (ಪಕ್ಷ) ಮುಖಂಡತ್ವವು ಮುಂದಾಯಿತು. ಜೊತೆಗೆ, ಪ್ರತಿಪಕ್ಷ ಮತ್ತು ತಮ್ಮ ಎದುರಾಳಿಗಳನ್ನು ಸೋಲಿಸಲು ಹಿಂದುಳಿದವರ ಮತ ಸಂಗ್ರಹಿಸುವಲ್ಲಿ ಕಾರ್ಯೊನ್ಮುಖರಾದರು. ಇಂಥ ಹಸ್ತಕ್ಷೇಪ ಕೆಲವೊಮ್ಮೆ ಸಾಮಾಜಿಕ ಪ್ರಗತಿಪರ ಹೆಜ್ಜೆಯಂತೆ ಕಂಡರೂ ಪ್ರಾದೇಶಿಕವಾದ ಮತ್ತು ಜನಾಂಗೀಯವಾದ ಸಂಘರ್ಷ ಗಾಢವಾಗಿ ಬೆಳೆಯಲು ಕಾರಣವಾಯಿತು.ಐಬಿಡ್ #2 ಪುಟಗಳು 154 1965ರ ಭಾರತ-ಪಾಕಿಸ್ಥಾನ ಯುದ್ಧ ನಡೆಯುತ್ತಿದ್ದಾಗ, ಗಾಂಧಿ ಶ್ರೀನಗರದ ಗಡಿ ಪ್ರದೇಶದಲ್ಲಿ ವಿಹಾರ ನಡೆಸಿದ್ದರು. ಪಾಕಿಸ್ಥಾನಿ ದಂಗೆಕೋರರು ನಗರದ ಹತ್ತಿರಕ್ಕೆ ನುಸುಳಿ ಬಂದಿದ್ದಾರೆ ಎಂದು ಸೇನೆಯು ಎಚ್ಚರಿಕೆ ನೀಡಿದರೂ ಸಹ, ಅದನ್ನು ಲೆಕ್ಕಿಸದ ಅವರು ಜಮ್ಮು ಅಥವಾ ದೆಹಲಿಗೆ ವಾಸ್ತವ್ಯ ಸ್ಥಳಾಂತರಿಸಲು ನಿರಾಕರಿಸಿದರು. ಬದಲಿಗೆ ಸ್ಥಳೀಯ ಆಡಳಿತ ಯಂತ್ರವನ್ನು ಪುನಶ್ಚೇತನಗೊಳಿಸುತ್ತಾ ಮಾಧ್ಯಮದ ಗಮನವನ್ನು ತಮ್ಮತ್ತ ಸೆಳೆದರು. ಪಾಕಿಸ್ಥಾನದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸ ಲಾಯಿತು, ಮತ್ತು ಪ್ರಧಾನ ಮಂತ್ರಿ ಶಾಸ್ತ್ರಿಯವರು 1966 ಜನವರಿಯಲ್ಲಿ ಪಾಕಿಸ್ಥಾನದ ಆಯೂಬ್ ಖಾನ್‌ರೊಂದಿಗೆ ತಾಷ್ಕೆಂಟ್‌ನಲ್ಲಿ, ಸೋವಿಯತ್ ಸಮ್ಮುಖದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಇದಾದ ಕೆಲವೇ ಗಂಟೆಗಳ ನಂತರ, ಶಾಸ್ತ್ರಿ ಹೃದಯಾಘಾತಕ್ಕೀಡಾಗಿ ನಿಧನರಾದರು.ಕ್ಯಾಥರಿನ್ ಫ್ರ್ಯಾಂಕ್, ಪುಟಗಳು 284 ಮೊರಾರ್ಜಿ ದೇಸಾಯಿಯವರ ವಿರೋಧದ ನಡುವೆಯೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಕೆ. ಕಾಮರಾಜ್‌ ಅವರು ಇಂದಿರಾ ಗಾಂಧಿಯನ್ನು ಪ್ರಧಾನ ಮಂತ್ರಿ ಗದ್ದುಗೆಗೆ ಏರಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದರು.ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಜಯಶೀಲರಾದರು. ಮೊರಾರ್ಜಿ ದೇಸಾಯಿಯವರ 169 ಮತಕ್ಕೆ ಎದುರಾಗಿ ಇವರು 355 ಮತಗಳನ್ನು ಪಡೆಯುವ ಮೂಲಕ ಭಾರತದ ಐದನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಭಾರತದ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಭಾಜನ ರಾದರು. ಪ್ರಧಾನ ಮಂತ್ರಿ right|thumb|200px|ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರು ಇಂದಿರಾ ಗಾಂಧಿಯವರಿಗೆ 1966ರ ಜನವರಿ 24ರಲ್ಲಿ ಅಧಿಕಾರದ ಪ್ರಮಾಣವಚನವನ್ನು ನೀಡುತ್ತಿರುವುದು. ಮೊದಲ ಅವಧಿ ದೇಶೀಯ ನೀತಿ 1966ರಲ್ಲಿ ಗಾಂಧಿ ಪ್ರಧಾನ ಮಂತ್ರಿಯಾದಾಗ ಕಾಂಗ್ರೆಸ್ ಎರಡು ಹೋಳಾಯಿತು. ಒಂದು ಬಣ ಗಾಂಧಿ ನೇತೃತ್ವದ ಸಮಾಜವಾದಿಗಳದ್ದು ಮತ್ತೊಂದು ಬಣ ಮೊರಾರ್ಜಿ ದೇಸಾಯಿ ನೇತೃತ್ವದ ಸಂಪ್ರದಾಯವಾದಿಗಳದ್ದು.ರಾಮ್‌ಮನೋಹರ್ ಲೋಹಿಯ ಇವರನ್ನು ಗುಂಗಿ ಗುಡಿಯ ಅಂದರೆ 'ಮೂಕಬೊಂಬೆ' ಎಂದು ಕರೆದರು.ಕ್ಯಾಥರಿನ್ ಫ್ರ್ಯಾಂಕ್, ಪುಟಗಳು 303. ನಲವತ್ತು ವರ್ಷದ ಇಂದಿರಾ ಗಾಂಧಿಯವರನ್ನು ವಿವರಿಸಲು ಸಾಮಾನ್ಯವಾಗಿ ಮಾಧ್ಯಮ ಮತ್ತು ಅವರ ಕಾಂಗ್ರೆಸ್ ಸಹಚರರು ಬಳಸಿದ ಇತರ ಛೀಮಾರಿಗಳನ್ನೂ ಸಹ ಪಟ್ಟಿ ಮಾಡುತ್ತದೆ. ಲಿಂಡನ್ ಜೋನ್ಸನ್ ಅವರನ್ನು 'ಈ ಹುಡುಗಿ' ಎಂದು ಕರೆದರು. ಆಂತರಿಕ ಸಮಸ್ಯೆಗಳಿಂದಾದ ಪರಿಣಾಮ, 1967ರ ಚುನಾವಣೆ ಫಲಿತಾಂಶದಲ್ಲ್ಲಿಕಾಣಿಸಿಕೊಂಡಿತು. ಲೋಕಸಭೆಯ 545 ಸ್ಥಾನ ಗಳಲ್ಲಿ ಕಾಂಗ್ರೆಸ್ 297 ಸ್ಥಾನಗಳನ್ನು ಗೆದ್ದಿತಾದರೂ ಸುಮಾರು 60 ಸ್ಥಾನಗಳನ್ನು ಕಳೆದುಕೊಂಡಿತು. ಅವರು ದೇಸಾಯಿಯವರಿಗೆ ಭಾರತದ ಉಪಪ್ರಧಾನ ಮಂತ್ರಿ ಹುದ್ದೆ ಮತ್ತು ಹಣಕಾಸು ಖಾತೆ ಮಂತ್ರಿಯಾಗುವ ಅವಕಾಶ ನೀಡಬೇಕಾದ ಸಂದರ್ಭ ಒದಗಿ ಬಂತು. ದೇಸಾಯಿ ಅವರೊಂದಿಗೆ ಹಲವು ಭಿನ್ನಾಭಿಪ್ರಾಯದ ನಂತರ 1969ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿಭಜನೆಗೆ ಈಡಾಯಿತು. ಅವರು ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಬೆಂಬಲದಿಂದ ಮುಂದಿನ ಎರಡು ವರ್ಷ ಆಡಳಿತ ನಡೆಸಿದರು. ಅದೇ ವರ್ಷ ಅಂದರೆ, 1969 ಜುಲೈನಲ್ಲಿ ಅವರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. 1971ರಲ್ಲಿ ಪಾಕಿಸ್ಥಾನದೊಂದಿಗೆ ಯುದ್ಧ ಪೂರ್ವ ಪಾಕಿಸ್ಥಾನದ ನಾಗರಿಕರ ವಿರುದ್ಧ ಪಾಕಿಸ್ಥಾನ ಸೇನಾ ಪಡೆ ವ್ಯಾಪಕ ದೌರ್ಜನ್ಯ ನಡೆಸಿತು.U.S. ದೂತಾವಾಸ (ಢಾಕ) ಕೇಬಲ್, ಸಿಟ್ರೆಪ್: ~nsarchiv/ NSAEBB/ NSAEBB79/BEBB6.pdf ಸೇನಾ ಭಯೋತ್ಪಾದನೆ ದಂಗೆಯು ಢಾಕದಲ್ಲಿ ಮುಂದುವರಿಯಿತು; ಸಾಕ್ಷ್ಯ ಸೇನೆಯು ಕೆಲವು ತೊಂದರೆಗಳನ್ನು ಎದುರಿಸಿತು, ಮಾರ್ಚ್ 31, 1971, ರಹಸ್ಯ, 3 pptime.com/time/magazine/article/0,9171,877316,00.html ಪೂರ್ವ ಪಾಕಿಸ್ಥಾನ: ಈವನ್ ದ ಸ್ಕೈಸ್ ವೀಪ್, ಟೈಮ್ ಮ್ಯಾಗಜಿನ್ , ಅಕ್ಟೋಬರ್ 25, 1971. ಸುಮಾರು 10 ದಶಲಕ್ಷ ನಿರಾಶ್ರಿತರು ಭಾರತಕ್ಕೆ ವಲಸೆ ಬಂದು ದೇಶದಲ್ಲಿ ಅಭದ್ರತೆ ಸೃಷ್ಟಿಸಿದರು ಮತ್ತು ಆರ್ಥಿಕ ಮುಗ್ಗಟ್ಟಿಗೆ ಕಾರಣರಾದರು. ರಿಚರ್ಡ್ ನಿಕ್ಸನ್‌ ನೇತೃತ್ವದ ಅಮೆರಿಕ ಸಂಯುಕ್ತ ಸಂಸ್ಥಾನ ಪಾಕಿಸ್ಥಾನಕ್ಕೆ ಬೆಂಬಲ ನೀಡಿತು ಮತ್ತು ಯುದ್ಧ ಮಾಡದ ಹಾಗೆ ಭಾರತಕ್ಕೆ ಎಚ್ಚರಿಕೆ ನೀಡುವ UN ನಿರ್ಣಯ ಕೈಗೊಂಡಿತು. ನಿಕ್ಸನ್‌ಗೆ ಇಂದಿರಾರನ್ನು ಕಂಡರೆ ವೈಯಕ್ತಿಕವಾಗಿ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ರಾಜ್ಯದ ಕಾರ್ಯದರ್ಶಿ ಹೆನ್ರಿ ಕಿಸಿಂಜರ್‌ ಜೊತೆಗಿನ ಖಾಸಗಿ ಸಂಪರ್ಕದಲ್ಲಿ ಇಂದಿರಾರನ್ನು "ಮಾಟಗಾತಿ" ಮತ್ತು "ಚತುರ ಗುಳ್ಳೆನರಿ" ಎಂದು ಟೀಕಿಸಿದ್ದಾರೆ (ಈ ಸಂಗತಿ ರಾಜ್ಯ ಆಡಳಿತ ವಿಭಾಗದಿಂದ ಈಗ ಹೊರಬಿದ್ದಿದೆ).ನಿಕ್ಸೋನ್‌ನ ಡಿಸ್‌ಲೈಕ್ ಆಫ್ 'ವಿಟ್ಚ್' ಇಂದಿರಾ, BBC ನ್ಯೂಸ್, 29-ಜೂನ್-2005 ಸ್ನೇಹ ಮತ್ತು ಸಹಕಾರ ಒಪ್ಪಂದವೊಂದಕ್ಕೆ ಇಂದಿರಾ ಸಹಿ ಹಾಕಿದರು. ಇದರಿಂದ ರಾಜಕೀಯ ಬೆಂಬಲ ಮತ್ತು UNನಲ್ಲಿ ಸೋವಿಯತ್ ನಿರಾಕರಣಾಧಿಕಾರ ಸಿಕ್ಕಿತು. 1971ರ ಯುದ್ಧದಲ್ಲಿ ಭಾರತ ಜಯಗಳಿಸಿತು ಹಾಗೂ ಬಾಂಗ್ಲಾದೇಶ ಹುಟ್ಟಿಕೊಂಡಿತು. ವಿದೇಶೀ ನೀತಿ ಹೊಸ ಪಾಕಿಸ್ಥಾನಿ ಅಧ್ಯಕ್ಷ ಜುಲ್ಫಿಕಾರ್ ಆಲಿ ಭುಟ್ಟೊ ಅವರನ್ನು ಇಂದಿರಾ ವಾರಾವಧಿಯ ಶಿಮ್ಲಾ ಶೃಂಗ ಸಭೆಗೆ ಆಮಂತ್ರಿಸಿದರು. ಮಾತುಕತೆ ವಿಫಲವಾಯಿತಾದರೂ, ರಾಜ್ಯದ ಇಬ್ಬರು ಮುಖಂಡರು ಶಿಮ್ಲಾ ಒಪ್ಪಂದಕ್ಕೆ ಅಂತಿಮವಾಗಿ ಸಹಿ ಹಾಕಿದರು. ಮಾತುಕತೆ ಮತ್ತು ಶಾಂತಿ ಸಂಧಾನದ ಮೂಲಕ ಕಾಶ್ಮೀರ ವಿವಾದವನ್ನು ಪರಿಹರಿಸಿಕೊಳ್ಳಬೇಕು ಎಂದು ಅದು ಎರಡೂ ದೇಶಗಳನ್ನು ಪರಿಮಿತಿಯಲ್ಲಿಟ್ಟಿತು. ನಿಕ್ಸನ್‌ ಜೊತೆಗಿನ ಇವರ ಬದ್ಧ ದ್ವೇಷದಿಂದಾಗಿ, ಯುನೈಟೆಡ್ ಸ್ಟೇಟ್ಸ್‌ ಸಂಬಂಧವು ದೂರವಾಗುತ್ತಾ ಹೋಯಿತು ಮತ್ತು ಸೋವಿಯತ್ ಒಕ್ಕೂಟದೊಂದಿಗಿನ ಸಂಬಂಧವು ನಿಕಟವಾಯಿತು. ಗಡಿ ನಿಯಂತ್ರಣ ರೇಖೆಯನ್ನು ಶಾಶ್ವತ ಎಲ್ಲೆ ಎಂದು ಮಾಡದೇ ಇದ್ದುದಕ್ಕಾಗಿ ಕೆಲವರಿಂದ ಇಂದಿರಾ ಗಾಂಧಿ ಟೀಕೆಗೊಳಗಾದರು ಹಾಗೂ ಪಾಕಿಸ್ತಾನದಿಂದ ಆಕ್ರಮಿತವಾದ ಕಾಶ್ಮೀರದ ಭಾಗವನ್ನು ಪಾಕಿಸ್ಥಾನದಿಂದ ಹಿಂಪಡೆಯಬೇಕಿತ್ತು ಎಂದು ಇನ್ಕೆಲವರು ಅಭಿಪ್ರಾಯ ಪಟ್ಟರು. ಪಾಕಿಸ್ಥಾನದ 93,000 ಯುದ್ಧ ಕೈದಿಗಳು ಭಾರತದ ವಶದಲ್ಲಿದ್ದರು. ವಿವಾದ ಇತ್ಯರ್ಥಕ್ಕೆ ವಿಶ್ವಸಂಸ್ಥೆಯಾಗಲೀ ಅಥವಾ ಹೊರಗಿನವರು ಯಾರೇ ಆಗಲಿ ಮೂಗುತೂರಿಸುವುದನ್ನು ಒಪ್ಪಂದವು ತಕ್ಷಣವೇ ನಿವಾರಿಸಿತು. ಪಾಕಿಸ್ಥಾನ ಸದ್ಯದಲ್ಲೇ ಮಾಡಬಹುದಾದ ಭಾರೀ ದಾಳಿಯ ಸಂಭವನೀಯತೆಯನ್ನು ಇದು ತಗ್ಗಿಸಿತು. ಸಮಸ್ಯೆಯು ಸೂಕ್ಷ್ಮದ್ದಾದ್ದರಿಂದ ಸಂಪೂರ್ಣ ಶರಣಾಗತಿಯನ್ನು ಭುಟ್ಟೊರಿಂದ ಕೋರದೆ, ಅವರು ಪಾಕಿಸ್ಥಾನ ತಹಬಂದಿಗೆ ಬರಲು ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಅನುಮತಿಸಿದರು. ವ್ಯವಹಾರ ಸಂಬಂಧಗಳು ಮುಂದುವರಿಯಿತಾದರೂ ಹೆಚ್ಚಿನ ಸಂಪರ್ಕ-ಸಂಬಂಧಕ್ಕೆ ಎಷ್ಟೋ ವರ್ಷಗಳವರೆಗೆ ಬಾಗಿಲು ಮುಚ್ಚಿತ್ತು. ರೂಪಾಯಿ ಮೌಲ್ಯದಲ್ಲಿ ಇಳಿಕೆ ಇಂದಿರಾ ಆಡಳಿತ 1960ರ ಉತ್ತರಾರ್ಧದಲ್ಲಿ US ಡಾಲರ್ ಎದುರು ರುಪಾಯಿ ಮೌಲ್ಯವನ್ನು 40% ನಷ್ಟು ಇಳಿಸಿತು. ಒಂದು ಡಾಲರ್‌ಗೆ ಇದ್ದ ರೂ.4ರ ಬೆಲೆ ರೂ.7 ಆಯಿತು. ವಾಣಿಜ್ಯ ವರ್ಧನೆ ಇದರ ಉದ್ದೇಶವಾಗಿತ್ತು. ಪರಮಾಣು ಶಸ್ತ್ರ ಯೋಜನೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (=ಚೀನಾ ಗಣತಂತ್ರ) ಒಡ್ಡಿದ ಪರಮಾಣು ಬೆದರಿಕೆಗೆ ಉತ್ತರವಾಗಿ ಮತ್ತು ಪರಮಾಣು ಬಲಿಷ್ಠ ರಾಷ್ಟ್ರಗಳು ಸ್ವತಂತ್ರವಾಗಿರುವಂತೆ ಭಾರತವೂ ತನ್ನ ಸ್ಥಿರತೆ ಮತ್ತು ಭದ್ರತಾ ಹಿತ ರಕ್ಷಣೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ 1967ರಲ್ಲಿ ರಾಷ್ಟ್ರೀಯ ಪರಮಾಣು ಯೋಜನೆಯನ್ನು ಗಾಂಧಿ ಪ್ರಾರಂಭಿಸಿದರು. 1974ರಲ್ಲಿ ಭಾರತವು ರಾಜಸ್ಥಾನದ ಪೊಖ್ರಾನ್‌ನ ಬಂಜರು ಹಳ್ಳಿಯಲ್ಲಿ 'ಸ್ಮೈಲಿಂಗ್ ಬುದ್ಧ'(="ಹಸನ್ಮುಖಿ ಬುದ್ಧ") ಎಂಬ ಅನಧಿಕೃತ ಕೋಡ್ ಹೆಸರು ಹೊಂದಿದ್ದ ರಹಸ್ಯ ಪರಮಾಣು ಪರೀಕ್ಷೆಯನ್ನು ಭೂಗರ್ಭದೊಳಗೆ ಯಶಸ್ವಿಯಾಗಿ ಮಾಡಿತು. ನಡೆಸಲಾದ ಪರೀಕ್ಷೆಯು ಶಾಂತಿಯ ಉದ್ಧೇಶಕ್ಕಾಗಿ ಎಂದು ವಿವರಿಸುತ್ತಾ, ಭಾರತವು ಪ್ರಪಂಚದ ಅತಿಕಿರಿಯ ಪರಮಾಣು ಶಕ್ತಿಯಾಗಿ ಹೊರಹೊಮ್ಮಿತು. ಹಸಿರು ಕ್ರಾಂತಿ thumb|right|220px|1971ರಲ್ಲಿ ರಿಚರ್ಡ್ ನಿಕ್ಸೊನ್ ಮತ್ತು ಇಂದಿರಾ ಗಾಂಧಿ. ಅವರು ಉಭಯಪಕ್ಷೀಯ ಸಂಬಂಧವನ್ನು ಹೊಂದಿದ್ದ ವೈಯಕ್ತಿಕ ಅನುಕಂಪವನ್ನು ಹೊಂದಿದ್ದರು. ಕೃಷಿ ಕ್ಷೇತ್ರದಲ್ಲಿನ ವಿಶೇಷ ಹಾಗೂ ನವೀನ ಯೋಜನೆಗಳು ಮತ್ತು 1960ರಲ್ಲಿ ಬಿಡುಗಡೆಯಾದ ಸರಕಾರದ ಹೆಚ್ಚಿನ ಬೆಂಬಲ ಭಾರತವು ದೀರ್ಘಕಾಲದಿಂದ ಎದುರಿಸುತ್ತಿದ್ದ ಆಹಾರ ಕೊರತೆಯನ್ನು ನೀಗಿಸಿತು. ಜೊತೆಗೆ ಗೋಧಿ, ಭತ್ತ, ಹತ್ತಿ ಮತ್ತು ಹಾಲಿನ ಉತ್ಪಾದನೆಗೆ ಬೇಡಿಕೆಗಿಂತಲೂ ಅಧಿಕವಾಯಿತು. ಗಾಂಧಿಯವರು ನಿಕ್ಸನ್ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದ (ನಿಕ್ಸನ್‌ ಪಾಲಿಗೆ ಇಂದಿರಾ "ಮಾಟಗಾತಿ ಮುದುಕಿ",ನಿಕ್ಸೋನ್‌ನ ಡಿಸ್‌ಲೈಕ್ ಆಫ್ 'ವಿಟ್ಚ್' ಇಂದಿರಾ, BBC ನ್ಯೂಸ್, 2005-06-29 ಇಬ್ಬರದ್ದೂ ಪರಸ್ಪರ ಇಂಥ ಭಾವನೆಯೇ), ಯುನೈಟೆಡ್ ಸ್ಟೇಟ್ಸ್‌‌ ಅನ್ನು ಆಹಾರದ ನೆರವಿಗಾಗಿ ಅವಲಂಬಿಸುವ ಬದಲಿಗೆ ರಾಷ್ಟ್ರವು ಆಹಾರ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಿತು. ವಾಣಿಜ್ಯ ಬೆಳೆ ಉತ್ಪಾದನೆಯ ವೈವಿಧ್ಯೀಕರಣವನ್ನೂ ಸಾಧಿಸಲಾ ಯಿತು. ಈ ಸಾಧನೆಯನ್ನು "ಹಸಿರು ಕ್ರಾಂತಿ" ಎಂದು ಕರೆಯಲಾಯಿತು. ನಂತರ ಕ್ಷೀರೋತ್ಪಾದನೆಯ ಸರದಿ. ಅಧಿಕ ಹಾಲಿನ ಉತ್ಪಾದನೆ ಆಯಿತಾದ್ದರಿಂದ ಈ ಸಂದರ್ಭವನ್ನು 'ಶ್ವೇತಕ್ರಾಂತಿ' ಎನ್ನಲಾಯಿತು. ಅಪೌಷ್ಟಿಕತೆಯ ವಿರುದ್ಧ ಸೆಣಸಲು, ಅದೂ ವಿಶೇಷವಾಗಿ ಸಣ್ಣ ಮಕ್ಕಳ ಲ್ಲಿನ ಪೌಷ್ಟಿಕ ಕೊರತೆ ನೀಗಿಸಲು ಇದು ನೆರವಾಯಿತು. 'ಆಹಾರ ಭದ್ರತೆ' ಎಂದು ಕರೆಯಲಾದ ಮತ್ತೊಂದು ಯೋಜನೆ ಗಾಂಧಿ ಅಧಿಕಾರ ಅವಧಿಯನ್ನು 1975ರವರೆಗೆ ಕೊಂಡೊಯ್ಯಲು ಮತ್ತೊಂದು ಬೆಂಬಲದ ಮೂಲವಾಗಿತ್ತು. 1960ರ ಆರಂಭದಲ್ಲಿ ಪ್ರಾರಂಭವಾದ ತೀವ್ರಗತಿ ಕೃಷಿ ಜಿಲ್ಲಾ ಯೋಜನೆ (IADP)ಗೆ ಅನಧಿಕೃವಾಗಿ ನೀಡಿದ ಹೆಸರು 'ಹಸಿರು ಕ್ರಾಂತಿ'. ನಗರ ವಾಸಿಗಳಿಗೆ ಅಗ್ಗದ ಬೆಲೆಗೆ ಯಥೇಚ್ಛ ಆಹಾರ ಧಾನ್ಯ ಪೂರೈಸುವುದು ಇಂದಿರಾರ ಯೋಜನೆಯಾಗಿತ್ತು. ಯಾಕೆಂದರೆ ಬೇರೆಲ್ಲ ಭಾರತದ ರಾಜಕಾರಣಿಗಳಂತೆ ಇವರೂ ಕೂಡಾ ನಗರ ವಾಸಿಗಳ ಮೇಲೆ ಭಾರೀ ಅವಲಂಬಿತರಾಗಿದ್ದರು.ಐ ಬಿಡ್. #3 ಪುಟಗಳು 295 ಈ ನಾಲ್ಕು ಆಧಾರ ಸ್ತಂಭಗಳ ಮೇಲೆ ಯೋಜನೆಯನ್ನು ರೂಪಿಸಲಾಗಿತ್ತು: 1) ಹೊಸ ವಿಧಾನದ ಬೀಜಗಳು, 2) ಭಾರತೀಯ ಕೃಷಿಯಲ್ಲಿ ರಾಸಾಯನಿಕತೆಯ ಅಂದರೆ ರಸಗೊಬ್ಬರ, ಕೀಟನಾಶಕ, ಕಳೆನಾಶಕ ಇತ್ಯಾದಿಗಳ ಅವಶ್ಯಕತೆಯ ಸ್ವೀಕರಣೆ, 3) ಅಸ್ತಿತ್ವದಲ್ಲಿರುವ ವೈವಿಧ್ಯಮಯ ಬೀಜಗಳ ಹೊಸತು ಮತ್ತು ಸುಧಾರಿತ ಅಭಿವೃದ್ದಿಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಕಾರ ಸಂಶೋಧನೆಗೆ ಬದ್ಧರಾಗುವುದು, 4) ವೈಜ್ಞಾನಿಕ, ಕೃಷಿ ಸಂಸ್ಥೆಗಳನ್ನು ಭೂ-ದತ್ತಿ ಕಾಲೇಜುಗಳಾಗಿ ಅಭಿವೃದ್ಧಿಗೊಳಿಸುವ ಕಲ್ಪನೆ.ಮಾಜಿ, B.H.,ಪರ್ಸ್ಪೆಕ್ಟಿವ್ಸ್ ಆನ್ ದ 'ಗ್ರೀನ್ ರೆವಲ್ಯೂಷನ್ ಮಾಡರ್ನ್ ಏಷಿಯನ್ ಸ್ಟಡೀಸ್, xx No.1 (ಫೆಬ್ರವರಿ, 1986) ಪುಟಗಳು 177 ಯೋಜನೆಯ ಪರಿಣಾಮವಾಗಿ ಹತ್ತು ವರ್ಷಗಳ ಅವಧಿಯಲ್ಲಿ, ಗೋಧಿ ಉತ್ಪಾದನೆ ಮುಪ್ಪಟ್ಟಾಯಿತು, ಭತ್ತದ ಉತ್ಪಾದನೆಯಲ್ಲಿ ಗಣನೀಯವಲ್ಲದಿದ್ದರೂ ಬೆಳವಣಿಗೆ ಕಂಡಿತು, ತೆನೆ ಧಾನ್ಯಗಳಾದ ರಾಗಿ, ಕಡಲೆ, ಮತ್ತಿತರ ಕಾಳುಕಡ್ಡಿಯ ಉತ್ಪಾದನೆಯಲ್ಲಿ (ಪ್ರದೇಶವನ್ನು ಮತ್ತು ಜನಸಂಖ್ಯಾ ಬೆಳವಣಿಗೆ ಹೊಂದಾಣಿಕೆಯನ್ನು ಆಧರಿಸಿ) ಹೆಚ್ಚಳ ಕಂಡು ಬರದಿದ್ದರೂ ಸಹ ಹೆಚ್ಚೂ ಕಡಿಮೆ ಸ್ಥಿರ ಉತ್ಪತ್ತಿ ಇತ್ತು. 1971 ಚುನಾವಣೆ ಗೆಲುವು, ಮತ್ತು ಎರಡನೇ ಅವಧಿ (1971-1975) 1971ರ ಜನಾದೇಶದ ನಂತರ ಇಂದಿರಾ ಸರಕಾರವು ಮಹತ್ತರವಾದ ಸಮಸ್ಯೆಗಳನ್ನು ಎದುರಿಸಿತು. ಆಂತರಿಕ ಸ್ವರೂಪದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಡಕುಂಟಾಯಿತು. ಅನೇಕ ಭಾಗಗಳಾಗಿ ವಿಭಜಿತಗೊಂಡ ಕಾಂಗ್ರೆಸ್‌ಗೆ ಚುನಾವಣಾ ದೃಷ್ಟಿಯಿಂದ ಇವರ ಸಂಪೂರ್ಣ ಮುಖಂಡತ್ವದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ಗರೀಬಿ ಹಟಾವೊ (=ಬಡತನ ನೀಗಿಸಿ) ಎಂದು 1971ರಲ್ಲಿ ಗಾಂಧಿ ಘೋಷಿಸಿದರು. ಗ್ರಾಮೀಣ ಮತ್ತು ನಗರ ಬಡತನದ ಆಧಾರದ ಮೇಲೆ ಗಾಂಧಿಗೆ ಸ್ವತಂತ್ರ ರಾಷ್ಟ್ರೀಯ ಬೆಂಬಲ ನೀಡುವ ಉದ್ದೇಶದೊಂದಿಗೆ ಬಡತನ ನಿರ್ಮೂಲನಾ ಯೋಜನೆ ಮತ್ತು ಗರೀಬಿ ಹಟಾವೊ ಘೋಷಣೆ ವಿನ್ಯಾಸಗೊಂಡಿದ್ದವು. ರಾಜ್ಯದಲ್ಲಿನ ಪ್ರಬಲ ಗ್ರಾಮೀಣ ಜಾತಿಗಳನ್ನು, ಸ್ಥಳೀಯ ಸರಕಾರವನ್ನು ಮತ್ತು ನಗರ ಪ್ರದೇಶದ ವಾಣಿಜ್ಯ ವರ್ಗದವರನ್ನೂ ಉಪೇಕ್ಷಿಸಲು ಇದು ಅವರಿಗೆ ಇಂಬು ನೀಡಿತು. ಧ್ವನಿ ಅಡಗಿದ್ದ ಬಡ ಜನತೆಗೆ ರಾಜಕೀಯವಾಗಿ ಬೆಲೆ ಸಿಕ್ಕಿತು ಮತ್ತು ರಾಜಕೀಯ ಸ್ಥಿತಿ ದಕ್ಕಿತು. ಗರೀಬಿ ಹಟಾವೊ ಆಂದೋಳನದ ಯೋಜನೆಗಳು, ಸ್ಥಳೀಯವಾಗಿ ಕಾರ್ಯರೂಪಕ್ಕೆ ಬಂದರೂ ಸಹ, ನವದೆಹಲಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಿಧಿ ನೆರವು ಪಡೆದು ಅಭಿವೃದ್ಧಿ ಗಳಿಸಿ, ಮೇಲ್ವಿಚಾರಣೆ ಮಾಡಲ್ಪಟ್ಟವು ಮತ್ತು ಸಿಬ್ಬಂದಿವರ್ಗವನ್ನು ಪಡೆದವು. "ರಾಷ್ಟ್ರಾದ್ಯಂತ ವಿನಿಯೋಗಿಸುವ ಬಹುದೊಡ್ಡ ಸಂಪನ್ಮೂಲಗಳೊಂದಿಗೆ ಈ ಯೋಜನೆಗಳು ಕೇಂದ್ರ ರಾಜಕೀಯ ನಾಯಕತ್ವವನ್ನು ಒದಗಿಸಿದವು.ರಥ್, ನೀಲಕಂಠ, "ಗರೀಬಿ ಹಟಾವೊ": ಕ್ಯಾನ್ IRDP ಡು ಇಟ್?" (EWP,xx,No.6) ಫೆಬ್ರವರಿ1981. ಗರೀಬಿ ಹಟಾವೊ ಬಡತನ ನೀಗಿಸುವಲ್ಲಿ ವಿಫಲವಾದುದನ್ನು ವಿದ್ವಾಂಸರು ಮತ್ತು ಇತಿಹಾಸಜ್ಞರು ಈಗ ಒಪ್ಪಿದ್ದಾರೆ - ಆರ್ಥಿಕ ಅಭಿವೃದ್ಧಿಗಾಗಿ ಬಿಡುಗಡೆಯಾದ ಒಟ್ಟು ಮೊತ್ತದಲ್ಲಿ 4% ಮಾತ್ರ ಮೂರು ಪ್ರಮುಖ ಬಡತನ ನಿರ್ಮೂಲನಾ ಕಾರ್ಯಕ್ರಮಕ್ಕೆ ಮೀಸಲಾಯಿತು. ವಿನಿಯೋಗವಾದ ಇದರಲ್ಲಿ 'ಕಡುಬಡವರಿಗೆ' ತಲಪಿದ್ದು ಅತ್ಯಲ್ಪ. ಗಾಂಧಿ ಮರು-ಚುನಾವಣೆಗೆ ಜನರ ಬೆಂಬಲವನ್ನು ಹುಟ್ಟುಹಾಕಲು ಪ್ರಮುಖವಾಗಿ ಬಳಸಲ್ಪಟ್ಟ ಈ ಘೋಷಣೆಯು ಬರೀ ಪೊಳ್ಳಾಯಿತು. ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿ ಬಡವರ ಪರವಾದ ನೀತಿಗಳನ್ನು ಅನುಸರಿಸಿ, ಅವರು 1969 ರಲ್ಲಿ 14 ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು ಮತ್ತು ಹಿಂದಿನ ರಾಜರ "ಖಾಸಗಿ ಕೊಡಿಗೆ ಹಣದ" ಅನುದಾನವನ್ನು (privy purses) ರದ್ದುಗೊಳಿಸಿದರು. ಈ ಪ್ರಕ್ರಿಯೆಯಲ್ಲಿ, ಅಸ್ತಿತ್ವದಲ್ಲಿದ್ದ ಹಿರಿಯ ಕಾಂಗ್ರಸ್ಸಿನ ನಾಯಕರ ಶ್ರೀಮಂತ ಪರವಾದ ನಿಲುವು, ಮತ್ತು ಅವರ ಅಸಮರ್ಥತೆ ಅವರ ವೃದ್ಧಾಪ್ಯದ ಕಾರಣದಿಂದಾಗಿ ಅವರು ಸೂಚಿಸಿದ ಆಮೂಲಾಗ್ರ ನಡೆಯನ್ನು ಮೊದಲೇ ನಿರ್ಲಕ್ಷಿಸಿದರು. ಸ್ವಲ್ಪ ಸಮಯದ ನಂತರ ಪಕ್ಷ ವಿಭಜನೆಯಾಯಿತು, ಮತ್ತು ಶ್ರೀಮತಿ ಗಾಂಧಿ ಅವರು ಪಕ್ಷದ ಪ್ರಬಲ ವಿಭಾಗದ ನಿರ್ವಿವಾದ ನಾಯಕರಾದರು. ಪುನರಾವಲೋಕನದಲ್ಲಿ, ‘ಗರಿಬಿ ಹಟಾವೊ’ ವಾಕ್ಚಾತುರ್ಯವು ಆಡಂಬರವಿಲ್ಲದ ಮತ್ತು ಸರಳವಾದ ನಿತಿಯಾಗಿ ಕಂಡುಬಂದಿತು. ಆದರೆ ಭಾರತೀಯ ರಾಜಕೀಯದಲ್ಲಿ ಮೊದಲ ಬಾರಿಗೆ ಬಡವರ ಕಳವಳಗಳನ್ನು ನೇರವಾಗಿ ಪರಿಹರಿಸಲು ಪ್ರಯತ್ನಿಸಲಾಗಿತ್ತು, ಇದು ಅವರ ಅಧಿಕಾರದ ಬಲವರ್ಧನೆಗೆ ಕಾರಣವಾಯಿತು.Such a long legacy: on Indira Gandhi;Neera Chandhoke NOVEMBER 18, 2017 ಭ್ರಷ್ಟಾಚಾರದ ಆರೋಪ ಮತ್ತು ಚುನಾವಣಾ ದುರಾಚಾರ ಲೋಕಸಭೆಗೆ ಚುನಾಯಿತರಾಗಿದ್ದ ಇಂದಿರಾ ಗಾಂಧಿ ಆಯ್ಕೆಯನ್ನು ಚುನಾವಣಾ ದುರಾಚಾರದ ಹಿನ್ನೆಲೆಯಲ್ಲಿ ಅನೂರ್ಜಿತ ಎಂದು ಅಲಹಾಬಾದ್‌ ಉಚ್ಚ ನ್ಯಾಯಾಲಯ 1975ರ ಜೂನ್ 12ರಂದು ತೀರ್ಪು ನೀಡಿತು. ರಾಜ್ ನಾರಾಯಣ್‌ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಗಾಂಧಿ ಸರಕಾರೀ ಯಂತ್ರವನ್ನೂ ಹಾಗೂ ಸಂಪನ್ಮೂಲಗಳನ್ನೂ ಹೇಗೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ವಿವರವಾಗಿ ಎತ್ತಿ ತೋರಿಸಿದ್ದರು.(1971ರ ಚುನಾವಣೆಯಲ್ಲಿ ರಾಜ್ ನಾರಾಯಣ್‌ ವಿರುದ್ಧ ದುರಾಚಾರದಲ್ಲಿ ತೊಡಗಿದ್ದು ಸಾಬೀತಾಗಿ ಗಾಂಧಿ ಅಪರಾಧಿ ಎಂದು ತೀರ್ಮಾನವಾದ ನಂತರ, 1977ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ರಾಯ್ ಬರೈಲಿ ಕ್ಷೇತ್ರದಿಂದ ಅವರು ಮತ್ತೆ ಗಾಂಧಿಯನ್ನು ಸೋಲಿಸಿದರು).ಕ್ಯಾಥರಿನ್ ಫ್ರ್ಯಾಂಕ್, ಪುಟಗಳು 372 ಸಂಸತ್ತಿನ ಸದಸ್ಯೆಯ ಸ್ಥಾನದ ಅವರ ಅಧಿಕಾರವನ್ನು ಮೊಟಕುಗೊಳಿಸಿ ತೆಗೆದುಹಾಕುವಂತೆ ನ್ಯಾಯಾಲಯವು ಆದೇಶ ನೀಡಿತು. ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಫರ್ಧಿಸದಂತೆ ಅವರ ಮೇಲೆ ನಿಷೇಧ ಹೇರಿತು. ಪ್ರಧಾನ ಮಂತ್ರಿಯು ಲೋಕಸಭೆ (ಭಾರತದ ಸಂಸತ್ತಿನ ಕೆಳಮನೆ) ಅಥವಾ ರಾಜ್ಯ ಸಭೆ (ಸಂಸತ್ತಿನ ಮೇಲ್ಮನೆ)ಯ ಸದಸ್ಯರಾಗಿರಬೇಕಾದ್ದು ಕಡ್ಡಾಯ. ಹೀಗಾಗಿ, ಈ ತೀರ್ಪು ಗಾಂಧಿ ಅಧಿಕಾರದಿಂದ ಸಂಪೂರ್ಣವಾಗಿ ಕೆಳಗಿಳಿಯುವಂತೆ ಮಾಡಿತು. ಆದರೆ ಗಾಂಧಿಯವರು ರಾಜಿನಾಮೆ ನೀಡುವಂತೆ ಮಾಡಿದ ಒತ್ತಾಯಗಳನ್ನು ತಳ್ಳಿಹಾಕಿದರು ಮತ್ತು ಸರ್ವೋಚ್ಚ ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸುವ ತಮ್ಮ ಯೋಜನೆಯನ್ನು ಪ್ರಕಟಿಸಿದರು. ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ತೀರ್ಪಿತ್ತವರು ನ್ಯಾಯಮೂರ್ತಿ ಮಿಸ್ಟರ್ ಸಿನ್ಹ. ರಾಜ್ ನಾರಾಯಣರು ಮೊಕದ್ದಮೆ ದಾಖಲಿಸಿದ ಸುಮಾರು ನಾಲ್ಕು ವರ್ಷಗಳ ನಂತರ ತೀರ್ಪು ಹೊರಬಂತು. ಪ್ರಧಾನಿ ಇಂದಿರಾ 1971ರ ಸಂಸತ್ ಚುನಾವಣೆಯಲ್ಲಿ ಎದುರಾಳಿಯನ್ನು ಸೋಲಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ರಕ್ಷಣೆಗಾಗಿ ಸಾಕ್ಷಿಯನ್ನು ನೀಡಿದ ಗಾಂಧಿಯವರನ್ನು, ಅಪ್ರಾಮಾಣಿಕ ಚುನಾವಣಾ ತಂತ್ರದಲ್ಲಿ ತೊಡಗಿದ್ದಕ್ಕಾಗಿ, ಪಕ್ಷದ ಉದ್ಧೇಶಕ್ಕಾಗಿ ಸರಕಾರೀ ಯಂತ್ರ ಮತ್ತು ಅಧಿಕಾರಿಗಳನ್ನು ಬಳಸಿಕೊಂಡಿದ್ದಕ್ಕಾಗಿ ತಪ್ಪಿತಸ್ಱರೆಂದು ತೀರ್ಮಾನಿಸಲಾಯಿತು. ಇಂದಿರಾ ವಿರುದ್ಧ ಮಾಡಲಾದ ಲಂಚಗಾರಿಕೆಯ ಗುರುತರ ಆರೋಪಗಳನ್ನು ನ್ಯಾಯಾಧೀಶರು ತಳ್ಳಿಹಾಕಿದರು. ದೋಷಿ ಎಂದು ನಿರ್ಣಯಿಸಿ ನೀಡಿದ ಉಚ್ಚ ನ್ಯಾಯಾಲಯದ ಆದೇಶದಿಂದ ಸಂಸತ್ತಿನ ಕೆಳಮನೆಯಾದ ಲೋಕಸಭೆ ಸದಸ್ಯತ್ವದಿಂದ ಪದಚ್ಯುತರಾಗುವಂತಾಯಿತೇ ಹೊರತು ತಮ್ಮ ಗೌರವಕ್ಕೆ ಕುಂದುಂಟಾಗಿಲ್ಲ ಎಂದು ಇಂದಿರಾ ಪಟ್ಟು ಹಿಡಿದರು. ಅವರು ಹೀಗೆ ಹೇಳಿದರು: "ನಮ್ಮ ಸರಕಾರವು ಶುದ್ಧವಾಗಿಲ್ಲ ಎಂದು ಕೆಲವರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಪ್ರತಿಪಕ್ಷದವರು ಸರಕಾರ ರಚಿಸುವ ಸಂದರ್ಭದಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು ಎಂಬುದು ನಮ್ಮ ಅನುಭವ". ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷ ಧನ ಸಂಗ್ರಹ ಮಾಡುತ್ತಿದ್ದ ವಿಧಾನಕ್ಕೆ ಒದಗಿಬಂದ ಟೀಕೆಯನ್ನೂ ಕೂಡಾ, 'ಎಲ್ಲ ಪಕ್ಷಗಳೂ ಇದೇ ಹಾದಿಯಲ್ಲಿ ಸಾಗಿವೆ' ಎಂದು ಹೇಳಿ ಟೀಕೆಯನ್ನು ತಳ್ಳಿ ಹಾಕಿದರು. ಪ್ರಧಾನ ಮಂತ್ರಿಯವರು ಅವರ ಪಕ್ಷದ ಬೆಂಬಲವನ್ನು ಉಳಿಸಿಕೊಂಡರು. ಬೆಂಬಲಕ್ಕೆ ಬೇಕಾದ ಹೇಳಿಕೆಯನ್ನೂ ಪಕ್ಷವು ನೀಡಿತು. ತೀರ್ಪಿನ ಸುದ್ಧಿಯು ಹರಡುತ್ತಿದ್ದಂತೆಯೇ, ನೂರಾರು ಬೆಂಬಲಿಗರು ಅವರ ಮನೆಯ ಹೊರಗೆ ನೆರೆದು ತಮ್ಮ ನಿಷ್ಠೆ ತೋರ್ಪಡಿಸಿದರು.ಗಾಂಧಿ ಅಪರಾಧಿ ಎಂದು ಋಜುವಾತಾಗಿದ್ದರೂ ಅವರ ರಾಜಕೀಯ ಭವಿಷ್ಯದ ಮೇಲೆ ಅದು ದುಃಷ್ಪರಿಣಾಮ ಬೀರದು ಎಂದು ಹೇಳಿದರು ಭಾರತೀಯ ಹೈಕಮಿಷನರ್ ಆಗಿದ್ದ BK ನೆಹರುರವರು. "ಶ್ರೀಮತಿ ಗಾಂಧಿ ಇಂದಿಗೂ ಸಹ ದೇಶದಲ್ಲಿ ಭಾರಿ ಬೆಂಬಲವನ್ನು ಹೊಂದಿದ್ದಾರೆ" ಎಂದರು. "ಭಾರತದ ಮತದಾರರು ನಿರ್ಧರಿಸುವವರೆಗೆ ಭಾರತದ ಪ್ರಧಾನ ಮಂತ್ರಿಯವರು ಅದೇ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂಬುದು ನನ್ನ ನಂಬಿಕೆ" ಎಂದರು. ಇಂದಿರಾ ಅವರ ಚುನಾವಣಾ ದುರಾಚಾರದ ಅಪರಾಧ ನಿರ್ಣಯದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದರು. ಪ್ರಜಾಪ್ರಭುತ್ವಕ್ಕೆ ಭಂಗತರುವ ಒಳಸಂಚು ನಡೀತಿದೆ ಎಂಬ ಸಬೂಬು ನೀಡಿದ ಇಂದಿರಾ ರಾಷ್ಟ್ರದ ಮೇಲೆ ವಿವಾದಾತ್ಮಕ ತುರ್ತು ಪರಿಸ್ಥಿತಿ ಹೇರಿದರು. 22 MP ಗಳನ್ನೂ ಒಳಗೊಂಡಂತೆ ಸಾವಿರಾರು ಮಂದಿ ಬಂಧನಕ್ಕೀಡಾದರು ಮತ್ತು ಭಾರತೀಯ ಸ್ವತಂತ್ರ ಮಾಧ್ಯಮದ ಮೇಲೆ ಅಂಕುಶ ವಿಧಿಸಲಾಯಿತು. ಸಂಸತ್ತಿನ ಹೊರಗೆ ಎದುರಾಳಿಗಳ ಮೇಲೆ ಗಾಂಧಿ ಬಲಪ್ರಯೋಗ ಮಾಡಿದ್ದರಿಂದ ಮತ್ತು ಅದರಲ್ಲೂ ಹೆಚ್ಚಿನವರನ್ನು ಬಂಧಿಸಿದ್ದುದರಿಂದಾಗಿ, 1975ರ ಆಗಸ್ಟ್‌ನಲ್ಲಿ ಲೋಕಸಭೆಯು ಅವರನ್ನು ಅಪರಾಧ ಮುಕ್ತಗೊಳಿಸಲು ಪೂರ್ವಾನ್ವಯವಾಗುವಂಥ ಶಾಸನವೊಂದನ್ನು ರಚಿಸಿತು. ಆ ಶಾಸನದಂತೆ ಸರ್ಕಾರಿ ಅಧಿಕಾರಿಯು ಅಭ್ಯರ್ಥಿಯ ಅನುಮತಿ ಅಥವಾ ಆಜ್ಞೆ ಪಡೆದು ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಯಾ ಕಾರ್ಯದಲ್ಲಿ ತೊಡಗಿದ್ದರೆ ಮಾತ್ರಾ ಅದು ಅಪರಾಧವೆಂದು ಪರಿಗಣಿಸಬೇಕೆಂದು ತೀರ್ಮಾನಿಸಿತ್ತು. ಕಾರಣ ಒಬ್ಬ ಸರ್ಕಾರಿ ನೌಕರ (ಯಶಪಾಲ್ ಕಪೂರ್) ಸ್ವಯಂ ಪ್ರೇರಿತವಾಗಿ ತನ್ನ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ಇಂದಿರಾ ಅವರ ಚುನಾವಣಾ ವೇದಿಕೆಯ ರಚನೆಯ ಮತ್ತು ಏಜೆಂಟರಾಗಿ ಕೆಲಸ ಮಾಡಿದ್ದರು. ಅವರ ರಾಜಿನಾಮೆಯನ್ನು ಮೇಲಧಿಕಾರಿ ಅಂಗೀಕಾರ ಮಾಡಿರಲಿಲ್ಲ. ಆದ್ದರಿಂದ ಆದ್ದರಿಂದ ಸರ್ಕಾರಿಯಂತ್ರ ದುರುಪಯೋಗವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿತ್ತು. (ತೀರ್ಪಿನ ಸಾರಾಂಶ: ಫೆಡರಲ್ ಅಧಿಕಾರಿ ಯಶ್ಪಾಲ್ ಕಪೂರ್, ಅವರು 1971 ರ ಜನವರಿಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯದರ್ಶಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಅದೇ ತಿಂಗಳಲ್ಲಿ ಎರಡು ತಿಂಗಳ ನಂತರ ನಡೆದ ಚುನಾವಣೆಗೆ ಅವರು ಏಜೆಂಟರಾಗಿ ತಮ್ಮ ಕರ್ತವ್ಯವನ್ನು ಪ್ರಾರಂಭಿಸಿದರು. ನ್ಯಾಯಾಲಯದಲ್ಲಿ, ಶ್ರೀಮತಿ ಗಾಂಧಿ ಅವರ ವಕೀಲರು ಅವರ ರಾಜೀನಾಮೆಯನ್ನು ಅವರು ಪ್ರಚಾರದ ಕೆಲಸವನ್ನು ತೆಗೆದುಕೊಳ್ಳುವ ಮೊದಲು ನೀಡಿದ್ದಾರೆ. ಅದನ್ನು ಆ ಸಮಯದವರೆಗೆ ಔಪಚಾರಿಕವಾಗಿ ಅಂಗೀಕರಿಸದಿದ್ದರೂ ಸಹ ಸರ್ಕಾರದ ಕರ್ತವ್ಯದ ಮೇಲೆ ಇಲ್ಲವೆಂದು (ಸರ್ಕಾರಿ ನೌಕರರು ಅಲ್ಲವೆಂದು)ಪರಿಗಣಿಸಬೇಕೆಂದು ವಾದಿಸಿದರು,. ಆದರೆ ಅಲಹಾಬಾದು ಹೈಕೋರ್ಟು ಅದನ್ನು ಒಪ್ಪಲಿಲ್ಲ. ರಾಜನಾರಾಯಣರ ಉಳಿದ ಎಲ್ಲಾ ಆಪಾದನೆಯನ್ನು ನ್ಯಾಯಾಲಯ ಆಧಾರವಿಲ್ಲವೆಂದು ತಿರಸ್ಕರಿಸಿದರೂ, ಸರ್ಕಾರಿ ನೌಕರ ಯಶಪಾಲ ಕಪೂರರನ್ನು ಅವರ ರಾಜಿನಾಮೆ ಅಂಗೀಕಾರವಾಗಿಲ್ಲದಿರುವುದರಿಂದ ಅವರನ್ನು ಚುನಾವಣೆಗೆ ಬಳಸಿದ್ದು ಅಪರಾಧವೆಂದು ತೀರ್ಪು ನೀಡಿತು. ನಂತರ ಇಂದಿರಾ ಅವರು ಸುಪ್ರೀಮ್ ಕೋರ್ಟಿನಲ್ಲಿ ಅಪೀಲು ಹೋಗಿ ಆ ಅಪರಾಧದ ತೀರ್ಪಿನಿಂದ ಮುಕ್ತಿಪಡೆದರು.)MRS. GANDHI WINS COURT REVERSAL OF HER CONVICTIONBy WILLIAM BORDERSNOV. 8, 1975The Federal official was Yashpal Kapoor, who resigned in January 1971 as a member of the Prime Minister's secretarriat and in the same month began his duties as her agent for the election that was held two months later. In court, Mrs. Gandhi's lawyers maintained that his resignation had preceded his taking up the campaign job, even though it had not been formally accepted until afterwards.--- ಪ್ರತಿಭಟನೆ ಮತ್ತು ಅಸಹಕಾರ ಆಂದೋಲನ ಇಂದಿರಾ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಿ "ನನ್ನ ಕೊನೆಯ ಉಸಿರಿರುವವರೆಗೆ" ನಾನು ಜನಸೇವೆಯಲ್ಲಿ ತೊಡಗಿರುತ್ತೇನೆ" ಎಂದು ಘೋಷಿಸಿದರು. ಈ ಸಂದರ್ಭವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡ ಪ್ರತಿ ಪಕ್ಷಗಳು ಮತ್ತು ಅವರ ಬೆಂಬಲಿಗರು ಒಟ್ಟಾಗಿ ಈ ಘೋಷಣೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಅವರ ರಾಜೀನಾಮೆಗೆ ಆಗ್ರಹಿಸಿದವು. ಈ ಪ್ರತಿಭಟನೆಯಲ್ಲಿ ಬೇರೆಬೇರೆ ಸಂಘ ಸಂಸ್ಥೆಗಳು ಪಾಲ್ಗೊಂಡ ಕಾರಣ ಅನೇಕ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ನಿರಾಯುಧ ಜನಜಂಗುಳಿಯ ಮೇಲೆ ಗುಂಡುಹಾರಿಸುವ ಆದೇಶಗಳನ್ನು ಧಿಕ್ಕರಿಸುವಂತೆ J.P. ನಾರಾಯಣ್ ಪೋಲೀಸರಿಗೆ ಕರೆ ನೀಡಿದ್ದರಿಂದ ಆಂದೋಲನ ಮತ್ತಷ್ಟು ಬಲಯುತವಾಯಿತು. ಗಾಂಧಿ ಸರಕಾರದೊಂದಿಗೆ ಸಾರ್ವಜನಿಕರ ಭ್ರಮನಿರಸನದ ಜೊತೆ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡು ಸಂಸತ್‌ ಭವನ ಮತ್ತು ದೆಹಲಿಯ ಅವರ ಮನೆಯ ಸುತ್ತ ಜನ ಜಮಾಯಿಸಿ ಪ್ರತಿಭಟಿಸಿದರು ಮತ್ತು ರಾಜೀನಾಮೆಗಾಗಿ ಒತ್ತಾಯಿಸಿದರು. thumb|right|290px|ಬಿಹಾರ್‌ನಲ್ಲಿ ನಡೆದ ದಂಗೆಯ ಬಗೆಗಿನ ಆನಂದ್ ಪತ್ವರ್ಧನ್‌ರವರ ಮೊದಲ ದಾಖಲೆ ಕ್ರಾಂತಿಯ ಅಲೆಗಳು ಚಿತ್ರವು ಭಾರತಾದ್ಯಂತ ರಹಸ್ಯವಾಗಿ ಹಂಚಲ್ಪಟ್ಟಿತು ಮತ್ತು ಅದನ್ನು ವಿದೇಶ ಜಾಗೃತಿ ಮೂಡಿಸಲು ವಿಭಾಗದಲ್ಲಿ ಗುಟ್ಟಾಗಿಡಲಾಯಿತು. ಈ ಹೊತ್ತಿಗಾಗಲೇ ಇಂದಿರಾ ನಿರಂಕುಶಾಧಿಕಾರಿ ಧೋರಣೆಯ ಆಪಾದನೆಗೊಳಗಾಗಿದ್ದರು.ಸಂಸತ್ತಿನಲ್ಲಿ ಅವರಿಗಿದ್ದ ಭಾರೀ ಬಹುಮತವನ್ನು ಬಳಸಿಕೊಂಡು, ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ತಿದ್ದುಪಡಿ ಮಾಡಿತು. ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ಸಮತೋಲನವನ್ನು ಮಾರ್ಪಡಿಸಿದ ತಿದ್ದುಪಡಿಯಲ್ಲಿ ಕೇಂದ್ರ ಸರಕಾರದ ಕೈಗೆ ಅಧಿಕ ಅಧಿಕಾರ ಇರುವಂತೆ ನೋಡಿಕೊಂಡಿತು. ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿದ್ದ ರಾಜ್ಯಗಳನ್ನು ಸಂವಿಧಾನದ 356ನೇ ನಿಬಂಧನೆಯನ್ನು ಬಳಸಿ ಅವರು ಎರಡು ಬಾರಿ, "ರಾಷ್ಟ್ರಪತಿ ಆಡಳಿತ"ವನ್ನು ಹೇರಿದರು ಮತ್ತು ನಿಯಂತ್ರಣವೆಲ್ಲವನ್ನೂ ತಮ್ಮ ವಶದಲ್ಲಿ ಇಟ್ಟುಕೊಂಡರು. ಈ ರಾಜ್ಯಗಳಲ್ಲಿ "ಕಾನೂನು ಕುಸಿದು ಬಿದ್ದಿದೆ ಮತ್ತು ಅರಾಜಕತೆ ತಾಂಡವವಾಡುತ್ತಿದೆ" ಎಂಬ ಸಬೂಬು ನೀಡಿದರು. ಗಾಂಧಿ ಅಧಿಕಾರಕ್ಕೆ ಏರಲು ಕಾರಣ ಕರ್ತರಾಗಿದ್ದ ಅವರ ನಿಕಟ ರಾಜಕೀಯ ಸಲಹೆಗಾರ P. N. ಹಕ್ಸರ್ ಅವರಂಥ ಕೆಲವರನ್ನು ದೂರ ತಳ್ಳಿ ಇಂದಿರಾರ ರಾಜಕೀಯ ಸಲಹೆಗಾರರಾಗಿ ಬೆಳೆದ ಸಂಜಯ್ ಗಾಂಧಿಯ ಉಸ್ತುವಾರಿಕೆ ಚುನಾಯಿತ ಅಧಿಕಾರಿಗಳ ಮತ್ತು ಆಡಳಿತಾತ್ಮಕ ಸೇವಾ ವಿಭಾಗದ ಅಸಮಾಧಾನಕ್ಕೆ ಕಾರಣವಾಯಿತು. ಸರ್ವಾಧಿಕಾರೀ ಆಡಳಿತದ ಬಯಕೆಯ ಅವರ ಹೊಸ ಪ್ರವೃತ್ತಿಗೆ ಪ್ರತ್ಯುತ್ತರವಾಗಿ, ಜಯ ಪ್ರಕಾಶ್ ನಾರಾಯಣ್, ಸತ್ಯೇಂದ್ರ ನಾರಾಯಣ್ ಸಿನ್ಹ ಮತ್ತು ಆಚಾರ್ಯ ಜೀವತ್ರಾಮ್ ಕೃಪಾಲನಿಯಂತಹ ಮೇಧಾವಿಗಳು ಮತ್ತು ಸ್ವಾತಂತ್ರ್ಯ-ಹೋರಾಟಗಾರರು ಗಾಂಧಿಯವರ ವಿರುದ್ಧ ಮತ್ತು ಅವರ ಸರಕಾರದ ವಿರುದ್ಧ ಟೀಕಾ ಪ್ರಹಾರದ ಭಾಷಣ ಮಾಡುತ್ತಾ ಭಾರತಾದ್ಯಂತ ಸಂಚರಿಸಿದರು. ತುರ್ತು ಪರಿಸ್ಥಿತಿ (1975-1977) ಆಂದೋಲನದಲ್ಲಿ ಭಾಗವಹಿಸಿದ ಎದುರಾಳಿಗಳನ್ನು ಬಂಧಿಸುವಂತೆ ಗಾಂಧಿ ಆದೇಶ ನೀಡುವ ಮೂಲಕ ಸಹಜ ವಾತಾವರಣ ಪುನಃಸ್ಥಾಪಿಸಲು ಮುಂದಾದರು. ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಕಾನೂನು ಕುಸಿತ ಮತ್ತು ಅವ್ಯವಸ್ಥೆ ಭುಗಿಲೆದ್ದಿದ್ದನ್ನು ಗಮನಿಸಿದ ಅವರ ಸಚಿವ ಸಂಪುಟ ಮತ್ತು ಸರಕಾರವು ತುರ್ತು ಪರಿಸ್ಥಿತಿ ಘೋಷಿಸುವಂತೆ ರಾಷ್ಟಾಧ್ಯಕ್ಷ ಫಕ್ರುದ್ದೀನ್ ಆಲಿ ಅಹಮದ್‌ ಅವರಿಗೆ ಶಿಫಾರಸು ಮಾಡಿತು.ತತ್ಪರಿಣಾಮವಾಗಿ, ಅಹಮದ್‌ರವರು ಆಂತರಿಕ ಅವ್ಯವಸ್ಥತೆಯ ಕಾರಣ ಒಡ್ಡಿ ಸಂವಿಧಾನದ 352ರ ನಿಬಂದನೆಗೆ ಅನುಗುಣವಾಗಿ 1975ರ ಜೂನ್ 26ರಂದು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಶಾಸನ ಬದ್ಧ ಆಡಳಿತ ಕೆಲವೇ ತಿಂಗಳುಗಳಲ್ಲಿ, ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿದ್ದ ಗುಜರಾತ್ ಮತ್ತು ತಮಿಳುನಾಡು ಎರಡು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಲಾಯಿತು ಈ ಮೂಲಕ ಇಡೀ ರಾಷ್ಟ್ರವನ್ನು ನೇರ ಕೇಂದ್ರ ಆಡಳಿತದ ಹಿಡಿತಕ್ಕೆ ತರಲಾಯಿತು.ಕೊಚನೆಕ್, ಸ್ಟೇನ್ಲಿ, "ಮಿಸೆಸ್ ಗಾಂಧಿಸ್ ಪಿರಮಿಡ್: ದ ನ್ಯೂ ಕಾಂಗ್ರೆಸ್, (ವೆಸ್ಟ್‌ವ್ಯೂ ಪ್ರೆಸ್, ಬೌಲ್ಡರ್, CO 1976) ಪುಟಗಳು 98 ಕರ್ಫ್ಯೂ ವಿಧಿಸಲು ಮತ್ತು ನಾಗರಿಕರನ್ನು ಅನಿರ್ದಿಷ್ಟವಾಗಿ ಬಂಧನದಲ್ಲಿಡಲು ಪೊಲೀಸರಿಗೆ ಅಧಿಕಾರ ನೀಡಲಾಯಿತು. ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಾಲಯ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಿತು. ತಮ್ಮ ಕೆಲಸಕಾರ್ಯಗಳಲ್ಲಿ ಸಂಜಯ್ ಗಾಂಧಿಯವರ ಹಸ್ತಕ್ಷೇಪವನ್ನು ಸಹಿಸಲಾಗದೇ ಪ್ರತಿಭಟಿಸಿ, ಭವಿಷ್ಯದ ಪ್ರಧಾನ ಮಂತ್ರಿ ಎಂದು ಬಿಂಬಿತರಾಗಿದ್ದ ಇಂದರ್ ಕುಮಾರ್ ಗುಜ್ರಾಲ್‌ ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿ ಪದವಿಗೆ ರಾಜಿನಾಮೆ ನೀಡಿ ಹೊರಬಂದರು. ಅಂತಿಮವಾಗಿ, ರಾಜ್ಯ ರಾಜಪಾಲರ ಶಿಫಾರಸಿನ ಮೇರೆಗೆ ರಾಜ್ಯ ಸರಕಾರವನ್ನು ವಜಾಗೊಳಿಸಲು ಅನುಮತಿಸುವ ಸಂವಿಧನಾತ್ಮಕ ನಿಬಂಧನೆಯ ಪ್ರಕಾರ ವಿರೋಧಪಕ್ಷ ಆಡಳಿತ ನಡೆಸುತ್ತಿದ್ದ ರಾಜ್ಯ ಸರಕಾರಗಳನ್ನು ತೆಗೆದುಹಾಕುವುದರೊಂದಿಗೆ, ಸನಿಹದಲ್ಲೇ ಜರುಗಬೇಕಿದ್ದ ವಿಧಾನ ಸಭಾ ಚುನಾವಣೆಗಳನ್ನು ಅನಿರ್ದಿಷ್ಟಾವಧಿ ಮುಂದೂಡಲಾಯಿತು. ಸ್ವತಃ ತಮಗೆ ವಿಶೇಷ ಅಧಿಕಾರಗಳನ್ನು ನೀಡುವಂತೆ ತುರ್ತುಪರಿಸ್ಥಿತಿ ನಿಯಮಾವಳಿಯನ್ನು ಇಂದಿರಾ ಪರಿವರ್ತಿಸಿದರು. "ಶಾಸಕಾಂಗ ಪಕ್ಷಗಳ ಅಧೀನದಲ್ಲಿ ಬಲಿಷ್ಠರಾದ ಹಾಗೂ ಪ್ರಾದೇಶಿಕ ಪಕ್ಷಗಳ ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲು ಮತ್ತು ಆದ್ಯತೆ ನೀಡುತ್ತಿದ್ದ ಅವರ ತಂದೆಯವರ (ನೆಹರು) ಮಾರ್ಗಕ್ಕಿಂತ ಭಿನ್ನವಾಗಿ ವರ್ತಿಸಿದರು. ಶ್ರೀಮತಿ| ಇಂದಿರಾ ಸ್ವತಂತ್ರ ನೆಲೆಯನ್ನು ಹೊಂದಿದ್ದ ಪ್ರತೀ ಕಾಂಗ್ರೆಸ್ ಮುಖ್ಯ ಮಂತ್ರಿಗಳನ್ನು ತೆಗೆದುಹಾಕಲು ಮತ್ತು ಆ ಸ್ಥಾನಕ್ಕೆ ಅವರಿಗೆ ವೈಯಕ್ತಿಕ ನಿಷ್ಠೆ ತೋರುವ ಮಂತ್ರಿಗಳನ್ನು ನೇಮಿಸಲು ಮುಂದಾದರು...ಆದರೂ ಸಹ, ರಾಜ್ಯಗಳಲ್ಲಿ ಸ್ಥಿರತೆಯನ್ನು ಉಳಿಸಿಕೊಂಡು ಹೋಗಲಾಗಲಿಲ್ಲ..."ಬ್ರಾಸ್, ಪೌಲ್ R., ದ ಪಾಲಿಟಿಕ್ಸ್ ಆಫ್ ಇಂಡಿಯಾ ಸಿನ್ಸ್ ಇಂಡಿಪೆಂಡೆನ್ಸ್ ,(ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ಇಂಗ್ಲೆಂಡ್ 1995) ಪುಟಗಳು 40 ಸಂಸತ್ತಿನಲ್ಲಿ ಚರ್ಚಿಸುವ ಅವಶ್ಯಕತೆಯೇ ಇಲ್ಲದಂತೆ ಶಾಸನಗಳನ್ನು ರೂಪಿಸುವ ಮತ್ತು 'ತಾನು ಹೇಳಿದ್ದೇ ಕಾನೂನು' ಮತ್ತು ಅದು ಕಾಯಿದೆ ಬದ್ಧ ಎಂಬಂಥ ಸುಗ್ರೀವಾಜ್ಞೆ ಹೊರಡಿಸುವಂತೆ ಅವರು ರಾಷ್ಟ್ರಪತಿ ಅಹಮದ್‌ ಅವರನ್ನು ಒತ್ತಾಯಿಸಿದರು ಎಂಬ ಆಪಾದನೆಯೂ ಅವರ ಮೇಲಿದೆ. ಅದೇ ಸಮಯದಲ್ಲಿ, ಗಾಂಧಿ ಸರಕಾರವು ಭಿನ್ನಾಭಿಪ್ರಾಯಕ್ಕೆ ಇತಿಶ್ರೀ ಹಾಡುವ ಉದ್ದೇಶದಿಂದ ಸಾವಿರಾರು ರಾಜಕೀಯ ಮುಖಂಡರನ್ನು ಬಂಧನಕ್ಕೆ ಈಡು ಮಾಡಿತು, ಮುಂದೊಮ್ಮೆ ದೆಹಲಿಯ Lt. ಗವರ್ನರ್‌ ಆದ, ಜಗ ಮೋಹನ್ರ, ಮೇಲ್ವಿಚಾರಣೆಯಲ್ಲಿ ದೆಹಲಿಯ ಜಮಾ ಮಸೀದಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಸಂಜಯ್‌ ಆರಂಭಿಸಿದರು, ಇದರಿಂದ ಸಾವಿರಾರು ಜನ ಮನೆಮಠ ಕಳೆದುಕೊಂಡರು, ನೂರಾರು ಮಂದಿ ಸಾವನ್ನಪ್ಪಿದರು, ಮತ್ತು ರಾಷ್ಟ್ರದ ರಾಜಧಾನಿಯ ಆ ಪ್ರದೇಶದಲ್ಲಿ ಪ್ರಾಂತೀಯ ವೈಮನಸ್ಸು ಬೆಳೆಯಿತು-ಎಂದು ಆರೋಪಿಸಲಾಗಿದೆ. ಸಾವಿರಾರು ಮಂದಿಯ ಮೇಲೆ ಬಲವಂತವಾಗಿ ಕುಟುಂಬ ಯೋಜನೆಯನ್ನು ಅನುಷ್ಠಾನಗೊಳಿಸಿ ಸಂತಾನಹರಣಚಿಕಿತ್ಸಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಹುತೇಕ ಸಂದರ್ಭಗಳಲ್ಲಿ ಚಿಕಿತ್ಸೆಯನ್ನು ಹೀನಾಯವಾಗಿ ನಿರ್ವಹಿಸಲಾಯಿತು. ಚುನಾವಣೆಗಳು ತುರ್ತು ಪರಿಸ್ಥಿತಿಯನ್ನು ಎರಡು ಬಾರಿ ವಿಸ್ತರಿಸಿದ ಇಂದಿರಾ ಗಾಂಧಿ ತಮ್ಮ ಆಡಳಿತವನ್ನು ಸಮರ್ಥಿಸಲು ಮತದಾರರಿಗೆ ಒಂದು ಅವಕಾಶ ನೀಡುವುದಕ್ಕಾಗಿ 1977ರಲ್ಲಿ ಚುನಾವಣೆ ಘೋಷಿಸಿದರು. ಅತಿಯಾದ ನಿಯಂತ್ರಣಕ್ಕೆ ಒಳಪಟ್ಟ ಪತ್ರಿಕಾ ಲೇಖನಗಳನ್ನು ಓದಿದ ಇಂದಿರಾ ಇದು ತಮ್ಮ ಜನಪ್ರಿಯತೆಯ ಪರಾಕಾಷ್ಠೆ ಎಂದು ತಪ್ಪಾಗಿ ಗ್ರಹಿಸಿದರು. ಇವರ ಪ್ರತಿಯೊಂದು ಹೆಜ್ಜೆಯನ್ನೂ ಜನತಾ ಪಕ್ಷ ವಿರೋಧಿಸಿತು. ಜಯ ಪ್ರಕಾಶ್ ನಾರಾಯಣ್‌‌ರನ್ನು ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿ ಇಟ್ಟುಕೊಂಡು, ಇಂದಿರಾರ ದೀರ್ಘಕಾಲೀನ ದ್ವೇಷಿಯಾದ ದೇಸಾಯಿ ನೇತೃತ್ವದ ಜನತಾ ಪಕ್ಷವು "ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರ" ಎರಡರ ನಡುವಿನ ಆಯ್ಕೆಗೆ ಈ ಚುನಾವಣೆ ಕಟ್ಟ ಕಡೆಯ ಅವಕಾಶ ಎಂದು ಸಾರಿತು. ಇಂದಿರಾರ ಕಾಂಗ್ರೆಸ್ ಪಕ್ಷ ಭಾರೀ ಸೋಲುಂಡಿತು. ಇಂದಿರಾ ಮತ್ತು ಸಂಜಯ್ ಗಾಂಧಿ ಇಬ್ಬರೂ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ 153 (ಹಿಂದಿನ ಲೋಕಸಭೆಗೆ 350ಕ್ಕೆ ಹೋಲಿಸಿದಾಗ) ಸ್ಥಾನಗಳಿಗೆ ಇಳಿಯಿತು. ಇದರಲ್ಲಿನ 92 ಸ್ಥಾನ ದಕ್ಷಿಣ ರಾಜ್ಯಗಳಿಗೆ ಸೇರಿದ್ದು. ಉಚ್ಛಾಟನೆ, ಬಂಧನ, ಪುನರಾಗಮನ thumb|right|1984 USSR ನೆನಪಿನ ಅಂಚೆಚೀಟಿ ದೇಸಾಯಿಯವರು ಪ್ರಧಾನ ಮಂತ್ರಿಯಾದರು. 1969ರಲ್ಲಿ ಆಡಳಿತ ಪಕ್ಷದವರ ಆಯ್ಕೆಯಾಗಿದ್ದ ನೀಲಮ್ ಸಂಜೀವ ರೆಡ್ಡಿಯವರು ಗಣತಂತ್ರದ ರಾಷ್ಟ್ರಪತಿಯಾದರು. ಗಾಂಧಿ 1978ರಲ್ಲಿ ಚುನಾವಣೆಯಲ್ಲಿ ಮತ್ತೆ ಗೆಲ್ಲುವವರೆಗೆ ತಮಗೆ ಕೆಲಸ, ಆದಾಯ ಅಥವಾ ಮನೆ ಇಲ್ಲವೆಂದು ತೊಳಲಾಡುತ್ತಿದ್ದರು. ಕಾಂಗ್ರೆಸ್ ಪಕ್ಷವು 1977ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿಭಜನೆಗೆ ತುತ್ತಾಯಿತು.ಗಾಂಧಿ ಬೆಂಬಲಿಗರಾದ ಜಗಜೀವನ್ ರಾಮ್ ಮತ್ತು ಅವರಿಗೆ ಹೆಚ್ಚು ನಿಷ್ಠಾವಂತರಾಗಿದ್ದ ಬಹುಗುಣ ಮತ್ತು ನಂದಿನಿ ಸತ್ಪಥಿ-ಅಂಥ ಅನುಭವಿಗಳು ಅವರಿಂದ ದೂರ ಸರಿದರು. ಈ ಮೂವರೂ ಗಾಂಧಿಯವರಿಗೆ ಅತಿ ನಿಕಟರಾಗಿದ್ದರಾದರೂ ಸಂಜಯ್ ಗಾಂಧಿ ನಿರ್ಮಿತ ರಾಜಕೀಯ ಪರಿಸ್ಥಿತಿಯಿಂದಾಗಿ ಹೊರಬರುವಂತೆ ಅವರನ್ನು ಬಲವಂತಕ್ಕೊಳಪಡಿಸಿತು. ಇಂದಿರಾನ್ನು ಅಧಿಕಾರದಿಂದ ಉಚ್ಚಾಟನೆ ಮಾಡುವಂಥ ಉದ್ದೇಶ ಸಂಜಯ್‌ಗೆ ಇತ್ತು ಎಂಬ ವದಂತಿ ಹಬ್ಬಿತ್ತು. ಅಧಿಕೃತವಾಗಿ ಪ್ರತಿಪಕ್ಷ ಎಂಬ ಮನ್ನಣೆ ಇದ್ದರೂ ಕಾಂಗ್ರೆಸ್ ಇತರ ಸಣ್ಣ ಪಕ್ಷಗಳಂತಾಯಿತು. ಮೈತ್ರಿ ಕೂಟದ ಅಂಕೆಮೀರಿದ ಕಾದಾಟದಿಂದ ಆಡಳಿತ ನಡೆಸಲು ಸಾಧ್ಯವಾಗದಿದ್ದುರಿಂದ, ಜನತಾ ಸರಕಾರದ ಗೃಹ ಮಂತ್ರಿ ಚೌಧರಿ ಚರಣ್ ಸಿಂಗ್‌ ಭಾರತೀಯ ನ್ಯಾಯಾಲಯದಲ್ಲಿ ಸುಲಭವಾಗಿ ಸಾಬೀತುಪಡಿಸಲು ಸಾಧ್ಯವಾಗದಂತಹ ಅನೇಕ ನಿಯಮಗಳನ್ನು ಆಧಾರವನ್ನಾಗಿಸಿ ಇಂದಿರಾ ಮತ್ತು ಸಂಜಯ್ ಗಾಂಧಿಯವರ ಬಂಧನಕ್ಕೆ ಆದೇಶಿಸಿದರು. ಬಂಧನದಿಂದಾಗಿ ಗಾಂಧಿ ಸಂಸತ್ತಿನಿಂದ ಉಚ್ಚಾಟಿತರಾದಂತಾಯಿತು.ಅನುಸರಿಸಲಾದ ಈ ಕಾರ್ಯತಂತ್ರ ವಿಪತ್ಕಾರಕವಾಗಿ ಅವರಿಗೇ ತಿರುಗುಬಾಣವಾಯಿತು. ಎರಡು ವರ್ಷಗಳ ಹಿಂದಷ್ಟೇ ಅವರ ನಿರಂಕುಶಾಧಿಕಾರೀ ವರ್ತನೆಯಿಂದ ಬೇಸತ್ತಿದ್ದ ಜನತೆ ಅವರ ಮೇಲೆ ಅನುಕಂಪದ ಮಳೆ ಸುರಿದರು. ಬಂಧಿಸಿದ್ದು ಮತ್ತು ದೀರ್ಘಕಾಲೀನ ವಿಚಾರಣೆಗೆ ಅವರನ್ನು ಗುರಿಪಡಿಸಿದ್ದೇ ಈ ಅನುಕಂಪದ ಗಾಳಿ ಬೀಸಲು ಕಾರಣವಾಯಿತು. ಇಂದಿರಾರ (ಅಥವಾ "ಅದೊಂದು ಹೆಣ್ಣು" ಎಂದು ಕೆಲವರು ಅವರನ್ನು ಮೂದಲಿಸಿದರು) ವಿರುದ್ಧದ ದ್ವೇಷ ಮಾತ್ರ ಜನತಾ ಮಿತ್ರ ಪಕ್ಷಗಳನ್ನು ಒಂದುಗೂಡಿಸಿತ್ತು. ಸಮಾನ ಮನಸ್ಕತೆ ಎಂಬುದು ಮಾಯವಾಯಿತು. ಮಂದುವರೆದ ಈ ಅಂತಃಕಲಹವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವಲ್ಲಿ ಇಂದಿರಾ ಸಫಲರಾದರು. ಅವರು ಮತ್ತೆ ಭಾಷಣ ನೀಡಲು ಪ್ರಾರಂಭಿಸಿದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಎಸಗಿದ "ತಪ್ಪುಗಳಿಗಾಗಿ" ಕ್ಷಮೆಯಾಚಿಸಿದರು. ದೇಸಾಯಿಯವರು 1979ರ ಜೂನ್‌ನಲ್ಲಿ ರಾಜಿನಾಮೆ ನೀಡಿದರು, ಮತ್ತು ಚರಣ್ ಸಿಂಗ್‌ ಅವರನ್ನು ರೆಡ್ಡಿಯವರು ಪ್ರಧಾನ ಮಂತ್ರಿಯಾಗಿ ನೇಮಿಸಿದರು. ಅವರ ಸರಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡುವುದಾಗಿ ಗಾಂಧಿ ಭರವಸೆ ನೀಡಿದರು. ಸ್ವಲ್ಪ ದಿವಸಗಳ ನಂತರ, ಅವರು ಆರಂಭದಲ್ಲಿ ನೀಡಿದ್ದ ಬೆಂಬಲವನ್ನು ಅಲ್ಪ ಕಾಲದಲ್ಲೇ ಹಿಂದೆಗೆದುಕೊಂಡರು. ರಾಷ್ಟ್ರಪತಿ ರೆಡ್ಡಿ 1979ರ ಚಳಿಗಾಲದಲ್ಲಿ ಸಂಸತ್ತನ್ನು ವಿಸರ್ಜಿಸಿದರು. ನಂತರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಅಧಿಕಾರ ಗದ್ದುಗೆ ಏರಿತು. 1980ರಲ್ಲಿ, ಇಂದಿರಾ ಗಾಂಧಿ ಸರಕಾರವು ಶ್ರೀಲಂಕಾದಲ್ಲಿ LTTE ಮತ್ತು ಇತರ ತಮಿಳು ಉಗ್ರಗಾಮಿಗಳಿಗೆ ಹಣ, ಶಸ್ತ್ರಾಸ್ತ್ರ ಮತ್ತು ಸೇನಾ ತರಬೇತಿ ಒದಗಿಸಿತು.ಲಾಸ್ಟ್ ಓಪರ್ಚ್ಯುನಿಟಿ ಫಾರ್ ದ ತಮಿಳ್ಸ್ ಮೂರನೇ ಅವಧಿ ರೂಪಾಯಿ ಅಪಮೌಲ್ಯದ ಬಿಕ್ಕಟ್ಟು 1980ರ ಆರಂಭದಲ್ಲಿ, US ಡಾಲರ್‌ ಎದುರು ರೂಪಾಯಿ ಮೌಲ್ಯ 40% ಕುಸಿದು, ಒಂದು ಡಾಲರ್‌ಗಿದ್ದ 7ರೂ. 12ಕ್ಕೆ ಜಿಗಿಯಿತು. ಕುಸಿತವನ್ನು ತಡೆಯಲು ಇಂದಿರಾ ಆಡಳಿತವು ವಿಫಲವಾಯಿತು. ಆಪರೇಶನ್ ಬ್ಲೂ ಸ್ಟಾರ್ ಮತ್ತು ಹತ್ಯೆ 300px|thumb|ಇಂದಿರಾ ಗಾಂಧಿಯವರ ರಕ್ತಸಿಕ್ತ ಸೀರೆ ಮತ್ತು ಅವರ ಹತ್ಯೆಯ ಸಂದರ್ಭದಲ್ಲಿ ಅವರಿಗೆ ಸಂಬಂಧಪಟ್ಟ ವಸ್ತುಗಳನ್ನು ನವದೆಹಲಿಯ ಇಂದಿರಾ ಗಾಂಧಿ ಸ್ಮಾರಕ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿಡಲಾಗಿದೆ. ಗಾಂಧಿಯವರ ಮುಂದಿನ ವರ್ಷಗಳು ಪಂಜಾಬ್‌ನ ಸಮಸ್ಯೆಗಳೊಂದಿಗೆ ನಾಶವಾದವು. 1984ರ ಜೂನ್‍‌ನಲ್ಲಿ, ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆ ಸಿಖ್ ಪ್ರತ್ಯೇಕತಾ ವಾದಿ ಗುಂಪು ಸಿಖ್‌ ಧರ್ಮದ ಪವಿತ್ರ ಮಂದಿರ ಸ್ವರ್ಣ ದೇವಾಲಯದೊಳಗೆ ಬಿಡಾರ ಹೂಡಿ, ಅಲ್ಲಿ ಶಸ್ತ್ರಾಸ್ತ್ರಗಳನ್ನು ಜಮಾಯಿಸುತ್ತಿತ್ತು.ಐಬಿಡ್, ಪುಟಗಳು 105. ಸ್ವರ್ಣ ಮಂದಿರ ಮತ್ತು ಆಸುಪಾಸಿನ ಕಟ್ಟಡಗಳಲ್ಲಿ ಸಾವಿರಾರು ನಾಗರಿಕರಿದ್ದಾಗಲೇ ಸೇನೆಯು ಗುಂಡು ಹಾರಿಸಿತು. ಇದರಿಂದ ಅನೇಕ ನಾಗರಿಕರು ಅನಾಹುತಕ್ಕೆ ತುತ್ತಾದರು.'ಆಪರೇಶನ್ ಬ್ಲೂ ಸ್ಟಾರ್' ಕಾರ್ಯಾಚರಣೆಗೆ ಗಾಂಧಿ ನೀಡಿದ ಆದೇಶ ಅಂತರಾಷ್ಟ್ರೀಯ ಮಾಧ್ಯಮದಲ್ಲಿ ತೀವ್ರ ಖಂಡನೆಗೆ ಒಳಗಾಯಿತು.ಸೇನೆ ಮತ್ತು ನಾಗರಿಕರಿಗೆ ಉಂಟಾದ ಅನಾಹುತ ಎಷ್ಟು ಎಂಬ ಅಂಕಿಸಂಖ್ಯೆಯಲ್ಲಿ ಸರಕಾರ ನೀಡಿದ್ದಕ್ಕೂ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕೊಟ್ಟಿದ್ದಕ್ಕೂ ವ್ಯತ್ಯಾಸವಿದೆ. 79 ಸೈನಿಕರು, ಮತ್ತು 492 ಸಿಖ್‌ರು ಅನಾಹುತಕ್ಕೆ ಈಡಾದರು ಎಂದು ಸರಕಾರ ಅಂದಾಜು ನೀಡಿದರೆ, ಅನೇಕ ಮಹಿಳೆಯರು ಮತ್ತು ಮಕ್ಕಳೂ ಒಳಗೊಂಡಂತೆ, ಸ್ವಯಂ ಸೇವಾ ಸಂಸ್ಥೆಗಳು ನೀಡುವ ಲೆಕ್ಕದ ಪ್ರಕಾರ 500 ಅಥವಾ ಅದಕ್ಕಿಂತ ಹೆಚ್ಚು ಯೋಧರು ಮತ್ತು 3,000 ಸಿಖ್‌ರು ಕಷ್ಟನಷ್ಟಕ್ಕೆ ಸಿಲುಕಿದರು. ಜೊತೆಗೆ ಅನೇಕ ಮಕ್ಕಳು ಮಹಿಳೆಯರು ಚಕಮಕಿಯಲ್ಲಿ ಘಾಸಿಗೊಂಡರು.ಗುಹ, ರಾಮಚಂದ್ರ Iಇಂದಿರಾ ಆಫ್ಟರ್ ಗಾಂಧಿ pg.563 ನಾಗರಿಕ ಅವಘಡಕ್ಕೆ ಸಂಬಂಧಿಸಿದ ನಿಖರ ಅಂಕಿಅಂಶ ವಿವಾದಕ್ಕೆ ಸಿಕ್ಕಿಬಿದ್ದರೆ, ಯೋಗ್ಯ ದಾಖಲೆಗಳ ಕೊರತೆ ಮತ್ತು ದಾಳಿ ನಡೆಸಿದ ಸಮಯ ಮತ್ತು ಅದಕ್ಕೆ ಅನುಸರಿಸಲಾದ ರೀತಿನೀತಿಯು ಕಟು ಟೀಕೆಗೆ ಒಳಗಾಯಿತು. ಇಂದಿರಾರ ಈ ಕಾರ್ಯಾಚರಣೆಯನ್ನು ಸಿಖ್‌ರ ವಿರುದ್ಧ ಅವರು ಮಾಡಿದ ವೈಯಕ್ತಿಕ ದಾಳಿ ಎಂದು ಖಂಡಿಸಲಾಯಿತು. 'ಸಿಖ್‌ರಿಗೆ ಸ್ವಾತಂತ್ರ್ಯನೀಡಿ,ಅವರಿಗಾಗಿಯೇ ಖಲಿಸ್ಥಾನ ಎಂಬ ಪ್ರತ್ಯೇಕ ರಾಜ್ಯವನ್ನು ರಚಿಸಿ' ಎಂಬಂಥ ಸರಕಾರ ವಿರೋಧೀ ನೀತಿಯನ್ನು ಬಿತ್ತುತ್ತಿದ್ದ ಉಗ್ರಗಾಮಿ ಭಿಂದ್ರನ್‌ವಾಲೆ ಮತ್ತು ಆತನ ಸಹಚರರನ್ನು ಹೊರದಬ್ಬುವುದೇ ಈ ಮುತ್ತಿಗೆಯ ಮೂಲ ಉದ್ದೇಶ ಎಂದು ಕಾರ್ಯಾಚರಣೆಯನ್ನು ಇಂದಿರಾ ಸಮರ್ಥಿಸಿಕೊಂಡರು. ಸಿಖ್‌ ಸಮುದಾಯಕ್ಕೆ ಸೇರಿದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್‌ ಎಂಬ ಗಾಂಧಿಯ ಅಂಗರಕ್ಷಕರಿಬ್ಬರು 1984ರ ಅಕ್ಟೋಬರ್ 31ರಂದು,1984ರ ಅಕ್ಟೋಬರ್ 31ರಂದು,ಸೇವಾ ಬಳಕೆಗಾಗಿ ಇದ್ದ ಆಯುಧಗಳಿಂದ ಅವರನ್ನು ಹತ್ಯೆಗೈದರು. ಈ ಹತ್ಯೆ ನಡೆದದ್ದು ನವದೆಹಲಿಯ ಪ್ರಧಾನ ಮಂತ್ರಿ ನಿವಾಸವಾಗಿದ್ದ ನವೆಂಬರ್ 1, ಸಫ್ದರ್ಜಂಗ್‌ ರಸ್ತೆಯಲ್ಲಿನ ಉದ್ಯಾನದಲ್ಲಿ. ಐರಿಷ್ ದೂರದರ್ಶನಕ್ಕೆ ಸಾಕ್ಷ್ಯಚಿತ್ರ ಚಿತ್ರೀಕರಿಸುತ್ತಿದ್ದ ಬ್ರಿಟಿಷ್ ನಟ ಪೀಟರ್ ಉಸ್ತಿನೊವ್‌ ಅವರಿಗೆ ಸಂದರ್ಶನ ನೀಡುವುದಕ್ಕಾಗಿ, ಇಂದಿರಾ ಸತ್ವಂತ್ ಮತ್ತು ಬಿಯಾಂತ್‌ ಕಾವಲಿನಲ್ಲಿದ್ದ ಕಿರು ದ್ವಾರವನ್ನು ದಾಟುತ್ತಿದ್ದಂತೆಯೇ ಈ ದುಷ್ಕೃತ್ಯ ನಡೆಯಿತು. ಇವರ ಬೆಂಗಾವಲಿನಲ್ಲಿ ವಿಕೆಟ್ ಗೇಟ್‌ನ್ನು ದಾಟಿದ್ದರು. ಘಟನೆ ಆಧಾರಿಸಿ ಈ ದುರ್ಘಟನೆ ನಡೆದಾಕ್ಷಣ ಲಭ್ಯವಾದ ಮಾಹಿತಿಯಂತೆ ಬಿಯಾಂತ್ ಸಿಂಗ್ ಪಾರ್ಶ್ವಾಯುಧವನ್ನು ಬಳಸಿ ಅವರಿಗೆ ಮೂರು ಬಾರಿ ಗುಂಡುಹಾರಿಸಿದರೆ, ಸತ್ವಂತ್ ಸಿಂಗ್ ಸ್ಟೆನ್ ಸಬ್‌ಮೆಷಿನ್ ಗನ್ ಬಳಸಿ 30 ಸುತ್ತುಇಂಡಿಯನ್‌ಟೈಮ್‌ಪಾಸ್ http://www.indiatimepass.com/famous_indians/Indra-gandhi.html ಗುಂಡಿನ ಸುರಿಮಳೆಗರೆದ. ಕೂಡಲೇ ಬಿಯಾಂತ್‌ ಸಿಂಗ್‌ನನ್ನು ಗುಂಡಿಕ್ಕಿ ಕೊಂದ ಇನ್ನಿತರ ಅಂಗರಕ್ಷಕರು ಸತ್ವಂತ್ ಸಿಂಗ್‌ಗೂ ಗುಂಡು ಹಾರಿಸಿ ಬಂಧಿಸಿದರು. ಅವರ ಅಧಿಕೃತ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲ್ಲೇ ಇಂದಿರಾ ಕೊನೆಯುಸಿರೆಳೆದರಾದರೂ ಹಲವಾರು ಘಂಟೆಗಳ ಕಾಲ ಅವರ ಸಾವನ್ನು ಪ್ರಕಟಿಸಲಿಲ್ಲ.ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗೆ ಅವರನ್ನು ಕೊಂಡೊಯ್ಯಲಾಯಿತು. ಅಲ್ಲಿ ವೈದ್ಯಕೀಯ ತಪಾಸಣೆ ನಡೆಯಿತು. 29 ಗುಂಡುಗಳು ದೇಹದ ಒಳ ಹೊಕ್ಕು ಹೊರ ಬಂದ ಗಾಯಗಳು ಇದ್ದವು ಎಂದು ಅಧಿಕೃತ ಮೂಲಗಳು ಹೇಳಿದರೆ, 31 ಗುಂಡುಗಳನ್ನು ಅವರ ದೇಹದಿಂದ ಹೊರಗೆ ತೆಗೆಯಲಾಯಿತು ಎಂದು ಮಿಕ್ಕ ಕೆಲವು ವರದಿಗಳು ಹೇಳುತ್ತವೆ. ಅವರ ಪಾರ್ಥಿವ ಶರೀರವನ್ನು ರಾಜ್ ಘಟ್ ಸಮೀಪ ನವೆಂಬರ್ 3ರಂದು ‌ದಹಿಸಲಾಯಿತು. ಅವರ ಮರಣದ ನಂತರ, ಇಂದಿರಾಗೆ ನಿಷ್ಠರಾಗಿದ್ದ ಕೆಲವು ಕಾಂಗ್ರೆಸ್ ರಾಜಕಾರಣಿಗಳಿಂದ ಮತಾಂಧ ಅಭಿಮಾನ ಉಕ್ಕೇರಿತು. ನವದೆಹಲಿ ಮತ್ತು ಭಾರತದ ಅನೇಕ ಇತರ ನಗರಗಳಲ್ಲಿ ಸಿಖ್-ವಿರೋಧೀ ದಂಗೆ ತಲೆ ಎತ್ತಿತು. ದಂಗೆ ಹಿಂಸಾಚಾರಕ್ಕೆ ಇಳಿಯಿತು. ಸಾವಿರಾರು ಮುಗ್ದ ಸಿಖ್‌ರು ಇದಕ್ಕೆ ಬಲಿಯಾದರು. ಅವರ ಮನೆಗಳಿಗೆ ಬೆಂಕಿ ಇಡಲಾಯಿತು. ಆಸ್ತಿ ಪಾಸ್ತಿ ಮತ್ತು ಸಂಪತ್ತು ಲೂಟಿಯಾದವು. ಆಪರೇಶನ್ ಬ್ಲೂ ಸ್ಟಾರ್‌ನ ಪರಿಣಾಮವಾಗಿ ಏನಾಗುತ್ತದೆಯೊ ಎಂಬ ಇಂದಿರಾಗೆ ಇದ್ದ ಆತಂಕ ಮತ್ತು ತಳಮಳವನ್ನು ಅವರ ಗೆಳೆಯ ಮತ್ತು ಜೀವನ ಚರಿತ್ರೆಕಾರ ಪುಪುಲ್ ಜಯಕರ್‌ ನಂತರ ಹೊರಗೆಡವಿದರು. ಪವಿತ್ರ ಸ್ವರ್ಣ ಮಂದಿರದ ಮೇಲೆ ನಡೆಸಲಾದ ದಾಳಿಗೆ ಎದುರಾಗಿ ಗಾಂಧಿ ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಈ ರೀತಿ ಪ್ರತೀಕಾರ ತೀರಿಸಿಕೊಂಡರು. ವೈಯುಕ್ತಿಕ ಜೀವನ ನೆಹರು-ಗಾಂಧಿ ಕುಟುಂಬ 300px|thumb|ಇಂದಿರಾ ಗಾಂಧಿಯವರ ವೈಯಕ್ತಿಕ ಗೃಂಥಾಲಯ 300px|thumb|ಫಿರೋಜ್ ಮತ್ತು ಇಂದಿರಾ ಗಾಂಧಿಯವರ ಭಾವಚಿತ್ರ ಆರಂಭದಲ್ಲಿ ಇಂದಿರಾರ ಉತ್ತರಾಧಿಕಾರಿ ಆಯ್ಕೆ ಸಂಜಯ್ಆಗಿತ್ತು. ಆದರೆ ಅವರು ವಿಮಾನ ಅಪಘಾತದಲ್ಲಿ ಸಾವಿಗೀಡಾದ ನಂತರ ಒಲ್ಲದ ಮನಃಸ್ಥಿತಿಯಲ್ಲಿದ್ದ ರಾಜೀವ್ ಗಾಂಧಿಯನ್ನು ಒತ್ತಾಯಿಸಿದರು. ಪೈಲೆಟ್ ಹುದ್ದೆ ತ್ಯಜಿಸಿ ರಾಜಕೀಯಕ್ಕೆ ಧುಮುಕುವಂತೆ 1981ರ ಫೆಬ್ರವರಿಯಲ್ಲಿ ರಾಜೀವ್ ಗಾಂಧಿಯ ಮನವೊಲಿಸಿದರು. ಇಂದಿರಾ ಗಾಂಧಿ ಮರಣಾನಂತರ, ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾದರು. 1991ರ ಮೇನಲ್ಲಿ, ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಮ್ ಭಯೋತ್ಪಾದಕರಿಂದ ಅವರೂ ಸಹ ಹತ್ಯೆಗೆ ತುತ್ತಾದರು. ರಾಜಿವ್‌ರ ಪತ್ನಿ ಸೋನಿಯಾ ಗಾಂಧಿ ಸಂಯುಕ್ತ ಪ್ರಗತಿಪರ ಒಕ್ಕೂಟದ ನೇತೃತ್ವ ವಹಿಸಿ 2004ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಚುನಾವಣಾ ಗೆಲುವನ್ನು ಸಾಧಿಸಿದರು. ಸೋನಿಯಾ ಗಾಂಧಿಯವರು ಪ್ರಧಾನ ಮಂತ್ರಿ ಹುದ್ದೆಗೇರುವ ಅವಕಾಶವನ್ನು ನಿರಾಕರಿಸಿದರು. ಆದರೆ ಕಾಂಗ್ರೆಸ್‌ ಪಕ್ಷವನ್ನು ನಿಯಂತ್ರಿಸುವ ಪ್ರಮುಖ ರಾಜಕೀಯ ಚುಕ್ಕಾಣಿ ಅವರ ಕೈಗೆ ಬಂತು. ಮಾಜಿ ಹಣಕಾಸು ಸಚಿವರಾಗಿದ್ದ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಈಗ ದೇಶವನ್ನು ಮುನ್ನಡೆಸುತ್ತಿದ್ದಾರೆ. ರಾಜೀವ್‌ರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಡ್ರ ಅವರೂ ಸಹ ರಾಜಕೀಯ ಪ್ರವೇಶಿಸಿದ್ದಾರೆ. ಸಂಜಯ್ ಗಾಂಧಿ ಮರಣಾನಂತರ ಅವರ ಪತ್ನಿ ಮನೇಕಾ ಗಾಂಧಿ ಮತ್ತು ಇಂದಿರಾ ಮಧ್ಯೆ ಭಿನ್ನಾಭಿಪ್ರಾಯ ಕುಡಿಯೊಡೆಯಿತು. ಇದರಿಂದಾಗಿ ಮೇನಕಾರನ್ನು ಪ್ರಧಾನ ಮಂತ್ರಿ ನಿವಾಸದಿಂದಖುಶ್ವಂತ್ ಸಿಂಗ್‌ರವರ ಆತ್ಮಚರಿತ್ರೆ - ದ ಟ್ರಿಬೂನ್ ಹೊರದಬ್ಬಲಾಯಿತು. ಮೇನಕಾ ಜೊತೆ ಹೊರದೂಡಲ್ಪಟ್ಟ ಸಂಜಯ್ ಪುತ್ರ :en:Varun Gandhiವರುಣ್ ಗಾಂಧಿ ಕೂಡ ಈಗ ಪ್ರಮುಖ ಪ್ರತಿ ಪಕ್ಷ BJPಯ ಸದಸ್ಯರಾಗಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ವಿವಾದಗಳು ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ 1970ರಲ್ಲಿ ಬಲವಂತ ಸಂತಾನ ಶಕ್ತಿಹರಣ ಯೋಜನೆಯನ್ನು ಜಾರಿಗೆ ತಂದರು.ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಪುರುಷರು ಸಂತಾನ ಶಕ್ತಿಹರಣ ಚಿಕಿತ್ಸೆಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕೆಂಬುದು ಅಧಿಕೃತವಾಯಿತು. ಆದರೆ ಮದುವೆಯಾಗದ ಹಲವಾರು ಯುವಕರು, ರಾಜಕೀಯ ವಿರೋಧಿಗಳು ಮತ್ತು ಅಮಾಯಕ ಪುರುಷರೂ ಸಹ ಇದಕ್ಕೆ ಈಡಾದರು ಎಂದು ನಂಬಲಾಗಿದೆ. ಈ ಯೋಜನೆ ಭಾರತದಲ್ಲಿ ಸಾರ್ವಜನಿಕ ಜಿಗುಪ್ಸೆಯನ್ನು ನಿರ್ಮಿಸಿದ ಪರಿ ಈಗಲೂ ನೆನಪಾಗುತ್ತದೆ ಮತ್ತು ಖಂಡಿಸಲಾಗುತ್ತದೆ. ಇದರಿಂದಾಗಿ ಕುಟುಂಬ ಯೋಜನೆಯ ಬಗ್ಗೆ ಜನತೆಗೆ ತಪ್ಪು ಮಾಹಿತಿ ರವಾನೆಯಾಗಿದೆ ಎಂದು ದೂಷಿಸಲಾಗಿದೆ. ಸರಕಾರದ ಇಂಥ ಯೋಜನೆಗಳಿಗೆ ದಶಕಗಳ ಕಾಲ ಅಡಚಣೆ ಉಂಟಾಯಿತು.http://www.sscnet.ucla.edu/southasia/History/Independent/Indira.html ಇಂದಿರಾ ಗಾಂಧಿ ಭಾರತ ಸುಸಂತಾನಶಾಸ್ತ್ರ ಸಮಾಜ ಎಂಬ ಸಂಸ್ಥೆಯ ಸದಸ್ಯರಾಗಿ ಸುಸಂತಾನಶಾಸ್ತ್ರದ ಕಲ್ಪನೆಗೆ ಪ್ರಬಲ ದಾರ್ಶನಿಕ ಮತ್ತು ವೈಯಕ್ತಿಕ ಗಾಢನಂಬಿಕೆಯನ್ನು ಹೊಂದಿದ್ದರು ಎಂಬುದನ್ನು ಈ ಸಂಗತಿಗಳು ಪ್ರಬಲವಾಗಿ ಬಿಂಬಿಸುತ್ತವೆ. ಪರಂಪರೆ ಪ್ರಚಲಿತ ಪುರುಷ-ಪ್ರಧಾನ ಸಮಾಜದಲ್ಲಿ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿ ಮತ್ತು ಪ್ರಭಾವಿ ನಾಯಕಿಯಾಗಿ ಇಂದಿರಾ ಗಾಂಧಿ ಭಾರತದ ಸ್ತ್ರೀ ಸಮುದಾಯದ ಸಂಕೇತವಾಗಿದ್ದಾರೆ. ಗಾಂಧಿಯವರಿಂದ ಗಳಿಸಲ್ಪಟ್ಟ ಗ್ರಾಮೀಣ ಜನರ ಅಭಿಮಾನವು ಭಾರತದ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಯಶಸ್ಸಿನಲ್ಲಿ ಹಾಗೂ ನೆಹರು-ಗಾಂಧಿ ಕುಟುಂಬಕ್ಕೆ ಜನ ನೀಡುತ್ತಿರುವ ಬೆಂಬಲದಲ್ಲಿಯೂ ಸಹ ಅದರ ಪ್ರಭಾವವನ್ನು ಹೊಂದಿದೆ. ಭಾರತದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅವರನ್ನು ಪೂಜ್ಯ ಭಾವನೆಯಿಂದ ಇಂದಿರಾ-ಅಮ್ಮ (ಅನೇಕ ಭಾಷೆಗಳಲ್ಲಿ "ಅಮ್ಮ" ಅಂದರೆ "ತಾಯಿ" ಎಂದರ್ಥ) ಎಂದು ಜನ ನೆನೆಯುತ್ತಾರೆ. ಅವರ ಗರೀಬಿ ಹಟಾವೊ ಘೋಷಣೆಯನ್ನು ರಾಜಕೀಯ ಪ್ರಚಾರ ಸಂದರ್ಭದಲ್ಲೆಲ್ಲಾ ಈಗಲೂ ಕಾಂಗ್ರೆಸ್‌ ಬಳಸುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಸ್ತುತ ಅಧ್ಯಕ್ಷೆಯೂ ಹಾಗೂ ಇಂದಿರಾ ಗಾಂಧಿ ಸೊಸೆಯೂ ಆಗಿರುವ ಸೋನಿಯಾ ಗಾಂಧಿಯವರ ಶೈಲಿಯು ಇಂದಿರಾ ಶೈಲಿಯನ್ನು ಹೋಲುತ್ತದೆ ಎಂದು ಹೇಳಲಾಗಿದೆ. 'ಇಂದಿರಾ ಆವಾಸ್ ಯೋಜನೆ'-ಗ್ರಾಮೀಣ ಜನರಿಗೆ ಅಲ್ಪ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವ ಕೇಂದ್ರ ಸರಕಾರದ ಈ ಯೋಜನೆಗೆ ಇಟ್ಟಿರುವ ಹೆಸರೂ ಅವರದ್ದೇ ಆಗಿದೆ. ಹೊಸದೆಹಲಿಯ ವಿಮಾನ ನಿಲ್ದಾಣಕ್ಕೆ 'ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂಬ ಹೆಸರಿಟ್ಟು ಇವರನ್ನು ಗೌರವಿಸಲಾಗಿದೆ. ಇದನ್ನೂ ನೋಡಿ ರಾಜೀವ್ ಗಾಂಧಿ ಜವಾಹರಲಾಲ್ ನೆಹರು ನೆಹರು-ಗಾಂಧಿ ಕುಟುಂಬ ಹತ್ಯೆಗೊಳಗಾದ ಭಾರತೀಯ ರಾಜಕಾರಣಿಗಳ ಪಟ್ಟಿ ಆಪರೇಶನ್ ಬ್ಲೂ ಸ್ಟಾರ್ ಭಾರತದಲ್ಲಿ ತುರ್ತು ಪರಿಸ್ಥಿತಿ 1975-77 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ ಭಾರತ ಗಣರಾಜ್ಯದ ಇತಿಹಾಸ ಅಧಿಕಾರ ರಾಜಕಾರಣದ ಏಳುಬೀಳು;29 Nov, 2016;ಸಿ.ಜಿ. ಮಂಜುಳಾ ಆಕರಗಳು ಹೆಚ್ಚಿನ ಓದಿಗಾಗಿ ವೇದ್ ಮೆಹ್ತ, ಎ ಫ್ಯಾಮಿಲಿ ಅಫೇರ್: ಇಂಡಿಯಾ ಅಂಡರ್ ತ್ರೀ ಪ್ರೈಮ್ ಮಿನಿಸ್ಟರ್ಸ್ (1982) ISBN 0-19-503118-0 ಪಪುಲ್ ಜಯಕರ್, ಇಂದಿರಾ ಗಾಂಧಿ: ಅನ್ ಇಂಟಿಮೇಟ್ ಬೈಯಾಗ್ರಫಿ (1992) ISBN 978-0-679-42479-6 ಕ್ಯಾಥರಿನ್ ಫ್ರ್ಯಾಂಕ್, ಇಂದಿರಾ: ದ ಲೈಫ್ ಆಫ್ ಇಂದಿರಾ ನೆಹರು ಗಾಂಧಿ (2002) ISBN 0-395-73097-X ರಾಮಚಂದ್ರ ಗುಹ, ಇಂಡಿಯಾ ಆಫ್ಟರ್ ಗಾಂಧಿ: ದ ಹಿಸ್ಟರಿ ಆಫ್ ದ ವರ್ಲ್ಡ್ಸ್ ಲಾರ್ಜೆಸ್ಟ್ ಡೆಮೋಕ್ರಸಿ (2007) ISBN 978-0-06-019881-7 ಹೊರಗಿನ ಕೊಂಡಿಗಳು ಇಂದಿರಾ ಗಾಂಧಿ ಬೈಯೋಗ್ರಫಿ ಫೀಚರ್ಸ್ ಆನ್ ಇಂದಿರಾ ಗಾಂಧಿ ಬೈ ದ ಇಂಟರ್‌ನ್ಯಾಷನಲ್ ಮ್ಯೂಸಿಯಂ ಆಫ್ ವ್ಯುಮೆನ್ . ನಿಧನವಾರ್ತೆ, NY ಟೈಮ್ಸ್, ನವೆಂಬರ್ 1, 1984 ಭಾರತದಲ್ಲಿನ ಹತ್ಯೆಗಳು: ಛಲ ಬಲದ ನಾಯಕಿ ಇಂದಿರಾ ಗಾಂಧಿ, ರಾಜಕೀಯಕ್ಕಾಗಿಯೇ ಜನಿಸಿದವರು, ಅವರ ಸ್ವಂತ ಗುರುತನ್ನು ಭಾರತದಲ್ಲಿ ಬಿಟ್ಟುಹೋಗಿದ್ದಾರೆ 1975: ಗಾಂಧಿಯವರನ್ನು ಭ್ರಷ್ಟಾಚಾರ ದೋಷಿ ಎನ್ನಲಾಯಿತು ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:ರಾಜಕಾರಣಿಗಳು ವರ್ಗ:ಭಾರತರತ್ನ ಪುರಸ್ಕೃತರು
ಮೊರಾರ್ಜಿ ದೇಸಾಯಿ
https://kn.wikipedia.org/wiki/ಮೊರಾರ್ಜಿ_ದೇಸಾಯಿ
thumb|right|ಮೊರಾರ್ಜಿ ದೇಸಾಯಿ ಮೊರಾರ್ಜಿ ದೇಸಾಯಿ ಮೊರಾರ್ಜಿ (೨೯ ಫೆಬ್ರವರಿ ೧೮೯೬ - ೧೦ ಏಪ್ರಿಲ್ ೧೯೯೫) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ೧೯೮೭ ರಿಂದ ೧೯೭೯ ರವರೆಗೆ ಭಾರತದಲ್ಲಿ ೪ ನೇ ಪ್ರಧಾನಿಯಾಗಿ(ಜನತಾ ಪಾರ್ಟಿ) ಸರ್ಕಾರಕ್ಕೆ ಸೇವೆ ಸಲ್ಲಿಸಿದರು. ಅವರ ಸುದೀರ್ಘ ವೃತ್ತಿಜೀವನದ ಅವಧಿಯಲ್ಲಿ, ಅವರು ಹಲವಾರು ಪ್ರಮುಖ ಹುದ್ದೆಗಳನ್ನು ಸರ್ಕಾರದಲ್ಲಿ ಹೊಂದಿದ್ದರು: ಮುಂಬಯಿ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವ, ಹಣಕಾಸು ಸಚಿವ ಮತ್ತು ಭಾರತದ ಉಪ ಪ್ರಧಾನ ಮಂತ್ರಿ. ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ, ದೇಸಾಯಿ ತಮ್ಮ ಶಾಂತಿ ಕ್ರಿಯಾವಾದಕ್ಕಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ ಮತ್ತು ಎರಡು ಪ್ರತಿಸ್ಪರ್ಧಿ ದಕ್ಷಿಣ ಏಷ್ಯಾದ ರಾಜ್ಯಗಳು, ಪಾಕಿಸ್ತಾನ ಮತ್ತು ಭಾರತ ನಡುವೆ ಶಾಂತಿ ಆರಂಭಿಸಲು ಪ್ರಯತ್ನಗಳನ್ನು ಮಾಡಿದ್ದಾರೆ. ೧೯೭೪ ರಲ್ಲಿ ಭಾರತದ ಮೊದಲ ಪರಮಾಣು ಸ್ಫೋಟವಾದ ನಂತರ, ದೇಸಾಯಿ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧವನ್ನು ಪುನಃಸ್ಥಾಪಿಸಲು ಸಹಾಯ ಮಾಡಿದರು ಮತ್ತು ೧೯೭೧ ರ ಇಂಡೋ-ಪಾಕಿಸ್ತಾನಿ ಯುದ್ಧದಂತಹ ಸಶಸ್ತ್ರ ಸಂಘರ್ಷವನ್ನು ತಪ್ಪಿಸಲು ಪ್ರತಿಜ್ಞೆ ಮಾಡಿದರು. ಆರಂಭಿಕ ಜೀವನ ಮೊರಾರ್ಜಿ ದೇಸಾಯಿ ಅವರು ೧೮೯೬ ರ ಫೆಬ್ರುವರಿ ೨೯ ರಂದು ಮುಂಬಯಿ ಪ್ರೆಸಿಡೆನ್ಸಿ (ಈಗ ಗುಜರಾತ್ನಲ್ಲಿ) ನ ಬಲ್ಸೇರಿ ಜಿಲ್ಲೆಯ ಭಾಡೆಲಿ ಗ್ರಾಮದಲ್ಲಿ ಜನಿಸಿದರು. ಎಂಟು ಮಕ್ಕಳು ಅತ್ಯಂತ ಹಿರಿಯರು. ಅವರ ತಂದೆ ಶಾಲೆಯ ಶಿಕ್ಷಕರಾಗಿದ್ದರು.Obituary: Morarji Desai by Kuldip Singh ದೇಸಾಯಿ ಸೌರಾಷ್ಟ್ರದಲ್ಲಿರುವ ಕುಂಡ್ಲಾ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಒಳಗಾದರು, ಸಾವರ್ಕುಂಡ್ಲಾ ಈಗ ಜೆ.ವಿ. ಮೋದಿ ಶಾಲೆ ಎಂದು ಕರೆಯುತ್ತಾರೆ ಮತ್ತು ನಂತರ ಬಲ್ ಅವಾ ಬಾಯ್ ಹೈಸ್ಕೂಲ್, ವಲ್ಸಾದ್ ಸೇರಿದರು. ಮುಂಬೈಯ ವಿಲ್ಸನ್ ಕಾಲೇಜ್ನಿಂದ ಪದವೀಧರರಾದ ನಂತರ, ಅವರು ಗುಜರಾತ್ನಲ್ಲಿ ನಾಗರಿಕ ಸೇವೆಗೆ ಸೇರಿದರು. ಅಲ್ಲಿ ೧೯೨೭-೨೮ರ ಗಲಭೆಗಳ ಸಮಯದಲ್ಲಿ ಹಿಂದುಗಳ ಮೇಲೆ ಮೃದುವಾಗಿ ಹೋಗುವ ಅಪರಾಧವೆಂದು ಪರಿಗಣಿಸಲ್ಪಟ್ಟು ಮೇ ೧೯೩೦ ರಲ್ಲಿ ಗೋಧ್ರಾದ ಜಿಲ್ಲಾಧಿಕಾರಿಯಾಗಿ ದೇಸಾಯಿ ರಾಜೀನಾಮೆ ನೀಡಿದರು. ದೇಸಾಯಿ ನಂತರ ಮಹಾತ್ಮಾ ಗಾಂಧಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಸೇರಿದರು ಮತ್ತು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಾಗರಿಕ ಅಸಹಕಾರ ಚಳವಳಿಯಲ್ಲಿ ಸೇರಿಕೊಂಡರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಅನೇಕ ವರ್ಷಗಳ ಕಾಲ ಜೈಲಿನಲ್ಲಿದ್ದರು ಮತ್ತು ಅವರ ಚೂಪಾದ ನಾಯಕತ್ವದ ಕೌಶಲ್ಯ ಮತ್ತು ಕಠಿಣ ಚೈತನ್ಯದಿಂದಾಗಿ ಅವರು ಸ್ವಾತಂತ್ರ್ಯ ಹೋರಾಟಗಾರರ ನಡುವೆ ನೆಚ್ಚಿನವರಾಗಿದ್ದರು ಮತ್ತು ಗುಜರಾತ್ ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದರು. ೧೯೩೪ ಮತ್ತು ೧೯೩೭ ರಲ್ಲಿ ಪ್ರಾಂತೀಯ ಚುನಾವಣೆಗಳು ನಡೆದಾಗ, ದೇಸಾಯಿ ಅವರು ಮುಂಬಯಿ ಪ್ರೆಸಿಡೆನ್ಸಿಯ ಕಂದಾಯ ಸಚಿವ ಮತ್ತು ಗೃಹ ಸಚಿವರಾಗಿ ಆಯ್ಕೆಯಾದರು. ಭಾರತದ ಪ್ರಧಾನಿ (೧೯೭೭-೭೯) ತುರ್ತು ಪರಿಸ್ಥಿತಿಯನ್ನು ಎತ್ತಿಹಿಡಿಯಲು ಇಂದಿರಾ ಗಾಂಧಿಯವರು ನಿರ್ಧರಿಸಿದ ನಂತರ ಸಾಮಾನ್ಯ ಚುನಾವಣೆ ನಡೆಯಿತು. ಜನತಾ ಪಾರ್ಟಿ ಚುನಾವಣೆಯಲ್ಲಿ ಜಯ ಸಾಧಿಸಿತು ಮತ್ತು ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ದೇಸಾಯಿ ನೆರೆಹೊರೆಯ ಮತ್ತು ವಿರೋಧಿ ಪಾಕಿಸ್ತಾನದೊಂದಿಗೆ ಸಂಬಂಧವನ್ನು ಸುಧಾರಿಸಲು ಕೆಲಸ ಮಾಡಿದರು. ೧೯೬೨ ರ ಯುದ್ಧದ ನಂತರ ಮೊದಲ ಬಾರಿಗೆ ಚೀನಾದೊಂದಿಗಿನ ಸಾಮಾನ್ಯ ಸಂಬಂಧಗಳನ್ನು ಮರುಸ್ಥಾಪಿಸಿತು. ಅವರು ಜಿಯಾ-ಉಲ್-ಹಕ್ ಅವರೊಂದಿಗೆ ಸಂವಹನ ನಡೆಸಿದರು ಮತ್ತು ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸಿದರು. ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಪುನಃ ಸ್ಥಾಪಿಸಲಾಯಿತು. ಅವರ ಸರ್ಕಾರ ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿತು. ಸಾವು ಮೊರಾರ್ಜಿ ದೇಸಾಯಿ ಅವರು ೧೯೮೦ ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿರಿಯ ರಾಜಕಾರಣಿಯಾಗಿ ಜನತಾ ಪಕ್ಷಕ್ಕೆ ಪ್ರಚಾರ ಮಾಡಿದರು ಆದರೆ ಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸಲಿಲ್ಲ. ನಿವೃತ್ತಿಯಲ್ಲಿ ಅವರು ಮುಂಬೈಯಲ್ಲಿ ವಾಸಿಸುತ್ತಿದ್ದರು ಮತ್ತು ೧೯೯೫ ರಲ್ಲಿ ೯೯ ನೇ ವಯಸ್ಸಿನಲ್ಲಿ ನಿಧನರಾದರು. ಅವರ ಕೊನೆಯ ವರ್ಷಗಳಲ್ಲಿ ಅವರ ಪೀಳಿಗೆಯ ಸ್ವಾತಂತ್ರ್ಯ ಹೋರಾಟಗಾರನಾಗಿ ಅವರು ಹೆಚ್ಚು ಗೌರವವನ್ನು ಹೊಂದಿದ್ದರು. ಮೊರಾರ್ಜಿ ದೇಸಾಯಿ ಮಹಾತ್ಮ ಗಾಂಧಿಯವರ ತತ್ವಗಳ ಮತ್ತು ನೈತಿಕತೆಯ ಕಟ್ಟುನಿಟ್ಟಾದ ಅನುಯಾಯಿಯಾಗಿದ್ದರು. ಸಾಮಾಜಿಕ ಸೇವೆ ಮೊರಾರ್ಜಿ ದೇಸಾಯಿಯವರು ಗಾಂಧಿಯ ಅನುಯಾಯಿಯಾಗಿದ್ದರು, ಸಾಮಾಜಿಕ ಕಾರ್ಯಕರ್ತರು, ಸಂಸ್ಥಾಪಕ ಬಿಲ್ಡರ್ ಮತ್ತು ಉತ್ತಮ ಸುಧಾರಕರಾಗಿದ್ದರು. ಅವರು ಗುಜರಾತ್ ವಿದ್ಯಾಪೀಠದ ಚಾನ್ಸಲರ್ ಆಗಿದ್ದರು. ಪ್ರಧಾನ ಮಂತ್ರಿಯಾಗಿದ್ದ ತಮ್ಮ ಅವಧಿಯಲ್ಲಿ ಅವರು ಅಕ್ಟೋಬರ್ ತಿಂಗಳಲ್ಲಿ ವಿದ್ಯಾಪೀಠಕ್ಕೆ ಭೇಟಿ ನೀಡುತ್ತಿದ್ದರು. ವೈಯಕ್ತಿಕ ಜೀವನ ಮತ್ತು ಕುಟುಂಬ ಮೊರಾರ್ಜಿ ದೇಸಾಯಿ ಅವರು ೧೫ ನೇ ವಯಸ್ಸಿನಲ್ಲಿ ೧೯೧೧ ರಲ್ಲಿ ಗುಜ್ರಬೆನ್ರನ್ನು ಮದುವೆಯಾದರು. ಅವರ ಮಗ ಕಾಂತಿ ದೇಸಾಯಿ ಮತ್ತು ಜಗದೀಪ್ ದೇಸಾಯಿ ಮತ್ತು ಭಾರತ್ ದೇಸಾಯಿ ಮೊಮ್ಮಕ್ಕಳು. ಮಧುಕೇಶ್ವರ್ ದೇಸಾಯಿ, ಅವರ ಶ್ರೇಷ್ಠ-ಮೊಮ್ಮಗ ಜಗದೀಪ್ ದೇಸಾಯಿಯವರ ಮಗ ಪ್ರಸ್ತುತ ಬಿಜೆಪಿಯ ಯುವ ವಿಭಾಗವಾದ ಭಾರತೀಯ ಜನತಾ ಯುವಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಭಾರತ್ ದೇಸಾಯಿಯ ಮಗ ವಿಶಾಲ್ ದೇಸಾಯಿ ಅವರು ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ ಉಲ್ಲೇಖಗಳು ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:ಭಾರತ ರತ್ನ ಪುರಸ್ಕೃತರು
ಚೌಧುರಿ ಚರಣ್ ಸಿಂಗ್
https://kn.wikipedia.org/wiki/ಚೌಧುರಿ_ಚರಣ್_ಸಿಂಗ್
ಚೌಧುರಿ ಚರಣ್ ಸಿಂಗ್ - ಭಾರತದ ಪ್ರಧಾನಮಂತ್ರಿಗಳಲ್ಲೊಬ್ಬರು. thumb ವರ್ಗ:ಭಾರತದ ಪ್ರಧಾನ ಮಂತ್ರಿಗಳು
ರಾಜೀವ್ ಗಾಂಧಿ
https://kn.wikipedia.org/wiki/ರಾಜೀವ್_ಗಾಂಧಿ
thumb|left|250px|ಇಂದಿರಾ ಗಾಂಧಿ, ಜವಹರಲಾಲ್ ನೆಹರು, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ thumb|Prime Minister Rajiv Gandhi with Ram Kishore Shukla in 1988. thumb|Meeting Russian Hare Krishna devotees in 1989. ರಾಜೀವ್ ಗಾಂಧಿ (೧೯೮೪-೧೯೮೯) ಭಾರತದ ೬ ನೇ ಪ್ರಧಾನಿಯಾಗಿದ್ದರು. ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ. ಜನನ, ಜೀವನ ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦, ೧೯೪೪) ತಂದೆ ಫಿರೋಝ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು- ರಾಹುಲ್ ಮತ್ತು ಪ್ರಿಯಾಂಕ. ೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು. ಅವರು ಮೊದ ಮೊದಲು ರಾಜಕೀಯವನ್ನು ಇಷ್ಟ ಪಡುತ್ತಿರಲಿಲ್ಲ. ಪೈಲೆಟ್ ಆಗಬೇಕೆಂಬುದು ಅವರ ಬಹುದಿನದ ಬಯಕೆಯಾಗಿತ್ತು. ಆ ಆಸೆ ಅವರಿಗೆ ಈಡೇರಲಿಲ್ಲ.ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ, ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು. ರಾಜಕೀಯ 200px|thumb|Rajiv Gandhi ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (೪೦೪ ಸ್ಥಾನಗಳು) ಗೆದ್ದಿದ್ದರು. ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟರು. ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು. ನಿಧನ ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. ಅವರ ಸುಂದರ ಕಾಯ ಬಾಂಬ್ ಧಾಳಿಯಿಂದ ಚೂರು ಚೂರಾಗಿತ್ತು. ಹೆಚ್ಚಿನ ಓದಿಗೆ - ಹೊರ ಸಂಪರ್ಕ ತಮಿಳು ರಾಜಕಾರಣದ ಕಾರ್ಯತಂತ್ರ ಉಲ್ಲೇಖಗಳು India's Rajiv-Part-3 The Politician'ರಾಜೀವ್ ಗಾಂಧಿ'-ಭಾಗ-೩ ಯು ಟ್ಯೂಬ್ ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:ಭಾರತ ರತ್ನ ಪುರಸ್ಕೃತರು
ವಿ. ಪಿ. ಸಿಂಗ್
https://kn.wikipedia.org/wiki/ವಿ._ಪಿ._ಸಿಂಗ್
ವಿಶ್ವನಾಥ ಪ್ರತಾಪ್ ಸಿಂಗ್ ಭಾರತದ ಪ್ರಧಾನಮಂತ್ರಿಗಳಲ್ಲೊಬ್ಬರು. ಇವರು ವಿ.ಪಿ.ಸಿಂಗ್ ಎಂದೇ ಹೆಚ್ಚು ಪರಿಚಿತರು. ಇವರು ಜೂನ್ ೨೫, ೧೯೩೧ರಂದು ಜನಿಸಿದರು. ಅಲಹಾಬಾದ್‌ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು.೧೯೮೦ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು. ಆಗ ಆ ರಾಜ್ಯದಲ್ಲಿ ನಡೆಯುತ್ತಿದ್ದ ಡಕಾಯಿತಿಗಳನ್ನು ಸಂಪೂರ್ಣ ಮಟ್ಟ ಹಾಕಿದರು. ೧೯೮೪ರಲ್ಲಿ ರಾಜೀವ್ ಗಾಂಧಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾದರು. ಬೊಫೋರ್ಸ್ ಹಗರಣದ ನಂತರ ಕಾಂಗ್ರೆಸ್ ಪಕ್ಷ ಹಾಗೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಮೋರ್ಚಾ ಪಕ್ಷದ ಮೂಲಕ ಲೋಕಸಭೆಗೆ ಆಯ್ಕೆಯಾದರು. ಜನಮೋರ್ಚಾ, ಜನತಾ ಪಕ್ಷ, ಲೋಕದಳ ಮತ್ತು ಕಾಂಗ್ರೆಸ್ ಎಸ್ ವಿಲೀನಗೊಂಡು ಜನತಾ ದಳದ ಉದಯವಾಯಿತು. ಮುಂದೆ ಜನತಾದಳದ ಮೂಲಕ ಲೋಕಸಭೆ ಪ್ರವೇಶಿಸಿ, ೧೯೮೯ರ ಡಿಸೆಂಬರ್ ೨ ರಿಂದ ೧೯೯೦ರ ನವೆಂಬರ್ ೧೦ ರವರೆಗೆ ಭಾರತದ ಏಳನೇ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು. ಇವರು ಮಂಡಲ್ ಸಮಿತಿಯ ಬಗ್ಗೆ ತೆಗೆದುಕೊಂಡ ಇವರ ನಿರ್ಧಾರ ಇವರ ರಾಜಕೀಯ ಜೀವನಕ್ಕೆ ಮುಳುವಾಯಿತು. ವರ್ಗ:ಭಾರತದ ಪ್ರಧಾನ ಮಂತ್ರಿಗಳು
ಚಂದ್ರಶೇಖರ್
https://kn.wikipedia.org/wiki/ಚಂದ್ರಶೇಖರ್
ಚಂದ್ರಶೇಖರ್ (ಜನನ : ಜುಲೈ ೧, ೧೯೨೭ - ಮರಣ:ಜುಲೈ ೮,೨೦೦೭) ಭಾರತದಎಂಟನೆಯ ಪ್ರಧಾನಮಂತ್ರಿಯಾಗಿದ್ದವರು.ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದವರು.ಚಂದ್ರಶೇಖರ್ ಜನಿಸಿದ್ದು ಉತ್ತರಪ್ರದೇಶದ ಇಬ್ರಾಹಿಂಪಟ್ಟಿಯ ರೈತ ಕುಟುಂಬದಲ್ಲಿ.ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದರು. ೧೯೫೦ರ ದಶಕದಲ್ಲಿ ಸಮಾಜವಾದ ಚಳವಳಿಗೆ ಧುಮುಕಿದರು.೧೯೬೨ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ರಾಜ್ಯಸಭೆ ಪ್ರವೇಶಿಸಿದರು.೧೯೬೫ರಲ್ಲಿ ಕಾಂಗ್ರೆಸ್ ಸೇರಿದ ಅವರು,ಆ ಪಕ್ಷದ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಉಲ್ಲೇಖಗಳು ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:೧೯೨೭ ಜನನ
ಅಟಲ್ ಬಿಹಾರಿ ವಾಜಪೇಯಿ
https://kn.wikipedia.org/wiki/ಅಟಲ್_ಬಿಹಾರಿ_ವಾಜಪೇಯಿ
thumb|ವಾಜಪೇಯೆರ್ ಹಿಂದಿ ಕೈ ಬರಹ thumb|ದ್ವನಿ thumb|250px|2001ರಲ್ಲಿ ಅಮೇರಿಕಾದ ಶ್ವೇತ ಭವನದಲ್ಲಿ ಆಗಿನ ಅಮೇರಿಕಾ ಅಧ್ಯಕ್ಷ ಜಾರ್ಜ್ ಬುಶ್ ರೊಂದಿಗೆ ವಾಜಪೇಯಿ. thumb|250px|ರಷ್ಯಾ ದೇಶದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಅವರೊಂದಿಗೆ ವಾಜಪೇಯಿ. ಅಟಲ್ ಬಿಹಾರಿ ವಾಜಪೇಯಿ( 25 ಡಿಸೆಂಬರ್ 1924 - 16 ಆಗಸ್ಟ್ 2018)ಯವರು ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿದ್ದರು. ಅವರು ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು, ಮೊದಲ ಬಾರಿಗೆ ೧೯೯೬ ರಲ್ಲಿ ೧೩ ದಿನಗಳ ಅವಧಿಗೆ, ೧೯೯೮ ರಿಂದ ೧೯೯೯ ರವರೆಗೆ ಹನ್ನೊಂದು ತಿಂಗಳ ಅವಧಿ, ಮತ್ತು ನಂತರ ೧೯೯೯ ರಿಂದ ೨೦೦೪ ರವರೆಗಿನ ಪೂರ್ಣಾವಧಿಗೆ.ಲೋಕಸಭೆ, ಕೆಳಮನೆಗೆ ಹತ್ತು ಬಾರಿ ಮತ್ತು ಮೇಲ್ಮನೆಗೆ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾದ ಅವರು ನಾಲ್ಕು ದಶಕಗಳ ಕಾಲ ಭಾರತೀಯ ಸಂಸತ್ ಸದಸ್ಯರಾಗಿದ್ದರು. ೨೦೦೯ ರವರೆಗೆ ಉತ್ತರ ಪ್ರದೇಶದ ಲಖನೌದ ಸಂಸತ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆರೋಗ್ಯದ ಕಾರಣದಿಂದಾಗಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತರಾದರು. ೧೯೬೮ ರಿಂದ ೧೯೭೨ ರವರೆಗೆ ನೇತೃತ್ವ ವಹಿಸಿದ್ದ ಹಿಂದಿನ ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ವಾಜಪೇಯಿ ಒಬ್ಬರಾಗಿದ್ದರು. ಪ್ರಧಾನಿ ಮೊರಾರ್ಜಿ ದೇಸಾಯಿಯ ಕ್ಯಾಬಿನೆಟ್ನಲ್ಲಿ ವಿದೇಶಾಂಗ ಸಚಿವರಾಗಿದ್ದರು. ಅವರೊಬ್ಬ ಕವಿ, ಪತ್ರಕರ್ತ, ವಾಗ್ಮಿ, ಚಿಂತಕ, ದಾರ್ಶನಿಕ, ರಾಜಕಾರಣಿಯಾಗಿದ್ದರು. ಜನನ ಮತ್ತು ಬಾಲ್ಯ ಅಟಲಜಿಯವರು, 25ನೇ ಡಿಸೆಂಬರ್ 1924ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ ಹತ್ತಿರದ ಶಿಂದೆ ಕಿ ಚವ್ವಾಣಿ ಎನ್ನುವ ಗ್ರಾಮದಲ್ಲಿ ಜನಿಸಿದರು. ತಂದೆ ಒಬ್ಬ ಕವಿ ಮಾತ್ತು ಶಾಲೆಯ ಉಪಾಧ್ಯಾಯರು. ಅಟಲರವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ ರವರು ಊರಿನಲ್ಲಿ ಹೆಸರುವಾಸಿಯಾಗಿದ್ದರು. ವಿದ್ಯಾಭ್ಯಾಸ ಅಟಲ್ ಅವರ ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ.ವಿ ಕಾಲೇಜಿನಿಂದ ಪಡೆದರು. ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ ೧೯೪೨ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು. 'ವೀರ ಅರ್ಜುನ' ಹಾಗೂ 'ಪಾಂಚಜನ್ಯ' ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು. ವೃತ್ತಿಜೀವನ ಇವರು ರಾಜಕಾರಣದೊಂದಿಗೆ ಅನೇಕ ಸಾಮಾಜಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ೧೯೬೧ ರಿಂದ ಬಹುಕಾಲ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯ ಸದಸ್ಯರು. ಆಲ್ ಇಂಡಿಯ ಸ್ಟೇಷನ್ ಮಾಸ್ಟರ್ಸ್ ಹಾಗೂ ಅಸಿಸ್ಟೆಂಟ್ಟ್ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿದ್ದರು. ಪಂಡಿತ ದೀನದಯಾಳು ಉಪಾಧ್ಯಾಯ ಸ್ಮಾರಕ ಸಮಿತಿ, ದೀನದಯಾಳು ಧಾಮ, ಜನ್ಮಭೂಮಿ ಸ್ಮಾರಕ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೆ ರಾಜ್ಯಸಭೆ, ಲೋಕಸಭೆಗಳ ಅನೇಕ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಕವಿ-ಬರೆಹಗಾರರಾಗಿಯೂ ಹೆಸರು ಗಳಿಸಿದ್ದಾರೆ. ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶಿ ಹಾಗೂ ವೀರ ಅರ್ಜುನ್ ಮುಂತಾದ ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಮೇರಿ ಇಕ್ಯಾವನ್ ಕವಿತಾಯೇಂ, ಸಂಕಲ್ಪಕಾಲ, ಕೈದಿ ಕವಿರಾಜ್ ಕೇ ಕುಂಡಲಿಯಾ (ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆಯಲ್ಲಿ ರಚಿಸಿದ ಕವನಗಳು), ಅಮರ್ ಆಗ್ ಹೈ (ಕವನ ಸಂಕಲನಗಳು) ಮೇರಿ ಸಂಸದೀಯ ಯಾತ್ರಾ (೪ ಸಂಪುಟಗಳಲ್ಲಿ), ಶಕ್ತಿ ಸೇ ಶಾಂತಿ, ಲೋಕ ಸಭಾ ಮೆ ಅಟಲ್‍ಜೀ (ಭಾಷಣಗಳ ಸಂಪುಟ: ಮೃತ್ಯು ಯಾ ಹತ್ಯಾ, ಅಟಲ್ ಬಲಿದಾನ್), ಜನಸಂಘ ಔರ್ ಮುಸಲ್ಮಾನ್, ಸಂಸದ್ ಮೇ ತೀನ್ ದಶಕ್ (ಮೂರು ಸಂಪುಟಗಳಲ್ಲಿ), ಇವು ಹಿಂದಿಯಲ್ಲಿ ರಚಿತವಾದ ಪ್ರಮುಖ ಕೃತಿಗಳಾಗಿವೆ. ಫೋರ್ ಡಿಕೇಡ್ಸ್ ಇನ್ ಪಾರ್ಲಿಮೆಂಟ್ (ಭಾಷಣಗಳು, ಮೂರು ಸಂಪುಟ) ಹಾಗೂ ನ್ಯೂ ಡೈಮೆನ್‍ಷನ್ಸ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ-ಇವು ಇಂಗ್ಲಿಷಿನಲ್ಲಿ ಹೊರಬಂದಿರುವ ಪ್ರಸಿದ್ಧ ಗ್ರಂಥಗಳು. ಇವರು 1996 ಮೇ 16-31ರವರೆಗೆ ಮೊದಲಬಾರಿ, 1998-99ರವರೆಗೆ ಎರಡನೆಯಬಾರಿ ಹಾಗೂ 1999 ಅಕ್ಟೋಬರ್ 13 ರಿಂದ 2004 ಮೇ 12ರವರೆಗೆ ಮೂರನೆಯ ಬಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದರು. 1998-99ರ ಇವರ ಅಧಿಕಾರಾವಧಿಯನ್ನು ಧೈರ್ಯ ಹಾಗೂ ದೃಢ ನಂಬಿಕೆಯ ಒಂದು ವರ್ಷ ಎಂದು ಕರೆಯಲಾಗಿದೆ. ಇವರ ಅವಧಿಯಲ್ಲಿ ಪೋಕ್ರಾನ್‍ನಲ್ಲಿ ನಡೆಸಿದ ಅಣುಬಾಂಬ್ ಪರೀಕ್ಷಾರ್ಥ ಸ್ಫೋಟದಿಂದಾಗಿ ಭಾರತ ಅಣುಬಾಂಬ್ ಹೊಂದಿದ ರಾಷ್ಟ್ರಗಳಿಗೆ ಸೇರ್ಪಡೆಯಾಯಿತು(1998). ಎರಡೂ ರಾಷ್ಟ್ರಗಳ ನಡುವೆ ಸೌಹಾರ್ದವನ್ನು ವೃದ್ಧಿಸುವ ಆಶಾಭಾವನೆಯಿಂದ ಭಾರತ-ಪಾಕಿಸ್ತಾನಗಳ ನಡುವೆ ಬಸ್ ಪ್ರಯಾಣವನ್ನು ಪ್ರಾರಂಭಿಸಿದರು(1999). ಇವರ ಅಧಿಕಾರಾವಧಿಯ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧ ಸಂಭವಿಸಿ ಭಾರತ ವಿಜಯಿಯಾಯಿತು. ಸೌಹಾರ್ದದ ಈ ಪ್ರಯತ್ನ ನಿಂತಿತು. ಈಗ ಮೂಡುತ್ತಿರುವ ಭಾರತ-ಪಾಕ್ ಶಾಂತಿಪ್ರಕ್ರಿಯೆಗೆ ವಾಜಪೇಯಿ ಚಾಲನೆ ನೀಡಿದರು. ಇವರು ಪ್ರಧಾನಿಯಾಗಿ ಭಾರತದ ಆರ್ಥಿಕಾಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ವಹಿಸಿದರು. ಇವರ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕ ಹಿನ್ನಡೆ ಇದ್ದಿತಾದರೂ ಭಾರತ ಶೇ. 5.8 ಜಿ.ಡಿ.ಪಿ ಅಭಿವೃದ್ಧಿ ಸಾಧಿಸಿದ್ದು ಒಂದು ಸಾಧನೆ. ಇವರು ಗ್ರಾಮೀಣ ಬಡಜನರ ಆರ್ಥಿಕ ಸಬಲೀಕರಣದ ಮಹದೋದ್ದೇಶ ಹೊಂದಿ, ಉತ್ತಮ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ, ಮಾನವ ಸಂಪನ್ಮೂಲಗಳ ಬೆಳೆವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ನಿಯೋಜಿಸಿದರು. ಭಾರತ ಒಂದು ಪ್ರಬಲ ಸ್ವಾವಲಂಬೀ ರಾಷ್ಟ್ರವಾಗಬೇಕೆಂಬುದು ಇವರ ಹೆಬ್ಬಯಕೆ. 52ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಂಪುಕೋಟೆಯಲ್ಲಿ ಆಚರಿಸಿದ ಸಂದರ್ಭದಲ್ಲಿ ಭಾಷಣ ಮಾಡುತ್ತಾ “ನನಗೊಂದು ಭವ್ಯ ಭಾರತದ ಕಲ್ಪನೆಯಿದೆ. ಆ ಭಾರತ ಹಸಿವೆಯಿಂದ, ಭಯದಿಂದ ಮುಕ್ತವಾಗಿರುತ್ತದೆ; ಆ ಭಾರತ ನಿರಕ್ಷರತೆ ಮತ್ತು ದಾರಿದ್ರ್ಯದಿಂದ ದೂರವಾಗಿರುತ್ತದೆ” ಎಂದು ಹೇಳಿದ್ದಾರೆ. ಇವರನ್ನು ೯೦ರ ದಶಕದ ಭಾರತದ ರಾಷ್ಟ್ರ ರಾಜಕೀಯದ ಅತ್ಯಂತ ಪ್ರಬಲ ವ್ಯಕ್ತಿಯೆಂದು ಪರಿಗಣಿಸಲಾಗಿದೆ. ಮೊದಲಿನಿಂದಲೂ ಹಿಂದು ಸಂಘಪರಿವಾರದ ರಾಜಕೀಯ ಮುಖವಾಣಿಯಾದ ಜನಸಂಘ, ಜನತಾಪಕ್ಷ, ಭಾರತೀಯ ಜನಸಂಘಗಳನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದ ಇವರು ಈ ದಶಕದಲ್ಲಿ ಎನ್.ಡಿ.ಎ. (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಎಂಬ ಒಕ್ಕೂಟವನ್ನು ರಚಿಸಿ ಮೂರು ಬಾರಿ ಪ್ರಧಾನಮಂತ್ರಿಗಳಾಗಿ ಸರ್ಕಾರ ನಡೆಸಿದರು. ಅನಿವಾರ್ಯವಾದ ಒಕ್ಕೂಟ ಸರ್ಕಾರ ಧರ್ಮಕ್ಕೆ ರಾಷ್ಟ್ರಮಟ್ಟದಲ್ಲಿ ಉತ್ತಮ ನಾಂದಿ ಹಾಡಿದರು. ರಾಜಕೀಯ ಸ್ಥಿರತೆಯ ಪ್ರಯತ್ನ, ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಗತಿ, ಉತ್ತಮ ಹೆದ್ದಾರಿಗಳ ನಿರ್ಮಾಣ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉತ್ತಮ ವಿದೇಶಾಂಗ ಸಂಬಂಧಗಳು ಇವರ ಸರ್ಕಾರದ ಪ್ರಮುಖ ಸಾಧನೆಗಳೆನ್ನಬಹುದು. ಆದರೆ ಗುಜರಾತಿನ ಕೋಮುವಾದಿ ಗಲಭೆ ಹಾಗೂ ಹಿಂದೆಂದೂ ಕಾಣದ ಅಲ್ಲಿನ ಹಿಂಸಾಚಾರ ಇವರ ಕಾಲದ ದುರ್ಘಟನೆಗಳು. ಅನಂತರದ ಸಾರ್ವತ್ರಿಕ ಚುನಾವಣೆಯಲ್ಲಿ (2004) ಇವರ ನಾಯಕತ್ವದ ಎನ್.ಡಿ.ಎ. ಒಕ್ಕೂಟ ಸೋತು ಇವರ ರಾಜಕೀಯ ನಾಯಕತ್ವಕ್ಕೆ ಹಿನ್ನೆಡೆ ಉಂಟಾಯಿತು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕತ್ವವನ್ನೂ ಇವರು ಒಪ್ಪಿಕೊಳ್ಳಲಿಲ್ಲ. ಆದರೆ ರಾಷ್ಟ್ರರಾಜಕಾರಣದಲ್ಲಿ ಬಿಜೆಪಿಯ ಒಳವ್ಯವಹಾರಗಳಲ್ಲಿ ವಾಜಪೇಯಿ ಸಕ್ರಿಯರಾಗಿದ್ದರು. ಭಾರತೀಯ ಸಾರ್ವಜನಿಕ ಜೀವನದಲ್ಲಿ ಅಜಾತಶತ್ರು ಎಂದೇ ಹೆಸರು ಮಾಡಿದ್ದಾರೆ. ಮಾತುಗಾರಿಕೆಯಲ್ಲಿ ಅವರನ್ನು ಮೀರಿಸುವರಿಲ್ಲ. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿ ಇತಿಹಾಸ ನಿರ್ಮಿಸಿದರು. ಇವರಿಗೆ ಪದ್ಮವಿಭೂಷಣ ಪ್ರಶಸ್ತಿ(1992), 1994ರಲ್ಲಿ ಭಾರತದ ಅತ್ಯುತ್ತಮ ಸಂಸದೀಯ ಪಟು ಎಂಬ ಪುರಸ್ಕಾರ ಲಭಿಸಿವೆ. ರಾಜಕೀಯ ಜೀವನ 1951ರ ಅನಂತರ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಡಾ. ಶ್ಯಾಮಪ್ರಸಾದ ಮುಖರ್ಜಿಯವರ ನಿಕಟವರ್ತಿ-ಆಪ್ತ ಕಾರ್ಯದರ್ಶಿ. ಜನಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖಪಾತ್ರ ವಹಿಸಿದರು(1951). ಅನಂತರ ಸಂಸತ್ತಿನ ಸದಸ್ಯರಾದರು (1951). ಜನಸಂಘ ಪಾರ್ಲಿಮೆಂಟರಿ ಪಕ್ಷದ ನಾಯಕರಾಗಿ (1955-77) ಕಾರ್ಯ ನಿರ್ವಹಿಸಿದರು. ಇವರು 5-7 ಮತ್ತು 10-13 ಲೋಕಸಭಾ ಅವಧಿಯಲ್ಲಿ ಸಂಸತ್ ಸದಸ್ಯರಾಗಿದ್ದರು. ಲೋಕಸಭೆಗೆ 1957ರಲ್ಲಿ ಮೊದಲು ಆಯ್ಕೆಯಾದರು. 1977ರಲ್ಲಿ ಜನತಾ ಪಕ್ಷ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು. ಇವರು ರಾಜ್ಯಸಭಾ ಸದಸ್ಯರಾಗಿಯೂ (1962, 86 ಮತ್ತು 88) ಕಾರ್ಯ ನಿರ್ವಹಿಸಿದ್ದಾರೆ. ಲಖನೌದಿಂದ ಸತತವಾಗಿ ಐದು ಬಾರಿ ಸಂಸತ್ತಿಗೆ ಚುನಾಯಿತರಾದುದು ಇವರ ಹೆಗ್ಗಳಿಕೆ. ಸಂಸತ್ತಿನ ಇತಿಹಾಸದಲ್ಲಿ ವಿವಿಧ ರಾಜ್ಯಗಳಿಂದ ಅನೇಕ ಬಾರಿ ಚುನಾಯಿತರಾದ ಸದಸ್ಯರೂ ಇವರೆಂಬ ಹೆಗ್ಗಳಿಕೆ ಇದೆ (ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಹಾಗೂ ದೆಹಲಿ). ಎರಡು ಬಾರಿ ರಾಜ್ಯಸಭಾ ಸದಸ್ಯರೂ ಆಗಿದ್ದರು. ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಇವರು ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. 1968 ಹಾಗೂ 1973ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು. ಇವರು ಜನತಾ ಪಕ್ಷದ ಸ್ಥಾಪಕ ಸದಸ್ಯರೂ ಆಗಿದ್ದರು(1977-80). ಭಾರತೀಯ ಜನತಾ ಪಕ್ಷ ಹಾಗೂ ಈ ಪಕ್ಷದ ಸಂಸದೀಯ ನಾಯಕರೂ ಆಗಿದ್ದರು. ನಾಲ್ಕು ದಶಕಗಳ ಕಾಲ ನಿರಂತರ ಸಂಸತ್ ಸದಸ್ಯರಾಗಿದ್ದ ಇವರು ಅಪಾರ ಅನುಭವ ಗಳಿಸಿದ್ದಾರೆ. ಹನ್ನೊಂದನೆಯ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮೊರಾರ್ಜಿದೇಸಾಯಿಯವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಖ್ಯಾತಿಗಳಿಸಿದರು(1977-79). ಚೀನದೊಡನೆ ಮುರಿದು ಹೋಗಿದ್ದ ರಾಜತಾಂತ್ರಿಕ ಸಂಪರ್ಕವೇರ್ಪಡಿಸಿದ್ದು ಇವರ ಸಾಧನೆ. ಶ್ರೀ ವಾಜಪೇಯಿ ಯವರು ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ 1977 ರಿಂದ ಜುಲೈ 1979 ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1980ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್‌.ಎಸ್‌.ಎಸ್‌ ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ. ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು 1980ರಿಂದ 1984 ರವರೆಗೆ ಹಾಗೂ 1986 ರಿಂದ 1993 ಮತ್ತು 1996ರಲ್ಲಿ ಕಾರ್ಯ ನಿರ್ವಹಿಸಿದರು. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು. ೨೦೧೫ರ ಇಂಡಿಯಾ ಟುಡೇ ಪತ್ರಿಕೆಯ ಸರ್ವೆಯ ಅನ್ವಯ ವಾಜಪೇಯಿ ಭಾರತದ ೨ ಜನಪ್ರಿಯ ಪ್ರಧಾನಮಂತ್ರಿ.https://www.indiatoday.in/india/photo/mood-of-the-nation-poll-the-best-pm-of-india-modi-and-atal-374941-2015-04-02 ಪ್ರಧಾನಮಂತ್ರಿಯಾಗಿ ಮೊದಲ ಕಾರ್ಯಾವಧಿ 1996ರಲ್ಲಿ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬಿ ಜೆ ಪಿ ಹೆಚ್ಚು ಮತಗಳನ್ನು ಪಡೆದ ಏಕ ಪಕ್ಷವಾಗಿ ಹೊರ ಹೊಮ್ಮಿತು. 519 ಸೀಟುಗಳ ಪೈಕಿ ಬಿ ಜೆ ಪಿ 187 ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ 140 ಹಾಗು ಬಿ ಜೆ ಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ 192 ಸೀಟುಗಳನ್ನು ಗೆದ್ದುಕೊಂಡಿತು. ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿ ಜೆ ಪಿ ಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನವಿತ್ತರು. ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿ ಜೆ ಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿ ಜೆ ಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಆದರೆ ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು. ಕಾಂಗ್ರೆಸ್ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್ H.D.ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು. ಪ್ರಧಾನಮಂತ್ರಿಯಾಗಿ ಎರಡನೇ ಕಾರ್ಯಾವಧಿ 1998 ರಲ್ಲಿ ಚುನಾವಣೆಗಳು ನಡೆದಾಗ ಮತ್ತೆ ಬಿ ಜೆ ಪಿ ಯೇ ಮಿಕ್ಕ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿತಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನ ಮನಸ್ಕ ಪಕ್ಷಗಳ ಒಡಗೂಡಿ ಎನ್ ಡಿ ಎ ಮೈತ್ರಿ ಕೂಟ ರಚಿಸಿತು.ಮೈತ್ರಿ ಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ 10 ಮಾರ್ಚ್ 1998 ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಾಯಿತು. ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು. ಎನ್ ಡಿ ಎ ಮೈತ್ರಿ ಕೂಟದಲ್ಲಿದ್ದ ಒಂದು ಮುಖ್ಯ ಪಕ್ಷ ತಮಿಳುನಾಡಿನ ಎ ಐ ಎ ಡಿ ಎಂ ಕೆ. 1999 ರಲ್ಲಿ ಬಿ ಜೆ ಪಿ ಪಕ್ಷವು ಜಯಲಲಿತಾ ಕೆಲವು ಭ್ರಷ್ಟಾಚಾರ ಸಂಬಂಧಿ ದೂರುಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳಲು ಹವಣಿಸಿರುವ ಬಗ್ಗೆ ಗಂಭೀರ ಆರೋಪ ಮಾಡಿತು. ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಪತನವಾಗುವಂತಹ ಯಾವ ಒಪ್ಪಂದಗಳಿಗೂ ಅವಕಾಶವಿಲ್ಲ ಎಂದಿತು. ಕೂಡಲೇ ಜಯಲಿತಾ ಸರ್ಕಾರಕ್ಕೆ ಕೊಟ್ಟಿದ್ದ ತಮ್ಮ ಬೆಂಬಲವನ್ನು ಹಿಂಪಡೆದರು. ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳ ಸಂಖ್ಯೆಯನ್ನು ವಾಜಪೇಯಿ ಸರ್ಕಾರ ಹೊಂದಿಲ್ಲದ ಕಾರಣ ವಿಶ್ವಾಸ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ನಿರ್ಧರಿಸಲಾಯಿತು. ಆದರೆ ವಿಶ್ವಾಸ ಮತಗಳಲ್ಲಿಯೂ ಅವಶ್ಯ ಸಂಖ್ಯೆಯನ್ನು ತಲುಪಲು ಸಾಧ್ಯವಾಗದ ಕಾರಣ ವಾಜಪೇಯಿ ಸರ್ಕಾರ ಪತನವಾಯಿತು. ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚಿಸಲು ಸಾಧ್ಯವಾದ ಪಕ್ಷದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡಲು ಸೂಚಿಸಿದರು, ಆದರೆ ಕಾಂಗ್ರೆಸ್ ಪಕ್ಷವು ಬಹುಮತಗಳ ಕೊರತೆಯಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಿತು. ಯಾವ ಪಕ್ಷಗಳಿಗೂ ಬಹುಮತವಾಗದ ಕಾರಣ ಹನ್ನೆರಡನೆ ಲೋಕಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದರು. ಹಾಗೂ ಮುಂದಿನ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾಗುವ ವರೆವಿಗೂ ವಾಜಪೇಯಿ ಕಾರ್ಯ ನಿರ್ವಾಹಕ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು. ಅಣ್ವಸ್ತ್ರ ಪರೀಕ್ಷೆ (ಫೋಖ್ರಾನ್ -II) ಮೇ 1998 ರಲ್ಲಿ ಭಾರತ ತನ್ನ ಸೇನಾ ಬಲವನ್ನು ಎಲ್ಲ ವಿಧದಿಂದಲೂ ಹೆಚ್ಚಿಸಿಕೊಳ್ಳಲು ತೀರ್ಮಾನಿಸಿ ಆಪರೇಷನ್ ಶಕ್ತಿ ಹೆಸರಿನ ಅಣು ಬಾಂಬ್ ಪರೀಕ್ಷೆ ನಡೆಸಿತು. 1974 ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಭಾರತವು ಮೊದಲ ಬಾರಿಗೆ ಅಣು ಸ್ಫೋಟವನ್ನು ಪರೀಕ್ಷಾರ್ಥವಾಗಿ ನಡೆಸಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತ್ತು. 1999 ರಲ್ಲಿ ವಾಜಪೇಯಿ ಪ್ರಧಾನಿ ಯಾದ ಕೇವಲ ಎರಡೇ ತಿಂಗಳಲ್ಲಿ ರಾಜಸ್ತಾನದ ಫೋಖ್ರಾನ್ ಎಂಬಲ್ಲಿ ಸುಧಾರಿತ ಅಣ್ವಸ್ತ್ರಗಳನ್ನು ಪರೀಕ್ಷಿಸಲು ಉತ್ಸುಕರಾಗಿದ್ದ ವಿಜ್ಞಾನಿಗಳಿಗೆ ವಾಜಪೇಯಿಯವರಿಂದ ಹಸಿರು ನಿಶಾನೆ ದೊರೆಯಿತು. ಆದರೆ ನಿಜವಾಗಿ ಸಾಧಿಸಿ ತೋರಿಸುವುದು ಬಹಳ ಕಷ್ಟಕರವಾಗಿತ್ತು. ದೇಶದ ತುಂಬಾ ಹರಡಿಕೊಂಡಿದ್ದ ಪಾಕಿಸ್ತಾನಿ ಬೇಹುಗಾರಿಕೆ ವ್ಯಕ್ತಿಗಳು ಹಾಗೂ ಅಮೇರಿಕಾ ಗುಪ್ತಚರ ಇಲಾಖೆಯ (ಸಿ ಐ ಎ) ಏಜೆಂಟ್ ಗಳು ವಿಷಯ ಸೋರಿಕೆ ಮಾಡುವ ಆತಂಕವಿದ್ದೇ ಇತ್ತು. 1974 ರ ನಂತರದ ದಿನಗಳಲ್ಲಿ ಕೆಲವಾರು ಬಾರಿ ಭಾರತದ ಅಣ್ವಸ್ತ್ರ ಪರೀಕ್ಷೆಗೆ ಅಮೇರಿಕಾ ಗುಪ್ತಚರ ಇಲಾಖೆಯ ಏಜೆಂಟ್ ಗಳು ಸುದ್ದಿ ಸೋರಿಕೆ ಮಾಡಿ ತಣ್ಣೀರೆರಚಿದ್ದರು. ಈ ಬಾರಿ ಪರೀಕ್ಷೆಯನ್ನು ಇವರಾರಿಗೂ ತಿಳಿಯದಂತೆ ನಡೆಸಬೇಕಾಗಿತ್ತು. ಗುಪ್ತಚರ ಇಲಾಖೆಯ ಏಜೆಂಟ್ ಗಳಷ್ಟೇ ಅಲ್ಲದೆ ಅಮೇರಿಕಾ ದೇಶದ ಉಪಗ್ರಹವೊಂದು ಭಾರತದ ಅಂತರಾಷ್ಟ್ರೀಯ ಗಡಿಗಳ ಮೇಲೆ ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೆ ಸದಾ ಕಣ್ಗಾವಲಿಟ್ಟಿತ್ತು. ಆ ಉಪಗ್ರಹ ಎಷ್ಟು ಕರಾರುವಕ್ಕಾಗಿತ್ತು ಎಂದರೆ ಭಾರತದ ಗಡಿಯಲ್ಲಿ ನಿಂತಿರುವ ಯೋಧನೊಬ್ಬನ ಕೈಗೆ ಕಟ್ಟಿದ ಗಡಿಯಾರದ ಫೋಟೋ ತೆಗೆದು ಅದರಲ್ಲಿ ಸಮಯವೆಷ್ಟು ಎಂದು ಹೇಳಬಹುದಿತ್ತಂತೆ. ಇಂತಹ ಬಿಗಿಯಾದ ಹದ್ದಿನ ಕಣ್ಣು ಇರಿಸಿರುವ ಸಮಯದಲ್ಲಿ ಅಣು ಬಾಂಬ್ ಪರೀಕ್ಷೆ ನಡೆಸುವುದು ದೊಡ್ಡ ಸಾಹಸವೇ ಆಯಿತು. ಅಣು ಪರೀಕ್ಷೆ ನಡೆಸಬೇಕಾಗಿದ್ದ ಜಾಗದಲ್ಲಿ "ನೀರಾವರಿ ಕಾಮಗಾರಿ ನಡೆಯುತ್ತಿದೆ" ಎಂದು ಬೋರ್ಡು ಹಾಕಲಾಗಿತ್ತಂತೆ. ವಿಜ್ಞಾನಿಗಳಿಗೆ ಹಾಗೂ ಭೂಮಿಯನ್ನು ಅಗೆಯುತ್ತಿದ್ದ ಭಾರತೀಯ ಸೈನಿಕರಿಗೆ ಸಾರ್ವಜನಿಕ ಇಲಾಖೆಯ ಕಾಮಗಾರಿ ಕಾರ್ಮಿಕರಿಗೆ ಕೊಡಲಾಗುವಂತಹ ಮಾದರಿಯ ಬಟ್ಟೆ ಕೊಡಲಾಗಿತ್ತಂತೆ. ಇನ್ನು ಯಾವ ಕಾರಣಕ್ಕೂ ಯಾರಿಗೂ ಅನುಮಾನ ಬರದಿರುವಂತೆ ನೋಡಿಕೊಳ್ಳಲು ಸ್ಫೋಟಕ್ಕೆ ಸಂಬಂಧಿಸಿದ ಕಾರ್ಯವೆಲ್ಲವೂ ಬರೀ ರಾತ್ರಿ ವೇಳೆ ನಡೆಯುತ್ತಿತ್ತಂತೆ. ಅಣು ಬಾಂಬ್ ಸ್ಫೋಟವಾದ ವಿಷಯ ತಿಳಿದಿದ್ದು ಖುದ್ದು ವಾಜಪೇಯಿಯವರು ಪ್ರಧಾನಮಂತ್ರಿ ಗೃಹದಲ್ಲಿ ಪತ್ರಕರ್ತರ ಸಭೆ ಕರೆದು ಫೋಖ್ರಾನ್ ಬಾಂಬ್ ಸ್ಫೋಟದ ಬಗ್ಗೆ ಅಧೀಕೃತವಾಗಿ ಧೃಡಪಡಿಸಿದಾಗಲೇ. ಫೋಖ್ರಾನ್ ಸಮೀಪದಲ್ಲಿದ್ದ ಹಳ್ಳಿಯೊಂದರ ಜನಗಳನ್ನು ಬಾಂಬ್ ಸ್ಫೋಟಕ್ಕೂ ಕೆಲವು ಗಂಟೆಗಳ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿತ್ತಂತೆ. ಆದರೆ ಸ್ಥಳಾಂತರಗೊಂಡ ಜನರಿಗೂ ಕಾರಣವೇನು ಎನ್ನುವುದು ತಿಳಿದಿರಲಿಲ್ಲವಂತೆ. ಸ್ಫೋಟಾನಂತರ ರಷ್ಯಾ ಹಾಗೂ ಫ್ರಾನ್ಸ್ ದೇಶಗಳು ಭಾರತದ ಸೇನೆಯು ಸೇನಾ ಬಲ ಹೆಚ್ಚಿಸಿಕೊಳ್ಳುವ ಸಲುವಾಗಿ ಅಣ್ವಸ್ತ್ರ ಹೊಂದುವ ಹಾಗೂ ಅದರ ಶಕ್ತಿಯನ್ನು ಖಾತ್ರಿ ಪಡಿಸಿಕೊಂಡ ನಿಲುವನ್ನು ಸಮರ್ಥಿಸಿಕೊಂಡರೆ, ಅಮೇರಿಕಾ, ಕೆನಡಾ, ಜಪಾನ್, ಬ್ರಿಟನ್ ಹಾಗೂ ಯೂರೋಪ್ ಒಕ್ಕೂಟದ ದೇಶಗಳು ಭಾರತದ ನಿಲುವಿಗೆ ಹರಿಹಾಯ್ದವು. ಭಾರತದೊಂದಿಗೆ ಇನ್ನು ಮುಂದೆ ನವೀನ ತಂತ್ರಜ್ಞಾನದ ಮಾಹಿತಿಗಳನ್ನು ಹಾಗೂ ಯಾವುದೇ ರೀತಿಯ ಸಂಪನ್ಮೂಲಗಳನ್ನು ಹಂಚಿ ಕೊಳ್ಳದಂತೆ ತಮ್ಮ ತಮ್ಮಲ್ಲೇ ಒಪ್ಪಂದ ಮಾಡಿಕೊಂಡವು. ಭಾರತದ ಅಣ್ವಸ್ತ್ರ ಪರೀಕ್ಷೆಯ ವಿಷಯ ಅಂತರಾಷ್ಟ್ರೀಯ ವೇದಿಕೆಯಲ್ಲಿ ಬಾರೀ ಚರ್ಚೆಗೆ ಗ್ರಾಸವಾಯಿತು. ಹಲವಾರು ದೇಶಗಳು ಭಾರತದಲ್ಲಿ ಹೂಡಿದ ಬಂಡವಾಳವನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದವು. ಮತ್ತೆ ಕೆಲವು ರಾಷ್ಟ್ರಗಳು ಭಾರತಕ್ಕೆ ಯಾವ ಸಹಾಯಧನವನ್ನು ಕೊಡದಂತೆ ವಿಶ್ವಸಂಸ್ಥೆಯಲ್ಲಿ ದೂರಿ ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿಸಿದರು. ವಾಜಪೇಯಿ ನೇತೃತ್ವದಲ್ಲಿ ಇಂತಹ ಕ್ಲಿಷ್ಟ ಪರಿಸ್ತಿತಿಯನ್ನು ಬಗೆಹರಿಸಿಕೊಳ್ಳಲಾಯಿತು. ವಾಜಪೇಯಿ ಮೇಲೆ ಜನರಿಗಿದ್ದ ನಂಬಿಕೆ ಇಮ್ಮಡಿಯಾಗಲು ಇದೂ ಒಂದು ಕಾರಣವಾಯಿತು. ಆರ್ಥಿಕ ಸಂಕಷ್ಟಗಳಲ್ಲಿಯೂ ಯಶಸ್ವಿಯಾಗಿ ದೇಶ ಮುನ್ನಡೆಸಿದ್ದನ್ನು ಅಂತರಾಷ್ಟ್ರೀಯ ನಾಯಕರೂ ಕೊಂಡಾಡಿದರು, ಒಟ್ಟಿನಲ್ಲಿ ವಾಜಪೇಯಿಯವರ ರಾಜಕೀಯ ಚತುರತೆಯನ್ನು, ಇಚ್ಚಾ ಶಕ್ತಿಯನ್ನು, ಆಡಳಿತ ವೈಖರಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಫೋಖ್ರಾನ್ ಸ್ಫೋಟವೂ ಮುಖ್ಯ ಪಾತ್ರ ವಹಿಸಿತು. ಕಾರ್ಗಿಲ್ ಯುದ್ಧ ಜಮ್ಮು ಕಾಶ್ಮೀರ ರಾಜ್ಯದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಅಂತರಾಷ್ಟ್ರೀಯ ಗಡಿಯನ್ನು ಮೀರಿ ಕಾಶ್ಮೀರ ಕಣಿವೆಗಳ ಮುಖಾಂತರ ಒಳನುಸುಳುತ್ತಿರುವುದು 1999 ನೇ ಇಸವಿಯ ಆರಂಭದಲ್ಲಿ ಜನಸಾಮಾನ್ಯರಿಗೆ ಹಾಗೂ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಖಾತ್ರಿಯಾಗಿ ಅದೇ ಸುದ್ದಿ ಭಾರತೀಯರ ಕಣ್ಣು ಕೆಂಪಗಾಗಿಸಲು ಒಂದು ಕಾರಣವಾಯಿತು. ಬರಿಯ ಕಾರ್ಗಿಲ್ ಪ್ರದೇಶ ಮಾತ್ರವಲ್ಲದೆ ಮಾನವ ರಹಿತ ಚೆಕ್ ಪೋಸ್ಟ್ ಗಳ ಮುಖಾಂತರ ಸಿಯಾಚಿನ ಗಡಿವರೆವಿಗೂ ಒಳನುಸುಳುವಿಕೆ ಅವ್ಯಾಹತವಾಗಿ ನಡೆಯುತ್ತಿದ್ದುದು ಭಾರತಕ್ಕೆ ಸಹಿಸಲಸಾಧ್ಯವಾಯಿತು. ಅದೇ ಸಮಯಕ್ಕೆ ಪಾಕಿಸ್ತಾನಿ ನಾಯಕರ ಹೇಳಿಕೆಗಳು ಪಾಕಿಸ್ತಾನ ಯುದ್ಧಕ್ಕೆ ತಯಾರಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಅದಾಗಲೇ ರವಾನಿಸಿಯಾಗಿತ್ತು. ಕೇಂದ್ರ ಸರ್ಕಾರ ಜೂನ್ 1999 ರಲ್ಲಿ ಭಾರತೀಯ ಸೇನೆಗೆ ಒಳನುಸುಳುಕೋರರನ್ನು ಪ್ರತಿರೋಧಿಸಲು ಆಪರೇಷನ್ ವಿಜಯ್ ಹೆಸರಿನ ಯುದ್ಧ ಆರಂಭಿಸುವಂತೆ ಅಪ್ಪಣೆ ಕೊಟ್ಟಿತು. ಕಾಶ್ಮೀರ ಗಡಿಯಲ್ಲಿನ ತೀವ್ರ ಕಡಿಮೆ ತಾಪಮಾನ, ವಿರೋಧಿ ಬಣದಿಂದ ಮಳೆಯಂತೆ ಬಂದು ಸುರಿಯುತ್ತಿದ್ದ ಗ್ರೆನೇಡುಗಳು, ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿದ್ದು ಆಗಾಗ ಉಸಿರಾಡಲೂ ಕಷ್ಟವಾಗುವಂತಹ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಭಾರತೀಯ ಯೋಧರು ಪಾಕಿಸ್ತಾನಕ್ಕೆ ಎದಿರೇಟು ಕೊಡುವಲ್ಲಿ ಸಫಲರಾಗುತ್ತಿದ್ದರು. * ಮೂರು ತಿಂಗಳ ಪರ್ಯಂತ ನಡೆದ ಕಾರ್ಗಿಲ್ ಯುದ್ಧದಲ್ಲಿ ೫೨೭ ಜನ ಭಾರತೀಯ ಯೋಧರು ಹುತಾತ್ಮರಾದರು ಹಾಗೂ ಪಾಕಿಸ್ತಾನ ಬಣದಲ್ಲಿ ಸುಮಾರು ೬೦೦-೪೦೦೦ ಸೈನಿಕರು ಹತರಾಗಿರುವ ಬಗ್ಗೆ ಅಂದಾಜಿಸಲಾಗಿದೆ.https://economictimes.indiatimes.com/news/defence/all-you-need-to-know-about-kargil-war/kargil-vijay-diwas/slideshow/59772215.cms ಒಳನುಸುಳುಕೋರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಸಫಲವಾಗಿದ್ದರಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಯಿತು. ಇದರಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಆಗಷ್ಟೇ ತಾನೇ ಸಿದ್ಧಪದಿಸಿಕೊಂಡಿದ್ದ ಅಣು ಬಾಂಬ್ ಅನ್ನು ಭಾರತದ ಮೇಲೆ ಪ್ರಯೋಗಿಸುವ ಬಗ್ಗೆ ಮಾತುಗಳು ಕೇಳಿ ಬರಲಾರಂಭಿಸಿದವು. ವಿಷಯ ತಿಳಿದ ಆಗಿನ ಅಮೇರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಅಣು ಬಾಂಬ್ ಬಳಸಿ ಜಾಗತೀಕವಾಗಿ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಯುದ್ಧ ಸಂಬಂಧಿ ಪರಿಕರಗಳನ್ನೆಲ್ಲ ಪರದೇಶದಿಂದ ಅಮದು ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಯುದ್ಧದಲ್ಲಿ ಸೋತಿದ್ದು ಅಪಾರ ನಷ್ಟವಾಯಿತು. ಅಮೇರಿಕಾ ಹಾಗು ಚೀನಾ ತಾವು ಮಧ್ಯ ಪ್ರವೇಶಿಸುವುದಕ್ಕೆ ಹಿಂದೇಟು ಹಾಕಿದವು. ಇಷ್ಟೆಲ್ಲಾ ನಡೆಯುತ್ತಿದ್ದರೂ ಭಾರತದ ಕಡೆಯಿಂದ ಆಗುತ್ತಿದ್ದ ದಾಳಿ ಇನ್ನು ನಿಂತಿರಲಿಲ್ಲ, ಪಾಕಿಸ್ತಾನಿ ಸೈನಿಕರು ಬಂದ ದಾರಿಗೆ ಸುಂಕವಿಲ್ಲದಂತೆ ಅಂತರಾಷ್ಟ್ರೀಯ ಗಡಿ ದಾಟಿ ಹಿಂದೆ ಸರಿಯುವ ವರೆವಿಗೂ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಗೋಚರಿಸಲಿಲ್ಲ. ಕೂಡಲೇ ಪಾಕಿಸ್ತಾನದ ಸೇನಾ ಅಧ್ಯಕ್ಷ ಜನರಲ್ ಮುಷರಫ್ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ರಲ್ಲಿ ಪಾಕಿಸ್ತಾನಿ ಸೈನಿಕರನ್ನು ಹಿಂದಕ್ಕೆ ಕರೆಸಿ ಮೊದಲಿನಂತೆ ನಿಯಂತ್ರಣ ರೇಖೆಯಲ್ಲಿ ನಿಲ್ಲಿಸಲು ಮನವಿ ಮಾಡಿದರು. ಪಾಕಿಸ್ತಾನದಲ್ಲಿ ಸರ್ಕಾರಕ್ಕೂ ಹಾಗು ಸೇನೆಗೂ ತಮ್ಮ ರಾಷ್ಟ್ರೀಯ ಕಾರ್ಯ ನಿರ್ವಹಣೆಯ ವಿಚಾರದಲ್ಲಿ ವಿಧಿತ ಕಟ್ಟುಪಾಡುಗಳು ಇಲ್ಲದ ಕಾರಣ ಎರಡೂ ಬೇರೆ ಬೇರೆ ಯಾಗಿ ಕಾರ್ಯ ನಿರ್ವಹಿಸುವುದೇ ಹೆಚ್ಚು. ಇಲ್ಲೂ ಹಾಗೆ ನಡೆದು ನವಾಜ್ ಶರೀಫರು ಮಾಡಿದ ಆಜ್ಞೆಯನ್ನು ಒಪ್ಪಲು ಯಾರೂ ತಯಾರಿರಲಿಲ್ಲ. ಆದರೆ ಅಷ್ಟರಲ್ಲಾಗಲೇ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಅರಿತುಕೊಂಡಿದ್ದ ಪಾಕಿಸ್ತಾನದ ಒಂದು ಸೇನಾ ತುಕಡಿ(ಏನ್ ಎಲ್ ಐ) ತಾನು ಯುದ್ಧ ಭೂಮಿಯಿಂದ ಹಿಂದೆ ಸರಿಯಿತು. ಕೊನೆಗೆ ಸೇನೆ ಹಿಂದೆ ಸರಿಯುವ ವಿಚಾರದಲ್ಲಿ ಪಾಕಿಸ್ತಾನಿ ಸೇನೆಯೊಳಗೆ ಭಿನ್ನಾಭಿಪ್ರಾಯ ಸ್ಫೋಟವಾಯಿತು. ಭಿನ್ನಾಭಿಪ್ರಾಯ ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ ಪಾಕಿಸ್ತಾನ ಸೇನೆ ಒಳಜಗಳಗಳಿಗೆ ಸಾಕ್ಷಿಯಾಯಿತು ಹಾಗು ಹಲವಾರು ಸಾವು ನೋವುಗಳನ್ನು ಕಂಡಿತು. ಎಲ್ಲದರ ಫಲವಾಗಿ ಪಾಕಿಸ್ತಾನದ ಸೈನಿಕರು ಯುದ್ಧದಲ್ಲಿ ಸಫಲರಾಗದೆ ಹಿಂದಿರುಗಿದರು, ಭಾರತ ವಿಜಯೋತ್ಸವ ಆಚರಿಸಿತು. ಈ ಯುದ್ಧ ಆಗಿನ ಪ್ರಧಾನ ಮಂತ್ರಿ ವಾಜಪೇಯಿ ಯವರ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಯಿತು. ದೇಶದಲ್ಲಿ ಅಸಂಖ್ಯಾತ ಜನಗಳು ವಾಜಪೇಯಿಯವರ ಧೈರ್ಯವಾಗಿ ತೀರ್ಮಾನ ತೆಗೆದುಕೊಳ್ಳುವ ಹಾಗು ಎಷ್ಟೇ ಕಷ್ಟವಾದರೂ ಅದಕ್ಕೆ ಬದ್ಧರಾಗಿ ಗೆಲ್ಲುವ ಛಾತಿಯನ್ನು ಮೆಚ್ಚಿಕೊಂಡರು ಹಾಗು ಅವರ ಅಭಿಮಾನಿಗಳು ಆದರು. ಕಾರ್ಗಿಲ್ ಯುದ್ಧ ಅಷ್ಟೊಂದು ಪ್ರಚಾರ ಪಡೆಯಲು ಇದ್ದ ಒಂದೇ ಒಂದುಕಾರಣವೆಂದರೆ ಅದು ಎರಡು ಅಣ್ವಸ್ತ್ರ ರಾಷ್ಟ್ರಗಳು ಮುಖಾಮುಖಿಯಾಗಿ ಯುದ್ಧ ಮಾಡುತ್ತಿರುವುದು. ದಕ್ಷಿಣ ಏಷಿಯಾದ ಈ ಎರಡೂ ಸಹೋದರ ರಾಷ್ಟ್ರಗಳೇ ಅಣ್ವಸ್ತ್ರಗಳಿಂದ ಬಡಿದಾಡಿ ಕೊಂಡರೆ ಜಗತ್ತಿಗೆ ಕೆಟ್ಟ ಅರ್ಥ ರವಾನೆಯಾಗುವುದಾಗಿ ಎಲ್ಲ ರಾಷ್ಟ್ರಗಳಿಗೂ ಆತಂಕ ಮನೆ ಮಾಡಿತ್ತು. ಆದರೆ ಅಂದಿನ ಭಾರತದ ಪ್ರಧಾನಿ ವಾಜಪೇಯಿ ಅಷ್ಟೇ ಸಮಾಧಾನದಿಂದ ಪರಿಸ್ಥಿತಿ ತಿಳಿಯಾಗಿಸಲು ಯತ್ನಿಸಿದರು . ಯುದ್ಧಕ್ಕಿಂತಲೂ ಮುಂಚೆ ಪಾಕಿಸ್ತಾನದೊಂದಿಗೆ ಶಾಂತಿ ಮಾತು ಕತೆ ನಡೆಸಿದ್ದರು. ಎರಡೂ ರಾಷ್ಟ್ರಗಳ ಶಾಂತಿಯ ಹಾಗೂ ಸ್ನೇಹದ ಧ್ಯೋತಕವಾಗಿ ಭಾರತದಿಂದ ಪಾಕಿಸ್ತಾನದ ಲಾಹೋರ್ ಗೆ ಬಸ್ ಸೇವೆಯನ್ನು ಆರಂಭಿಸಿದ್ದರು. ಯುದ್ಧ ಕಾಲದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವಂತೆ ಒತ್ತಡ ಸೃಷ್ಟಿಯಾದರೂ ತುರ್ತು ಪರಿಸ್ತಿತಿ ಘೋಷಿಸದೆ ಸೇನೆಯನ್ನು ಹುರಿದುಂಬಿಸಿದರು. ಯುದ್ಧ ಸಮಯದಲ್ಲಿ ಸೈನಿಕರಿಗೆ ಹಿಂದೆಂದಿಗಿಂತಲೂ ಹೆಚ್ಚು ಅಧಿಕಾರ ಕೊಟ್ಟರು. ಸಣ್ಣ ಪುಟ್ಟ ವಿಚಾರಗಳಿಗೂ ಮೇಲಧಿಕಾರಿಗಳ ಅಪ್ಪಣೆಗಾಗಿ ಅಲೆಯುತ್ತಿದ್ದ ಸೇನೆಯ ವಕ್ತಾರರಿಗೆ ಕೊಂಚ ಸಮಾಧಾನವೆನಿಸಿದ್ದೆ ಆಗ. ಇವೆಲ್ಲವುಗಳ ಮುಖಾಂತರ ವಾಜಪೇಯಿ ಶತ್ರು ಯಾರೇ ಆಗಿದ್ದರು ನಮ್ಮವರಲ್ಲಿ ಹುರುಪು ಮೂಡಿಸಿದರೆ ಯುದ್ಧವನ್ನು ಅರ್ಧ ಗೆದ್ದಂತೆ ಎಂಬ ಸ್ಪಷ್ಟ ಸಂದೇಶವನ್ನು ಸಾರಿದರು. ಈ ಎಲ್ಲ ಕಾರಣಗಳಿಂದಲೇ ವಾಜಪೇಯಿ ಜನ ಮಾನಸಗಳಲ್ಲಿ ನಿಂತರು. ಪ್ರಧಾನಮಂತ್ರಿಯಾಗಿ ಮೂರನೇ ಕಾರ್ಯಾವಧಿ ಕಾರ್ಗಿಲ್ ಯುದ್ಧ ನಡೆದ ಕೆಲವೇ ತಿಂಗಳುಗಳಲ್ಲಿ ನಡೆದ ಹದಿಮೂರನೇ ಲೋಕಸಭಾ ಚುನಾವಣೆಗಳು ನಡೆದು ಮತ್ತೆಯೂ ಬಿ ಜೆ ಪಿ ಪಕ್ಷ ಮುನ್ನಡೆ ಸಾಧಿಸಿತು. ಯುನೈಟೆಡ್ ಫ್ರಂಟ್ ಪಕ್ಷಗಳೂ ಕೂಡ ಮುನ್ನಡೆ ಸಾಧಿಸಿದವು.ಬಿ ಜೆ ಪಿ ನೇತೃತ್ವದ ಎನ್ ಡಿ ಎ 270 ಸೀಟುಗಳನ್ನು ಪಡೆಯಿತು, ಕಾಂಗ್ರೆಸ್ 156 ಸೀಟುಗಳಿಗೆ ತೃಪ್ತಿ ಪಟ್ಟುಕೊಂಡು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ಎನ್ ಡಿ ಎ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ಬಹುಮತ ಸಾಧಿಸಿತು.ಇದರ ಫಲವಾಗಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಅಕ್ಟೋಬರ್ 1999 ರಲ್ಲಿ ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು.ಸಂಪೂರ್ಣ ಐದು ವರ್ಷ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಸರಕಾರವೆಂಬ ಪಾತ್ರಕ್ಕೂ ವಾಜಪೇಯಿ ಸರ್ಕಾರ ಭಾಜನವಾಯಿತು. ಇಂಡಿಯನ್ ಏರ್ ಲೈನ್ಸ್ ಹೈಜಾಕ್ ಪ್ರಕರಣ ಡಿಸೆಂಬರ್ 1999 ರಲ್ಲಿ ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ನವದೆಹಲಿಗೆ ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನ ಅನ್ನು ತಾಲಿಬಾನಿ ಉಗ್ರರು ಪ್ರಯಾಣಿಕರ ಸಮೇತ ಅಪಹರಿಸುವ ಮೂಲಕ ರಾಷ್ಟ್ರೀಯ ಬಿಕ್ಕಟ್ಟಿಗೆ ನಾಂದಿ ಹಾಡಿದರು. ದೆಹಲಿಯಲ್ಲಿ ಇಳಿಯಬೇಕಾದ ವಿಮಾನವನ್ನು ತಾಲಿಬಾನ್ ಮುಷ್ಟಿಯಲ್ಲಿದ್ದ ಆಫ್ಘಾನಿಸ್ಥಾನಕ್ಕೆ ಕೊಂಡೊಯ್ದು ವಿಮಾನದ ಸಿಬ್ಬಂದಿ ಹಾಗು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡರು. ವಿಮಾನವನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಬೇಡಿಕೆಗಳನ್ನಿಟ್ಟರು. ಆಗ ಭಾರತ ಸರ್ಕಾರಕ್ಕೆ ಸಿಕ್ಕಿಬಿದ್ದು ಸೆರೆಯಾಗಿದ್ದ ಉಗ್ರ 'ಮೌಲಾನ ಮಸೂದ್ ಅಝರ್' ನ ಬಿಡುಗಡೆಯೂ ಸೇರಿ ಭಯೋತ್ಪಾದನೆಗೆ ಅನುಕೂಲವಾಗುವಂತಹ ಅನೇಕ ಬೇಡಿಕೆಗಳು ಈಡೇರುವ ವರೆವಿಗೂ ಪ್ರಯಾಣಿಕರ ಬಿಡುಗಡೆ ಸಾಧ್ಯವಿಲ್ಲವೆಂದು ವಾಜಪೇಯಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ದೇಶದಾದ್ಯಂತ ಆತಂಕ ಮನೆ ಮಾಡುವಂತೆ ಮಾಡಿದ್ದರು. ಉಗ್ರರ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಲ ಪ್ರಯೋಗ ಮಾಡುವ ಮೂಲಕ ಪ್ರಯಾಣಿಕರನ್ನು ಮರಳಿ ಪಡೆಯುವ ಮಾರ್ಗ ಸುಲಭವಾಗಿರಲಿಲ್ಲ ಹಾಗೂ ನೈಜತೆಗೆ ಹತ್ತಿರವೂ ಆಗಿರಲಿಲ್ಲ. ಈ ಕಾರಣದಿಂದ ಸರ್ಕಾರ ಉಗ್ರರ ಮಾತಿಗೆ ಮಣಿಯಲೇ ಬೇಕಾಯಿತು. ಆಗ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಜಸ್ವಂತ್ ಸಿಂಗ್ ಜವಾಬ್ದಾರಿ ಮೆರೆದು ಭಾರತದ ಜೈಲಿನಲ್ಲಿದ್ದ ತಾಲಿಬಾನಿ ಉಗ್ರ ಪ್ರಮುಖರನ್ನು ತಮ್ಮೊಂದಿಗೆ ಕರೆದುಕೊಂಡು ಆಫ್ಘಾನಿಸ್ತಾನಕ್ಕೆ ಹೋಗಿ ಭಾರತೀಯ ಪ್ರಯಾಣಿಕರನ್ನು ಹಾಗೂ ಉಗ್ರರನ್ನು ವಿನಿಮಯ ಮಾಡಿಕೊಂಡು ಭಾರತಕ್ಕೆ ಹಿಂದಿರುಗಿದರು. 2001ರ ಸಂಸತ್ ಭವನದ ಮೇಲಿನ ದಾಳಿ 2001ರ ಡಿಸೆಂಬರ್ 13 ರಂದು ಮುಖಮರೆಸಿಕೊಂಡ ಶಸ್ತ್ರಧಾರಿ ವ್ಯಕ್ತಿಗಳಿಂದ ಭಾರತದ ಆಡಳಿತ ಕೇಂದ್ರ ಸಂಸತ್ ಭವನದ ಮೇಲೆ ದಾಳಿ ನಡೆಯಿತು.ಕಾರುಗಳ ಮೇಲೆ ಕೇಂದ್ರ ಗೃಹ ಇಲಾಖೆ ಹಾಗು ಸಂಸತ್ ಸದಸ್ಯರು ಎಂಬ ಪಟ್ಟಿಗಳನ್ನು ಬಳಸಿಕೊಂಡು ಸಂಸತ್ ಭವನದ ಆವರಣ ಪ್ರವೇಶಿಸಿಸಿ ಹಠಾತ್ ಗುಂಡಿನ ದಾಳಿ ನಡೆಸಲು ಶುರು ಮಾಡಿದ ಉಗ್ರರು ಸಂಸತ್ ಭವನದ ಹಲವಾರು ಭದ್ರತಾ ಸಿಬ್ಬಂದಿಗಳನ್ನು ಆಹುತಿ ಪಡೆದರು. ದಾಳಿಗೂ ಮುನ್ನ ಕೇವಲ 40 ನಿಮಿಷಗಳ ಮುಂಚೆ ರಾಜ್ಯ ಸಭಾ ಹಾಗು ಲೋಕ ಸಭಾ ಅಧಿವೇಶನಗಳು ಮುಗಿದಿದ್ದವು.ಆದ್ದರಿಂದ ಬಹುತೇಕ ಸಂಸದರು, ಮಂತ್ರಿಗಳು ಹಾಗು ಅಧಿಕಾರಿ ವರ್ಗದವರು ಸಂಸತ್ ಭವನದಲ್ಲಿ ಇರಲಿಲ್ಲ. ಆದರೂ ಆಗಿನ ಗೃಹ ಮಂತ್ರಿಗಳಾಗಿದ್ದ ಎಲ್.ಕೆ ಅಡ್ವಾಣಿ ಹಾಗು ಕೇಂದ್ರದ ರಾಜ್ಯ ರಕ್ಷಣಾ ಸಚಿವ ಹರಿನ್ ಪಾಠಕ್ ಸಂಸತ್ ಭವನದ ಒಳಗೆ ಇದ್ದರು ಎಂಬ ವರದಿಗಳಿವೆ. 100 ಜನಕ್ಕೂ ಮಿಗಿಲಾಗಿ ರಾಜಕಾರಣಿಗಳು ಆ ಸಮಯದಲ್ಲಿ ಸಂಸತ್ ಒಳಗಿದ್ದರು. ಏಕಾಏಕಿ ದಾಳಿ ಮಾಡಿದ ಉಗ್ರರು ಎ ಕೆ 47, ಗ್ರೆನೇಡು ಉದಾಹಕಗಳು, ಗ್ರೆನೇಡುಗಳು ಹಾಗು ಪಿಸ್ತೂಲುಗಳನ್ನು ಹೊಂದಿದ್ದರು ಎಂಬ ವರದಿ ದೆಹಲಿ ಪೋಲಿಸ್ ರಿಂದ ಬಹಿರಂಗವಾಗಿದೆ. ಶೀಘ್ರ ತ್ವರೆ ಮಾಡಿದ ಭಾರತೀಯ ರಕ್ಷಣಾ ಪಡೆಗಳು ಸಂಸತ್ ಭವನದ ಪ್ರಮುಖ ದ್ವಾರಗಳನ್ನು ಬಂದ್ ಮಾಡಿಸಿ ಸತತ ಪ್ರಯತ್ನ ಪಟ್ಟು ಉಗ್ರರನ್ನು ಆಹುತಿ ಪಡೆದರು. ಮುಂದೆ ಹತರಾದ ಅಷ್ಟೂ ಉಗ್ರರರು ಪಾಕಿಸ್ತಾನಿ ಪ್ರಜೆಗಳು ಎಂಬುದು ಸಾಬೀತಾಯಿತು. ಅಮೇರಿಕಾದ ಮೇಲೆ ದಾಳಿ ನಡೆದು ಕೇವಲ ಮೂರು ತಿಂಗಳ ಒಳಗೆ ಭಾರತದ ಮುಖ್ಯ ಕಟ್ಟಡದ ಮೇಲೆ ನಡೆದ ಈ ದಾಳಿ ಇಡೀ ದೇಶವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿತು ಹಾಗೂ ಇತರ ದೇಶಗಳೂ ಭಯೋತ್ಪಾದನೆಯ ಹೆಸರು ಕೇಳಿ ಬೆಚ್ಚುವಂತೆ ಮಾಡಿತು. ಸುಮಾರು 5 ಲಕ್ಷ ಸೇನಾ ಸಿಬ್ಬಂದಿ ಪಂಜಾಬ್, ರಾಜಸ್ತಾನ, ಗುಜರಾತ್ ಹಾಗು ಜಮ್ಮು ಕಾಶ್ಮೀರ ಪ್ರಾಂತ್ಯಗಳ ಅಂತರಾಷ್ಟ್ರೀಯ ನಿಯಂತ್ರಣ ರೇಖೆಯಲ್ಲಿ ಕಾವಲಿಗೆ ನಿಂತರು. ಪಾಕಿಸ್ತಾನ ವು ಇದಕ್ಕೆ ಪ್ರತ್ಯುತ್ತರವೆಂಬಂತೆ ತನ್ನ ಸೈನಿಕರನ್ನು ಅಂತರಾಷ್ಟ್ರೀಯ ಗಡಿಯಲ್ಲಿ ತಂದು ನಿಲ್ಲಿಸಿತು. ಅದೇ ಸಮಯಕ್ಕೆ ಕಾಶ್ಮೀರದಲ್ಲಿ ಭಯೋತ್ಪಾದಕರು ಹಾಗು ಸೇನೆಯ ನಡುವೆ ಆಗಾಗ ಕದನಗಳು ಮರುಕಳಿಸುತ್ತಲೇ ಇದ್ದವು. ಭಯೋತ್ಪಾದನೆಯನ್ನು ಹತ್ತಿಕ್ಕುವ ಸಲುವಾಗಿ ವಾಜಪೇಯಿ ಆಡಳಿತ ಭಯೋತ್ಪಾದನಾ ನಿಷೇಧ ಕಾಯ್ದೆ ಯನ್ನು ಸಿದ್ಧಪಡಿಸಿ ಜಾರಿ ಮಾಡಿತು. ಯಾರನ್ನು ಬೇಕಾದರೂ ಭಯೋತ್ಪಾದಕರು ಎಂದು ಹಿಡಿದು ಶಿಕ್ಷಿಸುವ ಅವಕಾಶಗಳು ಆ ಕಾಯ್ದೆ ಯಲ್ಲಿ ಇರುವುದರಿಂದ ಈ ಕಾಯ್ದೆ ಜಾರಿಯಾಗ ಕೂಡದು ಎಂದು ಮಾನವ ಹಕ್ಕುಗಳ ಹೋರಾಟದ ಗುಂಪುಗಳು ವಿರೋಧ ತೋರಿದವು. ವಿಪಕ್ಷಗಳು ಕೂಡ ಈ ವಿಚಾರದಲ್ಲಿ ನಕಾರಾತ್ಮಕವಾಗಿ ಸ್ಪಂದಿಸಿದ್ದವು. ಇತರ ವಿಷಯಗಳು ವಾಜಪೇಯಿಯವರು ರಾಜಕಾರಣಿಯಲ್ಲದೆ ಕವಿಯೂ ಆಗಿದ್ದರು. ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇವರ ಇಪ್ಪತ್ತೊಂದು ಕವಿತೆಗಳ ಸಂಕಲನ Twenty-One Poems ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದಗೊಂಡಿದೆ. 2005 ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡರು ಅಟಲ್. ಅವರು ಬರೆದ ಪುಸ್ತಕಗಳು ಅನೇಕ. ತಮ್ಮ ಆಡಳಿತದ ಸಮಯದಲ್ಲಿ ಇಡೀ ವಿಶ್ವವೇ ತಬ್ಬಿಬ್ಬಾಗುವಂತೆ ಮಾಡಿದ ಪೋಖ್ರಾನ್ ಅಣು ಪರೀಕ್ಷೆ, ಭಾರತ ಪಾಕ್ ಬಾಂಧವ್ಯಕ್ಕೆ ಕೊಂಡಿಯಾಗಿ ಲಾಹೋರ್ ಬಸ್ ಪ್ರಯಾಣ ಆರಂಭ ತನ್ನ ಕನಸಿನ ಕೂಸಾದ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಚಾಲನೆ ನೀಡಿದರು. ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15 ಸಾವಿರ ಕಿ.ಮೀ. ಉದ್ದದ "ಸುವರ್ಣ ಚತುಷ್ಪಥ" ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಅಸಾಮಾನ್ಯವಾದುದು. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳಿಹಳ್ಳಿಗಳಿಗೂ ರಸ್ತೆಯನ್ನು ಒದಗಿಸಿದ್ದು, "ಸರ್ವ ಶಿಕ್ಷಾ ಅಭಿಯಾನ" ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿಯವರು ನಿಜಕ್ಕೂ ಒಬ್ಬ ದೂರದೃಷ್ಟಿ ಹೊಂದಿದ್ದ ನಾಯಕ. ಭಾರತದ ಹಿರಿಯ ಪ್ರಜೆ, ರಾಜಕಾರಣಿಗಳಲ್ಲೆ ಸಭ್ಯ ರಾಜಕಾರಣಿ ಮತ್ತು ಗೌರವಾನ್ವಿತ ಮುತ್ಸದ್ಧಿ ಎಂದು ತಮ್ಮ ರಾಜಕೀಯ ವಿರೋದಿಗಳಿಂದಲೇ ಕರೆಸಿಕೊಂಡವರು ಅಟಲ್ ಬಿಹಾರಿ ವಾಜಪೇಯಿ.ಯು ಪಿ ಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನ್ ಮೋಹನ್ ಸಿಂಗ್ ವಾಜಪೇಯಿಯವರನ್ನು 'ಭಾರತೀಯ ರಾಜಕೀಯ ರಂಗದ ಭೀಷ್ಮ ಪಿತಾಮಹ' ಎಂದು ವರ್ಣಿಸಿದ್ದಾರೆ. ವಾಜಪೇಯಿ ಯವರಲ್ಲಿ ಅತ್ಯಂತ ಗೌರವವಿರಿಸಿಕೊಂಡಿರುವ ಮನ್ ಮೋಹನ್ ಸಿಂಗ್ ವಾಜಪೇಯಿಯವರ ಪ್ರತೀ ಜನ್ಮ ದಿನದಂದು ವಯಕ್ತಿಕವಾಗಿ ಶುಬಾಶಯಗಳನ್ನೂ ತಿಳಿಸುತ್ತಾರೆ. 1977 ರಲ್ಲಿ ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ ಅವರು ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು. ಆ ಸಂದರ್ಭ ದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯರು ಅಟಲ್. ವಿಶೇಷವೆಂದರೆ ಅವರು ಭಾರತದ ಅವಿವಾಹಿತ ಪ್ರಧಾನ ಮಂತ್ರಿಯಾಗಿದ್ದರು.ವಿಶ್ವೇಶ್ವರ ಭಟ್, ವಾಜಪೇಯಿ ಅವರ ಜೀವನ ಚರಿತ್ರೆ "ಅಜಾತ ಶತ್ರು" ಎಂಬ 524 ಪುಟಗಳ ಪುಸ್ತಕ ಬರೆದಿದ್ದಾರೆ ರಾಜಕೀಯ ನಂತರ ಜೀವನ ಡಿಸೆಂಬರ್ 2005 ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ವಾಜಪೇಯಿ ಮುಂದಿನ ಯಾವ ಚುನಾವನೆಯಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು. ಬಿ ಜೆ ಪಿ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ "ನನ್ನ ನಂತರ ಲಾಲ್‍ಕೃಷ್ಣ ಅಡ್ವಾಣಿ ಹಾಗೂ ಪ್ರಮೋದ್ ಮಹಾಜನ್ ಬಿ.ಜೆ.ಪಿ ಗೆ ರಾಮ ಲಕ್ಷ್ಮಣರಂತೆ ಇರಲಿದ್ದಾರೆ" ಎಂದು ಹೇಳುವ ಮೂಲಕ ತಮ್ಮ ನಂತರ ಪಕ್ಷವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಸೂಚಿಸಿದ್ದರು. ಮುಂದೆ ಆರೋಗ್ಯ ಸಮಸ್ಯೆಯಿಂದ ಬಳಲಿದ ವಾಜಪೇಯಿ ದೆಹಲಿಯ ಉನ್ನತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿದ ಪರಿಣಾಮ 2009 ರ ಲೋಕಸಭಾ ಚುನಾವಣೆಯ ಯಾವ ಪ್ರಚಾರ ಕಾರ್ಯಗಳಲ್ಲಿಯೂ ಅವರು ಭಾಗಿಯಾಗಲಿಲ್ಲ. ಆರೋಗ್ಯ ಸಮಸ್ಯೆಗಳು ವಾಜಪೇಯಿ 2001 ನೇ ಇಸವಿಯಲ್ಲಿ ಮುಂಬೈನ ಹೆಸರಾಂತ ಆಸ್ಪತ್ರೆಯೊಂದರಲ್ಲಿ ಮಂಡಿ ಚಿಪ್ಪು ಬದಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2009 ರಲ್ಲಿ ಪಾರ್ಶ್ವ ವಾಯುವಿಗೆ ತುತ್ತಾದ ವಾಜಪೇಯಿ ಸ್ಪಷ್ಟವಾಗಿ ಮಾತನಾಡುವ ಶಕ್ತಿ ಕಳೆದುಕೊಂಡರು. ಸದ್ಯಕ್ಕೆ ವ್ಹೀಲ್ ಚೇರ್ ಮಾತ್ರ ಬಳಸುವ ವಾಜಪೇಯಿ ಜನರನ್ನು ಗುರುತಿಸಲಾರರು ಎಂಬ ವಿಷಯಗಳು ಹರಿದಾಡುತ್ತಿವೆ. ದೀರ್ಘ ಕಾಲೀನ ಸಕ್ಕರೆ ಖಾಯಿಲೆಯಿಂದಲೂ ಬಳಲುತ್ತಿದ್ದು ಇತ್ತೀಚಿಗೆ ಯಾವ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವುದಿಲ್ಲ. ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲ, ದೆಹಲಿಯ ಎ ಐ ಐ ಎಂ ಎಸ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯಲು ಮಾತ್ರವೇ ಮನೆಯಿಂದ ಹೊರಗೆ ಬರುವಷ್ಟು ಅವರ ಆರೋಗ್ಯ ಸ್ಥಿತಿ ವಿಷಮಿಸಿದೆ. ವಾಜಪೇಯಿ ನಡೆದು ಬಂದ ಹಾದಿ ೧೯೫೧ - ಭಾರತೀಯ ಜನ ಸಂಘ ಪಕ್ಷದ ಸಂಸ್ಥಾಪನೆ ೧೯೫೭ - ಎರಡನೇ ಲೋಕಸಭೆಗೆ ಚುನಾಯಿತರಾಗಿದ್ದು ೧೯೫೭-೭೭ - ಸಂಸತ್ ನಲ್ಲಿ ಭಾರತೀಯ ಜನಸಂಘ ಪಕ್ಷದ ಅಧ್ಯಕ್ಷ ೧೯೬೨ - ರಾಜ್ಯ ಸಭೆಯ ಸದಸ್ಯ ೧೯೬೬-೬೭ - ಸರ್ಕಾರಿ ಖಾತ್ರಿ ಸಮಿತಿಯ ಅಧ್ಯಕ್ಷ ೧೯೬೭ - ನಾಲ್ಕನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು ೧೯೬೭-೭೦ - ಸಾರ್ವಜನಿಕ ಖಾತೆ ಸಮಿತಿಗೆ ಅಧ್ಯಕ್ಷ ೧೯೬೮-೭೩ - ಭಾರತೀಯ ಜನಸಂಘ ಪಕ್ಷದ ಅಧ್ಯಕ್ಷರಾಗಿ ೧೯೭೧ - ಐದನೇ ಲೋಕಸಭೆಗೆ ಮರುಚುನಾಯಿತರಾಗಿದ್ದು ೧೯೭೭ - ಆರನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು ೧೯೭೭-೭೯ - ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ ೧೯೭೭-೮೦ - ಜನತಾ ಪಕ್ಷದ ಸಂಸ್ಥಾಪಕ ಸದಸ್ಯ ೧೯೮೦-೮೪ ಏಳನೇ ಲೋಕಸಭೆಗೆ ಮರುಚುನಾಯಿತರಾಗಿದ್ದು ೧೯೮೦-೮೬ - ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ೧೯೮೦-೮೪, ೧೯೮೬ ಹಾಗು ೧೯೯೩-೯೬ - ಸಂಸತ್ ನಲ್ಲಿ ಬಿ ಜೆ ಪಿ ನಾಯಕ ರಾಗಿ ೧೯೮೬ - ರಾಜ್ಯಸಭಾ ಸದಸ್ಯರಾಗಿ ೧೯೮೮-೯೦ - ಗೃಹ ಸಮಿತಿ ಸದಸ್ಯರಾಗಿ ಹಾಗು ವ್ಯಾಪಾರ ವ್ಯವಹಾರ ಸಲಹಾ ಸಮಿತಿಯ ಸದಸ್ಯರಾಗಿ ೧೯೯೧-೯೬ - ಹತ್ತನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು ೧೯೯೧-೯೩ - ಸಾರ್ವಜನಿಕ ಖಾತೆ ಸಮಿತಿಯ ಅಧ್ಯಕ್ಷ ೧೯೯೩-೯೬ - ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಹಾಗು ಲೋಕಸಭಾ ವಿರೋಧ ಪಕ್ಷದ ನಾಯಕ ೧೯೯೬-೯೮ ಹನ್ನೊಂದನೇ ಲೋಕಸಭೆಗೆ ಮರುಚುನಾಯಿತ ೧೬ ಮೇ ೧೯೯೬ - ೩೧ ಮೇ ೧೯೯೬ - ಭಾರತದ ಪ್ರಧಾನ ಮಂತ್ರಿಯಾಗಿ ೧೯೯೬-೯೮ - ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ೧೯೯೭-೯೮ - ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ೧೯೯೮-೯೯ ಹನ್ನೆರಡನೆ ಲೋಕಸಭೆಗೆ ಮರುಚುನಾಯಿತರಾಗಿದ್ದು ೧೯೯೮-೯೯ - ಭಾರತದ ಪ್ರಧಾನ ಮಂತ್ರಿ, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಹಾಗು ಹಂಚಿಕೆಯಾಗದೆ ಉಳಿಕೆಯಾದ ಖಾತೆಗಳ ಸಚಿವರು ೧೯೯೯-೨೦೦೪ - ಹದಿಮೂರನೇ ಲೋಕಸಭೆಗೆ ಮರುಚುನಾಯಿತರಾಗಿದ್ದು ೧೩ ಅಕ್ಟೋಬರ್ ೧೯೯೯ ರಿಂದ ೧೩ ಮೇ ೨೦೦೪ ರವರೆಗೆ - ಭಾರತದ ಪ್ರಧಾನ ಮಂತ್ರಿಗಳಾಗಿ ೨೦೦೪ - ಹದಿನಾಲ್ಕನೇ ಲೋಕಸಭೆಗೆ ಮರುಚುನಾಯಿತರಾಗಿದ್ದು ೨೦೦೫ - ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ ಸಾಮಾಜಿಕ ಮತ್ತು ರಾಜಕೀಯ ಸೇವೆ ರಾಷ್ಟ್ರೀಯ ಏಕೀಕರಣ (1961) ಓಪನ್ ಸೊಸೈಟಿಯ ಡೈನಮಿಕ್ಸ್ (1977) ನ್ಯೂ ಡೈಮೆನ್ಷನ್ಸ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ (1979) ಗಾಯಗಳನ್ನು ಗುಣಪಡಿಸುವುದು: ಅಸ್ಸಾಂ ದುರಂತದ ಬಗ್ಗೆ ವಾಜಪೇಯಿ ಅವರ ಮನವಿ (1983) ಕುಚಾ ಲೇಖ, ಕುಚಾ ಭಾಸಾನ (1996) ಸೆಕ್ಯುಲಾರಾವಾಡಾ: ಭಾರತೀಯ ಪರಿಕಾರಿಪಾಣ (ಡಾ. ರಾಜೇಂದ್ರ ಪ್ರಸಾದ ಸ್ಮರಣ ವಿಕಾರಿ ನಮಲಾ) (1996) ಬಿಂದು-ಬಿಂದು ವಿಕಾರ (1997) ರಾಜನೀತಿ ಕಿ ರಾಪಾಟಿಲಿ ರಾಹೆಮ್ (1997) ಸ್ಕ್ವೇರ್ ಒನ್ಗೆ ಹಿಂತಿರುಗಿ (1998) ನಿರ್ಣಾಯಕ ದಿನಗಳು (1999) ಸಕ್ತಿ ಸೇ ಸಂತಿ (1999) ವಿಕಾರ-ಬಿಂದು (ಹಿಂದಿ ಆವೃತ್ತಿ, 2000) ನಯಿ ಚುನೌಟಿ, ನಯಾ ಅವಸರಾ (ಹಿಂದಿ ಆವೃತ್ತಿ, 2002) ಏಷಿಯಾನ್ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದ (2003) ಭಾರತದ ದೃಷ್ಟಿಕೋನಗಳು ಪುಸ್ತಕಗಳು ರಾಷ್ಟ್ರೀಯ ಏಕೀಕರಣ (1961) ಓಪನ್ ಸೊಸೈಟಿಯ ಡೈನಮಿಕ್ಸ್ (1977) ಭಾರತದ ವಿದೇಶಾಂಗ ನೀತಿ: ಹೊಸ ಆಯಾಮಗಳು (1977) ಅಸ್ಸಾಂ ಸಮಸ್ಯೆ: ದಬ್ಬಾಳಿಕೆಯ ಯಾವುದೇ ಪರಿಹಾರ (1981) ಅಟಲ್ ಬಿಹಾರಿ ವಾಜ್ ಮೆಮ್ ಟೀನಾ ದಾಸಕ (1992) ಕುಚಾ ಲೇಖ, ಕುಚಾ ಭಾಸಾನ (1996) ಸೆಕ್ಯುಲಾರಾವಾಡಾ: ಭಾರತೀಯ ಪರಿಕಾರಿಪಾಣ (ಡಾ. ರಾಜೇಂದ್ರ ಪ್ರಸಾದ ಸ್ಮರಣ ವಿಕಾರಿ ನಮಲಾ) (1996) ರಾಜನೀತಿ ಕಿ ರಾಪಾಟಿಲಿ ರಾಹೆಮ್ (1997) ಸ್ಕ್ವೇರ್ ಒನ್ಗೆ ಹಿಂತಿರುಗಿ (1998) ನಿರ್ಣಾಯಕ ದಿನಗಳು (1999) ಸಕ್ತಿ ಸೇ ಸಂತಿ (1999) ಪ್ರಧಾನ್ ಮಂತ್ರಾಲಯ ಅಟಲ್ ಬಿಹಾರಿ ವಾಜಪೇಯಿ ಕೆ ಚುನೆ ಹ್ಯು ಭೇಷನ (2000) ವಾಜಪೇಯಿ ಮೌಲ್ಯಗಳು, ವಿಷನ್ & ವರ್ಸಸ್: ಇಂಡಿಯಾಸ್ ಮ್ಯಾನ್ ಆಫ್ ಡೆಸ್ಟಿನಿ (2001) ಏಷಿಯಾನ್ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದ (2003) ಭಾರತದ ದೃಷ್ಟಿಕೋನಗಳು ಕವನ ಮೇರಿ ಇಕಿವಾನಾ ಕವಿತೆಮ್ (1995) ಮೇರಿ ಇಕಿವಾನಾ ಕವಿತೆಮ್ (ಹಿಂದಿ ಆವೃತ್ತಿ, 1995)https://www.amazon.in/Meri-Ekyavan-Kavitayen-Bihari-Vaajpai/dp/8170162556 ನಾಯಿ ದೀಸಾ - ಜಗ್ಜಿತ್ ಸಿಂಗ್ ಅವರೊಂದಿಗೆ ಒಂದು ಆಲ್ಬಮ್ (1995) ಶ್ರೀತಾ ಕಬಿತಾ (1997) ಸಂವೇದನಾ - ಜಗ್ಜಿತ್ ಸಿಂಗ್ ಅವರೊಂದಿಗೆ ಒಂದು ಆಲ್ಬಮ್ (1995) ಕ್ಯಾ ಖೊಯಾ ಕ್ಯಾ ಪಾಯ: ಅಟಲ್ ಬಿಹಾರಿ ವಾಜಪೇಯಿ, ವಕ್ತಿತ್ತ್ವ ಔರ್ ಕವಿತೆಮ್ (ಹಿಂದಿ ಆವೃತ್ತಿ, 1999) ಇಪ್ಪತ್ತೊಂದು ಕವನಗಳು (2003)https://books.google.co.in/books/about/Twenty_one_Poems.html?id=ecFjAAAAMAAJ&source=kp_cover&redir_esc=y ಭಾಷಣಗಳು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಯ್ಕೆ ಮಾಡಿದ ಭಾಷಣಗಳು. (2000). ಅಧ್ಯಕ್ಷರ ವಿಳಾಸಗಳು, 1980-1986. (2000). ಅಧ್ಯಕ್ಷೀಯ ವಿಳಾಸ. (1986). ಅಧ್ಯಕ್ಷೀಯ ಭಾಷಣ: ಭಾರತೀಯ ಪ್ರತಿನಿಧಿ ಸಭೆ ಅಧಿವೇಶನ, ಭಾಗಲ್ಪುರ್ (ಬಿಹಾರ), 5 6 & 7 ಮೇ 1972. (1972). ಅಟಲ್ ಬಿಹಾರಿ ವಾಜಪೇಯಿ ಮತ್ತು ಪೋಖ್ರಾನ್ ಪ್ರಶಸ್ತಿ/ಗೌರವ/ ಸನ್ಮಾನಗಳು 1992 ರಲ್ಲಿ, ಪದ್ಮ ವಿಭೂಷಣ. 1994 ರಲ್ಲಿ, ಲೋಕಮಾನ್ಯ ತಿಲಕ್ ಪ್ರಶಸ್ತಿ. 1994 ರಲ್ಲಿ, ಉತ್ತಮ ರಾಜಕೀಯ ಪಟು ಗೌರವ. 1994 ರಲ್ಲಿ, ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿ. 2015 ರಲ್ಲಿ ಭಾರತ ರತ್ನ ಪ್ರಶಸ್ತಿ. 2015 ರಲ್ಲಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿ. ನಿಧನ ಮೂತ್ರಪಿಂಡ ಹಾಗು ಪಾರ್ಶ್ವ ವಾಯು ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿಯವರ ಆರೋಗ್ಯದಲ್ಲಿ ಕೆಲ ದಿನಗಳ ಹಿಂದೆ ಏರುಪೇರಾಗಿತ್ತು. ಮಧುಮೇಹ ಹಾಗು ರಕ್ತದೊತ್ತಡ ಸಮಸ್ಯೆಗಳಿಂದಾಗಿ ಅವರನ್ನು ಜೂನ್ ೧೧ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ೨೦೧೮ ಆಗಸ್ಟ್ ೧೬ ರ ಬೆಳಗ್ಗಿನಿಂದಲೇ ಚಿಕಿತ್ಸೆಗೆ ಸ್ಪಂದಿಸುವುದನ್ನು ಕ್ಷೀಣಿಸಿದ ವಾಜಪೇಯಿ ಸಾಯಂಕಾಲ ೫:೦೫ ರ ಸಮಯಕ್ಕೆ ನಿಧನರಾದರು. Atal Bihari Vajpayee Former P.M & BJP Patriarch Dies at 93, MSN News. 16th, Aug, 2018 ಉಲ್ಲೇಖಗಳು ಬಾಹ್ಯಸಂಪರ್ಕಗಳು Profile Govt. of India Profile at BBC News ಹೆಚ್ಚಿನ ಓದಿಗೆ ಅಟಲ್ ಬಿಹಾರಿ ಪಾಕ ಪ್ರವೀಣ ಅಟಲ್ ನೈಪಾಲ್ ಮತ್ತು ವಾಜಪೇಯಿ ವರ್ಗ:ಭಾರತದ ಗಣ್ಯರು ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:ಭಾರತದ ಪ್ರಮುಖ ರಾಜಕಾರಣಿಗಳು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ವರ್ಗ:ಭಾರತೀಯ ಜನತಾ ಪಕ್ಷ ವರ್ಗ:೧೯೨೪ ಜನನ ವರ್ಗ:೨೦೧೮ ನಿಧನ
ಇಂದ್ರಕುಮಾರ್ ಗುಜ್ರಾಲ್
https://kn.wikipedia.org/wiki/ಇಂದ್ರಕುಮಾರ್_ಗುಜ್ರಾಲ್
+ ಐ ಕೆ ಗುಜ್ರಾಲ್ ಐ ಕೆ ಗುಜ್ರಾಲ್ ಜನನ: ಡಿಸೆಂಬರ್ ೪, ೧೯೧೯ ಜನ್ಮಸ್ಥಳ ಝೇಲಮ್, ಪಂಜಾಬ್ ಭಾರತದ ಪ್ರಧಾನ ಮಂತ್ರಿ ರಾಜಕೀಯ ಪಕ್ಷ: ಜನತಾ ದಳ ಅವಧಿ ಆರಂಭ ಏಪ್ರಿಲ್ ೨೧, ೧೯೯೭ ಅವಧಿ ಅಂತ್ಯ: ಮಾರ್ಚ್ ೧೯, ೧೯೯೮ ಪೂರ್ವಾಧಿಕಾರಿ ಎಚ್ ಡಿ ದೇವೇಗೌಡ ಉತ್ತರಾಧಿಕಾರಿ ಅಟಲ್ ಬಿಹಾರಿ ವಾಜಪೇಯಿ (ಜನನ: ಡಿಸೆಂಬರ್ ೪, ೧೯೧೯-ಮರಣ: ನವೆಂಬರ್, ೩೦, ೨೦೧೨) ಇಂದ್ರ ಕುಮಾರ್ ಗುಜ್ರಾಲ್,ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು. ಹೆಚ್.ಡಿ.ದೇವೇಗೌಡರನಂತರ ರಾಜ್ಯಸಭೆಯಿಂದ ನೇಮಕಗೊಂಡ ಎರಡನೇ ಪ್ರಧಾನಿಯಾಗಿದ್ದಾರೆ. ಇಂದ್ರ ಕುಮಾರ್ ಗುಜ್ರಾಲ್ ಒಬ್ಬ ಬುದ್ಧಿಜೀವಿ, ಸಭ್ಯರಾಜಕಾರಣಿ, ಆದರ್ಶವಾದಿ, ಶಾಂತಿಪ್ರಿಯ, ತನ್ನದೇ ಆದ ರಾಜಕೀಯ ನೀತಿ ಹಾಗೂ ತಮ್ಮ ವಿಶಿಷ್ಠ ಛಾಪು ಇರುತ್ತಿತ್ತು. ಸೈದ್ಧಾಂತಿಕ ಹಾಗೂ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ತಮ್ಮ ಸ್ವಸಾಮರ್ಥ್ಯದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿ ಮೆರೆದರು. ಆಳವಾದ ಜ್ಞಾನ ಹೊಂದಿದ್ದರು. ೨ ಬಾರಿ ವಿದೇಶಾಂಗ ಸಚಿವರಾಗಿದ್ದರು. ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಸ್ನೇಹ ಸಂಬಂಧ ಸೌಹಾರ್ದಯುತವಾಗಿರಬೇಕೆನ್ನುವ ಸಿದ್ಧಾಂತ. ವಿದೇಶೀಯರೂ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಪರಿಶುದ್ಧವಾದ ರಾಜಕೀಯ ಜೀವನ ರಾಜಕೀಯ ಜೀವನ ಪರಿಶುದ್ಧವಾಗಿತ್ತು. ಶ್ರೀಮತಿ ಇಂದಿರಾಜಿಯವರ ಸಂಪುಟದಲ್ಲಿ ವಿವಿಧ ಖಾತೆಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಜನತಾದಳದ ನೇತೃತ್ವದ ಸಂಯುಕ್ತರಂಗ ವಹಿಸಿಕೊಂಡ ಸರ್ಕಾರದಲ್ಲೂ ಪ್ರಧಾನಿಯಾಗಿ ಶೋಭಿಸಿದರು. ಎಚ್.ಡಿ.ದೇವೇಗೌಡರಿಗೆ ನೀಡಲಾದ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಂಡಿತು. ಆಗ ಅಜಾತಶತೃವಿನಂತಿದ್ದ ಪ್ರಧಾನಿಯಾಗಿ ಚುನಾಯಿಸಲ್ಪಟ್ಟರು. ಇದ್ದದ್ದು ಕೇವಲ ೧೦ ತಿಂಗಳಾದರೂ ಪಕ್ಷಭೇದವಿಲ್ಲದೆ ಎಲ್ಲರೊಡನೆಯೂ ಸೌಹಾರ್ದಯುತವಾಗಿ ವ್ಯವಹರಿಸಿ ಜನರ ಹೃದಯವನ್ನು ಗೆಲ್ಲುವ ಶಕ್ತಿಯಿತ್ತು. ಜನನ, ವಿದ್ಯಾಭ್ಯಾಸ ಜನಿಸಿದ್ದು ಸನ್. ೧೯೧೯ ರ ಡಿಸೆಂಬರ್, ೪ ರಂದು, ಪಾಕೀಸ್ತಾನದ ಝೀಲಂ ನಲ್ಲಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಅವತಾರ್ ನಾರಾಯಣ್ ಹಾಗೂ ಪುಷ್ಪಾ ಗುಜ್ರಾಲರಿಗೆ. ಡಿಎವಿ ಕಾಲೇಜ್, ಹೈಲಿ ಕಾಲೆಜ್ ಆಫ್ ಕಾಮರ್ಸ್, ಮತ್ತು ಪ್ರಸಕ್ತ ಲಾಹೋರಿನಲ್ಲಿರುವ 'ಫೋರ್ ಮ್ಯಾನ್ ಕ್ರಿಶ್ಚಿಯನ್ ಕಾಲೇಜ್' ನಲ್ಲಿ ಕಲಿತ ಗುಜ್ರಾಲ್, ವಿದ್ಯಾರ್ಥಿಯಾದಾಗಲೇ ರಾಜಕಾರಣದಲ್ಲಿ ಭಾಗಿಯಾಗಿದ್ದರು. ಮುಂದೆ, 'ಕ್ವಿಟ್ ಇಂಡಿಯಾ ಚಳುವಳಿ'ಯಲ್ಲಿ ಧುಮಿಕಿ ೧೯೪೨ ರಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಅವರು ಭಾರತೀಯ ಕಮ್ಯುನಿಷ್ಟ್ ಪಕ್ಷದ ಸದಸ್ಯರಾದರು. ಅವರಿಗೆ ಇಬ್ಬರುಗಂಡುಮಕ್ಕಳು ಹಾಗೂ ಮೂವರು ಮೊಮ್ಮಕ್ಕಳಿದ್ದಾರೆ. ಅವರ ಪತ್ನಿ ೧೧ನೇ ಜುಲೈ ೨೦೧೧ರಂದು ಕಾಲವಾದರು. ತಮ್ಮ ಜೀವನದುದ್ದಕ್ಕೂ 'ಅಜಾತಶತೃ'ವೆಂದು ಹೆಸರಾದ ಅವರು, ಮೌಲ್ಯಾಧಾರಿತ ರಾಜಕೀಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಪ್ರಧಾನಮಂತ್ರಿಯ ಸ್ಥಾನದಲ್ಲಿದ್ದಾಗ ಒತ್ತಡದಲ್ಲೂ ಸಮಾಧಾನವಾಗಿರುವುದು ಹೇಗೆ ಎನ್ನುವ ಉದಾಹರಣೆಗೆ ಅವರು ಅನ್ವರ್ಥನಾಮರಾಗಿದ್ದರು. ಸಂಕಷ್ಟದ ಸಮಯದಲ್ಲಿ ಶಾಂತ ಮನಸ್ಸಿನಿಂದ ಇರುವ ಸ್ವಭಾವವನ್ನು ಬೆಳೆಸಿಕೊಂಡಿದ್ದರು. ತಾವು ನಂಬಿದ ಮೌಲ್ಯಗಳಲ್ಲಿ ಅಚಲ ನಿಷ್ಟೆಯಿಂದ ಇರುತ್ತಿದ್ದರು. ವಿಧ್ಯಾರ್ಥಿಯಾಗಿದ್ದಾಗಲೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಭೂಗತ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ದಶಕಗಳಕಾಲ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನೆರೆಹೊರೆಯ ರಾಷ್ಟ್ರಗಳ ಜೊತೆ ಸ್ನೇಹ ಬಾಂಧವ್ಯ ಇರಿಸಿಕೊಳ್ಳಲು ೫ ತತ್ವಗಳನ್ನು ರೂಪಿಸಿದ್ದರು. ಅವನ್ನು 'ಗುಜ್ರಾಲ್ ಡಾಕ್ಟ್ರಿನ್,' ಎಂದು ಕರೆಯುತ್ತಾರೆ. ರಾಷ್ಟ್ರದ ವಿಭಜನೆಯ ಸಮಯದಲ್ಲಿ ಪಾಕೀಸ್ತಾನದಿಂದ ವಲಸೆಬಂದ ಗುಜ್ರಾಲ್, ತಳಮಟ್ಟದ ರಾಜಕೀಯ ಕಾರ್ಯಕರ್ತರಾಗಿದ್ದರೂ ಅದೃಷ್ಟದ ಬಲದಿಂದ ಪ್ರಧಾನಿಯ ಪಟ್ಟವೇರಿದರು. ಐ.ಕೆ.ಗುಜ್ರಾಲ್ ರವರ ಶುದ್ಧ-ವ್ಯಕ್ತಿತ್ವ ಒಬ್ಬ ಪ್ರತಿಭಾನ್ವಿತ ವ್ಯಕ್ತಿ. ಅತ್ಯುತ್ತಮ ಓದುಗ, ಬರಹಗಾರ, ವಿದೇಶಾಂಗ ವ್ಯವಹಾರ ಖಾತೆಯ ಸಚಿವರಾಗಿ ಭಾರತವನ್ನು ವಿಶ್ವಮಟ್ಟದಲ್ಲಿ ಸಮರ್ಥವಾಗಿ ಗುರುತಿಸುವಂತೆ ನಡೆದುಕೊಂಡರು. ಅಪ್ಪಟ ದೇಶಪ್ರೇಮಿ, ಮಾಸ್ಕೋದಲ್ಲಿ ಪ್ರತ್ಯೇಕವಾದ ವಿದೇಶಾಂಗ ವ್ಯವಹಾರಗಳ ಸಚಿವರ ಅಗತ್ಯವಿರಲಿಲ್ಲ. ಗುಜ್ರಾಲ್ ನೆಹರೂ ತತ್ವಗಳ ಆಧಾರದಮೇಲೆ ಅಪಾರ ವಿಶ್ವಾಸ ಪ್ರೀತಿ ಇಟ್ಟುಕೊಂಡಿದ್ದರು. ಸಮ್ಮಿಶ್ರ ಸರ್ಕಾರವನ್ನು ನಿಭಾಯಿಸುವ ಕ್ಲಿಷ್ಟ ಘಟ್ಟದಲ್ಲೂ ಅವರು ಹಲವಾರು ಸಂಕೀರ್ಣ ವಿಚಾರಗಳನ್ನೂ ಬಹಳ ಯಶಸ್ವಿಯಾಗಿ ನಿಭಾಯಿಸಿದ್ದರು. ಗುಜ್ರಾಲ್ ತಮ್ಮ ಬಿಡುವಿನ ಸಮಯದಲ್ಲಿ ಉರ್ದು ಕವನಗಳನ್ನು ಸಹ ಬರೆಯುತ್ತಿದ್ದರು. ರಾಜಕೀಯ ಜೀವನ ೫೦ ರ ದಶಕದಲ್ಲಿ 'ಎನ್.ಡಿ.ಎಂಸಿಯ ಉಪಾಧ್ಯಕ್ಷರಾಗಿ ಅಧಿಕಾರ ಪರ್ವ' ಆರಂಭಿಸಿದರು. ೧೯೬೪ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರುವ ಪೂರ್ವದಲ್ಲಿ ಗುಜ್ರಾಲರು ೧೯೫೮ರಲ್ಲಿ ನವದೆಹಲಿಯ ಪೌರ ಸಮಿತಿಯ ಉಪಾಧ್ಯಕ್ಷರಾದರು. ಅವರು ೧೯೬೪ರಲ್ಲಿ ರಾಜ್ಯಸಭೆಯ ಸದಸ್ಯರಾದರು. ೧೯೭೫ರ ತುರ್ತು ಪರಿಸ್ಥಿತಿಯಲ್ಲಿ ಸೂಚನಾ ಮತ್ತು ಪ್ರಸಾರಣ ಮಂತ್ರಿಯಾಗಿದ್ದರು. ಆ ಸಮಯದಲ್ಲಿ ದೂರದರ್ಶನದ ಮೇಲ್ಚಿಚಾರಣೆಯನ್ನಲ್ಲದೇ, ಮಾಧ್ಯಮ ನಿಯಂತ್ರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ಜಲಸಂಪನ್ಮೂಲ ಖಾತೆಯನ್ನೂ ಕೂಡ ಸಂಭಾಳಿಸಿದ್ದಾರೆ. ನಂತರ ಇಂದಿರಾ ಗಾಂಧಿಯವರಿಂದ ಸೊವಿಯೆಟ್ ಒಕ್ಕೂಟದ ರಾಯಭಾರಿಯಾಗಿ ನೇಮಿಸಲ್ಪಟ್ಟು, ಮೊರಾರ್ಜಿ ದೇಸಾಯಿ ಹಾಗೂ ಚೌಧುರಿ ಚರಣ್ ಸಿಂಗ್‍ರ ಅಧಿಕಾರಾವಧಿಯಲ್ಲಿಯೂ ಕೂಡ ಮುಂದುವರೆದರು. ೧೯೮೦ ರಲ್ಲಿ ಕಾಂಗ್ರೆಸ್ ತೊರೆದು, ಜನತಾದಳಕ್ಕೆ ಸೇರಿದರು. ೧೯೮೯ ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ನ್ಯಾಷನಲ್ ಪ್ರಂಟ್ ಸರಕಾರದ ವಿದೇಶಾಂಗ ಸಚಿವರಾದರು. ಕುವೈಟ್ ನ್ನು ಇರಾಕ್ ಆಕ್ರಮಿಸಿದಾಗ, ಅತಂತ್ರ ಸ್ಥಿತಿಯಲ್ಲಿದ್ದ ಸಾವಿರಾರು ಭಾರತೀಯರ ಸಮಸ್ಯೆಗಳನ್ನು ಬಗೆಹರಿಸಿ ಮೆಚ್ಚುಗೆಗೆ ಪಾತ್ರರಾದರು. ದೇವೇಗೌಡರ ಯುನೈಟೆಡ್ ಫ್ರಂಟ್ ಸರಕಾರ ಸನ್ ೧೯೯೭ ರಲ್ಲಿ ಪತನವಾದಮೇಲೆ ಅಸ್ತಿತ್ವಕ್ಕೆ ಬಂದ ಸರಕಾರದಲ್ಲಿ 'ಗುಜ್ರಾಲರೇ ಪ್ರಧಾನಿ'. ಯುಎಫ್ ನಾಯಕ ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತಿತರ ನಡುವೆ ಗಂಭೀರ ಸ್ವರೂಪದ ಭಿನ್ನಾಭಿಪ್ರಾಯ ತಲೆದೋರಿದಾಗ, ಗುಜ್ರಾಲ್, ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿ ಪ್ರಧಾನಿ'ಯಾದ ಅದೃಷ್ಟವಂತರು. ಐ.ಜಿ.ಗುಜ್ರಾಲ್ ರವರ ರಾಜಕೀಯ ಜೀವನದ ಮೆಟ್ಟಿಲುಗಳು : ೧೯೬೪ ರಲ್ಲಿ ರಾಜ್ಯ ಸಭಾ ಸದಸ್ಯ ೧೯೬೬ ರಲ್ಲಿ ಇಂದಿರಾಜಿಯವರು ಪಟ್ಟಕ್ಕೇರಲು ಕಾರಣವಾದ ಕೂಟದಲ್ಲಿ ಗುರುತಿಸಿಕೊಂಡಿದ್ದರು. ತುರ್ತು ಪರಿಸ್ಥಿತಿ ಹೇರಿದಾಗಲೂ ವಾರ್ತಾ ಸಚಿವರಾಗಿದ್ದರು. ಪತ್ರಿಕೆಗಳನ್ನು ಸೆನ್ಸಾರ್ ಮಾಡಿದರು. ೧೯೬೪ ಹಾಗೂ ೧೯೭೬ ರ ನಡುವೆ, ೨ ಬಾರಿ, ರಾಜ್ಯಸಭಾ ಸದಸ್ಯ.. .೧೯೮೯ ರಿಂದ ೧೯೯೧ ರ ತನಕ ಲೋಕಸಭೆಯ ಸದಸ್ಯ. ಎರಡನೆಯ ಬಾರಿಗೆ ಪ್ರಧಾನಿ ಈ ಬಾರಿ ಪ್ರಧಾನಿಯಾಗಿ ಇದ್ದದ್ದು ೨ ತಂಗಳು ಮಾತ್ರ. ರಾಜೀವ್ ಗಾಂಧಿಯವರ ಹತ್ಯೆ ತನಿಖೆ ನಡೆಸಿದ ಜೈನ್ ಆಯೋಗದ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆಗೆದುಕೊಂಡಾಗ, ಗುಜ್ರಾಲ್ ಸರಕಾರ ಮತ್ತೊಮ್ಮೆ ಪತನಗೊಂಡಿತು. ನಿಧನ ವೃದ್ಧಾಪ್ಯ,, ಬಹುಅಂಗ ವೈಫಲ್ಯ,, ಹಾಗೂ ಗಂಭೀರ ಸ್ವರೂಪದ ಎದೆ ಸೋಂಕಿಗೆ ತುತ್ತಾದ ೯೨ ವರ್ಷ ಪ್ರಾಯದ ಇಂದ್ರಕುಮಾರ್ ಗುಜ್ರಾಲ್ ರವರು, ಸುಮಾರು ಒಂದು ವರ್ಷದಿಂದ 'ಡಯಾಲಿಸಿಸ್' ಗೆ ಒಳಪಡುತ್ತಿದ್ದರು. ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಅವರನ್ನು ನವೆಂಬರ್ ೧೯ ರಂದು ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಅವರು, ಗುರ್ಗಾವ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನವೆಂಬರ್, ೩೦, ಶುಕ್ರವಾರದಂದು, ಮದ್ಯಾನ್ಹ ೩-೨೭ ಕ್ಕೆ ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದರಿಂದ 'ಜೀವರಕ್ಷಕ ವ್ಯವಸ್ಥೆ'ಯನ್ನು ಒದಗಿಸಲಾಗಿತ್ತು. ಶ್ರೀ ಗುಜ್ರಾಲರು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 'ನರೇಂದ್ರ ಗುಜ್ರಾಲ್' ರಾಜ್ಯಸಭಾ ಸದಸ್ಯ., ಹಾಗೂ ಅಕಾಲಿ ದಳದ ನಾಯಕ. 'ಸತೀಶ್ ಗುಜ್ರಾಲ್,' ಸುಪ್ರಸಿದ್ಧ ಚಿತ್ರ ಕಲಾವಿದ, ಮತ್ತು 'ಆರ್ಕಿಟೆಕ್ಟ್ 'ಆಗಿದ್ದಾರೆ. ಗುಜ್ರಾಲ್ ಅವರ ಪತ್ನಿ ಶೀಲಾ ಗುಜ್ರಾಲ್ ಖ್ಯಾತ ಕವಯಿತ್ರಿ. ಪಂಜಾಬಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಶೀಲಾ, ಸನ್ ೨೦೧೧ ರಲ್ಲಿ ತೀರಿಕೊಂಡರು. ಇಂದ್ರ ಕುಮಾರ್ ಗುಜ್ರಾಲ್ ರವರ, ಅಂತ್ಯ ಕ್ರಿಯೆ, ನವ ದೆಹಲಿಯಲ್ಲಿ ಡಿಸೆಂಬರ್ ೧ ರಂದು, ಶನಿವಾರ ಮಧ್ಯಾನ್ಹ ೩.೩೦ ಕ್ಕೆ 'ಸ್ಮೃತಿ ಸ್ಥಲ್' ನಲ್ಲಿ ಜರುಗಿತು. ಗುಜ್ರಾಲ್ ರವರ ಮೃತದೇಹಕ್ಕೆ ಅಗ್ನಿಯನ್ನು ಇಬ್ಬರು ಮಕ್ಕಳೂ ಸೋಕಿಸಿದರು. ಶ್ರೀ ಗುಜ್ರಾಲ್ ರವರ ಅಗಲುವಿಕೆಯ ಶೋಕವನ್ನು ಅಚರಿಸಲು, ಕೇಂದ್ರ ಸರ್ಕಾರ, ೭ ದಿನಗಳ ಶೋಕವನ್ನು ಪ್ರಕಟಿಸಿದೆ. ಆತ್ಮಕಥನ I. K. Gujral: Matters of Discretion: An Autobiography, Hay House, India, 519 pages, Feb. 2011. ISBN 978-93-8048-080-0. Distributors: Penguin books, India. (ಭಾರತೀಯ ಪ್ರಧಾನಮಂತ್ರಿಯೊಬ್ಬರು ರಚಿಸಿದ ಆತ್ಮಕಥೆ) ವರ್ಗ:ರಾಜಕೀಯ ವರ್ಗ:ಭಾರತದ ಪ್ರಧಾನ ಮಂತ್ರಿಗಳು
ಮಾತಾ ಹರಿ
https://kn.wikipedia.org/wiki/ಮಾತಾ_ಹರಿ
thumb|ಮಾತಾ ಹರಿ ಮಾತಾ ಹರಿ (ಆಗಸ್ಟ್ ೭, ೧೮೭೬–ಅಕ್ಟೋಬರ್ ೧೫, ೧೯೧೭) Margaretha Geertruida Zelle (ಆಂಗ್ಲದಲ್ಲಿ ಮಾರ್ಗರೆಟ್ ಗೆರ್ಟ್ರುಡ್ ಝೆಲ್ಲೆ) ರವರ ನಾಮಾಂಕಿತವಾಗಿತ್ತು (ಅಡ್ಡಹೆಸರು, ಬಳಕೆಯ ಹೆಸರು). ಇವರು ಡಚ್ ನೃತ್ಯಗಾತಿ, ಮೊದಲನೇ ವಿಶ್ವ ಯುದ್ಧದ ಸಮಯದಲ್ಲಿ ಬೇಹುಗಾರಿಕೆ ನಡೆಸಿದ ಕಾರಣ ಆರೋಪಿಯೆಂದು ಪರಿಗಣಿಸಲ್ಪಟ್ಟು ಶಿಕ್ಶೆಗೆ ಗುರಿಯಾದರು. ಮಾತಾ ಹರಿ ಲೀಯುವಾರ್ಡನ್‌ನಲ್ಲಿ ಒಬ್ಬ ಡಚ್ ವ್ಯಾಪಾರಸ್ಥನಿಗೆ ಜನಿಸಿದವರು. ಇವರ ತಾಯಿ ಜಾವಾ ದ್ವೀಪದವರು. ೨೦ನೇ ಶತಮಾನದ ಕೊನೆಯಲ್ಲಿ - ಇವರು ಶಿಕ್ಷಕರಾಗ ಬಯಸಿ ಫಲಿಸದೇ ಹೋದದ್ದು, ಇವರ ವಿವಾಹ ಮುರಿದು ಬಿದ್ದದ್ದು (ಇವರಿಗೆ ಎರಡು ಮಕ್ಕಳಿದ್ದರು) ಇವರ ಜೀವನದಲ್ಲಿ ಘಟಿತ ಘಟನೆಗಳು. ಇದರ ತರುವಾಯ ಇವರು ಪ್ಯಾರಿಸ್‌ಗೆ ಬಂದರು. ಜಾವಾದಿಂದ ಬಂದ ರಾಣಿಯಂತೆ ಮೆರೆದು, ನೃತ್ಯಗಾತಿಯಾದರು. ಓರಿಯೆಂಟಲ್ ಶೈಲಿಯ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದರು. ಇವರ ರಂಗಮಂಚದ ಹೆಸರು (ನಾಮಾಂಕಿತ) - ಮಾತಾ ಹರಿ (ಮಲಯ್‌ನಲ್ಲಿ ಹಾಗೂ ಬಹಸಾದಲ್ಲಿ "ಸೂರ್ಯ" ಅಥವಾ "ಮುಂಜಾನೆಯ ಕಣ್ಣು" ಎಂಬರ್ಥ ಮೂಡುತ್ತದೆ). ಇವರು ನಾಯಕಸಾನಿಯೂ ಹೌದು (ಬಹುಶಃ ಹಲವು ಮಿಲಿಟರಿ ಅಧಿಕಾರಿಗಳೊಂದಿಗೆ, ರಾಜಕೀಯ ವ್ಯಕ್ತಿಗಳೊಂದಿಗೆ ವ್ಯವಹಾರಗಳಿದ್ದಿರಬಹುದು). ಮಿಸ್ ಝೆಲ್ಲೆ ಹಲವು ಫ್ರೆಂಚ್ ಹಾಗೂ ಜರ್ಮನ್ ಮಂಚಗಳನ್ನಲಂಕರಿಸಿ, ಅಂತರರಾಷ್ಟ್ರೀಯ ಕೂಟಕೃತ್ಯದಲ್ಲಿ ಕೈ ಗೊಂಬೆಯಾದರು. ಆದರೂ ಕೂಡ ಇತಿಹಾಸ ತಜ್ಞರಿಂದ ಇಂದಿಗೂ ಕೂಡ ಮಾತಾ ಹರಿಯ ಬೇಹುಗಾರಿಕಾ ಕೃತ್ಯಗಳ ನಿಜವಾದ ಸ್ವರೂಪದ ಬಗೆಗೆ ಸರಿಯಾದ ಸಮಜಾಯಿಶಿ ನೀಡಲಾಗಿಲ್ಲ. ೧೯೧೭ರಲ್ಲಿ ಇವರನ್ನು ಫ್ರಾನ್ಸ್‌ನಲ್ಲಿ ಕಟಕಟೆಯ ಮುಂದೆ ಹಾಜರುಪಡಿಸಲಾಯಿತು. ಇವರನ್ನ್ನು ಬೇಹುಗಾರಿಕೆ, ಎರಡು ಬದಿಯಲ್ಲೂ ಮಾಹಿತಿ ನೀಡುವಿಕೆ (ಜರ್ಮನಿ ಮತ್ತು ಫ್ರಾನ್ಸ್, ಎರಡಕ್ಕೂ ಮಾಹಿತಿ ರವಾನೆ) ಹಾಗೂ ವಿಶ್ವದ ಮೊದಲನೇ ಮಹಾ ಯುದ್ಧದಲ್ಲಿ ಸಾವಿರಾರು ಸಿಪಾಯಿಗಳ ಸಾವಿಗೆ ಕಾರಣರಾದ ಆರೋಪಕ್ಕೆ ಗುರಪಡಿಸಲಾಯಿತು. ಆರೋಪ ಧೃಡಪಟ್ಟು, ಇವರನ್ನು ಅಕ್ಟೋಬರ್ ೧೫, ೧೯೧೭ರಲ್ಲಿ ಗೋಲೀಬಾರಿಗೆ ಗುರಿಪಡಿಸಲಾಯಿತು. ಹೊರಗಿನ ಸಂಪರ್ಕಗಳು ಫೆಮ್‌ಬಯೋನ ಲೇಖನ Hari, Mata
ಆರ್ಯಭಟ (ಉಪಗ್ರಹ)
https://kn.wikipedia.org/wiki/ಆರ್ಯಭಟ_(ಉಪಗ್ರಹ)
thumb|ಆರ್ಯಭಟ ಉಪಗ್ರಹ ಆರ್ಯಭಟ ಭಾರತದ ಮೊಟ್ಟಮೊದಲ ಕೃತಕ ಉಪಗ್ರಹದ ಹೆಸರು. ಪ್ರಾಚೀನ ಭಾರತೀಯ ಗಣಿತಜ್ಞ ಆರ್ಯಭಟನ ಗೌರವಾರ್ಥವಾಗಿ ಈ ಹೆಸರನ್ನು ಇದಕ್ಕೆ ಇಡಲಾಯಿತು. ಇದನ್ನು ಭಾರತದ ಇಸ್ರೋ ಸಂಸ್ಥೆಯು ಬೆಂಗಳೂರಿನಲ್ಲಿರುವ ತನ್ನ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಿತು. ಈ ಉಪಗ್ರಹವು ತನ್ನ ಅಕ್ಷದಲ್ಲಿ ಗಿರಕಿ ಹೊಡೆದು ತನ್ನ ಸ್ಥಿರತೆಯನ್ನು ಕಾಯ್ದುಕೊಳ್ಳುವ ತೆರನಾಗಿತ್ತು. ಏಪ್ರಿಲ್ ೨೧, ೧೯೭೫ ರಲ್ಲಿ ರಷ್ಯದ ಸಹಾಯದಿ೦ದ ರಷ್ಯದ ಕಪುಟ್ಸಿನ್ ಯಾರ್ ಎ೦ಬ ಉಡ್ಡಯನ ಕೇ೦ದ್ರದಿ೦ದ ಈ ಉಪಗ್ರಹವನ್ನು ಕಕ್ಷೆಗೆ ಒಯ್ಯಲಾಯಿತು. ಉಪಗ್ರಹ ೨೬ ಮುಖಗಳನ್ನು ಹೊ೦ದಿದ್ದು, ಸುಮಾರು ೧.೪ ಮೀ ವ್ಯಾಸವನ್ನು ಹೊ೦ದಿತ್ತು. ೨೪ ಮುಖಗಳ ಮೇಲೆ ಸೌರಚಾಲಿತ ವಿದ್ಯುತ್ ಕೋಶಗಳನ್ನು (ಬ್ಯಾಟರಿಗಳನ್ನು) ಅಳವಡಿಸಲಾಗಿತ್ತು. ಆರ್ಯಭಟ ಉಪಗ್ರಹದ ಮುಖ್ಯ ಉದ್ದೇಶಗಳು ಹೀಗಿದ್ದವು: ಎಕ್ಸ್-ರೇ ಖಗೋಳಶಾಸ್ತ್ರದ ಅಧ್ಯಯನ ಸೌರಭೌತಶಾಸ್ತ್ರದ (solar physics) ಅಧ್ಯಯನ ಆದರೆ ಕಕ್ಷೆಯಲ್ಲಿ ಬಿಟ್ಟು ನಾಲ್ಕೇ ದಿನಗಳಲ್ಲಿ ಆರ್ಯಭಟ ಉಪಗ್ರಹದಲ್ಲಿ ವಿದ್ಯುಚ್ಛಕ್ತಿ ವೈಫಲ್ಯ ಉ೦ಟಾಗಿ ಐದನೇ ದಿನ ಭೂಮಿಯಿ೦ದ ಉಪಗ್ರಹಕ್ಕೆ ಇದ್ದ ಸ೦ಪರ್ಕ ಕಡಿದುಹೋಯಿತು. ಫೆಬ್ರವರಿ ೧೧, ೧೯೯೨ ರಂದು ಉಪಗ್ರಹವನ್ನು ಅದರ ಕಕ್ಷೆಯಿ೦ದ ಭೂಮಿಯ ವಾತಾವರಣಕ್ಕೆ ಕುಸಿಯಿತು. ವರ್ಗ:ಭಾರತದ ಕೃತಕ ಉಪಗ್ರಹಗಳು
ಆರ್ಯಭಟ (ದ್ವಂದ್ವ ನಿವಾರಣೆ)
https://kn.wikipedia.org/wiki/ಆರ್ಯಭಟ_(ದ್ವಂದ್ವ_ನಿವಾರಣೆ)
ಆರ್ಯಭಟ ಹೆಸರಿಗೆ ಸಂಬಂಧಪಟ್ಟಂತೆ ಕನ್ನಡ ವಿಕಿಪೀಡಿಯ.ದಲ್ಲಿ ಕೆಳಕಂಡ ಲೇಖನಗಳಿವೆ: ಆರ್ಯಭಟ (ಗಣಿತಜ್ಞ): ಐದನೇ ಶತಮಾನದಲ್ಲಿ ಜೀವಿಸಿದ್ದ ಭಾರತೀಯ ಗಣಿತಜ್ಞ ಆರ್ಯಭಟ (ಉಪಗ್ರಹ): ಭಾರತದ ಮೊದಲ ಕೃತಕ ಉಪಗ್ರಹ sa:आर्यभट: ta:ஆரியபட்டா
ಇನ್ಸಾಟ್
https://kn.wikipedia.org/wiki/ಇನ್ಸಾಟ್
thumb|ಇನ್ಸಾಟ್-೧ಬಿ thumb|ಇನ್ಸಾಟ್-೨ ಇ ಕಳಿಸಿದ ಭೂಮಿಯ ಚಿತ್ರ right|thumb|ಜಿಎಸ್‍ಎಲ್‍ವಿ ಉಡ್ಡಯಣ ವಾಹಕ (ರಾಕೆಟ್). ಇನ್ಸಾಟ್ ಉಪಗ್ರಹಗಳನ್ನು ಉಡಾಯಿಸಲು ಉಪಯೋಗಿಸಲ್ಪಟ್ಟ ಪ್ರಮುಖ ನೌಕೆ ಇನ್ಸಾಟ್ (INSAT - Indian Satellite ಎಂಬುದರ ಸಂಕ್ಷಿಪ್ತ ರೂಪ) ಭಾರತದ ಅಂತರಿಕ್ಷ ಸಂಶೋಧನಾ ಕೇಂದ್ರವಾದ ಇಸ್ರೋದಿಂದ ನಿರ್ಮಿಸಲ್ಪಟ್ಟು ಭೂಮಿಯ ಸುತ್ತ ಕಕ್ಷೆಗೆ ಬಿಡಲಾಗುತ್ತಿರುವ ಕೃತಕ ಉಪಗ್ರಹಗಳ ಸರಣಿ. ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸಂಪರ್ಕ. ೧೯೮೦ರ ದಶಕದಿಂದಲೂ ಇನ್ಸಾಟ್ ಉಪಗ್ರಹಗಳನ್ನು ಉಪಯೋಗಿಸಲಾಗಿದೆ. ಪ್ರತಿ ದಶಕದಲ್ಲಿಯೂ ಇನ್ಸಾಟ್ ಉಪಗ್ರಹಗಳ ಒಂದು ಹೊಸ ಸರಣಿ ನಿರ್ಮಾಣವಾಗುತ್ತದೆ; ಹೀಗೆ ೮೦ರ ದಶಕದಲ್ಲಿ ಇನ್ಸಾಟ್-೧ ಸರಣಿ (ಇನ್ಸಾಟ್-೧ ,ಇನ್ಸಾಟ್-೩,ಇನ್ಸಾಟ್-೪,ಇನ್ಸಾಟ್-೫ ಇತ್ಯಾದಿ), ೯೦ ರ ದಶಕದಲ್ಲಿ ಇನ್ಸಾಟ್-೨ ಸರಣಿ ನಿರ್ಮಾಣವಾದವು. ೨೦೦೦ ದಿ೦ದ ಮುಂದಕ್ಕೆ ಇನ್ಸಾಟ್-೩ ಸರಣಿ, ೨೦೧೦ ರಲ್ಲಿ ಇನ್ಸಾಟ್-೫ ಉಪಯೋಗದಲ್ಲಿದೆ.ಇನ್ಸಾಟ್ ಉಪಗ್ರಹಗಳೆಲ್ಲವೂ ಭಾರತದ ದೂರಸಂಪರ್ಕ ಉಪಗ್ರಹಗಳು. ಇವುಗಳಿಂದ ಡಿ.ಟಿ.ಎಚ್. (ನೇರ ಮನೆಗೆ ದೂರದರ್ಶನ) ಸೇವೆ ಮತ್ತು ದೂರಸಂಪರ್ಕ ಸೇವೆಗಳಿಗೆ ಮತ್ತು ಸಾಮಾನ್ಯ ದೂರದರ್ಶನ ಸೇವೆಗಳನ್ನು ಬಿತ್ತರಿಸಲು ಉಪಯೋಗಿಸಲಾಗಿದೆ. ಇನ್ಸಾಟ್ ಉಪಗ್ರಹಗಳಲ್ಲಿ ವಿವಿಧ ತರಂಗಾಂತರಗಳಲ್ಲಿ ಕಾರ್ಯನಿರ್ವಹಿಸುವ ಟ್ರಾನ್ಸ್ಪಪಾಂಡರ್ ಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ 'ಸಿ' 'ಎಸ್' 'ಕ' ಮತು 'ಕು' ತರಂಗಗಳು ಪ್ರಮುಖವಾದುವು. ಉದಾಹರಣೆಗೆ ಟಾಟಾ, ಏರ್ ಟೆಲ್, ರಿಲಯೆನ್ಸ್ ಬಿಗ್ ಮತ್ತು ವಿಡಿಯೋಕಾನ್ ಸಂಸ್ಥೆಗಳು ಪ್ರಸಾರ ಮಾಡುತ್ತಿರುವ ಡಿ.ಟಿ.ಎಚ್. (ನೇರ ಮನೆಗೆ ದೂರದರ್ಶನ) ಸೇವೆಗಳು ಇನ್ಸಾಟ್ ಉಪಗ್ರಹದಿಂದ ಪ್ರಸಾರ ಮಾಡಲ್ಪಟ್ಟವಾಗಿವೆ. ೯೦ರ ದಶಕದಲ್ಲಿ ಇನ್ಸಾಟ್ ಉಪಗ್ರಹಗಳು ಸಂಗ್ರಹಿಸಿದ ಹವಾಮಾನ ಮಾಹಿತಿಯನ್ನು ಗುಪ್ತಸಂಕೇತಗಳ ಮೂಲಕ ಭಾರತಕ್ಕೆ ತಲುಪಿಸಲಾಗುತ್ತಿತ್ತು. ಇದರಿಂದ ಸುತ್ತಲ ದೇಶಗಳಿಗೆ ಈ ಮಾಹಿತಿ ದೊರೆಯುತ್ತಿರಲಿಲ್ಲ. ೧೯೯೭ ರಲ್ಲಿ ಅಮೆರಿಕದ ಅಂತರಿಕ್ಷ ಸಂಶೋಧನಾ ಕೇಂದ್ರವಾದ ನಾಸಾ ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದದ ಮೇರೆಗೆ ಇತರ ಕೆಲ ದೇಶಗಳಿಗೆ ಇನ್ಸಾಟ್ ಉಪಗ್ರಹಗಳ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸ೦ಪರ್ಕವಾದರೂ, ಪ್ರತಿ ಸರಣಿಯ ಒಂದು ಉಪಗ್ರಹಕ್ಕೆ ಭೂಮಿಯ ಸ್ಪಷ್ಟ ಚಿತ್ರ ತೆಗೆಯಬಲ್ಲ ರೇಡಿಯೋ ಉಪಕರಣವನ್ನು (VHRR - Very High Resolution Radiometer) ಅಳವಡಿಸಲಾಗುತ್ತದೆ. ಈ ಉಪಗ್ರಹದಿ೦ದ ಬರುವ ಚಿತ್ರಗಳು ಹವಾಮಾನ ವರದಿಗೆ ಅನುಕೂಲ ಮಾಡಿಕೊಟ್ಟಿವೆ. ೨೦೦೪ರಲ್ಲಿ ಹವಾಮಾನ ವರದಿಗಾಗಿಯೇ ಮೀಸಲಾದ ಮೆಟ್-ಸ್ಯಾಟ್ ಉಪಗ್ರಹವನ್ನು ಹಾರಿಬಿಡಲಾಯಿತು. ಸೇವೆಯಲ್ಲಿರುವ ಕೃತಕ ಉಪಗ್ರಹಗಳು ಇನ್ಸಾಟ್ ೪ ಸರಣಿ ಇನ್ಸಾಟ್-೪ಎ thumb|300px|ಇನ್ಸಾಟ್-೪ಎ ಉಪಗ್ರಹ ಇನ್ಸಾಟ್-೪ಎ' ಭಾರತದಇಸ್ರೋ ಸಂಸ್ಥೆ ನಿರ್ಮಿಸಿದ ೧೨ ವರ್ಷಗಳ ಕಾಲ ದೂರಸಂಪರ್ಕ ಸಂಬಂಧಿಸಿದ ಸೇವೆ ನೀಡುವ ಉಪಗ್ರಹ. ಭಾರತೀಯ ಕಾಲಮಾನುಸಾರ ೨೨ ಡಿಸೆಂಬರ್ ೨೦೦೫ ಗುರುವಾರ ಬೆಳಗ್ಗೆ ೪.೦೩ ಗಂಟೆಗೆ ಸರಿಯಾಗಿ ಫ್ರೆಂಚ್ ಗಯಾನಾದ ಕೌರು ಉಡಾವಣಾ ಕೇಂದ್ರದಿಂದ ಎರಿಯನ್ ೫ ಪೀಳಿಗೆಯ ರಾಕೆಟ್‌ನಿಂದ ಈ ಉಪಗ್ರಹ ಉಡಾವಣೆಗೊಂಡಿತು. ಸುಮಾರು ೩೦೮೦ ಕೆಜಿ ತೂಕದ ಈ ಉಪಗ್ರಹದಲ್ಲಿ ೧೨ ಕ್ಯೂಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳು ಮತ್ತು ೧೨ ಸಿ ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳಿವೆ. ಈ ಉಪಗ್ರಹದಿಂದ ಡಿಟಿಎಚ್ ದೂರದರ್ಶನ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ ಎಂದು ವಿಶೇಷಜ್ಞರ ಅಭಿಪ್ರಾಯ. ಬಾಹ್ಯ ಸಂಪರ್ಕಗಳು ಇನ್ಸಾಟ್ ಉಪಗ್ರಹಗಳು ತೆಗೆದ ಕೆಲ ಚಿತ್ರಗಳು ಇನ್ಸಾಟ್ ೨-ಇ ಇನ್ಸಾಟ್ ೩-ಸಿ ವರ್ಗ:ಭಾರತದ ಕೃತಕ ಉಪಗ್ರಹಗಳು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
https://kn.wikipedia.org/wiki/ಭಾರತೀಯ_ಬಾಹ್ಯಾಕಾಶ_ಸಂಶೋಧನಾ_ಸಂಸ್ಥೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) () ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ. ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತಮಿಳುನಾಡು), ಹಾಸನ(ಕರ್ನಾಟಕ) ಮತ್ತು ಶ್ರೀಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ. ಇಸ್ರೋ ದ ಮುಖ್ಯ ಉದ್ದೇಶ ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆ ಉಪಗ್ರಹಗಳನ್ನಲ್ಲದೇ ಉಪಗ್ರಹ ವಾಹಕಗಳನ್ನೂ ತಯಾರಿಸುತ್ತದೆ. ಇಸ್ರೋ ಸಂಸ್ಥೆಯು ಪ್ರತಿ ವರ್ಷ ಸುಮಾರು ೧೫೦ ಇಂಜಿನಿಯರ್ ಗಳನ್ನು ಇಂಜಿನಿಯರ್-"ಎಸ್.ಸಿ" ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಅದು ಒಂದು ಪರೀಕ್ಷೆಯನ್ನು ಮತ್ತು ಸಂದರ್ಶನವನ್ನು ನಡೆಸುತ್ತದೆ. ಇದು ಒಂದು ಪಾರದರ್ಶಕವಾದ ಕ್ರಿಯೆಯಾಗಿದ್ದು ಯಾವುದೇ ಗೋಜಲುಗಳಿಗೆ ಇಲ್ಲಿ ಅವಕಾಶವಿಲ್ಲ. ಪ್ರತಿಭೆಯಿರುವವರಿಗೆ ಮಾತ್ರ ಕೆಲಸ. ತನ್ನ ಕೆಳಹುದ್ದೆಗಳಿಗೂ (ಟ್ರೇಡ್ಸ್ ಮೆನ್ ಮತ್ತು ಟೆಕ್ನೀಶಿಯನ್) ಇದೆ ಪ್ರಕ್ರಿಯೆಯನ್ನು ಇದು ನಡೆಸುತ್ತದೆ. ಇಂಜಿನಿಯರ್- ಎಸ್.ಸಿ- ವಿದ್ಯಾರ್ಹತೆ- ಬಿ.ಇ >೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಕೆಮಿಕಲ್, ಕಂಪ್ಯೂಟರ್ ಸ್ಯನ್ಸ್, ಸಿವಿಲ್) ಟೆಕ್ನೀಶಿಯನ್ ವಿದ್ಯಾರ್ಹತೆ- ಡಿಪ್ಲಮೋ >೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್) ಟ್ರೇಡ್ಸ್ ಮೆನ್ ವಿದ್ಯಾರ್ಹತೆ- ಐ.ಟಿ.ಐ. >೭೦% (ಫಿಟ್ಟರ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇಲೆಕ್ಟ್ರಿಕಲ್ ಮುಂತಾದುವು) ಚರಿತ್ರೆ ಭಾರತ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು ೧೯೬೯ ರಲ್ಲಿ ಸ್ಥಾಪಿಸಲಾಯಿತು. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ರಷ್ಯಾದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಹಾರಿತು. ಉಪಗ್ರಹವೊಂದರ ಮೊದಲ ಭಾರತೀಯ ಉಡಾವಣೆ ೧೯೮೦ ರಲ್ಲಿ ನಡೆಯಿತು. ೧೯೭೨ ರಲ್ಲಿ ಅಂತರಿಕ್ಷ ಸಮಿತಿ ಮತ್ತು ಅಂತರಿಕ್ಷ ಇಲಾಖೆಗಳ ಸ್ಥಾಪನೆಯ ನಂತರ ಇಸ್ರೋ ದ ಮೇಲ್ವಿಚಾರಣೆಯನ್ನು ಈ ಸಂಸ್ಥೆಗಳಿಗೆ ವರ್ಗಾಯಿಸಲಾಯಿತು... ಮೈಲಿಗಲ್ಲುಗಳು ೧೯೬೯: ಇಸ್ರೋದ ಸ್ಥಾಪನೆ ೧೯೭೨: ಅಂತರಿಕ್ಷ ಇಲಾಖೆಯ ಸ್ಥಾಪನೆ ೧೯೭೫: ಆರ್ಯಭಟ ಉಪಗ್ರಹದ ಉಡಾವಣೆ ೧೯೭೯: ಪ್ರಾಯೋಗಿಕ ಉಪಗ್ರಹ ಭಾಸ್ಕರ-೧ ರ ಉಡಾವಣೆ. ಎಸ್‍ಎಲ್‍ವಿ-೩ ರಾಕೆಟ್‍ನ ಮೂಲಕ ರೋಹಿಣಿ ಉಪಗ್ರಹದ ಉಡಾವಣೆ ವಿಫಲ ೧೯೮೦: ರೋಹಿಣಿ ಉಪಗ್ರಹದ ಯಶಸ್ವಿ ಉಡಾವಣೆ ೧೯೮೧: ಆಪಲ್ ಮತ್ತು ಭಾಸ್ಕರ-೨ ಉಪಗ್ರಹಗಳ ಉಡಾವಣೆ ೧೯೮೨: ಇನ್ಸಾಟ್ ಸರಣಿಯ ಮೊದಲ ಉಪಗ್ರಹ ಇನ್ಸಾಟ್-೧ಎ ಉಡಾವಣೆ ೧೯೮೪: ಇಂಡೋ-ರಷ್ಯನ್ ಅಂತರಿಕ್ಷ ಯಾನ. ರಾಕೇಶ್ ಶರ್ಮಾ ಅಂತರಿಕ್ಷಕ್ಕೆ ಸಂಚರಿಸಿದ ಮೊದಲ ಭಾರತೀಯರಾದರು ೧೯೯೨: ಇನ್ಸಾಟ್ ಸರಣಿಯ ಇನ್ಸಾಟ್-೨ಎ, ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಿತ ಮೊದಲ ಉಪಗ್ರಹ) ಉಡಾವಣೆ ೧೯೯೩: ಪಿಎಸ್‍ಎಲ್‍ವಿ ರಾಕೆಟ್ ನ ಉಡಾವಣೆ ವಿಫಲ ೧೯೯೪: ಪಿಎಸ್‍ಎಲ್‍ವಿ ರಾಕೆಟ್ ನ ಎರಡನೆಯ ಉಡಾವಣೆ ಯಶಸ್ವಿ (ಐಆರ್‍ಎಸ್-ಪಿ೨ ಉಪಗ್ರಹವನ್ನು ಹೊತ್ತು) ೨೦೦೪: ಶೈಕ್ಷಣಿಕ ಉಪಗ್ರಹ ಎಡುಸ್ಯಾಟ್ ಅನ್ನು ಹೊತ್ತ ಜಿಎಸ್‍ಎಲ್‍ವಿ ರಾಕೆಟ್ ನ ಮೊದಲ ಉಡಾವಣೆ ಯಶಸ್ವಿ ೨೦೧೩:ನವೆಂಬರ್‌ ೫ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರುವಗಾಮಿ ರಾಕೆಟ್‌ ಮೂಲಕ ‘ಮಂಗಳಯಾನ’ (ಅಂತರಿಕ್ಷ ನೌಕೆ)ವನ್ನು ಉಡಾವಣೆ ಮಾಡಲಾಯಿ ಬಾಹ್ಯಾಕಾಶದಲ್ಲಿ ಇಸ್ರೋ ಸಾಧನೆಗಳು: ಹೆಚ್ಚಿನ ವಿವರ 1962 ರಲ್ಲಿ ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಇಲಾಖೆ ಸ್ಥಾಪನೆ. ಕೇರಳದ ಥಂಬಾ ರಾಕೆಟ್ ಉಡಾವನಾ ಕೇಂದ್ರದ ಕೆಲಸ ಆರಂಭ. 1963 ನವಂಬರ್ 21, ಟಿಇಅರ್‘ಎಲ್‘ಎಸ್‘ನಿಂದಮೊದಲ ರಾಕೆಟ್‘ ಉಡಾವಣೆ. 1965 ಥಂಬಾದಲ್ಲಿ ಬಾಹ್ಯಾಕಾಶ ವಿಜ್ಞಾನ ತಂತ್ರ ಜ್ಞಾನ ಕೆಂದ್ರ ಸ್ಥಾಪನೆ. 1969 ಆಗಸ್ಟ 15, ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸ್ಥಾಪನೆ. 1972 ಆಂದ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್‘ಧವನ್‘ಬಾಹ್ಯಾಕಾಶ ಕೇಂದ್ರ ಸ್ಥಾಪನೆ. 1975 ಏಪ್ರಿಲ್ 19, ದೂರದರ್ಶನ ಪ್ರಸಾರ ಉದ್ದೇಶ ಹೊಂದಿದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ. 1979 ಭೂ ವೀಕ್ಷಣಾ ಪ್ರಾಯೋಗಿಕ ಉಪಗ್ರಹ ಭಾಸ್ಕರ-1 ಉಡಾವಣೆ. 1984 ಭಾರತದ ಮೊದಲ ಗಗನ ಯಾನಿ ರಾಕೇಶ್ ಶರ್ಮಾ ಅವರಿಂದ ರಷ್ಯಾ ಬಾಹ್ಯಾಕಾಶ ನಿಲ್ದಾಣ ಸಲ್ಯೂಟ್` 7ರಲ್ಲಿ ಎಂಟು ದಿನ ವಾಸ. 1988 ರಷ್ಯಾದ ರಾಕೆಟ್‘ಮೂಲಕ ಭಾರತದ ದೂರ ಸಂವೇದಿ ಐಆರ್‘ಎಸ್‘ (IRS)ಉಪಗ್ರಹ ಉಡಾವಣೆ. 1993 ಮೊದಲ ದೃವಗಾಮಿ ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ (PSLV)ಅಭಿವೃದ್ಧಿ ; ಯೋಜನೆ ವಿಫಲ. 1997ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ ಮೊದಲ ಉಡಾವಣೆ. (ಐಅರ್‘ಎಸ್‘-1ಡಿ=IRS-1Dಉಪಗ್ರಹ) 2001 ಜಿಸಾಟ್‘-1 ಉಪಗ್ರಹ ಹೊತ್ತ ಭೂ ಸ್ಥಿರ ಉಪಗ್ರಹ ಹೊತ್ತ ಭೂಸ್ಥಿರ ಉಪಗ್ರಹ ಉಡಾವಣಾ ವಾಹಕದ (ಜಿಎಸ್‘ಎಲ್‘ವಿ-GSLV) ಯಶಸ್ವಿ ಉಡಾವಣೆ. 2008ಅಕ್ಟೋಬರ್‘೨೨22 ಚಂದ್ರಯಾನ 1 ರ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. -ಎಕ್ಷ್‘ಎಲ್‘ (PSLV_XL) ಉಡಾವಣೆ. 2013 ನವೆಂಬರ್‘ 5 , ಸ್ವದೇಶಿ ನಿರ್ಮಿತ ಮಂಗಳ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. ಸಿ 25(PSLV_C25) ಉಡಾವಣೆ.. 2014 ಜನವರಿ 5 , ಸ್ವದೇಶಿ ನಿರ್ಮಿತ ಕ್ರಯೋಜನಿಕ್‘ತಂತ್ರಜ್ಞಾನ ಒಳಗೊಂಡ ಜಿಎಸ್‘ಎಲ್‘ವಿ-ಡಿ5 (GSLV-D25) ಉಡಾವಣೆ ಹೀಗಿತ್ತು ನಮ್ಮ ಪಯಣದ ಹಾದಿ...25 Sep, 2014- ಪ್ರಜಾವಾಣಿ ೨೫-೯-೨೦೧೪ Genesis of Indian Space Programme ಸ್ಕ್ರಾಮ್‌ಜೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ 29 Aug, 2016 ರಾಕೆಟ್‌ ತಂತ್ರಜ್ಞಾನದಲ್ಲಿ ಸೂಪರ್‌ ಸಾನಿಕ್ ಕಂಬುಷನ್‌ ರಾಮ್‌ಜೆಟ್ (ಸ್ಕ್ರಾಮ್‌ಜೆಟ್‌) ಎಂಜಿನ್‌ ಈವರೆಗಿನ ಅತ್ಯಾಧುನಿಕ ತಂತ್ರಜ್ಞಾನವೆನಿಸಿದೆ. ಅಮೆರಿಕ, ರಷ್ಯಾ ಮತ್ತು ಐರೋಪ್ಯ ಒಕ್ಕೂಟವಷ್ಟೇ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿವೆ. ಈಗ ಇದೇ ಸ್ವರೂಪದ ಎಂಜಿನ್‌ ಅನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿ, ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತವೂ ಈ ರಾಷ್ಟ್ರಗಳ ಸಾಲಿಗೆ ಸೇರಿದೆ. ರಾಕೆಟ್‌ಗಳ ಎಂಜಿನ್‌ಗಳಲ್ಲಿ ಸಾಮಾನ್ಯವಾಗಿ ಇಂಧನವಾಗಿ ಜಲಜನಕವನ್ನು ಹಾಗೂ ದಹನಶೀಲ ಉತ್ಕರ್ಷಣಕಾರಿಯಾಗಿ (ಆಕ್ಸಿಡೈಸ್) ಆಮ್ಲಜನಕವನ್ನು ಬಳಸಲಾಗುತ್ತದೆ. ಸಾಮಾನ್ಯ ರಾಕೆಟ್‌ಗಳಲ್ಲಿ ಜಲಜನಕ ಮತ್ತು ಆಮ್ಲಜನಕ ಎರಡನ್ನೂ ಸಂಗ್ರಹಿಸಿ ಇಡಲಾಗಿರುತ್ತದೆ. ರಾಕೆಟ್‌ಗಳು ಇವೆರಡನ್ನೂ ಹೊತ್ತುಕೊಂಡು ಹೋಗುತ್ತವೆ. ಸ್ಕ್ರಾಮ್‌ಜೆಟ್‌ ಎಂಜಿನ್ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಹೀರಿಕೊಂಡು ಕೆಲಸ ಮಾಡುವುದರಿಂದ ಕಾರ್ಯಾಚರಣೆಯ ವೆಚ್ಚದಲ್ಲಿ ಭಾರಿ ಇಳಿಕೆ ಆಗುತ್ತದೆ. ಇಸ್ರೊ ತನ್ನ ಮರುಬಳಕೆ ಉಡಾವಣಾ ವಾಹನಗಳಲ್ಲಿ ಈ ಎಂಜಿನ್‌ಗಳನ್ನು ಬಳಸಲು ಉದ್ದೇಶಿಸಿದೆ. ಇದನ್ನು ಇನ್ನಷ್ಟು ಸುಧಾರಣೆ ಮಾಡಬೇಕಿದೆ ಎಂದು ಇಸ್ರೊ ಹೇಳಿದೆ. ಈ ಪರೀಕ್ಷೆ ಯಶಸ್ವಿಯಾಗಿರುವುದರಿಂದ ಸ್ಕ್ರಾಮ್‌ಜೆಟ್‌ ಎಂಜಿನ್‌ ಇರುವ ರಾಕೆಟ್‌ಗಳ ಅಭಿವೃದ್ಧಿಯಲ್ಲಿ ಇಸ್ರೊ ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಿದೆ. ಇಸ್ರೊ ಸಾಧನಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮ್ಯಾಕ್‌ 6: ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್‌’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್‌ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್‌ ಎಂದು ಕರೆಯಲಾಗುತ್ತದೆ. ಪರೀಕ್ಷೆ ಉದ್ದೇಶ ಹೈಪರ್‌ ಸಾನಿಕ್‌ ವೇಗದಲ್ಲಿ ಸ್ಕ್ರಾಮ್‌ಜೆಟ್‌ ಎಂಜಿನ್‌ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ ಪರೀಕ್ಷೆ ವಿವರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6ಗಂಟೆಗೆ ಉಡಾವಣೆ ಇಸ್ರೊದ ಸುಧಾರಿತ ತಂತ್ರಜ್ಞಾನ ವಾಹನ (ಎಟಿವಿ) 02 ಬಳಸಿ ಪರೀಕ್ಷೆ ಎಟಿವಿಯಲ್ಲಿ ಎರಡು ಹಂತದ ಎಂಜಿನ್ ಮೊದಲ ಎಂಜಿನ್‌ ಮೂಲಕ ಎಟಿವಿ ಉಡಾವಣೆ ತುಸು ಸಮಯದ ನಂತರ 2ನೇ ಎಂಜಿನ್‌ ಕಾರ್ಯನಿರ್ಹಹಣೆ ನಂತರದ ಹಂತದಲ್ಲಿ ಎರಡು ಸ್ಕ್ರಾಮ್‌ಜೆಟ್‌ ಎಂಜಿನ್‌ಗಳ ದಹನ ಕ್ರಿಯೆ ಆರಂಭ ಇತರೆ ವಿವರ ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್‌ ಎಂಜಿನ್‌ ಸೇರಿ ಎಟಿವಿ 02ನ ತೂಕ :3277 ಕೆ.ಜಿ. ಸ್ಕ್ರಾಮ್‌ಜೆಟ್‌ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್* ಪರೀಕ್ಷೆಯ ಅವಧಿ :300 ಸೆಕೆಂಡ್‌* ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ* ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್‌ 6 ISRO successfully test launches scramjet rocket engine ಮ್ಯಾಕ್‌ 6: ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್‌’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್‌ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್‌ ಎಂದು ಕರೆಯಲಾಗುತ್ತದೆ. ಪರೀಕ್ಷೆ ಉದ್ದೇಶ ಹೈಪರ್‌ ಸಾನಿಕ್‌ ವೇಗದಲ್ಲಿ ಸ್ಕ್ರಾಮ್‌ಜೆಟ್‌ ಎಂಜಿನ್‌ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ ಪರೀಕ್ಷೆ ವಿವರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6ಗಂಟೆಗೆ ಉಡಾವಣೆ ಇಸ್ರೊದ ಸುಧಾರಿತ ತಂತ್ರಜ್ಞಾನ ವಾಹನ (ಎಟಿವಿ) 02 ಬಳಸಿ ಪರೀಕ್ಷೆ ಎಟಿವಿಯಲ್ಲಿ ಎರಡು ಹಂತದ ಎಂಜಿನ್ ಮೊದಲ ಎಂಜಿನ್‌ ಮೂಲಕ ಎಟಿವಿ ಉಡಾವಣೆ ತುಸು ಸಮಯದ ನಂತರ 2ನೇ ಎಂಜಿನ್‌ ಕಾರ್ಯನಿರ್ಹಹಣೆ ನಂತರದ ಹಂತದಲ್ಲಿ ಎರಡು ಸ್ಕ್ರಾಮ್‌ಜೆಟ್‌ ಎಂಜಿನ್‌ಗಳ ದಹನ ಕ್ರಿಯೆ ಆರಂಭ ಇತರೆ ವಿವರ ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್‌ ಎಂಜಿನ್‌ ಸೇರಿ ಎಟಿವಿ 02ನ ತೂಕ :3277 ಕೆ.ಜಿ. ಸ್ಕ್ರಾಮ್‌ಜೆಟ್‌ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್* ಪರೀಕ್ಷೆಯ ಅವಧಿ :300 ಸೆಕೆಂಡ್‌* ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ* ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್‌ 6 100th Consecutively Successful Launch of Sounding Rocket RH-200 from TERLS ISRO successfully test launches scramjet rocket engine ಸ್ಕ್ರಾಮ್‌ಜೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ ಇಸ್ರೊದಿಂದ ‘ಶುಕ್ರ ಯಾನ’ ಯೋಜನೆ 20 Apr, 2017 ದಿ.೧೯-೪-೨೦೧೭ ರಂದು ಶುಕ್ರ ಗ್ರಹದ ವೈಜ್ಞಾನಿಕ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸುವ ‘ಶುಕ್ರ ಯಾನ’ ಯೋಜನೆಯನ್ನು ಇಸ್ರೋ ಅಧಿಕೃತವಾಗಿ ಪ್ರಕಟಿಸಿದೆ. ದೇಶದ ವಿವಿಧ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಶುಕ್ರ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇಸ್ರೋ ಕರೆ ನೀಡಿದೆ. ಇಸ್ರೋ ನಿರ್ದೇಶಕ ದೇವಿಪ್ರಸಾದ್‌ ಕಾರ್ಣಿಕ್‌, ‘ಶುಕ್ರ ಯೋಜನೆ ಕುರಿತ ಅಧಿಕೃತ ಘೋಷಣೆ ಇದಾಗಿದೆ. ವೈಜ್ಞಾನಿಕ ಅಧ್ಯಯನಕ್ಕೆ ಅಗತ್ಯವಿರುವ ಪೇಲೋಡ್‌ಗಳನ್ನು ವಿಜ್ಞಾನ ಸಂಸ್ಥೆಗಳು ಅಭಿವೃದ್ಧಿಪಡಿಸಬೇಕಾಗಿದೆ’ ಎಂದರು. ಈ ಯೋಜನೆ ಕಾರ್ಯಗತಗೊಳಿಸಲು ಕೆಲವು ವರ್ಷಗಳೇ ಬೇಕಾಗುತ್ತದೆ. ಒಂದೆರಡು ವರ್ಷಗಳಲ್ಲಿ ಆಗುವ ಕೆಲಸವಲ್ಲ ಎಂದು ಅವರು ಹೇಳಿದರು. ಆಕಾಶಯಾನ ನೌಕಾ ವಾಹಕ ಇಸ್ರೊ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ (ಜಿಎಸ್‌ಎಲ್‌ವಿ) ಮಾರ್ಕ್ 3, 200 ಏಷ್ಯಾ ಆನೆಗಳಷ್ಟು (ಏಷ್ಯಾ ಆನೆಗಳ ಸರಾಸರಿ ತೂಕ 3ಟನ್‌) ತೂಕವಿದೆ. ಜಿಎಸ್‌ಎಲ್‌ವಿ ಮಾರ್ಕ್ 3 ಎಂಬ ಹೆಸರಿನ 640 ಟನ್ ತೂಕದ ಉಡಾವಣಾ ವಾಹನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಇಸ್ರೊ ಈವರೆಗೆ ಅಭಿವೃದ್ಧಿ ಪಡಿಸಿದ ಅತ್ಯಂತ ತೂಕದ ರಾಕೆಟ್‌ ಎನಿಸಿದೆ. ‘ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕ್ರಯೋಜೆನಿಕ್ ಎಂಜಿನ್ ಇರುವ ಮಾರ್ಕ್‌ 3, ಭೂಸಮನ್ವಯ ಕಕ್ಷೆಗೆ 4 ಟನ್‌ ತೂಕದ ಉಪಗ್ರಹಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್‌ನ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿ ನಡೆದಿದೆ. ಆದರೆ ಮಾರ್ಕ್‌ 3ನಲ್ಲಿ ಅಳವಡಿಸಿ, ಮತ್ತೊಮ್ಮೆ ಪರೀಕ್ಷೆ ನಡೆಸಬೇಕಿದೆ’ ಎಂದು ಇಸ್ರೊ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ರಾಕೆಟ್‌ ಸಿದ್ಧ;ಪಿಟಿಐ;29 May, 2017 ಜಿಸ್ಯಾಟ್‌–17 ಉಪಗ್ರಹ ಯಶಸ್ವಿ ಉಡಾವಣೆ 29 ಜೂನ್, 2017; ಜಿಸ್ಯಾಟ್‌–17 ದೂರಸಂಪರ್ಕ ಉಪಗ್ರಹವನ್ನು ಏರಿಯಾನ್‌–5 ವಿಎ–238 ಮೂಲಕ, ಕೌರೌನ ಗಯಾನಾ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ.ದೇಶದ ನೂತನ ದೂರಸಂಪರ್ಕ ಉಪಗ್ರಹ ಜಿಸ್ಯಾಟ್‌–17 ಅನ್ನು ಫ್ರೆಂಚ್‌ ಗಾಯಾನದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಪಗ್ರಹವನ್ನು ಏರಿಯಾನ್‌–5 ವಿಎ–238 ಉಡಾವಣಾ ವಾಹಕದ ಮೂಲಕ 28/29 ಜೂನ್, 2017ಬುಧವಾರ ತಡರಾತ್ರಿ 2.31ಕ್ಕೆ ಉಡಾವಣೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋದಿಂದ ಉಡಾವಣೆಗೊಂಡ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್‌ಎಲ್‌ವಿ ಎಂಕೆ–3 ಹಾಗೂ ಪಿಎಸ್‌ಎಲ್‌ವಿ ಸಿ–38 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಜಿಸ್ಯಾಟ್‌–17 ಒಟ್ಟು 3,477 ಕೆ.ಜಿ ತೂಕವಿದೆ. ಹವಾಮಾನ ದತ್ತಾಂಶ, ಉಪಗ್ರಹ ಆಧಾರಿತ ಹುಡುಕಾಟದ ಸೇವೆಗೆ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ. ಜಿಸ್ಯಾಟ್‌–17 ಉಪಗ್ರಹ ಯಶಸ್ವಿ ಉಡಾವಣೆಪಿಟಿಐ;29 Jun, 2017;ಪಿಟಿಐ ನೋಡಿ ಇಸ್ರೊ ಕಕ್ಷೆಯ ವಾಹನ ಎಚ್ಎಎಲ್ ತೇಜಸ್ಇದಕ್ಕೆ -'ಎಚ್.ಎ.ಎಲ್ -ಲಘು ಯುದ್ಧ ವಿಮಾನ ೨೦೧೩-೨ನೆ ಹಂತ' ಸೇರಿಸಿದೆ. ಜಿ.ಎಸ್.ಎಲ್.ವಿಡಿ೫ - ರಾಕೆಟ್ - ಕೃತಕ ಉಪಗ್ರಹ ವಾಹಕ- ಎಚ್ಎಎಲ್ ತೇಜಸ್--ಹೆಚ್ಎಎಲ್ ತೇಜಸ್ ಯುದ್ಧ ವಿಮಾನ ಎಸ್. ನಂಬಿ ನಾರಾಯಣನ್-ಉಪಗ್ರಹ ಉಡಾವಣೆಗೆ ಕ್ರಯೋಜನಿಕ್ ಎಂಜಿನ ತಂತ್ರಜ್ಞಾನ ಸಂಶೋದನೆ ಮಾಡಿದ ವಿಜ್ಞಾನಿ. *ಮಂಗಳಯಾನ ಭೂಸ್ಥಾಯೀ ಉಪಗ್ರಹ ಉಡ್ಡಯನ ವಾಹನ-GSLV ವಿಜ್ಞಾನ ಇಸ್ರೋಭೇಟಿ :ಸಂಸ್ಥೆಗಳು ರೂಪಿಸುವ ಸಂಸ್ಕಾರ: ಮಾನವೀಯ ಗುಣದ ವಿಜ್ಞಾನಿ ಜಿ.ಕೆ.ಮೆನನ್‌;ಎಸ್‌. ನಿರೂಪಣೆ-ರವಿಪ್ರಕಾಶ್‌;27 Nov, 2016 ಬಾಹ್ಯ ಸಂಪರ್ಕಗಳು ಇಸ್ರೋ ಅಧಿಕೃತ ತಾಣ ಜಿಎಸ್‍ಎಲ್‍ವಿ ರಾಕೆಟ್ ಪಿ‍ಎಸ್‍ಎಲ್‍ವಿ ರಾಕೆಟ್ ಹೆಚ್ಚಿನ ಓದಿಗೆ ಮೂರು ವರ್ಷದಲ್ಲಿ 50 ಬಾಹ್ಯಾಕಾಶ ನೌಕೆಗಳ ಉಡ್ಡಯನ ಗುರಿ;;72 ಗಂಟೆಗಳಲ್ಲಿ ನಿರ್ಮಿಸಿ ನಭಕ್ಕೆ ಹಾರಿಸಬಲ್ಲ ಉಡ್ಡಯನ ವಾಹನ!;;12 ಆಗಸ್ಟ್ 2018, ಉಲ್ಲೇಖಗಳು ವರ್ಗ:ವಿಜ್ಞಾನ ವರ್ಗ:ತಂತ್ರಜ್ಞಾನ ವರ್ಗ:ಭಾರತ
ಮಕರ ಸಂಕ್ರಾಂತಿ
https://kn.wikipedia.org/wiki/ಮಕರ_ಸಂಕ್ರಾಂತಿ
thumb|ಸಕ್ಕರೆ ಅಚ್ಛು thumb|ಎಳ್ಳು ಬೆಲ್ಲ thumb ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು. ಜ್ಯೋತಿಷ್ಯದ ತಳಹದಿ ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ. ಈ ಶಾಸ್ತ್ರದಂತೆ, ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ ೧೪ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು. ಈಗ ಉತ್ತರಾಯಣ ಡಿಸೆಂಬರ್ ೨೨ಕ್ಕೇ ಆದರೂ, ಹಿಂದಿನಂತೆಯೇ ಜನವರಿ ೧೪ ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ. ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ. ಸಂಪರ್ಕದ ಹೆಸರು ಖಗೋಳ ಶಾಸ್ತ್ರದ ಪ್ರಕಾರ ಒಂದು ವಿವರಣೆ ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ, ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ (equinox)ಎಂದು ಕರೆಯುತ್ತಾರೆ. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ ೧೨ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ. ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು. ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆ ದಕ್ಷಿಣಕ್ಕೆ) ಆಗುತ್ತದೆ. ಚಳಿಗಾಲ (ಅಂದರೆ ಇರುಳಿನ ಪ್ರಮಾಣ)ಹೆಚ್ಚಾದಂತೆ ಸೂರ್ಯನ ಉದಯ ಹೆಚ್ಚು ದಕ್ಷಿಣ ದಿಕ್ಕಿಗೆ ಚಲಿಸುವುದು ಗೋಚರಿಸುತ್ತದೆ. ಕೊನೆಗೆ ಒಂದು ದಿನ ದಕ್ಷಿಣದ ತುತ್ತ ತುದಿಯ ಹಂತವನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುಧ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. *ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. winter solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಡಿಸೆಂಬರ್ ೨೨ ಈ ದಿನ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ. ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾ ನಡುವೆ ಮತ್ತೆ ಈಕ್ವಿನಾಕ್ಸ್ದಿ ನವನ್ನೂ ತಲುಪಿ, ಇನ್ನೂ ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ಉತ್ತರ ದಿಕ್ಕಿನತ್ತದ ತನ್ನ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ದಕ್ಷಣಯಾನದ ದಿನ. ಬೇಸಗೆ ಮುಗಿದು ಮುಂಬರುವ ಚಳಿಗಾಲದ ಮುನ್ಸೂಚನೆ. ಈ ದಿನವನ್ನು ಕರ್ಕಾಟಕ ಸಂಕ್ರಾಂತಿ ಎಂದು ಗುರುತಿಸುತ್ತಾರೆ. summer solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಜೂನ್ ೨೧ ಈ ದಿನ. ಇಷ್ಟೆಲ್ಲಾ ವಿವರಣೆ ಅನ್ವಯಿಸುವುದು ಭೂಮಂಡಲದ ಭೂಮಧ್ಯರೇಖೆಯ ಉತ್ತರಾರ್ತ. ಇದೇ ರೀತಿಯ ಆದರೆ ತದ್ವಿರುದ್ಧವಾದ ವಿವರಣೆ ದಕ್ಷಿಣಾರ್ಧಕ್ಕೆ ಅನ್ವಯಿಸುತ್ತದೆ. ಹೀಗೆ ಕಾಣುವ ಸೂರ್ಯನ ಚಲನೆಗೆ ಭೂಮಿಯ ಅಕ್ಷರೇಖೆ (axis) ಸುಮಾರು 22 1/2 degree ವಾಲಿರುವುದು ಕಾರಣ. ಯಾವುದಾದರೂ ಒಂದು ನಿಗದಿತ ಜಾಗದಲ್ಲಿ ದಿನಾಲು ನಿಂತು, ದಿನದ ಒಂದೇ ನಿಗದಿತ ಸಮಯದಲ್ಲಿ, ಆಗಸದಲ್ಲಿ ಸೂರ್ಯನ ಸ್ಥಾನವನ್ನು ಗುರುತು ಹಾಕಿಕೊಂಡು, ಈ ರೀತಿ ವರ್ಷವಿಡೀ ಮಾಡಿದರೆ, ಗುರುತು ಹಾಕಿಕೊಂಡ ಆ ಬಿಂದುಗಳೆಲ್ಲಾ ಸುಮಾರು '8'ರ ಆಕೃತಿಯಲ್ಲಿ ಕಾಣುತ್ತವೆ. ಈ ವಿನ್ಯಾಸವನ್ನು analemma ಎನ್ನುತ್ತಾರೆ. '8'ರ ಆಕೃತಿಯ ನೆತ್ತಿಯ ಬಿಂದು summer solstice ದಿನದಂದು ಆಗುತ್ತದೆ. ಆ ಆಕೃತಿಯ ಅಡಿಯ ಬಿಂದು winter solstice, ಅಂದರೆ ಮಕರ ಸಂಕ್ರಾಂತಿಯ ದಿನದಂದು ಆಗುತ್ತದೆ. ನಡುವೆ ರೇಖೆಗಳು ಪರಸ್ಪರ ಹಾದು ಹೋಗುವ ಬಿಂದು equinox ದಿನಗಳು. 8 ರ ಆಕೃತಿಯ ನೆತ್ತಿಯಿಂದ ಅದರ ಅಡಿಯ ಬಿಂದುವಿನ ತನಕದ ದಿನಗಳು ವರ್ಷದ ದಕ್ಷಿಣಾಯನದ ದಿನಗಳು. ಆ ಆಕೃತಿಯ ಅಡಿಯಿಂದ ಅದರ ನೆತ್ತಿಯ ಬಿಂದುವಿನ ತನಕದ ದಿನಗಳು ಉತ್ತರಾಯಣದ ದಿನಗಳು. ಇದೆ ಕಾಲಕ್ಕೆ ಚಳಿಗಾಲ ಮುಗಿದು ಹೋಗುತ್ತದೆ ಮನುಷ್ಯ ದೇಹದಲ್ಲಿ ಚಳಿಯಿಂದ ಚರ್ಮ ಎಣ್ಣೆ ಅಂಶ ಕಡಿಮೆಯಾಗುತ್ತದೆ ಅದಕ್ಕೆ ಏಣ್ಣಿನ ಅಂಶ ಇರುವ ಎಳ್ಳು ತಿನ್ನಿ ಅನ್ನೋವುದು ವಾಡಿಕೆ ಇರಬಹುದು ಆದರೆ ವೈಜ್ಞಾನಿಕವಾಗಿ ಅದು ಸಾಭೀತಾಗಿದೆ ಆಚರಣೆ ಕರ್ನಾಟಕ (ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು ಬೆಲ್ಲ". ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳುಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು ಬೆಲ್ಲ" ತಯಾರಿಸಲಾಗುತ್ತದೆ.) (ಕರ್ನಾಟಕದ ರೈತರಿಗೆ ಸುಗ್ಗಿ (ಸುಗ್ಗಿ) ಅಥವಾ ಸುಗ್ಗಿಯ ಹಬ್ಬ. )ಈ ಮಂಗಳಕರ ದಿನದಂದು, ಯುವ ಹೆಣ್ಣುಮಕ್ಕಳು (ಮಕ್ಕಳು ಮತ್ತು ಹದಿಹರೆಯದವರು) ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ಎಂದು ಹೇಳಿಕೊಳ್ಳುತ್ತಾರೆ. ಪ್ಲೇಟ್ ಸಹ ಕಬ್ಬಿನ ತುಂಡು ವಿವಿಧ ಆಕಾರಗಳನ್ನು ಸಕ್ಕರೆ ಅಚ್ಚುಗಳನ್ನು ಹೊಂದಿರುತ್ತದೆ. (*ಕಬ್ಬು ಈ ಭಾಗಗಳಲ್ಲಿ ಪ್ರಧಾನ ಏಕೆಂದರೆ ಹಬ್ಬದ ಋತುವಿನ ಸುಗ್ಗಿಯ ಸೂಚಿಸುತ್ತದೆ. )ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆ ಯರು ತನ್ನ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಘಟನೆಯಾಗಿದೆ. (ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ. ಅವುಗಳನ್ನು "ಕಿಚ್ಚು ಹಾಯಿಸುವುದು" ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.) ತಮಿಳುನಾಡು ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ - ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ: ಭೋಗಿ: ಹೊಸ ಬಟ್ಟೆಗಳು ಪೊಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ ಮಾಟ್ಟು ಪೊಂಗಲ್: ಗೋಪೂಜೆ ಕೆಲವು ಕಡೆಗಳಲ್ಲಿ "ಜಲ್ಲಿಕಟ್ಟು" ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ ಕಾಣುಮ್ ಪೊಂಗಲ್ ಕೇರಳದ ಶಬರಿಮಲೆ ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆ ಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ. "ಮಕರ ವಿಳಕ್ಕು"ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ. ಅಂತೂ ಇದು ವೈಜ್ಞಾನಿಕವಾಗಿ ಸಾಬೀತಾಗಿ ಲ್ಲವಾದರೂ, ಪ್ರಸ್ತುತ ಕಾಲದಲ್ಲಿಯೂ ಆಧ್ಯಾತ್ಮಿಕತೆಯ ಕುರುಹನ್ನು ತೋರಿಸುತ್ತದೆ ಎನ್ನುತ್ತಾರೆ ಭಕ್ತರು. ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಾರಿರುಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ. ಇತರ ಸ್ಥಳಗಳು ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು. ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ. ಅದಕ್ಕೆ ಅವರು ಲಡ್ಡು ಎನ್ನುತ್ತಾರೆ. ಕರ್ನಾಟಕದ ಸಂಪ್ರದಾಯದ ತರಹ ಬಿಡಿ ಕಾಳುಗಳನ್ನು ಹಂಚುವ ಪದ್ಧತಿಯಿಲ್ಲ. ಎಳ್ಳುಂಡೆಕೊಡುವಾಗ ತಪ್ಪದೆ, " ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ" (ಅಂದರೆ ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾಡಿ) ಎನ್ನುವ ಮಾತು ಹೇಳುವುದನ್ನು ಮರೆಯುವುದಿಲ್ಲ! ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ," ಎಂದು ಹೆಸರು. ಉತ್ತರಾಯಣ ಆರಂಭದ ದಿನ ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಪೊಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು. ಕರ್ನಾಟಕದಲ್ಲಿ ಎಳ್ಳು, ಸಕ್ಕರೆ - ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ. ದನಕರುಗಳಿಗೆ ಮೈ ತೊಳೆದು - ಭೂತಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ - ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು. ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ. ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ ಸೂರ್ಯದೇವ ವಿಶ್ವದ ಆತ್ಮ; ಜಗತ್ತಿನ ಕಣ್ಣು; ಮಳೆ ಬೀಳಲು, ಬೆಳೆ-ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಕಾರಣ ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ ಬುದ್ದಿ ಸಮೃದ್ದಿಗಳನ್ನು ನೀಡಬಲ್ಲದು. ಉತ್ತರಾಯಣ ಪುಣ್ಯ ಕಾಲ : ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 13 ಅಥವಾ 14 ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ. ಸೂರ್ಯನು ಇದೇ ಜನವರಿ 13 ರಂದು ರಾತ್ರಿ 12 ಗಂಟೆ 57 ನಿಮಿಷಕ್ಕೆ ನಿರಯಣ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ರಾತ್ರಿಯಾಗಿದ್ದರಿಂದ ಜನವರಿ 14ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. 14ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನ, ಜನ್ಮ ಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು - ಬೆಲ್ಲ ಹಂಚುವುದು. ಜನವರಿ 14 ರಂದು, ಎಳ್ಳು - ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ, ಮಕರ ಸಂಕ್ರಾಂತಿಯ ಒಂದು ವಿಶೇಷ. ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಎಂದು ಹೆಸರು. ಈ ಸಂಕ್ರಾಂತಿಯ ಕಾಲ, ಪುಣ್ಯ ಕಾಲವಾಗಿರುತ್ತದೆ. ಮೇಷ ಸಂಕ್ರಾಂತಿ - ವಿಷುವತ್ ಪುಣ್ಯಕಾಲ, ವೃಷಭ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಮಿಥುನ ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ಕಟಕ ಸಂಕ್ರಾಂತಿ - ದಕ್ಷಿಣಾಯನ ಪುಣ್ಯಕಾಲ, ಸಿಂಹ ಸಂಕ್ರಾಂತಿ ವಿಷ್ಣುಪದ ಪುಣ್ಯಕಾಲ, ಕನ್ಯಾ ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ತುಲಾ ಸಂಕ್ರಾಂತಿ - ವಿಷುವತ್ ಪುಣ್ಯಕಾಲ, ವೃಶ್ಚಿಕ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಧನಸ್ಸು ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ಮಕರ ಸಂಕ್ರಾಂತಿ - ಉತ್ತರಾಯಣ ಪುಣ್ಯಕಾಲ, ಕುಂಭ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಮೀನ ಸಂಕ್ರಾಂತಿ - ಷಡಶೀತಿ ಪುಣ್ಯಕಾಲವೆಂದು ಪ್ರಸಿದ್ದಿಯಾಗಿದೆ. ವಿಷ್ಣುಪದ ಪುಣ್ಯಕಾಲಕ್ಕಿಂತಲೂ, ಷಡಶೀತಿ ಪುಣ್ಯಕಾಲ ಶ್ರೇಷ್ಠವಾಗಿದೆ. ಷಡಶೀತಿ ಪುಣ್ಯ ಕಾಲಕ್ಕಿಂತಲೂ, ವಿಷ್ಣುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷ್ಣುವತ್ ಪುಣ್ಯಕಾಲಕ್ಕಿಂತಲೂ ಆಯನ ಪುಣ್ಯ ಕಾಲ ಅತ್ಯಂತ ಶ್ರೇಷ್ಠವಾಗಿದೆ. ದಕ್ಷಿಣಾಯನ ಕಾಲಕ್ಕಿಂತಲೂ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ. ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿದ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳು. ಆಯನವೆಂದರೆ ಸೂರ್ಯನು ಚಲಿಸುವಮಾರ್ಗ, ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ-ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದು ಹೇಳಲಾಗುತ್ತದೆ. ಶಾಸ್ತ್ತ್ರ ದೃಷ್ಟಿಯಲ್ಲಿ ಸಂಕ್ರಾಂತಿ ನಿರ್ಣಯಸಿಂಧುವಿನಲ್ಲಿ ಈ ಹಬ್ಬದ ವಿಚಾರವಾಗಿ ಹೀಗೆ ಹೇಳಿದೆ. ಶಿತಸ್ಯಾಂ ಕೃಷ್ಣತೈಲೈಃ ಸ್ನಾನ ಕಾರ್ಯಂ ಚೋದ್ವರ್ತನಂ ಶುಭೈಃ ತಿಲಾ ದೇಯಾಶ್ಚ ವಿಪ್ರೇಭ್ಯೌ ಸರ್ವದೇವೋತ್ತರಾಯಣೇ ತಿಲ ತೈಲೇನ ದೀಪಾಶ್ಚ ದೇಯಾಃ ದೇವಗೃಹೇ ಶುಭಾಃಷಿ ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಬ್ರಾಹ್ಮಣರಿಗೆ ಎಳ್ಳು ದಾನ ಕೊಡಬೇಕು. ದೇವಾಲಯಗಳಲ್ಲಿ ಎಳ್ಳೆಣ್ಣೆಯ ದೀಪ ಬೆಳಗಬೇಕು. ಧರ್ಮ ಸಿಂಧುವಿನಲ್ಲಿ ಹೀಗೆ ಹೇಳಿದೆ ಶಿಸಂಕ್ರಾಂತೌ ಯಾನಿ ದತ್ತಾನಿ ಹವ್ಯ - ಕವ್ಯಾನಿ ದಾತೃಭಿಃ ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ | ತಿಲಾ ದೇಯಾಶ್ಚ ಹೋತವ್ಯಾ ಭಕ್ಷಾಶ್ಚೈವೋತ್ತರಾಯಣೇಷಿ ಅಂದರೆ ಉತ್ತರಾಯಣದ ಪುಣ್ಯಕಾಲದಂದು ನಾವು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ಈ ಹಬ್ಬಕ್ಕೂ ಎಳ್ಳಿಗೂ ನಿಕಟ ಸಂಬಂಧವಿದೆ. ಎಳ್ಳು-ಚಿಗಳಿ ಸಂಕ್ರಾಂತಿ ಎಳ್ಳು, ಎಳ್ಳು ಬೀಸಿ ಬೆಲ್ಲ ಹಾಕಿ ಮಾಡಿದ ಎಳ್ಳು ನೀರು ಅಪ್ಯಾಯಮಾನವಾಗಿರುತ್ತದೆ. ಶೀತ-ವಾತ ಜನ್ಯವಾದ ಜಡ್ಡು ಅಲಸ್ಯಗಳನ್ನು ದೂರ ಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವೆನೆ, ದಾನ-ಧರ್ಮ ಈ ಹಬ್ಬದ ವೈಶಿಷ್ಟ್ಯ. ಯುಗಾದಿಯಂದು ಬೇವು-ಬೆಲ್ಲ ಹಂಚುವಂತೆ, ಇಲ್ಲಿ ಎಳ್ಳು-ಬೆಲ್ಲ ಹಂಚುವುದು, ಮನಸ್ಸಿನ ಕಹಿ ಭಾವನೆ ಮರೆತು ಸಿಹಿ ಭಾವ ತುಂಬಿ ಅಮೃತ ಪುತ್ರರಾಗೋಣ ಎಂಬುದರ ದ್ಯೌತಕವಾಗಿದೆ. ಗಣೇಶಚತುರ್ಥಿ, ದೀಪಾವಳಿಗಳಂದು ಕಂಡುಬರುವ ಬಾಹ್ಯಾಡಂಬರ, ಬಾಣ ಬಿರುಸುಗಳೇ ಮುಂತಾದ ವ್ಯರ್ಥವಾದ ಖರ್ಚು-ವೆಚ್ಚಗಳು ಇಲ್ಲದಿರುವುದು ಈ ಹಬ್ಬದ ಅಗ್ಗಳಿಕೆಯೆನ್ನಬಹುದು. ಎಳ್ಳು - ಬೆಲ್ಲ, ಶೀತ - ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. ಶಿಎಳ್ಳು - ಬೆಲ್ಲ ತಿಂದು ಒಳ್ಳೆ ಮಾತಾಡುಷಿ ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ. ನೋಡಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ತರಾಯಣ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಯನ ಸಂಕ್ರಾಂತಿಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಂಕ್ರಾಂತಿ ಉಲ್ಲೇಖ ವರ್ಗ:ಹಬ್ಬಗಳು ವರ್ಗ:ಸಂಸ್ಕೃತಿ ವರ್ಗ:ಹಿಂದೂ ಧರ್ಮದ ಹಬ್ಬಗಳು
ಅಮರೀಶ್ ಪುರಿ
https://kn.wikipedia.org/wiki/ಅಮರೀಶ್_ಪುರಿ
thumb|right|ಅಮರೀಶ್ ಪುರಿ ಅಮರೀಶ್ ಪುರಿ (ಜೂನ್ ೨೨,೧೯೩೨ -ಜನವರಿ ೧೨, ೨೦೦೫) ಭಾರತೀಯ ಚಿತ್ರನಟ. ಸಾಮಾನ್ಯವಾಗಿ ಖಳನಾಯಕರ ಪಾತ್ರಗಳಲ್ಲಿ ನಟಿಸುತ್ತಿದ್ದ ಅಮರೀಶ್ ಪುರಿ, ಹೆಚ್ಚಾಗಿ ಹಿ೦ದಿ ಚಿತ್ರಗಳಲ್ಲಿ ನಟಿಸಿದವರು. ಕೆಲವು ತೆಲುಗು ಚಿತ್ರಗಳು ಹಾಗೂ ಎರಡು ಇ೦ಗ್ಲಿಷ್ ಚಿತ್ರಗಳಲ್ಲಿ ("ಗಾಂಧಿ" ಮತ್ತು "ಇ೦ಡಿಯಾನಾ ಜೋನ್ಸ್ ಎ೦ಡ್ ದ ಟೆ೦ಪಲ್ ಅಫ್ ಡೂಮ್) ಸಹ ನಟಿಸಿದ್ದರು. ಮಿಸ್ಟರ್ ಇ೦ಡಿಯಾ ಚಿತ್ರದ "ಮೊಗ್ಯಾ೦ಬೋ ಖುಷ್ ಹುವಾ" ವಾಕ್ಯದ ಮೂಲಕ ಬಹಳ ಪ್ರಸಿದ್ಧರಾದರು - ಈ ಚಿತ್ರ ಕನ್ನಡದಲ್ಲಿ "ಜೈ ಕರ್ನಾಟಕ" ಹೆಸರಿನಲ್ಲಿ ಪುನರ್ನಿರ್ಮಾಣಗೊ೦ಡಿತ್ತು. "ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇ೦ಗೇ" ಚಿತ್ರದಲ್ಲಿ ಬಲದೇವ್ ಸಿ೦ಗ್ ಪಾತ್ರದ ಮೂಲಕ ಇ೦ಗ್ಲೆ೦ಡಿನಲ್ಲಿ ಸಹ ಪ್ರಸಿದ್ಧಿಗೆ ಬ೦ದಿದ್ದರು. ಕೆಲವು ತೆಲುಗು ಚಿತ್ರಗಳಲ್ಲಿಯೂ ನಟಿಸಿದ ಅಮರೀಶ್ ಪುರಿ, ತಾವೇ ತೆಲುಗಿನಲ್ಲಿ ಮಾತನ್ನೂ ಆಡುತ್ತಿದ್ದರು. ತಮ್ಮ ನಟನಾ-ಸಾಮರ್ಥ್ಯಕ್ಕೆ, ತಮ್ಮ ಧ್ವನಿ ಹಾಗೂ ಸ೦ಭಾಷಣೆಯ ಶೈಲಿಗೆ ಇವರು ಪ್ರಸಿದ್ಧರಾಗಿದ್ದರು. ಜನವರಿ ೧೨, ೨೦೦೫ ರಂದು ಅಮರೀಶ್ ಪುರಿ ಮು೦ಬೈ ನಗರದಲ್ಲಿ ಮೆದುಳಿನ ರಕ್ತಸ್ರಾವದಿ೦ದ ಮೃತರಾದರು. ka ಪ್ರಸಿದ್ಧ ಚಿತ್ರಗಳು ರೇಷ್ಮಾ ಔರ್ ಶೇರಾ (೧೯೭೧) ಗಾಂಧಿ (೧೯೮೨) ಇ೦ಡಿಯಾನಾ ಜೋನ್ಸ್ ಎ೦ಡ್ ದ ಟೆ೦ಪಲ್ ಅಫ್ ಡೂಮ್ (೧೯೮೪) ಮಿಸ್ಟರ್ ಇ೦ಡಿಯಾ (೧೯೮೭) ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇ೦ಗೇ (೧೯೯೫) ಕಾಲಾ ಪಾನಿ (೧೯೯೬) ಪರ್ದೇಸ್ (೧೦೦೭) ಚಾಚೀ ೪೨೦ (೧೯೯೮) ಹಲ್ ಚಲ್ (೨೦೦೪) ಬಾಹ್ಯ ಸ೦ಪರ್ಕಗಳು ಅಮರೀಶ್ ಪುರಿ ವರ್ಗ:ಸಿನಿಮಾ ತಾರೆಗಳು ವರ್ಗ:ಬಾಲಿವುಡ್ ವರ್ಗ:೧೯೨೩ ಜನನ ವರ್ಗ:೨೦೦೫ ನಿಧನ
ಬೆನ್ನಿ ಹಿನ್
https://kn.wikipedia.org/wiki/ಬೆನ್ನಿ_ಹಿನ್
ಬೆನೆಡಿಕ್ಟಸ್ "ಬೆನ್ನಿ" ಹಿನ್ (ಜನನ: ೧೯೫೩), ಅಮೆರಿಕದಲ್ಲಿ ವಾಸಿಸುವ ಮೂಲತಃ ಆರ್ಮೇನಿಯಾದ ಕ್ರೈಸ್ತ ಪಾದ್ರಿ. ಇವರು ಹುಟ್ಟಿದ್ದು ಜೆರುಸಲೆ೦ನಲ್ಲಿ. ಪರಿಚಯ ೯೦ ರ ದಶಕದಲ್ಲಿ ತಮ್ಮ ಟಿವಿ ಕಾರ್ಯಕ್ರಮ "ದಿಸ್ ಇಸ್ ಯುವರ್ ಡೇ" (ಇದು ನಿಮ್ಮ ದಿನ) ದ ಮೂಲಕ ಬೆನ್ನಿ ಹಿನ್ ಪ್ರಸಿದ್ಧರಾದರು. ಈ ಕಾರ್ಯಕ್ರಮದಲ್ಲಿ ಬೆನ್ನಿ ಹಿನ್ ಅವರು ಕಾಹಿಲೆ ಬ೦ದ ವ್ಯಕ್ತಿಗಳನ್ನು ಸ್ಪರ್ಶದ ಮೂಲಕ ಗುಣಪಡಿಸುವ ಸಾಮರ್ಥ್ಯವನ್ನು ಹೊ೦ದಿರುವುದಾಗಿ ಹೇಳುತ್ತಿದ್ದರು, ಮತ್ತು ಇದನ್ನು ತೋರಿಸುವುದಕ್ಕೆ ಕೆಲ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಲಾಯಿತು. ಈ ರೀತಿಯ ಗುಣಪಡಿಸುವಿಕೆ ಸಾಕಷ್ಟು ವಿವಾದವನ್ನು ಸೃಷ್ಟಿಸಿ ಬೆನ್ನಿ ಹಿನ್ ಆಗಾಗ ಹಳದಿ ಪತ್ರಿಕೆಗಳಲ್ಲಿ ಬರಲಾರ೦ಭಿಸಿದರು. ಇತ್ತೀಚೆಗೆ ಬೆನ್ನಿ ಹಿನ್ ಅಮೆರಿಕದ ಸ೦ಯುಕ್ತ ಸ೦ಸ್ಥಾನ ಮತ್ತು ಪ್ರಪ೦ಚದ ವಿವಿಧೆಡೆಗಳಲ್ಲಿ ಸ೦ಚರಿಸುತ್ತಾರೆ. ಅನೇಕ ದೇಶಗಳ ಕ್ರೈಸ್ತ ಸಮುದಾಯಗಳಲ್ಲಿ ಬೆನ್ನಿ ಹಿನ್ ಸಾಕಷ್ಟು ವಿವಾದಾಸ್ಪದ ವ್ಯಕ್ತಿಯಾಗಿದ್ದಾರೆ. ಅವರು ನಿಜಕ್ಕೂ ದೇವರ ಮನುಷ್ಯರು ಎಂದು ಕೆಲವರು ನ೦ಬಿದರೆ, ಇತರರು ಹೇಳುವ೦ತೆ ಅದು ನಿಜವಲ್ಲ. ಇನ್ನು ಕೆಲವರು ಬೆನ್ನಿ ಹಿನ್ ರ ಹೇಳಿಕೆಗಳನ್ನು ಧರ್ಮಬಾಹಿರ ಎಂದು ಘೋಷಿಸಿದ್ದಾರೆ. ಡಿಸ೦ಬರ್ ೩೧, ೧೯೮೯ ರಂದು ಬೆನ್ನಿ ಹಿನ್ "ಆರ್ಲ್ಯಾ೦ಡೋ ಕ್ರೈಸ್ತ ಕೇ೦ದ್ರ" ಎ೦ಬ ತಮ್ಮ ಚರ್ಚ್ ನಲ್ಲಿ ಕೆಲವು ಭವಿಷ್ಯವಾಣಿಗಳನ್ನು ಘೋಷಿಸಿದರು. ಇವುಗಳಲ್ಲಿ ಎಲ್ಲವೂ ನಿಜವಾಗಿಲ್ಲ (ಉದಾ: ಕ್ಯೂಬಾ ದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ೯೦ ರ ದಶಕದಲ್ಲಿ ನಿಧನರಾಗುವರೆ೦ದು ಬೆನ್ನಿ ಹಿನ್ ಹೇಳಿಕೆಯನ್ನಿತ್ತಿದ್ದರು). ನವ೦ಬರ್ ೯, ೨೦೦೪ ರಂದು ಕೆನಡಾ ದ ಒಂದು ಟಿವಿ ಚಾನಲ್ ಬೆನ್ನಿ ಹಿನ್ ರನ್ನು ಟೀಕಿಸಿ ಒಂದು ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಬೆನ್ನಿ ಹಿನ್ ರವರು ಭಕ್ತರನ್ನು ಮೋಸಗೊಳಿಸಲು ಅನೇಕ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂದು ಈ ಕಾರ್ಯಕ್ರಮ ತೋರಿಸಿತು. ಬೆನ್ನಿ ಹಿನ್ ರವರ ಚರ್ಚ್ ಈ ಕಾರ್ಯಕ್ರಮಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಇತ್ತೀಚೆಗೆ (ಜನವರಿ ೨೧-೨೩) ಬೆ೦ಗಳೂರಿನಲ್ಲಿ ಬೆನ್ನಿ ಹಿನ್ "ಭಾರತಕ್ಕಾಗಿ ಪ್ರಾರ್ಥಿಸಿ" ಎ೦ಬ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದ್ದಾರೆ. ಇದೂ ಸಹ ಬಹಳ ವಿವಾದವನ್ನು ಸೃಷ್ಟಿಸಿದೆ. ಬಾಹ್ಯ ಸ೦ಪರ್ಕಗಳು ಬೆನ್ನಿ ಹಿನ್ ರ ಚರ್ಚ್ ಬೆನ್ನಿ ಹಿನ್ ರ ಬಗ್ಗೆ ಟೀಕೆಗಳು ವರ್ಗ:ಕ್ರೈಸ್ತ ಧರ್ಮ ಪ್ರಚಾರಕರು
ಗಣರಾಜ್ಯೋತ್ಸವ (ಭಾರತ)
https://kn.wikipedia.org/wiki/ಗಣರಾಜ್ಯೋತ್ಸವ_(ಭಾರತ)
thumb|ಗಣರಾಜ್ಯ ದಿನದ ಮೆರವಣಿಗೆ thumb|300px|ಭಾರತದ ಮೊದಲ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತದಲ್ಲಿ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ.ಮತ್ತು ದೇಶದೆಲ್ಲೆಡೆ ಜನರು ಹೆಮ್ಮೆಯಿಂದ ಈ ದಿನವನ್ನು ಆಚರಿಸಲಾಗುತ್ತದೆ. ಇತಿಹಾಸ ಭಾರತವು ಆಗಸ್ಟ್ 15, 1947 ರಂದು ಸ್ವತಂತ್ರವಾದ ನಂತರ, ಆಗಸ್ಟ್ 29 ರಂದು, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕರಡು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯು ಸಂವಿಧಾನದ ಕರಡನ್ನು ಸಿದ್ಧಪಡಿಸಿ ನವೆಂಬರ್ 4, 1947 ರಂದು ವಿಧಾನಸಭೆಯಲ್ಲಿ ಮಂಡಿಸಿತು. ಇದನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು ಮತ್ತು ಅನೇಕ ಪರಿಷ್ಕರಣೆಗಳು ಮತ್ತು ತಿದ್ದುಪಡಿಗಳ ನಂತರ, ಭಾರತದ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು. ಭಾರತೀಯ ಸ್ವಾತಂತ್ರ್ಯ ಚಳುವಳಿ, ಜನವರಿ 26, 1929 ರಂದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯವನ್ನು ಗುರಿಯಾಗಿಸಿಕೊಂಡಿತು. ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ದಿನವನ್ನು ಪೂರ್ಣ ಸ್ವರಾಜ್ ದಿನ ಎಂದು ಘೋಷಿಸಲಾಯಿತು. ಈ ಕಾರಣಕ್ಕಾಗಿಯೇ ಭಾರತದ ಸಂವಿಧಾನವನ್ನು ಸ್ವಾತಂತ್ರ್ಯದ ನಂತರ ಈ ದಿನದಂದು ಜಾರಿಗೆ ತರಲಾಯಿತು. ಚಿತ್ರ ಮುಖ್ಯ ಗಣರಾಜ್ಯೋತ್ಸವವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್‌ಪಾತ್‌ನಲ್ಲಿ ಭಾರತದ ರಾಷ್ಟ್ರಪತಿಗಳ ಮುಂದೆ ನಡೆಸಲಾಗುತ್ತದೆ. ಈ ದಿನ, ರಾಜ್‌ಪಾತ್‌ನಲ್ಲಿ ವಿಧ್ಯುಕ್ತ ಮೆರವಣಿಗೆಗಳು ನಡೆಯುತ್ತವೆ, ಇದನ್ನು ಭಾರತಕ್ಕೆ ಗೌರವವಾಗಿ ನಡೆಸಲಾಗುತ್ತದೆ; ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಅದರ ಏಕತೆ. ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ಮುಖ್ಯ ಲೇಖನ: ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ದೆಹಲಿ ಗಣರಾಜ್ಯೋತ್ಸವ ಮೆರವಣಿಗೆಯನ್ನು ರಾಜಧಾನಿ ನವದೆಹಲಿಯಲ್ಲಿ ರಕ್ಷಣಾ ಸಚಿವಾಲಯ ಆಯೋಜಿಸಿದೆ. ಭಾರತ ಗೇಟ್‌ನ ಹಿಂದೆ ರಾಜ್‌ಪಾತ್‌ನಲ್ಲಿರುವ ರಾಷ್ಟ್ರಪತಿ ಭವನ (ಅಧ್ಯಕ್ಷರ ನಿವಾಸ) ದ್ವಾರಗಳಿಂದ ಪ್ರಾರಂಭವಾದ ಈ ಘಟನೆಯು ಮೂರು ದಿನಗಳ ಕಾಲ ನಡೆಯುವ ಭಾರತದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಮೆರವಣಿಗೆ ಭಾರತದ ರಕ್ಷಣಾ ಸಾಮರ್ಥ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ನೌಕಾಪಡೆಗೆ ಹೆಚ್ಚುವರಿಯಾಗಿ ಭಾರತೀಯ ಸೇನೆಯ ಒಂಬತ್ತರಿಂದ ಹನ್ನೆರಡು ವಿಭಿನ್ನ ರೆಜಿಮೆಂಟ್‌ಗಳು, ಮತ್ತು ವಾಯುಪಡೆಯು ತಮ್ಮ ಬ್ಯಾಂಡ್‌ಗಳೊಂದಿಗೆ ತಮ್ಮ ಎಲ್ಲಾ ಉತ್ಕೃಷ್ಟ ಮತ್ತು ಅಧಿಕೃತ ಅಲಂಕಾರಗಳಲ್ಲಿ ಕಳೆದವು. ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುವ ಭಾರತದ ರಾಷ್ಟ್ರಪತಿಗಳು ವಂದನೆ ಸಲ್ಲಿಸುತ್ತಾರೆ. ಭಾರತದ ವಿವಿಧ ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ಇತರ ನಾಗರಿಕ ಪಡೆಗಳ ಹನ್ನೆರಡು ತುಕಡಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. ಬೀಟಿಂಗ್ ರಿಟ್ರೀಟ್ ಮುಖ್ಯ ಲೇಖನ: ಹಿಮ್ಮೆಟ್ಟುವಿಕೆಯನ್ನು ಸೋಲಿಸುವುದು ಗಣರಾಜ್ಯೋತ್ಸವದ ಅಂತ್ಯವನ್ನು ಅಧಿಕೃತವಾಗಿ ಸೂಚಿಸಿದ ನಂತರ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ನಡೆಸಲಾಗುತ್ತದೆ. ಗಣರಾಜ್ಯೋತ್ಸವದ ನಂತರದ ಮೂರನೇ ದಿನವಾದ ಜನವರಿ 29 ರ ಸಂಜೆ ಇದನ್ನು ನಡೆಸಲಾಗುತ್ತದೆ. ಇದನ್ನು ಮಿಲಿಟರಿ, ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮೂರು ರೆಕ್ಕೆಗಳ ತಂಡಗಳು ನಿರ್ವಹಿಸುತ್ತವೆ. ಈ ಸ್ಥಳವು ರೈಸಿನಾ ಬೆಟ್ಟ ಮತ್ತು ಪಕ್ಕದ ಚೌಕ, ವಿಜಯ್ ಚೌಕ್, ರಾಷ್ಟ್ರಪತಿ ಭವನದ (ಅಧ್ಯಕ್ಷರ ಅರಮನೆ) ಉತ್ತರ ಮತ್ತು ದಕ್ಷಿಣ ಭಾಗದಿಂದ ರಾಜ್‌ಪಾತ್‌ನ ಕೊನೆಯಲ್ಲಿ ಇದೆ. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾರತದ ರಾಷ್ಟ್ರಪತಿಗಳು ಅಶ್ವದಳದ ಘಟಕವಾದ (ಪಿಬಿಜಿ) ಬೆಂಗಾವಲು ಆಗಮಿಸುತ್ತಾರೆ. ಅಧ್ಯಕ್ಷರು ಬಂದಾಗ, ಪಿಬಿಜಿ ಕಮಾಂಡರ್ ಅವರು ರಾಷ್ಟ್ರೀಯ ವಂದನೆ ನೀಡುವಂತೆ ಘಟಕವನ್ನು ಕೇಳುತ್ತಾರೆ, ಅದರ ನಂತರ ಸೇನೆಯು ಭಾರತೀಯ ರಾಷ್ಟ್ರಗೀತೆ ಜನ ಗಣ ಮನವನ್ನು ನುಡಿಸುತ್ತದೆ. ಸೈನ್ಯವು ಸಾಮೂಹಿಕ ಬ್ಯಾಂಡ್‌ಗಳಿಂದ ಪ್ರದರ್ಶನ ಸಮಾರಂಭವನ್ನು ಅಭಿವೃದ್ಧಿಪಡಿಸುತ್ತದೆ, ಇದರಲ್ಲಿ ಮಿಲಿಟರಿ ಬ್ಯಾಂಡ್‌ಗಳು, ಪೈಪ್ ಮತ್ತು ಡ್ರಮ್ ಬ್ಯಾಂಡ್‌ಗಳು, ವಿವಿಧ ಸೇನಾ ರೆಜಿಮೆಂಟ್‌ಗಳ ಬಗ್ಲರ್‌ಗಳು ಮತ್ತು ಟ್ರಂಪೆಟರ್‌ಗಳು ಮತ್ತು ನೌಕಾಪಡೆ ಮತ್ತು ವಾಯುಪಡೆಯ ಬ್ಯಾಂಡ್‌ಗಳು ಭಾಗವಹಿಸುತ್ತವೆ, ಇದು ಮಹಾತ್ಮ ಗಾಂಧಿಯವರ ನೆಚ್ಚಿನ ಅಬೈಡ್ ವಿಥ್ ಮಿ ನಂತಹ ಜನಪ್ರಿಯ ರಾಗಗಳನ್ನು ನುಡಿಸುತ್ತದೆ. ಸ್ತುತಿಗೀತೆ, ಮತ್ತು ಕೊನೆಯಲ್ಲಿ ಸಾರೇ ಜಹಾನ್ ಸೆ ಅಚ್ಚಾ. ಪ್ರಶಸ್ತಿ ವಿತರಣೆ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತದ ಅಧ್ಯಕ್ಷರು ಪ್ರತಿವರ್ಷ ಭಾರತದ ನಾಗರಿಕರಿಗೆ ಪದ್ಮಾ ಪ್ರಶಸ್ತಿಗಳನ್ನು ವಿತರಿಸಿದರು, ಇದು ಭಾರತದ ರತ್ನ ನಂತರದ ಪ್ರಮುಖ ಪ್ರಶಸ್ತಿ, ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡಲಾಗಿದೆ, ಅಂದರೆ. ಪ್ರಾಮುಖ್ಯತೆಯ ಕ್ಷೀಣಿಸುತ್ತಿರುವ ಕ್ರಮದಲ್ಲಿ ಪದ್ಮವಿಭೂಷಣ, ಪದ್ಮಭೂಷಣ್ ಮತ್ತು ಪದ್ಮಶ್ರೀ. ಅಸಾಧಾರಣ ಮತ್ತು ವಿಶಿಷ್ಟ ಸೇವೆ" ಗಾಗಿ ಪದ್ಮವಿಭೂಷಣ್. ಪದ್ಮವಿಭೂಷಣ್ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. "ಉನ್ನತ ಕ್ರಮಾಂಕದ ವಿಶಿಷ್ಟ ಸೇವೆ" ಗಾಗಿ ಪದ್ಮಭೂಷಣ್. ಪದ್ಮಭೂಷಣ್ ಭಾರತದ ಮೂರನೇ ಅತಿ ಹೆಚ್ಚು ನಾಗರಿಕ ಪ್ರಶಸ್ತಿ. "ವಿಶೇಷ ಸೇವೆ" ಗಾಗಿ ಪದ್ಮಶ್ರೀ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪದ್ಮಶ್ರೀ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ರಾಷ್ಟ್ರೀಯ ಗೌರವಗಳಾಗಿದ್ದರೂ, ಪದ್ಮಾ ಪ್ರಶಸ್ತಿಗಳು ನಗದು ಭತ್ಯೆಗಳು, ಪ್ರಯೋಜನಗಳು ಅಥವಾ ರೈಲು / ವಿಮಾನ ಪ್ರಯಾಣದಲ್ಲಿ ವಿಶೇಷ ರಿಯಾಯಿತಿಗಳನ್ನು ಒಳಗೊಂಡಿಲ್ಲ. ಭಾರತದ ಸುಪ್ರೀಂ ಕೋರ್ಟ್‌ನ 1995 ರ ಡಿಸೆಂಬರ್ ತೀರ್ಪಿನ ಪ್ರಕಾರ, ಯಾವುದೇ ಶೀರ್ಷಿಕೆಗಳು ಅಥವಾ ಗೌರವಗಳು ಭಾರತ್ ರತ್ನ ಅಥವಾ ಯಾವುದೇ ಪದ್ಮ ಪ್ರಶಸ್ತಿಗಳೊಂದಿಗೆ ಸಂಬಂಧ ಹೊಂದಿಲ್ಲ; ಗೌರವಿಸುವವರು ಅವುಗಳನ್ನು ಅಥವಾ ಅವರ ಮೊದಲಕ್ಷರಗಳನ್ನು ಪ್ರತ್ಯಯಗಳು, ಪೂರ್ವಪ್ರತ್ಯಯಗಳು ಅಥವಾ ಪ್ರಶಸ್ತಿ ಪುರಸ್ಕೃತರ ಹೆಸರಿಗೆ ಲಗತ್ತಿಸಲಾದ ಪೂರ್ವ ಮತ್ತು ನಂತರದ ನಾಮನಿರ್ದೇಶನಗಳಾಗಿ ಬಳಸಲಾಗುವುದಿಲ್ಲ. ಲೆಟರ್‌ಹೆಡ್‌ಗಳು, ಆಮಂತ್ರಣ ಪತ್ರಗಳು, ಪೋಸ್ಟರ್‌ಗಳು, ಪುಸ್ತಕಗಳು ಇತ್ಯಾದಿಗಳಲ್ಲಿ ಇದು ಅಂತಹ ಯಾವುದೇ ಬಳಕೆಯನ್ನು ಒಳಗೊಂಡಿದೆ. ಯಾವುದೇ ದುರುಪಯೋಗದ ಸಂದರ್ಭದಲ್ಲಿ, ಪ್ರಶಸ್ತಿ ಪುರಸ್ಕೃತನು ಪ್ರಶಸ್ತಿಯನ್ನು ಕಳೆದುಕೊಳ್ಳುತ್ತಾನೆ, ಮತ್ತು ಗೌರವವನ್ನು ಪಡೆದ ನಂತರ ಅಂತಹ ಯಾವುದೇ ದುರುಪಯೋಗದ ವಿರುದ್ಧ ಅವನು ಅಥವಾ ಅವಳು ಎಚ್ಚರಿಕೆ ವಹಿಸುತ್ತಾರೆ. ಅಲಂಕಾರವು ಅಧ್ಯಕ್ಷರ ಕೈ ಮತ್ತು ಮುದ್ರೆಯಡಿಯಲ್ಲಿ ನೀಡಲಾದ ಸನಾದ್ (ಪ್ರಮಾಣಪತ್ರ) ಮತ್ತು ಮೆಡಾಲಿಯನ್ ಅನ್ನು ಒಳಗೊಂಡಿದೆ. ಸ್ವೀಕರಿಸುವವರಿಗೆ ಪದಕದ ಪ್ರತಿಕೃತಿಯನ್ನು ಸಹ ನೀಡಲಾಗುತ್ತದೆ, ಅವರು ಬಯಸಿದರೆ ಯಾವುದೇ ವಿಧ್ಯುಕ್ತ / ರಾಜ್ಯ ಕಾರ್ಯಗಳು ಇತ್ಯಾದಿಗಳಲ್ಲಿ ಧರಿಸಬಹುದು. ಪ್ರತಿ ಪ್ರಶಸ್ತಿ ವಿಜೇತರಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವಿವರಗಳನ್ನು ನೀಡುವ ಸ್ಮರಣಾರ್ಥ ಕರಪತ್ರವನ್ನು ಹೂಡಿಕೆ ಸಮಾರಂಭದ ದಿನದಂದು ಬಿಡುಗಡೆ ಮಾಡಲಾಗುತ್ತದೆ. ಮುಖ್ಯ ಅತಿಥಿ ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ. ವರ್ಷ ಮುಖ್ಯ ಅತಿಥಿ ದೇಶ ೧೯೫೦ಅಧ್ಯಕ್ಷರು ಸುಕಾರ್ನೊ ಇ೦ಡೋನೇಷ್ಯಾ ೧೯೫೪ ಕಿ೦ಗ್ ಜಿಗಮೆ ದೊರ್ಜಿ ವಾ೦ಗಚಕ್ ಭೂತಾನ್ ೧೯೫೫ ಗವನ೯ರ್ ಜನರಲ್ ಮಲ್ಲಿಕ್ ಗುಲಾಮ್ ಮೊಹಮ್ಮದ್ ಪಾಕಿಸ್ತಾನ ೧೯೫೮ ಮಾಷ೯ಲ್ ಯೆ ಜಿನ್ ಯಿ೦ಗ್ ಚೀನಾ ೧೯೬೦ ಪ್ರಧಾನ ಮ೦ತ್ರಿ ಕ್ಲೈಮ೦ಟ್ ವೊರೊಸಿಲ್ವೊ ಸೊವಿಯತ್ ಯುನಿಯನ್ ೧೯೬೧ ರಾಣಿ ಎಲಿಜಾಬೆತ್ ಯುನ್ಯಟೆಡ್ ಕಿ೦ಗಡಮ್ ೧೯೬೩ ಕಿ೦ಗ್ ನೊರೊಡೊಮ್ ಸಿನೌಕ್ ಕಾ೦ಬೊಡಿಯಾ ೧೯೭೬ ಪ್ರಧಾನ ಮಂತ್ರಿ ಜಾಕ್ಸ್ ಚಿರಾಕ್ ಫ್ರಾನ್ಸ್ ೧೯೭೮ ರಾಷ್ಟ್ರಪತಿ ಡಾ. ಪ್ಯಾಟ್ರಿಕ್ ಹಿಲ್ಲರಿ ೧೯೮೬ ಪ್ರಧಾನ ಮಂತ್ರಿ ಆಂಡ್ರಿಯಾಸ್ ಪಪನ್ಡರ್ಯೂ ೧೯೯೨ ರಾಷ್ಟ್ರಪತಿ ಮಾರಿಯೊ ಸೋರೆಸ್ ೧೯೯೫ ರಾಷ್ಟ್ರಪತಿ ನೆಲ್ಸನ್ ಮಂಡೇಲ "General South African History timeline" sahistory.org.za Accessed on June 13, 2008 . ೧೯೯೬ ರಾಷ್ಟ್ರಪತಿ ಡಾ. ಫರ್ನ್ಯಾನ್ಡೋ ಹೆನ್ರಿಕ್ ಕಾರ್ದೊಸೊ ೧೯೯೭ ಪ್ರಧಾನ ಮಂತ್ರಿ ಬಸ್ದಿಯೊ ಪಾಂಡೆ ೧೯೯೮ ರಾಷ್ಟ್ರಪತಿ ಜಾಕ್ಸ್ ಚಿರಾಕ್ ಫ್ರಾನ್ಸ್ ೧೯೯೯ ರಾಜ ಬೀರೇದ್ರ ಬೀರ್ ಬಿಕ್ರಮ್ ಶಾಹ್ ದೇವ್ ೨೦೦೦ ರಾಷ್ಟ್ರಪತಿ ಒಲೆಸುಗುನ್ ಒಬಸಾಂಜೊ ೨೦೦೧ ರಾಷ್ಟ್ರಪತಿ ಅಬ್ದೆಲ್‌ಅಜೀಜ್ ಬೌತೆಫ್ಲಿಕ ೨೦೦೨ ರಾಷ್ಟ್ರಪತಿ ಕಸ್ಸಮ್ ಉತೀಮ್ ೨೦೦೩ ರಾಷ್ಟ್ರಪತಿ ಮೊಹಮ್ಮದ್ ಖಾತಾಮಿ ೨೦೦೪ ರಾಷ್ಟ್ರಪತಿ ಲುಯಿಜ್ ಇನಾಸಿಒ ಲುಲ ಡ ಸಿಲ್ವ ೨೦೦೫ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ೨೦೦೬ ರಾಜ ಅಬ್ದುಲ್ಲಹ್ ಬಿನ್ ಅಬ್ದುಲ್‌ಅಜೀಜ್ ಅಲ್-ಸೌದ್ ೨೦೦೭ ರಾಷ್ಟ್ರಪತಿ ವ್ಲಾದಿಮಿರ್ ಪುತಿನ್ ೨೦೦೮ ರಾಷ್ಟ್ರಪತಿ ನಿಕೊಲಸ್ ಸಾರ್ಕೋಜಿ ಫ್ರಾನ್ಸ್ ೨೦೦೯ ರಾಷ್ಟ್ರಪತಿ ನೂರ್ಸುಲ್ತಾನ್ ನಜರ್ಬಯೇವ್ ಕಜಾಕಸ್ಥಾನ್೨೦೧೦ ರಾಷ್ಟ್ರಪತಿ ಲೀ ಮ್ಯೂಂಗ್ ಬಕ್ ದಕ್ಷಿಣ ಕೊರಿಯ ೨೦೧೧ ರಾಷ್ಟ್ರಪತಿ ಸುಸಿಲೊ ಬಂಬಾಂಗ್ ಯುಧೊಯೊನೊ ಇಂಡೋನೇಷ್ಯಾ ೨೦೧೨ ರಾಷ್ಟ್ರಪತಿ ಯಿಂಗ್ಲುಕ್ ಶಿನಾವತ್ರ ಥೈಲ್ಯಾಂಡ್ ೨೦೧೩ರಾಜ ಜಿಗ್ಮೆ ವಾಂಗ್‍ಚುಕ್ಭೂತಾನ್೨೦೧೪ ಪ್ರಧಾನ ಮಂತ್ರಿ ಶಿಂಜೊ ಅಬೆಜಪಾನ್೨೦೧೫ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಅಮೆರಿಕ ಸಂಯುಕ್ತ ಸಂಸ್ಥಾನಗಳು೨೦೧೬ ರಾಷ್ಟ್ರಾಧ್ಯಕ್ಷ. ಪ್ರಾನ್ಸಿಸ್ಕೊ ಹೊಲೆಂಡ್ಫ್ರಾನ್ಸ್೨೦೧೭ ಯುವರಾಜ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಸಂಯುಕ್ತ ಅರಬ್ ಸಂಸ್ಥಾನ೨೦೧೮ಸುಲ್ತಾನ್ ಹಾಸನಲ್ ಬೋಲ್ಕಯ್ಯಪ್ರಧಾನ ಮಂತ್ರಿ ಹುನ್ ಸೇನ್ಅಧ್ಯಕ್ಷ ಜೋಕೊ ವಿಡೊಡೊಪ್ರಧಾನ ಮಂತ್ರಿ ಥೊಂಗ್ಲೋನ್ ಸಿಸೌಲಿತ್ಪ್ರಧಾನ ಮಂತ್ರಿ ನಜೀಬ್ ರಝಕ್ರಾಜ್ಯ ಕೌನ್ಸಿಲರ್ ಡಾವ್ ಆಂಗ್ ಸಾನ್ ಸ್ಸು ಕಿಅಧ್ಯಕ್ಷ ರೊಡ್ರಿಗೊ ರೊ ಡೂಟರ್ಟೇಪ್ರಧಾನ ಮಂತ್ರಿ ಲೀ ಸಿಯನ್ ಲಂಗ್ಪ್ರಧಾನ ಮಂತ್ರಿ ಪ್ರಯತ್ ಚಾನ್-ಒಚಾಪ್ರಧಾನ ಮಂತ್ರಿ ನ್ಗುಯಿನ್ ಕ್ಸುಯಾನ್ ಫುಕ್೨೦೧೯ಅಧ್ಯಕ್ಷ ಸಿರಿಲ್ ರಾಮಾಫೋಸಾ೨೦೨೦ಜಾಯಿರ್ ಬೋಲ್‌ಸೊನಾರೊಬ್ರೆಜಿಲ್೨೦೨೧ಕೋವಿಡ್-೧೯ ಸಾಂಕ್ರಾಮಿಕದ ಕಾರಣ ಮುಖ್ಯ ಅತಿಥಿ ಇರಲಿಲ್ಲ.೨೦೨೨ ಇದನ್ನೂ ನೋಡಿ ಸ್ವಾತಂತ್ರ್ಯ ದಿನಾಚರಣೆ ಭಾರತದ ಇತಿಹಾಸ ಹೆಚ್ಚಿನ ಮಾಹಿತಿ ಮೊದಲ ಗಣರಾಜ್ಯೋತ್ಸವದ ವಿಡಿಯೊ ಸಂವಿಧಾನ: ಜಾರಿ ತಡವಾದದ್ದೇಕೆ?;ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ; 26 ಜನವರಿ 2021 ರಣತಂತ್ರ ಮತ್ತು ಗಣತಂತ್ರ;;ನಾರಾಯಣ ಎ. Updated: 26 ಜನವರಿ 202 ಉಲ್ಲೇಖಗಳು ವರ್ಗ:ಭಾರತ ವರ್ಗ:ದಿನಾಚರಣೆಗಳು ವರ್ಗ:ಪ್ರಮುಖ ದಿನಗಳು
ಮರಾತ್ ಸಾಫಿನ್
https://kn.wikipedia.org/wiki/ಮರಾತ್_ಸಾಫಿನ್
thumb|ಮರಾತ್ ಸಾಫಿನ್ ಮರಾತ್ ಸಾಫಿನ್ (ಜನನ:ಜನವರಿ ೨೭, ೧೯೮೦) ರಶ್ಶಿಯಾ ಮೂಲದ ಟೆನ್ನಿಸ್ ಆಟಗಾರ. ಇವರು ಆಸ್ಟ್ರೇಲಿಯನ್ ಓಪನ್ ೨೦೦೫ರ ಚ್ಯಾಂಪಿಯನ್. ೨೦೦೫ರ ಆಸ್ಟ್ರೇಲಿಯನ್ ಓಪನ್ ಸೆಮಿ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ರವರನ್ನು ರೋಮಾಂಚಕ ಪಂದ್ಯದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಲ್ಯೂಟನ್ ಹೆವಿಟ್‌ರವರನ್ನು ಮಣಿಸಿದರು. ಮರಾತ್ ಸಾಫಿನ್‌ನ ಸಾಧನೆ Tournament 2005 2004 2003 2002 2001 2000 1999 1998 1997ಆಸ್ಟ್ರೇಲಿಯನ್ ಓಪನ್WF3rF4r1r3r--ರೋಲ್ಯಾಂಡ್ ಗ್ಯಾರೋಸ್4r-SF3rQF4r4r-ವಿಂಬಲ್ಡನ್1r-2rQF2r-1r-ಯು ಎಸ್ ಓಪನ್1r-2rSFW2r4r-ಟೆನ್ನಿಸ್ ಮಾಸ್ಟರ್ಸ್SF-1r-SF---ಪ್ರವೇಶಿಸಿರುವ ಫೈನಲ್‌ಗಳು 151339200ಗೆದ್ದಿರುವ ಪಂದ್ಯಾವಳಿಗಳು 130127100ಸೋಲು-ಗೆಲುವು7-052-2312-1156-2645-2773-2739-3217-180-1ATP Race points20061293569384824N/AN/AN/AYear End Ranking 46631122649213 ಹೊರಗಿನ ಸಂಪರ್ಕಗಳು Profile on ATP website The Guy From Russia Fansite Safinator Fansite ವರ್ಗ:ಕ್ರೀಡಾಪಟುಗಳು ವರ್ಗ:ಟೆನ್ನಿಸ್ ವರ್ಗ:ಟೆನ್ನಿಸ್_ಕ್ರೀಡಾಪಟುಗಳು
ಜುಗಾರಿ ಕ್ರಾಸ್
https://kn.wikipedia.org/wiki/ಜುಗಾರಿ_ಕ್ರಾಸ್
ಜುಗಾರಿ ಕ್ರಾಸ್ ಪೂರ್ಣಚಂದ್ರ ತೇಜಸ್ವಿಯವರ ಒಂದು ಕೃತಿ. ಪ್ರಕಾಶಕರು: ಪುಸ್ತಕ ಪ್ರಕಾಶನ. ಕಥೆ ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ಜುಗಾರಿ ಕ್ರಾಸ್ ಮಲೆನಾಡಿನ ಒಬ್ಬ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆಯಾಗಿದೆ. ಸಂಪೂರ್ಣ ಕೃತಿಯು ಮಲೆನಾಡಿನ ಆಡುಭಾಷೆಯಲ್ಲೆ ಬರೆಯಲ್ಪಟ್ಟಿದ್ದು ಓದುವರಿಗೆ ಬಹಳ ಮನರಂಜನೆಯನ್ನು ಕೊಡುತ್ತದೆ. ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಮಲೆನಾಡಿನ ಜೇವನ, ಪರಿಸರ ಹಾಗು ಅಲ್ಲಿನ ಕಷ್ಟ-ಸುಖಗಳನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಕಥೆಯು ಕಾಲ್ಪನಿಕವಾದರೂ, ನೈಜತೆಗೆ ಬಹಳ ಹತ್ತಿರವಾಗಿದೆ. ಮಲೆನಾಡಿನ ದಟ್ಟ ಕಾಡುಗಳಲ್ಲಿ ಬದುಕುತ್ತಿರುವ ಜನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಈ ಕೃತಿ ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಇದೊಂದು ಕೇವಲ ೨೪ ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿಯಾಗಿದೆ. ಈ ಘಟನೆ ನಡೆಯುವ ಪ್ರದೇಶ ಮಂಗಳೂರು - ಬೆಂಗಳೂರು ರಸ್ತೆಯಲ್ಲಿರುವ ಜುಗಾರಿ ಕ್ರಾಸ್ ಮತ್ತು ದೇವಪುರಗಳಲ್ಲಿ. ಕಾದಂಬರಿಯಲ್ಲಿ ರಹಸ್ಯವಾಗಿ ನಡೆಯುವ ಅಪರಾಧ ಪ್ರಕರಣಗಳು ಒಂದು ಕಥೆಯಾದರೆ, ಪತ್ತೆದಾರ ಅವುಗಳನ್ನು ಬಯಲಿಗೆಳೆಯುವ ಕತೆ ಇನ್ನೊಂದು. ಬಸ್ಸಿನಲ್ಲಿ ಪ್ರಯಾಣ ಮಾಡುವ ಸುರೇಶ ಮತ್ತು ಗೌರಿಯರ ಒಂದು ದಿನದ ಅನುಭವ ಓದುಗನಿಗೆ ಒಂದು ಯುಗದ ಅನುಭವವನ್ನು ಉಂಟುಮಾಡುತ್ತದೆ. ಯಾಲಕ್ಕಿಯ ಮೂಟೆಯನ್ನು ಮಾರಲು ಬಸ್ಸಿನಲ್ಲಿ ಸಾಗಿಸುವಾಗ ಸುರೇಶ - ಗೌರಿಯರು ತಮಗೆ ಗೊತ್ತಿಲ್ಲದಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಭೂಗತ ಜಗತ್ತಿನ ಚಕ್ರವ್ಯೂಹದೊಳಗೆ ಸಿಲುಕಿ ಕೊನೆಗೆ ಪಾರಾಗುತ್ತಾರೆ. ಹಾಗೆ ನೋಡಿದರೆ ಇದು ಸಾಹಸ ಕಥೆಯಾಗಿದೆ. ಇವರಿಬ್ಬರ ಸಾಹಸ ಸಿದ್ದಿಯೆಂದರೆ ಕೊನೆಗೆ ಜೀವ ಉಳಿಸಿಕೊಳ್ಳುವುದಾಗಿದೆ. ’ಜುಗಾರಿ ಕ್ರಾಸ್’ ಕಾದಂಬರಿಯ ಮೊದಲ ಭಾಗ ಅಮೂರ್ತವಾದ ಭೂಗತ ಜಗತ್ತಿನ ಸ್ವರೂಪವನ್ನು ಪರಿಚಯ ಮಾಡಿಕೊಟ್ಟರೆ, ಎರಡನೆಯ ಭಾಗದಲ್ಲಿ ಸುರೇಶ - ಗೌರಿಯರು ಅದರಲ್ಲಿ ಸಿಕ್ಕಿ ತಪ್ಪಿಸಿಕೊಳ್ಳಲು ಹೆಣಗಾಡುವ ಚಿತ್ರಣವಿದೆ. ಈ ಹೆಣಗಾಟದಲ್ಲಿ ಮನ್ಮಥ ಬೀಡಾಸ್ಟಾಲ್ ನ ಶೇಷಪ್ಪ, ಸುರೇಶನ ಸಹಪಾಟಿ ರಾಜಪ್ಪ ಸೇರಿಕೊಳ್ಳುತ್ತಾರೆ. ಭೂಗತ ಜಗತ್ತೆಂದರೆ ಕೊಲೆ ಮಾಡುವುದು ಅಥವಾ ಕೊಲೆಯಾಗುವುದು ಇವೆರಡರ ನಡುವೆಯೇ ಅದರ ಅಸ್ತಿತ್ವ. ಇನ್ನೊಂದು ಸಾಧ್ಯತೆಯೆಂದರೆ ಆತ್ಮಹತ್ಯೆ ಅಷ್ಟೆ. ಮೂಕಿ ದ್ಯಾವಮ್ಮನ ಮಗಳು ಹೂವಿನ ಮಾಲೆಗಳನ್ನು ಮಾರುತ್ತಿರುವಾಗ ದೌಲತರಾಮ ಅವಳಿಗೆ ಹತ್ತು ರೂಪಾಯಿ ನೋಟು ಕೊಟ್ಟು ಅವಳನ್ನು ಅಲ್ಲಿಂದ ಸಾಗಹಾಕುವುದು ತಾವು ಮಾಡುವ ಕೃತ್ಯಕ್ಕೆ ಅಡ್ಡಲಾಗಿದ್ದಾಳೆಂಬ ಕಲ್ಪನೆ ಅವರಿಗೆ. ಅವಳು ತನಗೆ ಗೊತ್ತಿಲ್ಲದೆ ಬಂದು ಅಪರಾಧದ ಕೃತ್ಯಕ್ಕೆ ಅಡ್ಡಲಾಗಿ ನಿಂತಿರುವುದೇ ಅವಳ ತಪ್ಪು. ಸುರೇಶ ಗೌರಿಯರು ಕೂಡ ಅವಳಂತೆ ತಮಗೆ ಅರಿವಾಗದಂತೆ ಅಪರಾಧದ ವಿರುದ್ಧ ನಿಂತಿದ್ದಾರೆ. ಈ ಅಪರಾಧಗಳ ಲೋಕದ ಅನಾವರಣವನ್ನು ಪತ್ತೇದಾರನಾದ ರಾಜಪ್ಪ ಮಾಡಲು ಹೋಗುತ್ತಾನೆ. ಹಳೆಯ ಕಾವ್ಯದ ಕಡತ - ಸಹ್ಯಾದ್ರಿ ಶಿಖರವೊಂದರಲ್ಲಿ ಕೆಂಪು ರತ್ನಗಳಿರುವ ಸ್ಥಳದ ಸುಳಿವು ಭೂಗತ ಜಗತ್ತಿನ ಅನಾವರಣದ ವಸ್ತುಗಳಾಗಿವೆ. ಒಟ್ಟಿನಲ್ಲಿ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಅಂತರ್ಗತವಾಗಿರುವ ಸಾಹಸ ಕಥೆ ಮತ್ತು ಪತ್ತೇದಾರಿ ಕಾದಂಬರಿಯಾಗಿ ಅದ್ಭುತವಾಗಿ ಮೂಡಿಬಂದಿದೆ. ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ ಓದುಗನಿಗೆ ಭಾಷವಾಗುತ್ತದೆ. ವರ್ಗ:ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು
ಎಚ್-II ಪ್ರದೇಶ
https://kn.wikipedia.org/wiki/ಎಚ್-II_ಪ್ರದೇಶ
thumb|ಟ್ರಯಾ೦ಗ್ಯುಲಮ್ ನೀಹಾರಿಕೆಯಲ್ಲಿ ಎಚ್-೨ ಪ್ರದೇಶ ಎಚ್-೨ ಪ್ರದೇಶ ಅ೦ತರಿಕ್ಷದಲ್ಲಿ ಹೊಳೆಯುತ್ತಿರುವ ನೂರಾರು ಜ್ಯೋತಿರ್ವರ್ಷಗಳಷ್ಟುಗಳಷ್ಟು ಅಗಲವಾದ ಅನಿಲ ಮೋಡ; ಹೊಸ ನಕ್ಷತ್ರಗಳು ರೂಪುಗೊಳ್ಳುತ್ತಿರುವ ಪ್ರದೇಶ. ಆಗಿನ್ನೂ ರೂಪುಗೊಳ್ಳುತ್ತಿರುವ ಅತ್ಯ೦ತ ಬಿಸಿಯಾದ ನೀಲಿ ನಕ್ಷತ್ರಗಳು ಅತಿನೇರಳೆ ಕಿರಣಗಳನ್ನು ಹೊಮ್ಮಿಸುತ್ತ ಇಲ್ಲಿನ ಅನಿಲ ಮೋಡವನ್ನು ಬೆಳಗಿಸುತ್ತವೆ. ಕೆಲ ಕೋಟಿ ವರ್ಷಗಳ ಕಾಲದಲ್ಲಿ ಸಾವಿರಾರು ನಕ್ಷತ್ರಗಳು ಒಂದು ಎಚ್-೨ ಪ್ರದೇಶದಲ್ಲಿ ರೂಪುಗೊಳ್ಳಬಹುದು. ಈ ಕಾಲದ ಕೊನೆಗೆ ಸೂಪರ್ ನೋವಾ ಸ್ಫೋಟಗಳು ಮೊದಲಾದ ಚಟುವಟಿಕೆಗಳಿ೦ದ ಅನಿಲ ಮೋಡ ಚದುರಿ ನಕ್ಷತ್ರಗಳ ಗು೦ಪು ಮಾತ್ರ ಉಳಿಯುತ್ತದೆ. ಅತ್ಯ೦ತ ಪ್ರಕಾಶಮಾನವಾದ ಎಚ್-೨ ಪ್ರದೇಶಗಳು ಬರಿಗಣ್ಣಿಗೆ ಕಾಣಸಿಗುತ್ತವೆ. ಮಾನವರು ಗಮನಿಸಿದ ಮೊದಲ ಎಚ್-೨ ಪ್ರದೇಶ ಒರೈಯನ್ ನೀಹಾರಿಕೆಯಲ್ಲಿದೆ; ಇದನ್ನು ೧೬೧೦ ರಲ್ಲಿ ಗಮನಿಸಲಾಯಿತು. ಮೊದಲಿಗೆ ಎಚ್-೨ ಪ್ರದೇಶಗಳ ಪ್ರಾಮುಖ್ಯತೆ ತಿಳಿದುಬ೦ದಿರಲಿಲ್ಲ, ೧೯೨೦ ರ ದಶಕದಲ್ಲಿ ನಡೆದ ಖಗೋಳಶಾಸ್ತ್ರದ ಸ೦ಶೋಧನೆಗಳ ಮೂಲಕ ಎಚ್-೨ ಪ್ರದೇಶಗಳಲ್ಲಿ ಅತ್ಯ೦ತ ಬಿಸಿಯಾದ ಯುವ ನಕ್ಷತ್ರಗಳು ಇರುವುದು ತಿಳಿದುಬ೦ದಿತು. ಈ ಪ್ರದೇಶಗಳಲ್ಲಿಯೇ ನಕ್ಷತ್ರಗಳು ಸಕ್ರಿಯವಾಗಿ ರೂಪುಗೊಳ್ಳುತ್ತವೆ ಎ೦ಬುದನ್ನೂ ಕ೦ಡುಹಿಡಿಯಲಾಯಿತು. ಬಾಹ್ಯ ಸಂಪರ್ಕಗಳು Hubble images of nebulae including several H II regions Information from SEDS Harvard astronomy course notes on H II regions ವರ್ಗ:ವಿಜ್ಞಾನ ವರ್ಗ:ಖಗೋಳಶಾಸ್ತ್ರ
ಜ್ಯೋತಿರ್ವರ್ಷ
https://kn.wikipedia.org/wiki/ಜ್ಯೋತಿರ್ವರ್ಷ
ಜ್ಯೋತಿರ್ವರ್ಷ - ಖಗೋಳಶಾಸ್ತ್ರದಲ್ಲಿ ಉಪಯೋಗಿಸಲ್ಪಡುವ ಒಂದು ದೂರಮಾನ. ಬೆಳಕು ಒಂದು ವರ್ಷದಲ್ಲಿ ಸಾಗುವ ದೂರಕ್ಕೆ ಒಂದು ಜ್ಯೋತಿರ್ವರ್ಷವೆ೦ದು ಹೆಸರು. ಇನ್ನೂ ಸ್ಪಷ್ಟವಾಗಿ, ಒಂದು ಫೋಟಾನ್ (ಬೆಳಕಿನ ಕಣ) ಮುಕ್ತವಾದ ಅವಕಾಶದಲ್ಲಿ, ಯಾವುದೇ ಗುರುತ್ವ ಅಥವಾ ಅಯಸ್ಕಾ೦ತ ಕ್ಷೇತ್ರಗಳಿ೦ದ ದೂರವಿರುವಾಗ ಒಂದು ವರ್ಷದಲ್ಲಿ ಸಾಗುವ ದೂರ. ಇ೦ತಹ ಪರಿಸ್ಥಿತಿಯಲ್ಲಿ ಬೆಳಕಿನ ವೇಗ ಕ್ಷಣಕ್ಕೆ ಸುಮಾರು ೨.೯೯ ಲಕ್ಷ ಕಿಮೀ. ಹಾಗಾಗಿ ಒಂದು ಜ್ಯೋತಿವರ್ಷ ಸುಮಾರು ೯.೪ ಲಕ್ಷ ಕೋಟಿ ಕಿಮೀ ದೂರಕ್ಕೆ ಸಮ. ಜ್ಯೋತಿರ್ವರ್ಷದ ಮಾದರಿಯಲ್ಲೇ ಉಪಯೋಗಿಸಲಾಗುವ ಇನ್ನೆರಡು ದೂರಮಾನಗಳೆ೦ದರೆ "ಜ್ಯೋತಿರ್ನಿಮಿಷ" ಮತ್ತು "ಜ್ಯೋತಿರ್ಕ್ಷಣ" ಗಣಿತಶಾಸ್ತ್ರದ ಪ್ರಕಾರ ೩,೦೦,೦೦೦ ಕಿ.ಮೀ.(ಬೆಳಕಿನ ವೇಗ ಪ್ರತಿ ಸೆಕೆಂಡಿಗೆ)x ೩೬೫ (ಒಂದು ವರುಷ)x ೨೪ (ದಿನ)x ೬೦(ನಿಮಿಷ)x ೬೦ (ಸೆಕೆಂಡು)= ೯೪,೬೦,೮೦,೦೦,೦೦,೦೦೦ ಕಿ.ಮೀ. ಜ್ಯೋತಿರ್ವರ್ಷ ದೂರದ ಮಾಪನ. ಬೆಳಕು ಒಂದು ವರ್ಷಕ್ಕೆ ಎಷ್ಟು ದೂರ ಚಲಿಸುತ್ತದೋ ಅಷ್ಟು ದೂರವೇ ಒಂದು ಜ್ಯೋತಿರ್ವರ್ಷ. ಬೆಳಕಿನ ವೇಗ ೧ ಕ್ಷಣಕ್ಕೆ ೩,೦೦,೦೦೦ ಕಿ.ಮೀ. ೧ ನಿಮಿಷ = ೬೦ ಕ್ಷಣ = ೬೦ x ೩೦೦೦೦೦ = ೧,೮೦,೦೦,೦೦೦ ಕಿ.ಮೀ. ೧ ಘಂಟೆ = ೬೦ ನಿಮಿಷ = ೬೦ x ೧೮೦೦೦೦೦೦ = ೧೦೮,೦೦,೦೦,೦೦೦ ಕಿ.ಮೀ. ೧ ದಿನ = ೨೪ ಘಂಟೆ = ೨೪ x ೧೦೮೦೦೦೦೦೦೦ = ೨,೫೯೨,೦೦,೦೦,೦೦೦ ಕಿ.ಮೀ. ೧ ವರ್ಷ = ೩೬೫ ದಿನ = ೩೬೫ x ೨೫೯೨೦೦೦೦೦೦೦ = ೯,೪೬,೦೮೦,೦೦,೦೦,೦೦೦ ಕಿ.ಮೀ. ಹಾಗಾಗಿ ೧ ಜ್ಯೋತಿರ್ವರ್ಷವೆಂದರೆ ೯ ಲಕ್ಷದ ೪೬ ಸಾವಿರದ ೮೦ ಕೋಟಿ ಕಿ.ಮೀ.ಗಳು (ಸುಮಾರು). ನಿಖರವಾಗಿ ಜ್ಯೋತಿರ್ವರ್ಷ ಪದದಲ್ಲಿ ತುದಿಗೆ 'ವರ್ಷ'ವೆಂದಿದ್ದರೂ ಅದು 'ಕಾಲ' ಸೂಚಕ ಪದವಲ್ಲ; ದೂರದ ಅಳತೆ ಬೆಳಕಿನ ವೇಗ (299792458 ಮೀಟರ್ /ಸೆಕೆಂಡಿಗೆ) // (365.25 ದಿನಗಳಲ್ಲಿ ಕ್ರಮಿಸುವ ದೂರ. 1 ಜ್ಯೋತಿರ್ವರ್ಷ = 946073047,25,80,800 ಮೀಟರ್ /9,46,073,04,72,580.8 ಕಿ. ಮೀಟರ್ (ನಿಖರವಾಗಿ) 1 ಜ್ಯೋತಿರ್ವರ್ಷ= 9 ಕೋಟಿ 46 ಲಕ್ಷ 073 ಕೋಟಿ, 04 ಲಕ್ಷದ,72 ಸಾವಿರದ 580.8 ಕಿ. ಮೀಟರ್.(ನಿಖರವಾಗಿ)... ನೋಡಿ ಸೂರ್ಯ ಬ್ರಹ್ಮಾಂಡ ಮಹಾಸ್ಪೋಟ ವರ್ಗ:ವಿಜ್ಞಾನ ವರ್ಗ:ಖಭೌತಶಾಸ್ತ್ರ ವರ್ಗ:ಖಗೋಳಶಾಸ್ತ್ರ
ಮೌರ್ಯ ಸಾಮ್ರಾಜ್ಯ
https://kn.wikipedia.org/wiki/ಮೌರ್ಯ_ಸಾಮ್ರಾಜ್ಯ
+ಮೌರ್ಯ ಸಾಮ್ರಾಜ್ಯ thumb|250px|ಮೌರ್ಯ ಸಾಮ್ರಾಜ್ಯದ ವಿಸ್ತಾರ ಸ್ಥಾಪಕ: ಚಂದ್ರಗುಪ್ತ ಮೌರ್ಯ ಸ್ಥಾಪನೆ: ಕ್ರಿ.ಪೂ. 324 ಅವನತಿ ಕ್ರಿ.ಪೂ. 180 ರಾಜಧಾನಿ: ಪಾಟಲಿಪುತ್ರ ಲಾಂಛನ: ಧರ್ಮಚಕ್ರ ಧರ್ಮಗಳು ಹಿಂದೂ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಧರ್ಮ ಆಡಳಿತ ಭಾಷೆ ಸಂಸ್ಕೃತ, ಪ್ರಾಕೃತ ಮತ್ತು ಪಾಳಿ ಮೌರ್ಯ ಸಾಮ್ರಾಜ್ಯ (Sanskrit: मौर्य साम्राज्यम:) ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. 324 ರಿಂದ ಕ್ರಿ.ಪೂ. 185 ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವಂಶದ ಚಕ್ರವರ್ತಿಗಳಿಂದ ಆಳಲ್ಪಟ್ಟಿತ್ತು. ಇದರ ತುತ್ತ ತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನು ಒಳಗೊಂಡಿತ್ತಲ್ಲದೆ, ಪಾಕಿಸ್ತಾನ ಮತ್ತು ಭಾಗಶಃ ಅಫ್ಘಾನಿಸ್ತಾನಗಳನ್ನೂ ಒಳಗೊಂಡಿತ್ತು. ಮೌರ್ಯರ ಏಳಿಗೆ ಭಾರತದ ಇತಿಹಾಸದಲ್ಲಿ ಕತ್ತಲೆಯಿಂದ ಬೆಳಕಿನತ್ತ ಕಾಲಿಡುವ ಕಾಲ ಎಂದು ವಿ.ಎ. ಸ್ಮಿತ್ ಹೇಳಿದ್ದಾರೆ. ಉಗಮ ಮಗಧ(ಇಂದಿನ ಬಿಹಾರದ ಭಾಗ) ಪ್ರದೇಶದಲ್ಲಿ ಇದ್ದ ೧೬ ಜನಪದವನ್ನು(ಅಥವಾ ಗಣರಾಜ್ಯವನ್ನು) ಸೋಲಿಸಿ ಹರ್ಯಂಕ ವಂಶದವರು ಪ್ರಬಲ ಸಾಮ್ರಾಜ್ಯ ಕಟ್ಟಿದರು. ನಂತರ, ಮಗಧವನ್ನು ನಂದವಂಶದವರು ಸುಮಾರು ೬೦ ವರ್ಷಗಳ ಕಾಲ ಆಳಿದರು. ಅಲೆಗ್ಸಾಂಡರನ ದಂಡಯಾತ್ರೆ ನಂದವಂಶದವರನ್ನು ಎದುರಿಸುವ ಮುನ್ನವೇ ಹಿಂತಿರುಗಿತು. ಅಲೆಕ್ಸಾಂಡರ್ ಭಾರತದಿಂದ ಹಿಂದಿರುಗಿ ಕ್ರಿ.ಪೂ. ೩೨೪ರಲ್ಲಿ ನಿಧನನಾದ ನಂತರ ಭಾರತದಲ್ಲಿನ ಆತನ ಸಾಮ್ರಾಜ್ಯ ಹಂಚಿಹೋಗಲಾರಂಭಿಸಿತು. ಆಗ ಸೃಷ್ಟಿಯಾದ ಅವಕಾಶಗಳನ್ನು ಭಾರತದಲ್ಲಿ ಉಪಯೋಗಿಸಿಕೊಂಡದ್ದು ಚಂದ್ರಗುಪ್ತ ಮೌರ್ಯ. ಗ್ರೀಕರ ದಾಳಿಯಿಂದ ಅಸ್ತವ್ಯಸ್ಥಗೊಂಡ ಪಂಜಾಬನ್ನು ಚಂದ್ರಗುಪ್ತ ಮೌರ್ಯ ತನ್ನ ಅಧಿಪತ್ಯವನ್ನು ಪ್ರಾರಂಭಿಸಿದ. ಸುಮಾರು ಕ್ರಿ.ಪೂ. ೩೨೩ರಲ್ಲಿ ಅಲೆಗ್ಸಾಂಡರನ ಭಾರತದ ಭಾಗಗಳನ್ನು ಗೆದ್ದು, ೩೨೧ರಲ್ಲಿ ಪಾಟಲಿಪುತ್ರವನ್ನು ಗೆದ್ದ. ನಂದರ ದುರಾಡಳಿತವೂ ಅವರ ಪತನಕ್ಕೆ ಕಾರಣವಾಗಿ, ಚಂದ್ರಗುಪ್ತನಿಗೆ ಸಹಾಯವಾಯಿತು. ಸಾಮ್ರಾಜ್ಯದ ಸ್ಥಾಪನೆ ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣವೇ ತಕ್ಷಶಿಲೆಯ ಅರ್ಥಶಾಸ್ತ್ರಜ್ಞ (ಚಾಣಕ್ಯ) ಕೌಟಿಲ್ಯ.ತಕ್ಷಶಿಲೆಯವನಾಗಿದ್ದಿರಬಹುದಾದ ಚಂದ್ರಗುಪ್ತ ಅನೇಕ ಬಾರಿ ಗ್ರೀಕರ ಯುದ್ಧನೀತಿಗಳನ್ನು ಗಮನಿಸಿದ್ದ.ಅಲೆಕ್ಸಾಂಡರನ ಸಾಮ್ರಾಜ್ಯದ ಅವನತಿಯ ನಂತರ ಗ್ರೀಕರ ಯುದ್ಧತಂತ್ರಗಳೊಂದಿಗೆ ತನ್ನ ತಂತ್ರಗಳನ್ನು ಸೇರಿಸಿ(ಚಾಣಕ್ಯ)ಕೌಟಿಲ್ಯನ ಸಹಾಯದೊಂದಿಗೆ ಮಗಧ ರಾಜ್ಯದ ನಂದವಂಶದ ಆಗಿನ ದೊರೆಯಾಗಿದ್ದ ಧನಾನಂದನನ್ನು ಅಧಿಕಾರದಿಂದ ಇಳಿಸಿ ಗಂಗಾ ನದಿ ತೀರದಲ್ಲಿ ತನ್ನ ಸಾಮ್ರಾಜ್ಯವನ್ನು ಕ್ರಿ.ಪೂ.೩೨೧ ರಲ್ಲಿ ಸ್ಥಾಪಿಸಿದ. ನಂತರ ಇಂದಿನ ಪಂಜಾಬವನ್ನು ಸಹ ಗೆದ್ದು ತಕ್ಷಶಿಲೆಯವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಮೌರ್ಯ ಸಾಮ್ರಾಟರು thumb|ಅಶೋಕನ ರಾಜಚಿಹ್ನೆ ಚಂದ್ರಗುಪ್ತ ಕ್ರಿ.ಪೂ. ೩೦೧ ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿ ಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊಂಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾಂಶ ಕಾಣದ ಯುದ್ಧದ ನಂತರ ಸೆಲ್ಯೂಕಸ್ ಮತ್ತು ಚಂದ್ರಗುಪ್ತ ಶಾಂತಿಯ ಒಪ್ಪಂದ ಮಾಡಿಕೊಂಡರು. ಸೆಲ್ಯೂಕಸ್ ನ ಮಗಳನ್ನು ಚಂದ್ರಗುಪ್ತ ವಿವಾಹವಾದದ್ದಲ್ಲದೆ, ಗಾಂಧಾರ ಮತ್ತು ಅರಕೋಸಿಯಾ ಪ್ರಾಂತ್ಯಗಳನ್ನು ಪಡೆದ. ಹಾಗೆಯೇ ಸೆಲ್ಯೂಕಸ್ ಚಂದ್ರಗುಪ್ತನ ಸೈನ್ಯದಿಂದ ೫೦೦ ಯುದ್ಧದ ಆನೆಗಳನ್ನು ಪಡೆದ (ಕ್ರಿ.ಪೂ. ೩೦೧ ರ ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸಂಬಂಧಗಳು ಏರ್ಪಟ್ಟ ನಂತರ ಅನೇಕ ಗ್ರೀಕರು ಚಂದ್ರಗುಪ್ತನ ಆಸ್ಥಾನಕ್ಕೆ ಬರಲಾರಂಭಿಸಿದರು (ಉದಾ: ಗ್ರೀಕ್ ಚರಿತ್ರಕಾರ ಮೆಗಾಸ್ತನೀಸ್). ಚಾಣಕ್ಯನ ಮಂತ್ರಿತ್ವದ ಅಡಿಯಲ್ಲಿ ಚಂದ್ರಗುಪ್ತ ಕೇಂದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ.ರಾಜಧಾನಿ ಪಾಟಲಿಪುತ್ರ (ಇಂದಿನ ಪಾಟ್ನಾ). ಮೆಗಾಸ್ತನೀಸ್ ವರ್ಣಿಸುವಂತೆ, ಮರದ ಕೋಟೆಯನ್ನು ಹೊಂದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊಂದಿದ್ದಿತು. ಚಾಣಕ್ಯನು ತಕ್ಷಶಿಲೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ.ಚಾಣಕ್ಯನು ಒಳ್ಳೆಯ ಅರ್ಥಶಾಸ್ತ್ರಜ್ಞನಾಗಿದ್ದ. ಮೌರ್ಯರ ಸಾಮ್ರಾಜ್ಯವನ್ನು ಚಾಣಕ್ಯನು ಕಟ್ಟಿದ್ದು ಭಾರತವನ್ನು ಯವನರ ದೌರ್ಜನ್ಯದಿಂದ ಕಾಪಾಡಲು. ಚಂದ್ರಗುಪ್ತನು ಒಳ್ಳೆಯ ಆಡಳಿತಗಾರನಾಗಿದ್ದ ಬಿಂದುಸಾರ ಚಂದ್ರಗುಪ್ತನ ಮಗ ಬಿಂದುಸಾರ ಮೌರ್ಯ ಸಾಮ್ರಾಜ್ಯವನ್ನು ಭಾರತದ ದಕ್ಷಿಣದತ್ತ ವಿಸ್ತರಿಸಿದ. ಈ ಕಾಲದಲ್ಲಿಯೂ ಒಬ್ಬ ಗ್ರೀಕ್ ರಾಯಭಾರಿ (ಡೀಮ್ಯಾಕಸ್) ಆತನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ಹುಟ್ಟುವಾಗಲೆ ಇವನ ಹಣೆಯ ಮೆಲೆ ಇದ್ದ ವಿಷದ ಬಿಂದುವಿನಿಂದಲೆ ಅವನಿಗೆ ಬಿಂದುಸಾರ ಎಂದು ಹೆಸರು, ಆತನ ಮಗನೇ ಅಶೋಕ. ಅಶೋಕ ಮೌರ್ಯ ಸಾಮ್ರಾಜ್ಯದ ಅತಿ ಪ್ರಸಿದ್ಧ ಚಕ್ರವರ್ತಿ ಸಾಮ್ರಾಟ್ ಅಶೋಕ (ಆಡಳಿತ: ಕ್ರಿ.ಪೂ. ೨೭೩-೨೩೨). ಕಳಿಂಗ ಯುದ್ಧದ ನಂತರ ಬೌದ್ಧ ಧರ್ಮಕ್ಕೆ ತಿರುಗಿದ ಅಶೋಕ ಬೌದ್ಧ ಧರ್ಮವನ್ನು ಭಾರತದಲ್ಲಿ ಹರಡಿದ್ದಲ್ಲದೆ, ಬೌದ್ಧ ರಾಯಭಾರಿಗಳನ್ನು ಶ್ರೀಲಂಕಾ, ಚೀನಾ ಮತ್ತು ಪರ್ಶಿಯಾಗಳತ್ತಲೂ ಕಳುಹಿಸಿದ.ಈತನ ಬಿರುದು"ದೇವಾಂನಾಂಪ್ರಿಯ" ಅಂದರೆ ದೇವರಿಗೆ ಪ್ರೀತಿಯಾದವನು. ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಅಶೋಕನು ಬಹಳ ಶ್ರಮಿಸಿದನು. ಬೌದ್ದ ಧರ್ಮದ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಶ್ರೀಲಂಕಾಗೆ ಅಶೋಕನು ಕಳುಹಿಸಿದನು. ಮೌರ್ಯರ ಆಡಳಿತ ಮೆಗಸ್ತನೀಸ್-ನ "ಇಂಡಿಕಾ" ಮತ್ತು "ಕೌಟಿಲ್ಯನ ಅರ್ಥಶಾಸ್ತ್ರ"ಗಳು ಹೇಳುವಂತೆ, ಕೇಂದ್ರ ಸರಕಾರವು ಪ್ರಬಲ ಮತ್ತು ಸುಭದ್ರವಾಗಿತ್ತು. ಮೌರ್ಯರ ಆಡಳಿತ, ಮುಘಲರ ಆಡಳಿತಕ್ಕಿಂತಲೂ ಉತ್ತಮವಾಗಿತ್ತೆಂದು ವಿನ್ಸ್ಂಟ್ ಸ್ಮಿಥ್ (ವಿ.ಎ. ಸ್ಮಿತ್) ಹೇಳಿದ್ದಾರೆ. ರಾಜಧಾನಿ ಸಮಿತಿಗಳು ಪಾಟಲಿಪುತ್ರದ ವ್ಯವಹಾರಗಳನ್ನು ನೋಡಿಕೊಳ್ಳಲು ಹಲವು ಸಮಿತಿಗಳಿದ್ದವು. ಕೋಟೆಯ ಭದ್ರತೆ ಪೋಲಿಸ್ ದಳ: ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ತೆರಿಗೆ ಸಂಗ್ರಹ: ಮಾರಾಟ ತೆರಿಗೆ, ಸಂತೆ ಶುಲ್ಕ, ವೃತ್ತಿ ತೆರಿಗೆ ಮತ್ತು ಮನೆ ತೆರಿಗೆ ಪ್ರಾಂತಗಳು ಚಂದ್ರಗುಪ್ತನ ಕಾಲದಲ್ಲಿ ೪ ಪ್ರಾಂತಗಳು: ಪ್ರಾಚ್ಯ(ಮಗಧ) ಉತ್ತರಾಪಥ(ವಾಯುವ್ಯ ಪ್ರಾಂತ್ಯ) ಆವಂತೀ(ಪಕ್ಷ್ಚಿಮ ಪ್ರಾಂತ್ಯ) ದಕ್ಷಿಣಾಪಥ(ಬಹುಶ) ಅಶೋಕನು, ೫ನೇ ಪ್ರಾಂತವನ್ನಾಗಿ, "ಕಳಿಂಗ"ವನ್ನು ಸೇರಿಸಿದ. ಪ್ರಾಂತಗಳ ಕೆಳಗೆ ಜನಪದಗಳಿದ್ದವು. ಅಧಿಕಾರಿಗಳು ಕುಮಾರ: ಪ್ರಾಂತಗಳ ಮೇಲ್ವಿಚಾರಣ ಅಧಿಕಾರಿ ಮಹಾಮಾತ್ರ: ಕುಮಾರನ ಸಹಾಯ ಮಾಡುವವನು ಸಮಹರತೃ: ಒಂದು ಜನಪದದ ಅಧಿಕಾರಿ ಗೋಪ: ೧೦ ಗ್ರಾಮಗಳ ಮೇಲ್ವಿಚಾರಕ ಗ್ರಾಮಿಕ: ಒಂದು ಗ್ರಾಮದ ಅಧಿಕಾರಿ ಧರ್ಮ ಮಹಾಮಾತ್ರ: ನ್ಯಾಯತೀರ್ಮಾನ ಮಾಡುವವನು ರಜ್ಜುಕ: ಹಗ್ಗ(ರಜ್ಜು)ದಿಂದ ಭೂಮಾಪನ ಮಾಡಿ ಕಂದಾಯ ನಿಶ್ಚಯಿಸುವ ಅಧಿಕಾರಿ ವಜ್ರಭೂಮಿಕ: ಸಾರ್ವಜನಿಕ ಬಾವಿ, ರಸ್ತೆ, ತೋಪುಗಳ ನಿರ್ಮಾಣದ ಉಸ್ತುವಾರಿ ಸಚಿವ ಇವರಷ್ಟೇ ಅಲ್ಲದೇ, ರಾಜರಿಗೆ ವರದಿ ಮಾಡುವ ಗುಪ್ತಚರರ ಜಾಲವೇ ಇತ್ತು. ಅವನತಿಗೆ ಪ್ರಮುಖ ಕಾರಣಗಳು 1. ಕೇಂದ್ರೀಕೃತ ಆಡಳಿತದ ಕುಸಿತ 2. ಅಸಮರ್ಥ ಉತ್ತರಾಧಿಕಾರಿಗಳು 3. ಉತ್ತರಾಧಿಕಾರಕ್ಕಾಗಿ ನೀತಿ ಸಂಹಿತೆ ಇಲ್ಲದೆ ಹೋದದ್ದು 4. ರಾಜ ಪ್ರಭುತ್ವ ಸರ್ಕಾರ 5. ಮೌರ್ಯ ಸಾಮ್ರಾಜ್ಯದ ವಿಭಜನೆ 6. ಸಾಮ್ರಾಜ್ಯ ವೈಶಾಲ್ಯತೆ 7. ದಂಗೆಗಳು 8. ಅಧಿಕಾರಿಗಳ ದಬ್ಬಾಳಿಕೆ 9. ಅರಮನೆಯ ಅಂತಃಕಲಹಗಳು 10. ಹಣಕಾಸಿನ ದೌರ್ಬಲ್ಯ 11. ವಿದೇಶಿ ಧಾಳಿಗಳು 12. ಬೌದ್ಧ ಧರ್ಮಪರ ನೀತಿ 13. ಬ್ರಾಹ್ಮಣರ ವಿರೋಧ ನೀತಿ 14. ಅಶೋಕನ ಅಹಿಂಸಾ ನೀತಿ 15. ಅಶೋಕನ ಧಾರ್ಮಿಕ ನೀತಿ 16. ಅಧಿಕ ತೆರಿಗೆಗಳು 17. ರಾಷ್ಟ್ರೀಯ ಪ್ರಜ್ಞೆಯ ಕೊರತೆ 18. ಗಡಿ ಪ್ರಾಂತ್ಯಗಳಲ್ಲಿ ಹೊಸ ಅರಿವು 19. ಗಡಿಗಳ ನಿರ್ಲಕ್ಷ್ಯ 20. ದಕ್ಷ ಅಧಿಕಾರಿ ವರ್ಗದ ಕೊರತೆ ಅಶೋಕನ ಆಡಳಿತದ ನಂತರ ೫೦ ವರ್ಷಗಳ ಕಾಲ ಮೌರ್ಯ ಸಾಮ್ರಾಜ್ಯ ದುರ್ಬಲ ಅರಸರಿಂದ ಆಳಲ್ಪಟ್ಟಿತು. ಮೌರ್ಯ ವಂಶದ ಕೊನೆಯ ಚಕ್ರವರ್ತಿ ಬೃಹದ್ರಥ. ಕ್ರಿ.ಪೂ. 180 ರಲ್ಲಿ ಸೈನ್ಯದ ಕವಾಯತನ್ನು ವೀಕ್ಷಿಸುತ್ತಿದ್ದಾಗ ಅವನ ಸೇನಾಧಿಪತಿ ಪುಷ್ಯಮಿತ್ರ ಶುಂಗ ಆತನನ್ನು ಕೊಲೆ ಮಾಡಿ ಶುಂಗ ವಂಶವನ್ನು ಸ್ಥಾಪಿಸಿದ. ವರ್ಗ:ಭಾರತದ ಇತಿಹಾಸ ವರ್ಗ:ಮೌರ್ಯ ವಂಶ
ಆಲ್ಬರ್ಟ್ ಐನ್‍ಸ್ಟೀನ್
https://kn.wikipedia.org/wiki/ಆಲ್ಬರ್ಟ್_ಐನ್‍ಸ್ಟೀನ್
REDIRECT ಅಲ್ಬರ್ಟ್ ಐನ್‍ಸ್ಟೈನ್
ಹಿಮಾಲಯ
https://kn.wikipedia.org/wiki/ಹಿಮಾಲಯ
ಹಿಮಾಲಯ ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ "ಹಿಮಾಲಯ" ಎಂದರೆ "ಹಿಮದ ಮನೆ" ಎಂದರ್ಥ (ಹಿಮ+ಆಲಯ=ಹಿಮಾಲಯ). ಜೀವಿ ಪರಿಸರ ವಿಜ್ಞಾನ thumb|200px|ಹಿಮಾಲಯ ಪರ್ವತ ಶ್ರೇಣಿಯ ತರ ಶಿಖರ ಮೌಂಟ್ ಎವರೆಸ್ಟ್thumb|200px|ಪಾಕಿಸ್ತಾನ ಹಾಗು ಚೀನಾ ದೇಶಗಳ ಗಡಿಗೆ ಹೊಂದಿಕೊಂಡಂತಿರುವ ಕೆ೨ ಶಿಖರthumb|200px|ನೇಪಾಳ ಹಾಗು ಚೀನಾ ದೇಶಗಳ ಗಡಿಯಲ್ಲಿರುವ ಚೊ ಒಯು ಶಿಖರthumb|right|ನೇಪಾಳ ಹಾಗು ಭಾರತದ ಸಿಕ್ಕಿಂ ರಾಜ್ಯದ ಗಡಿಯಲ್ಲಿರುವ ಕಾಂಚನಜುಂಗಾ ಪರ್ವತ ಉಗಮ ಮತ್ತು ಬೆಳವಣಿಗೆ thumb|200px|right|೪-೫ ಕೋಟಿ ವರ್ಷಗಳ ಹಿಂದೆ ಭಾರತ ಭೂಭಾಗ ಏಷ್ಯಾ ಭೂಭಾಗಕ್ಕೆ ಘಟ್ಟಿಸುತ್ತಿರುವುದು ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತಶ್ರೇಣಿಗಳಲ್ಲಿ ಒಂದು. ಸುಮಾರು ೨೫ ಕೋಟಿ ವರ್ಷಗಳ ಹಿಂದೆ "ಪ್ಯಾಂಜಿಯ" ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು. ಇಂಡೋ-ಆಸ್ಟ್ರೇಲಿಯನ್ ಭೂಭಾಗ ಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮುಂದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕಂಪಗಳನ್ನು ಸಹ ಕಂಡಿದೆ. ಭೂಗೋಳ thumb|250px|left|ಟಿಬೆಟ್ ಪ್ರಸ್ಥಭೂಮಿಯ ದಕ್ಶಿಣಕ್ಕೆ ಹಿಮಾಲಯ ಪರ್ವತಗಳ ದೃಶ್ಯ ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ "ನಂಗಾ ಪರ್ಬತ್" ಇಂದ ಪೂರ್ವದಲ್ಲಿ "ನಾಮ್ಚೆ ಬರ್ವಾ" ದ ವರೆಗೆ ಸುಮಾರು ೨೪೦೦ ಕಿಮೀ ಉದ್ದವಿದೆ. ಅಗಲ ೨೫೦-೩೦೦ ಕಿಮೀ. ಹಿಮಾಲಯn ಶ್ರೇಣಿಯಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು: "ಉಪ-ಹಿಮಾಲಯ": ಇದನ್ನು ಭಾರತದಲ್ಲಿ "ಶಿವಾಲಿಕ್ ಹಿಲ್ಸ್ "ಎಂದು ಕರೆಯಲಾಗುತ್ತದೆ. ಈ ಶ್ರೇಣಿ ಅತ್ಯಂತ ಇತ್ತೀಚೆಗೆ ಸೃಷ್ಟಿಯಾದದ್ದು ಮತ್ತು ಸರಾಸರಿ ೧೨೦೦ ಮೀ ಎತ್ತರ ಹೊಂದಿದೆ. ಮುಖ್ಯವಾಗಿ, ಇನ್ನೂ ಬೆಳೆಯುತ್ತಿರುವ ಹಿಮಾಲಯ ಪರ್ವತಗಳಿಂದ ಜಾರುವ ಭೂಭಾಗದಿಂದ ಈ ಶ್ರೇಣಿ ಸೃಷ್ಟಿಯಾಗಿದೆ. "ಕೆಳಗಿನ ಹಿಮಾಲಯ": ಸರಾಸರಿ ೨೦೦೦-೫೦೦೦ ಮೀ ಎತ್ತರವಿದ್ದು ಇದು ಭಾರತದ ಹಿಮಾಚಲ ಪ್ರದೇಶ, ನೇಪಾಳದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜೀಲಿಂಗ್, ಶಿಮ್ಲಾ, ನೈನಿತಾಲ್, ಮೊದಲಾದ ಭಾರತದ ಅನೇಕ ಪ್ರಸಿದ್ಧ ಗಿರಿಧಾಮಗಳು ಈ ಶ್ರೇಣಿಯಲ್ಲಿಯೇ ಇರುವುದು. "ಮೇಲಿನ ಹಿಮಾಲಯ": ಈ ಶ್ರೇಣಿ ಎಲ್ಲಕ್ಕಿಂತ ಉತ್ತರದಲ್ಲಿದ್ದು ನೇಪಾಳದ ಉತ್ತರ ಭಾಗಗಳು ಮತ್ತು ಟಿಬೆಟ್ ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. ೬೦೦೦ ಮೀ ಗಿಂತಲೂ ಹೆಚ್ಚಿನ ಸರಾಸರಿ ಎತ್ತರವನ್ನು ಹೊಂದಿರುವ ಈ ಶ್ರೇಣಿ ಪ್ರಪಂಚದ ಅತಿ ಎತ್ತರದ ಮೂರು ಶಿಖರಗಳನ್ನು ಒಳಗೊಂಡಿದೆ - ಎವರೆಸ್ಟ್, ಕೆ-೨, ಮತ್ತು ಕಾಂಚನಜುಂಗಾ. thumb|right|ಸಿಕ್ಕಿಮ್ ನಲ್ಲಿ ಹಿಮಾಲಯದ ದೃಶ್ಯ ಹಿಮನದಿಗಳು ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು (glacier) ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪಂಚದ ಅತಿ ದೊಡ್ಡ ಹಿಮನದಿಯಾದ ಸಿಯಾಚೆನ್ ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆಂದರೆ ಗಂಗೋತ್ರಿ, ಯಮುನೋತ್ರಿ, ನುಬ್ರಾ ಮತ್ತು ಖುಂಬು. ನದಿಗಳು thumb|ಹಿಮಾಲಯ ಶ್ರೇಣಿಯ ಮೂಲಕ ಬ್ರಹ್ಮಪುತ್ರಾ ನದಿಯ ದಾರಿ ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ತವರು. ಸಿಂಧೂ ನದಿ ಟಿಬೆಟ್ ನಲ್ಲಿ ಸೆಂಗೆ ಮತ್ತು ಗಾರ್ ನದಿಗಳ ಸಂಗಮದಲ್ಲಿ ಹುಟ್ಟಿ ಪಾಕಿಸ್ತಾನದ ಮೂಲಕ ಸಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಗಂಗಾ ನದಿ ಭಾಗೀರಥಿಯಾಗಿ ಗಂಗೋತ್ರಿ ಹಿಮನದಿಯಲ್ಲಿ ಜನ್ಮ ತಾಳಿ ಅಲಕನಂದಾ, ಯಮುನಾ ನದಿಗಳನ್ನು ಸೇರಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಸೇರುತ್ತದೆ. ಬ್ರಹ್ಮಪುತ್ರ ನದಿ ಪಶ್ಚಿಮ ಟಿಬೆಟ್ ನಲ್ಲಿ ಹುಟ್ಟಿ, ದಕ್ಷಿಣಪೂರ್ವಕ್ಕೆ ಹರಿದು ನಂತರ ತನ್ನ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಇನ್ನಿತರ ಕೆಲವು ಹಿಮಾಲಯ ನದಿಗಳೆಂದರೆ ಇರವಡ್ಡಿ, ಸಲ್ವೀನ್ ಮೊದಲಾದವು (ಬರ್ಮಾ ದತ್ತ ಹರಿಯುತ್ತವೆ). ಸರೋವರಗಳು ಹಿಮಾಲಯ ಪ್ರದೇಶದಲ್ಲಿ ನೂರಾರು ಸರೋವರಗಳು ಕಂಡುಬರುತ್ತವೆ. ಈ ಸರೋವರಗಳಲ್ಲಿ ಹೆಚ್ಚಿನವು ೫,೦೦೦ ಮೀ. ಗಿಂತ ಕಡಿಮೆ ಎತ್ತರದಲ್ಲಿ ಸಿಗುತ್ತವೆ, ಹಾಗೂ ಈ ಸರೋವರಗಳ ವಿಸ್ತಾರವು ಎತ್ತರದೊಂದಿಗೆ ಕಡಿಮೆಯಾಗುತ್ತದೆ. ಇವುಗಳಲ್ಲಿ ಪ್ಯಾಂಗಾಂಗ್ ತ್ಸೋ ಸರೋವರ ಅತಿ ದೊಡ್ಡದು. ಭಾರತ/ಟಿಬೆಟ್ ಸರಹದ್ದಿನ ಬಳಿಯಿರುವ ಈ ಸರೋವರವು ಸುಮಾರು ೮ ಕಿ.ಮೀ. ಅಗಲ ಹಾಗೂ ೧೩೪ ಕಿ.ಮೀ. ಉದ್ದವಿದ್ದು, ೪,೬೦೦ ಮೀ. ಎತ್ತರದಲ್ಲಿದೆ. ಎತ್ತರದಲ್ಲಿರುವ ಒಂದು ಮುಖ್ಯವಾದ ಸರೋವರ ಗುರುಡೋಗ್ಮಾರ್. ಉತ್ತರ ಸಿಕ್ಕಿಂನಲ್ಲಿರುವ ಗುರುಡೋಗ್ಮಾರ್ ೫,೧೪೮ ಮೀ. (೧೬,೮೯೦ ಅಡಿ) ಎತ್ತರದಲ್ಲಿದೆ. ಇನ್ನಿತರ ದೊಡ್ಡ ಸರೋವರಗಳಲ್ಲಿ ಭಾರತ/ಚೀನಾ ಸರಹದ್ದಿನ ಬಳಿ ಸಿಕ್ಕಿಂನಲ್ಲಿರುವ ಛಾಂಗು ಸರೋವರವೂ ಸೇರಿದೆ. ಹಿಮನದಿಗಳ ಚಟುವಟಿಕೆಯಿಂದ ಸೃಷ್ಟಿಯಾದ ಸರೋವರಗಳಿಗೆ ಭೂವಿಜ್ಞಾನಿಗಳು ಟಾರ್ನ್‍ಗಳೆಂದು ಕರೆಯುತ್ತಾರೆ. ಹೆಚ್ಚಿನ ಟಾರ್ನ್‍ಗಳು ಹಿಮಾಲಯದಲ್ಲಿ ೫,೫೦೦ ಮೀ. ಗಿಂತ ಹೆಚ್ಚು ಎತ್ತರದಲ್ಲಿ ಕಂಡುಬರುತ್ತವೆ. ಹವಾಮಾನದ ಮೇಲಿನ ಪ್ರಭಾವ ಭಾರತೀಯ ಉಪಖಂಡ ಮತ್ತು ಟಿಬೆಟ್ ಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ - ಟಿಬೆಟ್ ಮೊದಲಾದ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ (ಮಿಜೋರಂ, ಮೇಘಾಲಯ, ಇತ್ಯಾದಿ) ಬಹಳಷ್ಟು ಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒಂದು ಕಾರಣ ಎಂದು ಊಹಿಸಲಾಗಿದೆ. ಚಳಿಗಾಲದಲ್ಲಿ ಪಶ್ಚಿಮದ ಇರಾನ್‍ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ. ಈ ರೀತಿಯ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವುಂಟಾಗುತ್ತದೆ ಹಾಗೂ ಉತ್ತರ ಭಾರತದ ಮತ್ತು ಪಂಜಾಬ್‍ನ ಕೆಲವು ಭಾಗಗಳಲ್ಲಿ ಮಳೆ ಬೀಳುತ್ತದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕ್‍ಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟುಮಾಡುತ್ತದೆ. ರಾಜಕಾರಣ ಮತ್ತು ಸಂಸ್ಕೃತಿಗಳ ಮೇಲಿನ ಪ್ರಭಾವ ಹಿಮಾಲಯ ಶ್ರೇಣಿಯು ಸಾವಿರಾರು ವರ್ಷಗಳಿಂದ ಜನರ ಚಲವಲನಗಳಿಗ ಸ್ವಾಭಾವಿಕವಾಗಿಯೇ ಅಡಚಣೆಯನ್ನು ಉಂಟುಮಾಡಿದೆ. ಇದಕ್ಕೆ ಕಾರಣ ಹಿಮಾಲಯದ ದೊಡ್ಡ ಗಾತ್ರ, ಎತ್ತರ ಮತ್ತು ವೈಶಾಲ್ಯತೆ. ಮುಖ್ಯವಾಗಿ ಈ ಅಡಚಣೆಯು, ಭಾರತ ಉಪಖಂಡದ ಜನರು ಚೆನಾ ಮತ್ತು ಮಂಗೋಲಿಯಾದ ಜನರ ಜೊತೆ ಸುಲಭವಾಗಿ ಬೆರೆಯದಂತೆ ಮಾಡಿದೆ. ಇದರಿಂದಾಗಿ ಇಂದಿಗೂ ಈ ಎರಡು ಪ್ರದೇಶಗಳ ಭಾಷೆಗಳಲ್ಲಿ ಮತ್ತು ಆಚಾರಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಇದಲ್ಲದೆ ಹಿಂದಿನಿಂದಲೂ ಹಿಮಾಲಯವು ವಾಣಿಜ್ಯ ಮಾರ್ಗಗಳಿಗೆ ಹಾಗೂ ಸಾಮ್ರಾಜ್ಯ ವಿಸ್ತರಣೆಗಳಿಗೆ ಪ್ರತಿಭಂದವೊಡ್ಡಿದೆ. ಉದಾ:. ಜೆಂಘಿಜ್ ಖಾನ್‍ನಿಗೆ ತನ್ನ ಸಾಮ್ರಾಜ್ಯವನ್ನು ಹಿಮಾಲಯ ಶ್ರೇಣಿಯ ದಕ್ಷಿಣಕ್ಕೆ ಹಾಗೂ ಭಾರತ ಉಪಖಂಡಕ್ಕೆ ವಿಸ್ತಾರ ಮಾಡಲು ಆಗಲಿಲ್ಲ. ಶಿಖರದ ಹೆಸರು ಇತರ ಹೆಸರುಗಳು ಮತ್ತು ಅರ್ಥ ಎತ್ತರ (ಮೀ.) ಎತ್ತರ (ಅಡಿ) ಮೊದಲನೆ ಆರೋಹಣ ಟಿಪ್ಪಣಿ ಎವರೆಸ್ಟ್ ಸಾಗರ್‍ಮಾಥಾ -"ಆಕಾಶದ ಹಣೆ", ಚೋಮೋಲಂಗ್ಮಾ ಅಥವಾ ಕೋಮೋಲಂಗ್ಮಾ -"ವಿಶ್ವದ ಮಾತೆ" ಗೌರಿಶಂಕರ ೮,೮೪೮ ೨೯,೦೨೮ ೧೯೫೩ ಪ್ರಪಂಚದ ಅತಿ ಎತ್ತರದ ಪರ್ವತ. ಇದು ಚೀನಾ/ನೇಪಾಳದ ಗಡಿ ಭಾಗದಲ್ಲಿದೆ. ಕೆ-೨ಛೋಗೋ ಗಾಂಗ್ರಿ , ಗಾಡ್ವಿನ್ ಆಸ್ಟಿನ್ ೮,೬೧೧ ೨೮,೨೫೧ ೧೯೫೪ ಪ್ರಪಂಚದ ೨ನೇ ಅತಿ ಎತ್ತರದ ಶಿಖರ. ಇದು ಪಾಕೀಸ್ತಾನ ಮತ್ತು ಚೀನಾದ ಗಡಿಭಾಗದಲ್ಲಿದೆ. ಏರುವುದಕ್ಕೆ ಪ್ರಪಂಚದಲ್ಲೇ ಅತಿ ಕಷ್ಟಕರವಾದ ಪರ್ವತ. ಕಾಂಚನಜುಂಗಾ ಕಾಂಗ್‍ಚೆನ್ ಡ್ಜೋಂಗ, "ಅದ್ಭುತ ಹಿಮದ ಐದು ನಿಧಿಗಳು" ೮,೫೮೬ ೨೮,೧೬೯ ೧೯೫೫ ಪ್ರಪಂಚದ ೩ನೇ ಅತಿ ಎತ್ತರದ ಶಿಖರ. ಭಾರತದಲ್ಲಿ ಅತಿ ಎತ್ತರದ್ದು ಮತ್ತು ನೇಪಾಳದಲ್ಲಿ ೨ನೇ ಅತಿ ಎತ್ತರದ್ದು.ಮಕಾಲು - ೮,೪೬೨ ೨೭,೭೬೫ ೧೯೫೫ ಪ್ರಪಂಚದಲ್ಲಿ ೫ನೇ ಅತಿ ಎತ್ತರದ್ದು. ನೇಪಾಳದಲ್ಲಿದೆ.ಧವಳಗಿರಿ ಬಿಳಿ ಪರ್ವತ ೮,೧೬೭ ೨೬,೭೬೪ ೧೯೬೦ ಪ್ರಪಂಚದಲ್ಲಿ ೭ನೇ ಅತಿ ಎತ್ತರದ್ದು. ನೇಪಾಳದಲ್ಲಿದೆ.ನಂಗಾ ಪರ್ಬತ್ ನಂಗಾ ಪರ್ಬತ್ ಶಿಖರ ಅಥವಾ ಡಿಯಾಮಿರ್, "ನಗ್ನ ಪರ್ವತ" ೮,೧೨೫ ೨೬,೬೫೮ ೧೯೫೩ ಫ್ರಪಂಚದಲ್ಲಿ ೯ನೇ ಅತಿ ಎತ್ತರದ್ದು, ಪಾಕಿಸ್ತಾನದಲ್ಲಿದೆ. ಏರಲು ಅತಿ ಅಪಾಯಕಾರಿಯಾದ ಶಿಖರವೆಂದು ಪರಿಗಣಿಸಲ್ಪಟ್ಟಿದೆ.ಅನ್ನಪೂರ್ಣ "ಅನ್ನಪೂರ್ಣ ದೇವಿ" ೮,೦೯೧ ೨೬,೫೪೫ ೧೯೫೦ ಪ್ರಪಂಚದಲ್ಲಿ ೧೦ನೇ ಅತಿ ಎತ್ತರದ್ದು. ನೇಪಾಳದಲ್ಲಿದೆ.ನಂದಾದೇವಿ ೭,೮೧೭ ೨೫,೬೪೫ ೧೯೩೬ ಧಾರ್ಮಿಕ ಹಾಗೂ ಪೌರಾಣಿಕ ಪ್ರಾಮುಖ್ಯತೆ ಹಿಂದೂ ಪುರಾಣಗಳಲ್ಲಿ ಹಿಮಾಲಯವನ್ನು ಹಿಮವತ (ಪಾರ್ವತಿಯ ತಂದೆ) ಎಂಬ ದೇವನನ್ನಾಗಿ ವ್ಯಕ್ತಿತ್ವಾರೋಪಣೆ ಮಾಡಲಾಗಿದೆ. ಇದಲ್ಲದೆ, ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಹಿಮಾಲಯದ ಹಲವಾರು ಸ್ಥಳಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಹರಿದ್ವಾರ - ಇಲ್ಲಿ ಗಂಗಾ ನದಿಯು ಪರ್ವತಗಳಿಂದಾಚೆಗೆ ಬಂದು ಸಮತಳ ಭೂಮಿಯನ್ನು ಹೊಕ್ಕುತ್ತದೆ. ಬದರೀನಾಥ್ - ಇಲ್ಲಿ ವಿಷ್ಣುವಿಗೆ ಮುಡಿಪಾದ ಮಂದಿರವಿದೆ. ಕೇದಾರನಾಥ್ - ೧೨ ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಇಲ್ಲಿ ಕಾಣಬಹುದು. ಗೋಮುಖ್ - ಇದು ಭಾಗೀರಥಿಯ ಉಗಮ ಸ್ಥಳ. ಗಂಗೋತ್ರಿ ನಗರದಿಂದ ಕೆಲವೇ ಮೈಲಿಗಳ ಅಂತರದಲ್ಲಿದೆ. ದೇವಪ್ರಯಾಗ - ಇಲ್ಲಿ ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮವಾಗಿ ಗಂಗೆಯಾಗಿ ಮುಂದೆ ಹರಿಯುತ್ತದೆ. ಹೃಷಿಕೇಶ - ಇಲ್ಲಿ ಲಕ್ಷ್ಮಣನ ದೇವಸ್ಥಾನವಿದೆ. ಕೈಲಾಸ ಪರ್ವತ - ಇದು ೬,೬೩೮ ಮೀ. ಎತ್ತರದ ಶಿಖರ. ಹಿಂದೂ ಧರ್ಮೀಯರು ಇದನ್ನು ಶಿವನ ವಾಸಸ್ಥಾನ ಎಂದು ಪರಿಗಣಿಸುತ್ತಾರೆ. ಈ ಶಿಖರವನ್ನು ಬೌದ್ಧ ಧರ್ಮೀಯರೂ ಪೂಜ್ಯ ಭಾವನೆಯಿಂದ ನೋಡುತ್ತಾರೆ. ಬ್ರಹ್ಮಪುತ್ರ ನದಿಯ ಉಗಮ ತಾಣವಾದ ಈ ಪರ್ವತವು ಮಾನಸ ಸರೋವರವನ್ನು ತನ್ನ ತಪ್ಪಲಿನಲ್ಲಿ ಹೊಂದಿದೆ. ಅಮರನಾಥ - ಇಲ್ಲಿ ಹಿಮದಿಂದ ಸ್ವಾಭಾವಿಕವಾಗಿ ಶಿವಲಿಂಗವು ಮೂಡುತ್ತದೆ. ಈ ಲಿಂಗವು ಪ್ರತಿ ವರ್ಷವೂ ಚಳಿಗಾಲದಲ್ಲಿ ಕೆಲವು ವಾರಗಳಲ್ಲಿ ಕಂಡುಬರುತ್ತದೆ. ಈ ಕೆಲವು ವಾರಗಳಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗದ ದರ್ಶನ ಪಡೆಯಲು ಆಗಮಿಸುತ್ತಾರೆ. ವೈಷ್ಣೋದೇವಿ - ದುರ್ಗಾ ಭಕ್ತರಲ್ಲಿ ಈ ಮಂದಿರವು ಪ್ರಸಿದ್ಧಿಯನ್ನು ಹೊಂದಿದೆ. ದಲೈಲಾಮಾ ಅವರ ನಿವಾಸ ಸೇರಿದಂತೆ ಟಿಬೆಟ್ಟಿನ ಬೌದ್ಧ ಧರ್ಮದ ಹಲವಾರು ಸ್ಥಳಗಳು ಹಿಮಾಲಯದಲ್ಲಿ ಕಾಣಸಿಗುತ್ತವೆ. ಯೆತಿ - ಇದು ವಾನರ ಜಾತಿಗೆ ಸೇರಿದ ಅತಿ ದೊಡ್ಡ ಹಾಗೂ ಪ್ರಸಿದ್ಧ ಪ್ರಾಣಿ. ಇದು ಹಿಮಾಲಯದಲ್ಲಿ ನೆಲೆಸಿದೆಯೆಂದು ಹಲವಾರು ಗಾಳಿಸುದ್ದಿಗಳಿವೆ. ಆದರೆ ಪ್ರಾಚಲಿತ್ಯದಲ್ಲಿರುವ ವಿಜ್ಞಾನಿಗಳು ಯೆತಿಯ ಇರುವಿಕೆಯ ಬಗ್ಗೆ ಸಿಕ್ಕಿರುವ ಪುರಾವೆಗಳನ್ನು ಅವೈಜ್ಞಾನಿಕವೆಂದೋ, ಕೀಟಲೆ/ಸುಳ್ಳಿನ ವದಂತಿಯೆಂದೋ ಅಥವಾ ಬೇರಾವುದೋ ಸಾಮಾನ್ಯವಾದ ಪ್ರಾಣಿಯನ್ನು ಗುರುತು ಹಿಡಿಯುವಾಗ ಆಗಿರಬಹುದಾದಂಥ ತಪ್ಪೆಂದೋ ಪರಿಗಣಿಸುತ್ತಾರೆ. ಶಂಭಾಲ - ಇದು ಬೌದ್ಧ ಧರ್ಮದಲ್ಲಿ ಸಿಗಬರುವ ಒಂದು ದೈವಿಕ ನಗರಿ. ಈ ನಗರಿಯ ಬಗ್ಗೆ ಹಲವಾರು ಐತಿಹ್ಯಗಳಿವೆ. ಕೆಲವು ಐತಿಹ್ಯಗಳ ಪ್ರಕಾರ ಇದೊಂದು ನಿಜವಾದ ಭೌತಿಕ ನಗರ ಮತ್ತು ಇಲ್ಲಿ ಪುರಾತನವಾದ ಮತ್ತು ರಹಸ್ಯವಾದ ಬೌದ್ಧಿಕ ಉಪದೇಶಗಳನ್ನು ರಕ್ಷಿಸಲಾಗುತ್ತಿದೆ. ಇನ್ನು ಕೆಲವು ನಂಬಿಕೆಗಳ ಪ್ರಕಾರ ಈ ನಗರವು ಭೌತಿಕ ಅಸ್ತಿತ್ವದಲಿಲ್ಲ ಹಾಗೂ ಇದನ್ನು ಮಾನಸಿಕವಾಗಿ ಮಾತ್ರ ಎಟುಕಿಸಿಕೊಳ್ಳಬಹುದು. ಶ್ರೀ ಹೇಮಕುಂಡ ಸಾಹೇಬ್ - ಇದು ಸಿಖ್ ಧರ್ಮದ ಒಂದು ಗುರುದ್ವಾರ. ಸಿಖ್ಖರ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರು ತಮ್ಮ ಹಿಂದಿನ ಒಂದು ಅವತಾರದಲ್ಲಿ ಈ ಸ್ಥಳದಲ್ಲಿ ತಪಸ್ಸು ಮಾಡಿ ಮೋಕ್ಷ ಪಡೆದರೆಂಬ ನಂಬಿಕೆಗಳಿವೆ. thumb|right|ಹಿಮಾಲಯ ಪ್ರದೇಶದ ಉಪಗ್ರಹ ಚಿತ್ರ. ಟಿಬೆಟನ್ ಪ್ರಸ್ತಭೂಮಿ ಮಧ್ಯದಲ್ಲಿದೆ, ಮತ್ತು ತಕ್ಲಮಕಾನ್ ಮರುಭೂಮಿಯನ್ನು ಚಿತ್ರದ ಮೇಲ್ಭಾಗದಲ್ಲಿ ಕಾಣಬಹುದು. ಬಾಹ್ಯ ಸಂಪರ್ಕಗಳು ಹಿಮಾಲಯ ಪರ್ವತಗಳ ಬಗ್ಗೆ ಭೌಗೋಳಿಕ ಮಾಹಿತಿ ಹಿಮಾಲಯಗಳ ಉಗಮ ವರ್ಗ:ಭೂಗೋಳ ವರ್ಗ:ಹಿಮಾಲಯ
ಮೈಸೂರು ಅರಮನೆ
https://kn.wikipedia.org/wiki/ಮೈಸೂರು_ಅರಮನೆ
thumb|The Grand Mysore Palace|500x500px thumb|500px|ಮೈಸೂರು ಅರಮನೆಯ ಸಂಜೆಯ ನೋಟ thumb|305x305px|ಚಾವಣಿಯ ಕಲಾಕೃತಿ thumb|ಮೈಸೂರು ಅರಮನೆ ಮುಖ್ಯ ಮಾರ್ಗ |left|257x257px thumb|305x305px|ಗ್ಯಾಲರಿ thumb|right|350px|'ಅಂಬಾ ವಿಲಾಸ್ ಅರಮನೆ ಅಥವಾ ಮೈಸೂರರಮನೆ' ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ" ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು. ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ; ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಅರಮನೆ ಇತ್ತು. ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲು ಶುರು ಮಾಡುತ್ತಾರೆ. ಓರೆ ಅಕ್ಷರಗಳು== ಚರಿತ್ರೆ == ಮೊದಲು ಈ ಸಂಸ್ಥಾನದ ರಾಜಧಾನಿ ಶ್ರೀರಂಗಪಟ್ಟಣ ಆಗಿತ್ತು 1799ರಲ್ಲಿ ಟಿಪ್ಪು ನಿಧನರಾದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತಗೊಳ್ಳುತ್ತಾರೆ. ಆಗಿನ್ನೂ 6 ವರ್ಷದ ಬಾಲಕನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ 1897ರಲ್ಲಿ ಹಳೆಯ ಮರದ ಅರಮನೆಯಲ್ಲಿ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಂಕಿ ಬಿದ್ದು, ಇಡೀ ಅರಮನೆ ಸುಟ್ಟು ಹೋಯಿತು. ನಂತರ ಅರಮನೆ ವಾಸಿಗಳು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತಗೊಳ್ಳುತ್ತಾರೆ.ಒಡೆಯರ್ ಅರಸರು ೧೪ ನೆಯ ಶತಮಾನದಲ್ಲಿಯೇ ಇಲ್ಲಿ ಒಂದು ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ ೧೬೩೮ ರಲ್ಲಿ ಸಿಡಿಲು ಹೊಡೆದು ಭಾಗಶಃ ಹಾಳಾಯಿತು. ಆಗ ಇದನ್ನು ರಿಪೇರಿ ಮಾಡಿ ವಿಸ್ತರಿಸಲಾಗಿತ್ತು. ಆದರೆ ೧೮ ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ ೧೭೯೩ ರಲ್ಲಿ ಟೀಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಲಾಯಿತು. ೧೮ಂ೩ ರಲ್ಲಿ ಇನ್ನೊಂದು ಅರಮನೆಯನ್ನು ಅದರ ಸ್ಥಳದಲ್ಲಿ ಕಟ್ಟಿಸಲಾಯಿತು. ಈ ಅರಮನೆ ಸಹ ೧೮೯೭ ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಯಿತು. ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಹೆನ್ರಿ ಇರ್ವಿನ್ ಅವರನ್ನು ನೇಮಿಸಿದರು. ವಿವಿಧ ರೀತಿಯ ವಾಸ್ತುಕಲೆಗಳನ್ನು ಸೇರಿಸಿ ಅರಮನೆಯನ್ನು ಕಟ್ಟಲು ಅವರಿಗೆ ತಿಳಿಸಲಾಯಿತು. ಅರಮನೆ ೧೯೧೨ ರಲ್ಲಿ ಸಂಪೂರ್ಣವಾಯಿತು. ಮೈಸೂರು ಸಂಸ್ಥಾನವನ್ನು ಆಳಿದ ಅರಸರು ಯದುರಾಯರು (ಸುಮಾರು 1399-1423) ಬೆಟ್ಟದ ಚಾಮರಾಜ ಒಡೆಯರು (1423-1459) ತಿಮ್ಮರಾಜ ಒಡೆಯರು (1459-1478) ಹಿರಿಯ ಚಾಮರಾಜ ಒಡೆಯರು (1478-1513) ಹಿರಿಯ ಬೆಟ್ಟದ ಚಾಮರಾಜ ಒಡೆಯರು (1513-1553) ಬೋಳ ಚಾಮರಾಜ ಒಡೆಯರು ಬೆಟ್ಟದ ಚಾಮರಾಜ ಒಡೆಯರು (ಈ ಮೂರೂ ಜನ 1553-1578) ರಾಜ ಒಡೆಯರು (1578-1618) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ. ಚಾಮರಾಜ ಒಡೆಯರು (1617-1637) ಎರಡನೆ ರಾಜ ಒಡೆಯರು (1637-1638) ಕೇವಲ 1 ವರ್ಷದ ಆಳ್ವಿಕೆ ರಣಧೀರ ಕಂಠೀರವ ನರಸರಾಜ ಒಡೆಯರು (1638-1659) ದೊಡ್ಡದೇವರಾಜ ಒಡೆಯರು (1659-1673) ಚಿಕ್ಕದೇವರಾಜ ಒಡೆಯರು (1673-1704) ಚಿಕ್ಕದೇವರಾಜ ಒಡೆಯರ ಮೂಕ ಮಗ (1704-1714 ತಾಯಿ, ಮಂತ್ರಿಗಳ ಸಹಕಾರದೊಂದಿಗೆ) ದೊಡ್ಡ ಕೃಷ್ಣರಾಜ ಒಡೆಯರು (1714-1734) ಅಂಕನಹಳ್ಳಿ ಚಾಮರಾಜ ಒಡೆಯರು ಇಮ್ಮಡಿ ಕೃಷ್ಣರಾಜ ಒಡೆಯರು (ಇಬ್ಬರೂ ದತ್ತುಪುತ್ರರು, 1766ರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ) ನಂಜರಾಜ ಒಡೆಯರು (1766- 1770) ಬೆಟ್ಟದ ಚಾಮರಾಜ ಒಡೆಯರು (1770-1776) ಖಾಸಾ ಚಾಮರಾಜ ಒಡೆಯರು (1776-1796) (ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, 1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂ ಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು, ಬೆಟ್ಟದ ಚಾಮರಾಜರು,ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು) ಮುಮ್ಮಡಿ ಕೃಷ್ಣರಾಜ ಒಡೆಯರು (1799ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ 5 ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು 1810ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆ ಬಿಟ್ಟು ಕೊಡಬೇಕಾಯಿತು. ಚಾಮರಾಜ ಒಡೆಯರು (1881-1902) ನಾಲ್ವಡಿ ಕೃಷ್ಣರಾಜ ಒಡೆಯರು (1902-1940) ಜಯಚಾಮರಾಜ ಒಡೆಯರು (1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ,ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.) ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹದ್ದೂರ್ (20 ಫೆಬ್ರುವರಿ 1953 - 10 ಡಿಸೆಂಬರ್ 2013) ಯದುವೀರ ಕೃಷ್ಣ ದತ್ತಾ ಚಾಮರಾಜ ಒಡೆಯರ್ (28 ಮೇ 2015- ಪ್ರಸ್ತುತ) ವಾಸ್ತುಶಿಲ್ಪ ಅರಮನೆಯ ವಾಸ್ತುಕಲೆಯ ಶೈಲಿಯನ್ನು ಸಾಮಾನ್ಯವಾಗಿ "ಇಂಡೋ-ಸರಾಸೆನಿಕ್" ಶೈಲಿ ಎಂದು ವರ್ಣಿಸಲಾಗುತ್ತದೆ. ಮುಖ್ಯವಾಗಿ ಹಿಂದೂ, ಮುಸ್ಲಿಮ್, ಮತ್ತು ಗೋಥಿಕ್ ಶೈಲಿಯ ವಾಸ್ತುಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ. ಕಲ್ಲಿನಲ್ಲಿ ಕಟ್ಟಲಾಗಿರುವ ಅರಮನೆಯಲ್ಲಿ ಮೂರು ಮಹಡಿಗಳಿದ್ದು, ಕೆಂಪು ಅಮೃತಶಿಲೆಯ ಗುಂಬಗಳು ಹಾಗೂ ೧೪೫ ಅಡಿ ಎತ್ತರದ ಐದು ಮಹಡಿಗಳುಳ್ಳ ಗೋಪುರವನ್ನು ಅರಮನೆ ಹೊಂದಿದೆ. ಅರಮನೆಯ ಸುತ್ತಲೂ ದೊಡ್ಡ ಉದ್ಯಾನವಿದೆ. ದೇವಸ್ಥಾನಗಳು ಅರಮನೆಯ ಆವರಣದಲ್ಲಿ ೧೨ ದೇವಸ್ಥಾನಗಳಿವೆ. ೧೪ ನೆಯ ಶತಮಾನದಲ್ಲಿ ಕಟ್ಟಿದ ಕೋಡಿ ಭೈರವನ ದೇವಸ್ಥಾನದಿಂದ ಹಿಡಿದು ೧೯೫೩ ರಲ್ಲಿ ಕಟ್ಟಲಾದ ದೇವಸ್ಥಾನಗಳೂ ಇವೆ. ಇಲ್ಲಿರುವ ದೇವಸ್ಥಾನಗಳಲ್ಲಿ ಪ್ರಸಿದ್ಧವಾದ ಕೆಲವು: ಸೋಮೇಶ್ವರನ ದೇವಸ್ಥಾನ ಲಕ್ಶ್ಮೀರಮಣ ದೇವಸ್ಥಾನ ಆಂಜನೇಯಸ್ವಾಮಿ ದೇವಸ್ಥಾನ ಗಣೇಶ ದೇವಸ್ಥಾನ ಶ್ವೇತ ವರಾಹ ಸ್ವಾಮಿ ದೇವಸ್ಥಾನ ಆಕರ್ಷಣೆಗಳು "ದಿವಾನ್-ಎ-ಖಾಸ್": ಮುಘಲ್ ಸಾಮ್ರಾಜ್ಯದ ಅರಮನೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿದ್ದ ಕೋಣೆ. ಮೈಸೂರು ಅರಮನೆಯಲ್ಲಿಯೂ ಇದನ್ನು ಬಳಸಲಾಗಿದೆ. ಮುಖ್ಯವಾದ ಅತಿಥಿಗಳು ಬಂದಾಗ ಅವರನ್ನು ರಾಜರು ಎದುರುಗೊಳ್ಳಲು ಉಪಯೋಗಿಸುತ್ತಿದ್ದ ಕೋಣೆ ಇದು. "ದರ್ಬಾರ್ ಹಾಲ್": ರಾಜರ ದರ್ಬಾರು ನಡೆಯುತ್ತಿದ್ದ ಶಾಲೆ. ಇಲ್ಲಿಯೇ ಜನರು ರಾಜರನ್ನು ಆಗಾಗ ಕಾಣಬಹುದಾಗಿತ್ತು. ಕಲ್ಯಾಣ ಮಂಟಪದಲ್ಲಿ ಚಿಕ್ಕ ಪುಟ್ಟ ಶುಭಕಾರ್ಯಗಳು ನಡೆಯುತ್ತಿದ್ದವು. ಆಯುಧ ಶಾಲೆ ರಾಜಮನೆತನದ ಸದಸ್ಯರು ಬಳಸುತ್ತಿದ್ದ ಆಯುಧಗಳನ್ನು ಇಲ್ಲಿ ಇಡಲಾಗಿದೆ. ಇಲ್ಲಿ ಚಾರಿತ್ರಿಕವಾದ ಅನೇಕ ಆಯುಧಗಳನ್ನು ಕಾಣಬಹುದು. ೧೪ ನೆಯ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಗ್ರನಖ ಮೊದಲಾದ ಆಯುಧಗಳಿಂದ ಹಿಡಿದು ೨ಂನೆಯ ಶತಮಾನದ ಪಿಸ್ತೂಲುಗಳು, ಬಂದೂಕುಗಳು ಮೊದಲಾದವನ್ನು ಇಲ್ಲಿ ಕಾಣಬಹುದು. ಮುಖ್ಯವಾಗಿ, ಒಡೆಯರ್ ವಂಶದ ಪ್ರಸಿದ್ಧ ಅರಸು ರಣಧೀರ ಕಂಠೀರವ ಉಪಯೋಗಿಸಿದ್ದ ಖಡ್ಗಗಳಲ್ಲಿ ಒಂದಾದ "ವಜ್ರಮುಷ್ಟಿ", ಹಾಗೂ ಟೀಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಕೆಲವನ್ನು ಇಲ್ಲಿ ಕಾಣಬಹುದು.Is tourism stagnating in Mysore? ಬಾಹ್ಯ ಸಂಪರ್ಕಗಳು ಮೈಸೂರಿನ ಅರಮನೆಗಳು ಮುಖ್ಯ ಮೈಸೂರು ಅರಮನೆ ಮೈಸೂರು ಹೆರಿಟೇಜ್ ಕಟ್ಟಡಗಳ ಪಟ್ಟಿ ಯದುವೀರ ಕೃಷ್ಣದತ್ತಾ ಚಾಮರಾಜ ಒಡೆಯರ್:೨೯-೬-೨೦೧೬:[] ಉಲ್ಲೇಖಗಳು ವರ್ಗ:ಮೈಸೂರು ವರ್ಗ:ಮೈಸೂರು ಸಂಸ್ಥಾನ ವರ್ಗ:ಮೈಸೂರು ತಾಲೂಕಿನ ಪ್ರವಾಸಿ ತಾಣಗಳು ವರ್ಗ:ಕರ್ನಾಟಕದ ಏಳು ಅದ್ಭುತಗಳು
ಎಚ್ ನರಸಿಂಹಯ್ಯ
https://kn.wikipedia.org/wiki/ಎಚ್_ನರಸಿಂಹಯ್ಯ
ಗಾಂಧೀವಾದಿ, ವಿಚಾರವಾದಿ ಡಾ. ಎಚ್. ನರಸಿಂಹಯ್ಯhttp://jnaneshwara.blogspot.in/2011/03/h-narasimhaiah-physicist-educator.htmlhttps://kannadakannadiga.wordpress.com/category/%e0%b2%85%e0%b2%b0%e0%b3%8d%e0%b2%a5/ (ಜೂನ್ ೬, ೧೯೨೦ - ಜನವರಿ ೩೧, ೨೦೦೫) ಅವರು ಬೆಂಗಳೂರಿನ ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳೂ ಆಗಿದ್ದರು. ಜನನ, ಬಾಲ್ಯ ಡಾ.ಎಚ್.ಎನ್http://kannada-praadhikaara.gov.in/aboutus.asp ಎಂದೇ ಜನಪ್ರಿಯರಾದ 'ಹೊಸೂರು, ನರಸಿಂಹಯ್ಯನವರು' ಜೂನ್ ೬, ೧೯೨೦ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ 'ಹೊಸೂರು' ಗ್ರಾಮದಲ್ಲಿ ಒಂದು ಬಡ ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ 'ಹನುಮಂತಪ್ಪ', ತಾಯಿ 'ವೆಂಕಟಮ್ಮ', ತಂಗಿ 'ಗಂಗಮ್ಮ'. ಮನೆಯಲ್ಲಿ ಮಾತಾಡುವ ಭಾಷೆ ತೆಲುಗು. ಆದರೆ ಕನ್ನಡವೆಂದರೆ ಹೆಚ್ಚು ಪ್ರೀತಿ, ಹಾಗೂ ಪ್ರಾವೀಣ್ಯತೆ ಇತ್ತು. ವಿದ್ಯಾಭ್ಯಾಸ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, ೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಹಾನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಸ್ವಾತಂತ್ರ್ಯ ಹೋರಾಟ ೧೯೪೨ ನೆಯ ಇಸವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದಾಗ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ ಹೇಳಿದರು. ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ. ೧೯೪೭ರಲ್ಲಿ ಸ್ವಾತಂತ್ರ್ಯ ಬಂದ ನಂತರ ಮೈಸೂರಿನಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿಯೂ ಅವರು ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಭಾಗವಹಿಸಿದರು. ತಮ್ಮ ಸಹೋದ್ಯೋಗಿ ಕೆ. ಶ್ರೀನಿವಾಸನ್, ಟಿ.ಆರ್. ಶ್ಯಾಮಣ್ಣ ಇವರ ಜೊತೆ ಭೂಗತ ಹೋರಾಟ ನಡೆಸಿ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಬೆಂಬಲ ನೀಡತೊಡಗಿದರು. "ಇಂಕ್ವಿಲಾಬ್" ಎಂಬ ಕೈಬರಹದ ಪತ್ರಿಕೆಯನ್ನು ಮಾಡಿ ಪೊಲೀಸರಿಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದರು. "ಇಂಕ್ವಿಲಾಬ್" ಕೈಬರಹದ ಪತ್ರಿಕೆಯ ೩೩ ಸಂಚಿಕೆಗಳು ಹೊರಬಂದವು. ವೃತ್ತಿಜೀವನ ೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ, ಭೌತಶಾಸ್ತ್ರ ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ನಂತರ ಹನ್ನೆರೆಡು ವರ್ಷಗಳು ಪ್ರಾಂಶುಪಾಲರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. ಆ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದರು. ಅನಂತರ ಎಚ್.ಎನ್. ಅವರು ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್‌ ಕರ್ನಾಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ವಿದ್ಯಾರ್ಥಿ ದೆಸೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ ೧೯೪೬ರಿಂದ ಕೊನೆವರೆಗೂ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ವಾಸವಾಗಿದ್ದರು. ಒಟ್ಟು ೫೭ ವರ್ಷಗಳ ಕಾಲ ವಿದ್ಯಾರ್ಥಿನಿಲಯದಲ್ಲಿಯೇ ನೆಲೆಸಲು ಅವರ ಸರಳ, ಆದರ್ಶಮಯ ಜೀವನವೇ ಕಾರಣವೆಂದು ಹೇಳಲಾಗುತ್ತದೆ. ಅಮೆರಿಕಾದ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಶ್ರೇಣಿ ಪಡೆದರು. ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ಸ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲಿಟ್ಟಿದ್ದರು. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಉನ್ನತಿಗಾಗಿ ಶ್ರಮಿಸಿದ್ದಾರೆ ಎನ್ನಲಾಗುತ್ತದೆ. ವ್ಯಕ್ತಿತ್ವ ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ ಹೆಚ್.ಎನ್. ಸರಳ ಜೀವನ ನಡೆಸುತ್ತಿದ್ದರು. ಅವರು ರಾಷ್ಟ್ರೀಯತಾವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಎಂದು ಹೆಚ್.ಎನ್. ಅವರ ನಿಕಟವರ್ತಿಗಳ ಅಭಿಪ್ರಾಯ. ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಅವರು 1962ರಲ್ಲಿ ಬೆಂಗಳೂರು ವಿಜ್ಞಾನ ವೇದಿಕೆ (Bangalore Science forum) ಎಂಬ ವಿಜ್ಞಾನ ವೇದಿಕೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು. ಸಾಯಿಬಾಬಾ ಅವರಿಗೆ ಸವಾಲು ಶ್ರೀ ಸತ್ಯಬಾಬಾ ಅವರು ತಮ್ಮ ಪವಾಡಗಳಿಗೆ ಪ್ರಸಿದ್ಧರಾಗಿದ್ದರು. ಎಚ್.‌ ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ 1976ರಲ್ಲಿ ‘ಪವಾಡ ಮತ್ತು ಪರೀಕ್ಷಿಸಿ ನೋಡಬಹುದಾದ ಮೂಢನಂಬಿಕೆಗಳ ತನಿಖಾ ಸಮಿತಿʼ (Committee to Investigate Miracles and Verifiable Superstitions) ಯನ್ನು ನೇಮಿಸಿ ಅದಕ್ಕಾಗಿ 25,000 ರೂಪಾಯಿಗಳನ್ನು ಮಂಜೂರು ಮಾಡಿದರು. ಎಚ್.‌ ನರಸಿಂಹಯ್ಯನವರು ಅಧ್ಯಕ್ಷರಾಗಿದ್ದ ಸಮಿತಿಯಲ್ಲಿ ಪ್ರಖ್ಯಾತ ವಿಜ್ಞಾನಿಗಳು, ಸಮಾಜ ಸೇವಕರು, ಮನೋವೈದ್ಯರೂ ಸೇರಿದಂತೆ ಹನ್ನೊಂದು ಮಂದಿ ಸದಸ್ಯರಿದ್ದರು. ಸಮಿತಿಯ ಕಡೆಯಿಂದ ಸಾಯಿಬಾಬಾ ಅವರಿಗೆ ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ವಿಜ್ಞಾನದ ವ್ಯವಸ್ಥಿತ ವಿಧಾನಗಳಿಂದ ಪರೀಕ್ಷೆ ನಡೆಸಲು ಅವಕಾಶ ನೀಡಬೇಕೆಂದು ಕೋರಿ ಮೂರು ಪತ್ರಗಳು ರವಾನೆಯಾದವು. ಆದರೆ ಸಾಯಿಬಾಬಾ ಅವರ ಕಡೆಯಿಂದ ಉತ್ತರ ಬರಲಿಲ್ಲ. ಸಾಯಿಬಾಬಾ ಅವರಿಂದ ಏನೂ ಪ್ರತಿಕ್ರಿಯೆ ಬರದ ಕಾರಣ ಪತ್ರಗಳನ್ನು ಪತ್ರಿಕೆಗಳ ಪ್ರಕಟಣೆಗಾಗಿ ಬಿಡುಗಡೆ ಮಾಡಲಾಯಿತು. ಪರಿಣಾಮವಾಗಿ ಈ ವಿಷಯ ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳಗಾಯಿತು. ಸಾಹಿತ್ಯ ಕೃತಿಗಳು ತೆರೆದ ಮನ (1992) ಡಾ. ಎಚ್.ಎನ್. ಲೇಖನಗಳು‌ (1992) ಹೋರಾಟದ ಹಾದಿ (ಆತ್ಮಕಥನ) (1995) ಪ್ರಶಸ್ತಿ-ಪುರಸ್ಕಾರ ಎಚ್ಚೆನ್‌ ಅವರು ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1969) ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (1984) ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ`, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಫೆಲೋಷಿಪ್ (1990) ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾನಾರ್ಮಲ್` (Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ` ಎಂಬ ಗೌರವ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು. ನಿಧನ ಡಾ. ಹೆಚ್.ನರಸಿಂಹಯ್ಯನವರು ೨೦೦೫ ಜನವರಿ ೩೧ರಂದು ನಿಧನರಾದರು ಉಲ್ಲೇಖಗಳು ಭಾಹ್ಯ ಕೊಂಡಿಗಳು ವೈಚಾರಿಕ ಸಂತ' ಎಚ್.ನರಸಿಂಹಯ್ಯ ಮನೆ; ಈರಪ್ಪ ಹಳಕಟ್ಟಿ Updated: 06 ಜೂನ್ 2020 Champion of pure sciences in an IT hub by A. Narayana Article in the newspaper ದಿ ಹಿಂದೂ 4 April 2004 Biography at Rationalist International Tributes to H.Narasimhaiah H.Narasimhaiah passes into history Past & Present Rationalist and nationalist article by Ramachandra Guha in The Hindu 27 February 2005 The Blitz interview Sathya Sai Baba's September 1976 interview with editor R. K. Karanjia of Blitz News Magazine, containing a rebuttal to Narasimhaiah Dr. HN's Room at National college Hostel on YouTube ವರ್ಗ:ಭಾರತ ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ವರ್ಗ:೧೯೨೦ ಜನನ ವರ್ಗ:೨೦೦೫ ನಿಧನ ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು
ಹೆಚ ನರಸಿಂಹಯ್ಯ
https://kn.wikipedia.org/wiki/ಹೆಚ_ನರಸಿಂಹಯ್ಯ
REDIRECT ಎಚ್ ನರಸಿಂಹಯ್ಯ
ರಾಜಾ ರವಿ ವರ್ಮ
https://kn.wikipedia.org/wiki/ರಾಜಾ_ರವಿ_ವರ್ಮ
thumb|ರಾಜಾ ರವಿ ವರ್ಮ (೧೮೪೮-೧೯೦೬) ರಾಜಾ ರವಿವರ್ಮ( ೨೯, ಏಪ್ರಿಲ್, ೧೮೪೮-೨, ಅಕ್ಟೋಬರ್, ೧೯೦೬ ) - ಭಾರತದ ಸುಪ್ರಸಿದ್ಧ ವರ್ಣಚಿತ್ರಗಾರ. ಆರಂಬಿಕ ಬದುಕು ರಾಜಾ ರವಿವರ್ಮರು ಕಿಳಿಮಾನೂರು ಊರಿನ, ರಾಜವಂಶಕ್ಕೆ ಸೇರಿದವರು. ಈ ಗ್ರಾಮ, ತಿರುವನಂತಪುರದ ಉತ್ತರಕ್ಕೆ, ೨೫ ಮೈಲಿ ದೂರದಲ್ಲಿದೆ. ಕಂಡನೂರು ದೆಶತ್ತ್ ಮತ್ತು ಉಮಾ ಅಂಬಾಬಾಯಿಯವರ ಒಲವಿನ ಮಗನಾಗಿ, ೨೯, ಆಗಸ್ಟ್, ೧೮೪೮ ರಲ್ಲಿ ರವಿವರ್ಮರು ಜನಿಸಿದರು. ತಾಯಿ ಕವಯಿತ್ರಿ, ಮತ್ತು ಸುಸಂಸ್ಕೃತರು. ತಂದೆ, ಸಂಸ್ಕೃತವನ್ನು ಓದಿಕೊಂಡವರು. ಚಿಕ್ಕಂದಿನಿಂದಲೂ ರವಿಯವರು ದೈವಭಕ್ತರು. ಆಚಾರ, ನಿಷ್ಠೆ, ಆತ್ಮಸ್ಥೈರ್ಯ, ಮತ್ತು ಆತ್ಮವಿಶ್ವಾಸಗಳು, ಅವರಿಗೆ ಹುಟ್ಟಿನಿಂದಲೆ ಬಂದಿದ್ದವು. ಪ್ರತಿದಿನ ಬೆಳಿಗ್ಯೆ ಬೇಗ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಸೌಂದರ್ಯಲಹರಿ, ಸ್ವಯಂವರ, ಮಂತ್ರಗಳನ್ನು ಬಾಯಿಪಾಠವಾಗಿ ಹೇಳುತ್ತಿದ್ದರು. ರವಿ, [ ರವಿವರ್ಮರನ್ನು ಬಾಲ್ಯದಲ್ಲಿ ಗೆಳೆಯರು ಹಾಗೆಯೇ ಕರೆಯುತ್ತಿದ್ದದ್ದು ] ಸಾಹಿತ್ಯ, ವ್ಯಾಕರಣ, ಶಾಸ್ತ್ರೀಯ ಸಂಗೀತ, ಮತ್ತು ವೇದಪುರಾಣಗಳಲ್ಲಿ ಆಸಕ್ತರು. ರಾಮಾಯಣ, ಮಹಾಭಾರತ, ಅವರಿಗೆ ಬಲು ಪ್ರಿಯವಾದ ಗ್ರಂಥಗಳು. ಅಮರಕೋಶ, ಸಿದ್ಧರೂಪ, ಅವರಿಗೆ ೫ ನೆ ವಯಸ್ಸಿನಲ್ಲೇ ಬಾಯಿಪಾಠವಾಗಿತ್ತು. ಅವರ ಮಾವ, ರಾಜರಾಜವರ್ಮರು ಒಳ್ಳೆಯ ಕಲಾಸಾಧಕರು. ಅವರು ಆಗಿನ ತಿರುವಾಂಕೂರಿನ ಮಹಾರಾಜರಾದ, ಆಯಿಲ್ಯಂ ತಿರುನಾಳ್ ರವರಿಗೆ ರವಿಯನ್ನು ಪರಿಚಯಿಸಿದರು. ಆಗ ರವಿಗೆ ಕೇವಲ ೧೪ ವರ್ಷ ವಯಸ್ಸು. ದೊರೆಗಳು ರವಿಗೆ ಆಗಿನಕಾಲದ ಪ್ರಮುಖ ಚಿತ್ರಕಲಾವಿದರು ರಚಿಸಿದ, ಸಚಿತ್ರ ಪುಸ್ತಕವನ್ನು ಕೊಟ್ಟು ಅದನ್ನು ಅಭ್ಯಸಿಸಲು ಹೇಳಿದರು. ಅಳಗಿರಿ ನಾಯ್ಡು ಅವರನ್ನು ಪರಿಚಯಿಸಿ, ಅವರಬಳಿ ತಮ್ಮ ಕಲಾಭ್ಯಾಸವನ್ನು ಮುಂದುವರೆಸಲು ಅನುಮತಿ ನೀಡಲಾಯಿತು. ತಿರುವನಂತಪುರದ ಅರಮನೆಯ ಆಸ್ಥಾನ ಕಲಾವಿದನಾಗಿ ೧೮೬೬ ರಲ್ಲಿ, "ವೀರಶೃಂಖಲೆ ", ಪ್ರಶಸ್ತಿಯ ಜೊತೆಗೆ, ತಿರುವನಂತಪುರದ ಅರಮನೆಯ ಆಸ್ಥಾನಕಲಾವಿದನಾಗಿ, ನೇಮಿಸಲ್ಪಟ್ಟರು ; ತಿಂಗಳಿಗೆ ೫೦ ರೂಗಳ ಮಾಸಾಶನದ ಏರ್ಪಾಡುಮಾಡಲಾಯಿತು. ೧೮೬೮ ರಲ್ಲಿ, ಥಿಯೊಡರ್ ಜೆನ್ಸನ್, ಎಂಬ ಐರೋಪ್ಯ ಚಿತ್ರಕಲಾಕಾರನು ಕೇರಳಕ್ಕೆ ಬಂದಿದ್ದನು. ತನ್ನ ಐರೋಪ್ಯ ಚಿತ್ರಕಲೆಯ ವಿವರಗಳನ್ನು ತೋರಿಸಿ ಅಲ್ಲಿನ ಭಾವ ವೈವಿಧ್ಯತೆಗಳನ್ನು ವಿವರಿಸಿದನು. ತೈಲ ವರ್ಣಚಿತ್ರಗಳ ಸಂಯೋಜನೆಯನ್ನು ಅವನು ರವಿಗೆ ಹೆಳಿಕೊಟ್ಟನು. ಭಾರತೀಯ ಚಿತ್ರಕಲೆಯಲ್ಲಿ ತುಂಬಬೇಕಾದ, ಗಂಭೀರ ವದನ, ಮಹಿಳೆಯಲ್ಲಿ ಇರಬೇಕಾದ ನಾಚಿಗೆ, ವಿಸ್ಮಯ, ಭೀತಿ, ಚಾಂಚಲ್ಯ, ಧೀರತೆ, ಮಂದಹಾಸ, ಇತ್ಯಾದಿಗಳನ್ನು ನಮ್ಮ ದೇಶದ ವರ್ಣಚಿತ್ರಗಳಲ್ಲಿ ಮಾತ್ರ ಕಾಣಬಹುದು. ರವಿಯವರು ಅದನ್ನು ತಾವೇ ವೀಕ್ಷಿಸಿ ಕಲಿತುಕೊಂಡರು. ಮತ್ತು ರವಿ ದೂರದಿಂದ ನೋಡಿಯೇ ಹಲವಾರು ಸೂಕ್ಷ್ಮತೆಗಳನ್ನು ಗಮನಿಸಿ ಮನನಮಾಡಿದರು. ಅರಮನೆಯಲ್ಲಿ ಚಿತ್ರಕಲೆಗಾಗಿಯೇ ಒಂದು ಪ್ರತ್ಯೇಕ ಕೊಠಡಿಯನ್ನು ಮೀಸಲಾಗಿಟ್ಟಿದ್ದರು. ಹಿರಿಯ ಕಲಾವಿದರಾದ, ರಾಮಸ್ವಾಮಿ ನ್ಯಾಕರ್, ಮತ್ತು ಆರ್ಮುಗಂ ಪಿಳ್ಳೆಯವರ ಪ್ರಭಾವವೂ, ರವಿಯವರಮೇಲೆ ಆಯಿತು. ಈ ಗುರುಗಳು ರವಿಯವರಿಗೆ ತಕ್ಕ ಕಲಾಮೂಲ ಅಡಿಪಾಯವನ್ನು ಸುಸ್ಥಿರವಾಗಿ ಹಾಕಿಕೊಟ್ಟಿದ್ದರಿಂದ ಕಲೆಯ ಹೊಸ ಹೊಸ ಪದ್ಧತಿಗಳು, ವಿನ್ಯಾಸಗಳೂ ಬಂದಾಗ, ಪ್ರಾಕಾರಗಳನ್ನು ಅರಿಯಲು ಅವರಿಗೆ ತೊಂದರೆಯೇನೂ ಆಗಲಿಲ್ಲ. ರವಿವರ್ಮರು ತಮ್ಮ ಸ್ವಂತ ಸಹಾಯದ ಕಲಿಕೆಯಿಂದಲೇ ಕಲೆಯನ್ನು ತಮ್ಮದಾಗಿಸಿಕೊಂಡರು. ಕಲೆಗೆ ಪೂರಕವಾದ ಮಾಹಿತಿಗಳನ್ನು ಅವರು, ಪುರಾಣ ಪುಣ್ಯಕಥೆಗಳನ್ನು ಪಠಿಸುವ ಮೂಲಕ ತಮ್ಮ ಕಲಾ-ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡರು. ರವಿಯವರ ವಿವಾಹ, ರಾಜಕುಟುಂಬಕ್ಕೆ ಸೇರಿದ ಪುರೂರು ಟ್ಟಾತಿನಾಳ್ ರಾಣಿ,(ರಾಣಿ ಭಾಗೀರತಿಬಾಯಿ)(ಕೊಚ್ಚು ಪಂಗಿ ಅಮ್ಮ) ಎಂಬ ಕನ್ಯೆಯೊಡನೆ ನೆರವೇರಿತು. ಈಕೆ ಮಾವೇಲಿಕ್ಕರ ಮನೆತನದವಳು. ಈ ದಂಪತಿಗಳಿಗೆ ೩ ಗಂಡುಮಕ್ಕಳು ಹಾಗೂ ೨ ಹೆಣ್ಣು ಮಕ್ಕಳು ಜನಿಸಿದರು. ಚೊಚ್ಚಲು ಮಗ ಕೇರಳವರ್ಮ, ೧೮೭೬ ರಲ್ಲಿ ಜನಿಸಿದನು. ಎರಡನೆಯ ಮಗ ರಾಮವರ್ಮ ೧೮೭೯ ರಲ್ಲಿ ಹುಟ್ಟಿದ . ಮೂರನೆಯ ಮಗನೇ ರಾಜ ರಾಜ ವರ್ಮ. ಮಹಾಪ್ರಭ, ಮತ್ತು ಉಮಬಾಯಿ ಹೆಣ್ಣುಮಕ್ಕಳು. ಮಹಾಪ್ರಭ ತಂದೆಯವರ ೨ ಪ್ರಸಿದ್ಧ ತೈಲಚಿತ್ರಗಳಿಗೆ ರೂಪದರ್ಶಿಯಾಗಿದ್ದರು. ಇವರ ಮಗಳೇ ಮಹರಾಣೀ ಸೇತುಲಕ್ಷ್ಮಿ ಬಾಯಿ. ಈಕೆ ತಿರುವಂತಪುರದ ಮಹಾರಾಜರನ್ನು ಮದುವೆಯಾಡಳು. ಕೇರಳವರ್ಮ ೧೯೧೨ ರಲ್ಲಿ ಎಲ್ಲೋ ಕಾಣೆಯಾದನು. ಅವನ ಯಾವ ಸುಳಿವೂ ತಿಳಿಯಲಿಲ್ಲ. ರಾಮವರ್ಮ, ಬೊಂಬಾಯಿನ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ ನಲ್ಲಿ ಚಿತ್ರಕಲಾವಿದ್ಯಾಭ್ಯಾಸಮಾಡಿದನು. ಈತನು ದಿವಾನ್ ಪೀ. ಜಿ. ಎನ್ ಉನ್ನಿಥನ್ ರವರ ಸೋದರಿ, ಗೌರಿ ಕುಂಜಮ್ಮನವರೊಂದಿಗೆ ವಿವಾಹ ಮಾಡಿಕೊಂಡನು. ೧೮೭೦ ರಲ್ಲಿ, ಕೊಲ್ಲೂರಿನ ಮೂಕಂಬಿಕಾ ದೇವಿಸನ್ನಿಧಿಗೆ ಹೋಗಿ, ಅಲ್ಲಿ ೪೧ ದಿನಗಳ ವ್ರತಾಚರಣೆ ಮಾಡಿದರು. ಏಕಾಗ್ರತೆಯಿಂದ ಸರಸ್ವತಿ ದೇವಿಯ ಭಜನೆ, ನಡೆಯುತ್ತಿತ್ತು. ಕೊನೆಗೆ, ಮಂಗಳಕ್ಕೆ ೩ ದಿನ ಮೊದಲು, ಸರ್ವಾಂಗಸುಂದರಿ, ಮೂಕಾಂಬಿಕಾ ಅಮ್ಮನವರು ಕಾಣಿಸಿಕೊಂಡು, ಪ್ರೀತಿವಾತ್ಸಲ್ಯದಿಂದ ತಮ್ಮ ಸ್ನೇಹಹಸ್ತವನ್ನು ಅವರ ಮಸ್ತಕದಮೇಲೆ ಇಟ್ಟು ಹರಸಿದಂತೆ ಕನಸಾಯಿತಂತೆ. ಅಂದಿನಿಂದ ಅವರು ರಚಿಸಲು ಪ್ರಯತ್ನಿಸಿದ ಎಲ್ಲಾ ದೇವಿಯರ ಚಿತ್ರಗಳಿಗೂ, ಅಮ್ಮನವರೇ ರೂಪದರ್ಶಿಯಾಗಿ ಅವರಿಗೆ, ಸ್ಪೂರ್ತಿ ಕೊಟ್ಟರಂತೆ. ಉತ್ತರಭಾರತಕ್ಕೆ ಹೋದಾಗ, ಅಲ್ಲಿನ ವೇಷ-ಭೂಷಣ, ಜೀವನ-ಕ್ರಮವಿಧಾನ, ಆಚಾರ-ವ್ಯವಹಾರ, ಮರ್ಯಾದೆ ಕುಲಂಕುಶವಾಗಿ ನೋಡಿಕೊಂಡು ಬಂದರು. ಹೀಗೆ ಅವರು ತಮ್ಮ ಕಲೆಯ ಅಭಿವ್ಯಕ್ತಿಗಾಗಿ ಅನೇಕ ಏರ್ಪಾಡು, ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಯಿತು. ವಿಷ್ಣು ಧರಮೋತ್ತರ ಪುರಾಣದಲ್ಲಿ ವಿವರಿಸಿದ "ಚಿತ್ರಸೂತ್ರ" ಕಲಾ ಆಯಾಮಗಳು ತೀರ ನೀರಸವಾಗಿದ್ದು ಅವುಗಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಲಾರದ ಪ್ರಸಂಗವನ್ನು ಅವರು ತಿರಸ್ಕರಿಸಿ, ನಮ್ಮ ಪುರಾಣಪುರುಷರುಗಳು, ದೇವಿಯರು ಸಾಮಾನ್ಯಮಾನವರಂತೆ ಇರುವ ಚಿತ್ರಗಳನ್ನು ಅವರು ಪ್ರಸಿದ್ದಿಪಡಿಸಿದರು. ಇದು ಆ ಕಾಲದಲ್ಲಿ ರವಿಯವರು ಆಗಲೇ ಪ್ರಸ್ತುತದಲ್ಲಿದ್ದ ಕಲಾ ಪದ್ಧತಿಗೆ ವಿರೋಧವಾಗಿ ಸ್ಪಂದಿಸಿದ ರೀತಿಯಾಗಿತ್ತು. ಕೊನೆಗೆ ಅದೇ ಸರ್ವರ ಮನಗೆದ್ದಿತು. ಊರ್ವಶಿ, ರಂಭೆ, ತಿಲೋತ್ತಮೆ, ಉಷೆ, ಎಂಬನಾಯಿಕೆಯರ ಚಿತ್ರಗಳನ್ನು ರಚಿಸಿದ್ದು ತಮ್ಮ ಪುರಾಣಗಳ ಅಧ್ಯಯನದ ಜ್ಞಾನದಿಂದ. ಮರಾಠಾ, ಗುಜರಾತೀ, ಮಲಬಾರೀ , ರಾಜ್ ಪೂತ್ ವನಿತೆಯರ ಸುಂದರ ಚಿತ್ರಗಳು ಅವರ ಕಲಾಸಂಗ್ರಹದಲ್ಲಿ ಸೇರಿಕೊಂಡವು. ಆಗಿನ ಪ್ರಮುಖ ವ್ಯಕ್ತಿಗಳಾದ ತಿಲಕ್, ರಾನಡೆಯವರ ಚಿತ್ರಗಳನ್ನೂ, ಹಿಮಾಲಯ ಪರ್ವತಶ್ರೇಣಿಯ ಭವ್ಯತೆಯನ್ನೂ, ಮತ್ತು ದೇಶದ ಎಲ್ಲಾ ಗಿರಿಧಾಮಗಳ, ಪ್ರದೇಶಗಳ ಪ್ರಕೃತಿಸಿರಿಯನ್ನೂ ತಮ್ಮ ಕುಂಚದಲ್ಲಿ ಸೆರೆಹಿಡಿದರು. ೧೯೦೪ ರಲ್ಲಿ, ರವಿವರ್ಮರಿಗೆ, ಬ್ರಿಟಿಶ್ ಸರ್ಕಾರ, " ಕೈಸರ್-ಎ ಹಿಂದ್ " ಎಂಬ ಪ್ರಶಸ್ತಿ ಕೊಡಲಾಯಿತು. ಪುದುಕೋಟೈ, ಆಳ್ವಾರ್, ಮೈಸೂರ್, ಬರೋಡ, ಇಂದೋರ್, ಗ್ವಾಲಿಯರ್, ಜೈಪುರ, ಉದಯಪುರಗಳ ರಾಜರ ಆಹ್ವಾನ ಬಂದಿತ್ತು. ಒಬ್ಬ ಆಂಗ್ಲಸಂಸ್ಕೃತ ವಿದ್ವಾಂಸರು, ಪ್ರಕಟಿಸಿದ ಶಾಕುಂತಲ ಮಹಾಕಾವ್ಯದ ಮುಖಪುಟಕ್ಕೆ ತಕ್ಕದಾದ ಚಿತ್ರವನ್ನು ಬರೆದುಕೊಟ್ಟರು. ಈ ಪುಸ್ತಕ ಹೆಸರುವಾಸಿಯಾಗಿದ್ದು, ಕಾವ್ಯ ಸೌಂದರ್ಯಕ್ಕೆ. ಆದರೆ ಹೆಚ್ಚು ಜನಪ್ರಿಯವಾದದ್ದು ಪುಸ್ತಕದ ಹೊರಕವಚದಲ್ಲಿ ಮೂಡಿಸಿದ್ದ ಶಕುಂತಳೆಯ ಮುಗ್ಧ ಸೌಂದರ್ಯಕ್ಕೆ. ಹೀಗೆ ಪುಸ್ತಕದ ಜೊತೆಗೆ, ರವಿವರ್ಮರೂ ವಿಶ್ವದಾದ್ಯಂತ ಹೆಸರುವಾಸಿಯಾದ ವ್ಯಕ್ತಿಯಾದರು. ೧೮೭೬, ರಲ್ಲಿ ಪ್ಯಾರಿಸ್ಸಿನಲ್ಲಿ ಪ್ರದರ್ಶನಗೊಂಡ, "ವಸ್ತುಕಲಾ ಪ್ರದರ್ಶನ," ದಲ್ಲಿ ' " ಮಲೆಯಾಳದ ವನಿತೆ " ಎಂಬ ತೈಲಚಿತ್ರಕ್ಕೆ, ರವಿವರ್ಮರಿಗೆ "ಗೋಲ್ಡ್ ಮೆಡಲ್," ಪ್ರಶಸ್ತಿ ದೊರೆಯಿತು. ಅದೇ ವರ್ಷ ವಿಯನ್ನ ದಲ್ಲಿ ಏರ್ಪಡಿಸಿದ ಪ್ರದರ್ಶನದಲ್ಲೂ, " ಮಲಯಾಳದ ವನಿತೆ", ಗೆ ಬಹುಮಾನ ದೊರೆಯಿತು. ಈ ಪ್ರದರ್ಶನಗಳಿಂದ ರವಿವರ್ಮರಿಗೆ ವಿಶ್ವಮಾನ್ಯತೆ ದೊರೆಯಿತು. ಸೀರೆ ಉಡುಪನ್ನು ಅವರ ಭವ್ಯಕಲಾಕೃತಿಗಳಲ್ಲಿ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಆಗಿನಕಾಲದಲ್ಲಿ ಕೇರಳ ಮುಂತಾದ ರಾಜ್ಯಗಳಲ್ಲಿ ಸೀರೆ ಉಡುವ ಪರಂಪರೆ ಇರಲಿಲ್ಲ. ಹಾಗಾಗಿ, ಸೀರೆಉಡುಪನ್ನು ದೇಶದಾದ್ಯಂತ ಪ್ರಸಿದ್ಧಿಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬಕಿಂಗ್ ಹ್ಯಾಮ್ ಡ್ಯೂಕರ, ಎತ್ತರದ ನಿಲುವಿನ ತೈಲಚಿತ್ರವನ್ನು ಬರೆದುಕೊಟ್ಟಿದ್ದರು. ಅದನ್ನು ಮದ್ರಾಸ್ ಸರ್ಕಾರ, ತಮ್ಮ ಆಫೀಸಿನ ಮುಖ್ಯದ್ವಾರದಮುಂದೆ ಪ್ರದರ್ಶಿಸಿದ್ದರು. ೧೮೭೭ ರಲ್ಲಿ, ಮದ್ರಾಸ್ ಲಲಿತಕಲಾ ಅಕ್ಯಾಡಮಿಯವರು ಪ್ರಸ್ತುತಪಡಿಸಿದ, ವಸ್ತು ಪ್ರದರ್ಶನದಲ್ಲಿ, ರವಿವರ್ಮರ, " ವೀಣೆನುಡಿಸುವ ತಮಿಳು ಮಹಿಳೆ" ಎಂಬ ತೈಲಚಿತ್ರದ ಪ್ರದರ್ಶನವಾಗಿತ್ತು. ದುಶ್ಯಂತನಿಗೆ ಶಕುಂತಳೆ ಬರೆಯುತ್ತಿರುವ ಪ್ರೇಮ-ಪತ್ರ,ದ ತೈಲಚಿತ್ರಕ್ಕೆ ಬಹುಮಾನ ದೊರೆಯಿತು. ಒಮ್ಮೆ ಆಗಿನ ಬ್ರಿಟಿಷ್ ಗವರ್ನರ್, ತಿರುವನಂತಪುರದ ಅರಮನೆಗೆ ಬಂದವರು, ನೇರವಾಗಿ ಶಕುಂತಲ, ತೈಲಚಿತ್ರವನ್ನು ನೋಡಲು ಹೋದರು. ಅಲ್ಲೇ ನಿಂತಿದ್ದರೂ ಗವರ್ನರ್ ಸಾಹೇಬರು ಆಯಿಲ್ಯಂರವರನ್ನು ವಿಚಾರಿಸದೇ ಹೋದ ಘಟನೆಯಿಂದ ರಾಜರು ತತ್ತರಿಸಿದರು. ಆಯಿಲ್ಯಂ ತಿರುನಾಳ್ ರವರಿಗೆ ಅವಮಾನವಾಗಿ, ಮುಖಭಂಗವಾಯಿತು. ಕೂಡಲೇ ರವಿವರ್ಮರನ್ನು ಅರಮನೆಯಿಂದ ವಜಾ ಮಾಡಿದರು. ೧೮೮೦ ರಲ್ಲಿ ಆಯಿಲ್ಯಂ ತಿರುನಾಳ್ ತೀರಿಕೊಂಡಮೇಲೆ ಹೊಸರಾಜ, ವಿಶಾಖಂ ತಿರು ಆಯಿಲ್ಯರು, ರವಿವರ್ಮರನ್ನು ಪುನಃ ಬರಮಾಡಿಕೊಂಡು ಸನ್ಮಾನಿಸಿದರು. ಬರೋಡ ಮಹಾರಾಜರ ಬಳಿ ೧೮೮೧ ರಲ್ಲಿ, ದಮಯಂತಿ, ಸೈರಂಧ್ರಿ, ಸರಸ್ವತಿ, ಲಕ್ಷ್ಮಿ, ಮೊಘಲ್ ಶೈಲಿ ಮತ್ತು ರಾಜಸ್ಥಾನಿ ಶೈಲಿಗಳನ್ನು ಸ್ವಲ್ಪದಿನ ಅಭ್ಯಾಸಮಾಡಿದರು. ೩ ವರ್ಷಗಳಕಾಲ ಬರೋಡದಲ್ಲೆ ಇದ್ದರು. ಆ ಸಮಯದಲ್ಲಿ ಸೀತಾ-ಪರಿತ್ಯಾಗದ ತೈಲಚಿತ್ರವನ್ನು ರಚಿಸಿ ಅರಸರಿಗೆ ಕೊಟ್ಟಿದ್ದರು. ಮಹಾರಾಜರಿಗೆ ಅತಿಯಾದ ಆನಂದವಾಯಿತು. ಬರೋಡದ ನರೇಶರು ರವಿವರ್ಮರಿಗೆ, ಗೌರವಾರ್ಥವಾಗಿ, ೫೦,೦೦೦ ರೂಪಾಯಿಗಳನ್ನೂ, ಆನೆ, ಧನ-ಕನಕಗಳನ್ನು ಉಡುಗೊರೆಯಾಗಿ ಕೊಟ್ಟರು. ಸ್ವಲ್ಪ ದಿನ ತಮ್ಮ ತಾಯ್ನಾಡಿಗೆ ಹೋಗಿ ತಮ್ಮಕಲಾಭ್ಯಾಸದ ಮನೆಗುರುಗಳಾದ, ಅವರ ಮಾವನವರ ಪಾದಗಳಮೇಲೆ ೫,೦೦೦ ರೂಪಾಯಿಗಳನ್ನು ಸಮರ್ಪಿಸಿ, ನಮಸ್ಕರಿಸಿ, ತಮ್ಮ ಭಕ್ತಿಭಾವವನ್ನು ಪ್ರದರ್ಶಿಸಿದರು. ೧೮೮೭ ರಲ್ಲಿ ಅವರು ಒಂದು ವರ್ಷ ಊರುಬಿಟ್ಟು ಹೋಗಲಿಲ್ಲ. ೧೮೯೧ ರಲ್ಲಿ, ತಾವು ರಚಿಸಿದ್ದ ೧೪ ಪೇಂಟಿಂಗ್ ತೆಗೆದುಕೊಂಡು ರೈಲಿನಲ್ಲಿ ಬರೋಡಾಕ್ಕೆ ಹೋಗುತ್ತಿರುವಾಗ, [ ಉದ್ದ-೫ ಅಡಿ, ೩ ಅಂಗುಲ, ಅಗಲ-೩ ಅಡಿ ೮ ಅಂಗುಲ ಗಾತ್ರದ ದೊಡ್ಡ ತೈಲಚಿತ್ರಗಳು.] ಮಧ್ಯೆ, ಬೊಂಬಾಯಿನಲ್ಲಿ ಉಳಿದುಕೊಂಡರು. ಊರಿನಿಂದ ಬಂದ ತಂತಿವಾರ್ತೆಯಿಂದ ವಿಚಲಿತಗೊಂಡರು. ಊರಿನಲ್ಲಿ ಅವರ ಪ್ರೀತಿಯ ಪತ್ನಿ ತೀರಿಕೊಂಡಿದ್ದರು. ಈ ವಾರ್ತೆ ಸಿಡಿಲಿನಂತೆ ಎರಗಿತು. ಕೂಡಲೇ ವಾಪಸ್ಸು ಹೋಗಿ ೧ ತಿಂಗಳು ಊರಿನಲ್ಲೇ ಇದ್ದು ಮತ್ತೆ ಬರೋಡಾ ಹೋದರು. ಮೈಸೂರು‌ ಮಹಾರಾಜರ ಬಳಿ ಕೃಷ್ಣರಾಜವೊಡೆಯರ ಕಾಲದಲ್ಲಿ ಜಗನ್ಮೋಹನ ಅರಮನೆ ನಿರ್ಮಿಸಲಾಯಿತು. ಆಗ ಮಹಾರಾಜರು ರವಿವರ್ಮರನ್ನು ಕರೆಸಿ, ಅವರ ತೈಲಚಿತ್ರಗಳಿಂದ ಅರಮನೆ ಅಲಂಕೃತವಾಗಬೇಕೆಂದು ಮನವಿ ಮಾಡಿಕೊಂಡರು. ಅವರ ಇಷ್ಟದಂತೆ ರವಿವರ್ಮರು ೯ ಭವ್ಯ ಚಿತ್ರಗಳನ್ನು ರಚಿಚಿದರು. ಜೊತೆಗೆ, ರಾಜಪರಿವಾರದ ಜನರ, ಮತ್ತು ಅರಮನೆಯ ಪರಿಸರದ ಚಿತ್ರಗಳನ್ನೂ ಅತ್ಯಂತ ಸೊಗಸಾಗಿ ಬಿಡಿಸಿಕೊಟ್ಟರು. ಪಾಂಡವರ ದ್ಯೂತ, ಕೌರವನ ಆಸ್ತಾನದಲ್ಲಿ ಪ್ರವೇಶಿಸಿದ ಶ್ರೀ ಕೃಷ್ಣ, ಬಂಧನಕ್ಕಾಗಿ ಸಾಗರದ ಮುಂದೆ, ಬಿಲ್ಲು ಹೂಡಿದ ಶ್ರೀ ರಾಮಚಂದ್ರ. ಇವು ರವಿವರ್ಮರು ರಚಿಸಿದ ಕೆಲವಾರು ಶ್ರೇಷ್ಟಚಿತ್ರಗಳೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. thumb|ಛತ್ರಪತಿ ಶಿವಾಜಿಯ ವರ್ಣಚಿತ್ರ ಇಲ್ಲಿ ದಾಖಲಿಸಬಹುದಾದ ಮತ್ತೊಂದು ಭವ್ಯ ತೈಲಚಿತ್ರವನ್ನು ಬರೆದು ರವಿವರ್ಮರು ಅತ್ಯಂತ ಯಶಸ್ಸನ್ನು ಗಳಿಸಿದರು. ೩ ಜನ ನಂಬಿಕೆಯ ಅನುಚರರೊಡನೆ, ಆಶ್ವಾಸನೆ ಕೊಡಲು ಕೈಯಲ್ಲಿ ಭವಾನಿ ತಾಯಿ ಪ್ರಸಾದಿಸಿದ ಖಡ್ಗವನ್ನು ಝಳಪಿಸುತ್ತಾ ಶಿವನೇರಿದುರ್ಗದ ಬಳಿ, ಅರಿಭಯಂಕರನಾಗಿ ಕುದುರೆಯನ್ನೇರಿ ಬರುತ್ತಿರುವ ಛತ್ರಪತಿ ಶಿವಾಜಿ ಮಹಾರಾಜನ ಚಿತ್ರ. ಬಹುಶಃ ಬಹುತೇಕ ಮಹಾರಾಷ್ಟ್ರದವರ ಮನೆಗಳಲ್ಲಿ ಈ ವರ್ಣಚಿತ್ರವನ್ನು ಕಟ್ಟು ಹಾಕಿಸಿ ಇಟ್ಟುಕೊಂಡಿದ್ದಾರೆ. ರವಿವರ್ಮರು ಚಿತ್ರಿಸಿದ ವರ್ಣಚಿತ್ರಗಳು ಒಟ್ಟು ೮೯. ಅವೆಲ್ಲಾ ಅಚ್ಚಾಗಿ ಮದ್ಯಮವರ್ಗದ ಕಲಾಪ್ರೇಮಿಗಳಿಗೆ ಸಾಂತ್ವನ ನೀಡುವಲ್ಲಿ ಸಹಕಾರಿಯಾದವು. ತಿರುವಾಂಕೂರು ಮಹಾರಾಜರ ಆಸ್ಥಾನದಲ್ಲಿ ಆಸ್ತಾನ ಕಲಾವಿದರಾಗಿ ನೇಮಿತರಾಗಿದ್ದರು. ವಿರಾಟನ ಆಸ್ಥಾನ, ಶಕುಂತಳೆ, ಹಂಸ ದಮಯಂತಿ, ರುಕ್ಮಾಂಗದ ಮತ್ತು ಮೋಹಿನಿ. ಪ್ರತಿ ವರ್ಣಚಿತ್ರಗಳಿಗೂ ತಲಾ ೩,೦೦೦ ರೂ ಪ್ರಶಸ್ತಿ ಕೊಡಲಾಯಿತು. "ಚಿತ್ರ ಆರ್ಟ್ ಗ್ಯಾಲರಿ ಎಂಬ ಸಂಸ್ತೆಯನ್ನು ಸ್ಥಾಪಿಸಲಾಯಿತು. ಅಲ್ಲಿ ರವಿವರ್ಮರ ೧೪ ಭಾರಿ ಎತ್ತರದ ತೈಲಚಿತ್ರಗಳನ್ನು ಸ್ಥಾಪಿಸಲಾಗಿದೆ. ೧೦ ಸಣ್ಣಗಾತ್ರದ ಪೇಂಟಿಂಗ್ ಗಳಿವೆ. ೨ ಅಪೂರ್ಣ ಚಿತ್ರಗಳೂ ಇವೆ. ಬಹುಶಃ ರವಿವರ್ಮರ ಕೊನೆಯದಿನಗಳಲ್ಲಿ ಅವರ ಮಾನಸಿಕಬಲ ಸ್ವಲ್ಪ ಕಡಿಮೆಯಾಗಿತ್ತು. ಹೆಚ್ಚು ಹೊತ್ತು ಕುಳಿತು ಕೆಲಸಮಾಡುವುದು ಸಾಧ್ಯವಿರಲಿಲ್ಲ. ಅವರ ಸೋದರ, ರಾಜರಾಜ ವರ್ಮರು ತೀರಿಕೊಂಡಮೇಲೆ ಅವರಿಗೆ ಎಲ್ಲದರಲ್ಲೂ ಆಸಕ್ತಿ ಕಡಿಮೆಯಾಗಿತ್ತು. ಆರೋಗ್ಯವೂ ಸರಿಯಾಗಿರದೆ ಖಂಡಾಲ ಲೋನಾವಲಗಳಲ್ಲಿ ಸ್ವಲ್ಪದಿನ ಇದ್ದು ಸುಧಾರಿಸಿಕೊಡರು. ಇದೇ ಸಮಯದಲ್ಲಿ ಹೈದರಾಬಾದಿನ ರಾಜಾ ದೀನ ದಯಳರ ಒತ್ತಾಯಾಕ್ಕೆ ಮಣಿದು ಅಲ್ಲಿಗೆ ಹೋಗಿ, ೨ ತಿಂಗಳಿದ್ದು ವರ್ಣಚಿತ್ರಗಳನ್ನು ರಚಿಸಿಕೊಟ್ಟುಬಂದರು. ೧೯೦೬ ರಲ್ಲಿ ತಮ್ಮ ೫೭ ನೆಯ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು. ರವಿವರ್ಮರ ಚಿತ್ರಕಲಾ ಮುದ್ರಣಾಲಯ ಸಾಮಾನ್ಯ ಜನರಿಗೆ ತೈಲಚಿತ್ರಗಳನ್ನು ಕೊಳ್ಳುವುದು ಸಾಧ್ಯವಿಲ್ಲದಮಾತು. ಅದಕ್ಕಾಗಿ ರವಿವರ್ಮರು, ಒಬ್ಬ ಪಾಲುದಾರನ ಜೊತೆಗೆ, ಒಪ್ಪಂದ ಮಾಡಿಕೊಂಡು ಒಂದು ಮುದ್ರಣಾಲಯವನ್ನು ಬೊಂಬಾಯಿನಲ್ಲಿ ಸ್ಥಾಪಿಸಿದರು. ಅದನ್ನು ನೋಡಿಕೊಳ್ಳಲು ಸದಾ ಅವರು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಪಾಲುದಾರ, ಹಣವನ್ನೆಲ್ಲಾ ಲಪಟಾಯಿಸಿದ್ದ. ೧೮೯೪ ರಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಿದ್ದರಿಂದ ತಮ್ಮ ಮುದ್ರಣಾಲಯವನ್ನು ಮಾರುವ ಪರಿಸ್ಥಿತಿ ಬಂತು. ಅವರು ಮೊದಲು ಕಾರ್ಲಿ ಎಂಬ ಜಾಗಕ್ಕೆ ಸ್ಥಳಾಂತರಿಸಿದರು. ಅಲ್ಲೂ ವ್ಯಾಪಾರ ಕುದುರದೆ, ಒಬ್ಬ ವಿದೇಶಿಗೆ ೨೫ ಸಾವಿರ ರೂಪಾಯಿಗಳಿಗೆ ಮಾರಿದರು. ನಳ-ದಮಯಂತಿ, ಶಂತನು ಮತ್ತು ಮತ್ಸ್ಯಗಂಧಿ, ರಾಧಾ-ಮಾಧವ, ಶ್ರೀಕೃಷ್ಣ-ದೇವಕಿ, ಅರ್ಜುನ-ಸುಭದ್ರೆ, ದ್ರೌಪದಿ ವಸ್ತ್ರಾಪಹರಣ, ವಿಶ್ವಾಮಿತ್ರ-ಮೇನಕೆ, ಹರಿಶ್ಚಂದ್ರ-ತಾರಾಮತಿ, ಸೀತಾ-ಸ್ವಯಂವರ, ಭರತ, ಸಿಂಹದ ಮರಿಯಜೊತೆ, ಶ್ರೀಕೃಷ್ಣನ ಜನನ, ಕೀಚಕ ಸೈರಂಧ್ರಿ, ಕಂಸಮಾಯೆ, ಶಂತನು ಮತ್ತು ಗಂಗೆ, ಮುಂತಾದ ಒಟ್ಟು ೧೪ ತೈಲಚಿತ್ರಗಳು. ಅಮೆರಿಕದ ಚಿಕಾಗೋ ನಲ್ಲಿ ನಡೆದ ' ವಸ್ತುಕಲಾ ಪ್ರದರ್ಶನ' ಕ್ಕೆ ೧೦ ವರ್ಣಚಿತ್ರಗಳನ್ನು ಭಾರತದಿಂದ ಕಳಿಸಲಾಗಿತ್ತು. ಅದು ರವಿವರ್ಮರದೇ ಎಂದು ಹೇಳಬೇಕಾಗಿಲ್ಲ. ಬರೋಡಾ ಮಹಾರಾಜರು ಕಳಿಸುವ ಏರ್ಪಾಡುಮಾಡಿದ್ದರು. ೨ ಪ್ರಶಸ್ತಿಗಳನ್ನು ರವಿವರ್ಮರು ಗಿಟ್ಟಿಸಿದ್ದರು. ಸ್ವಾಮಿ ವಿವೇಕಾನಂದರು ಆಗ ಅಮೆರಿಕೆಯಲ್ಲಿದ್ದರು. ರವಿವರ್ಮರ ತೈಲ ವರ್ಣಚಿತ್ರಗಳನ್ನು ನೋಡಿ ವಿಸ್ಮಯರಾದ ಅವರು, ಇದನ್ನು ಬರೆದ ಮಹಾಕಲಾಕಾರನನ್ನು ಭೇಟಿಮಾಡುವ ಉತ್ಸುಕತೆ ತೋರಿಸಿದ್ದರು. ಒಮ್ಮೆ ಬೊಂಬಾಯಿಗೆ ಬಂದಾಗ, ರವಿವರ್ಮರ ಮನೆಯಲ್ಲೇ ಒಂದು ದಿನ ಉಳಿದುಕೊಂಡಿದ್ದರಂತೆ. ರಾಜಾ ರವಿವರ್ಮರು ತಮ್ಮ ೫೮ ನೆಯ ಸಣ್ಣ ಪ್ರಾಯದಲ್ಲೇ ೨, ಅಕ್ಟೋಬರ್, ೧೯೦೬ ರಲ್ಲಿ ನಿಧನರಾದರು. ಭಾರತ ಸರ್ಕಾರ ಅವರ ಗೌರವಾರ್ಥವಾಗಿ ಅಂಚೆಚೀಟಿಯನ್ನು ಹೊರಡಿಸಿದ್ದರು. Selected Readings : 1. Photos of Gods, the printed image and Political struggle in India, By Christopher,Pinney, London, Reaktion Book. ಲೇಖಕರು. ಬಿ. ನರಸಿಂಗರಾವ್, ಡಾ. ಎಲ್. ಎಸ್. ಶೇಷಗಿರಿರಾವ್, ರವರ ಕಿರುಪುಸ್ತಕಮಾಲೆ. ಛಾಯಾಂಕನ </gallery> ಬಾಹ್ಯಸಂಪರ್ಕ Raja Ravi Varma Oleographs(Single Largest Collection of Oleorgaphs) Raja Ravi Varma's Paintings Complete collection of oil paintings by Ravi Varma (Incorrectly attributes Glow of hope to Ravi Varma) Ravi Varma's Paintings Brief biography Collection of the Lithographs from the Ravi Varma Press A Large Collection at Kamat.com A LIFE IN OILS Indian Art Circles: Raja Ravi Varma The Hindu: The royal artist by K.K. GOPALAKRISHNAN Chandigarh Museum: Nine Masters Varnam: Ravi Varma's lithographs discovered Early 20th century Ravi Varma postcards ವರ್ಗ:ಕಲಾವಿದರು ವರ್ಗ:ವರ್ಣಶಿಲ್ಪಿಗಳು ವರ್ಗ:ಚಿತ್ರಕಾರರು
ಮಹಾಭಾರತ
https://kn.wikipedia.org/wiki/ಮಹಾಭಾರತ
thumb|ಮುರುಡೇಶ್ವರ ದೇವಸ್ಥಾನ, ಕರ್ನಾಟಕದಲ್ಲಿ ಗಣೇಶನಿಗೆ ವ್ಯಾಸರು ಮಹಾಭಾರತವನ್ನು ಹೇಳುತ್ತಿರುವ ಆಧುನಿಕ ಚಿತ್ರಣ thumb|200px|ಕೃಷ್ಣ ಮತ್ತು ಅರ್ಜುನ ಕುರುಕ್ಷೇತ್ರ ನಲ್ಲಿ, ೧೮ನೇ-೧೯ನೇ ಶತಮಾನದ ಚಿತ್ರಕಲೆ. ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಅಲ್ಲದೇ ಇದನ್ನು ಅತಿ ಉದ್ದವಾದ ಮಹಾಕಾವ್ಯ ಎಂದು ವಿವರಿಸಲಾಗಿದೆ. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಮಹಾಭಾರತ ಕಥೆ ಶಂತನು ಮಹಾರಾಜನಿಂದ ಆರಂಭವಾಗುತ್ತದೆ. ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದ್ದು ಗ್ರೀಕ್‍ನ ಜನಪದ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ. ಮಹಾಭಾರತ ೧೮ಪರ್ವ ಮತ್ತು ೧ಲಕ್ಷ ಶ್ಲೋಕಗಳನ್ನು ಒಳಗೊಂಡ ಅದ್ಭುತ ಮಹಾಕಾವ್ಯವಾಗಿದೆ. ಮಹಾಭಾರತದಲ್ಲಿನ ಪ್ರಮುಖ ಕೃತಿಗಳು ಮತ್ತು ಕಥೆಗಳಲ್ಲಿ ಭಗವದ್ಗೀತೆ, ದಮಯಂತಿಯ ಕಥೆ, ಶಕುಂತಲೆಯ ಕಥೆ, ಪುರೂರವ ಮತ್ತು ಊರ್ವಶಿಯ ಕಥೆ, ಸಾವಿತ್ರಿ ಮತ್ತು ಸತ್ಯವಾನ್ ಕಥೆ, ಕಚ ಮತ್ತು ದೇವಯಾನಿಯ ಕಥೆ, ಋಷ್ಯಶೃಂಗನ ಕಥೆ ಮತ್ತು ರಾಮಾಯಣದ ಸಂಕ್ಷಿಪ್ತ ಆವೃತ್ತಿ, ಸಾಮಾನ್ಯವಾಗಿ ತಮ್ಮದೇ ಆದ ಕೃತಿಗಳೆಂದು ಪರಿಗಣಿಸಲಾಗುತ್ತದೆ. ಮಹಾಭಾರತವು ವ್ಯಾಸ ಮುನಿಶ್ರೇಷ್ಠರಿಂದ ಮೂಲವಾಗಿ ರಚಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಮಹಾಭಾರತವನ್ನು ಪಂಚಮವೇದವೆಂದು ಕರೆಯಲಾಗಿದೆ. ಶ್ರೀ ಕೃಷ್ಣನಿಂದ ಪಾರ್ಥನಾದ ಅರ್ಜುನನಿಗೆ ಉಪದೇಶಿಸಲ್ಪಟ್ಟ ಮಹಿಮಾನ್ವಿತವಾದ ಭಗವದ್ಗೀತೆಯನ್ನು ಮಹಾಭಾರತದ ಆತ್ಮ (ಅಂತರಾತ್ಮ) ಎನ್ನಲಾಗಿದೆ. ಇತಿಹಾಸ/ಹಿನ್ನೆಲೆ ಮಹಾಕಾವ್ಯವನ್ನು ಸಾಂಪ್ರದಾಯಿಕವಾಗಿ ಋಷಿ ವ್ಯಾಸರು ರಚಿಸಿದ್ದೆನ್ನಲಾಗಿದೆ. ಅವರು ಮಹಾಕಾವ್ಯದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ವ್ಯಾಸರು ಇದನ್ನು 'ಇತಿಹಾಸ' ಎಂದು ವಿವರಿಸಿದ್ದಾರೆ. ಮಹಾಭಾರತದ ಮೊದಲ ವಿಭಾಗವು ವ್ಯಾಸರ ಆಜ್ಞೆಯಂತೆ ಗಣೇಶನು ಬರೆದದ್ದು ಎಂದು ಹೇಳುತ್ತದೆ.Mahābhārata, Vol. 1, Part 2. Critical edition, p. 884. ಇದು ಅನೇಕ ಭಾರತೀಯ ಧಾರ್ಮಿಕ ಮತ್ತು ಧಾರ್ಮಿಕೇತರ ಕೃತಿಗಳಲ್ಲಿ ಜನಪ್ರಿಯವಾಗಿದೆ. ಇದನ್ನು ಮೊದಲು ತಕ್ಷಶಿಲೆಯಲ್ಲಿ ವ್ಯಾಸರ ಶಿಷ್ಯರಾದ ವೈಶಂಪಾಯನ ಋಷಿ ಪಾಂಡವ ರಾಜಕುಮಾರ ಅರ್ಜುನನ ಮರಿಮೊಮ್ಮಗನಾಗಿದ್ದ ರಾಜ ಜನಮೇಜಯನಿಗೆ ಹೇಳುತ್ತಾರೆ. ಮಹಾಭಾರತ 'ಜಯ' ಎಂಬ ಗ್ರಂಥದಿಂದ ನಿಷ್ಪನ್ನವಾಗಿದ್ದೆಂದು ಕೆಲವರ ಪ್ರತೀತಿ. ಇದರಲ್ಲಿ ಉಲ್ಲೇಖಿಸಿರುವ ಘಟನೆಗಳ ನಿಜವಾದ ಕಾಲ ಸರಿಯಾಗಿ ತಿಳಿದಿಲ್ಲ. ಮಹಾಭಾರತದಲ್ಲಿ ಕಂಡು ಬರುವ ಘಟನೆಗಳು ನಿಜವಾದ ಘಟನೆಗಳನ್ನು ಆಧರಿಸಿ ಬರೆದದ್ದೋ ಅಲ್ಲವೋ ಎಂಬುದು ಕೆಲವರಲ್ಲಿ ಚರ್ಚಾಸ್ಪದ ವಿಷಯ. ಮ್ಯಾಕ್ಸ್ ಮುಲ್ಲರ್ ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ.೧೪೦೦. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿ ಭಾರತೀಯ ಪಂಚಾಂಗ ರೀತ್ಯ ಕಾಲನಿರ್ಣಯ ಮಾಡಿದ ಹಲವು ವಿದ್ವಾಂಸರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ.೩೧೦೦ಕ್ಕೆ ಹೋಲುತ್ತವೆ. ಐತಿಹಾಸಿಕ ಉಲ್ಲೇಖಗಳು ಭಾರತ ಮತ್ತು ಸಂಯುಕ್ತ ಮಹಾಭಾರತದ ಆರಂಭಿಕ ಉಲ್ಲೇಖಗಳು ಪಾಣಿನಿಯ (ಎಫ್‌ಎಲ್‌. ೪ ನೇ ಶತಮಾನ BCE) ಮತ್ತು ಅಶ್ವಲಾಯನ ಗೃಹ್ಯಸೂತ್ರ (೩.೪) ದ ಅಷ್ಟಾಧ್ಯಾಯಿಗೆ (ಸೂತ್ರ ೬.೨.೩೮) ಸೇರಿದೆ. ಇದರರ್ಥ ಭಾರತ ಎಂದು ಕರೆಯಲ್ಪಡುವ ೨೪೦೦೦ ಶ್ಲೋಕಗಳು, ಹಾಗೆಯೇ ವಿಸ್ತೃತ ಮಹಾಭಾರತದ ಆರಂಭಿಕ ಆವೃತ್ತಿಯನ್ನು ಕ್ರಿ ಪೂ ೪ನೇ ಶತಮಾನದಿಂದ ರಚಿಸಲಾಗಿದೆ. ಆದಾಗ್ಯೂ, ಪಾಣಿನಿ ಮಹಾಕಾವ್ಯವನ್ನು ಉಲ್ಲೇಖಿಸಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಏಕೆಂದರೆ ಭಾರತವನ್ನು ಇತರ ವಿಷಯಗಳನ್ನು ವಿವರಿಸಲು ಬಳಸಲಾಗಿದೆ. ಆಲ್ಬ್ರೆಕ್ಟ್ ವೆಬರ್ ಭರತರ ಋಗ್ವೇದ ಬುಡಕಟ್ಟಿನ ಬಗ್ಗೆ ಉಲ್ಲೇಖಿಸುತ್ತಾನೆ. ಅಲ್ಲಿ ಒಬ್ಬ ಮಹಾನ್ ವ್ಯಕ್ತಿಯನ್ನು ಮಹಾ-ಭಾರತ ಎಂದು ಗೊತ್ತುಪಡಿಸಲಾಗಿದೆ. ಆದಾಗ್ಯೂ, ಪಾಣಿನಿಯು ಮಹಾಭಾರತದಲ್ಲಿ ಪಾತ್ರವಹಿಸುವ ಪಾತ್ರಗಳನ್ನು ಉಲ್ಲೇಖಿಸಿದಂತೆ, ಮಹಾಕಾವ್ಯದ ಕೆಲವು ಭಾಗಗಳು ಅವನ ದಿನದಲ್ಲಿ ಈಗಾಗಲೇ ತಿಳಿದಿರಬಹುದು. ಇನ್ನೊಂದು ಅಂಶವೆಂದರೆ ಪಾಣಿನಿಯು ಮಹಾಭಾರತದ ಉಚ್ಚಾರಣೆಯನ್ನು ನಿರ್ಧರಿಸಿದನು. ಆದಾಗ್ಯೂ, ಮಹಾಭಾರತವನ್ನು ವೈದಿಕ ಉಚ್ಚಾರಣೆಯಲ್ಲಿ ಪಠಿಸಲಾಗಲಿಲ್ಲ.Bronkhorst, J. (2016): How the Brahmins Won. From Alexander to the Guptas, Brill, p. 78-80, 97 ಮಹಾಭಾರತದೊಳಗಿನ ಹಲವಾರು ಕಥೆಗಳು ಶಾಸ್ತ್ರೀಯ ಸಂಸ್ಕೃತ ಸಾಹಿತ್ಯದಲ್ಲಿ ತಮ್ಮದೇ ಆದ ಪ್ರತ್ಯೇಕ ಗುರುತನ್ನು ಪಡೆದುಕೊಂಡಿವೆ. ಉದಾಹರಣೆಗೆ, ಪ್ರಖ್ಯಾತ ಸಂಸ್ಕೃತ ಕವಿ ಕಾಳಿದಾಸನ (c. 400 CE) ಅಭಿಜ್ಞಾನಶಾಕುಂತಲ, ಗುಪ್ತ ರಾಜವಂಶದ ಯುಗದಲ್ಲಿ ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಇದು ಮಹಾಭಾರತದ ಪೂರ್ವಭಾವಿ ಕಥೆಯನ್ನು ಆಧರಿಸಿದೆ. ಊರುಭಂಗ, ಕಾಳಿದಾಸನಿಗಿಂತ ಮೊದಲು ಬದುಕಿದ್ದನೆಂದು ನಂಬಲಾದ ಭಾಸ ಬರೆದ ಸಂಸ್ಕೃತ ನಾಟಕ, ಭೀಮನಿಂದ ತೊಡೆಗಳನ್ನು ಸೀಳುವ ಮೂಲಕ ದುರ್ಯೋಧನನ ವಧೆಯನ್ನು ಆಧರಿಸಿದೆ. ೧೮ ಪರ್ವಗಳು ಅಥವಾ ಪುಸ್ತಕಗಳು ಮಹಾಭಾರತವು ಈ ಕೆಳಗಿನ ಸ್ತೋತ್ರದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ವಾಸ್ತವವಾಗಿ ಪ್ರತಿ ಪರ್ವದ ಆರಂಭದಲ್ಲಿ ಈ ಪ್ರಶಂಸೆಯನ್ನು ಮಾಡಲಾಗಿದೆ: ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ ದೇವೀಂ ಸರಸ್ವತೀಂ ಚೈವ ತತೋ ಜಯಮುದೀರಯೇತ್ - ವ್ಯಾಸ, ಮಹಾಭಾರತ "ಓಂ! ಅತ್ಯಂತ ಶ್ರೇಷ್ಠ ಪುರುಷನಾದ ನಾರಾಯಣ ಮತ್ತು ನರ (ಅರ್ಜುನ) ಮತ್ತು ಸರಸ್ವತಿ ದೇವಿಗೆ ನಮಸ್ಕರಿಸಿ ಅನಂತರ ಜಯವನ್ನು ಉಚ್ಚರಿಸಬೇಕು."THE MAHABHARATA ADI PARVA SECTION I sacred-texts.com. ನರ-ನಾರಾಯಣರು ಶ್ರೀ ವಿಷ್ಣುವಿನ ಭಾಗವಾಗಿದ್ದ ಇಬ್ಬರು ಪ್ರಾಚೀನ ಋಷಿಗಳು. ನರನು ಅರ್ಜುನನ ಹಿಂದಿನ ಜನ್ಮ ಮತ್ತು ನಾರಾಯಣನ ಸ್ನೇಹಿತ. ಆದರೆ ನಾರಾಯಣನು ಶ್ರೀ ವಿಷ್ಣುವಿನ ಅವತಾರ ಮತ್ತು ಹೀಗೆ ಶ್ರೀ ಕೃಷ್ಣನ ಹಿಂದಿನ ಜನ್ಮ. ೧೮ ಪರ್ವಗಳ ವಿಭಾಗವು ಈ ಕೆಳಗಿನಂತಿದೆ: ಪರ್ವಶೀರ್ಷಿಕೆಉಪಪರ್ವಗಳುಪರಿವಿಡಿ೧ಆದಿ ಪರ್ವ (ದಿ ಬುಕ್ ಆಫ್ ದಿ ಬಿಗಿನಿಂಗ್)೧-೧೯ಸೌತಿ ಅವರು ನೈಮಿಶಾರಣ್ಯದಲ್ಲಿ ನೆರೆದಿದ್ದ ಋಷಿಗಳಿಗೆ, ಪಠಿಸಿದ ನಂತರ ಹೇಗೆ ಮಹಾಭಾರತವನ್ನು ವಿವರಿಸಲಾಯಿತು ನಲ್ಲಿ ವೈಸಂಪಾಯನ ಜನಮೇಜಯ. ಭಾರತ ಮತ್ತು ಭೃಗು ಜನಾಂಗಗಳ ಇತಿಹಾಸ ಮತ್ತು ವಂಶಾವಳಿಯನ್ನು ನೆನಪಿಸಿಕೊಳ್ಳಲಾಗುತ್ತದೆ, ಕುರು ರಾಜಕುಮಾರರ ಜನನ ಮತ್ತು ಆರಂಭಿಕ ಜೀವನ. (ಆದಿ ಎಂದರೆ ಮೊದಲು). ಆದಿ ಪರ್ವವು ಪಾಂಡವರ ಜನನ, ಬಾಲ್ಯ, ಶಿಕ್ಷಣ, ಮದುವೆ, ಪಿತೂರಿಯ ಹೋರಾಟಗಳು ಮತ್ತು ಅದ್ಭುತ ಸಾಧನೆಗಳನ್ನು ವಿವರಿಸುತ್ತದೆ.೨ಸಭಾ ಪರ್ವ (ದಿ ಬುಕ್ ಆಫ್ ದಿ ಅಸೆಂಬ್ಲಿ ಹಾಲ್)೨೦-೨೮ಮಾಯಾ ದಾನವ ಇಂದ್ರಪ್ರಸ್ಥ ಅರಮನೆ ಮತ್ತು ನ್ಯಾಯಾಲಯವನ್ನು (ಸಭಾ) ನಿರ್ಮಿಸುತ್ತಾನೆ. ಸಭಾ ಪರ್ವವು ತನ್ನ ಸಹೋದರರ ಸಹಾಯದಿಂದ ಮಾಡಿದ ಅದ್ಭುತವಾದ ಯುಧಿಷ್ಠಿರ ರಾಜಸೂಯ ಯಜ್ಞವನ್ನು ಮತ್ತು ಯುಧಿಷ್ಠಿರ ಶಕ್ರಪ್ರಸ್ಥ/ಇಂದ್ರಪ್ರಸ್ಥ ನಲ್ಲಿನ ಆಳ್ವಿಕೆಯನ್ನು ಮತ್ತು ಜೊತೆಗೆ ಪಿತೂರಿಯಿಂದ ಉಂಟಾದ ಅವಮಾನ ಮತ್ತು ಮೋಸವನ್ನು ವಿವರಿಸುತ್ತದೆ. ೩ವನ ಪರ್ವ ಹಾಗೂ ಅರಣ್ಯಕ-ಪರ್ವ, ಅರಣ್ಯ-ಪರ್ವ (ಅರಣ್ಯದ ಪುಸ್ತಕ)೨೯-೪೪ಅರಣ್ಯದಲ್ಲಿ ಹನ್ನೆರಡು ವರ್ಷಗಳ ಗಡಿಪಾರು (ಅರಣ್ಯ). ಇಡೀ ಪರ್ವವು ಅವರ ಹೋರಾಟ ಮತ್ತು ಬಲದ ಬಲವರ್ಧನೆಯನ್ನು ವಿವರಿಸುತ್ತದೆ.೪ವಿರಾಟ ಪರ್ವ (ದಿ ಬುಕ್ ಆಫ್ ವಿರಾಟ)೪೫-೪೮ವಿರಾಟ ಆಸ್ಥಾನದಲ್ಲಿ ಅಜ್ಞಾತವಾಗಿ ಕಳೆದ ವರ್ಷ. ಒಬ್ಬನೇ ಯೋಧ (ಅರ್ಜುನ) ಕರ್ಣ, ಭೀಷ್ಮ, ದ್ರೋಣ, ಅಶ್ವತ್ಥಾಮ, ಇತ್ಯಾದಿ ಸೇರಿದಂತೆ ಇಡೀ ಕುರು ಸೈನ್ಯವನ್ನು ಸೋಲಿಸಿದನು ಮತ್ತು ದನಗಳನ್ನು ಮರಳಿ ಪಡೆದನು. ವಿರಾಟ ರಾಜ.SECTION XXVI (Go-harana Parva) sacred-texts.com.೫ ಉದ್ಯೋಗ ಪರ್ವ (ಪ್ರಯತ್ನದ ಪುಸ್ತಕ)೪೯-೫೯ಯುದ್ಧದ ಸಿದ್ಧತೆಗಳು ಮತ್ತು ಕೌರವ ಮತ್ತು ಪಾಂಡವರ ನಡುವೆ ಶಾಂತಿಯನ್ನು ತರುವ ಪ್ರಯತ್ನಗಳು ಅಂತಿಮವಾಗಿ ವಿಫಲವಾಗುತ್ತವೆ (ಉದ್ಯೋಗ ಎಂದರೆ ಪ್ರಯತ್ನ ಅಥವಾ ಕೆಲಸ).೬ ಭೀಷ್ಮ ಪರ್ವ (ಭೀಷ್ಮನ ಪುಸ್ತಕ) ೬೦–೬೪ಮಹಾ ಯುದ್ಧದ ಮೊದಲ ಭಾಗ, ಭೀಷ್ಮ ಕೌರವರಿಗೆ ಸೇನಾಪತಿಯಾಗಿ ಮತ್ತು ಅವನು ಬಾಣಗಳ ಹಾಸಿಗೆಯ ಮೇಲೆ ಬೀಳುತ್ತಾನೆ. ಭೀಷ್ಮ ಪರ್ವದ ಪ್ರಮುಖ ಅಂಶವೆಂದರೆ ಭಗವದ್ಗೀತೆ ಕೃಷ್ಣ ನಿಂದ ಅರ್ಜುನ ಗೆ ನಿರೂಪಿಸಲಾಗಿದೆ.(೨೫-೪೨ ಅಧ್ಯಾಯಗಳಲ್ಲಿ ಭಗವದ್ಗೀತೆ ಅನ್ನು ಒಳಗೊಂಡಿದೆ.)೭ ದ್ರೋಣ ಪರ್ವ (ದ್ರೋಣರ ಪುಸ್ತಕ)೬೫–೭೨ದ್ರೋಣ ಸೇನಾಪತಿ ಆಗಿ ಯುದ್ಧವು ಮುಂದುವರಿಯುತ್ತದೆ. ಇದು ಯುದ್ಧದ ಪ್ರಮುಖ ಪುಸ್ತಕವಾಗಿದೆ. ಈ ಪುಸ್ತಕದ ಅಂತ್ಯದ ವೇಳೆಗೆ ಎರಡೂ ಕಡೆಯ ಹೆಚ್ಚಿನ ಮಹಾನ್ ಯೋಧರು ಸತ್ತಿದ್ದಾರೆ.೮ ಕರ್ಣ ಪರ್ವ (ಕರ್ಣನ ಪುಸ್ತಕ)೭೩ಕೌರವ ಪಡೆಗಳ ಸೇನಾಪತಿ ಆಗಿ ಕರ್ಣ ಜೊತೆಗಿನ ಯುದ್ಧದ ಮುಂದುವರಿಕೆ.೯ಶಲ್ಯ ಪರ್ವ (ಶಲ್ಯ ಪುಸ್ತಕ)೭೪–೭೭ಯುದ್ಧದ ಕೊನೆಯ ದಿನ, ಶಲ್ಯ ಸೇನಾಪತಿ ಆಗಿ ಸರಸ್ವತಿ ನದಿಯ ದಂಡೆಗೆ ಬಲರಾಮನ ತೀರ್ಥಯಾತ್ರೆ ಮತ್ತು ಭೀಮ ಮತ್ತು ದುರ್ಯೋಧನರ ನಡುವಿನ ಗದೆ ಯುದ್ಧವು ಯುದ್ಧವನ್ನು ಕೊನೆಗೊಳಿಸುತ್ತದೆ, ಏಕೆಂದರೆ ಭೀಮನು ದುರ್ಯೋಧನನನ್ನು ಗದೆಯಿಂದ ತೊಡೆಯ ಮೇಲೆ ಹೊಡೆದು ಕೊಲ್ಲುತ್ತಾನೆ.೧೦ಸೌಪ್ತಿಕಾ ಪರ್ವ (ದಿ ಬುಕ್ ಆಫ್ ದಿ ಸ್ಲೀಪಿಂಗ್ ವಾರಿಯರ್ಸ್)೭೮-೮೦ಅಶ್ವಥಾಮ, ಕೃಪ ಮತ್ತು ಕೃತವರ್ಮರು ಉಳಿದ ಪಾಂಡವ ಸೇನೆಯನ್ನು ತಮ್ಮ ನಿದ್ರೆಯಲ್ಲಿ ಕೊಲ್ಲುತ್ತಾರೆ. ಪಾಂಡವರ ಕಡೆಯಲ್ಲಿ ಏಳು ಯೋಧರು ಮತ್ತು ಕೌರವರ ಕಡೆ ಮೂವರು ಮಾತ್ರ ಉಳಿದಿದ್ದಾರೆ.೧೧ ಸ್ತ್ರೀ ಪರ್ವ (ಮಹಿಳೆಯರ ಪುಸ್ತಕ)೮೧-೮೫ಗಾಂಧಾರಿ ಮತ್ತು ಕೌರವರು ಮತ್ತು ಪಾಂಡವರ ಮಹಿಳೆಯರು (ಸ್ತ್ರೀ) ಸತ್ತವರ ಬಗ್ಗೆ ದುಃಖಿಸುತ್ತಾರೆ ಮತ್ತು ಗಾಂಧಾರಿಯು ಕೌರವರ ಬೃಹತ್ ವಿನಾಶ ಮತ್ತು ಸಂಹಾರಕ್ಕಾಗಿ ಕೃಷ್ಣ ಶಪಿಸುತ್ತಾಳೆ.೧೨ ಶಾಂತಿ ಪರ್ವ (ಶಾಂತಿಯ ಪುಸ್ತಕ)೮೬-೮೮ಹಸ್ತಿನಾಪುರದ ರಾಜನಾಗಿ ಯುಧಿಷ್ಠಿರ ಪಟ್ಟಾಭಿಷೇಕ, ಮತ್ತು ಸಮಾಜ, ಅರ್ಥಶಾಸ್ತ್ರ ಮತ್ತು ರಾಜಕೀಯದ ಕುರಿತು ಹೊಸದಾಗಿ ಅಭಿಷೇಕಿಸಿದ ರಾಜನಿಗೆ ಭೀಷ್ಮ ರಿಂದ ಸೂಚನೆಗಳು. ಇದು ಮಹಾಭಾರತದ ಅತಿ ಉದ್ದದ ಪುಸ್ತಕ.೧೩ ಅನುಶಾಸನ ಪರ್ವ (ಸೂಚನೆಗಳ ಪುಸ್ತಕ)೮೯-೯೦ಭೀಷ್ಮ ಅವರಿಂದ ಅಂತಿಮ ಸೂಚನೆಗಳು (ಅನುಶಾಸನ). ಈ ಪರ್ವ‍ವು ಭೀಷ್ಮನ ಕೊನೆಯ ದಿನ ಮತ್ತು ಮುಂಬರುವ ಚಕ್ರವರ್ತಿಗೆ ಯುಧಿಷ್ಠಿರ ಅವರ ಸಲಹೆ ಮತ್ತು ಬುದ್ಧಿವಂತಿಕೆಯನ್ನು ಒಳಗೊಂಡಿದೆ.೧೪ ಅಶ್ವಮೇಧಿಕ ಪರ್ವ (ಕುದುರೆ ತ್ಯಾಗದ ಪುಸ್ತಕ)The Ashvamedhika-parva is also preserved in a separate version, the Jaimini-Bharata (Jaiminiya-Ashvamedha) where the frame dialogue is replaced, the narration being attributed to Jaimini, another disciple of Vyasa. . It describes how Arjuna alone conquered the whole earth once again. This version contains far more devotional material (related to Krishna) than the standard epic and probably dates to the 12th century. It has some regional versions, the most popular being the Kannada one by Devapurada Annama Lakshmisha (16th century).The Mahabharata೯೧-೯೨ಯುಧಿಷ್ಠಿರನು ನಡೆಸಿದ ಅಶ್ವಮೇಧ (ಕುದುರೆ ಬಲಿ) ರಾಜಮನೆತನದ ಸಮಾರಂಭ. ಅರ್ಜುನನಿಂದ ವಿಶ್ವ ವಿಜಯ. ಅನುಗೀತವನ್ನು ಕೃಷ್ಣನು ಅರ್ಜುನನಿಗೆ ಹೇಳಿದನು.೧೫ ಆಶ್ರಮವಾಸಿಕ ಪರ್ವ (ಹರ್ಮಿಟೇಜ್ ಪುಸ್ತಕ)೯೩-೯೫ಧೃತರಾಷ್ಟ್ರ, ಗಾಂಧಾರಿ ಮತ್ತು ಕುಂತಿ ಹಿಮಾಲಯದ ಆಶ್ರಮದಲ್ಲಿ ವಾಸಿಸುತ್ತಿದ್ದಾಗ ಕಾಡಿನ ಬೆಂಕಿಯಲ್ಲಿ ಅಂತಿಮವಾಗಿ ಸಾವು. ವಿದುರನು ಅವರನ್ನು ಮುಂಚಿನಂತಾಗುತ್ತಾನೆ ಮತ್ತು ಧೃತರಾಷ್ಟ್ರನ ಹರಾಜಿನ ಮೇರೆಗೆ ಸಂಜಯನು ಎತ್ತರದ ಹಿಮಾಲಯದಲ್ಲಿ ವಾಸಿಸಲು ಹೋಗುತ್ತಾನೆ.೧೬ ಮೌಸಲಾ ಪರ್ವ (ಕ್ಲಬ್‌ಗಳ ಪುಸ್ತಕ)೯೬ಗಾಂಧಾರಿಯ ಶಾಪದ ಸಾಕಾರಗೊಳಿಸುವಿಕೆ, ಅಂದರೆ, ಯಾದವರ ಮಚ್ಚೆಗಳೊಂದಿಗೆ (ಮೌಸಲಾ) ನಡುವಿನ ಅಂತಃಕಲಹ ಮತ್ತು ಅಂತಿಮವಾಗಿ ಯಾದವರ ನಾಶ.೧೭ ಮಹಾಪ್ರಸ್ಥಾನಿಕ ಪರ್ವ (ದಿ ಬುಕ್ ಆಫ್ ದಿ ಗ್ರೇಟ್ ಜರ್ನಿ)೯೭ಯುಧಿಷ್ಠಿರ, ಅವನ ಸಹೋದರರು ಮತ್ತು ಅವನ ಹೆಂಡತಿ ದ್ರೌಪದಿ ಇಡೀ ದೇಶದಾದ್ಯಂತ ಮಾಡಿದ ಮಹಾ ಪ್ರಯಾಣ ಮತ್ತು ಅಂತಿಮವಾಗಿ ಯುಧಿಷ್ಠಿರನನ್ನು ಹೊರತುಪಡಿಸಿ ಪ್ರತಿ ಪಾಂಡವನೂ ಬೀಳುವ ಮಹಾನ್ ಹಿಮಾಲಯದ ಆರೋಹಣ.೧೮ ಸ್ವರ್ಗಾರೋಹಣ ಪರ್ವ (ಸ್ವರ್ಗಕ್ಕೆ ಏರುವ ಪುಸ್ತಕ)೯೮ ಯುಧಿಷ್ಠಿರನ ಅಂತಿಮ ಪರೀಕ್ಷೆ ಮತ್ತು ಪಾಂಡವರ ಆಧ್ಯಾತ್ಮಿಕ ಜಗತ್ತಿಗೆ ಮರಳುವುದು (ಸ್ವರ್ಗ).ಖಿಲಾಹರಿವಂಶ ಪರ್ವ (ಹರಿಯ ವಂಶಾವಳಿಯ ಪುಸ್ತಕ)೯೯-೧೦೦ಇದು ೧೮ ಪುಸ್ತಕಗಳಿಗೆ ಒಂದು ಅನುಬಂಧವಾಗಿದೆ ಮತ್ತು ಕೃಷ್ಣನ ಜೀವನದ ಆ ಭಾಗಗಳನ್ನು ಒಳಗೊಂಡಿದೆ. ಕಥಾವಸ್ತು thumb|ಗೀತೋಪದೇಶ ಮಹಾಭಾರತದ ಮುಖ್ಯವಾಗಿ ಚಂದ್ರವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರುವಂಶ (ಚಂದ್ರ ವಂಶ)ದ ಸದಸ್ಯರ ನಡುವೆ ನಡೆಯುವ ಹೋರಾಟವನ್ನು ಕುರಿತದ್ದು ಎಂದು ಹಲವರ ಅಭಿಮತವಾದರೂ ಈ ಹೋರಾಟದ ಕಥೆ ಕುರುಕ್ಷೇತ್ರ ಎನಿಸಿಕೊಳ್ಳುತ್ತದೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತ ಮಹಾರಾಜನ ಕಥೆಯಿಂದ ಆರಂಭವಾಗಿ, ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಉದ್ದಕ್ಕೂ ಬರುವ ಪಾತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪಾತ್ರಗಳು. ಮುಖ್ಯ ಕಥೆಯಲ್ಲದೆ, ಮಹಾಭಾರತದಲ್ಲಿ ಅನೇಕ ಉಪಕಥೆ ಗಳುಂಟು. ಹಾಗೆಯೇ ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಭೀಷ್ಮ ಪರ್ವದಲ್ಲಿ ಕಂಡುಬರುತ್ತವೆ. ವ್ಯವಸ್ಥೆಯ ದೃಷ್ಟಿಯಿಂದ, ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ. ಸಾರಾಂಶ ಕೃತಿಯ ಮುಖ್ಯ ಕಥೆಯು ಕುರು ವಂಶದ ಆಳ್ವಿಕೆಯ ರಾಜ್ಯವಾದ ಹಸ್ತಿನಾಪುರದ ಸಿಂಹಾಸನಕ್ಕಾಗಿ ರಾಜವಂಶದ ಹೋರಾಟವಾಗಿದೆ. ಹೋರಾಟದಲ್ಲಿ ಭಾಗವಹಿಸುವ ಕುಟುಂಬದ ಎರಡು ಮೇಲಾಧಾರ ಶಾಖೆಗಳೆಂದರೆ ಕೌರವ ಮತ್ತು ಪಾಂಡವ. ಕೌರವರು ಕುಟುಂಬದ ಹಿರಿಯ ಶಾಖೆಯಾಗಿದ್ದರೂ, ಹಿರಿಯ ಕೌರವ ದುರ್ಯೋಧನ, ಹಿರಿಯ ಪಾಂಡವ ಯುಧಿಷ್ಠಿರನಿಗಿಂತ ಕಿರಿಯ. ದುರ್ಯೋಧನ ಮತ್ತು ಯುಧಿಷ್ಠಿರ ಇಬ್ಬರೂ ಸಿಂಹಾಸನವನ್ನು ಆನುವಂಶಿಕವಾಗಿ ಪಡೆಯುವ ಸಾಲಿನಲ್ಲಿ ಮೊದಲಿಗರು ಎಂದು ಹೇಳಿಕೊಳ್ಳುತ್ತಾರೆ. ಈ ಹೋರಾಟವು ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಕೊನೆಗೊಳ್ಳುತ್ತದೆ, ಇದರಲ್ಲಿ ಪಾಂಡವರು ಅಂತಿಮವಾಗಿ ವಿಜಯಶಾಲಿಯಾಗುತ್ತಾರೆ. ಕದನವು ರಕ್ತಸಂಬಂಧ ಮತ್ತು ಸ್ನೇಹದ ಸಂಕೀರ್ಣ ಘರ್ಷಣೆಗಳನ್ನು ಉಂಟುಮಾಡುತ್ತದೆ, ಕುಟುಂಬದ ನಿಷ್ಠೆಯ ನಿದರ್ಶನಗಳು ಮತ್ತು ಕರ್ತವ್ಯವು ಸರಿಯಾದದ್ದಕ್ಕಿಂತ ಆದ್ಯತೆಯನ್ನು ತೆಗೆದುಕೊಳ್ಳುತ್ತದೆ, ಜೊತೆಗೆ ಸಂಭಾಷಣೆಯನ್ನು ಉಂಟುಮಾಡುತ್ತದೆ. ಮಹಾಭಾರತವು ಕೃಷ್ಣನ ಮರಣದೊಂದಿಗೆ ಕೊನೆಗೊಳ್ಳುತ್ತದೆ, ಮತ್ತು ಅವನ ರಾಜವಂಶದ ನಂತರದ ಅಂತ್ಯ ಮತ್ತು ಪಾಂಡವ ಸಹೋದರರು ಸ್ವರ್ಗಕ್ಕೆ ಏರಿದರು. ಇದು ಮಾನವಕುಲದ ನಾಲ್ಕನೇ ಮತ್ತು ಅಂತಿಮ ಯುಗವಾದ ಕಲಿಯುಗದ ಹಿಂದೂ ಯುಗದ ಆರಂಭವನ್ನು ಸಹ ಗುರುತಿಸುತ್ತದೆ. ಮುಖ್ಯ ಪಾತ್ರಗಳು ಭೀಷ್ಮ : ಭೀಷ್ಮ ಮಹಾಭಾರತದಲ್ಲಿ ಒಂದು ಪ್ರಮುಖ ಪಾತ್ರ. ಈತ ಶಾಂತನು ಮತ್ತು ಗಂಗೆಯರ ಪುತ್ರ. ಶಾಂತನು ಚಕ್ರವರ್ತಿಗೆ ಗಂಗೆಯಲ್ಲಿ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವ. ದೇವವ್ರತ/ಸತ್ಯವ್ರತ ಈತನ ಮೊದಲ ಹೆಸರು. ಅಷ್ಟವಸುಗಳಲ್ಲೊಬ್ಬನಾದ ಇವನು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ. ಈತನು ಶಾಸ್ತ್ರಜ್ಞಾನವನ್ನು ದೇವರ್ಷಿ ಬೃಹಸ್ಪತಿಯಿಂದಲೂ, ಶಸ್ತ್ರ ವಿದ್ಯೆಗಳನ್ನು ಋಷಿ ಭಾರದ್ವಾಜ, ಪರಶುರಾಮರಿಂದಲೂ ಕಲಿತನು. ತನ್ನ ತಂದೆ ಶಂತನುವಿನ ಸುಖಕ್ಕೋಸ್ಕರ ಆಜೀವನ ಬ್ರಹ್ಮಚರ್ಯ ಪಾಲಿಸುವ ಪ್ರತಿಜ್ಞೆ ಮಾಡುತ್ತಾನೆ. ಪಾಂಡವರು: ಪಾಂಡವರು ಪಾಂಡು ಹಾಗೂ ಕುಂತಿಯ ಮಕ್ಕಳು. ಋಷಿಯ ಶಾಪದಿಂದ ಮಕ್ಕಳನ್ನು ಪಾಂಡು ಪಡೆಯಲಾಗದಿದ್ದರೂ, ಕುಂತಿಗೆ ದೊರೆತಿದ್ದ ದೂರ್ವಾಸ ಮುನಿಯ ವರವನ್ನು ಉಪಯೋಗಿಸಿ ಕುಂತಿ ಮತ್ತು ಮಾದ್ರಿ ಪಾಂಡವರನ್ನು ಮಕ್ಕಳಾಗಿ ಪಡೆಯುತ್ತಾರೆ. ಐವರು ಪಾಂಡವರು: ಕುಂತಿ ಯಲ್ಲಿ ಯುಧಿಷ್ಠಿರ(ಯಮನಿಂದ), ಭೀಮ (ವಾಯುವಿನಿಂದ), ಅರ್ಜುನ (ಇಂದ್ರನಿಂದ), ಮಾದ್ರಿಯಲ್ಲಿ ನಕುಲ ಮತ್ತು ಸಹದೇವ (ಅಶ್ವಿನಿ ದೇವತೆಗಳಿಂದ) ಜನಿಸಿದವರು. ಮಹಾಭಾರತದ ಯುದ್ಧ ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ನಡೆಯುತ್ತದೆ. ದ್ರೌಪದಿ:ಭಾರತೀಯ ಸಾಹಿತ್ಯದ ಪ್ರಸಿದ್ಧ ಸ್ತ್ರೀಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು. ಪಾಂಚಾಲ ರಾಜ ದ್ರುಪದನ ಅಗ್ನಿಪುತ್ರಿ. ದ್ರುಷ್ಟ್ಯದ್ಯುಮ್ನನ ತಂಗಿ. ದ್ರೌಪದಿಯು ಐವರೂ ಪಾಂಡವರ ಪತ್ನಿ. ಮಹಾಭಾರತದ ಅತ್ಯಂತ ಸಂಕೀರ್ಣವಾದ ಪಾತ್ರಗಳಲ್ಲಿ ದ್ರೌಪದಿಯ ಪಾತ್ರ ಒಂದು. ಕೌರವರು: ಕೌರವರು ಪಾಂಡುವಿನ ಅಣ್ಣ ಧೃತರಾಷ್ಟ್ರನ ಮಕ್ಕಳು (ಗಾಂಧಾರಿಯಿಂದ); ಒಟ್ಟು ನೂರು ಕೌರವರು - ಇವರಲ್ಲಿ ಹಿರಿಯರು ದುರ್ಯೋಧನ ಮತ್ತು ದುಶ್ಯಾಸನ. ಕೊನೆಯವಳು ದುಶ್ಯೀಲೆ. ಕರ್ಣ: ಕರ್ಣನ ಪಾತ್ರ ಮಹಾಭಾರತದ ದುರಂತ ಪಾತ್ರಗಳಲ್ಲಿ ಒಂದು. ಮದುವೆಗೆ ಮೊದಲು ಸೂರ್ಯನಿಂದ ಕುಂತಿಯ ಮಗನಾಗಿ ಹುಟ್ಟುವ ಕರ್ಣನನ್ನು ಕುಂತಿ ನದಿಯಲ್ಲಿ ತೇಲಿ ಬಿಡುತ್ತಾಳೆ. ಸೂತನೊಬ್ಬನ ಮನೆಯಲ್ಲಿ ಬೆಳೆಯುವ ಕರ್ಣ ಪರಶುರಾಮನಿಂದ ಶಿಕ್ಷಣವನ್ನು ಪಡೆದರೂ ಶಾಪವನ್ನು ಪಡೆಯುತ್ತಾನೆ. ಕರ್ಣನು ದುರ್ಯೋಧನ ಆಪ್ತ ಗೆಳೆಯ. ಅಂಗದ ರಾಜ್ಯದ ದೊರೆ. ಕೊನೆಗೆ ಮಹಾಭಾರತ ಯುದ್ಧದ ಸಮಯದಲ್ಲಿ ಪರಶುರಾಮನ ಶಾಪದ ಕಾರಣ, ತನ್ನ ವಿದ್ಯೆ ಮರೆತುಹೋಗಿ ರಥ ಮಣ್ಣಿನಲ್ಲಿ ಹೂತಿದ್ದಾಗ ಅರ್ಜುನನ ಬಾಣದಿಂದ ಸಾಯುತ್ತಾನೆ. ಉಪಕಥೆಗಳು ಮತ್ತು ಗ್ರಂಥಗಳು ಮಹಾಭಾರತದ ಭಾಗವಾದ ಹಲವು ಪ್ರಮುಖ ಕಥೆಗಳು/ಗ್ರಂಥಗಳು:- ಭಗವದ್ಗೀತೆ (ಭೀಷ್ಮಪರ್ವ): ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಭಗವದ್ಗೀತೆ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಜ್ಞಾನ, ಧ್ಯಾನ ಮತ್ತು ಕರ್ಮ(ನೋಡಿ:ಭಗವದ್ಗೀತಾ ತಾತ್ಪರ್ಯ)ಮಾರ್ಗಗಳನ್ನು ಶ್ರೀ ಕೃಷ್ಣ ಅರ್ಜುನನಿಗೆ ತಿಳಿಸುತ್ತಾನೆ. ದಮಯಂತಿ (ಅರಣ್ಯಕಪರ್ವ): ನಳ ಮತ್ತು ದಮಯಂತಿಯರ ಕಥೆ ಮಹಾಭಾರತದ ಪ್ರಸಿದ್ಧ ಉಪಕಥೆಗಳಲ್ಲಿ ಒಂದು. ಸ್ವಯಂವರದಲ್ಲಿ ಇಂದ್ರ, ವರುಣ ಮೊದಲಾದವರನ್ನು ಕಡೆಗಣಿಸಿ ದಮಯಂತಿ ನಳನನ್ನೇ ಮದುವೆಯಾಗುತ್ತಾಳೆ. ಜೂಜಾಡಿ ಎಲ್ಲವನ್ನೂ ನಳ ಕಳೆದುಕೊಂಡ ನಂತರ ಕಾಡಿನಲ್ಲಿ ಇರಬೇಕಾಗುತ್ತದೆ. ದಮಯಂತಿ ತನ್ನ ತಂದೆಯ ಮನೆಗೆ ಹೋಗಲೆಂದು ಅವಳನ್ನು ಬಿಟ್ಟು ಓಡಿ ಹೋಗುವ ನಳ ಅಡಿಗೆ ಭಟ್ಟ ಮತ್ತು ಕುದುರೆ ತರಬೇತುಗಾರನಾಗಿ ರಾಜನೊಬ್ಬನ ಹತ್ತಿರ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇದರ ಅನುಮಾನ ಬಂದ ದಮಯಂತಿ ಈ ರಾಜನನ್ನು ಇನ್ನೊಂದು ಸ್ವಯಂವರಕ್ಕೆ ಕರೆಸಿ ಅಡಿಗೆಯ ರುಚಿಯಿಂದ ನಳನನ್ನು ಗುರುತು ಹಿಡಿಯುತ್ತಾಳೆ. ನಳ ಮತ್ತೆ ತನ್ನ ಆಸ್ತಿಯೆಲ್ಲವನ್ನೂ ಗೆದ್ದ ನಂತರ ಕಥೆ ಮುಗಿಯುತ್ತದೆ. ಕೃಷ್ಣಾವತಾರ: ಕೃಷ್ಣನ ಸಂಪೂರ್ಣ ಕಥೆ "ಕೃಷ್ಣಾವತಾರ" ಪುರಾಣದಲ್ಲಿ ಮೂಡಿ ಬಂದಿದೆ. ಇದೇ ಕಥೆ ಮಹಾಭಾರತದ ಉದ್ದಕ್ಕೂ ನೇಯಲ್ಪಟ್ಟಿದೆ. ಋಷ್ಯಶೃಂಗ (ಅರಣ್ಯಕಪರ್ವ): ಋಷ್ಯಶೃಂಗ ಋಷಿ, ಪೌರಾಣಿಕವಾಗಿ ವಿಭಾಂಡಕ ಋಷಿಯ ಮಗ. ರೋಮಪಾದ ರಾಜ್ಯದಲ್ಲಿ ಕ್ಷಾಮ ಬಂದಾಗ ಋಷ್ಯಶೃಂಗನೇ ಮಳೆಯನ್ನು ಅಲ್ಲಿಗೆ ತಂದನಂತೆ. ಇಂದಿನ ಕರ್ನಾಟಕ ರಾಜ್ಯದ ಶೃಂಗೇರಿಯ ಮೊದಲ ಹೆಸರು "ಋಷ್ಯಶೃಂಗ ಗಿರಿ" ಆಗಿತ್ತೆಂದು ಹೇಳುತ್ತಾರೆ. (ಅನುಶಾಸನಪರ್ವ): ವಿಷ್ಣು ಸಹಸ್ರನಾಮ ವಿಷ್ಣುವಿನ ೧,೦೦೦ ಹೆಸರುಗಳನ್ನು ಒಳಗೊಂಡ ಸ್ತೋತ್ರ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡು ಬರುತ್ತದೆ. ಯುದ್ಧದ ನಂತರ ಭೀಷ್ಮನ ಬಳಿ ಹೋಗುವ ಯುಧಿಷ್ಠಿರ ಭೀಷ್ಮನನ್ನು ಅನೇಕ ಧರ್ಮಪ್ರಶ್ನೆ ಗಳ ಪರಿಹಾರದ ಬಗ್ಗೆ ಕೇಳುತ್ತಾನೆ. ಹಾಗೆಯೇ, ಪುಣ್ಯಸಂಪಾದನೆಯ ದಾರಿಗಳ ಬಗ್ಗೆ ಕೇಳುತ್ತಾನೆ. ಭೀಷ್ಮ ಉತ್ತರವಾಗಿ ವಿಷ್ಣು ಸಹಸ್ರನಾಮವನ್ನು ತಿಳಿಸುತ್ತಾನೆ. ರಾಮಾಯಣದ ಕಥೆಯೂ ಮಹಾಭಾರತದ ಅರಣ್ಯಪರ್ವದಲ್ಲಿ ಸಂಕ್ಷಿಪ್ತವಾಗಿ ಮೂಡಿಬಂದಿದೆ. ಇದು ವ್ಯಾಸರಾಯರು ಬರೆದ ಕೃತಿಯೆಂದು ಹೇಳಲಾಗುತ್ತದೆ. ತತ್ವಶಾಸ್ತ್ರ ಮಹಾಭಾರತ ವಿಶಾಲವಾದ ತತ್ವಶಾಸ್ತ್ರವನ್ನು ಒಳಗೊಂಡ ಗ್ರಂಥ. ಕೆಲವರು ಇದನ್ನು "ಐದನೆಯ ವೇದ" ಎಂದೇ ಕರೆದಿದ್ದಾರೆ. ಮಹಾಭಾರತದ ತಾತ್ವಿಕ ಬೇರುಗಳು ಇರುವುದು ವೈದಿಕ ತತ್ವಶಾಸ್ತ್ರದಲ್ಲಿ. ಮಹಾಭಾರತದ ಒಂದು ಶ್ಲೋಕ ಹೇಳುವಂತೆ, ಅದರ ಮುಖ್ಯ ಗುರಿ ನಾಲ್ಕು ಪುರುಷಾರ್ಥಗಳನ್ನು ತಿಳಿಸಿಕೊಡುವುದು: ಅರ್ಥ, ಕಾಮ, ಧರ್ಮ ಮತ್ತು ಮೋಕ್ಷ. ಮಹಾಭಾರತದ ಅನೇಕ ಭಾಗಗಳು, ಉಪಕಥೆಗಳು ಮತ್ತು ಉಪಗ್ರಂಥಗಳು ಪ್ರಾಚೀನ ಭಾರತದ ವಿವಿಧ ತತ್ವಶಾಸ್ತ್ರಗಳನ್ನು ವರ್ಣಿಸುತ್ತವೆ. ವೇದಾಂತ, ಸಾಂಖ್ಯ, ಯೋಗ, ಪಂಚರಾತ್ರ, ಯೋಗ ಮೊದಲಾದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡ ಮಹಾಭಾರತ ಭಾರತೀಯ ತತ್ವಶಾಸ್ತ್ರದ ಮುಖ್ಯ ಆಕರಗಳಲ್ಲಿ ಒಂದೂ ಹೌದು. ವಿವಿಧ ತಾತ್ವಿಕ ನೆಲೆಗಟ್ಟುಗಳ ಮಧ್ಯೆ ಅವುಗಳ ಬಗೆಗಿನ ಸಹಿಷ್ಣುತೆಯೂ ಮಹಾಭಾರತದ ತತ್ವಶಾಸ್ತ್ರದಲ್ಲಿ ಕಂಡುಬರುತ್ತದೆ. ಮಹಾಭಾರತದಲ್ಲಿ ವೈಶಂಪಾಯನ ಜನಮೇಜಯನಿಗೆ ಈ ಕಥೆಯನ್ನು ಹೇಳುತ್ತಾನೆ: "ಓ ವಿವೇಕಿ! ಇವೆಲ್ಲವೂ ಜ್ಞಾನವನ್ನೇ ಪ್ರತಿನಿಧಿಸುತ್ತವೆ ಎಂದು ತಿಳಿ: ಸಾಂಖ್ಯ, ಯೋಗ, ಪಂಚರಾತ್ರ, ಆರಣ್ಯಕ. ಅವುಗಳ ದಾರಿಗಳು ಬೇರೆ, ಆದರೆ ಮೂಲದಲ್ಲಿ ಎಲ್ಲವೂ ಒಂದೇ!" ಮಹಾಭಾರತದಲ್ಲಿ ಅಧ್ಯಾತ್ಮಿಕ ತತ್ವಶಾಸ್ತ್ರವಲ್ಲದೇ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜನೀತಿ, ಯುದ್ಧನೀತಿ, ಖಗೋಳಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆಯೂ ಬಹಳಷ್ಟು ಮಾಹಿತಿಯುಂಟು. ಕನ್ನಡ ಸಾಹಿತ್ಯದಲ್ಲಿ ಮಹಾಭಾರತ ಮಹಾಭಾರತದಿಂದ ಸ್ಫೂರ್ತಿ ಪಡೆದ ಕನ್ನಡ ಸಾಹಿತ್ಯ ವಿಪುಲವಾಗಿದೆ. ಕನ್ನಡದಲ್ಲಿ ಮಹಾಭಾರತದ ಮೊದಲ ಬರವಣಿಗೆಯ ಕರ್ತೃ ಆದಿಕವಿ ಪಂಪ - ಪಂಪನ ವಿಕ್ರಮಾರ್ಜುನ ವಿಜಯ ಕನ್ನಡದ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಗದ್ಯ ಮತ್ತು ಪದ್ಯಮಿಶ್ರಿತವಾದ "ಚಂಪೂ" ಶೈಲಿಯಲ್ಲಿ ಬರೆಯಲ್ಪಟ್ಟಿರುವ ಪಂಪ ಭಾರತ ತನ್ನ ಆಳವಾದ ಮಾನವೀಯ ಮೌಲ್ಯಗಳಿಗೆ ಹೆಸರಾಗಿದೆ. ಸುಮಾರು ಇದೇ ಕಾಲದ ರನ್ನನ "ಗದಾಯುದ್ಧಂ" ಮಹಾಭಾರತ ಯುದ್ಧದ ಭೀಮ-ದುರ್ಯೋಧನರ ಗದಾಯುದ್ಧವನ್ನು ಕುರಿತದ್ದಾದರೂ ಇಡಿಯ ಮಹಾಭಾರತ ಕಥೆಯನ್ನು ಸಿಂಹಾವಲೋಕನ ಕ್ರಮದಲ್ಲಿ ಪರಿಶೀಲಿಸುತ್ತದೆ. ಕನ್ನಡದಲ್ಲಿ ಬಹಳ ಖ್ಯಾತಿ ಪಡೆದ ಮಹಾಭಾರತ, ಕುಮಾರವ್ಯಾಸ ವಿರಚಿತ "ಕರ್ಣಾಟ ಭಾರತ ಕಥಾಮಂಜರಿ"ಯು ಕುಮಾರವ್ಯಾಸ ಭಾರತ ಅಥವಾ "ಗದುಗಿನ ಭಾರತ" ಎಂದು ಕರೆಯಲ್ಪಡುತ್ತದೆ. ಈ ಕೃತಿ ಭಾಮಿನಿ ಷಟ್ಪದಿಯಲ್ಲಿ ಬರೆಯಲ್ಪಟ್ಟಿದ್ದು ತನ್ನ ಪಾತ್ರವೈವಿಧ್ಯತೆ ಹಾಗೂ ಶ್ರೀಮಂತ ರೂಪಕಗಳಿಗೆ ಹೆಸರಾಗಿದೆ. ಕುಮಾರವ್ಯಾಸ ಕೃಷ್ಣನ ಭಕ್ತ .ಕುಮರವ್ಯಾಸನು, ದುರ್ಯೋಧನನ ಅವಸಾನದ ನಂತರ ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ. ಕುಮಾರವ್ಯಾಸನು ಸಂಸ್ಕೃತದ ವ್ಯಾಸರ ಭಾರತವನ್ನು ಅನುಸರಿಸಿದರೂ, ಸ್ವತಂತ್ರ ಕಾವ್ಯವೆಂಬಂತೆ ಮೂಲ ಭಾರತಕ್ಕೆ ಸರಿಮಿಗಿಲಾಗಿ ರಚಿಸಿದ್ದಾನೆ. ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಮಾತ್ರ ಕುಮಾರವ್ಯಾಸ ಭಾರತ ಒಳಗೊಂಡಿದೆ. ಭೀಮನ ಕೋಣೆ ಕೇಡಲೇಸರದ ಪರಮದೇವ ಕವಿಯು ವ್ಯಾಸರ ಹದಿನೆಂಟು ಪರ್ವಗಳನ್ನೂ ವಾರ್ಧಿಕ ಷಟ್ಪದಿಯಲ್ಲಿ ರಚಿಸಿದ್ದಾನೆ. ಮಹಾಭಾರತದ ಅಶ್ವಮೇಧ ಪರ್ವ ಮಾತ್ರ ವಾರ್ಧಕ ಷಟ್ಪದಿಯಲ್ಲಿ, ಲಕ್ಷ್ಮೀಶ ಕವಿ ವಿರಚಿತ "ಜೈಮಿನಿ ಭಾರತ"ದಲ್ಲಿ ಮೂಡಿಬ೦ದಿದೆ. ಆಧುನಿಕ ಕನ್ನಡದಲ್ಲಿ ಪ್ರಸಿದ್ಧವಾದ ಮಹಾಭಾರತದ ಆವೃತ್ತಿ ಎ ಅರ್ ಕೃಷ್ಣಶಾಸ್ತ್ರಿಗಳು ಬರೆದ "ವಚನ ಭಾರತ." ಈ ಕೃತಿ ಸರಳವಾದ ಆಧುನಿಕ ಕನ್ನಡದಲ್ಲಿ ಬರೆಯಲ್ಪಟ್ಟಿದೆ. ಆಧುನಿಕ ಕನ್ನಡದಲ್ಲಿ ಮಹಾಭಾರತದ ಇನ್ನೊಂದು ಕೃತಿ "ಪರ್ವ" (ಎಸ್ ಎಲ್ ಭೈರಪ್ಪ). ಮೇಲಿನವು ಮುಖ್ಯ ಮಹಾಭಾರತ ಕಥೆಯನ್ನು ಆಧರಿಸಿ ಬರೆದ ಕೃತಿಗಳಾದರೆ, ಮಹಾಭಾರತದ ವಿವಿಧ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಆಧರಿಸಿ ಬರೆದ ಕೃತಿಗಳು ಅನೇಕ. ಆಧುನಿಕ ಕನ್ನಡದಲ್ಲಿ ಕುವೆಂಪು ರವರ "ಬೆರಳ್ ಗೆ ಕೊರಳ್" ಮಹಾಭಾರತದ ಏಕಲವ್ಯನ ಪಾತ್ರವನ್ನು ಆಧರಿಸಿ ಬರೆದ ನಾಟಕ. ಹಾಗೆಯೇ ಬಿ ಎಂ ಶ್ರೀ ಅವರ "ಗದಾಯುದ್ಧಂ" ರನ್ನನ ಕಾವ್ಯದ ನಾಟಕ ರೂಪಾಂತರ. ಗಿರೀಶ್ ಕಾರ್ನಾಡ್ ರ "ಯಯಾತಿ" ಮಹಾಭಾರತದ ಉಪಕಥೆಯೊಂದನ್ನು ಆಧರಿಸಿ ಬರೆದ ನಾಟಕ. ಇತ್ತೀಚೆಗೆ ರಾಮಚಂದ್ರ ಭಾವೆಯವರು ಅಂಧಪರ್ವ, ಅಶ್ವಮೇಧ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಕ್ರಮವಾಗಿ ಸುಧಾ ಮತ್ತು ತರಂಗಗಳಲ್ಲಿ ಪ್ರಕಟವಾಗಿವೆ. ಅಂಧಪರ್ವ ಕಾದಂಬರಿಯಾಗಿ ಹೊರಬಂದಿದೆ. ಅಲ್ಲದೆ ಮಹಾಭಾರತ ಪಾತ್ರಪ್ರಪಂಚ ಎಂಬ ಸಂಕಲನವೂ ಇದೆ. ಮಂಗಳ ಧಾರಾವಾಹಿ ಪ್ರಕಟಿತ ಮಹಾಪತನ ಕಾದಂಬರಿ ಸಂತೋಷಕುಮಾರ ಮೆಹೆಂದಳೆ ಯವರ ಕೃತಿಯಾಗಿದ್ದು, ದುರ್ಯೋಧನನ ಕೇಂದ್ರೀಕೃತ ಆತ್ಮಕಥಾನಕ. ವಿಭಿನ್ನ ಶೈಲಿಯ ಮತ್ತು ಸಂಪೂರ್ಣ ತಾರ್ಕಿಕ ಮೌಲ್ಯಗಳ ಕೃತಿ. ಶಿವರಾಜ್ ನಾಯ್ಕ್,(ಕೆ ಕೆ ತಾಂಡ,ಹಡಗಲಿ) ಮಹಾಭಾರತ* ಮಹಾಭಾರತವನ್ನು ಕೇವಲ ಒಂದು ಪಾತ್ರವನ್ನು ಆಧಾರವಾಗಿಟ್ಟುಕೊಂಡು ನೋಡುವುದಕ್ಕಿಂತ, ಅದರಲ್ಲಿನ ಪ್ರತಿಯೊಂದು ಪಾತ್ರದ ಮೂಲ ಉದ್ದೇಶವನ್ನು ಗ್ರಹಿಸಿ ನೋಡುವುದಾದರೆ ಮಹಾಭಾರತ ನಮಗೆ ಅತ್ಯದ್ಭುತ ಜ್ಞಾನವನ್ನು ಕೊಡುವುದು ಖಂಡಿತ, ಹೀಗೆ ನೋಡಿದರೆ ಪ್ರತಿಯೊಂದು ಪಾತ್ರವೂ ಕೂಡ ನಾಯಕನಂತೆ ಕಾಣುತ್ತದೆ. ಅಲ್ಲದೆ ಮಹಾಭಾರತವನ್ನು ಅದರ ನಿಜ ರೂಪವನ್ನು ತಿಳಿದಿದ್ದೆ ಆದರೆ ಇಂದಿನ ನಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸತ್ಯಾ ಸತ್ಯತೆಗಳು ಅದರಲ್ಲಿ ಅಡಕವಾಗಿವೆ, ಇಂದಿನ ಆಧುನಿಕ ಜಗತ್ತು ತನ್ನ ಹೊಸ ಆವಿಷ್ಕಾರಗಳನ್ನು ಹೊಸದೆಂದು ಹೇಳುತ್ತದೋ ಅದಾಗಲೇ ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಉದಾ:- ಮೊಬೈಲ್,ವಿಮಾನ, ದೂರದರ್ಶನ ವಿಡಿಯೋ ಕಾನ್ಫರೆನ್ಸ್,ಸಿಜರಿಂಗ್,ತದೃಪ ಸೃಷ್ಟಿ ಮುಂತಾದವು ,,, ಇನ್ನೊಂದು ವಿಷಯ ಹೇಳಲೇ ಬೇಕು ಮಹಾಭಾರತವನ್ನು ನಾವು ಇಂದಿಗೂ ಅದರ ಮೂಲ ಅರ್ಥ ವನ್ನು ತಿಳಿಯುವಲ್ಲಿ ಸೊಲುತ್ತಿದ್ದೇವೆ, ಮಹಾಭಾರತ ದಂತಹ ಕಥಾನಕ ಹುಟ್ಟಿರಲು ಮತ್ತು ಹುಟ್ಟಲು ಅಸಾಧ್ಯ. ಅದರಲ್ಲಿನ ಪ್ರತಿಯೊಂದು ಪಾತ್ರವೂ ಕೂಡ ನಮಗೆ ನಮ್ಮ ಜೀವನದ ಹೆಜ್ಜೆ -ಹೆಜ್ಜೆ ಗಿನ ಬದುಕಿನ ಸತ್ಯವನ್ನು ತೆರೆದಿಡುತ್ತದೆ. ಧನ್ಯವಾದಗಳು,,, ಮಾಧ್ಯಮಗಳಲ್ಲಿ ಮಹಾಭಾರತ ಕನ್ನಡ, ತಮಿಳು, ಹಿಂದಿಗಳಲ್ಲಿ ವರ್ಷ ವರ್ಷವೂ ಮಹಾಭಾರತ ನವೀಕರಣಗೊಂಡು ದೂರದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕೆಲವು ಉಕ್ತಿಗಳು ಮಹಾಭಾರತದಲ್ಲಿ ಕಂಡು ಬರುವ ಕೆಲವು ಪ್ರಸಿದ್ಧ ವಾಕ್ಯಗಳು "ಇಲ್ಲಿ ಕಂಡು ಬರುವುದು ಬೇರೆ ಕಡೆಗಳಲ್ಲಿ ಸಿಗಬಹುದು, ಆದರೆ ಇಲ್ಲಿ ಇಲ್ಲದಿರುವುದು ಇನ್ನೆಲ್ಲಿಯೂ ಸಿಗುವುದಿಲ್ಲ." -- ಆದಿಪರ್ವ. "ಅತೃಪ್ತಿಯೇ ಪ್ರಗತಿಯ ಮೂಲ." -- ದುರ್ಯೋಧನ. "ಅಧಿಕಾರದ ನಶೆ ಮದ್ಯದ ನಶೆಗಿಂತಲೂ ಕೆಟ್ಟದ್ದು; ಏಕೆಂದರೆ ಅಧಿಕಾರದ ನಶೆ ಇರುವವನಿಗೆ ಆತ ಕೆಳಗೆ ಬೀಳುವವರೆಗೂ ನಶೆ ಇಳಿಯುವುದಿಲ್ಲ." -- ವಿದುರ. "ಸಾಧುಗಳನ್ನು ರಕ್ಷಿಸಲು, ದುಷ್ಟರನ್ನು ಶಿಕ್ಷಿಸಲು, ಧರ್ಮದ ಸಂಸ್ಥಾಪನೆಗಾಗಿ, ಯುಗ ಯುಗಗಳಲ್ಲಿಯೂ ಸಂಭವಿಸುತ್ತೇನೆ." -- ಕೃಷ್ಣ. ಸಂಕ್ಷಿಪ್ತ ವಿಮರ್ಶೆ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಹಾಭಾರತ - ಸಂಕ್ಷಿಪ್ತ ವಿಮರ್ಶೆ ಬಾಹ್ಯ ಸಂಪರ್ಕಗಳು ಸಂಸ್ಕೃತ ಮಹಾಭಾರತದ ಸಂಪೂರ್ಣ ಪಠ್ಯ: http://www.hindunet.org/mahabharata/ http://bombay.oriental.cam.ac.uk/john/mahabharata/statement.html ಮಹಾಭಾರತ ಮತ್ತು ಸಿಂಧೂ-ಸರಸ್ವತಿ ಸಂಸ್ಕೃತಿ - ಸುಭಾಷ ಕಾಕರ ಲೇಖನ ಮಹಾಭಾರತಕ್ಕೆ ಪರಿಚಯ ಮಹಾಭಾರತದ ಬಗ್ಗೆ ವಿವೇಕಾನಾಂದರ ಹೇಳಿಕೆಗಳು ಕನ್ನಡದಲ್ಲಿ ಮಹಾಭಾರತ ಪ್ರವಚನ MP3 ಉಲ್ಲೇಖಗಳು ಕುರುವಂಶವೃಕ್ಷ ಪರಿವಿಡಿ ವರ್ಗ:ಧಾರ್ಮಿಕ ಗ್ರಂಥಗಳು ವರ್ಗ:ಪುರಾಣ ವರ್ಗ:ಹಿಂದೂ ಧರ್ಮ ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ವಿಸ್ತರಿಸಿದ ಲೇಖನ
ಜಯ
https://kn.wikipedia.org/wiki/ಜಯ
ಜಯ:ಮಹಾಭಾರತ ಗ್ರಂಥ ಜಯ ಎ೦ಬುದು ಪ್ರಾಚೀನ ಭಾರತದಲ್ಲಿ ರಚಿತವಾದ ಒಂದು ಗ್ರ೦ಥ, ಮತ್ತು ಇ೦ದಿನ ಮಹಾಭಾರತ ಗ್ರ೦ಥದ ಪೂರ್ವರೂಪ ಎಂದು ಹಲವು ಚರಿತ್ರಜ್ಞರ ಹೇಳಿಕೆ. ಮಹಾಭಾರತದ ಮೊದಲ ಶ್ಲೋಕ ಹೀಗೆ ಸಾಗುತ್ತದೆ: "ನಾರಾಯಣ೦ ನಮಸ್ಕೃತ್ಯ ನರ೦ ಚೈವ ನರೋತ್ತಮಮ್ | .........................ತತೋ ಜಯಮುದೀರಯೇತ್ ||" ದೇವ-ದೇವತೆಯರನ್ನು ನಮಿಸಿ 'ಜಯ'ವನ್ನು ಓದಲು ಪ್ರಾರ೦ಭಿಸಿ ಎ೦ಬ ಅರ್ಥ ಬರುವ ಶ್ಲೋಕ ಇದು. ಇದನ್ನು ಗಮನಿಸಿ ಮಹಾಭಾರತದ ಹಿ೦ದಿನ ಹೆಸರು 'ಜಯ' ಎಂದು ಇದ್ದೀತೆ೦ದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇ೦ದಿನ ಮಹಾಭಾರತದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಶ್ಲೋಕಗಳಿವೆ. ಮಹಾಭಾರತದ ಲೇಖಕರು ವೇದವ್ಯಾಸರು ಎಂದು ಸಾ೦ಪ್ರದಾಯಿಕ ನ೦ಬಿಕೆ. ಆದರೆ ಚರಿತ್ರಜ್ಞರ ಅಭಿಪ್ರಾಯದ೦ತೆ, ಮಹಾಭಾರತಕ್ಕೆ ಒಬ್ಬರೇ ಲೇಖಕರನ್ನು ಆರೋಪಿಸುವುದು ಅಷ್ಟು ಸರಿಯಲ್ಲ. ಬಾಯಿ೦ದ ಬಾಯಿಗೆ ಹರಡುತ್ತಾ, ಶತಮಾನಗಳ ಮೂಲಕ ಮಹಾಭಾರತ ಬೆಳೆಯುತ್ತಾ ಬ೦ದಿದೆ ಎ೦ಬುದು ಆಧುನಿಕ ಅಭಿಪ್ರಾಯ. ಸುಮಾರು ಕ್ರಿ.ಶ. ನಾಲ್ಕನೆ ಶತಮಾನದ ಹೊತ್ತಿಗೆ ಮಹಾಭಾರತ ಇ೦ದಿರುವ ರೂಪಕ್ಕೆ ಬ೦ದಿತ್ತು. ಅಲ್ಲಿನ ವರೆಗೆ ವಿಕಾಸಗೊಳ್ಳುತ್ತ ಬ೦ದ ಗ್ರ೦ಥದ ಅತಿ ಪ್ರಾಚೀನ ರೂಪ "ಜಯ" ಎಂದು ಹೇಳಲಾಗುತ್ತದೆ. ಈ "ಜಯ" ಗ್ರ೦ಥದ ಮೂಲ ಕಥೆ ಇ೦ದಿನ ಮಹಾಭಾರತದ ಕಥೆಯೇ ಆಗಿದ್ದು, ಅದು ಸುಮಾರು ೧೦,೦೦೦ ಶ್ಲೋಕಗಳನ್ನು ಒಳಗೊ೦ಡಿತ್ತು ಎ೦ದೂ ಹೇಳಲಾಗುತ್ತದೆ. ನೋಡಿ ಪರ್ವ ಉತ್ತರಕಾಂಡ ಅಭಿಪ್ರಾಯಗಳು ಪದ್ಮರಾಜ ದಂಡಾವತಿ: ದೇವದತ್ತ ಪಟ್ಟನಾಯಕರ ‘ಜಯ’ ಕೃತಿಯನ್ನು ನಿನ್ನೆ ಬೆಳಿಗ್ಗೆ ಓದಿ ಮುಗಿಸಿದೆ. ಮಹಾಭಾರತದ ಸಚಿತ್ರ ಮರುಕಥನವಾದ ‘ಜಯ’ ಕೃತಿಯನ್ನು ಕನ್ನಡದ ಪ್ರಸಿದ್ಧ ವಿಮರ್ಶಕ ಗಿರಡ್ಡಿ ಗೋವಿಂದರಾಜರು ಅನುವಾದಿಸಿದ್ದಾರೆ. ಮೂಲಕೃತಿಯ ಹಾಗೆಯೇ ಕನ್ನಡದ ಕೃತಿಯನ್ನೂ ಅದೇ ಮುಖಪುಟದೊಡನೆ, ಅದೇ ಗಾತ್ರದಲ್ಲಿ ಮುದ್ರಿಸಿರುವುದು ವಿಶೇಷ. ಧಾರವಾಡದ ಮನೋಹರ ಗ್ರಂಥಮಾಲೆ ಈ ಕೃತಿಯನ್ನು ಪ್ರಕಟಿಸಿದೆ. ದೇವದತ್ತ ಪಟ್ಟನಾಯಕರ ಕೃತಿ ಎಷ್ಟು ಶ್ರೇಷ್ಠವಾಗಿದೆಯೋ ಗಿರಡ್ಡಿಯವರ ಕನ್ನಡ ಅನುವಾದ ಕೂಡ ಅಷ್ಟೇ ಉತ್ಕೃಷ್ಟವಾಗಿದೆ. 350 ಪುಟಗಳಿಗೆ ಮೀರಿದ ಈ ಪುಸ್ತಕದಲ್ಲಿ 108 ಅಧ್ಯಾಯಗಳು ಇವೆ. ಪ್ರತಿಯೊಂದು ಅಧ್ಯಾಯದ ಜೊತೆಗೆ ಪಟ್ಟನಾಯಕರೇ ರಚಿಸಿದ 250ಕ್ಕೂ ಹೆಚ್ಚು ರೇಖಾ ಚಿತ್ರಗಳು ಜೊತೆಗೆ ಇವೆ. ಪ್ರತಿ ಅಧ್ಯಾಯದ ಕೊನೆಯಲ್ಲಿ ಅದನ್ನು ಅರ್ಥೈಸುವ ಪುಟ್ಟ ಪುಟ್ಟ, ಕೆಲವು ಸಾರಿ ದೀರ್ಘ ಟಿಪ್ಪಣಿಗಳು ಇವೆ. ಪಟ್ಟನಾಯಕರ ಕೃತಿ ಭಿನ್ನವಾಗುವುದು ಅಲ್ಲಿ. ಟಿಪ್ಪಣಿಗಳು ಮಹಾಭಾರತವನ್ನು ಭಿನ್ನ ದೃಷ್ಟಿಕೋನದಿಂದ ನೋಡಿವೆ. ಹೊಸ ಅರ್ಥಗಳನ್ನು ಕಟ್ಟಿ ಕೊಟ್ಟಿವೆ. ಉಲ್ಲೇಖ ವರ್ಗ:ಧರ್ಮ ವರ್ಗ:ಪುರಾಣ ವರ್ಗ:ಇತಿಹಾಸ ವರ್ಗ:ಭಾರತ
ಇಲಿಯಡ್
https://kn.wikipedia.org/wiki/ಇಲಿಯಡ್
thumb|ಇಲಿಯಡ್ ಮಹಾಕಾವ್ಯದ ಒಂದು ದೃಶ್ಯ ಇಲಿಯಡ್ ಪ್ರಾಚೀನ ಗ್ರೀಕ್ ಮಹಾಕಾವ್ಯಗಳಲ್ಲೊಂದು. ಕಾಲ ಸು. ಕ್ರಿ. ಪೂ. 8ನೆಯ ಶತಮಾನ. ರಚಿಸಿದವ ಹೋಮರ್ ಕವಿ ಎಂದು ಪ್ರತೀತಿಯಿದೆ. ಗ್ರೀಕರಿಗೂ ಟ್ರಾಯ್ ನಗರದವರಿಗೂ ನಡೆದ ಯುದ್ಧದ ವರ್ಣನೆ ಇದರ ವಸ್ತು. ಆ ಯುದ್ಧದ ಕಡೆಯ ದಿನಗಳ ಘಟನೆಗಳು ಇದರಲ್ಲಿ ನಿರೂಪಿತವಾಗಿವೆ. ಗ್ರೀಕರ ಅಗ್ರವೀರ ಅಕಿಲೀಸ್ ತಾನು ಯುದ್ಧ ಮಾಡುವುದಿಲ್ಲವೆಂದು ಹೇಳಿ ಬೇರೆಯಾಗಿ ನಿಂತುದರ ಪರಿಣಾಮವಾಗಿ ಗ್ರೀಕರಿಗಾದ ಅನಾಹುತಗಳಲ್ಲೂ ಇದರ ಬಹುಭಾಗವನ್ನು ತೆಗೆದುಕೊಂಡಿವೆ. ಇದರಲ್ಲಿರುವುದು ಒಟ್ಟು ಇಪ್ಪತ್ತನಾಲ್ಕು ಕಾಂಡಗಳು. thumb|ಅಕಿಲಿಯಸ್ ಬಾಣದಿಂದ ಗಾಯಗೊಂಡ ಪ್ಯಾಟ್ರೊಕ್ಲಸ್ ಅನ್ನು ಉಪಚರಿಸುತ್ತರುವುದು.(ಹೂದಾನಿಗಳ ಮೇಲ್ಭಾಗದ ಶಾಸನಗಳಿಂದ ತೆಗೆದುಕೊಂಡಿದೆ. ca. 500 ಕ್ರಿ.ಪೂ. ವಲ್ಸಿಯಿಂದ.F2278 ಇಲಿಯಡ್ ಷಟ್ಪದಿಯಲ್ಲಿ ರಚಿಸಲ್ಪಟ್ಟಿದ್ದು ಸುಮಾರು ೧೬,೦೦೦ ಸಾಲುಗಳನ್ನು ಒಳಗೊಂಡಿದೆ. ನಂತರದ ಗ್ರೀಕರು ಇದನ್ನು ೨೪ ಅಧ್ಯಾಯಗಳಾಗಿ ವಿಂಗಡಿಸಿದರು. ಇಲಿಯಡ್ ಮತ್ತು ಹೋಮರನ ಇನ್ನೊಂದು ಮಹಾಕಾವ್ಯವಾದ "ಒಡಿಸ್ಸಿ" ಪ್ರಾಚೀನ ಗ್ರೀಕ್ ಕಾವ್ಯದ ಪ್ರಧಾನ ಕೃತಿಗಳೆಂದು ಹೇಳಲಾಗುತ್ತದೆ. ಹೋಮರ್ ಕವಿ ನಿಜವಾದ ವ್ಯಕ್ತಿಯೇ ಅಲ್ಲವೇ, ಅಥವಾ ಹೋಮರ್ ಒಬ್ಬನೇ ವ್ಯಕ್ತಿಯೋ ಅನೇಕ ವ್ಯಕ್ತಿಗಳೋ ಮೊದಲಾದ ಚರ್ಚೆಗಳು ಅನೇಕ ವರ್ಷಗಳಿಂದ ನಡೆದಿವೆ. ಕಥೆ ಇಲಿಯಡ್ ನ ಕಥೆ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವಿನ ಯುದ್ಧವೊಂದರ ಹತ್ತನೆ ಮತ್ತು ಕೊನೆಯ ವರ್ಷದ ಘಟನೆಗಳನ್ನು ಕುರಿತದ್ದು. ಮುಖ್ಯವಾಗಿ ಅಕೀಲೀಸ್ ಎಂಬ ಗ್ರೀಕ್ ವೀರನ ಸಾಹಸಗಳನ್ನು ತಿಳಿಸುತ್ತದೆ. ಅಕೀಲೀಸ್ ಮತ್ತು ಅಗಮೆಮ್ನಾನ್ ರ ನಡುವಿನಾ ಜಗಳದೊಂದಿಗೆ ಆರಂಭಗೊಂಡು, ಹೆಕ್ಟರ್ ಎಂಬ ಟ್ರಾಯ್ ದೇಶದ ವೀರನ ಮರಣ ಮತ್ತು ಅಂತ್ಯಸಂಸ್ಕಾರದೊಂದಿಗೆ ಕಾವ್ಯ ಕೊನೆಗೊಳ್ಳುತ್ತದೆ. ಟ್ರಾಯ್ ನಗರದ ರಾಜ ಪ್ರಯಮನ ಮಗ ಪ್ಯಾರಿಸ್ ಗ್ರೀಸಿನ ಸ್ಪಾರ್ಟಾದ ಮೆನೆಲಾಸನ ಪತ್ನಿ ಪರಮ ಸುಂದರಿ ಹೆಲೆನಳನ್ನು ಎತ್ತಿಕೊಂಡು ಹೋದುದು ತಮ್ಮ ನಾಡಿಗೇ ಆದ ಅಪಮಾನವೆಂದು ಕೆರಳಿದ ಗ್ರೀಕ್ ರಾಜರು ತಮ್ಮ ತಮ್ಮ ಯೋಧರೊಡನೆ ನೂರಾರು ಹಡಗುಗಳಲ್ಲಿ ಈಜಿಯನ್ ಸಮುದ್ರವನ್ನು ದಾಟಿ ಏಷ್ಯ ಮೈನರಿನ ವಾಯವ್ಯಮೂಲೆಯಲ್ಲಿ ಕಡಲತೀರಕ್ಕೆ ಮೂರು ಮೈಲಿ ದೂರದಲ್ಲಿದ್ದ ಟ್ರಾಯ್ ಕೋಟೆಗೆ ಮುತ್ತಿಗೆ ಹಾಕಿದರು. ಟ್ರಾಯ್ ಜನ (ಟ್ರೋಜನರು) ಕೋಟೆಯ ಬಾಗಿಲನ್ನು ಭದ್ರಪಡಿಸಿ ಒಂಬತ್ತು ವರ್ಷ ಕಳೆದರೂ ಅಲ್ಲಾಡಲಿಲ್ಲ. ಅಷ್ಟು ಕಾಲವೂ ಗ್ರೀಕರು ಸುತ್ತಮುತ್ತಲ ಸಣ್ಣಪುಟ್ಟ ರಾಜ್ಯಗಳಿಗೆ ಮುತ್ತಿಗೆ ಹಾಕಿ ಅವನ್ನು ಗೆದ್ದು ಅಲ್ಲಿನವರನೇಕರನ್ನು ಸೆರೆಯಾಳುಗಳಾಗಿಯೂ, ದಾಸಿಯರಾಗಿಯೂ ಹಿಡಿದು ತಂದರು. ಅಂಥವರಲ್ಲಿ ಒಬ್ಬಳು ಅಕಿಲೀಸನ ದಾಸಿ ಬ್ರಿಸೇಯಿಸ್, ಬ್ರೈಸಿಸ್ ಎಂಬುವನ ಮಗಳು. ಗ್ರೀಕರ ಪ್ರಧಾನ ಸೇನಾಪತಿ ಮೆನೆಲಾಸನ ತಮ್ಮ ಆಗಮೆಮ್ನಾನ್‍ನ ದಾಸಿ ಕ್ರಿಸೇಯಿಸ್ ಕ್ರೈಸಿಸನ ಮಗಳು ಇನ್ನೊಬ್ಬಳು. ಕ್ರೈಸೀಸ್ ಅಪೊಲೊ ದೇವನ ಪೂಜಾರಿ, ಅವನು ತನ್ನ ಮಗಳಿಗುಂಟಾದ ಪಾಡನ್ನು ನೋಡಿ ಆ ದೇವತೆಗೆ ಮೊರೆಯಿಡಲು, ಗ್ರೀಕರನ್ನು ಶಿಕ್ಷಿಸುವ ಸಲುವಾಗಿ ಅಪೊಲೊ ವ್ಯಾಧಿಯೊಂದನ್ನು ಗ್ರೀಕ್ ಸೈನಿಕರಲ್ಲಿ ಹರಡಿದ. ಕಾಲ್ಟಾಸ್ ಎಂಬ ದಿವ್ಯಜ್ಞಾನಿಯಿಂದ ಈ ಪಿಡುಗಿಗೆ ಕಾರಣವನ್ನು ತಿಳಿದುಕೊಂಡ ಗ್ರೀಕರು ಕ್ರಿಸೇಯೀಸಳನ್ನು ಅವಳ ತಂದೆಗೆ ಹಿಂದಿರುಗಿಸಬೇಕೆಂದು ಒತ್ತಾಯ ಮಾಡಿದರು. ಹಾಗೆ ಮಾಡಲೇಬೇಕಾಗಿ ಬಂದಾಗ ಆಗಮೆಮ್ನಾನ್ ತನ್ನ ದಾಸಿ ಹೋದುದರಿಂದ ಅವಳಿಗೆ ಬದಲಾಗಿ ಅಕಿಲೀಸನ ದಾಸಿಯನ್ನು ಬಲವಂತವಾಗಿ ತಂದಿಟ್ಟುಕೊಂಡ. ಇದರಿಂದ ಅಸಮಾಧಾನಗೊಂಡ ಅಕಿಲೀಸ್ ತಾನು ಯುದ್ಧದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿ ತನ್ನ ಅನುಯಾಯಿಗಳಾದ ಮಿರ್ ಮಿಡನ್ನರನ್ನು ಕರೆದುಕೊಂಡು ದೂರನಿಂತ. ಅಕಿಲೀಸನ ತಾಯಿ ಥೆಟಿಸ್ ಎಂಬ ದೇವತೆ. ಅವಳು ತನ್ನ ಮಗನಿಗಾದ ಅಪಮಾನವನ್ನು ಕಂಡು ದುಃಖಿತಳಾಗಿ ದೇವಾಧಿದೇವ ಜ್ಯೂಸನ ಬಳಿಗೆ ಹೋಗಿ ದೂರಿತ್ತಳು. ಗ್ರೀಕರು ಅಕಿಲೀಸನ ಹಿರಿಮೆಯನ್ನು ಅರಿತುಕೊಳ್ಳುವಂತೆ ಮಾಡುವುದಾಗಿ ಜ್ಯೂಸ್ ಮಾತುಕೊಟ್ಟ. ಈ ದಾಸಿಯರ ಪ್ರಸಂಗ ಇಲಿಯಡ್‍ನ ಮೊದಲ ಕಾಂಡದ ಕಥೆ. ಗ್ರೀಕರಿಗೆ ಅಕಿಲೀಸನ ಔನ್ನತ್ಯದ ಅರಿವಾಗಬೇಕಾದರೆ ಯುದ್ಧ ಆರಂಭವಾಗಬೇಕು. ಆದ್ದರಿಂದ ಎರಡನೆ ಕಾಂಡದಲ್ಲಿ ಜ್ಯೂಸ್ ಆಗಮೆಮ್ನಾನಿಗೊಂದು ಕನಸನ್ನು ಕಳುಹಿಸಿ ಯುದ್ಧ ಮಾಡಬೇಕೆಂದು ಸೂಚಿಸುತ್ತಾನೆ. ಆಗಮೆಮ್ನಾನ್ ತನ್ನ ಜನರನ್ನು ಪರೀಕ್ಷಿಸಲು ತಾವೆಲ್ಲ ಸ್ವದೇಶಕ್ಕೆ ಹಿಂದಿರುಗಬೇಕೆಂದು ಹೇಳುತ್ತಾನೆ. ತಕ್ಷಣ ಅವರೆಲ್ಲ ಸಂತೋಷದಿಂದ ಹಡಗುಗಳ ಕಡೆಗೆ ಓಡುತ್ತಾರೆ. ಒಡಿಸ್ಸಿಯಸ್ ಅವರನ್ನು ಹಿಂದಕ್ಕಟ್ಟುತ್ತಾನೆ. ಈ ಸಂದರ್ಭದಲ್ಲಿ ಗ್ರೀಕ್ ಹಡಗುಗಳನ್ನೂ ಗ್ರೀಕ್ ಸೈನ್ಯದ ಪ್ರಮುಖರನ್ನೂ ಕುರಿತ ವಿವರಗಳು ಬರುತ್ತವೆ. ಮೂರನೆಯ ಕಾಂಡದಲ್ಲಿ ಹೆಲೆನಳನ್ನು ಹಾರಿಸಿಕೊಂಡು ಬಂದು ಯುದ್ಧಕ್ಕೆ ಕಾರಣನಾಗಿದ್ದ ಪ್ಯಾರಿಸ್ ಅವಳ ಪತಿ ಮೆನೆಲಾಸ್‍ನೊಡನೆ ದ್ವಂದ್ವಯುದ್ಧದಲ್ಲಿ ತೊಡಗಿ ಸಾಯುತ್ತಾನೆ. ಅವನು ಸಾಯುವ ವೇಳೆಗೆ ಅವನ ಪಕ್ಷಪಾತಿಯಾದ ಸೌಂದರ್ಯಾಧಿದೇವತೆ ಆಫ್ರೋಡಿಟಿ ಅವನನ್ನು ಯುದ್ಧಭೂಮಿಯಿಂದ ಕರೆದೊಯ್ಯುತ್ತಾಳೆ. ನಾಲ್ಕನೆಯ ಕಾಂಡದಲ್ಲಿ ಗ್ರೀಕರ ಪರವಾಗಿರುವ ಅಥೀನದೇವಿ ಟ್ರಾಯ್ ಪಕ್ಷದ ಪ್ಯಾಂಡರಸ್ ಎಂಬಾತನನ್ನು ಮೆನಲಾಸನಿಗೆ ಗುರಿಯಿಟ್ಟು ಬಾಣಪ್ರಯೋಗ ಮಾಡುವಂತೆ ಪ್ರೇರಿಸಿ ಎರಡು ಸೈನ್ಯಗಳಿಗೂ ಮತ್ತೆ ಯುದ್ಧ ಆರಂಭವಾಗುವಂತೆ ಮಾಡುತ್ತಾಳೆ. ಐದನೆ ಕಾಂಡದಲ್ಲಿ ಗ್ರೀಕರ ಡಿಯೋಮಿಡಿಸ್ ವೀರಾವೇಶದಿಂದ ಹೋರಾಡಿ ಪ್ಯಾಂಡರಸನ್ನೂ ಇನ್ನಿತರ ಅನೇಕ ಟ್ರೋಜನರನ್ನೂ ಕೊಲ್ಲುತ್ತಾನೆ. ಟ್ರೋಜನರಿಗೆ ಸಹಾಯ ಮಾಡುವ ಆಫ್ರೋಡಿಟಿ ಮತ್ತು ಐರಿಸ್ ದೇವತೆಗಳೂ ಅವನ ಆಯುಧಗಳ ಸವಿಗಾಣದೆ ಹೋಗುವುದಿಲ್ಲ. ಆರನೆಯ ಕಾಂಡದಲ್ಲಿ ಟ್ರಾಯ್‍ನ ಹಿರಿಯ ರಾಜಕುಮಾರ ಹೆಕ್ಟರ್ ಟ್ರಾಯ್ ನಗರದವರೆಲ್ಲ ಅಥೀನಳಿಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಸಲಹೆಕೊಟ್ಟು ತನ್ನ ಹೆಂಡತಿ (ಆಂಡ್ರೊಮೆಕೆ) ಮತ್ತು ಪುಟ್ಟಮಗುವನ್ನು ಮನಕರಗುವಂಥ ಸನ್ನಿವೇಶವೊಂದರಲ್ಲಿ ಭೇಟಿ ಮಾಡಿ ಬೀಳ್ಕೊಂಡು ಸಮರಭೂಮಿಗೆ ತೆರಳುತ್ತಾನೆ. ಏಳನೆ ಕಾಂಡದಲ್ಲಿ ಟ್ರೋಜನ್ ವೀರ ಹೆಕ್ಟರನಿಗೂ ಗ್ರೀಕರ ಕಡೆಯ ಏಜ್ಯಾಕ್ಸ್‍ಗೂ ಕಾಳಗ ನಡೆಯುತ್ತದೆ. ದೇವತೆಗಳು ಯಾರೂ ಯುದ್ಧದಲ್ಲಿ ಭಾಗವಹಿಸಕೂಡದೆಂದು ಜ್ಯೂಸ್ ಅಪ್ಪಣೆ ಮಾಡುತ್ತಾನೆ (ಎಂಟನೆ ಕಾಂಡ). ಹೀರಾ ಮತ್ತು ಅಥೀನ ದೇವಿಯರು ಮೊದಮೊದಲು ಇದನ್ನು ಒಪ್ಪದೆ ಇದ್ದರೂ ಆಮೇಲೆ ಸುಮ್ಮನಾಗುತ್ತಾರೆ. ಯುದ್ಧ ಗ್ರೀಕರಿಗೆ ಪ್ರತಿಕೂಲವಾಗಿ ತಿರುಗುತ್ತದೆ. ತತ್ಕಾರಣ (ಒಂಬತ್ತನೆ ಕಾಂಡದಲ್ಲಿ) ಆಗಮೆಮ್ನಾನ್ ಬ್ರಿಸೇಯಿಸಳನ್ನು ಅಕಿಲೀಸಿಗೆ ಹಿಂದಕ್ಕೆ ಕೊಟ್ಟುಬಿಡುವುದಾಗಿಯೂ ಜೊತೆಗೆ ಬೇರೆ ಉಡುಗೊರೆಗಳನ್ನು ಕೊಡುವುದಾಗಿಯೂ ಹೇಳಿಕಳುಹಿಸುತ್ತಾನೆ. ಅಕಿಲೀಸ್ ಈ ಸಂಧಾನಕ್ಕೆ ಒಪ್ಪದೆ ಕೋಪದಿಂದ ಸಿಡಿದೆದ್ದು ಮಾರನೆಯ ದಿನವೇ ಸ್ವದೇಶಕ್ಕೆ ಮರುಳುವುದಾಗಿ ಶಪಥ ಮಾಡುತ್ತಾನೆ. ಹತ್ತನೆಯ ಕಾಂಡದಲ್ಲಿ ಒಡಿಸ್ಸಿಯಸ್ ಮತ್ತು ಡಿಯೊಮೀಡರು ಟ್ರಾಯ್ ಸೈನ್ಯವ್ಯೂಹದಲ್ಲಿ ಗೂಢಚರ್ಯೆ ನಡೆಸಿ ಆ ಕಡೆಯ ಕೆಲವರನ್ನು ಸಂಹರಿಸುತ್ತಾರೆ. ಹನ್ನೊಂದನೆ ಕಾಂಡದಲ್ಲಿ ಆಗಮೆಮ್ನಾನ್, ಒಡಿಸ್ಸಿಯಸ್, ಡಿಯೊಮೀಡಿಸ್ ಮೊದಲಾದವರು ಗಾಯಗೊಳ್ಳುತ್ತಾರೆ. ಅಕಿಲೀಸ್ ಯುದ್ಧ ಹೇಗೆ ಸಾಗುತ್ತದೆಯೆಂದು ನೋಡಿಬರಲು ತನ್ನ ಆಪ್ತ ಸ್ನೇಹಿತ ಪೆಟ್ರಾಕ್ಲಸನನ್ನು ಕಳುಹಿಸಿಕೊಡುತ್ತಾನೆ. ವೃದ್ಧ ನೆಸ್ಟರ್ ಅಕಿಲೀಸ್ ಯುದ್ಧಕ್ಕೆ ಬರುವಂತೆ ಮಾಡಬೇಕೆಂದೂ ಅದಿಲ್ಲದಿದ್ದರೆ ತನ್ನ ಇತರ ಯೋಧರೊಡನೆ ಪೆಟ್ರಾಕ್ಲಿಸನನ್ನಾದರೂ ಕಳುಹಿಸಿಕೊಡಬೇಕೆಂದೂ ಸೂಚಿಸುತ್ತಾನೆ. ಹನ್ನೆರಡರಿಂದ ಹದಿನಾರನೆ ಕಾಂಡಗಳವರೆಗೂ ಯುದ್ಧದಲ್ಲಿ ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಜಯ ಲಭಿಸುತ್ತದೆ. ಜ್ಯೂಸನ ಆಜ್ಞೆಗೆ ವಿರೋಧವಾಗಿಯೇ ದೇವತೆಗಳು ತಮತಮಗೆ ಬೇಕಾದವರಿಗೆ ಸಹಾಯವೆಸಗುತ್ತಾರೆ. ಕೊನೆಗೆ ಹೆಕ್ಟರ್ ನುಗ್ಗಿ ಬಂದು ಗ್ರೀಕರ ನಾವೆಗಳಿಗೆ ಬೆಂಕಿಯಿಡಲು ಯತ್ನಿಸುತ್ತಾನೆ. ಪೆಟ್ರಾಕಿಸ್ ಅಕಿಲೀಸನನ್ನು ಯುದ್ಧಕ್ಕೆ ಬರಬೇಕೆಂದು ಬೇಡಿಕೊಳ್ಳುತ್ತಾನೆ. ಅಕಿಲೀಸ್ ತಾನು ಹೋಗಲು ಈಗಲು ಇಷ್ಟಪಡುವುದಿಲ್ಲ. ತನ್ನ ಯುದ್ಧ ಕವಚವನ್ನು ಗೆಳೆಯನಿಗೆ ಕೊಟ್ಟು ಅದನ್ನು ಧರಿಸಿಹೋಗಿ ಟ್ರೋಜನರನ್ನು ಹಿಂದಕ್ಕೆ ಬರಬೇಕೆಂದು; ಪೆಟ್ರಾಕ್ಲಿಸನಿಗೆ ಹೇಳುತ್ತಾನೆ. ಅಕಿಲೀಸನ ಕವಚವನ್ನು ಧರಿಸಿ ಹೋಗುವ ಪೆಟ್ರಾಕ್ಲಿಸ್ ಟ್ರೋಜನರನ್ನು ಟ್ರಾಯ್ ಕೋಟಿಯವರೆಗೂ ಅಟ್ಟಿಸಿಕೊಂಡು ಹೋಗುತ್ತಾನೆ. ಅಲ್ಲಿ ಅವನು ಹೆಕ್ಟರಿನಿಂದ ಹತನಾಗುತ್ತಾನೆ. (16ನೆಯ ಕಾಂಡ). thumb|ಅಕಿಲೀಸ್ ಪ್ಯಾಟ್ರೋಕ್ಲಸ್ನ ಮರಣವನ್ನು ನೋಡಿ ದುಃಖಿಸುತ್ತಿರುವುದು;(1855) ರಷ್ಯಾದ ವಾಸ್ತವವಾದಿ ನಿಕೊಲಾಯ್ ಜಿ--Nikolay Ge 002 ಹದಿನೇಳನೆಯ ಕಾಂಡದಲ್ಲಿ ಹೆಕ್ಟರ್ ಅಕಿಲೀಸನ ಕವಚವನ್ನು ಕಿತ್ತಿಟ್ಟುಕೊಳ್ಳುತ್ತಾನೆ. ಅವನ ಮೃತ ದೇಹವನ್ನು ಮೆನೆಲಾಸ್ ಮೊದಲಾದವರು ಕಷ್ಟಪಟ್ಟು ಉಳಿಸಿಕೊಂಡು ಹೋಗುತ್ತಾರೆ. ಗೆಳೆಯನಿಗಾದ ದುರಂತವನ್ನು ಕಂಡು ಕೋಪೋದ್ರಕ್ತನಾಗುವ ಅಕಿಲೀಸ್ ಸೇಡು ತೀರಿಸಿಕೊಳ್ಳಲೆಂದು ಸಮರಕ್ಕಿಳಿಯುತ್ತಾನೆ. ಈಗ ಹೆಕ್ಟರನ ವಶವಾಗಿರುವ ಅವನ ಕವಚಕ್ಕೆ ಬದಲಾಗಿ ದೇವತೆಗಳ ಕಮ್ಮಾರ ಹೆಫೀಸ್ಟ್ಸ್ ಅವನಿಗೊಂದು ಹೊಸ ಗುರಾಣಿಯನ್ನೂ ಇತರ ಆಯುಧಗಳನ್ನೂ ಮಾಡಿಕೊಡುತ್ತಾನೆ. ಆ ಗುರಾಣಿಯ ಮೇಲೆಲ್ಲ ಗ್ರೀಕರ ಜೀವನದ ಚಿತ್ರಗಳು ವಿಪುಲವಾಗಿ ಚಿತ್ರಿತವಾಗಿರುತ್ತದೆ. ಅವನ್ನು ಧರಿಸಿ ಅಕಿಲೀಸ್ (ತಾನು ಅಲ್ಪಾಯು ಎಂಬ ಭವಿಷ್ಯವಾಣಿಯಿದ್ದರೂ ಲೆಕ್ಕಿಸದೆ) ಮುಂದೆ ನುಗ್ಗಿ ಯುದ್ಧದ ಕಣವನ್ನು ಹೊಕ್ಕು ಹೋರಾಡತೊಡಗುತ್ತಾನೆ. ಅವನಿಲ್ಲದೆ ಗ್ರೀಕರಿಗೆ ಜಯ ದೊರೆಯಕೂಡದೆಂದು ಜ್ಯೂಸ್ ಥೆಟಿಸಳಿಗಿತ್ತಿದ್ದ ಮಾತು ಈಗ ಸತ್ಯವಾಗುತ್ತದೆ. ಜ್ಯೂಸ್ ದೇವನೆ ಈಗ ಒಂದು ಪಕ್ಷ ವಹಿಸುವುದರಿಂದ ಇತರ ಸ್ತ್ರೀಪುರುಷ ದೇವತೆಗಳೆಲ್ಲ ತಮಗೆ ಬೇಕಾದ ಕಡೆ ಸೇರಿ ಬೇಕಾದವರಿಗೆ ಸಹಾಯ ಮಾಡುತ್ತಾರೆ (21ನೆಯ ಕಾಂಡ). ಅಕಿಲೀಸ್ ಟ್ರೋಜನ್ ಸೈನಿಕರನ್ನು ಮಟ್ಟಹಾಕುತ್ತಾನೆ (21ನೆಯ ಕಾಂಡ). ಇಪ್ಪತ್ತೆರಡನೆಯ ಕಾಂಡದಲ್ಲಿ ಹೆಕ್ಟರ್ ಟ್ರಾಯ್ ಕೋಟೆಯ ಗೋಡೆಯ ಬಳಿ ಕಾದು ನಿಂತಿರುತ್ತಾನೆ. ಅಲ್ಲಿಗೆ ಬರುವ ರೋಷಭೀಷಣನಾದ ಅಕಿಲೀಸನನ್ನು ನೋಡಿ ಅವನು ಕಾಲುಕೀಳುತ್ತಾನೆ. ಅದರಿಂದ ಪ್ರಯೋಜನವಾಗುವುದಿಲ್ಲ. ಕಡೆಗೆ ಆತ ಅಕಿಲೀಸನ ಆಯುಧಕ್ಕೆ ತುತ್ತಾಗಿ ಸತ್ತುಬೀಳುತ್ತಾನೆ. ಅವನ ಶವವನ್ನು ತನ್ನ ರಥದ ಗಾಲಿಗೆ ಕಟ್ಟಿ ಮಣ್ಣಿನಲ್ಲಿ ಎಳೆದುಕೊಂಡು ಅಕಿಲೀಸ್ ತನ್ನ ಬಿಡಾರಕ್ಕೆ ಧಾವಿಸುತ್ತಾನೆ. ಹೆಕ್ಟರನ ನೆಂಟರಿಷ್ಟರ ದುಃಖ ಉಕ್ಕಿಬರುತ್ತದೆ. ಇಪ್ಪತ್ತಮೂರನೆಯ ಕಾಂಡದಲ್ಲಿ ಅಕಿಲೀಸ್ ಪೆಟ್ರಾಕ್ಲಿಸನ ಮೃತದೇಹದ ದಹನ ಮಾಡುತ್ತಾನೆ. ಅದರೊಡನೆ ಹನ್ನೆರಡು ಮಂದಿ ಟ್ರೋಜನ್ ಯುವಕರನ್ನು ಸುಡುತ್ತಾನೆ. ಆದರೆ (24ನೆ ಕಾಂಡ) ಹೆಕ್ಟರನ ದೇಹಕ್ಕೆ ಅವನು ಅತ್ಯಂತ ಅಗೌರವವನ್ನು ತೋರಿಸಲು ಜ್ಯೂಸ್ ಥೆಟೆಸಳನ್ನು ಕಳುಹಿಸಿ ಹೀಗೆ ಮಾಡಿದರೆ ಅವನು ದೇವತೆಗಳ ಕೋಪಕ್ಕೆ ಪಾತ್ರನಾಗಬೇಕಾಗುವುದೆಂದು ಹೇಳಿಕಳಿಸುತ್ತಾನೆ. ಹೆಕ್ಟರನ ಮುದಿ ತಂದೆ ಪ್ರಿಯಮ್ ಮಗನ ದೇಹವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ರಾತ್ರಿಯ ಕತ್ತಲಲ್ಲಿ ಅಕಿಲೀಸನ ಬಿಡಾರಕ್ಕೆ ಬರುತ್ತಾನೆ. ಅವನ್ನು ಕಂಡು ಮರುಕದಿಂದ ಕರಗುವ ಅಕಿಲೀಸ್ ಹೆಕ್ಟರನ ದೇಹವನ್ನು ಹಿಂದಕ್ಕೆ ಕೊಡಲು ಒಪ್ಪುವುದಲ್ಲದೆ ಹೆಕ್ಟರನ ಉತ್ತರಕ್ರಿಯೆಗಳೆಂದು ಕೆಲದಿನ ಯುದ್ಧ ನಿಲ್ಲಿಸುತ್ತಾನೆ. ಹೇಗೆ ಅಕಿಲೀಸನ ಹಿರಿಮೆ ಸ್ಥಾಪಿತವಾಗುತ್ತದೆ. ಇದು ಇಲಿಯಡ್ ಕಾವ್ಯದ ಕಥೆ. ಕಾವ್ಯ ಮತ್ತು ವಾಸ್ತವ ಇಲಿಯಡ್ ಎಂಬುದು ಟ್ರಾಯ್‍ನ ಇನ್ನೊಂದು ಹೆಸರಾದ ಇಲಿಯಮ್‍ನಿಂದ ಬಂದುದು (ಇಲ್ಲಸ್ ಎಂಬುವನು ಅದರ ಸ್ಥಾಪಕನೆಂಬ ನಂಬಿಕೆಯಿತ್ತು. ಇಲಿಯಮ್‍ನಲ್ಲಿ ಅವನ ಹೆಸರಿನ ಸೂಚನೆಯಿದೆ). ಟ್ರೋಜನ್ ಯುದ್ಧ ವಾಸ್ತವವಾಗಿ ನಡೆಯಿತೆಂಬುದಕ್ಕೆ ಭೂ ಸಂಶೋಧಕರಿಗೆ ರುಜುವಾತು ಸಿಕ್ಕಿದೆ. ಕ್ರಿ.ಪೂ. 12ನೆಯ ಶತಮಾನದಲ್ಲಿ ಗ್ರೀಕರಿಗೂ ಟ್ರಾಯ್ ಜನಕ್ಕೂ ಒಂದು ನಿಜವಾದ ಯುದ್ಧ ನಡೆದಿರಬೇಕು;. ಅದರ ಯೋಧರ ಮತ್ತು ವೀರರ ವಿಚಾರವಾಗಿ ಅನೇಕಾನೇಕ ಕಥೆಗಳು ಹುಟ್ಟಿಕೊಂಡು ಬೆಳೆದಿರಬೇಕು. ಕ್ರಿ. ಪೂ. ಎಂಟನೆ ಶತಮಾನದ ಹೊತ್ತಿಗೆ ಇಂಥ ನೂರಾರು ಕಥೆ, ಕವನಗಳು ಜನಗಳಲ್ಲಿ ಬಾಯಿಂದ ಬಾಯಿಗೆ ಹಬ್ಬಿ ಪ್ರಚಾರವಾಗಿದ್ದಿರಬೇಕು. ಹೋಮರ್ ಎಂಬ ಕವಿ ಅವನ್ನು ಸಂಗ್ರಹಿಸಿ ಅವಕ್ಕೆ ಪರಸ್ಪರ ಸಂಬಂಧವನ್ನು ಕಲ್ಪಿಸಿ ಅವನ್ನು ಜೋಡಿಸಿ ಪರಿಷ್ಕರಿಸಿ ಇಲಿಯಡ್ ಕಾವ್ಯವಾಗಿ ಹೆಣೆದಿರಬೇಕು. ಕಾವ್ಯದ ವಸ್ತು, ವಿಮರ್ಶೆ,ಮೌಲ್ಯಾಂಕನ ಈ ಮಹಾಕಾವ್ಯದ ಪ್ರಾರಂಭದ ಪಂಕ್ತಿಗಳೇ ಹೇಳುವಂತೆ ಇದರ ವಸ್ತು 'ಅಕಿಲೀಸನ ಕ್ರೋಧ. ಸತ್ತ ಮಹಾವೀರ ಹೆಕ್ಕಡನ ಶವವನ್ನು ರಥಕ್ಕೆ ಕಟ್ಟಿ ಪ್ರತಿ ಬೆಳಗೂ ಅಕಿಲೀಸ್ ಅದನ್ನು ಮಣ್ಣಿನಲ್ಲಿ ಎಳೆಯುತ್ತಾನೆ. ಕ್ರೋಧವು ಮನುಷ್ಯನನ್ನು ಹೇಗೆ ಮೃಗವನ್ನಾಗಿ ಮಾಡಿ ಬಿಡುವುದೆಂಬ ಚಿತ್ರ ಇಲ್ಲಿದೆ. ಪ್ರಿಯತಮೆ ಅಕಿಲೀಸನ ಗುಡಾರಕ್ಕೆ ಬಂದು ಮಗನ ದೇಹವನ್ನು ಬೇಡುವುದು ಜಗತ್ತಿನ ಸಾಹಿತ್ಯದ ಮರೆಯಲಾಗದ ದೃಶ್ಯಗಳಲ್ಲಿ ಒಂದು. ಅಕಿಲೀಸ್ ಕರಗಿ ಹೋಗಿ, ಪಶುವಾಗಿದ್ದವನು ಮತ್ತೆ ಮನುಷ್ಯನಾಗುತ್ತಾನೆ. ಹೆಕ್ಟರ್ ತನ್ನ ಹೆಂಡತಿಯನ್ನೂ ಮಗುವನ್ನು ನೋಡುವುದು, ಹೆಲೆನ್ ಹೆಕ್ಟರನ ಶವದ ಬಳಿ ದುಃಖಿಸುವುದು ಭಾವಾತಿರೇಕವಿಲ್ಲದೆ ಹೃದಯವನ್ನು ಮುಟ್ಟುವ ದೃಶ್ಯಗಳು. ಈ ಮಹಾಕಾವ್ಯದಲ್ಲಿ ದೇವತೆಗಳ ಚಿತ್ರಣವೂ ಇದೆ. ಬಹುಮಟ್ಟಿಗೆ, ಈ ದೇವತೆಗಳಿಗಿಂತ ಬಹುಮಂದಿ ಮನುಷ್ಯನೇ ಉದಾತ್ತರಾಗಿ, ಗೌರವಾರ್ಹರಾಗಿ ಕಾಣುತ್ತಾರೆ. ದೇವತೆಗಳು ಅಮರರು, ಶಕ್ತಿಶಾಲಿಗಳು, ಅದರಿಂದ ಮನುಷ್ಯರು ಅವರಿಗೆ ತಲೆ ಬಾಗಿ ನಡೆಯಬೇಕು. ಇಲ್ಲಿ ಮನುಷ್ಯನ ಜಗತ್ತಿನ ಅತ್ಯುನ್ನತ ಮೌಲ್ಯಗಳು ಸಾಹಸ ಮತ್ತು ವೀರನೆಂಬ ಶುಭ್ರ ಯಶಸ್ಸು ಇಲ್ಲಿ ಕವಿ ಸುಮಾರು ಕ್ರಿ.ಪೂ. 11-12ನೆಯ ಶತಮಾನದ ಕಂಚಿನ ಯುಗವನ್ನು ಚಿತ್ರಿಸುತ್ತಿದ್ದಾನೆ, ಇದೊಂದು ವೀರಯುಗ. ಹೋಮರನ ಮಹಾಕಾವ್ಯಗಳು ಯೂರೋಪಿನ ಮಹಾಕಾವ್ಯ ಪರಂಪರೆಯನ್ನು ಪ್ರಾರಂಭಿಸಿದವು. ಮಹಾಕಾವ್ಯವು ತನ್ನ (ನಾಯಕನ) ಯುಗದ ಮೌಲ್ಯಗಳ ಸಾಕಾರಮೂರ್ತಿಯಾದ ಅಪ್ರತಿಮ ವೀರನ ಸುತ್ತ ಬೆಳೆದ ದೀರ್ಘ ಕಥೆಯಾಯಿತು, ಮಾನವಾತೀತಿ ಜಗತ್ತು ಇದರಲ್ಲಿ ಸೇರಿಕೊಂಡಿತು, ಇಡೀ ಕಾವ್ಯ ಒಂದು ಮಹತ್ತರ ಘಟನೆಯ ಸುತ್ತ ರೂಪ ತಾಳಿತು, ಹಿನ್ನೋಟದ ಕಥನ (ರಿಟ್ರಾಸ್ಪೆಕ್ಟಿನ್ ನ್ಯಾರೇಷನ್) ಕಥನ ತಂತ್ರದ ಭಾಗವಾಯಿತು. ಮಹೋಪಮೆಯನ್ನು ಮೊದಲು ಬಳಸಿದವನು ಹೋಮರ್, ಆದುದರಿಂದ ಇದಕ್ಕೆ 'ಹೋಮೆರಿಕ್ ಸಿಮಿಲಿ ಎಂದೂ ಹೆಸರು. ಪಾಶ್ಚಾತ್ಯ ವಿಮರ್ಶಕರು ಮಹಾಕಾವ್ಯಗಳಲ್ಲಿ ಎರಡು ಬಗೆ ಎನ್ನುತ್ತಾರೆ. ಮೊದಲನೆಯದು 'ಪ್ರೈಮರಿ ಎಪಿಕ್. ಇದಕ್ಕೆ ಮಾದರಿ ಇಲ್ಲಿ, ಇದೇ ಮುಂದಿನ ಮಹಾಕಾವ್ಯಗಳಿಗೆ ಮಾದರಿ, ಮಹಾಕಾವ್ಯಗಳ ಪರಂಪರೆಯನ್ನು ಪ್ರಾರಂಭಿಸುತ್ತದೆ. ಇದು 'ಪ್ರಿಮಿಟಿನ್ ಎಪಿಕ್ ಸರ್ಕಾರಿ ಹೊರವಲಯ ಮುದ್ರಣಾಲಯ ಹೌದು. ಅನಂತರ ಬರುವವು 'ಸೆರೆಂಡಾ ಎಪಿಕ್‍ಗಳು, ನಾಗರೀಕತೆಯ ಮಹಾಕಾವ್ಯಗಳು. ಇಲಿಯಡ್ ಪ್ರೈಮರಿ ಎಪಿಕ್; ಪಾಶ್ಚಾತ್ಯ ಮಹಾಕಾವ್ಯ ಪರಂಪರೆಯ ಉದ್ಘಾಟನೆಯನ್ನು ಮಾಡಿತು ಹೋಮರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂಬ ವಾದವೂ ಇದೆ. ಗ್ರೀಕ್ ಭಾಷೆಯಲ್ಲಿ ಆ ಮಾತಿಗೆ ಸಂಗ್ರಾಹಕ ಎಂದು ಅರ್ಥ. ಆದಕಾರಣ ಹಲವರು ರಚಿಸಿದ ಕವಿತೆಗಳನ್ನು ಯಾರೋ ಸಂಗ್ರಹಿಸಿ ಸಂಪಾದಿಸಬೇಕು. ಅವನಿಗೆ ಹೋಮರ್ ಎಂಬ ಅನ್ವರ್ಥನಾಮ ಬಂದಿರಬೇಕು ಎಂದು ಕೆಲವರು ವಿದ್ವಾಂಸರು ಹೇಳುತ್ತಾರೆ. ಆದರೆ ಹೋಮರ್ ಕವಿ ತಮ್ಮವನು, ತಮ್ಮ ಮಡಿಲಲ್ಲಿ ಹುಟ್ಟಿ ಬೆಳೆದವನು ಎಂದು ಈಗಲೂ ಗ್ರೀಕ್ ಪಟ್ಟಣಗಳು ಹೇಳಿಕೊಳ್ಳುತ್ತಿದ್ದುದನ್ನೂ ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಂಡಿರಬೇಕು. ಒಬ್ಬನೇ ರಚಿಸಿರಲಿ ಅನೇಕರ ಕೈವಾಡ ಅದರಲ್ಲಿರಲಿ, ಈ ಕಾವ್ಯದಲ್ಲಿ ಎದ್ದು ಕಾಣುವ ಕಲ್ಪನೆಯ ಐಕ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಇದರ ಸರಳತೆ, ನೇರವಾದ ಕಥಾನಿರೂಪಣೆ, ಯುದ್ಧ ಪ್ರಸಂಗಗಳ ವರ್ಣನೆಗಳು, ಪ್ರಾಚೀನ ಗ್ರೀಕರ ಜನಜೀವನದ ಚಿತ್ರಗಳು, ಬಗೆಬಗೆಯ ಪಾತ್ರಗಳು, ಅಲ್ಲಲ್ಲಿ ಬರುವ ತಿಳಿ ಹಾಸ್ಯ, ಮನಕರಗಿಸುವ ದೃಶ್ಯಗಳು, ಮಾನವಸ್ವಭಾವದ ಅರಿವು, ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕ್ರೋಧದ ದುಷ್ಪರಿಣಾಮದ ಸೂಚನೆ-ಇವೇ ಮೊದಲಾದ ಅಂಶಗಳಿಗೆ ಈ ಕೃತಿ ಹೆಸರಾಂತಿದೆ. ಇಲಿಯಡ್ ಕಾವ್ಯ ಗ್ರೀಕ್ ಮಹಾರುದ್ರ ನಾಟಕಗಳಿಗೆ ವಸ್ತುವನ್ನೊದಗಿಸಿತಲ್ಲದೆ ಯೂರೋಪಿನ ಸಾಹಿತ್ಯದಲ್ಲಿ ಮುಂದೆ ಬಂದ ವರ್ಜಿಲ್, ಡಾಂಟೆ, ಟ್ಯಾಸೊ, ಮಿಲ್ಟನ್ ಮೊದಲಾದ ಕವಿಗಳ ಮಹಾಕಾವ್ಯಗಳಿಗೆ ಮಾದರಿಯಾಯಿತು. ಇದರ ರೂಪಲಕ್ಷಣಗಳನೇಕವನ್ನು ಆ ಕವಿಗಳು ಅನುಕರಿಸಿದ್ದಾರೆ. ಅದರ ಛಂದಸ್ಸು ಕೂಡ (ಅಲ್ಪ ಸ್ವಲ್ಪ ಬದಲಾವಣೆಗಳೊಡನೆ) ಐರೋಪ್ಯ ಮಹಾಕಾವ್ಯಗಳ ಕವಿಪ್ರಿಯ ಛಂದಸ್ಸಾಗಿ ಉಳಿದುಬಂದಿದೆ. Homer's Iliad, Classical Technology Center.ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಇಲಿಯಡ್ ನೋಡಿ ಹೋಮರ್ ಒಡಿಸ್ಸಿ ಉಲ್ಲೇಖ ವರ್ಗ:ಸಾಹಿತ್ಯ ವರ್ಗ:ಇತಿಹಾಸ ವರ್ಗ:ಮಹಾಕಾವ್ಯಗಳು
ಭಗವದ್ಗೀತೆ
https://kn.wikipedia.org/wiki/ಭಗವದ್ಗೀತೆ
thumb|ಭಗವದ್ಗೀತೆ (ಸಂಸ್ಕೃತ, ಕನ್ನಡ, ಇಂಗ್ಲೀಷ್ ಅನುವಾದ), ವೆಸ್ಲಿಯನ್ ಮಿಶನ್ ಪ್ರೆಸ್, ಬೆಂಗಳೂರು, 1849 ಶ್ರೀ ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಗೀತೆಯನ್ನು ಪಾಂಡವ ರಾಜಕುಮಾರ ಅರ್ಜುನ ಮತ್ತು ಅವರ ಮಾರ್ಗದರ್ಶಿ ಮತ್ತು ರಥ ಸಾರಥಿ ಶ್ರೀ ಕೃಷ್ಣನ ನಡುವಿನ ಸಂಭಾಷಣೆಯ ನಿರೂಪಣಾ ಚೌಕಟ್ಟಿನಲ್ಲಿ ಹೊಂದಿಸಲಾಗಿದೆ. ಪಾಂಡವರು ಮತ್ತು ಕೌರವರ ನಡುವಿನ ಧರ್ಮ ಯುಧಾ (ನೀತಿವಂತ ಯುದ್ಧ) ದ ಆರಂಭದಲ್ಲಿ, ಅರ್ಜುನನು ತನ್ನ ಸ್ವಂತ ರಕ್ತಸಂಬಂಧಿಗಳ ವಿರುದ್ಧದ ಯುದ್ಧದಲ್ಲಿ ಯುದ್ಧವು ಉಂಟುಮಾಡುವ ಹಿಂಸೆ ಮತ್ತು ಸಾವಿನ ಬಗ್ಗೆ ನೈತಿಕ ಸಂದಿಗ್ಧತೆ ಮತ್ತು ಹತಾಶೆಯಿಂದ ತುಂಬಿರುತ್ತಾನೆ. ಅವರು ತ್ಯಜಿಸಬೇಕೆ ಎಂದು ಅವರು ಆಶ್ಚರ್ಯ ಪಡುತ್ತಾರೆ ಮತ್ತು ಕೃಷ್ಣನ ಸಲಹೆಯನ್ನು ಹುಡುಕುತ್ತಾರೆ, ಅವರ ಉತ್ತರಗಳು ಮತ್ತು ಪ್ರವಚನವು ಭಗವದ್ಗೀತೆಯನ್ನು ಒಳಗೊಂಡಿದೆ. "ನಿಸ್ವಾರ್ಥ ಕ್ರಿಯೆಯ" ಮೂಲಕ "ಧರ್ಮವನ್ನು ಎತ್ತಿಹಿಡಿಯುವ ತನ್ನ ಕ್ಷತ್ರಿಯ (ಯೋಧ) ಕರ್ತವ್ಯವನ್ನು ಪೂರೈಸಲು" ಕೃಷ್ಣನು ಅರ್ಜುನನಿಗೆ ಸಲಹೆ ನೀಡುತ್ತಾನೆ. ಅರ್ಜುನನು ಎದುರಿಸುತ್ತಿರುವ ಯುದ್ಧವನ್ನು ಮೀರಿದ ಸಂದಿಗ್ಧತೆಗಳು ಮತ್ತು ತಾತ್ವಿಕ ಸಮಸ್ಯೆಗಳು. ಪಂಚಮವೇದ ಭಗವದ್ಗೀತೆ ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದ ೨೩ ನೇ ಅಧ್ಯಾಯದಿಂದ ೪೦ ನೇ ಅಧ್ಯಾಯದ ನಡುವೆ ಬರುವ ಭಾಗ. ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಸುಮಾರು ೭೦೦ ಶ್ಲೋಕಗಳ ಭಗವದ್ಗೀತೆ, ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ಕೆಲವೊಮ್ಮೆ ಯೋಗೋಪನಿಷತ್ ಅಥವಾ ಗೀತೋಪನಿಷತ್ ಪಂಚಮವೇದವೆಂದೂ ಭಗವದ್ಗೀತೆಯನ್ನು ಕರೆಯಲಾಗುತ್ತದೆ. ಗೀತೋಪದೇಶ 'ಭಗವದ್ಗೀತೆ' ಆರಂಭವಾಗುವುದು ಮಹಾಭಾರತ ಯುದ್ಧದ ಆರಂಭವಾಗುವ ಮೊದಲು. ತಮ್ಮ ಸೈನ್ಯಕ್ಕೆ ರಣಭೂಮಿಯಲ್ಲಿ ಇದಿರಾದ ಕೌರವರ ಸೇನೆಯಲ್ಲಿ ತನ್ನ ಬಹಳಷ್ಟು ಬಂಧುಗಳನ್ನು ಕಂಡು ಅರ್ಜುನ ಉತ್ಸಾಹ ಕಳೆದುಕೊಂಡು ಮಾರ್ಗದರ್ಶನಕ್ಕಾಗಿ ಕೃಷ್ಣನತ್ತ ತಿರುಗಿದಾಗ. ಆತ್ಮದ ಅಮರತ್ವದ ಬಗ್ಗೆ ಪ್ರಸ್ತಾಪಿಸುತ್ತ ಕೃಷ್ಣ 'ಗೀತೋಪದೇಶ'ವನ್ನು ಆರಂಭಿಸುತ್ತಾನೆ. ಇದರ ನಂತರ ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ವಿವರಿಸುತ್ತಾನೆ. ಇದನ್ನು ಶ್ರೀಕೃಷ್ಣನು ಅರ್ಜುನನಿಗೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಏಕಾದಶಿಯ ದಿನ ಉಪದೇಶಿಸಿದನು. ಆದುದರಿಂದ ಇದನ್ನು ಗೀತಾ ಜಯಂತಿ ಅಂತ ಕರೆಯಲಾಗಿದೆ. ಮಹಾಭಾರತ ಮುಲ ಪಾಠ. ಭಗವದ್ಗೀತೆ ಗೀತಾಪರೆಸ್ ಘೋರಕಪುರ. ಆತಿಥ್ಯೆ ಭಾರತದ ೧೪ನೇ ಪ್ರಧಾನಿ ನರೇಂದ್ರ ಮೋದಿ ಅವರು ಭಗವದ್ಗೀತೆಯನ್ನು "ವಿಶ್ವದ ಅತಿದೊಡ್ಡ ಕೊಡುಗೆ" ಎಂದು ಕರೆದರು. ಮೋದಿ ಅದರ ಯು.ಎಸ್. ಭೇಟಿಯ ಸಂದರ್ಭದಲ್ಲಿ ೨೦೧೪ ರಲ್ಲಿ ಅಂದಿನ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾಗೆ ನೀಡಿದರು. ೧೮ನೇ ಶತಮಾನದ ಆರಂಭದಲ್ಲಿ ಪಾಶ್ಚಿಮಾತ್ಯ ವಿದ್ವಾಂಸರು ಅದರ ಅನುವಾದ ಮತ್ತು ಅಧ್ಯಯನದೊಂದಿಗೆ ಭಗವದ್ಗೀತೆ ಹೆಚ್ಚು ಮೆಚ್ಚುಗೆ ಮತ್ತು ಜನಪ್ರಿಯತೆಯನ್ನು ಗಳಿಸಿತು. ಭಾರತೀಯ ಇತಿಹಾಸಕಾರ ಮತ್ತು ಬರಹಗಾರ ಖುಷ್ವಂತ್ ಸಿಂಗ್ ಅವರ ಪ್ರಕಾರ, ರುಡ್ಯಾರ್ಡ್ ಕಿಪ್ಲಿಂಗ್ ಅವರ ಪ್ರಸಿದ್ಧ ಕವಿತೆ "ಇಫ್" " ಇಂಗ್ಲಿಷ್ನಲ್ಲಿ ದಿ ಗೀತಾ ಸಂದೇಶದ ಸಾರ". ಹೊಗಳಿಕೆ ಮತ್ತು ಜನಪ್ರಿಯತೆ ಭಗವದ್ಗೀತೆಯನ್ನು ಮಹಾತ್ಮ ಗಾಂಧಿ ಮತ್ತು ಸರ್ವೆಪಲ್ಲಿ ರಾಧಾಕೃಷ್ಣನ್ ಸೇರಿದಂತೆ ಪ್ರಮುಖ ಭಾರತೀಯರು ಮಾತ್ರವಲ್ಲದೆ ಆಲ್ಡಸ್ ಹಕ್ಸ್ಲೆ, ಹೆನ್ರಿ ಡೇವಿಡ್ ಥೋರೊ, ಜೆ. ರಾಬರ್ಟ್ ಒಪೆನ್ಹೈಮರ್, ರಾಲ್ಫ್ ವಾಲ್ಡೋ ಎಮರ್ಸನ್, ಕಾರ್ಲ್ ಜಂಗ್, ಹರ್ಮನ್ ಹೆಸ್ಸೆ ಮತ್ತು ಬೆಲೆಂಟ್ ಎಸೆವಿಟ್. ಇವನ್ನೂ ನೋಡಿ ಕನ್ನಡ ವಿಕಿಸೊರ್ಸನಲ್ಲಿ ಭಗವದ್ಗೀತೆ ಭಗವದ್ಗೀತಾ ತಾತ್ಪರ್ಯ ಧ್ಯಾನ ಶ್ಲೋಕಗಳು ಉಲ್ಲೇಖಗಳು ವರ್ಗ:ಧಾರ್ಮಿಕ ಗ್ರಂಥಗಳು ವರ್ಗ:ಹಿಂದೂ ಧರ್ಮ ವರ್ಗ:ಮಹಾಭಾರತ
ಪಾಂಡವರು
https://kn.wikipedia.org/wiki/ಪಾಂಡವರು
thumb|ದ್ರೌಪದಿ ಮತ್ತು ಪಾಂಡವರು ಪಾಂಡವರು ಮಹಾಭಾರತದ ಮಹಾಕಾವ್ಯದ ಪ್ರಮುಖ ಪಾತ್ರಗಳಾದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐದು ಸಹೋದರರನ್ನು ಉಲ್ಲೇಖಿಸಲಾಗಿದೆ. ಅವರನ್ನು ಕುರು ರಾಜ ಪಾಂಡುವಿನ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನ ಮಕ್ಕಳನ್ನು ಹೊಂದಲು ಅಸಮರ್ಥತೆಯಿಂದಾಗಿ ಕುಂತಿ-ಮಾದ್ರಿಯರು ಬೇರೆ ಬೇರೆ ದೇವರುಗಳಿಂದ ಪಾಂಡವರನ್ನು ಪಡೆದರು. ಪಾಂಡವರು ದ್ರೌಪದಿ ಎಂಬ ಹೆಂಡತಿಯನ್ನು ಹಂಚಿಕೊಂಡರು. ಪಾಂಡವರು ತಮ್ಮ ಸೋದರಸಂಬಂಧಿಗಳಾದ ಕೌರವರ ವಿರುದ್ಧ (ದುರ್ಯೋಧನ ಮತ್ತು ಆತನ ಸಹೋದರರು) ಯುದ್ಧ ಮಾಡಿದರು. ಇದನ್ನು ಕುರುಕ್ಷೇತ್ರ ಯುದ್ಧ ಎಂದು ಕರೆಯಲಾಯಿತು. ಯುದ್ಧದಲ್ಲಿ ಪಾಂಡವರು ಗೆದ್ದರು ಮತ್ತು ಕೌರವರು ಸೋತರು. ಪಾಂಡವರನ್ನು ಕುರು ರಾಜ ಪಾಂಡು ಮತ್ತು ಕುಂತಿಯವರ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನಿಂದ ಸ್ವಾಭಾವಿಕವಾಗಿ ಮಕ್ಕಳನ್ನು ಗರ್ಭಧರಿಸಲು ಅಸಮರ್ಥತೆಯಿಂದಾಗಿ ಬೇರೆ ಬೇರೆ ದೇವತೆಗಳಿಂದ ಜನಿಸಿದರು. ಪಾಂಡುವಿಗೆ ಋಷಿಯು ನೀಡಿದ ಶಾಪದಿಂದಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಪಾಂಡವರು ಕುಂತಿಗೆ ನೀಡಿದ ಮಂತ್ರವನ್ನು ವರದಾನವಾಗಿ ಬಳಸಿ ಜನಿಸಿದರು. ಯುಧಿಷ್ಠಿರನು ಧರ್ಮ ಮತ್ತು ಸಾವಿನ ದೇವರು ಯಮ, ಗಾಳಿ ಮತ್ತು ಶಕ್ತಿಯ ದೇವರು ವಾಯುವಿನಿಂದ ಭೀಮ, ಬೆಳಕಿನ ದೇವರು ಮತ್ತು ದೇವತೆಗಳ ರಾಜನಾದ ಇಂದ್ರನಿಂದ ಅರ್ಜುನ, ಮತ್ತು ನಕುಲ ಮತ್ತು ಸಹದೇವರು ಅಶ್ವಿನೀ ದೇವತೆಗಳಿಂದ ಜನಿಸಿದರು. ಹೆಚ್ಚುವರಿಯಾಗಿ, ಕುಂತಿ ಕರ್ಣನನ್ನು ತನ್ನ ಮೊದಲ ಮಗುವಾಗಿ ಜನ್ಮ ನೀಡಿದಳು, ಅವನಿಗೆ ಸೂರ್ಯದೇವನು ತಂದೆಯಾದನು. ಕುಂತಿಯು ವರನ ಸಿಂಧುತ್ವವನ್ನು ಪರೀಕ್ಷಿಸುವಾಗ ಮದುವೆಗೆ ಮುಂಚೆ ಕರ್ಣನನ್ನು ಗರ್ಭಧರಿಸಿದಳು ಮತ್ತು ವಿವಾಹದ ಮೊದಲೇ ಹುಟ್ಟಿದ ಕಾರಣ ಕರ್ಣನನ್ನು ಕೈಬಿಟ್ಟಳು. ಇದು ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಮತ್ತಷ್ಟು ಸಂಘರ್ಷವನ್ನು ಸೃಷ್ಟಿಸಿತು, ಏಕೆಂದರೆ ಕರ್ಣನು ನಂತರ ಪಾಂಡವರ ವಿರುದ್ಧ ಕೌರವರ ಸೈನ್ಯವನ್ನು ಮುನ್ನಡೆಸಿದನು. ಧೃತರಾಷ್ಟ್ರನ ಆಜ್ಞೆಯಿಂದಾಗಿ, ಪಾಂಡವರನ್ನು ಗಡಿಪಾರು ಮಾಡಲಾಯಿತು. ಅವರನ್ನು ಬರಡು ಭೂಮಿಗೆ ಓಡಿಸಲಾಯಿತು, ಆದರೆ ಅವರು ಅದನ್ನು ಭವ್ಯವಾದ ಇಂದ್ರಪ್ರಸ್ಥ ನಗರವಾಗಿ ಪರಿವರ್ತಿಸಿದರು. ಹಗೆತನದ ದುರ್ಯೋಧನನು ಯುಧಿಷ್ಠಿರನನ್ನು ದಾಳ ಆಟದಲ್ಲಿ ಜೂಜು ಆಡಲು ಆಹ್ವಾನಿಸಿದನು. ಇದು ಮಹಾಕಾವ್ಯದ ಮಹತ್ವದ ತಿರುವುಗಳಲ್ಲಿ ಒಂದಾಗಿದೆ. ಯುಧಿಷ್ಠಿರನು ತನ್ನ ಜೂಜಿನ ಚಟದಿಂದಾಗಿ ತನ್ನ ಸಂಪತ್ತು, ಸಾಮ್ರಾಜ್ಯ ಮತ್ತು ಆಸ್ತಿಗಳನ್ನು ಕಳೆದುಕೊಂಡನು, ಇದು ಶಕುನಿಯು ದಾಳದ ಆಟದಲ್ಲಿ ಮೋಸ ಮಾಡಿದ್ದು ಕಾರಣವಾಯಿತು. ಆದ್ದರಿಂದ, ಪಾಂಡವರನ್ನು ಹದಿಮೂರು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಲಾಯಿತು. ಹನ್ನೆರಡು ವರ್ಷಗಳ ವನವಾಸವನ್ನು ಕಳೆದ ನಂತರ, ಅವರು ಮತ್ಸ್ಯ ಸಾಮ್ರಾಜ್ಯದಲ್ಲಿ ಅಜ್ಞಾತ ವಾಸದಲ್ಲಿ ವಾಸಿಸುತ್ತಿದ್ದರು. ಅನಂತರ ಪಾಂಡವರು ಸೈನ್ಯವನ್ನು ಸಂಗ್ರಹಿಸಿ ಮತ್ತು ಕೌರವರನ್ನು ಎದುರಿಸಲು ಮತ್ತು ಅಂತಿಮವಾಗಿ ಸೋಲಿಸಲು ಕೃಷ್ಣನ ಮಾರ್ಗದರ್ಶನವನ್ನು ಪಡೆದರು. ಪಾಂಡವರು ಹಸ್ತಿನಾಪುರ ಮತ್ತು ಕುರು ಸಾಮ್ರಾಜ್ಯದ ರಾಜನ ಸ್ಥಾನಮಾನವನ್ನು ಮರಳಿ ಪಡೆದರು. ಆದಾಗ್ಯೂ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅವರು ಮಾಡಿದ ತ್ಯಾಗದಿಂದಾಗಿ, ಮತ್ತು ತಮ್ಮ ಅಂತಿಮ ತಪಸ್ಸನ್ನು ಬಳಿಸಿಕೊಳ್ಳುವ ಮೂಲಕ ಮತ್ತು ಅಂತಿಮವಾಗಿ ಹಿಮಾಲಯಕ್ಕೆ ನಡೆದರು. ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ. ಕುಂತಿಯ ಮಕ್ಕಳು:- ಯುಧಿಷ್ಠಿರ (ಯಮನಿಂದ) ಭೀಮ (ವಾಯುವಿನಿಂದ) ಅರ್ಜುನ (ಇಂದ್ರನಿಂದ) ಮಾದ್ರಿಯ ಮಕ್ಕಳು:- (ಅವಳಿಗಳು) ನಕುಲ (ಅಶ್ವಿನಿ ದೇವತೆಗಳಿಂದ) ಸಹದೇವ (ಅಶ್ವಿನಿ ದೇವತೆಗಳಿಂದ) ಪಾಂಡವರ ಪತ್ನಿ ದ್ರೌಪದಿ. ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರದ ಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ. ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ. ಬಾಲ್ಯ ಪಾಂಡವರು ಚಂದ್ರವಂಶದ ರಾಜ ಪಾಂಡುವಿನ ಪುತ್ರರೇ ಪಾಂಡವರೆಂದು ಪ್ರಖ್ಯಾತರು. ಇವರು ಐವರು. ಅಜಾತಶತ್ರುವೆಂದು ಹೆಸರುಗಳಿಸಿದ ಧರ್ಮರಾಜ (ಯುಧಿಷ್ಠಿರ) ಮಹಾಸಾಹಸಿಯಾದ ಭೀಮ, ಅಪ್ರತಿಮ ಬಿಲ್ಗಾರನಾದ ಅರ್ಜುನ ಈ ಮೂವರು ಅನುಕ್ರಮವಾಗಿ ಯಮಧರ್ಮ, ವಾಯುದೇವ, ದೇವೇಂದ್ರ ಈ ದೇವತೆಗಳ ವರದಿಂದ ಹಿರಿಯರಾಣಿ ಕುಂತಿಗೆ ಕುಮಾರರಾಗಿ ಜನಿಸಿದರೆ, ನಕುಲ ಮತ್ತು ದಿವ್ಯಜ್ಞಾನಿ ಸಹದೇವರು ಅಶ್ವಿನಿದೇವತೆಗಳ ಕೃಪೆಯಿಂದ ಕಿರಿಯರಾಣಿ ಮಾದ್ರಿಯ ಪುತ್ರರಾಗಿ ಹುಟ್ಟಿದರು. ತಂದೆ ಪಾಂಡುರಾಜ, ಶತಶೃಂಗ ಪರ್ವತದಲ್ಲಿ ವಿರಕ್ತ ಜೀವನ ಸಾಗಿಸುತ್ತಿದ್ದಾಗಲೇ ಇವರು ಶುಕ್ರಮುನಿಯ ಶಿಷ್ಯರಾಗಿ ಧನುರ್ವಿದ್ಯೆಯ ಅಧ್ಯಯನ ನಡೆಸಿದರು. ತಂದೆ ಮರಣ ಹೊಂದಿದ ಮೇಲೆ ಹಸ್ತಿನಾಪುರಕ್ಕೆ ಬಂದು ಭೀಷ್ಮಾಚಾರ್ಯರ ಆಳ್ವಿಕೆಗೆ ಒಳಗಾಗಿ, ದ್ರೋಣಾಚಾರ್ಯರಲ್ಲಿ ಅಸ್ತ್ರವಿದ್ಯೆಯ ವ್ಯಾಸಂಗ ನಡೆಸಿ ಪಾರಂಗತರಾದರು. ಯೌವನ ಪಾಂಡವರ ತಂದೆ ಪಾಂಡು ವಿಚಿತ್ರವೀರ್ಯನ ಹಿರಿಯ ಮಗನಲ್ಲ. ಆತನಿಗೂ ಹಿರಿಯನಾಗಿದ್ದ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದರಿಂದ, ಆತನಿಗೆ ಸಿಕ್ಕಬೇಕಿದ್ದ ರಾಜ್ಯಾಧಿಕಾರ ಪಾಂಡುವಿಗೆ ದಕ್ಕಿತು. ಆದರೆ ಕುರುವಿನ ಹಿರಿಯ ವಂಶ ಶಾಖೆಯಲ್ಲಿ ಕೌರವನೆನಿಸಿದ ಧೃತರಾಷ್ಟ್ರನ ದುರ್ಯೋಧನಾದಿ ನೂರುಜನ ಮಕ್ಕಳಲ್ಲಿ ದಾಯಾದಿತನದ ದ್ವೇಷ-ಮಾತ್ಸರ್ಯಗಳು ಕಿಡಿಗೊಂಡವು. ಪಾಂಡವರ ಅಸೀಮ ಶಕ್ತಿ-ಸಾಹಸಗಳನ್ನು ಕಂಡು ಧೃತರಾಷ್ಟ್ರನಿಗೂ ಹೆದರಿಕೆ ಉಂಟಾಯಿತು. ಪರಿಣಾಮವಾಗಿ ಧೃತರಾಷ್ಟ್ರ ರಾಜ್ಯವನ್ನು ಎರಡಾಗಿ ವಿಭಜಿಸಿ ತನ್ನ ಮಕ್ಕಳನ್ನು ಹಸ್ತಿನಾವತಿಯಲ್ಲಿಯೇ ಇರಿಸಿಕೊಂಡು ಪಾಂಡವರನ್ನು ವಾರಾಣಾವತಕ್ಕೆ ಕಳುಹಿಸಿದ. ಪಾಂಡವರ ಹಿರಿಯಣ್ಣ ಧರ್ಮರಾಜ ಇಂದ್ರಪ್ರಸ್ಥವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು, ತನ್ನ ಶಾಸನವನ್ನು ಮುಂದುವರಿಸಿ, ಸಂಪದಭಿವೃದ್ಧಿಯನ್ನು ಸಾದಿಸಿದ. ಇದನ್ನು ಕಂಡು ಕರುಬಿದ ದುರ್ಯೋಧನ ಇವರನ್ನು ನಾಶಪಡಿಸಲು ಅನೇಕ ಹೊಂಚು-ಸಂಚುಗಳನ್ನು ಮಾಡಿದನಾದರೂ ಪಾಂಡವರೂ ತಮ್ಮ ಶಕ್ತಿ ಸಾಹಸಗಳಿಂದಲೂ ದೈವೀಕೃಪೆಯಿಂದಲೂ ಅವುಗಳಿಂದ ಪಾರಾಗುತ್ತಲೇ ಹೋದರು. ವನವಾಸ ಈ ಮಧ್ಯೆ ಧರ್ಮರಾಜ ರಾಜಸೂಯ ಯಜ್ಞ ಮಾಡಲನುವಾದ. ಆ ಸಂದರ್ಭದಲ್ಲಿ ಕೃಷ್ಣನಿಗೆ ಸಂದ ಪ್ರಮುಖರೂಪದ ಮಹಾಮನ್ನಣೆಯನ್ನು ನೋಡಿ ದುರ್ಯೋಧನನಿಗೆ ಸಹಿಸಲಾಗಲಿಲ್ಲ. ಪಾಂಡವರ ಸಭೆಯನ್ನು ಕಂಡ ಮೇಲಂತೂ ಆತನ ದ್ವೇಷಾಸೂಯೆ ಇನ್ನೂ ಹೆಚ್ಚು ಉಲ್ಬಣಿಸಿತು. ಕೇಡಾಳಿತನ ಮಸೆದಿತು. ಹೇಗಾದರೂ ಸರಿಯೇ ಪಾಂಡವರನ್ನು ಮುಗಿಸಿಯೇ ಬಿಡಬೇಕೆಂದು ಆತ ಮನಸ್ಸುಮಾಡಿದ. ತನ್ನ ಮಾವ ಶಕುನಿಯ ಸಲಹೆಯಂತೆ ದ್ಯೂತದಲ್ಲಿ ಧರ್ಮರಾಜನನ್ನು ಎರಡು ಬಾರಿ ಸೋಲಿಸಿದ. ಮೊದಲ ಸೋಲಿನ ಪರಿಣಾಮವಾಗಿ ಪಾಂಡವರ ಪತ್ನಿ ದ್ರೌಪದಿ ದುರ್ಯೋಧನನ ರಾಜಸಭೆಯಲ್ಲಿ ಅನ್ಯಾಯದ ಅಪಮಾನಕ್ಕೀಡಾದಳು. ಅದನ್ನು ಕಂಡು ಕ್ರುದ್ಧನಾದ ಭೀಮ ದುರ್ಯೋಧನನ ತೊಡೆಮುರಿವ, ದುಶ್ಯಾಸನನ ನೆತ್ತರು ಕುಡಿಯುವ ಭೀಕರ ಪ್ರತಿಜ್ಞೆ ಮಾಡಿ ಮುಂಬರುವ ಮಹಾಭಾರತದ ಮಾರಣಹೋಮಕ್ಕೆ ನಾಂದಿ ಹಾಡಿದ. ಜೂಜಾಟದಲ್ಲಿಯ ಎರಡನೆಯ ಸೋಲಿನ ಫಲಸ್ವರೂಪವಾಗಿ ಪಾಂಡವರು ಪತ್ನಿ ದ್ರೌಪದಿಯೊಂದಿಗೆ ಹನ್ನೆರಡು ವರ್ಷ ವನವಾಸ ಅನುಭವಿಸಿದ ಮೇಲೆ, ಒಂದು ವರ್ಷ ಅಜ್ಞಾತವಾಸವನ್ನೂ ವಿರಾಟನ ರಾಜಧಾನಿಯಲ್ಲಿ ಕಳೆದರು. ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗ, ವಲಲನಾದ ಅರ್ಜುನ ಬೃಹನ್ನಳೆಯಾ ಗಿ ನೃತ್ಯ ಶಿಕ್ಷಕನಾದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟಪತ್ನಿಯ ಸೇವೆಯಲ್ಲಿ ನಿಂತಳು. ಮಹಾ ಭಾರತ ಕದನ ಹೀಗೆ ವಚನ ಪರಿಪಾಲನೆಗಾಗಿ ಪಾಂಡವರು ಅಜ್ಞಾತವಾಸದ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತಮ್ಮ ರಾಜ್ಯವನ್ನು ತಮಗೆ ಹಿಂದಿರುಗಿಸಬೇಕೆಂದು ದುರ್ಯೋಧನನಿಗೆ ಹೇಳಿಕಳಿಸಿದರು. ಆದರೆ ದುರ್ಯೋಧನ ಯುದ್ಧವಿಲ್ಲದೆಯೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡೆನೆಂದು ಉತ್ತರಿಸಿದ. ಇದರ ಫಲವಾಗಿ ಭೀಕರವಾದ ಮಹಾಭಾರತಸಮರ ಹದಿನೆಂಟು ದಿನಗಳ ಕಾಲ ಕುರುಕ್ಷೇತ್ರದಲ್ಲಿ ನಡೆಯಿತು. ಸಮಕಾಲೀನ ಭರತವರ್ಷದ ಅರಸರೆಲ್ಲರೂ ಬಹುಶಃ ಆ ಯುದ್ಧದಲ್ಲಿ ಒಂದಿಲ್ಲೊಂದು ಪಕ್ಷದ ಪರವಾಗಿ ಪಾಲ್ಗೊಂಡಿದ್ದರು. ಅದರಲ್ಲಿ ಕೌರವರೆಲ್ಲ ಸತ್ತು, ಪಾಂಡವರು ಗೆದ್ದರು. ಆಮೇಲೆ ಪಾಂಡವರ ಹಿರಿಯಣ್ಣ ಧರ್ಮರಾಜ ಹಸ್ತಿನಾವತಿಯ ಗದ್ದುಗೆ ಏರಿ ಅಶ್ವಮೇಧ ಯಾಗಮಾಡಿ ಮೂವತ್ತಾರು ವರ್ಷ ರಾಜ್ಯಭಾರ ನಡೆಸಿದ. ಕೊನೆಗೆ ರಾಜ್ಯಾಧಿಕಾರವನ್ನು ಮೊಮ್ಮಗನಾದ ಪರೀಕ್ಷಿತನಿಗೆ ಒಪ್ಪಿಸಿ, ತಮ್ಮಂದಿರೊಡನೆ ಮಹಾಪ್ರಸ್ಥಾನ ಕೈಗೊಂಡು, ಸ್ವರ್ಗಕ್ಕೆ ಹೋದ. ಉಲ್ಲೇಖ ವರ್ಗ:ಪುರಾಣ ವರ್ಗ:ಹಿಂದೂ ಧರ್ಮ ವರ್ಗ:ಮಹಾಭಾರತ
ಕುರುಕ್ಷೇತ್ರ
https://kn.wikipedia.org/wiki/ಕುರುಕ್ಷೇತ್ರ
200px|thumb|left|A manuscript of Mahabharata depicting the war at Kurukshetra 150px|right|thumb|The majestic statue of Arjun at the Arjun Chowk. thumb|200x200px|Braham Sarovar thumb|right|Bhishma Kund thumb|right|NITthumb|Sudarshan Chakra Chowk near NIT - Kurukshetra thumb|The Holy Peepal tree - witness to the Divine message of Sri Bhagavad Geeta by Lord Sri Krishna to Arjuna at this place during the Mahabharata war. ಕುರುಕ್ಷೇತ್ರ ಹರಿಯಾಣ ರಾಜ್ಯದಲ್ಲಿರುವ ಒಂದು ನಗರ ಮತ್ತು ಜಿಲ್ಲೆ. ಪಾಂಡವ-ಕೌರವರ ಪೂರ್ವಜ 'ಕುರು' ಎಂಬ 'ಕುರುವಂಶದ ಮೂಲ ಪುರುಷ'ನಿಂದ 'ಕುರುವಂಶ' ಹಾಗೂ 'ಕುರುಕ್ಷೇತ್ರ'ವೆಂಬ ಹೆಸರು ಬರಲು ಕಾರಣ. ಇತಿವೃತ್ತ ನವದೆಹಲಿಯಿಂದ ಉತ್ತರದ ಕಡೆಗೆ ಸಾಗುವಾಗ ೧೬೦ ಕಿಮೀ ದೂರದಲ್ಲಿ ಸೋನಿಪತ್ ಪಾನಿಪತ್ ಅನಂತರ ಪುರಾಣಪ್ರಸಿದ್ಧ ಕುರುಕ್ಷೇತ್ರ ರೈಲುನಿಲ್ದಾಣ ಸಿಗುತ್ತದೆ. ಅದೊಂದು ಪುಟ್ಟ ರೈಲುನಿಲ್ದಾಣ. ಕುರುಕ್ಷೇತ್ರವೆಂದರೆ ಮಹಾಭಾರತಯುದ್ಧ ನಡೆದ ಸ್ಥಳ. ಪುರಾತನ ಧಾರ್ಮಿಕ ಕ್ಷೇತ್ರ. ಇದಕ್ಕೆ 'ಧರ್ಮ ಕ್ಷೇತ್ರ'ವೆಂದು ಹೆಸರು. ಇದು ಪೌರಾಣಿಕ ಸ್ಥಳವೆಂದು ಬೆರಳೆಣಿಕೆಯಷ್ಟು ಯಾತ್ರಾರ್ಥಿಗಳು ಬರುತ್ತಾರೆ ಹೊರತು ಹೇಳಿಕೊಳ್ಳುವಂಥ ದೊಡ್ಡ ಪಟ್ಟಣವೇನಲ್ಲ. ಕುರುಕ್ಷೇತ್ರ ಜಿಲ್ಲೆಯ ಒಟ್ಟು ವಿಸ್ತೀರ್ಣ ೧,೬೮೨ ಚ. ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸ೦ಖ್ಯೆ ೬, ೪೧, ೦೦೦. ಕುರುಕ್ಷೇತ್ರದ ಸುತ್ತ ಮುತ್ತ ಪುಟ್ಟ ರೈಲು ನಿಲ್ದಾಣ, ಕೆಲವು ಬ್ಯಾಂಕುಗಳು, ಅಂಗಡಿಸಾಲು ಹಾಗೂ ಜನಜೀವನ ಇವೆಲ್ಲ ಉತ್ತರ ಇಂಡಿಯಾದ ಬೇರೆಲ್ಲ ಊರುಗಳಂತೆಯೇ ತೋರಿದರೂ ಹಲವಾರು ಧರ್ಮಶಾಲೆಗಳು ಹಾಗೂ ಗುಡಿಗಳು ನಮ್ಮ ಮನಸ್ಸನ್ನು ನಿಧಾನವಾಗಿ ಪುರಾಣಪ್ರಸಿದ್ಧ ಕಾಲವೊಂದಕ್ಕೆ ಕರೆದೊಯ್ಯು ತ್ತವೆ. ಸಿಖ್ ಧರ್ಮದಲ್ಲಿಯೂ ಇದು ಪವಿತ್ರ ಸ್ಥಳ-ಎಲ್ಲ ಹತ್ತು ಸಿಖ್ ಗುರುಗಳೂ ಇಲ್ಲಿಗೆ ಭೇಟಿ ನೀಡಿದ್ದರಿ೦ದ ಈ ಸ್ಥಳಕ್ಕೆ ಸಿಕ್ಖರಲ್ಲಿ ಪವಿತ್ರ ಸ್ಥಾನ ಉ೦ಟು. ಕುರುಕ್ಷೇತ್ರ ಜಿಲ್ಲೆಯಲ್ಲಿ ಥಾನೇಶ್ವರ ಮತ್ತು ಪೆಹೋವ ತಾಲ್ಲೂಕುಗಳಿವೆ. ಥಾನೇಶ್ವರ, ಪೆಹೋವ ಮತ್ತು ಕುರುಕ್ಶೇತ್ರ ಇಲ್ಲಿಯ ಮುಖ್ಯಪಟ್ಟಣಗಳು. ಚಂಧೀಘಡ ಇಲ್ಲಿಂದ ೭೫ ಕಿ.ಮೀ.ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೧ ಇಲ್ಲಿಂದ ಸಾಗುತ್ತದೆ. ಸನ್ನಿಹತ್ ಸರೋವರ ಸುಪ್ರಸಿದ್ಧ ತೀರ್ಥ ಸ್ಥಳವಾದ,ಸನ್ನಿಹಿತ್ ಸರೋವರ ಇಲ್ಲಿದೆ. ೧,೫೦೦ ಅಡಿ ಉದ್ದ,೫೦ ಅಡಿ ಅಗಲವಿರುವ ಈ ಸರೋವರದ ಸುತ್ತಲೂ ಸ್ನಾನದ ಕಟ್ಟೆಗಳು ಇದ್ದು ನದಿಗೆ ಹೋಗಲು ಮೆಟ್ಟಿಲುಗಳಿವೆ. ಕೆರೆಯ ಹತ್ತಿರ, ಧ್ರುವನಾರಾಯಣ, ಮಾತಾ ದುರ್ಗೆ, ಮತ್ತು ಹನುಮಾನ್ ಮಂದಿರಗಳಿವೆ. 'ಏಳು ಪವಿತ್ರ ಸರಸ್ವತಿಯರ ಸಂಗಮ ಸ್ಥಾನ'ವೆಂಬ ನಂಬಿಕೆ ಜನರಲ್ಲಿದೆ. ಅಮಾವಾಸ್ಯೆ, ಮತ್ತು ಗ್ರಹಣದ ದಿನಗಳಲ್ಲಿ ಇಲ್ಲಿ ಸ್ನಾನಮಾಡುವುದರಿಂದ ಸಕಲ ಪಾಪಗಳೂ ಪರಿಹಾರವಾಗುವುದೆಂಬ ನಂಬಿಕೆ ಇದೆ. ಬ್ರಹ್ಮ ಸರೋವರ ಬೃಹದಾಕಾರದ ಬ್ರಹ್ಮಸರೋವರವು ಯಾತ್ರಾರ್ಥಿಗಳಿಗೆ ತಂಗುದಾಣ, 'ಸ್ನಾನಘಟ್ಟ', 'ದೋಣಿವಿಹಾರ', 'ನಡುಗಡ್ಡೆ' ಮುಂತಾದವುಗಳಿಂದ ಸುಸಜ್ಜಿತವಾಗಿದೆ. ಸರೋವರದ ಎದುರಿಗಿನ ವಿದ್ಯಾಪೀಠದಲ್ಲಿ ಕುರುಕ್ಷೇತ್ರ ಯುದ್ಧವನ್ನು ಜೀವಂತಿಕೆಯಿಂದ ತೋರಿಸುವ 'ಗೊಂಬೆ ಗ್ಯಾಲರಿ' ಇದೆ. ಅಲ್ಲಿಂದ ಪಂಚಪಾಂಡವರ ಮಂದಿರ ದಾಟಿಕೊಂಡು ಮುಂದೆ ಹೋದರೆ ಬಿರ್ಲಾ ಮಂದಿರವಿದ್ದು ಅದರ ಆವರಣದಲ್ಲಿರುವ ಅಮೃತಶಿಲೆಯ ಶ್ರೀಕೃಷ್ಣರಥವು ಕಣ್ಮನ ಸೆಳೆಯುತ್ತದೆ. ಮಹಾಭಾರತ ಯುದ್ಧದಲ್ಲಿ ಪ್ರಾಣತೆತ್ತ ಹದಿನೆಂಟು ಅಕ್ಷೋಹಿಣಿ ಸೈನಿಕರಿಗೆ ಒಮ್ಮೆಗೇ ತರ್ಪಣ ಬಿಟ್ಟ ಸ್ಥಳವೆಂದು 'ಸೂರಜ್‌ಕುಂಡ್' ಪ್ರಸಿದ್ಧವಾಗಿದೆ. ಗೀತೋಪದೇಶದ ಸ್ಥಾನ ಮಹಾಭಾರತದ ಯುದ್ಧದಲ್ಲಿ ನಡೆದ ಅತಿ ಮುಖ್ಯವಾದ ಘಟನೆ ಗೀತೋಪದೇಶ. ಕುರುಕ್ಷೇತ್ರದ ಊರ ಹೊರಗೆ ಹೊರಟರೆ ನಾಲ್ಕು ಕಿಲೋಮೀಟರು ದೂರದಲ್ಲಿ ಜೋತಿಸರ ಎಂಬಲ್ಲಿ ಒಂದು ಪ್ರದೇಶವನ್ನು ಈ ಗೀತೋಪದೇಶದ ತಾಣವೆಂದು ಗುರುತಿಸಲಾಗಿದೆ. ಆ ಜಾಗದಲ್ಲಿ ಒಂದು ರಥವನ್ನೂ ಅದರ ಚಾಲಕಸ್ಥಾನದಲ್ಲಿ ಕೃಷ್ಣನ ಮೂರ್ತಿಯನ್ನೂ, ಅರ್ಜುನನ ಮೂರ್ತಿಯನ್ನೂ ನಿಲ್ಲಿಸಲಾಗಿದೆ. ಸನಿಹದಲ್ಲೇ ಒಂದು ಪುರಾತನ ಆಲದ ಮರವಿದ್ದು ಗೀತೋಪದೇಶಕ್ಕೆ ಸಾಕ್ಷಿಯಾದ ಮರವೆಂದು ಅದನ್ನು ಪೂಜಿಸಲಾಗುತ್ತಿದೆ. ಈ ಜಾಗವನ್ನೂ ಹತ್ತಿರದ ಗುಡಿಗಳು ಹಾಗೂ ಸನಿಹದ ಸರೋವರವನ್ನೂ ಸಂಯೋಜಿಸಿ ರಾತ್ರಿ ಹೊತ್ತಿನಲ್ಲಿ ಪ್ರದರ್ಶಿಸುವ ಧ್ವನಿಬೆಳಕಿನ ಕಾರ್ಯಕ್ರಮವು ನೋಡಲು ಚೆನ್ನಾಗಿರುತ್ತದೆ. ಬಾಣ ಗಂಗ ಕುರುಕ್ಷೇತ್ರದ ಇನ್ನೊಂದು ಮುಖ್ಯವಾದ ಸ್ಥಳ ಬಾಣಗಂಗಾ. ಕುರುಕ್ಷೇತ್ರ ಯುದ್ಧದಲ್ಲಿ ಧರೆಗುರುಳಿದ ಇಚ್ಛಾಮರಣಿ ಭೀಷ್ಮನಿಗೆ ನೀರಡಿಕೆಯಾದಾಗ ಬಿಲ್ಗಾರ ಅರ್ಜುನನು ಭೂಮಿಗೆ ಬಾಣ ಹೂಡಿ ನೀರು ಚಿಮ್ಮಿಸಿದನೆನ್ನಲಾದ ತಾಣವಿದು. ಈ ಸ್ಥಳದಲ್ಲಿ ಒಂದು ಬಾವಿಯಿದ್ದು ಇದರ ಜಲವನ್ನು ಜನರು ಶ್ರದ್ಧಾಭಕ್ತಿಗಳಿಂದ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ಕುರುಕ್ಷೇತ್ರ ವಿಶ್ವವಿದ್ಯಾಲಯ ಇವೇ ಪುರಾಣ ದೃಶ್ಯಗಳನ್ನು ಮತ್ತೆ ನೋಡಲೆಂದೇ ಇರುವ ಪ್ಯಾನೋರಮಾ ಮತ್ತು ವಿಜ್ಞಾನಕೇಂದ್ರವು ಕುರುಕ್ಷೇತ್ರ ಯುದ್ಧವರ್ಣನೆಯನ್ನು ವಿವರಿಸುವ ವಿನೂತನ ತಂತ್ರಜ್ಞಾನದ ಸ್ಥಿರಚಿತ್ರಶಾಲೆ. ಕುರುಕ್ಷೇತ್ರದ ನೆಲದಲ್ಲಿ ಕಾಲೂರಿ ಕುರುಕ್ಷೇತ್ರದ ಕಾಲಕ್ಕೆ ಜಾರುತ್ತಾ ಅಂದಿನ ಮಹಾಭಾರತ ಯುದ್ಧವನ್ನು ಕಣ್ಣಾರೆ ಕಾಣುವ ಅವಕಾಶ ಒದಗಿಸುತ್ತದೆ ಈ ಕಲಾಕೇಂದ್ರ. 'ಕೃಷ್ಣ ವಸ್ತುಸಂಗ್ರಹಾಲಯ'ವೂ ಪಕ್ಕದಲ್ಲಿಯೇ ಇದ್ದು ಮಹಾಭಾರತವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಇಷ್ಟಲ್ಲದೆ ಕುರುಕ್ಷೇತ್ರದಲ್ಲಿ ವಿಶ್ವವಿದ್ಯಾಲಯವಿದೆ, ಕಲ್ಪನಾ ಚಾವ್ಲಾ ತಾರಾಲಯವಿದೆ. ಇವೆಲ್ಲ ಆಧುನಿಕತೆಯ ನಡುವೆ ಎತ್ತ ನೋಡಿದರತ್ತ ಗಲೀಜು, ಕಾವಿಧಾರಿ ಭಿಕ್ಷುಕರ ಸಾಲು, ಬೀಡಾಡಿ ವೃದ್ಧರ ದಯನೀಯ ಚಿತ್ರಗಳು ನಮ್ಮ ಇಂಡಿಯಾದ ಪುರಾಣ ಮತ್ತು ನವ್ಯತೆಯ ನಡುವಿನ ಕೊಂಡಿಗಳಾಗಿ ಉಳಿಯುತ್ತವೆ. ಉಲ್ಲೇಖಗಳು ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು ವರ್ಗ:ಮಹಾಭಾರತ ವರ್ಗ:ಹರಿಯಾಣ
ಸರೋಜಿನಿ ನಾಯ್ಡು
https://kn.wikipedia.org/wiki/ಸರೋಜಿನಿ_ನಾಯ್ಡು
thumb|Sarojini Naidu (extreme right) with Mahatma Gandhi during Salt Satyagraha, 1930 thumbnail|The ashes of Sarojini Naidu kept at Golden Threshold, Hyderabad before immersion ಸರೋಜಿನಿ ನಾಯ್ಡು “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದಾರೆ. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಯತ್ರಿ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್‍‍ನ ಮೊದಲನೆಯ ಮಹಿಳಾ ಅಧ್ಯಕ್ಷರಾದವರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದವರು.Sarojini Naidu Bibliographic information . ಜನನ, ಜೀವನ ಸರೋಜಿನಿ ನಾಯ್ಡು (ಜನನ: ೧೩ನೇ ಫೆಬ್ರುವರಿ ೧೮೭೯- ಮರಣ: ೨ನೇ ಮಾರ್ಚ್ ೧೯೪೯.) ಇವರ ತಂದೆ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದ ಅಗೋರೆನಾಥ್ ಚಟ್ಟೋಪಾಧ್ಯರು ಮತ್ತು ತಾಯಿ ಬಂಗಾಳಿ ಕವಿಯಿತ್ರಿಯಾದ ಬರಾಡ ಸುಂದರಿ ದೇವಿ. ಸರೋಜಿನಿ ನಾಯ್ಡುರವರು ಅವರ ತಂದೆ-ತಾಯಿಯರ ಎಂಟು ಮಕ್ಕಳಲ್ಲಿ ಮೊದಲನೆಯವಾಗಿದ್ದರು. ಇವರ ಒಬ್ಬ ಸಹೋದರನಾದ ಬಿರೇಂದ್ರನಾಥ್ ಚಳುವಳಿಗಾರರಾಗಿದ್ದವರು ಮತ್ತೊಬ್ಬ ಸಹೋದರ ಹರಿನಾಥ್ ಕವಿ, ನಾಟಕಗಾರ ಮತ್ತು ನಟನೆಯನ್ನು ಮಾಡುತ್ತಿದ್ದವರು.First Woman Governor of a State in India ಸರೋಜಿನಿ ನಾಯ್ಡುರವರು ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು. ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತಾನಾಡುತ್ತಿದ್ದರು. ಇವರು ಹನ್ನೆರಡನೇ ವಯಸ್ಸಿನಲ್ಲಿಯೇ ಮದ್ರಾಸ್ ವಿಶ್ವವಿದ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆ ಯಲ್ಲಿ ಮೇಲ್ದರ್ಜೆಯಲ್ಲಿ ಪಾಸಾಗಿ ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಪಡೆದರು. ಇವರ ತಂದೆ ಇವರು ಗಣಿತ ತಜ್ಞೆ (ಮ್ಯಾಥಮ್ಯಾಟೀಷಿಯನ್) ಅಥವಾ ವಿಜ್ಞಾನಿಯಾಗಲಿ ಎಂದು ಬಯಸಿದ್ದರು ಆದರೆ ಸರೋಜಿನಿಯವರು ಕವಿಯಿತ್ರಿಯಾಗಲು ಇಷ್ಟಪಟ್ಟಿದ್ದರು. ಇವರು ಆಂಗ್ಲಭಾಷೆಯಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಹೈದರಾಬಾದಿನ ನಿಜಾಮರು ಇವರ ಕವಿತೆಗಳಿಂದ ಸ್ಫೂರ್ತಿಗೊಂಡು ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿವೇತನವನ್ನು ಕೊಟ್ಟರು. ೧೬ನೇ ವಯಸ್ಸಿನಲ್ಲಿ ಇವರು ಮೊದಲು ಇಂಗ್ಲೇಂಡಿನ ಕಿಂಗ್ಸ್ ಕಾಲೇಜಿನಲ್ಲಿ ಮತ್ತು ಆಮೇಲೆ ಕ್ಯಾಬ್ರಿಂಜ್ಡನ ಗಿರ್ಟನ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಅಲ್ಲಿ ಇವರು ಆ ಕಾಲದಲ್ಲಿ ಪ್ರಸಿದ್ಧರಾಗಿದ್ದ ಆರ್ಥರ್ ಸೈಮೊನ್ಸ್ ಮತ್ತು ಎಡ್ಮಂಡ್ ಗೋಸೆಯವರನ್ನು ಭೇಟಿ ಮಾಡಿದರು. fighters of India ಗೋಸೆಯವರು ಸರೋಜಿನಿಯವರನ್ನು ಭಾರತದಲ್ಲಿರುವ ಬೆಟ್ಟ-ಗುಡ್ಡಗಳು, ನದಿಗಳು, ದೇವಸ್ಥಾನಗಳು, ಜನರ ಜೀವನ ಕ್ರಮ ಮುಂತಾದ ವಿಷಯಗಳ ಮನದಲ್ಲಿಟ್ಟುಕೊಂಡು ತಮ್ಮ ಕವಿತೆಗಳನ್ನು ರಚಿಸಿದರೆ ಚೆನ್ನಾಗಿರುತ್ತದೆ ಎಂದು ಮನದಟ್ಟು ಮಾಡಿಕೊಟ್ಟರು. ಅದರಂತೆ ಸರೋಜಿನಿ ಯವರು ಸಮಕಾಲೀನ ಇಂಡಿಯಾ ದೇಶದ ಜನರ ಜೀವನಕ್ರಮಗಳನ್ನು ತಮ್ಮ ಕವಿತೆಗಳಲ್ಲಿ ವರ್ಣಿಸಿದರು. ದಿ ಗೋಲ್ಡನ್ ತ್ರೆಶೋಲ್ದ್ (೧೯೦೫) The Golden Threshold, ದಿ ಬರ್ಡ್ ಆಫ್ ಟೈಮ್ (೧೯೧೨) The Bird of Time ಮತ್ತು ದಿ ಬ್ರೊಕನ್ ವಿಂಗ್ (೧೯೧೨) The Broken Wing ಎನ್ನುವ ಸಂಗ್ರಹಗಳು ಭಾರತದ ಸಾಕಷ್ಟು ಓದುಗಾರರನ್ನು ಮತ್ತು ಆಂಗ್ಲಭಾಷೆಯ ಓದುಗಾರರನ್ನು ಆಕರ್ಷಿಸಿತು. ಇವರು ತಮ್ಮ ಹದಿನೈದನೇ ವಯಸ್ಸಿನಲ್ಲಿ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ಡಾ|| ಗೋವಿಂದರಾಜು ನಾಯ್ಡುರವರನ್ನು ಭೇಟಿಯಾದರು. ನಂತರ ಅವರನ್ನು ಪ್ರೇಮಿಸಿದರು. ಇವರು ತಮ್ಮ ವಿದ್ಯಾಭ್ಯಾಸಗಳನ್ನು ಮುಗಿಸಿ ತಮ್ಮ ೧೯ನೇ ವರ್ಷದಲ್ಲಿ ಗೋವಿಂದರಾಜು ನಾಯ್ಡುರವರನ್ನು ಅಂತರ್ಜಾತಿಯ ಮದುವೆಗಳು ನಡೆಯಲು ಅವಕಾಶವಿಲ್ಲದಿದ್ದ ಕಾಲದಲ್ಲೇ ಮದುವೆಯಾದರು. ಇದು ಇವರು ತೆಗೆದುಕೊಂಡ ಕ್ರಾಂತಿಕಾರಕ ಕ್ರಮವಾಗಿತ್ತು ಆದರೆ ಇವರ ಈ ಪ್ರಯತ್ನಕ್ಕೆ ಇವರ ತಂದೆಯ ಸಂಪೂರ್ಣ ಉತ್ತೇಜನವಿತ್ತು. ಇವರ ಈ ಮದುವೆಯು ಸಂತೋಷಕರದಿಂದ ಕೂಡಿತ್ತು. ಇವರಿಗೆ ಜಯಸೂರ್ಯ, ಪದ್ಮಿನಿ, ರಣಧೀರ್ ಮತ್ತು ಲೈಲಾಮಣಿ ಎನ್ನುವ ನಾಲ್ಕು ಜನ ಮಕ್ಕಳಾದರು. ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸುವಿಕೆ ಬಂಗಾಳದ ವಿಭಾಗವನ್ನು ತಡೆಯಲು ಸರೋಜಿನಿಯವರು ೧೯೦೫ರಲ್ಲಿ ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿದರು. ಆ ಸಮಯದಲ್ಲಿ ಇವರು ಗೋಪಾಲ್ ಕೃಷ್ಣ ಗೋಖಲೆ, ರವೀಂದ್ರನಾಥ ಟ್ಯಾಗೂರ್, ಮಹಮದ್ ಆಲಿ ಜಿನ್ನ, ಆನಿಬೆಸೆಂಟ್, ಸಿ.ಪಿ. ರಾಮಸ್ವಾಮಿ ಐಯರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂರವರನ್ನು ಭೇಟಿ ಮಾಡಿದರು. ಮಹಿಳೆಯರು ಅಡಿಗೆಮಾಡಲು ಮಾತ್ರ ಸೀಮಿತವಾಗಿಲ್ಲವೆಂದು ಇವರು ಭಾರತದ ಮಹಿಳೆಯರನ್ನು ಎಚ್ಚರಗೊಳಿಸಿದರು. ಅವರನ್ನು ಅಡಿಗೆ ಮನೆಯ ಆಚೆಗೂ ಇರುವ ಪ್ರಪಂಚವನ್ನು ನೋಡಲು ಹೊರ ಬರುವಂತೆ ಪ್ರೇರೇಪಿಸಿದರು. ರಾಜ್ಯ-ರಾಜ್ಯಗಳಲ್ಲಿರುವ, ಒಂದೊಂದು ಜಿಲ್ಲೆಗಳಲ್ಲೂ ಸಂಚರಿಸಿ ಮಹಿಳಾ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಹೇಳಿದರು. ಭಾರತದಲ್ಲಿ ಮಹಿಳೆಯರು ಸ್ವ-ಗೌರವವನ್ನು ಪಡೆಯುವಂತೆ ಮಾಡಿದರು. ೧೯೨೫ರಲ್ಲಿ ಸರೋಜಿನಿಯವರು ಕಾನ್ಪುರದಲ್ಲಿ ನಡೆದ ಭಾರತದ ರಾಷ್ಟ್ರೀಯ ಕಾಂಗ್ರೇಸ್‍ನ ವಾರ್ಷಿಕ ಅಧಿವೇಶನದ ಅಧ್ಯಕ್ಷರಾಗಿದ್ದರು. ಸಿವಿಲ್ ಅವಿಧೇಯತೆಯ ಮೂಮೆಂಟ್ಸ್‍ನ ಚಳುವಳಿಯಲ್ಲಿ ಭಾಗವಹಿಸಿ ಗಾಂಧೀಜಿ ಮುಂತಾದ ಚಳುವಳಿಗಾರರೊಂದಿಗೆ ಜೈಲಿಗೆ ಹೋದರು. ೧೯೪೨ರಲ್ಲಿ ’ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಭಾಗವಹಿಸಿ ೨೧ ತಿಂಗಳ ಕಾಲ ಗಾಂಧೀಜಿ ಮುಂತಾದ ನಾಯಕರೊಂದಿಗೆ ಜೈಲಿನಲ್ಲಿ ಕಳೆದರು. ಇವರು ಗಾಂಧೀಜಿಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದರು ಮತ್ತು ಅವರನ್ನು ಮಿಕ್ಕಿ ಮೌಸ್ ಎಂದು ಕರೆಯುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಸರೋಜಿನಿಯವರು ಉತ್ತರ ಪ್ರದೇಶದ ರಾಜ್ಯಪಾಲರಾದರು. ಇವರು ಮೊದಲನೆಯ ಮಹಿಳಾ ರಾಜ್ಯಪಾಲರು. ಸರೋಜಿನಿಯವರು ತಮ್ಮ ಕಛೇರಿಯಲ್ಲಿ ೨ನೇ ಮಾರ್ಚ್ ೧೯೪೯ರಲ್ಲಿ ನಿಧನರಾದರು. ಇವರ ಕೆಲವು ಕವಿತೆಗಳು ೧೯೦೫- ದಿ ಗೋಲ್ಡನ್ ತ್ರೆಷೋಲ್ಡ್, ಯು.ಕೆ.ಯಲ್ಲಿ ಪಬ್ಲಿಷ್ ಆಯಿತು.(ಅಂತರ್ಜಾಲದಲ್ಲೂ ಇದು ಲಭ್ಯವಿದೆ). ೧೯೧೨- ದಿ ಬರ್ಡ್ ಆಫ್ ಟೈಮ್: ಜೀವನದಲ್ಲುಸಾದ, ಸಾವಿನ ಹಾಡು. ಲಂಡನ್ನಲ್ಲಿ ಪ್ರಕಟಿತವಾಯಿತು. ೧೯೧೭-ದಿ ಬ್ರೋಕನ್ ವಿಂಗ್ - ಜೀವನ ಪ್ರೀತಿಯ, ಸಾವಿನ ಮತ್ತು ಜೀವನದುಲ್ಲಾಸದ ಹಾಡು; ದಿ ಗಿಪ್ಟ್ ಆಫ್ ಇಂಡಿಯಾ (ಮೊದಲ ಬಾರಿಗda ೧೯೧೫ರಲ್ಲಿ ಸಾರ್ವಜನಿಕರಲ್ಲಿ ಓದಲಾಯಿತು). ೧೯೧೬: ಮಹಮದ್ ಜಿನ್ನಃ: ಒಗ್ಗಟ್ಟಿನ ರಾಯಭಾರಿ. ೧೯೪೩- ದಿ ಸೆಪ್ಟ್ರೆಡ್ ಪ್ಲೂಟ್: ಇಂಡಿಯಾದ ಹಾಡುಗಳು, ಇವರ ಮರಣಾನಂತರ ಪ್ರಕಟನೆಗೊಂಡಿತು. ೧೯೬೧- ದಿ ಫೆದರ್ ಆಫ್ ಡಾನ್, ಇವರ ಮರಣಾನಂತರ ಇವರ ಮಗಳಾದ ಪದ್ಮಜ ನಾಯ್ಡುವಿನಿಂದ ಪ್ರಕಟಣೆ ಮತ್ತು ಮುದ್ರಣಗೊಂಡಿತು. ೧೯೬೦ ರಿಂದ ೧೯೭೧- ಇಂಡಿಯನ್ ವೀವರ್. ಬಿರುದು/ ಗೌರವ ಇವರು ಮೊದಲನೆಯ ಮಹಿಳಾ ರಾಜ್ಯಪಾಲರು. ಭಾರತದ ನೈಟಿಂಗೇಲ್ ಎಂಬ ಬಿರುದು ಇವರಿಗಿದೆ. 'ಭಾರತದ ಕೋಗಿಲೆ' ಎಂಬ ಬಿರುದು ಇವರಿಗಿದೆ ಉಲ್ಲೇಖ ವರ್ಗ: ಸ್ವಾತಂತ್ರ್ಯ ಹೋರಾಟಗಾರರು ವರ್ಗ: ಕವಿಗಳು
ಆರ್.ಕೆ.ನಾರಾಯಣ್
https://kn.wikipedia.org/wiki/ಆರ್.ಕೆ.ನಾರಾಯಣ್
ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್ (ಅಕ್ಟೋಬರ್ ೧೦, ೧೯೦೬ - ಮೇ ೧೩, ೨೦೦೧) ಭಾರತದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರು. ಆಂಗ್ಲ ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದಂಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎಂಬ ಕಾಲ್ಪನಿಕ ದಕ್ಷಿಣ ಭಾರತದ ಸ್ಥಳದಲ್ಲಿ ನಡೆಯುತ್ತವೆ. http://www.goodreads.com/author/show/1305302.R_K_Narayan ನಾರಾಯಣ್ ಅವರ ಮೊದಲ ಕಾದಂಬರಿ ಸ್ವಾಮಿ ಮತ್ತು ಗೆಳೆಯರು. http://www.iloveindia.com/indian-heroes/rk-narayan.htmlಮೊದಲಿಗೆ ಯಾವ ಪ್ರಕಾಶಕರೂ ಇದನ್ನು ಪ್ರಕಟಿಸಲು ಒಪ್ಪಿರಲಿಲ್ಲ. ನಂತರ ಇದರ ಹಸ್ತಪ್ರತಿಯನ್ನು ಬ್ರಿಟಿಷ್ ಲೇಖಕ ಗ್ರಹಾಂ ಗ್ರೀನ್ ಗೆ ಕಳಿಸಿದಾಗ ಅವರು ಅದನ್ನು ಇಷ್ಟಪಟ್ಟು ಅದರ ಪ್ರಕಟಣೆಗೆ ಕಾರಣರಾದರು. ಆನಂತರ ಗ್ರಹಾಂ ಗ್ರೀನ್ ನಾರಾಯಣ್ ಅವರ ಜೀವನಪರ್ಯಂತ ಆಪ್ತ ಮಿತ್ರರೂ ಮತ್ತು ಅಭಿಮಾನಿಯೂ ಆಗುಳಿದರು. ಈ ಮೊದಲ ಪುಸ್ತಕದ ನಂತರ ನಾರಾಯಣ್ ಅನೇಕ ಕಾದಂಬರಿಗಳನ್ನು ಬರೆದರು. ಇವರು ಕೆಲ ಕಾದಂಬರಿಗಳಲ್ಲಿ ತಮ್ಮ ಜೀವನದ ಅಂಶಗಳನ್ನೂ ಸೇರಿಸಿದ್ದಾರೆ - ಉದಾಹರಣೆಗೆ ದಿ ಇಂಗ್ಲಿಷ್ ಟೀಚರ್. ನಾರಾಯಣ್ ರ ಬಹುಪಾಲು ಕೃತಿಗಳು ದೈನಂದಿನ ಜೀವನವನ್ನು ಕುರಿತವು. ಭಾರತೀಯ ಪುರಾಣಗಳ ಬಗ್ಗೆಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ, ಎ.ಸಿ.ಬೆನ್‌ಸನ್ ಮೆಡಲ್,http://www.rigzin.freeservers.com/rknarayan.htm ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾದ ದಿವಂಗತ ಆರ್.ಕೆ.ನಾರಾಯಣ್ ಅವರ ಮೈಸೂರಿನ ಮನೆಯನ್ನು ಪಾರಂಪರಿಕ ಕಟ್ಟಡ ಎಂದು ಸರ್ಕಾರ ಘೋಷಿಸಿದೆ. ಖ್ಯಾತ ಆಂಗ್ಲಭಾಷಾ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಇವರ ಸಹೋದರರಾಗಿದ್ದಾರೆ. ನಾರಾಯಣ್ ಅವರ ಮುಖ್ಯ ಕಾದಂಬರಿಗಳು ಕ್ರಮ ಸಂಖ್ಯೆ ಕಾದಂಬರಿ ವರ್ಷ ಇತರೆ ಮಾಹಿತಿ ೧ ಸ್ವಾಮಿ ಅಂಡ್ ‌ಫ್ರೆಂಡ್ಸ್ (ಸ್ವಾಮಿ ಮತ್ತು ಗೆಳೆಯರು) ೧೯೩೫. ೨ ಬ್ಯಾಚುಲರ್ ಆಫ್ ಆ‌‌ರ್ಟ್ಸ್ ೧೯೩೭. ೩ ದಿ ಡಾರ್ಕ್ ರೂಮ್ ೧೯೩೮. ೪ ದಿ ಇಂಗ್ಲಿಷ್ ಟೀಚರ್ ೧೯೪೫. ೫ ದಿ ಅಸ್ಟ್ರಾಲಜರ್ಸ್ ಡೆ ಅಂಡ್ ಅದರ್ ಸ್ಟೋರೀಸ್ ೧೯೪೭. ೬ ಮಿಸ್ಟರ್. ಸಂಪತ್ - ದಿ ಪ್ರಿಂಟರ್ ಆಫ್ ಮಾಲ್ಗುಡಿ ೧೯೪೯ ೭ ದಿ ಫೈನಾಂಷಿಯಲ್ ಎಕ್ಸ್ ಪ‌ರ್ಟ್ ೧೯೫೨ ೮ ಗ್ರೇಟ್‌ಫುಲ್ ಟು ಲೈಫ್ ಅಂಡ್ ಡೆತ್ ೧೯೫೩ ೯ ವೈಟಿಂಗ್ ಫಾರ್ ದ ಮಹಾತ್ಮ ೧೯೫೫ ೧೦ ಲಾವ್ಲೆ ರೋಡ್ ಅಂಡ್ ಅದರ್ ಸ್ಟೋರೀಸ್ ೧೯೫೬ ೧೧ ದಿ ಗೈಡ್ ೧೯೫೮ (‌ಇದರ ಆಧಾರಿತವಾದ ಹಿಂದಿ ಚಲನಚಿತ್ರವನ್ನು ದೇವಾನಂದ್ ಅವರು ನಿ‌‌‌ರ್ಮಾಪಿಸಿದರು) ೧೨ ನೆಕ್ಸ್ಟ್ ಸಂಡೇ - ಸ್ಕೆಚಸ್ ಅಂಡ್ ಎಸೇಸ್ ೧೯೬೦ ೧೩ ದಿ ಮ್ಯಾನ್-ಈಟರ್ ಆಫ್ ಮಾಲ್ಗುಡಿ ೧೯೬೧ ೧೪ ಮೈ ಡೇಟ್‍ಲೆಸ್ ಡೈರೀ ೧೯೬೪ ೧೫ ಗಾಡ್ಸ, ಡೆಮನ್ಸ, ಅಂಡ್ ಅದರ್ ಸ್ಟೋರೀಸ್ ೧೯೬೫ ೧೬ ದಿ ವೆಂಡರ್ ಆಫ್ ಸ್ವೀಟ್ಸ ೧೯೬೭ ೧೭ ಎ ಹಾರ್ಸ್ ಅಂಡ್ ಟೂ ಗೋಟ್ಸ, ಅಂಡ್ ಅದರ್ ಸ್ಟೋರೀಸ್ ೧೯೭೦ ೧೮ ದಿ ರಾಮಾಯಣ - ಎ ಶಾರ್ಟಂಡ್ ಮಾಡ್ರನ್ ಪ್ರೋಸ್ ವರ್ಷನ್ ೧೯೭೨ ೧೯ ಮೈ ಡೇಸ್ ೧೯೭೪ ೨೦ ದಿ ಪೈಂಟರ್ ಆಫ್ ಸೈನ್ಸ ೧೯೭೬ ೨೧ ರಿಲಕ್ಟೆಂಟ್ ಗುರು ೧೯೭೪ ೨೨ ದಿ ಮಹಾಭಾರತ - ಎ ಶಾರ್ಟಂಡ್ ಮಾಡ್ರನ್ ಪ್ರೋಸ್ ವರ್ಷನ್ ೧೯೭೮ ೨೩ ದಿ ಎಮರಾಲ್ಡ ರೂಟ್ ೧೯೮೦ ೨೪ ಮಾಲ್ಗುಡಿ ಡೇಸ್ ೧೯೮೨ ೨೫ ಎ ಟೈಗರ್ ಫಾರ್ ಮಾಲ್ಗುಡಿ ೧೯೮೩ ೨೬ ಅಂಡರ್ ದಿ ಬಾನ್ಯನ್ ಟ್ರೀ ಅಂಡ್ ಅದರ್ ಸ್ಟೋರೀಸ್ ೧೯೮೫ ೨೭ ದಿ ಟಾಕೇಟಿವ್ ಮಾನ್ ೧೯೮೬ ೨೮ ಎ ಸ್ಟೋರೀ-ಟೆಲ್ಲರ್ಸ್ ವರ್ಲ್ಡ - ಸ್ಟೋರೀಸ್, ಎಸೇಸ್, ಸ್ಕೆಚಸ್ ೧೯೮೯ ನಿಧನ ಆರ್. ಕೆ. ನಾರಾಯಣ್ ಚೆನ್ನೈ ನಲ್ಲಿ ೨೦೦೧, ರ, ಮೇ ೧೩ ರಂದು ನಿಧನರಾದರು. ಹೊರಗಿನ ಕೊಂಡಿಗಳು ಸ್ವಾಮಿ ಮತ್ತು ಗೆಳೆಯರು - ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಓದಲು ಸಿಗುವ ಕನ್ನಡಪುಸ್ತಕ openlibrary.org.ಆರ್.ಕೆ.ನಾರಾಯಣ್ ಉಲ್ಲೇಖಗಳು ವರ್ಗ:ಆಂಗ್ಲ ಭಾಷಾ ಸಾಹಿತಿಗಳು ವರ್ಗ:ಸಾಹಿತಿಗಳು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ವರ್ಗ:ಮೈಸೂರಿನ ಬರಹಗಾರರು
ಒನಕೆ ಓಬವ್ವ
https://kn.wikipedia.org/wiki/ಒನಕೆ_ಓಬವ್ವ
ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ. ಒನಕೆ ಓಬವ್ವ ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು.ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು. ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆ ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಓಬವ್ವ ಸ್ಮರಣೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿನ ಪ್ರಸಿದ್ಧ ಹಾಡಿನಲ್ಲಿ ಅವರ ವೀರೋಚಿತ ಪ್ರಯತ್ನವನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ನಟಿ ಜಯಂತಿ (ನಟಿ) ಅವರು ಓಬವ್ವನ ಪಾತ್ರ ಮಾಡಿದ್ದರು. ೨೦೧೯ರಲ್ಲಿ ಚಿತ್ರದುರ್ಗದ ಒನಕೆ ಓಬವ್ವ ಎನ್ನುವ ಸಿನಿಮಾದಲ್ಲಿ ತಾರಾ ಅನುರಾಧಾ ಅವರು ಒನಕೆ ಓಬವ್ವನಾಗಿ ಅಭಿನಯಿಸಿದ್ದಾರೆ. ಇವನ್ನೂ ನೋಡಿ ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕ ವರ್ಗ:ಕರ್ನಾಟಕದ ಇತಿಹಾಸ ವರ್ಗ:ಚಿತ್ರದುರ್ಗ ಜಿಲ್ಲೆ [[ವರ್ಗ:ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
ಪಂಪ
https://kn.wikipedia.org/wiki/ಪಂಪ
ಪಂಪ (ಕ್ರಿ.ಶ. ೯೦೨-2000) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. http://www.kannadakavi.com/kavikoota/1halekannada/pampa.htm ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. "ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ" ಇವೆರಡೂ, ಪಂಪನ ಎರಡು ಮೇರು ಕೃತಿಗಳು. ಹಿನ್ನೆಲೆ ಪಂಪನು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ.ಸುಮಾರು ೯೦೨ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪನ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು.ಪಂಪ, ಮೈಸೂರು ವಿಶ್ವವಿದ್ಯಾಲಯ, ೧೯೫೭ ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಾಕ್ಕೆ ಸೇರಿದ ನಿಡುಗುಂದಿ ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ. ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕದ ಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ. ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು. ಜೀವನ ಪಂಪನು(ಪಂಪ ಅವರ ನಿಜವಾದ ಹೆಸರು ಜಯಂತ) ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ. ಪಂಪನು ಪುಲಿಗೆರೆಯ 'ತಿರುಳ್ ಗನ್ನಡ'ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ. ಪಂಪನ ಇನ್ನೊಂದು ಕೃತಿ 'ವಿಕ್ರಮಾರ್ಜುನ ವಿಜಯ'ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ. ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕೂರ್ಕ್ಯಾಲ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ. ಪಂಪನನ್ನು "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ. ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. 'ಹಿತಮಿತ ಮೃದುವಚನ' ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ. ವಿಶೇಷವಾಗಿ ಕುವೆಂಪು ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು. ಕೃತಿಗಳು ಆದಿಪುರಾಣhttps://www.kendasampige.com/ಈ-ಭೋಗದ-ಜಗತ್ತೇ-ಬೇರೆ-ಆದಿಪುರ/ ವಿಕ್ರಮಾರ್ಜುನ ವಿಜಯ no poems ಪಂಪ ಭಾರತ ಬನವಾಸಿ ವರ್ಣನೆಯ ಪದ್ಯ ಪಂಪನ ಭಾರತಕಾವ್ಯದಲ್ಲಿ ಬರುವ ಬನವಾಸಿಯ ವರ್ಣನೆಯನ್ನು ನೀಡುವು ಪದ್ಯಗಳು ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ- ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ| ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ- ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮ (ಚಂಪಕಮಾಲೆ) ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ- ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ-| ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯ (ಉತ್ಪಲಮಾಲೆ) ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ- ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ-| ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ- ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦ (ಉತ್ಪಲಮಾಲೆ) ಗದ್ಯಭಾಗ - ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ.ಪಂಪಭಾರತ : ಗದ್ಯಾನುವಾದ - ಚತುರ್ದಶಾಶ್ವಾಸಂ ಪದ್ಯ ೪೩-೫೨ ಗದ್ಯಾನುವಾದ name="ಪಂಪಭಾರತ : ಗದ್ಯಾನುವಾದ - ಚತುರ್ಥಾಶ್ವಾಸಂ"> ಹೊರಗಿನ ಸಂಪರ್ಕಗಳು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿರುವ ಪಂಪನಮನೆ/ ವಂಶದವರ ಮನೆ- ಮತ್ತು ಸ್ಮಾರಕ ನಮ್ಮ ಕರ್ನಾಟಕ ಪುಟದಲ್ಲಿ ಪಂಪ (ಇದು ಕೆಟ್ಟಿದೆ) ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಪ ಉಲ್ಲೇಖ ವರ್ಗ:ಕವಿಗಳು ವರ್ಗ:ಹಳಗನ್ನಡ ಕವಿಗಳು
ಟಿಮ್ ಬರ್ನರ್ಸ್ ಲೀ
https://kn.wikipedia.org/wiki/ಟಿಮ್_ಬರ್ನರ್ಸ್_ಲೀ
thumb|ಟಿಮ್ ಬರ್ನರ್ಸ್-ಲೀ ಸರ್ ಟಿಮೊತಿ ಜಾನ್ "ಟಿಮ್" ಬೆರ್ನರ್ಸ್-ಲೀ (ಜನನ: ಜೂನ್ ೮, ೧೯೫೫ ಲಂಡನ್) ವಿಶ್ವವ್ಯಾಪಿ ಜಾಲದ ಜನಕ. ಹೈಪರ್‌ಟೆಕ್‌ಸ್ಟ್ ಬಗ್ಗೆ ಒಂದಿಷ್ಟು ಮಾಹಿತಿ ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ (ಇಂಟರ್ನೆಟ್‌ಗೆ) ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್‌ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್ ಮಾರ್ಕೆಟಿಂಗ್, ನೆಟ್‌ವರ್ಕ್, ಮಾರ್ಕೆಟಿಂಗ್, ಹೀಗೆ ಹಲವು ವಿಷಯಗಳ ತಾಣಗಳ ಸೂಚಿ ದೊರೆಯುತ್ತದೆ. ನೆಟ್‌ವರ್ಕ್ ಬಗ್ಗೆ ನೀಡಿರುವ ತಾಣದ ತಂತು (ಲಿಂಕ್) ಮೇಲೆ ಕ್ಲಿಕ್ ಮಾಡಿ ನೋಡಿ. ಅದು ನಿಮ್ಮನ್ನು ಗಣಕಗಳ ಜಾಲ (ನೆಟ್‌ವರ್ಕ್) ಬಗ್ಗೆ ವಿವರ ನೀಡುವ ತಾಣವಾಗಿರುತ್ತದೆ. ಅಲ್ಲಿರುವ ಇನ್ಯಾವುದಾದರೂ ಕೊಂಡಿಯ ಮೇಲೆ ಕ್ಲಿಕ್ ಮಾಡಿ ನೋಡಿ. ನೀವು ಮೂಲ ವಿಷಯ ಬಿಟ್ಟು ಇನ್ನೆಲ್ಲೋ ತಲುಪಿರುತ್ತೀರಾ. ಇಲ್ಲಿ ನೀವು ಗಮನಿಸಬೇಕಾದ ಒಂದು ವಿಷಯ ಎಂದರೆ ಕೊಂಡಿ, ತಂತು ಅಥವಾ ಲಿಂಕ್. ಈ ತಂತು ಮೇಲೆ ಕ್ಲಿಕ್ ಮಾಡಿದಂತೆಲ್ಲಾ ಇನ್ನೊಂದು ಜಾಲತಾಣ (ವೆಬ್‌ಸೈಟ್) ಅಥವಾ ಜಾಲಪುಟ (ವೆಬ್‌ಪೇಜ್) ತೆರೆದುಕೊಳ್ಳುತ್ತದೆ. ಹೀಗೆ ಮಾಹಿತಿಗಳನ್ನು ಕುಣಿಕಾ ಬಂಧನಗೊಳಿಸುವುದಕ್ಕೆ ಹೈಪರ್‌ಟೆಕ್‌ಸ್ಟ್ ಎಂಬ ಹೆಸರಿದೆ. ಅಂತರಜಾಲ ಎಂದರೆ.. ಅಂತರಜಾಲ ಒಂದು ರೀತಿಯಲ್ಲಿ ಸರ್ವಾಂತರ್ಯಾಮಿಯಾಗಿದೆ. ಅದರ ಬಗ್ಗೆ ಕೇಳದವರು ಇಲ್ಲವೇ ಇಲ್ಲವೆಂದರೂ ನಡೆಯುತ್ತದೆ. ಹೆಚ್ಚು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಬಳಸುತ್ತಿದ್ದಾರೆ. ಅಂತರಜಾಲ ಎಂದರೆ ಏನು ಎಂದು ಹಲವು ಮಂದಿಯನ್ನು ಕೇಳಿ ನೋಡಿ. ಹೆಚ್ಚಿನವರು ಹೇಳುವ ಉತ್ತರ - www. ಈ www ಎಂದರೆ ಅಂತರಜಾಲ ಅಲ್ಲ ಎಂದು ಎಷ್ಟು ಮಂದಿಗೆ ಗೊತ್ತಿದೆ? ಆಶ್ಚರ್ಯವಾಯಿತೇ? www ಎಂದರೆ ವರ್ಲ್ಡ್ ವೈಡ್ ವೆಬ್ ಎಂಬುದರ ಸಂಕ್ಷಿಪ್ತ ರೂಪ. ಇದು ಅಂತರಜಾಲದ ಒಂದು ಅಂಗವೇ ವಿನಾ ಅದುವೇ ಅಂತರಜಾಲವಲ್ಲ! ಅಂತರಜಾಲದಲ್ಲಿ ವಿಶ್ವವ್ಯಾಪಿ ಜಾಲ (www), ವಿ-ಅಂಚೆ (ಇ-ಮೈಲ್), ಟೆಲ್‌ನೆಟ್, ಎಫ್‌ಟಿಪಿ, ನ್ಯೂಸ್‌ಗ್ರೂಪ್, ಇತ್ಯಾದಿ ಹಲವು ವಿಭಾಗಗಳಿವೆ. ಇವಗಳಲ್ಲಿ ಪ್ರತಿಯೊಂದರ ಬಗೆಗೂ ಹಲವು ಪ್ರತ್ಯೇಕ ಲೇಖನ ಬರೆಯುವಷ್ಟು ವಿಷಯಗಳಿವೆ. ಇನ್ನೂ ಒಂದು ಸ್ವಾರಸ್ಯಕರ ವಿಷಯವೆಂದರೆ ಈ ವಿಶ್ವವ್ಯಾಪಿ ಜಾಲ ಕೇವಲ ಹನ್ನೊಂದು ವರ್ಷಗಳಷ್ಟು ಹಳೆಯದು! ನಾನೀಗ ಹೇಳಹೊರಟಿರುವುದು ವಿಶ್ವವ್ಯಾಪಿ ಜಾಲದ ಬಗ್ಗೆ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ. ಈ ತಾಣಗಳೆಲ್ಲ ಒಟ್ಟು ಸೇರಿ ವಿಶ್ವವ್ಯಾಪಿ ಜಾಲವಾಗಿದೆ. ತಾಣದಿಂದ ತಾಣಕ್ಕೆ ತಂತುಗಳ ಮೂಲಕ ಲಂಘನ ಮಾಡಬಹುದು. ಈ ರೀತಿಯ ಸಂಪರ್ಕಕ್ಕೆ ಹೈಪರ್‌ಲಿಂಕಿಂಗ್ ಎನ್ನುತ್ತಾರೆ. ಈ ವಿಶ್ವವ್ಯಾಪಿ ಜಾಲದಲ್ಲಿ ಇರುವ ತಾಣಗಳ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಒಂದು ಗುಂಡು ಪಿನ್ನಿನಿಂದ ಹಿಡಿದು ರಾಕೆಟ್ ತನಕದ ಮಾಹಿತಿಗಳನ್ನು ನೀಡುವ ತಾಣಗಳು ಅಲ್ಲಿವೆ. ಸರ್ ಟಿಮೊತಿ ಜಾನ್ "ಟಿಮ್" ಬೆರ್ನರ್ಸ್-ಲೀ ವಿಜ್ಞಾನದ ಬಹುಪಾಲು ಸಂಶೋಧನೆಗಳಂತೆ ಈ ವಿಶ್ವವ್ಯಾಪಿ ಜಾಲದ ಸಂಶೋಧನೆಯೂ ಆಕಸ್ಮಿಕವಾಗಿಯೇ ಆದುದು. ಟಿಮ್ ಬರ್ನರ್ಸ್ ಲೀ (Tim Berners-Lee) ಎಂಬುವರು ೧೯೮೦ರಲ್ಲಿ ಜಿನೇವಾದಲ್ಲಿರುವ ಯುರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಸಂಶೋಧನಾಲಯದಲ್ಲಿ (CERN, ಸರ್ನ್) ಕೆಲಸದಲ್ಲಿದ್ದರು. ಅಲ್ಲಿ ನಡೆಯುತ್ತಿದ್ದ ಹಲವು ಸಂಶೋಧನೆ, ಅವುಗಳಿಗೆ ಸಂಬಂಧಪಟ್ಟ ಆಕರ ಮಾಹಿತಿ ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಗಣಕದಲ್ಲಿ ವ್ಯವಸ್ಥಿತವಾಗಿ ತನಗೆ ಸುಲಭವಾಗಿ ಸಿಗುವಂತೆ ಸಂಗ್ರಹಿಸಿಡಲು ಅವರು ಹೈಪರ್ಟೆಕ್ಸ್ಟ್ ವಿಧಾನವನ್ನು ಪ್ರಥಮ ಬಾರಿ ಬಳಸಿದರು. ಅವರು ಈ ಕೆಲಸಕ್ಕಾಗಿಯೇ ಎನ್‌ಕ್ವೈರ್ ಹೆಸರಿನ ಒಂದು ಗಣಕ ಕ್ರಮವಿಧಿ (ಕಂಪ್ಯೂಟರ್ ಪ್ರೋಗ್ರಾಮ್) ರಚನೆ ಮಾಡಿದರು. ಅದೇನೂ ಪರಿಪೂರ್ಣ ತಂತ್ರಾಂಶವಾಗಿರಲಿಲ್ಲ. ಆದರೆ ಅವರ ಕೆಲಸದ ಅವಧಿ ಮುಗಿದುದರಿಂದ ಅವರು ಹಿಂದಕ್ಕೆ ತೆರಳಿದರು. ಆದರೆ ಅವರು ಪುನಃ ೧೯೮೪ರಲ್ಲಿ ಪೂರ್ಣ ಪ್ರಮಾಣದ ಉದ್ಯೋಗಿಯಾಗಿ ಅಲ್ಲಿಗೇ ಬಂದರು. ತಾವು ಹಿಂದೆ ಬಳಸಿದ ಎನ್‌ಕ್ವೈರ್ ಅವರ ತಲೆಯಲ್ಲಿ ಕೊರೆಯುತ್ತಿತ್ತು. ಹೈಪರ್ಟೆಕ್ಸ್ಟ್ ಮತ್ತು ಅಂತರಜಾಲಗಳು ಈಗಾಗಲೇ ಅಸ್ತಿತ್ವದಲ್ಲಿದ್ದವು. ಸರ್ನ್ನವರ ಸಂಶೋಧನೆಗಳು ಪ್ರಪಂಚಾದ್ಯಂತ ನಡೆಯುತ್ತಿದ್ದವು. ಎಲ್ಲ ಕಡೆಗಳಿಂದ ಸರ್ನ್‌ಗೆ ಸಂಶೋಧನೆಯ ವರದಿಗಳನ್ನು ವಿದ್ಯುನ್ಮಾನ (ಇಲೆಕ್ಟ್ರಾನಿಕ್) ವಿಧಾನದಿಂದ ಕಳುಹಿಸಲು ಒಂದು ನಿಶ್ಚಿತ ಪದ್ಧತಿಯನ್ನು ಪಾಲಿಸಬೇಕಿತ್ತು. ಇದು ಬಹುಮಂದಿ ವಿಜ್ಞಾನಿಗಳಿಗೆ ತಲೆನೋವು ತರುತ್ತಿತ್ತು. ಲೀ ಇದರ ಬಗ್ಗೆ ತಲೆಕೆಡಿಸಿಕೊಂಡರು. ತಾನು ಈಗಾಗಲೇ ಬಳಸುತ್ತಿದ್ದ ಎನ್‌ಕ್ವೈರ್ ಅನ್ನು ತನಗೆ ಮಾತ್ರವಲ್ಲದೆ ಇತರರಿಗೂ ಬಳಸಲು ಅನುಕೂಲವಾಗುವಂತೆ ಪರಿರ್ತಿಸಿದರು. ೧೯೮೯ರಲ್ಲಿ ಲೀ ಅವರು ಮಾಹಿತಿ ಜಾಲವೊಂದರ ವಿನ್ಯಾಸದ ಬಗ್ಗೆ ಸರ್ನ್‌ಗೆ ಒಂದು ಕ್ರಿಯಾ ಯೋಜನೆ ಒಪ್ಪಿಸಿದರು. ಇದರ ಬಗ್ಗೆ ಅವರಿಗೆ ಯಾವುದೇ ಉತ್ತರ ಬರಲಿಲ್ಲ. ಆದರೆ ಅವರು ಅದರ ಬಗ್ಗೆ ಚಿಂತಿಸದೆ ಪ್ರಪಂಚದ ಎಲ್ಲ ಮಾಹಿತಿಗಳನ್ನು ಅಂತರಜಾಲದ ಮೂಲಕ ತಂತುಗಳಲ್ಲಿ ಬೆಸೆಯುವ ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸ ತೊಡಗಿದರು. ಈ ಜಾಲದಲ್ಲಿರುವ ಪ್ರತಿಯೊಂದು ಮಾಹಿತಿ ಕೇಂದ್ರಕ್ಕೂ ಒಂದು ಪ್ರತ್ಯೇಕ ವಿಳಾಸವನ್ನು ಅಭಿವೃದ್ಧಿ ಮಾಡಿದರು. ಇದುವೇ ಇಂದು ನಾವೆಲ್ಲರೂ ಬಳಸುವ ಯುನಿಫಾರ್ಮ್ ರಿಸೋರ್ಸ್ ಲೊಕೇಟರ್ (URL) ಅರ್ಥಾತ್ ತಾಣಸೂಚಿ. ಈ ತಾಣಸೂಚಿಗಳಿಗೆ ಉದಾಹರಣೆ ಬೇಕಿದ್ದರೆ www.vishvakannada.com, www.microsoft.com, www.google.com, ಇತ್ಯಾದಿ. ಲೀ ಅವರು ಬಳಸಿದ ಪ್ರಥಮ ತಾಣಸೂಚಿ - info.cern.ch. ಈ ಜಾಲದಲ್ಲಿ ತಾಣಗಳ ರಚನೆಗೂ ಅವರು ಒಂದು ಸರಳ ಭಾಷೆಯನ್ನು ಹುಟ್ಟು ಹಾಕಿದರು. ಅದುವೇ ಹೈಪರ್ಟೆಕ್ಸ್ಟ್ ಮಾರ್ಕಪ್ ಲಾಂಗ್ವೇಜ್ (HTML). ಇಷೆಲ್ಲಾ ಆದರೂ ಸರ್ನ್‌ನ ನೌಕರಶಾಹಿ ಮಂದಿಗೆ ಇದರ ಮಹತ್ವ ಅರಿವಾಗಲಿಲ್ಲ. ಅವರ ಕ್ರಿಯಾಯೋಜನೆಗೆ ಹಣಕಾಸಿನ ಸಹಾಯವೂ ಬರಲಿಲ್ಲ. ಆದರೆ ಲೀ ತಮ್ಮ ಕೆಲಸ ನಿಲ್ಲಿಸಲಿಲ್ಲ. ಜಗತ್ತಿನಾದ್ಯಂತ ಎಲ್ಲ ಸಂಶೋಧಕರಿಗೆ ವಿ-ಅಂಚೆ (ಇಮೈಲ್) ಕಳುಹಿಸಿ ತಮ್ಮ ಈ ಸಂಶೋಧನೆಯನ್ನು ಬಳಸಲು ಕೇಳಿಕೊಂಡರು. ಇದರ ಮಹತ್ವ ಬಹು ಬೇಗನೆ ಹಲವಾರು ತಂತ್ರಜ್ಞರುಗಳಿಗೆ ಅರಿವಾಗಿ ಅವರೆಲ್ಲ ಅದನ್ನು ಬಳಸತೊಡಗಿದರು. ಇದರ ಫಲವೇ ಇಂದು ಜಗತ್ತಿನಾದ್ಯಂತ ಕೋಟಿಗಟ್ಟಲೆ ಮಂದಿ ಬಳಸುತ್ತಿರುವ ವಿಶ್ವವ್ಯಾಪಿ ಜಾಲ. ಆದರೆ ಸರ್ನ್‌ನ ನೌಕರಶಾಹಿ ಇನ್ನೂ ಗೊರಕೆ ಹೊಡೆಯುತ್ತಿತ್ತು. ಕೊನೆಗೂ ವಿಶ್ವವ್ಯಾಪಿ ಜಾಲವನ್ನು ಮುಂದುವರೆಸಲು ೧೯೯೪ರಲ್ಲಿ ಅಮೇರಿಕಾದ ಎಮ್.ಐ.ಟಿ.ಯಿಂದ ಅವರಿಗೆ ಕರೆಬಂತು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂತು. ವೆಬ್‌ನ ಜನಕ ಎಂದೇ ಖ್ಯಾತರಾಗಿರುವ ಲೀ ಅವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಬ್ರಿಟಿಷ್ ಸರಕಾರ ಅವರಿಗೆ “ಸರ್” ಬಿರುದಿತ್ತು ಸನ್ಮಾನಿಸಿದೆ. ಅವರು ಮಾಡಿದ ಸಂಶೋಧನೆಗೆ ಸಮಾನವಾದ ಮೂಲಭೂತ ಸಂಶೋಧನೆಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ - ಈ ಯಾವುದೇ ಕ್ಷೇತ್ರದಲ್ಲಿ ಮಾಡಿದ್ದರೆ ಅವರಿಗೆ ನೋಬೆಲ್ ಪುರಸ್ಕಾರ ದೊರೆಯುತ್ತಿತ್ತು. ಟೈಮ್ ಮ್ಯಾಗಝಿನ್ ಅವರನ್ನು ಜಗತ್ತಿನ ಮೇಲೆ ಪ್ರಭಾವ ಬೀರಿದ ಶತಮಾನದ ೧೦೦ ಖ್ಯಾತ ವಿಜ್ಞಾನಿ ತಂತ್ರಜ್ಞಾನಿಗಳ ಪಟ್ಟಿಯಲ್ಲಿ ಸೇರಿಸಿದೆ. ಐನ್‌ಸ್ಟೈನ್ ಅವರ ಹೆಸರೂ ಈ ಪಟ್ಟಿಯಲ್ಲಿದೆ ಎಂದರೆ ಲೀ ಅವರ ಸಂಶೋಧನೆಯ ಮಹತ್ವ ಅರಿವಾಗುವುದು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಂನ ಅಧ್ಯಕ್ಷರಾಗಿ ಅವರು ಈಗಲೂ ಹೊಸ ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ. ವರ್ಗ:ಮಾಹಿತಿ ತಂತ್ರಜ್ಞಾನಿಗಳು
ತರಂಗ
https://kn.wikipedia.org/wiki/ತರಂಗ
thumb |right |200px|ನೀರಿನಲ್ಲಿ ತರಂಗಗಳು ತರಂಗಗಳು ದ್ರವ್ಯ ಮತ್ತು ಜಾಗದಲ್ಲಿ, ಕಾಲಕ್ಕನುಗುಣವಾಗಿ ಶಕ್ತಿಯ ಸಮ್ಮೋಹನದೊಂದಿಗೆ ಹರಡುವ ತುಮುಲಗಳು. ತರಂಗ ಚಲನೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯಲ್ಲಿ ಅತಿ ಕಡಿಮೆ ಅಥವಾ ಶೂನ್ಯ ದ್ರವ್ಯ ಸ್ಥಳಾಂತರ ನೆಡೆಯುತ್ತದೆ. ಉದಾಹರಣೆಗೆ ಶಾಂತವಾದ ನೀರಿನಲ್ಲಿ ಒಂದು ಸಣ್ಣ ಕಲ್ಲು ಎಸೆದಾಗ ಕಲ್ಲಿನ ಶಕ್ತಿ ನೀರಿನ ಮೇಲ್ಭಾಗದಲ್ಲಿ ತರಂಗಗಳನ್ನು ಉಂಟುಮಾಡುತ್ತದೆ. ತರಂಗ ಚಲನೆಯನ್ನು ಸಮೀಕರಣಗಳ ಮೂಲಕ ವಿಷ್ಲೇಶಿಸುತ್ತಾರೆ. ಈ ಸಮೀಕರಣದ ಗಣಿತ ನಮೂನೆಯು ತರಂಗದ ವಿಧದ ಆಧಾರದ ಮೇಲೆ, ಆ ತರಂಗ ಹೇಗೆ ಕಾಲಕ್ರಮೇಣ ಚಲಿಸುವುದು ಎಂಬುದನ್ನು ವಿವರಿಸುತ್ತದೆ. ತರಂಗಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದು ಯಾಂತ್ರಿಕ ತರಂಗಗಳು. ಇವು ಚಲನೆಗೆ ಮಾಧ್ಯಮವನ್ನು ಆಧರಿಸಿವೆ. ಉದಾಹರಣೆಗೆ ಶಬ್ದ ತರಂಗ. ಯಾಂತ್ರಿಕ ತರಂಗಗಳು ಪ್ರವಹಿಸುವಾಗ ಮಾಧ್ಯಮವು ವಿರೂಪಗಳ್ಳುತ್ತದೆ. ಆ ಕ್ಷಣದಲ್ಲಿ ಪನಃಸ್ಥಾಪಿತ ಬಲಗಳು ಮಾಧ್ಯಮವನ್ನು ಮೊದಲಿನ ಸ್ಥಿತಿಗೆ ತರುತ್ತವೆ. ಎರಡನೆಯದು ವಿದ್ಯುತ್ ಕಾಂತೀಯ ತರಂಗಗಳು. ಇವುಗಳ ಚಲನೆಗೆ ಮಾಧ್ಯಮಗಳ ಅವಶ್ಯಕತೆಯಿಲ್ಲ. ಇವು ವಿದ್ಯುದಂಶಪೂರಿತ ಕಣಗಳಿಂದ ಸೃಷ್ಟಿಯಾದ ವಿದ್ಯುತ್ ಹಾಗು ಕಾಂತಕ್ಷೇತ್ರದ ಆವರ್ತಕ ಆಂದೋಲನಗಳನ್ನು ಒಳಗೊಂಡಿರುತ್ತವೆ. ಆದ್ದರಿಂದಲೇ ಇವು ನಿರ್ವಾತದಲ್ಲೂ ಚಲಿಸುವ ಶಕ್ತಿಯನ್ನು ಹೊಂದಿವೆ. ಉದಾಹರಣೆಗೆ ರೇಡಿಯೋ ತರಂಗಗಳು, ಸೂಕ್ಷ್ಮ ತರಂಗಗಳು, ರಕ್ತಾತೀತ ತರಂಗಗಳು, ದೃಶ್ಯ ತರಂಗಗಳು, ನೇರಳಾತೀತ ತರಂಗಗಳು, ಕ್ಷ ತರಂಗಗಳು, ಗ್ಯಾಮ ತರಂಗಗಳು. ಈ ತರಂಗಗಳು ತರಂಗಾಂತರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ.https://books.google.co.in/books?id=s7bp6ezoRhcC&pg=PA134&redir_esc=y#v=onepage&q&f=false ಉಲ್ಲೇಖಗಳು ವರ್ಗ:ಭೌತಶಾಸ್ತ್ರ
ಕಸ್ತೂರಿ
https://kn.wikipedia.org/wiki/ಕಸ್ತೂರಿ
thumb|ಗಂಡು ಕಸ್ತೂರಿಮೃಗದಿಂದ ಪಡೆಯಲಾದ ಕಸ್ತೂರಿ ಚೀಲ ಕಸ್ತೂರಿಯು ಗಂಡು ಕಸ್ತೂರಿಮೃಗದ ಉದರ ಮತ್ತು ಜನಕಾಂಗಗಳ ಮಧ್ಯೆ ಸ್ಥಿತವಾಗಿರುವ ಒಂದು ಗ್ರಂಥಿಯಲ್ಲಿ ಉತ್ಪಾದನೆಗೊಳ್ಳುವ ಸುವಾಸನೆ ಉಳ್ಳ ಪದಾರ್ಥ. ಅಂಗಡಿಯಲ್ಲಿ ಮಾರುವ ಕಸ್ತೂರಿ ಎಂಬ ವಸ್ತು ಈ ಪ್ರಾಣಿಯಿಂದಲೇ ಬಂದುದು. ಆದರೆ ಇತರ ಕೆಲವು ಬಗೆಯ ಪ್ರಾಣಿಗಳೂ ಇದೇ ವಾಸನೆಯನ್ನು ಹೊರಸೂಸುತ್ತವೆ.  ಉದಾಹರಣೆಗೆ ಕಸ್ತೂರಿ ದನ, ಕಸ್ತೂರಿ ಇಲಿ, ಕಸ್ತೂರಿ ಬಾತು, ಕಸ್ತೂರಿ ಮೂಗಿಲಿ ಇತ್ಯಾದಿ. ಅಲ್ಲದೆ ಕೆಲವು ಸಸ್ಯಗಳಲ್ಲೂ ಈ ಬಗೆಯ ವಾಸನೆ ಸೂಸುವ ಗ್ರಂಥಿಗಳಿವೆ. ಆ ಸಸ್ಯಗಳನ್ನು ಕಸ್ತೂರಿ ಗಿಡಗಳೆಂದು ಕರೆಯಲಾಗುತ್ತದೆ. ಕಸ್ತೂರಿ ಮೃಗವನ್ನು ಕೊಂದು ಅದರ ಹೊಟ್ಟೆಯಲ್ಲಿನ ಕಸ್ತೂರಿ ಗ್ರಂಥಿಯನ್ನು ಹೊರತೆಗೆದು ಬಿಸಿಲಿನಲ್ಲೋ, ಬಿಸಿ ಎಣ್ಣೆಯಲ್ಲಿ ಅದ್ದಿಯೋ, ಒಣಗಿಸುತ್ತಾರೆ. ಕೆಲವು ಸಾರಿ ಕಸ್ತೂರಿ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆದು ಶುದ್ಧೀಕರಿಸಿ ಮಾರುವುದೂ ಉಂಟು. ಕಸ್ತೂರಿಯಲ್ಲಿ ಮೂರು ಬಗೆಗಳುಂಟು : 1) ಟಾಂಕಿಂಗ್ ಅಥವಾ ಚೀನೀ ಕಸ್ತೂರಿ, 2) ಅಸ್ಸಾಮ್ ಅಥವಾ ನೇಪಾಳದ ಕಸ್ತೂರಿ, 3) ಕಬಾರ್ಡಿನ್ ಅಥವಾ ರಷ್ಯದ ಕಸ್ತೂರಿ. ಟಾಂಕಿಂಗ್ ಕಸ್ತೂರಿಯೇ ಇವುಗಳಲ್ಲೆಲ್ಲ ಶ್ರೇಷ್ಠವಾದುದು, ಹಾಗೂ ಹೆಚ್ಚಿನ ಬೆಲೆಯದು. ಕಸ್ತೂರಿ ಹೊಚ್ಚ ಹೊಸದಾಗಿರುವಾಗ ಮೃದುವಾಗಿಯೂ ಜಿಡ್ಡುಜಿಡ್ಡಾಗಿಯೂ ಇರುತ್ತದೆ. ಅದರ ಬಣ್ಣ ಕೆನ್ನೀಲಿ. ವಾಸನೆ ಸಹಿಸಲಾಗದಷ್ಟು ಕಟು, ರುಚಿ ಕಹಿ. ಕುದಿಯುವ ನೀರಿನಲ್ಲಿ ಸ್ವಲ್ಪ ಕರಗುತ್ತದೆ. ಇದು ಸುಗಂಧ ದ್ರವ್ಯಗಳನ್ನು ತಯಾರಿಸಲು ಉಪಯೋಗಿಸುವ ಶ್ರೇಷ್ಠತಮ ಮೂಲದ್ರವ್ಯವೆಂದು ಹೆಸರಾಗಿದೆ. ಔಷಧೀಯ ಗುಣಗಳು ಕಸ್ತೂರಿಗೆ ಔಷಧೀಯ ಗುಣಗಳೂ ಉಂಟು. ಇದನ್ನು ಉತ್ತೇಜಕ, ಕಾಮೋದ್ದೀಪಕ, ಕಫಹಾರಕ, ಸ್ವೇದಕಾರಿಯಾಗಿ ಉಪಯೋಗಿಸುತ್ತಾರೆ. ಸುಗಂಧದ ಕಾರಣ ಕಸ್ತೂರಿಯ ವೈಶಿಷ್ಟ್ಯಪೂರ್ಣ ಸುಗಂಧಕ್ಕೆ ಕಾರಣ ಅದರಲ್ಲಿನ ಮಸ್ಕೋನ್‍ ಎಂಬ ವಸ್ತು. ವಾಲ್ಬಾಮ್ ಎಂಬಾತ 1906ರಲ್ಲಿ ಮೊದಲ ಬಾರಿಗೆ ಇದನ್ನು ಕಸ್ತೂರಿಯಿಂದ ಬೇರ್ಪಡಿಸಿ ಶುದ್ಧೀಕರಿಸಿದ. ರಾಸಾಯನಿಕವಾಗಿ ಇದು 3-ಮೀಥೈಲ್-ಸೈಕ್ಲೊಪೆಂಟ ಡಿಕಾನೋನ್ ಎಂದು ತಿಳಿದುಬಂದಿದೆ. ಕೃತಕ ಕಸ್ತೂರಿ ಸ್ವಾಭಾವಿಕ ಕಸ್ತೂರಿಯಂಥ ವಾಸನೆಯಿರುವ ಹಲವಾರು ಬಗೆಯ ಸಂಯುಕ್ತಗಳನ್ನು ಕೃತಕವಾಗಿ ಸಂಶ್ಲೇಷಿಸಬಹುದಾಗಿದೆ. (1888) ರಲ್ಲಿ ಬಾರ್ ಎಂಬಾತ ಅಲ್ಯೂಮಿನಿಯಮ್ ಕ್ಲೋರೈಡಿನೊಡನೆ ಟಾಲೀನ್ ಮತ್ತು ಐಸೊಬ್ಯೂಟೈಲ್ ಬ್ರೋಮೈಡುಗಳನ್ನು ಸಂಘನನ (ಕಂಡೆನ್ಸೇಷನ್) ಕ್ರಿಯೆಗೊಳಪಡಿಸಿ ಅದರಿಂದ ಬಂದ ವಸ್ತುವನ್ನು ನೈಟ್ರೀಕರಣ ಮಾಡಿ ಕೃತಕ ಕಸ್ತೂರಿಯನ್ನು ತಯಾರಿಸಿದ. ಇದಕ್ಕೆ ಬಾರ್‍ಮಸ್ಕ್ ಎಂದು ಹೆಸರು. ಇದಲ್ಲದೆ ಕಸ್ತೂರಿಯನ್ನು ಹೋಲುವ ಜ಼ೈಲೀನ್ ಮಸ್ಕ್, ಮಸ್ಕ್‌ಕೀಟೋನ್, ಮಾಸ್ಕೀನ್, ಫ್ಯಾಂಟೋಲಿಡ್ ಎಂಬ ಸಂಯುಕ್ತಗಳನ್ನು ಕೃತಕವಾಗಿ ತಯಾರಿಸಬಹುದಾಗಿದೆ. ಇವೆಲ್ಲವನ್ನು ಸಾಬೂನು ಇತ್ಯಾದಿ ವಸ್ತುಗಳಿಗೆ ಸುವಾಸನೆ ಕೊಡಲು ಬಳಸುತ್ತಾರೆ. ಹೆಚ್ಚಿನ ಓದಿಗೆ Borschberg, Peter, "O comércio europeu de almíscar com a Ásia no inicio da edad moderna - The European Musk Trade with Asia in the Early Modern Period", Revista Oriente, 5 (2003): 90-9. Borschberg, Peter, "Der asiatische Moschushandel vom frühen 15. bis zum 17. Jahrhundert", in Mirabilia Asiatica, edited by J. Alves, C. Guillot and R. Ptak. Wiesbaden and Lisbon: Harrassowitz-Fundação Oriente (2003): 65-84. ವರ್ಗ:ಸುಗಂಧದ್ರವ್ಯಗಳು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಲಿನಕ್ಸ್
https://kn.wikipedia.org/wiki/ಲಿನಕ್ಸ್
ನ್ಯಾನೋತಂತ್ರಜ್ಞಾನ
https://kn.wikipedia.org/wiki/ನ್ಯಾನೋತಂತ್ರಜ್ಞಾನ
thumb|ನ್ಯಾನೋತಂತ್ರಜ್ಞಾನ ಉಪಯೋಗಿಸಿಕೊಂಡು ಮಾಡಲಾದ ಗೇರ್ ಸಿಸ್ಟಮ್ ನ ಚಿತ್ರ. ಆಳತೆಯ ಪ್ರಮಾಣಕ್ಕೆ ಪಕ್ಕದ ಧೂಳಿನ ಹುಳುವನ್ನು ನೋಡಿ ನ್ಯಾನೋತಂತ್ರಜ್ಞಾನ ಅಥವಾ ನ್ಯಾನೋಟೆಕ್ನಾಲಜಿ ನ್ಯಾನೋಮೀಟರ್ ಪ್ರಮಾಣದಲ್ಲಿ ಮಾಡಲಾಗುವ ಯಾವುದೇ ತಂತ್ರಜ್ಞಾನ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ (ಸಾಧಾರಣವಾಗಿ ೦.೧ ರಿಂದ ೧೦೦ ನ್ಯಾ.ಮೀ.). ಒಂದು ನ್ಯಾನೋಮೀಟರ್ ಎಂದರೆ ಒಂದು ಮಿಲ್ಲಿ ಮೀಟರ್‌ ನ ಸಾವಿರದ ಒಂದನೇ ಅಂಶ. ಕೆಲವೊಮ್ಮೆ ಈ ಶಬ್ಧವನ್ನು ಮೈಕ್ರೋಸ್ಕೋಪಿಕ್ ತಂತ್ರಜ್ಞಾನವನ್ನು ಉಲ್ಲೇಖಿಸಲು ಉಪಯೋಗಿಸಲಾಗುತ್ತದೆ. ನ್ಯಾನೊಟೆಕ್ನಾಲಜಿ ( "ನ್ಯಾನೊತಾಂತ್ರಿಕ") ಒಂದು, ಪರಮಾಣು ಆಣ್ವಿಕ ಮತ್ತು ಸುಪ್ರಮೊಲೆಕೂಲರ್ ಪ್ರಮಾಣದಲ್ಲಿ ಮ್ಯಾಟರ್ಗಳನ್ನೂ ಬದಲಾಯಿಸುವ ಒಂದು ವಿಧಿ. ನ್ಯಾನೊತಂತ್ರಜ್ಞಾನದ ಆರಂಭಿಕ ವ್ಯಾಪಕ ವಿವರಣೆ ನಿಖರವಾಗಿ ಅತಿಸೂಕ್ಷ್ಮ ಉತ್ಪನ್ನಗಳ ತಯಾರಿಕೆ ಎಂದು ಹೇಳಲಾಗುವ , ಪರಮಾಣುಗಳ ಮತ್ತು ಕಣಗಳ ನಿರ್ವಹಣೆ ನಿರ್ದಿಷ್ಟ ತಾಂತ್ರಿಕ ಗುರಿ ಎಂದು ಕರೆಯಲಾಗುತಿತ್ತು, ಈಗ ಅಣುಗಳ ನ್ಯಾನೊತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ನ್ಯಾನೊತಂತ್ರಜ್ಞಾನದ ಒಂದು ಸಾಮಾನ್ಯ ವಿವರಣೆ ತರುವಾಯ ಮ್ಯಾಟರ್ ಕನಿಷ್ಠ ಒಂದು ಆಯಾಮ 1 100 ನ್ಯಾನೋಮೀಟರುಗಳಷ್ಟು ಗಾತ್ರದ ಜೊತೆ ನ್ಯಾನೊತಂತ್ರಜ್ಞಾನದ ವ್ಯಾಖ್ಯಾನಿಸುವ ರಾಷ್ಟ್ರೀಯ ನ್ಯಾನೊಟೆಕ್ನಾಲಜಿ ಇನಿಶಿಯೇಟಿವ್, ಸ್ಥಾಪಿಸಿದರು. ಈ ವ್ಯಾಖ್ಯಾನವು ಕ್ವಾಂಟಂ ಯಾಂತ್ರಿಕ ಪರಿಣಾಮಗಳು ಈ ಪರಿಮಾಣ-ಕ್ಷೇತ್ರದಲ್ಲಿ ಪ್ರಮಾಣದ ಮುಖ್ಯ ಎಂಬುದನ್ನು ಪ್ರತಿಬಿಂಬಿಸುತ್ತದೆ, ಮತ್ತು ಆದ್ದರಿಂದ ವ್ಯಾಖ್ಯಾನ ಸಂಭವಿಸುವ ಮ್ಯಾಟರ್ ವಿಶೇಷ ಗುಣಗಳನ್ನು ವ್ಯವಹರಿಸಲು ಸಂಶೋಧನೆ ಮತ್ತು ತಂತ್ರಜ್ಞಾನಗಳ ಎಲ್ಲಾ ರೀತಿಯ ಸೇರಿದೆ ಸಂಶೋಧನಾ ವರ್ಗದ ಒಂದು ನಿರ್ದಿಷ್ಟ ತಾಂತ್ರಿಕ ಗುರಿ ಬದಲಾಯಿತು ನಿಗದಿತ ಗಾತ್ರದ ಮಿತಿ ಕಮ್ಮಿಯಾಯಿತು.ಅದರ ಸಾಮಾನ್ಯ ಲಕ್ಷಣ ಗಾತ್ರ ಸಂಶೋಧನೆ ಮತ್ತು ಅನ್ವಯಗಳ ವ್ಯಾಪಕ ಉಲ್ಲೇಖಿಸಲು ಈ ಪದವು ಬಹುವಚನದ ರೂಪದಲ್ಲಿ "ನ್ಯಾನೊಟೆಕ್ನಾಲಜೀಸ್" ಹಾಗೂ "ನ್ಯಾನೊಪ್ರಮಾಣದ ತಂತ್ರಜ್ಞಾನಗಳು" ನೋಡಲು ಆದ್ದರಿಂದ ಸಾಮಾನ್ಯವಾಗಿದೆ. ಏಕೆಂದರೆ ಸಂಭಾವ್ಯ ಅನ್ವಯಗಳನ್ನು (ಕೈಗಾರಿಕಾ ಮತ್ತು ಸೇನಾ ಸೇರಿದಂತೆ) ವಿವಿಧ ಸರ್ಕಾರಗಳು ನ್ಯಾನೊತಂತ್ರಜ್ಞಾನ ಸಂಶೋಧನೆಯಲ್ಲಿ ಬಿಲಿಯನ್ಗಟ್ಟಲೆ ಡಾಲರ್ ಬಂಡವಾಳ ತೊಡಗಿಸಿದ್ದಾರೆ. 2012 ರವರೆಗೆ, ತನ್ನ ರಾಷ್ಟ್ರೀಯ ನ್ಯಾನೊಟೆಕ್ನಾಲಜಿ ಇನಿಶಿಯೇಟಿವ್ ಮೂಲಕ, ಅಮೇರಿಕಾ 3.7 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ, ಯುರೋಪಿಯನ್ ಯೂನಿಯನ್ 1.2 ಶತಕೋಟಿ ಹಾಗು ಜಪಾನ್ 750 ಮಿಲಿಯನ್ ಡಾಲರ್ ಹೂಡಿಕೆ.Apply nanotech to up industrial, agri output, The Daily Star (Bangladesh) |The Daily Star (Bangladesh), 17 April 2012. ನ್ಯಾನೊಟೆಕ್ನಾಲಜಿ ಮೇಲ್ಮೈ ಗಾತ್ರ ಅಧಾರಿತವಾಗಿ ಬಹಳ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ ಅವುಗಳು ವಿಜ್ಞಾನ ಸಾವಯವ ರಸಾಯನಶಾಸ್ತ್ರ, ಅಣು ಜೀವಶಾಸ್ತ್ರ, ಅರೆವಾಹಕ ಭೌತಶಾಸ್ತ್ರ, ಮಿಕ್ರೊಫಬ್ರಿಕಶನ್, ಅಣು ಎಂಜಿನಿಯರಿಂಗ್, ಇತ್ಯಾದಿ ವೈವಿಧ್ಯಮಯ ವಿಜ್ಞಾನದ ಜಾಗ ಸೇರಿದಂತೆ ನೈಸರ್ಗಿಕವಾಗಿ ಬಹಳ ವಿಶಾಲವಾಗಿದೆ ಸಂಬಂಧಿಸಿದ ಸಂಶೋಧನೆ ಮತ್ತು ಅಳವಡಿಕೆಗೆ ಪರಮಾಣು ಮಾಪಕದ ಮ್ಯಾಟರ್ ನಿಯಂತ್ರಣಕ್ಕೆ ನಿರ್ದೇಶನ ನ್ಯಾನೊಪ್ರಮಾಣದ ಮೇಲೆ ಆಯಾಮಗಳನ್ನು ಹೊಸ ವಸ್ತುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ, ಸಾಂಪ್ರದಾಯಿಕ ಸಾಧನ ಭೌತಶಾಸ್ತ್ರದ ವಿಸ್ತರಣೆಗಳನ್ನು ಅಣುಗಳ ಸ್ವಯಂ ಜೋಡಣೆ ಆಧಾರದ ಮೇಲೆ ಸಂಪೂರ್ಣವಾಗಿ ಹೊಸ ಮಾರ್ಗಗಳನ್ನು ಹಿಡಿದು ಅಭಿವೃದ್ದಿ ಕಾರ್ಯ ನಡೆದಿದೆ. ವಿಜ್ಞಾನಿಗಳು ಪ್ರಸ್ತುತ ನ್ಯಾನೊತಂತ್ರಜ್ಞಾನದ ಭವಿಷ್ಯದ ಪರಿಣಾಮಗಳನ್ನು ಚರ್ಚಿಸುತ್ತಿದ್ದಾರೆ. ನ್ಯಾನೊಟೆಕ್ನಾಲಜಿ ಇಂತಹ ನ್ಯಾನೋಮೆಡಿಸಿನ್, ನಾನೋ ಎಲೆಕ್ಟ್ರಾನಿಕ್ಸ್, ಜೈವಿಕ ಶಕ್ತಿಯ ಉತ್ಪಾದನೆ, ಮತ್ತು ಗ್ರಾಹಕ ಉತ್ಪನ್ನಗಳಲ್ಲಿ ಅನ್ವಯಗಳ ವ್ಯಾಪಕ ಶ್ರೇಣಿಯ ಅನೇಕ ಹೊಸ ವಸ್ತುಗಳನ್ನು ಮತ್ತು ಸಾಧನಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, ನ್ಯಾನೊತಂತ್ರಜ್ಞಾನದ ಅದೇ ವಿಷಯಗಳ ಅನೇಕ ಹೊಸ ತಂತ್ರಜ್ಞಾನ, ವಿಷಕಾರಕ ಮತ್ತು ನ್ಯಾನೊವಸ್ತುಗಳ ಪರಿಸರ ಪರಿಣಾಮ, ಬಗ್ಗೆ ಸೇರಿದಂತೆ ಹಲವಾರು ತೊಂದರೆ ಹುಟ್ಟುಹಾಕುತ್ತದೆ ಮತ್ತು ವಿವಿಧ ಪ್ರಳಯ ಸನ್ನಿವೇಶಗಳಲ್ಲಿ ಬಗ್ಗೆ ಊಹಾಪೋಹದ ಜಾಗತಿಕ ಆರ್ಥಿಕತೆ ತಮ್ಮ ಸಂಭಾವ್ಯ ಪರಿಣಾಮಗಳ ಈ ಕಾಳಜಿಗಳು ನ್ಯಾನೊತಂತ್ರಜ್ಞಾನದ ವಿಶೇಷ ನಿಯಂತ್ರಣ ಆಗಬೇಕಿದೆ ಎಂಬುದನ್ನು ಸಮರ್ಥನಾ ಗುಂಪುಗಳು ಮತ್ತು ಸರ್ಕಾರಗಳು ನಡುವೆ ಚರ್ಚೆ ಕಾರಣವಾಗಿವೆ. ಮೂಲ ನ್ಯಾನೊತಂತ್ರಜ್ಞಾನದ ಶ್ರೇಯಾಂಕದ ಕಲ್ಪನೆಗಳನ್ನು ತನ್ನ ಚರ್ಚೆಗೆ ಹೆಸರಾದ ಭೌತವಿಜ್ಞಾನಿ ರಿಚರ್ಡ್ ಫೆನ್ಮನ್ 1959 ರಲ್ಲಿ ಕೆಳಭಾಗದಲ್ಲಿ ಸಾಕಷ್ಟು ಕೋಣೆಗಳು ಇಲ್ಲ ಎಂಬ ಚರ್ಚೆಯಲ್ಲಿ ಚರ್ಚಿಸಿದರು. ಆತ ಪರಮಾಣುಗಳ ನೇರ ಕುಶಲ ನಿರ್ವಹಣೆಯ ಮೂಲಕ ಸಂಶ್ಲೇಷಣೆ ಸಾಧ್ಯತೆಯನ್ನು ವಿವರಿಸಿದ್ದಾರೆ . ಪದ "ನ್ಯಾನೋ ತಂತ್ರಜ್ಞಾನ" ಮೊದಲು 1974 ರಲ್ಲಿ ನೊರಿಒ ತನಿಗುಚಿ ಮೂಲಕ ಆವಿಷ್ಕಾರವಾದರು ಅದು ವ್ಯಾಪಕವಾಗಿ ತಿಳಿದಿರಲಿಲ್ಲ ಆದರೂ ಬಳಸಲಾಯಿತು. ಫೆನ್ಮನ್ನ ಪರಿಕಲ್ಪನೆಗಳು ಸ್ಫೂರ್ತಿ, ಕೆ ಎರಿಕ್ ಡ್ರೆಕ್ಸ್ಲರ್ ಪದ "ನ್ಯಾನೊತಂತ್ರಜ್ಞಾನದ" ಬಳಸಲಾಗುತ್ತದೆ ಸೃಷ್ಟಿ ತನ್ನ 1986 ಪುಸ್ತಕ ಎಂಜಿನ್: ಒಂದು ನ್ಯಾನೊಪ್ರಮಾಣದ "ಅಸೆಂಬ್ಲರ್" ಸ್ವತಃ ಪ್ರತಿಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಇದು ಕಲ್ಪನೆಯನ್ನು ಸೂಚಿಸುತ್ತದೆ ನ್ಯಾನೊತಂತ್ರಜ್ಞಾನದ ಬರುವ ಯುಗದ ಮತ್ತು ಪರಮಾಣು ನಿಯಂತ್ರಣ ಅನಿಯಂತ್ರಿತ ಸಂಕೀರ್ಣತೆಯ ಮತ್ತು ಇತರ ವಸ್ತುಗಳ ಉಲ್ಲೇಖ ಮಾಡಲಾಗಿದೆ . 1986 ರಲ್ಲಿ ಸಹ ಡ್ರೆಕ್ಸ್ಲರ್ ಸಾರ್ವಜನಿಕ ಅರಿವು ಮತ್ತು ನ್ಯಾನೊತಂತ್ರಜ್ಞಾನ ಪರಿಕಲ್ಪನೆಗಳು ಮತ್ತು ಪರಿಣಾಮಗಳು ತಿಳುವಳಿಕೆ ಹೆಚ್ಚಿಸಲು ಸಹಾಯ ದೂರದೃಷ್ಟಿ ಇನ್ಸ್ಟಿಟ್ಯೂಟ್ ಸ್ಥಾಪಿಸಲಾಯಿತು. ಹೀಗಾಗಿ, 1980 ರಲ್ಲಿ ಒಂದು ಕ್ಷೇತ್ರವಾಗಿ ನ್ಯಾನೊತಂತ್ರಜ್ಞಾನದ ಹುಟ್ಟು ಅಭಿವೃದ್ಧಿ ಮತ್ತು ನ್ಯಾನೊತಂತ್ರಜ್ಞಾನ ಒಂದು ಕಾಲ್ಪನಿಕ ಚೌಕಟ್ಟಿನಲ್ಲಿ ಜನಪ್ರಿಯಗೊಳಿಸಿದರು ಡ್ರೆಕ್ಸ್ಲರ್ ಸೈದ್ಧಾಂತಿಕ ಮತ್ತು ಲೋಕೋಪಯೋಗಿ, ಒಂದೆಡೆ ಮೂಲಕ ಸಂಭವಿಸಿದೆ, ಮತ್ತು ಉನ್ನತ ಗೋಚರತೆಯನ್ನು ಪರಮಾಣು ನಿಯಂತ್ರಣ ಭವಿಷ್ಯ ಹೆಚ್ಚುವರಿ ವ್ಯಾಪಕ ಗಮನ ಸೆಳೆದರು ಪ್ರಾಯೋಗಿಕ ಬೆಳವಣಿಗೆಗಳು ನಡೆದವು. 1980 ರಲ್ಲಿ, ಎರಡು ಪ್ರಮುಖ ಪ್ರಗತಿಗಳು ಆಧುನಿಕ ಯುಗದಲ್ಲಿ ನ್ಯಾನೊತಂತ್ರಜ್ಞಾನದ ಬೆಳವಣಿಗೆ ಕಿಡಿ ಆಯಿತು. ಮೊದಲ, ಆವಿಷ್ಕಾರ 1981 ರಲ್ಲಿ ಸ್ಕ್ಯಾನಿಂಗ್ ಟನಲಿಂಗ್ ಸೂಕ್ಷ್ಮದರ್ಶಕ ಪ್ರತ್ಯೇಕ ಅಣುಗಳು ಮತ್ತು ಬಂಧಗಳ ಅಭೂತಪೂರ್ವ ದೃಶ್ಯೀಕರಣ ನೀಡುತ್ತದೆ, ಮತ್ತು ಯಶಸ್ವಿಯಾಗಿ 1989 ರಲ್ಲಿ ವೈಯಕ್ತಿಕ ಪರಮಾಣುಗಳಿಗೆ ಕುಶಲತೆಯಿಂದ ಉಪಯೋಗಿಸಲಾಗಿತ್ತು ಸೂಕ್ಷ್ಮದರ್ಶಕದ ಅಭಿವರ್ಧಕರು ಗರ್ಡ್ ಬಿನ್ನಿಂಗ್ ಮತ್ತು ಹೆನ್ರಿಕ್ ಅರ್ನೆಸ್ಟ್ ಐಬಿಎಂ ಜ್ಯೂರಿಚ್ ರೀಸರ್ಚ್ ಲ್ಯಾಬೋರೇಟರಿ ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು 1986 ರಲ್ಲಿ ಭೌತಶಾಸ್ತ್ರದಲ್ಲಿ ಬಿನ್ನಿಂಗ್ , ಕುಅತೆ ಮತ್ತು ಗರ್ಬರ್, ಅದೇ ವರ್ಷ ಹೋಲುವ ಅಣು ಬಲ ಸೂಕ್ಷ್ಮ ಕಂಡುಹಿಡಿದರು. ಉಲ್ಲೇಖಗಳು ಬಾಹ್ಯ ಕೊಂಡಿಗಳು What is Nanotechnology? (A Vega/BBC/OU Video Discussion) ವರ್ಗ:ತಂತ್ರಜ್ಞಾನ
ನ್ಯಾನೋಟೆಕ್ನಾಲಜಿ
https://kn.wikipedia.org/wiki/ನ್ಯಾನೋಟೆಕ್ನಾಲಜಿ
REDIRECT ನ್ಯಾನೋತಂತ್ರಜ್ಞಾನ
ಭಾರತೀಯ ವಿಜ್ಞಾನ ಸಂಸ್ಥೆ
https://kn.wikipedia.org/wiki/ಭಾರತೀಯ_ವಿಜ್ಞಾನ_ಸಂಸ್ಥೆ
ಐಐಎಸ್‍ಸಿ ಭಾರತೀಯ ವಿಜ್ಞಾನ ಸಂಸ್ಥೆಯು (Indian Institute of Science(IISc)) ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು , ಬೆಂಗಳೂರಿನಲ್ಲಿದೆ. ಜಮ್ಷೇಟ್ಜಿ ಟಾಟಾ ಹಾಗೂ ಮೈಸೂರಿನ ಮಹಾರಾಜ ಎಚ್.ಎಚ್ ಶ್ರೀ ಕೃಷ್ಣರಾಜ ಒಡೆಯರ್ ರವರ ಸಕ್ರಿಯ ನೆರವಿನೊಂದಿಗೆ ೧೯೦೯ ರಲ್ಲಿ ಸ್ಥಾಪಿಸಲಾಯಿತು. ಕೃಷ್ಣರಾಜ ಒಡೆಯರ್ ೩೭೧ ಎಕರೆ (೧.೫೦ ಕಿಮೀ ಚದರಡಿ) ಭೂಮಿ ದಾನ ಮಾಡಿದರು. ಹಾಗೇ ಜೆಮ್ಷೇಟ್ಜೀ ಟಾಟಾರವರು ಐಐಎಸ್ಸಿ ಸೃಷ್ಟಿಗೆ ಹಲವಾರು ಕಟ್ಟಡಗಳ ಯೋಜನೆಯನ್ನು ನೀಡಿದರು. ಈ ಸಂಸ್ಥೆಯನ್ನು ಸ್ಥಳೀಯವಾಗಿ "ಟಾಟಾ ಇನ್ಸ್ಟಿಟ್ಯೂಟ್" ಎಂದು ಕರೆಯಲಾಗುತ್ತದೆ. ಸಂಸ್ಥೆಯ ೩೭ ಅಭಿಯಂತ್ರಿಕ/ವಿಜ್ಞಾನ ವಿಭಾಗಗಳಲ್ಲಿ ೨೦೦೦ಕ್ಕೂ ಹೆಚ್ಚು ಸಂಶೋಧಕ ವಿದ್ಯಾರ್ಥಿಗಳು ಸ್ನಾತಕೋತ್ತರ/ ಪಿ.ಎಚ್.ಡಿ ಪದವಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕರೆಂಟ್ ಸೈನ್ಸ್ (Current Science) ಪತ್ರಿಕೆಯು ಸಂಸ್ಥೆಯ ಸಂಶೋಧನಾ ಕೆಲಸದ ಆಧಾರದ ಮೇರೆಗೆ IISc ಗೆ ಪ್ರಥಮ ಸ್ಥಾನ ನೀಡಿದೆ. ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ 20 Mar, 2017; ಇತ್ತೀಚೆಗೆ ಟೈಮ್ಸ್ ಹೈಯರ್ ಎಜುಕೇಶನ್ ಸರ್ವೆ ನಡೆಸಿದ ಜಾಗತಿಕ ವಿಶ್ವವಿದ್ಯಾಲಯಗಳ ಸಮೀಕ್ಷೆಯಲ್ಲಿ – ಐದು ಸಾವಿರಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ – ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಥೆಗಳಲ್ಲಿ ಎಂಟನೆಯ ಸ್ಥಾನವನ್ನು ಪಡೆಯುವ ಮೂಲಕ ಸಮಸ್ತ ಭಾರತೀಯರಿಗೂ ಐ.ಐ.ಎಸ್‌ಸಿ.(ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್‌ ಸೈನ್ಸ್ - ಐ.ಐ.ಎಸ್‌ಸಿ. ಅಥವಾ ‘ಟಾಟಾ ಇನ್ಸ್‌ಟಿಟ್ಯೂಟ್’ ಎಂದೇ ಜಾಗತಿಕವಾಗಿ ಚಿರಪರಿಚಿತವಾಗಿರುವ ಸಂಶೋಧನಾ ಸಂಸ್ಥೆ) ಹೆಮ್ಮೆ ತಂದಿದೆ. ಉನ್ನತ ಶಿಕ್ಷಣದ ರ್‍ಯಾಂಕಿಂಗ್ ಮತ್ತದರ ಲಾಭಗಳು thumb|ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪಕರು:ಐ.ಐ.ಎಸ್‌ಸಿ. ಆವರಣದಲ್ಲಿರುವ ಜೆ. ಎನ್‌. ಟಾಟಾ ಪ್ರತಿಮೆ:Iisc-Founder ವಿಜ್ಞಾನ-ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಮೂಲಕ ಮಾನವನ ಮತ್ತು ಜಗತ್ತಿನ ಕಲ್ಯಾಣದ ಸಾಧ್ಯತೆಗಳೇನೆಂಬುದನ್ನು ಇಪ್ಪತ್ತನೆಯ ಶತಮಾನದಲ್ಲಿ ನಾವು ಕಂಡುಕೊಂಡಿದ್ದೇವೆ. ಹಾಗಾಗಿಯೇ ಇಂದು ಜಗತ್ತಿನ ಎಲ್ಲಾ ದೇಶಗಳು ತಮ್ಮ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಬಹಳ ಪ್ರಮುಖವಾದ ಸಾಧನವೆಂದು ಗುರುತಿಸಿವೆ. ಜ್ಞಾನದ ಉತ್ಪತ್ತಿ ಮತ್ತು ಪ್ರಸರಣವನ್ನು ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳು ಬೋಧನೆ, ಸಂಶೋಧನೆ, ಅದರ ಆನ್ವಯಿಕತೆ, ಮೂಲಭೂತ ವ್ಯವಸ್ಥೆಗಳು ಇತ್ಯಾದಿ ಅನೇಕ ಮಾನದಂಡಗಳನ್ನಿಟ್ಟುಕೊಂಡು ಜಗತ್ತಿನಾದ್ಯಂತ ಜ್ಞಾನ ಹೇಗೆ ಬೆಳೆಯುತ್ತಿದೆ ಎಂಬುದನ್ನು ಅಳತೆ ಮಾಡುತ್ತವೆ. ಉದಾಹರಣೆಗೆ ಅಕಾಡಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್ (ಶಾಂಘೈ ರ್‍ಯಾಂಕಿಂಗ್), ಸೆಂಟರ್ ಫಾರ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್, ಗ್ಲೋಬಲ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌, ಎಚ್‌ಇಇಎಸಿಟಿ, ಲೀಡೆನ್ ರ್‍ಯಾಂಕಿಂಗ್ಸ್‌, ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್, ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್ ಇತ್ಯಾದಿ ಅನೇಕ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳ ಸಮೀಕ್ಷೆಯನ್ನು ಜಾಗತಿಕ ಮಟ್ಟದಲ್ಲಿ ನಡೆಸುತ್ತವೆ. ಈ ಸಮೀಕ್ಷೆಗಳ ವಿಶ್ಲೇಷಣೆ ಮೂಲಕ ನಿರ್ದಿಷ್ಟ ಸಂಸ್ಥೆಯೊಂದು ಯಾವ ಕ್ಷೇತ್ರದಲ್ಲಿ ತನ್ನ ಶಿಕ್ಷಣದ ಗುಣಮಟ್ಟಕ್ಕಾಗಿ ಯಾವ ರೀತಿಯ ಒತ್ತನ್ನು ನೀಡಬೇಕೆಂಬುದನ್ನು ಗುರುತಿಸಿಕೊಳ್ಳಬಹುದು. ಅಂದರೆ ಬೋಧನೆ, ಬೋಧನಾ ಕೌಶಲ, ನಿಯತಕಾಲಿಕೆಗಳಲ್ಲಿ ಪ್ರಕಟಣೆ, ಪೇಟೆಂಟ್ ಇತ್ಯಾದಿಗಳಲ್ಲಿ ಯಾವ ಕ್ಷೇತ್ರದಲ್ಲಿ ಸಂಸ್ಥೆಯೊಂದು ನಿರ್ದಿಷ್ಟವಾಗಿ ಇಂದು ಯಾವ ಸ್ಥಿತಿಯಲ್ಲಿದೆ ಮತ್ತು ಮುಂದೆ ಕ್ರಮಿಸಬೇಕಾದ ಹಾದಿಯೇನು ಎಂದು ಈ ಸಮೀಕ್ಷೆಗಳ ಮೂಲಕ ಸ್ಪಷ್ಟವಾಗುತ್ತದೆ. ಇಂತಹ ಮಾನದಂಡಗಳ ಕುರಿತಾದಂತೆ ತಕರಾರುಗಳೇನೇ ಇದ್ದರೂ ಈ ಸಮೀಕ್ಷೆಗಳು ವಿಶ್ವವಿದ್ಯಾನಿಯಗಳಿಗೆ ಗುಣಾತ್ಮಕವಾಗಿ ಸಂಶೋಧನೆ ಮತ್ತು ಜ್ಞಾನಪ್ರಸರಣೆಯ ಕಾರ್ಯಕ್ಕೆ ದಿಕ್ಸೂಚಿಯನ್ನು ನೀಡುತ್ತವೆ. ಐ.ಐ.ಎಸ್‌ಸಿ.: ಶತಮಾನದ ಹಾದಿ thumb|ಮುಖ್ಯ ಕಟ್ಟಡ:IISc Main Building ಟೈಮ್ಸ್ ಸಮೀಕ್ಷೆಯ ಪ್ರಕಾರ ಜಾಗತಿಕವಾಗಿ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈ ವರ್ಷ ಎಂಟನೆಯ ಸ್ಥಾನಕ್ಕೇರಿರುವ ಐ.ಐ.ಎಸ್‌ಸಿ. ತನ್ನ ಅಸ್ತಿತ್ವದ ಶತಮಾನದ ನಂತರವೂ ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿದೆ. 19ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ವಾಮಿ ವಿವೇಕಾನಂದರ ಅಣತಿಯಂತೆ ಜೆ. ಎನ್. ಟಾಟಾರವರು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಸಹಕಾರದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಾಗಿ ಐ.ಐ.ಎಸ್‌ಸಿ.ಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಖ್ಯಾತ ರಸಾಯನಶಾಸ್ತ್ರಜ್ಞ ಮೂರಿಸ್ ಟ್ರಾವರ್ಸ್ ಅವರ ನಿರ್ದೇಶನದಲ್ಲಿ 1909ರಲ್ಲಿ ಐ.ಐ.ಎಸ್‌ಸಿ. ಕೆಲಸ ಪ್ರಾರಂಭಿಸಿತು. ಸರ್ ಸಿ.ವಿ. ರಾಮನ್‌ರವರು ಇಲ್ಲಿಂದಲೇ ನೊಬೆಲ್ ಪಾರಿತೋಷಕವನ್ನು ಪಡೆದಿದ್ದಲ್ಲದೆ ಐ.ಐ.ಎಸ್‌ಸಿ.ಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು. ವಿಜ್ಞಾನಕ್ಷೇತ್ರದ ದಿಗ್ಗಜಗಳಾದ ಹೋಮಿ ಭಾಭಾ, ವಿಕ್ರಂ ಸಾರಾಭಾಯ್, ಸತೀಶ್ ಧನವ್, ಜೆ.ಸಿ. ಘೋಷ್, ಜಿ.ಎನ್. ರಾಮಚಂದ್ರನ್ – ಹೀಗೆ ಹಲವರು ಮೇಧಾವಿಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಖ್ಯಾತಿ ಈ ಸಂಸ್ಥೆಯದು. ಐ.ಐ.ಎಸ್‌ಸಿ.ಯ ಸಾಧನೆಗಳು ಶತಮಾನಕ್ಕೂ ಹೆಚ್ಚು ಕಾಲ ಸಂಶೋಧನೆಯಲ್ಲಿ ತೊಡಗಿರುವ ಐ.ಐ.ಎಸ್‌ಸಿ.ಯ ಸಾಧನೆಗಳನ್ನು ಪಟ್ಟಿ ಮಾಡಿದರೆ ಮುಗಿಯಲಾರದಷ್ಟು ದೊಡ್ಡದು. ಅದು ಸಾಮಾನ್ಯ ಹಳ್ಳಿಗನಿಗೂ ಹಿಂದೆ ಪರಿಚಿತವಿದ್ದ ಅಸ್ತ್ರ ಒಲೆಯಿಂದ ಹಿಡಿದು ಸೂಪರ್ ಕಂಪ್ಯೂಟರ್, ನ್ಯಾನೋ ಟೆಕ್ನಾಲಜಿವರೆಗಿನ ವಿಜ್ಞಾನದ ವಿವಿಧ ಕ್ಷೇತ್ರಗಳವರೆಗೆ ಹರಡಿದೆ. ಕೇವಲ ಉನ್ನತ ಶಿಕ್ಷಣದ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಐ.ಐ.ಎಸ್‌ಸಿ.ಯ ಇತ್ತೀಚಿನ ಕೆಲವೇ ವರ್ಷಗಳ ಸಾಧನೆಗಳನ್ನು ಉದಾಹರಣೆಗಾಗಿ ಪಟ್ಟಿ ಮಾಡಬಹುದು. 1) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌ 2017: ಜಗತ್ತಿನ ಅಗ್ರಗಣ್ಯ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎಂಟನೆಯ ಸ್ಥಾನ. 2) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ ರ್‍ಯಾಂಕಿಂಗ್ಸ್‌ 2016: ನಿಯತಕಾಲಿಕೆಗಳಲ್ಲಿ ವೈಜ್ಞಾನಿಕ ಲೇಖನಗಳ ಪ್ರಕಟಣೆ - 11ನೆಯ ಸ್ಥಾನ. 3) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ 2015: ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ 147ನೆಯ ಸ್ಥಾನ. 4) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌ ಫಾರ್ ಬ್ರಿಕ್ಸ್ ಆಂಡ್ ಎಮರ್ಜಿಂಗ್ ಇಕನಾಮಿಕ್ಸ್: ಆರನೆಯ ಸ್ಥಾನ. 5) ಗ್ಲೋಬಲ್ ಎಂಪ್ಲಾಯಬಲಿಟಿ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌, 2015: ಜಾಗತಿಕವಾಗಿ 20ನೇ ಸ್ಥಾನ. 6) ಅಕಾಡಮಿಕ್ ರ್‍ಯಾಂಕಿಂಗ್ಸ್‌ ಆಫ್ ವರ್ಲ್ಡ್ ಯೂನಿವರ್ಸಿಟೀಸ್: 2011ರಲ್ಲಿ ಮೊದಲ ಬಾರಿಗೆ (ಶಾಂಘೈ ರ್‍ಯಾಂಕಿಂಗ್‌ನಲ್ಲಿ) ಜಾಗತಿಕ ಐದುನೂರು ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿದ ಮೊದಲ ಭಾರತೀಯ ಸಂಸ್ಥೆ. ನಮಗೆಲ್ಲರಿಗೂ ತಿಳಿದಂತೆ ಭಾರತದಲ್ಲಿ ಆಧುನಿಕ ವಿಜ್ಞಾನವನ್ನು ಅತ್ಯಂತ ಕ್ರಮಬದ್ಧವಾಗಿ ಕಲಿಸುವ ಮತ್ತು ನಿರಂತರ ಸಂಶೋಧನೆಯ ಮೂಲಕ ಮುಂದಿನ ತಲೆಮಾರಿಗೆ ಸಮಗ್ರವಾಗಿ ದಾಟಿಸುವ ಕೆಲಸವನ್ನು ಪ್ರಾರಂಭಿಸಿದ ಕೆಲವೇ ಸಂಸ್ಥೆಗಳಲ್ಲಿ ಐ.ಐ.ಎಸ್‌ಸಿ.ಯೂ ಒಂದು. ಒಂದರ್ಥದಲ್ಲಿ ಸಂಶೋಧನಾ ವಾತಾವರಣ ಮತ್ತು ಅದಕ್ಕೆ ಪೂರಕವಾಗಿ ಬೇಕಾಗಿರುವ ಎಲ್ಲ ಸಂಗತಿಗಳ ಕುರಿತು ಪ್ರಯೋಗ ಮಾಡಿ ಅದನ್ನು ಅಭಿವೃದ್ಧಿಗೊಳಿಸಿದ ಕೀರ್ತಿಯಲ್ಲೂ ಐ.ಐ.ಎಸ್‌ಸಿ.ಗೆ ಹೆಚ್ಚಿನ ಪಾಲು ಸಲ್ಲುತ್ತದೆ. ಐ.ಐ.ಎಸ್‌ಸಿ.ಯ ಕಾರ್ಯವ್ಯಾಪ್ತಿಯು ವಿಜ್ಞಾನದ ನಿಯತಕಾಲಿಕೆಗಳಿಂದ ಮೊದಲುಗೊಂಡು ಪ್ರಯೋಗಶಾಲೆಗಳವರೆಗೆ, ತರಬೇತಿಯಿಂದ ಹಿಡಿದು ಸಾಮಾನ್ಯ ಜನರ ಸಮಸ್ಯೆಯವರೆಗೆ, ಎಲ್ಲ ರೀತಿಯಲ್ಲೂ ಯೋಚಿಸಿ, ಅದಕ್ಕೆ ಪೂರಕ ಮೂಲಭೂತ ಸೌಕರ್ಯಗಳನ್ನು ಸಜ್ಜುಗೊಳಿಸುವವರೆಗೆ ಈ ಪ್ರಯತ್ನಗಳು ವಿಸ್ತರಿಸಿವೆ. ಆ ಕಾರಣಕ್ಕಾಗಿಯೇ ಒಂದರ್ಥದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಭಾರತದಲ್ಲಿ ಸಂಶೋಧನೆ ಮಾಡುವ ಸಾಧ್ಯತೆಯ ಬಗ್ಗೆ ನಿರಂತರ ಆಶಾದಾಯಕ ಸ್ಥಿತಿಯನ್ನು ನಿರ್ಮಿಸಿದೆ. ಈಗ ಜಗತ್ತಿನ ಹತ್ತು ಶ್ರೇಷ್ಠ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಭಾರತೀಯರಿಗೆ ಹೊಸ ಸ್ಫೂರ್ತಿಯನ್ನು ಕೊಟ್ಟಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಸಾಧ್ಯತೆಗಳು ಮತ್ತು ಸವಾಲುಗಳು ಒಂದೆಡೆ ಐ.ಐ.ಎಸ್‌.ಸಿ. ಮತ್ತು ಐ.ಐ.ಟಿ.ಯಂಥ ಸಂಸ್ಥೆಗಳ ಸಾಧನೆಗಳು ನಮಗೆ ಹುರುಪು ತಂದರೆ, ಇನ್ನೊಂದೆಡೆ ಅವು ಅನೇಕ ಪ್ರಶ್ನೆಗಳನ್ನೂ ಸೃಷ್ಟಿಸುತ್ತವೆ. ಇಷ್ಟೆಲ್ಲ ಸಂಸ್ಥೆಗಳಿದ್ದರೂ ಭಾರತದಲ್ಲಿ ಯುವ ಪ್ರತಿಭೆಗಳಿಗೆ ಸಂಶೋಧನೆಯನ್ನು ಒಂದು ವೃತ್ತಿಜೀವನವಾಗಿ ತೋರಿಸಿಕೊಡುವಲ್ಲಿ ವಿಫಲರಾಗಿದ್ದೇವೆ. ಐ.ಟಿ., ಬಿ.ಟಿ., ಕಾರ್ಪೊರೇಟ್ ಉದ್ಯೋಗ ಅಥವಾ ಸಿವಿಲ್ ಸರ್ವೀಸ್‌ಗಳಂತೆ ಸಂಶೋಧನೆಯನ್ನೂ ಆಯ್ಕೆ ಮಾಡಬಹುದಾದ ವೃತ್ತಿಯಾಗಿಸಲು ಇರುವ ತೊಂದರೆಗಳೇನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲವೇಕೆ? ಭಾರತದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸಲು ಐ.ಐ.ಎಸ್‌ಸಿ.ಯಂಥದ್ದೇ ಸಂಸ್ಥೆಗಳನ್ನು ಕಟ್ಟುವಲ್ಲಿ ನಾವೇಕೆ ವಿಫಲರಾಗಿದ್ದೇವೆ ಎನ್ನುವುದು ಕೂಡ ಇಂದು ನಮ್ಮ ಮುಂದಿರುವ ಗಂಭೀರವಾದ ಪ್ರಶ್ನೆ. ಐ.ಐ.ಎಸ್‌ಸಿ.ಯ ಸುತ್ತಲೂ ಇರುವ ಕೆಲವು ಜಿಲ್ಲೆಗಳಲ್ಲಿನ ನಾಲ್ಕಾರು ವಿಶ್ವವಿದ್ಯಾಲಯಗಳಲ್ಲಿ ಹೊರಬರುವ ಸಂಶೋಧನೆಗೂ ಐ.ಐ.ಎಸ್‌ಸಿ.ಯ ಸಂಶೋಧನೆಗೂ ಗುಣಾತ್ಮಕವಾಗಿ ಅಜಗಜಾಂತರದಷ್ಟು ವ್ಯತ್ಯಾಸವಿದೆ. ಹಾಗಾದರೆ ಈ ರೀತಿ ಅಪ್ರತಿಮ ಜ್ಞಾನ ಪ್ರಸರಣೆ ಮತ್ತು ಸಂಶೋಧನಾ ಕೌಶಲವನ್ನು ಐ.ಐ.ಎಸ್‌ಸಿ.ಯಿಂದ ಬೇರೆ ಕಡೆಗೂ ಹರಡುವ ಕಾರ್ಯದಲ್ಲಿ ಇರಬಹುದಾದ ತೊಂದರೆ ಏನು ಎಂಬುದು ನಮಗೆ ಅರ್ಥವಾದಂತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯ ನಂತರ ವಿಜ್ಞಾನಸಂಸ್ಥೆಗೆ ಬರುವುದು ಇದುವರೆಗೂ ವಾಡಿಕೆಯಾಗಿತ್ತು. ಈಗ ಐ.ಐ.ಎಸ್‌ಸಿ. ಸ್ವತಃ ಸ್ನಾತಕ ಪದವಿಗಳನ್ನು ಪ್ರಾರಂಭಿಸಿರುವುದು, ಐ.ಐ.ಎಸ್‌ಸಿ.ಗೂ ಇತರ ವಿಶ್ವವಿದ್ಯಾಲಯಗಳಿಗೂ ಇದ್ದ ಸಂಬಂಧವನ್ನು ಮತ್ತಷ್ಟು ಮೊಟಕುಗೊಳಿಸಿದೆ. ಇದಲ್ಲದೆ ಐ.ಐ.ಎಸ್‌ಸಿ. ಇಂದು ಒಂದು ಕಡೆ ಜಗತ್ತಿನ ವಿವಿಧ ಉನ್ನತ ಶಿಕ್ಷಣ ಪಡೆಯಲು ರಹದಾರಿಯಂತೆ ಕಂಡರೆ, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಸಂಬಳವನ್ನು ಪಡೆಯುವ ಉದ್ಯೋಗದ ಮಾರ್ಗೋಪಾಯವಾಗಿಯೂ ಕಾಣುತ್ತಿದೆ. ಇದೊಂದು ಕಳವಳಕಾರಿ ಸಂಗತಿ ಎನ್ನುವುದು ವಿಜ್ಞಾನಕ್ಷೇತ್ರದ ಹಲವರು ಗಣ್ಯರ ಅಭಿಪ್ರಾಯವಾಗಿದೆ. ಮಾತ್ರವಲ್ಲ, ಈ ವಿಜ್ಞಾನಸಂಸ್ಥೆ ಮೂಲಭೂತ ವಿಜ್ಞಾನದ ಸಂಶೋಧನೆಗಳಿಂದ ದೂರ ಸರಿದು ಆನ್ವಯಿಕಗಳ ಕಡೆಗೆ ಮುಖ ಮಾಡಿರುವುದು ಕೂಡ ಅತ್ಯಂತ ಕಳವಳಕಾರಿ ಬೆಳವಣಿಗೆ. ಇದರ ಜೊತೆಗೆ, ಭಾರತದಲ್ಲಿ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟು ಮಹತ್ಸಾಧನೆ ಮಾಡುವುದು ಸಾಧ್ಯವಾಗಿರುವಾಗ ಇದೇ ರೀತಿಯಲ್ಲಿ ಸಮಾಜವಿಜ್ಞಾನ ಮತ್ತು ಮಾನವಿಕಗಳ ಅಧ್ಯಯನದಲ್ಲಿಯೂ ಇಂಥ ಸಾಧನೆ ಆಗದಿರುವುದಕ್ಕೆ ಕಾರಣಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಈ ಎಲ್ಲ ಪ್ರಶ್ನೆಗಳ ನಡುವೆಯೂ ಐ.ಐ.ಎಸ್‌ಸಿ.ಯ ಸಾಧನೆ ಅತ್ಯಂತ ಮಹತ್ತರ ಹಾಗೂ ಭಾರತೀಯರೆಲ್ಲರೂ ಸಂಭ್ರಮಿಸಬೇಕಾದ ಸಂಗತಿ. ಐಐಎಸ್‍ಸಿ ದೇಶದ ನಂ1 ಶಿಕ್ಷಣ ಸಂಸ್ಥೆ 3 Apr, 2017; ೨೦೧೬-೧೭ ರ ಶ್ರೇಯಾಂಕ ಪಟ್ಟಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸತತ ಎರಡನೇ ವರ್ಷವೂ ಪಾತ್ರವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ್ಯಾಂಕಿಂಗ್‌ ಪಟ್ಟಿಯಲ್ಲಿ ಐಐಎಸ್‌ಸಿ ಮೊದಲ ಸ್ಥಾನಗಳಿಸಿದೆ. ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) 9ನೇ ಸ್ಥಾನ ಮತ್ತು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ 10ನೇ ಸ್ಥಾನ ಗಳಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಎರಡನೇ ಆವೃತ್ತಿಯ ರ್ಯಾಂಕಿಂಗ್‌ ಅನ್ನು ೨-೪-೨೦೧೭ ಸೋಮವಾರ ಪ್ರಕಟಿಸಿದ್ದಾರೆ. ಕಳೆದ ತಿಂಗಳು ಮಾರ್ಚಿ ೨೦೧೭ ರಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಹತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಎಸ್‌ಸಿ ಸ್ಥಾನ ಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ‘ಟೈಮ್ಸ್‌ ಉನ್ನತ ಶಿಕ್ಷಣ ರ್‍ಯಾಂಕಿಂಗ್‌’ನಲ್ಲಿ ಐಐಎಸ್‌ಸಿ ಎಂಟನೇ ಸ್ಥಾನ ಗಳಿಸಿತ್ತು. ಆ ಮೂಲಕ, ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ, ದಕ್ಷಿಣ ಕೊರಿಯಾದ ಪೊಹಾಂಗ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಅದು ಸೇರಿತ್ತು. ಹೆಚ್ಚು ಅನುದಾನ ಸ್ವಾಯತ್ತೆ: ವಾರ್ಷಿಕ ರ್‍ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ. ಆರು ವಿಭಾಗಗಳಲ್ಲಿ ರ‍್ಯಾಂಕ್ ೨೦೧೭ರ ಈ ವರ್ಷ ಆರು ವಿಭಾಗಗಳಲ್ಲಿ ರ‍್ಯಾಂಕ್ ನೀಡಲಾಗಿದೆ. ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್‌, ಎಂಜಿನಿಯರಿಂಗ್‌ ಮತ್ತು ಫಾರ್ಮಸಿ ವಿಭಾಗಗಳಲ್ಲಿ ರ‍್ಯಾಂಕ್ ನೀಡಲಾಗಿದೆ. ಐಐಎಸ್‌ಸಿಯು ಸಮಗ್ರ ಮತ್ತು ವಿಶ್ವವಿದ್ಯಾಲಯ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಕಳೆದ ವರ್ಷ ವಿವಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಎನ್‌ಯು ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. ಸಮಗ್ರ ವಿಭಾಗದಲ್ಲಿ ಆರನೇ ರ‍್ಯಾಂಕ್ ಗಳಿಸಿದೆ. ಆಯ್ಕೆ ಕ್ರಮ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್‌ ಚೌಕಟ್ಟಿನ (ಎನ್‌ಐಆರ್‌ಎಫ್‌) ಅಡಿಯಲ್ಲಿ ರ‍್ಯಾಕಿಂಗ್‌ ನೀಡಲಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಚಿಸಿರುವ ಪ್ರಮುಖರ ಸಮಿತಿ ಮಾಡುವ ಶಿಫಾರಸುಗಳ ಮೇಲೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ. ಐಐಎಂಬಿಗೆ 2ನೇ ಸ್ಥಾನ ಮ್ಯಾನೇಜ್‌ಮೆಂಟ್‌ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಮೊದಲ ಸ್ಥಾನ ಗಳಿಸಿದೆ. ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್‌ (ಐಐಟಿ–ಮದ್ರಾಸ್‌) ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಮಾನದಂಡಗಳು ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಪನ್ಮೂಲ, ಬೋಧನಾ ವಿಧಾನ ಮತ್ತು ಕಲಿಕಾ ಪ್ರಕ್ರಿಯೆ ಅಧ್ಯಯನ ಮತ್ತು ವೃತ್ತಿಪರ ನಡಾವಳಿಗಳು ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಮತ್ತು ಒಳಗೊಳ್ಳುವಿಕೆ ಗ್ರಹಿಕೆ ಐಐಎಸ್‌ಸಿ ದೇಶದ ನಂ.1 ಶಿಕ್ಷಣ ಸಂಸ್ಥೆ;ಪಿಟಿಐ;3 Apr, 2017 ನೋಡಿ ಬೆಂಗಳೂರು ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಪಟ್ಟಿ ಕರ್ನಾಟಕದ ವಿಶ್ವವಿದ್ಯಾಲಯಗಳು ಹೊರಗಿನ ಸಂಪರ್ಕಗಳು ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ತಾಣ ವಿವಾದಾಸ್ಪದ ವಿಷಯಗಳ ಚರ್ಚೆಗೆ ಸೈನ್ಸ್‌ ಕಾಂಗ್ರೆಸ್‌ ವೇದಿಕೆಯಾಗಿಯೇ ಇಲ್ಲ. ಸೈನ್ಸ್ ಕಾಂಗ್ರೆಸ್: ಬದಿಗಿಟ್ಟ ಚರ್ಚೆಗಳು; ಟಿ.ಆರ್. ಅನಂತರಾಮು;: 15 ಡಿಸೆಂಬರ್ 2018 ಉಲ್ಲೇಖ ವರ್ಗ:ಶೈಕ್ಷಣಿಕ ಸಂಸ್ಥೆಗಳು ವರ್ಗ:ಅಭ್ಯಂತ್ರಿಕ ಸಂಸ್ಥೆಗಳು ವರ್ಗ:ಶಿಕ್ಷಣ ವರ್ಗ:ಬೆಂಗಳೂರು
ಪ್ರಮುಖ ದಿನಗಳು
https://kn.wikipedia.org/wiki/ಪ್ರಮುಖ_ದಿನಗಳು
೨೦೦೬ನೆ ಇಸವಿಯ ಪ್ರಮುಖ ದಿನಗಳು: ಮಕರ ಸಂಕ್ರಾಂತಿ :ಜನವರಿ ೧೪ ಗಣರಾಜ್ಯೋತ್ಸವ : ಜನವರಿ ೨೬ ಹುತಾತ್ಮರ ದಿನ : ಜನವರಿ ೩೦ ವಸಂತ ಪಂಚಮಿ : ಫೆಬ್ರವರಿ ೧೩ ಮಹಾಶಿವರಾತ್ರಿ : ಮಾರ್ಚಿ ೮ ಗುಡ್ ಫ್ರೈಡೆ (Good Friday): ಮಾರ್ಚಿ ೨೫ ಹೋಳಿ : ಮಾರ್ಚಿ ೨೬ ಯುಗಾದಿ : ಎಪ್ರಿಲ್ ೦೯ ವೈಸಾಖಿ: ಎಪ್ರಿಲ್ ೧೩ ಡಾ. ಅಂಬೇಡ್ಕರ ಜಯಂತಿ : ಎಪ್ರಿಲ್ ೧೪ ರಾಮ ನವಮಿ : ಎಪ್ರಿಲ್ ೧೭ ಮಹಾವೀರ ಜಯಂತಿ : ಎಪ್ರಿಲ್ ೨೨ ಕಾರ್ಮಿಕರ ದಿನಾಚರಣೆ : ಮೇ ೧ ಬಸವೇಶ್ವರ ಜಯಂತಿ : ಮೇ ೧೧ ಬುಧ್ಧ ಪೂರ್ಣಿಮ : ಮೇ ೧೩ ಸ್ವಾತಂತ್ರ್ಯ ದಿನಾಚರಣೆ : ಅಗಸ್ತ ೧೫ ರಕ್ಷಾ ಬಂಧನ : ಅಗಸ್ತ ೧೯ ವರಮಹಾಲಕ್ಷ್ಮಿ ದಿನ : ಅಗಸ್ತ ೧೯ ಕೃಷ್ಣ ಜನ್ಮಾಷ್ಟಮಿ : ಅಗಸ್ತ ೨೬ ಗಣೇಶ ಚತುರ್ಥಿ : ಸೆಪ್ಟೆಂಬರ್ ೭ ಮಹಾತ್ಮಾ ಗಾಂಧೀ ಜಯಂತಿ : ಅಕ್ಟೋಬರ್ ೨ ಆಯುಧ ಪೂಜೆ : ಅಕ್ಟೋಬರ್ ೧೨ ವಿಜಯದಶಮಿ : ಅಕ್ಟೋಬರ್ ೧೩ ನರಕ ಚತುರ್ದಶಿ : ಅಕ್ಟೋಬರ್ ೩೧ ಕನ್ನಡ ರಾಜ್ಯೋತ್ಸವ : ನವೆಂಬರ್ ೧ ಬಲಿಪಾಡ್ಯಮಿ: ನವೆಂಬರ್ ೨ ರಂಜಾನ್: ನವೆಂಬರ್ ೪ ಗುರುನಾನಕ್ ಜಯಂತಿ : ನವೆಂಬರ್ ೧೫ ಕ್ರಿಸ್ಮಸ್ ಡಿಸೆಂಬರ್ ೨೫ ಅನ್ಯ ಪ್ರಮುಖ ದಿನಗಳು : ಪ್ರೇಮಿಗಳ ದಿನಾಚರಣೆ (Valentine's Day): ಫೆಬ್ರವರಿ ೧೪ ವಿಶ್ವ ಮಹಿಳೆಯರ ದಿನ (Women's Day) : ಮಾರ್ಚಿ ೮ ಭೂಮಿಯ ದಿನ (Earth Day): ಎಪ್ರಿಲ್ ೨೨ ತಾಯಿ ದಿನ (Mother's Day) : ಮೇ ೮ ವಿಶ್ವ ತಂಬಾಕು ನಿಷೇಧ ದಿನ (World No Tobacco Day) : ಮೆ ೩೧ ವಿಶ್ವ ಪರಿಸರ ದಿನ (Environment Day) : ಜೂನ ೫ ತಂದೆ ದಿನ (Father's Day): ಜೂನ ೧೯ ಸಂಯುಕ್ತ ರಾಷ್ಟ್ರ ದಿನ (U.N.Day): ಅಕ್ಟೋಬರ್ ೨೪ ವಿಶ್ವ ಏಡ್ಸ್ ದಿನ (World AIDS Day) : ಡಿಸೆಂಬರ್ ೧ ವರ್ಗ:ವಿಕಿಪೀಡಿಯ ಪುಟಗಳು ವರ್ಗ:ಪ್ರಮುಖ ದಿನಗಳು
ಎಸ್.ಜೆ.ಸಿ.ಇ
https://kn.wikipedia.org/wiki/ಎಸ್.ಜೆ.ಸಿ.ಇ
thumb|right|ಎಸ್.ಜೆ.ಸಿ.ಇ ಕಾಲೇಜಿನ ಮುಂಭಾಗ ಶ್ರೀ ಜಯಚಾಮರಾಜೇಂದ್ರ ಅಭಿಯಂತ್ರಿಕ ವಿದ್ಯಾಲಯವು (ಎಸ್.ಜೆ.ಸಿ.ಇ) ಕರ್ನಾಟಕದ ಪ್ರಮುಖ ಅಭಿಯಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿರುತ್ತದೆ. ೧೯೬೩ರ ಇಸವಿಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ರಾಜೇಂದ್ರ ಮಹಾಸ್ವಾಮಿಗಳಿಂದ ಮೈಸೂರಿನಲ್ಲಿ ಸ್ಥಾಪಿಸಲ್ಪಟ್ಟಿತು. ಸಂಸ್ಥೆಯಲ್ಲಿ ೧೩ ವಿಭಾಗಗಳಿದ್ದು, ೧೫೦೦ ವಿದ್ಯಾರ್ಥಿಗಳಿಗೆ ಪದವೀದರ ಮತ್ತು ಸ್ನಾತಕೋತ್ತರ ಶಿಕ್ಷಣ ದೊರಕಿಸಿಕೊಡುತಿರುತ್ತದೆ. ಸಂಸ್ಥೆಯ ಅಭಿಯಂತ್ರಿಕ/ವ್ಯವಸ್ಥಾಪಕ ಶಿಕ್ಷಣ ವಿಭಾಗಗಳು ಯಾಂತ್ರಿಕ ವಿಭಾಗ (Department of Mechanical Engineering) ಔದ್ಯಮಿಕ ಮತ್ತು ಉತ್ಪಾದನಾ ವಿಭಾಗ (Department of Industrial and Production Engineering) ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ (Department of Electrical and Electronics Engineering) ವಿದ್ಯುನ್ಮಾನ ಮತ್ತು ಸಂಪರ್ಕ ಶಾಸ್ತ್ರ ವಿಭಾಗ (Department of Electronics and Communication) ಉಪಕರಣ ತಂತ್ರಜ್ಞಾನ (Department of Instrumentation Technology) ಗಣಕಯಂತ್ರ ವಿಜ್ಞಾನ ವಿಭಾಗ (Department of Computer Science and Engineering) ಪರಿಸರ ಮತ್ತು ಜೈವಿಕ ತಂತ್ರಜ್ಞಾನ (Department of Environmental Engineering & Bio Technology) ವಿಜ್ಞಾನ ಮತ್ತು ತಂತ್ರಜ್ಞಾನ (Department of Polymer Science and Technology) ಸಿವಿಲ್ ವಿಭಾಗ (Department of Civil Engineering) ಗಣಿತ ಶಾಸ್ತ್ರ ವಿಭಾಗ (Department of Mathematics) ಭೌತಶಾಸ್ತ್ರ (Department of Physics) ರಸಾಯನ ಶಾಸ್ತ್ರ (Department of Chemistry) ವ್ಯವಸ್ಥಾಪಕ ಶಿಕ್ಷಣ ಕೇಂದ್ರ (Centre of Management Studies) ವರ್ಗ:ಶಿಕ್ಷಣ ಸಂಸ್ಥೆಗಳು ವರ್ಗ:ಅಭ್ಯಂತ್ರಿಕ ಸಂಸ್ಥೆಗಳು
ಗಣಕಯಂತ್ರ
https://kn.wikipedia.org/wiki/ಗಣಕಯಂತ್ರ
REDIRECT ಕಂಪ್ಯೂಟರ್
ಸಂಸ್ಕೃತ
https://kn.wikipedia.org/wiki/ಸಂಸ್ಕೃತ
left|thumb|ದೇವಿ ಮಾಹಾತ್ಮ್ಯದ ಹಸ್ತಪ್ರತಿ, ೧೧ ನೆಯ ಶತಮಾನ ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು ಮತ್ತು ಭಾರತದ ಶಾಸ್ತ್ರೀಯ ಭಾಷೆ. ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು ಯುರೋಪಿನಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳು ಹೊಂದಿವೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. ಹಿಂದೂ, ಬೌದ್ಧ ಹಾಗು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು 'ದೇವಭಾಷೆ' ಎಂದೂ ಹಿಂದೆ ಕರೆಯುತ್ತಿದ್ದರು. thumb|right ಕೃತ ಗ್ರಂಥಗಳ ಜಾಡನ್ನೇ ಕನ್ನಡ ಅನುಸರಿಸಿಕೊಂಡು ಬಂತು. ಚರಿತ್ರೆ ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಜಿಜ್ಞಾಸೆಗೆ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತ ಆಡುಭಾಷೆಗಳಿಂದ ಸ್ವಲ್ಪ ಭಿನ್ನರೂಪದ್ದಾಗಿತ್ತು ಎಂದು ಚರಿತ್ರಜ್ಞರ ನಂಬಿಕೆ. ಸಂಸ್ಕೃತ ವ್ಯಾಕರಣದ ಮೇಲಿನ ಪುಸ್ತಕಗಳಲ್ಲಿ ಲಭ್ಯವಾಗಿರುವ ಅತ್ಯಂತ ಹಳೆಯದು ಪಾಣಿನಿಯ "ಅಷ್ಟಾಧ್ಯಾಯೀ" (ಸುಮಾರು ಕ್ರಿ.ಪೂ. ಐದನೆಯ ಶತಮಾನ). ವೇದಗಳ ಕಾಲದ ಸಂಸ್ಕೃತ ಮತ್ತು ಅದರ ನಂತರದ ಕೆಲ ಶತಮಾನಗಳ ಸಂಸ್ಕೃತದ ವ್ಯಾಕರಣ ಎನ್ನಬಹುದು. ನಂತರದ ಶತಮಾನಗಳಲ್ಲಿ ಸ್ವತಂತ್ರ ಸಾಹಿತ್ಯಕ್ಕೆ ಸಹ ಉಪಯೋಗಿಸಲಾದ ಸಂಸ್ಕೃತ ಭಾರತೀಯ ಸಾಹಿತ್ಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತು. ಆಧುನಿಕ ಭಾರತೀಯ ಭಾಷೆಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವು. ಪ್ರಾಚೀನ ದಾಖಲೆ ಭಾರತದ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತ ಕರ್ನಾಟಕದಲ್ಲಿ ಬಹು ಹಿಂದಿನಿಂದಲೂ ಪ್ರಚಾರದಲ್ಲಿದ್ದು ದೀರ್ಘವಾದ ಇತಿಹಾಸವನ್ನು ಹೊಂದಿದೆ. ಪ್ರತಿಷ್ಠಾನ ನಗರದಲ್ಲಿದ್ದ ಶಾತವಾಹನ ದೊರೆಗೆ ಸಂಬಂಧಿಸಿದ ‘ಮೋದಕಂ ತಾಡಯ’ದ ಕಥೆ ಬಹುಶಃ ದಕ್ಷಿಣ ಭಾರತದಲ್ಲಿ ಸಂಸ್ಕೃತದ ಹರಡುವಿಕೆಯ ಪ್ರಾರಂಭವನ್ನು ಸೂಚಿಸುತ್ತದೆ. ಕರ್ನಾಟಕದ ಪ್ರಾಚೀನತಮ ಸಂಸ್ಕೃತ ಶಾಸನವೆಂದರೆ ಕುಬ್ಜ (ನೋಡಿ) ಬರೆದ ತಾಳಗುಂದ ಶಾಸನ (ಸು.450). ಇದರಲ್ಲಿರುವ ರಚನಾ ಪಾಂಡಿತ್ಯ ಆ ಕಾಲಕ್ಕಾಗಲೇ ಸಂಸ್ಕೃತ ಈ ನಾಡಿನಲ್ಲಿ ಚೆನ್ನಾಗಿ ಬೇರೂರಿರಬೇಕೆಂಬುದನ್ನು ತಿಳಿಸುವುದಲ್ಲದೆ, ಅದೇ ಕಾಲದ ಹಲ್ಮಿಡಿ ಶಾಸನದಿಂದ ಸಂಸ್ಕೃತ ಭಾಷೆ ಕನ್ನಡ ರಚನೆಗಳ ಮೇಲೂ ಪ್ರಭಾವ ಬೀರುವ ಸ್ಥಿತಿಯಲ್ಲಿದ್ದಿತೆಂಬುದನ್ನು ತೋರಿಸುತ್ತದೆ. ಇಲ್ಲಿಂದ ಮುಂದೆ ಸಂಸ್ಕೃತ ಶಿಷ್ಟಭಾಷೆಯಾಗಿ ಬೆಳೆದು ಉನ್ನತ ಸ್ಥಾನವನ್ನು ಗಳಿಸಿ ತತ್ಕಾಲದ ಉನ್ನತ ವರ್ಗಗಳಿಂದ ಪ್ರೋತ್ಸಾಹ ಗಳಿಸಿತು. ನೂರಾರು ಸಂಸ್ಕೃತ ಶಾಸನಗಳು ಕನ್ನಡದಲ್ಲಿ ರಚಿತವಾದವು. ಅನೇಕ ಕವಿಗಳು, ಶಾಸ್ತ್ರಕಾರರು ಈ ನಾಡಿನಲ್ಲಿ ಆಗಿಹೋದರು. ನೂರಾರು ಸಂಸ್ಕೃತ ಗ್ರಂಥಗಳ ರಚನೆಯಾಯಿತು. ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ ಗಣ್ಯವಾದುದು. ಹಾಗೆಯೇ ಸಂಸ್ಕೃತದ ಶ್ರುತಿ ಸ್ಮೃತಿ ಪುರಾಣ ಇತಿಹಾಸಗಳು ಕರ್ನಾಟಕದಲ್ಲಿ ಹರಡಿ ಅವು ಹಾಗೂ ಇತರ ಸಂಸ್ಕೃತ ಕೃತಿಗಳು ಕನ್ನಡ ದೇಶದ ಸಂಸ್ಕೃತಿ ಹಾಗೂ ನುಡಿಯ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತ ಬಂದಿವೆ. ಗುಣಾಢ್ಯ ಕರ್ನಾಟಕದ ಭಾಗಗಳನ್ನು ಆಳುತ್ತಿದ್ದ ಸಾತವಾಹನರ ಆಸ್ಥಾನಭಾಷೆ ಪ್ರಾಕೃತವಾಗಿದ್ದರೂ ಅವರು ಸಂಸ್ಕೃತ ಭಾಷೆಯನ್ನು ಕೂಡ ಪ್ರೋತ್ಸಾಹಿಸುತ್ತಿದ್ದಿರಬಹುದು. ಇವರ ಕಾಲದಲ್ಲೇ ರಾಮಾಯಣ ಮಹಾಭಾರತಗಳಷ್ಟು ಕವಿಜನಪ್ರಿಯವಾದ ಬೃಹತ್ಕಥೆ ಪೈಶಾಚೀ ಪ್ರಾಕೃತದಲ್ಲಿ ಗುಣಾಢ್ಯನೆಂಬಾತನಿಂದ ರಚಿತವಾದಂತೆ, ಮಹಾರಾಷ್ಟ್ರೀ ಪ್ರಾಕೃತದಲ್ಲಿ ಏಳುನೂರು ಮುಕ್ತಕಗಳ ಸಂಗ್ರಹವಾದ ಸತ್ತಸ ರಾಜನಾದ ಹಾಲನಿಂದಲೇ ಸಂಗ್ರಹಿತವಾದಂತೆ, ಅವನ ಆಸ್ಥಾನಪಂಡಿತನಾದ ಸರ್ವವರ್ಮನಿಂದ ಕಾತಂತ್ರವೆಂಬ ನೂತನ ಸಂಸ್ಕೃತ ವ್ಯಾಕರಣವೂ ನಿರ್ಮಿತವಾಯಿತು. ಮುಂದೆ ಬೃಹತ್ಕಥೆ ಸಂಸ್ಕೃತಕ್ಕೂ ಮೂರುನಾಲ್ಕು ರೂಪಾಂತರಗಳನ್ನು ಉತ್ತರದ ಕವಿಗಳಿಂದ ಪಡೆದುದನ್ನು ನೋಡುತ್ತೇವೆ. ಆದರೆ ಮೂಲ ಬೃಹತ್ಕಥೆ ದಕ್ಷಿಣದ್ದೇ; ಇದರ ಒಂದು ಅಂಶದ ರೂಪಾಂತರವೇ ಸುಪ್ರಸಿದ್ಧವಾದ ಪಂಚತಂತ್ರ ಕೂಡ. ಈ ಪಂಚತಂತ್ರದ ಒಂದು ಆವೃತ್ತಿಯ ಪ್ರವರ್ತಕ ಕೂಡ ಕರ್ನಾಟಕದ ವಸುಭಾಗಭಟ್ಟ (ಈ ಕೃತಿ ಬೃಹತ್ತರ ಭಾರತದ ಲೇಯಾಸ್ ಹಾಗೂ ಜಾವ ದ್ವೀಪದ ಭಾಷೆಗಳಲ್ಲಿಯೂ ಭಾಷಾಂತರಗೊಂಡಿದೆ). ಭಾಸ ಭಾಸನ (ಸು.2ನೆಯ ಶತಮಾನ) ದ್ವಿತೀಯಾಕ್ಷರ ಪ್ರಾಸಗಳನ್ನು ಅನುಲಕ್ಷಿಸಿ ಆತ ಕನ್ನಡಿಗನಿದ್ದಿರಬೇಕೆಂದು ಯು.ವೆಂಕಟಕೃಷ್ಣರಾವ್ ಊಹಿಸಿದ್ದಾರೆ (ಈ ಊಹೆಗೆ ಹೆಚ್ಚಿನ ಸಮರ್ಥನೆ ಬೇಕಾಗಿದೆ). ಪಾಣಿನಿ ಪೂಜ್ಯಪಾದ (ಅಥವಾ ದೇವನಂದಿ 5 ಅಥವಾ 6ನೆಯ ಶತಮಾನ) ಪಾಣಿನಿಯ ಸೂತ್ರಗಳಿಗೆ ಶಬ್ದಾವತಾರವೆಂಬ ವ್ಯಾಖ್ಯಾನ ರಚಿಸಿದ್ದನೆಂದು ಶಾಸನಗಳಲ್ಲಿ ಹೇಳಲಾಗಿದೆ. ಈತ ಜೈನೇಂದ್ರ ವ್ಯಾಕರಣವೆಂಬ ಹೊಸ ವ್ಯಾಕರಣ ಪಂಥವನ್ನು ನಿರ್ಮಾಣ ಮಾಡಿದ. ಇದರಲ್ಲಿ ಪ್ರಾಯೋಗಿಕ ದೃಷ್ಟಿಯಿಂದ ಪಾಣಿನಿಯ ಸೂತ್ರಗಳನ್ನು ಸಂಗ್ರಹಿಸಲಾಗಿದೆ. ಗಂಗರ ಕಾಲ ಗಂಗರಾಜನಾದ ದುರ್ವಿನೀತ (6ನೆಯ ಶತಮಾನ) ಬೃಹತ್ಕಥೆಯ ಸಂಸ್ಕೃತ ರೂಪಾಂತರಕಾರರಲ್ಲಿ ಒಬ್ಬನೆಂದು ಕೆಲವು ಶಾಸನಗಳು ಹೇಳುತ್ತವೆ. ದುರ್ವಿನೀತನ ಸಮಕಾಲೀನನೂ ಸಂಸ್ಕೃತದ ಪ್ರಸಿದ್ಧ ಮಹಾಕಾವ್ಯವಾದ ಕಿರಾತಾರ್ಜುನೀಯದ ಕರ್ತೃವೂ ಆದ ಭಾರವಿ ದುರ್ವಿನೀತನ ಆಸ್ಥಾನದಲ್ಲಿಯೂ ಕೆಲಕಾಲ ಇದ್ದನೆಂಬ ಐತಿಹ್ಯವನ್ನು ಈಚೆಗೆ ದೊರೆತ ದಂಡಿಯ ಅವಂತಿಸುಂದರೀ ಕಥಾ ಎಂಬ ಗದ್ಯಕೃತಿ ಒಳಗೊಂಡಿದೆ. ದಂಡಿ ಸಹ ಕೆಲವು ಕಾಲ ದುರ್ವಿನೀತನ ಆಸ್ಥಾನದಲ್ಲಿ ಇದ್ದಿರಬೇಕು. ನಾಟಕಕಾರರಲ್ಲಿ ಪ್ರಸಿದ್ಧನಾದ ಮೃಚ್ಫಕಟಿಕಕಾರ ಶೂದ್ರಕನು ಗಂಗರಾಜ ಶಿವಮಾರನಿರಬೇಕೆಂದು ಸಾಲೆತೊರೆ ಎಂಬ ವಿದ್ವಾಂಸರ ಊಹೆ. ಭಾರವಿ ಮತ್ತು ಕಾಳಿದಾಸ ಭಾರವಿ ಮತ್ತು ಕಾಳಿದಾಸ ಮಹಾಕವಿಗಳ ಸ್ಪಷ್ಟ ಶಿಲಾಶಾಸನೋಲ್ಲೇಖ ದೊರೆಯುವುದು ಬಾದಾಮಿ ಚಾಳುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕಾಲದ ಐಹೊಳೆಯ ಶಾಸನದಲ್ಲಿ (634). ಆ ಶಾಸನದ ಕರ್ತೃ ರವಿಕೀರ್ತಿ ತನ್ನನ್ನು ಆ ಇಬ್ಬರು ಮಹಾಕವಿಗಳಿಗೆ ಸಮನೆಂದು ಹೊಗಳಿಕೊಂಡಿದ್ದಾನೆ. ಈ ಪ್ರಶಸ್ತಿ ಶಾಸನ ಇಮ್ಮಡಿ ಪುಲಕೇಶಿಯ ಪರಾಕ್ರಮಾದಿಗಳನ್ನು ಕಾವ್ಯಮಯ ಶೈಲಿಯಲ್ಲಿ ವರ್ಣಿಸುತ್ತದೆ. ಇದರ ಭಾಷೆ ಸರಾಗವಾಗಿ ಹರಿಯುತ್ತದೆ. ನಾನಾ ಬಗೆಯ ವೃತ್ತಗಳಲ್ಲಿ ರಚಿತವಾದ ಇದರಲ್ಲಿ ಕಾವ್ಯದ ಹಲವು ಲಕ್ಷಣಗಳು ಕಾಣಬರುತ್ತವೆ. ಇದಕ್ಕೂ ಮುಂಚಿನ ಮಂಗಲೀಶನ ಶಾಸನದಲ್ಲಿ (ಸು.600) ಒಂದನೆಯ ಕೀರ್ತಿವರ್ಮನ ದಿಗ್ವಿಜಯವನ್ನು ವರ್ಣಿಸುವಲ್ಲಿ ಕಾಳಿದಾಸನ ರಘುವಂಶದ ರಘು ದಿಗ್ವಿಜಯವನ್ನೇ ಮಾದರಿಯಾಗಿಟ್ಟುಕೊಳ್ಳಲಾಗಿದೆ. ಇಮ್ಮಡಿ ಪುಲಕೇಶಿಯ ಸೊಸೆ, ಚಂದ್ರಾದಿತ್ಯನ ರಾಣಿ ವಿಜಯಾ ಅಥವಾ ಬಿಜ್ಜಾ ಅಥವಾ ಬಿಜ್ಜಿಕಾ (ವಿಜ್ಜಿಕೆ) ಪ್ರೌಢ ಪಾಂಡಿತ್ಯ ಪಡೆದಿದ್ದಳೆಂದು ತಿಳಿದುಬರುತ್ತದೆ. ಕೌಮುದೀ ಮಹೋತ್ಸವವೆಂಬ ನಾಟಕ ಬರೆದವಳು ಇವಳೇ ಎಂದು ವಿದ್ವಾಂಸರ ಅಭಿಪ್ರಾಯ. muddi ಚಾಲುಕ್ಯರ ಕಾಲ ಬಾದಾಮಿಯ ಚಾಳುಕ್ಯರ ಕಾಲದಲ್ಲಿಯೇ ಶಂಕರಾಚಾರ್ಯರ ವೇದಾಂತ ಭಾಷ್ಯಗಳೂ ಹುಟ್ಟಿಕೊಂಡಿರಬಹುದು. ಸಮಂತಭದ್ರನ ತತ್ತ್ವಾರ್ಥ ಸೂತ್ರ ಮಹಾಭಾಷ್ಯ, ಆಪ್ತಮೀಮಾಂಸಾ ಮುಂತಾದ ಉದ್ದಾಮ ಧರ್ಮ ಗ್ರಂಥಗಳೂ ಈ ಕಾಲದಲ್ಲಿ ಬಂದವು. ತತ್ತ್ವಾರ್ಥಾಸೂತ್ರಕ್ಕೆ ಸರ್ವಾರ್ಥಸಿದ್ಧಿ ವ್ಯಾಖ್ಯೆಯನ್ನು ಪುಜ್ಯಪಾದ ರಚಿಸಿದ. ಮತ್ತೊಬ್ಬ ಜೈನ ಪಂಡಿತ ಅಕಲಂಕ ತತ್ತ್ವಾರ್ಥ ರಾಜವಾರ್ತಿಕ, ಅಷ್ಟಶತೀ, ನ್ಯಾಯವಿನಿಶ್ಚಯ ಮುಂತಾದುವನ್ನು ರಚಿಸಿದ್ದಾನೆ. ರಾಷ್ಟ್ರಕೂಟರ ಕಾಲ ರಾಷ್ಟ್ರಕೂಟರ ಕಾಲದಲ್ಲಿ ಸಂಸ್ಕೃತಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಒಂದನೆಯ ಅಮೋಘ ವರ್ಷ (814-78) ಸ್ವಯಂ ಗ್ರಂಥಕಾರನಾಗಿದ್ದುದಲ್ಲದೆ (ಪ್ರಶ್ನೋತ್ತರ-ರತ್ನಮಾಲಿಕಾ ಇವನ ಕೃತಿಯೆನ್ನುತ್ತಾರೆ) ಜಿನಸೇನಾಚಾರ್ಯರು ಮಹಾಪುರಾಣ, ಪಾಶಾರ್ವ್‌ಭ್ಯುದಯಗಳೆಂಬ ಉದ್ಗ್ರಂಥಗಳನ್ನು ಬರೆಯಲು ನೆರವಾದ. ಶಾಕಟಾಯನ ವ್ಯಾಕರಣವೆಂಬ ನವೀನ ಪ್ರಸ್ಥಾನವೂ ಈಗಲೇ ಉದಿಸಿತು. ಅದರ ವೃತ್ತಿಗೆ ಅಮೋಘ ವೃತ್ತಿಯೆಂದೇ ಹೆಸರಿದೆ. ಮಹಾವೀರನೆಂಬ ಪಂಡಿತ ಜ್ಯೋತಿಶಾಸ್ತ್ರದ ಗಣಿತಸಾರ ಸಂಗ್ರಹವನ್ನು ಬರೆದಿದ್ದಾನೆ. ಅದ್ವೈತವೇದಾಂತ ದೃಷ್ಟಿಯಿಂದ ರಾಷ್ಟ್ರಕೂಟರ ಕಾಲವನ್ನು ಸುವರ್ಣಯುಗವೆಂದು ಕರೆಯಬಹುದು. ಶಂಕರಾಚಾರ್ಯರ ಶಿಷ್ಯರಾದ ಪದ್ಮಪಾದ ಮತ್ತು ಸುರೇಶ್ವರರು ವೇದಾಂತ ಪ್ರಚಾರದಲ್ಲಿ ನಿರತರಾಗಿದ್ದರು. ಸುರೇಶ್ವರರ ಶಿಷ್ಯ ಸರ್ವಜ್ಞಾತ್ಮನ್ ‘ಸಂಕ್ಷೇಪ ಶಾರೀರಕ’ ವನ್ನು ರಚಿಸಿದ. ಇದೇ ಯುಗದಲ್ಲಿ ಯಾಜ್ಞವಲ್ಕ್ಯಸ್ಮೃತಿಗೆ ವಿಶ್ವರೂಪ ಬರೆದ ‘ಬಾಲಕ್ರೀಡಾ ವ್ಯಾಖ್ಯೆ’ ಬಹಳ ಪ್ರಸಿದ್ಧವಾಯಿತು. ಮುಮ್ಮಡಿ ಇಂದ್ರನ ಕಾಲ ಮುಮ್ಮಡಿ ಇಂದ್ರನ (914-29) ಆಸ್ಥಾನ ಕವಿಯಾಗಿದ್ದ ತ್ರಿವಿಕ್ರಮಭಟ್ಟ ನಳಚಂಪು ಮತ್ತು ಮದಾಲಸಾಚಂಪು ಎಂಬ ಎರಡು ಕೃತಿಗಳನ್ನು ರಚಿಸಿದ. ಇವೆರಡು ಸಂಸ್ಕೃತ ಸಾಹಿತ್ಯದ ಚಂಪು ಪ್ರಕಾರದ ಉಪಲಬ್ಧ ಪ್ರಾಚೀನತಮ ಕೃತಿಗಳು. ಇವನ ಚಂಪುಶೈಲಿಯಲ್ಲಿ ಬಾಣನ ಗದ್ಯವೈಭವ ಹಾಗೂ ನಾಟಕಕಾರರ ಪದ್ಯ ಪ್ರಾಗಲ್ಭ್ಯಗಳೆರಡೂ ರಸಮಯವಾಗಿ ಜೊತೆಗೂಡಿವೆ. ಇವನಿಗೆ ಮೊದಲೇ ದಂಡಿ ಚಂಪು ಪ್ರಭೇದವನ್ನು ಹೇಳಿ, ಅದರ ಸ್ವರೂಪವನ್ನು ತಿಳಿಸಿದ್ದನಾದರೂ ತ್ರಿವಿಕ್ರಮನಿಗೆ ಮೊದಲು ಯಾವ ಚಂಪು ಕೃತಿಯೂ ದೊರೆತಿಲ್ಲ. ಮುಮ್ಮಡಿ ಕೃಷ್ಣನೂ (939-67) ಸ್ವತಃ ವಿದ್ವಾಂಸನಾಗಿದ್ದು ಪಿಂಗಲನ ಛಂದಸ್ಸೂತ್ರದ ಮೇಲೆ ವ್ಯಾಖ್ಯಾನ ಬರೆದ. ಇವನ ಆಶ್ರಯದಲ್ಲಿ ಹಲಾಯುಧ ಒಂದು ಕೋಶವನ್ನೂ ಕವಿಗಳಿಗೆ ಉಪಯುಕ್ತವಾದ ಕೃತಿಗಳನ್ನೂ ರಚಿಸಿದ. ಜೈನ ಕವಿಗಳ ಕಾಲ ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಜೈನರೂ ಅಮೋಘ ಕಾಣಿಕೆಯನ್ನಿತ್ತಿದ್ದಾರೆ. ವೀರಸೇನ ಮತ್ತು ಜಿನಸೇನರು 1,00,000 ಶ್ಲೋಕಗಳ ವಿಸ್ತಾರವಾದ ಧವಲಾ, ಜಯಧವಲಾ ಮತ್ತು ಮಹಾಧವಲಾ ಎಂಬ ಷಟ್ ಖಂಡಾಗಮ ವ್ಯಾಖ್ಯಾನವನ್ನು ಪುರೈಸಿದರು. ಜಿನಸೇನರು ಆದಿಪುರಾಣ ಮತ್ತು ಪಾಶರ್ವ್‌ನಾಥಪುರಾಣಗಳನ್ನೂ ಬರೆದು ಪ್ರಸಿದ್ಧರಾದರು. ಅಸಗನಿಗೆ ಸಂಸ್ಕೃತ ಕನ್ನಡಗಳೆರಡರಲ್ಲಿಯೂ ಸಮಾನವಾದ ಕವಿತಾ ಸಾಮಥರ್ಯ್‌ವಿತ್ತು. ಸಂಸ್ಕೃತದಲ್ಲಿ ಈತ ವರ್ಧಮಾನಪುರಾಣವನ್ನು ರಚಿಸಿದ್ದಾನೆ. ವಿದ್ಯಾನಂದ ಎಂಬುವನು ಸಮಂತಭದ್ರನ ಆಪ್ತಮೀಮಾಂಸಾ, ಆಪ್ತಪರೀಕ್ಷಾ ಇತ್ಯಾದಿ ಗ್ರಂಥಗಳಿಗೆ ಅಷ್ಟಸಾಹಸ್ರೀ ಎಂಬ ಅದ್ಭುತವಾದ ವ್ಯಾಖ್ಯಾನ ರಚಿಸಿದ್ದಾನೆ. ಚಾಳುಕ್ಯರ ಕಾಲ ವೇಮುಲವಾಡದ ಚಾಳುಕ್ಯರ ಆಶ್ರಯದಲ್ಲಿದ್ದ ಸೋಮದೇವಸೂರಿ (ಸು.959) ಯಶಸ್ತಿಲಕಚಂಪು ಎಂಬ ಕೃತಿಯನ್ನೂ ನೀತಿವಾಕ್ಯಾಮೃತವೆಂಬ ಗ್ರಂಥವನ್ನೂ ರಚಿಸಿದ. ಯಶಸ್ತಿಲಕಚಂಪುವಿನಲ್ಲಿ ಕವಿ ನಾನಾಶಾಸ್ತ್ರದಲ್ಲಿ, ತನಗಿದ್ದ ಪಾಂಡಿತ್ಯ ಹಾಗೂ ಜಾಣ್ಮೆಯನ್ನು ಪ್ರದರ್ಶಿಸಿಕೊಂಡಿದ್ದಾನೆ. ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ಈ ಕೃತಿ ಅಮೂಲ್ಯವಾದು ದಾಗಿದೆ. ನೀತಿವಾಕ್ಯಾಮೃತ ರಾಜನೀತಿಶಾಸ್ತ್ರದ ಕೈಪಿಡಿಯಂತಿದೆ. ಇದರಲ್ಲಿ ರಾಜಕೀಯ ವ್ಯವಹಾರಗಳ ಸೂಕ್ಷ್ಮ ನಿರೂಪಣೆಯ ಜತೆಗೆ ಜನಸಾಮಾನ್ಯರಿಗೂ ಸಂಬಂಧಿಸಿದ ನೀತಿಗಳನ್ನು ಎಲ್ಲರಿಗೂ ಅರ್ಥವಾಗುವ ಕ್ರಮದಲ್ಲಿ ನಿರೂಪಿಸಿದ್ದಾನೆ. ಸೋಮದೇವಸೂರಿ ಕವಿಯಷ್ಟೇ ಅಲ್ಲ ತತ್ತ್ವಶಾಸ್ತ್ರದಲ್ಲಿಯೂ ನಿಷ್ಣಾತನಾಗಿದ್ದ ‘ಷಣ್ಣವತಿ ಪ್ರಕರಣ’ ಇವನ ಕೊಡುಗೆ. ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಬಂದರೆ ಎರಡನೆಯ ಜಯಸಿಂಹನ ಆಳಿಕೆಯಲ್ಲಿ (1015-44) ವಾದಿರಾಜನ ಯಶೋಧರಚರಿತ ಮತ್ತು ಪಾಶರ್ವ್‌ನಾಥ ಚರಿತ ಎಂಬ ಸುಂದರ ಕಾವ್ಯಗಳು ಮೂಡಿಬಂದವು. ವಾದಿರಾಜನ ಪಾಂಡಿತ್ಯವನ್ನು ಅನೇಕ ಶಾಸನಗಳು ಕೊಂಡಾಡಿವೆ. ಅಕಲಂಕನ ಮಹಾಗ್ರಂಥವನ್ನು ಕುರಿತ ಸಮಗ್ರ ವ್ಯಾಖ್ಯಾನ ‘ನ್ಯಾಯ ವಿನಿಶ್ಚಯ ಟೀಕೆ’ ವಾದಿರಾಜನ ಮೇರು ಕೃತಿ. ಇವನು ಉತ್ತಮ ಬರೆಹಗಾರನಾಗಿದ್ದ, ಜೊತೆಗೆ ಸಮರ್ಥ ವಾಗ್ಮಿಯಾಗಿದ್ದನೆಂದು ತಿಳಿದುಬರುತ್ತದೆ. ಲಕುಲೀಶ ಪಂಡಿತ ಅಥವಾ ವಾದಿರುದ್ರಗುಣ ಮಹಾವಿದ್ವಾಂಸನೆಂದೂ ಜೈನ ವಾದಿರಾಜನನ್ನು ವಾದದಲ್ಲಿ ಸೋಲಿಸಿದನೆಂದೂ 1036ರ ಶಾಸನವೊಂದು ತಿಳಿಸುತ್ತದೆ. ವಾದಿರಾಜನ ಸಹಪಾಠಿ ಮತ್ತು ಮತಿಸಾಗರನ ಶಿಷ್ಯನಾದ ದಯಪಾಲ ಎಂಬುವನು ಶಾಕಟಾಯನ ವ್ಯಾಕರಣದ ಉಪಯುಕ್ತವಾದ ಪುನರ್ವಿಮರ್ಶಿತ ಕೈಪಿಡಿಯನ್ನು ಸಿದ್ಧಗೊಳಿಸಿದ. ರೂಪಸಿದ್ಧಿಯೆಂದು ಕರೆಯಲಾದ ಇದನ್ನು ಹಲವು ಶಾಸನಗಳಲ್ಲಿ ಹೊಗಳಲಾಗಿದೆ. ಚಂಪೂ ಕಾಲ ಇದೇ ಕಾಲದಲ್ಲಿ ಕಾವ್ಯಾವಲೋಕನದ ಕರ್ತೃ ನಾಗವರ್ಮ ಸಂಸ್ಕೃತ ಕೋಶವೊಂದನ್ನು ರಚಿಸಿದ್ದನೆಂದು ತಿಳಿದುಬರುತ್ತದೆ. ಆದರೆ ಇದು ಉಪಲಬ್ಧವಿಲ್ಲ. ಈ ಕಾಲದಲ್ಲಿ ವಾದೀಭಸಿಂಹನ ಗದ್ಯಚಿಂತಾಮಣಿ, ಕ್ಷತ್ರಚೂಡಾಮಣಿ ಎಂಬ ಗದ್ಯಕಾವ್ಯಗಳು ಬಾಣನ ಮಾದರಿಯಲ್ಲಿ ನಿರ್ಮಿತವಾದವು. ಜಯಕೀರ್ತಿಯ ಛಂದೋನುಶಾಸನವೂ ಇದೇ ಕಾಲದ್ದು. ಚಾಳುಕ್ಯ ಆರನೆಯ ವಿಕ್ರಮಾದಿತ್ಯ (1076-1127), ಕರ್ಣ, ಭೋಜಾದಿಗಳ ಆಸ್ಥಾನಗಳನ್ನೆಲ್ಲ ಸುತ್ತಿ ಬಂದಿದ್ದ ಕಾಶ್ಮೀರದ ಬಿಲ್ಹಣ ಮಹಾಕವಿಗೆ ತನ್ನ ಆಸ್ಥಾನದಲ್ಲಿ ವಿದ್ಯಾಪತಿಯೆಂಬ ಪದವಿಯನ್ನಿತ್ತು ಅವನಿಂದ ವಿಕ್ರಮಾಂಕ ದೇವಚರಿತವೆಂಬ ಮನೋಹರ ಐತಿಹಾಸಿಕ ಕಾವ್ಯವನ್ನು ಬರೆಯಿಸಿದ. ಇದೇ ವಿಕ್ರಮಾದಿತ್ಯನ ಕಾಲದಲ್ಲಿ ವಿಜ್ಞಾನೇಶ್ವರ ಎಂಬ ಪಂಡಿತ ಧರ್ಮಶಾಸ್ತ್ರ ಸಾಹಿತ್ಯದಲ್ಲಿಯೇ ತುಂಬಾ ಮನ್ನಣೆಗಳಿಸಿರುವ ಮಿತಾಕ್ಷರಾ ವ್ಯಾಖ್ಯೆಯನ್ನು ಯಾಜ್ಞವಲ್ಕ್ಯಸ್ಮೃತಿಗೆ ಬರೆದ. ಚಾಳುಕ್ಯ ಅರಸ ಮೂರನೆಯ ಸೋಮೇಶ್ವರ ಭೂಲೋಕಮಲ್ಲ (1127-39) ಅಭಿಲಾಷಿತಾರ್ಥಚಿಂತಾಮಣಿ ಅಥವಾ ಮಾನಸೋಲ್ಲಾಸ ಎಂಬ ವಿಶ್ವಕೋಶವನ್ನು ರಚಿಸಿದ. ಇದರಲ್ಲಿ ಸಂಸ್ಕೃತ ಕಾವ್ಯ, ಶಾಸ್ತ್ರ, ಕಲೆ, ವಿಜ್ಞಾನ, ಧರ್ಮ ಮುಂತಾದ ಸಕಲ ವಿದ್ಯಾಪ್ರಕಾರಗಳೂ ಸಂಕ್ಷಿಪ್ತವಾಗಿ ಹಾಗೂ ಸಪ್ರಮಾಣವಾಗಿ ಅಂತರ್ಗತವಾಗಿವೆ. ವನಸ್ಪತಿಗಳು, ಪ್ರಾಣಿಗಳು, ಪುಷ್ಪರಚನೆ, ಶಕುನಗಳು, ಕಾಮಶಾಸ್ತ್ರ, ಚಿತ್ರ, ಸಂಗೀತ, ರಾಜನೀತಿ, ಭೂಗೋಳ, ಪಾಕಶಾಸ್ತ್ರ ಮುಂತಾದ ಲೌಕಿಕ ವಿದ್ಯೆಗಳಿಗೂ ಇಲ್ಲಿ ಸಮಾವೇಶ ದೊರೆತಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಇಡೀ ಸಂಸ್ಕೃತ ಸಾಹಿತ್ಯದಲ್ಲೇ ಇಂಥ ಗ್ರಂಥ ಮತ್ತೊಂದಿಲ್ಲ. ಈ ದೊರೆಯ ಆಶ್ರಯದಲ್ಲೇ ಇದ್ದ ಪಾಶರ್ವ್‌ದೇವ ಸಂಗೀತ ಸಮಯಸಾರವನ್ನು ರಚಿಸಿದ್ದಾನೆ. ಇಮ್ಮಡಿ ಜಗದೇಕಮಲ್ಲ (1139-49) ಸಂಗೀತಕ್ಕೆ ಸಂಬಂಧಿಸಿದಂತೆ ಸಂಗೀತ ಚೂಡಾಮಣಿ ಎಂಬ ಗ್ರಂಥವನ್ನು ಬರೆದಿದ್ದಾನೆ. ಹೊಯ್ಸಳರ ರಾಜ್ಯದಲ್ಲಿಯ ಎರಡನೆಯ ವೀರಬಲ್ಲಾಳನ ಆಸ್ಥಾನಕವಿ ವಿದ್ಯಾಚಕ್ರವರ್ತಿಯ ರುಕ್ಮೀಣೀಕಲ್ಯಾಣನಾಟಕ ಹಾಗೂ ಅಲಂಕಾರಸರ್ವಸ್ವ ಸಂಜೀವಿನೀ ಮತ್ತು ಕಾವ್ಯಪ್ರಕಾಶ ಸಂಪ್ರದಾಯಪ್ರಕಾಶಿನೀ ಎಂಬ ಅಲಂಕಾರ ಶಾಸ್ತ್ರಗ್ರಂಥಗಳು ಮಹತ್ತ್ವದ್ದಾಗಿದೆ. ಇವನ ಮಗನಾದ ಸಕಲವಿದ್ಯಾಚಕ್ರವರ್ತಿ ಗದ್ಯಕರ್ಣಾಮೃತ ಎಂಬ ಗ್ರಂಥವನ್ನು ಬರೆದಿದ್ದಾನೆ. ಮಧ್ಯಕಾಲೀನ ಕಾಲ ಕರ್ನಾಟಕದಲ್ಲಿಯೇ ಹುಟ್ಟಿಬೆಳೆದ ಮಧ್ವಾಚಾರ್ಯರು ವೇದಾಂತ ಪಂಥವೊಂದನ್ನು ಸ್ಥಾಪಿಸಿ ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರಗಳಿಗೆ ಭಾಷ್ಯಗಳನ್ನೂ ರಾಮಾಯಣ, ಮಹಾಭಾರತ, ಭಾಗವತಗಳ ತಾತ್ಪರ್ಯ ನಿರ್ಣಯ ಮೊದಲಾದ 37 ಗ್ರಂಥಗಳನ್ನೂ ರಚಿಸಿದರು. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಸಂಸ್ಕೃತ ವಾಙ್ಮಯ ಉನ್ನತಿಗೆ ಹೆಚ್ಚಿನ ಪ್ರಚೋದನೆ ನೀಡಿತು. ಸಾಮ್ರಾಜ್ಯ ಸ್ಥಾಪಕರಾದ ಮಾಧವ ವಿದ್ಯಾರಣ್ಯರು ಅವರ ಗುರುಗಳಾದ ಭಾರತೀತೀರ್ಥರು ಹಾಗೂ ಅವರ ತಮ್ಮಂದಿರಾದ ಸಾಯಣ ಮತ್ತು ಭೋಗನಾಥ ಇವರಿಂದ ಸಂಸ್ಕೃತ ವಾಙ್ಮಯದ ಎಲ್ಲ ಪ್ರಕಾರಗಳು ಸಮೃದ್ಧವಾದುವು. ತೈತ್ತೀರೀಯ ಸಂಹಿತೆ ಮುಂತಾದ ನಾಲ್ಕು ವೇದ ಸಂಹಿತೆಗಳು, ಅವುಗಳ ಬ್ರಾಹ್ಮಣಗಳು ಹೀಗೆ 18 ವೇದಗ್ರಂಥಗಳಿಗೆ ಮಾಧವಾಚಾರ್ಯ (ವಿದ್ಯಾರಣ್ಯರ) ನೇತೃತ್ವದಲ್ಲಿ ಅನೇಕರ ನೆರವಿನಿಂದ ಸಾಯಣಾಚಾರ್ಯರು ಭಾಷ್ಯ ರಚಿಸಿದರು. ಇವುಗಳಲ್ಲಿ ಒಂದೊಂದು ಸಂಹಿತೆಯ ಪ್ರಾರಂಭದಲ್ಲಿಯೂ ಪೀಠಿಕೆಯಲ್ಲಿ ವೇದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪುರ್ವಮೀಮಾಂಸಾ ಸೂತ್ರಗಳ ಆಧಾರದ ಮೇಲೆ ವಿಸ್ತಾರವಾಗಿ ಚರ್ಚಿಸಲಾಗಿದೆ. ಸಾಯಣರ ಯಜ್ಞತಂತ್ರ ಸುಧಾನಿಧಿ ಮತ್ತು ಪ್ರಯೋಗ ರತ್ನಮಾಲಾ ಗ್ರಂಥಗಳು ಶ್ರೌತಯಜ್ಞಗಳ ಪ್ರಯೋಗವನ್ನು ಸ್ಪಷ್ಟಪಡಿಸುತ್ತವೆ. ಸ್ಮೃತಿ ಕ್ಷೇತ್ರದಲ್ಲಿ ಪರಾಶರ ಸ್ಮೃತಿಗೆ ಮಾಧವೀಯ ವ್ಯಾಖ್ಯೆ ಮತ್ತು ವ್ಯವಹಾರದ ವಿಷಯದಲ್ಲಿ ಪರಾಶರಮಾಧವೀಯ ಗ್ರಂಥಗಳು ಹೊರಬಂದವು. ಪ್ರಾಯಶ್ಚಿತ್ತ ಸುಧಾನಿಧಿಯೂ ಇದೇ ವಿಭಾಗಕ್ಕೆ ಸೇರಿದ ಕೃತಿ. ದೇವಣ್ಣಭಟ್ಟ (ಸು.1145) ನಾನಾ ಸ್ಮೃತಿಗಳ ಆಧಾರದ ಮೇಲೆ ಸ್ಮೃತಿಚಂದ್ರಿಕೆಯನ್ನು ಮತ್ತು ನರಹರಿ ಎಂಬುವನು ಸ್ಮೃತಿಕೌಸ್ತುಭವನ್ನೂ ರಚಿಸಿದರು. ವ್ಯಾಕರಣದಲ್ಲಿ ಮಾಧವೀಯವಾದ ಧಾತುವೃತ್ತಿಯನ್ನು ಗಮನಿಸಬಹುದು. ದರ್ಶನ ಪ್ರಪಂಚದಲ್ಲಿ ಮಾಧವ ವಿದ್ಯಾರಣ್ಯರ ಜೈಮಿನೀಯ ನ್ಯಾಯಮಾಲಾವಿಸ್ತರ ಮತ್ತು ವೈಯಾಸಿಕ ನ್ಯಾಯಮಾಲಾವಿಸ್ತರ ಮತ್ತು ಸಾಯಣಾಚಾರ್ಯರ ಸರ್ವದರ್ಶನಸಂಗ್ರಹ ಇವು ಮುಖ್ಯವಾದವು. ಪದ್ಮಪುರಾಣದ ಸೂತಸಂಹಿತೆಯ ವ್ಯಾಖ್ಯೆ ತಾತ್ಪರ್ಯ ದೀಪಿಕೆಯೂ ಇವರದು. ಅಲಂಕಾರಶಾಸ್ತ್ರಕ್ಕೆ ಸೇರಿದ ಅಲಂಕಾರಸುಧಾನಿಧಿಯೂ ಸಾಯಣರ ಹೆಸರಿನಲ್ಲಿದೆ. ಸಾಯಣರು ಸುಭಾಷಿತಸುಧಾನಿಧಿ ಎಂಬ ಸುಭಾಷಿತ ಸಂಗ್ರಹವನ್ನೂ ಸಿದ್ಧಪಡಿಸಿದರು. ಭೋಗನಾಥ ಉತ್ತಮ ಕವಿಯೆಂದೂ ಹಲವು ಕೃತಿಗಳನ್ನು ರಚಿಸಿದನೆಂದೂ ಉಲ್ಲೇಖವಿದೆ. ಆದರೆ ಆತನ ಕೃತಿಗಳು ಯಾವುವೂ ದೊರೆತಿಲ್ಲ. ತನ್ನ ಪತಿ ಕಂಪಣ ಅಥವಾ ಕಂಪರಾಯ ಮಧುರೆಯನ್ನು ವಶಪಡಿಸಿಕೊಂಡುದನ್ನು ಕಣ್ಣಾರೆ ಕಂಡ ಗಂಗಾದೇವಿ, ಆ ವಿಜಯ ಯಾತ್ರೆಯನ್ನು ಮಧುರಾವಿಜಯ ಅಥವಾ ವೀರಕಂಪಣ ರಾಯಚರಿತವೆಂಬ ಹೆಸರಿನಲ್ಲಿ ಕಾವ್ಯವೊಂದನ್ನು ರಚಿಸಿದ್ದಾಳೆ (ಸು.1360). ವಿಜಯನಗರದ ವಿರೂಪಾಕ್ಷ ನರಕಾಸುರ ವಿಜಯವನ್ನು ರಚಿಸಿದ. ಈ ಕಾಲದಲ್ಲೇ ಮುಂದೆಯೂ ಸಾಲುವಾಭ್ಯುದಯ ಮುಂತಾದ ಅನೇಕ ಕಾವ್ಯಗಳು ರಚಿತವಾದವು. ವಿಜಯನಗರದ ಅನಂತರ ರಾಜಕೀಯ ಕೇಂದ್ರ ಹಂಚಿಹೋದಂತೆ ವಿದ್ಯಾಕೇಂದ್ರಗಳೂ ಹಂಚಿಹೋದವು. ಆದರೆ ಸಂಸ್ಕೃತಕ್ಕಿದ್ದ ಪ್ರೋತ್ಸಾಹ ಕುಂಠಿತವಾದರೂ ಅಳಿಸಿಹೋಗಲಿಲ್ಲ. ಕೆಳದಿಯ ದೊರೆ ಬಸವ ಭೂಪಾಲ ಸ್ವತಃ ಕವಿಯಾಗಿದ್ದ. ಸೋಮದೇವನ ಅಭಿಲಷಿತಾರ್ಥ ಚಿಂತಾಮಣಿಯ ಮಾದರಿಯನ್ನು ಅನುಸರಿಸಿ ಶಿವತತ್ತ್ವ ರತ್ನಾಕರ ಎಂಬ ಗ್ರಂಥವನ್ನು ಈತ ಸಿದ್ಧಪಡಿಸಿದ. ಇದು 108 ಅಧ್ಯಾಯಗಳುಳ್ಳ ಬೃಹದ್ಗ್ರಂಥ. ಇವನದೇ ಇನ್ನೊಂದು ಉದ್ಗ್ರಂಥ ಸುಭಾಷಿತ ಸುರದ್ರುಮ ಎಂಬ ಸೂಕ್ತಿಕೋಶ. ಶ್ರೀರಂಗಪಟ್ಟಣದ ದಳವಾಯಿ ನಂಜರಾಜ ನಂಜರಾಜಯಶೋಭೂಷಣ ಎಂಬ ಅಲಂಕಾರ ಗ್ರಂಥವನ್ನು ಬರೆದ. ಅಲ್ಲಿಯೇ ಪ್ರಧಾನಿಯಾಗಿದ್ದ ವೆಂಕಟಪ್ಪಯ್ಯ ಭೂಪತಿ ಅಥವಾ ವೆಂಕಾಮಾತ್ಯ ಹಲವಾರು ಗ್ರಂಥಗಳನ್ನು ರಚಿಸಿದ. ಇವನ ಅಲಂಕಾರಮಣಿದರ್ಪಣದಲ್ಲಿ ಅದುವರೆಗೆ ಅಲಂಕಾರ ಶಾಸ್ತ್ರದಲ್ಲಿ ನಡೆದ ಚರ್ಚೆಗಳನ್ನು ಸುಲಲಿತವಾಗಿ ಸಂಗ್ರಹಿಸಲಾಗಿದೆ. ಇವನ ಕುಶಲವ ವಿಜಯಚಂಪು ಭಟ್ಟಿಕಾವ್ಯದ ಮಾದರಿಯಲ್ಲಿ ವ್ಯಾಕರಣ ನಿಯಮಗಳಿಗೆ ಉದಾಹರಣೆ ಯಾಗಿರುವಂತೆ ರಚಿಸಲಾದ ಶಾಸ್ತ್ರಕಾವ್ಯ. ಈತ ಇವಲ್ಲದೆ ಹತ್ತು ಬಗೆಯ ರೂಪಕಗಳಿಗೂ ಒಂದೊಂದು ಉದಾಹರಣೆಯಾಗುವಂತೆ ಹತ್ತು ರೂಪಕಗಳನ್ನು ಬರೆದಿದ್ದಾನೆ. ಮುಮ್ಮಡಿ ಕೃಷ್ಣರಾಜರ ಕಾಲ 19ನೆಯ ಶತಮಾನದಲ್ಲಿ ಹುಟ್ಟಿದ ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ತ್ವನಿಧಿ ಒಂದು ಸಚಿತ್ರ ಗ್ರಂಥ. ಇದರಲ್ಲಿ ಸಂವತ್ಸರಾಭಿಮಾನಿ ದೇವತೆಗಳು ರಾಗಾಭಿಮಾನಿ ದೇವತೆಗಳೇ ಮೊದಲಾಗಿ ನಾನಾ ದೇವತೆಗಳ, ಶಿವವಿಷ್ಣುವಿನ ನಾನಾ ರೂಪಗಳ ಸಂಸ್ಕೃತದ ಧ್ಯಾನ ಶ್ಲೋಕಗಳೊಡನೆ ಅದಕ್ಕೆ ಅನುಗುಣವಾದ ವರ್ಣರಂಜಿತ ಚಿತ್ರಗಳನ್ನು ಕೊಡಲಾಗಿದೆ. ಸಂಖ್ಯಾರತ್ನಮಾಲಾ ಒಂದು ಬಗೆಯ ಕೋಶ. ಪ್ರಪಂಚದಲ್ಲಿ ಕೆಲವೊಂದು ಪದಾರ್ಥಗಳು ಒಂಟಿಯಾಗಿರಬಹುದು, ಜೊತೆಜೊತೆಯಾಗಿರಬಹುದು. ಇಲ್ಲವೇ ಮೂರು ಅಥವಾ ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿನ ಗುಂಪುಗಳಲ್ಲಿರಬಹುದು. ಅಂಥ ಒಂಟಿ ಪದಾರ್ಥಗಳನ್ನೂ ಎರಡು ಅಥವಾ ಹೆಚ್ಚಿನ ಸಂಖ್ಯೆಯ ಗುಂಪುಗಳಲ್ಲಿ ಸೇರಿದ ವಸ್ತುಗಳ ಹೆಸರುಗಳನ್ನೂ ಆಯಾ ಸಂಖ್ಯೆಯ ಕ್ರಮದಲ್ಲಿ ಕೊಡಲಾಗಿದೆ. ಹೀಗೆ 127 ಕೊನೆಯ ಸಂಖ್ಯೆ ‘ಗ್ರಹಣದರ್ಪಣ’ 1841-1902ರ ವರೆಗಿನ ಅವಧಿಯಲ್ಲಿನ ಗ್ರಹಣದ ಬಗ್ಗೆ ಮಾಹಿತಿ ನೀಡುವ ಗ್ರಂಥ. 19ನೆಯ ಶತಮಾನದಲ್ಲಿ ನಡೆದ ಸಾಹಿತ್ಯ ಚಟುವಟಿಕೆಯಲ್ಲಿ ಇನ್ನೂ ಕೆಲವು ಹೆಸರುಗಳನ್ನು ಸೂಚಿಸಬಹುದು. ಯಾದವ ರಾಘವ ಪಾಂಡವೀಯ (1817) ಎಂಬ ತ್ರಿಸಂಧಾನ ಕಾವ್ಯವನ್ನು ಮೈಸೂರು ಅನಂತಾಚಾರ್ಯ ರಚಿಸಿದ್ದಾರೆ. ಭಾಗವತ, ರಾಮಾಯಣ ಹಾಗೂ ಮಹಾಭಾರತ ಕಥೆಗಳನ್ನು ಒಂದೇ ಬಾರಿಗೆ ಹೇಳುವ ಸಾಹಸ ಈ ಕಾವ್ಯದಲ್ಲಿ ನಡೆದಿದೆ. ಏಕಾಂಬರಶಾಸ್ತ್ರಿ ಎಂಬವರು ವೀರಭದ್ರವಿಜಯಚಂಪು ಎಂಬ ಕಾವ್ಯದಲ್ಲಿ ಬೆಂಗಳೂರು ಕೆಂಪೇಗೌಡನ ವಂಶದ ಚರಿತ್ರೆ ಹೇಳಲು ಅವಕಾಶ ಮಾಡಿಕೊಂಡಿದ್ದಾರೆ. ಮಲ್ಲಾರಿ ಆರಾಧ್ಯರು ಶಿವಲಿಂಗ, ಸೂರ್ಯೋದಯ ಎಂಬ ನಾಟಕವನ್ನು ಪ್ರಬೋಧ ಚಂದ್ರೋದಯದ ಮಾದರಿಯಲ್ಲಿ ರಚಿಸಿದ್ದರೆ, ಲಿಂಗಭಟ್ಟರು ಅಮರಕೋಶಕ್ಕೆ ಸಂಸ್ಕೃತ ಹಾಗೂ ಕನ್ನಡ ವಿವೃತ್ತಿಯನ್ನು ಬರೆದಿದ್ದಾರೆ. ಗುಡಿಬಂಡೆ ಸಮೀಪದ ಮಂಡಿಕಲ್ಲು ರಾಮಶಾಸ್ತ್ರೀ ‘ಮೇಘ ಪ್ರತಿಸಂದೇಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಸತ್ಯಪ್ರಿಯತೀರ್ಥರು ವ್ಯಾಕರಣ ಮಹಾಭಾಷ್ಯಕ್ಕೆ ವ್ಯಾಖ್ಯಾನ ರಚಿಸಿದ್ದಾರೆ. ಇದರ ಭಾಗಗಳು ಮಾತ್ರ ದೊರೆತಿವೆ. ಮೇಲುಕೋಟೆಯ ಜಗ್ಗೂಆಳ್ವಾರರು ನಿರ್ಮಿಸಿದ ಪ್ರತಿಜ್ಞಾಕೌಟಿಲ್ಯಂ, ಪ್ರಸನ್ನರಾಘವಂ, ಮಹೀಹರಣಂ ಮುಂತಾದ ಅನೇಕ ಕಾವ್ಯಗಳು ಗಮನಾರ್ಹವಾಗಿವೆ. ಸಂಸ್ಕೃತ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್, ಕನ್ನಡ, ಹಿಂದೀಗಳಿಗೆ ಅನುವಾದಿಸಿ ಸಂಸ್ಕೃತ ಸಾಹಿತ್ಯವನ್ನು ಅನ್ಯರಿಗೆ ಪರಿಚಯ ಮಾಡಿಕೊಡುವಲ್ಲಿ ವಿದ್ವಾಂಸರಾದ ಕೆ. ಕೃಷ್ಣಮೂರ್ತಿ, ಎನ್. ರಂಗನಾಥಶರ್ಮ ತುಂಬಾ ಶ್ರಮಿಸಿದ್ದಾರೆ. ಇವರಂತೆಯೇ ಅನೇಕ ಆಧುನಿಕ ವಿದ್ವಾಂಸರು ತಮ್ಮದೇ ಆದ ಕೊಡುಗೆಯನ್ನು ಮೂಲ ಸಾಹಿತ್ಯಕ್ಕಾಗಲೀ ಅಥವಾ ಅನುವಾದ ಸಾಹಿತ್ಯಕ್ಕಾಗಲೀ ಅರ್ಪಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಅನೇಕ ಕೃತಿಗಳು ಮಹತ್ಕೃತಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸಂಸ್ಕೃತ ಶಾಖೆ ಸಂಸ್ಕೃತದ ಬೆಳೆವಣಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಶ್ರಮಿಸುತ್ತಿದೆ. ವಿಜಯನಗರ ಕಾಲದಾರಭ್ಯ ಆಧುನಿಕ ಕಾಲದ ತನಕ ಸಂಸ್ಕೃತದಲ್ಲಿ ಸೃಜನಾತ್ಮಕ ಕಾರ್ಯ ಎಷ್ಟೊಂದು ಅಗಾಧವಾಗಿ ಸಾಗಿದೆಯೆಂದರೆ ದೊರೆಯುವ ಸಂಸ್ಕೃತ ಹಸ್ತಪ್ರತಿಗಳ ಸಂಖ್ಯೆ ಹತ್ತುಸಾವಿರಕ್ಕೂ ಹೆಚ್ಚಾಗುತ್ತದೆ. ಈ ಗ್ರಂಥಗಳೆಲ್ಲ ಹೆಚ್ಚಾಗಿ ಪುರ್ವ ಮಹಾಕವಿಗಳ, ಸ್ತೋತ್ರಕಾರರ ಮಾದರಿಯಲ್ಲಿ ಬರೆದ ನೂತನ ರಚನೆಗಳು, ಇಲ್ಲವೆ ನಾನಾ ಶಾಸ್ತ್ರಗ್ರಂಥಗಳಿಗೆ ಟೀಕೆಟಿಪ್ಪಣಿಗಳು, ಇಲ್ಲವೆ ಧರ್ಮಶ್ರದ್ಧೆಯಿಂದ ಬರೆದ ಆಚಾರ್ಯ ಪುರುಷರ ದಿಗ್ವಿಜಯಗಳು, ಬಾಲೋಪಯೋಗಿ ಕಥಾನಕಗಳು ಮತ್ತು ಧರ್ಮಾಚರಣೆಗೆ ಉಪಯುಕ್ತವಾದ ಕೈಪಿಡಿಗಳು, ಮಂತ್ರ-ತಂತ್ರ ಪರಿಷ್ಕಾರಗಳು. ಹೊಸಗನ್ನಡ ಕಾಲ 20ನೆಯ ಶತಮಾನದಲ್ಲಿಯೂ ಹಲವು ಕೃತಿಗಳು ಸಂಸ್ಕೃತದಲ್ಲಿ ರಚನೆಗೊಂಡವು. ಸುಂದರವಲ್ಲಿಯ (1900) ರಾಮಾಯಣ ಚಂಪು ಒಂದು ಗಮನಾರ್ಹ ಕೃತಿ. ಚಾಮರಾಜನಗರದ ಶ್ರೀಕಂಠಶಾಸ್ತ್ರೀ ಅವರು ಧಾತುರೂಪ ಪ್ರಕಾಶಿಕೆ ಎಂಬ ಗ್ರಂಥವನ್ನು ಬರೆದರಲ್ಲದೆ, ಯವನಯಾಮಿನೀವಿನೋದ ಕಥಾ ಎಂಬ ಹೆಸರಿನಲ್ಲಿ ಅರೇಬಿಯನ್ ನೈಟ್ಸ್‌ ಕಥೆಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದ್ದಾರೆ. ಶ್ರೀ ಕೃಷ್ಣಬ್ರಹ್ಮತಂತ್ರ ಪರಕಾಲ ಸ್ವಾಮಿಗಳು ಅಲಂಕಾರಮಣಿಹಾರ ಎಂಬ ಗ್ರಂಥವನ್ನು ರಚಿಸಿದ್ದಾರೆ. ಇದು ಅಲಂಕಾರಗಳನ್ನು ವಿವರಿಸುವ ಗ್ರಂಥ. ಇದರ ಉದಾಹರಣೆಗಳೆಲ್ಲವೂ ಶ್ರೀನಿವಾಸ ದೇವರನ್ನು ಕುರಿತವು. ವೇದಾಂತಾಚಾರ್ಯರು ರಚಿಸಿದ ಕೃತಿ ರಸಾಸ್ವಾದನೆ. ಇದು ಹಂಸಸಂದೇಶದ ವ್ಯಾಖ್ಯೆ. ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರು ಭಗವದ್ಗೀತಾ ಪ್ರಬಂಧ ಮೀಮಾಂಸಾ (1902), ಮೀಮಾಂಸಾ ಭಾಷಾಭೂಷಣ (1928) ಮುಂತಾದ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೀಮಾಂಸಾ ಭಾಷಾಭೂಷಣ ಕುಮಾರಿಲಭಟ್ಟನ ತತ್ತ್ವಗಳನ್ನು ಪ್ರತಿಪಾದಿಸುವ ಗ್ರಂಥ. ದರ್ಶನೋದಯ (1933) ನಾನಾದರ್ಶನ ಪದ್ಧತಿಗಳ ವಿಷಯದೃಷ್ಟಿ ಮತ್ತು ವಿಮರ್ಶೆಯಿಂದ ಕೂಡಿದ ಲಲಿತ ಹಾಗೂ ಸ್ಪಷ್ಟ ನಿರೂಪಣೆಗಳನ್ನೊಳಗೊಂಡಿದೆ. ಮೇಲುಕೋಟೆಯ ಜಗ್ಗು ವೆಂಕಟಾಚಾರ್ಯರ ಹೆಸರಿನಲ್ಲಿ ಹತ್ತಾರು ಕೃತಿಗಳಿವೆ. ಕಾರ್ಕಳದ ಪಂಡಿತೆ ರಮಾಬಾಯಿ ಅವರು ಸುಲಲಿತ ಸಂಸ್ಕೃತದಲ್ಲಿ ಗ್ರಂಥರಚಿಸಿ ಖ್ಯಾತಿಪಡೆದಿದ್ದಾರೆ. ಮುತ್ತಯ್ಯ ಭಾಗವತರ್ ಹುಟ್ಟುಕನ್ನಡಿಗರಲ್ಲದಿದ್ದರೂ ಅವರ ಸಂಗೀತ ಕೃತಿಗಳ ರಚನೆ ಬಹುತೇಕವಾಗಿ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ನಡೆಯಿತು. ಇಲ್ಲೇ ಮೈಸೂರಿನ ಪ್ರಸಿದ್ಧ ವಾಗ್ಗೇಯಕಾರರಾದ ವಾಸುದೇವಾಚಾರ್ಯರ ಹೆಸರನ್ನು ಹೇಳಬಹುದು. ಇವರಿಬ್ಬರ ಕೃತಿಗಳೂ ಜನಪ್ರಿಯತೆಯನ್ನೂ ಗಳಿಸಿವೆ. ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಆಳ್ವಿಕೆಯಲ್ಲೂ ಸಂಸ್ಕೃತಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಇವರೇ ಸ್ವತಃ ಹಲವು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಇವರು ನಿಯೋಜಿಸಿದ ಪುರಾಣ, ವೇದ, ವೇದಾಂತ ಗ್ರಂಥಗಳನ್ನು ಮೂಲ ಮತ್ತು ಕನ್ನಡ ಅನುವಾದದೊಡನೆ ಪ್ರಕಟಿಸುವ ಮಹಾಯೋಜನೆಯಂತೆ 12 ಮಹಾ ಪುರಾಣಗಳು, 12 ಉಪಪುರಾಣಗಳು, 6 ಆಧ್ಯಾತ್ಮಿಕ ಗ್ರಂಥಗಳು (ಆನಂದ ಅಧ್ಯಾತ್ಮ ರಾಮಾಯಣಗಳು, ಯೋಗವಾಸಿಷ್ಠ, ಪ್ರಸ್ಥಾನತ್ರಯ ಭಾಷ್ಯಗಳು), ಒಂದೆರಡು ತಂತ್ರ ಗ್ರಂಥಗಳ ಋಕ್ಸಂಹಿತೆ, ಐತರೇಯ ಬ್ರಾಹ್ಮಣ ಮತ್ತು ಆರಣ್ಯಕ ಮತ್ತು ನಿರುಕ್ತ-ಈ ಗ್ರಂಥಗಳು ಸುಮಾರು 350 ಸಂಪುಟಗಳಲ್ಲಿ ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲೆಯಲ್ಲಿ ಪ್ರಕಾಶಿತವಾಗಿವೆ. ಪುರಾಣಗಳ, ವೇದಾಂತ ಗ್ರಂಥಗಳ ಮೂಲ ಮತ್ತು ಅನುವಾದ ಪ್ರಕಟವಾಗಿದ್ದರೆ, ಸಂಹಿತೆ, ಬ್ರಾಹ್ಮಣ ಗ್ರಂಥಗಳು ಸಾಯಣ ಭಾಷ್ಯ ವಿಸ್ತಾರವಾದ ಕನ್ನಡ ವಿವರಣೆಯೊಂದಿಗೆ ಹೊರಬಂದಿವೆ. ನಿರುಕ್ತಕ್ಕೂ ವಿಸ್ತಾರವಾದ ವಿವರಣೆಯಿದೆ. ವೇದಗ್ರಂಥಗಳಿಗೆ ಇಂಗ್ಲಿಷ್ ಅನುವಾದವನ್ನು ಕೊಡಲಾಗಿದೆ. ಈ ಮಾಲೆಯ ಮೂಲಕ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿ ಪ್ರಚಾರಕ್ಕೆ, ಸಂಸ್ಕೃತ ಭಾಷಾಧ್ಯಯನಕ್ಕೆ ಒಡೆಯರ್ ಅವರು ಇತ್ತ ನೆರವು ಅಪಾರವಾದುದು. ಇತ್ತೀಚೆಗೆ ಜಯಚಾಮರಾಜೇಂದ್ರರ ಕೃತಿಗಳಾದ ಶ್ರೀತತ್ತ್ವನಿಧಿ ಮೊದಲಾದ 9 ಕೃತಿಗಳು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಿಂದ ಕನ್ನಡ ಇಂಗ್ಲಿಷ್ ಅನುವಾದಗಳೊಂದಿಗೆ ಪ್ರಕಟವಾಗಿವೆ. ವಿದ್ಯಾಭ್ಯಾಸ ಹಾಗೂ ಸಂಸ್ಕೃತ ಪ್ರಚಾರ ಕ್ಷೇತ್ರದಲ್ಲಿಯೂ ಸಾಕಷ್ಟು ಕಾರ್ಯ ಕಳೆದ ಶತಮಾನದ ಕೊನೆಯಿಂದ ನಡೆದು ಬಂದಿದೆ. ಎಚ್. ಸುಬ್ಬರಾವ್ ರಚಿಸಿದ, ‘ವಿದ್ಯಾಭ್ಯಾಸ ಪದ್ಧತಿ’ ಹರ್ಬರ್ಟ್ ಸ್ಪೆನ್ಸರನ ಗ್ರಂಥದ ಅನುವಾದ. ಪೆರಿಸ್ವಾಮಿ ತಿರುಮಲಾಚಾರ್ ಸದ್ವಿದ್ಯಾ ಆಂಗ್ಲೋ-ಸಂಸ್ಕೃತ ಪಾಠಶಾಲೆಯ ಸ್ಥಾಪಕರಲ್ಲೊಬ್ಬರಾಗಿದ್ದು, ಬಾಲಬೋಧಗಳನ್ನು ಸಿದ್ಧಪಡಿಸಿದರು. ಹಿಂದಿನಿಂದಲೂ ಉಡುಪಿ, ಶೃಂಗೇರಿ, ಕೂಡ್ಲಿ, ಸಂಕೇಶ್ವರಗಳಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲೂ ಸಂಸ್ಕೃತ ಪಾಠಶಾಲೆಗಳಿದ್ದವು. ಪರ್ದಲ, ಕಾರ್ಕಳಗಳಲ್ಲಿ ಮಹಾ ಪಾಠಶಾಲೆಗಳಿದ್ದವು (ಓರಿಯಂಟಲ್ ಕಾಲೇಜು). ಈಚೆಗೆ ಆಧುನಿಕ ವಿದ್ಯಾಭ್ಯಾಸದ ಏರ್ಪಾಡುಗಳಾದಂತೆ ಸಂಸ್ಕೃತ ವಿದ್ಯಾಭ್ಯಾಸ ಪ್ರಗತಿ ಸಾಧಿಸಿದೆ. ಶೃಂಗೇರಿ, ಉಡುಪಿ, ಕಾರ್ಕಳಗಳಲ್ಲಿದ್ದ ಪಾಠಶಾಲೆಗಳು ಸುವ್ಯವಸ್ಥಿತವಾಗಿವೆ. ಮೈಸೂರು, ಬೆಂಗಳೂರುಗಳಲ್ಲಿ ಪ್ರೌಢ ವಿದ್ಯಾಭ್ಯಾಸಕ್ಕೆ ಉನ್ನತ ಮಟ್ಟದ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಲಾಗಿದೆ. ಶಾಲೆ, ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಸಂಸ್ಕೃತ ಶಿಕ್ಷಣಕ್ಕೆ ಅವಕಾಶವಿದೆ. ಸಂಸ್ಕೃತದಲ್ಲಿ ಪತ್ರಿಕೆ, ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಬೆಳಗಾಂವಿಯಿಂದ ಪ್ರಕಟವಾಗುತ್ತಿದ್ದ ಸಂಸ್ಕೃತ ಚಂದ್ರಿಕಾ ಮತ್ತು ಮಧುರವಾಣೀ ನಿಯತಕಾಲಿಕೆಗಳು ಬಹಳ ಪ್ರಭಾವವನ್ನು ಬೀರಿವೆ. ಇದರ ಏಳ್ಗೆಗಾಗಿ ಪಂಡರೀನಾಥ ಗಲಗಲಿಯವರು ಬಹಳ ಶ್ರಮವಹಿಸಿ ದುಡಿದಿದ್ದಾರೆ. ಅಮರ ಭಾರತೀ ನಿಯತಕಾಲಿಕೆ ವಾರಾಣಸಿಯಲ್ಲಿ ಪ್ರಕಾಶಿತವಾದರೂ ಅದರ ಸಂಪಾದಕರಾದ ನರಸಿಂಹಾಚಾರ್ ಕರ್ನಾಟಕದವರು. ಏಕಮಾತ್ರ ದೈನಿಕವಾದ ಸುಧರ್ಮಾ ಮೈಸೂರಿನಲ್ಲಿ ಕೆ.ಎಸ್.ವರದರಾಜ ಅಯ್ಯಂಗಾರ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿತ್ತು. ಸಂಸ್ಕೃತ-ಕನ್ನಡ ಭಾಷೆಗಳೆರಡೂ ಸು.2000 ವರ್ಷಗಳಿಂದ ಜೊತೆಯಲ್ಲಿಯೇ ಬೆಳೆಯುತ್ತ ಬಂದಿವೆ; ಪರಸ್ಪರ ಪ್ರಭಾವಿತವಾಗಿವೆ. ಕನ್ನಡ ಭಾಷೆಯ ಪ್ರಭಾವವೂ ಸಂಸ್ಕೃತದ ಮೇಲೆ ಆಗಿದೆ ಎಂಬುದಕ್ಕೆ ಸಂಸ್ಕೃತ ಕನ್ನಡದಿಂದ ಎರವಲು ಪಡೆದಿರಬಹುದಾದ ಒಂದೆರಡು ಪದಗಳನ್ನು ಇಲ್ಲಿ ಉದಾಹರಣೆಗಾಗಿ ಹೇಳಬಹುದು. ಆರ್ಬಟ-ಆರ್ಭಟ, ಗುದ್ದಲಿ-ಕುದ್ದಾಲ, ಗೊಟರು-ಕೋಟಕ. ಹೆಂಟೆ-ಹೆಂಡೆ, ಪಿಂಡು-ಪಿಂಡ ಇತ್ಯಾದಿ. ಸಂಸ್ಕೃತ ಪದಗಳು ಕನ್ನಡದಲ್ಲಿ ಧಾರಾಳವಾಗಿ ಬಳಕೆಯಾಗುತ್ತಾ ಬಂದಿವೆ. ಇಂದಿನ ಪಾರಿಭಾಷಿಕ ಪದಗಳನ್ನು ರೂಪಿಸುವುದರಲ್ಲಿಯೂ ಸಂಸ್ಕೃತದ ಉಪಯೋಗ ಬಹಳಷ್ಟಿದೆ. ಆದರೆ ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವುದು ಹೆಚ್ಚು. ಸಂಸ್ಕೃತದಲ್ಲಿದ್ದ ವಿಜ್ಞಾನ, ಕಲೆ ಮತ್ತು ತತ್ತ್ವಶಾಸ್ತ್ರ ಮೊದಲಾದ ವಾಙ್ಮಯ ವಿಭಾಗಗಳ ಬಗೆಗಿನ ಗ್ರಂಥಗಳೆಲ್ಲವನ್ನೂ ಕ್ರಮೇಣ ಕನ್ನಡದಲ್ಲಿಯೂ ಬರೆಯಲಾಯಿತು. ಮೊದಮೊದಲಿಗೆ ವಿಷಯ ನಿರೂಪಣೆಯಲ್ಲಿ ಸಂಸ್ ಸಂಸ್ಕೃತದ ಕವಿಗಳು ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧಗೊಳಿಸಿದ್ದಾರೆ. ಆ ಪಟ್ಟಿಯಲ್ಲಿ ಮೊದಲು ಬರುವವರು ವಾಲ್ಮೀಕಿ ಮುನಿ. ಅವರಿಂದಲೇ ಸಂಸ್ಕೃತದ ಮೊದಲ ಶ್ಲೋಕ ಹುಟ್ಟಿತು. ಅದು 'ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ. ಯತ್ಕ್ರೌಂಚ ಮಿಥುನಾತ್ ಏಕಮವಧೀಹಿ ಕಾಮಮೋಹಿತಂ' ಎಂಬುದು. ಬೇಡನೊಬ್ಬ ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದಾಗ ಅದನ್ನು ನೋಡಿ ಸಿಟ್ಟುಗೊಂಡ ವಾಲ್ಮೀಕಿ ಮುನಿ ತಮಗೇ ಗೊತ್ತಿಲ್ಲದಂತೆ ಈ ಶ್ಲೋಕ ಹೇಳಿ ಬೇಡನಿಗೆ ಶಾಪ ಕೊಟ್ಟರು. ಶೋಕದಲ್ಲಿ ಹುಟ್ಟಿದ ಅದು ಶ್ಲೋಕವೆಂದು ಪ್ರಸಿದ್ಧಿಗೆ ಬಂತು. ಅವರ ಶಿಷ್ಯ ಭರಧ್ವಾಜ ಮುನಿ ಇದನ್ನು ದಾಖಲಿಸಿದ. ಇದೇ ವಾಲ್ಮೀಕಿ ಮುನಿಗಳು ರಾಮಾಯಣವನ್ನೂ ರಚಿಸಿದರು. ನಂತರ ವ್ಯಾಸರಿಂದ ಮಹಾಭಾರತ ರಚಿತವಾಯಿತು. ಇವರಿಬ್ಬರು ಸಂಸ್ಕೃತದ ಮೂಲ ಕವಿಗಳಾದರೆ, ಈ ಭಾಷೆಯ ಆದಿಕವಿ ಎಂದು ಹೆಸರಾದವರು ಕಾಳಿದಾಸ. ಅಭಿಜ್ಞಾನ ಶಾಕುಂತಲಮ್ ನಾಟಕ ಇವರ ಮಹತ್ವದ ಕೃತಿ. ಇದಲ್ಲದೆ ಮಾಲವಿಕಾಗ್ನಿಮಿತ್ರಮ್, ವಿಕ್ರಮೋರ್ವಶೀಯ ಎಂಬ ನಾಟಕಗಳನ್ನೂ, ರಘುವಂಶಮ್ ಮತ್ತು ಕುಮಾರಸಂಭವಮ್ ಎಂಬ ಮಹಾಕಾವ್ಯಗಳನ್ನೂ, ಮೇಘದೂತಮ್ ಮತ್ತು ಋತುಸಂಹಾರಮ್ ಎಂಬ ಖಂಡಕಾವ್ಯಗಳನ್ನೂ ಬರೆದಿದ್ದಾರೆ. ಇವರ ಜೊತೆಗೆ ಭಾಸ, ಭಾರವಿ, ಶ್ರೀಹರ್ಷ, ಬಾಣ ಮುಂತಾದ ಮಹತ್ವದ ಕವಿಗಳು ಸಂಸ್ಕೃತದಲ್ಲಿ ಆಗಿಹೋಗಿದ್ದಾರೆ. ಗಮನಿಸಿ : ಕಾಳಿದಾಸರಿಗೆ ಭಾರತದ ಶೇಕ್ಸ್ ಪಿಯರ್ ಎಂಬ ಅಭಿದಾನವೂ ಇದೆ. ಆದರೆ ಕಾಳಿದಾಸರನ್ನು ಹೀಗೆ ಕರೆಯುವ ಯಾವುದೇ ಅಗತ್ಯವಿಲ್ಲ. ಏಕೆಂದರೆ, ಶೇಕ್ಸ್ ಪಿಯರ ಕಾಲ ಏಪ್ರಿಲ್ ೨೬ ೧೫೬೪, ಹಾಗು ಕಾಳಿದಾಸರ ಕಾಲ ೫ ನೇ ಶತಮಾನ. ಕಾಳಿದಾಸರ ಕಾವ್ಯಗಳು ಎಷ್ಟೋ ಶತಮಾನ ಹಳೆಯದು. ಇನ್ನು ಶೇಕ್ಸ್ ಪಿಯರನ್ನು ಇಂಗ್ಲೆಂಡಿನ ಕಾಳಿದಾಸರೆಂದು ಕರೆಯುವುದರಲ್ಲಿ ಅರ್ಥವಿದೆ. ತಪ್ಪಾದ ಈ ವಾಕ್ಯವನ್ನು ಭಾರತೀಯರು ಎಂದೂ ಒಪ್ಪುವುದಿಲ್ಲ, ಒಪ್ಪುವ ಅಗತ್ಯವೂ ಇಲ್ಲ. ಸಂಸ್ಕೃತ ವಿಕಿಪೀಡಿಯಾ ಸಂಸ್ಕೃತ ವಿಕಿಪೀಡಿಯಾ ೨೦೦೩ ರಲ್ಲಿ ಆರಂಭಿಸಲಾಯಿತು. ಇದುವರೆಗೂ ಸಂಸ್ಕೃತ ವಿಕಿಪೀಡಿಯಾದಲ್ಲಿ ೧೫೦೦೦ ಪುಟಗಳನ್ನು ರಚಿಸಲಾಗಿದೆ. External links Samskrita Bharati Transliterator from romanized to Unicode Sanskrit Sanskrit Voice: Learn, read and promote Sanskrit Sanskrit transliterator with font conversion to Latin and other Indian Languages Sanskrit Alphabet in Devanagari, Gujarati, Bengali, and Thai scripts with an extensive list of Devanagari, Gujarati, and Bengali conjuncts Academic Courses on Sanskrit Around The World Sanskrit Documents Sanskrit Documents : Documents in ITX format of Upanishads, Stotras etc. and a metasite with links to translations, dictionaries, tutorials, tools and other Sanskrit resources. Read online Sanskrit text (PDF) of Mahabharata, Upanishada, Bhagavad-Gita, Yoga-Sutra etc. as well as Sanskrit-English spiritual Dictionary Digital Sanskrit Buddhist Canon GRETIL: Göttingen Register of Electronic Texts in Indian Languages, a cumulative register of the numerous download sites for electronic texts in Indian languages. Gaudiya Grantha Mandira - A Sanskrit Text Repository. This site also provides encoding converter. Sanskrit texts at Sacred Text Archive Clay Sanskrit Library publishes Sanskrit literature with facing-page text and translation. for texts and word-to-word translations for ageold publications for similar old publications Primers Sanskrit Self Study by Chitrapur Math Discover Sanskrit A concise study of the Sanskrit language A Practical Sanskrit Introductory by Charles Wikner. A Sanskrit Tutor Ancient Sanskrit Online from the University of Texas at Austin Grammars An Analytical Cross Referenced Sanskrit Grammar By Lennart Warnemyr. ವರ್ಗ:ಭಾರತೀಯ ಭಾಷೆಗಳು ವರ್ಗ:ಇಂಡಿಕ್ ಭಾಷೆಗಳು ವರ್ಗ:ಶಾಸ್ತ್ರೀಯ ಭಾಷೆಗಳು
ರನ್ನ
https://kn.wikipedia.org/wiki/ರನ್ನ
ರನ್ನನು (೯೪೯-೧೦೨೦). ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯರಲ್ಲಿ ಒಬ್ಬನಾಗಿದ್ದಾನೆ.ಇವನ ಊರು ಬೆಳುಗುಲಿ(ರನ್ನ ಬೆಳಗಲಿ). ಹಳಗನ್ನಡದ ಮಹತ್ತ್ವದ ಕವಿ. ಪಂಪನ ಕಿರಿಯ ಸಮಕಾಲೀನವ . ಅಜಿತತೀರ್ಥಂಕರ ಪುರಾಣತಿಲಕಂ, ಸಾಹಸಭೀಮವಿಜಯ (ಗದಾಯುದ್ಧ) ಎಂಬ ಕಾವ್ಯಗಳ ಕರ್ತೃ. ಶಕ್ತಿಕವಿ ಎಂದೇ ಖ್ಯಾತನಾಗಿದ್ದಾನೆ. ರನ್ನನಿರುವ ಕನ್ನಡಕ್ಕೆ ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯೆ ಸಿಡಿಲ ಚಕ್ಕೆ ಎಂಬ ಹೊಗಳಿಕೆಗೆ ಕುವೆಂಪು ಅವರಿಂದ ಪಾತ್ರನಾಗಿದ್ದಾನೆ.' ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲ ಹಾಗೂ ಅವನ ಮಗ ಸತ್ಯಾಶ್ರಯ ಇರವಬೆಡಂಗ ಇವರ ಆಸ್ಥಾನಕವಿಯಾಗಿದ್ದು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದನು 200px|thumb|ಕವಿರತ್ನನೆಂದು ಓದುವ ಶ್ರವಣಬೆಳಗೊಳದಲ್ಲಿ ಕೆತ್ತಿದ ರನ್ನನ ಕೈಬರಹ ಬದುಕು ರನ್ನನು ಕ್ರಿ.ಶ.೯೪೯ರಲ್ಲಿ ಬೆಳುಗುಲಿ (ಈಗಿನ ರನ್ನ ಬೆಳಗಲಿ ತಾ|| ಮುಧೋಳ) ಗ್ರಾಮದಲ್ಲಿ ಜನಿಸಿದನು. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು..ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ. ಈತನು ಐದು ಕೃತಿಗಳನ್ನು ರಚಿಸಿದ್ದು ಮೂರು ಕೃತಿಗಳು ಮಾತ್ರ ಲಭ್ಯವಿವೆ: ರನ್ನನ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ವಿಚಾರಗಳು ಇವನ ಎರಡೂ ಕೃತಿಗಳಿಂದ ದೊರೆಯುತ್ತವೆ. ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ ತೊರಗಲಿಗೆ ಉತ್ತರಕ್ಕೂ ಬೆಳುಗಲಿ ದೇಶವಿದೆ. ಈ ಬೆಳುಗುಲಿ 500ರಲ್ಲಿ ಅಗ್ಗಳವೆನಿಸುವ ಜಮಖಂಡಿ ಎಂಬ ಪ್ರಾಂತ್ಯವಿದೆ. ಇದಕ್ಕೆ ತಿಲಕಪ್ರಾಯವಾಗಿ ಪ್ರಸಿದ್ಧಿ ಪಡೆದ ಬೆಳುಗುಲಿ (ಈಗಿನ ರನ್ನ ಬೆಳಗಲಿ) ಎಂಬುದೇ ರನ್ನನ ಜನ್ಮಸ್ಥಳ. ತಾಯಿ ಅಬ್ಬಲಬ್ಬೆ; ತಂದೆ ಜಿನವಲ್ಲಭ; ಅಣ್ಣಂದಿರು ರೇಚಣ ಮತ್ತು ಮಾರಯ್ಯ. ರನ್ನನ ಸಾಂಸಾರಿಕ ಜೀವನ ಕೂಡ ಚೆನ್ನಾಗಿತ್ತು. ಇವನಿಗೆ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಹೆಂಡತಿಯರು. ಧರ್ಮದಲ್ಲಿ ನಿಷ್ಠೆಯುಳ್ಳವರೆಂದು ಇವರ ವರ್ಣನೆ. ಇವರಿಗೆ ರಾಯ ಮತ್ತು ಅತ್ತಿಮಬ್ಬೆ ಎಂಬ ಇಬ್ಬರು ಮಕ್ಕಳಿದ್ದರು. ತನ್ನ ಮಕ್ಕಳಿಗೆ ಚಾವುಂಡರಾಯ ಮತ್ತು ಅತಿಮಬ್ಬೆಯರ ಹೆಸರುಗಳನ್ನು ಇಡುವುದರ ಮೂಲಕ ಕವಿ ಅವರ ಉಪಕಾರಕ್ಕೆ ಗೌರವವನ್ನು ತೋರಿದ್ದಾನೆ. ರನ್ನ ಜೈನಧರ್ಮೀಯನಾದರೂ ವೈಶ್ಯ ಪಂಗಡದವನೆಂದು ಹೇಳಲಾಗಿದೆ. ಕವಿ ತನ್ನ ಕಾವ್ಯಗಳಲ್ಲಿ ಪುಟ್ಟಿದ ಬಳೆಗಾರ ಕುಲದೊಳ್ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಜೊತೆಗೆ ವೈಶ್ಯಧ್ವಜ, ವಣಿಕ್ಕುಳಾರ್ಕ ಎಂಬ ಪದಗಳನ್ನು ಪದೇ ಪದೇ ಬಳಸಿದ್ದಾನೆ. ಇಂತಹ ವರ್ಗವೊಂದರಿಂದ ಬಂದ ವ್ಯಕ್ತಿಯೊಬ್ಬ ಕವಿಯಾದದ್ದು ವಿಶೇಷ. ಆದರೂ ಈ ವರ್ಗಸಂವೇದನೆ ಇವನ ಕಾವ್ಯಗಳಲ್ಲಿ ಇಲ್ಲ. ಅಷ್ಟರಮಟ್ಟಿಗೆ ಜೈನಧರ್ಮ ಇವನನ್ನು ಆವರಿಸಿದೆ.ರನ್ನನಿಗೆ ತಂದೆಯಿಂದ ಬಳುವಳಿಯಾಗಿ ಬಂದದ್ದು ಬಳೆಗಾರವೃತ್ತಿ. ಆದರೆ ರನ್ನ ಪ್ರತಿಕೂಲ ಪರಿಸ್ಥಿತಿಯೊಡನೆ ಹೋರಾಡಿ ಕವಿಯಾದವನು. ಚಿಕ್ಕಂದಿನಿಂದಲೂ ಓದಿನಲ್ಲಿ ಆಸಕ್ತನಾಗಿದ್ದ ಈತ ತನ್ನ ಆಸಕ್ತಿಯನ್ನು ಪೂರೈಸಿಕೊಳ್ಳಲು ದಕ್ಷಿಣದ ಗಂಗರಾಜ್ಯಕ್ಕೆ ಬರಬೇಕಾಯಿತು. ಇದಕ್ಕೆ ಆ ಕಾಲದಲ್ಲಿ ಶ್ರವಣಬೆಳಗೊಳ ಜೈನ ಸಂಸ್ಕøತಿಯ ಕೇಂದ್ರವಾಗುತ್ತಿದ್ದುದ್ದು ಕಾರಣವಿರಬೇಕು. ಜೊತೆಗೆ ಚಾವುಂಡರಾಯನ ವ್ಯಕ್ತಿತ್ವ ಕೀರ್ತಿಗಳೂ ಸೇರಿರಬೇಕು. ಪುಣ್ಯ ವಿಶೇಷದಿಂದ ಇವನಿಗೆ ಗಂಗಮಂತ್ರಿ ಚಾಮುಂಡರಾಯನ ಆಶ್ರಯ ಸಿಕ್ಕಿತು. ಗಂಗರಾಜರ ಗುರುಗಳಾದ ಅಜಿತಸೇನಾಚಾರ್ಯರು ಇವನಿಗೆ ಗುರುಗಳಾಗಿ ದೊರೆತಂದು ಇವನಲ್ಲಿದ್ದ ಧಾರ್ಮಿಕ ಆಸಕ್ತಿ ಬೆಳೆಯಲು ಅನುಕೂಲವಾಯಿತು. ಈ ಸನ್ನಿವೇಶದಲ್ಲಿ ರನ್ನ ಕವಿಯಾಗಿಯೂ ವಿದ್ವಾಂಸನಾಗಿಯೂ ಹೊರಹೊಮ್ಮಲು ಸಾಧ್ಯವಾಯಿತು. ಚಾವುಂಡರಾಯನ ನೆರವಿನಿಂದ ಸಕಲ ವಿದ್ಯಾಪಾರಂಗತನಾದ ರನ್ನ ಗಂಗರಾಜ್ಯದಿಂದ ಹಿಂದಿರುಗಿ ಚಾಳುಕ್ಯ ತೈಲಪನಲ್ಲಿ ಆಶ್ರಯ ಪಡೆದ. ತೈಲಪನ ಮಗನಾದ ಸತ್ಯಾಶ್ರಯ ಇರಿವಬೆಡಂಗ ಈತನಿಗೆ ಆಶ್ರಯ ನೀಡಿದ. ಹೀಗೆ ರನ್ನ ಗಂಗರಾಜ್ಯದಿಂದ ಹಿಂದಿರುಗಲು ಅತ್ತಿಮಬ್ಬೆಯ ಪ್ರಭಾವಿ ವ್ಯಕ್ತಿತ್ವ ಕಾರಣವಿರಬೇಕು. ಅತ್ತಿಮಬ್ಬೆ ಶ್ರವಣಬೆಳಗೊಳಕ್ಕೆ ಬಂದು ಗೊಮ್ಮಟದರ್ಶನ ಪಡೆದ ವಿಚಾರ ಅಜಿತಪುರಾಣದಲ್ಲಿ ಬಂದಿದೆ. ಹಾಗೆ ಬಂದಿದ್ದಾಗ ರನ್ನ ಅವಳ ವ್ಯಕ್ತಿತ್ವಕ್ಕೆ ಆಕರ್ಷಿತನಾಗಿ ತನ್ನ ರಾಜ್ಯಕ್ಕೆ ಮರಳಲು ಮನಸ್ಸುಮಾಡಿರಬೇಕು. ಕವಿ ಇದ್ದಕ್ಕಿದ್ದಂತೆ ಮೇಲೇರಿದವನಲ್ಲ; ಹಂತ ಹಂತವಾಗಿ ಮುಂದೆ ಬಂದವನು. ಇದನ್ನು ತಿಳಿಸುವ ಪದ್ಯವೊಂದು 'ಗದಾಯುದ್ಧ ದಲ್ಲಿದೆ. ಆರಂಭಕ್ಕೆ ಸಾಮಂತರ ನೆರವು ದೊರೆತ್ತಿದ್ದು, ಇವರಾರೆಂಬುದರ ಬಗ್ಗೆ ಚರ್ಚೆಯಿದೆ. ಆದರೆ ಕವಿಗೆ ನೆರವಾದ ಈ ಸಾಮಂತ ರಟ್ಟರಾಜ ಒಂದನೆಯ ಕಾರ್ತವೀರ್ಯನಿರಬೇಕೆಂಬ ಊಹೆಯಿದೆ. ಮುಂದೆ ಅಭ್ಯುದಯಕ್ಕೆ ಕಾರಣನಾದವನು ಮಂಡಲೇಶ್ವರನಾದ ಚಾವುಂಡರಾಯನೆಂಬುದು ಸ್ಪಷ್ಟ. ಗಂಗದಂಡನಾಯಕನಾದ ಚಾವುಂಡರಾಯನಿಂದ ತಾನು 'ರತ್ನವಾಗಿ ರೂಪುಗೊಂಡೆನೆಂದು ಈತನೇ ಹೇಳಿಕೊಂಡಿದ್ದಾನೆ. ಹೀಗೆ ಬೆಳೆದ ರನ್ನ ಚಕ್ರವರ್ತಿ ತೈಲಪನಲ್ಲಿ 'ಮಹಿಮೋನ್ನತಿ'ಯನ್ನೇ ಪಡೆದ. ಅವನಿಂದ 'ಕವಿಚಕ್ರವರ್ತಿ ಎಂಬ ಬಿರುದನ್ನೂ ಗಳಿಸಿದ. 'ಗದಾಯುದ್ಧ ವನ್ನು ದಂಡನಾಯಕ ಕೇಶಿ ತಿದ್ದಿದವನೆಂದು ಹೇಳಿಕೊಂಡಿರುವುದರಿಂದ, ಈ ಕೇಶಿಯೇ ರನ್ನನನ್ನು ಚಕ್ರವರ್ತಿಗೆ ಪರಿಚಯಿಸಿರಬೇಕೆಂದು ತೋರುವುದು. ರನ್ನನ ಪೋಷಕರಲ್ಲಿ ಚಾವುಂಡರಾಯ, ತೈಲಪರಂತೆಯೇ ಅತ್ತಿಮಬ್ಬೆಯೂ ಮುಖ್ಯಳಾಗಿದ್ದಾಳೆ. ಚಕ್ರವರ್ತಿಗಳಲ್ಲಿ ತೈಲಪ ಶ್ರೇಷ್ಠನಾಗಿರುವಂತೆ ದಾನದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೆ ಎಂಬುದು ಕವಿಯ ಹೇಳಿಕೆ. ರನ್ನನಿಂದ ಅಜಿತಪುರಾಣವನ್ನು ಹೇಳಿಸಿದವಳು ಅತ್ತಿಮಬ್ಬೆ. ಆದಿಪುರಾಣ, ಶಾಂತಿಪುರಾಣಗಳಿಗೆ ಸಮಾನವಾದ ಈ ಕೃತಿಯನ್ನು 'ಆಶ್ರಿತ ಚಿಂತಾಮಣಿಗತ್ತಿಮಬ್ಬೆಗರ್ತಿಯೆ ಪೇಳ್ದಂ' ಎಂದಿದ್ದಾನೆ. ಕವಿ. ಇದರಿಂದ ಅತ್ತಿಮಬ್ಬೆ ಪರವಾಗಿರುವ ಇವನ ಗೌರವ ವ್ಯಕ್ತವಾಗುತ್ತದೆ. ಹೀಗಾಗಿ ರನ್ನ ಪ್ರತಿಭಾವಂತನಾಗಿದ್ದು, ಅದನ್ನು ಗುರುತಿಸುವ ಜನರ ಸಹವಾಸ ದೊರಕಿದ್ದರಿಂದ ಸುಲಭವಾಗಿ ಮೇಲೇರಲು ಸಾಧ್ಯವಾಯಿತು. ಕವಿ ತಾನು ಸೌಮ್ಯ ಸಂವತ್ಸರದಲ್ಲಿ ಹುಟ್ಟಿದವನೆಂದು ಹೇಳಿಕೊಂಡಿದ್ದಾನೆ. ಇದು 949 ಆಗುತ್ತದೆ. ಆದ್ದರಿಂದ ರನ್ನ ಹುಟ್ಟಿದ್ದು 949ರಲ್ಲಿ ಎನ್ನುವುದು ಖಚಿತ. ರನ್ನನ ಕಾಲವನ್ನು ಸಾಮಾನ್ಯವಾಗಿ 993 ಎಂದು ನಿಗದಿಪಡಿಸುವುದು ವಾಡಿಕೆ. ಇದಕ್ಕೆ ಅಜಿತಪುರಾಣದ ಕಾಲ 993 ಎಂದು ಸ್ಪಷ್ಟವಾಗಿರುವುದೇ ಕಾರಣ. ರನ್ನ ಅಜಿತಪುರಾಣವನ್ನು ಅತ್ತಿಮಬ್ಬೆಯ ಆಶ್ರಯದಲ್ಲಿ ಬರೆದಿರುವನಾದರೂ ಒಂದು ರೀತಿಯಲ್ಲಿ ಬರೆದನೆಂದು ಹೇಳಬಹುದಾಗಿದೆ. ಆದ್ದರಿಂದ ರನ್ನನ ಕಾಲಗ್ರಹಿಕೆಯಲ್ಲಿ ತೈಲಪನ ಆಳ್ವಿಕೆಯ ಕಾಲ ಸಹಜವಾಗಿಯೇ ಗಮನಕ್ಕೆ ಬರುತ್ತದೆ. ಸತ್ಯಾಶ್ರಯವನ್ನು ಸಮೀಕರಿಸಿ ಗದಾಯುದ್ಧವನ್ನು ಬರೆದಿದ್ದರಿಂದ ಈ ಕಾವ್ಯದ ಕಾಲ ಸತ್ಯಾಶ್ರಯನ ಕಾಲಕ್ಕಿಂತ ಬೇರೆಯಾಗುವುದು ಸಾಧ್ಯವಿಲ್ಲ. ಈ ಕಾರಣದಿಂದ ಗದಾಯುದ್ಧದ ಕಾಲವನ್ನು 1005 ಎಂದು ಗುರುತಿಸಲಾಗಿದೆ. ಕವಿ 1020ರಲ್ಲಿ ತೀರಿಕೊಂಡಿರಬೇಕೆಂದು ಅಭಿಪ್ರಾಯವಿದೆ. ರನ್ನನಿಗೆ ಕವಿರತ್ನ, ಕವಿಮುಖಚಂದ್ರ, ಕವಿಚಕ್ರವರ್ತಿ, ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚರ್ತುಮುಖ, ಉಭಯಕವಿ ಮೊದಲಾದ ಬಿರುದುಗಳಿವೆ. 'ಉಭಯ ಕವಿನ ಎಂದಿರುವುದರಿಂದ ಸಂಸ್ಕøತದಲ್ಲಿಯೂ ಬರೆದಿರಬಹುದೆ ಎಂಬ ಅನುಮಾನ ಬರುವುದು ಸಹಜ. ಆದರೆ ಅದಕ್ಕೆ ಆಧಾರಗಳಿಲ್ಲ. ರನ್ನ ತನ್ನನ್ನು 'ಉಭಯ ವ್ಯಾಕರಣ ಪಂಡಿತ ಎಂದು ಹೇಳಿಕೊಂಡಿರುವುದರಿಂದ, ಇವನಿಗೆ ವ್ಯಾಕರಣದಲ್ಲಿಯೂ ಪ್ರವೇಶವಿದ್ದಿರಬೇಕೆಂದು ತೋರುವುದು. ರನ್ನನು 'ರನ್ನಂವೈಯಾಕರಣಂ ಎಂದು ಹೇಳಿರುವುದರಿಂದ ಇದು ಮತ್ತಷ್ಟು ಬಲಪಡುವುದು. ಈತ 'ರನ್ನ ನಿಘಂಟು ರಚಿಸಿರುವ ಹಿನ್ನೆಲೆಯಲ್ಲಿ ನೋಡಿದರೆ, ಇಂತಹ ಪ್ರಯೋಗವನ್ನು ಇವನು ಮಾಡಿರಲೂಬಹುದು.'ಕವಿಚಕ್ರವರ್ತಿ ರನ್ನ ರನ್ನನ ಕಾವ್ಯ ರನ್ನ ತನ್ನ ಕಾವ್ಯದಲ್ಲಿ ವ್ಯಾಸ ವಾಲ್ಮೀಕಿಯರನ್ನೂ ಕಾಳಿದಾಸ ಬಾಣವನ್ನೂ ನೆನೆದಿದ್ದಾನೆ. 'ಗದಾಯುದ್ಧ ದ ಮೇಲೆ ಪ್ರಭಾವ ಬೀರಿದ ಪಂಪ, ಭಾಸ, ಭಟ್ಟ ನಾರಾಯಣರನ್ನು ನೆನೆಯದಿರುವುದು ಆಶ್ಚರ್ಯ. ಆದರೆ ಅಜಿತಪುರಾಣದಲ್ಲಿ ಪಂಪನ ಸ್ಮರಣೆಯಿದೆ. ಪಂಪ, ಪೊನ್ನ, ರನ್ನ-ಈ ಮೂವರು ಜಿನ ಸಮಯ ದೀಪಕರ್ ಎಂದು ಹೇಳುತ್ತಾನೆ. ಕವಿಗಳಲ್ಲಿ ಪುಣ್ಯವಂತರೂ ಕೃತಾರ್ಹರೂ ಸೊಬಗರೂ ಆದವರು ಇಬ್ಬರೇ; ಕವಿತಾಗುಣಾರ್ಣವ ಮತ್ತು ಕವಿರತ್ನ ಎಂದು ಹೇಳುವಲ್ಲಿಯೂ ಪಂಪನ ಉಲ್ಲೇಖವಿದೆ. ರನ್ನ ತನ್ನ ಕಾವ್ಯಶಕ್ತಿಯನ್ನು ಕುರಿತು ಅನೇಕ ಮಾತುಗಳಲ್ಲಿ ಹೇಳಿಕೊಂಡಿದ್ದಾನೆ. ಅವುಗಳಲ್ಲಿ ವಾಗ್ದೇವಿಯ ಭಂಡಾರದ ಮುದ್ರೆಯ ನೊಡೆದಂಎಂಬುದು ಒಂದು; ತನ್ನ ಕೃತಿಯನ್ನು ಪರೀಕ್ಷಿಪಂಗೆಂಟೆರ್ದೆಯೇ ಎಂಬುದು ಮತ್ತೊಂದು. ಇದು ತನ್ನ ಕಾವ್ಯಶಕ್ತಿಯ ಬಗ್ಗೆ ಪೂರ್ಣ ವಿಶ್ವಾಸವಿರುವ ಕವಿಯ ಸವಾಲು. ರನ್ನ ಬರೆದಿರುವ ಕೃತಿಗಳು ಎಷ್ಟು ಎಂಬ ಬಗ್ಗೆ ಜಿಜ್ಞಾಸೆಯಿದೆ. ಕವಿಯೇ ಹೇಳಿರುವಂತೆ ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ಅಜಿತಪುರಾಣ, ಸಾಹಸಭೀಮವಿಜಯ, ರನ್ನಕಂದ-ಈ ಐದು ಕೃತಿಗಳನ್ನು ರಚಿಸಿರುವಂತೆ ತೋರುತ್ತದೆ. ಮೊದಲೆರಡು ಕೃತಿಗಳು ದೊರೆಯದಿರುವುದರಿಂದ, ಅನೇಕ ಊಹೆಗಳಿಗೆ ಎಡೆಮಾಡಿ ಕೊಟ್ಟಿದೆ. ಪರಶುರಾಮಚರಿತ, ಚಾವುಂಡರಾಯನನ್ನು (ಸಮರ ಪರಶುರಾಮ ಎಂಬ ಬಿರುದಾಂಕಿತ) ಕುರಿತ ಕೃತಿಯಾಗಿರಬೇಕು. ರನ್ನನಿಗೆ ಮೊದಲು ಆಶ್ರಯ ಕೊಟ್ಟವನು ಚಾವುಂಡರಾಯನಾದುದರಿಂದ, ತನ್ನ ಮೊದಲ ಕೃತಿಯನ್ನು ಅವನ ಪರವಾಗಿ ಬರೆದಿರಬೇಕು. ಇದರಲ್ಲಿ ಚಾವುಂಡರಾಯನ ಚರಿತೆಯಂತೆಯೇ ಪುರಾಣ ಪರಶುರಾಮನ ಕಥೆಯೂ ಸೇರಿರಬೇಕು. 'ಚಕ್ರೇಶ್ವರಚರಿತ ತೈಲಪ ಚಕ್ರವರ್ತಿಯನ್ನು ಕುರಿತದ್ದೆಂಬುದಕ್ಕೆ ಆಧಾರಗಳಿವೆ. ರನ್ನನಿಗೆ ತೈಲಪ ಪ್ರಮುಖ ಆಶ್ರಯದಾತ; 'ಕವಿಚಕ್ರವರ್ತಿ ಬಿರುದನ್ನು ಕೊಟ್ಟವನು. ಆದ್ದರಿಂದ 'ಚಕ್ರೇಶ್ವರ ಚರಿತ ತೈಲಪನನ್ನು ಕುರಿತದ್ದೆಂಬುದು ಸ್ಪಷ್ಟ. ಇದು ಪೂರ್ಣ ಐತಿಹಾಸಿಕ ಕಾವ್ಯವಾಗಿರುವ ಸಾಧ್ಯತೆಯೂ ಇದೆ. 'ರನ್ನಕಂದ ಒಂದು ನಿಘಂಟು. ಪದಗಳಿಗೆ ಅರ್ಥವನ್ನು ಕಂದಪದ್ಯ ರೂಪದಲ್ಲಿ ಬರೆದಿರುವುದ ಇದರ ವಿಶೇಷ. ನಿಘಂಟುಗಳಲ್ಲಿ ಇದು ಪ್ರಾಚೀನವಿರಬೇಕೆಂದು ತೋರುವುದು. ಅಸಮಗ್ರವಾಗಿ ದೊರೆತಿರುವುದರಿಂದ ಕವಿ, ಕೃತಿ ವಿಷಯವಾಗಿ ಹೆಚ್ಚಿನ ವಿಚಾರಗಳು ತಿಳಿಯುವುದಿಲ್ಲ. ದೊರೆತಿರುವ ಪದ್ಯಗಳಲ್ಲಿ ಕವಿರತ್ನ ಎಂದಿರುವುದರಿಂದ ಇದು ರನ್ನನ ಕೃತಿ ಎಂದು ಭಾವಿಸಲು ಯಾವ ಅಡ್ಡಿಯೂ ಇಲ್ಲ. ಅಜಿತತೀರ್ಥಂಕರಪುರಾಣ ಧಾರ್ಮಿಕ ಕಾವ್ಯ. ಎರಡನೆಯ ತೀರ್ಥಂಕರನ ಕಥೆ ಇದರ ವಸ್ತು. ಇದನ್ನು 'ಪುರಾಣ ತಿಲಕ ಎಂದು ಕವಿಯೇ ಹೇಳಿಕೊಂಡಿದ್ದಾನೆ. ಆದಿಪುರಾಣ ಮತ್ತು ಶಾಂತಿಪುರಾಣಗಳಿಗೆ ಸಮಾನವಾದ ಕೃತಿಯೆಂದು ಇದರ ಅಭಿಪ್ರಾಯ. 'ಆದಿಪುರಾಣ' ದ ಕಥಾವೈಭವ ಇದಕ್ಕಿಲ್ಲದಿರುವುದರಿಂದ, ಅದರ ಎತ್ತರಕ್ಕೆ ಏರಲಾರದೆಂದೇ ತೋರುತ್ತದೆ. ಆದರೆ ಪೊನ್ನನ ಶಾಂತಿಪುರಾಣಕ್ಕಿಂತ ಇದು ಉತ್ತಮ ಕೃತಿ ಎಂದು ದೃಢವಾಗಿ ಹೇಳಬಹುದು. ಇದರಲ್ಲಿ ಹನ್ನೆರಡು ಆಶ್ವಾಸಗಳಿದ್ದು, ಮೊದಲನೆಯ ಆಶ್ವಾಸ ಪೂರ್ಣವಾಗಿ ಆಶ್ರಯದಾತೆ ಅತ್ತಿಮಬ್ಬೆಯ ಚಿತ್ರಣಕ್ಕೆ ಮೀಸಲಾಗಿದೆ. ಕೊನೆಯ ಆಶ್ವಾಸದಲ್ಲಿ ಗ್ರಂಥಸಮಾಪ್ತಿ. ಕವಿಕಾವ್ಯ ಆಶ್ರದಾತರ ವಿಚಾರವಿದೆ. ಇನ್ನುಳಿದ ಹತ್ತು ಆಶ್ವಾಸಗಳಲ್ಲಿ ಏಳರಲ್ಲಿ ಅಜಿತತೀರ್ಥಂಕರನ ಕಥೆಯೂ ಆಮೇಲಿನ ಮೂರರಲ್ಲಿ ಸಾಗರ ಚಕ್ರವರ್ತಿಯ ಕಥೆಯೂ ಬಂದಿದೆ. ಭವಾವಳಿಯ ಗೊಂದಲವಿಲ್ಲದಿರುವುದು ಈ ಕೃತಿಯ ವಿಶೇಷ. ಗ್ರಂಥದ ರಸವತ್ತಾದ ಭಾಗಗಳೆಂದರೆ ಅತ್ತಿಮಬ್ಬೆ ಮತ್ತು ಸಾಗರಚಕ್ರವರ್ತಿ ಕಥೆಗಳ ಭಾಗಗಳೆ ಆಗಿವೆ. ಜೈನಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ತೊಡಕಿಲ್ಲದೆ ನಿರೂಪಿಸಿರುವುದರಿಂದ ಆ ಕುರಿತು ಒಂದು ಶಾಸ್ತ್ರೀಯ ಗ್ರಂಥವೂ ಆಗಿದೆ. ರನ್ನನ ಕೃತಿಗಳಲ್ಲಿ ಸಾಹಸಭೀಮವಿಜಯ ಅತಿ ಮುಖ್ಯವಾದುದು. ಇವನ ಲೌಕಿಕ ಕೃತಿಗಳಲ್ಲಿ ಉಪಲಬ್ಧವಿರುವಂಥದು ಇದೊಂದೇ. ಗದಾ ಸೌಪ್ತಿಕ ಪರ್ವಗಳ ಕಥೆಯೇ ಇದರ ವಸ್ತು. ಸಂದರ್ಭ ಒದಗಿದಾಗಲೆಲ್ಲಾ ಹಿಂದಿನ ಕಥೆಯನ್ನು ಸೂಚಿಸುವ ವಿಧಾನವನ್ನು ಅನುಸರಿಸುವುದರಿಂದ (ಸಿಂಹಾವಲೋಕನ) ಕಾವ್ಯಕ್ಕೆ ಸಮಗ್ರತೆ ಪ್ರಾಪ್ತವಾಗಿದೆ. ಹತ್ತು ಆಶ್ವಾಸಗಳಲ್ಲಿ ಹರಡಿಕೊಂಡಿರುವ ಈ ಕಾವ್ಯದಲ್ಲಿ ಭೀಮ-ದುರ್ಯೋಧನರ ಗದಾಯುದ್ಧವೇ ಕೇಂದ್ರಬಿಂದು. ಅದರ ಕಾರಣ ಮತ್ತು ಪರಿಣಾಮಗಳನ್ನು ಕೃತಿ ಆದ್ಯಂತ ಸೂಚಿಸುತ್ತದೆ. ಕೃತಿಗೆ 'ಸಾಹಸಭೀಮವಿಜಯ ಎಂದು ಹೆಸರಿದ್ದರೂ ಗದಾಯುದ್ಧ ಎಂದೇ ಇದರ ಖ್ಯಾತಿ. ಮಹಾಭಾರತದ ಭೀಮನೊಡನೆ ಆಶ್ರದಾತನಾದ ಸತ್ಯಾಶ್ರಯ ಚಕ್ರವರ್ತಿಯಾದ ಮೇಲೆಯೇ ರನ್ನ ಈ ಕಾವ್ಯವನ್ನು ಬರೆದಿರಬೇಕೆನಿಸುತ್ತದೆ. ಪುರಾಣಕಥೆಯಲ್ಲಿ ಸಮಕಾಲೀನ ಇತಿಹಾಸವನ್ನು ಸಮೀಕರಿಸುವುದರ ಮೂಲಕ ಕಾವ್ಯದಲ್ಲಿ ಹೊಸಧ್ವನಿಯನ್ನು ಉಂಟುಮಾಡಬೇಕೆಂಬ ರನ್ನನ ಧೋರಣೆಗೆ ಪಂಪನೇ ಆದರ್ಶ. ಕಥಾನಾಯಕ ಭೀಮನಾದರೂ ದುರ್ಯೋಧನನ ಪಾತ್ರವೇ ಹೆಚ್ಚು ಜೀವಂತವಾಗಿ ಚಿತ್ರಣಗೊಂಡಿದೆ. ಈತ ಕಾವ್ಯದಲ್ಲಿ ದುರಂತನಾಯಕನಾಗಿ ಕಂಡರಣೆಗೊಂಡಿದ್ದಾನೆ. ಪಂಪನನ್ನು ಅನುಸರಿಸಿಯೂ ಅವನಿಗೆ ಸಾಕಷ್ಟು ಋಣಿಯಾಗಿಯೂ ರನ್ನ ಮಹತ್ವದ ಕಾವ್ಯ ನಿರ್ಮಿಸಿದ ಎಂಬುದು ಮುಖ್ಯ ವಿಚಾರ. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರನ್ನ ಬಿರುದುಗಳು ಕವಿಚಕ್ರವರ್ತಿ ಕವಿರತ್ನ ಅಭಿನವ ಕವಿಚಕ್ರವರ್ತಿ ಕವಿ ರಾಜಶೇಖರ ಕವಿಜನ ಚೂಡಾರತ್ನ ಕವಿ ತಿಲಕ ಉಭಯಕವಿ ಮುಂತಾದವುಗಳು.. ರನ್ನ -ಕೃತಿಗಳು ಕೃತಿಗಳು ಅಜಿತಪುರಾಣ -೧೨ ಆಶ್ವಾಸಗಳ ಪುಟ್ಟ ಕಾವ್ಯ. ಸಾಹಸಭೀಮ ವಿಜಯಂ (ಮಹಾಕವಿ ರನ್ನನ ಗದಾಯುದ್ಧ) - ಕುರುಕ್ಷೇತ್ರದ ಕೊನೆಯ ದಿನದ ಯುದ್ಧಕ್ಕೆ ಸಂಬಂಧಿಸಿದ ಕಥೆಯಾದರೂ,ಸಿಂಹಾವಲೋಕನ ಕ್ರಮದಲ್ಲಿ ಇಡೀ ಮಹಾಭಾರತದ ಕಥೆ ನಿರೂಪಿತವಾಗಿದೆ. ಚಕ್ರೇಶ್ವರ ಚರಿತ - ಲಭ್ಯವಿಲ್ಲ. ಪರಶುರಾಮ ಚರಿತ - ಲಭ್ಯವಿಲ್ಲ. ರನ್ನಕಂದ - ೧೨ಕಂದಪದ್ಯಗಳ ನಿಘಂಟು. ನೋಡಿ ರನ್ನನ ಗದಾಯುದ್ಧಂ - ಪಠ್ಯದ ಪಯಣದ ಹೆಜ್ಜೆ ಗುರುತುಗಳು;ಪುರುಷೋತ್ತಮ ಬಿಳಿಮಲೆಪ್ರಾಧ್ಯಾಪಕ, ಕನ್ನಡ ಅಧ್ಯಯನ ಪೀಠ, ಜೆ ಎನ್ ಯು; ಕನ್ನಡ ಅಧ್ಯಯನ ಪೀಠ;ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ, ನವದೆಹಲಿ. ಉಲ್ಲೇಖ ವರ್ಗ:ಕವಿಗಳು ವರ್ಗ:ಸಾಹಿತಿಗಳು ವರ್ಗ:ಹಳಗನ್ನಡ ಕವಿಗಳು
ಕದಂಬ ರಾಜವಂಶ
https://kn.wikipedia.org/wiki/ಕದಂಬ_ರಾಜವಂಶ
'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ತುಂಬಾ ಹಳೆಯ ಕಲ್ಬರಹವಾದ ತಾಳಗುಂದ ಕಲ್ಬರಹ ವು (ಇದು ಹಲ್ಮಿಡಿ ಶಾಸನ ಕ್ಕಿಂತಲೂ ಹಳೆಯದು) ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಕದಂಬರು (ಕ್ರಿ.ಶ.೩೪೫-೫೪೦) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನೊಳಗೊಂಡಿತ್ತು. ಕದಂಬರ ಪೂರ್ವದ ರಾಜ ವಂಶಗಳಾದ ಮೌರ್ಯರು, ಶಾತವಾಹನರು ಮೂಲತಃ ಕರ್ನಾಟಕದ ಹೊರಗಿನವರಾಗಿದ್ದು, ಅವರ ರಾಜ್ಯದ ಕೇಂದ್ರಬಿಂದು ಕರ್ನಾಟಕದ ಹೊರಗಿತ್ತು. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ಪ್ರದೇಶದ ಬೆಳವಣಿಗೆಯ ಅಧ್ಯಯನದಲ್ಲಿ , ಬಹಳ ಕಾಲ ಬಾಳಿದ ಸ್ಥಳೀಯ ರಾಜಕೀಯ ಶಕ್ತಿಯಾಗಿ ಮತ್ತು ಕನ್ನಡ ಒಂದು ಪ್ರಮುಖ ಪ್ರಾದೇಶಿಕ ಭಾಷೆಯಾಗಿ ಬೆಳೆದ ಈ ಕಾಲಮಾನ, ಕರ್ನಾಟಕದ ಇತಿಹಾಸದಲ್ಲಿ,ಸರಿಸುಮಾರು ಐತಿಹಾಸಿಕ ಪ್ರಾರಂಭದ ಕಾಲವಾಗಿದೆ. ಕ್ರಿ.ಶ. ೩೪೫ರಲ್ಲಿ ಮಯೂರಶರ್ಮನಿಂದ ಸ್ಥಾಪಿಸಲಾದ ಈ ರಾಜ್ಯವು, ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಲಕ್ಷಣವನ್ನು ಆಗಾಗ ತೋರಿಸುತ್ತಿತ್ತು. ಆಗಿನ ರಾಜರುಗಳ ಬಿರುದು ಬಾವಲಿಗಳೂ ಈ ವಿಷಯಕ್ಕೆ ಪುಷ್ಟಿ ಕೊಡುತ್ತವೆ.ಇದೇ ವಂಶದ ಕಾಕುಸ್ಥವರ್ಮನು ಬಲಾಢ್ಯ ಅರಸನಾಗಿದ್ದು, ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ. ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ , ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ.ಕದಂಬರು, ಹಾಗೂ ಅವರ ಸಮಕಾಲೀನರಾಗಿದ್ದ ತಲಕಾಡು ಪಶ್ಚಿಮ ಗಂಗರು ಸಂಪೂರ್ಣ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ಸ್ಥಳೀಯರಲ್ಲಿ ಮೊದಲಿಗರು. ಇತಿಹಾಸ ಕದಂಬರ ಮೂಲದ ಬಗ್ಗೆ ಹಲವಾರು ಐತಿಹ್ಯಗಳಿವೆ. ಒಂದು ಕಥೆಯ ಪ್ರಕಾರ ಈ ವಂಶದ ಮೂಲಪುರುಷ ತ್ರಿಲೋಚನ ಕದಂಬ (ಹಲಸಿ ಮತ್ತು ದೇಗಾಂವಿಯ ದಾಖಲೆಗಳ ಪ್ರಕಾರ ಇವನ ಹೆಸರು ಜಯಂತ). ಇವನಿಗೆ ಮೂರು ಕಣ್ಣುಗಳೂ ನಾಲ್ಕು ಕೈಗಳೂ ಇದ್ದವು. ಶಿವನ ಬೆವರು ಕದಂಬ ವೃಕ್ಷದ ಕೆಳಗೆ ಬಿದ್ದಾಗ ಹುಟ್ಟಿದವನು ಇವನು (ಎಂದೇ ಕದಂಬ ಎಂಬ ಹೆಸರು). ಇನ್ನೊಂದು ಕಥೆಯ ಪ್ರಕಾರ ಮಯೂರವರ್ಮನೇ ಶಿವ ಮತ್ತು ಭೂದೇವಿಯ ಮಗನಾಗಿ ಹುಟ್ಟಿ ಕದಂಬ ವಂಶವನ್ನು ಸ್ಥಾಪಿಸಿದ. ಇವನಿಗೂ ಮೂರು ಕಣ್ಣುಗಳಿದ್ದವು. ಕನ್ನಡ ಬ್ರಾಹ್ಮಣರ ಇತಿಹಾಸ ವಿವರಿಸುವ ಗ್ರಾಮ ಪದ್ಧತಿ ಎಂಬ ಕನ್ನಡ ಪುಸ್ತಕದ ಪ್ರಕಾರ, ಮಯೂರವರ್ಮನು ಶಿವಪಾರ್ವತಿಗೆ ಸಹ್ಯಾದ್ರಿ ಪರ್ವತಶ್ರೇಣಿಯ ಕದಂಬ ವೃಕ್ಷದ ಕೆಳಗೆ ಹುಟ್ಟಿದವನಾಗಿದ್ದ. ಇದೇ ವಂಶದ ಕುಡಿಯಾದ ನಾಗರಖಾಂಡ ಕದಂಬರೆಂಬ ವಂಶದ ಒಂದು ಶಾಸನದ ಪ್ರಕಾರ, ಈ ವಂಶದ ಮೂಲ ನಂದ ಸಾಮ್ರಾಜ್ಯದವರೆಗೂ ಹೋಗುತ್ತದೆ. ಮಕ್ಕಳಿಲ್ಲದ ರಾಜಾ ನಂದನು , ಮಕ್ಕಳಿಗಾಗಿ ಕೈಲಾಸದಲ್ಲಿ ಶಿವನನ್ನು ಪ್ರಾರ್ಥಿಸಲು, ಅವನಿಗೆ ಎರಡು ಮಕ್ಕಳಾಗುವುದಾಗಿಯೂ, ಅವರಿ ಕದಂಬ ಕುಲ ಎಂಬ ಹೆಸರು ಬರುವುದಾಗಿಯೂ, ಹಾಗೂ ಅವರಿಗೆ ಶಸ್ತ್ರ ವಿದ್ಯೆಯನ್ನು ಕಲಿಸಬೇಕೆಂದೂ ನಭೋವಾಣಿಯಾಯಿತು. ಕದಂಬರ ಮೂಲದ ಬಗ್ಗೆ ಎರಡು ಸಿದ್ಧಾಂತಗಳಿವೆ. ಒಂದು ಕನ್ನಡ ಮೂಲ ಇನ್ನೊಂದು ಉತ್ತರ ಭಾರತ ಮೂಲ. ಆದರೆ ಉತ್ತರ ಭಾರತದ ಮೂಲದ ಬಗ್ಗೆ ಆ ವಂಶಪರಂಪರೆಯ ನಂತರದ ದಾಖಲೆಗಳಲ್ಲಿ ಮಾತ್ರ ಉಲ್ಲೇಖವಿದ್ದು, ಅದನ್ನು ಬರಿಯ ದಂತಕಥೆ ಎಂದು ಪರಿಗಣಿಸಲಾಗುತ್ತದೆ. ಇದರ ಮೊದಲ ಉಲ್ಲೇಖ ೧೦೫೩ ಮತ್ತು ೧೦೫೫ರ ಹರಿಕೇಸರಿ ದೇವನ ಶಾಸನಗಳಲ್ಲಿ ದೊರಕಿದ್ದು , ಮುಂದಿನ ಶಾಸನಗಳು ಇದನ್ನೇ ಮತ್ತೆ ಉಲ್ಲೇಖಿಸಿ, ಮಯೂರಶರ್ಮನು ಹಿಮಾಲಯದ ಮೇಲೆ ಅಧಿಪತ್ಯ ಸ್ಥಾಪಿಸಿದನು ಎಂದು ಬಣ್ಣಿಸುತ್ತವೆ. ಇದನ್ನು ಸಮರ್ಥಿಸುವ ಮತ್ತಾವುದೇ ದಾಖಲೆಗಳು ಕಂಡುಬರದೇ ಇದ್ದಕಾರಣ , ಈ ವಾದ ಹೆಚ್ಚು ವಿಶ್ವಾಸಾರ್ಹವಾಗಿಲ್ಲ. ಕೇವಲ ದಕ್ಷಿಣ ಭಾರತದಲ್ಲಿಯೇ ಕಂಡುಬರುವ ಕದಂಬ ವೃಕ್ಷದ ಹೆಸರು ಈ ವಂಶದ ದಕ್ಷಿಣ ಭಾರತ ಮೂಲವನ್ನು ಸೂಚಿಸುತ್ತದೆ. ಕದಂಬರ ಜಾತಿಯ ಬಗ್ಗೆಯೂ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ತಾಳಗುಂದ ಶಾಸನದ ಪ್ರಕಾರ ಕದಂಬರು ಮೂಲತಃ ಬ್ರಾಹ್ಮಣರಾದರೆ, ಅವರು ಆದಿವಾಸಿ ಜನಾಂಗಕ್ಕೆ ಸೇರಿದವರಾಗಿದ್ದರು ಎಂಬ ಅಭಿಪ್ರಾಯವೂ ಇದೆ. ಕದಂಬರು , ಇಂದಿನ ಕೇರಳ, ತಮಿಳುನಾಡುಪ್ರದೇಶದಲ್ಲಿ ರಾಜ್ಯವಾಳುತ್ತಿದ್ದ ಚೇರ ರಾಜರೊಂದಿಗೆ ಸಂಘರ್ಷದಲ್ಲಿದ್ದ, ಕಡಂಬು ಎಂಬ ಬುಡಕಟ್ಟಿಗೆ ಸೇರಿದವರು ಎಂಬ ಅಭಿಪ್ರಾಯವನ್ನೂ ಮಂಡಿಸಲಾಗಿದೆ. ಸುಬ್ರಹ್ಮಣ್ಯ ಮತ್ತು ಕದಂಬ ವೃಕ್ಷವನ್ನು ಮನೆದೇವರಾಗಿ ಪೂಜಿಸುವವರಾಗಿ ಕಡಂಬುಗಳ ಉಲ್ಲೇಖ ತಮಿಳಿನ ಸಂಗಮ ಸಾಹಿತ್ಯದಲ್ಲಿ ದೊರಕುತ್ತದ ಕೆಲ ಇತಿಹಾಸಕಾರರು ಕದಂಬರ ಬ್ರಾಹ್ಮಣ ಮೂಲ, ಅವರನ್ನು ಉತ್ತರಭಾರತದ ಬೇರನ್ನು ಸೂಚಿಸುತ್ತದೆ ಎಂದು ವಾದಿಸಿದರೂ, ಅದಕ್ಕೆ ಪ್ರತಿಯಾಗಿ ಮಧ್ಯಯುಗದ ಮೊದಮೊದಲು ದ್ರಾವಿಡರನ್ನು ಬ್ರಾಹ್ಮಣ ಪಂಗಡಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಇತ್ತು ಎಂಬ ವಾದವೂ ಇದೆ. ಅದೇನೇ ಇದ್ದರೂ, ಸ್ಥಳೀಯ ಕನ್ನಡಿಗರಾಗಿದ್ದ ಕದಂಬರು ತಮ್ಮ ರಾಜ್ಯದ ಆಡಳಿತ ಮತ್ತು ರಾಜಕೀಯದಲ್ಲಿ ಕನ್ನಡಕ್ಕೆ ಪ್ರಧಾನ ಸ್ಥಾನ ಕೊಟ್ಟರು. ಇದನ್ನು ಗಮನಿಸಿದರೆ ಕದಂಬರು ಬ್ರಾಹ್ಮಣ ಕುಲಕ್ಕೆ ಬರಮಾಡಿಕೊಂಡ ಕನ್ನಡ ಭಾಷಿಕರಾಗಿದ್ದರು ಎಂದು ಸಿದ್ಧವಾಗುತ್ತದೆ ಎಂದು ಕೆಲ ವಿದ್ವಾಂಸರ ಅಭಿಮತ. ರಾಜಾ ಕೃಷ್ಣವರ್ಮನ ಮೊದಮೊದಲ ಶಾಸನಗಳಲ್ಲಿ ಕಂಡುಬರುವ ಕದಂಬರು ನಾಗರ ಪೀಳಿಗೆಯವರು ಎಂಬ ಉಲ್ಲೇಖ ಕೂಡಾ ಕದಂಬರು ಕರ್ನಾಟಕದವರಾಗಿದ್ದರು ಎಂದು ಖಚಿತಪಡಿಸುತ್ತದೆ. ಕದಂಬರ ಇತಿಹಾಸದ ಮೂಲ ಆಕರಗಳೆಂದರೆ ಕನ್ನಡ ಮತ್ತು ಸಂಸ್ಕೃತದ ಶಾಸನಗಳು. ಮುಖ್ಯವಾಗಿ ತಾಳಗುಂದ, ಗುಂಡನೂರು, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ. ಅವರು ಮಾನವ್ಯಗೋತ್ರದವರೂ, ಹರಿತಿಪುತ್ರ ಪೀಳಿಗೆಯವರೂ ಆಗಿದ್ದು, ಬನವಾಸಿಯ ಚುಟು ಎಂಬ ಶಾತವಾಹನರ ಜಹಗೀರುದಾರರ ಸಂಬಂಧಿಕರಾಗಿದ್ದರು. ಕದಂಬರ ನಾಣ್ಯಗಳಲ್ಲಿ ಕನ್ನಡ, ನಾಗರಿ ಮತ್ತು ಗ್ರಂಥ ಲಾಂಛನ ಮತ್ತು ಭಾಷೆಗಳಿವೆ. ಕನ್ನಡದಲ್ಲಿ ದೊರಕಿರುವ ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ ೪೫೦) ಕದಂಬರು ಆಡಳಿತಾತ್ಮಕ ಭಾಷೆಯಾಗಿ ಕನ್ನಡವನ್ನು ಉಪಯೋಗಕ್ಕೆ ತಂದುದಕ್ಕೆ ಸಾಕ್ಷಿಯಾಗಿದೆ. ಅವರ ಆಳ್ವಿಕೆಯ ಮೊದಲ ಭಾಗದ ಮೂರು ಶಾಸನಗಳು ಪತ್ತೆಯಾಗಿವೆ. ಸತಾರಾ ಕಲೆಕ್ಟೋರೇಟಿನಲ್ಲಿ ಕದಂಬರ ಆಳ್ವಿಕೆಯ ಮೊದಮೊದಲಲ್ಲಿ ಟಂಕಿಸಿದ ವಿರ ಮತ್ತು ಸ್ಕಂದ ಎಂಬ ಕನ್ನಡ ಲಿಪಿಯಿರುವ ನಾಣ್ಯಗಳು ದೊರಕಿವೆ. ರಾಜಾ ಭಗೀರಥ (ಕ್ರಿ.ಶ. ೩೯೦-೪೧೫) ನ ಕಾಲದ , ಶ್ರೀ ಮತ್ತು ಭಾಗಿ ಎಂಬ ಕನ್ನಡ ಶಬ್ದಗಳಿರುವ ಬಂಗಾರದ ನಾಣ್ಯವೂ ದೊರಕಿದೆ. ಈಚೆಗೆ ಬನವಾಸಿಯಲ್ಲಿ ದೊರಕಿದ ಐದನೆಯ ಶತಮಾನದ ತಾಮ್ರದ ನಾಣ್ಯದಲ್ಲಿಯೂ ಶ್ರೀಮಾನರಾಗಿ ಎಂಬ ಕನ್ನಡ ಶಬ್ದವಿದ್ದು ಕದಂಬರ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುದನ್ನು ಇನ್ನಷ್ಟು ಪುಷ್ಟಿಗೊಳಿಸುತ್ತದೆ. ರಾಜಾ ಶಾಂತಿವರ್ಮನ (ಕ್ರಿ.ಶ. ೪೫೦) ಕಾಲದ ತಾಳಗುಂದದ ಶಾಸನ ಕದಂಬರ ಸಾಮ್ರಾಜ್ಯದ ಹುಟ್ಟಿನ ಬಗ್ಗೆ ಸಂಭವನೀಯ ವಿವರಗಳನ್ನು ನೀಡುತ್ತದೆ. ಅದರ ಪ್ರಕಾರ , ತಾಳಗುಂದ ( ಇಂದಿನ ಶಿವಮೊಗ್ಗ ಜಿಲ್ಲೆಯಲ್ಲಿದೆ)ದ ನಿವಾಸಿ ಮಯೂರವರ್ಮನು , ತನ್ನ ಅಜ್ಜ ಮತ್ತು ಗುರು , ವೀರವರ್ಮನೊಂದಿಗೆ ಕ್ರಿ.ಶ. ೩೪೫ರಲ್ಲಿ ವೈದಿಕ ವಿದ್ಯಾರ್ಜನೆಗೋಸ್ಕರ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಪವಾಗಿ , ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತಗೊಂಡು , ಪ್ರತೀಕಾರದ ಪ್ರತಿಜ್ಞೆಗೈದು, ಕಂಚಿಯನ್ನು ಬಿಟ್ಟು ವಾಪಸು ಬರುತ್ತಾನೆ. ತನ್ನ ಬ್ರಾಹ್ಮಣತ್ವಕ್ಕೆ ತಿಲಾಂಜಲಿ ನೀಡಿ ಶಸ್ತ್ರಾಭ್ಯಾಸ ಪ್ರಾರಂಭಿಸುತ್ತಾನೆ. ತನ್ನ ಬಂಟರೊಂದಿಗೆ ಸೈನ್ಯ ಕಟ್ಟಿ ಶ್ರೀಶೈಲದ ಯುದ್ಧದಲ್ಲಿ ಪಲ್ಲವರನ್ನು ಸೋಲಿಸುತ್ತಾನೆ. ಪಲ್ಲವರು ಮತ್ತು ಕೋಲಾರದ ಬೃಹತ್ ಬಾಣರು ಮುಂತಾದ ಕಿರುಆರಸರೊಂದಿಗೆ ದೀರ್ಘಕಾಲದ ಕಿರುಕುಳ ಯುದ್ಧದ ನಂತರ ಕದಂಬರು ಸ್ವತಂತ್ರ ರಾಜ್ಯವನ್ನು ಘೋಷಿಸಿದರು. ಅವರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ಅಂತಸ್ತನ್ನು ಒಪ್ಪಬೇಕಾಗಿ ಬಂತು. ಹೀಗೆ ಅಪಮಾನದ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕರ್ನಾಟಕದ ಮೊಟ್ಟ ಮೊದಲ ರಾಜ್ಯ ಸ್ಥಾಪನೆಯಾಯಿತು. ಮಯೂರವರ್ಮ ವೈದಿಕ ವಿದ್ಯಾಭ್ಯಾಸಕ್ಕಾಗಿ ದೂರದ ಕಂಚಿಗೆ ತೆರಳಿದ್ದು ಆ ಕಾಲದಲ್ಲಿ ಆ ಪ್ರದೇಶದಲ್ಲಿ ವೈದಿಕ್ ಶಿಕ್ಷಣ ಹೆಚ್ಚು ಅಭಿವೃದ್ಧಿವಯಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಗುಡ್ನಾಪುರದಲ್ಲಿ ಈಚೆಗೆ ಸಿಕ್ಕಿದ ಶಾಸನದ ಪ್ರಕಾರ ಮಯೂರವರ್ಮನ ಅಜ್ಜ ವೀರಶರ್ಮನು ಅವನಿಗೆ ಗುರುಸಮಾನನಾಗಿದ್ದು, ಅವನ ತಂದೆ ಬಂಧುಸೇನನು ಕ್ಷತ್ರಿಯ ವಂಶವನ್ನು ಸ್ವೀಕಾರ ಮಾಡಿದನು. ಮಯೂರವರ್ಮನ ಮಗ ಕಂಗವರ್ಮ ೩೬೫ರಲ್ಲಿ ಪಟ್ಟವೇರಿದ. ವಾಕಟಕ ಪೃಥ್ವೀಸೇನನಿಂದ ಯುದ್ಧದಲ್ಲಿ ಪರಾಜಿತನಾದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ. ಇವನ ಮಗ ಭಗೀರಥನು ತಂದೆ ಕಳೆದುಕೊಂಡ ಪ್ರದೇಶಗಳನ್ನು ಮರಳಿ ಪಡೆದುಕೊಂಡ ಎಂದು ಹೇಳಲಾದರೂ, ವಾಕಟಕ ಶಾಸನಗಳಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ. ಭಗೀರಥನ ಪುತ್ರ ರಘು ಪಲ್ಲವರೊಂದಿಗಿನ ಯುದ್ಧದಲ್ಲಿ ಮಡಿದನು.ಅವನ ನಂತರ ಪಟ್ಟಕ್ಕೆ ಬಂದವನೇ, ಕದಂಬ ವಂಶದಲ್ಲೇ ಅತಿ ಬಲಿಷ್ಟ ಮತ್ತು ಉಗ್ರ ರಾಜ ಎಂದು ಹೆಸರಾದ, ಕಾಕುಸ್ಥವರ್ಮ . ಇವನ ಒಬ್ಬಳು ಮಗಳನ್ನು ಗುಪ್ತ ಸಾಮ್ರಾಜ್ಯದ ಸ್ಕಂದಗುಪ್ತನಿಗೆ ಕೊಟ್ಟು ಮದುವೆಮಾಡಲಾಗಿತ್ತು. ಇನ್ನೊಬ್ಬ ಮಗಳು ವಾಕಟಕ ರಾಜ ನರೇಂದ್ರಸೇನನನ್ನು ವಿವಾಹವಾಗಿದ್ದಳು. ತಾಳಗುಂದ ಶಾಸನದ ಪ್ರಕಾರ ಕಾಕುಸ್ಥವರ್ಮನು ಇದೇ ರೀತಿಯ ವಿವಾಹಸಂಬಂಧಗಳನ್ನು ಭಟಾರಿ, ದಕ್ಷಿಣ ಕನ್ನಡದ ಅಳೂಪರು ಮತ್ತು ಗಂಗವಾಡಿಯ ಪಶ್ಚಿಮ ಗಂಗ ಮನೆತನಗಳೊಂದಿಗೂ ಇಟ್ಟುಕೊಂಡಿದ್ದನು. ಮಹಾಕವಿ ಕಾಳಿದಾಸನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು. ಕಾಕುಸ್ಥವರ್ಮನ ನಂತರ ಬಂದವರಲ್ಲಿ, ೪೮೫ರಲ್ಲಿ ಪಟ್ಟವೇರಿದ ರವಿವರ್ಮ ಒಬ್ಬನೇ ಸಾಮ್ರಾಜ್ಯವನ್ನು ವಿಸ್ತರಿಸುವುದರಲ್ಲಿ ಯಶಸ್ವಿಯಾದ. ಅವನ ರಾಜ್ಯಭಾರದ ಕಾಲದಲ್ಲಿ , ಪಲ್ಲವರು ಮತ್ತು ಗಂಗರೊಂದಿಗೆ ಯುದ್ಧಗಳೂ , ಅಂತಃಕಲಹಗಳೂ ಗಮನಾರ್ಹವಾದವುಗಳು. ನರ್ಮದಾ ನದಿಯ ದಂಡೆಯವರೆಗೂ ಹಬ್ಬಿದ್ದ ವಾಕಟಕರನ್ನು ಸೋಲಿಸಿದ್ದು ಇವನ ಹೆಗ್ಗಳಿಕೆ. ಕದಂಬ ರಾಜ್ಯ ಇಂದಿನ ಬಹುತೇಕ ಕರ್ನಾಟಕ, ಗೋವಾ ಮತ್ತು ಇಂದಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳನ್ನು ಒಳಗೊಂಡಿತ್ತು. ಅಂತಃಕಲಹದಿಂದಾಗಿ , ಇವನ ನಂತರ ಈ ರಾಜವಂಶ ಅವನತಿಯ ಹಾದಿ ಹಿಡಿಯಿತು. ಕದಂಬರ ವಿಷ್ಣುವರ್ಮನ ಬೀರೂರಿನ ಫಲಕದಲ್ಲಿ ಶಾಂತಿವರ್ಮನನ್ನು "ಸಮಸ್ತ ಕರ್ನಾಟಕದ ಒಡೆಯ" ಎಂದು ಸಂಬೋಧಿಸಲಾಗಿದೆ. ಮುಖ್ಯ ಧಾರೆಯಿಂದ ೪೫೫ರಲ್ಲಿ ಬೇರೆಯಾದ ತೃಪಾವರ್ತ ಎಂಬ ಶಾಖೆಯು ಬೆಳಗಾವಿಯ ಹತ್ತಿರದ ಮುರೋಡ್ ಎಂಬಲ್ಲಿ ಸ್ವಲ್ಪಕಾಲ ಆಳಿ ನಂತರ ಹರಿವರ್ಮನ ಕಾಲದಲ್ಲಿ ಬನವಾಸಿಯ ಪ್ರಧಾನ ರಾಜ್ಯದೊಂದಿಗೆ ವಿಲೀನವಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯದ ಪತನವಾಯಿತು.ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರ , ಅದರನಂತರ ರಾಷ್ಟ್ರಕೂಟರ ಮತ್ತು ಕಲ್ಯಾಣಿ ಚಾಲುಕ್ಯರ ಸಾಮಾಂತರಾಗಿ ಈ ವಂಶ ಮುಂದುವರಿಯಿತು. ಮಯೂರಶರ್ಮನ ಉತ್ತರಾಧಿಕಾರಿಗಳು ತಮ್ಮ ಕ್ಷತ್ರಿಯ ವಂಶ ಸೂಚಕವಾಹಗಿ "ವರ್ಮ' ಎಂಬ ಹೆಸರನ್ನು ಸ್ವೀಕರಿಸಿದರು. ಆಡಳಿತ ಶಾತವಾಹನರಾಜರುಗಳಂತೆ ಕದಂಬರೂ ತಮ್ಮನ್ನು "ಧರ್ಮಮಹಾರಾಜ" ಎಂದು ಕರೆದುಕೊಳ್ಳುತ್ತಿದ್ದರು. ಶಾಸನಗಳ ಅಧ್ಯಯನದಿಂದ ಆ ಕಾಲದ ಅನೇಕ ಹುದ್ದೆಗಳ ಪತ್ತೆ ಹಚ್ಚಲಾಗಿದೆ. ಪ್ರಧಾನ (ಪ್ರಧಾನ ಮಂತ್ರಿ), ಮನೆವೆರ್ಗಡೆ (ಪರಿಚಾರಕ) , ತಂತ್ರಪಾಲ ಅಥವಾ ಸಭಾಕಾರ್ಯ ಸಚಿವ (ಕಾರ್ಯದರ್ಶಿ), ವಿದ್ಯಾವೃದ್ಧ (ವಿದ್ವಾಂಸ ವೃದ್ಧರು), ದೇಶಾಮಾತ್ಯ (ವೈದ್ಯ), ರಹಸ್ಯಾಧ್ಯಕ್ಷ (ಖಾಸಗೀ ಕಾರ್ಯದರ್ಶಿ ), ಸರ್ವಕಾರ್ಯಕರ್ತ (ಮುಖ್ಯ ಕಾರ್ಯದರ್ಶಿ), ಧರ್ಮಾಧ್ಯಕ್ಷ ( ಮುಖ್ಯ ನ್ಯಾಯಾಧೀಶ),ಭೋಜಕ ಮತ್ತು ಆಯುಕ್ತ ( ಇತರ ಅಧಿಕಾರಿಗಳು)ಇತ್ಯಾದಿ. ಸೇನೆಯಲ್ಲಿ ಜಗದಾಲ, ದಂಡನಾಯಕ ಮತ್ತು ಸೇನಾಪತಿ ಎಂಬ ಹುದ್ದೆಗಳಿದ್ದವು. ರಾಜವಂಶದ ಪಟ್ಟದ ರಾಜಕುಮಾರ ರಾಜನಿಗೆ ಆಡಳಿತದಲ್ಲಿ ನೆರವು ನೀಡುತ್ತಿದ್ದ. ಇತರ ರಾಜಕುಮಾರರುಗಳು ವಿವಿಧ ಪ್ರಾಂತಗಳ ರಾಜ್ಯಪಾಲರುಗಳಾಗಿ ನೇಮಕವಾಗುತ್ತ್ಫಿದ್ದರು. ಕಾಕುಸ್ಥವರ್ಮನು ತನ್ನ ಮಗ ಕೃಷ್ಣನನ್ನು ತ್ರಿಪರ್ವತಾಹ ಎಂಬ ಪ್ರದೇಶದ ರಾಜ್ಯಪಾಲನನ್ನಾಗಿ ನೇಮಿಸಿದ್ದನು. ಮುಂದೆ ಇದು ರಾಜ ವಂಶ ಬೇರೆ ಬೇರೆ ಕವಲುಗಳಾಗಿ ಒಡೆಯಲು ಕಾರಣೀಭೂತವಾಯಿತು. ರಾಜ್ಯವನ್ನು ಮಂಡಲ ಮತ್ತು ದೇಶ ಎಂದು ವಿಭಾಜಿಸಲಾಗಿತ್ತು. ಅನೇಕ ವಿಷಯ( ಜಿಲ್ಲೆ) ಗಳಿಂದ ಒಂದು ಮಂಡಲವಾಗುತ್ತಿತ್ತು. ಒಟ್ಟು ಒಂಭತ್ತು ವಿಷಯಗಳನ್ನು ಗುರುತಿಸಲಾಗಿದೆ. ಮಹಾಗ್ರಾಮ ( ತಾಲೂಕು) ಮತ್ತು ದಶಗ್ರಾಮ ( ಹೋಬಳಿ) ಇತರ ಉಪ ವಿಭಾಗಗಳಾಗಿದ್ದವು. ಕೃಷಿ ಉತ್ಪನ್ನದ ಆರರಲ್ಲೊಂದು ಭಾಗವನ್ನು ಸುಂಕವೆಂದು ವಸೂಲಿಮಾಡಲಾಗುತ್ತಿತ್ತು . ಸುಂಕವನ್ನು ಪೆರ್ಜುಂಕ ( ಹೊರೆಯ ಮೇಲಿನ ಸುಂಕ) , ವಡ್ಡರಾವುಲ ( ರಾಜಮನೆತನದ ಸುರಕ್ಷೆಗಾಗಿ ಸಾಮಾಜಿಕ ಸುಂಕ), ಬಿಲ್ಕೋಡ (ಮಾರಾಟ ತೆರಿಗೆ), ಕಿರುಕುಳ ( ಭೂ ಕಂದಾಯ) , ಪಣ್ಣಾಯ ( ಅಡಿಕೆಯ ಮೇಲಿನ ಸುಂಕ) , ವ್ಯಾಪಾರಿಗಳೇ ಮತ್ತಿತರರ ಮೇಲೆ ವೃತ್ತಿ ಸುಂಕ ಇತ್ಯಾದಿಗಳ ರೂಪದಲ್ಲಿ ವಸೂಲು ಮಾಡಲಾಗುತ್ತಿತ್ತು. ಸಂಸ್ಕೃತಿ ಧರ್ಮ ಕದಂಬರು ವೈದಿಕ ಹಿಂದೂ ಧರ್ಮದ ಅನುಯಾಯಿಗಳಾಗಿದ್ದರು. ಮಯೂರಶರ್ಮ , ಬಹುಶಃ, ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ಅವರ ಮುಂದಿನವರು , ತಮ್ಮ ಕ್ಷತ್ರಿಯ ಕುಲದ ಲಾಂಛನವಾಗಿ "ವರ್ಮ" ಎಂಬ ಹೆಸರನ್ನು ಧರಿಸಿದರು. ಕೃಷ್ಣವರ್ಮ ಮೊದಲಾದ ಕೆಲ ಕದಂಬ ರಾಜರು ಅಶ್ವಮೇಧ ಯಾಗವನ್ನು ಮಾಡಿದ್ದರು. ಅವರ ತಾಳಗುಂದದ ಶಾಸನವು ಶಿವನ ಪ್ರಾರ್ಥನೆಯೊಂದಿಗೆ ಮೊದಲಾದರೆ, ಹಲ್ಮಿಡಿ ಮತ್ತು ಬನವಾಸಿಗಳಲ್ಲಿ ವಿಷ್ಣುವಿನ ಹೆಸರು ಕಾಣಬರುತ್ತದೆ. ಅವರ ಕುಲದೇವರೆನ್ನಲಾದ ಮಧುಕೇಶ್ವರ ದೇವಾಲಯವನ್ನು ಕಟ್ಟಿದರು. ಕುಡಲೂರು, ಸಿರ್ಸಿ ಇತ್ಯಾದಿಗಳಲ್ಲಿ ಸಿಕ್ಕಿರುವ ಅನೇಕ ದಾಖಲೆಗಳು ವಿದ್ವಜ್ಜನರಿಗೆ ಉಂಬಳಿ ಬಿಟ್ಟ ವಿಷಯವನ್ನು ಹೇಳುತ್ತವೆ. ಬೌದ್ಧ ವಿಹಾರಗಳಿಗೂ ಉಂಬಳಿ ಬಿಡಲಾಗುತ್ತಿತ್ತು. ಜೈನ ಧರ್ಮವನ್ನೂ ಪ್ರೋತ್ಸಾಹಿಸಿದ ಕದಂಬರು ಬನವಾಸಿ, ಬೆಳಗಾವಿ, ಮಂಗಳೂರು ಮತ್ತು ಗೋವಾ ಸುತ್ತಮುತ್ತ ಅನೇಕ ಜೈನ ದೇವಾಲಯಗಳನ್ನು ಕಟ್ಟಿಸಿದರು. ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೆ ಹೆಸರಾಗಿದ್ದ ಕದಂಬ ರಾಜ ಮತ್ತು ರಾಣಿಯರು ದೇವಾಲಯ ಮತ್ತು ವಿದ್ಯಾಸಂಸ್ಥೆಗಳಿಗೆ ಧಾರಾಳ ಉಂಬಳಿಯನ್ನು ಬಿಟ್ಟದ್ದಲ್ಲದೆ, ಧನಸಹಾಯವನ್ನೂ ಮಾಡಿದರು. ಆದಿಕವಿ ಪಂಪನು ತನ್ನ ಕೃತಿಗಳಲ್ಲಿ ಕದಂಬರನ್ನು ಹಾಡಿ ಹೊಗಳಿದ್ದಾರೆ. ಅವರ ನುಡಿಗಳಾದ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಮತ್ತು “ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೋಳ್ ಬನವಾಸಿ ದೇಶದೊಳ್" ಇಂದಿಗೂ ಕನ್ನಡಿಗರ ಮನೆಮಾತಾಗಿದೆ. ಶಿಲ್ಪಕಲೆ ಕದಂಬರು ಕರ್ನಾಟಕದ ಶಿಲ್ಪಕಲಾ ಪರಂಪರೆಗೆ ಗಮನಾರ್ಹ ಕೊಡಿಗೆ ನೀಡಿದರು. ಚಾಲುಕ್ಯ ಮತ್ತು ಪಲ್ಲವ ಶೈಲಿಯನ್ನು ಕೆಲವು ವಿಷಯಗಳಲ್ಲಿ ಹೋಲುವ ಕದಂಬ ಶಿಲ್ಪಕಲೆ ತನ್ನದೇ ಛಾಪನ್ನು ಹೊಂದಿದೆ. ಕದಂಬರು ಶಾತವಾಹನರ ಶಿಲ್ಪಕಲಾ ಶೈಲಿಯನ್ನೂ ಅಳವಡಿಸಿಕೊಂಡರು. ಕದಂಬರ ಶಿಲ್ಪಕಲೆಯ ಮೂಲ ಲಕ್ಷಣ ಕದಂಬ ಶಿಖರ ಎಂದೇ ಕರೆಯಲಾಗುವ ಶಿಖರ. ಮೆಟ್ಟಿಲು ಮಟ್ಟಿಲಾಗಿ ಪಿರಮಿಡಿನಂತೆ ಮೇಲೇರಿ ಕಳಶ (ಅಥವಾ ಸ್ತೂಪಿಕಾ) ದಲ್ಲಿ ಕೊನೆಗೊಳ್ಳುವ ಈ ಶಿಖರದಲ್ಲಿ ಮತ್ತೆ ಯಾವುದೇ ಅಲಂಕಾರಗಳಿಲ್ಲ. ಅನೇಕ ಶತಮಾನಗಳ ನಂತರ ಇದೇ ಶೈಲಿಯ ಶಿಖರಗಳ ಉಪಯೋಗ ದೊಡ್ಡಗದ್ದವಳ್ಳಿಯ ಹೊಯ್ಸಳ ದೇವಾಲಯಮತ್ತು ಹಂಪೆಯ ಮಹಾಕೂಟ ದೇವಾಲಯದಲ್ಲಿ ಕಂಡುಬರುತ್ತದೆ. ಕೆಲ ದೇವಾಲಯಗಳಲ್ಲಿ ಕಲ್ಲಿ ಜಾಲಂಧ್ರಗಳೂ ಕಾಣಸಿಗುತ್ತವೆ. ಮುಂದೆ ಚಾಲುಕ್ಯ- ಹೊಯ್ಸಳ ಶಿಲ್ಪಕಲೆ ಎಂದು ಹೆಸರಾದ ಶೈಲಿಗೆ ಅಡಿಪಾಯ ಕದಂಬರ ಕಾಲದಲ್ಲಿ ಹಾಕಲಾಯಿತು ಎಂದು ನಂಬಲಾಗಿದೆ. ಕದಂಬರ ಕಾಲದ, ಹತ್ತನೆಯ ಶತಮಾನದ , ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯವನ್ನು ಇಂದಿಗೂ ಬನವಾಸಿಯಲ್ಲಿ ನೋಡಬಹುದು. ಇಲ್ಲಿನ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಕದಂಬರ ನೆನಪಿನಲ್ಲಿ ಕದಂಬರ ನೆನಪಿನಲ್ಲಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಬನವಾಸಿಯಲ್ಲಿ ಕದಂಬೋತ್ಸವವೆಂಬ ಸಾಂಸ್ಕೃತಿಕ ಉತ್ಸವವನ್ನು ನಡೆಸುತ್ತದೆ. ಮಯೂರಶರ್ಮನ ಕಥೆಯನ್ನು ಆಧರಿಸಿದ "ಮಯೂರ" ಕನ್ನಡ ಚಲನಚಿತ್ರ ಎಪ್ಪತ್ತರ ದಶಕದಲ್ಲಿ ತೆರೆಕಂಡಿತ್ತು. ಇದರಲ್ಲಿ ಡಾ. ರಾಜಕುಮಾರ್ ರವರು ನಾಯಕ ಪಾತ್ರ ವಹಿಸಿದ್ದರು. ೨೦೦೫ರಲ್ಲಿ ಕಾರವಾರದಲ್ಲಿ ಉದ್ಘಾಟಿತವಾದ , ಭಾರತದ ಅತ್ಯಾಧುನಿಕ ಮಿಲಿಟರಿ ನೌಕಾನೆಲೆಗೆ INS ಕದಂಬ ಎಂದು ಹೆಸರಿಡಲಾಗಿದೆ. ಹೆಚ್ಚಿಗೆ ಓದಲು ಕರ್ನಾಟಕದ ಇತಿಹಾಸ ಕದಂಬೋತ್ಸವ ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಕದಂಬರು-ಭಾರತದ ಇತಿಹಾಸ ಕದಂಬ ಚಕ್ರವರ್ತಿ – ಮಯೂರ ಕನ್ನಡದ ಮೊಟ್ಟ ಮೊದಲ ರಾಜ ವಂಶ ಲಿಕದಂಬಳಿ ಕದಂಬ ಅರಸು ಶಿಲಾಶಾಸನಕ್ಕೆ ರಕ್ಷಣೆ ಸೌಭಾಗ್ಯ! ಮಧುಕೇಶ್ವರ ದೇವಸ್ಥಾನ, ಬನವಾಸಿ ವರ್ಗ:ಕರ್ನಾಟಕದ ಇತಿಹಾಸ ವರ್ಗ:ಇತಿಹಾಸ ವರ್ಗ:ಕರ್ನಾಟಕದ ರಾಜಮನೆತನಗಳು
ಸೇವುಣ
https://kn.wikipedia.org/wiki/ಸೇವುಣ
ದೇವಗಿರಿಯ ಯಾದವರು ಎಂದೇ ಹೆಸರಾಗಿರುವ ಸೇವುಣರು ಉತ್ತರ ಕರ್ನಾಟಕ, ಮಹಾರಾಷ್ಟ್ರಗಳನ್ನೊಳಗೊಂಡ ಪ್ರದೇಶವನ್ನು ಆಳಿದ ಕನ್ನಡ ರಾಜಮನೆತನ. ರಾಷ್ಟ್ರಕೂಟರ ಸರದಾರರಾಗಿಯೂ, ಮುಂದೆ ಹೊಯ್ಸಳರಂತೆಯೆ ಕಲ್ಯಾಣದ ಚಾಲುಕ್ಯ ದೊರೆಗಳ ಸಾಮಂತರಾಗಿಯೂ ಇದ್ದರು. ಚಾಲುಕ್ಯ ಸಾಮ್ರಾಜ್ಯ ಅವನತಿಯ ಹಾದಿ ಹಿಡಿದಂತೆ ಪ್ರಾಬಲ್ಯಕ್ಕೆ ಏರಿದರು. ಐದನೆಯ ಭಿಲ್ಲಮ ಕಲ್ಯಾಣವನ್ನು ವಶಪಡಿಸಿಕೊಂಡು ತಾನು ಸ್ವತಂತ್ರನೆಂದು ಘೋಷಿಸಿಕೊಂಡ. ದೇವಗಿರಿಯ ಅಭೇದ್ಯ ಕೋಟೆಯನ್ನು ನಿರ್ಮಿಸಿ ರಾಜಧಾನಿಯನ್ನು ಅಲ್ಲಿಗೆ ಸ್ಥಳಾಂತರಿಸಿದ. ಸೇಉಣರು ಹೊಯ್ಸಳರೊಂದಿಗೆ ಅನೇಕ ಯುದ್ದಗಳನ್ನು ನಡೆಸೆದರು. ಕೃಷ್ಣಾ-ತುಂಗಭದ್ರಾ ನದಿ ಮಧ್ಯಪ್ರದೇಶ ಒಬ್ಬರಿಂದೊಬ್ಬರಿಗೆ ಕೈ ಬದಲಾಯಿಸುತ್ತಿತ್ತು. ನಂತರ ಒಂದು ಮಾದರಿಯ ಒಪ್ಪಂದ ಏರ್ಪಟ್ಟು, ಸೇವುಣರು ತುಂಗಭದ್ರೆಯ ಉತ್ತರಕ್ಕೂ, ಹೊಯ್ಸಳರು ದಕ್ಷಿಣಕ್ಕೂ ತಮ್ಮ ಪ್ರಭಾವ ಪ್ರಾಬಲ್ಯಗಳನ್ನು ವಿಸ್ತರಿಸಿದರು. ಒಂದು ಕಾಲದಲ್ಲಿ ಸೇವುಣ ರಾಜ್ಯ ನರ್ಮದೆಯವರೆಗೆ ಹಬ್ಬಿತ್ತು. ಮುಂದೆ ದೆಹಲಿಯ ಸುಲ್ತಾನ ಅಲ್ಲಾಉದ್ದೀನ್‌ ಖಿಲ್ಜಿ ದೇವಗಿರಿಯನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡಾಗ ಸೇವುಣರ ರಾಜ್ಯ ಕೊನೆಗಂಡಿತು. ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿಯ ತವರು ಮನೆತನ ದೇವಗಿರಿಯ ರಾಜವಂಶಕ್ಕೆ ಸೇರಿದ್ದು. ಸಾಂಸ್ಕೃತಿಕವಾಗಿ ಸೇವುಣರು ಕಲ್ಯಾಣದ ಚಾಲುಕ್ಯರ ಸಂಪ್ರದಾಯವನ್ನು ಮುಂದುವರೆಸಿರದರು. ಗಣಿತಜ್ಞ ಭಾಸ್ಕರಾಚಾರ್ಯ, ಭಾರತೀಯ ಸಂಗೀತಶಾಸ್ತ್ರದ ಪ್ರಮಾಣ ಗ್ರಂಥ "ಸಂಗೀತ ರತ್ನಾಕರ"ವನ್ನು ರಚಿಸಿದ ಶಾರ್ಙ್ಗದೇವ ಸೇವುಣರ ಕಾಲದವರು. ರಾಜವಂಶದ ಹೆಸರು ಸೇವುಣ ರಾಜರನ್ನು “ದೇವಗಿರಿಯ ಯಾದವರು” ಎಂದೂ ಕರೆಯುವುದುಂಟು. ಮಹಾರಾಷ್ಟ್ರದ ವಿಶಾಲ ಭಾಗದಲ್ಲಿ ಆಳಿದ್ದರಿಂದ ಅವರನ್ನು “ಮರಾಠರು” ಎಂದೂ ಕರೆಯಲಾಗುತ್ತದೆ. ಆದರೆ ಈ ರಾಜವಂಶದ ಸರಿಯಾದ ಹೆಸರು ಸೇಉಣ ಅಥವಾ ಸೇವುಣ[2]. ಇವರದೇ ಶಾಸನಗಳಲ್ಲಾಗಲೀ ಅಥವಾ ಅವರ ಸಮಕಾಲೀನ ರಾಜ್ಯಗಳಾಗಿದ್ದ ಹೊಯ್ಸಳ, ಕಾಕತೀಯ ಅಥವಾ ಪಶ್ಚಿಮ ಚಾಲುಕ್ಯರ ಶಾಸನಗಳಲ್ಲಾಗಲೀ ಈ ರಾಜವಂಶವನ್ನು ಸೇಉಣರೆಂದೇ ಸಂಬೋಧಿಸಲಾಗಿದೆ.[3]. ಈ ಹೆಸರಿನ ಮೂಲ ಬಹುಶಃ ಈ ವಂಶದ ಎರಡನೆಯ ರಾಜ ಸೇಉಣಚಂದ್ರನಿಂದ ಬಂದಿರಬಹುದೆಂದು ಊಹೆಯಿದೆ ಮೂಲ ಈ ವಂಶದ ಮೂಲದ ಬಗ್ಯೆ ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿದ್ದರೂ ಸೇಉಣರು ಕನ್ನಡಿಗರೆಂಬುದಕ್ಕೆ ಬಲವಾದ ಆಧಾರಗಳಿವೆ.. ಕರ್ನಾಟಕದವರು ಡಾ.ಸಿ.ಎಮ್.ಕುಲಕರ್ಣಿ[14], ಕಾಲಿನ್ ಮಸೀಕಾ, ಡಾ. ಶ್ರೀನಿವಾಸ ರಿತ್ತಿ ಮೊದಲಾದ ಸಂಶೋಧಕರು, ಸೇವುಣರು ಮೂಲತಃ ಕನ್ನಡಿಗರಾಗಿದ್ದರು ಎಂದು ಪ್ರತಿಪಾದಿಸುತ್ತಾರೆ. ಭಾಷಾಶಾಸ್ತ್ರಜ್ಞ ಕಾಲಿನ್ ಮಸೀಕಾರ ಪ್ರಕಾರ ಸೇವುಣರು ಕನ್ನಡ ಭಾಷಿಕರಾಗಿದ್ದು , ತಮ್ಮ ಶಾಸನಗಳಲ್ಲಿ ಸಂಸ್ಕೃತದೊಂದಿಗೆ ಕನ್ನಡವನ್ನೂ ಬಳಸಿದ್ದಾರೆ. ಆದರೆ, ಮುಂದೆ ಮುಸ್ಲಿಮರ ಆಕ್ರಮಣದ ಕಾಲದಲ್ಲಿ , ಅವರು ಮರಾಠಿ ಭಾಷೆಗೆ ಪ್ರೋತ್ಸಾಹ ನೀಡಲು ಪ್ರಾರಂಭಿಸಿದ್ದು , ಅವರ ಶಾಸಗಳಲ್ಲಿ ಮರಾಠಿ ಸಾಲುಗಳು ಮತ್ತು ನುಡಿಗಟ್ಟುಗಳು ಕಾಣಬರಲು ತೊಡಗುತ್ತವೆ.[15]. ಡಾ.ಶ್ರೀನಿವಾಸ ರಿತ್ತಿಯವರ ಪ್ರಕಾರ , ಸೇವುಣರು ಮೂಲತಃ ಕನ್ನಡಿಗರಾಗಿದ್ದು , ದಖ್ಖನಿನಲ್ಲಿ ಆಗಿನ ರಾಜಕೀಯ ಪರಿಸ್ಥಿತಿಯಿಂದ ಅವರು ಉತ್ತರಕ್ಕೆ ವಲಸೆ ಹೋಗಿರಬಹುದು. [16] ಅನೇಕ ಸೇವುಣ ರಾಜರುಗಳ ಹೆಸರು ಅಥವಾ ಬಿರುದು ಕನ್ನಡ ಮೂಲದವಾಗಿವೆ. ಉದಾಹರಣೆಗೆ ಧಡಿಯಪ್ಪ, ಭಿಲ್ಲಮ, ರಾಜುಗಿ, ವಾಸುಗಿ. ಕಲಿಯ ಬಲ್ಲಾಳ ಇತ್ಯಾದಿ. ಇನ್ನೂ ಕೆಲ ರಾಜರ ಸಿಂಘಣ , ಮಲ್ಲುಗಿ ಎಂಬ ಹೆಸರುಗಳು ದಕ್ಷಿಣ ಕಲಚೂರ್ಯರ ಹೆಸರುಗಳನ್ನು ಹೋಲುತ್ತವೆ. ದಾಖಲೆಗಳ ಪ್ರಕಾರ ಸೇವೂಣರ ಮೊದಲ ರಾಜರುಗಳಲ್ಲಿ ಒಬ್ಬನಾದ ಎರಡನೆಯ ಸೇವುಣಚಂದ್ರನು , ಸೆಲ್ಲವಿದೇಗ ಎಂಬ ಕನ್ನಡ ಬಿರುದಾಂಕಿತನಾಗಿದ್ದನು. ತಮ್ಮ ರಾಜ್ಯಭಾರದ ಅವಧಿಯುದ್ದಕ್ಕೂ , ಸೇವುಣರು, ಕನ್ನಡ ರಾಜವಂಶಗಳೊಂದಿಗೆ ನಿಕಟ ಲಗ್ನಸಂಬಂಧವನ್ನು ಇಟ್ಟುಕೊಂಡಿರುವುದು ಕಂಡುಬರುತ್ತದೆ. [3]. ಎರಡನೆಯ ಭಿಲ್ಲಮನು ರಾಷ್ಟ್ರಕೂಟ ವಂಶದ ಲಚ್ಚಿಯವ್ವೆಯನ್ನು ಮದುವೆಯಾಗಿದ್ದನು. ರಾಷ್ಟ್ರಕೂಟರ ಸೇನಾಧಿಕಾರಿ ದೋರಪ್ಪನ ಮಗಳು ವಡ್ಡಿಯವ್ವೆಯನ್ನು ವಡ್ಡಿಗನು ವರಿಸಿದ್ದನು. ವೇಸುಗಿ ಮತ್ತು ಮೂರನೆಯ ಭಿಲ್ಲಮನ ಹೆಂಡತಿಯರು ಚಾಲುಕ್ಯ ವಂಶದ ರಾಜಕುಮಾರಿಯರಾಗಿದ್ದರು. ಸೇವುಣರ ರಕ್ತಸಂಬಂಧಿಗಳಾಗಿದ್ದ ಅವರ ಅನೇಕ ದಂಡನಾಯಕರು ಕನ್ನಡ ಭಾಷಿಕರಾಗಿದ್ದರು. ಸೇವುಣರ ಮಾಸವಾಡಿಯು ಇಂದಿನ ಧಾರವಾಡ ಪ್ರದೇಶದಲ್ಲಿತ್ತು. ಡಾ. ಎ.ವಿ. ನರಸಿಂಹಮೂರ್ತಿಯವರ ಪ್ರಕಾರ, ಮಾನ್ಯಖೇಟ (ಇಂದಿನ ಮಾಳಖೇಡ) ದಿಂದ ಆಳುತ್ತಿದ್ದ ರಾಷ್ಟ್ರಕೂಟರ ಆಳ್ವಿಕೆಯ ಉತ್ತರಾರ್ಧದಲ್ಲಿ , ಸೇವುಣ ದಂಡನಾಯಕರುಗಳನ್ನು ನಾಸಿಕ ಪ್ರದೇಶದಲ್ಲಿ ಆಡಳಿತ ನಡೆಸಲು ಕರ್ನಾಟಕದಿಂದ ಕಳುಹಿಸಲಾಯಿತು. [4]. ಅಷ್ಟೇ ಅಲ್ಲ, ಸೇವುಣರ ರಾಜ್ಯದ ಐನೂರಕ್ಕೂ ಹೆಚ್ಚು ಶಿಲಾಶಾಸನಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಎರಡನೆಯ ಭಿಲ್ಲಮನ ಕಾಲದ ಶಾಸನ ಅತ್ಯಂತ ಹಳೆಯದಾಗಿದ್ದು, ಈ ಬಹುತೇಕ ಶಾಸನ ಭಾಷೆ ಕನ್ನಡವಾಗಿದೆ. ಇನ್ನೂ ಅನೇಕ ಶಾಸನಗಳ ಭಾಷೆ ದೇವನಾಗರಿ ಲಿಪಿಯಲ್ಲಿ ಬರೆದ ಕನ್ನಡವಾಗಿದೆ[3]. ಸೇವುಣರ ಮೊದಮೊದಲ ನಾಣ್ಯಗಳಲ್ಲಿ ಕನ್ನಡ ಲಾಂಛನಗಳಿವೆ. ಇವೆಲ್ಲವುಗಳ ಆಧಾರದ ಮೇಲೆ, ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರು, ಸೇವುಣರ ರಾಜ್ಯದಲ್ಲಿ , ಮರಾಠಿ ಮತ್ತು ಸಂಸ್ಕೃತದೊಂದಿಗೆ ಕನ್ನಡವೂ ರಾಜಭಾಷೆಯಾಗಿರುವುದು ಖಂಡಿತ ಎಂಬ ನಿರ್ಧಾರಕ್ಕೆ ಬರುತ್ತಾರೆ. [17]. ಉತ್ತರ ಭಾರತ ಸ್ವತಃ ಸೇವುಣರು ತಮ್ಮನ್ನು ಉತ್ತರ ಭಾರತದ ಚಾಂದ್ರವಂಶಿ ಯಾದವ ಕುಲದವರು ಎಂದು ಕರೆದುಕೊಂಡಿದ್ದಾರೆ[5][6]. ಹೇಮಾದ್ರಿ ಬರೆದ ಸಂಸ್ಕೃತ ಗ್ರಂಥ ವ್ರತಖಂಡದ 21ನೆಯ ಪದ್ಯದಲ್ಲಿ , ಸೇವುಣರು ಮೂಲತಃ ಮಥುರೆಯವರಾಗಿದ್ದು ನಂತರ ದ್ವಾರಕೆಗೆ ಬಂದರು ಎಂದು ಉಲ್ಲೇಖಿಸಲಾಗಿದೆ. ಹೇಮಾದ್ರಿಯು ಅವರನ್ನು ಕೃಷ್ಣಕುಲೋತ್ಪನ್ನ , ಅರ್ಥಾತ್ ಕೃಷ್ಣನ ವಂಶಸ್ಥರು ಎಂದು ಕರೆದಿದ್ದಾನೆ[7]. ಇತರ ಕೆಲ ಶಾಸನಗಳು ಅವರನ್ನು ದ್ವಾರಾವತೀಪುರಾವರಾಧೀಶ್ವರರು (ದ್ವಾರಕೆಯ ಒಡೆಯರು) ಎಂದು ಉಲ್ಲೇಖಿಸಿವೆ. ಸೇವುಣರು ಉತ್ತರ ಭಾರತದಿಂದ ಬಂದವರು ಎಂಬ ವಾದವನ್ನು ಡಾ. ಕೋಲಾರ್ಕರ್ ಮೊದಲಾದ ಅನೇಕ ಆಧುನಿಕ ಸಂಶೋಧಕರು ಸಮರ್ಥಿಸುತ್ತಾರೆ[8]. ಮರಾಠಾ ಪ್ರೊ. ಜಾರ್ಜ್ ಮೊರೇಸ್ [9], ವಿ.ಕೆ.ರಾಜವಾಡೆ, ಸಿ.ವಿ.ವೈದ್ಯ, ಡಾ. ಎ.ಎಸ್. ಅಲ್ಟೇಕರ್ , ಡಾ.ಬಿ.ಆರ್.ಭಂಡಾರ್ಕರ್ ಮತ್ತು ಜೆ. ಡಂಕನ್ ಎಮ್. ಡೆರ್ರೆಟ್ [4], ಮೊದಲಾದ ವಿದ್ವಾಂಸರು,ಸೇವುಣರು ಮರಾಠಾ ಮೂಲದವರಾಗಿದ್ದರು ಎಂದು ಅಭಿಪ್ರಾಯಪಡುತ್ತಾರೆ. ಸೇವುಣರು ಮರಾಠಿ ಭಾಷೆಯ ಪ್ರೋತ್ಸಾಹಕರಾಗಿದ್ದರು[10]. ಈ ನಾ ಯಕರಾಜ್ಯವು ಮೊಟ್ಟಮೊದಲ ಮರಾಠಾ ಸಾಮ್ರಾಜ್ಯ ಎಂದು ದಿಗಂಬರ ಬಾಲಕೃಷ್ಣ ಮೊಕಾಶಿಯವರು ಅನುಮೋದಿಸುತ್ತಾರೆ[11]. ತಮ್ಮ ಪುಸ್ತಕ ಮಧ್ಯಯುಗೀಯ ಭಾರತ (Medieval India)ದಲ್ಲಿ , ಸಿ.ವಿ.ವೈದ್ಯ, ನ'''ನಿಸ್ಸಂದೇಹವಾಗಿಯೂ ಶುದ್ಧ ಮರಾಠಿ ಕ್ಷತ್ರಿಯವಂಶದವರು ಎನ್ನುತ್ತಾರೆ. ನಾಸಿಕದ ಹತ್ತಿರದ ಅಂಜನೇರಿ ಎಂಬಲ್ಲಿ ದೊರಕಿದ ಶಿಲಾಶಾಸನದ ಪ್ರಕಾರ ಯಾದವ ವಂಶದ ಒಂದು ಕಿರು ಶಾಖೆಯು ಅಂಜನೇರಿಯನ್ನು ಮುಖ್ಯ ನಗರವಾಗಿಟ್ಟುಕೊಂಡು , ಸಣ್ಣ ಪ್ರದೇಶವನ್ನು ಆಳುತ್ತಿತ್ತು.. ಇದೇ ಶಾಸನವು, ಈ ಯಾದವ ವಂಶದ ಸೇವುಣದೇವ ಎಂಬ ರಾಜನು ತನ್ನನ್ನು ಮಹಾಸಾಮಂತ ಎಂದು ಕರೆದುಕೊಂಡಿದ್ದಾಗಿಯೂ, ಜೈನ ದೇವಾಲವೊಂದಕ್ಕೆ ದತ್ತಿ ಬಿಟ್ಟದ್ದಾಗಿಯೂ ಹೇಳುತ್ತದೆ. [12]..ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರ ಪ್ರಕಾರ ಯಾದವರು ಮರಾಠಿ ಭಾಷಿಕರಾಗಿದ್ದು , ಇವರ ಕಾಲವು ಮರಾಠಿ ಇತಿಹಾಸದಲ್ಲಿ ಮಹತ್ವದ ಕಾಲವಾಗಿದೆ. [13]. ಶಿವಾಜಿಯ ತಾಯಿ ಜೀಜಾಬಾಯಿಯು ಯಾದವ ವಂಶಸ್ತರು ಎಂದು ಕರೆದುಕೊಳ್ಳುತ್ತಿದ್ದ ಸಿಂದಖೇಡ ರಾಜರ ಜಾಧವ ಕುಲಕ್ಕೆ ಸೇರಿದವಳಾಗಿದ್ದಳು. ಇತಿಹಾಸ ಸಾಮಂತರಾಗಿ ರಾಷ್ಟ್ರಕೂಟರ ಹಾಗೂ ನಂತರ ಪಶ್ಚಿಮ ಚಾಲುಕ್ಯರ ಸಾಮಂತರಾಗಿದ್ದ[2] ಸೇವುಣರ ರಾಜವಂಶ ಜಾರಿಗೆ ಬಂದದ್ದು ಸುಬಾಹುವಿನ ಮಗ ಧೃತಪ್ರಹಾರನ ಕಾಲದಲ್ಲಿ.. ವ್ರತಖಂಡ ಗ್ರಂಥದ ಪ್ರಕಾರ ಈ ರಾಜ್ಯದ ರಾಜಧಾನಿ ಶ್ರೀನಗರವಾಗಿತ್ತು. ಆದರೆ, ಇನ್ನೊಂದು ಶಿಲಾಶಾಸನದ ಪ್ರಕಾರ ರಾಜಧಾನಿಯು, ಚಂದ್ರಾದಿತ್ಯ ಪುರವಾಗಿತ್ತು ( ಇದು ಇಂದಿನ ನಾಸಿಕ ಜಿಲ್ಲೆಯ ಚಾಂದೋರು) [12]. ಸೇವುಣರಿಗೆ ಆ ಹೆಸರು ಬಂದದ್ದು ಧೃತಪ್ರಹಾರನ ಮಗ ಸೇವುಣಚಂದ್ರನಿಂದ. ಅವನ ರಾಜ್ಯ ಮೂಲತಃ ಸೇವುಣದೇಶ ವೆಂಬ ಪ್ರದೇಶ ( ಇಂದಿನ ಮಹಾರಾಷ್ಟ್ರದ ಖಾಂದೇಶ್ ಭಾಗ) ವಾಗಿತ್ತು. ನಂತರದ ರಾಜ ಎರಡನೆಯ ಭಿಲ್ಲಮನು , ಪರಮಾರರ ದೊರೆ ಮುಂಜ ವಿರುದ್ಧದ ಕದನದಲ್ಲಿ ಮೂರನೆಯ ತೈಲಪನಿಗೆ ನೆರವು ನೀಡಿದನು. ಎರಡನೆಯ ಸೇವುಣಚಂದ್ರನು ಆರನೆಯ ವಿಕ್ರಮಾದಿತ್ಯನಿಗೆ ಸಿಂಹಾಸನವನ್ನು ದಕ್ಕಿಸಿಕೊಳ್ಳಲು ಸಹಾಯ ಮಾಡಿದನು. ಸೇವುಣ ನಾಯಕ‌ ರಾಜಪರಂಪರೆ ಸೇವುಣ ರಾಜರುಗಳಲ್ಲಿ ಸಿಂಧನ, ಕೃಷ್ಣದೇವ, ಮಹಾದೇವ ಮತ್ತು ರಾಮದೇವ ಇವರುಗಳನ್ನು ಸಮರ್ಥ ರಾಜರೆಂದು ಪರಿಗಣಿಸಲಾಗಿದೆ. [8] ಕಲ್ಯಾಣಿ ಚಾಲುಕ್ಯರ ಸರದಾರರಾಗಿ ಧೃತಪ್ರಹಾರ ಸೇವುಣಚಂದ್ರ ಕ್ರಿ.ಶ. 850-874 ಧಡಿಯಪ್ಪ ಕ್ರಿ.ಶ. 874-900 ಭಿಲ್ಲಮ ಕ್ರಿ.ಶ. 900-925 ವಡುಗಿ (ವಡ್ಡಿಗ) ಕ್ರಿ.ಶ. 950-974 ಇಮ್ಮಡಿ ಧಡಿಯಪ್ಪ ಕ್ರಿ.ಶ. 974-975 ಇಮ್ಮಡಿ ಭಿಲ್ಲಮ ಕ್ರಿ.ಶ. 975-1005 (ಕಲ್ಯಾಣಿ ಚಾಲುಕ್ಯರ ದೊರೆ ಎರಡನೆಯ ತೈಲಪನಿಗೆ ಪರಮಾರರ ರಾಜ ಮುಂಜನ ವಿರುಧ್ದ ಯುದ್ಧದಲ್ಲಿ ನೆರವು ನೀಡಿದವನು) ವೇಸುಗಿ ಕ್ರಿ.ಶ.1005-1020 ಮುಮ್ಮಡಿ ಭಿಲ್ಲಮ ಕ್ರಿ.ಶ. 1020-1055 (ನಾಸಿಕದ ಹತ್ತಿರದ ಸಿನ್ನರಿನಲ್ಲಿ ಆಳುತ್ತಿದ್ದವನು. ಪರಮಾರರ ವಿರುದ್ಧ ಚಾಲುಕ್ಯರ ಸೋಮೇಶ್ವರನಿಗೆ ನೆರವು ನೀಡಿದವನು) ಇಮ್ಮಡಿ ವೇಸುಗಿ ಕ್ರಿ.ಶ. 1055-1068 ಮುಮ್ಮಡಿ ಭಿಲ್ಲಮ ಕ್ರಿ.ಶ. 1068 ಇಮ್ಮಡಿ ಸೇವುಣಚಂದ್ರ ಕ್ರಿ.ಶ. 1068-1085 (ಪ್ರಜಾದಂಗೆಯನ್ನು ಹತ್ತಿಕ್ಕಿ, ನಾಲ್ಕನೆಯ ಭಿಲ್ಲಮನನ್ನು ಸೋಲಿಸಿ ದೊರೆಯಾದವನು) ಐರಾಮದೇವ ಕ್ರಿ.ಶ. 1085-1115 ಸಿಂಘಣ ಕ್ರಿ.ಶ.1115-1145 ಮಲ್ಲುಗಿ ಕ್ರಿ.ಶ. 1145-1150 (1173 ರ ವರೆಗೆ ಯಾದವೀ ಕಲಹದ ಅವಧಿ) ಅಮರಗಾಂಗೇಯ ಕ್ರಿ.ಶ.1150-1160 ಗೋವಿಂದರಾಜ ಕ್ರಿ.ಶ. 1160 ಇಮ್ಮಡಿ ಅಮರ ಮಲ್ಲುಗಿ ಕ್ರಿ.ಶ.1160-1165 ಕಲಿಯ ಬಲ್ಲಾಳ ಕ್ರಿ.ಶ. 1165-1173 ಸ್ವತಂತ್ರ ರಾಜರಾಗಿ ಐದನೆಯ ಭಿಲ್ಲಮ ಕ್ರಿ.ಶ. 1173-1192 ಜೈತುಗಿ ಕ್ರಿ.ಶ. 1192-1200 ಇಮ್ಮಡಿ ಸಿಂಘಣ ಕ್ರಿ.ಶ.1200-1247 ಕನ್ನರ ಕ್ರಿ.ಶ. 1247-1261 ಮಹಾದೇವ ಕ್ರಿ.ಶ. 1261-1271 ಅಮನ ಕ್ರಿ.ಶ. 1271 ರಾಮಚಂದ್ರ ಕ್ರಿ.ಶ. 1271-1312 ಖಿಲ್ಜಿ ಸಾಮ್ರಾಜ್ಯದ ಅಧೀನರಾಜರಾಗಿ ಮುಮ್ಮಡಿ ಸಿಂಘಣ ಕ್ರಿ.ಶ. 1312-1313 ಹರಪಾಲದೇವ ಕ್ರಿ.ಶ. 1313-1318 ಮುಮ್ಮಡಿ ಮಲ್ಲುಗಿ ಕ್ರಿ.ಶ.1318-1334 ಬಾಹ್ಯ ಸ೦ಪರ್ಕಗಳು ಉಲ್ಲೇಖಗಳು ವರ್ಗ:ಇತಿಹಾಸ ವರ್ಗ:ಭಾರತದ ರಾಜಮನೆತನಗಳು ವರ್ಗ:ಕರ್ನಾಟಕದ ರಾಜಮನೆತನಗಳು
ದಟ್ಸ್ ಕನ್ನಡ
https://kn.wikipedia.org/wiki/ದಟ್ಸ್_ಕನ್ನಡ
thumb ದಟ್ಸ್ ಕನ್ನಡ ಅಂತರ್ಜಾಲದಲ್ಲಿನ ಕನ್ನಡದ ತಾಣಗಳಲ್ಲೊಂದು. ಇಂಡಿಯ ಇನ್ಫೊ ಕಂಪೆನಿಯ ಕನ್ನಡ ವಿಭಾಗವಾಗಿದ್ದ ಈ ಇ-ಪತ್ರಿಕೆ ೨೦೦೬ ರಲ್ಲಿ oneindia.in ರವರ ಒಂದು ವಿಭಾಗವಾಯಿತು. ಈ ಇ-ಪತ್ರಿಕೆ ಬೆಂಗಳೂರಿನಿಂದ ಅಂತರಜಾಲದಲ್ಲಿ ಪ್ರಸಾರವಾಗುತ್ತಿದೆ. ಇದರ ಸಂಪಾದಕರು ಶ್ರೀ ಶಾಮಸುಂದರ್ ಮತ್ತು ಸಹಾಯಕ ಸಂಪಾದಕರು ಪ್ರಸಾದ ನಾಯಕ್. ದಟ್ಸ್ ಕನ್ನಡ ವಾರ್ತೆಗಳನ್ನು ಅಂತರಜಾಲದಲ್ಲಿ ಪ್ರಸಾರ ಮಾಡುತ್ತ ಬಂದಿದೆ. ಈ ಇ-ಪತ್ರಿಕೆಯ ಅಂಕಣ ಬರಹಗಳಲ್ಲಿ ಸಾಹಿತಿ / ಬರಹಗಾರರಾದ ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಶ್ರೀವತ್ಸ ಜೋಶಿ, ತ್ರಿವೇಣಿ ಶ್ರೀನಿವಾಸರಾವ್ ಮುಂತಾದವರ ಅಂಕಣ ಬರಹಗಳು ಉಂಟು. ಪತ್ರಿಕೆಯಲ್ಲಿ ಕನ್ನಡ ಚಲನಚಿತ್ರರಂಗ ಕುರಿತ ಸುದ್ದಿಗಳು ಪ್ರಕಟಗೊಳ್ಳುತ್ತವೆ. ಹೊರಗಿನ ಸಂಪರ್ಕಗಳು ದಟ್ಸ್ ಕನ್ನಡ ತಾಣ ವರ್ಗ:ಅಂತರ ಜಾಲ ತಾಣಗಳು
ಚಿಟ್ಟೆ
https://kn.wikipedia.org/wiki/ಚಿಟ್ಟೆ
thumb|300 px| ಕಾಯ್ರ್ನ್ಸ್ ಬರ್ಡ್ವಿಂಗ್ ಎನ್ನುವ ಆಸ್ಟ್ರೇಲಿಯಾದಲ್ಲಿನ ಅತಿ ದೊಡ್ಡ ಚಿಟ್ಟೆ ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ ಗೆ ಸೇರಿದ ಕೀಟ. ಇದು ಹೆಸ್ಪರಾಯ್ಡಿಯಾ (the skippers) ಹಾಗೂ ಪೆಪಿಲಿಯನಾಯ್ಡಿಯಾ (ಉಳಿದೆಲ್ಲ ಚಿಟ್ಟೆಗಳ) ಜಾತಿಗಳಿಗೆ ಸೇರಿದ್ದು ಹಲವು ಬಣ್ಣಗಳು ಹಾಗೂ ವಿವಿಧ ಆಕಾರಗಳಲ್ಲಿ ಕಾಣಸಿಗುತ್ತವೆ. ಚಿಟ್ಟೆಗಳ ಮೇಲೆ ಅಧ್ಯಯನ ನಡೆಸುವವರನ್ನು ಆಂಗ್ಲ ಭಾಷೆಯಲ್ಲಿ 'ಲೆಪಿಡಾಪ್ಟರಿಸ್ಟ್'ಗಳೆಂದು ಕರೆಯುತ್ತಾರೆ. ಚಿಟ್ಟೆಗಳ ವೀಕ್ಷಣೆ ಜನರಲ್ಲಿ ಒಂದು ಹವ್ಯಾಸವಾಗಿ ಬೆಳೆದಿದೆ. ಜೀವನ ಚಕ್ರ ಒಂದು ಜೀವನ ಚಕ್ರವು ಜೀವಂತ ಜೀವಿಯು ತನ್ನ ಜೀವಿತಾವಧಿಯಲ್ಲಿ ಆರಂಭದಿಂದ ಕೊನೆಯವರೆಗೆ ಹಾದುಹೋಗುವ ಹಂತಗಳಿಂದ ಮಾಡಲ್ಪಟ್ಟಿದೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಸಂಪೂರ್ಣ ಮೆಟಾಮಾರ್ಫಾಸಿಸ್ ಎಂಬ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರ ಅರ್ಥ, ಚಿಟ್ಟೆ ಅದರ ಆರಂಭಿಕ ಲಾರ್ವಾ ಹಂತದಿಂದ ಸಂಪೂರ್ಣವಾಗಿ ಕ್ಯಾಟರ್ಪಿಲ್ಲರ್ ಆಗಿದ್ದರೆ, ಅಂತಿಮ ಹಂತದವರೆಗೆ ಅದು ಸುಂದರವಾದ ಮತ್ತು ಆಕರ್ಷಕವಾದ ವಯಸ್ಕ ಚಿಟ್ಟೆ ಆಗುತ್ತದೆ. ಚಿಟ್ಟೆ ಜೀವನ ಚಕ್ರವು ನಾಲ್ಕು ಹಂತಗಳನ್ನು ಹೊಂದಿದೆ: ಮೊಟ್ಟೆ, ಲಾರ್ವಾ, ಪೊರೆ ಮತ್ತು ವಯಸ್ಕ. ಮೊಟ್ಟೆಯಿಂದ ಹೊರಬರುವ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಜೀವನ ಚಕ್ರದಲ್ಲಿ ಎರಡನೇ ಹಂತವಾಗಿದೆ. ಮರಿಹುಳುಗಳು ಸಾಮಾನ್ಯವಾಗಿ, ಆದರೆ ಯಾವಾಗಲೂ ಅಲ್ಲ, ಹಲವಾರು ಜೋಡಿ ಸುಳ್ಳು ಕಾಲುಗಳು ಅಥವಾ ಪ್ರೊಲೆಗ್ಗಳೊಂದಿಗೆ ಹಲವಾರು ಜೋಡಿ ಕಾಲುಗಳನ್ನು ಹೊಂದಿರುತ್ತವೆ. ಒಂದು ಕ್ಯಾಟರ್ಪಿಲ್ಲರ್ ಪ್ರಾಥಮಿಕ ಚಟುವಟಿಕೆ ತಿನ್ನುತ್ತಿದೆ. ಅವರು ಹೊಟ್ಟೆಬಾಕತನದ ಹಸಿವನ್ನು ಹೊಂದಿದ್ದಾರೆ ಮತ್ತು ನಿರಂತರವಾಗಿ ತಿನ್ನುತ್ತಾರೆ. ಕ್ಯಾಟರ್ಪಿಲ್ಲರ್ ತಿನ್ನುವುದರಿಂದ, ಅದರ ದೇಹವು ಗಣನೀಯವಾಗಿ ಬೆಳೆಯುತ್ತದೆ. ಕಠಿಣ ಹೊರ ಚರ್ಮ ಅಥವಾ ಎಕ್ಸೋಸ್ಕೆಲೆಟನ್, ಆದಾಗ್ಯೂ, ವಿಸ್ತರಿಸಲಾಗದ ಕ್ಯಾಟರ್ಪಿಲ್ಲರ್ ಜೊತೆಗೆ ಬೆಳೆಯುವುದಿಲ್ಲ ಅಥವಾ ವಿಸ್ತರಿಸುವುದಿಲ್ಲ. ಬದಲಾಗಿ, ಹಳೆಯ ಎಕ್ಸೋಸ್ಕೆಲೆಟನ್ನು ಮೊಲ್ಟಿಂಗ್ ಎನ್ನುವ ಪ್ರಕ್ರಿಯೆಯಲ್ಲಿ ಚೆಲ್ಲುತ್ತದೆ ಮತ್ತು ಅದನ್ನು ಹೊಸ, ದೊಡ್ಡದಾದ ಎಕ್ಸೋಸ್ಕೆಲೆಟನ್ ಬದಲಿಸಲಾಗುತ್ತದೆ. ಒಂದು ಮರಿಹುಳುವು ನಾಲ್ಕರಿಂದ ಐದು ಮೊಳಕೆಗಳಷ್ಟು ಹಾದುಹೋಗುವುದಕ್ಕೆ ಮುಂಚೆಯೇ ಹೋಗಬಹುದು.thumb|ಚಿಟ್ಟೆ ಜೀವನಚಕ್ರದ ನಾಲ್ಕನೇ ಮತ್ತು ಅಂತಿಮ ಹಂತವು ವಯಸ್ಕವಾಗಿದೆ. ಕ್ರೈಸಲಿಸ್ ಕೇಸಿಂಗ್ ಸ್ಪ್ಲಿಟ್ಸ್ ಒಮ್ಮೆ, ಚಿಟ್ಟೆ ಹೊರಹೊಮ್ಮುತ್ತದೆ. ಇದು ಅಂತಿಮವಾಗಿ ಪುನಃ ಚಕ್ರವನ್ನು ಪ್ರಾರಂಭಿಸಲು ಮೊಟ್ಟೆಗಳನ್ನು ಇಡುತ್ತವೆ. ಹೆಚ್ಚಿನ ವಯಸ್ಕ ಚಿಟ್ಟೆಗಳು ಕೇವಲ ಒಂದು ವಾರ ಅಥವಾ ಎರಡು ದಿನಗಳಲ್ಲಿ ಬದುಕುತ್ತವೆ, ಕೆಲವು ಜಾತಿಗಳು 18 ತಿಂಗಳುಗಳವರೆಗೆ ಬದುಕಬಹುದು. ಈ ವಿಭಾಗದಲ್ಲಿರುವ ಚಿತ್ರಗಳು ಅದರ ಹೋಸ್ಟ್ ಸಸ್ಯಗಳಾದ ಫೆನ್ನೆಲ್ನ ಕಪ್ಪು ಸ್ವಲ್ಲೋಟೈಲ್ನ ಜೀವನಚಕ್ರವನ್ನು ಹೊಂದಿವೆ. ಚಿತ್ರಗಳು ಕೆಂಟುಕಿ ಸಹಕಾರ ವಿಸ್ತರಣೆ ಸೇವೆ ಪ್ರಕಟಣೆ -95 ರಿಂದ ಬಂದಿದ್ದು, ಥಾಮಸ್ ಜಿ. ಬರ್ನೆಸ್ ಅವರಿಂದ ಸ್ಥಳೀಯ ಸಸ್ಯಗಳೊಂದಿಗೆ ಚಿಟ್ಟೆಗಳ ಆಕರ್ಷಣೆ. ಬಟರ್ಫ್ಲೈ ಚಟುವಟಿಕೆಗಳು ಚಿಟ್ಟೆಗಳು ಸಂಕೀರ್ಣ ಜೀವಿಗಳಾಗಿವೆ. ಅವರ ದಿನನಿತ್ಯದ ಜೀವನವನ್ನು ಅನೇಕ ಚಟುವಟಿಕೆಗಳಿಂದ ನಿರೂಪಿಸಬಹುದು. ನೀವು ಅನುಸರಿಸುವವರಾಗಿದ್ದರೆ ನೀವು ಅನುಸರಿಸಬೇಕಾದ ಅನೇಕ ಚಟುವಟಿಕೆಗಳಲ್ಲಿ ಚಿಟ್ಟೆಗಳು ಕಾಣಿಸಿಕೊಳ್ಳುತ್ತವೆ. ಹೈಬರ್ನೇಷನ್ ನಂತಹ ಕೆಲವು ಚಟುವಟಿಕೆಗಳನ್ನು ವೀಕ್ಷಿಸಲು, ಕೆಲವು ಪತ್ತೇದಾರಿ ಕೆಲಸವನ್ನು ಒಳಗೊಂಡಿರಬಹುದು. ಬೇಸ್ಕಿಂಗ್, ಪುಡ್ಲಿಂಗ್ ಅಥವಾ ವಲಸೆ ಮಾಡುವಂತಹ ಇತರ ಚಟುವಟಿಕೆಗಳನ್ನು ವೀಕ್ಷಿಸಲು, ನೀವು ಸರಿಯಾದ ಸಮಯದಲ್ಲಿ ಸೂಕ್ತ ಸ್ಥಳದಲ್ಲಿರಬೇಕು. ಚಟುವಟಿಕೆಯ ಲಾಗ್ ಅನ್ನು ಇರಿಸಿ ಮತ್ತು ಪ್ರತಿ ಚಟುವಟಿಕೆಯಲ್ಲಿ ನೀವು ತೊಡಗಿಸಿಕೊಳ್ಳುವಲ್ಲಿ ಎಷ್ಟು ವಿಭಿನ್ನ ಚಿಟ್ಟೆಗಳಿವೆ ಎಂಬುದನ್ನು ನೋಡಿ. ವೈಯಕ್ತಿಕ ಚಿಟ್ಟೆ ಪುಟಗಳಿಂದ ಬಂದ ಮಾಹಿತಿಯು ಕೆಲವು ಚಟುವಟಿಕೆಗಳನ್ನು ಎಲ್ಲಿ ಸಂಭವಿಸಬಹುದು ಎಂದು (ಅಥವಾ ಯಾವ ಸಸ್ಯಗಳ ಮೇಲೆ) ನಿಮಗೆ ಕೆಲವು ಸುಳಿವುಗಳನ್ನು ನೀಡಬಹುದು. thumb|ಚಿಟ್ಟೆ ಆಹಾರ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಹಂತ ಮತ್ತು ವಯಸ್ಕ ಚಿಟ್ಟೆಗಳು ವಿಭಿನ್ನ ಆಹಾರದ ಆದ್ಯತೆಗಳನ್ನು ಹೊಂದಿವೆ, ಅವುಗಳ ಬಾಯಿಯ ಭಾಗಗಳಲ್ಲಿನ ವ್ಯತ್ಯಾಸಗಳಿಂದಾಗಿ. ಚಿಟ್ಟೆ ತನ್ನ ಜೀವನ ಚಕ್ರದ ಪೂರ್ಣಗೊಳಿಸಲು ಸಲುವಾಗಿ ಎರಡೂ ವಿಧದ ಆಹಾರಗಳು ಲಭ್ಯವಿರಬೇಕು. ಮರಿಹುಳುಗಳು ಅವರು ತಿನ್ನುವುದರ ಬಗ್ಗೆ ಬಹಳ ನಿರ್ದಿಷ್ಟವಾಗಿರುತ್ತವೆ, ಅದಕ್ಕಾಗಿಯೇ ಸ್ತ್ರೀ ಚಿಟ್ಟೆ ಕೆಲವು ಸಸ್ಯಗಳಲ್ಲಿ ಮಾತ್ರ ತನ್ನ ಮೊಟ್ಟೆಗಳನ್ನು ಇಡುತ್ತದೆ. ಆಕೆಯ ಮೊಟ್ಟೆಗಳಿಂದ ಹೊರಬರುವ ಹಸಿದ ಮರಿಹುಳುಗಳಿಗೆ ಸೂಕ್ತವಾದ ಆಹಾರವಾಗಿ ಸಸ್ಯಗಳು ಯಾವವುಗಳನ್ನು ಸೇವಿಸುತ್ತವೆ ಎಂದು ಅವರು ಸಹಜವಾಗಿ ತಿಳಿದಿದ್ದಾರೆ. ಮರಿಹುಳುಗಳು ಹೆಚ್ಚು ಚಲಿಸುವುದಿಲ್ಲ ಮತ್ತು ತಮ್ಮ ಇಡೀ ಜೀವನವನ್ನು ಒಂದೇ ಸಸ್ಯದಲ್ಲಿ ಅಥವಾ ಅದೇ ಎಲೆಗಳಲ್ಲಿ ಕಳೆಯಬಹುದು! ತಮ್ಮ ಪ್ರಾಥಮಿಕ ಗುರಿ ಅವರು ಎಷ್ಟು ಸಾಧ್ಯವೋ ಅಷ್ಟು ತಿನ್ನಲು ಅವರು pupate ಸಾಕಷ್ಟು ದೊಡ್ಡದಾಗಿದೆ. ಮರಿಹುಳುಗಳು ಎದೆಹಾಲುಗಳು ಎಂದು ಕರೆಯಲ್ಪಡುವ ಬಾಯಿ ಭಾಗಗಳನ್ನು ತಿನ್ನುತ್ತವೆ, ಅವುಗಳು ಎಲೆಗಳು ಮತ್ತು ಇತರ ಸಸ್ಯ ಭಾಗಗಳನ್ನು ತಿನ್ನಲು ನೆರವಾಗುತ್ತವೆ. ಬೆಳೆಗಳಿಗೆ ಹಾನಿ ಮಾಡಿರುವುದರಿಂದ ಕೆಲವು ಮರಿಹುಳುಗಳನ್ನು ಕೀಟಗಳೆಂದು ಪರಿಗಣಿಸಲಾಗುತ್ತದೆ. ಮರಿಹುಳುಗಳು ಹೆಚ್ಚುವರಿ ನೀರಿನ ಕುಡಿಯಲು ಅಗತ್ಯವಿಲ್ಲ ಏಕೆಂದರೆ ಅವು ತಿನ್ನುವ ಸಸ್ಯಗಳಿಂದ ಬೇಕಾಗಿರುವುದನ್ನು ಅವರು ಪಡೆಯುತ್ತಾರೆ. ವಯಸ್ಕರ ಚಿಟ್ಟೆಗಳು ಅವರು ತಿನ್ನುವುದರ ಬಗ್ಗೆ ಸಹ ಆಯ್ದವು. ಮರಿಹುಳುಗಳನ್ನು ಹೋಲುತ್ತದೆ, ಚಿಟ್ಟೆಗಳು ಸುತ್ತಲೂ ಸುತ್ತುತ್ತವೆ ಮತ್ತು ಹೆಚ್ಚು ವಿಶಾಲ ಪ್ರದೇಶದ ಮೇಲೆ ಸೂಕ್ತವಾದ ಆಹಾರವನ್ನು ಹುಡುಕಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ವಯಸ್ಕ ಚಿಟ್ಟೆಗಳು ವಿವಿಧ ದ್ರವಗಳ ಮೇಲೆ ಮಾತ್ರ ಆಹಾರವನ್ನು ನೀಡುತ್ತವೆ. ಅವರು ಪ್ರೋಬೊಸಿಸ್ ಎಂಬ ಟ್ಯೂಬ್ ತರಹದ ನಾಲಿಗೆ ಮೂಲಕ ಕುಡಿಯುತ್ತಾರೆ. ಇದು ಸಪ್ ದ್ರವ ಆಹಾರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ, ಮತ್ತು ನಂತರ ಚಿಟ್ಟೆ ಆಹಾರವನ್ನು ನೀಡುತ್ತಿರುವಾಗ ಮತ್ತೆ ಸುರುಳಿಯಾಗುತ್ತದೆ. ಹೆಚ್ಚಿನ ಚಿಟ್ಟೆಗಳು ಹೂವಿನ ಮಕರಂದವನ್ನು ಬಯಸುತ್ತವೆ, ಆದರೆ ಇತರವುಗಳು ಮರಗಳನ್ನು ಕೊಳೆಯುವಲ್ಲಿ ಮತ್ತು ಪ್ರಾಣಿ ಸಗಣಿಗಳಲ್ಲಿ ಕೊಳೆಯುತ್ತಿರುವ ಹಣ್ಣುಗಳಲ್ಲಿ ಕಂಡುಬರುವ ದ್ರವಗಳ ಮೇಲೆ ಆಹಾರವನ್ನು ನೀಡುತ್ತವೆ. ಬಿಸಿಲು ಪ್ರದೇಶಗಳು ಬಿಸಿಲಿನ ಪ್ರದೇಶಗಳಲ್ಲಿ ಗಾಳಿಯಿಂದ ರಕ್ಷಿಸಲು ಬಯಸುತ್ತವೆ. ನೋಡಿ Bagworm moth ಕಡ್ಡಿ ಚಿಟ್ಟೆ ಹುಳು ಗೋಲ್ಡನ್ ಬರ್ಡ್ ವಿಂಗ್ ಚಿಟ್ಟೆ- ೩೦-೮-೨೦೧೮ ಉಲ್ಲೇಖ http://www.uky.edu/hort/butterflies/all-about-butterflies ವರ್ಗ:ಲೆಪಿಡೊಪ್ಟೆರಾ ವರ್ಗ:ಕೀಟಗಳು
ಕವಿರಾಜಮಾರ್ಗ
https://kn.wikipedia.org/wiki/ಕವಿರಾಜಮಾರ್ಗ
ಕವಿರಾಜಮಾರ್ಗ :-thumb|right|220px|ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡ ಜನರ ವರ್ಣನೆ ಕವಿರಾಜಮಾರ್ಗ ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು . ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ ಶ್ರೀವಿಜಯನೆಂಬುದು ಬಹುತೇಕ ವಿದ್ವಾಂಸರ ಅಭಿಮತವಾಗಿದೆ. ಗ್ರಂಥದ ಮೊದಲಿಗೆ ಅಮೋಘವರ್ಷ ನೃಪತುಂಗ ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ. ಪರಿಚಯ ಕವಿರಾಜಮಾರ್ಗ(ಕ್ರಿ.ಶ ೮೧೪-೮೭೭) ಎಲ್ಲಾ ದೃಷ್ಟಿಯಿಂದಲೂ ವಿಶಿಷ್ಟ ಗ್ರಂಥ. ಕನ್ನಡದಲ್ಲಿ ತನಗಿಂತ ಮೊದಲು ಆಗಿಹೋದ ಕವಿಗಳನ್ನು ಶ್ರೀವಿಜಯನು ಹೆಸರಿಸಿದ್ದಾನೆ. ಇದರಿಂದಾಗಿ ಕನ್ನಡ ಸಾಹಿತ್ಯವು ಬಹಳ ಶ್ರೀಮಂತವಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಕವಿಯು ಕನ್ನಡ ನಾಡಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾನೆ. ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಸೀ ಸಾಹಿತ್ಯ ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾನೆ. ಅವುಗಳಲ್ಲಿ, ಬೆದಂಡೆ, ಚೆತ್ತಾಣ, ಹಾಗೂ ಒನಕೆವಾಡುಗಳು ಮುಖ್ಯವಾದುವು.ಕವಿರಾಜಮಾರ್ಗದ ಕರ್ತೃತ್ವದ ವಿಚಾರ ವಿದ್ವಾಂಸರಲ್ಲಿ ಪ್ರಬಲವಾದ ಬಿನ್ನಾಭಿಪ್ರಾಯಗಳು ಇದೆ. ಕವಿರಾಜಮಾರ್ಗದ ಕರ್ತೃ ನೃಪತುಂಗ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ನೃಪತುಂಗನ ಸಭಾಸದನಾದ ಶ್ರೀ ವಿಜಯನೆಂಬ ಕವಿ ತನ್ನ ಹೆಸರನ್ನು ಮರೆಮಾಚಿ ನೃಪತುಂಗನ ಹೆಸರನ್ನು ಮುಂದಿಟ್ಟು ಕೃತಿ ರಚನೆ ಮಾಡಿದ್ದಾನೆ ಎಂದು ವಾದವಿದೆ. ಈ ಗ್ರಂಥವನ್ನು ಮೊದಲು ಸಂಪಾದಿಸಿ ಪ್ರಕಟಿಸಿದವರು ಕೆ.ಬಿ.ಪಾಠಕ್. ಕವಿರಾಜಮಾರ್ಗ ದಂಡಿಯ 'ಕಾವ್ಯಾದರ್ಶ'ವನ್ನು ಆದರ್ಶವಾಗಿಟ್ಟುಕೊಂಡು ಬರೆದ ಸ್ವತಂತ್ರ ಅನುವಾದಿತ ಕೃತಿ. ಕವಿರಾಜಮಾರ್ಗ(ಕ್ರಿ.ಶ.೮೫೦) : - ಕವಿರಾಜಮಾರ್ಗದ ಕರ್ತೃ ಶ್ರೀವಿಜಯ . ಕನ್ನಡದಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಗ್ರಂಥ. ಇದು ರಚಿತವಾದ ಕಾಲಾವಧಿ ಪ್ರ.ಶ. ೮೧೫-೭೭. ಇದರ ಕರ್ತೃ ರಾಷ್ಟ್ರಕೂಟ ಅರಸು ನೃಪತುಂಗನೆಂದು ಹೇಳುವುದು ವಾಡಿಕೆಯಾಗಿದೆ. ಆದರೆ ಈ ವಿಷಯದ ಬಗ್ಗೆ ವಿದ್ವಾಂಸರ ನಡುವೆ ಪ್ರಬಲವಾದ ವಾದವಿವಾದಗಳು ನಡೆದಿವೆ. ಅವರಲ್ಲಿ ಮೂರು ಪಕ್ಷಗಳಿವೆ. ಮೊದಲನೆಯ ಪಕ್ಷದವರು ನೃಪತುಂಗನೇ ಈ ಗ್ರಂಥವನ್ನು ರಚಿಸಿದನೆಂದು ಹೇಳುತ್ತಾರೆ. ಎರಡನೆಯ ಪಕ್ಷದವರು ಆತನ ಆಸ್ಥಾನದಲ್ಲಿದ್ದ ಕವೀಶ್ವರನೆಂಬಾತ ಇದರ ಕರ್ತೃವೆಂದು ಅಭಿಪ್ರಾಯಪಡುತ್ತಾರೆ. ನೃಪತುಂಗನ ಸಭಾಸದನಾದ ಶ್ರೀವಿಜಯನೆಂಬುವನು ಈ ಗ್ರಂಥವನ್ನು ಬರೆದನೆಂಬುದು ಮೂರನೆಯ ಪಕ್ಷದವರ ವಾದ. ಇವರಲ್ಲಿ ಮೂರನೆಯ ಪಕ್ಷದವರ ವಾದ ಪ್ರಬಲವಾದ ಸಾಕ್ಷ್ಯಗಳನ್ನು ಹೊಂದಿರುವುದಲ್ಲದೆ ಅದೇ ಸತ್ಯಾಂಶವಾಗಿಯೂ ನಿಲ್ಲಬಹುದೆಂದು ತೋರುತ್ತದೆ. ಕವಿ-ಕೃತಿ ಚಿಂತನೆ ಕವಿರಾಜಮಾರ್ಗದ ಪ್ರತಿ ಪರಿಚ್ಛೇದದ ಕೊನೆಯಲ್ಲಿ 'ನೃಪತುಂಗ ದೇವಾನುಮತಪ್ಪ ಕವಿರಾಜಮಾರ್ಗದೊಳ್' ಎಂದು ಹೇಳುವುದರಿಂದ ಇದು ರಾಷ್ಟ್ರಕೂಟದೊರೆ ಅಮೋಘವರ್ಷ ನೃಪತುಂಗನ (ಕ್ರಿ.ಶ ೮೧೪-೮೭೭)ಕಾಲದಲ್ಲಿ ಹುಟ್ಟಿದುದದೆಂದು ನಿರ್ಧರಿಸಲಾಗಿದೆ. ಕವಿರಾಜಮಾರ್ಗ ಕೃತಿಯಲ್ಲಿ ಮೂರು ಪರಿಚ್ಛೇದಗಳಿವೆ. ಮೊದಲ ಪರಿಚ್ಛೇದದಲ್ಲಿ ಮಂಗಳಾಚರಣೆ, ಪೂರ್ವಕವಿಸ್ತುತಿ ಮೊದಲಾದ ಪೀಠಿಕಾಭಾಗದ ಪದ್ಯಗಳಾದ ಮೇಲೆ ನೃಪತುಂಗ ಕಾವ್ಯಾಭ್ಯಾಸದ ಅವಶ್ಯಕತೆ, ಕವಿತ್ವರಚನಾಶಕ್ತಿಯಿಂದ ಉಂಟಾಗುವ ಮಾರ್ಗ ಮೊದಲಾದ ವಿಷಯಗಳ ಬಗ್ಗೆ ತಿಳಿಸಿದ್ದಾನೆ. ಪರಿಚ್ಛೇದಗಳು ಕವಿರಾಜಮಾರ್ಗ ಕನ್ನಡದ ಆದ್ಯ ಉಪಲಬ್ಧ ಗ್ರಂಥವಾಗಿರುವುದಲ್ಲದೆ ಆದ್ಯ ಲಕ್ಷಣ ಗ್ರಂಥವೂ ಆಗಿದೆ. ಕನ್ನಡದಲ್ಲಿ ಕಾವ್ಯರಚನೆ ಮಾಡಬೇಕೆನ್ನುವ ಕವಿಗಳಿಗೆ ಬರೆದ ಕೈಪಿಡಿಯಿದು. ಇದರಲ್ಲಿ ಮೂರು ಪರಿಚ್ಛೇದಗಳಿವೆ: ದೋಷಾದೋಷಾನುವರ್ಣನ ಶಬ್ದಾಲಂಕಾರವರ್ಣನಿರ್ಣಯ ಅರ್ಥಾಲಂಕಾರಪ್ರಕರಣ. ಗ್ರಂಥದ ಆದಿಯಲ್ಲಿ ಮಂಗಳಪದ್ಯಗಳು, ಸರಸ್ವತೀ ಪ್ರಾರ್ಥನೆ, ಕವೀಶ್ವರರ ಪ್ರಾರ್ಥನೆ, ನೃಪತುಂಗನ ಸಭಾಸದರ ವಿಚಾರ ಹಾಗೂ ಸ್ವವಿಚಾರಗಳಿವೆ. ಅನಂತರ ಕವಿ-ಕಾವ್ಯ, ಗದ್ಯ-ಪದ್ಯ ಮತ್ತು ಚತ್ತಾಣ-ಬೆದಂಡೆಗಳನ್ನು ಕುರಿತು ವಿಚಾರಗಳಿವೆ. ಕನ್ನಡನಾಡು ನುಡಿಗಳ ಬಗೆಗಿನ ಮಾತುಗಳಿವೆ. ಸಮಸಂಸ್ಕೃತ, ಯತಿ, ಕಾರಕ ಮುಂತಾದವುಗಳಿಗೆ ಸಂಬಂಧಿಸಿದ ದೋಷಗಳ ವಿವರಣೆಯಿದೆ. ಹೀಗೆ ಮೊದಲ ಪರಿಚ್ಛೇದದ ವಿಷಯಗಳು ವಿವಿಧವಾಗಿವೆ. ಎರಡನೆಯ ಪರಿಚ್ಛೇದದಲ್ಲಿ ಶಬ್ದಾಲಂಕಾರಗಳ ನಿರೂಪಣೆ ಮತ್ತು ದಕ್ಷಿಣೋತ್ತರ ಮಾರ್ಗಗಳ ಪ್ರಸ್ತಾಪವಿದೆ. ಮೂರನೆಯ ಪರಿಚ್ಛೇದ ಅರ್ಥಾಲಂಕಾರಗಳಿಗೆ ಸಂಬಂಧಿಸಿದೆ. ಇಡೀ ಗ್ರಂಥ ಕಂದಪದ್ಯಗಳಿಂದ ರಚಿತವಾಗಿದ್ದರೂ ಹಲಕೆಲವು ಗೀತಿಕೆಗಳು, ಶ್ಲೋಕಗಳು ಹಾಗೂ ವೃತ್ತಗಳು ನಡುನಡುವೆ ಬರುತ್ತವೆ. ಕವಿರಾಜಮಾರ್ಗದ ಬಗ್ಗೆ ವಿಮರ್ಶೆ ಇದು ಸಂಪೂರ್ಣವಾದ ಸ್ವತಂತ್ರ ರಚನೆಯಲ್ಲ. ಸಂಸ್ಕೃತ ಆಲಂಕಾರಿಕರಲ್ಲಿ ಬಹುಮಟ್ಟಿಗೆ ದಂಡಿಯ ಕಾವ್ಯಾದರ್ಶವನ್ನೂ ಕೆಲವು ವಿಚಾರಗಳಲ್ಲಿ ಭಾಮಹನನ್ನೂ ಅನುಸರಿಸಿರುವುದು ಇಲ್ಲಿ ಕಂಡುಬರುತ್ತದೆ. ಕಾವ್ಯಕ್ಕೆ ಸೊಗಸನ್ನುಂಟುಮಾಡುವುದೆಲ್ಲವೂ ಅಲಂಕಾರವೆಂದು ದಂಡಿಯಂತೆಯೇ ಕವಿರಾಜಮಾರ್ಗಕಾರನೂ ಭಾವಿಸುತ್ತಾನೆ. ಅಲ್ಲದೆ, ದಂಡಿಗೆ ಪರಮಪ್ರಿಯವಾದ ದಶಗುಣಗಳನ್ನು ಹೇಳಿ, ಅವನು ಹೇಳಿರುವ ವೈದರ್ಭ, ಗೌಡಮಾರ್ಗಗಳಿಗೆ ಸಂವಾದಿಯಾಗಿ ದಕ್ಷಿಣೋತ್ತರ ಮಾರ್ಗಗಳನ್ನು ನಿರೂಪಿಸುತ್ತಾನೆ. ಅಲಂಕಾರಗಳ ನಿರೂಪಣೆಯಲ್ಲಿ ಬಹುಮಟ್ಟಿಗೆ ಕಾವ್ಯಾದರ್ಶದ ಅನುಸರಣೆ ಕಂಡು ಬರುತ್ತದೆ. ಇಷ್ಟರಮಟ್ಟಿಗೆ ಕವಿರಾಜಮಾರ್ಗ ಸಂಸ್ಕೃತಕ್ಕೆ ಋಣಿಯಾಗಿದ್ದರೂ ಹಲವು ವಿಚಾರಗಳಲ್ಲಿ ತನ್ನ ಸ್ವಂತಿಕೆಯನ್ನು ಮೆರೆದಿದೆ. ಸಂಸ್ಕೃತಕಾವ್ಯಲಕ್ಷಣಗಳನ್ನು ಕನ್ನಡಕ್ಕೆ ಹೊಂದಿಕೊಳ್ಳುವಂತೆ ಹೇಳುವಲ್ಲಿ ಸ್ವತಂತದೃಷ್ಟಿ ಕಂಡುಬರುತ್ತದೆ. ಕನ್ನಡಕ್ಕೆ ಸಂಬಂಧಪಟ್ಟಂತೆ ಸಮಸಂಸ್ಕೃತ ಪದಗಳನ್ನು ಕನ್ನಡದೊಂದಿಗೆ ಬೆರೆಸುವ ವಿಚಾರ, ಯತಿಭಂಗವನ್ನು ಸಮರ್ಥಿಸಿ ಕನ್ನಡಕ್ಕೆ ಅತಿಶಯವಾದ ಖಂಡಪ್ರಾಸವನ್ನು ಎತ್ತಿ ಹಿಡಿದಿರುವುದು, ಕನ್ನಡದಲ್ಲಿ ಜಾತ್ಯೇಕವಚನದ ವೈಶಿಷ್ಟ್ಯವನ್ನು ಗುರುತಿಸುವುದು, ಶ್ರುತಿ ದುಷ್ಟ, ಅರ್ಥದುಷ್ಟ, ಶ್ರುತಿಕಷ್ಟ, ಕಲ್ಪನೋಕ್ತಿಕಷ್ಟ_ಈ ದೋಷಗಳನ್ನು ತಕ್ಕ ಕನ್ನಡ ಉದಾಹರಣೆಗಳಿಂದ ವಿಶದಪಡಿಸಿರುವುದು ಮತ್ತು ಈ ದೋಷಗಳಿಗೆ ಪಗರಣದಲ್ಲಿ ಅವಕಾಶವಿತ್ತಿರುವುದು, ಕನ್ನಡದಲ್ಲಿ ಕಾರಕದೋಷ ಹೇಗೆ ಸಂಭವಿಸುತ್ತದೆಂಬುದನ್ನು ತಕ್ಕ ನಿದರ್ಶನಗಳಿಂದ ಸ್ಪಷ್ಟಪಡಿಸಿರುವುದು-ಇವೇ ಮುಂತಾದುವು ಸ್ವತಂತ್ರ ಪ್ರಜ್ಞೆಗೆ ನಿದರ್ಶನಗಳಾಗಿವೆ. ದಂಡಿ ಹೇಳಿರುವಂತೆ ರಸವನ್ನು ರಸವದಲಂಕಾರದಲ್ಲಿ ಅಳವಡಿಸಿ ಅಲ್ಲಿ ಉಕ್ತವಾಗಿರುವ ಎಂಟು ರಸಗಳ ಜೊತೆಗೆ ಒಂಬತ್ತನೆಯದಾಗಿ ಶಾಂತರಸವನ್ನು ಇಲ್ಲಿ ಸೇರಿಸಲಾಗಿದೆ. ರಸದ ಚರಿತ್ರೆಯಲ್ಲಿ ಇದು ಗಮನಾರ್ಹವಾದ ಅಂಶ. ಕನ್ನಡ ಕಾವ್ಯ ಮೀಮಾಂಸೆಯಲ್ಲಿ ಮೊಟ್ಟಮೊದಲಿಗೆ ಧ್ವನಿಯ ಪ್ರಸ್ತಾಪ ಬರುವುದು ಇಲ್ಲೇ. ದಂಡಿ ಹೇಳಿರುವ ಮೂವತ್ತೈದು ಅಲಂಕಾರಗಳ ಮಾಲೆಗೆ ಧ್ವನ್ಯಾಲಂಕಾರವನ್ನು ಸೇರಿಸಲಾಗಿದೆ. ಹೀಗಾಗಿ ಕನ್ನಡ ಕಾವ್ಯಮೀಮಾಂಸೆಯ ಬೆಳೆವಣಿಗೆಯಲ್ಲಿ ಕವಿರಾಜಮಾರ್ಗಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಕವಿ ಕಾವ್ಯಗಳ ಬಗ್ಗೆ ಮಾರ್ಗಕಾರನ ಅಭಿಪ್ರಾಯ ಕವಿಕಾವ್ಯಗಳ ಬಗ್ಗೆ ಇಲ್ಲಿ ಹೇಳಿರುವ ಮಾತುಗಳು ತುಂಬ ಸುಂದರವೂ ಉಚಿತವೂ ಆಗಿವೆ. ಕವಿಗಳಲ್ಲಿರುವ ತಾರತಮ್ಯಗಳನ್ನು ನಿರೂಪಿಸುವಲ್ಲಿ ಸ್ವತಂತ್ರ ವಿಚಾರಶಕ್ತಿ ವ್ಯಕ್ತವಾಗಿದೆ. ಆ ಪದ್ಯಗಳನ್ನು ನೋಡಬಹುದು. :"ಕುಱುತಂತು ಪೆಱರ ಬಗೆಯಂ :ತೆರೆದಿರೆ ಪೆರರ್ಗರೆಪಲಾರ್ಪವಂ ಮಾತರೆವಂ. :ಕಿರೆದರೊಳೆ ಪಿರಿದುಮರ್ಥಮ :ನರೆಪಲ್ ನೆರೆವಾತನಂತನಿಂದಂ ನಿಪುಣಂ"|| - ಪದ್ಯ ೧೫ :"ನುಡಿಯಂ ಛಂದದೊಳೊಂದಿರೆ :ತೊಡರ್ಚಲರೆವಾತನಾತನಿಂದಂ ಜಾಣಂ :ತಡೆಯದೆ ಮಹಾಧ್ವ ಕೃತಿಗಳ :ನೊಡರಿಸಲಾರ್ಪಾತ ನೆಲ್ಲರಿಂದಂ ಬಲ್ಲಂ"|| - ಪದ್ಯ ೧೬ ಚಾರಿತ್ರಿಕ ಅಂಶಗಳು ಸಾಹಿತ್ಯಚರಿತ್ರೆಯ ಅಜ್ಞಾತಯುಗದ ಮೇಲೆ ಕವಿರಾಜಮಾರ್ಗ ವಿಶೇಷವಾಗಿ ಬೆಳಕು ಬೀರುತ್ತದೆ. ಕನ್ನಡ ಕಾವ್ಯಗಳಲ್ಲಿ ಗದ್ಯಪದ್ಯಸಂಮಿಶ್ರಿತವಾದ, ಗದ್ಯ ಪ್ರಾಚುರ್ಯ ಹೆಚ್ಚಾದ, ಗದ್ಯಕಥಾಪ್ರಕಾರವೊಂದಿದ್ದಿತು (೧-೨೭), ಚತ್ತಾಣ-ಬೆದಂಡೆ ಎಂಬ ದೇಸಿಗಬ್ಬಪ್ರಕಾರಗಳು ಪ್ರಚುರವಾಗಿದ್ದುವು (೧-೩೩), ವಿಮಳೋದಯ ನಾಗಾರ್ಜುನಾದಿಗಳು ಗದ್ಯಾಶ್ರಮಗುರುತಾಪ್ರತೀತಿಯನ್ನು ಕೈಗೊಂಡಿದ್ದರು (೧-೨೯), ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲಾದಿಗಳ ವಸ್ತು ವಿಸ್ತರರಚನೆ ‘ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ’ ಎನ್ನಿಸಿಕೊಂಡಿದ್ದುವು (೧-೩೨), ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ (೧-೪೮), ಆಗಿನ ಕಾಲಕ್ಕೇ ಕನ್ನಡ ಕಾವ್ಯ ಪರಂಪರೆಯೊಂದು ರೂಢಮೂಲವಾಗಿದ್ದಿತು, ಪೂರ್ವದ ಹಳಗನ್ನಡವೊಂದಿದ್ದಿತು-ಇವೇ ಮುಂತಾದ ಅಂಶಗಳಲ್ಲದೆ ಅಲ್ಲಲ್ಲಿ ಬರುವ ಪುರಾಣಕವಿಗಳ್, ಪರಮಕವಿಪ್ರಧಾನರಾಕಾವ್ಯಂಗಳ್, ಪೂರ್ವಕಾವ್ಯರಚನೆಗಳೂ-ಇತ್ಯಾದಿ ಪ್ರಯೋಗಗಳು ಕವಿರಾಜಮಾರ್ಗಕ್ಕಿಂತ ಹಿಂದಿನ ಕಾವ್ಯನಿರ್ಮಾಣೋದ್ಯೋಗದ ಜಾಡಿನ ಹೆಜ್ಜೆಗುರುತುಗಳಾಗಿವೆ. ಕನ್ನಡ - ನಾಡು - ನುಡಿ ಕವಿರಾಜಮಾರ್ಗ ಆ ಕಾಲದ ಕನ್ನಡನಾಡು, ನುಡಿ ಮತ್ತು ಜನರ ಬಗೆಗೆ ತಿಳಿವಳಿಕೆ ನೀಡಿರುವುದು ಅದರ ವಿಶೇಷತೆಯನ್ನು ಹೆಚ್ಚಿಸಿದೆ. ಆ ಕಾಲಕ್ಕೆ ಕನ್ನಡನಾಡಿನ ಸೀಮೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು (೧-೩೬). ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ತಿರುಳ್ಗನ್ನಡದ ಪ್ರದೇಶಗಳೆಂದು ಖ್ಯಾತವಾಗಿದ್ದುವು (೧-೩೭). ಕನ್ನಡದಲ್ಲಿ ಅನೇಕ ಉಪಭಾಷೆಗಳು ರೂಢಿಯಲ್ಲಿದ್ದುವು (೧-೪೬) ನಾಡವರ ನುಡಿಬಲ್ಮೆ ಹಾಗೆ ಅಸದಳವಾಗಿತ್ತು. ಅವರು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದರು (೧-೩೮). ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್ ಎರಡನೇ ಪರಿಚ್ಛೇದ ಅಲಂಕಾರಗಳ ಲಕ್ಷಣಗಳನ್ನು ಹೇಳಲು ಮೀಸಲಾಗಿದೆ. ಇದರಲ್ಲಿ ನೃಪತುಂಗ ಪ್ರಾಸದ ವಿಷಯವನ್ನು ಹೇಳತೊಡಗಿ-'ಕನ್ನಡಕ್ಕೆ ಸತತಂ ಪ್ರಾಸಂ' ಎಂದು ನುಡಿದು ಪ್ರಸಭೇದಗಳನ್ನು ವಿವರಿಸಿ ಅವುಗಳಿಗೆ ದೇಷ್ಟಾಂತಗಳನ್ನು ನೀಡಿದ್ದಾನೆ. ಮೂರನೇ ಪರಿಚ್ಛೇದದಲ್ಲಿ ಆ ಕಾಲಕ್ಕೆ ಸಂಸ್ಕೃತದ ಲಾಕ್ಷಣಿಕರು ಪ್ರಚಾರ ಮಾಡಿದ್ದ ಸುಮಾರು.೩೫ ಅಲಂಕಾರಗಳನ್ನು ಹೇಳಿದ್ದಾನೆ. ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ ಇದಾಗಿದೆ.ಕಿಸುವೊಳಲು ಪಟ್ಟದಕಲ್ಲಿಗೆ ಮೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ (ಗದಗ ಜಿಲ್ಲೆ). ಕೊಪಣ ಇಂದಿನ ಕೊಪ್ಪಳ. ಒಕ್ಕುಂದ ಬೆಳಗಾವಿ ಜಿಲ್ಲೆಯಲ್ಲಿರುವ ಒಕ್ಕುಂದ. ಶ್ರೀ ವಿಜಯರ ಕವಿಮಾರ್ಗಂ ಭಾವಿಪ ಜನದಮನಕ್ಕೆ ಕನ್ನಡಿಯಂ ಕೆ ಯ್ದೀವಿಗೆಯುಮಾದುವದರುಂ ಶ್ರೀ ವಿಜಯರ ದೇವರನೇ ವಣ್ಣಿಪುದೊ| ಕಂದಮು ಮಳಿನವೃತ್ತಮು ಮೊಂದೊಂದೆಡೆಗೆಒಂಡು ಜಾತಿ ಜಾಣೆಸೆಯೇ ಬೆಡಂ ಗೊಂದಿವರೆಳಮರೆ ಪೇಳಲ್ ಸುಂದರ ರೂಪಿಂ ಬೆದಂಡೆಗಬ್ಬಮದಕ್ಕುಂ ವಿಮಳೋದಯ ನಾಗರ್ಜುನ ಸಮೇತ ಜಯಬಂಧು ದುರ್ವಿನೀತಾದಿಗಳೇ ಕ್ರಮದೋಳ್ ನೆಗಳ್ಚಿ ಗದ್ಯಾ ಶ್ರಮ ಪದಗುರುತಾ ಪ್ರತೀತಿಯಂ ಕೆಯ್ಕೊಂಡರ್ ಮಿಗೆ ಕನ್ನಡಗಬ್ಬಂಗಳೊ ಳಗಣಿತಗುಣಗಣ ಗದ್ಯಪದ್ಯ ಸಮ್ಮಿಶ್ರಿತಮಂ ನಿಗಧಿಸುವರ್ ಗದ್ಯಕಥಾ ಪ್ರ ಗೀತಿಯಂ ತಚ್ಚಿರಂತನಾಚಾರ್ಯರ್ಕಳ್ ಶಾಸ್ತ್ರ ಗ್ರಂಥಗಳೂ ಕವಿರಾಜಮಾರ್ಗ ಶಾಸ್ತ್ರಗ್ರಂಥವಾದರೂ ಅಲ್ಲಲ್ಲಿ ಕವಿತ್ವದ ಸೊಗಸು ಮಿನುಗಿದೆ; ಅಲ್ಲಲ್ಲಿ ಕಂಡುಬರುವ ಉಪಮೆ, ನಾಣ್ಣುಡಿಗಳು ಮನಸೆಳೆಯುವಂತಿವೆ. ಕಲ್ತೊಡನೋದುವುವಲ್ತೆ ಗಿಳಿಗಳುಂ ಪುರುಳಿಗಳುಂ, ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ, ಒತ್ತುಂಗರಡೆಯ ಮದ್ದಳೆಯ ಜರ್ಝರ ಧ್ವನಿಗಳವೊಲ್, ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೊಲ್, ಕೇಡಡಸಿದಂದು ಬಗೆಯುಂ ಕೂಡದು, ಕೂಸಿನ ತಲೆಯೊಳ್ ಬಿಣ್ಪೊರೆಯನಿಟ್ಟವೋಲ್ ಈ ಮೊದಲಾದವು ಮನೋಹರವಾದ ವರ್ಣನಾಭಾಗಗಳು. ಇದರ ಶೈಲಿ ಲಲಿತವಾಗಿದೆ, ಉಚಿತವಾಗಿದೆ. ಇದರಲ್ಲಿ ನಾಣ್ನುಡಿಯ ಬೆಡಗಿದೆ. ಉದ್ದಕ್ಕೂ ಸ್ವತಂತ್ರವಿಚಾರಮಾರ್ಗವಿದೆ. (ಜೆ.ಎಸ್.ಸಿ.) ಉಲ್ಲೇಖ ಬಾಹ್ಯ ಸಂಪರ್ಕ ಕಣಜ ಜಾಲತಾಣ ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ವರ್ಗ:ಸಾಹಿತ್ಯ ವರ್ಗ:ಚುಟುಕು
ಅಂತರಜಾಲ
https://kn.wikipedia.org/wiki/ಅಂತರಜಾಲ
ಅಂತರಜಾಲ (ಆಂಗ್ಲ: Internet ಇಂಟರ್‌ನೆಟ್) ಎನ್ನುವುದು ಕಂಪ್ಯೂಟರ್ ನೆಟ್‌ವರ್ಕ್‌ಗಳ (ಜಾಲಬಂಧಗಳ) ಒಂದು ನೆಟ್‌ವರ್ಕ್‌ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್‌ವರ್ಕ್‌ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ. thumb|190px|ಅಂತರಜಾಲದ ನಕ್ಷೆ (ಕಾಲ್ಪನಿಕ) ಇಂಟರ್‌ನೆಟ್ ಅಥವಾ ಅಂತರಜಾಲ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು. ಆದರೆ ಅದು ಜನಸಾಮಾನ್ಯರಿಗೆ ಗೋಚರವಾಗಿದ್ದು ೧೯೯೦ರ ದಶಕದಲ್ಲಿ. ರಚನಾ ವ್ಯವಸ್ಥೆ ಅಂತರಜಾಲವನ್ನು, ಅಂತರಜಾಲದ ಪರಿಕಲ್ಪನೆ ಹಾಗು ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾಗುತ್ತದೆ. ಉದಾಹರಣೆಗೆ ಕ್ಲೈಂಟ್-ಸರ್ವರ್ ಗ್ರಾಹಕ ಸೇವಾ ಪರಿಕರ ಕಂಪ್ಯೂಟಿಂಗ್ ಹಾಗು ಇಂಟರ್ನೆಟ್ ಪ್ರೋಟೋಕಾಲ್ ಸೂಟ್(TCP/IP)ಅಂತರಜಾಲ ನಿಯಮಗಳ ಬಳಕೆ ಮಾಡಲಾಗುತ್ತದೆ.ಯಾವುದೇ ಒಂದು ಜನಪ್ರಿಯ ಇಂಟರ್ನೆಟ್ ಪ್ರೋಟೋಕಾಲ್ ಗಳನ್ನೂ ಒಂದು ಅಂತರಜಾಲದಲ್ಲಿ ಪತ್ತೆ ಮಾಡಬಹುದು. ಉದಾಹರಣೆಗೆ HTTP(ಜಾಲ ಸೇವೆಗಳು), SMTP(ಇ-ಮೇಲ್), ಹಾಗು FTP(ಫೈಲ್ ವರ್ಗಾವಣೆ). ಅಂತರಜಾಲ ಮಾಹಿತಿಗಳು ಸಾಮಾನ್ಯವಾಗಿ ತಾಂತ್ರಿಕ ಮಾಹಿತಿಯ ದತ್ತಾಂಶವನ್ನು ಹೊಂದಿರುತ್ತವೆ. ಆಧುನಿಕ ಮಾಹಿತಿ ವ್ಯವಸ್ಥೆಗಳಿಗೆ ಕಾರ್ಪೊರೇಟ್ ವಿವರವನ್ನು ಮುಖಾಮುಖಿ ಯಾಗಿ,ಆಧುನಿಕ ಇಂಟರ್ ಫೇಸ್ ಒದಗಿಸುತ್ತದೆ. ಅಂತರಜಾಲವನ್ನು, ಅಂತರಜಾಲದ ಒಂದು ಖಾಸಗಿ ಆನ್ಯಲಾಗ್(ಸದೃಶವಾದ ವಸ್ತು) ಎಂದು ಅರ್ಥೈಸಿಕೊಳ್ಳಬಹುದು,ಅಥವಾ ಒಂದು ಸಂಸ್ಥೆಗೆ ಸೀಮಿತ ಅಂತರಜಾಲದ ಒಂದು ಖಾಸಗಿ ವಿಸ್ತರಣೆಯೆಂದು ಪರಿಗಣಿಸಬಹುದು. ಮೊದಲ ಬಾರಿಗೆ ಅಂತರಜಾಲ ವೆಬ್ಸೈಟ್ ಗಳು ಹಾಗು ಹೋಂ ಪೇಜಸ್ ಗಳು ೧೯೯೦-೧೯೯೧ ರಲ್ಲಿ ಆಯಾ ಸಂಸ್ಥೆಗಳಲ್ಲಿ, ಕಂಡುಬಂದವು. ಅಧಿಕೃತವಾಗಿ ಗುರುತಿಸಲಾಗಿರದಿದ್ದರೂ, ೧೯೯೨ರಲ್ಲಿ ಅಂತರಜಾಲ ಎಂಬ ಪದವು ಮೊದಲು ಅಳವಡಿಸಿಕೊಂಡವರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆಯಿತು. ಉದಾಹರಣೆಗೆ ವಿಶ್ವವಿದ್ಯಾಲಯಗಳು ಹಾಗು ತಂತ್ರಜ್ಞಾನ ಸಂಸ್ಥೆಗಳು.(Dubious|date=October 2009) ಅಂತರಜಾಲಗಳನ್ನು ಎಕ್ಸಟ್ರಾನೆಟ್ ಗಳೊಂದಿಗೂ ಸಹ ವಿರುದ್ದಾರ್ಥಕವಾಗಿ ಬಳಸಲಾಗುತ್ತದೆ. ಅಂತರಜಾಲಗಳು ಸಾಧಾರಣವಾಗಿ ಸಂಸ್ಥೆಯ ನೌಕರರಿಗೆ ಮಾತ್ರ ಸೀಮಿತವಾಗಿದ್ದರೆ, ಎಕ್ಸ್ಟ್ರಾನೆಟ್ ಗಳನ್ನು ಗ್ರಾಹಕರು, ಸರಬರಾಜುದಾರರು, ಅಥವಾ ಇತರ ಅಂಗೀಕೃತ ಗುಂಪುಗಳೂ ಸಹ ಬಳಕೆಮಾಡಬಹುದು. ಎಕ್ಸ್ಟ್ರಾನೆಟ್ ಗಳು, ಅದಕ್ಕೆ ಆಕ್ಸೆಸ್(ಪ್ರವೇಶ), ಆಥರೈಸೇಶನ್ (ಪ್ರಮಾಣೀಕರಣ), ಹಾಗು ಅಥೆಂಟಿಕೆಶನ್(ದೃಢೀಕರಣ)ದಂತಹ (AAA ಪ್ರೋಟೋಕಾಲ್)ವಿಶೇಷ ಸೌಕರ್ಯವನ್ನು ಅಂತರಜಾಲದ ಮೂಲಕ ಖಾಸಗಿ ನೆಟ್ವರ್ಕ್ ಗೆ ವಿಸ್ತರಿಸುತ್ತವೆ. ಅಂತರಜಾಲಗಳು, ಅಂತರಜಾಲಕ್ಕೆ ಫೈರ್ ವಾಲ್ (ಸಾಫ್ಟ್ವೇರ್ ಮತ್ತು ಹಾರ್ಡ್ ವೇರ್)ನೊಂದಿಗೆ ನೆಟ್ವರ್ಕ್ ಪ್ರವೇಶವನ್ನು ಒದಗಿಸುತ್ತವೆ. ಈ ಮೂಲಕ ಬಾಹ್ಯ, ಅನಧಿಕೃತ ಪ್ರವೇಶದಿಂದ ಅಂತರಜಾಲಕ್ಕೆ ರಕ್ಷಣೆ ಒದಗಿಸುತ್ತವೆ. ಸಾಮಾನ್ಯವಾಗಿ ಪ್ರವೇಶಗಳೂ ಸಹ ಬಳಕೆದಾರನ ದೃಢೀಕರಣ, ಸಂದೇಶಗಳ ಗೋಪ್ಯತೆ ಹಾಗು ಸಾಮಾನ್ಯವಾಗಿ ವರ್ಚ್ಯುವಲ್ ಪ್ರೈವೇಟ್ ನೆಟ್ವರ್ಕ್(VPN) ಕನೆಕ್ಟಿವಿಟಿಯನ್ನು ಕಂಪನಿಯ ಬಗ್ಗೆ ಮಾಹಿತಿ, ಕಂಪ್ಯೂಟರ್ ಸಾಧನಗಳು ಹಾಗು ಆಂತರಿಕ ಸಂವಹನಕ್ಕೆ ಪ್ರವೇಶದ ಅಧಿಕಾರವನ್ನು ಬಾಹ್ಯ ನೌಕರವರ್ಗಕ್ಕೆ ನೀಡುವುದರ ಮೂಲಕ ನಿರ್ವಹಣೆ ಮಾಡುತ್ತವೆ. ಉಪಯೋಗಗಳು ಹೆಚ್ಚಾಗಿ, ಅಂತರಜಾಲಗಳನ್ನು ಸಾಧನೋಪಕರಣ ಹಾಗು ಅಳವಡಿಕೆಗಳನ್ನು ವಿತರಿಸಲು ಬಳಸಲಾಗುತ್ತದೆ. ಉದಾಹರಣೆಗೆ: ಸಹಯೋಗ(ಗುಂಪುಗಳಲ್ಲಿ ಹಾಗು ದೂರವಾಣಿ ಮೂಲಕ ಸಮಾಲೋಚನೆ ಮಾಡುವವರಿಗೆ ಅನುಕೂಲ ಒದಗಿಸುವುದು) ಅಥವಾ ಅತ್ಯಾಧುನಿಕ ಕಾರ್ಪೋರೇಟ್ ನಿರ್ದೇಶಿಕೆಗಳು, ಮಾರಾಟಗಾರ ಹಾಗು ಗ್ರಾಹಕ ಸಂಬಂಧಿತ ನಿರ್ವಹಣಾ ಸಾಧನಗಳು, ಯೋಜನಾ ನಿರ್ವಹಣೆ ಮುಂತಾದವುಗಳನ್ನು ಉತ್ಪಾದಕತೆ ಹೆಚ್ಚಿಸಲು ಬಳಸಲಾಗುತ್ತದೆ. ಅಂತರಜಾಲಗಳನ್ನು ಕಾರ್ಪೋರೇಟ್ ಕಾರ್ಯ-ಚಟುವಟಿಕೆಯ ಸಂಸ್ಕೃತಿ-ಬದಲಾವಣಾ ವೇದಿಕೆಗಳಾಗಿಯೂ ಸಹ ಬಳಸಲಾಗುತ್ತದೆ. ಉದಾಹರಣೆಗೆ, ಅಂತರಜಾಲ ಚರ್ಚಾವೇದಿಕೆಯನ್ನು ಬಳಸಿಕೊಂಡು ದೊಡ್ಡ ಸಂಖ್ಯೆಯ ನೌಕರವರ್ಗವು ಪ್ರಮುಖ ವಿಷಯಗಳನ್ನು ಚರ್ಚಿಸಿದರೆ; ಇದು ನಿರ್ವಹಣೆ, ಉತ್ಪಾದಕತೆ, ಗುಣಮಟ್ಟ ಹಾಗು ಇತರ ಕಾರ್ಪೋರೇಟ್ ವಿವಾದ-ವಿಷಯಗಳಿಗೆ ಸಂಬಂಧಿಸಿದ ಹೊಸ ಯೋಜನೆಗಳಿಗೆ ದಾರಿ ಮಾಡಿಕೊಡಬಹುದು. ದೊಡ್ಡ ಅಂತರಜಾಲಗಳಲ್ಲಿ, ವೆಬ್ಸೈಟ್ ಸೇವಾ ಬಳಕೆಯು ಸಾಮಾನ್ಯವಾಗಿ ಸಾರ್ವಜನಿಕ ವೆಬ್ಸೈಟ್ ಸೇವಾ ಬಳಕೆಗೆ ಸದೃಶವಾಗಿರುತ್ತದೆ. ಅಲ್ಲದೇ ಇದರ ಒಟ್ಟಾರೆ ಚಟುವಟಿಕೆಯನ್ನು ವೆಬ್ ಮೆಟ್ರಿಕ್ ಸಾಫ್ಟ್ ವೇರ್ (ಮಾನದಂಡ)ಮೂಲಕ ಪತ್ತೆ ಮಾಡಿ ಸೂಕ್ತವಾಗಿ ಅರ್ಥೈಸಬಹುದು. ಅಂತರಜಾಲ ವೆಬ್ಸೈಟ್ ಪರಿಣಾಮಕಾರಿತ್ವವನ್ನು ಬಳಕೆದಾರ ಸಮೀಕ್ಷೆಗಳೂ ಸಹ ಉತ್ತಮಪಡಿಸುತ್ತಾರೆ. ದೊಡ್ಡ ಉದ್ದಿಮೆಗಳು, ತನ್ನ ಬಳಕೆದಾರರಿಗೆ ತನ್ನ ಅಂತರಜಾಲದೊಳಗೆ ಫೈರ್ ವಾಲ್ ಸರ್ವರ್ ಗಳ ಮೂಲಕ ಸಾರ್ವಜನಿಕ ಅಂತರಜಾಲಕ್ಕೆ ಪ್ರವೇಶ ಕಲ್ಪಿಸಿಕೊಡುತ್ತವೆ. ಇವುಗಳಿಗೆ ಸಂಪೂರ್ಣ ಭದ್ರತೆಯೊಂದಿಗೆ ಬರುವ ಹಾಗು ಹೋಗುವ ಸಂದೇಶಗಳನ್ನು ಹಿಡಿದಿಟ್ಟು ಪ್ರದರ್ಶಿಸುವ ಸಾಮರ್ಥ್ಯವಿರುತ್ತದೆ. ಅಂತರಜಾಲದ ಒಂದು ಭಾಗದ ಮಾಹಿತಿಯನ್ನು ಗ್ರಾಹಕರಿಗೆ ಹಾಗು ವ್ಯಾಪಾರಕ್ಕೆ ಸಂಬಂಧಿಸದ ಇತರರಿಗೆ ಲಭ್ಯವಾಗುವಂತೆ ಮಾಡಿದರು. ಇದು ಒಂದು ಎಕ್ಸ್ಟ್ರಾನೆಟ್ ನ ಭಾಗವಾಗುತ್ತದೆ. ವ್ಯಾಪಾರ ಸಂಸ್ಥೆಗಳು ಖಾಸಗಿ ಸಂದೇಶಗಳನ್ನು ಸಾರ್ವಜನಿಕ ನೆಟ್ವರ್ಕ್ ಮೂಲಕ, ವಿಶೇಷವಾದ ಸಂದೇಶ ಗೋಪ್ಯತೆ/ಅಸಂಕೇತೀಕರಣವನ್ನು ಬಳಸಿಕೊಂಡು ಕಳುಹಿಸಬಹುದು. ಪ್ರಯೋಜನಗಳು ಕಾರ್ಯತಂಡದ ಉತ್ಪಾದಕತೆ : ಅಂತರಜಾಲಗಳು ಬಳಕೆದಾರರಿಗೆ ಗುರುತಿಸಲು ಹಾಗು ಮಾಹಿತಿಯನ್ನು ಶೀಘ್ರದಲ್ಲಿ ಸಂಗ್ರಹಿಸಲು ಸಹಾಯಮಾಡುತ್ತವೆ. ಅಲ್ಲದೇ ಅವರ ಪಾತ್ರ ಹಾಗು ಜವಾಬ್ದಾರಿಗಳಿಗೆ ಅನುಸಾರವಾಗಿ ಅನ್ವಯಗಳನ್ನು ಬಳಕೆ ಮಾಡಬಹುದು. ವೆಬ್ ಬ್ರೌಸರ್ ಇಂಟರ್ಫೇಸ್ ನ ಸಹಾಯದಿಂದ, ಬಳಕೆದಾರರು, ದತ್ತಾಂಶ ಸಂಗ್ರಹದಲ್ಲಿರುವ ಸಂಸ್ಥೆಗೆ ಬೇಕಾದ ಯಾವುದೇ ದತ್ತಾಂಶವನ್ನು ಯಾವುದೇ ಸಮಯದಲ್ಲಿ ಸುಲಭದಲ್ಲಿ ಪಡೆಯಬಹುದು. ಅಲ್ಲದೇ- ಇದು ಭದ್ರತಾ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ - ಇದು ಸಂಸ್ಥೆಯ ಯಾವುದೇ ಕಾರ್ಯತಾಣಗಳೊಳಗಿರಬಹುದು. ತಮ್ಮ ಕಾರ್ಯವನ್ನು ಬೇಗನೆ ಮುಗಿಸಲು ನೌಕರರ ಸಾಮರ್ಥ್ಯವನ್ನು ಹೆಚ್ಚು ನಿಖರವಾಗಿ ಹೆಚ್ಚಿಸುವುದು, ಹಾಗು ತಮ್ಮ ಮಾಹಿತಿ ಸರಿಯಾಗಿದೆಯೆಂಬ ಭರವಸೆ ನೀಡುವುದು. ಇದು ಬಳಕೆದಾರರಿಗೆ ಒದಗಿಸಲಾದ ಸೇವೆಗಳನ್ನು ಉತ್ತಮಪಡಿಸಲೂ ಸಹ ಸಹಾಯಮಾಡುತ್ತದೆ. ಸಮಯ : ಅಂತರಜಾಲಗಳು ಸಂಸ್ಥೆಗಳಿಗೆ, ನೌಕರರಿಗೆ ಅಗತ್ಯವಿದ್ದ ಸಮಯದಲ್ಲಿ ಮಾಹಿತಿಯನ್ನು ಹಂಚಿಕೆ ಮಾಡಲು ಅವಕಾಶ ನೀಡುತ್ತದೆ; ನೌಕರರು ಇಲೆಕ್ಟ್ರಾನಿಕ್ ಮೇಲ್ ನ ಮೂಲಕ ಮಾಹಿತಿಯ ಅವ್ಯವಸ್ಥೆಯಿಂದಾಗಿ ಉಂಟಾಗುವ ಗೊಂದಲಕ್ಕಿಂತ, ತಮಗೆ ಅನುಕೂಲವಾಗುವ ರೀತಿಯಲ್ಲಿ ಮಾಹಿತಿಯನ್ನು ಅವರು ಸಂಯೋಜಿಸಬಹುದು. ಸಂವಹನ : ಅಂತರಜಾಲಗಳು ಒಂದು ಸಂಸ್ಥೆಯೊಳಗೆ ಸಮಗ್ರವಾಗಿ ಹಾಗು ಸಮಾನವಾಗಿ ಸಂವಹನದ ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಸಂಪರ್ಕ-ಸಂವಹನದ ದೃಷ್ಟಿಕೋನದಿಂದ, ಅಂತರಜಾಲಗಳು ಸಂಸ್ಥೆಯುದ್ದಕ್ಕೂ ಸಮಗ್ರವಾದ ನಿಲುಕಿನಲ್ಲಿರುವ ಕಾರ್ಯ ನೀತಿಯ ಉಪಕ್ರಮವನ್ನು ಜಾಗತಿಕವಾಗಿ ಅಗತ್ಯ ಮಾಹಿತಿ ತಿಳಿಸಲು ಸಹಕಾರಿಯಾಗಿವೆ.ಸಂಘಟನೆಯ ಸಂಪೂರ್ಣ ಆರಂಭಿಕ ಕಾರ್ಯವಿಧಾನಗಳನ್ನು ಅವು ದೃಢಪಡಿಸಲು ಸಮರ್ಥವಾಗಿವೆ. ಮಾಹಿತಿಯ ಮಾದರಿಯನ್ನು ಸುಲಭವಾಗಿ ತಿಳಿಯಪಡಿಸುವುದು ಉಪಕ್ರಮದ ಉದ್ದೇಶವಾಗಿದೆ. *ಅದು ಉಪಕ್ರಮವು ಏನನ್ನು ಸಾಧಿಸಲು ಉದ್ದೇಶಿಸಿದೆ, ಉಪಕ್ರಮದ ಹಿಂದಿರುವ ಅಂಶಗಳು ಯಾವವು, ಇಲ್ಲಿಯವರೆಗೂ ದೊರೆತ ಫಲಿತಾಂಶ, ಹಾಗು ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು. ಅಂತರಜಾಲದಲ್ಲಿ ಈ ಮಾಹಿತಿಯನ್ನು ಒದಗಿಸುವ ಮೂಲಕ, ಸಿಬ್ಬಂದಿಯು ಕಾರ್ಯವಿಧಾನದೊಂದಿಗೆ ಇಂದಿನತನಕದ ಮಾಹಿತಿಯನ್ನು ಸಂಗ್ರಹಿಸಿ ಕಲೆಹಾಕುವ ಅವಕಾಶ ದೊರೆಯುತ್ತದೆ. ಸಂವಹನದ ಕೆಲ ಉದಾಹರಣೆಗಳೆಂದರೆ ಚಾಟ್, ಇಮೇಲ್, ಹಾಗು ಅಥವಾ ಬ್ಲಾಗ್ ಗಳು. ಅಂತರಜಾಲವು ಸಂವಹನದಿಂದಾಗಿ ಒಂದು ಸಂಸ್ಥೆಗೆ ನೆರವಾದ ವಾಸ್ತವ ಜಗತ್ತಿನ ಒಂದು ಉತ್ತಮ ಉದಾಹರಣೆಯೆಂದರೆ, ನೆಸ್ಲೆ ಸಂಸ್ಥೆ, ಇದು ಸ್ಕ್ಯಾಂಡಿನೇವಿಯದಲ್ಲಿ ಆರಂಭಿಸಿದ ಹಲವಾರು ಆಹಾರ ಸಂಸ್ಕರಣ ಘಟಕಗಳ ಬಗ್ಗೆ ಅಂತರಜಾಲ ಸಂವಹನದಿಂದ ಹೊರ ಜಗತ್ತಿಗೆ ಇದರ ಬಗ್ಗೆ ಮಾಹಿತಿ ದೊರೆಯಿತು. ಅವರ ಪ್ರಮುಖ ಬೆಂಬಲದ, ನೆರವಿನ ವ್ಯವಸ್ಥೆಯು ಪ್ರತಿ ದಿನ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ವ್ಯವಾಹರಿಕ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು.ಮ್ಯಾಕ್ಗೋವರ್ನ್, ಗೆರ್ರಿ ನೆಸ್ಲೆ ಸಂಸ್ಥೆಯು ಅಂತರಜಾಲದ ಮೇಲೆ ತನ್ನ ಬಂಡವಾಳ ಹೂಡಲು ನಿರ್ಧರಿಸಿದಾಗ, ಅದು ಇದರಿಂದ ಆಗುವ ಉಳಿತಾಯವನ್ನು ಬೇಗನೆ ಗುರುತಿಸಿತು. ಮ್ಯಾಕ್ಗೋವರ್ನ್ ಪ್ರಕಾರ ಪ್ರಶ್ನೆಗಳಿಗಾಗಿ ಮಾಡಲಾಗುತ್ತಿದ್ದ ದೂರವಾಣಿ ಕರೆಗಳ ನಂತರ ಉಂಟಾಗುತ್ತಿದ್ದ ಉಳಿತಾಯವು ಅಂತರಜಾಲದ ಮೇಲೆ ಹೂಡಲಾದ ಬಂಡವಾಳಕ್ಕಿಂತ ಮೂಲಭೂತವಾಗಿ ಅಧಿಕವಾಗಿತ್ತು. ವೆಬ್ ಪ್ರಕಟಣೆ , ಹೈಪರ್ ಮೀಡಿಯ ಹಾಗು ವೆಬ್ ತಂತ್ರಜ್ಞಾನಗಳನ್ನೂ ಬಳಸಿಕೊಂಡು ಸಂಸ್ಥೆಯುದ್ದಕ್ಕೂ ಅಡ್ಡಿ ಆತಂಕಗಳೊಂದಿಗೆ ನಿಧಾನ ಗತಿಯ ಕಾರ್ಪೋರೆಟ್ ಜ್ಞಾನ ನಿರ್ವಹಣೆ ಹಾಗು ಸುಲಭವಾಗಿ ತಲುಪಲು ಅವಕಾಶ ನೀಡುತ್ತದೆ. ಉದಾಹರಣೆಗಳಲ್ಲಿ: ನೌಕರರ ಕೈಪಿಡಿ, ಪ್ರಯೋಜನಗಳ ದಾಖಲೆ ಆಧಾರ, ಕಂಪನಿಯ ನೀತಿ-ಸೂತ್ರಗಳು, ವ್ಯಾಪಾರ ಗುಣಮಟ್ಟಗಳು, ನ್ಯೂಸ್ ಫೀಡ್ ಗಳು, ಹಾಗು ತರಬೇತಿಯನ್ನೂ ಸಹ ಒಳಗೊಂಡಿದೆ. ಇವುಗಳನ್ನು ಸಾಮಾನ್ಯವಾದ ಅಂತರಜಾಲ ಗುಣಮಟ್ಟಗಳನ್ನು ಬಳಸಿಕೊಂಡು ಸುಲಭವಾಗಿ ತಲುಪಬಹುದು.(ಆಕ್ರೊಬ್ಯಾಟ್ ಫೈಲುಗಳು, ಫ್ಲ್ಯಾಶ್ ಫೈಲುಗಳು, CGI ಅಪ್ಲಿಕೇಶನ್ ಗಳು). ಪ್ರತಿಯೊಂದು ವ್ಯಾಪಾರ ಘಟಕವು ತನ್ನ ದಾಖಲೆಗಳ ಆಧಾರದ ಆನ್ಲೈನ್ ಪ್ರತಿಯನ್ನು ನವೀಕರಿಸಿಕೊಳ್ಳಬಹುದು. ತೀರ ಇತ್ತೀಚಿನ ರೂಪಾಂತರವು ಸಾಮಾನ್ಯವಾಗಿ ಅಂತರಜಾಲ ಬಳಕೆಮಾಡುವ ನೌಕರರಿಗೆ ದೊರಕುತ್ತದೆ. ವ್ಯಾಪಾರ ಕಾರ್ಯ ಚಟುವಟಿಕೆಗಳ ಪ್ರಕ್ರಿಯೆ ಹಾಗು ನಿರ್ವಹಣೆ : ಅಂತರಜಾಲಗಳನ್ನು ವ್ಯಾಪಾರ ಪ್ರಕ್ರಿಯೆಗಳಿಗೆ ನೆರವಾಗಲು ಹಾಗು ಅಂತರಜಾಲದ ಮೇಲೆ ಕೆಲಸ ಮಾಡುವ ವ್ಯಾಪಾರ ಸಂಸ್ಥೆಯುದ್ದಕ್ಕೂ ಅಭಿವೃದ್ಧಿ ಹೊಂದುತ್ತಿರುವ ಹಾಗು ಪರಿಣಾಮಕಾರಿ ಅನುಷ್ಠಾನ, ಅನ್ವಯಗಳ ವೇದಿಕೆಯಾಗಿಯೂ ಸಹ ಬಳಕೆ ಮಾಡಲಾಗುತ್ತದೆ. ಆಕರ್ಷಕ, ನ್ಯಾಯಸಮ್ಮತ ಪರಿಣಾಮಕಾರಿ-ಬೆಲೆ : ಬಳಕೆದಾರರು ಕಾರ್ಯ-ವಿಧಾನ ಕೈಪಿಡಿಗಳು, ಆಂತರಿಕ ದೂರವಾಣಿ ಪಟ್ಟಿ ಹಾಗು ಕೋರಿಕೆ ಅರ್ಜಿಗಳಂತಹ ದಾಖಲೆಗಳ ಆಧಾರ ಪ್ರಮಾಣಗಳ ನಿರ್ವಹಣೆಗಿಂತ ವೆಬ್ ಬ್ರೌಸರ್ ನ ಮೂಲಕ ಮಾಹಿತಿ ಹಾಗು ಅಗತ್ಯ ದತ್ತಾಂಶ ಸಂಗ್ರಹಿಸಬಹುದು. ಇದು ಮುದ್ರಣ, ಆಧಾರ ದಾಖಲೆ,ಪ್ರಮಾಣಗಳ ನಕಲು ಪ್ರತಿ ಮಾಡಿಸುವುದು ಹಾಗು ಸಾಂದರ್ಭಿಕ ಪರಿಸರದ ಅಗತ್ಯದ ದಾಖಲೆ ಆಧಾರ ಪ್ರಮಾಣದ ನಿರ್ವಹಣೆಗೆ ತಗಲುವ ವೆಚ್ಚವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ. ಉದಾಹರಣೆಗೆ, ಪೀಪಲ್ ಸಾಫ್ಟ್ ನಿಂದ ಪಡೆದ "ಅಂತರಜಾಲಕ್ಕೆ HR ಪ್ರಕ್ರಿಯೆಗಳನ್ನು ವರ್ಗಾವಣೆ ಮಾಡುವ ಮೂಲಕ ಗಮನಾರ್ಹ ವೆಚ್ಚ ಉಳಿತಾಯ ಮಾಡಿತು". ಮ್ಯಾಕ್ಗವರ್ನ್, ಪ್ರಯೋಜನಗಳಲ್ಲಿ ಕೈಪಿಡಿಗಾದ ವೆಚ್ಚವು ಪ್ರತಿ ದಾಖಲಾತಿಗೆ USD109.48ರಷ್ಟೆಂದು ಹೇಳುತ್ತಾರೆ. "ಈ ಕಾರ್ಯಚಟುವಟಿಕೆಯ-ಪ್ರಕ್ರಿಯೆಯನ್ನು ಅಂತರಜಾಲಕ್ಕೆ ವರ್ಗಾವಣೆ ಮಾಡಿದಾಗ, ಇದು ಪ್ರತಿ ದಾಖಲಾತಿಗೆ $21.79ನಷ್ಟು ವೆಚ್ಚ ತಗ್ಗಿತು; ಹಾಗೆ ನೋಡಿದರೆ ಇದು ಶೇಖಡ 80ರಷ್ಟು ಉಳಿತಾಯವೆನಿಸುತ್ತದೆ". ವೆಚ್ಚದ ವರದಿಯನ್ನಾಧರಿಸಿ ಗಮನಿಸಿದಾಗ ವೆಚ್ಚ ಪ್ರಮಾಣದ ಮೇಲೆ ಹಣ ಉಳಿತಾಯ ಮಾಡಿದ ಮತ್ತೊಂದು ಸಂಸ್ಥೆಯೆಂದರೆ ಸಿಸ್ಕೋ. "1996ರಲ್ಲಿ, ಸಿಸ್ಕೋ 54,000 ವರದಿಗಳನ್ನು ಸಂಸ್ಕರಿಸುವುದರ ಜೊತೆಗೆ USD 19 ದಶಲಕ್ಷ ಡಾಲರ್ ಉಳಿತಾಯ ಮಾಡಿತು". ಸಹಯೋಗದ ವರ್ಧನೆ : ಎಲ್ಲ ಅಧಿಕೃತ ಬಳಕೆದಾರರ ಮೂಲಕ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಬಹುದು. ಇದು ಜತೆಯಾಗಿ ತಂಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. ವಿವಿಧ-ವೇದಿಕೆಗಳ ಸಾಮರ್ಥ್ಯ :ವಿಭಿನ್ನ ಗುಣಮಟ್ಟದ-ಅನುವರ್ತನಾಶೀಲ ವೆಬ್ ಬ್ರೌಸರ್ ಗಳು ವಿಂಡೋಸ್, ಮ್ಯಾಕ್, ಹಾಗು UNIXಗೆ ಲಭ್ಯವಿದೆ. ಒಬ್ಬನೇ ವೀಕ್ಷಕನಿಗಾಗಿ ನಿರ್ಮಿತ ವಿನ್ಯಾಸ : ಹಲವು ಸಂಸ್ಥೆಗಳು ಕಂಪ್ಯೂಟರ್ ನಿರ್ದಿಷ್ಟತೆಗಳನ್ನು ನಿರ್ದೇಶಿಸುತ್ತವೆ. ಇದಕ್ಕೆ ಬದಲಿಯಾಗಿ ಇದು ಅಂತರಜಾಲದ ಅಭಿವರ್ಧಕರಿಗೆ ಒನ್ ಬ್ರೌಸರ್ ನ ಮೇಲೆ ಕಾರ್ಯನಿರ್ವಹಿಸುವಂತೆ ಅಳವಡಿಕೆಗಾಗಿ,ಅಪ್ಲಿಕೇಶನ್ ಗಳನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ.(ಯಾವುದೇ ವಿವಿಧ-ಬ್ರೌಸರ್ ನ ಹೊಂದಾಣಿಕೆ ಸಮಸ್ಯೆಗಳು ಉದ್ಭವಿಸುವುದಿಲ್ಲ.) ನಿರ್ದಿಷ್ಟವಾಗಿ ನಿಮ್ಮ "ವೀಕ್ಷಕನನ್ನು" ಸಂಬೋಧಿಸುವ ಸಾಮರ್ಥ್ಯವು ಒಂದು ದೊಡ್ಡ ಪ್ರಯೋಜನವಾಗಿ ಪರಿಣಮಿಸುತ್ತದೆ. ಅಂತರಜಾಲಗಳು ಬಳಕೆದಾರನ-ನಿರ್ದಿಷ್ಟ ಉದ್ದೇಶದ ಮೇಲೆ ಅವಲಂಬಿತವಾಗಿರುವುದರಿಂದ(ಇದರ ಪ್ರವೇಶಕ್ಕೆ ಮುಂಚೆ ದತ್ತಾಂಶ ಸಂಗ್ರಹ/ನೆಟ್ವರ್ಕ್ ದೃಢೀಕರಣದ ಅಗತ್ಯವಿರುತ್ತದೆ.) ನೀವು ಯಾರೊಂದಿಗೆ ಇಂಟರ್ಫೇಸ್ (ಮುಖಾಮುಖಿ)ಮಾಡುತ್ತಿರುವಿರೆಂದು ನಿಮಗೆ ನಿರ್ದಿಷ್ಟವಾಗಿ ತಿಳಿದಿರುತ್ತದೆ. ಅಲ್ಲದೇ ಕೆಲಸದ ಆಧಾರದ ಮೇಲೆ ನಿಮ್ಮ ಅಂತರಜಾಲವನ್ನು ವೈಯಕ್ತಿಕತೆಗೆ ಅಗತ್ಯವಾದ ವೈಶಿಷ್ಟ್ಯವಾಗಿಸಬಹುದು.(ಕೆಲಸದ ಶೀರ್ಷಿಕೆ, ವಿಭಾಗ) ಅಥವಾ ವೈಯಕ್ತಿಕವಾಗಿ("ನಮ್ಮ ಕಂಪನಿಯಲ್ಲಿ ನೀವು ಮೂರು ವರ್ಷ ಪೂರೈಸಿದ್ದಕ್ಕಾಗಿ ನಿಮಗೆ ಹಾರ್ದಿಕ ಅಭಿನಂದನೆಗಳು ಜೇನ್) !"). ಸಾಮಾನ್ಯ ಕಾರ್ಪೋರೆಟ್ ಸಂಸ್ಕೃತಿಗೆ ಉತ್ತೇಜನ : ಪ್ರತಿಯೊಬ್ಬ ಬಳಕೆದಾರನು ಅಂತರಜಾಲದೊಳಗಿರುವ ಒಂದೇ ರೀತಿಯ ಮಾಹಿತಿಯನ್ನು ವೀಕ್ಷಿಸಲು ಸಮರ್ಥನಾಗಿರುತ್ತಾನೆ. ತಕ್ಷಣದ ನವೀಕರಣಗಳು : ಸಾರ್ವಜನಿಕರೊಂದಿಗೆ ಯಾವುದೇ ಸಾಮರ್ಥ್ಯದಲ್ಲಿ ವ್ಯವಹರಿಸಬೇಕಾದರೆ, ಕಾನೂನುಗಳು, ನಿರ್ದಿಷ್ಟತೆಗಳು, ಹಾಗು ಲಕ್ಷಣಗಳು ಬದಲಾಗಬಹುದು. ಅಂತರಜಾಲಗಳು ವೀಕ್ಷಕರಿಗೆ "ನೇರವಾದ" ಜೀವಂತಿಕೆಯ ಬದಲಾವಣೆಗಳನ್ನು ಒದಗಿಸುತ್ತವೆ. ಇದರಿಂದಾಗಿ ಅವರು ಇಂದಿನತನಕದ ಮಾಹಿತಿಯನ್ನು ಪಡೆಯಬಹುದು, ಇದರಿಂದಾಗಿ ಸಂಸ್ಥೆಯ ಜವಾಬ್ದಾರಿಗಳು ಸೀಮಿತಗೊಳ್ಳುತ್ತವೆ. ವಿಂಗಡಣೆಯಾದ ಕಂಪ್ಯೂಟಿಂಗ್ ವಿನ್ಯಾಸ ರಚನೆಗೆ ನೆರವು ನೀಡುತ್ತದೆ : ಅಂತರಜಾಲವನ್ನು ಒಂದು ಸಂಸ್ಥೆಯ ನಿರ್ವಹಣಾ ಮಾಹಿತಿ ವ್ಯವಸ್ಥೆಗೂ ಸಹ ತಳುಕು ಹಾಕಬಹುದು, ಉದಾಹರಣೆಗೆ ಸಮಯ ಪಾಲನಾ ವ್ಯವಸ್ಥೆಯ ವಿಧಾನ. ಯೋಜನೆ ಹಾಗು ರಚನೆ ಹಲವು ಸಂಸ್ಥೆಗಳು, ತಮ್ಮ ಅಂತರಜಾಲದ ಯೋಜನೆ ಹಾಗು ಕಾರ್ಯಗತಗೊಳಿಸುವಿಕೆಗೆ ಗಮನಾರ್ಹ ಸಂಪನ್ಮೂಲವನ್ನು ಮೀಸಲಾಗಿ ಇಡುತ್ತವೆ. ಏಕೆಂದರೆ ಇದು ಸಂಸ್ಥೆಯ ಯಶಸ್ಸಿಗೆ ಸೃಷ್ಟಿಸುವ ಯೋಜನಾ ಪ್ರಾಮುಖ್ಯತೆಯಾಗುತ್ತದೆ. ಯೋಜನೆಯಲ್ಲಿ ಒಳಗೊಳ್ಳುವ ಕೆಲ ವಿಷಯ ಗಳೆಂದರೆ: ಅಂತರಜಾಲದ ಉದ್ದೇಶ ಹಾಗು ಧ್ಯೇಯಗಳು ಕಾರ್ಯಗತಗೊಳಿಸುವಿಕೆ ಹಾಗು ನಿರ್ವಹಣೆಗೆ ಜವಾಬ್ದಾರರಾದ ವ್ಯಕ್ತಿಗಳು ಅಥವಾ ವಿಭಾಗಗಳು ಅಧಿಕೃತ ಯೋಜನೆಗಳು, ಮಾಹಿತಿ ಚೌಕಟ್ಟುಗಳ ರಚನೆ, ಪೇಜ್ ಲೇಔಟ್ ಗಳು,(ಪುಟಗಳ ಸೃಷ್ಟಿ) ವಿನ್ಯಾಸ ಅನುಷ್ಠಾನದ ವಿವರಗಳು ಹಾಗು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ನಿಧಾನಗತಿಯಲ್ಲಿ ಹಂತ-ಹಂತವಾಗಿ ಅಂತ್ಯಗೊಳಿಸುವುದು ಅಂತರಜಾಲದ ಭದ್ರತೆಗಳ ನಿರೂಪಣೆ,ವ್ಯಾಖ್ಯಾನ ಹಾಗು ಕಾರ್ಯಗತಗೊಳಿಸುವುದು ಕಾನೂನು ಪರಿಮಿತಿ ಹಾಗು ಇತರ ನಿರ್ಬಂಧದೊಳಗೆ ಹೇಗೆ ಇದನ್ನು ರಕ್ಷಿಸುವುದು ಅಪೇಕ್ಷಿತ ಪರಸ್ಪರ ಕಾರ್ಯಕಾರಿತ್ವದ ಮಟ್ಟ(ಉದಾಹರಣೆಗೆ ವಿಕಿಗಳು, ಆನ್ಲೈನ್ ಮಾದರಿಗಳು) ಹೊಸ ದತ್ತಾಂಶದ ಇನ್ ಪುಟ್ ಹಾಗು ನವೀಕರಣಗೊಂಡ ಅಸ್ತಿತ್ವದಲ್ಲಿರುವ ದತ್ತಾಂಶವನ್ನು ಪ್ರಮುಖವಾಗಿ ನಿಯಂತ್ರಿಸುವುದು ಅಥವಾ ವರ್ಗಾವಣೆ ಮಾಡುವುದು. ಇವೆಲ್ಲವೂ ಹಾರ್ಡ್ ವೇರ್ ಹಾಗು ಸಾಫ್ಟ್ ವೇರ್ ನಿರ್ಣಯಕ್ಕೆ ಜೊತೆಯಾಗಿವೆ.(ವಿಷಯಸೂಚಿ ನಿರ್ವಹಣಾ ವ್ಯವಸ್ಥೆಗಳ ಮಾದರಿಯಲ್ಲಿ), ಪಾಲ್ಗೊಳ್ಳುವಿಕೆಯಲ್ಲಿ ಉಂಟಾಗುವ ಸಮಸ್ಯೆಗಳು(ಉತ್ತಮ ಅಭಿರುಚಿ, ಕಿರುಕುಳ, ಗೋಪ್ಯತೆಗಳ ಮಾದರಿಯಲ್ಲಿ), ಹಾಗು ನೆರವಾಗುವ ವೈಶಿಷ್ಟ್ಯ ಗಳು. ಅಂತರಜಾಲಗಳು ಸಾಮಾನ್ಯವಾಗಿ ಸ್ಥಿರ ಸೈಟ್ ಗಳಾಗಿರುತ್ತವೆ. ಮೂಲತಃ ಇವುಗಳು ಹಂಚಿಕೆಯಾದ ಡ್ರೈವ್ ಗಳಾಗಿರುತ್ತವೆ, ಇವುಗಳು ಆಂತರಿಕ ನಿಯಮಾವಳಿ ಅಥವಾ ಸಂವಹನಗಳೊಂದಿಗೆ ಪ್ರಧಾನವಾಗಿ ಶೇಖರಣೆಯಾದ ದಾಖಲೆ ಆಧಾರ ಪ್ರಮಾಣಗಳಿಗೆ ನೆರವಾಗುತ್ತವೆ.(ಸಾಮಾನ್ಯವಾಗಿ ಒಂದೇ ಕಡೆಯ ಸಂವಹನ). ಆದಾಗ್ಯೂ ಸಂಸ್ಥೆಗಳು ಇತ್ತೀಚಿಗೆ ಹೇಗೆ ಅಂತರಜಾಲಗಳು, ಸಮಾಜೀಕರಿತ ಅಂತರಜಾಲದಲ್ಲಿ ವಿಶೇಷತೆಯನ್ನು ಪಡೆದಿವೆ.ಅದನ್ನು ಆ ಮೂಲದ ಸಂಸ್ಥೆಗಳನ್ನು ಬಳಸಿಕೊಂಡು ಹೇಗೆ ತಮ್ಮ ತಂಡಕ್ಕೆ 'ಸಂವಹನದ ಮಾಹಿತಿ ಕೇಂದ್ರ ವಾಗಬಹುದೆಂದು' ಯೋಜಿಸುತ್ತಿದೆ. ವಾಸ್ತವವಾಗಿಯೂ ಕಾರ್ಯಗತಗೊಳಿಸುವಿಕೆಯು ಈ ಕೆಳಕಂಡ ಹಂತಗಳನ್ನು ಒಳಗೊಂಡಿದೆ: ಹಿರಿತನದ ನಿರ್ವಹಣಾ ನೆರವು ಹಾಗು ಆರ್ಥಿಕ ನಿಧಿ-ಬೆಂಬಲವನ್ನು ಗಳಿಸಿಕೊಳ್ಳುವುದು. ವ್ಯಾಪಾರ ಅವಶ್ಯಕತೆಗಳ ವಿಶ್ಲೇಷಣೆ. ಬಳಕೆದಾರರ ಮಾಹಿತಿ ಅಗತ್ಯಗಳನ್ನು ಗುರುತಿಸಲು ಬಳಕೆದಾರನು ಪಾತ್ರ ವಹಿಸುವುದು. ವೆಬ್ ಸರ್ವರ್ ನ ಅಳವಡಿಕೆ ಹಾಗು ಬಳಕೆದಾರರು ಸುಲಭವಾಗಿ ಪ್ರವೇಶಿಸುವ ನೆಟ್ವರ್ಕ್. ಕಂಪ್ಯೂಟರ್ ಗಳಲ್ಲಿ ಬಳಕೆದಾರನಿಗೆ ಅಗತ್ಯವಿರುವ ಅಪ್ಲಿಕೇಶನ್ ಗಳನ್ನು(ಅನ್ವಯಿಕೆ) ಸಂಸ್ಥಾಪಿಸುವುದು. ರಚಿತವಾಗಬೇಕಿರುವ ವಿಷಯಸೂಚಿಗೆ ದಾಖಲೆಯ ಆಧಾರ ಪ್ರಮಾಣ ಚೌಕಟ್ಟನ್ನು ರೂಪಿಸುವುದು. ಅಂತರಜಾಲ ಪರೀಕ್ಷಿಸುವಾಗ ಬಳಕೆದಾರನ ಪಾತ್ರ ಹಾಗು ಅದರ ಬಳಕೆಯನ್ನು ಉತ್ತೇಜಿಸುವುದು. ಮುಂದುವರೆಯುತ್ತಿರುವ ಮಾಪನ ಹಾಗು ಅರ್ಹತೆ ನಿರ್ಧಾರ, ಇದರಲ್ಲಿ ಇತರ ಅಂತರಜಾಲಗಳ ವಿರುದ್ಧ ನಿಗದಿತ ಮಾನದಂಡವನ್ನು ಅಳೆದು ರೂಪಿಸುವುದು ಸೇರಿದೆ. ಅಂತರಜಾಲದ ವಿಭಾಗ ರಚನೆಯಲ್ಲಿರುವ ಮತ್ತೊಂದು ಉಪಯೋಗಿ ಅಂಶವೆಂದರೆ, ಅಂತರಜಾಲದ ನಿರ್ವಹಣೆಗೆ ಬದ್ಧನಾದ ಒಬ್ಬ ಪ್ರಮುಖ ವ್ಯಕ್ತಿಯ ಜೊತೆಗೆ ಈತನು ವಿಷಯಸೂಚಿಗಳನ್ನು ಪ್ರಚಲಿತದಲ್ಲಿಡಲು ಜವಾಬ್ದಾರನಾಗಿರುತ್ತಾನೆ. ಅಂತರಜಾಲದ ಕುರಿತ ಪ್ರತಿಕ್ರಿಯೆಗಾಗಿ, ಬಳಕೆದಾರರ ಒಂದು ಸಾಮಾಜಿಕ ನೆಟ್ವರ್ಕಿಂಗ್ ಮೂಲಕ ಪಡೆಯಬಹುದು. ಇದರಿಂದ ಬಳಕೆದಾರರಿಗೆ ಏನು ಬೇಕು ಹಾಗು ಅವರು ಏನನ್ನು ಬಯಸುತ್ತಾರೆಂಬುದನ್ನು ಸೂಚಿಸಬಹುದು. ಇವನ್ನೂ ಗಮನಿಸಿ ಎಂಟರ್ಪ್ರೈಸ್ ಪೋರ್ಟಲ್ ಇಂಟ್ರಾನೆಟ್ ಪೋರ್ಟಲ್ ಅಂತರಜಾಲ ಕಾರ್ಯವಿಧಾನಗಳು ಇಂಟ್ರಾವೆಬ್ ಸ್ಥಳೀಯ ವಲಯ ಜಾಲ ವ್ಯಾಪಕ ವಲಯ ಜಾಲ ವೆಬ್ ಪೋರ್ಟಲ್ ಕ್ವಾಂಗ್ಮ್ಯೊಂಗ್ (ಅಂತರಜಾಲ) ಗೂಗಲ್‌ ಕ್ರೋಮ್‌ ಬ್ರೌಸರ್ ಉಲ್ಲೇಖಗಳು ವರ್ಗ:ಗಣಕ ನೆಟ್ವರ್ಕ್ ಗಳು (ಕಂಪ್ಯುಟರ್ ಜಾಲಗಳು) ವರ್ಗ:ಇಂಟರ್ನೆಟ್ ಗೋಪ್ಯತೆ ವರ್ಗ:ಅಂತರ ಜಾಲ ತಾಣಗಳು ವರ್ಗ:ಮಾಹಿತಿ ತಂತ್ರಜ್ಞಾನ
ಯುಗಾದಿ
https://kn.wikipedia.org/wiki/ಯುಗಾದಿ
ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು. thumb|ಯುಗಾದಿ ಶುಭಾಶಯ ಕೋರುವ ಶುಭಾಶಯ ಪತ್ರ thumb|200px|ಒಬ್ಬಟ್ಟು/ಹೋಳಿಗೆ -prepared on Ugadi in Andhra Pradesh and Karnataka. ಸಾಂಪ್ರದಾಯಿಕ ಆಚರಣೆಗಳು ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ "ಬೇವು-ಬೆಲ್ಲ." ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ ೦ - ೧೩:೨೦ ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ. [Maithily Jagannathan (2005). South Indian Hindu Festivals and Traditions. Abhinav Publications. pp. 77–78. ISBN 978-81-7017-415-8.] ಹಬ್ಬದ ಆಚರಣೆಯ ವಿಧಾನ ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ - ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು. ಪಂಚಾಂಗ ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಖಣಿ ಇಡುವುದು : ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇಟ್ಟು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ವನ್ನು ಇಟ್ಟು ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ.[Jeaneane D. Fowler (1997). Hinduism: Beliefs and Practices. Sussex Academic Press. pp. 72–73.] ಅಂದಿನ ವಿಶೇಷ ತಿನಿಸು ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. *ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು. ಬೇವು-ಬೆಲ್ಲ ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು - ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ: ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| - ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.* ಯುಗಾದಿ ಕವಿತೆ ದ.ರಾ.ಬೇಂದ್ರೆಯವರ ಯುಗಾದಿ ಬಗೆಗಿನ ಈ ಕವಿತೆ ಸುಪ್ರಸಿದ್ಧವಾದುದು. "ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"||ಯುಗ ಯುಗಾದಿ ಕಳೆದರು||ದ.ರಾ.ಬೇಂದ್ರೆಯವರ ನಾದಲೀಲೆ;ಪ್ರತಿ ಜೀವಕ (Antibiotic) ನೂರು ವರುಷ ಧೀರ್ಘ ಆಯುಷ್ಯ ಸದೃಢ ದೇಹ ಮನಸಿನ ಆರೋಗ್ಯ ಸ್ವಾಸ್ಥ್ಯ ಸಂಪತ್ತಿನ ಪ್ರಾಪ್ತಿಗಾಗಿಯೂ ಸಕಲ ಅರಿಷ್ಟ ನಿವಾರಣೆಗಾಗಿಯೂ ಪ್ರತಿದಿನ ಬೇವು ಬೆಲ್ಲ ಸೇವನೆ ಮಾಡಿ ಸೌಂದರ್ಯ ವರ್ಧಕವೂ ಹೌದು ಚರ್ಮ ವ್ಯಾಧಿ ನಿವಾರಕವೂ ಹೌದು ರೋಗ ನಿರೋಧಕ ಶಕ್ತಿ ಪ್ರತೀಕವು ಪ್ರಭಲ ಬ್ಯಾಕ್ಟಿರಿಯ ಪ್ರತಿ ಜೀವಕವು ಔಷಧೀಯ ಗುಣವುಳ್ಳ ಈ ಕಹಿ ಬೇವು ನೈಸರ್ಗಿಕ ಮಧುಮೇಹ ನಿಯಂತ್ರಕ ವಿಷದಂತ ಬಿಳಿ ಸಕ್ಕರೆ ಪರ್ಯಾಯಕ ಖನಿಜ ಪೋಷಕಾಂಶಗಳ ಆಗರವಂತೆ ಶ್ವಾಸಕೋಶ ಕರುಳ ಸ್ವಚ್ಚತೆ ಕಾರ್ಯವಂತೆ ಬೆಲ್ಲ ಸೇವನೆಯಿಂದ ಇವೆಲ್ಲವೂ ಲಭ್ಯವಂತೆ ವೈಜಾನಿಕ ಹಿನ್ನೆಲೆಯುಳ್ಳ ಆಚರಣೆ ನಮ್ಮ ಹಿಂದೂ ಸಂಸ್ಕೃತಿಯ ಪ್ರತೀಕ ದೀಪವನು ನಂದಿಸಿ ಕೇಕು ಕತ್ತರಿಸಿ ಕುಡಿದು ತಿಂದು ಮಜಾ ಮಾಡುವ ಪಾಶ್ಚತ್ಯರ ಅನುಸರಣೆ ಅಂತ್ಯವಾಗಲಿ ಕರಗಿ ಹೋಗಲಿ ಈ ರೋಗ ರುಜಿನ ಚಿಗುರಿ ಹಸನಾಗಲಿ ಎಲ್ಲರ ಜೀವನ ಹೊಸ ವರ್ಷದ ಆದಿ ಇಲ್ಲಿಂದ ಸಾಗಲಿ ಸಹ ಬಾಳ್ವೆಗೆ ಯುಗಾದಿ ನಾಂದಿಯಾಗಲಿ ನವ ವರುಷ ಬದುಕಿಗೆ ಹರುಷವನ್ನು ತರಲಿ ವಿನೋದ್ ವಾಲ್ಮೀಕಿ ಸೊರಬ. ಓದಿ ಯುಗಾದಿ ಪರ್ವದಲ್ಲಿ ‘ಪಂಚಾಂಗ ಶ್ರವಣ’;ಉಮಾ ಅನಂತ್‌;28 Mar, 2017 ಉಲ್ಲೇಖಗಳು 6.ಯುಗಾದಿ ಉಲ್ಲೇಖಗಳು ಮತ್ತು ಶುಭಾಶಯಗಳು.
ರೆಡ್ ಹ್ಯಾಟ್
https://kn.wikipedia.org/wiki/ರೆಡ್_ಹ್ಯಾಟ್
right ರೆಡ್ ಹ್ಯಾಟ್ ಮುಕ್ತ ತಂತ್ರಾಂಶಕ್ಕೆ ಮೀಸಲಾದ ಕೆಲಸಗಳನ್ನು ಕೈಗೊಳ್ಳುವ ಅತಿ ದೊಡ್ಡ ಮತ್ತು ಅತಿ ಗುರುತಿಸಲ್ಪಟ್ಟ ಸಂಸ್ಥೆಗಳಲ್ಲಿ ಒಂದು. ೧೯೯೩ ರಲ್ಲಿ ಆರಂಭಿಸಲ್ಪಟ್ಟ ಈ ಸಂಸ್ಥೆ ೭೦೦ ಕೆಲಸಗಾರರನ್ನು ಪ್ರಪಂಚದ ೨೨ ಸ್ಥಳಗಳಲ್ಲಿ ಹೊಂದಿದೆ. ಇದರ ಮುಖ್ಯ ಕಛೇರಿ ಇರುವುದು ಅಮೆರಿಕಾದ ರಾಲೀ, ನಾರ್ತ್ ಕೆರೊಲೈನಾ ದಲ್ಲಿ. ಮುಖ್ಯವಾಗಿ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ, ಅದರ ಅಭಿವೃದ್ಧಿ, ನಿರ್ವಹಣೆ ಮತ್ತು ಅಂತರಜಾಲ ವಿಷಯಗಳಿಗೆ ಸಂಬಂಧಪಟ್ಟ ಮುಕ್ತ ತಂತ್ರಾಂಶಗಳ ಬೆಳವಣಿಗೆ ಈ ಸಂಸ್ಥೆಯ ಕ್ಷೇತ್ರಗಳು. ಚರಿತ್ರೆ ಮಾರ್ಕ್ ಈವಿಂಗ್ ರಿಂದ ೧೯೯೩ ರಲ್ಲಿ ರೆಡ್ ಹ್ಯಾಟ್ ಸ್ಥಾಪಿಸಲ್ಪಟ್ಟಿತು. ೧೯೯೫ ರಲ್ಲಿ ಕೆನಡಾ ದ ಎಸಿಸಿ ಕಾರ್ಪೊರೇಷನ್ ನೊಂದಿಗೆ ರೆಡ್ ಹ್ಯಾಟ್ ಸೇರಿದ ನಂತರ, ಬಾಬ್ ಯಂಗ್ ೧೯೯೯ ರ ವರೆಗೆ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ೧೯೯೯ ರಲ್ಲಿ ೬೦ ಲಕ್ಷ ಶೇರುಗಳನ್ನು ಮಾರುಕಟ್ಟೆಗೆ ಬಿಟ್ಟ ಸಂಸ್ಥೆ ೧೯೯೯ ರಲ್ಲಿ ಸಿಗ್ನಸ್ ಸೊಲೂಷನ್ಸ್ ಎಂಬ ಇನ್ನೊಂದು ಸಂಸ್ಥೆಯೊಂದಿಗೆ ಸೇರಿತು. ತಂತ್ರಾಂಶಗಳು ರೆಡ್ ಹ್ಯಾಟ್ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಈ ಸಂಸ್ಥೆಯ ಮುಖ್ಯ ತಂತ್ರಾಂಶ. ಇದರ ಅಭಿವೃದ್ಧಿ ಹಾಗೂ ವಿತರಣೆ ಅನೇಕ ವರ್ಷಗಳಿಂದ ನಡೆದಿದೆ. ಇತ್ತೀಚೆಗೆ, ರೆಡ್ ಹ್ಯಾಟ್ ಲಿನಕ್ಸ್ ನ ೯ ನೇ ಆವೃತ್ತಿಯ ನಂತರ, ಫೆದೋರಾ ಲಿನಕ್ಸ್ ನ ಜೊತೆಗೂ ರೆಡ್ ಹ್ಯಾಟ್ ಕೆಲಸ ಮಾಡುತ್ತಿದೆ. ಫೆದೋರಾ ಲಿನಕ್ಸ್ ನ ಇನ್ನೊಂದು ವಿತರಣೆಯಾಗಿದ್ದು "ಫೆದೋರಾ ಪ್ರಾಜೆಕ್ಟ್" ಇದನ್ನು ನಿಭಾಯಿಸುತ್ತದೆ. ರೆಡ್ ಹ್ಯಾಟ್ ಈ ಪ್ರಾಜೆಕ್ಟ್ ನ ಸಹಾಯಕ ಸಂಸ್ಥೆಗಳಲ್ಲಿ ಒಂದು. ಬಾಹ್ಯ ಸಂಪರ್ಕಗಳು ರೆಡ್ ಹ್ಯಾಟ್ ಅಧಿಕೃತ ತಾಣ ಫೆಡೊರಾ ಪ್ರಾಜೆಕ್ಟ್ ವರ್ಗ:ತಂತ್ರಜ್ಞಾನ ವರ್ಗ:ಲಿನಕ್ಸ್ ವಿತರಣೆಗಳು